The post ನಾಡೋಜ ಶ್ರೀ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಭಾಜನ: ಇಂದು(ಏ.12) ಬಳ್ಳಾರಿಯಲ್ಲಿ ಪ್ರಶಸ್ತಿ ಪ್ರದಾನ appeared first on Karnataka Kahale.
]]>
ಬಳ್ಳಾರಿ, ಏ.12: ಅಂತರಾಷ್ಟ್ರೀಯ ಪ್ರಸಿದ್ಧ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಅಂತರಾಷ್ಟ್ರೀಯ ಜಾನಪದ ಗಾಯಕ, ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರು ಆಯ್ಕೆಯಾಗಿದ್ದಾರೆ.
ನಗರದ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಕಳೆದ ವರ್ಷದಿಂದ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿದ್ದು, ಏ.12 ರಂದು ಭಾನುವಾರ ಸಂಜೆ 5 ಗಂಟೆಗೆ ಸ್ಥಳೀಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯ ಈ. ತುಕಾರಾಂ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಟ್ರಸ್ಟ್ ಹಾಗೂ ಕಾರ್ಯಕ್ರಮ ಸಂಚಾಲಕ ಬೆಳಗಲ್ಲು ಹನುಮಂತ ಅವರು ತಿಳಿಸಿದರು.
ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಉದ್ಘಾಟಿಸುವರು. ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ. ಗಾದೆಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಜಿಲ್ಲಾ ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ಮೈಸೂರಿನ ರಂಗಕರ್ಮಿ, ಶ್ರೀ ರಾಜೇಶ್ವರಿ ವಸ್ತ್ರಾಲಂಕಾರದ ಮಾಲೀಕ ಬಿ.ಎಂ. ರಾಮಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎನ್ ಮಂಜೇಶ್ ಚನ್ನಾಪುರ, ನಗರದ ಶ್ರೀ ಕೊಟ್ಟೂರು ಸ್ವಾಮಿ ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಹಿರೇಮಠ ಮತ್ತು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕಾರ್ಯಕ್ರಮಕ್ಕೆ ಮುನ್ನ ಮೋತಿ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಗೆ ಗೌರವ ನಮನ ಸಲ್ಲಿಸಿ ಜಾನಪದ ಕಲಾ ತಂಡಗಳ ಆಕರ್ಷಕ ಮೆರವಣಿಗೆಯಲ್ಲಿ ಅತಿಥಿ ಗಣ್ಯರು, ನಾಡೋಜ ಬೆಳಗಲ್ಲು ವೀರಣ್ಣ ಅವರ ಒಡನಾಡಿಗಳು, ಹಿತೈಷಿ, ಅಭಿಮಾನಿಗಳು ರಂಗಮಂದಿರ ತಲುಪುವರು.
ಸಾಂಸ್ಕೃತಿಕ ಅಂಕಣ: ನೆರೆಯ ಆಂದ್ರಪ್ರದೇಶದ ಸತ್ಯಸಾಯಿ ಜಿಲ್ಲೆ ಧರ್ಮಾವರಂದ ನಿಮ್ಮಲಕುಂಟ ಶ್ರೀ ವನಾರ್ಚ ರಾಮಕೃಷ್ಣ ತೊಗಲುಗೊಂಬೆಯಾಟ ಕಲಾ ತಂಡದಿಂದ ಸುಂದರಕಾಂಡ (ಸೀತಾಪಹರಣ) ತೊಗಲು ಗೊಂಬೆಯಾಟ ಪ್ರದರ್ಶನ ಪ್ರಶಸ್ತಿ ಪ್ರದಾನದ ಬಳಿಕ ಜರುಗಲಿದೆ.

ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಡಾ. ಬಾನಂದೂರು ಕೆಂಪಯ್ಯ ಅವರ ಪರಿಚಯ: ಅಂತಾರಾಷ್ಟ್ರೀಯ ಜಾನಪದ ಗಾಯಕ, ಸಾಹಿತಿ, ಸಂಗೀತಗಾರ, ಸಂಶೋಧಕ, ಹಾಡುವ ಹಕ್ಕಿ
ಡಾ. ಬಾನಂದೂರು ಕೆಂಪಯ್ಯ ಅವರು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಾನಂದೂರಿನಲ್ಲಿ 1951 ಜೂನ್14ರಂದು ಜಾನಪದ ಕುಟುಂಬದಲ್ಲಿ ಜನಿಸಿದರು. ಇವರ ತಾಯಿ ಹುಚ್ಚಮ್ಮ ಜನಪದ ಗಾಯಕಿ, ತಂದೆ ಚರ್ಮವಾದ್ಯ ನುಡಿಸುವುದರಲ್ಲಿ ಪರಿಣಿತ ಹೊಂದಿದ್ದ ವೆಂಕಟಯ್ಯ ಅವರು. ಸಾಂಸ್ಕೃತಿಕ ಶ್ರೀಮಂತಿಕೆಯ ದಂಪತಿಗಳ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳಲ್ಲಿ ಕೆಂಪಯ್ಯನವರೆ ಕಿರಿಯರು. ಇವರ ಅಣ್ಣ ಆರು ನಗಾರಿ ಬಾರಿಸುವ ಪರಿಣತಿ ಪಡೆದು ನಗಾರಿ ಸಿದ್ದಯ್ಯನೆಂದೇ ಪ್ರಸಿದ್ಧಿ ಹೊಂದಿದ ಪ್ರತಿಭಾವಂತರು.
ಡಾ. ಬಾನಂದೂರು ಅವರ ಪ್ರಾಥಮಿಕ ಶಿಕ್ಷಣ ಬಾನಂದೂರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಬಿ.ಎ(ಆನರ್ಸ್) ಪದವಿ,
೧೯೮೪ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಸ್ನಾತಕೋತ್ತರ(ಎಂ.ಎ) ಪದವಿ ಪಡೆದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕರ್ನಾಟಕ ದಲಿತ ಜಾನಪದ ಸಂಗೀತದಲ್ಲಿ ಡಿ.ಲಿಟ್. ಪದವಿ ಪಡೆದಿದ್ದಾರೆ.
ಡಾ. ಬಾನಂದೂರು ಕೆಂಪಯ್ಯನವರು ಆರಂಭದಲ್ಲಿ ಮಾಧ್ಯಮಿಕ ಶಾಲೆಯ ಶಿಕ್ಷಕರಾಗಿ, ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೮೦ರಲ್ಲಿ ಮೈಸೂರು ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಸೇರಿದ ಬಳಿಕ ಹಿಂತಿರುಗಿ ನೋಡಲಿಲ್ಲ . ಬೆಂಗಳೂರು,ಧಾರವಾಡ, ಗುಲ್ಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿ ಹಾಗೂ ಬೆಂಗಳೂರು ದೂರದರ್ಶನ ಕೇಂದ್ರದ ಉಪ ನಿರ್ದೇಶಕರಾಗಿ, ಕಾರ್ಯಕಾರಿ ನಿರ್ಮಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದರು.
ಸಾಹಿತ್ಯ ಸೇವೆ: ಡಾ. ಕೆಂಪಯ್ಯ ಅವರು ಬಯಲು ಸೀಮೆಯ ಜಾನಪದ ಕಥೆಗಳ ಸಂಕಲನ ಹೊರ ತಂದಿದ್ದಾರೆ. ‘ಚೆಂದುಳ್ಳಿ ಪದವ ಕಲಸವ್ವ’ ಹಾಗು ‘ಮೊಗ್ಗಾಗಿ ಬಾರೊ ತುರುಬಿಗೆ’ ಎಂಬ ಹೆಸರಿನ ಜನಪದ ಗೀತೆಗಳ ಸಂಗ್ರಹ, . ‘ನನ್ನ ಈ ನೆಲದಲ್ಲಿ’ ಎನ್ನುವ ಕವನ ಸಂಕಲನ ಪ್ರಕಟಿಸಿದ್ದಾರೆ. ಕನ್ನಡ ನಾಡಿನ ನೂರಕ್ಕೂ ಹೆಚ್ಚು ಜನಪದ ಕಲಾವಿದರನ್ನು ಹಾಗು ಅವರ ಜನಪದ ಸಾಹಿತ್ಯವನ್ನು ಪತ್ರಿಕೆಗಳ ಮೂಲಕ ನಾಡಿಗೆ ಪರಿಚಯಿಸಿರುವುದುವಿಶೇಷ.
ಡಾ. ಬಾನಂದೂರು ಅವರು, ಹೈಸ್ಕೂಲಿನಲ್ಲಿದ್ದಾಗಲೆ ತಮ್ಮ ಜನಪದ ಹಾಡುಗಾರಿಕೆಗಾಗಿ ಬಹುಮಾನ ಪಡೆದು ‘ಬೆಳೆಯುವ ಸಿರಿ ಮೊಳಕೆಯಲಿ’ ಎಂಬಂತೆ ಗಮನ ಸೆಳೆದರು.
ಎರಡು ಬಾರಿ ಅಮೆರಿಕಾ, ಒಂದು ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡು ತಮ್ಮ ಜಾನಪದ ಗಾಯನದ ಮೂಲಕ ನಾಡಿಗೆ, ದೇಶಕ್ಕೆ ಕೀರ್ತಿ ತಂದ ಡಾ. ಕೆಂಪಯ್ಯ ಅವರು ದೇಶದ ವಿವಿಧ ನಗರಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ ಮಾತ್ರವಲ್ಲ ಅನೇಕ ಸಣ್ಣಾಟ, ದೊಡ್ಡಾಟ, ಗೊಂಬೆಯಾಟಗಳಿಗೆ ಸಂಗೀತ ಒದಗಿಸಿದ್ದಾರೆ. ಸುಪ್ರಸಿದ್ಧ ಹಿನ್ನೆಲೆ ಗಾಯಕರಾದ ಶ್ರೀಮತಿ ಮಂಜುಳಾ ಗುರುರಾಜ್ ಹಾಗು ಕಸ್ತೂರಿ ಶಂಕರ್ ಜೊತೆಗೆ ಹಾಡಿದ್ದಾರೆ. ಈ ಧ್ವನಿಸುರಳಿಗಳಲ್ಲಿ ‘ಬಣ್ಣದ ಬಳೆಗಾರ’ ವಿಶೇಷವಾಗಿ ಜನಪ್ರಿಯವಾಗಿದೆ. ಕೆಂಪಯ್ಯನವರು ಜನಪ್ರಿಯಗೊಳಿಸಿದ ಮತ್ತೊಂದು ಜನಪದ ಗೀತೆಯೆಂದರೆ ‘ಬಿದಿರು ನಾನಾರಿಗಲ್ಲದವಳು’.
ಸಿನಿಮಾ ನಂಟು: ಡಾ. ಕೆಂಪಯ್ಯನವರು ಗುರುರಾಜ ಕಾಟೆ ನಿರ್ದೇಶನದ ‘ಬಂಗಾರದ ಗೂಳಿ’ ಚಲನಚಿತ್ರಕ್ಕೆ ಗುಣಸಿಂಗ ಅವರ ಜತೆ ಸಂಗೀತ ನಿರ್ದೇಶಿಸಿದ್ದಾರೆ. ಅಲ್ಲದೆ “ಜಿಪ್ಸಿಗಳು” ಎನ್ನುವ ರಶಿಯನ್ ನಾಟಕಕ್ಕೂ ಸಂಗೀತ ನೀಡಿದ ಹೆಗ್ಗಳಿಕೆ ಇವರದು.
ಅಕಾಡೆಮಿ ಅಧ್ಯಕ್ಷ ಸ್ಥಾನ: ಮೂರು ಬಾರಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ಒಂದು ಬಾರಿ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯರಾಗಿಯೂ ಜಾನಪದ ಕ್ಷೇತ್ರಕ್ಕೆ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿಗಳು: ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಬೆಂಗಳೂರು ಕೆಂಪೇಗೌಡ ಪ್ರಶಸ್ತಿ, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಕರವೇ ‘ಜಾನಪದ ಗಾಯನ ಸಾರ್ವಭೌಮ’ ಪ್ರಶಸ್ತಿ, ‘ಅರೋಹಣ ಕಲಾರೂಪ ಪ್ರಶಸ್ತಿ, ನೆಲದ ನುಡಿಕಾರ ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
75ರ ಹರೆಯದಲ್ಲೂ ಡಾ. ಬಾನಂದೂರು ಕೆಂಪಯ್ಯ ಅವರು ಗಾಯನ, ಕಾವ್ಯ- ಕತೆ ರಚನೆಯಲ್ಲಿ ಖುಷಿ ನೆಮ್ಮದಿ ಕಾಣುತ್ತಿದ್ದಾರೆ.

-ಸಿ.ಮಂಜುನಾಥ, ಸಂಪಾದಕರು: ಕರ್ನಾಟಕ ಕಹಳೆ ಡಾಟ್ ಕಾಮ್, ಬಳ್ಳಾರಿ
The post ನಾಡೋಜ ಶ್ರೀ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಭಾಜನ: ಇಂದು(ಏ.12) ಬಳ್ಳಾರಿಯಲ್ಲಿ ಪ್ರಶಸ್ತಿ ಪ್ರದಾನ appeared first on Karnataka Kahale.
]]>The post ಕೆಯುಡಬ್ಲ್ಯುಜೆ ಪ್ರಶಸ್ತಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ: ರವೀಂದ್ರ ತೆಳಗಡೆ appeared first on Karnataka Kahale.
]]>
ಬಳ್ಳಾರಿ: ಕಳೆದ 19 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನನಗೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪ್ರಕಟಿಸಿರುವ ಈ ವರ್ಷದ ಪ್ರಜಾ ಪ್ರಗತಿ ಪ್ರಶಸ್ತಿ ಕ್ಷೇತ್ರದಲ್ಲಿನ ಸೇವೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಪ್ರಶಸ್ತಿ ಪುರಸ್ಕೃತ ಬಳ್ಳಾರಿಯ ವಿಜಯ ಕರ್ನಾಟಕ ಪತ್ರಿಕಾ ಕಚೇರಿಯಲ್ಲಿ ಮುಖ್ಯ ಉಪ ಸಂಪಾದಕ ರವೀಂದ್ರ ತೆಳಗಡೆ ಅವರು ಹೇಳಿದರು.
ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನವರಾದ ತಾವು ಕರ್ನಾಟಕ ವಿವಿಯಲ್ಲಿ ಅಭ್ಯಾಸಮಾಡಿ. 2007 ರಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡೆ. ಇಲ್ಲಿನ ಸ್ಥಾನಿಕ ಸಂಪಾದಕರಾದ ಗಂಗಾಧರ ಬಂಡಿಹಾಳ್ ಹಾಗು ಸಿಬ್ಬಂದಿ ಸಹಕಾರದಿಂದ ಆಡಳಿತ, ಶಿಕ್ಷಣ ಮೊದಲಾದ ವಿಷಯಗಳ ಕುರಿತು 56 ಲೇಖನಗಳನ್ನು ಬರೆದು ಪ್ರಕಟಿಸಿದೆ. ಮಾಧ್ಯಮದ ಮೂಲಕ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡುವ ಆಸೆ ನನ್ನದು. ಈ ಪ್ರಶಸ್ತಿ
ನನಗೆ ಮತ್ತಷ್ಟು ಬರೆಯಲು ಪ್ರೋತ್ಸಾಹ ನೀಡಿದೆ ಎಂದು ಹರ್ಷಿಸಿದರು.
ಮುಖ್ಯ ಅತಿಥಿಯಾಗಿದ್ದ ವಿಜಯಕರ್ನಾಟಕ ಬಳ್ಳಾರಿ ಕಚೇರಿಯ ಸ್ಥಾನಿಕ ಸಂಪಾದಕ ಗಂಗಾಧರ ಬಂಡಿಹಾಳ ಅವರು ಮಾತನಾಡಿ, ಸಾಮಾನ್ಯವಾಗಿ ಇಂತಹ ಪ್ರಶಸ್ತಿಗಳು ಹೆಚ್ಚಿನದಾಗಿ ವರದಿಗಾರರಿಗೆ ದೊರೆಯುತ್ತವೆ. ಆದರೆ ಕಾನಿಪ ಈಗ ಸಂಪಾದಕೀಯದ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಯ ಖುಷಿ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ, ಕಾನಿಪವು ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ತಿಂಗಳ 11, 12 ರಂದು ಬೀದರ್ ನಲ್ಲಿ ನಡೆಯುವ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಿದೆಂದರು.
ಕನ್ನಡ ಪ್ರಭ ಹಿರಿಯ ವರದಿಗಾರ ಕೆ.ಎಂ.ಮಂಜುನಾಥ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಕುಲಕರ್ಣಿ ವೇದಿಕೆಯಲ್ಲಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಬಸವರಾಜ್ ಸ್ವಾಗತಿಸಿ, ನಿರ್ವಹಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಮರೇಶ್ ಎಲ್.ಕೆ ವಂದಿಸಿದರು.
The post ಕೆಯುಡಬ್ಲ್ಯುಜೆ ಪ್ರಶಸ್ತಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ: ರವೀಂದ್ರ ತೆಳಗಡೆ appeared first on Karnataka Kahale.
]]>The post ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯ appeared first on Karnataka Kahale.
]]>
ಬೆಂಗಳೂರು ಮಾ 13: ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ ಪರವಾಗಿ ಇದೆಯಾ ಎನ್ನುವ ಬಗ್ಗೆ ಗಮನ ಹರಿಸಿ, ವೃತ್ತಿಧರ್ಮವನ್ನು ಬಹಳ ಮುಖ್ಯವಾಗಿ ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಶುಕ್ರವಾರ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪತ್ರಕರ್ತರಿಗೆ “2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು” ವಿತರಿಸಿ, ಸನ್ಮಾನಿಸಿ ಅವರು ಮಾತನಾಡಿದರು.
ಪತ್ರಕರ್ತರೂ ಆಗಿದ್ದ ಮಹಾತ್ಮಗಾಂಧಿಯವರ ಮಾತಿನಂತೆ ಸರ್ವೋದಯ, ಅಂತ್ಯೋದಯದ ಪರವಾಗಿ ಪತ್ರಕರ್ತರು ಇರಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ಅಸಮಾನತೆ ಕಾಣುತ್ತಿದ್ದೇವೆ. ಅಂಬೇಡ್ಕರ್ ಅವರೂ ಪತ್ರಕರ್ತರಾಗಿದ್ದರು.ಈ ಅಸಮಾನತೆ ಹೋಗದೆ ಹೋದರೆ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎನ್ನುವ ಮಾತನ್ನು ಅಂಬೇಡ್ಕರ್ ಹೇಳಿದ್ದನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು.

ನಾನು ನಿತ್ಯ ದಿನಪತ್ರಿಕೆಗಳನ್ನು ಓದಿದ ಬಳಿಕವೇ ಇತರೆ ಕಾರ್ಯಗಳಿಗೆ ಮುಂದಾಗುತ್ತೇನೆ. ಪತ್ರಿಕೆಗಳು ಇನ್ನೂ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ನಾನು ಟಿವಿ ನೋಡುವುದು ಕಡಿಮೆ ಎಂದರು.
ಈಗ ಊಹಾ ಪತ್ರಿಕೋದ್ಯಮದ ಹಾವಳಿ ಹೆಚ್ಚುತ್ತಿದೆ. ಸತ್ಯ ಬರೆಯುವ ಮತ್ತು ಸಂಶೋಧನೆ ನಡೆಸಿ ಬರೆಯುವ ಪತ್ರಕರ್ತರ ಸಂಖ್ಯೆ ಸುಳ್ಳು ಬರೆಯುವ ಪತ್ರಕರ್ತರ ಸಂಖ್ಯೆಗಿಂತ ಹೆಚ್ಚಾಗಬೇಕು ಎಂದು ತಿಳಿಸಿದರು.
ಒಂದು ಗುಂಪು ಅಥವಾ ಒಂದು ಸಿದ್ಧಾಂತಕ್ಕೆ ಮಾರು ಹೋಗದೆ ವಾಸ್ತವಾಂಶಕ್ಕೆ ಕನ್ನಡಿ ಹಿಡಿಯಬೇಕು ಎಂದರು.
ಹೊಸ ತಂತ್ರಜ್ಞಾನದ ಜೊತೆಗೆ ಮಾಧ್ಯಮ ರಂಗ ಮತ್ತು ಪತ್ರಕರ್ತರೂ ತಮ್ಮನ್ನು ತಾವು ಉನ್ನತೀಕರಿಸಿಕೊಳ್ಳಬೇಕು. ಹೊಸ ಸವಾಲುಗಳಿಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಂಡು ಹದಗೊಳ್ಳಬೇಕು ಎಂದರು.

ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ, ಹಿರಿಯ ಸಾಹಿತಿ ಹಂಪನಾ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜಮೂರ್ತಿ ಸೇರಿ ಹಲವರು ಉಪಸ್ಥಿತರಿದ್ದರು.
The post ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯ appeared first on Karnataka Kahale.
]]>The post ಭಟ್ಕಳ: ಸಿರಿಗೇರಿ ಈಶ್ವರ್ ಗೆ ಕರ್ನಾಟಕ ಮಾಧ್ಯಮ ಶ್ರೇಷ್ಠ ರತ್ನ ರಾಜ್ಯ ಪ್ರಶಸ್ತಿ ಪ್ರದಾನ appeared first on Karnataka Kahale.
]]>
ಭಟ್ಕಳ, ಜ.28: ಬೆಂಗಳೂರು ವಿವಿಯ ಸಂವಹನ ವಿಭಾಗದ ಸಂಶೋಧನಾರ್ಥಿ ಬಳ್ಳಾರಿ ಜಿಲ್ಲೆಯ ಸಿರಿಗೇರಿ ಗ್ರಾಮದ ಈಶ್ವರ್ ಅವರಿಗೆ ಕರ್ನಾಟಕ ಮಾಧ್ಯಮ ಶ್ರೇಷ್ಠ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ, ಭಟ್ಕಳ ತಾಲೂಕು ಘಟಕದಿಂದ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಂ, ಹೇಮಪುರ ಮಹಾಪೀಠಮ್, ಶ್ರೀಕ್ಷೇತ್ರ ಬಂಗಾರಮಕ್ಕಿ, ಹೊನ್ನಾವರದ ಶ್ರೀ ಮಾರುತಿ ಗುರೂಜಿ, ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ, ಕಾ.ನಿ.ಪ.ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕರು, ಭಟ್ಕಳ ತಾಲೂಕು ಘಟಕ ಅಧ್ಯಕ್ಷ ಶಂಕರ ನಾಯ್ಕ, ಜನಪ್ರತಿನಿಧಿಗಳು, ಹಿರಿಯ ಪತ್ರಕರ್ತರಾದ ಜಗಳೂರು ಲಕ್ಷ್ಮಣರಾವ್, ಗಂಗಾಧರ್ ಮೊದಲಿಯಾರ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
The post ಭಟ್ಕಳ: ಸಿರಿಗೇರಿ ಈಶ್ವರ್ ಗೆ ಕರ್ನಾಟಕ ಮಾಧ್ಯಮ ಶ್ರೇಷ್ಠ ರತ್ನ ರಾಜ್ಯ ಪ್ರಶಸ್ತಿ ಪ್ರದಾನ appeared first on Karnataka Kahale.
]]>The post ಬಾಲ್ಯದಲ್ಲಿ ಜೀತ ಮಾಡುತ್ತಾ ಅಕ್ಷರ ಕಲಿತ ಹೊಸಪೇಟೆಯ ಕೆ.ಲಕ್ಷ್ಮಣನಿಗೆ ಒಲಿದು ಬಂತು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ appeared first on Karnataka Kahale.
]]>
(ಸಿ.ಮಂಜುನಾಥ)
ಹೊಸಪೇಟೆ(ವಿಜಯನಗರ), ಜ. 10: ಬಡವರಿಗೆ ಮಕ್ಕಳು ಹೆಚ್ಚೆನ್ನುವಂತೆ ಹೊಸಪೇಟೆ ತಾಲೂಕಿನ
ತಿಮ್ಮಲಾಪುರ ಗ್ರಾಮದ ನಿಂಗಪ್ಪ ಮತ್ತು ಹನುಮವ್ವ ದಂಪತಿಗಳಿಗೆ ಬರೋಬ್ಬರಿ 14 ಜನ ಮಕ್ಕಳು! ಅದು 80ರ ದಶಕ…ಕಿತ್ತು ತಿನ್ನುವ ಬಡತನ ಜತೆಗೆ ಆ ವರ್ಷ ಬರಗಾಲ! ಕುಟುಂಬ ಸಲುಹಲು ಗುಳೇ ಹೋದದ್ದು ಕಂಪ್ಲಿ- ರಾಮಸಾಗರ ಸಮೀಪದ ಮುದ್ದಾಪುರ-೧೦ ಗ್ರಾಮಕ್ಕೆ! ಗ್ರಾಮದ ನೀರಗಂಟಿಯಾಗಿ ಕೆಲಸ ಆರಂಭಿಸಿ ಕುಟುಂಬ ನಿರ್ವಹಿಸುತ್ತಿದ್ದರು. ನಿಂಗಪ್ಪನಿಗೆ ಮನೆ ತುಂಬಾ ಮಕ್ಕಳಿದ್ದರೆ ಹೊಸಪೇಟೆಯ ಚಿತ್ತವಾಡ್ಗಿಯಲ್ಲಿದ್ದ ತರಕಾರಿ ಮಾರಿ ಹೊಟ್ಟೆ ತುಂಬಿಕೊಳ್ಳುತ್ತಿದ್ದ ತಂಗಿ ಸಣ್ಣ ದುರುಗಮ್ಮ ಇರುವ ಒಬ್ಬ ಮಗನನ್ನು ಮಕ್ಕಳಿಲ್ಲದ ತಳವಾರ ಕೇರಿಯಲ್ಲಿದ್ದ ದೊಡ್ಡಕ್ಕನ ಮನೆಯಲ್ಲಿ ಬಿಟ್ಟಳು.
ಮನೆ ಬೀಕೋ ಎನ್ನುತ್ತಿದ್ದಾಗ ಅಣ್ಣನ ನೆನಪಾಗಿ ಏಳೆಂಟು ವರ್ಷದ ಲಕ್ಷ್ಮಣನನ್ನು ನಾನು ಸಾಕುವೆ ಕಳುಹಿಸಿ ಕೊಡು ಎಂದು ಕೇಳಿಕೊಂಡಾಗ ಅಣ್ಣ ನಿಂಗಪ್ಪನಿಗೆ ಇಲ್ಲವೆನ್ನಲಾಗಲಿಲ್ಲ. 12 ನೇ ಮಗನಾಗಿದ್ದ ಲಕ್ಷ್ಮಣನನ್ನು ತಂಗಿಯ ಮಡಲಿಗೆ ಹಾಕಿದರು. ಹೀಗೆ ಚಿತ್ತವಾಡ್ಗಿ ಬಂದ ಲಕ್ಷ್ಮಣ ಅಣ್ಣನ ಮದುವೆಗೆ ಅಪ್ಪ ಸಾಲ ಮಾಡಿದ್ದಕ್ಕಾಗಿ ಮೂರು ವರ್ಷ ಒಬ್ಬರ ಮನೆಯಲ್ಲಿ ಜೀತಕ್ಕೆ ದುಡಿದರು. ವರ್ಷಕ್ಕೆ 150 ರೂ. ಉಡಲು ಬಟ್ಟೆ, ಊಟ ನೀಡುತ್ತಿದ್ದರು. ಜೀತ ಇದ್ದ ಮನೆಯಲ್ಲಿದ್ದ ದನಗಳನ್ನು ಮೇಯಿಸುವುದು, ಮೇವು ತರುವುದು ಬಾಲಕ ಲಕ್ಷ್ಮಣನ ದಿನ ನಿತ್ಯದ ಕಾಯಕ. ಹೀಗೆ ದನಕಾಯುತ್ತಿದ್ದ ಹುಡುಗ ವಿನೋಭಬಾವೆ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕೆ. ಭಗವಂತರಾವ್ ಅವರ ಕಣ್ಣಿಗೆ ಬಿದ್ದದ್ದೇ ಕೇಳಿ ಬಿಟ್ಟರು…. ಏನಪಾ ಶಾಲೆಗೆ ಸೇರ್ತೀಯಾ ಅಂತಾ! ತಿಮ್ಮಲಾಪುರ ಶಾಲೆಯಲ್ಲಿ ಒಂದನೇ ತರಗತಿ ಓದಿದ್ದ ಹುಡುಗನ ಸಂತೋಷಕ್ಕೆ ಪಾರವೇ ಇರಲಿಲ್ಲ. ನೇರವಾಗಿ ನಾಲ್ಕನೇ ತರಗತಿಗೆ ಪ್ರವೇಶ ಪಡೆದು ಶಾಲೆಗೆ ಹೋಗಿ, ಓದಲು ಆರಂಭಿಸಿದ ಲಕ್ಷ್ಮಣ ನಿಲ್ಲಿಸಿದ್ದು ಪ್ರಸಿದ್ಧ ವಿಜಯನಗರ ಕಾಲೇಜಿನಲ್ಲಿ ಬಿ.ಎ ಪದವಿ ಪೂರೈಸಿದಾಗ! ಹಾಗಂತ ಶಾಲಾ ಕಾಲೇಜು ದಿನಗಳಲ್ಲಿ ಕಷ್ಟಗಳೇ ಇರಲಿಲ್ಲ ಎಂದರೆ ತಪ್ಪಾಗುತ್ತದೆ! ಹೌದು….ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ಪದವಿ ಓದುವಾಗಲೂ ಬೆಳಗಿನ ಜಾವ ಮನೆ ಮನೆಗೆ ಪತ್ರಿಕೆ ಹಾಕುವುದು, ಎಂದಿನಂತೆ ಬೆಳಿಗ್ಗೆ-ಸಂಜೆ ಗದ್ದೆಗೆ ಹೋಗಿ ಮೇವು ತರುವುದು, ರಜೆಯ ದಿನಗಳಲ್ಲಿ ಕಬ್ಬು, ಬಾಳೆ ಕಡಿಯಲು ಹೋಗಿ ಹಣ ಸಂಪಾದಿಸುವುದು….. ಕಾಲೇಜು ಫೀಜು ಮತ್ತಿತರ ಖರ್ಚಿಗೆ ಹೊಂದಿಸಿ ಕೊಳ್ಳುವುದು….ಹೀಗೆ ಜೀವನ ನಡೆಯುತ್ತಿದ್ದಾಗ ಲಕ್ಷ್ಮಣನಿಗೆ 1993ರಲ್ಲಿ ಅದೃಷ್ಟ ಒದಗಿ ಬರುತ್ತದೆ. ಮನೆ ಮನೆಗೆ ಸಂಕ ಪತ್ರಿಕೆ ಹಾಕುತ್ತಿದ್ದ….ಲಕ್ಷ್ಮಣನಿಗೆ! ಸಂಯುಕ್ತ ಕರ್ನಾಟಕ ಮತ್ತು ಹಿಂದು ಪತ್ರಿಕೆಗಳ ಏಜೆಂಟ್ ರು ಕಾರಣಾಂತರಗಳಿಂದ ಏಜೆನ್ಸಿ ಬಿಡುವ ಸಂದರ್ಭ ಬರುತ್ತದೆ. ಇದೇ ವೇಳೆ ಹೊಸಪೇಟೆಗೆ ಬಂದಿದ್ದ ಹೆಸರಾಂತ ಪತ್ರಕರ್ತ, ಲೋಕಶಿಕ್ಷಣ ಟ್ರಸ್ಟ್ ನ ಟ್ರಸ್ಟಿ, ಸಂಪಾದಕ ಕೆ. ಶಾಮರಾವ್ ಅವರ ಪರಿಚಯವಾಗಿ ಸಂಯುಕ್ತ ಕರ್ನಾಟಕ(ಸಂಕ) ಪತ್ರಿಕೆಯ ಹೊಸಪೇಟೆ ನಗರದ ಏಜೆಂಟ್ ಆಗುತ್ತಾರೆ. ಅಂದು1200 ಪ್ರಸಾರವಿದ್ದ ಸಂಕ ಪತ್ರಿಕೆಗೆ ಸಾಲ ಸೋಲ ಮಾಡಿ 35 ಸಾವಿರ ಠೇವಣಿ ಹೊಂದಿಸುತ್ತಾರೆ.

1993 ರಿಂದ ಆರಂಭವಾದ ಸಂಕ ದೊಂದಿಗಿನ ಬಾಂಧವ್ಯ 2026 ರಲ್ಲೂ ಮುಂದುವರೆದಿದೆ.
1994ರಲ್ಲಿ ಏಜೆನ್ಸಿಯೊಂದಿಗೆ ಗೌರವ ಬಿಡಿ ಸುದ್ದಿಗಾರರಾಗಿ, 1996ರಲ್ಲಿ ತಾಲೂಕು ವರದಿಗಾರರಾಗಿ, ನಾಲ್ಕು ವರ್ಷಗಳ ಹಿಂದೆ ನೂತನವಾಗಿ ವಿಜಯನಗರ ಜಿಲ್ಲೆಯಾದಾಗ ಸಂಕ ಜಿಲ್ಲಾ ವರದಿಗಾರರಾಗಿ ನೇಮಕ ವಾಗುತ್ತಾರೆ. ಮೂರು ದಶಕಗಳಲ್ಲಿ ಜನಮುಖಿ ವರದಿಗಾರಿಕೆಯಿಂದ, ಸರಳ ಸಜ್ಜನಿಕೆ ವ್ಯಕ್ತಿತ್ವದಿಂದ ಜನಪ್ರಿಯರೂ ಆಗುತ್ತಾರೆ.
ಜೀತ ದುಡಿಯುತ್ತಿದ್ದ ಬಾಲಕ ಲಕ್ಷ್ಮಣರ ಅಕ್ಷರ ವ್ಯಾಮೋಹ, ಪತ್ರಿಕಾರಂಗಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ 2025 ರ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಯೂ ಹುಡುಕಿಕೊಂಡ ಬಂದಿದೆ.
ಹಲವು ಉತ್ತಮ ವರದಿಗಳು ಸಮಾಜ, ಸಂಘ ಸಂಸ್ಥೆಗಳ ಗಮನ ಸೆಳೆದಿದ್ದು ದಶಕಗಳ ಹಿಂದೆಯೇ ಬಳ್ಳಾರಿಯ ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ನೀಡುವ ಡಾ.ಅಂಬೇಡ್ಕರ್ ಸ್ಮಾರಕ ಮಾಧ್ಯಮ ಪ್ರಶಸ್ತಿಗೆ ಲಕ್ಷ್ಮಣ ಭಾಜನರಾಗಿದ್ದಾರೆ. ಹೊಸಪೇಟೆ ಸೇರಿದಂತೆ ಜಿಲ್ಲೆಯ ಹಲವು ಸಂಘ ಸಂಸ್ಥೆಗಳು ಸತ್ಕರಿಸಿ ಗೌರವಿಸಿವೆ.

ತಾನು ಓದಿದ ವಿನೋಬಾಭಾವೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ತಮ್ಮ ಅವಧಿಯಲ್ಲಿ 21 ನೂತನ ಕೊಠಡಿಗಳನ್ನು ಸರಕಾರದಿಂದ ಮಂಜೂರು ಮಾಡಿಸಿ ನಿರ್ಮಿಸಿರುವುದು ನನ್ನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಲಕ್ಷ್ಮಣ ಅವರು! ಸಮಾಜ ಸೇವೆ ಜತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ ಕಳೆದ ನಾಲ್ಕು ವರ್ಷಗಳಿಂದ ವಿಜಯನಗರ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿಯಾಗಿ ಸಂಘಟನೆ, ಪತ್ರಕರ್ತರ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರತಿಷ್ಠಿತ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ‘ಕರ್ನಾಟಕ ಕಹಳೆ ಡಾಟ್ ಕಾಮ್’ ಮಾತನಾಡಿಸಿದಾಗ ಆನಂದದಿಂದ ಕಣ್ಣೀರಾದ ಲಕ್ಷ್ಮಣ ಅವರು, ಬಾಲ್ಯದಲ್ಲಿ ಜೀತಮಾಡುತ್ತಿದ್ದ ನನಗೆ ಅಕ್ಷರದ ಮೂಲಕ ರಾಜ್ಯಮಟ್ಟದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಬಂದಿದೆ ಎಂದರೆ ನಂಬಲಾಗುತ್ತಿಲ್ಲ. ಮೂರು ದಶಕಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಸಂಕದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪ್ರಶಸ್ತಿ, ಜವಾಬ್ದಾರಿಯನ್ನು ಹೆಚ್ಚಿಸಿದೆ. ಇನ್ನೂ ಉತ್ತಮವಾಗಿ ಕೆಲಸಮಾಡಲು ಸ್ಫೂರ್ತಿ ನೀಡಿದೆ ಎಂದರು. ಅಕ್ಷರ ವಂಚಿತ ಸಮುದಾಯದ, ಕಷ್ಟಗಳ ಸರಮಾಲೆಯಲ್ಲಿ ವಿದ್ಯೆ ಪಡೆದು ಇತರರಿಗೆ ಮಾದರಿಯಾದ ಕೆ.ಲಕ್ಷ್ಮಣ ಅವರಿಗೆ ಮತ್ತಷ್ಟು ಗೌರವಗಳು ಹುಡುಕಿಕೊಂಡು ಬರಲಿ ಎಂಬುದು ಕರ್ನಾಟಕ ಕಹಳೆ ಡಾಟ್ ಕಾಮ್ ನ ಹಾರೈಕೆ.

-ಸಿ. ಮಂಜುನಾಥ, ಸಂಪಾದಕರು: karnatakakahale.com, ಬಳ್ಳಾರಿ
The post ಬಾಲ್ಯದಲ್ಲಿ ಜೀತ ಮಾಡುತ್ತಾ ಅಕ್ಷರ ಕಲಿತ ಹೊಸಪೇಟೆಯ ಕೆ.ಲಕ್ಷ್ಮಣನಿಗೆ ಒಲಿದು ಬಂತು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ appeared first on Karnataka Kahale.
]]>The post ಕರ್ನಾಟಕ ಬಯಲಾಟ ಅಕಾಡೆಮಿಯ 2025ನೇ ಸಾಲಿನ ಬಯಲಾಟ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟ: ವಿಶೇಷ ಪ್ರಶಸ್ತಿಗೆ ಬಳ್ಳಾರಿಯ ಕೆ.ಈರಣ್ಣ, ವಾರ್ಷಿಕ ಪ್ರಶಸ್ತಿಗೆ ತಾಳೂರು ಬಂಡ್ರಿ ಲಿಂಗಪ್ಪ ಸೇರಿ ಹದಿನೈದು ಸಾಧಕರು ಆಯ್ಕೆ -ಡಾ.ಕೆ. ಆರ್. ದುರ್ಗಾದಾಸ್ appeared first on Karnataka Kahale.
]]>
ಅವರು ನವನಗರದ ಪತ್ರಿಕಾಭವನದಲ್ಲಿ ಇಂದು(ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗೌರವ ಪ್ರಶಸ್ತಿ ಪುರಸ್ಕೃತರು: ಬಳ್ಳಾರಿಯ ಕೆ.ಈರಣ್ಣ (ಬಯಲಾಟ) ಕೊಪ್ಪಳದ ಹನಮಂತಪ್ಪ ಪೂಜಾರ (ಸಣ್ಣಾಟ),ಬೆಳಗಾವಿಯ ಕಾಡಪ್ಪಾ ಯಲ್ಲಪ್ಪಾ ಉಪ್ಪಾರ (ಸಣ್ಣಾಟ), ಹಾಸನ ಆರ್.ಬಿ.ಪುಟ್ಟೇಗೌಡ (ಮೂಡಲಪಾಯ), ಬೆಳಗಾವಿಯ ಶ್ರೀಮತಿ ಹೆಗಡೆ (ದೊಡ್ಡಟ) ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಮೈಸೂರಿನ ಎಚ್.ಸಿ.ಶಿವಬುದ್ದಿ (ಸೂತ್ರದ ಗೊಂಬೆ ಯಾಟ), ಮಂಡ್ಯದ ಜಯಪ್ರಕಾಶಗೌಡ (ಮೂಡಲ ಪಾಯ), ವಿಜಯನಗರ ಹೊಳೆಯಾಚೆ ಕೊಟ್ರಪ್ಪ (ಬಯಲಾಟ), ಬಾಗಲಕೋಟೆಯ ಶಿವಾಜಿ ಜಾಧವ (ಬಯಲಾಟ), ಚಿತ್ರದುರ್ಗದ ನಂದಗೋಪಾಲ (ಬಯಲಾಟ), ಧಾರವಾಡ ಮಲ್ಲಪ್ಪ ಕರಿಮಲ್ಲಣ್ಣವರ (ದೊಡ್ಡಾಟ), ಬಳ್ಳಾರಿ ಬಂಡ್ರಿ ಲಿಂಗಪ್ಪ (ಬಯಲಾಟ), ವಿಜಯನಗರ ಚೂಟಿ ಚಿದಾನಂದ (ಬಯಲಾಟ), ದಾವಣಗೆರೆ ಓದೋವೀರಪ್ಪ (ಬಯಲಾಟ) ವಿಜಯಪುರದ ಮಳೆಪ್ಪ ಬಸಪ್ಪ ಬಡಿಗೇರ (ಬಯಲಾಟ) ಹೆಸರನ್ನು ಘೋಷಿಸಿದರು.

ಗೌರವ ಮತ್ತು ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.50,000 ಗಳ ನಗದು, ಪ್ರಶಸ್ತಿ ಫಲಕ, ಶಾಲು, ಹಾರ ಹಾಗೂ ಪ್ರಶಸ್ತಿ ಪತ್ರ ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.25,000 ಗಳ ನಗದು, ಪ್ರಶಸ್ತಿ ಫಲಕ, ಶಾಲು ಹಾರ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರುವರಿ ಮೊದಲ ವಾರದಲ್ಲಿ ಧಾರವಾಡದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬಯಲಾಟ ಸಮಷ್ಠಿ ಪ್ರಧಾನವಾದ ಕಲೆಯಾಗಿದ್ದು, ಜನ ಸಾಮಾನ್ಯರ ಅದರಲ್ಲೂ ರೈತಾಪಿ ಜನಗಳು ಈ ಕಲೆಯನ್ನು ಕಟ್ಟಿ ಬೆಳೆಸಿದ್ದಾರೆ. ಎಲ್ಲಾ ಜಾತಿಗಳ ಮತ ಧರ್ಮದ ಜನರು ಒಂದಾಗಿ ಒಟ್ಟಾಗಿ ಈ ಕಲೆಯ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ಈ ಕಲೆಯು ಪ್ರಾದೇಶಿಕವಾಗಿ ಭಿನ್ನವಾಗಿ ಬೆಳೆದು ಬಂದಿರುವುದರ ಜೊತೆಗೆ ರಾಜ್ಯದ 20 ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ. ಉತ್ತರ ಕರ್ನಾಟಕದಲ್ಲಿ ಸಣ್ಣಾಟ, ದೊಡ್ಡಾಟ, ಮತ್ತು ಶ್ರೀಕೃಷ್ಣ ಪಾರಿಜಾತದಂತಹ ಕಲಾಪ್ರಕಾರಗಳಾಗಿಯೂ ಕುಡಿಯೊಡದಿದೆ. ಜೊತೆಗೆ ಪಾರಂಪರಿಕ ಕಲೆಗಳಾದ ತೊಗಲುಗೊಂಬೆಯಾಟ, ಸೂತ್ರದ ಗೊಂಬೆಯಾಟಗಳು ಸೇರಿವೆ ಎಂದರು.
ಅಕಾಡೆಮಿಯು ಈ ಕಲೆಯ ಬೆಳೆವಣಿಗೆಗಾಗಿ ಹಲವುಯೋಜನೆಗಳನ್ನು ಹಾಕಿಕೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಜಾತ್ರೆಗಳ ಸಂದರ್ಭದಲ್ಲಿ ಹವ್ಯಾಸಿ ಕಲಾವಿದರು ಮಾಡುವ ಬಯಲಾಟ ಪ್ರದರ್ಶನಗಳಿಗೆ ರೂ.25000 ಗಳಿಂದ 35000 ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ.. ಜಿಲ್ಲಾವಾರು ಕೇಂದ್ರಗಳಲ್ಲಿ ಬಯಲಾಟ ಉತ್ಸವ, ಸಮ್ಮೇಳ ನಡೆಯುತ್ತದೆ. ತರಬೇತಿ ಕಾರ್ಯಕ್ರಮ, ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತಿದ್ದು, ಬಯಲಾಟ ಕಲೆಯ ಪ್ರಚಾರದ ದೃಷ್ಠಿಯಿಂದ ಹಸ್ತಪ್ರತಿಗಳ ಸಂಗ್ರಹ ಮತ್ತು ಪುಸ್ತಕ ಪ್ರಕಟಣೆ ಮಾಡುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯ ನಿರ್ದೇಶಕಿ ಕಸ್ತೂರಿ ಪಾಟೀಲ ಮತ್ತು ಭೀಮಪ್ಪ ಹುದ್ದಾರ ಉಪಸ್ಥಿತರಿದ್ದರು.
——
The post ಕರ್ನಾಟಕ ಬಯಲಾಟ ಅಕಾಡೆಮಿಯ 2025ನೇ ಸಾಲಿನ ಬಯಲಾಟ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟ: ವಿಶೇಷ ಪ್ರಶಸ್ತಿಗೆ ಬಳ್ಳಾರಿಯ ಕೆ.ಈರಣ್ಣ, ವಾರ್ಷಿಕ ಪ್ರಶಸ್ತಿಗೆ ತಾಳೂರು ಬಂಡ್ರಿ ಲಿಂಗಪ್ಪ ಸೇರಿ ಹದಿನೈದು ಸಾಧಕರು ಆಯ್ಕೆ -ಡಾ.ಕೆ. ಆರ್. ದುರ್ಗಾದಾಸ್ appeared first on Karnataka Kahale.
]]>The post ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗವೇ ಅತ್ಯಂತ ಶ್ರೇಷ್ಠ ಅಂಗ: ಸಭಾಪತಿ ಹೊರಟ್ಟಿ appeared first on Karnataka Kahale.
]]>
ಬೆಂಗಳೂರು: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗವು ಅತ್ಯಂತ ಶ್ರೇಷ್ಠ ಅಂಗವಾಗಿದ್ದು, ಆ ಕಾರಣಕ್ಕಾಗಿ ಎಲ್ಲಾ ಕ್ಷೇತ್ರಗಳಿಗೂ ಪತ್ರಕರ್ತರು ಸಮಾಜಕ್ಕೆ ಮಾದರಿಯಾಗಬೇಕೆಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರನ್ನು ಮತ್ತು ಮಾಹಿತಿ ಹಕ್ಕು ಆಯುಕ್ತರಾಗಿ ನೇಮಕಗೊಂಡಿರುವ ಪತ್ರಕರ್ತರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರವು ಪ್ರಮುಖವಾಗಿದ್ದು, ತಮ್ಮ ವೃತ್ತಿಯಲ್ಲಿ ಬದ್ಧತೆಯನ್ನು ಉಳಿಸುವ ಪತ್ರಕರ್ತರನ್ನು ಉತ್ತಮ ಸ್ಥಾನಮಾನಗಳು ಮತ್ತು ಗೌರವ ಹುಡುಕಿಕೊಂಡು ಬರುತ್ತದೆ. ಆ ನಿಟ್ಟಿನಲ್ಲಿ ರಾಜ್ಯೋತ್ಸವ ಪುರಸ್ಕೃತ ಪತ್ರಕರ್ತರು ಮತ್ತು ಮಾಹಿತಿ ಆಯುಕ್ತರಾಗಿ ಆಯ್ಕೆಗೊಂಡಿರುವ ಪತ್ರಕರ್ತರು ನಿಜಕ್ಕೂ ಅಭಿನಂದನಾರ್ಹರು ಎಂದು ಹೇಳಿದರು.
ಈ ಸಮಾರಂಭದಲ್ಲಿ ಭಾಗವಹಿಸಿದ್ದು ಸಂತೋಷ ತಂದಿದೆ. ಕಾರ್ಯನಿರತ ಪತ್ರಕರ್ತರ ಸಂಘದ ಹಲವು ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು, ಸಂಘವು ತಗಡೂರು ಅವರ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪತ್ರಕರ್ತರ ವೃತ್ತಿ ಕ್ಷೇತ್ರಕ್ಕೆ ಮನ್ನಣೆ:
ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಮಾಧ್ಯಮ ವೃತ್ತಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮೆರೆದ ಪತ್ರಕರ್ತರನ್ನು ಉತ್ತಮ ಸ್ಥಾನಮಾನಗಳು ಹುಡುಕಿ ಬರುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಇಂತಹ ಪತ್ರಕರ್ತರನ್ನು ಗುರುತಿಸಿ ಕೆಯೂಡಬ್ಲ್ಯೂಜೆ ಏರ್ಪಡಿಸುವ ಅಭಿನಂದನಾ ಸಮಾರಂಭಗಳು ನಿಜಕ್ಕೂ ಶ್ಲಾಘನೀಯ ಎಂದರು.
ಸಂಘದ ರಾಜ್ಯಾಧ್ಯಕ್ಷರಾಗಿರುವ ಶಿವಾನಂದ ತಗಡೂರು ಅವರು, ಪತ್ರಕರ್ತರ ಪರವಾಗಿ ಸದಾ ಒಂದಿಲ್ಲೊಂದು ಬೇಡಿಕೆಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳ ಬಳಿ ಬರುತ್ತಿರುತ್ತಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ನಿಟ್ಟಿನಲ್ಲಿ ಸ್ಪಂಧನೆ ಕೊಡುತ್ತಿದ್ದಾರೆ. ಬಸ್ ಪಾಸ್, ಪತರಕರ್ತರ ಆರೋಗ್ಯ ಯೋಜನೆ ಸೆರಿದಂತೆ ಪತ್ರಕರ್ತರ ಹಲವಾರು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಕಠಿಣ ಷರತ್ತುಗಳನ್ನು ಸರಳೀಕರಣ ಮಾಡಲು ಪ್ರಯತ್ನ ನಡೆದಿದೆ ಎಂದರು.
ಸಂಕ್ರಾಂತಿ ಬಳಿಕ ಜಾಹಿರಾತು ನೀತಿಯನ್ನು ಜಾರಿ ಮಾಡಲು ಸಿದ್ಧತೆ ನಡೆದಿದೆ. ಇನ್ನು ಮುಂದೆಯೂ ಪತ್ರಕರ್ತರು ಹಲವಾರು ಸವಲತ್ತುಗಳನ್ನು ಪಡೆಯಲಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಂಘದ ಜೊತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಆತ್ಮೀಯ ಸಂಬಂಧವನ್ನಿರಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಸಿಎಂ ಮಾಧ್ಯಮ ಸಲಹೆಗಾರರಿಂದಲೂ ಸಂಘಕ್ಕೆ ಸದಾ ಪ್ರೋತ್ಸಾಹ ಸಿಗುತ್ತಿರುವುದು ನಮ್ಮ ಭಾಗ್ಯ ಎಂದರು. ಐಎ್ಡಬ್ಲೂೃಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ವಸತಿ ಸಚಿವರ ಮಾಧ್ಯಮ ಸಲಹೆಗಾರ ಕೆ.ಲಕ್ಷ್ಮಿ ನಾರಾಯಣ, ರಾಜ್ಯ ಸಂಘದ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ ಅವರು ಮಾತನಾಡಿದರು.
ಕೆಯುಡಬ್ಲೂೃಜೆ ಗೌರವ ಸಮರ್ಪಣೆ:
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ಧರಾಜು, ಬಿ.ಎಂ.ಹನ್ೀ, ಪೋಟೋ ಜರ್ನಲಿಸ್ಟ್ ಶಾಂತರಾಜು ಮತ್ತು ಮಾಹಿತಿ ಆಯೋಗದ ಆಯುಕ್ತರಾದ ವೆಂಕಟಸಿಂಗ್ ಹಾಗೂ ಮಹೇಶ್ ವಾಳ್ವೇಕರ್ ಅವರನ್ನು ಕೆಯುಡಬ್ಲೂೃಜೆ ವತಿಯಿಂದ ಗೌರವಿಸಲಾಯಿತು.
ಸಮಾರಂಭದಲ್ಲಿ ಕೆಯುಡಬ್ಲ್ಯೂಜೆ ಎಚ್.ಬಿ.ಮದನಗೌಡ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಕಾರ್ಯದರ್ಶಿ ಸೋಮಶೇಖರ ಕೆರೆಗೋಡು, ಖಜಾಂಚಿ ವಾಸುದೇವ ಹೊಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪದಾಧಿಕಾರಿಗಳು, ಸದಸ್ಯರೂ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೆಯುಡಬ್ಲೂಜೆ ಲಾಂಛನ ಕಪ್:
ಸಮಾರಂಭದಲ್ಲಿ ಕೆಯುಡಬ್ಲೂಜೆ ಲಾಂಚನ ಹೊಂದಿದ ಕಾಫಿ ಕಪ್‌ನ್ನು ಸಭಾಪತಿ ಬಸವರಾಜ ಹೊರಟ್ಟಿ, ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅನಾವಣ ಮಾಡಿದರು. ಇದೇ ಸಂದರ್ಭದಲ್ಲಿ ಕೆಯುಡಬ್ಲೂೃಜೆ ಹೊರ ತಂದಿರುವ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಲಾಯಿತು
The post ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗವೇ ಅತ್ಯಂತ ಶ್ರೇಷ್ಠ ಅಂಗ: ಸಭಾಪತಿ ಹೊರಟ್ಟಿ appeared first on Karnataka Kahale.
]]>The post ಹಂಪಿ ಕನ್ನಡ ವಿವಿ ಕುಲಪತಿಗಳ ಆಪ್ತಕಾರ್ಯದರ್ಶಿ ಎ.ಎಂ. ಕೃಪಾಶಂಕರ ಅವರಿಗೆ ಬಸವಸೇವಾ ಪುರಸ್ಕಾರ ಪ್ರದಾನ appeared first on Karnataka Kahale.
]]>
ಹಂಪಿ ಕನ್ನಡವಿವಿ, ಡಿ.26: ಸಂಡೂರು ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠ ಹಾಗೂ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳ ಸಹಯೋಗದಲ್ಲಿ ಆಯೋಜಿಸಲಾದ ಬಸವ ಬೆಳಗು ಹಾಗೂ ಬಸವ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳ ಆಪ್ತಕಾರ್ಯದರ್ಶಿ ಎ.ಎಂ. ಕೃಪಾಶಂಕರ ಅವರಿಗೆ ೨೦೨೫ರ ಬಸವಸೇವಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.
ಪುಸ್ತಕ ವಿನ್ಯಾಸ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಕನ್ನಡ ಸಾಹಿತ್ಯದ ಪ್ರಕಟಣಾ ಗುಣಮಟ್ಟ ಹೆಚ್ಚಿಸುವಲ್ಲಿ ಅವರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಮಠದ ವಕ್ತಾರರು ತಿಳಿಸಿದರು. ರಾಣೀಬೆನ್ನೂರು ತಾಲ್ಲೂಕಿನ ಶಾಸಕರಾದ ಪ್ರಕಾಶ ಕೋಳಿವಾಡ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಬಸವಣ್ಣನವರ ಮಾನವೀಯತೆ, ಸೇವಾ ಮನೋಭಾವ ಹಾಗೂ ಸಮಾನತೆಯ ತತ್ವಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎ.ಎಂ. ಕೃಪಾಶಂಕರ ಅವರು, ಈ ಗೌರವವನ್ನು ಪುಸ್ತಕ ವಿನ್ಯಾಸ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲರಿಗೂ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಪ್ರಭುದೇವರ ವಿರಕ್ತಮಠ ಸೇವಾಸಮಿತಿ, ಸಂಡೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಹಾವೇರಿ ಇದರ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭ ಬಸವಣ್ಣನವರ ಮಾನವೀಯತೆ, ಸೇವಾ ತತ್ವ ಹಾಗೂ ಸಾಮಾಜಿಕ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವಲ್ಲಿ ಯಶಸ್ವಿಯಾಯಿತು.
The post ಹಂಪಿ ಕನ್ನಡ ವಿವಿ ಕುಲಪತಿಗಳ ಆಪ್ತಕಾರ್ಯದರ್ಶಿ ಎ.ಎಂ. ಕೃಪಾಶಂಕರ ಅವರಿಗೆ ಬಸವಸೇವಾ ಪುರಸ್ಕಾರ ಪ್ರದಾನ appeared first on Karnataka Kahale.
]]>The post ಲೋಹಿಯ ಪ್ರಶಸ್ತಿ ಪ್ರದಾನ: ಸಂಕಷ್ಟದಲ್ಲೂ ಭರವಸೆಯ ಬೆಳಕಾಗಿ ಕಂಡವರು ತಗಡೂರು -ಗಣ್ಯರ ಶ್ಲಾಘನೆ appeared first on Karnataka Kahale.
]]>
ಬೆಂಗಳೂರು, ಡಿ.19: ನಿಸ್ವಾರ್ಥ, ಸೇವಾಮನೋಭಾವನೆಯಿಂದ ಕೆಲಸ ಮಾಡುವವರ ಸಂಖ್ಯೆ ವಿರಳವಾಗಿದೆ. ಅಂಥವರ ನಡುವೆ ಶಿವಾನಂದ ತಗಡೂರು ಅವರು ವಿಭಿನ್ನವಾಗಿ ಗಮನ ಸೆಳೆಯುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಗಣ್ಯರು ಶ್ಲಾಘಿಸಿದರು.
ರೈತ ಕುಟುಂಬದಿಂದ ಬಂದ ತಗಡೂರು ಅವರು ರೈತ ಮತ್ತು ಜನಪರ ಚಳವಳಿಯಲ್ಲಿ ಗುರುತಿಸಿಕೊಳ್ಳುತ್ತಲೇ ಪತ್ರಕರ್ತರಾಗಿ ರೂಪುಗೊಂಡಿದ್ದು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಚುಕ್ಕಾಣಿ ಹಿಡಿದು, ಆ ಮೂಲಕ ಪತ್ರಕರ್ತರ ಸಮುದಾಯಕ್ಕೆ ನೀಡುತ್ತಿರುವ ಸೇವೆ ಅನನ್ಯವಾದದ್ದು ಎಂದು ಸಮಾರಂಭದಲ್ಲಿ ಸ್ಮರಿಸಿ ಅಭಿನಂದಿಸಲಾಯಿತು.
ಬೆಂಗಳೂರು ನಾಗರೀಕರ ವೇದಿಕೆ ಮತ್ತು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟಸ್ಟ್ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ 3ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಶಿವಾನಂದ ತಗಡೂರು ಅವರಿಗೆ ಹಮ್ಮಿಕೊಂಡಿದ್ದ ನಾಗರೀಕ ಸನ್ಮಾನ ಮತ್ತು ಲೋಹಿಯಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಗಡೂರು ಅವರನ್ನು ಆತ್ಮೀಯವಾಗಿ ಅಭಿನಂದಿಸಿ, ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗಾಂಧಿಭವನದ ಅಧ್ಯಕ್ಷ ಮತ್ತು ಶಿಕ್ಷಣ ತಜ್ಞ ನಾಡೋಜ ಡಾ.ವೂಡೇ ಪಿ.ಕೃಷ್ಣ ಮಾತನಾಡಿ,
ಮುಖ್ಯವಾಹಿನಿ ಮಾಧ್ಯಮವು ಇಂದಿಗೂ ತನ್ನ ಗಟ್ಟಿತನದ ಮೂಲಕ ಘನತೆಯನ್ನು ಉಳಿಸಿಕೊಂಡು ಬಂದಿದೆ. ಇದೇ ನಮಗೆಲ್ಲ ಆಶಾದಾಯಕ ಬೆಳವಣಿಗೆ ಎಂದರು.

ರಾಮಮನೋಹರ ಲೋಹಿಯಾ ಅವರು ದೇಶದ ರಾಜಕಾರಣದಲ್ಲಿ ಚಲನೆಯನ್ನು ತಂದವರು. ಲೋಹಿಯಾ ವಾದದಲ್ಲಿ ಬೆಳೆದು ಅರಳಿದ ಪ್ರತಿಭೆಗಳು ದೇಶ ಉದ್ದಗಕ್ಕೂ ಇದ್ದಾರೆ. ಅವರ ಹೆಸರಿನ ಪ್ರಶಸ್ತಿಯನ್ನು ಶಿವಾನಂದ ತಗಡೂರು ಅವರಿಗೆ ನೀಡುತ್ತಿರುವುದು ಅಭಿನಂದನೀಯ ಮತ್ತು ನಮಗೆಲ್ಲರಿಗೂ ಹೆಮ್ಮೆ ಎಂದರು.
ಸಂಘಟನೆ, ಸಂಸ್ಕಾರ, ಸೇವೆ ವ್ಯಕ್ತಿಯ ಸಾಧನೆಗೆ ಮುಖ್ಯ. ಇನ್ನೊಬ್ಬರ ಸೇವೆಯಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವುದೇ ಸಾರ್ಥಕ ಬದುಕು. ಅಂತಹ ವ್ಯಕ್ತಿತ್ವದ ತಗಡೂರು ಇನ್ನಷ್ಟು ಎತ್ತ=ರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ಟ ಐನಕೈ ಅವರು, ಪತ್ರಕರ್ತರನ್ನು ಟೀಕೆ ಮಾಡುವವರೆ ಹೆಚ್ಚು. ಆದರೆ ಪತ್ರಕರ್ತರಿಗೆ ನಾಗರಿಕ ಸನ್ಮಾನ ಮಾಡುತ್ತಿರುವುದು ಅತ್ಯಂತ ಅಪರೂಪ. ಲೋಹಿಯಾ ಪ್ರಶಸ್ತಿಗಿಂತಲೂ ಈ ನಾಗರೀಕ ಸನ್ಮಾನ ಮುಖ್ಯವಾದದ್ದು. ಇದಕ್ಕೆ ಭಾಜನರಾಗಿರುವ ಶಿವಾನಂದ ತಗಡೂರು ನಿಜಕ್ಕೂ ಅಭಿನಂದನೀಯ ಎಂದರು.
ಅಭಿನಂದನಾ ಭಾಷಣ ಮಾಡಿದ ಕನ್ನಡಪ್ರಭ ಸಂಪಾದಕ ರವಿಹೆಗಡೆ, ಪತ್ರಿಕೋದ್ಯಮದಲ್ಲಿರುವ
ಎಡ ಬಲದ ಸಂಘರ್ಷದ ನಡುವೆ ಯಾವುದಕ್ಕೂ ಅಂಟಿಕೊಳ್ಳದೆ ತಗಡೂರು ಸೇವೆ ಸಲ್ಲಿಸುತ್ತಿರುವುದನ್ನು ನಾನು ಹತ್ತಿರದಿಂದ ನೋಡಿರುವೆ ಎಂದರು. ಎಲ್ಲಕ್ಕಿಂತಲೂ ಮೊದಲು ಮಾನವೀಯತೆಯೇ ನಿಜವಾದ ಪತ್ರಕರ್ತನ ಜವಾಬ್ದಾರಿ ಎನ್ನುವುದನ್ನು ಅರಿತು ಆ ನಿಟ್ಟಿನಲ್ಲಿಯೇ ಪತ್ರಕರ್ತರ ಸಂಘಟನೆಯನ್ನು ರೂಪಿಸಿ ನಡೆಸುತ್ತಿರುವುದು ವಿಶೇಷ ಎಂದು ಅವರ ಸೇವೆ ಸ್ಮರಿಸಿದರು.

ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಪತ್ರಕರ್ತರಿಗೆ ಹಗಲಿರಳು ನೆರವಾಗುವ ಮೂಲಕ ತಮ್ಮ ಹೊಣೆಗಾರಿಕೆಯನ್ನು ಮೆರೆದಿದ್ದ ತಗಡೂರು ಅವರನ್ನು ಗೌರವಿಸಲು ಇದು ನಮಗೆ ಸಿಕ್ಕ ಅವಕಾಶ ಎಂದರು.
ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್.ಆರತಿ ಮಾತನಾಡಿ, ಹಿರಿಯ ಪತ್ರಕರ್ತರನ್ನು ಅವರ ಮನೆಯ ಅಂಗಳದಲ್ಲಿ ಅಭಿನಂದಿಸುವ ಕೆಲಸ ಮಾಡಿದ ತಗಡೂರು ಅಭಿನಂದನೀಯ ಎಂದರು.
ಕಾರ್ಯಕ್ರಮದ ಸಂಯೋಜಕ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ) ಸ್ವಾಗತಿಸಿದರು. ಭೂಮಿ ಫೌಂಡೇಶನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ವಿತರಕರ ಸಂಘ, ರಂಗಸಿರಿ ಬಳಗ ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಶಿವಾನಂದ ತಗಡೂರು ಅವರನ್ನು ಅಭಿನಂದಿಸಿ ಗೌರವಿಸಿದವು.
The post ಲೋಹಿಯ ಪ್ರಶಸ್ತಿ ಪ್ರದಾನ: ಸಂಕಷ್ಟದಲ್ಲೂ ಭರವಸೆಯ ಬೆಳಕಾಗಿ ಕಂಡವರು ತಗಡೂರು -ಗಣ್ಯರ ಶ್ಲಾಘನೆ appeared first on Karnataka Kahale.
]]>The post ಲೋಹಿಯಾ ಪ್ರಶಸ್ತಿಗೆ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆಯ್ಕೆ:ಅಭಿನಂದನೆ appeared first on Karnataka Kahale.
]]>
ಬೆಂಗಳೂರು, ಡಿ.16: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ), ಬೆಂಗಳೂರು ಇವರು ಪ್ರತಿ ವರ್ಷ ಕೊಡಮಾಡುವ ಲೋಹಿಯಾ ಪ್ರಶಸ್ತಿಗೆ ಈ ಬಾರಿ (2025) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಆಯ್ಕೆಯಾಗಿದ್ದಾರೆ.
ರೈತ, ಜನಪರ ಹೋರಾಟ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸೇವೆ ಹಾಗೂ ಪತ್ರಕರ್ತರ ಸಂಘಟನೆಯಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಹಿರಿಯ ಪತ್ರಕರ್ತರು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ) ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 19 ಶುಕ್ರವಾರ ಬೆಳಗ್ಗೆ 11.15ಗಂಟೆಗೆ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಗಾಂಧಿ ಭವನದ ಅಧ್ಯಕ್ಷರಾದ ಡಾ.ವೂಡೇ ಪಿ ಕೃಷ್ಣ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ಸಂಪಾದಕರಾದ ರವೀಂದ್ರ ಭಟ್, ಕನ್ನಡ ಪ್ರಭ ಸಂಪಾದಕರಾದ ರವಿ ಹೆಗಡೆ, ದೂರದರ್ಶನ ಕಾರ್ಯಕ್ರಮ ಮುಖ್ಯಸ್ಥರಾದ ಎಚ್.ಎನ್.ಆರತಿ, ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರಾದ ಡಾ.ಎಂ.ಆರ್.ವೆಂಕಟೇಶ್ ಭಾಗವಹಿಸಲಿದ್ದಾರೆ ಎಂದು ಸಿಸಿರಾ ಅವರು ತಿಳಿಸಿದ್ದಾರೆ.
ಅಭಿನಂದನೆ:ಲೋಹಿಯಾ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಪತ್ರಕರ್ತರು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರನ್ನು ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಕೆಯುಡಬ್ಲ್ಯೂಜೆ ಬಳ್ಳಾರಿ ಜಿಲ್ಲಾ ಘಟಕದ ಮಾಜಿ ಖಜಾಂಚಿ ಸಿ.ಮಂಜುನಾಥ್ ಅಭಿನಂದಿಸಿದ್ದಾರೆ.
The post ಲೋಹಿಯಾ ಪ್ರಶಸ್ತಿಗೆ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆಯ್ಕೆ:ಅಭಿನಂದನೆ appeared first on Karnataka Kahale.
]]>