The post ಡಾ. ಹಂಸಲೇಖಾ ಅವರ ಸಂಗೀತ ಸಾಧನೆಗೆ ಶೈಕ್ಷಣಿಕ ಗೌರವ: ಸಿರಿಗೇರಿ ಈಶ್ವರ್ ಗೆ ಪಿಎಚ್.ಡಿ ಪದವಿ ಘೋಷಣೆ appeared first on Karnataka Kahale.
]]>
ಬಳ್ಳಾರಿ, ಮಾ.1: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಈಶ್ವರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಘೋಷಿಸಿದೆ. ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಪ್ರಸ್ತುತ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ಕುಲಪತಿಗಳಾದ ಪ್ರೊ. ಬಿ.ಕೆ. ರವಿ ಅವರ ಮಾರ್ಗದರ್ಶನದಲ್ಲಿ ವಿವಿಗೆ ಮಂಡಿಸಿದ “ಕನ್ನಡ ಚಿತ್ರರಂಗಕ್ಕೆ ಹಂಸಲೇಖ ರವರ ಕೊಡುಗೆ: ಒಂದು ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಘೋಷಿಸಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದೆ ಮಾತ್ರವಲ್ಲ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಚಂದ್ರಶೇಖರ ಎಸ್. ಕರಿಗಾರ ಅವರು ಡಾಕ್ಟರೇಟ್ ಘೋಷಣೆಯ ಅಧಿಸೂಚನೆ ಪತ್ರವನ್ನು ಡಾ. ಈಶ್ವರ್ ಗೆ ನೀಡಿ ಅಭಿನಂದಿಸಿದರು.

ಪರಿಚಯ: ಡಾ. ಈಶ್ವರ್ ಅವರು ಸಿರಿಗೇರಿ ಗ್ರಾಮದ ದಿವಂಗತ ಛಲವಾದಿ ತಿಪ್ಪಣ್ಣ, ಛಲವಾದಿ ಹುಲಿಗೇಮ್ಮ ದಂಪತಿಯ ಹಿರಿಯ ಪುತ್ರ. ಕೊರೋನಾ ಸಂದರ್ಭದಲ್ಲಿ ಕೆಲವೇ ತಿಂಗಳುಗಳ ಅವಧಿಯಲ್ಲಿ ಅಪ್ಪ ಅಮ್ಮ ಸಾವನ್ನಪ್ಪಿದರೂ ಧೃತಿಗೆಡದೆ ಅದ್ಯಯನ ಮುಂದುವರೆಸಿ ಡಾಕ್ಟರೇಟ್ ಪದವಿಯನ್ನು ಪಡೆದಿರುವುದು ವಿಶೇಷ. ಈ ಮೂಲಕ ಸಂಶೋಧನೆ ಮಾಡುವ ಯುವಕರಿಗೆ ಪ್ರೇರಣೆಯಾಗಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ 5ನೇ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗಿದ್ದಾರೆ. ಬಳಿಕ ಇದೇ ವಿಭಾಗದಲ್ಲಿ ಸಂಶೋಧನೆಯನ್ನು ಮುಂದುವರೆಸಿದರು. ಇದೇ ಸಂದರ್ಭದಲ್ಲಿ ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅಭಿನಂದನೆ: ಡಾ. ಈಶ್ವರ್ ಅವರ ಶೈಕ್ಷಣಿಕ ಸಾಧನೆಗಾಗಿ ಕುಟುಂಬಸ್ಥರು, ಗುರು-ಹಿರಿಯರು, ಸ್ನೇಹಿತರು ಹಾಗೂ ಸಿರಿಗೇರಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಶುಭ ಕೋರಿದ್ದಾರೆ. ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ, ಮಂಡ್ಯ ಅನನ್ಯ ಮಾಧ್ಯಮ ತರಬೇತಿ ಕೇಂದ್ರದ ಮುಖ್ಯಸ್ಥ ರಾಜೇಶ್ ರಾಂಪುರ ಡಾ. ಈಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂಶೋಧನಾ ಮಹಾಪ್ರಬಂಧವು ಕನ್ನಡ ಚಿತ್ರರಂಗದಲ್ಲಿ ಇದೊಂದು ಹೊಸ ಮೈಲುಗಲ್ಲು ಮತ್ತು ವಿಶಿಷ್ಟ ದಾಖಲೆಯಾಗಿದೆ. ಸಿನಿಮಾ ರಂಗದ ಹಲವಾರು ಪರಿಣಿತರು, ಸಿನಿಮಾ ಪತ್ರಕರ್ತರು, ಸಿನಿಮಾ ಕಲಾವಿದರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಸೇರಿದಂತೆ ಕನ್ನಡ ಸಿನಿಮಾದ ವಿವಿಧ ಸಂಘಗಳು, ಹಂಸಲೇಖ ರವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಸಮಗ್ರವಾಗಿ ಸಂಶೋಧನೆ ನಡೆಸಿರುವ ಮಹಾಪ್ರಬಂಧದ ಕುರಿತು ಹರ್ಷ ವ್ಯಕ್ತಪಡಿಸಿ ಪ್ರಶಂಸಿದ್ದಾರೆ.
The post ಡಾ. ಹಂಸಲೇಖಾ ಅವರ ಸಂಗೀತ ಸಾಧನೆಗೆ ಶೈಕ್ಷಣಿಕ ಗೌರವ: ಸಿರಿಗೇರಿ ಈಶ್ವರ್ ಗೆ ಪಿಎಚ್.ಡಿ ಪದವಿ ಘೋಷಣೆ appeared first on Karnataka Kahale.
]]>The post ಛಲವಾದಿ ಚಾಲುಕ್ಯರು -ಮಾಳವ ದೊರೆ ನಂಜುಂಡಸ್ವಾಮಿ, ಬೆಂಗಳೂರು appeared first on Karnataka Kahale.
]]>ಕರುನಾಡ ದೊರೆಗಳಾಗಿದ್ದವರ ಹೆಸರಿನ ಬಗ್ಗೆ ಒಂದು ವಿವರಣೆ
ಪ್ರತಿ ವರುಷ ಕೆಲವು ದೇವಸ್ಥಾನಗಳಲ್ಲಿ (ಉದಾಹರಣೆಗೆ; ಮೇಲುಕೋಟೆ ಚೆಲುವನಾರಾಯಣ ದೇವಸ್ಥಾನ ಹಾಗು ಬೇಲೂರು ಚೆನ್ನಕೇಶವ ದೇವಸ್ಥಾನ) ಹೊಲಯನಿಗೆ ನೀಡುವ ಗೌರವವು ಕೆಲವೇ ದಿನಗಳಿಗೆ ಮತ್ತು ಆಚರಣೆಗೆ ಸ್ಥೀಮಿತವಾಗಿದ್ದರೂ ಅಲ್ಲಿ ಹೊಲಯನಿಗೆ ದೊರಕುವ ಗೌರವವು ರಾಜನಿಗೆ ದೊರಕುವ ಗೌರವದಂತಿದೆ. ಹೊಲಯ ದೊರೆಯಿಂದಲೇ ಆ ದೇವಸ್ಥಾನ ನಿರ್ಮಾಣವಾಗಿರದಿದ್ದರೆ ಹಾಗೂ ಹೊಲಯನಿಂದಲೇ ಆ ಧಾರ್ಮಿಕ ಆಚರಣೆಗಳು ಆರಂಭವಾಗದಿದ್ದರೆ ಈ ಬಗೆಯ ಆಚರಣೆಯನ್ನು ಮಧ್ಯಂತರದಲ್ಲಿ ಯಾವುದೋ ವ್ಯಕ್ತಿ ಆರಂಭಿಸಿದ ಎಂಬುದನ್ನು ಸಾಕ್ಷೀಕರಿಸುವುದು ಕಷ್ಟ. ಒಂದು ಕಾಲದಲ್ಲಿ ಮೇಲ್ವರ್ಗದ ರಾಜನಾಗಿದ್ದ ಹೊಲಯನ ಸಂಸ್ಕøತಿ, ಭಾಷೆ, ಧರ್ಮ ಹಾಗೂ ಸಂಪ್ರದಾಯಗಳನ್ನು ಒಪ್ಪಿ-ಅಪ್ಪಿಕೊಂಡ ಜನರು ಆತನ ಸ್ಥಿತಿ-ಗತಿಗಳು ಹೀನವಾಗಿ ಆತನು ಅಧಿಕಾರ-ಅಂತಸ್ತು ಕಳೆದುಕೊಂಡ ಮೇಲೆ ಅವನನ್ನು ಕೀಳಾಗಿ ಕಂಡರೂ ತಾವುಗಳು ಇಂದು ಪಡೆದಿರುವ ಸವಲತ್ತುಗಳು, ತಾವು ಮಾತಾಡುತ್ತಿರುವ ಭಾಷೆ, ತಾವು ಆಚರಿಸುತ್ತಿರುವ ಧರ್ಮ, ತಾವು ಪೂಜಿಸುತ್ತಿರುವ ದೇವರ ಮೂರ್ತಿ ಹಾಗೂ ತಾವು ನಡೆಸಿಕೊಂಡು ಬರುತ್ತಿರುವ ಸಂಪ್ರದಾಯಗಳನ್ನೆಲ್ಲಾ ಹೊಲಯರಿಂದ ಪಡೆದಿರುವ ಜನರು, ಜನಾಂಗಗಳು ಹಾಗೂ ಒಂದು ಕಾಲದಲ್ಲಿ ಹೊಲಯನು ದೇವಸ್ಥಾನಕ್ಕೆ ಬರುವುದನ್ನೇ ಕಾಯುತ್ತಿದ್ದವರು, ಹೊಲಯರು ತಮ್ಮ ಬಡತನದಿಂದಾಗಿ ತಮ್ಮನ್ನು ಅಪ್ಪಿಕೊಂಡ ಹೀನಸ್ಥಿತಿಯಿಂದಾಗಿ ಕುಗ್ಗಿ ದೇವಸ್ಥಾನಕ್ಕೆ ಹೋಗುವದನ್ನು ತಪ್ಪಿಸತೊಡಗಿದರು. ಕೊನೆಗೆ ನಿಲ್ಲಿಸಿದರು. ಆದರೂ ಅವರ ಉಪಕಾರ ಸ್ಮರಣಾರ್ಥವಾಗಿ ಅವರನ್ನು ವರುಷಕೊಮ್ಮೆಯಾದರೂ ದೇವಸ್ಥಾನಕ್ಕೆ ಕರೆಯಿಸಿ ಗೌರವಿಸುವ ಸಂಪ್ರದಾಯ ನಾವಿಂದು ಮರೆತುಹೋದ ಆಡಳಿತ ವ್ಯವಸ್ಥೆಯ ಕಾಲದಲ್ಲಿ ಆರಂಭವಾಗಿ ಇಂದಿಗೂ ಚಾಚೂ ತಪ್ಪದೆ ನಡೆದುಕೊಂಡು ಬಂದಿದೆ.
ಕರ್ನಾಟಕ ರಾಜ್ಯದ ಬಾಲಕೋಟೆ ಪಟ್ಟಣದಲ್ಲಿ ಹೋಳಿ ಹಬ್ಬಕ್ಕೆ ಕಾಮನ ಸುಡಲು ಬೇಕಾಗುವ ಬೆಂಕಿಯನ್ನು ಅಲ್ಲಿಯ ದೇಸಾಯಿಯವರು(ರಾಜ ಕುಟುಂಬದವರು) ಮೆರವಣಿಗೆಯಲ್ಲಿ ಹೋಗಿ ಹೊಲೆಯರ ಮನೆಯಿಂದ ತರುವ ಸಂಪ್ರದಾಯವಿದೆ. ಆ ರೀತಿ ಬೆಂಕಿ ಕೊಡುವ ಹೊಲೆಯರ ಕುಟುಂಬದ ಕೆಲವರು ತಾವು ಹಿಂದೆ ಆ ನಾಡನ್ನು ಆಳುತ್ತಿದ್ದ ದೊರೆಗಳಾಗಿದ್ದೆವು. ನಾವು ಈಗ ಛಲವಾದಿಗಳು ಎನಿಸಿಕೊಳ್ಳುತ್ತೇವೆ. ಹಿಂದೆ ನಮ್ಮನ್ನು ಚಾಲುಕ್ಯರು ಎನ್ನುತ್ತಿದ್ದರು ಎನ್ನುತ್ತಾರೆ. ಬಾಗಲಕೋಟೆಯ ಛಲವಾದಿ(ಚಲವಾದಿ, ಚಲುವಾದಿ) ಎಂದು ಕರೆಯಿಸಿಕೊಳ್ಳುವ ಹೊಲೆಯರ(ಹೊಲಯರ, ಹೊಲಿಯರ) ಈ ಮಾತನ್ನು ನಾವು ಒಪ್ಪಬಹುದು ಹಾಗೂ ಹಲವಾರು ದಾಖಲಾತಿಗಳ ಮೂಲಕ ಸಾಕ್ಷೀಕರಿಸಬಹುದು.
ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರ ಪ್ರಸಾರಾಂಗವು ಪ್ರಕಟಿಸಿರುವ ಬಾದಾಮಿ ಚಾಲುಕ್ಯರು ಎಂಬ ಲೇಖನ ಸಂಪುಟ ನೋಡಿರಿ. ಅದರಲ್ಲಿ ಅಧ್ಯಾಯ 5 ಪೊಲೆಕೇಶಿ(ಪುಲಕೇಶಿ, ಪುಲಿಕೇಶಿ) ಎಂಬ ಹೆಸರಿನ ಅರ್ಥವೇನು?- ಬರೆದವರು- ಎನ್.ಲಕ್ಷ್ಮೀನಾರಾಯಣರಾವ್. ಪುಟ -82; “ಈ ವಂಶದ ಅತಿ ಪ್ರಾಚೀನವಾದ ಶಾಸನಗಳಲ್ಲಿರುವ ಈ ಹೆಸರಿನ ರೂಪವಾದ “ಪೊಲೆಕೇಶಿ”ಯೆ ಮೂಲರೂಪವಿರಬೇಕೆಂದು ಡಾ||ಫ್ಲೀಟ್ ಹೇಳಿದ್ದಾರೆ. ಈ ರೂಪವನ್ನೇ ಶಾಸನ ಪರಿಶೋಧಕರಲ್ಲಿ ಅಗ್ರಗಣ್ಯರಾದ ಡಾ||ಖೀಲ್ ಹಾರ್ನ್ ಅವರೂ ಸಹ ಬಳಸಿದ್ದಾರೆ. ಮೊಟ್ಟ ಮೊದಲಿನ ಈ ಹೆಸರಿನ ರೂಪವಾದ “ಪೊಲಿಕೇಶಿ” ಎಂಬ ಪದವು ನನ್ನ ಅಭಿಪ್ರಾಯದಂತೆ ಪೊಲೆ ಮತ್ತು ಕೇಶಿ ಎಂಬ ಶುದ್ದ ಕನ್ನಡ ಶಬ್ದಗಳ ಸಂಯೋಗದಿಂದ ಉಂಟಾದ ಪದ. ಇದರ ಪೂರ್ವಾರ್ಧವಾದ “ಪೊಲೆ” ಎಂಬುದಕ್ಕೆ “ ಹೊಲೆಮೆನೆ” ಎಂದರ್ಥ. “ಕೇಶಿ” ಎಂಬುದು “ಕೇಶವ” ಎಂಬ ಹೆಸರಿನ ಸಂಕ್ಷಿಪ್ತರೂಪ. ಈ ರೂಪದಲ್ಲಿ ಈ ಪದವು ಕನ್ನಡ ಸಾಹಿತ್ಯದಲ್ಲಿಯೂ ಶಾಸನಗಳಲ್ಲಿಯೂ ಸಿಕ್ಕುತ್ತದೆ. “ಶಬ್ದಮಣಿದರ್ಪಣ”ವನ್ನು ರಚಿಸಿದ ಕೇಶಿರಾಜನು ತನ್ನ ಹೆಸರಿನ ಕೇಶಿ, ಕೇಶವ ಎಂಬ ಎರಡು ರೂಪಗಳನ್ನು ಈ ಗ್ರಂಥದಲ್ಲಿ ಕೊಟ್ಟಿದ್ದಾನೆಂಬುದು ಗಮನಾರ್ಹವಾಗಿದೆ.”
ಇದೇ ಸಂಪುಟದ ಅಧ್ಯಾಯ 6 ನೊಡಿರಿ. ಚಾಲುಕ್ಯ-ಪುಲಕೇಶಿ: ಪದನಿಷ್ಪತ್ತಿ- ಬರೆದವರು- ಹಂಪನಾಗರಾಜಯ್ಯ.
ಚಾಳುಕ್ಯರದು ಕೂಡ ಅಚ್ಚ ಕನ್ನಡ ಅರಸು ಕುಲ. ಚಾಳುಕ್ಯ ವಂಶದ ಉಗಮ ಹಾಗೂ ನಿಷ್ಪತ್ತಿಯನ್ನು ಕುರಿತು ಚರ್ಚೆಗಳಾಗಿವೆ. ಚರಿತ್ರಾಕಾರರು ನಡೆಸಿರುವ ಚಿಂತನ ಮಂಥನಗಳ ಸಾರಾಂಶಕ್ಕಿಂತ ಬೇರೆಯದಾದ ನಿಲುವು ನನ್ನದು. ಇದುವರೆಗೆ ಸೂಚಿತವಾಗಿರುವ ಶಬ್ದಾರ್ಥ ಜಿಜ್ಞಾಸೆಗೆ ಇನ್ನೊಂದು ಅರ್ಥವನ್ನು ಪೋಣೀಸುವುದಷ್ಟೇ ನನ್ನ ಉದ್ದೇಶವಲ್ಲ. ಭಾಷಿಕ, ಸಾಮಾಜಿಕ, ಭೌಗೋಳಿಕ ಮತ್ತು ಸಾಂಸ್ಕøತಿಕ ಹಿನ್ನೆಲೆಗಳಿಂದ ಈ ಚಾಳುಕ್ಯ ಶಬ್ದದ ನಿರ್ವಚನ ಮತ್ತು ಪುನರ್ ವ್ಯಾಖ್ಯೆಗೆ ಅವಕಾಶವಿದೆ. ‘ಚಾಳುಕ್ಯ’ ಎಂಬ ಶಬ್ದರೂಪಕ್ಕೆ ಸಂಬಂಧಿಸಿದ ಕೆಲವು ಪ್ರಾಚೀನ ಶಾಸನ ಪ್ರಯೋಗಗಳು
1. ಚಲ್ಕ್ಯ : ಬಾದಾಮಿ ಶಾಸನ : ಕ್ರಿ.ಶ. 578
2. ಚಳಿಕ್ಯ : ಮಹಾಕೂಟ ಸ್ತಂಭ ಶಾಸನ :ಕ್ರಿ.ಶ. 602
3. ಚಲಿಕ್ಯ : ಮಂಗಳೇಶನ ಶಾಸನ: ಕ್ರಿ.ಶ. 7ನೆಯ ಶತಮಾನ
4. ಚಲುಕ್ಯ : ಪುಲಿಕೇಶಿ II ಐಹೊಳೆಯ ಶಾಸನ: ಕ್ರಿ.ಶ.634
5. ಚಳುಕಿ : SIXVII. 27 ಅತೇದಿ.
6. ಸಳುಕಿ : SII, XI-i. 14. ಕ್ರಿ.ಶ. 872.
ಈ ಶಬ್ದದ ಚರ್ಚೆಯ ಕಕ್ಷೆಗೆ ಒಳಪಡುವ ಸಮಾನ ಮೂಲದ ಶಬ್ದಗಳ ಜಾತಕವನ್ನೂ ಬಿಡಿಸಿ ನೋಡಬಹುದು. ಚವುಳು, ನವುಳ Brackishness, ತಮಿಳು, ಚವುಡು, ತೆಲಗು, ಚವುಡು, ಚವಡು, ಚೌಡು.
ಚವುಳುಪ್ಪು Impure soda, soda-Saltpeter
ಚವುಳು ಮಣ್ಣು Fullers earth, earth impregnated with carbonate sida.
ಜಾಳ್ನೆಲ, ಜವುಳು ನೆಲ ಊಷ ಕ್ಷಾರಮೃತ್ತಿಕೆ.
ಚಳಿಯ the state of growing putrid of muddy
ತಮಿಳು, ಮಲೆಯಾಳಂ, ಚಳಿ to grow putrid, mud, mire ಕೆಸರು wet soil, mud, mire ತಮಿಳು, ಮಲೆಯಾಳಂ, ಚಳಿ, ಸುಳಿ, ಚದುಕು, ಜೀರುಕು
ಸಲಿಕೆ(ತ್ಭ) ಸಲಾಕೆ, ಸಂಸ್ಕøತ-ಶಲಾಕೆ, ಕಬ್ಬಿಣದ ಸರಳು, ಕೃಷಿ ಉಪಕರಣ ಮೇಲಿನ ಶಬ್ದ ರೂಪಗಳ ಹಿನ್ನೆಲೆಯಿಂದ ನೋಡುವಾಗ ಚಳಿಯ, ಚವುಳು, ಜವುಳು ಎಂಬ ಶಬ್ದಗಳು ಒಂದು ಮೂಲ ಪ್ರಕೃತಿ (ಆಕೃತಿ)ಯಿಂದ ನಿಷ್ಪನ್ನವಾದ ಶಬ್ದಗಳೆಂದು ಕಾಣುತ್ತದೆ. ಇವೆಲ್ಲವೂ ಮಣ್ಣಿಗೆ ಸಂಬಂಧಿಸಿದ ಮಾತುಗಳು. ಸಲಿಕೆ, ಸಲಾಕೆ ಎಂಬುದನ್ನೂ ‘ಚಳುಕ್ಯ-ಸಳುಕಿ’ ಎಂಬ ಶಬ್ದದ ಮೂಲಕ ಜ್ಞಾತಿ ಶಬ್ದಗಳೆಂದು (Cognate words) ಕಲ್ಪಿಸಬಹುದು. ಇದರಿಂದ ಪ್ರತೀತವಾಗುವಂತೆ ಈ ಚಾಳುಕ್ಯ ವಂಶದ ಮೂಲ ಪುರುಷರು ಒಕ್ಕಲ ಮಕ್ಕಳಾಗಿದ್ದರು. ಅವರು ಮೊದಲು ಮಣ್ಣಿನ ಮಕ್ಕಳಾಗಿದ್ದು ಪ್ರಭುಶಕ್ತಿ ಗಳಿಸಿ, ಒಂದು ರಾಜಕುಲವಾಗಿ ಬೆಳೆದರು. ಚಾಳುಕ್ಯರದು ಕೃಷಿಕ ಕುಟುಂಬವೆಂಬ ತೀರ್ಮಾನ ತಳೆಯಲು ನೆರವಾಗುವುದು ಈ ವಂಶದ ಪೊಲಕೇಸಿನ್ ಎಂಬ ಹೆಸರು.
ಪೊಲಕೇಸಿನ್(SIL.XX.4.683) ಲಕ್ಷ್ಮೇಶ್ವರ(ಧಾರವಾಡ ಇಂದಿನ ಗದಗ ಜಿಲ್ಲೆ, ಜಿ.ಶಿರಹಟ್ಟಿ.ತಾ): ಅದೇ 5.723: 5.723: ಅದೇ.6.730: ಅದೇ 7.735:SILXI.136.1091 ಆಲೂರು(ಧಾ. ಇಂದಿನ ಗದಗ ಜಿಲ್ಲಾ ಮುಂಡರಗಿ ತಾ) ಎಂಬ ಅಂಕಿತನಾಮ ರೂಪದಲ್ಲಿ ಎರಡು ಮುಕ್ತ ಆಕೃತಿಗಳಿವೆ: ಪೊಲ(ನ್)+ಕೇಸಿನ್, ಇವು ಮೂಲದ್ರಾವಿಡಕ್ಕೂ, ಪೂರ್ವದ ಹಳೆಗನ್ನಡಕ್ಕೂ ಸೇರಿದ ಶಬ್ದಗಳು. ಪೊಲ(ಹೊಲ)+ಕೇಸಿನ್(ಚೇಸಿನ್=ಮಾಡುವವನು)= ಪೊಲಕೇಸಿನ್ ಎಂದಾಗಿದೆ. ತೆಲಗು ಭಾಷೆಯಲ್ಲಿ ‘ಚೇಸಿನ’ ಎಂಬ ಕ್ರಿಯಾರೂಪಕ್ಕೆ ‘ಮಾಡಿದ’ ಎಂದೂ, ‘ಚೇಸಿನವಾರು’ ಎಂಬುದಕ್ಕೆ ‘ಮಾಡಿದವರು’ ಎಂದೂ ಅರ್ಥ. ಕೇಸಿನ್-ಚೇಸಿನ ಎಂಬುದು ತಾಲವೀಕರಣಗೊಂಡಿರುವ (palatalisation) ದ್ರಾವಿಡರೂಪ. ಇಂಥ ಇನ್ನೂ ಹತ್ತಾರು ಸಮಾನ-ಸದೃಶ ರೂಪಗಳಿವೆ. ಕೆಲವು ಉದಾ: ಕೇರ-ಚೇರ, ಕೆಯ್-ಚಯ್, ಕೆದರು-ಚೆದರ್, ಗೆದ್ದಲು-ಚೆದಲ್, ಕೆರೆ-ಚೆರೆವು. ಮೂಲದ್ರಾವಿಡ *ಕ್-ಸ್ವರÀವು, ಅದರ ಮುಂದೆ ಇಈ-ಎಏ ಎಂಬ ಪೂರ್ವ ಸ್ವರಗಳು (front vowels) ಬಂದಾಗ ಅದು ತಮಿಳು, ತೆಲಗು, ಹಾಗೂ ಮಲೆಯಾಳ ಭಾಷೆಗಳಲ್ಲಿ ಚ್-ಆಗುತ್ತದೆ. ಪೂರ್ವೇತರ ಸ್ವರಗಳಾದ (non-front vowels) ಅ, ಉ, ಒ, ಪರವಾದಾಗ ವ್ಯತ್ಯಾಸವಾಗುವುದಿಲ್ಲ. ಕನ್ನಡ ಹಾಗೂ ತುಳು ಭಾಷೆಗಳಲ್ಲಿ, ಪೂರ್ವ-ಪೂರ್ವೇತರ ಸ್ವರಗಳಲ್ಲಿ ಯಾವುದೇ ಬಂದರೂ ಸ್ವನ ವ್ಯತ್ಯಾಸ ಸಂಭವಿಸದೆ *ಕ್-ಸ್ವರ ಅಬಾಧಿತವಾಗಿಯೇ ನಿಲ್ಲುತ್ತದೆ: ಉದಾ;(ಕನ್ನಡ) ಕಿರಿ, ಕೆಯ್, ಕೇರು, ಕೆದರು- ಈ ಶಬ್ದಗಳಿಗೆ ತಮಿಳು ತೆಲುಗು ಮಲೆಯಾಳ ಭಾಷೆಗಳಲ್ಲಿ ಕ್ರಮವಾಗಿ ಚಿರಿ, ಚೆಯ್-ಚೇತ, ಚೇರುಕ-ಚೆರುಗು, ಚೆದರು ಎಂದ ರೂಪಗಳಿವೆ(ಹಂಪ. ನಾಗರಾಜಯ್ಯ, ‘ದ್ರಾವಿಡ ಭಾಷಾ ವಿಜ್ಞಾನ’ ನಾಲ್ಕನೆಯ ಮುದ್ರಣ 1994). ಏಳನೆಯ ಶತಮಾನದ ತೆಲಗು ಶಾಸನಗಳಲ್ಲಿ ಕೇಸಿರಿ ಎಂಬ ಕಕಾರವೇ ಶಬ್ದದ ಆದಿಯಲ್ಲಿ ಪ್ರಯೋಗವಾಗಿರುವ ರೂಪಗಳಿವೆ. ಪನಿಕೇಸಿರಿ(ಪನಿಚೇಸಿರಿ)
ಪೊಲಕೇಸಿನ್ ಎಂಬುದು ‘ಹೊಲ ಮಾಡುವವನು’ ಎಂಬ ಅರ್ಥದ ಮಾತಾಗಿದೆ: ಒಕ್ಕಲ್ತನಂ ಕೆಯ್ವೊನ್ (IA.XIX ಸು.690. ಬಳ್ಳಿಗಾವೆ ಪು.144-45) ಇಂದಿಗೂ ಹೊಲ ಮಾಡಿಕೊಂಡಿದ್ದಾನೆ, ಹೊಲಗೆಯ್ಕೊಂಡಿದ್ದಾನೆ, ಹೊಲಗೆಯ್ಯಂಬುವು ರೈತಾಪಿ ಜನರ ರೂಢಿಯ ಮಾತುಗಳಾಗಿವೆ. ಪೊಲಕೇಸಿನ್(ಹೊಲಮಾಡುವವನು) ಎಂಬ ಹೆಸರಿನ ಸ್ತ್ರೀ ಪುರುಷರನ್ನು ಕನ್ನಡ ಶಾಸನಗಳು ಹೆಸರಿಸಿವೆ.
1. ಗಂಗರ ರಾಜರಲ್ಲಿ ಪೊಲವೀರನೆಂಬ ಕೊಙುಣಿ ಮಹಾರಾಜನಿದ್ದಾನೆ. ಈತನು ಗಂಗರ ದುರ್ವಿನೀತನ(495-535) ಒಬ್ಬ ಮಗ; ಇನ್ನೊಬ್ಬ ಮಗನೇ ಮುಷ್ಕರ. ಪೊಲವೀರನು ಸೇಂದ್ರಕ ವಿಷಯದಲ್ಲಿ ಪಲಚ್ಚೊಗೆ ಎಂಬ ಹಳ್ಳಿ ದತ್ತಿಯಿತ್ತನು (EC.IX (1990)537,ಕ್ರಿ.ಶ.6 ಶತಮಾನ, ತಗರೆ (ಹಾಸನ ಜಿ.ಬೇಲೂರು ತಾ.ಪು.472).
2. ನಾಗುಳರ ಪೊಲ್ಲಬ್ಬೆ ಮಾಡಿಸಿದ ಬಸದಿ [SII.XVIII,315, 859-60 ರಾಣೆಬೆನ್ನೂರು(ಧಾರವಾಡ ಜಿ.) ಪು.420]
3. ಪ್ರತಾಪಶಾಲಿಯುಮಪ್ಪ ಹೊಲ್ಲಗಾವುಂಡನ ಗುಣ ಪ್ರಭಾವಂ [B.K.No.108 of 1926-27;BK.51,1155] 4. ನೊಳಂಬ ಪೊಲವೀರನೆಂಬುವನು ಗಂಗರ ಪೃಥ್ವೀಪತಿ ದಿಡಿಗ ರಾಜನ ಮೇಲೆ ದಂಡೆತ್ತಿ ಬಂದ ದಾಖಲೆಯಿದೆ.
ಇದುವರೆಗಿನ ಚರ್ಚೆಯ, ಮಂಥನದ ಸಾರಾಂಶ
1. ಚಾಳುಕ್ಯರದು ‘ಚಳುಕ್ಯ’ ಕುಲ. ಅವರ ವಿವಿಧ ಪ್ರಾಚೀನ ರೂಪಗಳು ಹ್ರಸ್ವ ಸ್ವರಾದಿಯಾದ ಚಳುಕಿ, ಸಳುಕಿ, ಚಳುಕ್ಯ, ಚಲಿಕ್ಯ, ಚಲ್ಕ್ಯ ಎಂಬುವಾಗಿವೆ. ಇವುಗಳನ್ನು ಸಲಿಕೆ, ಸಲಾಕಿ ಎಂಬ ಕೃಷಿಕ ಉಪಕರಣಗಳೊಂದಿಗೆ ಸಮೀಕರಿಸಬಹುದು.
2. ಚಳುಕಿ-ಸಳುಕಿ ಎಂಬ ಶಬ್ದಗಳು ನೆಲ, ಮಣ್ಣು ಎಂಬರ್ಥದ ಶಬ್ದಗಳಿಗೆ ಹೊಂದಿವೆ. ಇವು ದ್ರಾವಿಡ ಮೂಲದ ಶಬ್ದಗಳಾಗಿದ್ದು ಇದರ ಜ್ಞಾತಿ ರೂಪಗಳು, ಜ್ಞಾತಿ ಭಾಷೆಗಳಲ್ಲಿ, ಸಮಾನ ಅರ್ಥ ಪ್ರಭೇದಗಳಿಂದ ಕಂಡುಬರುತ್ತವೆ. ಆದ್ದರಿಂದ ಇವನ್ನು ಸಂಸ್ಕøತದಿಂದ ನಿಷ್ಪನ್ನ ಮಾಡುವುದು ಸರಿಯಲ್ಲ; ದ್ರಾವಿಡ ರೂಪವೇ ಸಂಸ್ಕøತೀಕರಣಗೊಂಡಿದೆ.
3. ‘ಪೊಲಕೇಸಿನ್’ ಎಂಬ ಶಬ್ದದ ಮೂಲ ಅರ್ಥವೂ ಸಹ ಒಕ್ಕಲುತನಕ್ಕೆ ಸೇರಿದ್ದಾಗಿದೆ. ಪೊಲಕೇಸಿನ್ ಎಂದರೆ ನೆಲದೊಡೆಯ, ನೆಲ ಸಂಬಂಧದ ಕೆಲಸ ಮಾಡುವಾತ ಎಂದರ್ಥ.
4. ಚಾಳುಕ್ಯರದು ಒಕ್ಕಲು ಮೂಲದ ಮನೆತನ, ಕೃಷಿಕ ಕುಟುಂಬ.
5. ಚಾಳುಕ್ಯರು ಮೂಲತಃ ಬಿಜಾಪುರ ಜಿಲ್ಲೆಯ ಬಾದಾಮಿ, ಶಿರಹಟ್ಟಿ ಸುತ್ತಲ ರೈತಾಪಿಗಳು. ಸ್ವಸಾಮಥ್ರ್ಯ ಮತ್ತು ರಾಜಕೀಯ ಮಹತ್ವಾಕಾಂಕ್ಷೆಯಿಂದ ಈ ಒಕ್ಕಲ ಕುಟುಂಬದ ಪೊಲವೀರರು ದೊಡ್ಡ ಸಾಮ್ರಾಜ್ಯವನ್ನಾಳುವಷ್ಟು ಬಲಿಷ್ಟರಾದರು. ರಾಷ್ಟ್ರಕೂಟರೂ ಮೊದಲಿಗೆ ಒಕ್ಕಲಿಗರೆಂಬುದಕ್ಕೆ ಅವರ ರಾಜ ಲಾಂಛನದಲ್ಲಿ ನೇಗಿಲು ಇರುವುದು ಸಾಕ್ಷಿ. ಗಂಗರೂ ರೈತರಿದ್ದಿರಬಹುದು.
6. ಚಾಳುಕ್ಯ ಎಂಬ ಶಬ್ದಕ್ಕೆ ದೈವ ಮೂಲದ ಊಹಾತ್ಮಕ ನಿಷ್ಪತ್ತಿಗಿಂತ ಮನುಷ್ಯ ಮೂಲದ ನಿಷ್ಪತ್ತಿಯಲ್ಲಿರುವ, ವಾಸ್ತವತೆಗೆ ಹತ್ತಿರವಾಗುವ ಸಮಂಜಸತೆಯನ್ನು ಪ್ರಾಜ್ಞರಾದ ಚರಿತ್ರಕಾರರು ಪರಿಭಾವಿಸಬೇಕು.
7. ಬೆಳ್ವೊಲ[*ವೆಳ್+ಪೊಲ(ನ್)=ವೆಳ್ವೊಲ, ಬೆಳ್ವೊಲ, ಬೆಳ್ವಲ] ಎಂಬಲ್ಲಿ ಉತ್ತರಾರ್ಧವಾಗಿ ಇರುವ ಶಬ್ದ ರೂಪವೂ ‘ಪೊಲ’ ಎಂಬುದೇ. ಬೆಳ್ವೊಲ ಮುನ್ನೂರರ ಪ್ರದೇಶದವರು ಚಾಳುಕ್ಯ ಕುಲಜರು.
8. ಪುಲಿಗೆರೆ-ಪುರಿಕರ ಎಂಬ ಸ್ಥಳವಾಚಿ ಶಬ್ದಗಳಿಗೂ ಪೊಲಗೆರೆ(ಹೊಲದಕೆರೆ) ಎಂಬುದು ಮೂಲ ಪ್ರಾಚೀನ ರೂಪವಿರಬಹುದು. ಪುರಿಕರನಗರಿ ಎಂಬುದು ಇದರ ಸಂಸ್ಕøತ ರೂಪ. ಪೊಲಗೆರೆ-ಪುಲಿಗೆರೆ(ಲಕ್ಷ್ಮೇಶ್ವರ): ಇದರಂತೆಯೇ ಪೊಲಕೇಸಿನ್-ಪುಲಿಕೇಸಿ ಎಂಬ ಬೆಳವಣಿಗೆಯನ್ನು ಮನಗಾಣಬಹುದು.
9. ಚಾಳುಕ್ಯರಿಗೆ(ಪೊ)ಪುಲಿಗೆರೆಯೇ ಮೂಲ ಸ್ಥಳವಿರಬೇಕು. ಪುಲಿಗೆರೆಯ ಸಂಖಬಸದಿಯು ಬಾದಾಮಿ ಚಾಳುಕ್ಯರ ಮನೆದೇವರು, ಪಟ್ಟ ಜಿನಾಲಯ. ಈ ಕಾರಣಕ್ಕಾಗಿಯೇ ಬಾದಾಮಿ ಚಾಳುಕ್ಯರು, ಕಲ್ಯಾಣಿ ಚಾಳುಕ್ಯರು ಒಂದೇ ಸಮನೆ ಪುಲಿಗೆರೆಯ ಶಂಖ ಜಿನಾಲಯಕ್ಕೆ ದಾನ ದತ್ತಿಗಳನ್ನು ಪುನರ್ಭರಣಗೊಳಿಸುತ್ತ ಭಕ್ತಿಯಿಂದ ನಡೆದುಕೊಂಡರು.
ಈ ಚರ್ಚೆಯಲ್ಲಿ ಹಂಪನಾಗರಾಜಯ್ಯನವರು ತಮ್ಮ ಕನ್ನಡ ಮತ್ತು ಇತರೇ ಭಾರತೀಯ ಭಾಷೆಗಳ ಜ್ಞಾನದಿಂದ ಒದಗಿರುವ ವಿಷಯಗಳು, ಪದಗಳು ಮತ್ತು ಕೆಲವು ಊಹೆಗಳನ್ನು ಮಾಡಿ ಚಾಲಕ್ಯರು ಮೂಲತಃವಾಗಿ ರೈತರಾಗಿದ್ದರು, ಅವರಂತೆಯೇ ರಾಷ್ಟ್ರಕೂಟರು ಹಾಗೂ ಗಂಗರೂ ಸಹ ಹೊಲ ಮಾಡಿಕೊಂಡಿದ್ದ ಕುಟುಂಬದವರಾಗಿದ್ದರು ಎಂಬ ವಿಷಯವನ್ನು ತುಂಬಾ ಶಾಸ್ತ್ರೀಯವಾಗಿ ನಿರೂಪಿಸಿದ್ದಾರೆ.
ನಾನು ಅವರ ವಾದವನ್ನು ಸಂಪೂರ್ಣವಾಗಿ ಒಪ್ಪಿ ಅವರ ವಾದಕ್ಕೆ ಪುಷ್ಠಿಕೊಡಲು ನನ್ನ ಸುಮೇರಿಯನ್ ಅಧ್ಯಯನದಿಂದ ದೊರಕಿರುವ ಮಾಹಿತಿಗಳನ್ನು ಇಲ್ಲಿ ನೀಡುತ್ತಿದ್ದೇನೆ.
ಸುಮೇರಿಯನ್ ಭಾಷೆಯಲ್ಲಿ; ‘ಳು’ ಅಥವಾ ‘ಲು’ ಎಂದರೆ ವ್ಯಕ್ತಿ, ಆಳು, ಮನುಷ್ಯ, ದೊರೆ, ರಾಜ ಎಂಬ ಅರ್ಥಗಳಿವೆ. ‘ಕಿ’ ಎಂದರೆ, ಭೂಮಿ, ನೆಲ, ಹೊಲ, ಮಾಳ ಎಂಬ ಅರ್ಥಗಳಿವೆ.
ಈ ಎರಡು ಪದಗಳೊಂದಿಗೆ ಸುಮೇರಿಯನ್ ಭಾಷೆ ಮತ್ತು ಅಕ್ಕಾಡಿಯನ್ ಭಾಷೆಗಳಲ್ಲಿ ರಾಜ ಹಾಗೂ ರಾಜನಿಗೆ ಸಂಬಂಧಿಸಿದ ಪದಗಳನ್ನು ಕೆಳಗೆ ನೀಡಿರುತ್ತೇನೆ.
1. HuSma(King) wr. HuS-ma “King” Akk. Sarru
2. UNgal (Ruler) wr.UN-gal “ruler” Akk. sarru; Sarratu
3. barag(DAIS) wr.barag; bara; “ruler, king; dais seat” AKK.parakku; Sarru; subtu.
4. lugal (King)wr.lugal; lu-gal; lord; master; Owner; king; a quality designation”
AKK.lu; Sarru
5. Sag(King) wr.Sag “King” AKK. Sarru
6. taskarin(King)wr.taskarin “king”
7. nambarag(Royalty) wr.nam-barag “royalty” AKK.Sarrutu
8. namen(Priesthood)wr.nam-en “the office of en-priest; kingship” AKK.enutu; belutu
9. namlugal(kingship)wr.nam-lugal “kingship”
Sag-lu-ki
– ಸಂಗಾ-ಲು-ಕಿ/ಸಂಗಾ-ಳು-ಕಿ
– ಸಂಗ್-ಲು-ಕಿ/ಸಂಗ್-ಳು-ಕಿ
– ಸಾಂ(ಸಂ)ಳುಕಿ/ಸಾ(ಸ)ಳುಂಕಿ
-ಚಾ(ಚ)ಳುಂಕಿ/ಚಲುಕಿ/ಚಾಳುಕಿ/ಚಾಲುಕಿ
-ಚಾಳುಕಿಯ/ಚಾಲುಕಿಯ/ಚಾಳುಕ್ಯ/ಚಾಲುಕ್ಯ
‘ಚಾ’ ಎಂದರೆ ರಾಜ ಎಂಬ ಅರ್ಥವಿದೆ. ಅದನ್ನು ‘ಶಾ” ಎಂದು ಕೆಲವರು ಹಾಗು ‘ಸಾ’ ಎಂದು ಕೆಲವರು ಉಚ್ಚರಿಸುತ್ತಾರೆ. ಇರಾನಿನ ದೊರೆಗಳಿಗೆ ‘ಶಾ’ ಎನ್ನುತ್ತಿದ್ದುದನ್ನು ನೆನಪಿಸಿಕೊಳ್ಳಿರಿ, ಇಲ್ಲಿ ಚಾಲುಕಿ ಎಂದರೆ ದೊರೆ-ದೊರೆ-ಭೂಮಿ ಅಥವಾ ರಾಜ-ರಾಜ-ರಾಜ್ಯ ಅಥವಾ ದೊಡ್ಡರಾಜ-ರಾಜ್ಯ, ಅಥವಾ ನಾಡಿನ ದೊಡ್ಡದೊರೆ ಅಥವಾ ಈ ಭೂಮಿಯ ಮಹಾರಾಜ ಎಂದು ಅರ್ಥ.
ಇಲ್ಲಿ ನಾನು ಹೇಳುವ ‘ಚ’ ಕಾರ ಮೊದಲು ಬಂದಿದೆ ನಂತರ ‘ಸ’ ಕಾರ ಬಂದಿದೆ ಎಂಬುದು ಮುಖ್ಯ. ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಪಟ್ಟಣಗಳಲ್ಲಿರುವ ಚಾಲುಕ್ಯರ ಕಟ್ಟಡಗಳಿಗೆ ಬೇಕಾದ ಕಲ್ಲುಗಳನ್ನು ಶಂಕರಲಿಂಗನ ಗುಡ್ಡದಿಂದ ಮತ್ತು ಮೊಟರ ಮರಡಿಗುಡ್ಡಗಳಿಂದ ಪಡೆಯಲಾಗಿವೆ. ಶಂಕರಲಿಂಗನ ಗುಡ್ಡದ ಮೇಲೆ ಇರುವ ಶಾಸನಗಳಲ್ಲಿ ಒಂದು ಶಾಸನ(5)ಪಾಠ ಈ ಕೆಳಗಿನಂತಿದೆ.
1. ಶ್ರೀ.ಧರ್ಮ ಸಂಗಾತನ ಕಣಿ
2. ಪಪಾಕೋ ಆಜ್ಞಾವೋ ಪರಮ ಮಾ
3. ಹೇಶ್ವರ
ಇಲ್ಲಿ ಕಂಡುಬರುವ ಪದ ಸಂಗಾ ಎಂದರೆ ದೊರೆ ಆ ದೊರೆಯ ಕಣಿ ಅಲ್ಲಿತ್ತು. ಚಾಲುಕ್ಯರುಗಳೇ ಮರಾಠ ನಾಡಿನಲ್ಲಿ ಸಾಳುಂಕಿಗಳು ಎಂದು ಹೆಸರಾದವರು. ಇವರೇ ಚಲವಾದಿಗಳು ಎನಿಸಿಕೊಳ್ಳುವವರು ಭಾರತದಲ್ಲಿ ಆಸ್ತಿ-ಪಾಸ್ತಿ ಅಧಿಕಾರ ಬಂದಾಗ ದೊಡ್ಡ ಮನುಷ್ಯರು ಅನಿಸಿಕೊಂಡವರ ಜಾತಿ ದೊಡ್ಡವರ ಅಥವಾ ಮೇಲು ಜಾತಿ ಆಗುತ್ತದೆ. ಇಲ್ಲವಾದರೆ ಕೀಳು(ಕೀಳು- ಭೂಮಿಯವರು, ಭೂಮಿ ಒಡೆಯ, ಭೂಮಿ ಆಳುವವರ ಎಂಬ ಅರ್ಥ ಹೋಗಿ) ಹೀನ ಜಾತಿ ಎನಿಸಿಕೊಳ್ಳುತ್ತದೆ.
ಈ ಚರ್ಚೆಯಿಂದ ನಾನು ಬಾಗಲಕೋಟೆಯ ಚಲವಾದಿಗಳು(ಛಲವಾದಿಗಳು, ಚಲುವಾದಿಗಳು) ಒಂದು ಕಾಲದಲ್ಲಿ ಈ ದೇಶವನ್ನು ಆಳಿದ ಚಾಲುಕ್ಯ ದೊರೆಗಳು ಎಂದು ಹೇಳಿಕೊಂಡರೆ ಅದನ್ನು ನಂಬುತ್ತೇನೆ ಹಾಗೂ ಅವರ ಹೇಳಿಕೆಯು ಸರಿ ಎಂದು ಒಪ್ಪುತ್ತೇನೆ.

-ಮಾಳವದೊರೆ ನಂಜುಂಡಸ್ವಾಮಿ, ಐಪಿಎಸ್, ಬೆಂಗಳೂರು
The post ಛಲವಾದಿ ಚಾಲುಕ್ಯರು -ಮಾಳವ ದೊರೆ ನಂಜುಂಡಸ್ವಾಮಿ, ಬೆಂಗಳೂರು appeared first on Karnataka Kahale.
]]>The post ಬೌದ್ಧಧರ್ಮದ ಪುನರುತ್ಥಾನಕ್ಕೆ ಮುನ್ನುಡಿ ಬರೆದ ಅಂಬೇಡ್ಕರ್ -ರಘೋತ್ತಮಹೊ.ಬ., ಮೈಸೂರು appeared first on Karnataka Kahale.
]]>
1881 ರಲ್ಲೆ ವಿಲಿಯಂ ಹಂಟರ್ ಎಂಬುವವರು ಭಾರತದಲ್ಲಿ ಬೌದ್ಧಧರ್ಮ ಪುನರುತ್ಥಾನವಾಗುವುದೆಂದು ಸೂಚಿಸಿದ್ದರು. ವಿಶ್ವಕವಿ ರವೀಂದ್ರನಾಥ ಠಾಗೋರ್ ಕೂಡ ತಮ್ಮ “ಬುದ್ಧದೇವೋ” ಎಂಬ ಪದ್ಯದಲ್ಲಿ ಬೌದ್ಧಧರ್ಮ ಪುನಾರುತ್ಥಾನವಾಗುವುದೆಂದು ನಿರೀಕ್ಷಿಸಿದ್ದರು. ಅದರೆ? ನಿಜಕ್ಕೂ ಅದರ ಪುನರುತ್ಥಾನಕ್ಕೆ ಶ್ರಮಿಸಿದ್ದು? ಭಾರತದಲ್ಲಿ ಮತ್ತೆ ಬುದ್ಧ ಮಂತ್ರ ಪಠಣದ ಕ್ರಿಯೆಗೆ ಮುನ್ನುಡಿ ಬರೆದದ್ದು? ನಿಸ್ಸಂಶಯವಾಗಿ ಅದು ಅಂಬೇಡ್ಕರ್. ಅಂಬೇಡ್ಕರ್ 1956 ಅಕ್ಟೋಬರ್ 14 ರಂದು ನಾಗಪುರದ ದೀಕ್ಷಾಭೂಮಿಯಲ್ಲಿ ತಮ್ಮ 10 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧಧರ್ಮ ಸ್ವೀಕರಿಸಿದ್ದು ಇಡೀ ವಿಶ್ವದ ಇತಿಹಾಸದಲ್ಲಿ ಚಿರನೆನಪಿನಲ್ಲಿ ಉಳಿದುಕೊಳ್ಳುವಂತಹ ಘಟನೆ. ಯಾಕೆಂದರೆ ಎಲ್ಲರೂ ಮತಾಂತರ ಮತಾಂತರ ಎನ್ನುತ್ತಾರೆ ಆದರೆ ಒಂದೇ ದಿನ ಅಷ್ಟೊಂದು ಬೃಹತ್ ಜನ ಒಂದೇ ವೇದಿಕೆಯಲ್ಲಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಂಡಿದ್ದು? ಹಿಂದೆ ಎಂದೂ ನಡೆದಿರಲಿಲ್ಲ! ಆದರೆ ಅಂಬೇಡ್ಕರ್ ಮೂಲಕ ಅದು ನಡೆಸಲ್ಪಟ್ಟಿತ್ತು. ಯಾವ ಬೌದ್ಧಧರ್ಮ ಭಾರತದಿಂದ ಕಣ್ಮರೆಯಾಗಿತ್ತೋ ಅದು ಅಂಬೇಡ್ಕರ್ ಮೂಲಕ ಭಾರತದಲ್ಲಿ ಮತ್ತೆ ಜೀವ ಪಡೆದಿತ್ತು. ಈ ನಿಟ್ಟಿನಲಿ ಭಾರತದಲ್ಲಿ ಬೌದ್ಧ ಧರ್ಮದ ಪುನರುತ್ಥಾನಕ್ಕೆ ಅಂಬೇಡ್ಕರ್ ಮುನ್ನುಡಿ ಬರೆದಿದ್ದರು.
ಹಾಗಿದ್ದರೆ ಬೌದ್ಧಧರ್ಮಕ್ಕೆ ಮತಾಂತರ ಹೊಂದುವ ಅಂಬೇಡ್ಕರರ ನಿರ್ಧಾರ ದಿಢೀರನೆ ತೆಗೆದುಕೊಂಡದ್ದೆ? ಅಥವಾ ಯಾವುದಾದರೂ ಆಮಿಷಕ್ಕೊಳಗಾಗಿ ಅವರು ಮತಾಂತರ ಹೊಂದಿದರೆ? ಖಂಡಿತ ಇಲ್ಲ. ಬೌದ್ಧಧರ್ಮ ಸ್ವೀಕಾರದ ಅವರ ನಿರ್ಧಾರ ಅವರ ಜೀವನದ ಅಂತಿಮಗಳಿಗೆಯದ್ದಲ್ಲ ಅಥವಾ ಯಾವುದೇ ಆಸೆ ಆಮಿಷದ್ದೂ ಅಲ್ಲ. ಯಾಕೆಂದರೆ ತಮ್ಮ ಜೀವಿತದ ಬಹಳ ಹಿಂದೆಯೇ ಅಂದರೆ 1936, ಮೇ13 ರ ಬುದ್ಧ ಜಯಂತಿಯಂದೆ ಮುಂಬೈನಲ್ಲಿ ತಮ್ಮ ಸುಪ್ರಸಿದ್ಧ “ಮುಕ್ತಿಯ ಮಾರ್ಗ ಯಾವುದು?” ಎಂಬ ಭಾಷಣದಲ್ಲಿ ಅವರು ತಮ್ಮ ಸ್ಪಷ್ಟ ಗುರಿ ಬೌದ್ಧಧರ್ಮ ಎಂಬುದನ್ನು ಬಹಳ ನಿಖರವಾಗಿಯೇ, ನಿಶ್ಚಿತವಾಗಿಯೇ ಹೇಳಿದ್ದರು.

ಯಾಕೆಂದರೆ ಅಂಬೇಡ್ಕರ್ ಹಿಂದೂಧರ್ಮ ಟೀಕಿಸುತ್ತಿದ್ದರು ಎಂದರೆ ಅದಕ್ಕೆ ಪರ್ಯಾಯವನ್ನು ಹುಡುಕಿಕೊಂಡಿದ್ದರೆಂದೇ ಅಲ್ಲವೆ? ಹೌದು, ಜೀವನದುದ್ದಕ್ಕೂ ಹಿಂದೂಧರ್ಮವನ್ನು, ಮತ್ತದರ ಜಾತಿ ವ್ಯವಸ್ಥೆಯನ್ನು ಟೀಕಿಸುತ್ತಿದ್ದ ಅವರು ಹಾಗೆ ಟೀಕಿಸುತ್ತಾ, ಟೀಕಿಸುತ್ತಾ ಬುದ್ಧನನ್ನು ತನ್ನೆಡೆಗೆ ಎಳೆದುಕೊಂಡಿದ್ದರು. ಅಂದಹಾಗೆ 1936 ರ ಸಮಯದಲ್ಲಿ ಅವರು ಬೌದ್ಧಧರ್ಮದಲ್ಲಿ ತನ್ನ ಭವಿಷ್ಯ ಎಂದಾಗ ಮೂಂಜೆ ಎಂಬ ಹಿಂದೂ ಮಹಾಸಭಾದ ಮುಖಂಡರು ಅಂಬೇಡ್ಕರರಿಗೆ ಸಲಹೆ ನೀಡಿದ್ದು “ಮುಸ್ಲಿಂ ಧರ್ಮವನ್ನು ಪರ್ಯಾಯವಾಗಿ ಎದುರಿಸಲು ದಲಿತರು ಸಿಖ್ ಧರ್ಮಕ್ಕೆ ಮತಾಂತರಗೊಳ್ಳಲಿ” ಎಂದು. ಆದರೆ ಅಂಬೇಡ್ಕರರು ಹಿಂದೂ ಧರ್ಮದ ನಾಯಕರುಗಳ ಆ ಸಲಹೆಗಳಿಗೆ ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ತಮ್ಮಷ್ಟಕ್ಕೆ ತಾವು ಬುದ್ಧನತ್ತ ಚಲಿಸತೊಡಗಿದ್ದರು. 1950ರಲ್ಲಿ “ಷೆಡ್ಯೂಲ್ಡ್ ಕ್ಯಾಸ್ಟ್ ಫಡರೇಷನ್” ಎಂಬ ತಮ್ಮ ನೇತೃತ್ವದ ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಅಂಬೇಡ್ಕರರು ಬುದ್ಧ ಜಯಂತಿಯನ್ನು ಆಚರಿಸುವಂತೆ ಕೂಡ ಕರೆನೀಡಿದ್ದರು. ಕೋಲ್ಕತ್ತಾದ ಮಹಾಬೋಧಿ ಸೊಸೈಟಿಯವರು ಹೊರತಂದಿದ್ದ ವಿಶೇಷ ಸಂಚಿಕೆಯೊಂದರಲ್ಲಿ ಅವರು 1950ರಲ್ಲೇ “ಭಗವಾನ್ ಬುದ್ಧ ಮತ್ತು ಆತನ ಧಮ್ಮದ ಭವಿಷ್ಯ”ಎಂಬ ಲೇಖನ ಬರೆದಿದ್ದರು. ಆ ಮೂಲಕ ಬೌದ್ಧದರ್ಮಕ್ಕೆ ‘ಉಜ್ವಲ ಭವಿಷ್ಯ’ವಿದೆ ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದ್ದರು . ಈ ನಡುವೆ 1954ರಲ್ಲಿ ಬರ್ಮಾದಲ್ಲಿ ನಡೆದ ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿಯೂ ಕೂಡ ಅಂಬೇಡ್ಕರ್ ರವರು ಭಾಗವಹಿಸಿದ್ದರು. ಒಟ್ಟಾರೆ ತಮ್ಮ ಅವಿರತ ಸಾಮಾಜಿಕ, ರಾಜಕೀಯ ಹೋರಾಟದ ನಡುವೆ ಅಂಬೇಡ್ಕರರು ನಿಧಾನವಾಗಿ ಚಲಿಸುತ್ತಿದ್ದದ್ದು ಬೌದ್ಧದರ್ಮದ ಕಡೆಗೆ . ಯಾಕೆಂದರೆ ಅವರಿಗೆ ತಿಳಿದಿತ್ತು , ಒಂದು ಸಮುದಾಯಕ್ಕೆ ಸಾಮಾಜಿಕ ರಾಜಕೀಯ ಜಾಗೃತಿ ಮೂಡಿಸಿ ಅದಕ್ಕೆ ಧಾರ್ಮಿಕ ದಿಕ್ಕನ್ನು ತೋರಿಸದಿದ್ದರೆ ಅದಕ್ಕೆ ಅರ್ಥವಿರುವುದಿಲ್ಲ ಎಂದು. ಈ ಕಾರಣಕ್ಕಾಗಿಯೇ ಅವರು ತಮ್ಮ ಹದಗೆಡುತ್ತಿದ್ದ ಆರೋಗ್ಯದ ಮಧ್ಯೆ ಸ್ವೀಕರಿಸಿದ್ದು ಬೌದ್ಧಧರ್ಮ ಮತ್ತು ಅಂಥ ಮುನ್ಸೂಚನೆ ಸಿಕ್ಕಿದ್ದರಿಂದಲೇ ಅಂದರೆ ತಮ್ಮ ಸಾವಿನ ಮುನ್ಸೂಚನೆ ಸಿಕ್ಕಿದ್ದರಿಂದಲೆ ಅವರು ತಾವು ಪುನರುತ್ಥಾನಗೊಳಿಸಿದ ಅಂತಹ ಧರ್ಮದ ನೆಲೆಗಟ್ಟಾಗಿ ಬುದ್ಧಧರ್ಮವನ್ನು ಕುರಿತು “ ಬುದ್ಧ ಅಂಡ್ ಹಿಸ್ ಧಮ್ಮ” ಎಂಬ ಕೃತಿ ಬರೆದದ್ದು. ಯಾಕೆಂದರೆ ಅದಾಗಲೆ ಮಹಾಬೋಧಿ ಸೊಸೈಟಿ ಮತ್ತು ಮತ್ತಿತರ ಬೌದ್ಧ ಸೊಸೈಟಿಗಳು ಭಾರತದಲ್ಲಿ ಇದ್ದವಾದರು ಅವ್ಯಾವುದಕ್ಕೂ ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನಕ್ಕೆ ಸ್ಪಷ್ಟ ರೂಪುರೇಷೆ ಅಥವಾ ಟಾರ್ಗೆಟ್ ಗ್ರೂಪ್ ಇರಲಿಲ್ಲ. ಆದರೆ ಬಾಬಾಸಾಹೇಬ್ ಅಂಬೇಡ್ಕರರಿಗೆ ಬೌದ್ಧಧರ್ಮವನ್ನು ಈ ರಾಷ್ಟ್ರದ ಜನಮಾನಸದ ಧರ್ಮವಾಗಿ ಬೆಳೆಸುವ ಆಲೋಚನೆ ಇತ್ತು. ಬರೀ ದಲಿತರಿಗೆ ಮಾತ್ರ ಆ ಧರ್ಮ ಎಂಬಂತೆಯಲ್ಲ. ಸಮಸ್ತ ಭಾರತೀಯರಿಗೂ ಆ ಧರ್ಮದ ಆಶಯಗಳನ್ನು ತಲುಪಿಸಬೇಕೆಂಬ ಆಶಯವಿತ್ತು ಅಂಬೇಡ್ಕರರಿಗೆ . ಹಾಗಂತ ಅಂಬೇಡ್ಕರರು ತಮ್ಮ ಆಪ್ತ ಅನುಯಾಯಿಗಳಲ್ಲಿ ಹೇಳಿಕೊಂಡಿದ್ದರು. ಅವರ ಈ ಆಶಯಗಳನ್ನು ಉಲ್ಲೇಖಿಸುತ್ತ ಅವರ ಸಹಪಾಠಿಯಾಗಿದ್ದ ಭಗವಾನ್‍ದಾಸ್‍ರವರು ತಮ್ಮ “ಇನ್ ಪಸ್ರ್ಯೂಟ್ ಆಫ್ ಅಂಬೇಡ್ಕರ್” ಕೃತಿಯಲ್ಲಿ ಹೀಗೆ ಹೇಳುತ್ತಾರೆ “ಅವರು( ಅಂಬೇಡ್ಕರ್) ಬೌದ್ಧಧರ್ಮ ಅಸ್ಪೃಶ್ಯರ ಏಕಾಧಿಪತ್ಯಕ್ಕೆ ಒಳಪಡುವುದರ ಪರ ಇರಲಿಲ್ಲ. ಬದಲಿಗೆ ಅದು ಇಡೀ ಪ್ರಪಂಚದಲ್ಲೇ ಮಾನವತೆ ಮತ್ತು ಸಹೋದರತೆಯನ್ನು ಪ್ರಚುರಪಡಿಸುವ ಸಾಧನವಾಗಬೇಕು” ಎಂದು ಆಶಿಸಿದ್ದರು ಎನ್ನುತ್ತಾರೆ ಭಗವಾನ್ ದಾಸ್ ರವರು. ಈ ನಿಟ್ಟಿನಲ್ಲಿ ಅಂಬೇಡ್ಕರರ ಇನ್ನಷ್ಟೂ ಆಶಯಗಳನ್ನು ಅವರು ಉಲ್ಲೇಖಿಸುತ್ತಾರೆ ಅವುಗಳೆಂದರೆ
1. ಪ್ರತಿಯೊಬ್ಬ ಬೌದ್ಧನು ತನ್ನ ಬಳಿ ಬೌದ್ಧಧರ್ಮದ ಧರ್ಮ ಗ್ರಂಥವೊಂದನ್ನು ಇಟ್ಟುಕೊಳ್ಳಬೇಕು ಮತ್ತು ಆ ಗ್ರಂಥ ಬುದ್ಧನ ಸಾಮಾಜಿಕ, ನೈತಿಕ ಮೌಲ್ಯಗಳನ್ನು ಬಿಂಬಿಸಬೇಕು.
2. ಹೇಗೆ ಕ್ರಿಶ್ಚಿಯನ್ನರು ಒಂದು ಅಧಿಕಾರಯುತ ಮತಾಂತರ ಪದ್ಧತಿಯನ್ನು ಇಟ್ಟುಕೊಂಡಿದ್ದಾರೋ ಅಂತಹದ್ದೆ ಮಾದರಿಯ ಮತಾಂತರ ಪದ್ಧತಿಯನ್ನು ಬೌದ್ಧರು ಕೂಡ ಹೊಂದಬೇಕು. ಅಂದಹಾಗೆ ಅಂತಹ ಮತಾಂತರದಲ್ಲಿ ಬರೀ ಬೌದ್ಧ ಪಂಚಶೀಲಗಳಷ್ಟೆ ಅಲ್ಲ ಬದಲಿಗೆ ಭಾರತದಲ್ಲಿ ಬೌದ್ಧಧರ್ಮ ಸ್ವೀಕರಿಸಿದ ವ್ಯಕ್ತಿಯೊಬ್ಬ “ಇನ್ನುಮುಂದೆ ನಾನು ಹಿಂದೂ ಅಲ್ಲ, ನಾನೊಬ್ಬ ಹೊಸ ಮನುಷ್ಯ” ಎಂಬ ಭಾವನೆ ಮೂಡಬೇಕು ಎನ್ನುತ್ತಾರೆ ಅಂಬೇಡ್ಕರ್‍ರವರು . ಈ ಕಾರಣಕ್ಕೆ ತಮ್ಮದೇ 22 ದೀಕ್ಷಾ ವಿಧಿಗಳನ್ನು ಸಹ ಅಂಬೇಡ್ಕರರು ಪ್ರತಿಷ್ಠಾಪಿಸುತ್ತಾರೆ. ಅವುಗಳಲ್ಲಿ ನಾನು ಹಿಂದೂ ದೇವರುಗಳನ್ನು ನಂಬುವುದಿಲ್ಲ, ಬ್ರಹ್ಮ, ವಿಷ್ಣು, ಶಿವ ಇವರುಗಳನ್ನು ನಂಬುವುದಿಲ್ಲ, ಬುದ್ಧ ವಿಷ್ಣುವಿನ ಅವತಾರ ಎಂದು ನಂಬುವುದಿಲ್ಲ ಎಂಬಿತ್ಯಾದಿ ಅಂಶಗಳಿವೆ.
3. ಬೌದ್ಧ ಧರ್ಮದ ಪ್ರಚಾರಕ್ಕಾಗಿ ಉಪಾಸಕರನ್ನು ನೇಮಿಸಿಕೊಳ್ಳಬೇಕು ಮತ್ತು ಅವರು ವಿವಾಹಿತರಾಗಿರಬೇಕು. ಅಲ್ಲದೆ ಧರ್ಮ ಪ್ರಚಾರ ಮಾಡುವ ಅವರಿಗೆ ಸೂಕ್ತ ವೇತನ ನೀಡಬೇಕು ಮತ್ತು ಅವರು ಬೌದ್ಧ ಧರ್ಮ ಪ್ರಚಾರ ಕಾರ್ಯವನ್ನು ಪಾರ್ಟ್ ಟೈಮ್ ವೃತ್ತಿಯಾಗಿ ಸ್ವೀಕರಿಸಬೇಕು.
4. ಬೌದ್ಧ ಧರ್ಮ ಪ್ರಚಾರಕ್ಕಾಗಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಬೇಕು. ಅಂತಹ ಕೇಂದ್ರಗಳಲ್ಲಿ ಉಪಾಸಕರಿಗೆ ತರಬೇತಿ ನೀಡುವ, ಬೇರೆ ಧರ್ಮಗಳ ಬಗ್ಗೆ ತಿಳಿದು ಕೊಳ್ಳುವ ವ್ಯವಸ್ಥೆಯಾಗಬೇಕು.
5. ಪ್ರತಿ ಭಾನುವಾರ ಜನರು ಬೌದ್ಧ ವಿಹಾರವೊಂದರಲ್ಲಿ ಸೇರಬೇಕು ಮತ್ತು ಅಲ್ಲಿ ಅವರು ಬುದ್ಧನ್ನು ಪೂಜಿಸಬೇಕು ಹಾಗೆಯೇ ಅಲ್ಲಿ ಬುದ್ಧನ ಕುರಿತು ಉಪನ್ಯಾಸವಿರಬೇಕು.
ಹೀಗೆ ಅಂಬೇಡ್ಕರರ ಆಶಯಗಳನ್ನು ಹೇಳುತ್ತಾ ಹೋಗುತ್ತಾರೆ ಭಗವಾನ್ ದಾಸ್ ರವರು. ಒಂದಂತು ನಿಜ, ಬೌದ್ಧ ಧರ್ಮದ ಪ್ರಚಾರಕ್ಕಾಗಿ ಅಂಬೇಡ್ಕರರು ತುಂಬಾ ಸೀರಿಯಸ್ ಆಗಿದ್ದರು. ಧರ್ಮ ಸ್ವೀಕಾರ ಮತ್ತು ಪ್ರಚಾರವನ್ನು ಅವರು ಹಗುರವಾಗಿ ತೆಗೆದುಕೊಂಡಿರಲಿಲ್ಲ. ಏನಾದರೂ ಅವರು ಇನ್ನೊಂದಿಷ್ಟು ವರುಷ ಬದುಕಿದ್ದೇ ಆದರೆ ಇಡೀ ಭಾರತವನ್ನು ಬೌದ್ಧ ಭಾರತ ಮಾಡಿ ಬಿಡುತ್ತಿದ್ದರು. ಆದರೆ ಜೀವನದ ಅಂತ್ಯ ಅವರಿಗೆ ಅಂತಹ ಅವಕಾಶ ಕೊಡಲಿಲ್ಲ. ಅದೇನೆ ಇರಲಿ, ಬಾಬಾಸಾಹೇಬ್ ಅಂಬೇಡ್ಕರ್ ಭಾರತದಲ್ಲಿ ಬೌದ್ಧ ಧರ್ಮದ ಪುನರುತ್ಥಾರಕರೆಂಬುದು ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿ ಹೋಗಿದೆ. ಈ ನಿಟ್ಟಿನಲಿ ಅವರ ಆ ಧರ್ಮ ಪುನರುತ್ಥಾನದ ಧಾರ್ಮಿಕ ಪ್ರಕ್ರಿಯೆಯ ನಿರಂತರತೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಷ್ಟೆ.

-ರಘೋತ್ತಮ ಹೊ.ಬ., ಮೈಸೂರು
—–
The post ಬೌದ್ಧಧರ್ಮದ ಪುನರುತ್ಥಾನಕ್ಕೆ ಮುನ್ನುಡಿ ಬರೆದ ಅಂಬೇಡ್ಕರ್ -ರಘೋತ್ತಮಹೊ.ಬ., ಮೈಸೂರು appeared first on Karnataka Kahale.
]]>The post ಭಾರತದ ಸಂವಿಧಾನ ಸೃಷ್ಟಿಯ ಕತೆ -ರಘೋತ್ತಮ ಹೊ.ಬ, ಮೈಸೂರು appeared first on Karnataka Kahale.
]]>
Constituent Assembly ಅಥವಾ ಸಂವಿಧಾನ ಸಭೆಯ ಉಗಮದ ಇತಿಹಾಸವನ್ನು ಸಂಕ್ಷಿಪ್ತವಾಗಿ ದಾಖಲಿಸುವುದಾದರೆ 1945 ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿತು. ಹಾಗೆ ಇದಕ್ಕೆ ಪರಿಹಾರ ಸೂಚಿಸಲು ಬ್ರಿಟಿಷರು ಮೂವರು ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ಭಾರತಕ್ಕೆ ಕಳುಹಿಸಿದರು. ಆ ಸಮಿತಿಯ ಹೆಸರು ‘ಕ್ಯಾಬಿನೆಟ್ ಮಿಷನ್ ಆಯೋಗ’. ಸದರಿ ಆಯೋಗವು 1946 ಮಾರ್ಚ್ 16 ರಂದು ‘ಭವಿಷ್ಯದ ಭಾರತದ ಸರ್ಕಾರಕ್ಕಾಗಿ ಒಂದು ಸಂವಿಧಾನ ರಚಿಸಲು ಸಂವಿಧಾನ ಸಭೆಯೊಂದನ್ನು ರಚಿಸುವ ಅಗತ್ಯವಿದೆ’ ಎಂದು ಘೋಷಿಸಿತು. ಅಂತೆಯೇ ಆ ಸಭೆ ಪ್ರಜಾಸತ್ತಾತ್ಮಕವಾಗಿರಬೇಕೆಂಬ ನಿಟ್ಟಿನಲ್ಲಿ ವಿವಿಧ ಪ್ರಾಂತ್ಯಗಳ ಅಸೆಂಬ್ಲಿಗಳ ಮೂಲಕ ಸದಸ್ಯರನ್ನು ಆರಿಸಲಾಯಿತು. ಆ ಸಭೆಗೆ ಭಾರತದ ಪಶ್ಚಿಮದ ತುದಿ ಬಾಂಬೆ ಪ್ರಾಂತ್ಯದಿಂದ ಸ್ಪರ್ಧಿಸಿದ್ದ ಅಂಬೇಡ್ಕರರು ಅಂದಿನ ರಾಜಕೀಯ ಪಕ್ಷಗಳ ಅವಿಚ್ಛಿನ್ನ ವಿರೋಧದಿಂದ ಸೋಲಬೇಕಾಯಿತು. ಆದರೂ, ಎದೆಗುಂದದೆ ಪೂರ್ವದ ದೂರದ ಬಂಗಾಳದಿಂದ ಅಲ್ಲಿಯ ಪರಿಶಿಷ್ಟ ಜಾತಿಯ ನಾಯಕ ಜೋಗೇಂದ್ರನಾಥ ಮಂಡಲ್‍ರ ಬೆಂಬಲದ ಮೂಲಕ ಅವರು ಸಂವಿಧಾನ ಸಭೆಗೆ ಆರಿಸಿ ಬರುವಲ್ಲಿ ಸಫಲರಾರದು. ಒಟ್ಟಾರೆ 296 ಸದಸ್ಯ ಬಲದ ಮೂಲಕ ಸಂವಿಧಾನ ಸಭೆ ತನ್ನ ಪ್ರಥಮ ಸಭೆಯನ್ನು 1946 ಡಿಸೆಂಬರ್ 6ರ ಬೆಳಿಗ್ಗೆ 11ಗಂಟೆಗೆ ನವದೆಹಲಿಯ ಕಾನ್‍ಸ್ಟಿಟ್ಯೂಶನ್ ಹಾಲ್‍ನಲ್ಲಿ ಆರಂಭಿಸಿತು.
ಸಭೆ ಆರಂಭವಾದಾಗ ಒಟ್ಟು 296 ಸದಸ್ಯರಲ್ಲಿ ಭಾಗವಹಿಸಿದ್ದು 207 ಮಂದಿಯಷ್ಟೆ. ಇನ್ನುಳಿದ ಮಂದಿ ಅಂದಿನ ಮುಸ್ಲಿಂಲೀಗ್‍ಗೆ ಸೇರಿದವರಾಗಿದ್ದು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ಅವರೆಲ್ಲ ಗೈರುಹಾಜರಾಗಿದ್ದರು. ಹೀಗಿದ್ದರೂ ಪಂಡಿತ್ ಜವಹರಲಾಲ್ ನೆಹರೂ “ಭಾರತ ಸಾರ್ವಭೌಮ ಸ್ವತಂತ್ರ ಗಣರಾಜ್ಯವಾಗಲು ತನ್ನ ಭವಿಷ್ಯದ ಸರ್ಕಾರಕ್ಕಾಗಿ ಅದು ತನ್ನದೇ ಆದಂತಹ ಸಂವಿಧಾನವೊಂದನ್ನು ಹೊಂದುವುದನ್ನು ಬಯಸುತ್ತದೆ” ಎಂದು ಗೊತ್ತುವಳಿಯೊಂದನ್ನು ಮಂಡಿಸಿದರು. ಆದರೆ ಸದಸ್ಯರಾದ ಎಂ.ಆರ್.ಜಯಕರ್ “ಸಭೆಗೆ ಮುಸ್ಲಿಂ ಲೀಗ್ ಮತ್ತು ಇತರೆ ರಾಜ ಸಂಸ್ಥಾನಗಳ ಸದಸ್ಯರು ಗೈರುಹಾಜರಾಗಿರುವುದರಿಂದ ಅವರೆಲ್ಲ ಭಾಗವಹಿಸುವಂತಾಗಲು ಈ ಸಭೆಯನ್ನು ಮುಂದೂಡಬೇಕು” ಎಂದು ತಮ್ಮ ಆಕ್ಷೇಪವ್ಯಕ್ತಪಡಿಸಿದರು ಮತ್ತು ನೆಹರೂರವರು ಮಂಡಿಸಿದ್ದ ಆ ಗೊತ್ತುವಳಿಯ ಚರ್ಚೆಯನ್ನು ಮುಂದೂಡಲು ಸಭೆಯ ಕಲಾಪಕ್ಕೆ ತಿದ್ದುಪಡಿಯೊಂದನ್ನು ಮಂಡಿಸಿದರು. ಗೌರವಾನ್ವಿತ ಸದಸ್ಯರ ಇಂತಹ ಆಕ್ಷೇಪ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿತು. ಆಶ್ಚರ್ಯವೆಂದರೆ ಈ ಸಮಯದಲ್ಲಿ ಇಂತಹ ಅನಿರೀಕ್ಷಿತ ಕೋಲಾಹಲದ ನಡುವೆ ಮುಂದುವರಿದ ಸಭೆಯಲ್ಲಿ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದ್‍ರವರು ಡಿಸೆಂಬರ್ 17 ರಂದು ಡಾ.ಅಂಬೇಡ್ಕರರನ್ನು ಸಭೆಯನ್ನುದೇಶಿಸಿ ಮಾತನಾಡಲು ಆಹ್ವಾನಿಸಿದರು. ಸತ್ಯ ಹೇಳಬೇಕೆಂದರೆ ಯಾವ ಸಂವಿಧಾನ ಸಭೆ ನಿಂತುಹೋಗಬೇಕಿತ್ತೋ, ಅನಿರ್ದಿಷ್ಟ ಅವಧಿಗೆ ಮುಂದೂಡಬೇಕಾಗಿತ್ತೋ ಅದು ಮುಂದುವರಿಯಿತು! ಹೋಲಿಕೆ ಮಾಡುವುದಾದರೆ ಭಾರತದ ಸಂವಿಧಾನದ ಚಕ್ರ ಅಂಬೇಡ್ಕರರ ಮೂಲಕ ಉರುಳಲಾರಂಭಿಸಿತು! ಯಾಕೆಂದರೆ ತಮ್ಮ ಭಾಷಣದಲ್ಲಿ ಅಂಬೇಡ್ಕರರು ನೆಹರೂರವರು ಮಂಡಿಸಿದ್ದ ಗೊತ್ತುವಳಿಯ 8 ಅಂಶಗಳನ್ನು ಪದ ಪದವಾಗಿ, ಪದರು ಪದರಾಗಿ ಬಿಡಿಸಿ ಸಂವಿಧಾನ ಎತ್ತ ಸಾಗಬೇಕು, ಹೇಗಿರಬೇಕು ಎಂದು ವಿವಿಧ ರಾಷ್ಟ್ರಗಳ ಸಂವಿಧಾನಗಳನ್ನು ಉಲ್ಲೇಖಿಸುತ್ತಾ ಮಾರ್ಗ ತೋರಿಸಲಾಂಭಿಸಿ ಸಭೆಯನ್ನು ಗಂಭೀರತೆಯೆಡೆಗೆ ತಂದರು. ಮುಸ್ಲಿಂಲೀಗ್ ಸದಸ್ಯರು ಗೈರಾಗಿದ್ದಕ್ಕೆ ಮುಂದಿನ ಸಭೆಯಲ್ಲಿ ಅವರು ಭಾಗವಹಿಸುತ್ತಾರೆ ಎಂಬ ಏಕತೆಯ ಆಶಾಭಾವ ವ್ಯಕ್ತಪಡಿಸುತ್ತಾ ಅಂಬೇಡ್ಕರರು “ವಿವಿಧ ಜಾತಿ-ಜನಾಂಗಗಳಾಗಿದ್ದಾಗ್ಯೂ ನಾವೆಲ್ಲಾ ಸದಾ ಒಂದಾಗಿರುವುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ” ಎಂದರು.
ಹೀಗೆ ತನ್ನ ಆರಂಭಿಕ ದಿನಗಳನ್ನು ಪ್ರಾರಂಭಿಸಿದ ಸಂವಿಧಾನಸಭೆ ಸರ್ದಾರ್ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ 1947 ಜನವರಿ 24 ರಂದು ಅಂಬೇಡ್ಕರರನ್ನು ಒಳಗೊಂಡಂತೆ 50 ಜನ ಸದಸ್ಯರ ಸಲಹಾ ಸಮಿತಿಯೊಂದನ್ನು ನೇಮಿಸಿತು. ಆ ಸಮಿತಿ ಇತರೆ 4 ಪ್ರಮುಖ ಉಪಸಮಿತಿಗಳನ್ನು ನಿಯುಕ್ತಿಗೊಳಿಸಿತು. ಅವುಗಳಲ್ಲಿ ಬಹುಮುಖ್ಯದ್ದೆಂದರೆ ಮೂಲಭೂತ ಹಕ್ಕುಗಳ ಉಪಸಮಿತಿ ಮತ್ತು ಅಲ್ಪಸಂಖ್ಯಾತರ ಉಪಸಮಿತಿ. ಅಂಬೇಡ್ಕರರು ಈ ಎರಡೂ ಪ್ರಮುಖ ಸಮಿತಿಗಳ ಸದಸ್ಯರಾದರು. ಮುಂದುವರಿದು ಸಭೆ ಇನ್ನೂ 3 ಕಾರ್ಯಾಚರಣಾ ಸಮಿತಿಗಳನ್ನು ರಚಿಸಿತು. ಅವುಗಳೆಂದರೆ 1.ಕೇಂದ್ರ ಅಧಿಕಾರ ಸಮಿತಿ 2.ಕೇಂದ್ರ ಸಂವಿಧಾನ ಸಮಿತಿ 3.ಪ್ರಾಂತ್ಯಗಳ ಸಂವಿಧಾನ ಸಮಿತಿ. ಇಲ್ಲಿಯೂ ಅಷ್ಟೆ ಅಂಬೇಡ್ಕರ್ ಕೇಂದ್ರ ಸಂವಿಧಾನ ಸಮಿತಿಯ ಸದಸ್ಯರಾದರು. ಹೀಗೆ ಅವರು ಪ್ರಮುಖ ಸಮಿತಿಗಳ ಸದಸ್ಯರಾಗುವುದಕ್ಕೆ ಕಾರಣವೂ ಇತ್ತು. ಯಾಕೆಂದರೆ ಮುಂದೆ ಸಂವಿಧಾನ ಅರ್ಪಿಸುವ ಸಮಯದಲ್ಲಿ ಅವರೇ ಹೇಳಿಕೊಂಡಿರುವಂತೆ “ಪರಿಶಿಷ್ಟ ಜಾತಿಗಳ ಹಿತ ಕಾಯುವ ಮಹದಾಸೆ ಹೊತ್ತಷ್ಟೆ ತಾನು ಸಂವಿಧಾನ ಸಭೆಗೆ ಬಂದೆ…”. ಹೌದು, ಡಾ.ಅಂಬೇಡ್ಕರರು ಪರಿಶಿಷ್ಟರ ಹಿತ ಕಾಯುವ ನೆಪ ಮಾತ್ರಕ್ಕೆ ಬಂದರೂ ತಮಗರಿವಿಲ್ಲದಂತೆ ಅವರು ಇಡೀ ದೇಶದ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು! ಯಾವ ಪರಿ ಎಂದರೆ ಇಡೀ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಸಕ್ರಿಯರಾಗುವ ಮಟ್ಟಿಗೆ. ಅದೂ ಅದೆಂತಹ ಸಕ್ರಿಯತೆಯೆಂದರೆ ಶತೃಗಳೂ ಮೆಚ್ಚಿ ಅಹುದಹುದು ಎನ್ನುವ ಮಟ್ಟಿಗೆ! ಏಕೆಂದರೆ ಸಂವಿಧಾನ ರಚನೆಯ ಇಂತಹ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡು ಸ್ವಾತಂತ್ರ್ಯದ ಸಮಯದಲ್ಲಿ ದೇಶ ವಿಭಜನೆಯ ಸಂದರ್ಭ ಬಂದಾಗ ಅಂಬೇಡ್ಕರರು ಗೆದ್ದಿದ್ದ ಬಂಗಾಳದ ಕ್ಷೇತ್ರ ಕಾಂಗ್ರೆಸ್ಸಿಗರ ತಂತ್ರದಿಂದಾಗಿ ಪೂರ್ವ ಪಾಕಿಸ್ತಾನಕ್ಕೆ ಸೇರಲ್ಪಟ್ಟು ಅವರ ಸದಸ್ಯತ್ವ ರದ್ದಾಯಿತು. ಸೋಜಿಗವೆಂದರೆ ಈ ಸಮಯದಲ್ಲಿ ಅಂಬೇಡ್ಕರರ ಸಂವಿಧಾನ ರಚನಾ ಚಾಕಚಕ್ಯತೆ ಕೆಲಸ ಮಾಡಿತು. ಹೇಗೆಂದರೆ ಸ್ವತಃ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದರು 1947 ಜೂನ್ 30 ರಂದು ಬಾಂಬೆ ಪ್ರಾಂತ್ಯದ ಅಂದಿನ ಪ್ರಧಾನಿ ಡಾ.ಬಿ.ಜಿ.ಖೇರ್ ರವರಿಗೆ ಪತ್ರ ಬರೆದು “ಬೇರೆ ವಿಷಯಗಳೇನೆ ಇರಲಿ, ಸಂವಿಧಾನ ಸಭೆ ಮತ್ತದರ ವಿವಿಧ ಉಪಸಮಿತಿಗಳಲ್ಲಿ ಅಂಬೇಡ್ಕರರ ಕಾರ್ಯ ಎಂತಹ ಮಟ್ಟದ್ದೆಂದರೆ, ಖಂಡಿತ ಅವರ ಸೇವೆಯನ್ನು ನಾವು ಕಳೆದುಕೊಳ್ಳಬಾರದು. ಅದಕ್ಕಾಗಿ ಜುಲೈ 14ರ ಮುಂದಿನ ಸಭೆಯೊಳಗೆ he should be relected”ಎಂದರು! (Dr.Ambedkar: The Principal Architect of The Constitution of India, Published by Government of India. Pp.26)
ಹೌದು, ಬಾಬಾಸಾಹೇಬರು ತಕ್ಷಣ ಮರು ಆಯ್ಕೆಯಾದರು. ಹಾಗೇ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಕೂಡ ಸಿಕ್ಕಿತು ಮತ್ತು ಅವರು ಸ್ವತಂತ್ರ ಭಾರತದಲ್ಲಿ ನೆಹರೂ ಸಂಪುಟದಲ್ಲಿ ಕಾನೂನು ಸಚಿವರಾಗಿ ಕೂಡ ನೇಮಕಗೊಂಡರು. ಅಂದಹಾಗೆ ಆಗಸ್ಟ್ 29ರಂದು ಮರುಸಮಾವೇಶಗೊಂಡ ಸಂವಿಧಾನಸಭೆ ಸಹಜವಾಗಿ ಕಾನೂನು ಸಚಿವರಾದ ಡಾ.ಅಂಬೇಡ್ಕರರನ್ನು “ಸಂವಿಧಾನ ಪ್ರತಿ ರಚಿಸುವ ಸಮಿತಿ (drafting committee)”ಯ ಅಧ್ಯಕ್ಷರನ್ನಾಗಿ ಆರಿಸಿತು. ಜೊತೆಗೆ ಆರು ಮಂದಿ ಸದಸ್ಯರ ತಂಡ. ಒಟ್ಟಾರೆ ಸಂವಿಧಾನ ಸಭೆಯ ಇಂತಹ ನಡಾವಳಿಗಳ ಮೂಲಕ ಭಾರತದ ಭವಿಷ್ಯ ಬರೆವ ಕೆಲಸ ಬಾಬಾಸಾಹೇಬರ ಮುಡಿಗೇರಿತು.
ಸಂವಿಧಾನ ರಚನೆಯ ಜವಾಬ್ದಾರಿಯೇನೋ ಅಂಬೇಡ್ಕರರ ಮುಡಿಗೇರಿತು. ಆದರೆ ಆ ಜವಾಬ್ದಾರಿಯನ್ನು ಅವರು ನಿರ್ವಹಿಸಿದ ಪರಿ? ಖಂಡಿತ, ಅಂಬೇಡ್ಕರರು ಮತ್ತವರ ಸಂವಿಧಾನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಅವರು ಮತ್ತು ಇತರರು ಸಂವಿಧಾನ ಸಭೆಗಳಲ್ಲಿ ಮಾಡಿದ ಭಾಷಣಗಳಲ್ಲಿ ನಮಗೆ ಉಲ್ಲೇಖ ಸಿಗುತ್ತದೆ. 1949 ನವೆಂಬರ್ 25 ರಂದು ಡಾ.ಅಂಬೇಡ್ಕರರು ಸಂವಿಧಾನ ಸಮರ್ಪಿಸುತ್ತಾ ಮಾಡಿದ ಅಂತಿಮ ಭಾಷಣವನ್ನು ಉಲ್ಲೇಖಿಸುವುದಾದರೆ “ಮಾನ್ಯರೆ, ಸಂವಿಧಾನ ಸಭೆಯ ಕಾರ್ಯಕಲಾಪದ ಬಗ್ಗೆ ಹಿನ್ನೋಟ ನೋಡುವುದಾದರೆ 1946 ಡಿಸೆಂಬರ್ 9ರಿಂದ ಇಲ್ಲಿಯವರೆಗೆ ಸಂವಿಧಾನ ಸಭೆ ಸಮಾವೇಶಗೊಂಡು 2 ವರ್ಷ, 11 ತಿಂಗಳು, 17ದಿನಗಳು ಕಳೆಯುತ್ತಿವೆ. ಇದುವರೆಗೆ ಸಭೆ 11 ಸಮಾವೇಶಗಳನ್ನು ನಡೆಸಿದೆ. ಈ 11 ಸಮಾವೇಶಗಳು 165 ದಿನಗಳನ್ನು ಬಳಸಿಕೊಂಡಿದೆ. ಈ 165 ದಿನಗಳಲ್ಲಿ 114 ದಿನಗಳನ್ನು ಸಭೆ ಕರಡು ಸಂವಿಧಾನವನ್ನು ಪರಿಗಣಿಸಲು ತೆಗೆದುಕೊಂಡಿದೆ. ಇನ್ನು ಕರಡು ಸಮಿತಿ ಅಥವಾ ಸಂವಿಧಾನ ರಚನಾ ಸಮಿತಿಯ ಬಗ್ಗೆ ಹೇಳುವುದಾದರೆ 1947 ಆಗಸ್ಟ್ 29 ರಂದು ಅದನ್ನು ಆಯ್ಕೆಮಾಡಲಾಯಿತು ಮತ್ತು ಅದು ತನ್ನ ಪ್ರಥಮ ಸಭೆಯನ್ನು 30ನೇ ಆಗಸ್ಟ್ ರಂದು ನಡೆಸಿತು. ಆಗಸ್ಟ್ 30 (1947) ರಿಂದ ಇಲ್ಲಿಯವರೆಗೆ ಸಮಿತಿ 141 ದಿನಗಳು ಸಭೆ ನಡೆಸಿ ಒಟ್ಟು ಈ ಅವಧಿಯನ್ನು ಕರಡು ಸಂವಿಧಾನವನ್ನು ತಯಾರಿಸಲು ಬಳಸಿಕೊಂಡಿದೆ” ಹೀಗೆ ವಿವರಿಸುತ್ತಾ ಹೋಗುತ್ತಾರೆ.
ಅಂದಹಾಗೆ ಬಾಬಾಸಾಹೇಬರ ನೇತೃತ್ವದ ಸಮಿತಿ ಸಿದ್ಧಪಡಿಸಿದ ಈ ಸಂವಿಧಾನ 1948 ಫೆಬ್ರವರಿ 26ರಂದು ಭಾರತ ಸರ್ಕಾರದ ಗೆಜೆಟ್‍ನಲ್ಲಿ ಪ್ರಕಟಗೊಂಡಿತು ಮತ್ತು ಹಾಗೆ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನದ ಆ ಪ್ರತಿ ತನ್ನ ಆರಂಭದ ಪುಟದಲ್ಲಿ ರಚನಾ ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರು ಸಭೆಯ ಅಧ್ಯಕ್ಷರಿಗೆ ಬರೆದ ಪತ್ರವೊಂದನ್ನೂ ಕೂಡ ಒಳಗೊಂಡಿತ್ತು. ಆ ಪತ್ರದ ಪ್ರಾರಂಭದ ಒಕ್ಕಣೆಯನ್ನು ಉಲ್ಲೇಖಿಸುವುದಾದರೆ “Dear Sir, On behalf of the Drafting Committee… I submit herewith the Draft of the new Constitution of India… I have been authorized to sign the Draft… Yours truly, B.R.AMBEDKAR”.
ಖಂಡಿತ, ಹೀಗೆ ಪ್ರತಿ ಅಕ್ಷರವನ್ನೂ ಉಲ್ಲೇಖಿಸುವ ಅಗತ್ಯವಿಲ್ಲ. ಆದರೂ ಕೆಲವು ಕೋಮುವಾದಿ ಕಿತಾಪತಿಗಳಿಸ್ಕೋರ ಇದನ್ನು ಉಲ್ಲೆಖಿಸಬೇಕಿದೆ. ಅಲ್ಲದೆ ಮತ್ತೊಂದು ಅಂಶವನ್ನು ಇಲ್ಲಿ ದಾಖಲಿಸಬೇಕಿದೆ. ಅದೆಂದರೆ ಫೆಬ್ರವರಿ 26, 1948 ರಂದು ಗೆಜೆಟ್‍ನಲ್ಲಿ ಪ್ರಕಟಗೊಂಡ ಭಾರತ ಸಂವಿಧಾನದ ಕರಡು ಪ್ರತಿ ಅಂಬೇಡ್ಕರರು ವಯಕ್ತಿಕವಾಗಿ ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಸಮಿತಿಗೆ ತಮ್ಮ ಪಕ್ಷ ‘ಪರಿಶಿಷ್ಟ ಜಾತಿಗಳ ಒಕ್ಕೂಟ’ದ ಪರವಾಗಿ ಮಾರ್ಚ್ 15, 1947 ರಂದು ಸಲ್ಲಿಸಿದ ಮನವಿಯ ಡಿಟೋ ಕಾಪಿಯಂತೇ ಇದೆ ಎಂಬುದು! ಈ ನಿಟ್ಟಿನಲ್ಲಿ ಆಸಕ್ತರು ಅಂಬೇಡ್ಕರರ ಆ ಮನವಿಯನ್ನು ಅವರ ಬರಹಗಳು ಭಾಷಣಗಳ ಸಂಪುಟ 1ರಲ್ಲಿ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿರುವುದನ್ನು ನಾವು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಹೇಳಬಹುದು “ಭಾರತದ ಸಂವಿಧಾನ ಅಂಬೇಡ್ಕರರ ಮೆದುಳಿನ ಕೂಸು” ಎಂದು.
ಪ್ರಶ್ನೆಯೇನೆಂದರೆ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನ ಫೆಬ್ರವರಿ 26, 1948 ರಂದೇ ಜಾರಿಯಾಯಿತೇ? ಖಂಡಿತ ಇಲ್ಲ. ಯಾಕೆಂದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಈ ದಿಸೆಯಲ್ಲಿ ಪ್ರಜೆಗಳ ಪ್ರತಿನಿಧಿಗಳ ನಡುವೆ ಅದು ಅಂದರೆ ಸಂವಿಧಾನ ಚರ್ಚೆಗೆ ಬರುವುದು ಬೇಡವೆ? ಹೌದು, 15 ನವೆಂಬರ್ 1948ರಲ್ಲಿ ಅನುಚ್ಛೇದ 1ರಿಂದ ಪ್ರಾರಂಭಿಸಿ 17 ಅಕ್ಟೋಬರ್ 1949ರವರೆಗೆ ಕೊನೆಯ ಅನುಚ್ಛೇದ ಅಂದರೆ ಅನುಚ್ಛೇದ 395ರವರೆಗೆ ಸಂವಿಧಾನ ಸಭೆ ಇಡೀ ಕರಡು ಸಂವಿಧಾನದ ಬಗ್ಗೆ ಭರಪೂರ ಚರ್ಚೆ ನಡೆಸಿತು. ಆಶ್ಚರ್ಯ ಬೇಡ, ಈ ಇಷ್ಟೂ ದಿನಗಳಲ್ಲಿ ಪ್ರತಿಯೊಂದೂ ಅನುಚ್ಛೇದದ ಚರ್ಚೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಅಂಬೇಡ್ಕರರು ಗೌರವಾನ್ವಿತ ಸದಸ್ಯರ ಪ್ರತಿಯೊಂದು ಸಲಹೆಗೂ ಕಿವಿಯಾದರು ಮತ್ತು ಸಂಬಂಧಪಟ್ಟ ಅನುಚ್ಛೇದದ ಪದಪದದ ವಿವರಣೆ ನೀಡಿ ಸದಸ್ಯರ ಸಲಹೆಗಳನ್ನು ಗೌರವಯುತವಾಗಿ ಸ್ವೀಕರಿಸಿ ಅಗತ್ಯ ತಿದ್ದುಪಡಿಗಳನ್ನು ಅಂಗೀಕರಿಸಿದರು. ಈ ಸಂಬಂಧ ಅಂಬೇಡ್ಕರರು ನೀಡಿರುವ ಮಾಹಿತಿಯನ್ನೇ ದಾಖಲಿಸುವುದಾದರೆ “ಕರಡು ಸಂವಿಧಾನಕ್ಕೆ ಸೂಚಿಸಲಾದ ಒಟ್ಟು ತಿದ್ದುಪಡಿಗಳು 7635. ಅವುಗಳಲ್ಲಿ ಅಂಗೀಕಾರಗೊಂಡಂತಹವು 2473”. ಒಟ್ಟಾರೆ ಇಂತೆಲ್ಲ ತಿದ್ದುಪಡಿಗಳ ನಂತರ 1949 ನವೆಂಬರ್ 17ರಂದು ಅಂತಿಮವಾಗಿ ಸಮಾವೇಶಗೊಂಡ ಸಂವಿಧಾನ ಸಭೆಯಲ್ಲಿ ಡಾ.ಅಂಬೇಡ್ಕರರು “ಅಧ್ಯಕ್ಷ ಮಹೋದಯರೇ, ಈ ಸಭೆ ಸ್ಥಿರೀಕರಿಸಿರುವ ಈ ಸಂವಿಧಾನವನ್ನು ಅಂಗೀಕರಿಸಬೇಕೆಂಬ ನಿರ್ಣಯವನ್ನು ನಾನು ಮಂಡಿಸುತ್ತೇನೆ” ಎನ್ನುತ್ತಿದ್ದಂತೆ ಇಡೀ ಸಭೆ ಹರ್ಷದ ಹೊನಲು ಹರಿಸಿ ಕರತಾಡನದೊಂದಿಗೆ ತನ್ನ ಒಪ್ಪಿಗೆ ಸೂಚಿಸಿತು. ಹಾಗೆಯೇ ಅಂಬೇಡ್ಕರರಿಗೆ ಅಭಿನಂದನೆಯ ಸುರಿಮಳೆಗಳು.
ಅವುಗಳಲ್ಲಿ ಒಂದಷ್ಟನ್ನು ದಾಖಲಿಸುವುದಾದರೆ ಮದ್ರಾಸಿನ ಮುನಿಸ್ವಾಮಿ ಪಿಳ್ಳೈ ಎಂಬುವವರು “ಪರಿಶಿಷ್ಟ ಜಾತಿಯು ನಂದನಾರ್, ತಿರುಪಳನಾಳ್ವರ್, ತಿರುವಳ್ಳುವರ್ ಹೀಗೆ ಶ್ರೇಷ್ಠ ಸಂತರನ್ನು, ಜ್ಞಾನಿಗಳನ್ನು ನೀಡಿದೆ. ನಿಸ್ಸಂಶಯವಾಗಿ ಡಾ.ಅಂಬೇಡ್ಕರರು ಅಂತಹವರ ಸಾಲಿಗೆ ಸೇರ್ಪಡೆಯಾಗುತ್ತಾರೆ. ಯಾಕೆಂದರೆ ಅವಕಾಶ ಸಿಕ್ಕರೆ ಪರಿಶಿಷ್ಟರು ಎಷ್ಟು ಎತ್ತರಕ್ಕೆ ಏರಬಲ್ಲರು ಎಂಬುದನ್ನು ಅಂಬೇಡ್ಕರರು (ತಮ್ಮ ಈ ಸಾಧನೆಯ ಮೂಲಕ) ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ”. ಇನ್ನು ಸೇಠ್ ಗೋವಿಂದದಾಸ್ ಎನ್ನುವವರು “ಡಾ.ಅಂಬೇಡ್ಕರರನ್ನು ‘ವರ್ತಮಾನ ಕಾಲದ ಮನು’ ಎನ್ನಬಹುದು” ಎನ್ನುತ್ತಾರೆ! ಎಂ.ಅನಂತಶಯನಂ ಅಯ್ಯಂಗಾರ್ ಎನ್ನುವವರಂತೂ “ಯಾವ ವ್ಯಕ್ತಿ ನಮ್ಮನ್ನು ಟೀಕಿಸುವ ಮತ್ತು ಅನುಮಾನದಿಂದ ನೋಡುವ ಉದ್ದೇಶದಿಂದ ಸಭೆಗೆ ಬಂದರೋ, ಕಡೆಗೆ ಅವರೇ ಸಂವಿಧಾನದ ಹೊಣೆಹೊತ್ತುಕೊಂಡರು ಮತ್ತು ಅದನ್ನು ರಚಿಸಿದರು” ಎಂದರು! ಹಾಗೆ ಪಂಡಿತ್ ಠಾಕೂರ್ ದಾಸ್ ಭಾರ್ಗವ ಎಂಬುವವರು ಮಾತನಾಡುತ್ತಾ “ಡಾ.ಅಂಬೇಡ್ಕರರು ನಮ್ಮ ಹೃದಯಗಳಲ್ಲಿ ಇಂದು ಉನ್ನತ ಸ್ಥಾನ ಅಲಂಕರಿಸಿದ್ದಾರೆ” ಎನ್ನುವ ಮೂಲಕ ತಮ್ಮ ಅಭೂತಪೂರ್ವ ಪ್ರೀತಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದುವರಿದು ಮತ್ತೋರ್ವ ಸದಸ್ಯರಾದ ಟಿ.ಪ್ರಕಾಶಂ‘”ತಮ್ಮ ಈ ಕಾರ್ಯದ ಮೂಲಕ ಡಾ.ಅಂಬೇಡ್ಕರರು ತಾವು ಗ್ರೇಟ್ ಬ್ರಿಟನ್ನಿನ ರಾಜನ ಸಲಹೆಗಾರನಾಗಿ ಅಲ್ಲಿಯ ಆಸ್ಥಾನ ವೂಲ್‍ಸ್ಯಾಕ್‍ನಲ್ಲಿ ಕುಳಿತುಕೊಳ್ಳುವಷ್ಟು ಸಮರ್ಥರು” ಎಂದು ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ. ಕಡೆಯದಾಗಿ ಶ್ರೀ ಹೆಚ್.ಜೆ.ಖಾಂಡೇಕರ್ ಎಂಬುವವರ ಹೇಳಿಕೆಯನ್ನು ದಾಖಲಿಸುವುದಾದರೆ “ಮಾನ್ಯರೆ, ನಾವು ಅಂಬೇಡ್ಕರರಂತಹ ಪ್ರತಿಭಾಶಾಲಿಯಿಂದ ರೂಪಿತಗೊಂಡ ಕಾನೂನನ್ನು ಸ್ವತಂತ್ರ ಭಾರತದಲ್ಲಿ ಇಂದು ಕಾರ್ಯಾಚರಣೆಗಿಳಿಸುತ್ತಿದ್ದೇವೆ. ಹಾಗೆ ಈ ಕಾನೂನನ್ನು ನಾನು ಮಹಾರ್ ಕಾನೂನು ಎನ್ನಲಿಚ್ಚಿಸುತ್ತೇನೆ ಯಾಕೆಂದರೆ ಡಾ.ಅಂಬೇಡ್ಕರರು ಮಹಾರ್ ಸಮುದಾಯದವರು ಮತ್ತು ಮುಂದೆ 1950 ಜನವರಿ 26ರಂದು ಈ ಕಾನೂನು ಉದ್ಘಾಟನೆಗೊಂಡಾಗ ನಾವು ಮನುವಿನ ಕಾನೂನಿನ ಬದಲು ಮಹಾರರ ಕಾನೂನನ್ನು ಹೊಂದುತ್ತೇವೆ. ಮನುವಿನ ಕಾನೂನಿನ ಅಡಿಯಲ್ಲಿ ಈ ದೇಶದಲ್ಲಿ ಸುಖ ನೆಮ್ಮದಿಯೇ ಇರಲಿಲ್ಲ, ಆದರೆ ಮಹಾರರ ಕಾನೂನು, ಖಂಡಿತ ಈ ದೇಶವನ್ನು ಸ್ವರ್ಗವನ್ನಾಗಿ ಮಾಡುತ್ತದೆ… ನನಗೆ ಭರವಸೆ ಆ ಇದೆ”.
ಖಂಡಿತ, ಸಂವಿಧಾನ ದಿನಾಚರಣೆಯ ಈ ಶುಭ ದಿನದಂದು ಡಾ.ಖಾಂಡೇಕರರ ಭರವಸೆ ಎಲ್ಲರದ್ದಾಗಲಿ.

-ರಘೋತ್ತಮ ಹೊ ಬ, ಮೈಸೂರು
The post ಭಾರತದ ಸಂವಿಧಾನ ಸೃಷ್ಟಿಯ ಕತೆ -ರಘೋತ್ತಮ ಹೊ.ಬ, ಮೈಸೂರು appeared first on Karnataka Kahale.
]]>The post ಇತಿಹಾಸ ಪ್ರಜ್ಞೆ ಮೂಡಿಸಲು ಇಂತಹ ವಿಶೇಷ ಉಪನ್ಯಾಸಗಳ ಅಗತ್ಯವಿದೆ -ಪ್ರಾಚಾರ್ಯ ಡಾ.ಎಚ್.ಕೆ. ಮಂಜುನಾಥ ರೆಡ್ಡಿ appeared first on Karnataka Kahale.
]]>
ಬಳ್ಳಾರಿ, ಜೂ.20: ಇತಿಹಾಸ ಪ್ರಜ್ಞೆ ಮೂಡಿಸಲು ಇಂತಹ ವಿಶೇಷ ಉಪನ್ಯಾಸಗಳ ಅಗತ್ಯವಿದೆ ಎಂದು
ಎಸ್.ಎಸ್.ಎ (ಸರಳಾದೇವಿ) ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಕೆ. ಮಂಜುನಾಥ ರೆಡ್ಡಿ ಅವರು ಹೇಳಿದರು.
ನಗರದ ಪುನರುತ್ಥಾನ ಅಧ್ಯಯನ ಕೇಂದ್ರ, ಕಾಲೇಜಿನ ಇತಿಹಾಸ ವಿಭಾಗ ಮತ್ತು ಸಾಂಸ್ಕೃತಿಕ ಸಮಿತಿ ಸಹಯೋಗದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ‘ಹೆಮ್ಮೆಯ ಕೆಳದಿಯ ಅರಸರು: ಕರ್ನಾಟಕ ವಿಜಯನಗರ ಸಾಮ್ರಾಜ್ಯ’ದ ನೈಜ ವಾರಸುದಾರರು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಇತಿಹಾಸದ ಕುರಿತು ವಿದ್ಯಾರ್ಥಿ ಯುವಜನರಲ್ಲಿ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಅನಿವಾರ್ಯ ಎಂದು ಪ್ರತಿಪಾದಿಸಿದರು.
ಶಿವಮೊಗ್ಗದಲ್ಲಿರುವ ಕೆಳದಿ ಅರಸರ ಅರಮನೆ ವಿಜಯನಗರದ ವೈಭವವನ್ನು ನೆನಪಿಸುತ್ತದೆ. ವಿದ್ಯಾರ್ಥಿಗಳು ಯುವ ಜನರು ಇತಿಹಾಸವನ್ನು ಆಸಕ್ತಿಯಿಂದ ಅವಲೋಕಿಸಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸ ನೀಡಿದ ಇತಿಹಾಸ ಸಂಶೋಧಕ, ಲೇಖಕ ಶಿವಮೊಗ್ಗದ ಅಜಯಕುಮಾರ ಶರ್ಮ ಅವರು, ಉಕ್ಕು, ಕಬ್ಬಿಣ ಬಳಕೆ ಮತ್ತು ತಂತ್ರಜ್ಞಾನವನ್ನು ಮೊಟ್ಟಮೊದಲು ಕಂಡು ಹಿಡಿದದ್ದು ಭಾರತೀಯರು ಎಂದು ತಿಳಿಸಿದರು.
ಸಾಮ್ರಾಟ್ ಅಶೋಕ ದೇಶದಲ್ಲಿ ಕಬ್ಬಿಣ ದೊರೆಯುವ ಸ್ಥಳಗಳನ್ನು ಮ್ಯಾಪಿಂಗ್ ಮಾಡಿದ್ದಾನೆ. ರಾಮಾಯಣ ಕಾಲದಲ್ಲೂ ಕಬ್ಬಿಣ ಬಳಕೆ ಇತ್ತು ಎಂದು ಹೇಳಿದರು.
ನಾಯಕ ಪದ ಜಾತಿ ಸೂಚಕವಲ್ಲ, ಶೌರ್ಯದ ಸೂಚಕ ಎಂದರು.

ಬ್ರಿಟೀಷರೊಂದಿಗೆ ಮಾತ್ರವಲ್ಲ ಪೋರ್ಚುಗೀಸರ ವಿರುದ್ಧ ಹೋರಾಟ ಮಾಡಿದವರು ಕೂಡಾ ಸ್ವಾತಂತ್ರ್ಯ ಹೋರಾಟಗಾರರು ಎಂದು ತಿಳಿಸಿದರು.
ಲಂಡನ್ ಮ್ಯೂಸಿಯಮ್ ನಲ್ಲಿ ಇರುವುದು ಭಾರತದ ಇತಿಹಾಸ. ಇದನ್ನು ದೋಚಿಕೊಂಡು ಹೋಗಿದ್ದನ್ನೇ ಬ್ರಿಟೀಷರು ಪ್ರದರ್ಶಿಸುತ್ತಿದ್ದಾರೆ. ಅವರದೇ ಆದ ಯಾವುದೇ ಇತಿಹಾಸವಿಲ್ಲ ಎಂದು ಕಟುಕಿದರು.
ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಿ ಎಚ್ ಸೋಮನಾಥ್ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರನ್ನು ಕೇಂದ್ರದ ಪರವಾಗಿ ಶ್ರೀನಾಥ್ ಜೋಷಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶಶಿಕಾಂತ ಬಿಲ್ಲವ, ಸಹಾಯಕ ಪ್ರಾಧ್ಯಾಪಕರಾದ ಬಸಪ್ಪ, ಡಾ. ಚೂಡಾಮಣಿ,
ಉಪನ್ಯಾಸಕರಾದ ಎಂ. ರಫಿ, ಟಿ ರುದ್ರಗೌಡ, , ಶ್ಯಾಮರಾಜ ನಾಯಕ್, ಹೇಮೆಗೌಡ್, ಹರೀಶ್ ಬಿ,ಸ್ವಾರಪ್ಪ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಿ.ಮಂಜುನಾಥ್ ಮತ್ತಿತರರು ಇದ್ದರು.
ಪುನರುತ್ಥಾನ ಅಧ್ಯಯನ ಕೇಂದ್ರದ ಶ್ರೀನಾಥ ಜೋಷಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
——–
The post ಇತಿಹಾಸ ಪ್ರಜ್ಞೆ ಮೂಡಿಸಲು ಇಂತಹ ವಿಶೇಷ ಉಪನ್ಯಾಸಗಳ ಅಗತ್ಯವಿದೆ -ಪ್ರಾಚಾರ್ಯ ಡಾ.ಎಚ್.ಕೆ. ಮಂಜುನಾಥ ರೆಡ್ಡಿ appeared first on Karnataka Kahale.
]]>The post ಯುಗಾದಿ ಅಲ್ಲ ಉಗಾದಿ ತಿಳಿಯಿರಿ -ಮನಂ, ಸಂಶೋಧಕರು, ಬೆಂಗಳೂರು appeared first on Karnataka Kahale.
]]>
ಉಗಾದಿ ಹಬ್ಬದ ದಿನ ಮಳವಳ್ಳಿಯ ಮಾಳವ ಜನಾಂಗದ ಕುಟುಂಬಗಳು ಧಾರ್ಮಿಕ ಮೆರವಣಿಗೆಯಲ್ಲಿ ತಮ್ಮೂರ ಅಮ್ಮನ ಗುಡಿಯಿ೦ದ ಬಹಳ ವರುಷಗಳಿ೦ದ ಗೊತ್ತು ಮಾಡಲಾದ ನೀರಿನ ಹೊ೦ಡ, ಕೆರೆ, ನದಿ, ಹಳ್ಳ, ಇಲ್ಲವೇ ಬಾವಿಗಳಿಗೆ ಹೊರಡುವ ಪದ್ಧತಿ ಬೆಳೆದು ಬಂದಿದೆ. ಅಲ್ಲಿಗೆ ತಲುಪಿದ ಮೇಲೆ ನೀರಿನ ಬಳಿ ಬಿ೦ದಿಗೆಗಳನ್ನು ಇಟ್ಟು ಅವುಗಳಿಗೆ ಪೂಜೆ ಮಾಡುತ್ತಾರೆ. ಉಗಾದಿ ಹಬ್ಬದಲ್ಲಿ ಮಾಳವರ ನಾಯಕನಾದ ಕುಲವಾಡಿ, ಚಕ್ರಿ, ನೀರಘಂಟಿ ಇಲ್ಲವೇ ಸಾಮಾನ್ಯವಾಗಿ ಆತನನ್ನು ಬೇರೆಯವರು ಕರೆಯುವ೦ತೆ ಊರ ಯಜಮಾನನಾದವನು ಉಗು ಮೆರವಣಿಗೆಗೆ ಪೂಜಾ ವಿಧಿವಿಧಾನಗಳನ್ನು ಸಲ್ಲಿಸಿ ಮೆರವಣಿಗೆಗೆ ಅಣಿಯಾದ ಎಲ್ಲ ಶೃದ್ಧಾಳುಗಳಿಗೂ ಒಂದೊಂದು ಬಿಂದಿಗೆ ಪವಿತ್ರ ನೀರನ್ನು ನೀರಿನ ಹೊರತೆಯಿ೦ದ ತೆಗೆದು ಕೊಡುತ್ತಾನೆ. ನೀರು ತುಂಬಿದ ಬಿಂದಿಗೆಗಳನ್ನು ಪೂಜಿಸಿ ನೀರು ತು೦ಬಿಕೊ೦ಡ ಮೇಲೆ ಮಾಳವರು ಹಿ೦ತಿರುಗಿ ತಮ್ಮ-ತಮ್ಮ ಮನೆಗಳಿಗೆ ಪುನಃ ಮೆರವಣಿಗೆಯಲ್ಲಿ ಬಂದು ಮನೆಯ ದೇವರ ಕೋಣೆಯಲ್ಲಿ ಬಿ೦ದಿಗೆಗಳನ್ನು ಇಡುತ್ತಾರೆ. ಈ ಬಿಂದಿಗೆದುಂಬಿದ ನೀರನ್ನು #ಹೊಸನೀರು ಎಂದು ಕರೆಯಲಾಗುತ್ತದೆ. ಆ ಬಿ೦ದಿಗೆಗೆ ಪೂಜೆಸಲ್ಲಿಸಿ ಬಿಂದಿಗೆಯ ‘ಹೊಸನೀರ’ನ್ನು ಮನೆಯಲ್ಲಿ ತು೦ಬಿಟ್ಟು ಕೊ೦ಡಿರುವ ದಿನ ಬಳಕೆಯ ಹ೦ಡೆಗಳು, ತೊಟ್ಟಿಗಳು, ಬಿ೦ದಿಗೆಗಳು ಮತ್ತು ಬಕೇಟುಗಳ ನೀರಿಗೆ ತೊಟ್ಟು ಬೆರೆಸಿ ದಿನನಿತ್ಯದ ಅಡುಗೆ, ಸ್ನಾನ, ಪೂಜೆ ಪುನಸ್ಕಾರಾದಿ ಶುಭ ಕಾರ್ಯಗಳಿಗೆ ಬಳಸುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಮಾಳವರು ಉಗಾದಿಯ ಸಾ೦ಯಕಾಲ ಮುಳುಗುವ ಸೂರ್ಯನಿಗೆ ಹಾಗೂ ಉದಯಿಸುವ ಚ೦ದ್ರನಿಗೆ ನಮಿಸುತ್ತಾರೆ. ಸುಮೇರಿಯನ್ ಭಾಷೆಯಲ್ಲಿ ‘ಉಗು’ ಎಂದರೆ ನೀರಾವರಿ ಭೂಮಿ. ಕರ್ನಾಟಕದ ಮಂಡ್ಯ ಜಿಲ್ಲೆ ಮಳವಳ್ಳಿ ಪ್ರದೇಶದ ಮಾಳವ ಜನಾಂಗದ ಭಾಷೆಯಲ್ಲಿಯೂ ಉಗು ಎಂದರೆ ಜಲ ಸಂಪನ್ನ ಭೂಮಿ. ‘ಉ’ ಎ೦ದರೆ ನೀರು. ಉಗಳು ಎ೦ದರೆ ಮಾನವನ ಬಾಯಿಯ ನೀರು. ಇಲ್ಲಿ ಗ ಅಥವಾ ಕ ಎ೦ದರೆ ಬಾಯಿ. ಳು ಎ೦ದರೆ ಮಾನವ ಅಥವಾ ವ್ಯಕ್ತಿ. ‘ಉಕು’ ಎಂಬ ಶಬ್ದದ ಅರ್ಥವೂ ನೀರಾವರಿ ಭೂಮಿ. ಉಕುರಗುಡ್ಡೆ ಹೊಲ ಎಂದರೆ ಬೆಟ್ಟದಂಚಿನಿಂದ ಸಮೃದ್ಧ ನೀರು ಪಡೆಯುವ ನೀರಾವರಿ ಜಮೀನು ಎಂದಾಗುತ್ತದೆ. ‘ಉಗುನಿ ಹಂಬು’ ನೀರಿನ ಮೇಲ್ಭಾಗದವರೆಗೆ ಬೆಳೆಯುವ ಹಚ್ಚಹಸುರು ಗಿಡಗಂಟಿಗಳೆಂದು ಸಹ ಅರ್ಥೈಸುವ ಹಾಗೆ ಇನ್ನಿತರ ಸಂಪ್ರದಾಯಗಳು ‘ಉಗು’ವಿನೊಂದಿಗೆ ಹೆಣೆದುಕೊಂಡಿವೆ. ನೀರು, ಸೂರ್ಯ ಹಾಗೂ ಚಂದ್ರನನ್ನು ಪೂಜಿಸುವ ಹಬ್ಬವೇ ‘ಉಗಾದಿ’. ಮಾಳವರಲ್ಲಿ ‘ಆದಿ’ ಎಂದರೆ ಸೂರ್ಯನ ಹೆಸರು. ಉಗು ಮತ್ತು ಆದಿ ಸೇರಿದಾಗ ನೀರು ಮತ್ತು ಸೂರ್ಯ ಎಂದಾಗುತ್ತದೆ. ನಾಗಾ ಜನಾಂಗದ ನಾಗಧರ್ಮದ ಕಾಲದ ದಿನಗಳಲ್ಲೇ ಸಂಪ್ರದಾಯ ಹುಟ್ಟಿ ಬೆಳೆದಿರಬಹುದು. ಉಗ್,ಉಗಿ, ಉಗ್ಗು, ಉಪ್ಪು, ಉಮಾ, ಉಕ್ಕು, ಉ೦ಣು, ಉಕ್ಕಡ, ಉಕ್ಕಡಗಾತ್ರಿ ಮತ್ತು ಇತ್ಯಾದಿ ಪದಗಳು ‘ಉ’ ಅ೦ದರೆ ನೀರಿಗೆ ಅ೦ಟಿಕೊ೦ಡ ಪದಗಳಾಗಿವೆ. ಪ್ರಸ್ತುತ ಉಗಾದಿ ತನ್ನ ಮೂಲಾರ್ಥ ಕಳೆದುಕೊಂಡು ‘ಹೊಸವರ್ಷ ಪ್ರಾರಂಭ’ ಎಂದಷ್ಟೇ ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕ್ರತಿಯೂ ಹಳೆಯ ನಾಗಾ ಸಂಪ್ರದಾಯವನ್ನು ಮರೆಮಾಚಿ( ನುಂಗಿಕೊಂಡು) ಸಾಧ್ಯವಾದಷ್ಟು ಇಂದಿನ ಸಂಪ್ರದಾಯಗಳಿಗೆ ಒಗ್ಗಿಕೊಂಡಿದೆ. ಇದು ‘ಉಗಾದಿ’ ಹೊರತು ‘ಯುಗಾದಿ’ ಅಲ್ಲ. ಉಗಾದಿ ಎ೦ಬ ಪದ ಮೂಲ ದ್ರಾವಿಡ ಪದವೇ ಹೊರತು ಸ೦ಸ್ಕೃತದಿ೦ದ ಉದಯಿಸಿಲ್ಲ.
ಉದಕ – ನೀರು, ಸಾರು
ಉದಕ ಮಂಡಲ – ಊಟಿ – ನೀರು ಇರುವ ಜಾಗ
ಉಮಾ – ನೀರಿನ ತಾಯಿ, ಗಂಗೆ
ಉಕ್ಕು – ನೀರು ಮೇಲೆ ಬರುವು ಕ್ರೀಯೆ
ಉಪ್ಪು – ನೀರಿನಿಂದ ಬಂದದ್ದು
ಉಳ್ಳಿ – ಉಳ್ಳಾಗಡ್ಡಿ – ನೀರುಳ್ಳಿ – ಈರುಳ್ಳಿ
ಉಸುಕು – ನೀರು ಮಾಡು ನೆಲ – ಮರಳು
ಆದ್ದರಿಂದ ಮಾಳವರ/ಮಾರರ/ ಭಾರತದ ಮೂಲನಿವಾಸಿಗಳ ಹಬ್ಬ ಉಗಾದಿಯೇ ಹೊರತು ಯುಗಾದಿ ಅಲ್ಲ.

– ಮನಂ, ಬೆಂಗಳೂರು
#ಯುಗ ಅಂದರೆ ಅರವತ್ತು ವರುಷಗಳು ಒಂದು ಲೆಕ್ಕದ ಪ್ರಕಾರ
ಇನ್ನೊಂದು ಲೆಕ್ಕದ ಪ್ರಕಾರ ಬಹಳಷ್ಟು ವರುಷಗಳು.
#ಮಾರ್ಲಮಿ – ಮಹಾನವಮಿ ಆದಂತೆ
#ಸುಂಕಲಾತಿ -ಸಂಕ್ಲಾತಿ – ಸಂಕ್ರಾಂತಿ ಆದಂತೆ ಉಗಾದಿ ಯುಗಾದಿ ಆಗಿದೆ. —–
The post ಯುಗಾದಿ ಅಲ್ಲ ಉಗಾದಿ ತಿಳಿಯಿರಿ -ಮನಂ, ಸಂಶೋಧಕರು, ಬೆಂಗಳೂರು appeared first on Karnataka Kahale.
]]>