The post ಬಳ್ಳಾರಿ ಮಹಾನಗರ ಪಾಲಿಕೆ ನಿವೃತ್ತ ಅಧಿಕಾರಿ ಸಿ. ಯಮನಪ್ಪ ವಿಧಿವಶ appeared first on Karnataka Kahale.
]]>
ಬಳ್ಳಾರಿ, ಏ.17: ಬಳ್ಳಾರಿ ಮಹಾನಗರ ಪಾಲಿಕೆ ಹಾಗೂ ತೆಕ್ಕಲಕೋಟೆ ಪಟ್ಟಣ ಪಂಚಾಯತಿ ನಿವೃತ್ತ ಅಧಿಕಾರಿ ಸಿ. ಯಮನಪ್ಪ ಅವರು ಗುರುವಾರ ನಿಧನರಾಗಿದ್ದಾರೆ.
ಅವರಿಗೆ 87 ವರ್ಷವಾಗಿತ್ತು. ಪತ್ನಿ ಜಾನಮ್ಮ, ಪುತ್ರರಾದ ಸಿ. ರವೀಂದ್ರ, ಡಾ. ವೈ. ವಿಶ್ವನಾಥ್, ಸಿ.ಗಂಗಾಧರ್, ಪುತ್ರಿಯರಾದ ಪ್ರೊ. ಸುಲೋಚನಾ ಮತ್ತು ಪ್ರೊ. ಶೋಭ ಸೇರಿದಂತೆ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಗುರುವಾರ ಸಂಜೆ ಕೌಲಬಜಾರ್ ನ ಗುಗ್ಗರಹಟ್ಟಿ ರಸ್ತೆಯಲ್ಲಿರುವ ರುದ್ರ ಭೂಮಿಯಲ್ಲಿ ಅಪಾರ ಬಂಧು ಮಿತ್ರರ ಸಮ್ಮುಖದಲ್ಲಿ ಅಂತಿಮಸಂಸ್ಕಾರ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಮ್ಮ ತಂದೆ ಸಿ.ಯಮನಪ್ಪ ಅವರು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಆಡಳಿತದಲ್ಲಿ ಕನ್ನಡ ಗರಿಷ್ಟ ಬಳಕೆಗಾಗಿ ಅಂದಿನ ಜಿಲ್ಲಾಉಸ್ತುವಾರಿ ಸಚಿವ ಎಂ.ಪಿ. ಪ್ರಕಾಶ ಅವರು ಜಿಲ್ಲಾಡಳಿತದ ಪರವಾಗಿ ಪ್ರಶಸ್ತಿ ನೀಡಿ ಗೌರವಿಸಿದ್ದರು ಎಂದು ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ವೈ.ವಿಶ್ವನಾಥ್ ಸ್ಮರಿಸಿದ್ದಾರೆ.
ಸಂತಾಪ: ಸಿ. ಯಮನಪ್ಪ ಅವರ ನಿಧನಕ್ಕೆ ಹಿರಿಯ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ, ಬಳ್ಳಾರಿ ಐಜಿಪಿ ಕಚೇರಿಯ ನಿವೃತ್ತ ಆಡಳಿತಾಧಿಕಾರಿ ಕೆ.ಮಾರುತಿ, ನಿವೃತ್ತ ಪ್ರಾಚಾರ್ಯ ಡಾ. ಸಿ ಎಚ್ ಸೋಮನಾಥ, ತಹಸೀಲ್ದಾರರಾದ ಹೊನ್ನಮ್ಮ, ಬಳ್ಳಾರಿ ಮೆಡಿಕಲ್ ಕಾಲೇಜ್ ಪ್ರಾಧ್ಯಾಪಕ ಡಾ. ವಿಜಯ್ ಅಪ್ಪಗೆರೆ, ಎಸ್.ಪಿ ಕಚೇರಿಯ ಎಎಸ್ಐ ಸಿ. ಹನುಮಂತಪ್ಪ, ಕಾಡಾ ನಿವೃತ್ತ ಅಧಿಕಾರಿ ಗುರುಸ್ವಾಮಿ, ಸಿಎಂಎಸ್ ಮುಖಂಡ ಸಿ. ನರಸಪ್ಪ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
The post ಬಳ್ಳಾರಿ ಮಹಾನಗರ ಪಾಲಿಕೆ ನಿವೃತ್ತ ಅಧಿಕಾರಿ ಸಿ. ಯಮನಪ್ಪ ವಿಧಿವಶ appeared first on Karnataka Kahale.
]]>The post ಪಲ್ಲವ ವೆಂಕಟೇಶ್ ಅವರಿಗೆ ಮಾತೃ ವಿಯೋಗ appeared first on Karnataka Kahale.
]]>The post ಪಲ್ಲವ ವೆಂಕಟೇಶ್ ಅವರಿಗೆ ಮಾತೃ ವಿಯೋಗ appeared first on Karnataka Kahale.
]]>The post ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ವಿಧಿವಶ: ಕೆಯುಡಬ್ಲ್ಯೂಜೆ ಸಂತಾಪ appeared first on Karnataka Kahale.
]]>
ಬೆಂಗಳೂರು: ಹಿರಿಯ ಪತ್ರಕರ್ತ ಹಾಗು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ಅವರು ಮಂಗಳವಾರ ನಿಧನರಾದರು.
ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ. ರಾಮಯ್ಯ ಅವರು ವಿವಿಧ ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ ಬಾಲಜಿ ತಿಳಿಸಿದ್ದಾರೆ .
1933 ಸೆಪ್ಟೆಂಬರ್ 12 ರಂದು ಜನಿಸಿದ ರಾಮಯ್ಯ ಅವರು ಇಬ್ಬರು ಪುತ್ರರು , ಓರ್ವ ಪುತ್ರಿ ಹಾಗು ಸೊಸೆಯಂದಿರು ಹಾಗು ಮೊಮ್ಮಕಳನ್ನು ಅಗಲಿದ್ದಾರೆ .
“ದಿ ಹಿಂದೂ ” ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದ ರಾಮಯ್ಯ ಅವರು ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು .
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಯುಡಬ್ಲ್ಯೂಜೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು ಪತ್ರಿಕಾ ಅಕಾಡೆಮಿ ಹಾಗು ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು.
ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದ ರಾಮಯ್ಯ ಅವರು ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು.
ಅಂತಿಮ ನಮನ: ನಾಡಿನ ಹಿರಿಯ ಪತ್ರಕರ್ತರು, ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ ಅವರ ಪಾರ್ಥೀವ ಶರೀರಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡರು ಬುಧವಾರ ಅಂತಿಮ ನಮನ ಸಲ್ಲಿಸಿದರು.
ಕೆಯುಡಬ್ಲ್ಯೂಜೆ ಸಂತಾಪ: ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸಂತಾಪ ವ್ಯಕ್ತಪಡಿಸಿದೆ.
ತೊಂಬತ್ತನೇ ವಸಂತ ತುಂಬಿದ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ವತಿಯಿಂದ ರಾಮಯ್ಯ ಅವರನ್ನ ಅವರ ಮನೆಯಂಗಳದಲ್ಲಿಯೇ ದಂಪತಿಗಳ ಸಹಿತ ಗೌರವಿಸಲಾಗಿತ್ತು. ಕಳೆದ ಜನ್ಮದಿನದ ಸಂದರ್ಭದಲ್ಲೂ ಅವರ ಮನೆಯಲ್ಲಿಯೇ ಭೇಟಿ ಮಾಡಿ ಶುಭಾಶಯ ಕೋರಲಾಗಿತ್ತು ಎಂದು ನೆನಪಿಸಿಕೊಂಡಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಶೋಕಿಸಿದ್ದಾರೆ. ರಾಮಯ್ಯ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲೆಂದು ತಗಡೂರು ಪ್ರಾರ್ಥಿಸಿದ್ದಾರೆ.
The post ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ವಿಧಿವಶ: ಕೆಯುಡಬ್ಲ್ಯೂಜೆ ಸಂತಾಪ appeared first on Karnataka Kahale.
]]>The post ಸಿರುಗುಪ್ಪ: ಅಬಕಾರಿ ಹೆಡ್ ಕಾನ್ಸ್‌ಟೇಬಲ್ ಎಂ.ಜಿ ರಾಘವೇಂದ್ರ ನಿಧನ appeared first on Karnataka Kahale.
]]>
ಸಿರುಗುಪ್ಪ, ಡಿ.18: ನಗರದ ಅಬಕಾರಿ ಇಲಾಖೆಯ ತಾಲೂಕು ಕಚೇರಿಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂ ಜಿ. ರಾಘವೇಂದ್ರ(43) ಅವರು ಇಂದು(ಗುರುವಾರ) ಬೆಳಿಗ್ಗೆ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.
ತಾಯಿ, ಪತ್ನಿ, ಸಹೋದರ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಘವೇಂದ್ರರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ ವಿಧಿವಶರಾದರು.
ಮೃತರ ಅಂತಿಮ ಸಂಸ್ಕಾರ ವನ್ನು ಶುಕ್ರವಾರ ಬೆಳಿಗ್ಗೆ ಸಿರುಗುಪ್ಪದ ರುದ್ರಭೂಮಿಯಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 90198 70872 ಅಥವಾ 96116 01158 ನ್ನು ಸಂಪರ್ಕಿಸಲು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
—–
The post ಸಿರುಗುಪ್ಪ: ಅಬಕಾರಿ ಹೆಡ್ ಕಾನ್ಸ್‌ಟೇಬಲ್ ಎಂ.ಜಿ ರಾಘವೇಂದ್ರ ನಿಧನ appeared first on Karnataka Kahale.
]]>The post ವೆಂಕಟಸಿಂಗ್ ಗೆ ತಾಯಿ ವಿಯೋಗ appeared first on Karnataka Kahale.
]]>
ರಾಯಚೂರು, ಡಿ.11: ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ವೆಂಕಟಸಿಂಗ್ ಅವರ ತಾಯಿ ಯಮುನಾಬಾಯಿ (80) ಅವರು ಕಲಬುರ್ಗಿ ಜಯದೇವ ಆಸ್ಪತ್ರೆಯಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ.
ಶ್ರೀಮತಿ ಯಮುನಾಬಾಯಿ ಅವರ ನಿಧನಕ್ಕೆ ಕೆಯುಡಬ್ಕ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ , ಹಿರಿಯ ಪತ್ರಕರ್ತ ಸಿ.ಮಂಜುನಾಥ ಸಂತಾಪ ವ್ಯಕ್ತಪಡಿಸಿದ್ದಾರೆ.
The post ವೆಂಕಟಸಿಂಗ್ ಗೆ ತಾಯಿ ವಿಯೋಗ appeared first on Karnataka Kahale.
]]>The post ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ನಿಧನಕ್ಕೆ ಕೆಯುಡಬ್ಲೂಜೆ ಸಂತಾಪ appeared first on Karnataka Kahale.
]]>
ಬೆಂಗಳೂರು: ಹಿರಿಯ ಪತ್ರಕರ್ತರಾಗಿದ್ದ ಅ.ಚ.ಶಿವಣ್ಣ (85) ಅವರು ಬೆಂಗಳೂರು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಪತ್ನಿ ಇಂದಿರಾ ಮತ್ತು ಓರ್ವ ಪತ್ರ ವಿಕ್ಟೋರಿಯಾ ಆಸ್ಪತ್ರೆ ಸೂಪರಿಟೆಂಡೆಂಟ್ ಡಾ.ದೀಪಕ್ ಶಿವಣ್ಣ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಎಪ್ಪತ್ತ್ತರ ದಶಕದಲ್ಲಿ ಲೋಕವಾಣಿ ಪತ್ರಿಕೆ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ್ದ ಶಿವಣ್ಣ ಅವರು ಬಳಿಕ ಸಂಜೆವಾಣಿ ಪತ್ರಿಕೆಗೆ ಸೇರಿ 25 ವರ್ಷಗಳಿಗೂ ಹೆಚ್ಚು ಕಾಲ ವರದಿಗಾರಿಕೆ ಮಾಡಿದವರು. ರಾಜಕೀಯ ವರದಿಗಾರಿಕೆಯಲ್ಲಿಯೂ ಪರಿಣಿತರಾಗಿದ್ದವರು. ಆ ಕಾಲಘಟ್ಟದಲ್ಲಿಯೇ ವಾಕಿ ಟಾಕಿ ಬಳಸಿ ಸುದ್ದಿಕೊಡುತ್ತಿದ್ದ ಮೊದಲ ಪತ್ರಕರ್ತ ಎನ್ನುವುದು ಹೆಗ್ಗಳಿಕೆ.
ಮೃತರ ಅಂತ್ಯ ಸಂಸ್ಕಾರ ನ.29ರಂದು ಶನಿವಾರ ಮದ್ಯಾಹ್ನ 12ಕ್ಕೆ ಬನಶಂಕರಿ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೆಯುಡಬ್ಲೂಜೆ ಸಂತಾಪ
ಅವರು 84ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರ ಮನೆಗೆ ತೆರಳಿ, ಮನೆಯಂಗಳದಲ್ಲಿಯೇ ಅವರಿಗೆ ಕೆಯುಡಬ್ಲೂೃಜೆ ಗೌರವ ನೀಡುವ ಕೆಲಸವನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಮಾಡಿತ್ತು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.
ಅ.ಚ.ಶಿವಣ್ಣ ಅಗಲಿಕೆಯಿಂದ ಸುದ್ದಿ ಮನೆಯ ಹಿರಿಯ ಕೊಂಡಿಯೊಂದು ಕಳಚಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ತಗಡೂರು ಪ್ರಾರ್ಥಿಸಿದ್ದಾರೆ.
—–
The post ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ನಿಧನಕ್ಕೆ ಕೆಯುಡಬ್ಲೂಜೆ ಸಂತಾಪ appeared first on Karnataka Kahale.
]]>The post ಡಿ.ಕಗ್ಗಲ್: ಕೆ ಎಂ ಶಿವರುದ್ರಮ್ಮ ವಿಧಿವಶ appeared first on Karnataka Kahale.
]]>
ಬಳ್ಳಾರಿ, ಆ.21: ಬಳ್ಳಾರಿ ಜಿಲ್ಲಾ ಕನ್ನಡ ಪ್ರಭ ದಿನಪತ್ರಿಕೆಯ ಹಿರಿಯ ವರದಿಗಾರ ಕೆ.ಎಂ. ಮಂಜುನಾಥ ಅವರ ತಾಯಿ ಕೆ ಎಂ ಶಿವರುದ್ರಮ್ಮ(82 ವರ್ಷ) ಅವರು ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 82 ವರ್ಷಗಳಾಗಿದ್ದವು. ಕೆ.ಎಂ. ಮಂಜುನಾಥ ಸೇರಿದಂತೆ ಎಂಟು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಅನಾರೋಗ್ಯದ ನಿಮಿತ್ತ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಬೆಳಿಗ್ಗೆ 7.30ಕ್ಕೆ ನಿಧನರಾಗಿದ್ದು, ಸಂಜೆ 3 ಗಂಟೆಗೆ ಡಿ. ಕಗ್ಗಲ್ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
The post ಡಿ.ಕಗ್ಗಲ್: ಕೆ ಎಂ ಶಿವರುದ್ರಮ್ಮ ವಿಧಿವಶ appeared first on Karnataka Kahale.
]]>The post ಬಳ್ಳಾರಿಯ ಶಿಕ್ಷಣ ಪ್ರೇಮಿ ಡಾ.ಪಿ. ರಾಧಾಕೃಷ್ಣ ವಿಧಿವಶ appeared first on Karnataka Kahale.
]]>
ಬಳ್ಳಾರಿ, ಜು.17: ಹಲವು ದಿನಗಳಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಗರದ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ. ರಾಧಾಕೃಷ್ಣ ಅವರು ಗುರುವಾರ ಸಂಜೆ ಹೈದ್ರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಬಳ್ಳಾರಿ, ಹೊಸಪೇಟೆ, ಚಳ್ಳಕೆರೆ, ಹುನುಗುಂದ, ಪಟ್ಟಣಗಳಲ್ಲಿ ವಿವಿಧ ಶೈಕ್ಷಣಿಕ ಸಂಸ್ಥೆಗಳ ಸ್ಥಾಪಕರಾದ ಶ್ರೀ ರಾಧಾಕೃಷ್ಣರವರು ಶಿಕ್ಷಣ ಪ್ರೇಮಿ ಎಂದೇ ಜನಪ್ರಿಯರಾದವರು.
ಪತ್ನಿ ರಾಧಿಕ, ಹಿರಿಯ ಪುತ್ರ ವಿಷ್ಣು,, ಕಿರಿಯ ಪುತ್ರ ಸಂಜಯ್ ಕೃಷ್ಣ ಸೇರಿದಂತೆ ಅಪಾರ ಬಂಧು ಮಿತ್ರರು, ಅಭಿಮಾನಿ ಬಳಗ, ಶಿಷ್ಯವೃಂದವನ್ನು ಅಗಲಿದ್ದಾರೆ.
ಇವರ ಮೃತ ದೇಹವನ್ನು ಗುರುವಾರ ರಾತ್ರಿ ಬಳ್ಳಾರಿಗೆ ತರಲಾಗುತ್ತಿದೆ.
ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನ ಬೊಮ್ಮನಹಾಳ್ ಗ್ರಾಮದಲ್ಲಿ ಪಯ್ಯಾವುಲ ರಾಮಕೃಷ್ಣಪ್ಪ ಮತ್ತು ಜಾನಕಮ್ಮ ರೈತ ದಂಪತಿಯ ಮಗನಾಗಿ ಜ.10, 1960ರಲ್ಲಿ ಜನಿಸಿದ್ದರು.
ಬೊಮ್ಮನಹಾಳ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ರಾಯದುರ್ಗದಲ್ಲಿ ಪಿಯುಸಿ, ಬಿಕಾಂ ಪದವಿಯನ್ನು ಬಳ್ಳಾರಿಯ ವೀರಶೈವ ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿ ಎಂ ಕಾಂ, ಎಂಫಿಲ್ ಓದಿದ್ದಾರೆ. ಮಂಗಳೂರು ವಿವಿಯಲ್ಲಿ ಪಿಎಚ್ ಡಿ ಪಡೆದಿದ್ದಾರೆ. ಗುಂತಕಲ್ಲಿನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಆರಂಭ ಮಾಡಿದ್ದರು, ನಂತರದಲ್ಲಿ ತುಮಕೂರಿನ ಕೊರಟಗೆರೆ ಸರಕಾರಿ ಪದವಿ ಕಾಲೇಜಿನಲ್ಲಿ 1986ರಲ್ಲಿ ಸರಕಾರಿ ಸೇವೆ ಆರಂಭಿಸಿ ನಂತರದಲ್ಲಿ ಬಳ್ಳಾರಿಯ ಸರಳಾದೇವಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಂಪ್ಲಿ ಸೇರಿದಂತೆ ಇತರ ಕಡೆಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಬಳ್ಳಾರಿ ಸರಕಾರಿ ವಾಣಿಜ್ಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ 2020ರಲ್ಲಿ ನಿವೃತ್ತಿ ಹೊಂದಿದ್ದರು. ತಮ್ಮ ವೃತ್ತಿಜೀವನದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪ ಆಗಿದ್ದರು.
2005ರಲ್ಲಿ ಇವರ ಸಲಹೆ ಮೇರೆಗೆ ಆರಂಭವಾದ ಶ್ರೀ ಚೈತನ್ಯ ಪಿಯುಸಿ ಕಾಲೇಜು 340 ಮಕ್ಕಳೊಂದಿಗೆ ಆರಂಭ ಮಾಡಿದ್ದರು. ಈಗ ತಮ್ಮದೇ ಆದ ಪಿಆರ್ ಕೆ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ, ರಾಜ್ಯದ ಬಳ್ಳಾರಿ, ಚೆಳ್ಳಕೆರೆ, ಹೊಸಪೇಟೆ, ಇಳಕಲ್, ಕೊಪ್ಪಳ ಮತ್ತು ವಿಜಯಪುರದಲ್ಲಿ ಕಾಲೇಜು ಆರಂಭಿಸಿ ಸುಮಾರು 6 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸಮಾಜದ ವಿವಿಧ ಸ್ತರಗಳ ಸಮಾಜಮುಖಿ ಮತ್ತು ಸಮಾನ ಮನಸ್ಸುಗಳು ಸೇರಿ ರಚಿಸಿಕೊಂಡ ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷರಾಗಿ, ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸನ್ಮಾರ್ಗದ ಬೆನ್ನೆಲುಬಾಗಿ ಸಾವಿರಾರು ವಿದ್ಯಾರ್ಥಿಗಳು, ಬಡವರ ಸೇವೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಉನ್ನತ ಶಿಕ್ಷಣದಲ್ಲಿ ಗುಣಾತ್ಮಕತೆ ಸಮಿತಿಯ ಜಿಲ್ಲಾ ಸಂಚಾಲಕರಾಗಿ 2002 ರಿಂದ 2012ರವರೆಗೆ ಸೇವೆ ಸಲ್ಲಿಸಿದ್ದಾರೆ. ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಳ್ಳಾರಿ ಕಾಮರ್ಸ್ ಟೀಚರ್ಸ್ ಫೋರಂ ಅಧ್ಯಕ್ಷರಾಗಿ 2015 ರಿಂದ 2018ರವರೆಗೆ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿಯಾಗಿ 2013 ರಿಂದ 2018ರವರೆಗೆ ಕೆಲಸ ಮಾಡಿದ್ದಾರೆ. ಹೀಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.
ಪಿಆರ್ ಕೆ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಒಳ್ಳೆಯ ಬೋಧಕರಾದ ರಾಧಾಕೃಷ್ಣರವರು ವಿಧಿವಶರಾಗಿರುವುದು ದುರ್ದೈವವೇ ಸರಿ. ಉತ್ತಮ ಮಾರ್ಗದರ್ಶಕರು, ಶಿಕ್ಷಣ ಪ್ರೇಮಿಗಳು, ತಮ್ಮದೇ ಕೆಲಸದ ಮೂಲಕ ಸಮಾಜ ಸುಧಾರಣೆ ಮಾಡಿ ಸಮಾಜ ಸುಧಾರಕರಾಗಿದ್ದರು. ಸಾವಿರಾರು ಮಕ್ಕಳ ಬಾಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ದಾರಿದೀಪ ಆಗಿರುವ ರಾಧಾಕೃಷ್ಣ ಅವರದು ಮಾದರಿ ವ್ಯಕ್ತಿತ್ವ.
ಸಾಮಾನ್ಯ ರೈತಾಪಿ ಕುಟುಂಬದಲ್ಲ್ಲಿ ಹುಟ್ಟಿದ ರಾಧಾಕೃಷ್ಣ ಅವರದು ದಣಿಯವರಿಯದ ಜೀವ. ಕೊನೆಯ ಉಸಿರಿರುವವರಗೆ ಶಿಕ್ಷಣ ಸೇವೆಯಲ್ಲಿಯೇ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಕೆಲ ತಿಂಗಳುಗಳ ಹಿಂದೆಯಷ್ಟೆ ತಾಯಿ ಮೃತಪಟ್ಟಿದ್ದರು, ಅವರ ಹಿಂದೆಯೇ ಮರಳಿಬಾರದೂರಿಗೆ ರಾಧಾಕೃಷ್ಣ ಅವರು ಪ್ರಯಾಣ ಬೆಳೆಸಿದ್ದಾರೆ.
ಸಾರ್ವಜನಿಕ ದರ್ಶನ:ಅಂತಿಮ ಸಂಸ್ಕಾರ
ಜು.18ರಂದು ಶುಕ್ರವಾರ ಬೆಳಿಗ್ಗೆಯಿಂದ ಕಂಟೋನ್ಮೆಂಟ್ ಪ್ರದೇಶದ ಸೂರ್ಯ ಕಾಲೋನಿಯ ಒಂದನೇ ಕ್ರಾಸ್‌ನಲ್ಲಿರುವ ಪಿ.ಆರ್ ಕೆ ಅವರ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ನಗರದ ಹರಿಶ್ಚಂದ್ರ ಘಾಟ್ ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
—–
The post ಬಳ್ಳಾರಿಯ ಶಿಕ್ಷಣ ಪ್ರೇಮಿ ಡಾ.ಪಿ. ರಾಧಾಕೃಷ್ಣ ವಿಧಿವಶ appeared first on Karnataka Kahale.
]]>The post ವಿಧಾನ ಪರಿಷತ್ತ ಮಾಜಿ ಸಭಾಪತಿ, ಅಖಿಲಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಎನ್ ತಿಪ್ಪಣ್ಣ ನಿಧನ appeared first on Karnataka Kahale.
]]>
ವಯೋಸಹಜ ಖಾಯಿಲೆಯಿಂದ ಕೆಲವು ದಿನಗಳಿಂದ ಬಳಲುತ್ತಿದ್ದರು ಬಳ್ಳಾರಿಯ ನಿವಾಸದಲ್ಲಿ ಇಂದು ಬೆಳಗಿನ ಜಾವ ಸಾವನ್ಬಪ್ಪಿದರು ಅವರಿಗೆ 96 ವರ್ಷ ವಯಸ್ಸಾಗಿತ್ತು
1928 ರಲ್ಲಿ ಚಿತ್ರದುರ್ಗ ಜಿಲ್ಲೆ ತುರುವನೂರಿನಲ್ಲಿ ಜನನ. ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಭಾಗವಹಿಸಿದ್ದರು..2004 ರಲ್ಲಿ ಜೆಡಿಎಸ್ ರಾಜ್ಯ ಅಧ್ಯಕ್ಷರಾಗಿದ್ದರು, ಜೆಡಿಎಸ್ ಕಾಂಗ್ರೆಸ್ ಮೊದಲ ಬಾರಿ ಮೈತ್ರಿಯಾಗಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದರು.ಮೂರು ಬಾರಿ ವಿಧಾನಪರಿಷತ್ ಸದ್ಯರಾಗಿದ್ದರು.ಕೆಲಕಾಲ ಸಭಾಪತಿಯಾಗಿದ್ದರು.ಅಖಿಲಭಾರತ ವೀರಶೈವ ಮಹಾಸಭಾದ ರಾಜ್ಯಘಟಕದ ಅಧ್ಯಕ್ಷರಾಗಿದ್ದರು.30 ವರ್ಷಗಳ ಕಾಲ ವಕೀಲ ವೃತ್ತಿ ಮಾಡಿದ ಇವರು ಹಲವು ಪ್ರಮುಖ ವ್ಯಾಜ್ಯಗಳನ್ನು ಜಯಸಿದ್ದರು.
The post ವಿಧಾನ ಪರಿಷತ್ತ ಮಾಜಿ ಸಭಾಪತಿ, ಅಖಿಲಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಎನ್ ತಿಪ್ಪಣ್ಣ ನಿಧನ appeared first on Karnataka Kahale.
]]>The post ಹೃದಯಾಘಾತದಿಂದ ಬೀದರಿನ ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಸಾವು appeared first on Karnataka Kahale.
]]>
ಮೂಲತಃ ಕಲಬುರಗಿ ಜಿಲ್ಲೆಯ ಗಡಿಕೇಶ್ವರ ಗ್ರಾಮದ ಡಾ.ರವಿಕುಮಾರ್ ಅವರು ಸಹೋೋದ್ಯೋಗಿಯೊಬ್ಬರಿಗೆ ಕರೆ ಮಾಡಿ ಇಂದು ಪರೀಕ್ಷಾ ಕರ್ತವ್ಯವಿದೆ. ಕಾಲೇಜಿಗೆ ಬರ್ತಾ ಇದ್ದೇನೆ. ಆದರೆ ಸೊಂಟ ಮತ್ತು ಎದೆ ನೋಯುತ್ತಿದೆ ಎಂದು ತಿಳಿಸಿದ್ದಾರೆ. ತಕ್ಷಣ ನೀವು ಕಾಲೇಜಿಗೆ ಬರುುವುದು ಬೇಡ ಯಾರಾದರೂ ನಿಮ್ಮ ಕರ್ತವ್ಯವನ್ನು ಮಾಡುತ್ತೇವೆ. ಕೂಡಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅಷ್ಟರಲ್ಲಿ ಸಾವು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
6 ವರ್ಷಗಳಿಂದ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ರವಿಕುಮಾರ್, ಪಿಎಚ್ ಡಿ, ನೆಟ್, ಸ್ಲೆಟ್ ಪದವಿ ಪಡೆದಿದ್ದರೂ ತಾರತಮ್ಯವಿಲ್ಲದೇ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಲಭಿಸಿಬೇಕು ಎಂದು ಬಯಸುತ್ತಿದ್ದರು ಎಂದು ಆಪ್ತರು ತಿಳಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡು ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿಬೇಕು, 2024-25ರಲ್ಲಿ ಸೇವೆ ಸಲ್ಲಿಸಿದ ಎಲ್ಲರನ್ನೂ ಮುಂದುವರೆಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸುತ್ತಿರುವ ಸಂದರ್ಭದಲ್ಲಿ ಡಾ. ರವಿಕುಮಾರ್ ಅವರ ಅಕಾಲಿಕ ನಿಧನ ಅತಿಥಿ ಉಪನ್ಯಾಸಕರ ಬಳಗದಲ್ಲಿ ಶೋಕವನ್ನುಂಟು ಮಾಡಿದೆ. ಸಂತಾಪ: ಡಾ. ರವಿಕುಮಾರ್ ಅವರ ಅಕಾಲಿಕ ನಿಧನಕ್ಕೆ ರಾಜ್ಯ ಸರಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘ ಸಂತಾಪ ಸೂಚಿಸಿದೆ.
—–
The post ಹೃದಯಾಘಾತದಿಂದ ಬೀದರಿನ ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಸಾವು appeared first on Karnataka Kahale.
]]>