ಶಿವಮೊಗ್ಗ: ಅಭಿವೃದ್ಧಿಯ ಮೂಲ ಆರ್ಥಿಕತೆ. ಈ ಆರ್ಥಿಕತೆಯ ಅಭಿವೃದ್ಧಿಗೆ ರಚನಾತ್ಮಕ ಬದಲಾವಣೆ ಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಪ್ರೊ.ಮಂಜುನಾಥ್ ಅವರು ಅಭಿಪ್ರಾಯಪಟ್ಟರು. ಭದ್ರಾವತಿಯ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಡಾ. ಬಿಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಬೆಂಗಳೂರಿನ ಡಾ. ಬಿಆರ್ ಅಂಬೇಡ್ಕರ್ ಅಧ್ಯಯನ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ‘ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಮತ್ತು ಅಭಿವೃದ್ಧಿ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ವಿಶೇಷ ಉಪನ್ಯಾಸ ನೀಡಿದರು. ಆರೋಗ್ಯ ಶಿಕ್ಷಣ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಒತ್ತು ನೀಡಿದಾಗ ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯವೆಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಅಂಬೇಡ್ಕರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು, ಅಂಬೇಡ್ಕರ್ ಎಂದರೆ ಅವಮಾನ ಅಗೌರವಗಳನ್ನು ಸಾಧನೆಗೆ ಸೋಪಾನಗಳನ್ನಾಗಿಸಿಕೊಂಡ ಶಕ್ತಿಯ ವ್ಯಕ್ತಿ. ಅನುಭವಗಳಿಂದ ರೂಪಿತವಾದ ಅಂಬೇಡ್ಕರ್ ಅವರ ವ್ಯಕ್ತಿತ್ವವು ವಿಶ್ವಕ್ಕೆ ಮಾದರಿಯಾದದ್ದು. ಅಸಮಾನತೆ ಅವಮಾನ ಮತ್ತು ಹಸಿವೆಗಳಿಂದ ತಲ್ಲಣಿಸುತ್ತಿದ್ದ ಜನತೆಗೆ ಅರಿವನ್ನು ಬಿತ್ತಿ ಅಭಿವೃದ್ಧಿಪಥವನ್ನು ತೋರಿ, ಅವಮಾನ ಮತ್ತು ಅಪಮಾನಗಳಿಗೆ ಹೆದರದೆ ಎದುರಿಸುವ ತಾಕತ್ತನ್ನು ಸರ್ವರು ಸಂಪಾದಿಸಿ ಕೊಳ್ಳಬೇಕೆಂದು ಸಾರಿದ ಮಹಾಪುರುಷ ಎಂದು ಶ್ಲಾಘಿಸಿದರು.
ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಅಳವಡಿಸಿಕೊಂಡಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಸಿದ್ದರಾಜು ಅವರು ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ವಾಣಿ ರವಿಕುಮಾರ್, ಸಾವಿತ್ರಿ ಗಣೇಶಪ್ಪ, ಪವನ್ ಮತ್ತು ಪ್ರಜ್ವಲ್ ಅವರು ಭಾಗವಹಿಸಿದ್ದರು. ಸಂವಾದದಲ್ಲಿ ಡಾ. ಕಾವ್ಯ, ಹನುಮಂತಪ್ಪ, ಪೂರ್ಣಿಮಾ, ಪ್ರಭಾಕರ್ ಸಿ ಅವರು ಭಾಗವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾರ್ಥಿಗಳಾದ ಟಿ.ಒಬಳೇಶ್, ಅಂಜನಪ್ಪ ಸುಭಾಷ್ ಬೊಡ್ಕಿಯವರು ಇದ್ದರು.
—–
