The post ಮೇ 31ರಂದು ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಕೆಯುಡಬ್ಲೂಜೆ ಪ್ರತಿಭಾ ಪುರಸ್ಕಾರ: ಶಿವಾನಂದ ತಗಡೂರು appeared first on Karnataka Kahale.
]]>
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ)ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮೇ 31 ರಂದು ಭಾನುವಾರ ಚಿಕ್ಕಬಳ್ಳಾಪುರ ಕನ್ನಡ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಚಿಕ್ಕಬಳ್ಳಾಪುರ ಪತ್ರಿಕಾ ಭವನದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗಿದೆ.
ಸಭೆಯಲ್ಲಿ ಮಾತನಾಡಿದ ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಮೋಕ್ಷಗುಂಡಂ ಸರ್.ಎಂ.ವಿಶೇಶ್ವರಯ್ಯ ಜನ್ಮ ಸ್ಥಳ, ನಂದಿ ಬೆಟ್ಟದ ಸೊಬಗು, ದ್ರಾಕ್ಷಿಯ ನಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಆಯೋಜಿಸುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ರಾಜ್ಯ ಸಂಘದಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು ಇದು ರಾಜ್ಯ ಮಟ್ಟದ 6ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದಾಗಿದೆ ಎಂದರು.
ಬೀದರ್‌ನಿಂದ ಚಾಮರಾಜಪೇಟೆಯವರೆಗೂ ಕೊಡುಗು-ಕೋಲಾರದಿಂದ ಹಿಡಿದು ರಾಜ್ಯದ 31 ಜಿಲ್ಲೆಗಳ ಪತ್ರಕರ್ತರ ಮಕ್ಕಳು ಹಾಗೂ ಪೋಷಕರು ಸೇರಿ ಸುಮಾರು 400 ರಿಂದ 500 ಕ್ಕೂ ಹೆಚ್ಚು ಮಂದಿ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪ್ರತಿಭಾ ಪುರಸ್ಕಾರ ಸ್ವೀಕರಿಸಲು ಬರುವ ದೂರದ ಜಿಲ್ಲೆಗಳ ವಿದ್ಯಾರ್ಥಿ ಪೋಷಕರಿಗೆ ಸೂಕ್ತ ವಸತಿ, ಊಟ, ತಿಂಡಿ ಸೌಕರ್ಯ ಮಾಡಲು ಜಿಲ್ಲಾ ಸಂಘಕ್ಕೆ ಸೂಚಿಸಿದ ಅವರು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಿನಿ ರಾಜ್ಯ ಪತ್ರಕರ್ತರ ಸಮ್ಮೇಳನದ ಮಾದರಿಯಲ್ಲಿ ನಡೆಯುವಂತೆ ಸಲಹೆ ನೀಡಿದರು.
ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಆದ್ಯತೆ ನೀಡಬೇಕು, ಜಿಲ್ಲೆಯ ಕಲೆ, ಸಂಸ್ಕೃತಿಯ ಹಿರಿಮೆಯನ್ನು ಪರಿಚಯಿಸುವ ವಸ್ತು ಪ್ರದರ್ಶನ ಆಯೋಜನೆಗೆ ಸಲಹೆ ನೀಡಿ ಒಟ್ಟಾರೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಪತ್ರಕರ್ತರ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಆಯೋಜಿಸಬೇಕು ಎಂದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ರಾಜ್ಯ ಸಂಘದಿಂದ ನಗದು, ಪ್ರಶಸ್ತಿ ಪತ್ರ ಬಹುಮಾನದ ಜೊತೆಗೆ ಸ್ಮರಣಿಕೆ ನೀಡಲಾಗುವುದೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ವಿ.ರವಿಕುಮಾರ್ ಮಾತನಾಡಿ, ರಾಜ್ಯ ಸಂಘದ ನಿರೀಕ್ಷೆಗೂ ಮೀರಿ ಜಿಲ್ಲಾ ಸಂಘವೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಸಂಘಟಿಸಲಿದೆ. ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾ ಸಂಘ ತಾಲೂಕು ಸಂಘಗಳ ಪದಾಧಿಕಾರಿಗಳನ್ನು ಕರೆದು ವಿವಿಧ ಜವಾಬ್ದಾರಿಗಳನ್ನು ನೀಡಲು ಉಪ ಸಮಿತಿಗಳನ್ನು ರಚಿಸಲಾಗುವುದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿ ಪೋಷಕರಿಗೆ ಜಿಲ್ಲೆಯ ಪ್ರಮುಖ ಸ್ಥಳಗಳ ಭೇಟಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ರಾಜ್ಯ ಖಜಾಂಚಿ ವಾಸುದೇವಹೊಳ್ಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ರಾಜ್ಯ ಸಮಿತಿ ಸದಸ್ಯರಾದ ಎನ್.ಚಂದ್ರಶೇಖರ್ ಮತ್ತಿತರರು ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಣಿ ಮಂಡಳಿ ಸದಸ್ಯರು, ವಿವಿಧ ತಾಲೂಕು ಸಂಘಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಕೇಂದ್ರದ ಹಿರಿಯ ಪತ್ರಕರ್ತರು, ನಿಕಟಪೂರ್ವ ಪದಾಧಿಕಾರಿಗಳು ಉಪಸ್ಥಿತರಿದ್ದು, ಪ್ರತಿಭಾ ಪುರಸ್ಕಾರ ಸಮಾರಂಭದ ಯಶಸ್ವಿನ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀಡಿದರು.
The post ಮೇ 31ರಂದು ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಕೆಯುಡಬ್ಲೂಜೆ ಪ್ರತಿಭಾ ಪುರಸ್ಕಾರ: ಶಿವಾನಂದ ತಗಡೂರು appeared first on Karnataka Kahale.
]]>The post ದೆಹಲಿ ಯುಎನ್ಐ ಸುದ್ದಿ ಸಂಸ್ಥೆಯ ಮೇಲೆ ದಾಳಿಗೆ ಕೆಯುಡಬ್ಲ್ಯೂಜೆ ಖಂಡನೆ appeared first on Karnataka Kahale.
]]>
ಈ ಘಟನೆ ಮಾಧ್ಯಮಗಳ ಮೇಲೆ ಅನಗತ್ಯ ಒತ್ತಡ ಹೇರಲು ಪ್ರಯತ್ನಿಸಿರುವುದನ್ನು ಸ್ಪಷ್ಟಪಡಿಸುತ್ತದೆ.
ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಆಗ್ರಹಿಸಿದ್ದಾರೆ
The post ದೆಹಲಿ ಯುಎನ್ಐ ಸುದ್ದಿ ಸಂಸ್ಥೆಯ ಮೇಲೆ ದಾಳಿಗೆ ಕೆಯುಡಬ್ಲ್ಯೂಜೆ ಖಂಡನೆ appeared first on Karnataka Kahale.
]]>The post ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅನಿಲ್ ಎಚ್.ಎ. ಆಯ್ಕೆ appeared first on Karnataka Kahale.
]]>
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-2028 ರ ಸಾಲಿನ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯ ಚುನಾವಣೆ ನಡೆದ ಸಂಧರ್ಭದಲ್ಲಿ ರಾಜ್ಯಕಾರ್ಯಕಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಒಂದು ಹುದ್ದೆ ಅವಿರೋಧವಾಗಿ ಆಯ್ಕೆಯಾಗಿತ್ತು.
ಉಳಿದ ಪದಾಧಿಕಾರಿಗಳ ಹುದ್ದೆಗೆ ಕೆಲ ನಾಮಪತ್ರ ತಿರಸ್ಕೃತವಾಗಿದ್ದರೆ, ಹಲವು ಹುದ್ದೆಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪತ್ರಕರ್ತರ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಜವಬ್ದಾರಿಯನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ, ಕೆಯುಡಬ್ಲ್ಯೂಜೆ ರಾಜ್ಯ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ ಅವರಿಗೆ ನೀಡಿ, ಕೆಯುಡಬ್ಲ್ಯೂಜೆ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು.
ಮುಖ್ಯಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್ ಅವರ ಸಲಹೆಯನ್ನು ಪಡೆದುಕೊಳ್ಳಲಾಗಿತ್ತು.
ಈ ನಿಟ್ಟಿನಲ್ಲಿ ಚಿಕ್ಕಮಗಳೂರಿನಲ್ಲಿ ಸಭೆ ನಡೆಸಿ ಸದಸ್ಯರ ಸಹಮತದ ಮೇರೆಗೆ ಅನಿಲ್ ಎಚ್.ಎ. ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆ KUWJ ಘಟಕದ ನೂತನ ಪದಾಧಿಕಾರಿಗಳು ವಿವರ:
ಅಧ್ಯಕ್ಷರು :
ಅನಿಲ್ ಹೆಚ್. ಎ.
ಪ್ರಧಾನ ಸಂಪಾದಕರು, ಭೂಮಿ ಟಿವಿ
ಚಿಕ್ಕಮಗಳೂರು
ಉಪಾಧ್ಯಕ್ಷರು :
(ಅವಿರೋಧ ಆಯ್ಕೆ)
ಬಿ.ಎನ್. ನಾಗರಾಜ್
ಸಂಪಾದಕರು, ಸತ್ಯಪ್ರಭ
ತರೀಕೆರೆ
ಪ್ರಧಾನ ಕಾರ್ಯದರ್ಶಿ
ಚೇತನ್ ಬಿ.ಪಿ.
ಜಿಲ್ಲಾ ವರದಿಗಾರರು, ವಿಜಯಕರ್ನಾಟಕ
ಚಿಕ್ಕಮಗಳೂರು
ಖಜಾಂಚಿ:
ಅಕ್ಷಯ್ ಕುಮಾರ್
ಸಂಪಾದಕರು, ಪಿತಾಮಹ ದಿನ ಪತ್ರಿಕೆ
ಚಿಕ್ಕಮಗಳೂರು
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು
(ಅವಿರೋಧ ಆಯ್ಕೆ)
ಕಲ್ಯಾಣ್ ಕುಮಾರ್ ಕೆ.ಕೆ.
ಸಂಪಾದಕರು
ಐಸಿರಿ ಪ್ರಾದೇಶಿಕ ದಿನಪತ್ರಿಕೆ
ಚಿಕ್ಕಮಗಳೂರು
The post ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅನಿಲ್ ಎಚ್.ಎ. ಆಯ್ಕೆ appeared first on Karnataka Kahale.
]]>The post ವಿಧಾನ ಪರಿಷತ್ ಸದಸ್ಯ , ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಗೆ ಸನ್ಮಾನ appeared first on Karnataka Kahale.
]]>ವಿಧಾನ ಪರಿಷತ್ ಸದಸ್ಯರಾಗಿ ನೇಮಕಾವಾದ ಬಳಿಕ ಇದೇ ಮೊದಲ ಬಾರಿ ಪತ್ರಕರ್ತರ ಸಹಕಾರ ಸಂಘಕ್ಕೆ ಆಗಮಿಸಿದ ಶಿವಕುಮಾರ್ ಅವರು ಸಂಘದ ಕಾರ್ಯವೈಖರಿಯ ಸಮಗ್ರ ಮಾಹಿತಿ ಪಡೆದರು. ಸಂಘದ ಅಧ್ಯಕ್ಷರಾದ ರಮೇಶ್ ಪಾಳ್ಯ ಅವರು ಸಂಘದ ವಹಿವಾಟು, ಲಾಭ, ಸಾಲ ವಸೂಲಸತಿ ಸೇರಿದಂತೆ ಸಮಗ್ರ ಮಾಹಿತಿ ನೀಡಿದರು. ಈ ಬಗ್ಗೆ ಶ್ಲಾಘಿಸಿದ ಶಿವಕುಮಾರ್ ಅವರು ಸಂಘದ ಅಭಿವೃದ್ಧಿಗೆ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಖಜಾಂಚಿ ಮೋಹನ್ ಕುಮಾರ್, ನಿರ್ದೇಶಕರಾದ ಪರಮೇಶ್, ವಿನೋದ ಕುಮಾರ್ ಬಿ ನಾಯ್ಕ್, ರಮೇಶ್ ಹಿರೇಜಂಬೂರು, ಪರಮೇಶ್, ಕೃಷ್ಣ ಕುಮಾರ್, ರಾಜೇಂದ್ರ ಕುಮಾರ್, ಧ್ಯಾನ್ ಪೂಣಚ್ಚ, ಸೋಮಣ್ಣ, ನಯನಾ, ಸಂಘದ ಖಜಾಂಚಿ ರಘು, ಮತ್ತು ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.
The post ವಿಧಾನ ಪರಿಷತ್ ಸದಸ್ಯ , ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಗೆ ಸನ್ಮಾನ appeared first on Karnataka Kahale.
]]>The post ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯ appeared first on Karnataka Kahale.
]]>
ಬೆಂಗಳೂರು ಮಾ 13: ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ ಪರವಾಗಿ ಇದೆಯಾ ಎನ್ನುವ ಬಗ್ಗೆ ಗಮನ ಹರಿಸಿ, ವೃತ್ತಿಧರ್ಮವನ್ನು ಬಹಳ ಮುಖ್ಯವಾಗಿ ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಶುಕ್ರವಾರ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪತ್ರಕರ್ತರಿಗೆ “2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು” ವಿತರಿಸಿ, ಸನ್ಮಾನಿಸಿ ಅವರು ಮಾತನಾಡಿದರು.
ಪತ್ರಕರ್ತರೂ ಆಗಿದ್ದ ಮಹಾತ್ಮಗಾಂಧಿಯವರ ಮಾತಿನಂತೆ ಸರ್ವೋದಯ, ಅಂತ್ಯೋದಯದ ಪರವಾಗಿ ಪತ್ರಕರ್ತರು ಇರಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ಅಸಮಾನತೆ ಕಾಣುತ್ತಿದ್ದೇವೆ. ಅಂಬೇಡ್ಕರ್ ಅವರೂ ಪತ್ರಕರ್ತರಾಗಿದ್ದರು.ಈ ಅಸಮಾನತೆ ಹೋಗದೆ ಹೋದರೆ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎನ್ನುವ ಮಾತನ್ನು ಅಂಬೇಡ್ಕರ್ ಹೇಳಿದ್ದನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು.

ನಾನು ನಿತ್ಯ ದಿನಪತ್ರಿಕೆಗಳನ್ನು ಓದಿದ ಬಳಿಕವೇ ಇತರೆ ಕಾರ್ಯಗಳಿಗೆ ಮುಂದಾಗುತ್ತೇನೆ. ಪತ್ರಿಕೆಗಳು ಇನ್ನೂ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ನಾನು ಟಿವಿ ನೋಡುವುದು ಕಡಿಮೆ ಎಂದರು.
ಈಗ ಊಹಾ ಪತ್ರಿಕೋದ್ಯಮದ ಹಾವಳಿ ಹೆಚ್ಚುತ್ತಿದೆ. ಸತ್ಯ ಬರೆಯುವ ಮತ್ತು ಸಂಶೋಧನೆ ನಡೆಸಿ ಬರೆಯುವ ಪತ್ರಕರ್ತರ ಸಂಖ್ಯೆ ಸುಳ್ಳು ಬರೆಯುವ ಪತ್ರಕರ್ತರ ಸಂಖ್ಯೆಗಿಂತ ಹೆಚ್ಚಾಗಬೇಕು ಎಂದು ತಿಳಿಸಿದರು.
ಒಂದು ಗುಂಪು ಅಥವಾ ಒಂದು ಸಿದ್ಧಾಂತಕ್ಕೆ ಮಾರು ಹೋಗದೆ ವಾಸ್ತವಾಂಶಕ್ಕೆ ಕನ್ನಡಿ ಹಿಡಿಯಬೇಕು ಎಂದರು.
ಹೊಸ ತಂತ್ರಜ್ಞಾನದ ಜೊತೆಗೆ ಮಾಧ್ಯಮ ರಂಗ ಮತ್ತು ಪತ್ರಕರ್ತರೂ ತಮ್ಮನ್ನು ತಾವು ಉನ್ನತೀಕರಿಸಿಕೊಳ್ಳಬೇಕು. ಹೊಸ ಸವಾಲುಗಳಿಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಂಡು ಹದಗೊಳ್ಳಬೇಕು ಎಂದರು.

ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ, ಹಿರಿಯ ಸಾಹಿತಿ ಹಂಪನಾ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜಮೂರ್ತಿ ಸೇರಿ ಹಲವರು ಉಪಸ್ಥಿತರಿದ್ದರು.
The post ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯ appeared first on Karnataka Kahale.
]]>The post ಮಾ.29ರಂದು ಬೀದರ್‌ನಲ್ಲಿ ಕೆಯುಡಬ್ಲೂಜೆ ಸರ್ವ ಸದಸ್ಯರ ಸಭೆ appeared first on Karnataka Kahale.
]]>The post ಮಾ.29ರಂದು ಬೀದರ್‌ನಲ್ಲಿ ಕೆಯುಡಬ್ಲೂಜೆ ಸರ್ವ ಸದಸ್ಯರ ಸಭೆ appeared first on Karnataka Kahale.
]]>The post ಕೆಯುಡಬ್ಲೂಜೆ ಮುಂಬಯಿ ಘಟಕ ಪದಾಧಿಕಾರಿಗಳ ಪದಗ್ರಹಣ: ಪತ್ರಕರ್ತರ ಸಂಘಟನೆಗೆ ಹೊಸ ಸ್ವರೂಪ -ಶಿವಾನಂದ ತಗಡೂರು appeared first on Karnataka Kahale.
]]>
ಮುಂಬಯಿ: ಪತ್ರಕರ್ತರ ವೃತ್ತಿಯೇ ಸವಾಲಿನದ್ದು. ಅದನ್ನು ಧೈರ್ಯ ಮತ್ತು ನಿಷ್ಠೆಯಿಂದ ಎದುರಿಸುವ ಶಕ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ಮುಂಬಯಿ ಅಂಧೇರಿ ಪೂರ್ವದ ಕ್ಲಬ್ ಹೌಸ್‌ನ ಸಭಾಗೃಹದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಮಹಾರಾಷ್ಟ್ರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರ ಸಂಘಟನೆ ಕ್ರೀಯಾಶೀಲಗೊಳಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಘಟಿತ ಶಕ್ತಿಯ ಮೂಲಕ ಮಾತ್ರ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ನಮ್ಮದು. ಹೋರಾಟದ ಮೂಲಕವೇ ಹಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗಿದ್ದು, ಸರ್ಕಾರವೂ ಅದಕ್ಕೆ ಸ್ಪಂಧಿಸಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗ ಪತ್ರಕರ್ತರು ಒಗ್ಗೂಡಿ ಕೆಲಸ ಮಾಡಬೇಕು. ನಿಮ್ಮ ಜೊತೆಗೆ ಸದಾ ನಾವಿರುತ್ತೇವೆ ಎಂದು ಹೇಳಿದರು.
ಪತ್ರಕರ್ತರ ಹಕ್ಕುಗಳು, ಭದ್ರತೆ, ಕಲ್ಯಾಣ ಯೋಜನೆಗಳಿಗಾಗಿ ಸಂಘ ಬದ್ಧವಾಗಿ ಕೆಲಸ ಮಾಡುತ್ತಿದೆ. ಹೊರ ನಾಡಿಗೂ ಕೆಯುಡಬ್ಲ್ಯೂಜೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಎಲ್ಲರೂ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ನಮ್ಮ ಸೇವೆ ಮೂಲಕ ಎಷ್ಟು ಜನರ ಮನಸ್ಸನ್ನ ಗೆಲುತ್ತೇವೆ ಎನ್ನುವುದು ಮುಖ್ಯ. ಜನರ ಹೃದಯಗಳನ್ನು ತಲುಪುವುದು, ಸಾಧ್ಯವಾದಷ್ಟು ಜನರ ಕಣ್ಣೀರು ಒರೆಸುವುದು ಮುಖ್ಯ ಆ ಮೂಲಕ ನಮ್ಮ ಬದಕನ್ನು ಸಾರ್ಥಕಗೊಳಿಸಿಕೊಳ್ಳೋಣ. ಸಂಘಟನೆಯ ಮೂಲಕ ಪತ್ರಕರ್ತರಲ್ಲಿನ ಸಂಬಂಧಗಳು ಅನೋನ್ಯವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಡೈರಿ ಬಿಡುಗಡೆ: ಇದೇ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಮಹಾರಾಷ್ಟ್ರ-2026ನೇ ಸಾಲಿನ ಡೈರಿ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕೆಯುಡಬ್ಲೂಜೆ ಮಹಾರಾಷ್ಟ್ರ ರಾಜ್ಯ ಘಟಕದ ನೂತನ ಪದಾಧಿಕಾರಿಗಳಿಗೆ ಚುನಾವಣಾ ಪ್ರಮಾಣ ಪತ್ರವನ್ನು ನೀಡಲಾಯಿತು.
ಅಧಿಕಾರ ಹಸ್ತಾಂತರ: ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಶಿವ ಮೂಡಿಗೆರೆ ಹಾಗೂ ಕೋಶಾಧಿಕಾರಿ ಸದರಾಮ ಎನ್.ಶೆಟ್ಟಿ ಸಂಪದ ಮನೆ ಅವರಿಗೆ ನಿಕಟಪೂರ್ವ ಅಧ್ಯಕ್ಷ ರೋನ್ಸ್ ಬಂಟ್ವಾಳ ಅವರು ಅಧಿಕಾರ ಹಸ್ತಾಂತರಿಸಿದರು.
ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಮಹಾರಾಷ್ಟ್ರ ಘಟಕದ ಚುನಾವಣಾ ಅಧಿಕಾರಿ ಸಿಎಂ ಜಗದೀಶ್ ಬಿ.ಶೆಟ್ಟಿ, ಡಾ.ಜಿ.ಪಿ ಕುಸುಮ, ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದ ಸಂಸ್ಥಾಪಕ ಅಧ್ಯಕ್ಷ ರೋನ್ಸ್ ಬಂಟ್ವಾಳ ಮಾತನಾಡಿದರು.
ಮಹಾರಾಷ್ಟ್ರ ಉಪಾಧ್ಯಕ್ಷ ಶ್ಯಾಮ್ ಎಂ.ಹಂದೆ, ಗೋಪಾಲ ಪೂಜಾರಿ ತ್ರಾಸಿ, ಕಾರ್ಯಕಾರಿ ಸಮಿತಿ ಸದಸ್ಯ ಡಾ.ದಿನೇಶ್ ಎನ್.ಶೆಟ್ಟಿ ರೆಂಜಾಳ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸವಿತಾ ಎಸ್.ಶೆಟ್ಟಿ ಪ್ರಾರ್ಥಿಸಿದರು. ಅನಿತಾ ಪೂಜಾರಿ ತಾಕೋಡೆ ನಿರೂಪಿಸಿದರು.
The post ಕೆಯುಡಬ್ಲೂಜೆ ಮುಂಬಯಿ ಘಟಕ ಪದಾಧಿಕಾರಿಗಳ ಪದಗ್ರಹಣ: ಪತ್ರಕರ್ತರ ಸಂಘಟನೆಗೆ ಹೊಸ ಸ್ವರೂಪ -ಶಿವಾನಂದ ತಗಡೂರು appeared first on Karnataka Kahale.
]]>The post ಪಿ.ರಾಮಯ್ಯ ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು: ಕೆ.ವಿ.ಪ್ರಭಾಕರ್ ಶ್ಲಾಘನೆ appeared first on Karnataka Kahale.
]]>
ಬೆಂಗಳೂರು ಫೆ 18: ಸಾರ್ವಜನಿಕ ಬದುಕು ಕಲುಷಿತಗೊಳ್ಳುತ್ತಿರುವ ಹೊತ್ತಲ್ಲಿ ಪಿ.ರಾಮಯ್ಯ ಮಾದರಿಯಾಗಿ ಕಾಣುತ್ತಾರೆ. ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಶ್ಲಾಘಸಿದರು.
ಗಾಂಧಿ ಭವನದಲ್ಲಿ ನಡೆದ ಹಿರಿಯ ಪತ್ರಕರ್ತ ದಿವಂಗತ ಪಿ.ರಾಮಯ್ಯ ಅವರ ಶ್ರದ್ದಾಂಜಲಿ ಹಾಗೂ “ನಾನು ಹಿಂದೂ ರಾಮಯ್ಯ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಆಗುಹೋಗುಗಳನ್ನು, ಒಳಿತು ಕೆಡುಕುಗಳನ್ನೇ ಧ್ಯಾನಿಸುವ ಪತ್ರಕರ್ತರು ಸದಾ ಈ ಧಾವಂತದಲ್ಲಿಯೇ ಉಳಿದು ಕ್ರಮೇಣ ಅಸೂಕ್ಮರಾಗುವ, ಸಂವೇದನೆಗಳನ್ನು ಕಳೆದುಕೊಳ್ಳುವ ಅಪಾಯ ಹೆಚ್ಚು. ಇದನ್ನು ಪ್ರಜ್ಞಾಪೂರ್ವಕಾಗಿ ಮೀರುವ ಪ್ರಯತ್ನ ಮಾಡಿದಾಗಷ್ಟೆ ವೃತ್ತಿ ಘನತೆ ಹೆಚ್ಚುತ್ತದೆ ಎಂದು ಹೇಳಿದರು.
ನಮ್ಮೆಲ್ಲರ ವೈಯುಕ್ತಿಕ ಹಳಹಳಿಕೆ, ಧಾವಂತಗಳ ನಡುವೆಯೂ ಇತರರ ಘನತೆಗೆ ಕುಂದು ಬಾರದಂತೆ ವೃತ್ತಿಪರರಾಗುವುದು, ಪತ್ರಿಕೋದ್ಯಮ ನಡೆಸುವುದು, ಪತ್ರಕರ್ತರಾಗಿ ಉಳಿಯುವುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದರು.

ಅಗಲಿದ ಹಿರಿಯ ಚೇತನ ಪಿ. ರಾಮಯ್ಯ ಈ ವಿಚಾರದಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿದ್ದರು. ಪತ್ರಕರ್ತರಾಗುವುದು ಒಂದು ನಮೂನೆಯ ದೀಕ್ಷೆ ಇದ್ದಂತೆ. ಒಮ್ಮೆ ನೀವು ಪತ್ರಕರ್ತರೆಂದು ಗುರುತಿಸಿಕೊಂಡ ಮೇಲೆ ಕೆಲವು ನಿಷ್ಠುರ ಗುಣಗಳು ಅನಾಯಸವಾಗಿ ಬಂದುಬಿಡುತ್ತವೆ. ಮುಂದೆ ರಾಜಕಾರಣಿಯಾದರೂ ಸರಿಯೇ, ಉದ್ಯಮಿಯಾದರೂ ಸರಿಯೇ. ಒಮ್ಮೆ ಪತ್ರಕರ್ತರಾದವರು ಮಾಜಿಯಾಗಲಾರರು, ನಿವೃತ್ತರಾಗಲಾರರು. ಚಲನಶೀಲತೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಇದ್ದ ಪತ್ರಕರ್ತರಿಗೆ ಸಾವು ಇರದು ಎಂದು ಅಭಿಪ್ರಾಯಪಟ್ಟರು.
ಕಾಲವನ್ನು ಒಪ್ಪಿಕೊಳ್ಳುತ್ತಲೇ ಸಮಾಜದಲ್ಲಿರುವ ಹುಳಕನ್ನು ನಯವಾಗಿ ತೋರಿಸಿ ತಿದ್ದಬಲ್ಲವರು ಮಾತ್ರ ಜನಮಾನಸದಲ್ಲಿ ಉಳಿಯಬಲ್ಲರು. ಅವರಿಗೂ ಆತ್ಮತೃಪ್ತಿ ತರಬಲ್ಲವು. ಇಂಥಾ ಆತ್ಮತೃಪ್ತಿ ಗಳಿಸಿದ್ದಾಗಿ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡಿದ್ದ ರಾಮಯ್ಯ ಅವರು, ತಾವು ಸಾರ್ಥಕ್ಯವಾಗಿ ಬಾಳಿ, ತಮ್ಮೊಡನಿರುವ ವೃತ್ತಿಪರರ ಘನತೆಯನ್ನು ಎತ್ತಿ ಹಿಡಿದು ಪತ್ರಕರ್ತರಾಗಿ ಅಷ್ಟೆ ಅಲ್ಲ ವ್ಯಕ್ತಿತ್ಚ ದೃಷ್ಟಿಯಿಂದಲೂ ಅನುಸರಣೀಯರಾಗಿದ್ದರು ಎಂದು ಧನ್ಯತೆ ಅರ್ಪಿಸಿದರು.
ಸಾರ್ವಜನಿಕ ಜೀವನ ವಿಪರೀತ ಕಲುಷಿತ ಮತ್ತು ಕಳಪೆ ಆಗುತ್ತಿರುವ ಹೊತ್ತಿನಲ್ಲಿ ಪಿ.ರಾಮಯ್ಯ ಅವರಂತಹ ಒಂದು ಅಪ್ಪಟ ಮಾದರಿ ನಮ್ಮನ್ನೆಲ್ಲಾ ಅಗಲಿದೆ.
ರಾಮಯ್ಯ ಅವರು ಪತ್ರಕರ್ತರಾಗಿ ಪತ್ರಿಕಾ ವೃತ್ತಿಯ ಘನತೆ-ಮೌಲ್ಯ-ನೈತಿಕ ಶಕ್ತಿ ಹೆಚ್ಚಿಸಲು ಶ್ರಮಿಸಿದರು ಎಂದು ವಿವರಿಸಿದರು.

ಪಿ.ರಾಮಯ್ಯ ಅವರು ರಾಜಕಾರಣಿಯಾಗಿ ರಾಜಕಾರಣದ ಉದ್ದೇಶ, ಕಾಳಜಿಯ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಮಾಡಿ ಸಾರ್ವಜನಿಕ ಜೀವನದ ಮೌಲ್ಯವನ್ನು ಉನ್ನತ ಮಟ್ಟದಲ್ಲಿ ಉಳಿಸುವ ಪ್ರಯತ್ನ ಮಾಡಿದ್ದರು.
ಹೀಗಾಗಿ ಪಿ.ರಾಮಯ್ಯ ಪತ್ರಕರ್ತರಾಗಿ, ರಾಜಕಾರಣಿಯಾಗಿಅವರು ತಮ್ಮ ಕಾಲದ ಸಾರ್ವಜನಿಕ ಬದುಕಿನ ಮೌಲ್ಯಗಳ ಪ್ರತಿರೂಪವಾಗಿದ್ದರು. ವೃತ್ತಿಪರತೆ ಮತ್ತು ಸಾಮಾಜಿಕ ಬದ್ಧತೆ
ರಾಮಯ್ಯನವರ ವ್ಯಕ್ತಿತ್ವದ ಎರಡು ಕಣ್ಣುಗಳಾಗಿದ್ದವು.
ಸುದ್ದಿಯನ್ನು ಅವರು ಗ್ರಹಿಸುತ್ತಿದ್ದ ರೀತಿಯೇ, ಅವರು ಸಮಾಜಮುಖಿ ಆಗಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ಆಗ ಸಮಾಜಮುಖಿಯಲ್ಲದ ಪತ್ರಕರ್ತರಿಗೆ ವೃತ್ತಿಯಲ್ಲಿ ಜಾಗ ಇರಲಿಲ್ಲ, ಸಮಾಜಮುಖಿಯಲ್ಲದ ಬರಹಗಳಿಗೆ ಪುಟಗಳಲ್ಲಿ ಜಾಗವೂ ಸಿಗುತ್ತಿರಲಿಲ್ಲ.
ಈ ಹೊತ್ತಿನಲ್ಲಿ ಇವೆರಡೂ ಮಾದರಿಗಳೂ ಸವಕಲಾಗಿ ಕಾಣುತ್ತಿರುವುದು ಬೇಸರದ ಸಂಗತಿ ಎಂದರು.
“ರಾಮಯ್ಯನವರಂತಹ ಹಿರಿಯರು ಪತ್ರಿಕೋದ್ಯಮದ ನೈತಿಕ ಸ್ಥೈರ್ಯದಂತೆ ಇದ್ದರು. ಅವರು ನಿರ್ಗಮಿಸಿದಾಗ ಕೇವಲ ಒಬ್ಬ ಪತ್ರಕರ್ತನ ನಿರ್ಗಮನವಲ್ಲ, ಬದಲಿಗೆ ಒಂದು ಕಾಲಘಟ್ಟದ ಪತ್ರಿಕಾ ಮೌಲ್ಯಗಳ ಅಂತ್ಯದಂತೆ ಭಾಸವಾಗುತ್ತದೆ” ಎಂದು ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರು ದಾಖಲಿಸಿದ್ದನ್ನು ಉಲ್ಲೇಖಿಸಿದರು.
ಪಿ. ರಾಮಯ್ಯ ಅವರು ಬರೆದ “ನಾನು ಹಿಂದೂ ರಾಮಯ್ಯ” ಪುಸ್ತಕ ಅವರ ಆತ್ಮಕಥೆಯಾಗಿರದೆ, ಅರ್ಧ ಶತಮಾನದ ಚರಿತ್ರೆಯೂ ಆಗಿದೆ.
ಹಳೆಯ ಮೈಸೂರು ಭಾಗದ ಸಾಮಾಜಿಕ ಮತ್ತು ರಾಜಕೀಯ ಬದುಕು ಮತ್ತು ಬದಲಾವಣೆಗಳ ದಾಖಲೆಯಾಗಿದೆ ಎಂದರು.
ಅಂದಿನ ಕಾಲದ ಪತ್ರಿಕೋದ್ಯಮದಲ್ಲಿ ಅನಿವಾರ್ಯವಾಗಿದ್ದ ನೈತಿಕತೆ, ಸವಾಲುಗಳು ಮತ್ತು ವರದಿಗಾರಿಕೆಯಲ್ಲಿನ ಬದ್ಧತೆಯ ವಿಲ್ ಬರೆದಿಟ್ಟಂತಿದೆ.
ಪಿ.ರಾಮಯ್ಯನವರಿಗೆ ದೇವರಾಜ ಅರಸು ಅವರಿಂದ ಹಿಡಿದು ಅನೇಕ ಮುಖ್ಯಮಂತ್ರಿಗಳೊಂದಿಗೆ ಇದ್ದ ಆಪ್ತ ಒಡನಾಟವನ್ನು ರಾಜ್ಯ ಧರ್ಮ/ ವೃತ್ತಿಧರ್ಮವನ್ನು ಕಾಪಾಡಲು ಕಟ್ಟುನಿಟ್ಟಾಗಿ ಬಳಸಿದ್ದನ್ನು ಸ್ಮರಿಸಿದರು.
ಮೇಲ್ಮನೆಯಲ್ಲಿ (ವಿಧಾನ ಪರಿಷತ್) ನಡೆಯುತ್ತಿದ್ದ ಚರ್ಚೆಗಳಲ್ಲಿ ಗಂಭೀರತೆ ಮತ್ತು ಮೌಲ್ಯಗಳನ್ನು ತರುವಲ್ಲಿ ಇವರು ಶ್ರಮಿಸಿದರು. ಹೀಗಾಗಿ ರಾಮಯ್ಯ ಅವರು ತಾವು ತೊಡಗಿಸಿಕೊಂಡಿದ್ದ ಎಲ್ಲಾ ಕ್ಷೇತ್ರಗಳ ಘನತೆ ಹೆಚ್ಚಿಸುವ ಕೆಲಸ ಮಾಡಿ ಆ ಮಾದರಿಗಳನ್ನು ನಮ್ಮೆದುರಿಗೆ ಬಿಟ್ಟು ಹೋಗಿದ್ದಾರೆ. ಈ ಮಾದರಿಗಳನ್ನು ಇವತ್ತಿನ ಪತ್ರಕರ್ತರು ಮುಂದುವರೆಸಬೇಕು ಎಂದು ಕರೆ ನೀಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ದಿವ್ಯ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಚಲುವರಾಯಸ್ವಾಮಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ವೋಡೆ ಪಿ ಕೃಷ್ಣ, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಕೆಯುಡಬ್ಲ್ಯುಜೆ ಅಧ್ಯಕ್ಷರಾದ ಶಿವಾನಂದ ತಗಡೂರು, ಈ ಸಂಜೆ ಸಂಪಾದಕರಾದ ಟಿ.ವೆಂಕಟೇಶ್, ವರದಿಗಾರರ ಕೂಟದ ಅಧ್ಯಕ್ಷ ಆರ್.ಟಿ.ವಿಠ್ಠಲ್ ಮೂರ್ತಿ, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್, ಗಾಂಧಿ ಸ್ಮಾರದ ನಿಧಿ ಕೋಶಾಧ್ಯಕ್ಷರಾದ ದಿನೇಶ್, ರಾಮಯ್ಯ ಅವರ ಪುತ್ರ ಡಾ.ಬಾಲಾಜಿ ಅವರುಗಳು ಉಪಸ್ಥಿತರಿದ್ದರು.
The post ಪಿ.ರಾಮಯ್ಯ ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು: ಕೆ.ವಿ.ಪ್ರಭಾಕರ್ ಶ್ಲಾಘನೆ appeared first on Karnataka Kahale.
]]>The post ಅನಂತ್ ನಾಡಿಗ್‌ರಿಗೆ ಕೆಯುಡಬ್ಲೂಜೆ ಗೌರವ, ಪತ್ರಕರ್ತರಿಗೆ ಸ್ವಾರ್ಥ ಮುಖ್ಯವಾಗಬಾರದು ಸೇವೆಯೇ ಆದ್ಯತೆಯಾಗಬೇಕು:ನಾಡಿಗ್ appeared first on Karnataka Kahale.
]]>
ಬೆಂಗಳೂರು: ಪತ್ರಕರ್ತರ ವೃತ್ತಿಯಲ್ಲಿ ಎಂದೂ ಸ್ವಾರ್ಥ ಮುಖ್ಯವಾಗಬಾರದು. ಸೇವೆಯೇ ಆದ್ಯತೆಯಾಗಬೇಕು ಎಂದು ಹಿರಿಯ ಪತ್ರಕರ್ತ ಮತ್ತು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಅನಂತ ನಾಡಿಗ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹಿರಿಯ ಪತ್ರಕರ್ತರಿಗೆ ನೀಡುತ್ತಿರುವ ಕೆಯುಡಬ್ಲೂಜೆ ಗೌರವವನ್ನು ತರೀಕೆರೆಯಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸ್ವೀಕರಿಸಿ ಮಾತನಾಡಿದರು.
ಹಿರಿಯರಿರಲಿ, ಕಿರಿಯರಿರಲಿ. ನಾವು ಪತ್ರಕರ್ತರಾಗಿ ಸಮಾಜದ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಪ್ರಜ್ಞೆ ಪತ್ರಕರ್ತರಲ್ಲಿ ಇರಬೇಕು. ಸೇವೆ ಮಾಡಬೇಕು ಎನ್ನುವ ಮನೋಭಾವ ಹೃದಯದಲ್ಲಿರಬೇಕು. ಈ ವೃತ್ತಿಗೆ ಬಂದ ಮೇಲೆ ಹಮ್ಮು- ಬಿಮ್ಮಿನಿಂದ ದರ್ಪದ ನಡವಳಿಕೆ ತೋರಿಸುವಂತಾಗಬಾರದು ಎಂದರು.
ಎಪ್ಪತ್ತರ ದಶಕದಲ್ಲಿ ಅಂಚೆ ವಾರ್ತೆ ಮೂಲಕ ಪತ್ರಕರ್ತ ವೃತ್ತಿಗೆ ಬಂದ ನಾನು, ಕನ್ನಡಪ್ರಭ ಪತ್ರಿಕೆಯಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ವರದಿಗಾರನಾಗಿ ಕೆಲಸ ಮಾಡಿರುವುದು ನನ್ನ ಪಾಲಿಗೆ ಸಾರ್ಥಕ ಸೇವೆಯಾಗಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, 77 ವಸಂತಗಳನ್ನು ಕಂಡಿರುವ ಹಿರಿಯ ಪತ್ರಕರ್ತರಾದ ಅನಂತ್ ನಾಡಿಗೆ ಅವರ ಮನೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಅರಸಿ ಬಂದಿದೆ. ಕೇಳದೆ ಬರದೇ ಪ್ರಶಸ್ತಿಗಳ ಮೌಲ್ಯ ಹೆಚ್ಚು. ಈ ಪ್ರಶಸ್ತಿಯಿಂದಾಗಿ ಅಕಾಡೆಮಿಗೂ ಗೌರವ ಬಂದಿದೆ ಎಂದರು.
ನಾಡಿಗ್ ಅವರು, ಯಾರನ್ನೂ ಎಂದೂ ಕೇಳಿದವರಲ್ಲ. ಪ್ರಶಸ್ತಿಗಳ ಬೆನ್ನು ಹತ್ತಿ ಹೋದವರೂ ಅಲ್ಲ. ತಮ್ಮ ಪಾಡಿಗೆ ತಾವು ಮಾಡುತ್ತಿದ್ದ ಪತ್ರಕರ್ತ ವೃತ್ತಿ ಸೇವೆಗೆ ಪ್ರಶಸ್ತಿ ಸಲ್ಲುತ್ತಿರುವುದು ನಮ್ಮೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದ ಪತ್ರಕರ್ತರನ್ನು ಗುರುತಿಸಿ ಗೌರವಿಸುತ್ತಿರುವುದು ವಿಶೇಷ ಎಂದರು.
ಸಂಘದ ಗೌರವಾಧ್ಯಕ್ಷ ಸುರೇಶ್ ಚಂದ್ರ, ಹಿರಿಯ ಪತ್ರಕರ್ತರಾದ ಸಿದ್ರಾಮಪ್ಪ, ಎಚ್.ಕೆ.ಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು
The post ಅನಂತ್ ನಾಡಿಗ್‌ರಿಗೆ ಕೆಯುಡಬ್ಲೂಜೆ ಗೌರವ, ಪತ್ರಕರ್ತರಿಗೆ ಸ್ವಾರ್ಥ ಮುಖ್ಯವಾಗಬಾರದು ಸೇವೆಯೇ ಆದ್ಯತೆಯಾಗಬೇಕು:ನಾಡಿಗ್ appeared first on Karnataka Kahale.
]]>The post ಶಿರಸಿ:ಜಯರಾಮ ಹೆಗಡೆ ಅವರಿಗೆ ಮನೆಯಂಗಳದಲ್ಲಿ ಕೆಯುಡಬ್ಲೂಜೆ ಗೌರವ, ಐಷಾರಾಮಿ ಜೀವನ ನಡೆಸಲು ಪತ್ರಿಕೋದ್ಯಮಕ್ಕೆ ಬರಬಾರದು -ಹೆಗಡೆ appeared first on Karnataka Kahale.
]]>
ಬೆಂಗಳೂರು/ಶಿರಸಿ: ಐಷಾರಾಮಿ ಜೀವನ ಮಾಡಬೇಕು ಎನ್ನುವವರು ಪತ್ರಿಕೋದ್ಯಮಕ್ಕೆ ಬರಬಾರದು ಎಂದು ಹಿರಿಯ ಪತ್ರಕರ್ತರಾದ ಶಿರಸಿ ಜಯರಾಮ ಹೆಗಡೆ ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮನೆಯಂಗಳದಲ್ಲಿ ನೀಡುವ ಕೆಯುಡಬ್ಲೂಜೆ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಇಳಿವಯಸ್ಸಿನಲ್ಲಿರುವ ನನ್ನ ಮನೆಗೆ ಬಂದು ಕಾರ್ಯನಿರತ ಪತ್ರಕರ್ತರ ಸಂಘವು ಗೌರವ ನೀಡಿರುವುದು ಹೃದಯ ತುಂಬಿ ಬಂದಿದೆ ಎಂದರು.
ಪತ್ರಕರ್ತರ ಬಗ್ಗೆ ಜನ ಸಾಮಾನ್ಯರ ನಿರೀಕ್ಷೆಗಳು ಬಹಳ ಇದೆ. ಆ ನಿಟ್ಟಿನಲ್ಲಿ ಪತ್ರಕರ್ತರು ಹೆಜ್ಜೆ ಇಡಬೇಕು. ಸಾಮಾಜಿಕ ಜವಬ್ದಾರಿಯನ್ನು ಎಂದೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸವಿದೆ. ಎಂಥದ್ದೆ ಕಾಲಘಟ್ಟದಲ್ಲಿಯೂ ಪತ್ರಿಕೋದ್ಯಮ ತನ್ನ ಮೊನಚು ಕಳೆದುಕೊಂಡಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿಯೂ ಮುದ್ರಣ ಮಾಧ್ಯಮ ಪತ್ರಿಕೋದ್ಯಮ ತನ್ನ ಘನತೆ ಉಳಿಸಿಕೊಂಡಿದೆ. ಇದು ನೂರಾರು ವರ್ಷ ಹೀಗೆಯೇ ಇರಲಿದೆ ಎಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಸನದಲ್ಲಿ ಪತ್ರಿಕೋದ್ಯಮ ಪ್ರಾರಂಭ ಮಾಡಿದ ದಿನದಿಂದ ಈ ತನಕ ನಾನು ವೃತ್ತಿ ಬದ್ದವಾಗಿ ಮಾಡಿಕೊಂಡು ಬಂದಿರುವ ಕೆಲಸ ಮತ್ತು ಸೇವೆ ನನಗೆ ತೃಪ್ತಿ ತಂದಿದೆ. ಶಿರಸಿಯಲ್ಲಿ ಜನ ಮಾಧ್ಯಮ ಪತ್ರಿಕೆಯನ್ನು ಪ್ರಾರಂಭ ಮಾಡಿದ್ದು ಆ ಮೂಲಕ ಈ ಭಾಗದ ಜನರ ಜೀವನಾಡಿಯಾಗಿದ್ದು ಖುಷಿ ತಂದಿದ ಎಂದು ಹೇಳಿದರು.
25 ವರ್ಷಗಳ ಹಿಂದಿ ಬೇಡ್ತಿ ಮತ್ತು ವರದಾ ನದಿ ಜೋಡಣೆಯನ್ನು ವಿರೋಧಿಸಿ ಜನಮಾಧ್ಯಮ ಪತ್ರಿಕೆಯಲ್ಲಿ ನಾನು ಸಂಪಾದಕೀಯ ಬರೆದಿದ್ದು, ಈಗಲೂ ಪ್ರಸ್ತುತವಾಗಿದೆ. ನದಿ ಜೋಡಣೆ ವಿರೋಧಿಸಿ ಚಳವಳಿ ನಡೆಯುತ್ತಿದೆ. ಈ ಬಗ್ಗೆ ಪತ್ರಿಕೆಯು ತನ್ನ ಜವಬ್ದಾರಿಯನ್ನು ನಿರ್ವಹಣೆ ಮಾಡಿದ್ದರ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.
ಯುವ ಜನಾಂಗ ಪತ್ರಿಕೋದ್ಯಮದ ಬಗ್ಗೆ ಬದ್ದತೆ ಇಟ್ಟುಕೊಂಡು ಕೆಲಸ ಮಾಡಲು ಮುಂದೆ ಬರಬೇಕು. ಆಗ ಮಾತ್ರವೇ ಬದಲಾವಣೆ ಸಾಧ್ಯ ಎಂದು ಹೇಳಿದರು.
ಕಾಯಕ ಜೀವಿ ಜಯರಾಮ ಹೆಗಡೆ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಎಂಬತ್ತರ ದಶಕದಲ್ಲಿ ಹಾಸನದಲ್ಲಿ ಜನತಾ ಮಾಧ್ಯಮ ಮೂಲಕ ಪತ್ರಿಕೋದ್ಯಮ ಪ್ರವೇಶ ಮಾಡಿದ ಜಯರಾಮ ಹೆಗಡೆ ಅವರು, ಶಿರಸಿಯಲ್ಲಿ ತಮ್ಮದೇ ಸಂಪಾದಕತ್ವದಲ್ಲಿ ಜನಮಾಧ್ಯಮ ಪತ್ರಿಕೆಯ ಮೂಲಕ ನಡೆಸಿದ ಪತ್ರಿಕೋದ್ಯಮ ಜನಪರ ಪತ್ರಿಕೋದ್ಯಮಕ್ಕೆ ಕನ್ನಡಿಯಾಗಿದೆ ಎಂದರು.
ಹಿರಿಯ ಪತ್ರಕರ್ತರ ಸೇವೆಯನ್ನು ಗುರುತಿಸಿ ಅವರ ಮನೆಯಂಗಳಕ್ಕೆ ತೆರಳಿ ಅವರ ಕುಟುಂಬದ ಸಮ್ಮುಖದಲ್ಲಿ ಗೌರವಿಸುವ ಕೆಲಸವನ್ನು ಕೆಯುಡಬ್ಲೂಜೆ ನಿರಂತರವಾಗಿ ಮಾಡಿಕೊಂಡು ಬಂದಿದೆ. ಇಂದು ಶಿರಸಿಗೆ ಬಂದು ಜಯರಾಮ ಹೆಗಡೆ ಅವರ ಮನೆಯಂಗಳದಲ್ಲಿ ಗೌರವಿಸುತ್ತಿರುವುದು ರಾಜ್ಯ ಸಂಘಕ್ಕೂ ಅಭಿಮಾನದ ಸಂಗತಿಯಾಗಿದೆ ಎಂದರು.
84 ವರ್ಷದ ತುಂಬು ಜೀವನ ಸಾಗಿಸಿರುವ ಜಯರಾಮ ಹೆಗಡೆ ಅವರು ಪತ್ರಕರ್ತರಾಗಿ, ಸಾಹಿತಿಗಳಾಗಿ ಮತ್ತು ಸಂಘಟಕರಾಗಿ ಮಾಡಿರುವ ಸೇವೆ ಅನನ್ಯ. ಅವರು ಶತಾಯುಷಿಗಳಾಗಿ ಬಾಳಲಿ ಎಂದು ತಗಡೂರು ಅವರು ಶುಭ ಹಾರೈಸಿದರು.
ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ, ಜಯರಾಮ ಹೆಗಡೆ ಅವರ ಪುತ್ರಿ ಕವಯತ್ರಿ ಸಿಂಧು, ಅಳಿಯ ಗಾಯಕ ಚಂದ್ರಶೇಖರ್ ಇದ್ದರು.
The post ಶಿರಸಿ:ಜಯರಾಮ ಹೆಗಡೆ ಅವರಿಗೆ ಮನೆಯಂಗಳದಲ್ಲಿ ಕೆಯುಡಬ್ಲೂಜೆ ಗೌರವ, ಐಷಾರಾಮಿ ಜೀವನ ನಡೆಸಲು ಪತ್ರಿಕೋದ್ಯಮಕ್ಕೆ ಬರಬಾರದು -ಹೆಗಡೆ appeared first on Karnataka Kahale.
]]>