ರಾಜಕೀಯ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Thu, 05 Jan 2023 17:46:58 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ರಾಜಕೀಯ – Karnataka Kahale https://www.karnatakakahale.com 32 32 ಪಕ್ಷದಲ್ಲಿ ಈಗಲೂ ನಾನು ಪವರ್ ಫುಲ್ -ಡಾ.ಜಿ ಪರಮೇಶ್ವರ್ https://www.karnatakakahale.com/news/10819 Thu, 05 Jan 2023 17:46:58 +0000 https://www.karnatakakahale.com/?p=10819 ಬಳ್ಳಾರಿ, ಡಿ.5:ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷ ಜ.8 ರಂದು ಆಯೋಜಿಸಿರುವ ಎಸ್ಸಿ, ಎಸ್ಟಿ ಸಮಾವೇಶದಲ್ಲಿ ಅಂದಾಜು ಐದು ಲಕ್ಷ ಜನರು ಸೇರಲಿದ್ದಾರೆ ಎಂದು ಮಾಜಿ‌ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು. ಅವರು ಗುರುವಾರ ಸಾಯಂಕಾಲ ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.…

The post ಪಕ್ಷದಲ್ಲಿ ಈಗಲೂ ನಾನು ಪವರ್ ಫುಲ್ -ಡಾ.ಜಿ ಪರಮೇಶ್ವರ್ appeared first on Karnataka Kahale.

]]>

ಬಳ್ಳಾರಿ, ಡಿ.5:ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷ ಜ.8 ರಂದು ಆಯೋಜಿಸಿರುವ ಎಸ್ಸಿ, ಎಸ್ಟಿ ಸಮಾವೇಶದಲ್ಲಿ ಅಂದಾಜು ಐದು ಲಕ್ಷ ಜನರು ಸೇರಲಿದ್ದಾರೆ ಎಂದು ಮಾಜಿ‌ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ಅವರು ಗುರುವಾರ ಸಾಯಂಕಾಲ ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಸಮಾವೇಶದಲ್ಲಿ ಬಿಜೆಪಿ ಸರಕಾರದ ದುರಾಡಳಿತ ವಿಶೇಷವಾಗಿ ಎಸ್.ಸಿ, ಎಸ್.ಟಿ ಸಮುದಾಯಗಳಿಗೆ ಮಾಡಿರುವ ಅನ್ಯಾಯವನ್ನು ಅನಾವರಣ ಗೊಳಿಸಲಾಗುವುದು ಎಂದು ಹೇಳಿದರು.
ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಈ ಸಮುದಾಯಗಳು ಇದ್ದು ಮೊದಲಿನಿಂದಲೂ ಪಕ್ಷವನ್ನು ಬೆಂಬಲಿಸುತ್ತಿವೆ. ಈ ಬಾರಿಯೂ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಗೆ ಮತ ಹಾಕಿ ಬೆಂಬಲಿಸಲು ಸಮಾವೇಶದಲ್ಲಿ ಮನವಿ ಮಾಡಲಾಗುವುದು ಎಂದರು.
ಪರಿಶಿಷ್ಟ ಜಾತಿಯಲ್ಲಿ 101,
ಪರಿಶಿಷ್ಟ ಪಂಗಡದಲ್ಲಿ 52 ಜಾತಿ ಗಳಿವೆ. ಈ ಸಮುದಾಯಗಳು ಹಲವು ಕಾರಣಗಳಿಂದ ಹರಿದು ಹಂಚಿ ಹೋಗಿರುವುದರಿಂದ ಅಭಿವೃದ್ಧಿ ಆಗಿಲ್ಲ. ಈ ಹಿನ್ನಲೆಯಲ್ಲಿ ಒಗ್ಗಟ್ಟು ಮಾಡಿ ಮುಂಬರುವ ಚುನಾವಣೆಯಲ್ಲಿ ಆರಿಸಿ ಬರುವ ಕಾಂಗ್ರೆಸ್ ಸರ್ಕಾರ ನಿಮ್ಮ‌ ಜೊತೆಗಿರಲಿದೆ ಎಂಬ ಭರವಸೆ ನೀಡಲಾಗುವುದು, ಬಿಜೆಪಿಯವರು ಸಂವಿಧಾನ ವಿರುದ್ಧ ಇರುವ, ಬದಲಾಯಿಸುವ ಬಗ್ಗೆ ಮಾತನಾಡುವ ಕುರಿತಂತೆ ಜಾಗೃತಿ ಮೂಡಿಸಲಾಗುವುದು ಎಂದರು.
ತಮ್ಮ ಪಕ್ಷದ ಆಡಳಿತದಲ್ಲಿ 2013- 18 ರಲ್ಲಿ ಶೇ 24 ರಷ್ಟು ಹಣವನ್ನು ಬಜೆಟ್ ನಲ್ಲಿ ಮೀಸಲಿಟ್ಟು 78 ಸಾವಿರ ಕೋಟಿ ರೂ ಖರ್ಚು ಮಾಡಿತ್ತು.
ಆದರೆ ಬಿಜೆಪಿ ಸರ್ಕಾರ ಕೇವಲ 28 ಸಾವಿರ ಕೋಟಿ ಮೀಸಲಿಟ್ಟು ಅದರಲ್ಲಿ 8 ಸಾವಿರ ಕೋಟಿಯನ್ನು ಬೇರೆ ಉದ್ದೇಶಗಳಿಗೆ ಉಪಯೋಗಿಸಿದೆ ಎಂದು ದೂರಿದರು.
ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಭೂ ಮಂಜೂರು, ಗಂಗಾ ಕಲ್ಯಾಣ, ಸ್ವ ಉದ್ಯೋಗ, ಕೈಗಾರಿಕೆಗಳ ಸ್ಥಾಪನೆ, ಪ್ರೋತ್ಸಾಹ ಧನ ನೀಡಿಕೆ ಮೊದಲಾದವುಗಳನ್ನು ಬಿಜೆಪಿ ಸರಕಾರ ಸ್ಥಗಿತಗೊಳಿಸಿದೆ ಎಂದರು.
ಪಕ್ಷದಲ್ಲಿ ನಾನು ಮೂಲೆ ಗುಂಪಾಗಿಲ್ಲ.. ನೇಪಥ್ಯಕ್ಕೆ ಸೇರಿಲ್ಲ. ಈಗಲೂ ನಾನು ಪವರ್ ಫುಲ್ ಆಗಿದ್ದೇನೆ. ಪ್ರಸ್ತುತ ಕೆಪಿಸಿಸಿ ಆದ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು, ಸಿ ಎಲ್ ಪಿ ನಾಯಕ ಸಿದ್ದರಾಮಯ್ಯ ಅವರು ಮುಂಚೂಣಿಯಲ್ಲಿರುವುದು ಸಹಜವಲ್ಲವೇ ಎಂದು ಡಾ.ಪರಮೇಶ್ವರ್ ಹೇಳಿದರು. .
ರಾಜ್ಯದಲ್ಲಿ ಪಕ್ಷ ಬಹುಮತಕ್ಕೆ ಬಂದರೆ ಶಾಸಕಾಂಗ ಸಭೆ ಕರೆದು, ಶಾಸಕರ ಒಲವು ಇರುವವರನ್ನು ಹೈಕಮಾಂಡ್ ಮುಖ್ಯ ಮಂತ್ರಿ ಅವರನ್ನು ಆಯ್ಕೆ ಮಾಡಲಿದೆ ಎಂದರು.
ಒಳಮೀಸಲಾತಿ ಕುರಿತ ಪಕ್ಷದ ನಿಲುವನ್ನು ಜ.8ರ ಸಮಾವೇಶದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ, ಪಿ.ಟಿ.ಪರಮೇಶ್ವರ ನಾಯ್ಕ, ಈ ತುಕರಾಂ, ಮಾಜಿ ಸಂಸದ ಚಂದ್ರಪ್ಪ, ಶಾಸಕ ಬಿ.ನಾಗೇಂದ್ರ, ಜೆ. ಎನ್ ಗಣೇಶ್, ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಮಾಜಿ ಎಂ.ಎಲ್.ಸಿ ಕೆ.ಎಸ್.ಎಲ್ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ರಫೀಕ್, ಎಸ್ಟಿ ಘಟಕದ ಅಧ್ಯಕ್ಷ ಎರುಕಲಸ್ವಾಮಿ, ಪಕ್ಷದ ಜಿಲ್ಲಾ ಮುಖಂಡರುಗಳಾದ ಅಲ್ಲಂ ಪ್ರಶಾಂತ್, ಎ.ಮಾನಯ್ಯ, ಮುಂಡ್ರಿಗಿ ನಾಗರಾಜ್, ಶಿವರಾಜ್ ಹೆಗಡೆ, ಕಮಲಾ ಮರಿಸ್ವಾಮಿ, ಕಮಲಾ ಬಸವರಾಜ್ ಮತ್ತಿತರರು ಇದ್ದರು.
*****

The post ಪಕ್ಷದಲ್ಲಿ ಈಗಲೂ ನಾನು ಪವರ್ ಫುಲ್ -ಡಾ.ಜಿ ಪರಮೇಶ್ವರ್ appeared first on Karnataka Kahale.

]]>
ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ: ಯಾರೇ ಆದರೂ ಒಬ್ಬರಿಗೆ ಒಂದೇ ಟಿಕೆಟ್ -ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ https://www.karnatakakahale.com/news/10346 Fri, 25 Nov 2022 09:13:17 +0000 https://www.karnatakakahale.com/?p=10346 ಬೆಂಗಳೂರು, ನ.25: ‘ಈ ಬಾರಿ ಚುನಾವಣೆಯಲ್ಲಿ ಯಾರೇ ಆದರೂ ಒಬ್ಬರಿಗೆ ಒಂದೇ ಟಿಕೆಟ್ ‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಶುಕ್ರವಾರ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಅರ್ಜಿ ಸಲ್ಲಿಕೆ ನಂತರ…

The post ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ: ಯಾರೇ ಆದರೂ ಒಬ್ಬರಿಗೆ ಒಂದೇ ಟಿಕೆಟ್ -ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ appeared first on Karnataka Kahale.

]]>
ಬೆಂಗಳೂರು, ನ.25: ‘ಈ ಬಾರಿ ಚುನಾವಣೆಯಲ್ಲಿ ಯಾರೇ ಆದರೂ ಒಬ್ಬರಿಗೆ ಒಂದೇ ಟಿಕೆಟ್ ‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಶುಕ್ರವಾರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಅರ್ಜಿ ಸಲ್ಲಿಕೆ ನಂತರ ಆಕಾಂಕ್ಷಿಗಳು ಸಿದ್ದರಾಮಯ್ಯ ಹಾಗೂ ನಿಮ್ಮ ಮನೆಗೆ ಭೇಟಿ ನೀಡುತ್ತಿರುವುದರಿಂದ ತೊಂದರೆ ಆಗುವುದಿಲ್ಲವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ ಯಾರೇ ಆಗಲಿ ಒಬ್ಬರಿಗೆ ಒಂದೇ ಟಿಕೆಟ್. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಪಕ್ಷ ಮೊದಲು ಅಧಿಕಾರಕ್ಕೆ ಬರಬೇಕು. ಅಧಿಕಾರಕ್ಕೆ ಬಂದಾಗ ಎಲ್ಲರಿಗೂ ಅಧಿಕಾರ ಸಿಗುತ್ತದೆ ಎಂದು ತಿಳಿಸಿದರು.
ಎಲ್ಲರಿಗೂ ಅವರದೇ ಆದ ಶಕ್ತಿ ಇರುತ್ತದೆ. ಯಾರ ಶಕ್ತಿ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬರಿಗೆ 100 ಬೂತ್ ನಿಭಾಯಿಸುವ ಶಕ್ತಿ ಇದ್ದರೆ, ಮತ್ತೆ ಕೆಲವರಿಗೆ 50, ಇನ್ನೂ ಕೆಲವರಿಗೆ 10 ಬೂತ್ ನಿಭಾಯಿಸುವ ಶಕ್ತಿ ಇರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಅರ್ಜಿ ಸಲ್ಲಿಸುವಾಗ ಆಕಾಂಕ್ಷಿಗಳಿಂದ ದೇಣಿಗೆ ಸಂಗ್ರಹ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಇದು ನಮ್ಮ ಪಕ್ಷದಲ್ಲಿ ಹೊಸತಲ್ಲ. ಈ ಹಿಂದೆಯೂ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ. ಆಗ ಹೆಚ್ಚು ಸುದ್ದಿ ಆಗಿರಲಿಲ್ಲ. ಆದರೆ ಈ ಬಾರಿ ಆಗಿದೆ. ಚುನಾವಣಾ ತಯಾರಿ, ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಸೇರಿದಂತೆ ಹಲವು ವಿಚಾರವಾಗಿ ಆರ್ಥಿಕ ಶಕ್ತಿ ಅಗತ್ಯವಿದೆ. ಕಚೇರಿ ನಿರ್ಮಾಣಕ್ಕೆ ಕಾರ್ಯಕರ್ತರು ಆರ್ಥಿಕ ನೆರವು ಕೇಳಿದಾಗ ನಾವು ಹಣ ಸಹಾಯ ಮಾಡುತ್ತೇವೆ. ಕಾರ್ಯಕರ್ತರಿಗೆ ತೊಂದರೆ ಆದಾಗ ಅವರಿಗೆ ಸಹಾಯ ಮಾಡಲು ಹಣದ ಅಗತ್ಯವಿದೆ. ಹೀಗಾಗಿ ದೇಣಿಗೆಯನ್ನು ಸಂಗ್ರಹಿಸಲಾಗಿದೆ ‘ ಎಂದರು.
ಇಂದಿನ ಸಭೆಯಲ್ಲಿ ಯಾವ ವಿಚಾರವಾಗಿ ಚರ್ಚೆ ಮಾಡಲಾಗುವುದು ಎಂದು ಕೇಳಿದ ಪ್ರಶ್ನೆಗೆ, ‘ ಇಂದು ಯಾವುದೇ ಚರ್ಚೆ ಇರುವುದಿಲ್ಲ. ನಮ್ಮ ನಾಯಕರಿಗೆ ಕೆಲವು ಮಾರ್ಗದರ್ಶನ ನೀಡಲಾಗುವುದು ‘ ಎಂದು ಶಿವಕುಮಾರ್ ತಿಳಿಸಿದರು.
*****

The post ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ: ಯಾರೇ ಆದರೂ ಒಬ್ಬರಿಗೆ ಒಂದೇ ಟಿಕೆಟ್ -ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ appeared first on Karnataka Kahale.

]]>
ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶಕ್ಕೆ ಸರ್ವ ಸಿದ್ಧತೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಲನೆ, ಮುಖ್ಯಮಂತ್ರಿ ಬೊಮ್ಮಾಯಿ ಭಾಗಿ https://www.karnatakakahale.com/news/10304 Sat, 19 Nov 2022 17:34:52 +0000 https://www.karnatakakahale.com/?p=10304 ಬಳ್ಳಾರಿ, ನ.19: ರಾಜ್ಯ‌ ಬಿಜೆಪಿ ನಗರದಲ್ಲಿ‌ ಭಾನುವಾರ(ನ.19) ಆಯೋಜಿಸಿರುವ ಪರಿಶಿಷ್ಟ ಪಂಗಡಗಳ(ಎಸ್.ಟಿ) ನವಶಕ್ತಿ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಉದ್ಘಾಟಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಕೇಂದ್ರ, ರಾಜ್ಯ ಸಚಿವರು, ಸಂಸದರು,…

The post ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶಕ್ಕೆ ಸರ್ವ ಸಿದ್ಧತೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಲನೆ, ಮುಖ್ಯಮಂತ್ರಿ ಬೊಮ್ಮಾಯಿ ಭಾಗಿ appeared first on Karnataka Kahale.

]]>

ಬಳ್ಳಾರಿ, ನ.19: ರಾಜ್ಯ‌ ಬಿಜೆಪಿ ನಗರದಲ್ಲಿ‌ ಭಾನುವಾರ(ನ.19) ಆಯೋಜಿಸಿರುವ ಪರಿಶಿಷ್ಟ ಪಂಗಡಗಳ(ಎಸ್.ಟಿ) ನವಶಕ್ತಿ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಉದ್ಘಾಟಿಸುವರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಕೇಂದ್ರ, ರಾಜ್ಯ ಸಚಿವರು, ಸಂಸದರು, ಶಾಸಕರು, ಬಿಜೆಪಿಯ ಹಲವು ಹಿರಿಯ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾವೇಶಕ್ಕೆ 3.20 ಲಕ್ಷ ಚದರಡಿಯ ಬೃಹತ್ ಪೆಂಡಲ್‌ ಹಾಕಲಾಗಿದೆ. 60 ಎಲ್.ಇ.ಡಿ ಪರದೆಗಳನ್ನು ಅಳವಡಿಸಲಾಗಿದೆ. ಸುಮಾರು 10 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹತ್ತು ಸಾವಿರ ಬಸ್ಸು, ಇಪ್ಪತ್ತು ಸಾವಿರಕ್ಕೂ ಹೆಚ್ಚು ಬೈಕ್ ಗಳ ಮೂಲಕ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹೋಬಳಿ, ತಾಲೂಕು, ಜಿಲ್ಲಾ ಕೇಂದ್ರಗಳಿಂದ ಆಗಮಿಸಲಿದ್ದಾರೆ.


ಸಮಾವೇಶದಲ್ಲಿ ಯಾವುದೇ ಅಹಿತಕರ ಘಟನೆಗಳು‌ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ರಂಜಿತ್ ಕುಮಾರ್ ಬಂಡಾರು‌ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ. ಲಕ್ಷ ಲಕ್ಷ ಜನ ಸೇರುತ್ತಿರುವುದರಿಂದ ಬಂದೋಬಸ್ತ್ ಗಾಗಿ
ನೆರೆಯ ಜಿಲ್ಲೆಗಳಿಂದಲೂ ಪೋಲೀಸರು ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮಾವೇಶದ ಅಂತಿಮ ಹಂತದ ಸಿದ್ಧತೆಗಳನ್ನು ಸಾರಿಗೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು, ನಗರ ಶಾಸಕ‌ಜಿ.‌ಸೋಮಶೇಖರ ರೆಡ್ಡಿ ಮತ್ತು ಪಕ್ಷದ ಜಿಲ್ಲಾ‌ಮುಖಂಡರು ಶನಿವಾರ ಮಧ್ಯಾಹ್ನ ಪರಿಶೀಲಿಸಿದರು.


ಸಮಾವೇಶದ ಹಿನ್ನಲೆಯಲ್ಲಿ ನಗರದ ಹೃದಯಭಾಗದಲ್ಲಿರುವ ಗಡಿಗೆ ಚೆನ್ನಪ್ಪ ವೃತ್ತದಿಂದ ಏಳು ಕಿ.ಮೀ‌ ದೂರವಿರುವ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಾವಿರಾರು ಪಕ್ಷದ ಕಾರ್ಯಕರ್ತರೊಂದಿಗೆ ಪಾದಯಾತ್ರೆ ‌ಮೂಲಕ ಆಗಮಿಸಲಿದ್ದಾರೆ.
ಪ್ರಮುಖ‌ ವಿಐಪಿ ವೇದಿಕೆ ಪಕ್ಕದಲ್ಲಿ ನಿರ್ಮಿಸಿರುವ ಸಮಾನಾಂತರ ವೇದಿಕೆಯಲ್ಲಿ ಸಮಾರಂಭ ಆರಂಭವಾಗುವ ತನಕ ಸಾಂಸ್ಕೃತಿಕ ‌ಕಾರ್ಯಕ್ರಮಗಳು‌ ಜರುಗಲಿವೆ.
*****

The post ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶಕ್ಕೆ ಸರ್ವ ಸಿದ್ಧತೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಲನೆ, ಮುಖ್ಯಮಂತ್ರಿ ಬೊಮ್ಮಾಯಿ ಭಾಗಿ appeared first on Karnataka Kahale.

]]>
ಭಾರತ್ ಜೋಡೋ ಯಾತ್ರೆಯ ಬೃಹತ್ ಸಮಾವೇಶ ಒಂದು ಸರ್ಕಸ್: ಸಿದ್ಧರಾಮಯ್ಯ ವಿಧೂಷಕ -ಸಚಿವ ಶ್ರೀರಾಮುಲು ಅಣಕ https://www.karnatakakahale.com/news/9922 Sun, 16 Oct 2022 16:22:33 +0000 https://www.karnatakakahale.com/?p=9922 ಬಳ್ಳಾರಿ, ಅ.16: ನಗರದಲ್ಲಿ ಶನಿವಾರ ನಡೆದ ಭಾರತ್ ಜೋಡೋ ಯಾತ್ರೆಯ ಬೃಹತ್ ಬಹಿರಂಗ ಸಮಾವೇಶನ್ನು  ಸರ್ಕಸ್ ಗೆ ಹೋಲಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಅಣಕವಾಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾವು ಸೂಕ್ಷ್ಮವಾಗಿ…

The post ಭಾರತ್ ಜೋಡೋ ಯಾತ್ರೆಯ ಬೃಹತ್ ಸಮಾವೇಶ ಒಂದು ಸರ್ಕಸ್: ಸಿದ್ಧರಾಮಯ್ಯ ವಿಧೂಷಕ -ಸಚಿವ ಶ್ರೀರಾಮುಲು ಅಣಕ appeared first on Karnataka Kahale.

]]>

ಬಳ್ಳಾರಿ, ಅ.16: ನಗರದಲ್ಲಿ ಶನಿವಾರ ನಡೆದ ಭಾರತ್ ಜೋಡೋ ಯಾತ್ರೆಯ ಬೃಹತ್ ಬಹಿರಂಗ ಸಮಾವೇಶನ್ನು  ಸರ್ಕಸ್ ಗೆ ಹೋಲಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಅಣಕವಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾವು ಸೂಕ್ಷ್ಮವಾಗಿ ಸಮಾವೇಶ ಗಮನಿಸಿದೆ, ಇದು ಒಂದು ಸರ್ಕಸ್ ಕಂಪನಿಯಂತೆ,
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ   ಕಂಪನಿಯ ಜೋಕರ್ ರಂತೆ ಕಂಡರು ಎಂದು ಹೇಳಿದರು.
ಸಮಾವೇಶದ ಭರ್ಜರಿ ಯಶಸ್ಸು ಹಾಗೂ ವೇದಿಕೆಯಲ್ಲಿ  ಸಚಿವ ಶ್ರೀರಾಮುಲು ಅವರನ್ನು ಪೆದ್ದ ಎಂದು‌ ಲೇವಡಿ ಮಾಡಿದ್ದಕ್ಕೆ ಹತಾಶಗೊಂಡಂತೆ ಕಂಡು‌ ಬಂದ ಶ್ರೀರಾಮುಲು ಅವರು ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಟೀಕಿಸಿದರು.
ರಾಹುಲ್ ಗಾಂಧಿ,  ಸಿದ್ದರಾಮಯ್ಯ ನಂತಹ ನೂರು ಜನರು ಬಂದರು, ಪಾದ ಯಾತ್ರೆ ನಡೆಸಿದರೂ ಈ  ನೆಲದ ಜನರು ನನ್ನನ್ನು ಬಿಟ್ಟು ಕೊಡಲ್ಲ. ಸಿದ್ದರಾಮಯ್ಯ ಯುದ್ಧ ಭೂಮಿಯ ಉತ್ತರ ಕುಮಾರನಂತೆ ಜಂಭ ಕೊಚ್ಚಿಕೊಳ್ಳುವಂತೆ ಕಾಣಿಸಿದರು ಎಂದರು.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ಮುಖ್ಯಮಂತ್ರಿ ಬಸವರಾಜ್  ಬೊಮ್ಮಾಯಿ ಅವರ ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಲೇ ಇಲ್ಲ. ಅಭಿವೃದ್ಧಿ ‌ಚಕ್ರವ್ಯೂಹದ ಒಳಗೆ ಹೋಗಿ ಹೊರ ಬರಲಾಗದೇ
ಕೇವಲ ಉತ್ತರ ಕುಮಾರನ  ಪೌರುಷದಂತೆ ಮಾತನಾಡಿದ್ದಾರೆ. ಇದು ತಮ್ಮ ಕೊನೆಯ ಚುನಾವಣೆ ಎಂದು  ಸಿದ್ದರಾಮಯ್ಯ ಹೇಳೋದು ಸತ್ಯ. ಯಾಕೆಂದರೆ ಅವರ ಪಾಪದ ಕೊಡ ತುಂಬಿದೆ ಹೀಗಾಗಿ ಇದು ನಿಜಕ್ಕೂ ‌ಕೊನೆಯ ಚುನಾವಣೆಯಾಗಲಿದೆ ಎಂದು ತಿಳಿಸಿದರು.
ಶಕುನಿ: ಸಿದ್ಧರಾಮಯ್ಯ ರಾಜ್ಯ ರಾಜಕಾರಣದ ಶಕುನಿ ಇದ್ದಂತೆ. ಇವರ ರಾಜಕೀಯ ಇತಿಹಾಸ ನೋಡಿದರೆ ಜೆಡಿಎಸ್ ನಲ್ಲಿ  ಬೆಂಕಿ ಹಚ್ಚಿದರು.
ಈಗ ಕಾಂಗ್ರೆಸ್ ನಲ್ಲಿ ಬೆಂಕಿ‌ಹಚ್ಚುವ ಕೆಲಸ ಮಾಡ್ತಾ ಇದ್ದಾರೆ. ಅಂದು ದೇವೇಗೌಡರಿಗೆ. ಇಂದು ಡಿಕೆ ಶಿವಕುಮಾರ್ ಅವರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಆಪಾದಿಸಿದರು.
ನಾನು ಅವರ ನಾಯಕ ರಾಹುಲ್ ಗಾಂಧಿ ಸಿದ್ದರಾಮಯ್ಯರಂತೆ ಪೆದ್ದನಲ್ಲ ಎಂದು ತಿರುಗೇಟು ನೀಡಿದರು.
ಸಂಡೇ ಮಂಡೇ ವಕೀಲಗಿರಿ‌ ಮಾಡಿರೋ ಸಿದ್ದರಾಮಯ್ಯ ಬುದ್ಧಿವಂತ ರಾಗಿರ ಬಹುದು ಆದರೆ ಹೃದಯವಂತಿಕೆಯಲ್ಲಿ ಶ್ರೀರಾಮುಲುಗೆ ಯಾರು ಸಾಟಿಯಿಲ್ಲ.  ನನ್ನ ಇತಿಹಾಸ ನೋಡಿ, ಮೋಸ ಮಾಡಿ ನಾನು ರಾಜಕೀಯ ಮಾಡಿಲ್ಲ.
ಅಹಿಂದ ಮುಖವಾಡ ಇಟ್ಟುಕೊಂಡು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ತುಳಿದ್ರಿ. ಡಾ. ಜಿ. ಪರಮೇಶ್ವರನ್ನು ಸೋಲಿಸಿದ್ರಿ ನಿಮ್ಮದು ಶಕುನಿ ರಾಜಕೀಯ ಎಂದು ಮೂದಿಲಿಸಿದರು.
ಮೋದಿ, ಅಮೀತ್ ಷಾ ಸ್ವತಂತ್ರಕ್ಕೆ ಹೋರಾಟ ಮಾಡಿಲ್ಲವೆಂತಾರೆ ನೀವು ಹೋರಾಟ ಮಾಡಿದ್ದೀರೆನಪ್ಪ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು.
ಆರ್ ಎಸ್ಎಸ್ ಬಗ್ಗೆ ಮಾತನಾಡೋ ನೈತಿಕತೆ ನಿನಗೆ ಇಲ್ಲ. ಮುಖ್ಯಮಂತ್ರಿ ಇದ್ದಾಗ ಜಾತಿಗಳ ಮಧ್ಯೆವಿಷ ಬೀಜಬಿತ್ತಿರೋದು ಯಾರು ಎಂದು ಏಕವಚನದಲ್ಲಿ ಕೇಳಿದರು.
ಅಕ್ರಮದ ದಾಖಲೆಗಳು ಇವೆ ಎಂದು ಇದೀಗ ಡಿಕೆಶಿ ಅವರನ್ನೇ ಬ್ಲಾಕ್ ಮೇಲ್ ಮಾಡ್ತೀರಿ ಎಂದು ಆರೋಪಿಸಿದರು. ನಿಮ್ಮಲ್ಲಿರುವ ದಾಖಲೆಗಳನ್ನು ಬಿಡುಗಡೆ ಮಾಡಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಸಮಯ ಬಂದಾಗ ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಶ್ರೀರಾಮುಲು ಅವರು ಹಾರಿಕೆ‌ ಉತ್ತರ‌ ನೀಡಿದರು.
ಸುದ್ದಿಗೋಷ್ಟಿಯಲ್ಲಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಮಾಜಿ‌ ಸಂಸದೆ ಜೆ.ಶಾಂತ,   ಪಕ್ಷದ ಜಿಲ್ಲಾ ಅಧ್ಯಕ್ಷ ಜಿ. ಮುರಹರಗೌಡ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಬುಡಾ ಅಧ್ಯಕ್ಷ ಎಸ್.ಮಾರುತಿ ಪ್ರಸಾದ್ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಮುಖಂಡರುಗಳಾದ ಹೆಚ್. ಹನುಮಂತಪ್ಪ, ಓಬಳೇಶ್, ತಿಮ್ಮಪ್ಪ ಮತ್ತಿತರರು ಇದ್ದರು.
*****

The post ಭಾರತ್ ಜೋಡೋ ಯಾತ್ರೆಯ ಬೃಹತ್ ಸಮಾವೇಶ ಒಂದು ಸರ್ಕಸ್: ಸಿದ್ಧರಾಮಯ್ಯ ವಿಧೂಷಕ -ಸಚಿವ ಶ್ರೀರಾಮುಲು ಅಣಕ appeared first on Karnataka Kahale.

]]>