ಕುವೆಂಪು ಜಯಂತಿ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Thu, 29 Dec 2022 22:49:19 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಕುವೆಂಪು ಜಯಂತಿ – Karnataka Kahale https://www.karnatakakahale.com 32 32 ವಿಶ್ವಮಾನವ ಕುವೆಂಪು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು -ಎನ್.ಬಸವರಾಜ https://www.karnatakakahale.com/news/10749 Thu, 29 Dec 2022 22:49:19 +0000 https://www.karnatakakahale.com/?p=10749 ಬಳ್ಳಾರಿ, ಡಿ.29: ರಾಷ್ಟ್ರಕವಿ ಕುವೆಂಪು ಅವರು ಜಾತೀಯತೆ, ಅರ್ಥಹೀನ ಆಚರಣೆಗಳನ್ನು ಕಟುವಾಗಿ‌ ವಿರೋಧಿಸಿದ್ದರು ಎಂದು ನಿವೃತ್ತ ಉಪನ್ಯಾಸಕ ಎನ್ ಬಸವರಾಜ ಅವರು ಹೇಳಿದರು. ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ…

The post ವಿಶ್ವಮಾನವ ಕುವೆಂಪು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು -ಎನ್.ಬಸವರಾಜ appeared first on Karnataka Kahale.

]]>

ಬಳ್ಳಾರಿ, ಡಿ.29: ರಾಷ್ಟ್ರಕವಿ ಕುವೆಂಪು ಅವರು ಜಾತೀಯತೆ, ಅರ್ಥಹೀನ ಆಚರಣೆಗಳನ್ನು ಕಟುವಾಗಿ‌ ವಿರೋಧಿಸಿದ್ದರು ಎಂದು ನಿವೃತ್ತ ಉಪನ್ಯಾಸಕ ಎನ್ ಬಸವರಾಜ ಅವರು ಹೇಳಿದರು.
ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ವಿಶೇಷ ಘಟಕ ಯೋಜನೆಯಡಿ ‌ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ
ವಿಚಾರ ಸಂಕಿರಣ, ಕೂಚಿಪುಡಿ ನೃತ್ಯ, ವಚನಗಾಯನ, ರಂಗಗೀತೆ, ನಾಟಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು, ನುಡಿ ಜತೆ ದೇಶವನ್ನು ಅಪಾರವಾಗಿ ಪ್ರೀತಿಸಿದ ಮಹಾನ್ ದೇಶಪ್ರೇಮಿ ಕುವೆಂಪು ಎಂದು ಕೊಂಡಾಡಿದರು.
ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ನಾಯಕರು, ಸಾಹಿತಿ, ವಿಜ್ಞಾನಿ, ಶಿಕ್ಷಕರು ಆಗುವವರು ಎಂದು ತಿಳಿಸಿದ ಬಸವರಾಜ ಅವರು ರಸ ಋಷಿ, ಯುಗದ ಕವಿ ಕುವೆಂಪು ಅವರು ನಡೆದ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು ಮಾತನಾಡಿ, ಕುವೆಂಪು ಅವರ ಜಾತ್ಯಾತೀತ ಮನೋಭಾವ, ಆಶಯವೇ ವಿಶ್ವಮಾನವ ಸಂದೇಶವಾಗಿದೆ ಎಂದು ತಿಳಿಸಿದರು.
ಹುಟ್ಟುವ ಪ್ರತಿ ಮಗುವೂ ವಿಶ್ವಮಾನವನೇ ಆಗಿರುತ್ತದೆ. ನಂತರ ಜಾತಿ ಮತದ ಕಟ್ಟುಪಾಡುಗಳಿಂದ‌ ಬಂಧಿಸಲಾಗುತ್ತದೆ ಎಂದು‌ ವಿಷಾಧಿಸಿದರು.
ಮನುಜ ಮತ, ವಿಶ್ವಪಥ ಸಾರಿದ ರಾಷ್ಟ್ರ ಕವಿ ಕುವೆಂಪು ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು.
ಮಕ್ಕಳ ಮಾನಸಿಕ ಬೆಳವಣಿಗೆಗೆ ನೃತ್ಯ ನಾಟಕ ಸಂಗೀತ ಅತ್ಯಗತ್ಯ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.


ಕುವೆಂಪು ನಾಟಕಗಳ ವೈಶಿಷ್ಟ್ಯತೆ ಕುರಿತು ಉಪನ್ಯಾಸ ನೀಡಿದ ವಿ ಎಸ್ ಕೆ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ,ನಾಟಕ ವಿಭಾಗದ ಉಪನ್ಯಾಸಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರು, ಮನುಷ್ಯ ಮನುಷ್ಯನಿಗೆ ಸಹಾಯ ಮಾಡುವುದರಲ್ಲಿ ಶಿವನನ್ನು ಕಾಣಬೇಕು ಎಂದು ಕುವೆಂಪುರವರು ತಮ್ಮ ಜಲಗಾರ ನಾಟಕದ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಕುವೆಂಪುರವರ ಅನೇಕ ನಾಟಕಗಳು ಪ್ರಸ್ತುತ ಸಂದರ್ಭದಲ್ಲಿ ಸೂಕ್ತವಾಗಿ ಹೊಂದುತ್ತವೆ ಎಂದು ಅಭಿಪ್ರಾಯ ಪಟ್ಟರು.
ಕುವೆಂಪು ಅವರ ನಾಟಕಗಳು
ಸೃಜನಶೀಲಶೀಲತೆಯ ಅಭಿವ್ಯಕ್ತಿ ಜತೆ ಜನಸಾಮಾನ್ಯನ ಬದುಕು, ಸನ್ನಿವೇಶಗಳೊಂದಿಗೆ ಅನುಸಂಧಾನಗೊಳ್ಳುತ್ತವೆ ಎಂದು ವಿವರಿಸಿದರು.


ರಂಗಭೂಮಿ ಮತ್ತು ರಂಗ ಕಲಾವಿದರು ಕುರಿತು ಉಪನ್ಯಾಸ ನೀಡಿದ ಹಿರಿಯ ರಂಗ ಕಲಾವಿದ, ಪತ್ರಿಕಾ ಛಾಯಾಗ್ರಹಕ ಪುರುಷೋತ್ತಮ ಹಂದ್ಯಾಳು ಅವರು,
ರಂಗಭೂಮಿಗೆ ಅಖಂಡ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ. ಬಳ್ಳಾರಿ ರಾಘವ, ಡಾ. ಜೋಳದರಾಶಿ ದೊಡ್ಡನಗೌಡ, ಶಿಡಗಿನಮೊಳ ಚಂದ್ರಯ್ಯಸ್ವಾಮಿ, ನಾಡೋಜ ಡಾ.‌ಸುಭದ್ರಮ್ಮ ಮನ್ಸೂರು ಅವರೊಂದಿಗೆ ನಾಡೋಜ ಬೆಳಗಲ್ಲು ವೀರಣ್ಣ, ಡಾ. ಕೆ. ನಾಗರತ್ನಮ್ಮ, ಕೂಡ್ಲಿಗಿ ಪದ್ಮ, ರಮೇಶಗೌಡ ಪಾಟೀಲ್, ಆದೋನಿ ವೀಣಾ ಸೇರಿದಂತೆ ಹಲವು ರಂಗ ನಟ‌ನಟಿಯರು ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ವಿದ್ಯಾರ್ಥಿಗಳು ಯಾವುದಾದರೂ ಒಂದು ಕಲೆಯನ್ನಾದರೂ ನಿಷ್ಠೆಯಿಂದ ಕಲಿಯಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೀಣಾ ಆದೋನಿ, ರಮೇಶ್ ಗೌಡ ಪಾಟೀಲ್, ಸರಕಾರಿ ಆದರ್ಶ ವಿದ್ಯಾಲಯದ ಮುಖ್ಯ ಗುರು ಎಂ. ಕುಮಾರಸ್ವಾಮಿ, ರಂಗ ಕಲಾವಿದ ರಾಮಚಂದ್ರ ವಿ, ಕರ್ನಾಟಕ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಎಚ್ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ರಂಗ ಕಲಾವಿದರಾದ ನಾಗನಗೌಡ, ನೇತಿ ರಘುರಾಮ,ಬಿ ಎಂ ಬಸವರಾಜ, ಸುಬ್ಬಣ್ಣ, ವಿದ್ಯಾಲಯದ ಎಸ್ ಡಿ ಎಂ ಸಿ ಸದ್ಯಸರಾದ ತಿಮ್ಮಪ್ಪ, ದೊಡ್ಡ ಬಸಯ್ಯ, ರಂಗಕಲಾವಿದ ಅಮರೇಶ, ಕೆ ಕೃಷ್ಣ, ಸರ್ಕಾರಿ ಆದರ್ಶ ವಿದ್ಯಾಲಯ ಶಿಕ್ಷಕ ವೃಂದದವರು ಮತ್ತು ಕಲಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ವಚನ ಗಾಯನವನ್ನು ಸಿದ್ದರಾಮಯ್ಯ ಮತ್ತು ತಂಡದವರು, ರಂಗಗೀತೆಗಳನ್ನು ಶ್ರೀಮತಿ ಓಂಕಾರಮ್ಮ ಕಪ್ಪಗಲ್ಲು ಮತ್ತು ತಂಡದವರು, ಕುಚುಪುಡಿ ನೃತ್ಯವನ್ನು ಅಭಿನಯ ಎಸ್.ಮತ್ತು ತಂಡದವರು, ಕೋಲಾಟ ನೃತ್ಯವನ್ನು ಆರ್.ಪೂಜಿತ ಮತ್ತು ಸಿಂಚನ ತಂಡದವರು, ಕೆ.ಹೊನ್ನೂರ ಸ್ವಾಮಿ ಮತ್ತು ತಂಡದವರು “ಸ್ವಾತಂತ್ರ ಹಳ್ಳಿ” ಎನ್ನುವ ಮಕ್ಕಳ ನಾಟಕವನ್ನು ಪ್ರದರ್ಶಿಸಿದರು.


ನಾಟಕ ವಿಭಾಗದ ಉಪನ್ಯಾಸಕ ವಿಷ್ಣು ಹಡಪದ ಅವರು ಸ್ವಾಗತಿಸಿದರು. ವಿದ್ಯಾಲಯದ ಸಿಂಚನ ಮತ್ತು ತಂಡ ಪ್ರಾರ್ಥಿಸಿದರು. ಸರ್ಕಾರಿ ಆದರ್ಶ ವಿದ್ಯಾಲಯದ ಕನ್ನಡ ಶಿಕ್ಷಕಿ ಶ್ರೀಮತಿ ವೀಣಾ ನಿರೂಪಿಸಿದರು.ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ ವಂದಿಸಿದರು.
*****

The post ವಿಶ್ವಮಾನವ ಕುವೆಂಪು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು -ಎನ್.ಬಸವರಾಜ appeared first on Karnataka Kahale.

]]>
ಇಂದು(ಡಿ.29) ಆಲಾಪ್ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಬಳ್ಳಾರಿಯಲ್ಲಿ ಕುವೆಂಪು ಜನ್ಮದಿನಾಚರಣೆ ಮತ್ತು ಸಾಂಸ್ಕೃತಿಕ ಸಂಭ್ರಮ https://www.karnatakakahale.com/news/10735 Thu, 29 Dec 2022 06:25:11 +0000 https://www.karnatakakahale.com/?p=10735 ಬಳ್ಳಾರಿ, ಡಿ. 29: ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್ (ರಿ) ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ರಾಷ್ಟ್ರಕವಿ ಕುವೆಂಪು ಜನ್ಮದಿನ ಪ್ರಯುಕ್ತ ವಿಚಾರ ಸಂಕಿರಣ, ಕೂಚಿಪುಡಿ ನೃತ್ಯ, ವಚನಗಾಯನ, ರಂಗಗೀತೆ, ನಾಟಕ ಸಂಭ್ರಮ…

The post ಇಂದು(ಡಿ.29) ಆಲಾಪ್ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಬಳ್ಳಾರಿಯಲ್ಲಿ ಕುವೆಂಪು ಜನ್ಮದಿನಾಚರಣೆ ಮತ್ತು ಸಾಂಸ್ಕೃತಿಕ ಸಂಭ್ರಮ appeared first on Karnataka Kahale.

]]>

ಬಳ್ಳಾರಿ, ಡಿ. 29: ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್ (ರಿ) ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ವಿಶೇಷ ಘಟಕ ಯೋಜನೆಯಡಿ
ರಾಷ್ಟ್ರಕವಿ ಕುವೆಂಪು ಜನ್ಮದಿನ ಪ್ರಯುಕ್ತ ವಿಚಾರ ಸಂಕಿರಣ, ಕೂಚಿಪುಡಿ ನೃತ್ಯ, ವಚನಗಾಯನ, ರಂಗಗೀತೆ, ನಾಟಕ ಸಂಭ್ರಮ ಕಾರ್ಯಕ್ರಮ ಡಿ.29 ರಂದು ಮಧ್ಯಾಹ್ನ 2ಗಂಟೆಗೆ ಸ್ಥಳೀಯ ಹಿರಾಳ ಕುಡಂ ಈದ್ಘಾ ರಸ್ತೆಯಲ್ಲಿರುವ
ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ನಿವೃತ್ತ ಉಪನ್ಯಾಸಕರಾದ ಎನ್ ಬಸವರಾಜ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಅಧ್ಯಕ್ಷತೆಯನ್ನು
ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ವಹಿಸುವರು.
ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆದೋನಿ ವೀಣಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ‌ ನಿರ್ದೇಶಕ ಸಿದ್ಧಲಿಂಗೇಶ್ವರ ರಂಗಣ್ಣನವರ್,
ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯ ಗುರು ಎಂ ಕುಮಾರ ಸ್ವಾಮಿ, ರಂಗ ಕಲಾವಿದ ವಿ ರಾಮಚಂದ್ರ ಅವರು ಉಪಸ್ಥಿತರಿರುವರು.

ಉಪನ್ಯಾಸ: ವಿ ಎಸ್ ಕೆ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ,ನಾಟಕ ವಿಭಾಗದ ಉಪನ್ಯಾಸಕ ಡಾ: ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಕುವೆಂಪು ನಾಟಕಗಳ ವೈಶಿಷ್ಟ್ಯತೆ ಕುರಿತು, ‌ರಂಗಭೂಮಿ ಕುರಿತು ಹಿರಿಯ ರಂಗ ಕಲಾವಿದ, ಪತ್ರಿಕಾ ಛಾಯಾಗ್ರಹಕ ಪುರುಷೋತ್ತಮ ಹಂದ್ಯಾಳು ಅವರು ಉಪನ್ಯಾಸ ನೀಡುವರು.


ಅಭಿನಯ ಎಸ್ ತಂಡ ಇವರಿಂದ ಕೂಚಿಪುಡಿ ನೃತ್ಯ
ಶ್ರೀಮತಿ ಓಂಕಾರಮ್ಮ ಕಪ್ಪಗಲ್ಲು ತಂಡದಿಂದ ರಂಗಗೀತೆ, ಸಿದ್ದ ರಾಮೇಶ್ವರ ವಿ. ಮತ್ತು ತಂಡದಿಂದ ವಚನ ಗಾಯನ, ವಿ.ರಾಮಚಂದ್ರ ತಂಡದಿಂದ ಸ್ವಾತಂತ್ರ್ಯ ಹಳ್ಳಿ ನಾಟಕ ಪ್ರದರ್ಶನವಿರುತ್ತದೆ ಎಂದು
ಅಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****

The post ಇಂದು(ಡಿ.29) ಆಲಾಪ್ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಬಳ್ಳಾರಿಯಲ್ಲಿ ಕುವೆಂಪು ಜನ್ಮದಿನಾಚರಣೆ ಮತ್ತು ಸಾಂಸ್ಕೃತಿಕ ಸಂಭ್ರಮ appeared first on Karnataka Kahale.

]]>
ಕವನದ ಹೆಸರು: ಮೇರು ಪರ್ವತ, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ https://www.karnatakakahale.com/news/10728 Thu, 29 Dec 2022 04:49:40 +0000 https://www.karnatakakahale.com/?p=10728 ಇಂದು ರಸ ಋಷಿ ಕವಿವರ್ಯ ಕುವೆಂಪು ಅವರ ಜನ್ಮದಿನ! ರಾಷ್ಟ್ರ ಕವಿಗಳ ಹುಟ್ಟುಹಬ್ಬದ  ಅಂಗವಾಗಿ ಹೂವಿನ ಹಡಗಲಿಯ ಕವಯಿತ್ರಿ ಶೋಭ ಮಲ್ಕಿಒಡೆಯರ್ ಅವರು ‘ಮೇರು ಪರ್ವತ’  ಕವನದ ಮೂಲಕ ಅಕ್ಷರ ನಮನ ಸಲ್ಲಿಸಿದ್ದಾರೆ!👇💐👇🌺 ಮೇರು ಪರ್ವತ ಸಹ್ಯಾದ್ರಿಯ ವಸುಧೆಯಲ್ಲಿ ಹುಟ್ಟಿದ ಕುಪ್ಪಳ್ಳಿಯ…

The post ಕವನದ ಹೆಸರು: ಮೇರು ಪರ್ವತ, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ appeared first on Karnataka Kahale.

]]>
ಇಂದು ರಸ ಋಷಿ ಕವಿವರ್ಯ ಕುವೆಂಪು ಅವರ ಜನ್ಮದಿನ!

ರಾಷ್ಟ್ರ ಕವಿಗಳ ಹುಟ್ಟುಹಬ್ಬದ  ಅಂಗವಾಗಿ ಹೂವಿನ ಹಡಗಲಿಯ ಕವಯಿತ್ರಿ ಶೋಭ ಮಲ್ಕಿಒಡೆಯರ್ ಅವರು ‘ಮೇರು ಪರ್ವತ’  ಕವನದ ಮೂಲಕ ಅಕ್ಷರ ನಮನ ಸಲ್ಲಿಸಿದ್ದಾರೆ!👇💐👇🌺

ಮೇರು ಪರ್ವತ

ಸಹ್ಯಾದ್ರಿಯ ವಸುಧೆಯಲ್ಲಿ ಹುಟ್ಟಿದ
ಕುಪ್ಪಳ್ಳಿಯ ವೆಂಕಟಪ್ಪ ಪುಟ್ಟಪ್ಪ
ಸಾಹಿತ್ಯದ ಸಾಧನೆಯ ಮೇರು ಶಿಖರವೇರಿದ
ಜ್ಞಾನ ಪೀಠ ವಿಜೇತ ಅಪ್ಪ – ದೊಡ್ಡಪ್ಪ //

“ಶ್ರೀ ರಾಮಾಯಣ ದರ್ಶನಂ”ಮಹಾಕಾವ್ಯ ಬರೆದು
ಹೊಸತನವ ಮೆರೆದಿಹರು
ಬೃಹತ್ ಕಾವ್ಯದ ಕರ್ತೃ ಇವರೇ
ಜ್ಞಾನ ದಾಸೋಹಿ‌ ಕವಿ ಕುವೆಂಪುರವರು //

ಮಲೆನಾಡಿನ ವೈಭವ ಬಿಚ್ಚಿಟ್ಟ
“ಮಲೆಗಳಲ್ಲಿ ಮದುಮಗಳು”
ಜೀವನಸಾರ ನಿರೂಪಿಸಿದ “ಕಾನೂರು ಹೆಗ್ಗಡತಿ”
ನಾಟಕ, ಕಥಾ ಸಂಕಲನ, ಕವನ ಸಂಕಲನಗಳು //

ಜ್ಞಾನದ ಜೊತೆಗೆ ವಿಜ್ಞಾನಕ್ಕೂ ಕೊಟ್ಟರು ಮಹತ್ವ
ಭುವನೇಶ್ವರಿಯೊಂದಿಗೆ ಭಾರತಾಂಬೆಗೂ ಗೌರವ
ದೈವ ನಂಬಿದರೂ ಮೂಡತೆಗೆ
ಮರುಳಾಗಲಿಲ್ಲ ಯುಗದ ಕವಿ ಪುಂಗವ //

ಇಂದು ತಮಗೆ ಕೋಟಿ ಜನರ ಶುಭಾಶಯ
ಸಾಹಿತ್ಯ ಸಾಗರದಲ್ಲಿ ಅಚ್ಚೊತ್ತಿದೆ ನಿಮ್ಹೆಸರು
ಶ್ರೀ ಗಂಧದಂತೆ ಘಮ ಪಸರಿಸುತ್ತಿದೆ ಸುತ್ತಲೂ
ಪ್ರತಿ ಶಬ್ದದೊಳು ಹಿಡಿದಿಡುತ್ತೆ ಓದುಗರ ಉಸಿರು //

-ಶೋಭಾ ಪ್ರಕಾಶ್ ಮಲ್ಕಿ ಒಡೆಯರ್✍🏻
ಹೂವಿನ ಹಡಗಲಿ

*****

The post ಕವನದ ಹೆಸರು: ಮೇರು ಪರ್ವತ, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ appeared first on Karnataka Kahale.

]]>