Comments on: ಅನುದಿನ ಕವನ-೧೧೫೦, ಕವಿ: ಪಿ.ಎಂ.ಕೊಟ್ರಸ್ವಾಮಿ.ಹೂವಿನಹಡಗಲಿ, ಕವನದ ಶೀರ್ಷಿಕೆ: ಕೌದಿ ಹೊಲಿಯುವುದೆಂದರೆ……! https://www.karnatakakahale.com/news/15593 ಕನ್ನಡಿಗರ ಕೊರಳ ಧ್ವನಿ Mon, 26 Feb 2024 10:51:13 +0000 hourly 1 https://wordpress.org/?v=6.3.8 By: Shrivatsa Desai https://www.karnatakakahale.com/news/15593#comment-130004897 Mon, 26 Feb 2024 10:51:13 +0000 https://www.karnatakakahale.com/?p=15593#comment-130004897 ಕೊಟ್ರಸ್ವಾಮಿಯವರೇ, ನಿಮ್ಮ ಸರಳ ವರ್ಣನಾಯುಕ್ತ ಮಾರ್ಮಿಕ ಕವನವನ್ನು ಓದಿ ನನ್ನ ತಾಯಿಯ ನೆನಪಾಗಿ ಕಣ್ಣೀರ ಧಾರೆ. ನನಗೀಗ 78. ಇಂದಿನ ತಲೆಮಾರಿನವರಾದವರು ಋತು ಸಮಯದ ನಾಲ್ಕು ದಿನ ಸುಮ್ಮನೆ ಕೂಡದೆ ಹಳೆಯ ಸೀರೆಗಳನ್ನು ಕೌದಿ ಮಾಡಿ. ಮಾಡಿ ಪೇರಿಡಿಸುತ್ತಿದ್ದರು. ಧಾರವಾಡದ ಚಳಿಯಲ್ಲಿ ಹೊದ್ದು ನಿದ್ರಿಸಿದ ಶಾಲಾಬಾಲಕ ನಾನು. ನಿಮ್ಮ ಸಾಲುಗಳು

“ಕೌದಿ ಹೊಲಿಯುವುದೆಂದರೆ ಬದುಕು ಭವಣೆಯ

ಕೊಳದಲ್ಲಿ ಸದಾ ನೆನೆ ನೆನೆದು ಮಾಸಿದ

ಹಳೆಯ ಸೀರೆಗಳನ್ನು ಹೊಸ ದಾರದೊಂದಿಗೆ…” ಅಕ್ಷರ ಸಹ ನಿಜ. ನನ್ನ ಪ್ರಥಮ ಕವನದಲ್ಲೂ ಅದನ್ನೇ ನೆನೆದಿದ್ದೆ. ‘ನಿನ್ನ ಪ್ರತಿಯೊಂದು ಟಿಬ್ಬಿಯಮೇಲೂ ಪಡಿಸಿವೆ ನನ್ನ ನೂರು ಕನಸುಗಳು’ ಅಂತ. ೫೦ ವರ್ಷಗಳಿಂದ ವಾಸಿಸುತ್ತಿರುವ ಇಂಗೆಂಡಿನ ಚಳಿಯಲ್ಲಿ ನಿಮ್ಮ ಅವನ, ನನ್ನ ನೆನಪುಗಳು ಆಹ್ಲಾದಕರವಾಗಿ ಬೆಚ್ಚಗಿಟ್ಟಿವೆ ಇಂದು. ಧನ್ಯವಾದಗಳು. ಶ್ರೀವತ್ಸ ದೇಸಾಯಿ, UK

]]>