ಬೆಂಗಳೂರು – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Tue, 14 Apr 2026 14:27:01 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಬೆಂಗಳೂರು – Karnataka Kahale https://www.karnatakakahale.com 32 32 ಅಂಬೇಡ್ಕರ್ ಆಶಯದಂತೆ ದೇಶದಲ್ಲಿ ಭ್ರಾತೃತ್ವ ನೆಲೆಸಲಿ: ಹಿರಿಯ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ  https://www.karnatakakahale.com/news/22753 Tue, 14 Apr 2026 14:21:33 +0000 https://www.karnatakakahale.com/?p=22753 ಬೆಂಗಳೂರು: ಏ.14: ಇಪ್ಪತ್ತೊಂದನೇ ಶತಮಾನದಲ್ಲೂ ಜಾತಿ ಕ್ರೌರ್ಯ, ಮೇಲು- ಕೀಳು ಹಾಸುಹೊಕ್ಕಾಗಿರುವುದು ಈ ದೇಶದ ದುರ್ಗತಿ. ಅಂಬೇಡ್ಕರ್‌ರವರ ಆಶಯದಂತೆ ಭ್ರಾತೃತ್ವ, ಸ್ವಾತಂತ್ರ್ಯ, ಸಮಾನತೆ ನೆಲೆಸಬೇಕು. ಜಾತಿ ವಿನಾಶದ ಕುರಿತು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಬೇಕು‌ ಎಂದು ಖ್ಯಾತ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು…

The post ಅಂಬೇಡ್ಕರ್ ಆಶಯದಂತೆ ದೇಶದಲ್ಲಿ ಭ್ರಾತೃತ್ವ ನೆಲೆಸಲಿ: ಹಿರಿಯ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ  appeared first on Karnataka Kahale.

]]>
ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಬೆಂಗಳೂರು: ಏ.14: ಇಪ್ಪತ್ತೊಂದನೇ ಶತಮಾನದಲ್ಲೂ ಜಾತಿ ಕ್ರೌರ್ಯ, ಮೇಲು- ಕೀಳು ಹಾಸುಹೊಕ್ಕಾಗಿರುವುದು ಈ ದೇಶದ ದುರ್ಗತಿ. ಅಂಬೇಡ್ಕರ್‌ರವರ ಆಶಯದಂತೆ ಭ್ರಾತೃತ್ವ, ಸ್ವಾತಂತ್ರ್ಯ, ಸಮಾನತೆ ನೆಲೆಸಬೇಕು. ಜಾತಿ ವಿನಾಶದ ಕುರಿತು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಬೇಕು‌ ಎಂದು ಖ್ಯಾತ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ಬಾಬಾಸಾಹೇಬ್‌ ಡಾ. ಬಿ. ಆರ್. ಅಂಬೇಡ್ಕರ್‌ರವರ 135 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ ಮಹಾನ್ ಮಾನವತಾವಾದಿ ಅಂಬೇಡ್ಕರ್‌ರವರು ಜಾತಿ ಸಂಕೋಲೆಯನ್ನು ತೊಡೆದು ಹಾಕಿ ಜಾತಿ ವಿನಾಶಗೊಳಿಸುವ ಗುರಿ ತೋರಿದರು‌. ಆದರೆ ಮರ್ಯಾದೆ ಹತ್ಯೆ, ಜಾತಿ ಶೋಷಣೆ ಸೇರಿದಂತೆ ಜಾತಿ ಕ್ರೌರ್ಯ ಇನ್ನೂ ಅಸ್ತಿತ್ವದಲ್ಲಿದೆ. ಆಳುವ ಸರ್ಕಾರಗಳು ಕಣ್ಣು ಮುಚ್ಚಿ ಕೂತಿದೆ. ಪ್ರಜಾಪ್ರಭುತ್ವ ಶಿಥಿಲವಾಗಿದೆ‌. ದೇಶದಲ್ಲಿ ಅಲಿಖಿತ ಸಂವಿಧಾನ ಜಾರಿಯಲ್ಲಿದೆ‌. ಸಾಮಾಜಿಕ, ಆರ್ಥಿಕ ಗುರಿ ಸಾಧನೆಗೆ ಸಂವಿಧಾನದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಖ್ಯಾತ ಸಾಂಸ್ಕೃತಿಕ ಚಿಂತಕರು ಡಾ. ಬಂಜಗೆರೆ ಜಯಪ್ರಕಾಶ್‌ ಮುಖ್ಯ ಭಾಷಣಕಾರರಾಗಿ ಮಾತನಾಡಿ,  ಸಮಾನತೆಯ ತಳಹದಿಯಲ್ಲಿ ನವಭಾರತವನ್ನು ನಿರ್ಮಿಸಿದ  ಯುಗ ನಿರ್ಮಾತೃ ಡಾ. ಬಿ. ಆರ್. ಅಂಬೇಡ್ಕರ್‌ರವರು ಸಂವಿಧಾನದ‌ ಮೂಲಕ ದೇಶಕ್ಕೆ ಹೊಸ ಚೇತನ ನೀಡಿದರು. ಈ ದೇಶದ ಅವಕಾಶ ವಂಚಿತರು, ಶೋಷಿತರು, ಮಹಿಳೆಯರು, ಹಿಂದುಳಿದವರಿಗೆ ಸಂವಿಧಾನದ ಮೂಲಕ ಸಮಾನತೆ, ಸ್ವಾತಂತ್ರ್ಯ ಮತ್ತು ಸ್ಥಾನಮಾನ ನೀಡಿದರು. ಆದರೆ ದೇಶದಲ್ಲಿ ಸಂವಿಧಾನದ ವಿರುದ್ದವಾಗಿ ಸನಾತನವಾದ, ಮನುವಾದವನ್ನು ಹೇರುವ ಪ್ರಯತ್ನಗಳಾಗುತ್ತಿದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು ಡಾ.ಜಯಕರ ಎಸ್.ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಜೀವನದುದ್ದಕ್ಕೂ ಕಷ್ಟಗಳನ್ನು ಅನುಭವಿಸಿ ಸ್ಪೂರ್ತಿಯ ಚಿಲುಮೆಯಾದರು. ಬಾಬಾಸಾಹೇಬರ ತತ್ವ,ಚಿಂತನೆ,ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಎಂದರು.

ಕಾರ್ಯಕ್ರಮದಲ್ಲಿ ಕುಲಸಚಿವರು ಕೆ.ಟಿ.ಶಾಂತಲಾ, ಕುಲಸಚಿವರು (ಮೌಲ್ಯಮಾಪನ) ಪ್ರೊ.ಸಿ.ಎಸ್.ಕರಿಗಾರ್, ವಿತ್ತಾಧಿಕಾರಿಗಳು ಡಾ.ಸುನೀತಾ ಎಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ವಿಶೇಷಾಧಿಕಾರಿಗಳು ಪ್ರೊ.ಜಿ.ಕೃಷ್ಣಮೂರ್ತಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕರು ಪ್ರೊ.ಪಿ.ಸಿ.ನಾಗೇಶ್, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರು ಪ್ರೊ.ಸಿ.ಸೋಮಶೇಖರ್ ಸೇರಿದಂತೆ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕೇತರ ಸಿಬ್ಬಂದಿ ಮತ್ತು ಅತಿಥಿ ಉಪನ್ಯಾಸಕರು, ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಅಂಬೇಡ್ಕರ್ ರವರ ಅಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.

ಫೋಟೋ ಕ್ಯಾಪ್ಷನ್:
ಬೆಂಗಳೂರು ವಿಶ್ವವಿದ್ಯಾಲಯ ಮುಖ್ಯ ಆಡಳಿತ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್‌ರವರ 135 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಕುಲಪತಿ ಡಾ.ಜಯಕರ ಎಸ್.ಎಂ,
ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಬಂಜೆಗೆರೆ ಜಯಪ್ರಕಾಶ್, ಕುಲಸಚಿವರಾದ ಕೆ.ಟಿ.ಶಾಂತಲಾ, ಕುಲಸಚಿವರು (ಮೌಲ್ಯಮಾಪನ) ಪ್ರೊ.ಸಿ.ಎಸ್.ಕರಿಗಾರ್, ವಿತ್ತಾಧಿಕಾರಿ ಡಾ.ಸುನೀತಾ ಎಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ವಿಶೇಷಾಧಿಕಾರಿ ಪ್ರೊ.ಜಿ.ಕೃಷ್ಣಮೂರ್ತಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ.ಪಿ.ಸಿ.ನಾಗೇಶ್, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರ ಪ್ರೊ.ಸಿ.ಸೋಮಶೇಖರ್, ಸಿಂಡಿಕೇಟ್ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.

*****

The post ಅಂಬೇಡ್ಕರ್ ಆಶಯದಂತೆ ದೇಶದಲ್ಲಿ ಭ್ರಾತೃತ್ವ ನೆಲೆಸಲಿ: ಹಿರಿಯ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ  appeared first on Karnataka Kahale.

]]>
ವಿಧಾನ ಪರಿಷತ್ ಸದಸ್ಯ , ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಗೆ ಸನ್ಮಾನ https://www.karnatakakahale.com/news/22545 Sun, 15 Mar 2026 06:08:19 +0000 https://www.karnatakakahale.com/?p=22545 ಬೆಂಗಳೂರು, ಮಾ.15: ಹಿರಿಯ ಪತ್ರಕರ್ತರು, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಹಿರಿಯ ಸದಸ್ಯರಾದ ಕೆ. ಶಿವಕುಮಾರ್ ಅವರು ವಿಧಾನಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಹಿನ್ನೆಲೆಯಲ್ಲಿ  ಶುಕ್ರವಾರ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯರಾಗಿ ನೇಮಕಾವಾದ ಬಳಿಕ ಇದೇ…

The post ವಿಧಾನ ಪರಿಷತ್ ಸದಸ್ಯ , ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಗೆ ಸನ್ಮಾನ appeared first on Karnataka Kahale.

]]>
ಬೆಂಗಳೂರು, ಮಾ.15: ಹಿರಿಯ ಪತ್ರಕರ್ತರು, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಹಿರಿಯ ಸದಸ್ಯರಾದ ಕೆ. ಶಿವಕುಮಾರ್ ಅವರು ವಿಧಾನಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಹಿನ್ನೆಲೆಯಲ್ಲಿ  ಶುಕ್ರವಾರ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯರಾಗಿ ನೇಮಕಾವಾದ ಬಳಿಕ ಇದೇ ಮೊದಲ ಬಾರಿ ಪತ್ರಕರ್ತರ ಸಹಕಾರ ಸಂಘಕ್ಕೆ ಆಗಮಿಸಿದ ಶಿವಕುಮಾರ್ ಅವರು ಸಂಘದ ಕಾರ್ಯವೈಖರಿಯ ಸಮಗ್ರ ಮಾಹಿತಿ ಪಡೆದರು. ಸಂಘದ ಅಧ್ಯಕ್ಷರಾದ ರಮೇಶ್ ಪಾಳ್ಯ ಅವರು ಸಂಘದ ವಹಿವಾಟು, ಲಾಭ, ಸಾಲ ವಸೂಲಸತಿ ಸೇರಿದಂತೆ ಸಮಗ್ರ ಮಾಹಿತಿ ನೀಡಿದರು. ಈ ಬಗ್ಗೆ ಶ್ಲಾಘಿಸಿದ ಶಿವಕುಮಾರ್ ಅವರು ಸಂಘದ ಅಭಿವೃದ್ಧಿಗೆ ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಖಜಾಂಚಿ ಮೋಹನ್ ಕುಮಾರ್, ನಿರ್ದೇಶಕರಾದ ಪರಮೇಶ್, ವಿನೋದ ಕುಮಾರ್ ಬಿ ನಾಯ್ಕ್, ರಮೇಶ್ ಹಿರೇಜಂಬೂರು, ಪರಮೇಶ್, ಕೃಷ್ಣ ಕುಮಾರ್, ರಾಜೇಂದ್ರ ಕುಮಾರ್, ಧ್ಯಾನ್ ಪೂಣಚ್ಚ, ಸೋಮಣ್ಣ, ನಯನಾ, ಸಂಘದ ಖಜಾಂಚಿ ರಘು, ಮತ್ತು ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

The post ವಿಧಾನ ಪರಿಷತ್ ಸದಸ್ಯ , ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಗೆ ಸನ್ಮಾನ appeared first on Karnataka Kahale.

]]>
ಬೆಂಗಳೂರು ನಗರ ಘಟಕ ಚುನಾವಣೆ 358 ಪತ್ರಕರ್ತರಿಂದ ಮತ ಚಲಾವಣೆ https://www.karnatakakahale.com/news/22399 Sun, 22 Feb 2026 18:01:24 +0000 https://www.karnatakakahale.com/?p=22399 ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಬೆಂಗಳೂರು ನಗರ ಜಿಲ್ಲಾ ಘಟಕದ ಆಡಳಿತ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ 358 ಪತ್ರಕರ್ತ ಮತದಾರರು ಮತದಾನ ಮಾಡಿದರು. ನ್ಯಾಯಲಯದ ಆದೇಶದ ಮೇರೆಗೆ ನಡೆದ ಚುನಾವಣೆಯಲ್ಲಿ ಬೆಳಗ್ಗೆ 9 ರಿಂದ ಮದ್ಯಾಹ್ನ 3…

The post ಬೆಂಗಳೂರು ನಗರ ಘಟಕ ಚುನಾವಣೆ 358 ಪತ್ರಕರ್ತರಿಂದ ಮತ ಚಲಾವಣೆ appeared first on Karnataka Kahale.

]]>

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಬೆಂಗಳೂರು ನಗರ ಜಿಲ್ಲಾ ಘಟಕದ ಆಡಳಿತ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ 358 ಪತ್ರಕರ್ತ ಮತದಾರರು ಮತದಾನ ಮಾಡಿದರು.

ನ್ಯಾಯಲಯದ ಆದೇಶದ ಮೇರೆಗೆ ನಡೆದ ಚುನಾವಣೆಯಲ್ಲಿ ಬೆಳಗ್ಗೆ 9 ರಿಂದ ಮದ್ಯಾಹ್ನ 3 ಗಂಟೆ ತನಕ ಕಂದಾಯ ಭವನದ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಮತದಾನ ನಡೆಯಿತು. ಪತ್ರಕರ್ತ ಸದಸ್ಯರು ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ರಾಜ್ಯ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ವಿಜಯವಾಣಿ ಸಂಪಾದಕರಾದ ಕೆ.ಎನ್.ಚನ್ನೇಗೌಡ, ಡೆಪ್ಯೂಟಿ ಎಡಿಟರ್ ರಾಘವೇಂದ್ರ ಗಣಪತಿ, ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ, ಸುದ್ದಿ ಸಂಪಾದಕ ಚೀ.ಜ.ರಾಜೀವ್, ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್, ಕೆಯುಡಬ್ಲೂೃಜೆ ಮಾಜಿ ಅಧ್ಯಕ್ಷರುಗಳಾದ ಬಿ.ವಿ.ಮಲ್ಲಿಕಾರ್ಜುನಯ್ಯ, ವಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಮಹಿಳಾ ಪತ್ರಕರ್ತೆಯರ ಸಂಘದ ಮಾಜಿ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಸಂಯುಕ್ತ ಕರ್ನಾಟಕ ಸುದ್ದಿ ಸಂಪಾದಕ ಕೆ.ವಿ.ಪರಮೇಶ್, ಟಿವಿ5 ಸಂಸ್ಥೆ ದಶರಥ್ ಅವರು ಸೇರಿದಂತೆ ಹಲವರು ಮತದಾನ ಮಾಡಿದರು.

ಅವಳಿ ಜವಳಿ ಮಕ್ಕಳ ತಾಯಿ ಅರುಣ ಅವರು ಎಳೆಮಕ್ಕಳ ಜೊತೆಗೆ ಬಂದು ಮತದಾನ ಮಾಡಿದರು.

ಕೆಯುಡಬ್ಲ್ಯೂಜೆ ರಾಜ್ಯ ಮುಖ್ಯ ಚುನಾವಣಾಧಿಕಾರಿಯಾದ ಎನ್.ರವಿಕುಮಾರ್ ಅವರ ಉಸ್ತುವಾರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ನಂಜುಂಡಪ್ಪ.ವಿ ಅವರು ಮತದಾನ ಪ್ರಕ್ರಿಯೆ ನಡೆಸಿದರು. ಚುನಾವಣೆ ಶಾಂತಿಯುತವಾಗಿ ನಡೆಯಿತು

The post ಬೆಂಗಳೂರು ನಗರ ಘಟಕ ಚುನಾವಣೆ 358 ಪತ್ರಕರ್ತರಿಂದ ಮತ ಚಲಾವಣೆ appeared first on Karnataka Kahale.

]]>
ರಂಗಭೂಮಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಪರಿಗಣಿಸಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ https://www.karnatakakahale.com/news/22387 Sat, 21 Feb 2026 17:09:49 +0000 https://www.karnatakakahale.com/?p=22387 ಬೆಂಗಳೂರು, ಫೆ. 21: ರಂಗಭೂಮಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಪರಿಗಣಿಸಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಅವರು ಶನಿವಾರ ನಟರಂಗ, ಬೆನಕ, ಸಮುದಾಯ, ಸ್ಪಂದನ, ಕಲಾಗಂಗೋತ್ರಿ ಹಾಗೂ ರಂಗಸಂಪದ ನಾಟಕ ತಂಡಗಳ ಸುವರ್ಣ ಮಹೋತ್ಸವದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ…

The post ರಂಗಭೂಮಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಪರಿಗಣಿಸಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.

]]>

ಬೆಂಗಳೂರು, ಫೆ. 21: ರಂಗಭೂಮಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಪರಿಗಣಿಸಲಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಅವರು ಶನಿವಾರ ನಟರಂಗ, ಬೆನಕ, ಸಮುದಾಯ, ಸ್ಪಂದನ, ಕಲಾಗಂಗೋತ್ರಿ ಹಾಗೂ ರಂಗಸಂಪದ ನಾಟಕ ತಂಡಗಳ ಸುವರ್ಣ ಮಹೋತ್ಸವದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಹೊನ್ನಾರು ರಂಗೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನಿಂದ 26 ರ ವರೆಗೆ ಕಲಾಸಕ್ತರಿಗೆ ನಾಟಕಗಳನ್ನು ವೀಕ್ಷಿಸುವ ಸದವಕಾಶ ದೊರೆತಿದೆ. ನಾಟಕ ತಂಡಗಳು ಐವತ್ತು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಹಮ್ಮಿಕೊಂಡಿರುವ ರಂಗೋತ್ಸವ ಅತ್ಯಂತ ಸೂಕ್ತವಾಗಿದೆ ಎಂದರು.
ಉಮಾಶ್ರೀ, ಪ್ರಕಾಶ್ ರಾಜ್ ಸೇರಿದಂತೆ ಬಹುತೇಕ ರಂಗಭೂಮಿಕಲಾವಿದರು ಚಲನಚಿತ್ರ ಕ್ಷೇತ್ರದಲ್ಲಿ ಬೆಳೆದಿದ್ದಾರೆ. ನಟನೆ ಎಲ್ಲರಿಗೂ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಂದೇಶಗಳುಳ್ಳ ಸಿನಿಮಾಗಳು ವಿರಳ: ಹಿಂದಿನ ಕಾಲದ ಸಿನಿಮಾಗಳಲ್ಲಿ ಸಂದೇಶಗಳಿರುತ್ತಿತ್ತು. ಇಂದಿನ ಸಿನಿಮಾಗಳಲ್ಲಿ ಸಮಾಜಕ್ಕೆ ಸಂದೇಶಗಳುಳ್ಳ ಸಿನಿಮಾಗಳು ವಿರಳ ಅಥವಾ ಇಲ್ಲವೇ ಇಲ್ಲ ಎಂಬಂತಾಗಿದೆ ಎಂದರು.
ರಂಗಭೂಮಿ ಹಿನ್ನೆಲೆಯ ಕಲಾವಿದರು ಹೆಚ್ಚು ಪಳಗಿರುತ್ತಾರಲ್ಲದೆ ಜನಪ್ರಿಯರೂ ಆಗಿರುತ್ತಾರೆ ಎಂದರು.
ವಿಧಾನ ಪರಿಷತ್ ಸದಸ್ಯೆ ಹಾಗೂ ಹಿರಿಯ ಕಲಾವಿದೆ ಉಮಾಶ್ರೀ, ಚಿತ್ರನಟರಾದ ಮುಖ್ಯಮಂತ್ರಿ ಚಂದ್ರು, ಪ್ರಕಾಶ್ ರಾಜ್, ಹಿರಿಯ ಕಲಾವಿದರಾದ ದತ್ತಣ್ಣ, ಗಿರಿಜಾ ಲೋಕೇಶ್, ನಟ, ನಿರ್ದೇಶಕ ಟಿ. ಎಸ್ ನಾಗಾಭರಣ, ಹೊನ್ನಾರು ರಂಗೋತ್ಸವ ಸಂಚಾಲಕರಾದ ಶ್ರೀನಿವಾಸ ಜಿ. ಕಪ್ಪಣ್ಣ ಮೊದಲಾದವರು ಉಪಸ್ಥಿತರಿದ್ದರು.

The post ರಂಗಭೂಮಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಪರಿಗಣಿಸಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.

]]>
ಪಿ.ರಾಮಯ್ಯ ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು: ಕೆ.ವಿ.ಪ್ರಭಾಕರ್ ಶ್ಲಾಘನೆ https://www.karnatakakahale.com/news/22353 Wed, 18 Feb 2026 12:44:34 +0000 https://www.karnatakakahale.com/?p=22353 ಬೆಂಗಳೂರು ಫೆ 18: ಸಾರ್ವಜನಿಕ‌ ಬದುಕು ಕಲುಷಿತಗೊಳ್ಳುತ್ತಿರುವ ಹೊತ್ತಲ್ಲಿ ಪಿ.ರಾಮಯ್ಯ ಮಾದರಿಯಾಗಿ ಕಾಣುತ್ತಾರೆ. ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಶ್ಲಾಘಸಿದರು. ಗಾಂಧಿ ಭವನದಲ್ಲಿ ನಡೆದ ಹಿರಿಯ ಪತ್ರಕರ್ತ ದಿವಂಗತ…

The post ಪಿ.ರಾಮಯ್ಯ ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು: ಕೆ.ವಿ.ಪ್ರಭಾಕರ್ ಶ್ಲಾಘನೆ appeared first on Karnataka Kahale.

]]>

ಬೆಂಗಳೂರು ಫೆ 18: ಸಾರ್ವಜನಿಕ‌ ಬದುಕು ಕಲುಷಿತಗೊಳ್ಳುತ್ತಿರುವ ಹೊತ್ತಲ್ಲಿ ಪಿ.ರಾಮಯ್ಯ ಮಾದರಿಯಾಗಿ ಕಾಣುತ್ತಾರೆ. ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಶ್ಲಾಘಸಿದರು.

ಗಾಂಧಿ ಭವನದಲ್ಲಿ ನಡೆದ ಹಿರಿಯ ಪತ್ರಕರ್ತ ದಿವಂಗತ ಪಿ.ರಾಮಯ್ಯ ಅವರ ಶ್ರದ್ದಾಂಜಲಿ ಹಾಗೂ “ನಾನು ಹಿಂದೂ ರಾಮಯ್ಯ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಆಗುಹೋಗುಗಳನ್ನು, ಒಳಿತು ಕೆಡುಕುಗಳನ್ನೇ ಧ್ಯಾನಿಸುವ ಪತ್ರಕರ್ತರು ಸದಾ ಈ ಧಾವಂತದಲ್ಲಿಯೇ ಉಳಿದು ಕ್ರಮೇಣ ಅಸೂಕ್ಮರಾಗುವ, ಸಂವೇದನೆಗಳನ್ನು‌ ಕಳೆದುಕೊಳ್ಳುವ ಅಪಾಯ ಹೆಚ್ಚು. ಇದನ್ನು ಪ್ರಜ್ಞಾಪೂರ್ವಕಾಗಿ ಮೀರುವ ಪ್ರಯತ್ನ ಮಾಡಿದಾಗಷ್ಟೆ ವೃತ್ತಿ ಘನತೆ ಹೆಚ್ಚುತ್ತದೆ ಎಂದು ಹೇಳಿದರು.
ನಮ್ಮೆಲ್ಲ‌ರ ವೈಯುಕ್ತಿಕ ಹಳಹಳಿಕೆ, ಧಾವಂತಗಳ ನಡುವೆಯೂ ಇತರರ ಘನತೆಗೆ ಕುಂದು ಬಾರದಂತೆ ವೃತ್ತಿಪರರಾಗುವುದು, ಪತ್ರಿಕೋದ್ಯಮ ನಡೆಸುವುದು, ಪತ್ರಕರ್ತರಾಗಿ ಉಳಿಯುವುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದರು.

ಅಗಲಿದ ಹಿರಿಯ ಚೇತನ ಪಿ. ರಾಮಯ್ಯ ಈ ವಿಚಾರದಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿದ್ದರು. ಪತ್ರಕರ್ತರಾಗುವುದು ಒಂದು ನಮೂನೆಯ ದೀಕ್ಷೆ ಇದ್ದಂತೆ. ಒಮ್ಮೆ ನೀವು ಪತ್ರಕರ್ತರೆಂದು ಗುರುತಿಸಿಕೊಂಡ ಮೇಲೆ ಕೆಲವು ನಿಷ್ಠುರ ಗುಣಗಳು ಅನಾಯಸವಾಗಿ ಬಂದುಬಿಡುತ್ತವೆ. ಮುಂದೆ ರಾಜಕಾರಣಿಯಾದರೂ ಸರಿಯೇ, ಉದ್ಯಮಿಯಾದರೂ ಸರಿಯೇ. ಒಮ್ಮೆ ಪತ್ರಕರ್ತರಾದವರು ಮಾಜಿಯಾಗಲಾರರು, ನಿವೃತ್ತರಾಗಲಾರರು. ಚಲನಶೀಲತೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಇದ್ದ ಪತ್ರಕರ್ತರಿಗೆ ಸಾವು ಇರದು ಎಂದು ಅಭಿಪ್ರಾಯಪಟ್ಟರು.

ಕಾಲವನ್ನು ಒಪ್ಪಿಕೊಳ್ಳುತ್ತಲೇ ಸಮಾಜದಲ್ಲಿರುವ ಹುಳಕನ್ನು ನಯವಾಗಿ ತೋರಿಸಿ ತಿದ್ದಬಲ್ಲವರು ಮಾತ್ರ ಜನಮಾನಸದಲ್ಲಿ ಉಳಿಯಬಲ್ಲರು.‌ ಅವರಿಗೂ ಆತ್ಮತೃಪ್ತಿ ತರಬಲ್ಲವು. ಇಂಥಾ ಆತ್ಮತೃಪ್ತಿ ಗಳಿಸಿದ್ದಾಗಿ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡಿದ್ದ ರಾಮಯ್ಯ ಅವರು, ತಾವು ಸಾರ್ಥಕ್ಯವಾಗಿ ಬಾಳಿ, ತಮ್ಮೊಡನಿರುವ ವೃತ್ತಿಪರರ ಘನತೆಯನ್ನು ಎತ್ತಿ ಹಿಡಿದು ಪತ್ರಕರ್ತರಾಗಿ ಅಷ್ಟೆ ಅಲ್ಲ ವ್ಯಕ್ತಿತ್ಚ ದೃಷ್ಟಿಯಿಂದಲೂ ಅನುಸರಣೀಯರಾಗಿದ್ದರು ಎಂದು ಧನ್ಯತೆ ಅರ್ಪಿಸಿದರು.
ಸಾರ್ವಜನಿಕ‌ ಜೀವನ ವಿಪರೀತ ಕಲುಷಿತ ಮತ್ತು ಕಳಪೆ ಆಗುತ್ತಿರುವ ಹೊತ್ತಿನಲ್ಲಿ ಪಿ.ರಾಮಯ್ಯ ಅವರಂತಹ ಒಂದು ಅಪ್ಪಟ ಮಾದರಿ ನಮ್ಮನ್ನೆಲ್ಲಾ ಅಗಲಿದೆ.
ರಾಮಯ್ಯ ಅವರು ಪತ್ರಕರ್ತರಾಗಿ ಪತ್ರಿಕಾ ವೃತ್ತಿಯ ಘನತೆ-ಮೌಲ್ಯ-ನೈತಿಕ ಶಕ್ತಿ ಹೆಚ್ಚಿಸಲು ಶ್ರಮಿಸಿದರು ಎಂದು ವಿವರಿಸಿದರು.

ಪಿ.ರಾಮಯ್ಯ ಅವರು ರಾಜಕಾರಣಿಯಾಗಿ ರಾಜಕಾರಣದ ಉದ್ದೇಶ, ಕಾಳಜಿಯ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಮಾಡಿ ಸಾರ್ವಜನಿಕ ಜೀವನದ ಮೌಲ್ಯವನ್ನು ಉನ್ನತ ಮಟ್ಟದಲ್ಲಿ ಉಳಿಸುವ ಪ್ರಯತ್ನ ಮಾಡಿದ್ದರು.
ಹೀಗಾಗಿ ಪಿ.ರಾಮಯ್ಯ ಪತ್ರಕರ್ತರಾಗಿ, ರಾಜಕಾರಣಿಯಾಗಿಅವರು ತಮ್ಮ ಕಾಲದ ಸಾರ್ವಜನಿಕ ಬದುಕಿನ ಮೌಲ್ಯಗಳ ಪ್ರತಿರೂಪವಾಗಿದ್ದರು. ವೃತ್ತಿಪರತೆ ಮತ್ತು ಸಾಮಾಜಿಕ ಬದ್ಧತೆ
ರಾಮಯ್ಯನವರ ವ್ಯಕ್ತಿತ್ವದ ಎರಡು ಕಣ್ಣುಗಳಾಗಿದ್ದವು.
ಸುದ್ದಿಯನ್ನು ಅವರು ಗ್ರಹಿಸುತ್ತಿದ್ದ ರೀತಿಯೇ, ಅವರು ಸಮಾಜಮುಖಿ ಆಗಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ಆಗ ಸಮಾಜಮುಖಿಯಲ್ಲದ ಪತ್ರಕರ್ತರಿಗೆ ವೃತ್ತಿಯಲ್ಲಿ ಜಾಗ ಇರಲಿಲ್ಲ, ಸಮಾಜಮುಖಿಯಲ್ಲದ ಬರಹಗಳಿಗೆ ಪುಟಗಳಲ್ಲಿ ಜಾಗವೂ ಸಿಗುತ್ತಿರಲಿಲ್ಲ.
ಈ ಹೊತ್ತಿನಲ್ಲಿ ಇವೆರಡೂ ಮಾದರಿಗಳೂ ಸವಕಲಾಗಿ ಕಾಣುತ್ತಿರುವುದು ಬೇಸರದ ಸಂಗತಿ ಎಂದರು.
“ರಾಮಯ್ಯನವರಂತಹ ಹಿರಿಯರು ಪತ್ರಿಕೋದ್ಯಮದ ನೈತಿಕ ಸ್ಥೈರ್ಯದಂತೆ ಇದ್ದರು. ಅವರು ನಿರ್ಗಮಿಸಿದಾಗ ಕೇವಲ ಒಬ್ಬ ಪತ್ರಕರ್ತನ ನಿರ್ಗಮನವಲ್ಲ, ಬದಲಿಗೆ ಒಂದು ಕಾಲಘಟ್ಟದ ಪತ್ರಿಕಾ ಮೌಲ್ಯಗಳ ಅಂತ್ಯದಂತೆ ಭಾಸವಾಗುತ್ತದೆ” ಎಂದು ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರು ದಾಖಲಿಸಿದ್ದನ್ನು ಉಲ್ಲೇಖಿಸಿದರು.
ಪಿ. ರಾಮಯ್ಯ ಅವರು ಬರೆದ “ನಾನು ಹಿಂದೂ ರಾಮಯ್ಯ” ಪುಸ್ತಕ ಅವರ ಆತ್ಮಕಥೆಯಾಗಿರದೆ, ಅರ್ಧ ಶತಮಾನದ ಚರಿತ್ರೆಯೂ ಆಗಿದೆ.
ಹಳೆಯ ಮೈಸೂರು ಭಾಗದ ಸಾಮಾಜಿಕ ಮತ್ತು ರಾಜಕೀಯ ಬದುಕು ಮತ್ತು ಬದಲಾವಣೆಗಳ ದಾಖಲೆಯಾಗಿದೆ ಎಂದರು.
ಅಂದಿನ ಕಾಲದ ಪತ್ರಿಕೋದ್ಯಮದಲ್ಲಿ ಅನಿವಾರ್ಯವಾಗಿದ್ದ ನೈತಿಕತೆ, ಸವಾಲುಗಳು ಮತ್ತು ವರದಿಗಾರಿಕೆಯಲ್ಲಿನ ಬದ್ಧತೆಯ ವಿಲ್ ಬರೆದಿಟ್ಟಂತಿದೆ.
ಪಿ.ರಾಮಯ್ಯನವರಿಗೆ ದೇವರಾಜ ಅರಸು ಅವರಿಂದ ಹಿಡಿದು ಅನೇಕ ಮುಖ್ಯಮಂತ್ರಿಗಳೊಂದಿಗೆ ಇದ್ದ ಆಪ್ತ ಒಡನಾಟವನ್ನು ರಾಜ್ಯ ಧರ್ಮ/ ವೃತ್ತಿಧರ್ಮವನ್ನು ಕಾಪಾಡಲು ಕಟ್ಟುನಿಟ್ಟಾಗಿ ಬಳಸಿದ್ದನ್ನು ಸ್ಮರಿಸಿದರು.
ಮೇಲ್ಮನೆಯಲ್ಲಿ (ವಿಧಾನ ಪರಿಷತ್) ನಡೆಯುತ್ತಿದ್ದ ಚರ್ಚೆಗಳಲ್ಲಿ ಗಂಭೀರತೆ ಮತ್ತು ಮೌಲ್ಯಗಳನ್ನು ತರುವಲ್ಲಿ ಇವರು ಶ್ರಮಿಸಿದರು. ಹೀಗಾಗಿ ರಾಮಯ್ಯ ಅವರು ತಾವು ತೊಡಗಿಸಿಕೊಂಡಿದ್ದ ಎಲ್ಲಾ ಕ್ಷೇತ್ರಗಳ ಘನತೆ ಹೆಚ್ಚಿಸುವ ಕೆಲಸ ಮಾಡಿ ಆ ಮಾದರಿಗಳನ್ನು ನಮ್ಮೆದುರಿಗೆ ಬಿಟ್ಟು ಹೋಗಿದ್ದಾರೆ. ಈ ಮಾದರಿಗಳನ್ನು ಇವತ್ತಿನ ಪತ್ರಕರ್ತರು ಮುಂದುವರೆಸಬೇಕು ಎಂದು ಕರೆ ನೀಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ದಿವ್ಯ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಚಲುವರಾಯಸ್ವಾಮಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ವೋಡೆ ಪಿ ಕೃಷ್ಣ, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಕೆಯುಡಬ್ಲ್ಯುಜೆ ಅಧ್ಯಕ್ಷರಾದ ಶಿವಾನಂದ ತಗಡೂರು, ಈ ಸಂಜೆ ಸಂಪಾದಕರಾದ ಟಿ.ವೆಂಕಟೇಶ್, ವರದಿಗಾರರ ಕೂಟದ ಅಧ್ಯಕ್ಷ ಆರ್.ಟಿ.ವಿಠ್ಠಲ್ ಮೂರ್ತಿ, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್, ಗಾಂಧಿ ಸ್ಮಾರದ ನಿಧಿ ಕೋಶಾಧ್ಯಕ್ಷರಾದ ದಿನೇಶ್, ರಾಮಯ್ಯ ಅವರ ಪುತ್ರ ಡಾ.ಬಾಲಾಜಿ ಅವರುಗಳು ಉಪಸ್ಥಿತರಿದ್ದರು.

The post ಪಿ.ರಾಮಯ್ಯ ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು: ಕೆ.ವಿ.ಪ್ರಭಾಕರ್ ಶ್ಲಾಘನೆ appeared first on Karnataka Kahale.

]]>
ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ವಿಧಿವಶ: ಕೆಯುಡಬ್ಲ್ಯೂಜೆ ಸಂತಾಪ https://www.karnatakakahale.com/news/22297 Wed, 11 Feb 2026 13:13:07 +0000 https://www.karnatakakahale.com/?p=22297 ಬೆಂಗಳೂರು: ಹಿರಿಯ ಪತ್ರಕರ್ತ ಹಾಗು ವಿಧಾನ ಪರಿಷತ್ತಿನ ಮಾಜಿ ಸದಸ್ಯ   ಪಿ.ರಾಮಯ್ಯ ಅವರು ಮಂಗಳವಾರ ನಿಧನರಾದರು. ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ. ರಾಮಯ್ಯ ಅವರು ವಿವಿಧ ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಅಸುನೀಗಿದರು…

The post ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ವಿಧಿವಶ: ಕೆಯುಡಬ್ಲ್ಯೂಜೆ ಸಂತಾಪ appeared first on Karnataka Kahale.

]]>
ಪಿ. ರಾಮಯ್ಯ

ಬೆಂಗಳೂರು: ಹಿರಿಯ ಪತ್ರಕರ್ತ ಹಾಗು ವಿಧಾನ ಪರಿಷತ್ತಿನ ಮಾಜಿ ಸದಸ್ಯ   ಪಿ.ರಾಮಯ್ಯ ಅವರು ಮಂಗಳವಾರ ನಿಧನರಾದರು.

ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ. ರಾಮಯ್ಯ ಅವರು ವಿವಿಧ ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ ಬಾಲಜಿ ತಿಳಿಸಿದ್ದಾರೆ .

1933 ಸೆಪ್ಟೆಂಬರ್ 12 ರಂದು ಜನಿಸಿದ ರಾಮಯ್ಯ ಅವರು ಇಬ್ಬರು ಪುತ್ರರು , ಓರ್ವ ಪುತ್ರಿ ಹಾಗು ಸೊಸೆಯಂದಿರು ಹಾಗು ಮೊಮ್ಮಕಳನ್ನು ಅಗಲಿದ್ದಾರೆ .

“ದಿ ಹಿಂದೂ ” ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದ ರಾಮಯ್ಯ ಅವರು ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು .

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಯುಡಬ್ಲ್ಯೂಜೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು ಪತ್ರಿಕಾ ಅಕಾಡೆಮಿ ಹಾಗು ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು.
ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದ ರಾಮಯ್ಯ ಅವರು ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು.

ಅಂತಿಮ‌ ನಮನ: ನಾಡಿನ ಹಿರಿಯ ಪತ್ರಕರ್ತರು, ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ ಅವರ ಪಾರ್ಥೀವ ಶರೀರಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡರು ಬುಧವಾರ ಅಂತಿಮ ನಮನ ಸಲ್ಲಿಸಿದರು.

ಕೆಯುಡಬ್ಲ್ಯೂಜೆ ಸಂತಾಪ: ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸಂತಾಪ ವ್ಯಕ್ತಪಡಿಸಿದೆ.

ತೊಂಬತ್ತನೇ ವಸಂತ ತುಂಬಿದ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ವತಿಯಿಂದ ರಾಮಯ್ಯ ಅವರನ್ನ ಅವರ ಮನೆಯಂಗಳದಲ್ಲಿಯೇ ದಂಪತಿಗಳ ಸಹಿತ ಗೌರವಿಸಲಾಗಿತ್ತು. ಕಳೆದ ಜನ್ಮದಿನದ ಸಂದರ್ಭದಲ್ಲೂ ಅವರ ಮನೆಯಲ್ಲಿಯೇ ಭೇಟಿ ಮಾಡಿ ಶುಭಾಶಯ ಕೋರಲಾಗಿತ್ತು ಎಂದು ನೆನಪಿಸಿಕೊಂಡಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಶೋಕಿಸಿದ್ದಾರೆ. ರಾಮಯ್ಯ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲೆಂದು ತಗಡೂರು ಪ್ರಾರ್ಥಿಸಿದ್ದಾರೆ.

The post ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ವಿಧಿವಶ: ಕೆಯುಡಬ್ಲ್ಯೂಜೆ ಸಂತಾಪ appeared first on Karnataka Kahale.

]]>
ಅಗಲಿದ ಪತ್ರಕರ್ತರುಗಳಿಗೆ ಕೆಯುಡಬ್ಲ್ಯೂಜೆ ಶ್ರದ್ಧಾಂಜಲಿ: ಸುದ್ದಿಮನೆಯ ಒತ್ತಡದಿಂದ ಕುಗ್ಗುತ್ತಿರುವ ಪತ್ರಕರ್ತರ ಆಯಸ್ಸು; ಆತಂಕ https://www.karnatakakahale.com/news/22231 Fri, 06 Feb 2026 14:42:58 +0000 https://www.karnatakakahale.com/?p=22231 ಬೆಂಗಳೂರು: ಸುದ್ದಿಮನೆಯ ಒತ್ತಡಗಳಿಗೆ ಪತ್ರಕರ್ತರ ಆಯಸ್ಸು ಕುಗ್ಗುತ್ತಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು(ಕೆಯುಡಬ್ಲೂೃಜೆ) ಅಗಲಿದ ಪತ್ರಕರ್ತರಿಗೆ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು. ಸಭೆಯಲ್ಲಿ ಮಾತನಾಡಿದ ಹಲವರು, ಪತ್ರಕರ್ತರ ಬದುಕು ಒತ್ತಡದ ಬದುಕು ಆಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ…

The post ಅಗಲಿದ ಪತ್ರಕರ್ತರುಗಳಿಗೆ ಕೆಯುಡಬ್ಲ್ಯೂಜೆ ಶ್ರದ್ಧಾಂಜಲಿ: ಸುದ್ದಿಮನೆಯ ಒತ್ತಡದಿಂದ ಕುಗ್ಗುತ್ತಿರುವ ಪತ್ರಕರ್ತರ ಆಯಸ್ಸು; ಆತಂಕ appeared first on Karnataka Kahale.

]]>

ಬೆಂಗಳೂರು: ಸುದ್ದಿಮನೆಯ ಒತ್ತಡಗಳಿಗೆ ಪತ್ರಕರ್ತರ ಆಯಸ್ಸು ಕುಗ್ಗುತ್ತಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು(ಕೆಯುಡಬ್ಲೂೃಜೆ) ಅಗಲಿದ ಪತ್ರಕರ್ತರಿಗೆ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಹಲವರು, ಪತ್ರಕರ್ತರ ಬದುಕು ಒತ್ತಡದ ಬದುಕು ಆಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಸರಿಯಾದ ಆಹಾರ ಪದ್ದತಿ ಪರಿಪಾಲನೆ ಮಾಡದ ಕಾರಣಕ್ಕಾಗಿ
ಆರೋಗ್ಯದ ಮೇಲೂ ಅಡ್ಡ ಪರಿಣಾಮಗಳಾಗುತ್ತಿವೆ. ಧೀರ್ಘ ಕಾಲ ಬಾಳಬೇಕಾಗಿರುವ ಪತ್ರಕರ್ತರ ಆಯಸ್ಸು ಅಲ್ಪಯುಷ್ಯಕ್ಕೆ ಇಳಿಯುತ್ತಿರುವುದು ನೋವಿನ ಸಂಗತಿ ಎಂದು ಸಭೆ ವಿಷಾದ ವ್ಯಕ್ತಪಡಿಸಿತು.

ಇತ್ತೀಚೆಗೆ ಹಿರಿಯರಷ್ಟೆ ಅಲ್ಲ, ಕಿರಿಯ ಪತ್ರಕರ್ತರು ಸೇರಿದಂತೆ ಸರಣಿ ಸಾವು ಸಂಭವಿಸಿವೆ. ಆದುದರಿಂದ ಪತ್ರಕರ್ತರು ತಮ್ಮ ವೃತ್ತಿ ಒತ್ತಡ ನಿಭಾಯಿಸಿಕೊಳ್ಳಲು ಬೇರೆ ಮಾರ್ಗಗಳನ್ನು ಅನುಸರಿಸಬೇಕು. ಆಹಾರ ಪದ್ದತಿಯನ್ನು ಸರಿಪಡಿಸಿಕೊಳ್ಳಬೇಕು ಎಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಇತ್ತೀಚೆಗೆ ನಮ್ಮನ್ನು ಅಗಲಿದ ಪತ್ರಕರ್ತರಾದ ಬೀದರನ ನಾಗಶೆಟ್ಟಿ ಧರಂಪುರ, ಸಂಜೆವಾಣಿ ದೊಡ್ಡಬೊಮ್ಮಯ್ಯ, ಸಂಯುಕ್ತ ಕರ್ನಾಟಕದ ಭೀಮಸೇನ ಪದಕಿ, ಬೆಳಗಾವಿಯ ಎಂ.ಎನ್.ಪಾಟೀಲ, ಸಕಲೇಶಪುರದ ಎಂ.ಎನ್.ಶಿವಕುಮಾರ್, ಪ್ರಜಾವಾಣಿಯ ಬಾವು ಪತ್ತಾರ, ಕಲಬುರ್ಗಿ ಪ್ರಭುಲಿಂಗ ನೀಲೂರೆ, ರಾಯಚೂರು ನಹೀಮ್ ಅಶ್ರ್, ಮೈಸೂರಿನ ಸೂರಜ್, ವಿಜಯಪುರದ ಧಾವಲ್ ಘೋರ್ಪಡೆ ಅವರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪ ಕೋರಲಾಯಿತು.

ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ನಾನು ಕೂಡ ಪತ್ರಕರ್ತನಾಗಿದ್ದೆ. ವೃತ್ತಿ ಒಳಹೊರಗು ವೃತ್ತಿ ಬದುಕು ಕಷ್ಟದ್ದು ಎನ್ನುವುದು ಎಲ್ಲರಿಗೂ ಗೊತ್ತು. ಕಡಿಮೆ ವಯಸ್ಸಿನಲ್ಲಿಯೇ ಬದುಕು ಅಂತ್ಯವಾಗುವುದು ನೋವಿನ ಸಂಗತಿ. ಇಂಥ ಸಂದರ್ಭದಲ್ಲಿ ನೊಂದ ಕುಟುಂಬಗಳಿಗೆ ಎಲ್ಲರೂ ಆಸರೆಯಾಗಿ ನಿಲ್ಲಬೇಕು ಎಂದರು. ತಮ್ಮ ನಿವೃತ್ತಿ ವೇತನದ ತಿಂಗಳ ಹಣವನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಕಳುಹಿಸಿಕೊಡುವುದಾಗಿ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ರಾಜ್ಯ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ ಸುದ್ದಿಮನೆಯಲ್ಲಿ ನಮ್ಮ ಒಡನಾಡಿಗಳಾಗಿದ್ದ ಪತ್ರಕರ್ತರಿಗೆ ಶ್ರದ್ದಾಂಜಲಿ ಸಲ್ಲಿಸುವುದು ನೋವಿನ ಸಂಗತಿಯಾದರೂ, ನಮ್ಮ ಆದ್ಯ ಕರ್ತವ್ಯವಾಗಿದೆ. ಆ ಮೂಲಕ ಅವರ ಒಡನಾಡ ಮತ್ತು ಪತ್ರಕರ್ತ ವೃತ್ತಿ ಸೇವೆಯನ್ನು ಸ್ಮರಿಸುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಾಜಿ ಅಧ್ಯಕ್ಷ ವಿ.ವೆಂಕಟೇಶ್ ಮಾತನಾಡಿ, ನೊಂದ ಕುಟುಂಬಗಳಿಗೆ ನೆರವಾಗುವ ಕೆಲಸವನ್ನು ಶಿವಾನಂದ ತಗಡೂರು ನೇತೃತ್ವದ ತಂಡ ಕ್ರೀಯಾಶೀಲವಾಗಿ ಮಾಡುತ್ತಿದೆ ಎಂದರು.

ರಾಜ್ಯ ಸಂಘದ ಖಜಾಂಚಿ ಎಂ.ವಾಸುದೇವಹೊಳ್ಳ ಮತ್ತು ಕೋಲಾರವಾಣಿ ಪತ್ರಿಕೆ ಸಂಪಾದಕ ಮುರುಳಿಧರ್ ಅವರು ಹೊನ್ನುಡಿ ಪತ್ರಿಕೆಯ ಎಂ.ಜಿ.ಪ್ರಭಾಕರ್ ಅವರ ಬಗ್ಗೆ ಮಾತನಾಡಿ ಅವರ ಸೇವೆ ಮತ್ತು ನಿಷ್ಟೂರ ವೃತ್ತಿ ಬದುಕನ್ನು ಸ್ಮರಿಸಿದರು.

ಹಿರಿಯ ಪತ್ರಕರ್ತರಾದ ಭಾಷ್ಯಂಗೂಳ್ಯ, ಶಿವರಾಜ ಅವರು, ಸ್ನೇಹಜೀವಿಯಾಗಿದ್ದ ದೊಡ್ಡಬೊಮ್ಮಯ್ಯ ಅವರ ಸೇವಾ ಹಿರಿತನ ಸ್ಮರಿಸಿದರು.

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶನಕ ಧ್ಯಾನ್ ಪೂಣಚ್ಚ, ಹಿರಿಯ ಪತ್ರಕರ್ತೆ ಶಶಿಕಲಾ ಮತ್ತಿತರರು ಮಾತನಾಡಿದರು.

ನುಡಿನಮನ ಕಾರ್ಯಕ್ರಮದಲ್ಲಿ ಅಗಲಿದ ಪತ್ರಕರ್ತರ ಕೆಲ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ದೊಡ್ಡಬೊಮ್ಮಯ್ಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು.

The post ಅಗಲಿದ ಪತ್ರಕರ್ತರುಗಳಿಗೆ ಕೆಯುಡಬ್ಲ್ಯೂಜೆ ಶ್ರದ್ಧಾಂಜಲಿ: ಸುದ್ದಿಮನೆಯ ಒತ್ತಡದಿಂದ ಕುಗ್ಗುತ್ತಿರುವ ಪತ್ರಕರ್ತರ ಆಯಸ್ಸು; ಆತಂಕ appeared first on Karnataka Kahale.

]]>
ಬೆಂಗಳೂರು ಉತ್ತರ ವಿವಿ ನೂತನ ಕುಲಪತಿ ಪ್ರೊ. ಬಿ.ಕೆ.ರವಿ ಅವರಿಗೆ ಸನ್ಮಾನ https://www.karnatakakahale.com/news/22228 Fri, 06 Feb 2026 00:55:38 +0000 https://www.karnatakakahale.com/?p=22228 ಕೋಲಾರ, ಫೆ.೬: ಬೆಂಗಳೂರು ಉತ್ತರ(ಕೋಲಾರ) ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ. ಬಿ.ಕೆ ರವಿ ಅವರನ್ನು ಪ್ರಾಧ್ಯಾಪಕರಾದ ಡಾ. ಎನ್. ಸಂಜೀವ್ ರಾಜ್ ರವರು ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಡಾ. ಎನ್. ಸಂಜೀವ್ ರಾಜ್ ಅವರು, ಪ್ರೊ. ಬಿ.ಕೆ.ರವಿ ರವರು ನಮ್ಮ…

The post ಬೆಂಗಳೂರು ಉತ್ತರ ವಿವಿ ನೂತನ ಕುಲಪತಿ ಪ್ರೊ. ಬಿ.ಕೆ.ರವಿ ಅವರಿಗೆ ಸನ್ಮಾನ appeared first on Karnataka Kahale.

]]>
ಕೋಲಾರ, ಫೆ.೬: ಬೆಂಗಳೂರು ಉತ್ತರ(ಕೋಲಾರ) ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ. ಬಿ.ಕೆ ರವಿ ಅವರನ್ನು ಪ್ರಾಧ್ಯಾಪಕರಾದ ಡಾ. ಎನ್. ಸಂಜೀವ್ ರಾಜ್ ರವರು ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಡಾ. ಎನ್. ಸಂಜೀವ್ ರಾಜ್ ಅವರು, ಪ್ರೊ. ಬಿ.ಕೆ.ರವಿ ರವರು ನಮ್ಮ ಪತ್ರಿಕೋದ್ಯಮ ವಿಭಾಗದಿಂದ ಎರಡನೇ ಕುಲಪತಿಯಾಗಿದ್ದು ಹೆಮ್ಮೆ ಎಂದು ಸಂತಸಪಟ್ಟರು.
ಪ್ರೊ.ಬಿ.ಕೆ. ರವಿ ಅವರು ರಾಜ್ಯದ ಅಹಿಂದ ಸಮುದಾಯಗಳಿಗೆ ಮೇರು ಶಿಖರ ಇದ್ದಂತೆ, ಈಗಾಗಲೇ ಕೊಪ್ಪಳ ವಿವಿಯ ಪ್ರಥಮ ಕುಲಪತಿಯಾಗಿದ್ದರು. ಇತ್ತೀಚಿಗೆ ರಾಜ್ಯ ಸರ್ಕಾರವು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ನೇಮಕ ಮಾಡಿರುವುದು ವಿಶೇಷ ಸಂಗತಿ, ಇನ್ನೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರವಾದ ಶಿಷ್ಯ ಬಳಗವನ್ನೇ ಹೊಂದಿರುವರು, ಇವರಿಗೆ ಇನ್ನಷ್ಟು ಸೇವೆ ಮಾಡಲು ಅ ಭಗವಂತ ಶಕ್ತಿ ನೀಡಲೆಂದು ಶುಭ ಹಾರೈಸುತ್ತೇನೆ ಎಂದರು.
ಇದೇ ವೇಳೆ ಸಂವಹನ ವಿಭಾಗದ ಸಂಶೋಧನಾರ್ಥಿಗಳಾದ ಈಶ್ವರ್, ಮಂಜುನಾಥ ಕೆ, ಶಶಿಕುಮಾರ್ ಪಿ, ವಿನೋದ್ ಕುಮಾರ್ ಡಿ. ಚೌವಣ್, ಪ್ರವೀಣ್ ಕುಮಾರ್, ಹರಿಣಿ ಬಿ, ಗಾಯತ್ರಿ ವೈ, ಪುನೀತ, ಕೆಂಪರಾಜ್ ಸಿ.ವಿ, ಮತ್ತಿತರರು ಉಪಸ್ಥಿತರಿದ್ದರು.

The post ಬೆಂಗಳೂರು ಉತ್ತರ ವಿವಿ ನೂತನ ಕುಲಪತಿ ಪ್ರೊ. ಬಿ.ಕೆ.ರವಿ ಅವರಿಗೆ ಸನ್ಮಾನ appeared first on Karnataka Kahale.

]]>
ಕು.ಶ್ರೇಯಾ ಮಹೇಶ್ ರಂಗ ಪ್ರವೇಶ: ಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಶ್ರೀಮಂತ ದೇಶ ಭಾರತ -ನ್ಯಾ.ಗೋಪಾಲಗೌಡ https://www.karnatakakahale.com/news/22211 Wed, 04 Feb 2026 04:44:12 +0000 https://www.karnatakakahale.com/?p=22211 ಬೆಂಗಳೂರು:ಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಇಡೀ ಪ್ರಪಂಚದಲ್ಲಿಯೇ ಭಾರತ ದೇಶ ಶ್ರೀಮಂತವಾದದ್ದು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಗೋಪಾಲಗೌಡ ಅವರು ಹೇಳಿದ್ದಾರೆ. ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಏರ್ಪಡಿಸಿದ್ದ ವಕೀಲ ಆರ್.ಮಹೇಶ್ ಮತ್ತು ಆಶಾ ದಂಪತಿಗಳ ಸುಪುತ್ರಿ ಶ್ರೇಯಾ ಮಹೇಶ್…

The post ಕು.ಶ್ರೇಯಾ ಮಹೇಶ್ ರಂಗ ಪ್ರವೇಶ: ಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಶ್ರೀಮಂತ ದೇಶ ಭಾರತ -ನ್ಯಾ.ಗೋಪಾಲಗೌಡ appeared first on Karnataka Kahale.

]]>

ಬೆಂಗಳೂರು:ಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಇಡೀ ಪ್ರಪಂಚದಲ್ಲಿಯೇ ಭಾರತ ದೇಶ ಶ್ರೀಮಂತವಾದದ್ದು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಗೋಪಾಲಗೌಡ ಅವರು ಹೇಳಿದ್ದಾರೆ.
ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಏರ್ಪಡಿಸಿದ್ದ ವಕೀಲ ಆರ್.ಮಹೇಶ್ ಮತ್ತು ಆಶಾ ದಂಪತಿಗಳ ಸುಪುತ್ರಿ ಶ್ರೇಯಾ ಮಹೇಶ್ ಅವರ ರಂಗ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಲವು ವಿಭಾಗದಲ್ಲಿ ದೇಶದ ಶ್ರೀಮಂತಿಕೆ ಇಲ್ಲದೆ ಇರಬಹುದು. ಆದರೆ,ಕೆಲೆ ಮತ್ತು ಸಂಸ್ಕೃತಿಕತೆಯಲ್ಲಿ ನಮ್ಮ ದೇಶ ಎಂದೂ ಹಿಂದೆ ಬಿದ್ದಿಲ್ಲ. ಇದು ನಮ್ಮ ಹೆಗ್ಗಳಿಕೆ ಎಂದರು.

ಭರತ ನಾಟ್ಯ ಎನ್ನುವುದು ನಮ್ಮ ನೆಲದಲ್ಲಿಯೇ ಬೆಳೆದು ಅರಳಿದ ಕಲೆ. ಕು.ಶ್ರೇಯ ಅವರು ಅಮೋಘವಾಗಿ ನಾಟ್ಯ ಪ್ರದರ್ಶನ ಮಾಡಿದ್ದಾರೆ. ಒತ್ತಡ, ದುಗುಡವನ್ನು ಹೊರತಾದ ಪರಿಸ್ಥಿತಿಯಲ್ಲಿ ಮನಸ್ಸಿಗೆ ಇಂಪಾದ ವಾತಾವರಣವನ್ನು ಕಲಾ ಪ್ರದರ್ಶನ ನೀಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತೆ ಕು.ಶ್ರೇಯ ಅವರನ್ನು ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿದವು.
ಕಾರ್ಯಕ್ರಮದಲ್ಲ ಹೆಚ್ಚುವರಿ ಅಡ್ವಕೇಟ್ ಕಿರಣ್ ವಿ ರಾವ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ, ಯೋಗಮಿತ್ರ ಡಾ.ಎ.ಸುಬ್ರಹ್ಮಣ್ಯನ್, ಧರಣಿ ಕಶ್ಯಪ್, ಡಾ.ಸುಪರ್ಣವೆಂಕಟೇಶ್, ವಕೀಲ ಎ.ಪಿ. ರಂಗನಾಥ್, ಗೀತಾರಾಜ್ ಹಾಜರಿದ್ದರು

The post ಕು.ಶ್ರೇಯಾ ಮಹೇಶ್ ರಂಗ ಪ್ರವೇಶ: ಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಶ್ರೀಮಂತ ದೇಶ ಭಾರತ -ನ್ಯಾ.ಗೋಪಾಲಗೌಡ appeared first on Karnataka Kahale.

]]>
ಹೆಚ್.ಕೆ.ಬಿ.ಕೆ ಜಿಐಯಲ್ಲಿ 77 ನೇ ಗಣರಾಜ್ಯೋತ್ಸವ ಆಚರಣೆ: ಸಂವಿಧಾನವು ಭಾರತದ ಆತ್ಮ -ಸಿ.ಎಂ.‌ಫೈಝ್ ಮಹಮ್ಮದ್ ಅಭಿಮತ https://www.karnatakakahale.com/news/22128 Mon, 26 Jan 2026 08:02:50 +0000 https://www.karnatakakahale.com/?p=22128 ಬೆಂಗಳೂರು, ಜ.26 :ನಗರದ ಹೆಚ್.ಕೆ. ಬಿ.ಕೆ. ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಒನ್ ಸ್ಕೂಲ್ ಆಫ್ ಬಿಜಿನೆಸ್ ಸಹಯೋಗದಲ್ಲಿ 77 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹೆಚ್.ಕೆ.ಬಿ.ಕೆ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು, ಒನ್ ಸ್ಕೂಲ್ ಆಫ್ ಬಿಜಿನೆಸ್ ನ ಅಧ್ಯಕ್ಷರೂ…

The post ಹೆಚ್.ಕೆ.ಬಿ.ಕೆ ಜಿಐಯಲ್ಲಿ 77 ನೇ ಗಣರಾಜ್ಯೋತ್ಸವ ಆಚರಣೆ: ಸಂವಿಧಾನವು ಭಾರತದ ಆತ್ಮ -ಸಿ.ಎಂ.‌ಫೈಝ್ ಮಹಮ್ಮದ್ ಅಭಿಮತ appeared first on Karnataka Kahale.

]]>

ಬೆಂಗಳೂರು, ಜ.26 :ನಗರದ ಹೆಚ್.ಕೆ. ಬಿ.ಕೆ. ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಒನ್ ಸ್ಕೂಲ್ ಆಫ್ ಬಿಜಿನೆಸ್ ಸಹಯೋಗದಲ್ಲಿ 77 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಹೆಚ್.ಕೆ.ಬಿ.ಕೆ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು, ಒನ್ ಸ್ಕೂಲ್ ಆಫ್ ಬಿಜಿನೆಸ್ ನ ಅಧ್ಯಕ್ಷರೂ ಆದ  ಸಿ.ಎಂ. ಫೈಝ್ ಮಹಮ್ಮದ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಮಹಾನ್ ನಾಯಕರ ತ್ಯಾಗ ಬಲಿದಾನಗಳ ಫಲವಾಗಿ ದೇಶ ಸ್ವತಂತ್ರವಾಗಿದೆ. ಹಿಂದು ಮುಸ್ಲಿಂ ಕ್ರೈಸ್ತ ಹೀಗೆ ಅನೇಕ ಜಾತಿ ಮತ ಪಂಥ ಪಂಗಡದವರು ವಾಸಿಸುವ ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದೆ ಎಂದು ತಿಳಿಸಿದರು.        ಎಲ್ಲರೂ ಸಮಾನತೆ ಸಹಬಾಳ್ವೆಯಿಂದ ಜೀವನ ನಡೆಸಲು ಸಂವಿಧಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಮೂಲಭೂತ ಹಕ್ಕು ಮತ್ತು ಕರ್ತವ್ಯ, ಆದರ್ಶಗಳನ್ನು ಅಳವಡಿಸಿಕೊಂಡು ಸಂವಿಧಾನದ ಘನತೆ ಕಾಪಾಡಬೇಕು. ಗಣತಂತ್ರ ವ್ಯವಸ್ಥೆಯ ಯಶಸ್ಸಿಗೆ ಸಾಂವಿಧಾನಿಕ ಮೌಲ್ಯಗಳ ಅನುಸರಣೆ ಅಗತ್ಯ. ಸಂವಿಧಾನವು ದೇಶದ ಆತ್ಮ ಇದ್ದಂತೆ ಎಂದು ಅಭಿಪ್ರಾಯ ಪಟ್ಟರು.

ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಹಮ್ಮದ್ ರಿಯಾಝ್ ಅಹ್ಮದ್, ಒನ್ಎಸ್ ಬಿ ಯ ಡಾ.‌ ಲತಾ, ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹರೀಶ್ ಎಸ್.ಬಿ., ಡಾ. ಸಂತೋಷ್ ಪಿ., ಸಂಸ್ಥೆಯ ಅಂಗ ಸಂಸ್ಥೆಗಳ ಪ್ರಾಂಶುಪಾಲರು, ಡೀನರು, ಕಾಲೇಜುಗಳ ಎಲ್ಲ ವಿಭಾಗಗಳ ಮುಖ್ಯಸ್ಥರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.‌

ಡಾ. ವಿವೇಕಕುಮಾರ್ ಶಾಹ ಸ್ವಾಗತಿಸಿದರು.‌ ಪ್ರೊ. ತಿರಮಾಗಲ ವಂದಿಸಿದರು. ಪ್ರೊ.‌ಪವನ್ ಕುಮಾರ್ ನಿರೂಪಿಸಿದರು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

The post ಹೆಚ್.ಕೆ.ಬಿ.ಕೆ ಜಿಐಯಲ್ಲಿ 77 ನೇ ಗಣರಾಜ್ಯೋತ್ಸವ ಆಚರಣೆ: ಸಂವಿಧಾನವು ಭಾರತದ ಆತ್ಮ -ಸಿ.ಎಂ.‌ಫೈಝ್ ಮಹಮ್ಮದ್ ಅಭಿಮತ appeared first on Karnataka Kahale.

]]>