ಮಹಾನಗರ ಪಾಲಿಕೆ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Fri, 07 Apr 2023 16:44:10 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಮಹಾನಗರ ಪಾಲಿಕೆ – Karnataka Kahale https://www.karnatakakahale.com 32 32 ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳ್ಳಾರಿ ನೂತನ ಮೇಯರ್ ಡಿ. ತ್ರಿವೇಣಿ https://www.karnatakakahale.com/news/11789 Fri, 07 Apr 2023 16:44:10 +0000 https://www.karnatakakahale.com/?p=11789 ಬಳ್ಳಾರಿ/ಬೆಂಗಳೂರು, ಏ.7: ಬಳ್ಳಾರಿ ಮಹಾನಗರ ಪಾಲಿಕೆ ನೂತನ ಮೇಯರ್ ಡಿ. ತ್ರಿವೇಣಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮೇಯರ್ ಆಗಿ ಆಯ್ಕೆಯಾದ ಬಳಿಕ ತಮ್ಮ ಪಕ್ಷದ…

The post ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳ್ಳಾರಿ ನೂತನ ಮೇಯರ್ ಡಿ. ತ್ರಿವೇಣಿ appeared first on Karnataka Kahale.

]]>

ಬಳ್ಳಾರಿ/ಬೆಂಗಳೂರು, ಏ.7: ಬಳ್ಳಾರಿ ಮಹಾನಗರ ಪಾಲಿಕೆ ನೂತನ ಮೇಯರ್ ಡಿ. ತ್ರಿವೇಣಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಮೇಯರ್ ಆಗಿ ಆಯ್ಕೆಯಾದ ಬಳಿಕ ತಮ್ಮ ಪಕ್ಷದ ಕಾರ್ಪೋರೇಟರ್ ಅವರೊಂದಿಗೆ ಬೆಂಗಳೂರಿಗೆ ತೆರಳಿ ಹಿರಿಯ ಮುಖಂಡರನ್ನು ಭೇಟಿ ಮಾಡಿದರು.
ಸಿದ್ಧರಾಮಯ್ಯ ಅವರು ಮಾತನಾಡಿ, ರಾಜ್ಯದ ಮೊದಲ ಚಿಕ್ಕ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆ ಪಾತ್ರರಾಗುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹೆಸರು ತಂದಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದರು.


ಉತ್ತಮ‌ ಭವಿಷ್ಯವಿದ್ದು, ಪಾಲಿಕೆಯಲ್ಲಿ ಉತ್ತಮ ಆಡಳಿತ ನೀಡಿ ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಪೊರೇಟರುಗಳಾದ ಮುಲ್ಲಂಗಿ ನಂದೀಶ್, ಮಂಡ್ಲೂರು ಪ್ರಭಂಜನ್, ಮಂಡ್ಲೂರ್ ವಿವೇಕ್, ರಾಮಾಂಜನೇಯ, ಪಿ. ಗಾದೆಪ್ಪ, 5ನೇ ವಾರ್ಡಿನ ರಾಜು, ಕಾಂಗ್ರೆಸ್ ಮುಖಂಡ ಡಿ. ಸೂರಿ ಉಪಸ್ಥಿತರಿದ್ದರು.
*****

The post ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳ್ಳಾರಿ ನೂತನ ಮೇಯರ್ ಡಿ. ತ್ರಿವೇಣಿ appeared first on Karnataka Kahale.

]]>
ಬಳ್ಳಾರಿ: ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಹಾಕುವ ಯೋಜನೆ ರೂಪಿಸಬೇಕು -ಪಾಲಿಕೆಗೆ ನಿಖಿತಾ ಅಯ್ಯರ್ ಒತ್ತಾಯ https://www.karnatakakahale.com/news/11273 Wed, 15 Feb 2023 18:19:13 +0000 https://www.karnatakakahale.com/?p=11273 ಬಳ್ಳಾರಿ, ಫೆ.15: ನಗರದಲ್ಲಿ ಸುಮಾರು 30ಸಾವಿರ ಬೀದಿ ನಾಯಿಗಳಿದ್ದು, ಇವುಗಳಿಗೆ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಹಾಕುವ ಯೋಜನೆಯನ್ನು ಮಹಾನಗರ ಪಾಲಿಕೆ ಕೈಗೊಳ್ಳಬೇಕು ಎಂದು ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸ್ಥಳೀಯ ಸಂಘಟನೆಯ ಮುಖ್ಯಸ್ಥೆ ನಿಖಿತಾ ಅಯ್ಯರ್ ಅವರು…

The post ಬಳ್ಳಾರಿ: ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಹಾಕುವ ಯೋಜನೆ ರೂಪಿಸಬೇಕು -ಪಾಲಿಕೆಗೆ ನಿಖಿತಾ ಅಯ್ಯರ್ ಒತ್ತಾಯ appeared first on Karnataka Kahale.

]]>
ಬಳ್ಳಾರಿ, ಫೆ.15: ನಗರದಲ್ಲಿ ಸುಮಾರು 30ಸಾವಿರ ಬೀದಿ ನಾಯಿಗಳಿದ್ದು, ಇವುಗಳಿಗೆ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಹಾಕುವ ಯೋಜನೆಯನ್ನು ಮಹಾನಗರ ಪಾಲಿಕೆ ಕೈಗೊಳ್ಳಬೇಕು ಎಂದು ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸ್ಥಳೀಯ ಸಂಘಟನೆಯ ಮುಖ್ಯಸ್ಥೆ ನಿಖಿತಾ ಅಯ್ಯರ್ ಅವರು ಒತ್ತಾಯಿಸಿದರು.


ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
೨೦೧೫ ರಿಂದ ಅನಿಮಲ್ ಬರ‍್ತ್ ಕಂಟ್ರೋಲ್ ಮತ್ತು ಆಂಟಿ ರೇಬೀಸ್ ವ್ಯಾಕ್ಸಿನೇಷನ್ ಅನ್ನು ದೊಡ್ಡ ಪ್ರಮಾಣದಲ್ಲಿ
ನಡೆಸುವಂತೆ ನಾವು ಪಾಲಿಕೆಗೆ ವಿನಂತಿಸುತ್ತಾ ಬಂದಿದ್ದೇವೆ. ಹಲವು ಬಾರಿ ಟೆಂಡರ್ ಕರೆದ ನಂತರವೂ ಬಿಲ್ ಪಾವತಿ ಸಮಸ್ಯೆಗಳಿಂದಾಗಿ ಒಂದೇ ಒಂದು ಸಂಸ್ಥೆ
ಯೋಜನೆಗೆ ಕೈಜೋಡಿಸುತ್ತಿಲ್ಲ ಎಂದು ದೂರಿದರು.
ತಮ್ಮ ಸಂಸ್ಥೆ ಸಾರ್ವಜನಿಕ ದೇಣಿಗೆಯಿಂದ ೩೦೦೦ ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಹಾಕಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಬೀದಿ ನಾಯಿಗಳಿಗೆ ಆಹಾರ ನೀಡದಂತೆ ಪಾಲಿಕೆ ಘೋಷಿಸಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ. ಇಂತಹ ಕ್ರಮಗಳು ನಾಯಿಗಳನ್ನು ಹೆಚ್ಚು ಆಕ್ರಮಣಕಾರಿಗಳನ್ನಾಗಿ ಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಾ ನಗರ ಪಾಲಿಕೆ ಬೀದಿ ನಾಯಿಗಳಿಗೆ ಲಸಿಕೆ ಹಾಗೂ ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ ಸಮಗ್ರ ಯೋಜನೆಯೊಂದನ್ನು ಶೀಘ್ರ ರೂಪಿಸಬೇಕು ಎಂದು ಅಯ್ಯರ್ ಒತ್ತಾಯಿಸಿದರು.
ಸುದ್ದಿ ಗೋಷ್ಟಿಯಲ್ಲಿ ಸಂಘಟನೆಯ ಆಕಾಶ್ ಕುಮಾರ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
*****

The post ಬಳ್ಳಾರಿ: ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಹಾಕುವ ಯೋಜನೆ ರೂಪಿಸಬೇಕು -ಪಾಲಿಕೆಗೆ ನಿಖಿತಾ ಅಯ್ಯರ್ ಒತ್ತಾಯ appeared first on Karnataka Kahale.

]]>