The post ಹೋಟಲ್ ಉದ್ಯಮದಲ್ಲಿಯ ಹೊಸ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ appeared first on Karnataka Kahale.
]]>
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕರ್ನಾಟಕ ರಾಜ್ಯ ಹೋಟೆಲ್ ಸಂಘ ಹಾಗೂ ಬಳ್ಳಾರಿ ಜಿಲ್ಲಾ ಹೋಟೆಲ್ ಸಂಘದ ಸಹಯೋಗದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ `ಜಿಲ್ಲಾ ಸಮನ್ವಯ ಸಭೆ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಈ ಅವಕಾಶಗಳನ್ನು ಬಳಸಿಕೊಂಡು ಉದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಆಸಕ್ತಿ ಇರುವವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಬಳ್ಳಾರಿಯಲ್ಲಿ ತಮ್ಮ ಬಾಲ್ಯ ಮತ್ತು ಯೌವ್ವನದ ದಿನಗಳನ್ನು ಮೆಲುಕು ಹಾಕಿದ ಗುರ್ಮೆ ಸುರೇಶ ಶೆಟ್ಟಿ ಅವರು, ನಾನು, ಬಳ್ಳಾರಿಯಲ್ಲಿ ಕೇವಲ ಹೋಟಲ್ ಉದ್ಯಮಿ ಆಗಿರಲಿಲ್ಲ. ಇಲ್ಲಿಯ ನೆಲ, ಜಲ, ನುಡಿ – ಜನರ ಜೊತೆಯಲ್ಲಿ ಬೆರತು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾನು, ನನ್ನ ಕುಟುಂಬ ಬಳ್ಳಾರಿಯನ್ನು ಸದಾಕಾಲ ಸ್ಮರಿಸುತ್ತೇವೆ ಎಂದು ಭಾವುಕರಾದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ಅವರು ಮಾತನಾಡಿ, ಕರ್ನಾಟಕದಲ್ಲಿ ಹೋಟಲ್ ಉದ್ಯಮದ ಜೊತೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಯೋಗಕ್ಕೆ ಬಳ್ಳಾರಿಯಿಂದ ಶ್ರೀಕಾರ ಹಾಕಿರುವುದು ಅತ್ಯುತ್ತಮವಾದ ಬೆಳವಣಿಗೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಿ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಹೋಟಲ್ ಉದ್ಯಮಕ್ಕೆ ಅತ್ಯುತ್ತಮವಾದ ಅವಕಾಶಗಳಿವೆ ಎಂದರು.
ಈ ಭಾಗದ ಸಂಸ್ಕೃತಿ, ಇತಿಹಾಸ, ಆತಿಥ್ಯ ಮತ್ತು ವಾಣಿಜ್ಯೋದ್ಯಮ – ಕೈಗಾರಿಕೆಗಳನ್ನು ಬೆಳೆಸಲು ಹೋಟಲ್ ಉದ್ಯಮ ಪೂರಕವಾಗಿದೆ. ಹೋಟಲ್ ಸೇರಿ ನವ ಮತ್ತು ಯುವ ಉದ್ಯಮಿಗಳ ಪ್ರೋತ್ಸಾಹಕ್ಕೆ ಅಗತ್ಯವಾಗಿರುವ ಮಾರ್ಗದರ್ಶನ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳು – ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಲು ಶೀಘ್ರದಲ್ಲೇ `ಚೇಂಬರ್ ಇಂಕ್ಯುಬೇಷನ್ ಸೆಂಟರ್’ ಅನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.

ಅಬಕಾರಿ ಇಲಾಖೆಯ ಆಯುಕ್ತ ಮಂಜುನಾಥ್ ಮತ್ತು ಜಿಎಸ್‌ಟಿ ಅಧಿಕಾರಿ ಜಿ. ವಿಶ್ವನಾಥ್ ಇನ್ನಿತರರು, ಹೋಟಲ್ ಉದ್ಯಮ ಹಾಗೂ ತೆರಿಗೆ ಇನ್ನಿತರೆಗಳ ಕುರಿತು ಮಾತನಾಡಿದರು. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಸ್. ತಿಪ್ಪೇಸ್ವಾಮಿ ಅವರು, ಪ್ರವಾಸೋದ್ಯಮ ಮತ್ತು ಹೋಟಲ್ ಉದ್ಯಮದ ಅವಕಾಶಗಳ ಕುರಿತು ಮಾತನಾಡಿದರು.
ಕರ್ನಾಟಕ ರಾಜ್ಯ ಹೋಟಲ್‌ಗಳ ಸಂಘದ ಅಧ್ಯಕ್ಷರಾದ ಜಿ.ಕೆ. ಶೆಟ್ಟಿ, ಮಾತನಾಡುತ್ತ ರಾಜ್ಯದ ಎಲ್ಲ ಜಿಲ್ಲಾ ಸಂಘದಲ್ಲಿ ಈ ರೀತಿ ಕಾರ್ಯಕ್ರ ಮವನ್ನು ಆಯೋಜಿಸಿ ಉದ್ಯಮಿಗಳಿಗೆ ಪ್ರವೋಸೋಧ್ಯಮದ ಪ್ರಯೋಜನಗಳನ್ನು ಬಳಸಿ ಅಭಿವೃದ್ಧಿಯತ್ತ ಮುನ್ನಡೆಯೋಣವೆಂದರು
ಬಳ್ಳಾರಿ ಜಿಲ್ಲಾ ಹೊಟೇ ಲ್ ಸಂಘ ಅಧ್ಯಕ್ಷ ಎಚ್.ಎ. ಮಧುಸೂಧನ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ್, ಬಳ್ಳಾರಿ ಜಿಲ್ಲಾ ಗೌರವ ಕಾರ್ಯದರ್ಶಿ ವಿಕ್ರಂ ಪೋಲಾ ಕರ್ನಾಟಕ ರಾಜ್ಯ ಹೋಟಲ್ ಸಂಘದ ಗೌರವ ಕಾರ್ಯದರ್ಶಿಗಳಾದ ಎಂ.ವಿ. ರಾಘವೇಂದ್ರ ಆರ್ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾದ್ಯಕ್ಷರಗಳಾದ, ಎಸ್.ದೊಡ್ಡನಗೌಡ, ಸೊಂತಗಿರಿಧರ ಗೌರವ ಕಾರ್ಯದರ್ಶಿಗಳಾದ, ಕೆ.ಸಿ.ಸುರೇಶಬಾಬು, ಜಂಟಿ ಕಾರ್ಯದರ್ಶಿಗಳಾದ, ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಹೋಟಲ್ ಸಂಘದ ಸದಸ್ಯರ ಉಪಸ್ಥಿತರಿದ್ದರು. ಬಳ್ಳಾರಿ ಜಿಲ್ಲಾ ಹೋಟೆಲ್ ಸಂಘದ ಗೌ. ಕಾರ್ಯದರ್ಶಿ ವಿಕ್ರಮ್ ಪೋಲಾ ಅವರು ಸ್ವಾಗತಿಸಿದರು. ರೂಪಾ ರಾಘವೇಂದ್ರ ಅವರು ನಿರೂಪಿಸಿದರು.
The post ಹೋಟಲ್ ಉದ್ಯಮದಲ್ಲಿಯ ಹೊಸ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ appeared first on Karnataka Kahale.
]]>The post ಜಿಲ್ಲಾ ಪ್ರವಾಸಿ ತಾಣಗಳಲ್ಲಿ ವಿಜಯಪುರ ಬುದ್ಧವಿಹಾರ ಸೇರ್ಪಡೆ: ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ -ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ವಾಗ್ದಾನ appeared first on Karnataka Kahale.
]]>
ವಿಜಯಪುರ ನ. ೨೨: ಜಿಲ್ಲಾ ಪ್ರವಾಸದಲ್ಲಿರುವ ರಾಜ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಬುಧವಾರ ಸಂಜೆ ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರಕ್ಕೆ ಭೇಟಿ ನೀಡಿದರು. ಬುದ್ಧವಿಹಾರ ನಿರ್ಮಾಣ ಸಮಿತಿಯ ಆಡಳಿತ ಮಂಡಳಿಯ ಮನವಿಗೆ ಸ್ಪಂದಿಸಿದ ಸಚಿವ ಎಚ್.ಕೆ. ಪಾಟೀಲರು ನಗರದ ಹೃದಯಭಾಗದಲ್ಲಿರುವ ಬುದ್ಧವಿಹಾರವನ್ನು ಪ್ರವಾಸಿತಾಣಗಳ ಪಟ್ಟಿಯಲ್ಲಿ ಸೇರಿಸುವುದಲ್ಲದೆ ವಿಹಾರದ ಆವರಣದಲ್ಲಿ ಯಾತ್ರಿನಿವಾಸ ನಿರ್ಮಿಸಿಕೊಡುವುದಾಗಿ ವಾಗ್ದಾನ ಮಾಡಿದರಲ್ಲದೆ ಯಾತ್ರನಿವಾಸದ ನೀಲನಕ್ಷೆ ತಯಾರಿಸುವಂತೆ ಮತ್ತು ಅಂದಾಜುವೆಚ್ಚವನ್ನು ಸಿದ್ಧಪಡಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ, ನಾಗಠಾಣ ಶಾಸಕ ವಿಠ್ಠಲ ಕಡಕದೋಂಡ್, ರಮೇಶ ಸೂಳಿಭಾವಿ ಮತ್ತಿತರ ಮುಖಂಡರು, ಅಧಿಕಾರಿಗಳ ಸಚಿವರ ಜೊತೆಗಿದ್ದರು. ಬುದ್ಧವಿಹಾರ ಅಧ್ಯಕ್ಷರಾದ ರಾಜಶೇಖರ ಯಡಹಳ್ಳಿ ಅವರು ಸ್ವಾಗತಿಸಿದರು. ಪೂಜ್ಯ ಭಂತೆ ಬೋಧಿಧಮ್ಮ ಅವರು ಎಚ್.ಕೆ.ಪಾಟೀಲರಿಗೆ ಶಾಲು ಹೊದಿಸಿ ಗೌರವಿಸಿ ಆಶೀರ್ವದಿಸಿದರು.

ಕಾರ್ಯದರ್ಶಿ ನಾಗರಾಜ ಲಂಬು, ನಿರ್ದೇಶಕ ಮಂಡಳಿ ಸದಸ್ಯರಾದ ರಾಜು ತೊರವಿ, ಅನಿಲ ಹೊಸಮನಿ, ಎಸ್.ಆರ್. ಶಿವಶರಣ, ಸುರೇಶ ಘೊಣಸಗಿ, ಸಮಾಜದ ಹಿರಿಯರಾದ ಚಂದ್ರಶೇಖರ ಕೊಡಬಾಗಿ, ಸುಭಾಸ ಗುಡಿಮನಿ, ಸಂಗಪ್ಪ ಚಲವಾದಿ, ಬಸವರಾಜ ಬ್ಯಾಳಿ, ಕೆ.ಎಂ ಶಿವಶರಣ, ಚಿದಾನಂದ ನಿಂಬಾಳ, ಮಹೇಶ ಕ್ಯಾತನ್, ಚಿದಾನಂದ ಹೊನವಾಡಕರ, ರಮೇಶ ಯಡಹಳ್ಳಿ, ಭೀಮಶಿ ಹಿಪ್ಪರಗಿ, ಎಂ.ಬಿ. ಹಳ್ಳದಮನಿ, ಸುನೀಲ ಉಕ್ಕಲಿ, ಅಭಿಷೇಕ ಚಕ್ರವರ್ತಿ, ರೋಹಿತ ಮಲಕನವರ, ರಾಹುಲ ಕುಬಕಡ್ಡಿ, ಭಾರತಿ ಹೊಸಮನಿ, ಸಂತೋಷ ಶಹಾಪುರ, ವೆಂಕಟೇಶ ವಗ್ಗೇನವರ, ಕೆ.ಎಂ. ಕೂಡಲಗಿ ಸೇರಿದಂತೆ ನೂರಾರು ಬೌದ್ಧ ಉಪಾಸಕ- ಉಪಾಸಕಿಯರು ಇದ್ದರು.
The post ಜಿಲ್ಲಾ ಪ್ರವಾಸಿ ತಾಣಗಳಲ್ಲಿ ವಿಜಯಪುರ ಬುದ್ಧವಿಹಾರ ಸೇರ್ಪಡೆ: ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ -ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ವಾಗ್ದಾನ appeared first on Karnataka Kahale.
]]>The post ಐತಿಹಾಸಿಕ ತಾಣ ಹಂಪಿಯ ರಕ್ಷಣೆ ಮತ್ತು ಅಭಿವೃದ್ಧಿಗೆ ಇಲಾಖೆ ಕ್ರಿಯಾಯೋಜನೆ ರೂಪಿಸಿದೆ. -ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ appeared first on Karnataka Kahale.
]]>
ಹೊಸಪೇಟೆ( ವಿಜನಯಗನರ): ಪ್ರವಾಸೋದ್ಯಮದ ಅಭಿವೃದ್ದಿಯ ದೃಷ್ಟಿಯಿಂದ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್ ಆವರಣದ 250 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್, ತ್ರಿ ಸ್ಟಾರ್ ಹೋಟೆಲ್, ವಸತಿ ನಿಲಯ ಹಾಗೂ ಹೆಲಿಕ್ಯಾಪ್ಟರ್ ಲ್ಯಾಂಡ್ ಏರಿಯಾ ಒಳಗೊಂಡಂತೆ ಸರ್ವತೋಮುಖ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಪರಿಸರ ಮತ್ತು ಜೀವಿ ಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಹೇಳಿದರು.
ಕಮಲಾಪುರ ಪಟ್ಟಣದ ಮಯೂರ ಭುವನೇಶ್ವರಿ ಹೋಟೆಲ್‍ನಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಜೊತೆಗೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬರುವ ವಿದ್ಯಾರ್ಥಿಗಳು ಉಳಿದಿಕೊಳ್ಳಲು ಒಂದು ವಸತಿ ನಿಲಯವನ್ನು ಜಿಯೋಲಾಜಿಕಲ್ ಪಾರ್ಕ್ ಆವರಣದಲ್ಲಿ ನಿರ್ಮಿಸಲಾಗುವುದು. 1 ಸಾವಿರ ಶಾಲಾ-ಕಾಲೇಜು ಮಕ್ಕಳು ಉಳಿದುಕೊಳ್ಳಲು ಒಂದು ಸುಸಜ್ಜಿತವಾದ ವಸತಿ ನಿಲಯವನ್ನು ಪ್ರಾರಂಭಿಸಲಾಗುತ್ತದೆ. ಇದು ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಮತ್ತೊಂದು ಹಂಪಿಯ ನಿರ್ಮಾಣ ಅಸಾಧ್ಯ, ಪ್ರಸ್ತುತ ಇರುವ ಐತಿಹಾಸಿಕ ತಾಣವನ್ನು ರಕ್ಷಣೆ ಮತ್ತು ಅಭಿವೃದ್ಧಿ ಪಡಿಸುವ ಕೆಲಸ ಮಾಡಲಾಗುತ್ತದೆ ಎಂದರು. ಹಂಪಿಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತದೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ ಸಚಿವರು,
ಬೆಟ್ಟಕ್ಕೆ ರೋಪ್ ವೇ ನಿರ್ಮಾಣ, ರಸ್ತೆಗಳ ಅಭಿವೃದ್ಧಿ,ಮೂಲಭೂತ ಸೌಲಭ್ಯ ಒಳಗೊಂಡಂತೆ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ 500 ಕೋಟಿ ವೆಚ್ಚ ಮಾಡಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ, ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಇದ್ದರು.
*****
The post ಐತಿಹಾಸಿಕ ತಾಣ ಹಂಪಿಯ ರಕ್ಷಣೆ ಮತ್ತು ಅಭಿವೃದ್ಧಿಗೆ ಇಲಾಖೆ ಕ್ರಿಯಾಯೋಜನೆ ರೂಪಿಸಿದೆ. -ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ appeared first on Karnataka Kahale.
]]>The post ಇಂದಿನಿಂದ(ಫೆ. 27) ಅಂಕಸಮುದ್ರ ಹಕ್ಕಿ ಹಬ್ಬ: ಸಚಿವ ಆನಂದ್ ಸಿಂಗ್ ಚಾಲನೆ appeared first on Karnataka Kahale.
]]>
The post ಇಂದಿನಿಂದ(ಫೆ. 27) ಅಂಕಸಮುದ್ರ ಹಕ್ಕಿ ಹಬ್ಬ: ಸಚಿವ ಆನಂದ್ ಸಿಂಗ್ ಚಾಲನೆ appeared first on Karnataka Kahale.
]]>