The post ಕರ್ನಾಟಕ ಬಯಲಾಟ ಅಕಾಡೆಮಿಯ 2025ನೇ ಸಾಲಿನ ಬಯಲಾಟ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟ: ವಿಶೇಷ ಪ್ರಶಸ್ತಿಗೆ ಬಳ್ಳಾರಿಯ ಕೆ.ಈರಣ್ಣ, ವಾರ್ಷಿಕ ಪ್ರಶಸ್ತಿಗೆ ತಾಳೂರು ಬಂಡ್ರಿ ಲಿಂಗಪ್ಪ ಸೇರಿ ಹದಿನೈದು ಸಾಧಕರು ಆಯ್ಕೆ -ಡಾ.ಕೆ. ಆರ್. ದುರ್ಗಾದಾಸ್ appeared first on Karnataka Kahale.
]]>
ಅವರು ನವನಗರದ ಪತ್ರಿಕಾಭವನದಲ್ಲಿ ಇಂದು(ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗೌರವ ಪ್ರಶಸ್ತಿ ಪುರಸ್ಕೃತರು: ಬಳ್ಳಾರಿಯ ಕೆ.ಈರಣ್ಣ (ಬಯಲಾಟ) ಕೊಪ್ಪಳದ ಹನಮಂತಪ್ಪ ಪೂಜಾರ (ಸಣ್ಣಾಟ),ಬೆಳಗಾವಿಯ ಕಾಡಪ್ಪಾ ಯಲ್ಲಪ್ಪಾ ಉಪ್ಪಾರ (ಸಣ್ಣಾಟ), ಹಾಸನ ಆರ್.ಬಿ.ಪುಟ್ಟೇಗೌಡ (ಮೂಡಲಪಾಯ), ಬೆಳಗಾವಿಯ ಶ್ರೀಮತಿ ಹೆಗಡೆ (ದೊಡ್ಡಟ) ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಮೈಸೂರಿನ ಎಚ್.ಸಿ.ಶಿವಬುದ್ದಿ (ಸೂತ್ರದ ಗೊಂಬೆ ಯಾಟ), ಮಂಡ್ಯದ ಜಯಪ್ರಕಾಶಗೌಡ (ಮೂಡಲ ಪಾಯ), ವಿಜಯನಗರ ಹೊಳೆಯಾಚೆ ಕೊಟ್ರಪ್ಪ (ಬಯಲಾಟ), ಬಾಗಲಕೋಟೆಯ ಶಿವಾಜಿ ಜಾಧವ (ಬಯಲಾಟ), ಚಿತ್ರದುರ್ಗದ ನಂದಗೋಪಾಲ (ಬಯಲಾಟ), ಧಾರವಾಡ ಮಲ್ಲಪ್ಪ ಕರಿಮಲ್ಲಣ್ಣವರ (ದೊಡ್ಡಾಟ), ಬಳ್ಳಾರಿ ಬಂಡ್ರಿ ಲಿಂಗಪ್ಪ (ಬಯಲಾಟ), ವಿಜಯನಗರ ಚೂಟಿ ಚಿದಾನಂದ (ಬಯಲಾಟ), ದಾವಣಗೆರೆ ಓದೋವೀರಪ್ಪ (ಬಯಲಾಟ) ವಿಜಯಪುರದ ಮಳೆಪ್ಪ ಬಸಪ್ಪ ಬಡಿಗೇರ (ಬಯಲಾಟ) ಹೆಸರನ್ನು ಘೋಷಿಸಿದರು.

ಗೌರವ ಮತ್ತು ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.50,000 ಗಳ ನಗದು, ಪ್ರಶಸ್ತಿ ಫಲಕ, ಶಾಲು, ಹಾರ ಹಾಗೂ ಪ್ರಶಸ್ತಿ ಪತ್ರ ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.25,000 ಗಳ ನಗದು, ಪ್ರಶಸ್ತಿ ಫಲಕ, ಶಾಲು ಹಾರ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರುವರಿ ಮೊದಲ ವಾರದಲ್ಲಿ ಧಾರವಾಡದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬಯಲಾಟ ಸಮಷ್ಠಿ ಪ್ರಧಾನವಾದ ಕಲೆಯಾಗಿದ್ದು, ಜನ ಸಾಮಾನ್ಯರ ಅದರಲ್ಲೂ ರೈತಾಪಿ ಜನಗಳು ಈ ಕಲೆಯನ್ನು ಕಟ್ಟಿ ಬೆಳೆಸಿದ್ದಾರೆ. ಎಲ್ಲಾ ಜಾತಿಗಳ ಮತ ಧರ್ಮದ ಜನರು ಒಂದಾಗಿ ಒಟ್ಟಾಗಿ ಈ ಕಲೆಯ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ಈ ಕಲೆಯು ಪ್ರಾದೇಶಿಕವಾಗಿ ಭಿನ್ನವಾಗಿ ಬೆಳೆದು ಬಂದಿರುವುದರ ಜೊತೆಗೆ ರಾಜ್ಯದ 20 ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ. ಉತ್ತರ ಕರ್ನಾಟಕದಲ್ಲಿ ಸಣ್ಣಾಟ, ದೊಡ್ಡಾಟ, ಮತ್ತು ಶ್ರೀಕೃಷ್ಣ ಪಾರಿಜಾತದಂತಹ ಕಲಾಪ್ರಕಾರಗಳಾಗಿಯೂ ಕುಡಿಯೊಡದಿದೆ. ಜೊತೆಗೆ ಪಾರಂಪರಿಕ ಕಲೆಗಳಾದ ತೊಗಲುಗೊಂಬೆಯಾಟ, ಸೂತ್ರದ ಗೊಂಬೆಯಾಟಗಳು ಸೇರಿವೆ ಎಂದರು.
ಅಕಾಡೆಮಿಯು ಈ ಕಲೆಯ ಬೆಳೆವಣಿಗೆಗಾಗಿ ಹಲವುಯೋಜನೆಗಳನ್ನು ಹಾಕಿಕೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಜಾತ್ರೆಗಳ ಸಂದರ್ಭದಲ್ಲಿ ಹವ್ಯಾಸಿ ಕಲಾವಿದರು ಮಾಡುವ ಬಯಲಾಟ ಪ್ರದರ್ಶನಗಳಿಗೆ ರೂ.25000 ಗಳಿಂದ 35000 ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ.. ಜಿಲ್ಲಾವಾರು ಕೇಂದ್ರಗಳಲ್ಲಿ ಬಯಲಾಟ ಉತ್ಸವ, ಸಮ್ಮೇಳ ನಡೆಯುತ್ತದೆ. ತರಬೇತಿ ಕಾರ್ಯಕ್ರಮ, ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತಿದ್ದು, ಬಯಲಾಟ ಕಲೆಯ ಪ್ರಚಾರದ ದೃಷ್ಠಿಯಿಂದ ಹಸ್ತಪ್ರತಿಗಳ ಸಂಗ್ರಹ ಮತ್ತು ಪುಸ್ತಕ ಪ್ರಕಟಣೆ ಮಾಡುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯ ನಿರ್ದೇಶಕಿ ಕಸ್ತೂರಿ ಪಾಟೀಲ ಮತ್ತು ಭೀಮಪ್ಪ ಹುದ್ದಾರ ಉಪಸ್ಥಿತರಿದ್ದರು.
——
The post ಕರ್ನಾಟಕ ಬಯಲಾಟ ಅಕಾಡೆಮಿಯ 2025ನೇ ಸಾಲಿನ ಬಯಲಾಟ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟ: ವಿಶೇಷ ಪ್ರಶಸ್ತಿಗೆ ಬಳ್ಳಾರಿಯ ಕೆ.ಈರಣ್ಣ, ವಾರ್ಷಿಕ ಪ್ರಶಸ್ತಿಗೆ ತಾಳೂರು ಬಂಡ್ರಿ ಲಿಂಗಪ್ಪ ಸೇರಿ ಹದಿನೈದು ಸಾಧಕರು ಆಯ್ಕೆ -ಡಾ.ಕೆ. ಆರ್. ದುರ್ಗಾದಾಸ್ appeared first on Karnataka Kahale.
]]>The post ಮನೆಯಂಗಳದಲ್ಲಿ ರಂಗ ಗೌರವ: ಹಿರಿಯ ಬಯಲಾಟ ಕಲಾವಿದ ಬಂಡ್ರಿ ಲಿಂಗಪ್ಪಗೆ ಸನ್ಮಾನ appeared first on Karnataka Kahale.
]]>ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಗ್ರಾಮದ ಕಲಾವಿದರ ಮನೆಯಂಗಳದಲ್ಲಿ ಸಂಸ್ಕೃತಿ ಪ್ರಕಾಶನ ಮತ್ತು ಕರ್ನಾಟಕ ಕಹಳೆ ಡಾಟ್ ಕಾಮ್ ಸಹಯೋಗದಲ್ಲಿ ಶನಿವಾರ ಸಂಜೆ ಜರುಗಿದ ಸರಳ ಸಮಾರಂಭದಲ್ಲಿ ವೇದಿಕೆ ಅಧ್ಯಕ್ಷ ಸಿ.ಮಂಜುನಾಥ್ ಶಾಲು ಹೊದೆಸಿ ಸನ್ಮಾನ ಪತ್ರ ನೀಡಿ ಗೌರವಿಸಿದರು.
ಮುಖ್ಯ ಅತಿಥಿ ಗಾಂಧಿ ವಿಚಾರ ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಡಾ. ನಾಗರಾಜ ಬಸರಕೋಡು ಮಾತನಾಡಿ ಡಾ. ಭರಣಿ ವೇದಿಕೆ ಕಳೆದ 18 ವರ್ಷಗಳಿಂದ ರಂಗ ಕಲಾವಿದರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಾಧಕರನ್ನು ಗೌರವಿಸುವುದು ಮಾದರಿ ಕಾರ್ಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಬಳ್ಳಾರಿ ಜಿಲ್ಲೆಯ ಗಂಡು ಮೆಟ್ಟಿನ ಕಲೆಯಾದ ಬಯಲಾಟವನ್ನು ಬದಲಾದ ಕಾಲಕ್ಕನುಗುಣವಾಗಿ ಪರಿಷ್ಕೃತ ಗೊಳಿಸುವ ಅಗತ್ಯವಿದ್ದು, ಹಿರಿಯ ಬಯಲಾಟ ಕಲಾವಿದರಾದ ಬಂಡ್ರಿ ಲಿಂಗಪ್ಪ ಅವರು ಇಂತಹ ಪ್ರಯೋಗಗಳಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಅಶ್ವರಾಮು ಮಾತನಾಡಿ, ಎಂಬತ್ತರ ಹರೆಯದ ಹಿರಿಯ ಚೇತನ ಬಂಡ್ರಿ ಲಿಂಗಪ್ಪ ಅವರು ಆರು ದಶಕಗಳಿಂದ ಹಲವು ಬಯಲಾಟಗಳಲ್ಲಿ ಅಭಿನಯಿಸಿ ಸೈ ಎನಿಸಿ ಕೊಂಡಿದ್ದಾರೆ. ವಿಶೇಷವಾಗಿ ರತಿ ಕಲ್ಯಾಣದ ಮನ್ಮಥ ಪಾತ್ರವನ್ನು ಈ ಇಳಿ ವಯಸ್ಸಿನಲ್ಲೂ ಮನೋಜ್ಞವಾಗಿ ಅಭಿನಯಿಸುತ್ತಾರೆ ಎಂದು ಕೊಂಡಾಡಿದರು.
ಡಾ. ಭರಣಿ ವೇದಿಕೆ ಕಾರ್ಯ ತಮಗೆ ಸ್ಪೂರ್ತಿ ನೀಡಿದ್ದು ನಾಡೋಜ ದರೋಜಿ ಈರಮ್ಮ ಫೌಂಡೇಷನ್ ಪ್ರತಿ ವರ್ಷ ವಿಶ್ವ ಜಾನಪದ ದಿನದಂದು ಜಾನಪದ ಕಲಾವಿದರ ಮನೆಗಳಿಗೆ ತೆರಳಿ ಸತ್ಕರಿಸಲಾಗುವುದು ಎಂದು ಪ್ರಕಟಿಸಿದರು.
ವೇದಿಕೆ ಅಧ್ಯಕ್ಷ ಸಿ.ಮಂಜುನಾಥ್ ಮಾತನಾಡಿ, ಬಯಲಾಟ ಕ್ಷೇತ್ರಕ್ಕೆ ಎಲೆಮರೆ ಕಾಯಿಯಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬಂಡ್ರಿ ಲಿಂಗಪ್ಪ ಅವರನ್ನು ಗೌರವಿಸುತ್ತಿರುವುದು ಹೆಮ್ಮೆ, ಸಂತೃಪ್ತಿ ತಂದಿದೆ. ಯಾವುದೇ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಆಸೆ ಇಲ್ಲದೇ ಜಾನಪದ ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸುತ್ತಿರುವ ಬಂಡ್ರಿ ಲಿಂಗಪ್ಪ ಅವರಿಗೆ ರಾಜ್ಯ, ಕೇಂದ್ರ ಸರಕಾರಗಳು, ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸ ಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಲಿಂಗಪ್ಪ ಅವರ ಪುತ್ರ ಬಂಡ್ರಿ ಯಂಕಪ್ಪ, ಗ್ರಾಮದ ಯುವ ಬಯಲಾಟ ಕಲಾವಿದರಾದ ಸುದೀಪ್, ಬಂಡ್ರಿ ಪ್ರವೀಣ್ ಕುಮಾರ್ ಮತ್ತಿತರರು ಇದ್ದರು.
—–
The post ಮನೆಯಂಗಳದಲ್ಲಿ ರಂಗ ಗೌರವ: ಹಿರಿಯ ಬಯಲಾಟ ಕಲಾವಿದ ಬಂಡ್ರಿ ಲಿಂಗಪ್ಪಗೆ ಸನ್ಮಾನ appeared first on Karnataka Kahale.
]]>The post ಇಂದು ಸಂಜೆ ಬಳ್ಳಾರಿಯಲ್ಲಿ ‘ಕಾರ್ತೀಕ ಸಾಂಸ್ಕೃತಿಕ ಉತ್ಸವ’: ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಆಯೋಜನೆ appeared first on Karnataka Kahale.
]]>
ಬಳ್ಳಾರಿ, ಡಿ.1: ನಗರದ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಇಂದು(ಶುಕ್ರವಾರ) ಸಂಜೆ ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದ ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ‘ಕಾರ್ತೀಕ ಸಾಂಸ್ಕೃತಿಕ ಉತ್ಸವ’ ವನ್ನು ಆಯೋಜಿಸಿದೆ.
ಸಂಜೆ ಆರು ಗಂಟೆಗೆ ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಉತ್ಸವಕ್ಕೆ ಚಾಲನೆ ನೀಡುವರು.
ನಗರ ಶಾಸಕ ನಾರಾ ಭರತರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ವಿಶೇಷ ಆಹ್ವಾನಿತರಾಗಿ ಕಾಂಗ್ರೆಸ್ ಮುಖಂಡ ಬಿ. ವೆಂಕಟೇಶ್ ಪ್ರಸಾದ್, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ, ಹಾನಗಲ್ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮುಂಡರಗಿ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ, ಬಿಡಿ ಹಳ್ಳಿ ಕಾಂಗ್ರೆಸ್ ಮುಖಂಡ ಬಿ. ಸತ್ಯನಾರಾಯಣ ರೆಡ್ಡಿ, ಶ್ರೀ ವಾಲ್ಮೀಕಿ ಮಹರ್ಷಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮ,ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆಗಿರುವ ಕರ್ನಾಟಕ ಕಹಳೆ ಡಾಟ್ ಕಾಮ್ ನ ಸಂಪಾದಕ ಸಿ.ಮಂಜುನಾಥ್, ಹಿರಿಯ ಪತ್ರಕರ್ತರಾದ ಶಶಿಧರ ಮೇಟಿ, ಕೆ. ಎಂ.ಮಂಜುನಾಥ್, ಮುಖಂಡ ಬೂದಗುಪ್ಪದ ವಿಶ್ವನಾಥ ಸಾಹುಕಾರ್ ಅವರು ಭಾಗವಹಿಸುವರು.

ಸಾಂಸ್ಕೃತಿಕ ಕಾರ್ಯಕ್ರಮ: ಆಕಾಶವಾಣಿ ಕಲಾವಿದ ಸಿ.ಎಂ. ಸಾರಂಗಮಠ ಮತ್ತು ಎನ್. ಲೋಕೇಶ್ ಶಿಡಗಿನಮೊಳ ಇವರಿಂದ ಸುಗಮ ಸಂಗೀತ ಮತ್ತು ವಚನ ಗಾಯನ, ಶ್ರೀಮತಿ ಸುಜಾತಮ್ಮ ಮತ್ರು ಶ್ರೀಮತಿ ಎರ್ರೆಮ್ಮ ತಂಡದಿಂದ ರಂಗ ಗೀತೆ ಮತ್ತು ಬಯಲಾಟ ಪದಗಳು, ಇಂದ್ರಾಣಿ ನಾಟ್ಯ ಕಲಾ ತಂಡದಿಂದ ಸಮೂಹ ನೃತ್ಯ ಗಾಯನ ಪ್ರಸ್ತುತ ಪಡಿಸುವರು.

ವಿಶೇಷ ಆಕರ್ಷಣೆ: ರಾಮಾಯಣ ಬಯಲಾಟ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಬಿ. ಲಕ್ಷ್ಮೀನಾರಾಯಣ ತಿಳಿಸಿದ್ದಾರೆ. ಬಳ್ಳಾರಿ ಆಕಾಶವಾಣಿ ಅರೆಕಾಲಿಕ ಉದ್ಘೋಷಕ ಬಸವರಾಜ ಅಮಾತಿ ಕಾರ್ಯಕ್ರಮ ನಿರೂಪಿಸುವರು.
——
The post ಇಂದು ಸಂಜೆ ಬಳ್ಳಾರಿಯಲ್ಲಿ ‘ಕಾರ್ತೀಕ ಸಾಂಸ್ಕೃತಿಕ ಉತ್ಸವ’: ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಆಯೋಜನೆ appeared first on Karnataka Kahale.
]]>The post ಸೋಮಸಮುದ್ರದಲ್ಲಿ ಮನರಂಜಿಸಿದ ಹಂದ್ಯಾಳ್ ಶ್ರೀ ಮಹಾದೇವತಾತ ಕಲಾ ಸಂಘದ ‘ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ’ appeared first on Karnataka Kahale.
]]>
ನಂತರ ಮಾತನಾಡಿದ ಅವರು, ರಂಗ ಕಲೆ ಗ್ರಾಮೀಣ ಜನರ ಅಚ್ಚುಮೆಚ್ಚಿನ ಕಲೆಯಾಗಿದೆ. ಯಾವುದೇ ನಾಟಕವಾಗಲಿ ಅದನ್ನು ಗ್ರಾಮದ ಜನರು ಒಟ್ಟಾಗಿ ಕುಳಿತು ಹಬ್ಬದ ರೀತಿ ಸಂಭ್ರಮಿಸಿ ನೋಡುತ್ತಾರೆ. ಇಂದು ಈ ಗ್ರಾಮದಲ್ಲಿ ಸಹ ಇದೆ ವಾತಾವರಣ ಇದೆ ಎಂದರು.
ರಂಗ ಕಲೆಗೆ ಪ್ರೋತ್ಸಾಹದ ಕೊರತೆ ಕಾಡುತ್ತಿದೆ. ಟಿವಿ ಧಾರಾವಾಹಿ, ಸಿನಿಮಾ ಹಾವಳಿಗೆ ನಮ್ಮ ರಂಗಭೂಮಿ ನಲುಗುವ ಹಾಗೆ ಹಾಗಿದೆ. ಇದನ್ನು ಪ್ರೋತ್ಸಾಹಿಸುವ ಅನಿವಾರ್ಯತೆ ಎಲ್ಲರ ಮೇಲಿದೆ. ಈ ಹಂದ್ಯಾಳು ಮಹಾದೇವತಾತಕಲಾಸಂಘವು ಕಳೆದ 18 ವರ್ಷಗಳಿಂದ ಗ್ರಾಮೀಣ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿರುವುದು ಶ್ಲಾಘನೀಯವೆಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದ್ಯಾಳು ಮಾತನಾಡಿ, ಕಲಾ ಸೇವೆ ಒಂದು ಪವಿತ್ರ ಕೆಲಸ. ಯಾವುದೇ ಕಲೆ ಆಗಲಿ ಜಾತಿ, ಬಣ್ಣ, ವರ್ಗ ನೋಡಿ ಒಲಿಯುವುದಿಲ್ಲ. ಬದಲಿಗೆ ಶ್ರಮ, ಆಸಕ್ತಿ ಆಧಾರದಲ್ಲಿ ಒಲಿಯುತ್ತದೆ. ಯಾರೇ ಆಗಲಿ ಕಲಾ ಸೇವೆ ಮಾಡುವ ಮನಸ್ಸು ಹೊಂದಿದವರು ಹಿಂಜರಿಕೆ ಮಾಡದೆ ಸೇವೆ ಮಾಡಲು ಮುಂದಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಮಹಾದೇವ ತಾತ ಕಲಾಸಂಘದ ಅಧ್ಯಕ್ಷ, ಪುರುಷೋತ್ತಮ ಹಂದ್ಯಾಳು ಅವರು, ಸೋಮಸಮುದ್ರದ ಜನ ಕಲಾ ಆರಾಧಕರು. ಯಾವಾಗ ನಾಟಕ ಪ್ರದರ್ಶನ ಮಾಡಿದರು ಸಹಿತ ನೋಡಲು ಕಿಕ್ಕಿರಿದು ಸೇರುತ್ತಾರೆ. ಕಲೆಯನ್ನು ಪ್ರೋತ್ಸಾಹಿಸುವ ವಿಚಾರದಲ್ಲಿ ಎತ್ತಿದ ಕೈ ಎಂದರು.
ಹಿರಿಯ ಪತ್ರಕರ್ತ ಪಾಟೀಲ್ ವೀರನಗೌಡ ಅವರು ಮಾತನಾಡಿ, 18 ವರ್ಷದ ಹಿಂದೆ ಗ್ರಾಮೀಣ ಭಾಗದಲ್ಲಿ ಸ್ಥಾಪಿತವಾದ ಮಹಾದೇವ ತಾತ ಕಲಾ ಸಂಘ ಇಂದು ರಾಜ್ಯಾದ್ಯಂತ ತನ್ನದೇ ಛಾಪು ಮೂಡಿಸಿದೆ. ಕಾರಣ ಕಂದಗಲ್ಲು ಹನುಮಂತ ರಾಯರು ರಚಿಸಿದ ರಕ್ತ ರಾತ್ರಿ ನಾಟಕದಲ್ಲಿ ಪುರುಷೋತ್ತಮ ಹಂದ್ಯಾಳು ಅವರು ಶಕುನಿ ಪಾತ್ರದ ಮನಮೆಚ್ಚುವ ಅಭಿನಯವಾಗಿದೆ ಎಂದರು.

ಗ್ರಾಮದ ಹಿರಿಯ ಬಯಲಾಟ ಕಲಾವಿದ ಬಡಿಗೇರ ಈರಣ್ಣ(ಕಾಶಪ್ಪ) ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶರಣಬಸವ ಮತ್ತು ತಂಡದಿಂದ ಸೀತಾಪಹರಣ ಬಯಲಾಟ ಪ್ರದರ್ಶನ, ಕುಮಾರಿ ಎಸ್. ಅಭಿನಯ ನೃತ್ಯ ಪ್ರದರ್ಶನ. ಕುಮಾರ ಗೌಡ ಮತ್ತು ತಂಡದಿಂದ ಭಜನಾ ಕಾರ್ಯಕ್ರಮಗಳು ನಡೆದವು. ಆರ್.ಕೆ.ಯರೆಗೌಡ ಜಾನಪದ ಗೀತೆ ಗಾಯನ ಮಾಡಿದರು.
ಸೋಮಸಮುದ್ರ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಭದ್ರಪ್ಪ, ಉಪಾಧ್ಯಕ್ಷರು, ಸರ್ವ ಸದಸ್ಯರು, ಪುರುಷೋತ್ತಮ ಗೌಡ, ಮಂಜುನಾಥ್, ಪಂಚಣ್ಣ ಜಡೆಗೌಡ, ಟಿ.ಸಿದ್ದನಗೌಡ, ಗೊರವರ ಬಸವರಾಜ್, ಎಂ.ಹನುಮಂತಪ್ಪ ,ಹಾಗು ಊರಿನ ಮುಖಂಡರು ಮುಂತಾದವರು ಇದ್ದರು.
*****
The post ಸೋಮಸಮುದ್ರದಲ್ಲಿ ಮನರಂಜಿಸಿದ ಹಂದ್ಯಾಳ್ ಶ್ರೀ ಮಹಾದೇವತಾತ ಕಲಾ ಸಂಘದ ‘ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ’ appeared first on Karnataka Kahale.
]]>The post ಬಯಲಾಟ ಜನಪದ ರಂಗಭೂಮಿಯ ಗಂಡು ಕಲೆ -ಡಾ.ದಸ್ತಗೀರಸಾಬ್ ದಿನ್ನಿ appeared first on Karnataka Kahale.
]]>
ಆಲಾಪ್ ಸಂಗೀತ ಕಲಾ ಟ್ರಸ್ಟ್ (ರಿ) ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿ ತಾಲೂಕಿನ ಕೊರ್ಲಗುಂದಿ ಗ್ರಾಮದ ಶ್ರೀ ಅಡವಿ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿನಿಮಾ-ದೂರದರ್ಶನದಂತಹ ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ಬಯಲಾಟ ಕಲೆ ನಶಿಸುತ್ತಿದೆ ಎಂದು ವಿಷಾಧಿಸಿದರು.
ಈ ಕಲೆಯನ್ನು ಉಳಿಸಿಕೊಂಡು ಹೋಗಬೇಕಾದದು ನಮ್ಮೆಲ್ಲರ ಸಾಂಸ್ಕೃತಿಕ ಹೊಣೆಗಾರಿಕೆ. ಬಯಲಾಟವು ಮನೋರಂಜನೆಯ ಜೊತೆಗೆ ಪುರಾಣ ಕಲ್ಪನೆ , ಭಕ್ತಿ , ಸತ್ಯ ,ವೈರಾಗ್ಯ, ನೀತಿಯನ್ನು ದರ್ಶಿಸುತ್ತದೆ ಎಂದರು.
ಗಟ್ಟಿ ಸಂಭಾಷಣೆ ,ಕುಣಿತ , ಸಂಗೀತದಂತಹ ಚಹರೆಗಳಿಂದ ಪ್ರೇಕ್ಷಕರನ್ನು ಆಕರ್ಷಿಸುವ ಈ ಕಲೆ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿರುವುದು ಸಂತೋಷದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಹೊಸ ತಲೆಮಾರು ಇಂತಹ ಕಲೆಗಳ ಬಗೆಗೆ ಆಸಕ್ತಿ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಮಹಿಳಾ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವುದರ ಮೂಲಕ ಪ್ರೋತ್ಸಾಹಿಸಬೇಕೆಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯ ಎಚ್ ತಿಪ್ಪೇಸ್ವಾಮಿ ಅವರು ಮಾತನಾಡಿ, ಹಳ್ಳಿಗಳಲ್ಲಿ ಬಯಲಾಟ ಎಂದು ಕೂಡಲೇ ಹಬ್ಬದ ವಾತಾವರಣ ಸಡಗರ ಕಂಡುಬರುತ್ತದೆ ನಾಟಕಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುವುದು ಹಳ್ಳಿಗಳಲ್ಲಿ ಮಾತ್ರ ಎಂದು ತಿಳಿಸಿದರು.
ಕೊರ್ಲಗುಂದಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶ್ರೀಮತಿ ಮಲ್ಲಮ್ಮ, ಉಪಾಧ್ಯಕ್ಷ ವೀರ ರಾಘವ ರೆಡ್ಡಿ ಮತ್ತು ಗಾಪಂ ಎಲ್ಲಾ ಸದಸ್ಯರು, ಬಯಲಾಟ ಪರಿಷತ್ತು ಅಧ್ಯಕ್ಷ ಬಿ ನಾಗನಗೌಡ ಮತ್ತು ಆಲಾಪ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ: ಬಳಿಕ ಜಾನಪದ ಗೀತೆಗಳನ್ನು ಕೆ.ತಾಯಪ್ಪ ಕಲಾತಂಡ ಹಾಗೂ ಬಯಲಾಟ ರಂಗಗೀತೆಗಳನ್ನು ಶ್ರೀಮತಿ ಮಂಜಮ್ಮ ದಾವಣಗೆರೆ ಕಲಾತಂಡದವರು ಪ್ರಸ್ತುತ ಪಡಿಸಿದರು “ಭಾರ್ಗವ ಪರಶುರಾಮ” ಬಯಲಾಟವನ್ನು ಹೆಚ್.ತಿಪ್ಪೇಸ್ವಾಮಿ ಮತ್ತು ತಂಡದವರು ಪ್ರದರ್ಶಿಸಿದರು.
ರಮಣಪ್ಪ ಭಜಂತ್ರಿ ಸ್ವಾಗತಿಸಿದರು.ಜಡೇಶ ಎಮ್ಮಿಗನೂರು ವಂದಿಸಿದರು. ವಿಷ್ಣು ಹಡಪದ ವಂದಿಸಿದರು. ನಾಗನಗೌಡ ಪ್ರಾರ್ಥಿಸಿದರು.

*****
The post ಬಯಲಾಟ ಜನಪದ ರಂಗಭೂಮಿಯ ಗಂಡು ಕಲೆ -ಡಾ.ದಸ್ತಗೀರಸಾಬ್ ದಿನ್ನಿ appeared first on Karnataka Kahale.
]]>The post ಬಯಲಾಟ ಕಲಾವಿದರ ಸಂಕಷ್ಟಗಳಿಗೆ ಸರಕಾರ ಸ್ಪಂದಿಸಬೇಕು -ಗೋನಾಳ್ ವಿರುಪಾಕ್ಷಗೌಡ appeared first on Karnataka Kahale.
]]>
ಬಳ್ಳಾರಿ, ಡಿ.16: ಗಂಡುಮೆಟ್ಟಿನ ಕಲೆಯಾದ ಬಯಲಾಟವನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದು ಜಿ.ಪಂ ಮಾಜಿ ಸದಸ್ಯ ಗೋನಾಳ್ ವಿರುಪಾಕ್ಷಗೌಡ ಅವರು ಹೇಳಿದರು.
ನಗರದ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣದಲ್ಲಿ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಗಿರಿಜನ ಉಪ ಯೋಜನೆ ಅಡಿಯಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಯಲಾಟವನ್ನು ಗ್ರಾಮೀಣ ಪ್ರದೇಶದಲ್ಲಿ ಅಪಾರವಾಗಿ ಪ್ರೀತಿಸುತ್ತಾರೆ. ಬಯಲಾಟದ ಜತೆ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಸರಕಾರ ಕಲೆಯನ್ನು ಉಳಿಸುವ ಜೊತೆಗೆ ಕಲಾವಿದರ ಸಂಕಷ್ಟಗಳಿಗೂ ಸ್ಪಂದಿಸಬೇಕು. ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು. ಬಣ್ಣದ ಬದುಕಿನ ನೋಡಲು ಚಂದ. ಅದರೆ, ಜೀವನ ನಡೆಸುವುದು ಕಷ್ಟಕರವಾಗಿದೆ. ಬಹಳಷ್ಟು ಕಲಾವಿದರ ಬದುಕು ಇಂದು ಬೀದಿ ಪಾಲಾಗಿದೆ. ಅಂತವರನ್ನು ಗುರುತಿಸುವ ಕಾರ್ಯಕ್ಕೆ ಸರಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದರು.

ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಬಯಲಾಟ ಸಂಘ ಸಂಸ್ಥೆಗಳು ಅಸ್ತಿತ್ವಕ್ಕೆ ಬರುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕರು ಯೋಚಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ರಮೇಶ್ ಗೌಡ ಪಾಟೀಲ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮ, ಚಟುವಟಿಕೆಗಳಿಗೆ ಸರಕಾರ ಅನುದಾನ ನೀಡುವುದೇನೋ ಸರಿ ಆದರೆ ಇಲ್ಲದ ನಿಯಮಗಳನ್ನು ಹೇರುವುದು ಸರಿಯಲ್ಲ. ಕಾರ್ಯಕ್ರಮದ ಫೋಟೋ, ವರದಿ ಸಾಕು. ವಿಡಿಯೋ ಚಿತ್ರೀಕರಣದ ದಾಖಲೆ ಕೇಳುವುದು ಬೇಡ ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಮಾತನಾಡಿ, ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮ ಅವರು ತಮ್ಮ 74ರ ಇಳಿ ವಯಸ್ಸಿನಲ್ಲೂ ಬಯಲಾಟ ಉಳಿಸಿ ಬೆಳೆಸಲು ಟ್ರಸ್ಟ್ ರಚಿಸಿ ಶ್ರಮಿಸುತ್ತಿರುವುದು ಮಾದರಿ ಕಾರ್ಯ ಎಂದು ಶ್ಲಾಘಿಸಿದರು.
ಒಂಬತ್ತು ವರ್ಷದಲ್ಲೇ ಬಾಲ ಕಲಾವಿದೆಯಾಗಿ ರಂಗ ಪ್ರವೇಶಿಸಿದ ಸುಜಾತಮ್ಮ ಅವರನ್ನು ತೆಲುಗು ಚಿತ್ರರಂಗ ಕೈಬೀಸಿ ಕರೆದರೂ ಬಯಲಾಟದ ಮೇಲಿನ ಪ್ರೀತಿ ಅಲ್ಲಿಗೆ ಹೋಗೋಡಲಿಲ್ಲ ಎಂದರು.
ಅಪ್ರತಿಮ ಕಲಾವಿದರಾದ ಇವರಿಗೆ ಬರುವ ವರ್ಷ ಶ್ರೀವಾಲ್ಮೀಕಿ ಪ್ರಶಸ್ತಿಯನ್ನು ಸರಕಾರ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ, ಕರ್ನಾಟಕ ಜಾನಪದ ಪರಿಷತ್ ಕುರುಗೋಡು ತಾಲೂಕು ಘಟಕದ ಅಧ್ಯಕ್ಷ ಚಾನಾಳ್ ಅಮರೇಶ್ ಮಾತನಾಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಶ್ರೀ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತೆ, ಹಿರಿಯ ಬಯಲಾಟ ಕಲಾವಿದೆ ಉಷಾರಾಣಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಚ್. ಪಾಂಡುರಂಗಪ್ಪ ಮತ್ತು ಹಿರಿಯ ರಂಗ ಕಲಾವಿದ ರಮೆಶಗೌಡ ಪಾಟೀಲ್ ಆವರನ್ನು ಟ್ರಸ್ಟ್ ಪರವಾಗಿ ಸನ್ರಮಾನಿಸಿ ಗೌರವಿಸಲಾಯಿತು.
ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಅಧ್ಯಕ್ಷೆ ಸುಜಾತಮ್ಮ, ಬಯಲಾಟ ಮಾಸ್ತರುಗಳಾದ ವೈ.ರಂಗಾರೆಡ್ಡಿ, ಹನುಮಾವಧೂತ, ಎರಗುಡಿ ಮುಖಂಡ ಎ.ಗೋಪಾಲ್, ಜಿ. ಮುದ್ದಪ್ಪ, ಹೆಚ್. ಚಂದ್ರಶೇಖರ,ಕಥಾ ಸಂಚಾಲಕ ಜಿ. ಭೀಮಪ್ಪ, ಹರ‍್ಮೋನಿಯಂ ವಾದಕರಾದ ಎರಗುಡಿ ಪಾಮಣ್ಣ, ಜಿ. ಷಣ್ಮುಖಪ್ಪ, ಎರಗುಡಿ ಗ್ರಾ.ಪಂ ಅಧ್ಯಕ್ಷ ಈರಣ್ಣ, ಸದಸ್ಯ ಎನ್.ಗಾದಿಲಿಂಗಪ್ಪ, ಯುವ ಮುಖಂಡ ಗೋನಾಳ್ ನಾಗಭೂಷಣಗೌಡ, ಟ್ರಸ್ಟ್ನ ರ‍್ರಮ್ಮ ಮತ್ತಿತರರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಬಿ. ವೀಣಾಕುಮಾರಿ, ಕುಸುಮಾ ತಂಡದವರಿಂದ ರಂಗಗೀತೆಗಳ ಗಾಯನ ನಡೆಯಿತು. ಉಷಾರಾಣಿ ಮತ್ತು ಸುಜಾತಮ್ಮ ಅವರು ಬಯಲಾಟ ಪದಗಳನ್ನು ಹಾಡಿ ರಂಜಿಸಿದರು.
ಸಿರಿಗೆರೆ ಸಿದ್ರಾಮಪ್ಪ ಮತ್ತು ರಮೇಶಗೌಡ ಪಾಟೀಲ್ ಅವರು ಕ್ರಮವಾಗಿ ಅಭಿಮನ್ಯು ಮತ್ತು ದುರ್ಯೋಧನ ಪಾತ್ರದ ಬಯಲಾಟ ಸಂಭಾಷಣೆ ಹೇಳಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿದರು.
ಚಿನ್ನಕ್ಷೀರವಿಂದೇಶ್ವರಿ ಮತ್ತು ಬಿ. ಸುರೇಶ್ ಕುಮಾರ್ ತಂಡದವರಿಂದ ಸಮೂಹ ನೃತ ಪ್ರದರ್ಶನ ನಡೆಯಿತು. ವಾಲ್ಮೀಕಿ ದೊಡ್ಡ ಚಿಕ್ಕಣ್ಣ ತಲಮಾಮಿಡಿ ಕಲಾ ತಂಡದವರಿಂದ ರಾಮಾಯಣ ಬಯಲಾಟ ಪ್ರದರ್ಶನ ನಡೆಯಿತು.
ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಕಾರ್ಯದರ್ಶಿ ಬಿ. ಲಕ್ಷೀನಾರಾಯಣ ಸ್ವಾಗತಿಸಿದರು. ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಬಾಷಾ ಕಾರ್ಯಕ್ರಮ ನಿರೂಪಿಸಿದರು. ಕಲಾ ಟ್ರಸ್ಟ್ ಖಜಾಂಚಿ ಬಿ.ಸುರೇಶ್ ಕುಮಾರ್ ವಂದಿಸಿದರು.
******
The post ಬಯಲಾಟ ಕಲಾವಿದರ ಸಂಕಷ್ಟಗಳಿಗೆ ಸರಕಾರ ಸ್ಪಂದಿಸಬೇಕು -ಗೋನಾಳ್ ವಿರುಪಾಕ್ಷಗೌಡ appeared first on Karnataka Kahale.
]]>The post ಬಳ್ಳಾರಿ ಜಿಲ್ಲೆ ಬಯಲಾಟದ ತವರೂರು -ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಮಂಜುನಾಥ appeared first on Karnataka Kahale.
]]>
ಬಳ್ಳಾರಿ, ಡಿ.15: ಬಳ್ಳಾರಿ ಜಿಲ್ಲೆ ಬಯಲಾಟದ ತವರೂರು ಎಂದು ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ ತಿಳಿಸಿದರು.
ವಿಠಲಾಪುರ ಶ್ರೀ ಹಂಪಿ ವಿರೂಪಾಕ್ಷ ಬಯಲಾಟ, ನಾಟಕ ಪ್ರೋತ್ಸಾಹ ಟ್ರಸ್ಟ್ & ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ತಾಲೂಕಿನ ಬಿ.ಬೆಳಗಲ್ಲು ಗ್ರಾಮದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ
ರಾಜ್ಯಮಟ್ಟದ ಬಯಲಾಟ(ದೊಡ್ಡಾಟ)ದ ಪರಿಷ್ಕರಣದ ಚರ್ಚಾ ಗೋಷ್ಠಿ, ಜಾನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನ ಕುಡುತಿನಿ ಗ್ರಾಮದ ಭೀಮೇಶ ಕಾವ್ಯನಾಮದ ನರಸಿಂಗರಾಯರು ಮೊದಲ ಬಯಲಾಟವನ್ನು ರಚಿಸಿದ್ದಾರೆ ಎಂಬುದು ಸಂಶೋಧಕರು ದೃಡಪಡಿಸಿದ್ದಾರೆ ಎಂದು ಹೇಳಿದರು.
ಅವಿಭಜಿತ ಬಳ್ಳಾರಿ ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ಬಯಲಾಟದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಬಯಲಾಟಗಳು ಯಕ್ಷಗಾನದಂತೆ ವಿಶ್ವಮಟ್ಟದಲ್ಲಿ ಜನಪ್ರಿಯಗೊಳಿಸಲು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪರಿಷ್ಕರಣೆಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಅಕ್ಷರ ಕಲಿಯದವರೇ ಬಯಲಾಟವನ್ನು
ಸಂರಕ್ಷಿಸಿ, ಬೆಳೆಸುತ್ತಿರುವ ಈ ಕಲೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಬಳ್ಳಾರಿಯ ಪತ್ರಕರ್ತರು ನಾಲ್ಕು ವರ್ಷಗಳ ಹಿಂದೆ ಬಯಲಾಟವನ್ನು ಆಡುವ ಮೂಲಕ ಈ ಕಲೆಯತ್ತ ವಿದ್ಯಾವಂತ ಯುವಜನರು ಬರುವಂತೆ ಉತ್ತೇಜಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಯಲಾಟ ಪರಿಷ್ಕರಣದ ಕುರಿತು ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ, ರಂಗಕರ್ಮಿ ಎ.ಎಂ.ಪಿ ವೀರೇಶಸ್ವಾಮಿ ಅವರು ಹಳ್ಳಿಗಳಲ್ಲಿ ಜೀವಂತವಾಗಿರುವ ಬಯಲಾಟವನ್ನು ನಗರದ ಜನತೆಗೆ, ಯುವ ಸಮೂಹಕ್ಕೆ ಇಷ್ಟವಾಗುವಂತೆ ಪರಿಷ್ಕರಿಸುವುದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಬಯಲಾಟ ಕ್ಷೇತ್ರದ ವಿದ್ವಾಂಸರು, ನಾಟಕಕಾರರು ಮೂಲ ಸ್ವರೂಪವನ್ನು ಉಳಿಸಿ ಕೊಂಡು ಕಾಲ ಮಿತಿ ಎರಡು ಅಥವಾ ಮೂರು ಗಂಟೆಗಳ ಒಳಗಡೆ ಇರುವಂತೆ ಪರಿಷ್ಕರಿಸಬೇಕು.
ಕಥಾ ಹಂದರ ಸಂಕ್ಷಿಪ್ತವಾಗಿರ ಬೇಕು, ವೇದಿಕೆಯ ಶಿಸ್ತು ಪಾಲನೆಯಾಗಬೇಕು ಎಂದರು.
ಸರಕಾರ ನಾಟಕ ತರಬೇತಿ ಸಂಸ್ಥೆಗಳಿರುವಂತೆ ಬಯಲಾಟ ತರಬೇತಿ ಸಂಸ್ಥೆ ರೆಪರ್ಟರಿ ಸ್ಥಾಪಿಸಬೇಕು. ಬಯಲಾಟ ಗಳಿಗೆ ವಿಶೇಷ ಅನುದಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಬಯಲಾಟದ ಕೃತಿಗಳು ಮುದ್ರಣಗೊಳ್ಳಬೇಕು
ಶಾಲಾ ಕಾಲೇಜುಗಳಲ್ಲಿ ಹೆಚ್ಚೆಚ್ಚು ಬಯಲಾಟಗಗಳ ಪ್ರದರ್ಶನ ವಾಗಬೇಕು ಎಂದು ತಿಳಿಸಿದರು.

ಸಾಹಿತಿ, ದೊಡ್ಡಾಟ ಭಾಗವತ ಮತ್ತಿಹಳ್ಳಿಯ ಬಿ.ಪಂಪಾಚಾರಿ, ಉತ್ತರ ಕರ್ನಾಟಕದ ಗಂಡು ಮೆಟ್ಟಿದಕಲೆಯಾದ
ಬಯಲಾಟ(ದೊಡ್ಡಾಟ) ಮನುಷ್ಯರ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಲೆ ಬೆಳೆಯಬೇಕಾದರೆ ಜನರ ಪ್ರೋತ್ಸಾಹ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಲ್ಲು ಗ್ರಾಪಂ ಅಧ್ಯಕ್ಷ ಪಾಲಾಕ್ಷಗೌಡ, ಗ್ರಾಪಂ ಸದಸ್ಯ ಹೆಚ್.ಮರಿಹುಲುಗಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಉಮಾಶಂಕರ್, ಗ್ರಾಮದ ಬಸವನಗೌಡ, ಯಲ್ಲಪ್ಪ, ತಿಮ್ಮಾರೆಡ್ಡಿ, ಬಯಲಾಟ ಮಾಸ್ತರ ಹನುಮವಧೂತ, ಮತ್ತಿತರರು ಉಪಸ್ಥಿತರಿದ್ದರು.

ಸನ್ಮಾನ: ಬಯಲಾಟ ಹಿರಿಯ ಕಲಾವಿದೆ ಎಳ್ಳಾರ್ತಿ ಚಾಮುಂಡೇಶ್ವರಿ ಹಾಗೂ ಹಿರಿಯ ಬಯಲಾಟ ಕಲಾವಿದ ಬೊಮ್ಮನಾಳ್ ಬಸವನಗೌಡ, ಸಿ.ಮಂಜುನಾಥ, ಎ.ಎಂ.ಪಿ ವೀರೇಶ ಸ್ವಾಮಿ, ಬಿ.ಪಂಪಾಚಾರಿ ಮತ್ತಿತರ ಸಾಧಕರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪ್ರದರ್ಶನ; ಬಿ.ಗಾಳಿ ಮಲ್ಲಯ್ಯ ರಚನೆಯ ಶ್ರೀ ರೇಣುಕಾದೇವಿ ಮಹಾತ್ಮೆ ಬಯಲಾಟ ಪ್ರದರ್ಶನ ಗೊಂಡಿತು.

ಧರ್ಮಪ್ಪ ಜಾನೇಕುಂಟೆ ಮತ್ತು ಕಲಾತಂಡದವರಿಂದ ಜಾನಪದ, ವಚನಗಾಯನ, ರಂಗಗೀತೆಗಳು, ದಮ್ಮೂರು ಕರಿಯಪ್ಪ ಮತ್ತು ಕಲಾ ತಂಡದಿಂದ ಬಯಲಾಟ ಪ್ರಾತ್ಯಕ್ಷಿಕೆ ಜರುಗಿದವು.
ಸಂಗೀತ: ಬೆಳಗಲ್ಲು ಗ್ರಾಪಂ ಸದಸ್ಯ, ಧರ್ಮಪ್ಪ ಜಾನೆಕುಂಟೆ ಹಾರ್ಮೋನಿಯಂ, ಬಳ್ಳಾರಿ ಶ್ರೀನಿವಾಸ ಮದ್ದಲಿ, ದಾವಣಗೆರೆ ವೆಂಕಟೇಶ ಪ್ಯಾಡ್ ನುಡಿಸಿದರು.
ಟ್ರಸ್ಟ್ ಕಾರ್ಯದರ್ಶಿ, ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ವಿಠ್ಲಾಪುರ ಜಿ.ಕೆ ತಿಪ್ಪೇಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರ್ನಾಟಕ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಮುದ್ದಟನೂರು ತಿಪ್ಪೇಸ್ವಾಮಿ ನಿರೂಪಿಸಿ ವಂದಿಸಿದರು.
*****
The post ಬಳ್ಳಾರಿ ಜಿಲ್ಲೆ ಬಯಲಾಟದ ತವರೂರು -ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಮಂಜುನಾಥ appeared first on Karnataka Kahale.
]]>