Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಚಿತ್ರದುರ್ಗ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Sat, 21 Mar 2026 11:55:07 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಚಿತ್ರದುರ್ಗ – Karnataka Kahale https://www.karnatakakahale.com 32 32 ನಾಟಕ ಸಮಾಜದ ಪ್ರತಿಬಿಂಬ -ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ https://www.karnatakakahale.com/news/22587 Sat, 21 Mar 2026 11:55:07 +0000 https://www.karnatakakahale.com/?p=22587   ಭರಮಸಾಗರ(ಚಿತ್ರದುರ್ಗ), ಮಾ. 21:  ಸಮಾಜದ ಪ್ರತಿಬಿಂಬವಾಗಿರುವ ನಾಟಕ ಸಾಹಿತ್ಯ, ಸಂಗೀತ ಮತ್ತು ಅಭಿನಯದ ಸಂಗಮ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ನಿರ್ದೇಶಕ, ಸಾಹಿತಿ ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಅಭಿಪ್ರಾಯಪಟ್ಟರು. ಪಟ್ಟಣ ಸಮೀಪದ ನೆಲ್ಲಿಕಟ್ಟೆ ಗ್ರಾಮದಲ್ಲಿ…

The post ನಾಟಕ ಸಮಾಜದ ಪ್ರತಿಬಿಂಬ -ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ appeared first on Karnataka Kahale.

]]>
 

ಭರಮಸಾಗರ(ಚಿತ್ರದುರ್ಗ), ಮಾ. 21:  ಸಮಾಜದ ಪ್ರತಿಬಿಂಬವಾಗಿರುವ ನಾಟಕ ಸಾಹಿತ್ಯ, ಸಂಗೀತ ಮತ್ತು ಅಭಿನಯದ ಸಂಗಮ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ನಿರ್ದೇಶಕ, ಸಾಹಿತಿ ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಅಭಿಪ್ರಾಯಪಟ್ಟರು.
ಪಟ್ಟಣ ಸಮೀಪದ ನೆಲ್ಲಿಕಟ್ಟೆ ಗ್ರಾಮದಲ್ಲಿ ಏರ್ಪಡಿಸಿದ್ದ ‘ಪ್ರೀತಿಯ ಹೃದಯಕ್ಕೆ ಪ್ರೇಮದ ಸಿಡಿಲು’ ಎಂಬ ಸಾಮಾಜಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೆಲ್ಲಿಕಟ್ಟೆ ಗ್ರಾಮದ ಯುವಕರು ನಾಟಕದ ಪಾತ್ರಧಾರಿಗಳು ಆಗಿ ಅಭಿನಯಿಸಿರುವುದಕ್ಕೆ ಅಭಿನಂದನೆಗಳು ಸಲ್ಲಿಸಿ ನಾಟಕಗಳನ್ನು ಅಭಿನಯಿಸುವ ಮೂಲಕ ಗ್ರಾಮದಲ್ಲಿ ಸಾಮರಸ್ಯ ಮತ್ತು ಸೌಹಾರ್ದತೆ ಕಾಪಾಡಲು ಸಾಧ್ಯ ಎಂದು ಹೇಳಿದರು.
ನೆಲ್ಲಿಕಟ್ಟೆ ಗ್ರಾಮ ಕಲೆ ಸಾಹಿತ್ಯ ಸಂಗೀತದ ತಾಣ. ಈ ಊರಿಗೆ ಅಪೂರ್ವವಾದ ಇತಿಹಾಸವಿದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಜಿ.ಶೇಖರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್, ನಿರಂಜನ ಮೂರ್ತಿ, ಜಯಪ್ಪ, ಟಿ. ಎಸ್ ಗುರುಮೂರ್ತಿ, ರುದ್ರಣ್ಣ, ಚೌಡಪ್ಪ ಮೊದಲದವರು ಉಪಸ್ಥಿತರಿದ್ದರು.
ಡಾ ಸಿ ಎಂ.ನಾಗವೇಣಿ ನಿರೂಪಿಸಿದರು. ನಾಟಕದ ವ್ಯವಸ್ಥಾಪಕ ಕೆ.ಟಿ. ನಾಗರಾಜ್ ಸ್ವಾಗತಿಸಿದರು . ಶರಣಪ್ಪ ವಂದಿಸಿದರು.
ನೆಲಗತಲಹಟ್ಟಿ ದೊಡ್ಡ ಬೋರಯ್ಯ ಮತ್ತು ಸಂಗಡಿಗರು ವಾದ್ಯ ವೃಂದ ನಿರ್ವಹಿಸಿದರು.

The post ನಾಟಕ ಸಮಾಜದ ಪ್ರತಿಬಿಂಬ -ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ appeared first on Karnataka Kahale.

]]>
ನಂಬಿಕೆ ಆಧಾರಿತ ಭಕ್ತಿಯಲ್ಲಿ ಶಕ್ತಿ ಅಡಗಿದೆ -ಡಾ.ಕರಿಬಸವರಾಜೇಂದ್ರ ಸ್ವಾಮೀಜಿ https://www.karnatakakahale.com/news/22367 Thu, 19 Feb 2026 12:53:01 +0000 https://www.karnatakakahale.com/?p=22367 ಬೆಳಗಟ್ಟ(ಚಿತ್ರದುರ್ಗ ಜಿ.), ಫೆ.19:  ಭಕ್ತಿ ನಂಬಿಕೆ ಆಧಾರಿಸಿದೆ. ಭಗವಂತನ ದರ್ಶನದ ಸಾಧನ ಭಕ್ತಿ. ಈ ಭಕ್ತಿಯಲ್ಲಿ ಶಕ್ತಿ ಅಡಗಿದೆ ಎಂದು ಆಂಧ್ರಪ್ರದೇಶದ ಉರವಕೊಂಡ ಜಗದ್ಗುರು ಡಾ. ಕರಿಬಸವೇಶ್ವರಾಜೇಂದ್ರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಅವರು ಚಿತ್ರದುರ್ಗ ಸಮೀಪದ ಬೆಳಗಟ್ಟದಲ್ಲಿ ಏರ್ಪಡಿಸಿದ್ದ 25ನೇ ವರ್ಷದ…

The post ನಂಬಿಕೆ ಆಧಾರಿತ ಭಕ್ತಿಯಲ್ಲಿ ಶಕ್ತಿ ಅಡಗಿದೆ -ಡಾ.ಕರಿಬಸವರಾಜೇಂದ್ರ ಸ್ವಾಮೀಜಿ appeared first on Karnataka Kahale.

]]>
ಬೆಳಗಟ್ಟ(ಚಿತ್ರದುರ್ಗ ಜಿ.), ಫೆ.19:  ಭಕ್ತಿ ನಂಬಿಕೆ ಆಧಾರಿಸಿದೆ. ಭಗವಂತನ ದರ್ಶನದ ಸಾಧನ ಭಕ್ತಿ. ಈ ಭಕ್ತಿಯಲ್ಲಿ ಶಕ್ತಿ ಅಡಗಿದೆ ಎಂದು ಆಂಧ್ರಪ್ರದೇಶದ ಉರವಕೊಂಡ ಜಗದ್ಗುರು ಡಾ. ಕರಿಬಸವೇಶ್ವರಾಜೇಂದ್ರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.

ಅವರು ಚಿತ್ರದುರ್ಗ ಸಮೀಪದ ಬೆಳಗಟ್ಟದಲ್ಲಿ ಏರ್ಪಡಿಸಿದ್ದ 25ನೇ ವರ್ಷದ ಮಹಾರಥೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.
ಆಶೀರ್ವಚನ ನೀಡಿದ ಶಿವಾಲಿಂಗಾನಂದಸ್ವಾಮಿಗಳು ಮಹಾ ಭಕ್ತೆ ಮಹದೇವಮ್ಮ ಅವರು ಆಧ್ಯಾತ್ಮ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿರುವ ಸಾಧಕರು. ವ್ಯಕ್ತಿ ಮತ್ತು ಸಮಾಜದ ಸುಧಾರಣೆಗೆ ಸಂಪೂರ್ಣ ಸಮರ್ಪಿಸಿಕೊಂಡವರು. ಮಹದೇವಮ್ಮ ಬದುಕು ಆದರ್ಶ ಎಂದರು.                       ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಘುಮೂರ್ತಿ ಅವರು ಮಹದೇವಮ್ಮ ಅವರ ಸಾಧನೆಯ ಮಹತ್ವವನ್ನು ತಿಳಿಸಿದರು.                                 ಪೂಜ್ಯ ಶ್ರೀ ಮಹದೇವಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು.                                                      ಡಾ ನಾಗೇಂದ್ರ ಆಚಾರ್ಯ, ಸಾಹಿತಿ ಯುಗಧರ್ಮ ರಾಮಣ್ಣ , ಕುವೆಂಪು ವಿವಿ ಪ್ರಾಧ್ಯಾಪಕ ಡಾ. ನೆಲ್ಲಿಕಟ್ಟೆ ಸಿದ್ದೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಡಾ ಪುರುಷೋತ್ತಮ ಪ್ರಾರ್ಥಿಸಿದರು. ಟಿ. ನಾಗೇಶ್ ಸ್ವಾಗತಿಸಿದರು. ಸೋಮೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

The post ನಂಬಿಕೆ ಆಧಾರಿತ ಭಕ್ತಿಯಲ್ಲಿ ಶಕ್ತಿ ಅಡಗಿದೆ -ಡಾ.ಕರಿಬಸವರಾಜೇಂದ್ರ ಸ್ವಾಮೀಜಿ appeared first on Karnataka Kahale.

]]>
ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಮಿಂಚಿದ ಬಳ್ಳಾರಿ ‌ರಂಗ ಪ್ರತಿಭೆಗಳು: ‘ದನ ಕಾಯೋರ ದೊಡ್ಡಾಟ’ ನೋಡಿ ನಕ್ಕು ನಲಿದ ಪ್ರೇಕ್ಷಕರು! https://www.karnatakakahale.com/news/20546 Wed, 03 Sep 2025 08:36:41 +0000 https://www.karnatakakahale.com/?p=20546 ಚಿತ್ರದುರ್ಗ, ಸೆ.3: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸೂಫಿ ಸಂತರ ಭಾವೈಕ್ಯತೆಯ ನಾಡು ನಾಯಕನಹಟ್ಟಿ ಗ್ರಾಮದ ಬಿಳೆಕಲ್ಲು ಗೆಳೆಯರ ಬಳಗದ ವತಿಯಿಂದ 33ನೇ ವರ್ಷದ ಶಕ್ತಿ ಗಣಪತಿ ಮಹೋತ್ಸವ ಭವ್ಯವಾಗಿ ಜರುಗಿತು.          ಈ ಸಂಭ್ರಮದಲ್ಲಿ ಬಳ್ಳಾರಿಯ ಹಂದ್ಯಾಳ್…

The post ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಮಿಂಚಿದ ಬಳ್ಳಾರಿ ‌ರಂಗ ಪ್ರತಿಭೆಗಳು: ‘ದನ ಕಾಯೋರ ದೊಡ್ಡಾಟ’ ನೋಡಿ ನಕ್ಕು ನಲಿದ ಪ್ರೇಕ್ಷಕರು! appeared first on Karnataka Kahale.

]]>

ಚಿತ್ರದುರ್ಗ, ಸೆ.3: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸೂಫಿ ಸಂತರ ಭಾವೈಕ್ಯತೆಯ ನಾಡು ನಾಯಕನಹಟ್ಟಿ ಗ್ರಾಮದ ಬಿಳೆಕಲ್ಲು ಗೆಳೆಯರ ಬಳಗದ ವತಿಯಿಂದ 33ನೇ ವರ್ಷದ ಶಕ್ತಿ ಗಣಪತಿ ಮಹೋತ್ಸವ ಭವ್ಯವಾಗಿ ಜರುಗಿತು.          ಈ ಸಂಭ್ರಮದಲ್ಲಿ ಬಳ್ಳಾರಿಯ ಹಂದ್ಯಾಳ್ ಶ್ರೀ ಮಹಾದೇವ ತಾತ  ಕಲಾ ಸಂಘದ ಕಲಾವಿದರು ಪ್ರದರ್ಶಿಸಿದ   ಕೀರ್ತಿಶೇಷ ಶಂಕರ ನಾಯ್ಡು ಅವರ ಕೃತಿ ‘ದನ ಕಾಯುವರ ದೊಡ್ಡಟ’ ಹಾಸ್ಯ ನಾಟಕ ನೆರೆದಿದ್ದ ನೂರಾರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.

ಅಕ್ಷರಜ್ಞಾನದ ಮಹತ್ವವನ್ನು ಮನರಂಜನಾತ್ಮಕ ರೀತಿಯಲ್ಲಿ ತಲುಪಿಸಿದ ಈ ನಾಟಕ, ಸಾಕ್ಷರತಾ ಸಂದೇಶವನ್ನು ಜನಮನದಲ್ಲಿ ಬಿತ್ತುವಲ್ಲಿಯೂ ಯಶ ಕಂಡಿತು.

ಪಾತ್ರ ನಿರ್ವಹಣೆ: ಸಾರಥಿಯಾಗಿ ಹಿರಿಯ ರಂಕಲಾವಿದ ಪುರುಷೋತ್ತಮ ಹಂದ್ಯಾಳು,  ಗಣಪತಿಯಾಗಿ ದಾನಯ್ಯಸ್ವಾಮಿ, ದುರ್ಯೋಧನನಾಗಿ ಅಂಬರೀಶ್ ಹಚ್ಚೊಳ್ಳಿ, ದುಶ್ಯಾಸನನಾಗಿ ಪಾರ್ವತೀಶ ಗೆಣಿಕೆಹಾಳ್, ದ್ರೌಪದಿ ಮತ್ತು ನೃತ್ಯಗಾರ್ತಿಯಾಗಿ ಮೌನೇಶ್ ಕಲ್ಲಳ್ಳಿ, ನಕುಲ-ಸಹದೇವರಾಗಿ ಗುರು ಮೋಕ ಮತ್ತು ಲಿಂಗಪ್ಪ ಹಂದ್ಯಾಳು, ಕೃಷ್ಣನಾಗಿ ಕುಮಾರಗೌಡ ಅಮರಪುರ, ಕಥಾಸಂಚಾಲಕರಾಗಿ ಸುಂಕಣ್ಣ ಹೊಸಯರಗುಡಿ .
ರುದ್ರಮುನಿ ಸ್ವಾಮಿ ಪ್ರೇಕ್ಷಕರನ್ನು ರಂಜಿಸಿದರು.


🎶 ಸಂಗೀತ ಸಾಥ್: ಎರ್ರಿಸ್ವಾಮಿ ಆಚಾರ್ ಅವರು ಹಾರ್ಮೋನಿಯಂನಲ್ಲಿ, ಗಾದಿಲಿಂಗಪ್ಪ ಅಮರಾಪುರ ತಬಲಾದಲ್ಲಿ ಕಲಾವಿದರಿಗೆ ಸಂಗೀತಸಾಥ್ ನೀಡಿದರು.
ಜನಸಂದಣಿಯಲ್ಲಿ ನಡೆದ ಈ ನಾಟಕವು ಮನರಂಜನೆ ಮತ್ತು ಸಂದೇಶ ಎರಡನ್ನೂ ಒಟ್ಟಿಗೆ ನೀಡುವಲ್ಲಿ ಯಶಸ್ವಿಯಾಯಿತು.

The post ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಮಿಂಚಿದ ಬಳ್ಳಾರಿ ‌ರಂಗ ಪ್ರತಿಭೆಗಳು: ‘ದನ ಕಾಯೋರ ದೊಡ್ಡಾಟ’ ನೋಡಿ ನಕ್ಕು ನಲಿದ ಪ್ರೇಕ್ಷಕರು! appeared first on Karnataka Kahale.

]]>
ಚಿತ್ರದುರ್ಗ ಜಿ.ಪಂ ನೂತನ ಸಿಇಒ ಆಗಿ ಡಾ.ಆಕಾಶ್ ಅಧಿಕಾರ ಸ್ವೀಕಾರ https://www.karnatakakahale.com/news/20262 Wed, 23 Jul 2025 17:51:34 +0000 https://www.karnatakakahale.com/?p=20262 ಚಿತ್ರದುರ್ಗ, ಜು.23: ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಎಸ್.ಆಕಾಶ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಜಿ.ಪಂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಜೆ.ಸೋಮಶೇಖರ್ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿದ್ದು, ಡಾ.ಎಸ್.ಆಕಾಶ್ ಅವರನ್ನು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಳಿಸಿದೆ.…

The post ಚಿತ್ರದುರ್ಗ ಜಿ.ಪಂ ನೂತನ ಸಿಇಒ ಆಗಿ ಡಾ.ಆಕಾಶ್ ಅಧಿಕಾರ ಸ್ವೀಕಾರ appeared first on Karnataka Kahale.

]]>
ಚಿತ್ರದುರ್ಗ, ಜು.23: ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಎಸ್.ಆಕಾಶ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

ಜಿ.ಪಂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಜೆ.ಸೋಮಶೇಖರ್ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿದ್ದು, ಡಾ.ಎಸ್.ಆಕಾಶ್ ಅವರನ್ನು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಳಿಸಿದೆ. ಡಾ.ಎಸ್.ಆಕಾಶ್ ಅವರು 2019ನೇ ಸಾಲಿನ ಕರ್ನಾಟಕ ಕೇಡರ್‍ನ ಐಎಎಸ್ ಅಧಿಕಾರಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಅವರಿಗೆ ನಿರ್ಗಮಿತ ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಅವರು ಹೂಗುಚ್ಛ ನೀಡಿ ಶುಭ ಕೋರಿದರು.
—–

The post ಚಿತ್ರದುರ್ಗ ಜಿ.ಪಂ ನೂತನ ಸಿಇಒ ಆಗಿ ಡಾ.ಆಕಾಶ್ ಅಧಿಕಾರ ಸ್ವೀಕಾರ appeared first on Karnataka Kahale.

]]>
ಚಿತ್ರದುರ್ಗ: “ಮತದಾನಕ್ಕಿಂತ ಇನ್ನೋಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಘೋಷವಾಕ್ಯದೊಂದಿಗೆ ಜ.25ರಂದು ರಾಷ್ಟ್ರೀಯ ಮತದಾರರ ದಿನ https://www.karnatakakahale.com/news/18386 Thu, 09 Jan 2025 13:10:06 +0000 https://www.karnatakakahale.com/?p=18386 ಚಿತ್ರದುರ್ಗ, ಜ.9:‌ ಇದೇ ಜ.25ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುವುದು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ 9.30ಕ್ಕೆ ನಗರದ ಒನಕೆ ಓಬವ್ವ ವೃತ್ತದಿಂದ ತರಾಸು ರಂಗಮಂದಿರದವರೆಗೂ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.…

The post ಚಿತ್ರದುರ್ಗ: “ಮತದಾನಕ್ಕಿಂತ ಇನ್ನೋಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಘೋಷವಾಕ್ಯದೊಂದಿಗೆ ಜ.25ರಂದು ರಾಷ್ಟ್ರೀಯ ಮತದಾರರ ದಿನ appeared first on Karnataka Kahale.

]]>
ಚಿತ್ರದುರ್ಗ, ಜ.9:‌ ಇದೇ ಜ.25ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುವುದು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ 9.30ಕ್ಕೆ ನಗರದ ಒನಕೆ ಓಬವ್ವ ವೃತ್ತದಿಂದ ತರಾಸು ರಂಗಮಂದಿರದವರೆಗೂ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಈ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
“ಮತದಾನಕ್ಕಿಂತ ಇನ್ನೋಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದ್ದು, ನಗರದ ತರಾಸು ರಂಗಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿಯೂ ಪ್ರತಿಜ್ಞಾವಿಧಿ ಸ್ವೀಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

The post ಚಿತ್ರದುರ್ಗ: “ಮತದಾನಕ್ಕಿಂತ ಇನ್ನೋಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಘೋಷವಾಕ್ಯದೊಂದಿಗೆ ಜ.25ರಂದು ರಾಷ್ಟ್ರೀಯ ಮತದಾರರ ದಿನ appeared first on Karnataka Kahale.

]]>
ಭವರೋಗ ಗೆಲ್ಲುವ ಸಾಧನಗಳಲ್ಲೊಂದು ಭಜನೆ -ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ https://www.karnatakakahale.com/news/17810 Sat, 09 Nov 2024 15:41:02 +0000 https://www.karnatakakahale.com/?p=17810 ಚಿತ್ರದುರ್ಗ, ನ.9:  ತಾಲ್ಲೂಕಿನ ಭರಮಸಾಗರ ಹೋಬಳಿ ನವಗ್ರಾಮ ನೆಲ್ಲಿಕಟ್ಟೆಯಲ್ಲಿ ಮಾರಕ್ಕಮಾತೆ ಸಂಸ್ಥೆ ಶನಿವಾರ ಭಜನ ಕಾರ್ಯಕ್ರಮ ಏರ್ಪಡಿಸಿತ್ತು.                           ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್…

The post ಭವರೋಗ ಗೆಲ್ಲುವ ಸಾಧನಗಳಲ್ಲೊಂದು ಭಜನೆ -ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ appeared first on Karnataka Kahale.

]]>
ಚಿತ್ರದುರ್ಗ, ನ.9:  ತಾಲ್ಲೂಕಿನ ಭರಮಸಾಗರ ಹೋಬಳಿ ನವಗ್ರಾಮ ನೆಲ್ಲಿಕಟ್ಟೆಯಲ್ಲಿ ಮಾರಕ್ಕಮಾತೆ ಸಂಸ್ಥೆ ಶನಿವಾರ ಭಜನ ಕಾರ್ಯಕ್ರಮ ಏರ್ಪಡಿಸಿತ್ತು.                           ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು  ಮಾತಬಾಡಿ, ಭಜನೆ ಮಾಡುವುದರಿಂದ ಭಜನೆ ಕೇಳುವುದರಿಂದ ಮಾನಸಿಕ ಒತ್ತಡವಿರುವುದಿಲ್ಲ. ಭಜನೆ ಒಂದು ರೀತಿ ಬಿ.ಪಿ. ಟ್ಯಾಬ್ಲೆಟ್ ಇದ್ದಂತೆ ಎಂದು ಅಭಿಪ್ರಾಯ ಪಟ್ಟರು.                                        ಹಿಂದಿನ ದಿನಗಳಲ್ಲಿ ಪ್ರತಿ ಹಳ್ಳಿಗಳಲ್ಲಿ ಭಜನೆ ಮಾಡುತ್ತಿದ್ದರು. ಆದ್ದರಿಂದ ಅವರಿಗೆ ಬಿ.ಪಿ.ಆಗಲಿ, ಶುಗರ್ ಆಗಲಿ ಬರುತ್ತಿರಲಿಲ್ಲ. ಇವತ್ತು ರೋಗಗಳ ಗೂಡಾಗುತ್ತಿರುವುದು ನಮ್ಮಗಳ ಮಾನಸಿಕ ಒತ್ತಡವೇ ಕಾರಣವಾಗಿದೆ ಎಂದರು.                                ಭವರೋಗ ಗೆಲ್ಲುವ ಸಾಧನಗಳಲ್ಲೊಂದು ಭಜನೆ ಎಂದು ಹೇಳಿದರು.                                                        ಇದೇ ಸಂದರ್ಭದಲ್ಲಿ  ಸಂಸ್ಥೆಯ ಅಧ್ಯಕ್ಷ ಎಸ್.ಮಂಜಮ್ಮ ಮಂಜಣ್ಣ ಅವರು ಮಠದ ದ್ಯಾಮವ್ವನಹಳ್ಳಿ ಶ್ರೀ ಚೌಡೇಶ್ವರಿ ಭಜನಾ ಮಂಡಳಿ ಗೆ ಹಾರ್ಮೋನಿಯಂ ಕಾಣಿಕೆಯಾಗಿ ನೀಡಿದರು.                                                          ನಿತ್ಯ ಭಜನೆ ಮಾಡುವ ಮೂಲಕ ನಮ್ಮ ಊರುಗಳಲ್ಲಿ ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.                                                  ಖಜಾಂಚಿ ಸಿ.ಎಂ.ನೇತ್ರಾವತಿ ಸ್ವಾಗತಿಸಿದರು. ತಮ್ಮಣ್ಣ, ಕಂಪಳೇಶ್, ಬಸವರಾಜ್, ಮಹೇಶ್, ಓಬಳೇಶ್, ಏಕಾಂತ್ ಮೊದಲಾದವರು ಭಾಗವಹಿಸಿದ್ದರು.

The post ಭವರೋಗ ಗೆಲ್ಲುವ ಸಾಧನಗಳಲ್ಲೊಂದು ಭಜನೆ -ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ appeared first on Karnataka Kahale.

]]>
ಚಿತ್ರದುರ್ಗದ ನೆಲ್ಲಿಕಟ್ಟೆಯಲ್ಲಿ ಕನ್ನಡರಾಜ್ಯೋತ್ಸವ https://www.karnatakakahale.com/news/17724 Sat, 02 Nov 2024 12:14:13 +0000 https://www.karnatakakahale.com/?p=17724 ಚಿತ್ರದುರ್ಗ, ನ.2: ಕನ್ನಡ ನಾಡುನುಡಿಗೆ ಅಪೂರ್ವವಾದ ಇತಿಹಾಸ ಮತ್ತು ಪರಂಪರೆಯಿದೆ. ಕನ್ನಡನಾಡಿನ ಏಕೀಕರಣಕ್ಕಾಗಿ ದುಡಿದ ಮಹನೀಯರನ್ನೆಲ್ಲ ಸ್ಮರಿಸುತ್ತಾ, ಕನ್ನಡನಾಡುನುಡಿಯ ಪ್ರಗತಿಗಾಗಿ ನಮ್ಮದೇ ಆದ ಕಾಣ್ಕೆ ಕೊಡುವಂತಹ ಸೇವೆ ಮಾಡೋಣ ಎಂದು ಖ್ಯಾತ ಸಾಹಿತಿ ಯುಗಧರ್ಮರಾಮಣ್ಣ ಅವರು ಹೇಳಿದರು.       …

The post ಚಿತ್ರದುರ್ಗದ ನೆಲ್ಲಿಕಟ್ಟೆಯಲ್ಲಿ ಕನ್ನಡರಾಜ್ಯೋತ್ಸವ appeared first on Karnataka Kahale.

]]>

ಚಿತ್ರದುರ್ಗ, ನ.2: ಕನ್ನಡ ನಾಡುನುಡಿಗೆ ಅಪೂರ್ವವಾದ ಇತಿಹಾಸ ಮತ್ತು ಪರಂಪರೆಯಿದೆ. ಕನ್ನಡನಾಡಿನ ಏಕೀಕರಣಕ್ಕಾಗಿ ದುಡಿದ ಮಹನೀಯರನ್ನೆಲ್ಲ ಸ್ಮರಿಸುತ್ತಾ, ಕನ್ನಡನಾಡುನುಡಿಯ ಪ್ರಗತಿಗಾಗಿ ನಮ್ಮದೇ ಆದ ಕಾಣ್ಕೆ ಕೊಡುವಂತಹ ಸೇವೆ ಮಾಡೋಣ ಎಂದು ಖ್ಯಾತ ಸಾಹಿತಿ ಯುಗಧರ್ಮರಾಮಣ್ಣ ಅವರು ಹೇಳಿದರು.              ಅವರು ಜಿಲ್ಲೆಯ ನೆಲ್ಲಿಕಟ್ಟೆನವಗ್ರಾಮದಲ್ಲಿ ಮಾರಕ್ಕಮಾತೆ ಸಂಸ್ಥೆ ಏರ್ಪಡಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡನಾಡುನುಡಿ ಕುರಿತು ಉಪನ್ಯಾಸ ನೀಡಿದ ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಕನ್ನಡಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಸಾಮರಸ್ಯದ ನೆಲೆಯಿದೆ. ಸಾತ್ವಿಕತೆಯಸೆಲೆಯಿದೆ. ಕನ್ನಡ ನಾಡುನುಡಿಯ ಸಂವರ್ಧನೆಗೆ ಸರ್ವರ ಶ್ರಮಿಸಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಿದರಕೆರೆ ಶಕುಂತಲ ತಿಪ್ಪೇಸ್ವಾಮಿ ಅವರಿಗೆ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಬೆಂಗಳೂರು ಬೌರಿಂಗ್ ಆಸ್ಪತ್ರೆಯ ನವೀನ್ ಎಸ್.ಟಿ. ಅವರು ಭಾಗವಹಿಸಿದ್ದರು.

The post ಚಿತ್ರದುರ್ಗದ ನೆಲ್ಲಿಕಟ್ಟೆಯಲ್ಲಿ ಕನ್ನಡರಾಜ್ಯೋತ್ಸವ appeared first on Karnataka Kahale.

]]>
ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನ ಸಿರಿ ಪ್ರಶಸ್ತಿ ಪ್ರದಾನ: ಭಯದಿಂದ ಭಕ್ತಿ, ಜ್ಞಾನ,ವೈರಾಗ್ಯ -ಶತಾಯುಷಿ ಹೊನ್ನೂರುಸಾಬ್ https://www.karnatakakahale.com/news/17187 Sun, 08 Sep 2024 12:46:33 +0000 https://www.karnatakakahale.com/?p=17187 ಭರಮಸಾಗರ, ಸೆ.8: ಭಯದಿಂದ ಭಕ್ತಿ, ಜ್ಞಾನ,ವೈರಾಗ್ಯ ಎಂದು ಶತಾಯುಷಿ ಹೊನ್ನೂರುಸಾಬ್ ಅವರು‌ ಹೇಳಿದರು.                                         …

The post ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನ ಸಿರಿ ಪ್ರಶಸ್ತಿ ಪ್ರದಾನ: ಭಯದಿಂದ ಭಕ್ತಿ, ಜ್ಞಾನ,ವೈರಾಗ್ಯ -ಶತಾಯುಷಿ ಹೊನ್ನೂರುಸಾಬ್ appeared first on Karnataka Kahale.

]]>
ಭರಮಸಾಗರ, ಸೆ.8: ಭಯದಿಂದ ಭಕ್ತಿ, ಜ್ಞಾನ,ವೈರಾಗ್ಯ ಎಂದು ಶತಾಯುಷಿ ಹೊನ್ನೂರುಸಾಬ್ ಅವರು‌ ಹೇಳಿದರು.                                                  ಸಮೀಪದ ನವಗ್ರಾಮ ನೆಲ್ಲಿಕಟ್ಟೆಯಲ್ಲಿ ಏರ್ಪಡಿಸಿದ್ದ ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನಸಿರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತಾಡಿದರು.                                            ಭಯದಿಂದ ಭಕ್ತಿ ಉದಯಿಸುತ್ತದೆ. ಭಕ್ತಿಯಿಂದ ಜ್ಞಾನ ಸಿದ್ದಿಯಾಗುತ್ತದೆ. ಜ್ಞಾನದಿಂದ ವೈರಾಗ್ಯ ಉಂಟಾಗಿ ಈ ಬದುಕನ್ನು ಸಾರ್ಥಕಗೊಳಿಸುತ್ತದೆಂದು ತಿಳಿಸಿದರು.  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಹೆತ್ತಹೊತ್ತವರ ಸಾಕುವುದರೊಳಗೆ ಜೀವನ ತೃಪ್ತಿಯಿದೆ. ಅಂತಹ ಸಂತೃಪ್ತ ಜೀವನ ಮಾರಕ್ಕಮಾತೆಯ ಮಕ್ಕಳದು. ಆ ಮಹಾತಾಯಿಯ ಹೆಸರನ್ನು ಚಿರಾಯುವಾಗಿಸಲಾಗಿದೆ ಎಂದರು.                                                       ನೆಲ್ಲಿಕಟ್ಟೆ ಮಾರಕ್ಕಮಾತೆ ಸಂಗೀತಸಿರಿ ಪ್ರಶಸ್ತಿಯನ್ನು ಅನನ್ಯ ಕಲಾವಿದ ಬಸವರಾಜ್ ಹುಲ್ಲೆಹಾಳು ಅವರಿಗೆ ಪ್ರದಾನ ಮಾಡಿದ ಯುಗಧರ್ಮರಾಮಣ್ಣ ಅವರು ಈ ಲೋಕದ ಸಂಕಟಗಳಿಂದ ಪಾರಾಗಲು ಜನಸೇವೆಯು ಸರಿದಾರಿ ತೋರಿಸುವುದು ಎಂದರು.                ಬೆಳಗಟ್ಟದ ಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಅಮ್ಮಮಹದೇವಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು.                       ದಿವ್ಯಸಾನಿದ್ಯ ವಹಿಸಿದ್ದ ಶ್ರೀ ಬಸವನಾಗೀದೇವಶರಣರು ಆಶೀರ್ವಚನ ನೀಡಿದರು.                                ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.           ಮುಖ್ಯ ಅತಿಥಿ ಪ್ರಹ್ಲಾದ್ ಜೆ.ನಾಡಿಗ್ ಭಾಗವಹಿಸಿದ್ದರು.  ನವೀನ್ ನಿರೂಪಿಸಿದರು. ಸಿ.ಎಂ.ನೇತ್ರಾವತಿ ವಂದಿಸಿದರು.

The post ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನ ಸಿರಿ ಪ್ರಶಸ್ತಿ ಪ್ರದಾನ: ಭಯದಿಂದ ಭಕ್ತಿ, ಜ್ಞಾನ,ವೈರಾಗ್ಯ -ಶತಾಯುಷಿ ಹೊನ್ನೂರುಸಾಬ್ appeared first on Karnataka Kahale.

]]>
ಮನುಷ್ಯ ಉದ್ಧಾರಕ್ಕೆ ಮನಸ್ಸೇ ಮೂಲ ಕಾರಣ’ -ಇಂದೂಧರ ಗೌತಮ https://www.karnatakakahale.com/news/15895 Sun, 31 Mar 2024 14:02:19 +0000 https://www.karnatakakahale.com/?p=15895 ಚಿತ್ರದುರ್ಗ, ಮಾ.31: ಮದ್ಯ ವ್ಯಸನಿಯು ಕುಡಿದು ತನ್ನನ್ನು ಹಾಳು ಹಾಳು ಮಾಡಿಕೊಳ್ಳುವುದಕ್ಕೂ, ಕುಡಿತವನ್ನು ನಿಯಂತ್ರಣದಲ್ಲಿಟ್ಟುಕೊಂಡು ಮನುಷ್ಯ ಉದ್ಧಾರವಾಗುವುದಕ್ಕೂ ಮೂಲ ಮನಸ್ಸೇ ಕಾರಣ ಎಂದು ಭಗವಾನ್ ಬುದ್ಧರು ಹೇಳಿದ್ದಾರೆ ಎಂದು ಉಪನ್ಯಾಸಕ ಇಂದೂಧರ ಗೌತಮ ಹೇಳಿದರು. ಕೋಟೆ ನಾಡು ಬುದ್ಧ ವಿಹಾರದಲ್ಲಿ ಅಂಬೇಡ್ಕರ್…

The post ಮನುಷ್ಯ ಉದ್ಧಾರಕ್ಕೆ ಮನಸ್ಸೇ ಮೂಲ ಕಾರಣ’ -ಇಂದೂಧರ ಗೌತಮ appeared first on Karnataka Kahale.

]]>
ಚಿತ್ರದುರ್ಗ, ಮಾ.31: ಮದ್ಯ ವ್ಯಸನಿಯು ಕುಡಿದು ತನ್ನನ್ನು ಹಾಳು ಹಾಳು ಮಾಡಿಕೊಳ್ಳುವುದಕ್ಕೂ, ಕುಡಿತವನ್ನು ನಿಯಂತ್ರಣದಲ್ಲಿಟ್ಟುಕೊಂಡು ಮನುಷ್ಯ ಉದ್ಧಾರವಾಗುವುದಕ್ಕೂ ಮೂಲ ಮನಸ್ಸೇ ಕಾರಣ ಎಂದು ಭಗವಾನ್ ಬುದ್ಧರು ಹೇಳಿದ್ದಾರೆ ಎಂದು ಉಪನ್ಯಾಸಕ ಇಂದೂಧರ ಗೌತಮ ಹೇಳಿದರು.

ಕೋಟೆ ನಾಡು ಬುದ್ಧ ವಿಹಾರದಲ್ಲಿ ಅಂಬೇಡ್ಕರ್ ಕಂಡಂತಹ ಬುದ್ಧ ಕಾರ್ಯಕ್ರಮದಲ್ಲಿ ಬುದ್ಧ ಮತ್ತು ಆತನ ಧರ್ಮ ಕೃತಿಯನ್ನು ಓದಿ ಮಾಲಿನ್ಯಗಳಿಂದ ಮನಸ್ಸನ್ನು ಪರಿಶುದ್ಧಗೊಳಿಸುವ ಬಗೆಗಿನ ಬುದ್ಧರ ಅಭಿಪ್ರಾಯವನ್ನು ವಿಶ್ಲೇಷಿಸಿದರು.
‘ಎಲ್ಲದಕ್ಕೂ ಮೂಲ ಮನಸ್ಸು, ಮನಸ್ಸೇ ಯಜಮಾನ: ಮನಸೇ ಕಾರಣ’: ಮನಸ್ಸಿನ ಒಳಗೆ ಕೆಟ್ಟ ಭಾವನೆಗಳಿದ್ದರೆ ಆಗ ಮಾತುಗಳು ಕೆಟ್ಟದಾಗಿರುತ್ತವೆ, ಕೆಲಸಗಳು ಕೆಟ್ಟವಾಗಿರುತ್ತವೆ, ಗಾಡಿಯನ್ನು ಎಳೆಯುವವನ ಹಿಂದೆ ಚಕ್ರ ಹೋಗುವಂತೆ, ಆ ಪಾಪದಿಂದ ಉಂಟಾಗುವ ದುಃಖವು ಮನುಷ್ಯನನ್ನು ಹಿಂಬಾಲಿಸುತ್ತದೆ.
“ಇದೆಲ್ಲಕ್ಕೂ ಮನಸ್ಸೇ ಮೂಲ,ಮನಸ್ಸು ಆದೇಶಿಸುತ್ತದೆ, ಮನಸ್ಸು ಸಂಚು ಮಾಡುತ್ತದೆ .”
ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳಿದ್ದರೆ ಆಗ ಮಾತುಗಳು, ಕೆಲಸಗಳು ಒಳ್ಳೆಯದಾಗಿರುತ್ತವೆ. ವಸ್ತುವನ್ನು ನೆರಳು ಅನುಸರಿಸುವಂತೆ, ಅಂತಹ ಮನುಷ್ಯನ ಸನ್ನಡತೆಯಿಂದ ಸಂತೋಷ ಲಭಿಸುತ್ತದೆ ಎಂದು ಬೋಧಿಸಿದ್ದಾರೆ ಎಂದರು.
ಬುದ್ಧ ಧ್ಯಾನ ಕಾರ್ಯಕ್ರಮವನ್ನು ಲಾಯರ್ ಬೆನಕನಹಳ್ಳಿ ಚಂದ್ರಪ್ಪ ಹಾಗೂ ನನ್ನಿವಾಳದ ರವಿಕುಮಾರ್ ಶಿವಲಿಂಗಪ್ಪ ನಿರ್ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ನ ನಿವೃತ್ತ ಪ್ರಾಂಶುಪಾಲರಾದ ಮಂಜಣ್ಣನವರು ಮಕ್ಕಳ ಶಿಕ್ಷಣದ ಪ್ರಾಮುಖ್ಯತೆ ಕುರಿತಾದ ಜಾಗೃತಿ ಗೀತೆಯನ್ನು ಹಾಡಿದರು.
ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಜಿಲ್ಲಾ ಖಜಾಂಚಿಗಳಾದ ಭೀಮನಕೆರೆಯ ಪಿ ತಿಪ್ಪೇಸ್ವಾಮಿ ವ್ಯವಸ್ಥೆ ಮಾಡಿದರು
ಕಾರ್ಯಾಧ್ಯಕ್ಷರಾದ ನಿವೃತ್ತ ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ಬಿಪಿ ಪ್ರೇಮನಾಥ್, ನಿವೃತ್ತ ಮುಖ್ಯೋಪಾಧ್ಯಾಯರಾದ ತಿಮ್ಮಣ್ಣ, ಬನ್ನಿ ಕೊಡು ರಮೇಶ್, ತಿಪ್ಪಮ್ಮ ಸಾಧಿಕ್ ನಗರದ ಗಿರಿಜಾ ಶಾಂತ ಮುಂತಾದವರು ಇದ್ದರು.
—–

The post ಮನುಷ್ಯ ಉದ್ಧಾರಕ್ಕೆ ಮನಸ್ಸೇ ಮೂಲ ಕಾರಣ’ -ಇಂದೂಧರ ಗೌತಮ appeared first on Karnataka Kahale.

]]>
ವೀರವನಿತೆ ಒನಕೆ ಓಬವ್ವ ಜಯಂತೋತ್ಸವ ಭವ್ಯ ಮೆರವಣಿಗೆ: ಕೋಟೆನಾಡಲ್ಲಿ ಮೊಳಗಿದ ಕಹಳೆ, ಒನಕೆ ಓಬವ್ವ ವೇಷ ಧರಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು https://www.karnatakakahale.com/news/10587 Sun, 18 Dec 2022 17:19:09 +0000 https://www.karnatakakahale.com/?p=10587 ಚಿತ್ರದುರ್ಗ, ಡಿ.18: ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಅಂಗವಾಗಿ ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ಭಾನುವಾರ ಭವ್ಯ ಮೆರವಣಿಗೆ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚಿತ್ರದುರ್ಗ ನಗರಸಭೆ ಸಹಯೋಗದಲ್ಲಿ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದ…

The post ವೀರವನಿತೆ ಒನಕೆ ಓಬವ್ವ ಜಯಂತೋತ್ಸವ ಭವ್ಯ ಮೆರವಣಿಗೆ: ಕೋಟೆನಾಡಲ್ಲಿ ಮೊಳಗಿದ ಕಹಳೆ, ಒನಕೆ ಓಬವ್ವ ವೇಷ ಧರಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು appeared first on Karnataka Kahale.

]]>

ಚಿತ್ರದುರ್ಗ, ಡಿ.18: ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಅಂಗವಾಗಿ ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ಭಾನುವಾರ ಭವ್ಯ ಮೆರವಣಿಗೆ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚಿತ್ರದುರ್ಗ ನಗರಸಭೆ ಸಹಯೋಗದಲ್ಲಿ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದ ಅಂಗವಾಗಿ ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಲ್ಲಿ ಹಾವೇರಿ ಶಾಸಕ ಹಾಗೂ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರು ಚ.ಓಲೇಕಾರ್, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್.ದಿವಾಕರ್ ಅವರು ಕಹಳೆ ಊದುವ ಮೂಲಕ ಒನಕೆ ಓಬವ್ವ ಜಯಂತಿ ಅದ್ದೂರಿಗೆ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು.


ವೀರ ವನಿತೆ ಒನಕೆ ಓಬವ್ವ, ಡಾ.ಬಿ.ಆರ್.ಅಂಬೇಡ್ಕರ್, ರಾಜವೀರ ಮದಕರಿ ನಾಯಕರ ಭಾವಚಿತ್ರಗಳನ್ನು ಪುಷ್ಪಾಲಂಕೃತ ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ವೀರ ವನಿತೆ ಒನಕೆ ಓಬವ್ವ ವೇಷಭೂಷಣ ಧರಿಸಿದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಗಮನ ಸೆಳೆದರು.
ಜಾನಪದ ಕಲಾತಂಡಗಳ ಮೆರಗು: ಮೆರವಣಿಗೆ ಉದ್ದಕ್ಕೂ ಕಹಳೆ, ಡೊಳ್ಳು ಕುಣಿತ, ಉರುಮೆ, ಮಹಿಳಾ ಉರುಮೆ, ಬ್ಯಾಂಡ್ ವಾದ್ಯಗಳು, ಮಹಿಳಾ ಡೊಳ್ಳು ಕುಣಿತ, ತ್ರಾಷ ವಾದ್ಯ, ಖಾಸಾ ಬೇಡರ ಪಡೆ, ಪೂಜಾ ಕುಣಿತ, ಚಿಲಿಪಿಲಿ ಗೊಂಬೆ, ಪಟಾ ಕುಣಿತ, ಹುಲಿವೇಷ, ಹಗಲು ವೇಷ, ನಂದಿಕೋಲು, ಗಾರುಡಿ ಗೊಂಬೆ, ಕೀಲುಕುದುರೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.


ಜಯಂತಿ ಅಂಗವಾಗಿ ನಗರದ ಕನಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿವೃತ್ತ, ಒನಕೆ ಓಬವ್ವ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಮದಕರಿ ನಾಯಕರ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳನ್ನು ಹಾಗೂ ಕನಕದಾಸರು, ಸಂಗೋಳ್ಳಿ ರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಒನಕೆ ಓಬವ್ವ, ಮದಕರಿ ನಾಯಕರ ಪುತ್ಥಳಿ ಸೇರಿದಂತೆ ನಗರದ ಪ್ರಮುಖ ರಸ್ತೆಯಲ್ಲಿರುವ ಎಲ್ಲ ಮಹನೀಯರ ಪುತ್ಥಳಿಗಳಿಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿ, ವಿಶೇಷವಾಗಿ ಅಲಂಕರಿಸಲಾಗಿತ್ತು.


ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಯು ಗಾಂಧಿವೃತ್ತ, ಎಸ್‍ಬಿಐ ವೃತ್ತ, ಪ್ರವಾಸಿ ಮಂದಿರದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತ, ಮದಕರಿ ವೃತ್ತದ ಮೂಲಕ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಮುರುಘರಾಜೇಂದ್ರ ಕ್ರೀಡಾಂಗಣದವರೆಗೆ ನಡೆದು, ಸಮಾಪನೆಗೊಂಡಿತು.


ಮೆರವಣಿಗೆಯಲ್ಲಿ ಚಿತ್ರದುರ್ಗ ಛಲವಾದಿ ಮಹಾಸಂಸ್ಥಾನ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ, ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ರಾಜ್ಯಮಟ್ಟದ ಒನಕೆ ಜಯಂತಿ ಸಮಿತಿಯ ರಾಜ್ಯ ಕಾರ್ಯದರ್ಶಿ ನಿರಂಜನಮೂರ್ತಿ ಸೇರಿದಂತೆ ಛಲವಾದಿ ಸಮುದಾಯ ಮುಖಂಡರು ಇದ್ದರು.
*****

The post ವೀರವನಿತೆ ಒನಕೆ ಓಬವ್ವ ಜಯಂತೋತ್ಸವ ಭವ್ಯ ಮೆರವಣಿಗೆ: ಕೋಟೆನಾಡಲ್ಲಿ ಮೊಳಗಿದ ಕಹಳೆ, ಒನಕೆ ಓಬವ್ವ ವೇಷ ಧರಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು appeared first on Karnataka Kahale.

]]>