ಗಣೇಶೋತ್ಸವ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Wed, 03 Sep 2025 08:36:41 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಗಣೇಶೋತ್ಸವ – Karnataka Kahale https://www.karnatakakahale.com 32 32 ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಮಿಂಚಿದ ಬಳ್ಳಾರಿ ‌ರಂಗ ಪ್ರತಿಭೆಗಳು: ‘ದನ ಕಾಯೋರ ದೊಡ್ಡಾಟ’ ನೋಡಿ ನಕ್ಕು ನಲಿದ ಪ್ರೇಕ್ಷಕರು! https://www.karnatakakahale.com/news/20546 Wed, 03 Sep 2025 08:36:41 +0000 https://www.karnatakakahale.com/?p=20546 ಚಿತ್ರದುರ್ಗ, ಸೆ.3: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸೂಫಿ ಸಂತರ ಭಾವೈಕ್ಯತೆಯ ನಾಡು ನಾಯಕನಹಟ್ಟಿ ಗ್ರಾಮದ ಬಿಳೆಕಲ್ಲು ಗೆಳೆಯರ ಬಳಗದ ವತಿಯಿಂದ 33ನೇ ವರ್ಷದ ಶಕ್ತಿ ಗಣಪತಿ ಮಹೋತ್ಸವ ಭವ್ಯವಾಗಿ ಜರುಗಿತು.          ಈ ಸಂಭ್ರಮದಲ್ಲಿ ಬಳ್ಳಾರಿಯ ಹಂದ್ಯಾಳ್…

The post ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಮಿಂಚಿದ ಬಳ್ಳಾರಿ ‌ರಂಗ ಪ್ರತಿಭೆಗಳು: ‘ದನ ಕಾಯೋರ ದೊಡ್ಡಾಟ’ ನೋಡಿ ನಕ್ಕು ನಲಿದ ಪ್ರೇಕ್ಷಕರು! appeared first on Karnataka Kahale.

]]>

ಚಿತ್ರದುರ್ಗ, ಸೆ.3: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸೂಫಿ ಸಂತರ ಭಾವೈಕ್ಯತೆಯ ನಾಡು ನಾಯಕನಹಟ್ಟಿ ಗ್ರಾಮದ ಬಿಳೆಕಲ್ಲು ಗೆಳೆಯರ ಬಳಗದ ವತಿಯಿಂದ 33ನೇ ವರ್ಷದ ಶಕ್ತಿ ಗಣಪತಿ ಮಹೋತ್ಸವ ಭವ್ಯವಾಗಿ ಜರುಗಿತು.          ಈ ಸಂಭ್ರಮದಲ್ಲಿ ಬಳ್ಳಾರಿಯ ಹಂದ್ಯಾಳ್ ಶ್ರೀ ಮಹಾದೇವ ತಾತ  ಕಲಾ ಸಂಘದ ಕಲಾವಿದರು ಪ್ರದರ್ಶಿಸಿದ   ಕೀರ್ತಿಶೇಷ ಶಂಕರ ನಾಯ್ಡು ಅವರ ಕೃತಿ ‘ದನ ಕಾಯುವರ ದೊಡ್ಡಟ’ ಹಾಸ್ಯ ನಾಟಕ ನೆರೆದಿದ್ದ ನೂರಾರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.

ಅಕ್ಷರಜ್ಞಾನದ ಮಹತ್ವವನ್ನು ಮನರಂಜನಾತ್ಮಕ ರೀತಿಯಲ್ಲಿ ತಲುಪಿಸಿದ ಈ ನಾಟಕ, ಸಾಕ್ಷರತಾ ಸಂದೇಶವನ್ನು ಜನಮನದಲ್ಲಿ ಬಿತ್ತುವಲ್ಲಿಯೂ ಯಶ ಕಂಡಿತು.

ಪಾತ್ರ ನಿರ್ವಹಣೆ: ಸಾರಥಿಯಾಗಿ ಹಿರಿಯ ರಂಕಲಾವಿದ ಪುರುಷೋತ್ತಮ ಹಂದ್ಯಾಳು,  ಗಣಪತಿಯಾಗಿ ದಾನಯ್ಯಸ್ವಾಮಿ, ದುರ್ಯೋಧನನಾಗಿ ಅಂಬರೀಶ್ ಹಚ್ಚೊಳ್ಳಿ, ದುಶ್ಯಾಸನನಾಗಿ ಪಾರ್ವತೀಶ ಗೆಣಿಕೆಹಾಳ್, ದ್ರೌಪದಿ ಮತ್ತು ನೃತ್ಯಗಾರ್ತಿಯಾಗಿ ಮೌನೇಶ್ ಕಲ್ಲಳ್ಳಿ, ನಕುಲ-ಸಹದೇವರಾಗಿ ಗುರು ಮೋಕ ಮತ್ತು ಲಿಂಗಪ್ಪ ಹಂದ್ಯಾಳು, ಕೃಷ್ಣನಾಗಿ ಕುಮಾರಗೌಡ ಅಮರಪುರ, ಕಥಾಸಂಚಾಲಕರಾಗಿ ಸುಂಕಣ್ಣ ಹೊಸಯರಗುಡಿ .
ರುದ್ರಮುನಿ ಸ್ವಾಮಿ ಪ್ರೇಕ್ಷಕರನ್ನು ರಂಜಿಸಿದರು.


🎶 ಸಂಗೀತ ಸಾಥ್: ಎರ್ರಿಸ್ವಾಮಿ ಆಚಾರ್ ಅವರು ಹಾರ್ಮೋನಿಯಂನಲ್ಲಿ, ಗಾದಿಲಿಂಗಪ್ಪ ಅಮರಾಪುರ ತಬಲಾದಲ್ಲಿ ಕಲಾವಿದರಿಗೆ ಸಂಗೀತಸಾಥ್ ನೀಡಿದರು.
ಜನಸಂದಣಿಯಲ್ಲಿ ನಡೆದ ಈ ನಾಟಕವು ಮನರಂಜನೆ ಮತ್ತು ಸಂದೇಶ ಎರಡನ್ನೂ ಒಟ್ಟಿಗೆ ನೀಡುವಲ್ಲಿ ಯಶಸ್ವಿಯಾಯಿತು.

The post ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಮಿಂಚಿದ ಬಳ್ಳಾರಿ ‌ರಂಗ ಪ್ರತಿಭೆಗಳು: ‘ದನ ಕಾಯೋರ ದೊಡ್ಡಾಟ’ ನೋಡಿ ನಕ್ಕು ನಲಿದ ಪ್ರೇಕ್ಷಕರು! appeared first on Karnataka Kahale.

]]>
ಸಿರುಗುಪ್ಪದ ಕರೂರಿನಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದ ದನ ಕಾಯೋರ ದೊಡ್ಡಾಟ! https://www.karnatakakahale.com/news/20535 Sun, 31 Aug 2025 17:33:20 +0000 https://www.karnatakakahale.com/?p=20535 ಬಳ್ಳಾರಿ: ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದ ರೆಡ್ಡಿ ಪೇಟೆಯ ಮಠದ ಆವರಣದಲ್ಲಿ ಶ್ರೀ‌ವಿನಾಯಕ ಮಿತ್ರ ಮಂಡಳಿಯಿಂದ ಆಯೋಜಿಸಿದ್ದ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಹಾದೇವ ತಾತ ಕಲಾಸಂಘ ಹಂದ್ಯಾಳು ತಂಡದಿಂದ ದಿ. ಶಂಕರನಾಯ್ಡು ರಚನೆಯ, ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದಲ್ಲಿ ಅಭಿನಯಿಸಿದ…

The post ಸಿರುಗುಪ್ಪದ ಕರೂರಿನಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದ ದನ ಕಾಯೋರ ದೊಡ್ಡಾಟ! appeared first on Karnataka Kahale.

]]>

ಬಳ್ಳಾರಿ: ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದ ರೆಡ್ಡಿ ಪೇಟೆಯ ಮಠದ ಆವರಣದಲ್ಲಿ ಶ್ರೀ‌ವಿನಾಯಕ ಮಿತ್ರ ಮಂಡಳಿಯಿಂದ ಆಯೋಜಿಸಿದ್ದ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಹಾದೇವ ತಾತ ಕಲಾಸಂಘ ಹಂದ್ಯಾಳು ತಂಡದಿಂದ ದಿ. ಶಂಕರನಾಯ್ಡು ರಚನೆಯ, ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದಲ್ಲಿ ಅಭಿನಯಿಸಿದ ದನಕಾಯೋರ ದೊಡ್ಡಾಟ ಹಾಸ್ಯಭರಿತ ನಾಟಕ ನೆರೆದಿದ್ದ ಪ್ರೇಕ್ಷಕರ ಮನ ಸೂರೆಗೊಂಡಿತು.
ಈ ನಾಟಕದಿಂದ ಪ್ರತಿಯೊಬ್ಬರು ಅಕ್ಷರ ಕಲಿಯಬೇಕು ಎಂಬ ಸಂದೇಶವನ್ನು ಜನರಲ್ಲಿ ಮೂಡಿಸಿತು.
ಅಕ್ಷರ ಕಲಿಯಬೇಕು ಎಂಬ ಅರಿವು ಮೂಡಿಸಿದ್ದಲ್ಲದೆ, ಈ ನಾಟಕವನ್ನು ವೀಕ್ಷಿಸಲು ನೆರೆದಿದ್ದ ಜನಸ್ತೋಮವನ್ನು ನಗೆಗಡಲಲ್ಲಿ ತೇಲಿಸಿತು.


ಸಾರಥಿ ಪಾತ್ರದಲ್ಲಿ  ಪುರುಷೋತ್ತಮ ಹಂದ್ಯಾಳ್,  ಗೌಡನ‌ ಪಾತ್ರದಲ್ಲಿ ಬಿ.ನಾಗರಾಜ ರೆಡ್ಡಿ ಕರೂರು, ಗಣಪತಿ ಪಾತ್ರದಲ್ಲಿ ಕಪ್ಪಗಲ್ಲು ಚಂದ್ರಶೇಖರ ಆಚಾರ್, ದುರ್ಯೋಧನ ಪಾತ್ರದಲ್ಲಿ ಅಂಬರೀಶ್ ಹಚ್ಚೊಳ್ಳಿ, ದುಶ್ಯಾಸನ ಪಾತ್ರದಲ್ಲಿ ಪಾರ್ವತೀಶ ಗೆಣಿಕೆಹಾಳ್, ದ್ರೌಪದಿ, ನೃತ್ಯ ಗಾರ್ತಿ ಪಾತ್ರದಲ್ಲಿ ಮೌನೇಶ್ ಕಲ್ಲಳ್ಳಿ, ಭೀಮಸೇನ ಪಾತ್ರದಲ್ಲಿ ಹೊಸಯರಗುಡಿ ಸುಂಕಣ್ಣ, ನಕುಲ, ಸಹದೇವ ಪಾತ್ರದಲ್ಲಿ ಯರ್ರಿಸ್ವಾಮಿ ಆಚಾರ್, ಲಿಂಗಪ್ಪ ಹಂದ್ಯಾಳು, ಕೃಷ್ಣನ ಪಾತ್ರದಲ್ಲಿ ಕುಮಾರಗೌಡ ಅಭಿನಯಿಸಿದರು.
ಎರ್ರಿಸ್ವಾಮಿ ಆಚಾರ್ ಹಾರ್ಮೋನಿಯಂ, ಗಾದಿಲಿಂಗಪ್ಪ ಅಮರಾಪುರ ತಬಲಾ ಸಾಥ್ ನೀಡಿದರು.

The post ಸಿರುಗುಪ್ಪದ ಕರೂರಿನಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದ ದನ ಕಾಯೋರ ದೊಡ್ಡಾಟ! appeared first on Karnataka Kahale.

]]>
ಬಳ್ಳಾರಿಯ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿಯಿಂದ ‘ಸೂರ್ಯಪ್ರಭ ವಾಹನದ ಮೇಲೆ ಗಣೇಶ’ ಪ್ರತಿಷ್ಠಾಪನೆ -ಮಂಡಳಿ ಅಧ್ಯಕ್ಷ ಜಿ.ಆರ್.ಆರ್ ಸುನೀಲ್ https://www.karnatakakahale.com/news/13661 Sat, 16 Sep 2023 15:31:45 +0000 https://www.karnatakakahale.com/?p=13661 ಬಳ್ಳಾರಿ, ಸೆ.16: ನಗರದ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿ ಪ್ರತಿವರ್ಷದಂತೆ ಪ್ರಸಕ್ತ ವರ್ಷವೂ ಡಾ.ರಾಜಕುಮಾರ್ ರಸ್ತೆ (ಅನಂತಪುರ ರಸ್ತೆ)ಯ ಎಂ.ಜಿ.ಎದುರುಗಡೆ ಸಂಭ್ರಮ, ಸಡಗರದಿಂದ ಗಣೇಶೋತ್ಸವ ಆಚರಿಸಲು ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದೆ ಎಂದು ಮಂಡಳಿ ಅಧ್ಯಕ್ಷ .ಆರ್.ಆರ್ ಸುನೀಲ್ ಅವರು ಹೇಳಿದರು. …

The post ಬಳ್ಳಾರಿಯ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿಯಿಂದ ‘ಸೂರ್ಯಪ್ರಭ ವಾಹನದ ಮೇಲೆ ಗಣೇಶ’ ಪ್ರತಿಷ್ಠಾಪನೆ -ಮಂಡಳಿ ಅಧ್ಯಕ್ಷ ಜಿ.ಆರ್.ಆರ್ ಸುನೀಲ್ appeared first on Karnataka Kahale.

]]>
ಬಳ್ಳಾರಿ, ಸೆ.16: ನಗರದ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿ ಪ್ರತಿವರ್ಷದಂತೆ ಪ್ರಸಕ್ತ ವರ್ಷವೂ ಡಾ.ರಾಜಕುಮಾರ್ ರಸ್ತೆ (ಅನಂತಪುರ ರಸ್ತೆ)ಯ ಎಂ.ಜಿ.ಎದುರುಗಡೆ ಸಂಭ್ರಮ, ಸಡಗರದಿಂದ ಗಣೇಶೋತ್ಸವ ಆಚರಿಸಲು ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದೆ ಎಂದು ಮಂಡಳಿ ಅಧ್ಯಕ್ಷ .ಆರ್.ಆರ್ ಸುನೀಲ್ ಅವರು ಹೇಳಿದರು.                            ಅವರು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ೨೪ ವರ್ಷಗಳಿಂದ ನಮ್ಮ ಮಿತ್ರ ಮಂಡಳಿ ಪ್ರತಿ ವರ್ಷವೂ ಗಣೇಶೋತ್ಸವ ಆಚರಣೆಯನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಲ್ಲದೇ ಒಂದೊಂದು ವರ್ಷ ಒಂದೊಂದು ವಿಶೇಷತೆಯ ಗಣೇಶನನ್ನು ಪ್ರತಿಷ್ಠಾಪನೆ ಮಾಡಿಕೊಂಡು ಬಂದಿದ್ದೇವೆ. ಕಳೆದ ವರ್ಷ ಆದಿಯೋಗಿಯ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದೇವು.ಈ ವರ್ಷ ನವಗ್ರಹ ಸಮೇತ ಸೂರ್ಯಪ್ರಭ ವಾಹನದ ಮೇಲೆ ಗಣೇಶ ಇರುವಂತಹ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತೀದ್ದೇವೆ ಎಂದು ತಿಳಿಸಿದರು.
ಸೂರ್ಯಪ್ರಭ ವಾಹನವು ತುಂಬಾ ಶಕ್ತಿದಾಯಕವಾಗಿದ್ದು ಸೂರ್ಯಪ್ರಭ ವಾಹನದಲ್ಲಿ ನಮ್ಮ ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ನಗರದ ಜನತೆಗೆ ವಿಶೇಷ ಗಣಪ ದರ್ಶನ ನೀಡಲು ಸಜ್ಜಾಗಿದ್ದಾನೆ. ನವಗ್ರಹ ಸಮೇತ ಗಣೇಶ ನಮ್ಮನ್ನೆಲ್ಲಾ ಹರಸಲಿದ್ದಾನೆ ಎಂದರು.
ಪ್ರತಿವರ್ಷದಂತೆ ಈ ಬಾರಿಯೂ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಗಣೇಶನ ದರ್ಶನಕ್ಕೆ ನಗರದ ಗಣ್ಯರು ಆಗಮಿಸಲಿದ್ದಾರೆ. ಬರುವ ಭಕ್ತರಿಗೆ ಸಮಸ್ಯೆ ಆಗದಂತೆ ಸರತಿ ಸಾಲಿನಲ್ಲಿ‌ ಬಂದು ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದೆ.ನಮ್ಮ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿ ಸದಸ್ಯರು ಹಾಗೂ ಸ್ವಯಂ ಸೇವಕರು ಭಕ್ತರ ಸೇವೆಗೆ ಸಜ್ಜಾಗಿದ್ದಾರೆ ಎಂದು ಹೇಳಿದರು.
ಪ್ರತಿವರ್ಷ ವಿಶಿಷ್ಟತೆಯ ಗಣೇಶನನ್ನು ಪ್ರತಿಷ್ಠಾಪನೆ ಮಾಡುವಲ್ಲಿ ನಮ್ಮ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿ ಹೆಸರುವಾಸಿಯಾಗಿದೆ. ಈ ವರ್ಷ ಕೂಡಾ ಜನರ ಮನಗೆಲ್ಲಲು ಪ್ರಯತ್ನಿಸಿದ್ದೇವೆ ಎಂದು ಸುನೀಲ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸುನಿಲ್ ಕುಮಾರ್, ಪಾಲಿಕೆ ಸದಸ್ಯ ನಂದೀಶ್, ನೇಕಾರ್ ನಾಗರಾಜ್, ಸುಬ್ಬಾರಾವ್ , ರಾಘವ್, ಲಕ್ಷ್ಮಣ, ಆದೀಶೇಷ, ಎಂಆರ್ ಕೆ ರಾಜೇಶ್, ವಂಡ್ರೀ, ಮಾಜಿ ಬೂಡಾ ಅಧ್ಯಕ್ಷ ಮಾರುತಿ ಪ್ರಸಾದ್, ಬಿಲ್ವಾ ರಾಜೇಶ್, ಡಾ.ರವಿ, ಮಧುಸೂಧನ ರೆಡ್ಡಿ, ರವಿ ರೆಡ್ಡಿ, ವೇಣುಗೋಪಾಲ ಗುಪ್ತಾ, ತಲ್ಲಂ ಕಿಶೋರ್, ರಾಖಿ, ದೀಪಕ್ ಹಾಗೂ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿ ಸದಸ್ಯರು ಇದ್ದರು.
—–

The post ಬಳ್ಳಾರಿಯ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿಯಿಂದ ‘ಸೂರ್ಯಪ್ರಭ ವಾಹನದ ಮೇಲೆ ಗಣೇಶ’ ಪ್ರತಿಷ್ಠಾಪನೆ -ಮಂಡಳಿ ಅಧ್ಯಕ್ಷ ಜಿ.ಆರ್.ಆರ್ ಸುನೀಲ್ appeared first on Karnataka Kahale.

]]>