The post ಅನುದಿನ ಕವನ-೧೪ appeared first on Karnataka Kahale.
]]>(2)
*ಕರೆ*
******
ಕೃಷ್ಣನ ಕೊಳಲಿನ
ಕರೆಗೆ ಗೋವುಗಳು
ತಲೆದೂಗಿ ಬಂದಂತೆ ;
ನಿನ್ನೀ ಕಣ್ಣಿನ
ಕರೆಗೆ
ಬಾರದೇ ಇರಲಾದೀತೆ.
(3)
*ಮಳೆ*
******
ಹೊರಗೆ ಸುರಿಯುತ್ತಿದೆ
ಸಂಜೆಯ ಮಳೆ
ಧೋ…….ಎಂದು ;
ನೀನಿಲ್ಲದ ನೆನಪು
ತಂಪಲ್ಲೂ ಬೆವರಿದ
ಅನುಭವ ಇಂದು.
(4)
*ಸಿಹಿ – ಕಹಿ*
***********
ಬೆಲ್ಲದ ಸಿಹಿ
ಯಾರಿಗೂ ಇಷ್ಟ
ಬೇವು ಸವಿಯೋದು,
ಸಹಿಸೋದು ಕಷ್ಟ ;
ದಾಂಪತ್ಯದಲ್ಲಿ ಸಿಹಿ – ಕಹಿ
ಎರಡನ್ನೂ
ಸಮನಾಗಿ ಸವಿದಾಗ
ಜೀವನವೇ ಉತ್ಕೃಷ್ಟ.
(5)
……..ಬಂತು !?
************
ಹಸಿವಾದಾಗ
ಅನ್ನ ನೀಡದಿದ್ದ ಮೇಲೆ
ಮೃಷ್ಟಾನ್ನ
ನೀಡಿದರೇನು ಬಂತು…?
ಸಂಬಂಧಗಳು
ಹಳಸಿದಮೇಲೆ
ಪ್ರೀತಿಯ ಧಾರೆ
ಸುರಿದರೇನು ಬಂತು….?
-ಶೋಭಾ ಮಲ್ಕಿ ಒಡೆಯರ್
*ಹೂವಿನ ಹಡಗಲಿ*
The post ಅನುದಿನ ಕವನ-೧೪ appeared first on Karnataka Kahale.
]]>The post ಸಮರಸವಾಗಲಿ ಸಂಕ್ರಾಂತಿ -ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ, appeared first on Karnataka Kahale.
]]>ಭಾವ ಬಂಧಗಳ ಬೆಸುಗೆ
ಈ ಸಂಕ್ರಾಂತಿ
ಮೈ ಮನಗಳ ಒಸಗೆ
ಈ ಸಂಕ್ರಾಂತಿ-ಪ
ಮರವು ಚಿಗುರಲಿ
ಬರವು ನೀಗಲಿ
ಶಾಂತಿ ಬೆಳಗಲಿ
ಕ್ರಾಂತಿ ನೆಲೆಸಲಿ
ಹೂವು ಅರಳಲಿ
ನೋವು ಕರಗಲಿ
ಸಮತೆ ಸಾರಲಿ ಸಂಕ್ರಾತಿ-1
ಮಳೆಯು ಸುರಿಯಲಿ
ಇಳೆಯು ತಣಿಯಲಿ
ಹೊಳೆಯು ತುಂಬಲಿ
ಹೊಲವು ಬೆಳೆಯಲಿ
ಬೆಲೆಯು ದೊರೆಯಲಿ ರೈತಗೆ
ನೆಲೆಯು ಲಭಿಸಲಿ ಸಮೃದ್ಧಿ ತರಲಿ ಸಂಕ್ರಾತಿ-2
ಜಾತಿ ಕೊಳೆಯಲಿ
ನೀತಿ ಹೊಳೆಯಲಿ
ಪ್ರೀತಿ ತೊಳಗಲಿ
ದ್ವೇಷ ತೊಲಗಲಿ
ಸತ್ಯ ಉಳಿಯಲಿ
ಮಿಥ್ಯ ಅಳಿಯಲಿ
ನಿತ್ಯ ನೂತನವಾಗಲಿ ಸಂಕ್ರಾತಿ-3
ಸಂಗೀತ ತುಂಗೆಯಾಗಲಿ
ಸಾಹಿತ್ಯ ಭದ್ರೆಯಾಗಲಿ
ಜ್ಞಾನ ಕಲೆ ಸಿದ್ಧಿಸಲಿ
ವಿಜ್ಞಾನ ವೃದ್ಧಿಸಲಿ
ನೋವೇ ಬರಲಿ ನಲಿವೇ ಇರಲಿ ಸಮರಸವಾಗಲಿ ಸಂಕ್ರಾತಿ-4

(ಕವಿ ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ ಅವರು ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ)
The post ಸಮರಸವಾಗಲಿ ಸಂಕ್ರಾಂತಿ -ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ, appeared first on Karnataka Kahale.
]]>The post ಜನರ ಪ್ರಾಣ ಮತ್ತು ಆಸ್ತಿ ಕಾಪಾಡಲು ತರಬೇತಿ ಸಹಕಾರಿ appeared first on Karnataka Kahale.
]]>The post ಜನರ ಪ್ರಾಣ ಮತ್ತು ಆಸ್ತಿ ಕಾಪಾಡಲು ತರಬೇತಿ ಸಹಕಾರಿ appeared first on Karnataka Kahale.
]]>The post ನ. 26 ರಂದು ಬೃಹತ್ ನೀರಾವರಿ ಯೋಜನಾ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ appeared first on Karnataka Kahale.
]]>The post ನ. 26 ರಂದು ಬೃಹತ್ ನೀರಾವರಿ ಯೋಜನಾ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ appeared first on Karnataka Kahale.
]]>The post ಬಳ್ಳ್ಳಾರಿ ಬಂದ್: ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್: ಎಸ್ಪಿ ಸೈದುಲು ಅಡಾವತ್ appeared first on Karnataka Kahale.
]]>The post ಬಳ್ಳ್ಳಾರಿ ಬಂದ್: ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್: ಎಸ್ಪಿ ಸೈದುಲು ಅಡಾವತ್ appeared first on Karnataka Kahale.
]]>The post ಚಳಿಗಾಲ ಮತ್ತೆ ಮೆಲ್ಲನೆ ನುಸುಳಿ ಬಂದಿದೆ appeared first on Karnataka Kahale.
]]>ಕವಿ: ಶ್ರೀ ಎಂ.ನಂಜುಂಡಸ್ವಾಮಿ (ಮನಂ)ಐಪಿಎಸ್
ರಾಗಸಂಯೋಜನೆ & ಗಾಯನ: ಶ್ರೀಮತಿ ಶಾರದ ಕೊಪ್ಪಳ
The post ಚಳಿಗಾಲ ಮತ್ತೆ ಮೆಲ್ಲನೆ ನುಸುಳಿ ಬಂದಿದೆ appeared first on Karnataka Kahale.
]]>The post ರಾಜ್ಯೋತ್ಸವ-ನಿತ್ಯೋತ್ಸವ appeared first on Karnataka Kahale.
]]>ಗತವೈಭವದ ಇತಿಹಾಸೋತ್ಸವ
ಗಜ ಹುಲಿ ಕೇಸರಿ ಕಲಿ ಸಮರೋತ್ಸವ
ನದಿ ಗಿರಿ ಬನ ಖನಿ ಸಿರಿಸ್ವರ್ಗೋತ್ಸವ
ನಾಟಕ ನರ್ತನ ಸಾಂಸ್ಕೃತಿಕೋತ್ಸವ
ಕವಿ ಕೋಗಿಲೆಗಳ ಸವಿ ಕಾವ್ಯೋತ್ಸವ
ಚಿಂತನ ಮಂಥನ ಸಾಹಿತ್ಯೋತ್ಸವ
ಮೌಢ್ಯತೆ ತೊಡೆಯುವ ಸುವಿಚಾರೋತ್ಸವ
ಶಿಲ್ಪ ಲಲಿತ ಕಲೆ ಸಂಗೀತೋತ್ಸವ
ಕುವೆಂಪು ಬೇಂದ್ರೆ ಕಾರಂತೋತ್ಸವ
ಮಾಸ್ತಿ ವಿನಾಯಕ ಗೋಕಾಕೋತ್ಸವ
ಅನಂತಮೂರ್ತಿ ಕಾರ್ನಾಡ ಕಂಬಾರೋತ್ಸವ
ಜ್ಞಾನಪೀಠದಲಿ ದಿಗ್ವಿಜಯೋತ್ಸವ
ವಿಶ್ವ ಪಥದಲಿ ಮನುಜ ಮತೋತ್ಸವ
ವಿಶ್ವ ಮಾನವತೆಯ ನಿಜ ಧರ್ಮೋತ್ಸವ
ಅರಿವಿನ ಕಾರ್ತಿಕ ಶುಭ ದೀಪೋತ್ಸವ
ಕನ್ನಡ ಗಡಿ ಗುಡಿ ನುಡಿ ದಿವ್ಯೋತ್ಸವ
~~~~~~~
– ಟಿ.ಕೆ.ಗಂಗಾಧರ ಪತ್ತಾರ ಬಳ್ಳಾರಿ
~~~~~~~
The post ರಾಜ್ಯೋತ್ಸವ-ನಿತ್ಯೋತ್ಸವ appeared first on Karnataka Kahale.
]]>The post ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ appeared first on Karnataka Kahale.
]]>The post ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ appeared first on Karnataka Kahale.
]]>The post ಬೆಂಬಲ ಬೆಲೆ ಯೋಜನೆಗಳಡಿ ಭತ್ತ ಖರೀದಿ -ಡಿಸಿ ನಕುಲ್ appeared first on Karnataka Kahale.
]]>The post ಬೆಂಬಲ ಬೆಲೆ ಯೋಜನೆಗಳಡಿ ಭತ್ತ ಖರೀದಿ -ಡಿಸಿ ನಕುಲ್ appeared first on Karnataka Kahale.
]]>The post ಭಾರತದ ಸಾಂಸ್ಕøತಿಕ ಪರಂಪರೆ ವೈವಿಧ್ಯಮಯ: ಆರ್.ಎಂ.ಶ್ರೀದೇವಿ appeared first on Karnataka Kahale.
]]>
ಬಳ್ಳಾರಿ: ವಿವಿಧ ರೀತಿಯ ಆಚಾರ-ವಿಚಾರ, ಸಂಸ್ಕಾರ-ಸಂಸ್ಕøತಿಗಳನ್ನು ಹೊಂದಿದ ದೇಶದ ಸಾಂಸ್ಕøತಿಕ ಪರಂಪರೆ ಜಗತ್ತಿನಲ್ಲಿಯೇ ವೈವಿಧ್ಯಮಯವಾದುದೂ, ವೈಶಿಷ್ಟ್ಯ ಪೂರ್ಣವಾದುದೂ ಎಂದು ಇತಿಹಾಸ ಪ್ರಾಧ್ಯಾಪಕಿ ಆರ್.ಎಂ.ಶ್ರೀದೇವಿ ತಿಳಿಸಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್(ಸ್ವಾಯತ್ತ)ನಲ್ಲಿ ‘ರಾಷ್ಟ್ರೀಯ ಐಕ್ಯತಾ ಸಪ್ತಾಹ’ದ ‘ಸಾಂಸ್ಕøತಿಕ ಐಕ್ಯತಾ ದಿನ’ದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಬೇರೆ ಬೇರೆ ಆಚರಣೆಗಳನ್ನು ಹೊಂದಿದ ವಿಶಿಷ್ಟ ಸಂಸ್ಕøತಿಗಳಿದ್ದು ಅವುಗಳ ಮೂಲಕ ಐಕ್ಯತೆಯನ್ನು ಸಾಧಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ||ಎ.ಹೇಮಣ್ಣ ಅವರು ಮಾತನಾಡಿ, ಸಂಸ್ಕøತಿ ಮತ್ತು ನಾಗರಿಕತೆಗಳನ್ನು ಏಕರೂಪವಾಗಿ ನೋಡುತ್ತೇವೆ. ವೇಷ, ಭಾಷೆ, ಪ್ರಾದೇಶಿಕತೆ ಮೊದಲಾದವುಗಳ ಒಟ್ಟು ಸಾರವೇ ಸಂಸ್ಸøತಿಯಾಗಿದೆ ಎಂದರು.
ಸಂಸ್ಕøತಿಯೂ ವಿಭಿನ್ನವಾಗಿರುತ್ತದೆ. ಇಂತಹ ಭಿನ್ನತೆಯ ಸಂಸ್ಕøತಿಗಳಲ್ಲಿ ಏಕತೆಯನ್ನು ಸಾಧಿಸುವುದು ‘ಸಾಂಸ್ಕøತಿಕ ಏಕತಾ ದಿನ’ದ ಉದ್ದೇಶವಾಗಿದೆ ಎಂದು ತಿಳಿಸಿದರು. ಸಾಂಸ್ಕøತಿಕ ಭಿನ್ನತೆಯಿದ್ದರೂ ಸಾವಿರಾರು ವರ್ಷಗಳಿಂದ ಪ್ರಪಂಚಕ್ಕೆ ಮಹತ್ವದ ಕಾಣಿಕೆಯನ್ನು ಭಾರತವು ನೀಡಿದ್ದು, ದೇಶದ ವಿವಿಧ ಸಂಸ್ಕøತಿಗಳಿಗೆ ಪ್ರತಿಯೊಬ್ಬರೂ ಮನ್ನಣೆ ನೀಡಿ ಸಾಂಸ್ಕøತಿಕ ಐಕ್ಯತೆಯನ್ನು ಸಾಧಿಸಲು ನೆರವಾಗಬೇಕು ಎಂದು ಹೇಳಿದರು.
ಪ್ರಾಧ್ಯಾಪಕ ಎಂ.ಎಂ.ಈಶ್ವರ್ ಮಾತನಾಡಿ, ನಮ್ಮ ದೇಶದಲ್ಲಿರುವ ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ ಮೊದಲಾದವುಗಳ ಪ್ರತಿಬಿಂಬವೇ ಸಂಸ್ಕøತಿಯಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಧ್ಯಾಪಕ ವೃಂದ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಧ್ಯಾಪಕರಾದ ಡಾ||ಶಶಿಕಾಂತ ನಿರೂಪಿಸಿದರು. ಡಾ||ತಿಪ್ಪೇರುದ್ರ ಸಂಡೂರು ಸ್ವಾಗತಿಸಿದರು. ಡಾ||ಟಿ.ವೀರಭದ್ರಪ್ಪ ವಂದಿಸಿದರು.
The post ಭಾರತದ ಸಾಂಸ್ಕøತಿಕ ಪರಂಪರೆ ವೈವಿಧ್ಯಮಯ: ಆರ್.ಎಂ.ಶ್ರೀದೇವಿ appeared first on Karnataka Kahale.
]]>