The post ಕಾವ್ಯ ಕಹಳೆ, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ವರವ ನೀಡು ವರಮಹಾಲಕ್ಷ್ಮಿ appeared first on Karnataka Kahale.
]]>
ಮಂಗಳ ರೂಪಿಣಿ ಮಂಜುಳಭಾಷಿಣಿ ಮಹಾಲಕ್ಷ್ಮಿ
ನಲಿಯುತ, ನಗುತಲಿ ಬಾರಮ್ಮ ದೇವಿ ವರಲಕ್ಷ್ಮಿ
ಶುಕ್ರವಾರದ ಶುಭ ಸಂಜೆಯ ಘಳಿಗೆಗೆ
ಬಾರಮ್ಮ ತಾಯಿ ಭಕ್ತರ ಮನೆ ಮನೆಗೆ ||
ಸಂಭ್ರಮ ಸಡಗರದಿ ಬಂದಿದೆ ಶ್ರಾವಣ ಮಾಸ
ಹೆಂಗಳೆಯರ ಮೊಗದಲಿ ಮೂಡಿದೆ ಮಂದಹಾಸ
ಮಹಾಲಕ್ಷ್ಮಿಯು ಬರುವಳು ವರವನು ನೀಡುತ
ಹರಸಿ ಹಾರೈಸಮ್ಮಾ ತಾಯೇ ಅನವರತ ||
ಸಂಸಾರ ಸಾಗರದಿ ಇರಲು ದುಃಖದ ಬಾಳು
ನಿನ್ನ ಕೃಪೆಯೊಂದಿರಲು ನಮಗಿಲ್ಲ ಸೋಲು
ಜಗದೋದ್ಧಾರಿಣಿ ಜಗದೀಶ್ವರಿ ಶ್ರೀ ಜನನಿ
ನಿನ್ನ ಪಾಡುತಲಿಹರು ಭಕ್ತ ವೃಂದ ಜಯವರ್ಧಿನಿ ||
ಬದುಕಿಗೆ ನಿನ್ನ ಅಭಯ ಇರಲು
ಸಕಲ ಸೌಭಾಗ್ಯಕ್ಕೂ ನೀನೇ ಕಣ್ಗಾವಲು
ಭವ ಭಯ ಬಹುದೂರ ನಿನ್ನ ಧ್ಯಾನದಿ
ನೀನೆಲೆಸುವಾ ಮನೆ ಸುಖ, ಶಾಂತಿ, ನೆಮ್ಮದಿ||

-ಶೋಭಾ ಮಲ್ಕಿ ಒಡೆಯರ್, ಹೂವಿನ ಹಡಗಲಿ
The post ಕಾವ್ಯ ಕಹಳೆ, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ವರವ ನೀಡು ವರಮಹಾಲಕ್ಷ್ಮಿ appeared first on Karnataka Kahale.
]]>The post ಕಾವ್ಯ ಕಹಳೆ, ಹಿರಿಯ ಕವಿ: ವಿ.ಆರ್. ಮುರಲೀಧರ್, ಬೆಂಗಳೂರು, ಕವನದ ಶೀರ್ಷಿಕೆ:ನನ್ನವಳು ಚಂದ್ರಿಕಾ appeared first on Karnataka Kahale.
]]>

ನನ್ನವಳು ಚಂದ್ರಿಕಾ 

ಬಾಳಿನಲಿ ಬಂದವಳು,
ಭರವಸೆಯ ತಂದವಳು,
ಸಪ್ತಪದಿಯ ತುಳಿದವಳು,
ಸುಃಖ ದುಃಖಕದು ಸ್ಪಂದಿಸುವವಳು,
ನನ್ನವಳು ಚಂದ್ರಿಕಾ.

ತವರನು ತೊರೆದವಳು,
ಸರ್ವರೊಳು ಬೆರೆತವಳು,
ನಿತ್ಯ ಹರುಷಕದು ಜೊತೆಯಾದವಳು,
ಸುಖ ಸಂಸಾರಕದು ಸ್ಫೂರ್ತಿಯಾದವಳು,
ನನ್ನವಳು ಚಂದ್ರಿಕಾ.

ಮನವರಿತು ನಡೆಯುವಳು,
ಮನೆಯದನು ಬೆಳಗುವವಳು,
ಬಾಳಿನಾಗಸದಿ ಚಂದ್ರಿಕೆಯಾದವಳು,
ಪ್ರತಿ ಹೆಜ್ಜೆಯಲು ಸಮಭಾಗಿಯಾದವಳು,
ನನ್ನವಳು ಚಂದ್ರಿಕಾ.


-ವಿ.ಆರ್. ಮುರಲೀಧರ್, ಬೆಂಗಳೂರು
The post ಕಾವ್ಯ ಕಹಳೆ, ಹಿರಿಯ ಕವಿ: ವಿ.ಆರ್. ಮುರಲೀಧರ್, ಬೆಂಗಳೂರು, ಕವನದ ಶೀರ್ಷಿಕೆ:ನನ್ನವಳು ಚಂದ್ರಿಕಾ appeared first on Karnataka Kahale.
]]>The post ಕಾವ್ಯ ಕಹಳೆ, ಕವಿ: ಡಾ.ಸದಾಶಿವ ದೊಡ್ಡಮನಿ, ಇಳಕಲ್ಲು, ಕವನದ ಶೀರ್ಷಿಕೆ: ಜೀವಾ….ಜೀವಾ appeared first on Karnataka Kahale.
]]>(ಸಂಪಾದಕರು)

ಜೀವಾ…..ಜೀವಾ
ಕೊಟ್ಟಿದ್ಯಾಕೆ?, ಕಸಿದುಕೊಂಡಿದ್ಯಾಕೆ?
ಹೊಟ್ಟೆಯಲ್ಲಿ ಉರಿ ಹಾಕಿ
ವಿಧಿಯೇ, ನೀನು ಮ್ಯಾಲೆ ಗಹ್ಹಗಹ್ಹಿಸಿ ನಗೋದ್ಯಾಕೆ?, ಕರುಳು ಹಿಂಡೋದ್ಯಾಕೆ?
ಜೀವಾ, ಜೀವಾ ಅನ್ನೋ ಜೀವಾ ನುಂಗಿ
ಮಂಗಾಟ ಆಡಿ ಕೊಣಿಯೋದ್ಯಾಕೆ?
ಬ್ಯಾನಿ ಕೊಡುವುದ್ಯಾಕೆ?
ಭೂಮಿ ಬಗೆದು ಹುಡುಕಾಡಿದರೂ ಜೀವ ಸಿಗದೆ ಹೋದುದ್ಯಾಕೆ?
ಹುಟ್ಟು ಸಾವು, ಮುಷ್ಟಿಯಲ್ಲಿ
ಸುಖ, ದುಃಖ ತುಂಬಿ ಕಳುಹಿದ್ಯಾಕೆ
ಭೃಂಗ ಶೃಂಗ ಏರಿ ಆಡುವಾಗ, ನಲಿದಾಡುವಾಗ
ಕಾರ್ಮೋಡ ಕವಿದಿದ್ದ್ಯಾಕೆ?, ಜೀವಾ ಕಳೆದೋಗಿದ್ಯಾಕೆ?

-ಡಾ. ಸದಾಶಿವ ದೊಡಮನಿ, ಇಳಕಲ್ಲು
——
The post ಕಾವ್ಯ ಕಹಳೆ, ಕವಿ: ಡಾ.ಸದಾಶಿವ ದೊಡ್ಡಮನಿ, ಇಳಕಲ್ಲು, ಕವನದ ಶೀರ್ಷಿಕೆ: ಜೀವಾ….ಜೀವಾ appeared first on Karnataka Kahale.
]]>The post ಕಾವ್ಯ ಕಹಳೆ, ಕವಯಿತ್ರಿ: ಡಾ. ಬಿ.ಸಿ.ಶೈಲಾನಾಗರಾಜ್, ತುಮಕೂರು, ಕವನದ ಶೀರ್ಷಿಕೆ: ಯುಗಾದಿ appeared first on Karnataka Kahale.
]]>
-ಡಾ. ಬಿ.ಸಿ.ಶೈಲಾನಾಗರಾಜ್, ತುಮಕೂರು
The post ಕಾವ್ಯ ಕಹಳೆ, ಕವಯಿತ್ರಿ: ಡಾ. ಬಿ.ಸಿ.ಶೈಲಾನಾಗರಾಜ್, ತುಮಕೂರು, ಕವನದ ಶೀರ್ಷಿಕೆ: ಯುಗಾದಿ appeared first on Karnataka Kahale.
]]>The post ಕಾವ್ಯ ಕಹಳೆ, ಕವಿ: ಚಿನ್ನಸ್ವಾಮಿ ಎಸ್ ಸರಗೂರು, ನಂಜನಗೂಡು appeared first on Karnataka Kahale.
]]>ಮನದಲ್ಲಿ ಮೂಡಲಿ ಒಳ್ಳೆಯ ವಿಚಾರ
ಆಗ ನಿನ್ನ ಮನಸ್ಸು ವಿಸ್ತಾರ
ಆಗ ಬರುವರು ನಿನ್ನ ಹತ್ತಿರ
ಜನರಿಗೆ ನೀನೆಂದರೆ ಕಾತರ
ತಿಳಿಯಿರಿ ಅವರ ವಿಚಾರ
ಅವರ ಬಗ್ಗೆ ಇರಲಿ ಕಾತರ
ಮಾಡದಿರು ಆತುರ
ಹಬ್ಬಿಸದಿರಿ ಅಪಪ್ರಚಾರ
ಬಿಡು ಕಪಟಿಗಳ ವಿಚಾರ.
ಕಿತ್ತೇಸೆದುಬಿಟ್ಟು ಕಂದಾಚಾರ
ಮನಸು ಇರಲಿ ವಿಸ್ತಾರ.
ಬೆಳೆಯುವೆ ನೀನಿನ್ನು ಎತ್ತರ
ಮಾತಿನಲ್ಲಿ ಚತುರ
ಗುಣದಲ್ಲಿ ಬಂಗಾರ
ಅರಿತಿರುವನು ಸಂಸ್ಕಾರ
ಆಗ ನಿನ್ನ ಜೀವನ ಅಮರ
ಅಪ್ಪ ಅಮ್ಮನಲ್ಲಿ ಕಾಣುವನು ದೇವರ
ಕಾಯಕ ಮಾಡುವ ತರ ತರ
ಕಾಯಕಕ್ಕಾಗಿ ಹರಿಸುವನು ಬೆವರ
ಆಗಾಗಿ ದುಡಿಮೆಯೇ ಇವನ ಆಧಾರ

-ಚಿನ್ನಸ್ವಾಮಿ ಎಸ್
ಸರಗೂರು,
ನಂಜನಗೂಡು ತಾಲೂಕು
The post ಕಾವ್ಯ ಕಹಳೆ, ಕವಿ: ಚಿನ್ನಸ್ವಾಮಿ ಎಸ್ ಸರಗೂರು, ನಂಜನಗೂಡು appeared first on Karnataka Kahale.
]]>The post ಕಾವ್ಯ ಕಹಳೆ, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ:ಅಪ್ಪು…. appeared first on Karnataka Kahale.
]]>
ಎಲ್ಲರೆದೆಗೆ ತಾಗಿಕೊಂಡ
ಕಿಡಿ ನೀನು
ಸದಾ ಬೆಳಗುತ್ತಲೇ ಇರುವ ಬೆಳಗು…
ಗಾಜನೂರ ಹಟ್ಟಿ ಕಂಬದ ನಡುವೆ
ದಿಗ್ಗನೆಂದು ಬಂದ,
ಸದಾ ಹೊಳೆಯುತ್ತಲೇ ಇರುವ ನಕ್ಷತ್ರ ನೀನು
ಅಗಣಿತ ತಾರಗಣಗಳ ಗುಂಪು
ಅಪ್ಪುವೆಂದು ಹಂಬಲಿಸುತ್ತಲೇ ಬೆಳಗುವ ಕಾಂತಿ ನೀನು…
ಕರುನಾಡ ಭೂಪಟಕ್ಕೆ
ನಿನ್ನೇಸರೆ ನಿತ್ಯ ಸ್ಮರಣೆಕೆ
ಯುಗಯುಗಕ್ಕೂ ಧಾಟಿ
ಉಳಿಯುವ ನಿನ್ನೇಸರು
ಶಾಶ್ವತವಾದ ಕನ್ನಡಮ್ಮನ ಹಾಗೆ
ಮೆರೆಯುತ್ತಲೇ ಇರುತ್ತದೆ
ಅಪ್ಪುವೆಂಬೋ ಕಾವ್ಯನಾಮ…
ಕನ್ನಡ ಪದವೆ
ಕನ್ನಡ ನುಡಿಯೆ
ಹಬ್ಬಿ ಬೆಳೆದ ಹಾಗೆ
ಊರೂರಿಗೆ ಕೇರ್ಕೇರಿಗೆ
ಮಲ್ಲಿಗೆ ಘಮ ಹಬ್ಬಿದ ಹಾಗೆ ನಿನ್ನೇಸರು
ಹಬ್ಬುತ್ತಲೇ ಇರುವ ಕನ್ನಡ ರಸ ಬಳ್ಳಿ
ಅಪ್ಪುವೆಂಬ ಹೆಸರು
ನಾಡಗಲ ಜಗದಗಲ
ಕಿವಿಗೆ ಕನ್ನಡ ಪದಗಳ್ ಇಂಪಿನಂತೆ
ಗುಂಯ್ ಅನ್ನುತ್ತಲೇ ಇರುತ್ತದೆ
ಅಪ್ಪುವೆಂಬ ಹೆಸರು….

-ಸಿದ್ದು ಜನ್ನೂರ್, ಚಾಮರಾಜ ನಗರ
The post ಕಾವ್ಯ ಕಹಳೆ, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ:ಅಪ್ಪು…. appeared first on Karnataka Kahale.
]]>The post ಕಾವ್ಯ ಕಹಳೆ, ಹಿರಿಯ ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಬಣ್ಣ ಬಳೆದ ನಿತ್ಯವೊ….! appeared first on Karnataka Kahale.
]]>
ಬಣ್ಣ ಬಳೆದ ನಿತ್ಯವೊ….!
ಬಣ್ಣಗಳಿಲ್ಲದ ಬದುಕು ಉಂಟೆ
ಬಣ್ಣವೆ, ಬದುಕಿನ ಹೆಸರೆ ಬಣ್ಣ
ಹೆಜ್ಜೆ ಹೆಜ್ಜೆಗೂ ಹೊಸ ಬಣ್ಣದಂಚು
ಇಂಚಿಂಚಿಗೂ ಹೊಸತು ಕುಸುರಿ
ನೋವು ನಲಿವು ಸುಖ ದು:ಖ
ಹಗಲು ರಾತ್ರಿ ಬೆಳಕು ಕತ್ತಲು
ದಿನ ದಿನಕೂ ಹೊಸ ರಂಗು ತುಂಬೆ
ಈ ಬದುಕು ಬೆಳಕು ಬಣ್ಣದಂಗಳ
ಶುಭ್ರ ಶ್ವೇತ ಜಗದಂಗಳದ ಬೆಳಕು
ಕಪ್ಪು ಕತ್ತಲೆಯ ಗರ್ಭದೊಳಗೆ ತಾವು
ಆ ಕಾವಳದ ಗೂಡು ಸೀಳಿ ಚಿಮ್ಮಿದೆ
ಬೆಳಕಿಗೆ ಬಾಯ್ದೆರೆದು ಕಾಯ್ವ ಜೀವದೆಳೆ
ಕಾಯ್ವಾಸೆ ಬಲಿತು ಬೇಲಿ ಹಾರಿ ಜಿಗಿದು
ಬಿಸುಪು ಬಿರಿದು ಬಿಳುಪು ಕರಗಿ ಹರಿದು
ಚಿಮ್ಮಿ ಸಪ್ತ ವರ್ಣ ಭೋರ್ಗರೆದು ಸುರಿದು
ತೇಲುತಿದೆ ಬಾಳ ದೋಣಿ ಗುರುತು ಮರೆತು
ಕುಣಿದು ರಂಗಿನಂಗಳದಿ ಮೈಮರೆತು
ಮರೆಯಿತದು ತನ್ನಿರುವು ತನ್ನ ಠಾವು
ಕಳೆದು ಸುಳಿಯಲಿ ಕನಸ ಲೋಕದಲಿ
ರಂಗಯ್ಯನ ರಂಗಿನೆರಚಾಟದಲಿ!
ಇದು ಬಣ್ಣ ಬಳೆದ ನಿತ್ಯವೊ ಇದು ಸತ್ಯ!

-ಸರೋಜಿನಿ ಪಡಸಲಗಿ
ಬೆಂಗಳೂರು
The post ಕಾವ್ಯ ಕಹಳೆ, ಹಿರಿಯ ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಬಣ್ಣ ಬಳೆದ ನಿತ್ಯವೊ….! appeared first on Karnataka Kahale.
]]>The post ಕಾವ್ಯ ಕಹಳೆ, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಶಿವ ಮಹಾತ್ಮೆ appeared first on Karnataka Kahale.
]]>(ಸಂಪಾದಕರು)

ಶಿವ ಮಹಾತ್ಮೆ
ನಂಬಿ ಕರೆಯಲು ಓ ಎನ್ನನೇ ಶಿವನು
ಕೈಲಾಸ ಗಿರಿ ಶಿಖರದ ಪರಮಾತ್ಮನು
ಗಂಗೆಯ ಮುಡಿಯೊಳು ಧರಿಸಿದ ಜಟಾಧರನು
ಗೌರಿಯ ಪಕ್ಕದಲ್ಲಿ ಕರೆದ ಗೌರಿಪ್ರಿಯನು //
ಧನ ಕನಕ ಆಡಂಬರದ ಪೂಜೆ ಯಾಕೆಂದೆ
ಬಿಲ್ವ ಪತ್ರಿಯ ಮುಡಿಸಿದರೆ ಸಾಕೆಂದೆ
ರುದ್ರಾಕ್ಷಿ ಮಾಲೆಯ ಧರಿಸಿದಾ ತಂದೆ
ಕೊರಳೊಳು ನಾಗ ಸರ್ಪವಾ ನೀ ಸುತ್ತಿದೆ //
ಭಸ್ಮಾಂಬರಧಾರಿ ತ್ರಿನೇತ್ರನು
ವಿಷವನ್ನು ಕುಡಿದಾ ವಿಷಕಂಠನು
ಲೋಕವನುಳಿಸಿದಾ ನಂಜುಂಡೇಶ್ವರನು
ಗತಿ ನೀನೆನ್ನಲು ಕರುಣಾಸಾಗರನು //
ಜ್ಞಾನ ದೀವಿಗೆಯ ಬೆಳಗಿಸು ತಂದೆ
ಅಜ್ಞಾನವನ್ನು ಅಳಿಸಿಬಿಡು ಇಂದೆ
ನಿನ್ನ ನಾಮವ ಪಾಡುತಿಹ ಭಕ್ತರು ನಿನ್ಮುಂದೆ
ಕಷ್ಟ ಸರಿಸಿ ಮೋಕ್ಷವ ನೀಡು ಸಾಕೆಂದೆ //
ಶಿವರಾತ್ರಿಯಂದು ಪೂಜೆ-ಪುನಸ್ಕಾರ ಪಠಣ
ಗುಡಿ ಗುಂಡಾರದೊಳು ನೆರೆದಿದೆ ಭಕ್ತ ಗಣ
ಫಲಫುಷ್ಪದಿ ಅಲಂಕೃತವಾಗಿದೆ ದೇಗುಲ ತಾಣ
ನಿನ್ನ ಸ್ಮರಣೆಯೊಂದಿರಲು ನರ ಜನ್ಮ ಪಾವನ //

-ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ
The post ಕಾವ್ಯ ಕಹಳೆ, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಶಿವ ಮಹಾತ್ಮೆ appeared first on Karnataka Kahale.
]]>The post ಕಾವ್ಯ ಕಹಳೆ, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಗಾಂಧಿ…. appeared first on Karnataka Kahale.
]]>ಗಾಂಧಿ ಎಂದರೆ
ಹಿಮಾಲಯ
ಏರಿದಷ್ಟೂ ಎತ್ತರ
ಅದ ಏರ ಹೋಗಿ
ಜಾರಿ ಬಿದ್ದವರೆಷ್ಟೋ
ಏರಲಾಗದೆ
ಜರಿದವರೆಷ್ಟೋ..
ಏರಿ ಅರಿವಿನ ಬಿತ್ತರ
ತಿಳಿದವರೆಷ್ಟೋ..
ಗಾಂಧಿ ಎಂದರೆ
ಮಹಾಸಾಗರ
ಇಳಿದಷ್ಟೂ ಆಳ
ತಿಳಿದಷ್ಟೂ ಅಗಾಧ
ಇಳಿಯ ಹೋಗಿ
ಮುಳುಗಿದವರಷ್ಟೋ..
ಆಳಕ್ಕಿಳಿದು
ಮುತ್ತುಗಳ ಹೆಕ್ಕಿ
ತಂದವರೆಷ್ಟೋ..
ಗಾಂಧಿ ಎಂದರೆ
ನೀಲಾಕಾಶ
ಸರಹದ್ದುಗಳಿಲ್ಲದ
ಅನಂತ
ಕಣ್ಣ ಪೊರೆ ಕಳಚಿದರೆ
ಕೋರೈಸುವವು
ಗ್ರಹ ತಾರೆಗಳು
ಕಂಡು ಖುಷಿಯಾದವರೆಷ್ಟೋ
ಕಾಣದೆ ಕರುಬಿದವರೆಷ್ಟೋ
ಗಾಂಧಿ ಎಂದರೆ
ಅದು ಬರಿ ಹೆಸರೆ
ಸತ್ಯದ ಉಸಿರು
ಶಾಂತಿಯ ಬಸಿರು
ತ್ಯಾಗದ ಹಸಿರು
ಅಹಿಂಸೆಯ ಒಸರು.
ತಿಳಿಯಲು ಗಾಂಧಿಯನು
ನಾವು ತಿಳಿಯಾಗಬೇಕು .

-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.
The post ಕಾವ್ಯ ಕಹಳೆ, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಗಾಂಧಿ…. appeared first on Karnataka Kahale.
]]>The post ಕಾವ್ಯ ಕಹಳೆ, ಕವಿ: ವಿಕಾಸ್ ಆರ್ ಮೌರ್ಯ, ಬೆಂಗಳೂರು, ಕವನದ ಶೀರ್ಷಿಕೆ: ಗೆಲುವು appeared first on Karnataka Kahale.
]]>
ಹೂವನ್ನು ಹೊಸಕಿ ಹಾಕಿದೊಡೆ
ಪರಿಮಳ ಪ್ರಾಣ ಬಿಟ್ಟೀತೆ
ಹಿಂಡಿದಷ್ಟೂ ಘಮಲು
ಗಗನಕ್ಕೆ ಮುತ್ತಿಕ್ಕದಿದ್ದೀತೆ
ಪ್ರೀತಿಯ ಕೊಡುಗೆಗೂ
ಮುಡಿಯುಡುಗೆಗೂ
ಕಡೆಗೆ ಕೊನೆಯುಸಿರಿಗೂ
ಮಾತ್ರ ನೆನಪಾದೀತೆ?
ಮೈಕೊಡವಿ ಪ್ರತಿಭಟಿಸಿ
ಮೈಮುಟ್ಟಿದವನೆದುರಿಸಿ
ಕಣ್ಣೀರನಂತರಾಳ ನೀರಾಗಿಸಿ
ಅರಳಿದ ಹೂವ ಕಂಡಿಲ್ಲವೆ?
ಇಂದು ಜಪಾನಿನ ಹೂ
ಸೋತದ್ದು ಕುಸ್ತಿಯಲ್ಲೆ..
ನಮ್ಮನೆಯ ಹೂ ಗೆದ್ದದ್ದು
ಕೇವಲ ಕುಸ್ತಿಯಲ್ಲಲ್ಲ…

-ವಿಕಾಸ್ ಆರ್ ಮೌರ್ಯ, ಬೆಂಗಳೂರು
—–
The post ಕಾವ್ಯ ಕಹಳೆ, ಕವಿ: ವಿಕಾಸ್ ಆರ್ ಮೌರ್ಯ, ಬೆಂಗಳೂರು, ಕವನದ ಶೀರ್ಷಿಕೆ: ಗೆಲುವು appeared first on Karnataka Kahale.
]]>