Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ವಿಜಯನಗರ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Sun, 25 May 2025 10:27:20 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ವಿಜಯನಗರ – Karnataka Kahale https://www.karnatakakahale.com 32 32 ಹರಪನಹಳ್ಳಿಯಲ್ಲಿ ಡಾ.ಭರಣಿ ಮತ್ತು ಸಿದ್ಧಯ್ಯ ಅವರ ಜನ್ಮ ದಿನಾಚರಣೆ: ಡಾ.‌ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ -ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಬಣ್ಣನೆ https://www.karnatakakahale.com/news/19509 Sun, 25 May 2025 10:27:20 +0000 https://www.karnatakakahale.com/?p=19509 ಹರಪನಹಳ್ಳಿ, ಮೇ 24: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಿಂದ ಎಡಿಜಿಪಿವರೆಗೆ ಮೂರುವರೆ ದಶಕಗಳ ಕಾಲ ಜನಪರ, ದಕ್ಷ ಆಡಳಿತ ನಡೆಸಿದ ಡಾ.‌ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ ಎಂದು ಹಿರಿಯ ಪತ್ರಕರ್ತ, ಉಪನ್ಯಾಸಕ ಬಳ್ಳಾರಿಯ ಸಿ.‌ಮಂಜುನಾಥ್ ಬಣ್ಣಿಸಿದರು.…

The post ಹರಪನಹಳ್ಳಿಯಲ್ಲಿ ಡಾ.ಭರಣಿ ಮತ್ತು ಸಿದ್ಧಯ್ಯ ಅವರ ಜನ್ಮ ದಿನಾಚರಣೆ: ಡಾ.‌ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ -ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಬಣ್ಣನೆ appeared first on Karnataka Kahale.

]]>

ಹರಪನಹಳ್ಳಿ, ಮೇ 24: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಿಂದ ಎಡಿಜಿಪಿವರೆಗೆ ಮೂರುವರೆ ದಶಕಗಳ ಕಾಲ ಜನಪರ, ದಕ್ಷ ಆಡಳಿತ ನಡೆಸಿದ ಡಾ.‌ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ ಎಂದು ಹಿರಿಯ ಪತ್ರಕರ್ತ, ಉಪನ್ಯಾಸಕ ಬಳ್ಳಾರಿಯ ಸಿ.‌ಮಂಜುನಾಥ್ ಬಣ್ಣಿಸಿದರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಮೋಹನಾಭರಣಿ ಮಹಿಳಾ ಮಂಡಳಿಯ ಹೇಮರೆಡ್ಡಿ ಮಲ್ಲಮ್ಮ ಐ.ಟಿ.ಐ ಕಾಲೇಜಿನಲ್ಲಿ ಬುದ್ದ ಬಸವ ಅಂಬೇಡ್ಕರ್ ವಿಶ್ವ ಕಲ್ಯಾಣ ಸಂಸ್ಥೆ (ರಿ), ಶ್ರೀ ಶರಣಬಸವ ಬುದ್ದ ಭೀಮಜಿ ವಿದ್ಯಾ ಸಂಸ್ಥೆ, ಹಾಗೂ ಬಳ್ಳಾರಿಯ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ನಿವೃತ್ತ ಎಡಿಜಿಪಿ ಡಾ. ಸುಭಾಷ್ ಭರಣಿ ಅವರ 75ನೇ  ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಛಲವಾದಿ ಮಹಾ ಸಭಾದ ರಾಜ್ಯಾಧ್ಯಕ್ಷ ಸಿದ್ದಯ್ಯ ಅವರ 67ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಭರಣಿ ಅವರ  ಜೀವನ, ಸಾಧನೆಗಳ ಬಗ್ಗೆ  ಅವರು ಮಾತನಾಡಿದರು.


ಚಿಕ್ಕಮಗಳೂರು, ಧಾರವಾಡ ಮತ್ತು ಬಳ್ಳಾರಿಯಲ್ಲಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಡಾ. ಭರಣಿ ಅವರ ಜನಮುಖಿ‌ ಕಾರ್ಯಗಳನ್ನು ಜನತೆ ಇಂದಿಗೂ ಕೊಂಡಾಡುತ್ತಿದ್ದಾರೆ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯ ಕಲ್ಕಂಬ, ಮುದ್ದಟನೂರು ಗ್ರಾಮಗಳಲ್ಲಿ ದಲಿತ ಮಹಿಳೆಯರ ಮೇಲೆ‌ ನಡೆಯುತ್ತಿದ್ದ ಅಮಾನುಷ ಓಕುಳಿ ಚೆಲ್ಲುವ ಪದ್ಧತಿಯನ್ನು ನಿಲ್ಲಿಸಿದ ಕೀರ್ತಿ ಡಾ. ಸುಭಾಷ್ ಭರಣಿ ಅವರಿಗೆ ಸಲ್ಲುತ್ತದೆ ಎಂದರು.
ಸಂಶೋಧಕರು ಈ‌ ಕಾರ್ಯವನ್ನು ಕಲ್ಯಾಣ‌ ಕರ್ನಾಟಕದ ಸಾಮಾಜಿಕ ಕ್ರಾಂತಿಗಳಲ್ಲಿ ಒಂದು ಎಂದು ದಾಖಲಿಸಿರುವುದು ಡಾ. ಭರಣಿ ಅವರ ಜನಪರ ನಿಜ ಕಾಳಜಿಯನ್ನು ಪರಿಚಯಿಸುತ್ತದೆ ಎಂದರು.
ಡಾ.‌ಭರಣಿ ಅವರ ಯಶಸ್ವಿ ಸಾಮಾಜಿಕ ಬದುಕಿನ ಹಿಂದೆ ಪತ್ನಿ ಮೋಹನಾ ಭರಣಿ ಅವರು ಇದ್ದಾರೆ ಎಂದು‌ ಮಂಜುನಾಥ್ ಹೇಳಿದರು.
ದಕ್ಷ ಆಡಳಿತ ಜತೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆ ದಿನಗಳಲ್ಲಿ ಸಾಹಿತಿಗಳು, ಪತ್ರಕರ್ತರು, ಕಲಾವಿದರು, ಜನಪದ ಗಾಯಕರ ಮನಸ್ಸನ್ನು ಗೆದ್ದಿದ್ದ ಡಾ. ಭರಣಿ ಅವರ ಕಾರ್ಯಗಳು ಇಂದಿನ ಹಿರಿಯ ಕಿರಿಯ ಅಧಿಕಾರಿಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣ ಬಸವ ಬುದ್ದ ಭೀಮಜಿ ವಿದ್ಯಾಸಂಸ್ಥೆ (ರಿ)ಯ
ಸಂಸ್ಥಾಪಕ- ಕಾರ್ಯದರ್ಶಿಗಳಾದ ಗುಂಡಗತ್ತಿ ಕೆ.ಕೊಟ್ರಪ್ಪ ಅವರು ಮಾತನಾಡಿ, ದಕ್ಷತೆಗೆ ಹೆಸರಾಗಿದ್ದ
ಡಾ. ಸುಭಾಷ್ ಭರಣಿ ಮತ್ತು ಸಿದ್ದಯ್ಯ ಅವರ ಆದರ್ಶ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಹಾಗೂ ಅವರಂತೆ ವೃತ್ತಿ ಜೊತೆಗೆ ಸಾಮಾಜಿಕ ಸೇವೆಯನ್ನು ಪ್ರವೃತ್ತಿಯನ್ನಾಗಿ ಮೈಗೂಡಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಮುಂದಿನ ವರ್ಷವೂ ಉಭಯರ ಜನ್ಮ ದಿನಾಚರಣೆಯನ್ನು ರಕ್ತದಾನ ಶಿಬಿರ ಸೇರಿದಂತೆ ಜನಪಯೋಗಿ ಕಾರ್ಯಗಳನ್ನು ನಾಲ್ಕು ಸಂಸ್ಥೆಗಳು ಹಮ್ಮಿಕೊಳ್ಳಲಿವೆ ಎಂದರು.

ಕರ್ನಾಟಕ ರಾಜ್ಯ ಛಲವಾದಿ ಮಹಿಳಾ ಮಹಾಸಭಾ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ
ಡಾ. ಈರಮ್ಮ ಅವರು ಸಿದ್ದಯ್ಯ ಅವರ ಬಾಲ್ಯ ಶಿಕ್ಷಣ ಹಾಗೂ ಸರ್ಕಾರದ ಸೇವಾ ಕಾರ್ಯಗಳ ಕುರಿತು ಮಾತನಾಡಿ ಸಿದ್ದಯ್ಯ ಅವರು ಕಾರ್ಯನಿರ್ವಹಿಸಿದ ಎಲ್ಲಾ ಇಲಾಖೆಗಳಲ್ಲೂ ಅತ್ಯುತ್ತಮ‌ ಸೇವೆ ಸಲ್ಲಿಸುವ ಮೂಲಕ ಜನಮನ ಗೆದ್ದಿದ್ದಾರೆ ಎಂದು ತಿಳಿಸಿದರು.
ನಾಡಿನ ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಾಟೇಲ್, ಧರ್ಮಸಿಂಗ್ ಹಾಗೂ ಬಿಮ ಎಸ್. ಯಡಿಯೂರಪ್ಪ ಅವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿದ ಹೆಗ್ಗಳಿಕೆ ಹೊಂದಿರುವ ಸಿದ್ದಯ್ಯ ಅವರು ವಿಶೇಷವಾಗಿ ಬಿ.ಬಿ.ಎಂ.ಪಿ ಆಯುಕ್ತರಾಗಿದ್ದಾಗ ಕಸವಿಲೇವಾರಿಗಾಗಿ ಮೂರು ಗಾಲಿಯ ಗಾಡಿ ಸೇವೆಯನ್ನು ಪ್ರಾರಂಭಿಸಿ ನಾಡಿನ ಗಮನ ಸೆಳೆದಿದ್ದರು ಎಂದು ಹೇಳಿದರು.
ನಿವೃತ್ತಿ ಬಳಿಕವೂ ವಿಶ್ರಾಂತಿ ಪಡೆಯದೇ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಶೋಷಿತ ಸಮುದಾಯಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ ಎಂದರು.    ಕಾರ್ಯಕ್ರಮವನ್ನು ಹಂಪಿ ಕನ್ನಡ ವಿವಿಯ ಸಿಂಡಿಕೇಟ್ ಸದಸ್ಯರೂ ಆಗಿರುವ ಬಳ್ಳಾರಿ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ ಅವರು ಉದ್ಘಾಟಿಸಿದರು.

ಪ್ರತಿಭಾ ಪುರಸ್ಕಾರ : ಇದೇ ಸಂದರ್ಭದಲ್ಲಿ ಡಾ.‌ಭರಣಿ‌ ಮತ್ತು ಸಿದ್ಧಯ್ಯ‌ಅವರ ಜನ್ಮ ದಿನಾಚರಣೆ ಅಂಗವಾಗಿ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಮಾರ್ಚ್-೨೦೨೫ ರ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ, ಹಾಗೂ ಐ.ಟಿ.ಐ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಲಾ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಸಮಾರಂಭದಲ್ಲಿ ಪ್ರಾಚಾರ್ಯರಾದ ಆರ್.ಹೆಚ್ ಕಲ್ಯಾಣದವರ್, ಬಿ.ಶಾಂತ ಕುಮಾರ್, ಬಸವಂತಪ್ಪ, ಸಿಎಂಎಸ್ ಮುಖಂಡ ಕಮಲಾಪುರದ ಸಣ್ಣೀರಪ್ಪ, ಉಪನ್ಯಾಸಕರಾದ ಡಾ. ಸಿ.ಅಜ್ಜಯ್ಯ ಹಾಗೂ ನಿಸರ್ಗ ಪ.ಪೂ.ಕಾಲೇಜು, ನಿಸರ್ಗ ಐ.ಟಿ.ಐ ಕಾಲೇಜು, ಹೇಮರೆಡ್ಡಿ ಮಲ್ಲಮ್ಮ ಐ.ಟಿ.ಐ ಕಾಲೇಜು ಹಾಗೂ ಶಾಂತಿ ನಿಕೇತನ ಪ್ರೌಢ ಶಾಲೆಯ ಬೋಧಕ ಹಾಗೂ ಬೋಧಕೇತರರು ಉಪಸ್ಥಿತರಿದ್ದರು.
ಉಪ ಪ್ರಾಚಾರ್ಯ ಮೋಹನ ಹೆಚ್. ಸ್ವಾಗತಿಸಿದರು. ಉಪನ್ಯಾಸಕ ಜಿ.ವೆಂಕಟೇಶ ನಿರೂಪಿಸಿದರು. ಉಪನ್ಯಾಸಕ ಎ.ಮಂಜುನಾಥ ವಂದಿಸಿದರು.

—–

The post ಹರಪನಹಳ್ಳಿಯಲ್ಲಿ ಡಾ.ಭರಣಿ ಮತ್ತು ಸಿದ್ಧಯ್ಯ ಅವರ ಜನ್ಮ ದಿನಾಚರಣೆ: ಡಾ.‌ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ -ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಬಣ್ಣನೆ appeared first on Karnataka Kahale.

]]>
ಶುಭ ವಿವಾಹ: ಗುರು‌-ಹಿರಿಯರು, ಗಣ್ಯರು, ಬಂಧುಮಿತ್ರರ ಶುಭ ಹಾರೈಕೆಯೊಂದಿಗೆ ಚತುರ್ಭುಜರಾದ ಯರಿಸ್ವಾಮಿ(ತರುಣ್) ಮತ್ತು ಸುಲೋಚನ https://www.karnatakakahale.com/news/18164 Sat, 21 Dec 2024 11:20:30 +0000 https://www.karnatakakahale.com/?p=18164   ಹರಪನಹಳ್ಳಿ, ಡಿ.16: ಪಟ್ಟಣದ ಶಿಕ್ಷಣ ಪ್ರೇಮಿ ಹಾಗೂ ಸಮಾಜ ಮುಖಿ ದಂಪತಿಗಳಾದ ಗುಂಡಗತ್ತಿ ಸಿ.‌ಕೊಟ್ರಪ್ಪ ಮತ್ತು ಸಿ.‌ಕೊಟ್ರಮ್ಮ ದಂಪತಿಗಳ ಏಕೈಕ ಪುತ್ರ ಯರಿಸ್ವಾಮಿ(ತರುಣ್) ಮತ್ತು ಮರಿಯಮ್ಮನಹಳ್ಳಿಯ ಸಿ. ಪರಶುರಾಮ ಮತ್ತು ಉಚ್ಚೆಂಗೆಮ್ಮ ಅವರ ಪುತ್ರಿ ಸುಲೋಚನ ಅವರ ವಿವಾಹವು ಭಾನುವಾರ…

The post ಶುಭ ವಿವಾಹ: ಗುರು‌-ಹಿರಿಯರು, ಗಣ್ಯರು, ಬಂಧುಮಿತ್ರರ ಶುಭ ಹಾರೈಕೆಯೊಂದಿಗೆ ಚತುರ್ಭುಜರಾದ ಯರಿಸ್ವಾಮಿ(ತರುಣ್) ಮತ್ತು ಸುಲೋಚನ appeared first on Karnataka Kahale.

]]>
 

ಹರಪನಹಳ್ಳಿ, ಡಿ.16: ಪಟ್ಟಣದ ಶಿಕ್ಷಣ ಪ್ರೇಮಿ ಹಾಗೂ ಸಮಾಜ ಮುಖಿ ದಂಪತಿಗಳಾದ ಗುಂಡಗತ್ತಿ ಸಿ.‌ಕೊಟ್ರಪ್ಪ ಮತ್ತು ಸಿ.‌ಕೊಟ್ರಮ್ಮ ದಂಪತಿಗಳ ಏಕೈಕ ಪುತ್ರ ಯರಿಸ್ವಾಮಿ(ತರುಣ್) ಮತ್ತು ಮರಿಯಮ್ಮನಹಳ್ಳಿಯ ಸಿ. ಪರಶುರಾಮ ಮತ್ತು ಉಚ್ಚೆಂಗೆಮ್ಮ ಅವರ ಪುತ್ರಿ ಸುಲೋಚನ ಅವರ ವಿವಾಹವು ಭಾನುವಾರ ವಿಜೃಂಭಣೆಯಿಂದ ಜರುಗಿತು.
ಹಗರಿಬೊಮ್ಮನಹಳ್ಳಿಯ ಹರ ಕಲ್ಯಾಣ ಮಂಟಪದಲ್ಲಿ ಜರುಗಿದ ವಿವಾಹ ಮಹೋತ್ಸವದಲ್ಲಿ ತರುಣ್ ಮತ್ತು ಸುಲೋಚನ ಸಪ್ತಪದಿ ತುಳಿದರು.
ಈ‌‌ ಸಂಭ್ರಮದ ಗಳಿಗೆಗೆ ನಾಡಿನ‌ ಗಣ್ಯಾತಿಗಣ್ಯರು ಸಾಕ್ಷಿಯಾದರು‌ ಮಾತ್ರವಲ್ಲ ನವ ವಧುವರರಿಗೆ ಶುಭ ಹಾರೈಸಿದರು.

ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಿ.ಪಿ ದೇವರಾಜ್,
ಮಾಜಿ ಸಚಿವ ಬಿ. ಶ್ರೀರಾಮುಲು, ಕರ್ನಾಟಕ ರಾಜ್ಯ ‌ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ‌ ಆಯೋಗದ ಮಾಜಿ ಅಧ್ಯಕ್ಷ ನೆಹರು ಓಲೇಕಾರ, ಹರಪನಹಳ್ಳಿ ‌ಶಾಸಕಿ ಲತಾ ಮಲ್ಲಿಕಾರ್ಜುನ, ಬೆಂಗಳೂರು ಫಿಂಗರ್ ಪ್ರಿಟ್ ಬ್ಯೂರೋದ ಎಸ್ಪಿ ಕುಮಾರಸ್ವಾಮಿ, ವಿಧಿ ವಿಜ್ಞಾನ ಪ್ರಯೋಗಾಲಯದ ಹಿರಿಯ ಅಧಿಕಾರಿಗಳಾದ ದಿವಾಕರ್, ಮಂಜುನಾಥ್, ಅಬಕಾರಿ ಇಲಾಖೆಯ ನಿವೃತ್ತ ಡಿಸಿ ಬಿ.ಡಿ.‌ಸಾವಕ್ಕನವರ್, ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ‌ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ನ್ಯಾಯವಾದಿ ಸಿ.‌ಬಸವರಾಜ್, ಪತ್ರಕರ್ತ ಸಿ. ಶಿವಾನಂದ,
ಹಾವೇರಿ ಜಿಲ್ಲಾ ಸಿಎಂಎಸ್‌ ಮಾಜಿ ಅಧ್ಯಕ್ಷ ಶಂಬು‌ ಕಳಸದ್, ಹಗರಿ ಬೊಮ್ಮನಹಳ್ಳಿ ತಾಲೂಕು ಸಿಎಂಎಸ್ ಅಧ್ಯಕ್ಷ ಕಹಳೆ ಬಸವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಜಿಲ್ಲಾ ಛಲವಾದಿ‌ ಸಮಾಜದ ಗಣ್ಯರು ನವ ವಧುವರರಿಗೆ ಶುಭ ಹಾರೈಸಿದರು.
ಯರಿಸ್ವಾಮಿ(ತರುಣ್) ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಅಧಿಕಾರಿಗಳಾಗಿ, ಸುಲೋಚನ ಜೆಸ್ಕಾಂನಲ್ಲಿ ಕಿರಿಯ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
—–

The post ಶುಭ ವಿವಾಹ: ಗುರು‌-ಹಿರಿಯರು, ಗಣ್ಯರು, ಬಂಧುಮಿತ್ರರ ಶುಭ ಹಾರೈಕೆಯೊಂದಿಗೆ ಚತುರ್ಭುಜರಾದ ಯರಿಸ್ವಾಮಿ(ತರುಣ್) ಮತ್ತು ಸುಲೋಚನ appeared first on Karnataka Kahale.

]]>
‘ಹಂಪಿ’ಯ ಕಡುವ್ಯಾಮೋಹಿ ಛಾಯಾಗ್ರಾಹಕ ‘ಬಣಗಾರ’ -ತಿರು ಶ್ರೀಧರ್, ದುಬೈ https://www.karnatakakahale.com/news/16312 Sat, 18 May 2024 06:28:21 +0000 https://www.karnatakakahale.com/?p=16312 ಇಂದು ಪ್ರಸಿದ್ಧ ಛಾಯಾಗ್ರಾಹಕ ಶಿವಶಂಕರ ಬಣಗಾರ ಅವರ ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಲೇಖಕ ತಿರು ಶ್ರೀಧರ್ ಅವರು, ಪ್ರತಿಭಾ ಸಂಪನ್ನ ಬಣಗಾರ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಲೇಖನದ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.               …

The post ‘ಹಂಪಿ’ಯ ಕಡುವ್ಯಾಮೋಹಿ ಛಾಯಾಗ್ರಾಹಕ ‘ಬಣಗಾರ’ -ತಿರು ಶ್ರೀಧರ್, ದುಬೈ appeared first on Karnataka Kahale.

]]>

ಇಂದು ಪ್ರಸಿದ್ಧ ಛಾಯಾಗ್ರಾಹಕ ಶಿವಶಂಕರ ಬಣಗಾರ ಅವರ ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಲೇಖಕ ತಿರು ಶ್ರೀಧರ್ ಅವರು, ಪ್ರತಿಭಾ ಸಂಪನ್ನ ಬಣಗಾರ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಲೇಖನದ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.                        ಕರ್ನಾಟಕ ಕಹಳೆ ಡಾಟ್ ಕಾಮ್ ಬಳಗದ ಹೆಮ್ಮೆಯ ಛಾಯಾಗ್ರಾಹಕ ಶಿವಶಂಕರ ಬಣಗಾರ ಅವರಿಗೂ ಜನುಮದಿನದ ಶುಭಾಶಯಗಳನ್ನು ಕೋರುತ್ತಿದೆ.
(ಸಂಪಾದಕ)

ಶಿವಶಂಕರ ಬಣಗಾರ ನಮ್ಮ ನಡುವೆ ಎದ್ದುಕಾಣುವ ಭವ್ಯ ಛಾಯಾಗ್ರಾಹಕರು. ಹಂಪೆಯ ವೈಭವವನ್ನು, ಅದು ಎಷ್ಟೇ ಹಾಳಾಗಿದ್ದರೂ ಅದನ್ನು ಪ್ರತಿದಿನ ತಪ್ಪದಂತೆ ತಮ್ಮ ಬದುಕಿನ ತಪಸ್ಸೇ ಏನೋ ಎಂಬಂತೆ ಆದರಿಸಿ, ಸೂರ್ಯನ ಹೊಂಗಿರಣಗಳಲ್ಲಿ ಬೆಳಗುವಂತೆ ತೆರೆದಿಡುವ ಶಿವಶಂಕರ ಬಣಗಾರರ ಬಂಗಾರದಂತಹ ಚಿತ್ರಗಳನ್ನು ಕಾಣುವಾಗ ‘ನೂರು ಕಣ್ಣು ಸಾಲದು’ ಎಂದು ಹೃದಯ ಹಾಡುವಂತೆ ಮಾಡುತ್ತದೆ.
ಶಿವಶಂಕರ ಬಣಗಾರ ಅವರು 1971ರ ಮೇ 18ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಜನಿಸಿದರು.  ತಂದೆ ಶಿವಲಿಂಗಪ್ಪ. ತಾಯಿ ಶಂಕರಮ್ಮ.

ಶಿವಶಂಕರ್ ಅವರು ಪಿಯುಸಿ ಓದುವಾಗಲೇ ಪತ್ರಿಕೋದ್ಯಮದ ಸೆಳೆತದಿಂದ ‘ಹೊಸಪೇಟೆ ಟೈಮ್ಸ್’ನ ವರದಿಗಾರರಾಗಿ ಮತ್ತು ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದರು.  ಮುಂದೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಪದವಿಗೆ ಓದಿದರು.
ಶಿವಶಂಕರ್ ಬಣಗಾರ್ ಅವರು ಹೊಸಪೇಟೆ ಟೈಮ್ಸ್ ಅಲ್ಲದೆ, ಈ ನಮ್ಮ ಕನ್ನಡ ನಾಡು ಉಪಸಂಪಾದಕರಾಗಿ, ವಿಜಯ ಕರ್ನಾಟಕ ಪತ್ರಿಕೆಗೆ ಹೊಸಪೇಟೆ ವರದಿಗಾರರಾಗಿ – ಜಾಹಿರಾತು ಪ್ರತಿನಿಧಿಯಾಗಿ – ಜಾಹಿರಾತು ಮುಖ್ಯಸ್ಥರಾಗಿ; ವಿಜಯವಾಣಿ ವರದಿಗಾರರಾಗಿ, ಉದಯವಾಣಿ ಹಂಪಿ ವರದಿಗಾರರಾಗಿ, ಸಂಯುಕ್ತ ಕರ್ನಾಟಕದ ವರದಿಗಾರರಾಗಿ, ಹೊಸ ದಿಗಂತದ ವರದಿಗಾರರಾಗಿ ಹೀಗೆ ವಿವಿಧ ಅವಧಿಗಳಲ್ಲಿ ವಿವಿಧ ಪತ್ರಿಕೆಗಳಿಗೆ ಕೆಲಸ ಮಾಡಿದ್ದಾರೆ. ಪ್ರಸಕ್ತದಲ್ಲಿ ಅವರು ಬಣಗಾರ ಮೀಡಿಯಾ ಸಲ್ಯೂಷನ್ಸ್ ಎಂಬ ಜಾಹಿರಾತು ಸಂಸ್ಥೆ ನಿರ್ವಹಿಸುತ್ತಿದ್ದಾರೆ.

ಶಿವಶಂಕರ ಬಣಗಾರ್ ಅವರಿಗೆ ಚಿಕ್ಕಂದಿನಿಂದಲೂ ಛಾಯಾಗ್ರಹಣದಲ್ಲಿ ಆಸೆ ಇದ್ದರೂ ಕೈಯಲ್ಲಿ ಕ್ಯಾಮರಾ ಇರಲಿಲ್ಲ.  2008ರಲ್ಲಿ ವರದಿಗಾರಿಕೆಗಾಗಿ ಸೋನಿ ಪಾಯಿಂಟ್ ಅಂಡ್ ಶೂಟ್ ಕ್ಯಾಮೆರಾ ಕೊಂಡರು. ಅದೂ ನೀರುಕಾಗೆಯ ಒಂದು ಸುದ್ಧಿ ಇವರ ಛಾಯಾಗ್ರಹಣಕ್ಕೆ ಮೊದಲ ಕಾರಣವಾಯ್ತು.
ಶಿವಶಂಕರ ಬಣಗಾರ್ ಅವರಿಗೆ ವನ್ಯಜೀವಿ ಪಂಪಯ್ಯ ಸ್ವಾಮಿ ಮಳೆಮಠ ಅವರ ಸಾಂಗತ್ಯದಿಂದ ಪಕ್ಷಿಗಳ ಚಿತ್ರ ತೆಗೆಯುವ ಹವ್ಯಾಸ ಬೆಳೆಯಿತು. 10 ಎಕ್ಸ್ ಕ್ಯಾಮೆರಾದಿಂದ, 30 ಎಕ್ಸ್ ಸೋನಿ ಕ್ಯಾಮೆರಾಗೆ ಬಂದು,  ಮುಂದೆ ಕ್ಯಾನಾನ್ 50 ಎಕ್ಸ್ ಬಳಸಿ ಛಾಯಾಚಿತ್ರಗಳನ್ನು ತೆಗೆಯಲು ತೊಡಗಿದರು.

ಪೇಸ್ಬುಕ್ನಲ್ಲಿ ಅಂತೂ ಶಿವಶಂಕರ ಬಣಗಾರರ ಚಿತ್ರಗಳು ಜನಸ್ತೋಮವನ್ನು ಅಪಾರವಾಗಿ ಆಕರ್ಷಿಸಿವೆ.  ಹಂಪಿಯ ಅವರ ಚಿತ್ರಗಳಂತೂ ಪ್ರತಿಯೊಬ್ಬರಿಗೂ ಆಕರ್ಷಣೆ.  ಇವರ ಚಿತ್ರಗಳು ಜಪಾನ್ ದೇಶದಲ್ಲೂ ಪ್ರದರ್ಶನಗೊಂಡಿವೆ. ಪುರಾತನ ದೇಗುಲಗಳ ಕುರಿತಾದ ಸಮೂಹಗಳಲ್ಲಿ ಮತ್ತು ಅನೇಕ ಪುಸ್ತಕಗಳಲ್ಲಿ ಶಿವಶಂಕರ್ ಬಣಗಾರ್ ಅವರ ಚಿತ್ರಗಳು ಮುಖಪುಟ ಮತ್ತು ಪ್ರಮುಖ ಪುಟಗಳಾಗಿ ನಿರಂತರವಾಗಿ ಕಂಗೊಳಿಸುತ್ತಿವೆ.  2016ರಲ್ಲಿ ಅಮೆರಿಕದ ‘ಅಕ್ಕ’ ಸಮ್ಮೇಳನದಲ್ಲಿ ಪ್ರಕಟಗೊಂಡ ‘ಐಸಿರಿ ಕಾಫಿಟೇಬಲ್ ಬುಕ್’ನಲ್ಲಿ ಶಿವಶಂಕರ್ ಅವರ ಹಂಪಿ ಮತ್ತು ಪಟ್ಟದಕಲ್ಲಿನ ಭವ್ಯ ಚಿತ್ರಗಳಿವೆ.

ಶಿವಶಂಕರ್ ಬಣಗಾರ್ ಅವರ ಛಾಯಾಚಿತ್ರಗಳ ಕುರಿತು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ, ಸಂಯುಕ್ತ ಕರ್ನಾಟಕ, ಉದಯವಾಣಿ, ತೆಲುಗು ದೈನಿಕವಾದ ಈನಾಡು ಪತ್ರಿಕೆಗಳು ನುಡಿಚಿತ್ರಾವಳಿಯನ್ನು ಪ್ರಕಟಿಸಿವೆ.
ಯಾವುದೇ ಕಲಾಕಾರನ ಕಲೆಯನ್ನು ಜನ ಮೆಚ್ಚುತ್ತಾರೆ, ಎಲ್ಲೆಡೆ ಉಪಯೋಗಿಸುತ್ತಾರೆ ಎಂಬುದು ಸಂತೋಷವಾದರೂ ಅಂತದ್ದು ಅವರ ಬದುಕಿನ ಆಸರೆಗೂ ಬೆಂಬಲವಾಗುವ ದಿನಗಳು ಮೂಡುವಂತಾಗಬೇಕು.
ಅತ್ಯುತ್ತಮ ಛಾಯಾಚಿತ್ರಗಳನ್ನು ನಮಗೆ ನೀಡುತ್ತಿರುವ ಶಿವಶಂಕರ ಬಣಗಾರ ಅವರ ಬದುಕು ಬಂಗಾರವಾಗಿರಲಿ.  ಅವರ ಬದುಕು ಸಕಲ ಸುಖ, ಸಂತಸ, ಸೌಭಾಗ್ಯ, ಸಂಪದ, ಸಾಧನೆ ಮತ್ತು ಸಂತೃಪ್ತಿಗಳಿಂದ ಕಂಗೊಳಿಸುತ್ತಿರಲಿ.  ನಮಸ್ಕಾರ.

-ತಿರು ಶ್ರೀಧರ್,ಲೇಖಕರು, ದುಬೈ
—–

The post ‘ಹಂಪಿ’ಯ ಕಡುವ್ಯಾಮೋಹಿ ಛಾಯಾಗ್ರಾಹಕ ‘ಬಣಗಾರ’ -ತಿರು ಶ್ರೀಧರ್, ದುಬೈ appeared first on Karnataka Kahale.

]]>
ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಡಾ. ಕೆ.ಎಂ ಮೇತ್ರಿ ನೇಮಕ https://www.karnatakakahale.com/news/15674 Tue, 05 Mar 2024 18:33:32 +0000 https://www.karnatakakahale.com/?p=15674 ಬಳ್ಳಾರಿ, ಮಾ.5: ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಕೆ ಎಂ ಮೇತ್ರಿ ಅವರು ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ(ವಿ.ಎಸ್.ಕೆ.ವಿವಿ) ನೂತನ ಕುಲಪತಿಗಳಾಗಿ ನೇಮಕಗೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್ ಚಂದ್…

The post ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಡಾ. ಕೆ.ಎಂ ಮೇತ್ರಿ ನೇಮಕ appeared first on Karnataka Kahale.

]]>

ಬಳ್ಳಾರಿ, ಮಾ.5: ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಕೆ ಎಂ ಮೇತ್ರಿ ಅವರು ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ(ವಿ.ಎಸ್.ಕೆ.ವಿವಿ) ನೂತನ ಕುಲಪತಿಗಳಾಗಿ ನೇಮಕಗೊಂಡಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಂಗಳವಾರ ಡಾ. ಮೇತ್ರಿ ಅವರನ್ನು ನಾಲ್ಕು ವರ್ಷಗಳ ಅವಧಿಗೆ ವಿ.ಎಸ್.ಕೆ. ವಿವಿಯ ಕುಲಪತಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಪರಿಚಯ: ಕಲ್ಯಾಣ ಕರ್ನಾಟಕದ ಬೀದರ್ ಮೂಲದ ಡಾ ಕೆ ಎಂ ಮೇತ್ರಿ ಅವರು ಕಳೆದ ಎರಡೂವರೆ ದಶಕಗಳಿಂದ ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾಗಿ, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ, ಡೀನ್ ರಾಗಿ ಕಾರ್ಯನಿರ್ವಹಿಸಿದ್ದಾರೆ. ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ನಾಡಿನ ಅಲೆಮಾರಿ , ಅರೆಅಲೆಮಾರಿ ಸಮುದಾಯಗಳ ಅಭಿವೃದ್ಧಿ, ಸಂಘಟನೆಗಾಗಿ ಕಳೆದ ಮೂರು ದಶಕಗಳಿಂದ ಡಾ. ಮೇತ್ರಿ ಅವರು ಶ್ರಮಿಸುತ್ತಿದ್ದಾರೆ.
ಬಳ್ಳಾರಿ ಹೊರವಲಯದ ಗುಡಾರ ನಗರ ನಿರ್ಮಾಣದಲ್ಲಿ ಅಂದಿನ ಜಿ.ಪಂ ಸಿಇಓ ಹರ್ಷಗುಪ್ತ ಮತ್ತು ಡಾ. ಮೇತ್ರಿ ಅವರ ವಿಶೇಷ ಕಾಳಜಿ, ಪಾತ್ರವಿದೆ.
ಮಾ.6ರಂದು ಅಧಿಕಾರ ಸ್ವೀಕಾರ: ಬಳ್ಳಾರಿ ವಿವಿಯ ನೂತನ ಕುಲಪತಿಗಳಾಗಿ ಬುಧವಾರ ಮಧ್ಯಾಹ್ನ ಡಾ.ಕೆ.ಎಂ. ಮೇತ್ರಿ ಅವರು ಅಧಿಕಾರ ಸ್ವೀಕರಿಸುವರು ಎಂದು ಅಧಿಕೃತ ಮೂಲಗಳು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿವೆ.
ಅಭಿನಂದನೆಗಳ ಮಹಾಪೂರ: ಸರಳ, ಸಜ್ಜನಿಕೆಯ ಡಾ. ಮೇತ್ರಿ ಅವರು ಬಳ್ಳಾರಿ ವಿ.ಎಸ್.ಕೆ ವಿವಿಯ ಕುಲಪತಿಗಳಾಗಿ ನೇಮಕವಾಗಿರುವ ಮಾಹಿತಿ ತಿಳಿಯುತ್ತಲೇ ಇವರ ಆಪ್ತರು, ಹಿತೈಷಿಗಳು, ಕನ್ನಡ ವಿವಿ ಸಹೋದ್ಯೋಗಿಗಳು, ಮಿತ್ರರು, ವಿದ್ಯಾರ್ಥಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದಿದೆ. ಗುಲ್ಬರ್ಗಾ ವಿವಿಯ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ದೇವರಾಜು ಅರಸು ವೇದಿಕೆಯ ಮುಖಂಡ ಕಲ್ಲುಕಂಬ ಪಂಪಾಪತಿ, ಹಿರಿಯ ಸಾಹಿತಿ, ಚಿಂತಕ ಡಾ. ವೆಂಕಟಯ್ಯ ಅಪ್ಪಗೆರೆ, ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಅಶ್ವರಾಮು,ಕರ್ನಾಟಕ ಜಾನಪದ ವಿವಿಯ ಡಾ ಮಲ್ಲಿಕಾರ್ಜುನ ಬಿ ಮಾನ್ಪಡೆ, ಕರ್ನಾಟಕ ‌ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಅಶ್ವ ರಾಮಣ್ಣ , ಸಿಂಧನೂರು ಮನುಕುಲ ಆಶ್ರಮ ಟ್ರಸ್ಟ್‌ ನ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಬೆಳಗಲ್ಲು, ಬೀದರಿನ ಗೌತಮ ಬುದ್ಧ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಲಕ್ಕಿ ಪೃಥ್ವಿರಾಜ್ ಸೇರಿದಂತೆ ಹಲವು ಗಣ್ಯರು, ವಿವಿಧ‌ಸಂಘ ಸಂಸ್ಥೆಗಳ ಮುಖಂಡರು ಬುಡಕಟ್ಟು ತಜ್ಞರಾದ ಡಾ. ಮೇತ್ರಿ ಅವರ ನೇಮಕವನ್ನು ಸ್ವಾಗತಿಸಿ ಅಭಿನಂದಿಸಿದ್ದಾರೆ.
—–

The post ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಡಾ. ಕೆ.ಎಂ ಮೇತ್ರಿ ನೇಮಕ appeared first on Karnataka Kahale.

]]>
ಕೊಟ್ಟೂರಿನ ಐ.ಎಂ ನಂದೀಶಗೆ ಪಿ.ಹೆಚ್.ಡಿ ಪದವಿ https://www.karnatakakahale.com/news/14160 Fri, 27 Oct 2023 07:25:42 +0000 https://www.karnatakakahale.com/?p=14160 ಕೊಟ್ಟೂರು, ಅ. 26 :ಪಟ್ಟಣದ ಐ.ಎಂ.ನಂದೀಶ ಅವರು ಡೆವಲಪ್‍ಮೆಂಟ್ ಆಫ್ ನೋವೆಲ್ ಅನಲೈಟಿಕಲ್ ಮೆಥಡ್ಸ್ ಫಾರ್ ದಿ ಆಸ್ಸೆ ಆಫ್ ಸೆಲೆಕ್ಟೆಡ್ ಡ್ರಗ್ಸ್ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಪಿಹೆಚ್‍ಡಿ. ಪದವಿ ನೀಡಿದೆ.…

The post ಕೊಟ್ಟೂರಿನ ಐ.ಎಂ ನಂದೀಶಗೆ ಪಿ.ಹೆಚ್.ಡಿ ಪದವಿ appeared first on Karnataka Kahale.

]]>

ಕೊಟ್ಟೂರು, ಅ. 26 :ಪಟ್ಟಣದ ಐ.ಎಂ.ನಂದೀಶ ಅವರು ಡೆವಲಪ್‍ಮೆಂಟ್ ಆಫ್ ನೋವೆಲ್ ಅನಲೈಟಿಕಲ್ ಮೆಥಡ್ಸ್ ಫಾರ್ ದಿ ಆಸ್ಸೆ ಆಫ್ ಸೆಲೆಕ್ಟೆಡ್ ಡ್ರಗ್ಸ್ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಪಿಹೆಚ್‍ಡಿ. ಪದವಿ ನೀಡಿದೆ.
ದಾವಣಗೆರೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಡಿ.ಎಚ್. ಮಂಜುನಾಥ ಮತ್ತು ಡಾ.ಯಲ್ಲೂರ ಸಿ.ಬಸಪ್ಪ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು.
—–

The post ಕೊಟ್ಟೂರಿನ ಐ.ಎಂ ನಂದೀಶಗೆ ಪಿ.ಹೆಚ್.ಡಿ ಪದವಿ appeared first on Karnataka Kahale.

]]>
ಬಳ್ಳಾರಿ ಜಿಲ್ಲೆ: ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಜಡಿಯಪ್ಪ ಗೆದ್ಲಗಟ್ಟಿ ವರ್ಗಾವಣೆ https://www.karnatakakahale.com/news/13565 Sun, 10 Sep 2023 17:24:19 +0000 https://www.karnatakakahale.com/?p=13565 ಬೆಂಗಳೂರು, ಸೆ.10: ವಾರ್ತಾ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಜಡಿಯಪ್ಪ ಅವರು ಕೆಲ ದಿನಗಳ ಹಿಂದಷ್ಟೇ 371ಜೆ ಅಡಿ ಹಿರಿಯ ಸಹಾಯಕ ನಿರ್ದೇಶಕರಾಗಿ ಬಡ್ತಿ ಪಡೆದು ಸ್ಥಳ ನಿರೀಕ್ಷೆಯಲ್ಲಿದ್ದ ಅವರಿಗೆ ಬಳ್ಳಾರಿ ಜಿಲ್ಲೆಗೆ ನಿಯುಕ್ತಿಗೊಳಿಸಲಾಗಿದೆ. ಬಳ್ಳಾರಿ ಕಚೇರಿಯಲ್ಲಿ…

The post ಬಳ್ಳಾರಿ ಜಿಲ್ಲೆ: ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಜಡಿಯಪ್ಪ ಗೆದ್ಲಗಟ್ಟಿ ವರ್ಗಾವಣೆ appeared first on Karnataka Kahale.

]]>
ಬೆಂಗಳೂರು, ಸೆ.10: ವಾರ್ತಾ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಜಡಿಯಪ್ಪ ಅವರು ಕೆಲ ದಿನಗಳ ಹಿಂದಷ್ಟೇ 371ಜೆ ಅಡಿ ಹಿರಿಯ ಸಹಾಯಕ ನಿರ್ದೇಶಕರಾಗಿ ಬಡ್ತಿ ಪಡೆದು ಸ್ಥಳ ನಿರೀಕ್ಷೆಯಲ್ಲಿದ್ದ ಅವರಿಗೆ ಬಳ್ಳಾರಿ ಜಿಲ್ಲೆಗೆ ನಿಯುಕ್ತಿಗೊಳಿಸಲಾಗಿದೆ.

ಬಳ್ಳಾರಿ ಕಚೇರಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಬಿ.ಕೆ.ರಾಮಲಿಂಗಪ್ಪ ಅವರು ಉಪನಿರ್ದೇಶಕರಾಗಿ ಬಡ್ತಿ ಹೊಂದಿ ಕೇಂದ್ರ ಕಚೇರಿಗೆ ವರ್ಗಾವಣೆ ಆದ ಒಂದು ವರ್ಷದ ನಂತರ ಪೂರ್ಣ ಪ್ರಮಾಣದ ಅಧಿಕಾರಿಯನ್ನು ಸರಕಾರ ನಿಯೋಜಿಸಿದೆ.  ಜಡಿಯಪ್ಪ ಅವರು ಅವಿಭಜಿತ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕುಗ್ರಾಮದಲ್ಲಿ‌ ಜನಿಸಿದ ಪ್ರತಿಭೆ.  ಮೈಸೂರಿನಲ್ಲಿ ಪದವಿ, ಸ್ನಾತಕೋತ್ತರ ಪದವಿಯನ್ನು ಪೂರೈಸಿ ವಾರ್ತಾ ಇಲಾಖೆಯಲ್ಲಿ ಅಧಿಕಾರಿಯಾಗಿ ನೇಮಕ‌ಹೊಂದಿದ್ದರು.

 

The post ಬಳ್ಳಾರಿ ಜಿಲ್ಲೆ: ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಜಡಿಯಪ್ಪ ಗೆದ್ಲಗಟ್ಟಿ ವರ್ಗಾವಣೆ appeared first on Karnataka Kahale.

]]>
ಯಶಸ್ವಿ ಚಂದ್ರಯಾನ-೩: ಹಂಪಾಪಟ್ಟಣದ ಪ್ರತಿಭಾವಂತ ತಂತ್ರಜ್ಞ ತಿಮ್ಮಪ್ಪ ಪೂಜಾರ್ ಭಾಗಿ: ಗ್ರಾಮದಲ್ಲಿ ಸಂಭ್ರಮ https://www.karnatakakahale.com/news/13304 Thu, 24 Aug 2023 15:32:38 +0000 https://www.karnatakakahale.com/?p=13304 ಹಗರಿಬೊಮ್ಮನಹಳ್ಳಿ, ಆ.23: ಚಂದ್ರಯಾನ-೩ರ ಯಶಸ್ಸಿನಲ್ಲಿ ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರದ ಪಾಲು ಹೆಚ್ಚಿದೆ. ಈ‌ ಕೇಂದ್ರಕ್ಕೂ ತಾಲೂಕಿನ ಹಂಪಾಪಟ್ಟಣ ಗ್ರಾಮಕ್ಕೆ ಏನಾದರೂ ನಂಟಿದೆಯಾ! ಹೌದು! ಖಂಡಿತಾ ನಂಟಿದೆ. ಗ್ರಾಮದ ಪ್ರತಿಭಾನ್ವಿತ ಯುವಕ ತಿಮ್ಮಪ್ಪ ಪೂಜಾರ್ ಅವರು ಯು ಆರ್…

The post ಯಶಸ್ವಿ ಚಂದ್ರಯಾನ-೩: ಹಂಪಾಪಟ್ಟಣದ ಪ್ರತಿಭಾವಂತ ತಂತ್ರಜ್ಞ ತಿಮ್ಮಪ್ಪ ಪೂಜಾರ್ ಭಾಗಿ: ಗ್ರಾಮದಲ್ಲಿ ಸಂಭ್ರಮ appeared first on Karnataka Kahale.

]]>

ಹಗರಿಬೊಮ್ಮನಹಳ್ಳಿ, ಆ.23: ಚಂದ್ರಯಾನ-೩ರ ಯಶಸ್ಸಿನಲ್ಲಿ ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರದ ಪಾಲು ಹೆಚ್ಚಿದೆ. ಈ‌ ಕೇಂದ್ರಕ್ಕೂ ತಾಲೂಕಿನ ಹಂಪಾಪಟ್ಟಣ ಗ್ರಾಮಕ್ಕೆ ಏನಾದರೂ ನಂಟಿದೆಯಾ!
ಹೌದು! ಖಂಡಿತಾ ನಂಟಿದೆ. ಗ್ರಾಮದ ಪ್ರತಿಭಾನ್ವಿತ ಯುವಕ ತಿಮ್ಮಪ್ಪ ಪೂಜಾರ್ ಅವರು ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮಾತ್ರವಲ್ಲ ಚಂದ್ರಯಾನ-೩ರ ಯೋಜನೆಯಲ್ಲಿ ಕೇಂದ್ರದ ಹಲವು ತಂತ್ರಜ್ಞರ ಜತೆ ಇವರು ದುಡಿದಿದ್ದಾರೆ.
ಈ ಹಿನ್ನಲೆಯಲ್ಲಿ ಹುಟ್ಟೂರು ಹಂಪಾಪಟ್ಟಣದಲ್ಲಿ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ಚಂದ್ರನ ದಕ್ಷಿಣಧೃವದ ಮೇಲೆ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಇಳಿಯುತ್ತಲೇ ವಿಶ್ವದ 140 ಕೋಟಿಗೂ ಹೆಚ್ಚು ಭಾರತೀಯರ ಹರ್ಷೋದ್ಗಾರ ಮುಗಿಲು‌ಮುಟ್ಟಿದೆ.
ವಿಕ್ರಮ್ ಜತೆ ಇರುವ ಪ್ರಮುಖ ರೊವರ್ ರೊಬೊಟಿಕ್
ಕಾರ್ ತಯಾರಿಕೆಯ ಇಸ್ರೋದ ಬಾಹ್ಯಾಕಾಶ ತಂಡದೊಂದಿಗೆ ಯು ಆರ್ ರಾವ್ ಉಪಗ್ರಹ ಸಂಸ್ಥೆಯ  ತಂತ್ರಜ್ಞರ ತಂಡದಲ್ಲಿ ತಿಮ್ಮಪ್ಪ ಪೂಜಾರ್ ಅವರು ಇರುವುದು ಹಂಪಾಪಟ್ಟಣ ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಸಂತಸ, ಸಂಭ್ರಮಕ್ಕೆ‌ ಕಾರಣವಾಗಿದೆ.
ಪರಿಚಯ:  ಹಂಪಾಪಟ್ಟಣ ಗ್ರಾಮದ ಪೂಜಾರ್ ಭೀಮಪ್ಪ ಮತ್ತು ಮಲ್ಲಮ್ಮ ಪೂಜಾರ್ ಅವರ ಪುತ್ರ ತಿಮ್ಮಪ್ಪ ಪೂಜಾರ್ ಅವರ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾಭ್ಯಾಸ ತಾಯಿಯ ತವರೂರು ಕೋಗಳಿಯ ಸರಕಾರಿ ಶಾಲೆಯಲ್ಲಿ ನಡೆಯಿತು. ಹೊಸಪೇಟೆಯ ಸರಕಾರಿ  ಐಟಿಐ ಕಾಲೇಜಿನಲ್ಲಿ ಐಟಿಐ ಪದವಿ ಪಡೆದು ಬೆಂಗಳೂರಿನ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗೆ ಸೇರಿದರೂ ಸಮಾಧಾನವಿಲ್ಲ. ಇಸ್ರೋ ದಲ್ಲಿ ಉದ್ಯೋಗಿಯಾಗಬೇಕೆಂಬ ಕನಸು ನನಸಾಗದಿದ್ದಕ್ಕೆ ಮತ್ತೇ ಡಿಪ್ಲೋಮಾ ಕಾಲೇಜಿಗೆ ಪ್ರವೇಶ ಪಡೆದು ಕಷ್ಟ ಪಟ್ಟು ಓದಿ ಉತ್ತೀರ್ಣರಾದರು. ಈ ಅರ್ಹತೆ ಇಸ್ರೋ ಸೇರುವ ಕನಸನ್ನು ನನಸು ಮಾಡಿತು.
ಇದೀಗ ಚಂದ್ರಯಾನ-೩ರ ಯಶಸ್ವಿನ ಟೀಮ್ ನಲ್ಲಿ ತಿಮ್ಮಪ್ಪ ಇರುವುದು ಅವಿಭಜಿತ ಬಳ್ಳಾರಿ ಜಿಲ್ಲೆಯ ಜನತೆಗೆ ಎಲ್ಲಿಲ್ಲದ ಹೆಮ್ಮೆ.


ಗ್ರಾಮದ ಶ್ರೀನಿವಾಸ ಮೆಡಿಕಲ್ ಸ್ಟೋರ್ ನ ಜಿ.ಶ್ರೀನಿವಾಸಶೆಟ್ಟಿ ತನ್ನ ಆಪ್ತ ಮಿತ್ರನ ಬಗ್ಗೆ ಹೇಳುವುದು ಹೀಗೆ.  “ಸಹೋದರನಂತಿರುವ ತಿಮ್ಮಪ್ಪ ಹಂಪಾಪಟ್ಟಣಕ್ಕೆ ಬಂದಾಗ ನನ್ನ ಹತ್ತಿರವೇ ಹೆಚ್ಚು ಸಮಯ ಕಳೆಯುತ್ತಾನೆ.  ತಿಮ್ಮಪ್ಪ ಮತ್ತು ನಾನು ಒಂದೇ ಕುಟುಂಬದ ಸದಸ್ಯರಂತೆ ಇರುತ್ತೇವೆ. ತಿಮ್ಮಪ್ಪ  2019ರಲ್ಲಿ ವಿವಾಹವಾದರು. ಮದುವೆಯ ಸಂಪೂರ್ಣ ಜವಾಬ್ದಾರಿಯನ್ನೇ ನನಗೆ ವಹಿಸಿ ಕೊಟ್ಟಿದ್ದರು” ಎಂದು ನೆನೆದು ಭಾವುಕರಾದರು. ಗ್ರಾಮದಲ್ಲಿ ಇರುವ ದಿನಗಳಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿರುತ್ತಾರೆ. ಲುಂಗಿ-ಟೀಶರ್ಟ್ ಸರಳ ಉಡುಪಿನಲ್ಲಿದ್ದು ಗಮನ ಸೆಳೆಯುತ್ತಾರೆ.
ಇಸ್ರೋ ಉದ್ಯೋಗಿ ಎನ್ನುವ ಯಾವುದೇ ಹಮ್ಮು ಬಿಮ್ಮು ತಿಮ್ಮಪ್ಪನಲ್ಲಿ ಇರದಿರುವುದು ಗ್ರಾಮದ ಬಾಲ್ಯದ ಗೆಳೆಯರಿಗೆ ಖುಷಿ.
ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಚಂದ್ರಯಾನ-೩ರ ಯಶಸ್ಸು ನನಗೂ ಅತ್ಯಂತ ಸಂತಸ‌ ನೀಡಿದೆ. ಇಸ್ರೋ ಉದ್ಯೋಗಿಯಾಗಿದ್ದು ಇಂತಹ ದೇಶವೇ ಮೆಚ್ಚುವ ಕಾರ್ಯದಲ್ಲಿ ಭಾಗಿಯಾಗಿದ್ದು ಪುಣ್ಯವೇ ಸರಿ ಎಂದರು.


ಗ್ರಾಮಕ್ಕೆ ಕೀರ್ತಿ ತಂದಿರುವ ತಿಮ್ಮಪ್ಪ ಅವರನ್ನು ಅಭಿನಂದಿಸಲು ಗ್ರಾಮಸ್ಥರು, ಬಂಧು ಮಿತ್ರರು ತುದಿಗಾಲಲ್ಲಿ ನಿಂತಿದ್ದಾರೆ. ಊರಿಗೆ ಆಗಮಿಸುವುದನ್ನೇ ಕಾಯ್ತಾ ಇದ್ದಾರೆ.
—–

The post ಯಶಸ್ವಿ ಚಂದ್ರಯಾನ-೩: ಹಂಪಾಪಟ್ಟಣದ ಪ್ರತಿಭಾವಂತ ತಂತ್ರಜ್ಞ ತಿಮ್ಮಪ್ಪ ಪೂಜಾರ್ ಭಾಗಿ: ಗ್ರಾಮದಲ್ಲಿ ಸಂಭ್ರಮ appeared first on Karnataka Kahale.

]]>
ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್ https://www.karnatakakahale.com/news/13271 Tue, 22 Aug 2023 08:47:43 +0000 https://www.karnatakakahale.com/?p=13271 ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸರಕಾರ ವಾಯುಮಾಲಿನ್ಯ ನಿಯಂತ್ರಣ ಕಾಯಿದೆ ತಂದಿದೆ. ಆದರೆ ಇದು ಖಾಸಗಿ ವಾಹನಗಳಿಗೆ ಮಾತ್ರ ಅನ್ವಯ ಸರಕಾರಿ ವಾಹನಗಳಿಗೆ ಅನ್ವಯವಾಗುವುದಿಲ್ಲ ಎಂಬಂತಾಗಿದೆ. ಖಾಸಗಿ ವಾಹನಗಳು ವಾಯು ಮಾಲಿನ್ಯ ತಪಾಷಣೆ ಮಾಡಿಸದಿದ್ದರೆ…

The post ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್ appeared first on Karnataka Kahale.

]]>
ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್

ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸರಕಾರ ವಾಯುಮಾಲಿನ್ಯ ನಿಯಂತ್ರಣ ಕಾಯಿದೆ ತಂದಿದೆ. ಆದರೆ ಇದು ಖಾಸಗಿ ವಾಹನಗಳಿಗೆ ಮಾತ್ರ ಅನ್ವಯ ಸರಕಾರಿ ವಾಹನಗಳಿಗೆ ಅನ್ವಯವಾಗುವುದಿಲ್ಲ ಎಂಬಂತಾಗಿದೆ.
ಖಾಸಗಿ ವಾಹನಗಳು ವಾಯು ಮಾಲಿನ್ಯ ತಪಾಷಣೆ ಮಾಡಿಸದಿದ್ದರೆ ತಡೆದು ಫೈನ್ ಹಾಕುವ ಪೊಲೀಸ್ ಅಧಿಕಾರಿಗಳಿಗೆ ಇಂತಹ ಸರಕಾರಿ ವಾಹನಗಳು ಕಣ್ಣಿಗೆ ಬೀಳುತ್ತಿಲ್ಲವೇನೊ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.
ಹೂವಿನಹಡಗಲಿ ಘಟಕದ ಈ ಬಸ್ ಹೂವಿನಹಡಗಲಿ ಯಿಂದ ರಾಣೆಬೆನ್ನೂರಿಗೆ ಸಂಚರಿಸುತ್ತಿದೆ. ಈ ವಾಹನ ಉಗುಳುವ ವಿಪರೀತ ಹೊಗೆಯಿಂದಾಗಿ ಹಿಂದೆ ಪ್ರಯಾಣಿಸುವ ಪ್ರಯಾಣಿಕರಿಗೆ ಉಸಿರುಕಟ್ಟಿದಂತಾಗುತ್ತದೆ. ಆದರೂ ಇದನ್ನು ಚಲಾಯಿಸುವ ಚಾಲಕ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲವೆಂದು ಕಾಣುತ್ತೆ. ಒಂದು ವೇಳೆ ಚಾಲಕ ಘಟಕದ ವ್ಯವಸ್ಥಾಪಕರಿಗೆ ತಿಳಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರಬಹುದು.
ಈ ಬಗ್ಗೆ ಘಟಕದ ವ್ಯವಸ್ಥಾಪಕ ವೆಂಕಟಾಚಲಪತಿ ಅವರಿಗೆ ಕರೆಮಾಡಿ ಮಾತನಾಡಿದಾಗ ಅವರು ಕೂಡಲೇ ಬಸ್ ಮರಳಿ ಬರುತ್ತಲೆ ತಪಾಸಣೆ ಮಾಡಿಸುವುದಾಗಿ ತಿಳಿಸಿದ್ದು, ಕೂಡಲೇ  ಬಸ್ಸು ಹೊಗೆ ಉಗುಳುವುದನ್ನು ತಪ್ಪಿಸಲಿ.

-ಹೆಚ್.ಸುಭಾಸಚಂದ್ರ
ಸಾಹಿತಿ ಹಾಗೂ ಪತ್ರಕರ್ತರು
ಹೊಳಲು
—–

The post ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್ appeared first on Karnataka Kahale.

]]>
ಬಳ್ಳಾರಿ ನೂತನ ಜಿಲ್ಲಾಧಿಕಾರಿ ವೆಂಕಟೇಶ್ ಟಿ https://www.karnatakakahale.com/news/12787 Mon, 17 Jul 2023 16:43:39 +0000 https://www.karnatakakahale.com/?p=12787 ಬಳ್ಳಾರಿ, ಜು. 17: ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ  ವೆಂಕಟೇಶ್ ಟಿ ಅವರನ್ನು ರಾಜ್ಯ ಸರಕಾರ ನೇಮಿಸಿ ಆದೇಶಿಸಿದೆ.                          ಈವರೆಗೆ ಜಿಲ್ಲಾಧಿಕಾರಿಯಾಗಿದ್ದ ಪವನಕುಮಾರ ಮಾಲಪಾಟಿ…

The post ಬಳ್ಳಾರಿ ನೂತನ ಜಿಲ್ಲಾಧಿಕಾರಿ ವೆಂಕಟೇಶ್ ಟಿ appeared first on Karnataka Kahale.

]]>

ಬಳ್ಳಾರಿ, ಜು. 17: ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ  ವೆಂಕಟೇಶ್ ಟಿ ಅವರನ್ನು ರಾಜ್ಯ ಸರಕಾರ ನೇಮಿಸಿ ಆದೇಶಿಸಿದೆ.                          ಈವರೆಗೆ ಜಿಲ್ಲಾಧಿಕಾರಿಯಾಗಿದ್ದ ಪವನಕುಮಾರ ಮಾಲಪಾಟಿ ಅವರು ವರ್ಗಾವಣೆಯಾಗಿದ್ದಾರೆ.                   ವೆಂಕಟೇಶ್ ಅವರು ಈ ಹಿಂದೆ ಬಳ್ಳಾರಿಯಲ್ಲಿ ಎಡಿಸಿಯಾಗಿ ಸೇವೆ ಸಲ್ಲಿಸಿದ್ದಾರೆ ಮಾತ್ರವಲ್ಲ ಪ್ರಸ್ತುತ  ವಿಜಯನಗರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

 

The post ಬಳ್ಳಾರಿ ನೂತನ ಜಿಲ್ಲಾಧಿಕಾರಿ ವೆಂಕಟೇಶ್ ಟಿ appeared first on Karnataka Kahale.

]]>
ಉತ್ತಮರನ್ನು ಆರಿಸೋಣ, ಪ್ರಜಾಪ್ರಭುತ್ವ ಬಲಪಡಿಸೋಣ ಲೇಖನ: ಶೋಭ ಮಲ್ಕಿಒಡೆಯರ್, ಸಾಹಿತಿ, ಹೂವಿನ ಹಡಗಲಿ https://www.karnatakakahale.com/news/11862 Sat, 15 Apr 2023 08:19:34 +0000 https://www.karnatakakahale.com/?p=11862 ಉತ್ತಮರನ್ನು ಆರಿಸೋಣ, ಪ್ರಜಾಪ್ರಭುತ್ವ ಬಲಪಡಿಸೋಣ ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು, ಧರ್ಮ ದೊಡ್ಡದಲ್ಲ ದಯೆ ದೊಡ್ಡದು ಎಂದು ವಿಶ್ವಕ್ಕೆ ಸಾರಿದರು ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಹಾಗೆ ಜೀವನಪೂರ್ತಿ ನುಡಿದಂತೆ ನಡೆದರು ಯುಗ ಪುರುಷರು. ಈಗ ಹೇಳುವ ವಿಚಾರ ರಾಜಕಾರಣಿಗಳದ್ದು! ಎಲ್ಲರೂ…

The post ಉತ್ತಮರನ್ನು ಆರಿಸೋಣ, ಪ್ರಜಾಪ್ರಭುತ್ವ ಬಲಪಡಿಸೋಣ ಲೇಖನ: ಶೋಭ ಮಲ್ಕಿಒಡೆಯರ್, ಸಾಹಿತಿ, ಹೂವಿನ ಹಡಗಲಿ appeared first on Karnataka Kahale.

]]>
ಉತ್ತಮರನ್ನು ಆರಿಸೋಣ, ಪ್ರಜಾಪ್ರಭುತ್ವ ಬಲಪಡಿಸೋಣ

ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು, ಧರ್ಮ ದೊಡ್ಡದಲ್ಲ ದಯೆ ದೊಡ್ಡದು ಎಂದು ವಿಶ್ವಕ್ಕೆ ಸಾರಿದರು ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಹಾಗೆ ಜೀವನಪೂರ್ತಿ ನುಡಿದಂತೆ ನಡೆದರು ಯುಗ ಪುರುಷರು. ಈಗ ಹೇಳುವ ವಿಚಾರ ರಾಜಕಾರಣಿಗಳದ್ದು! ಎಲ್ಲರೂ ನುಡಿಯುವರು… ಅದರಂತೆ ನಡೆಯದೇ ತಮಗೆ, ತಮ್ಮವರಿಗಾಗಿ ಹಗಲು – ರಾತ್ರಿ ದುಡಿಯುವ ಅತೀ ಜಾಣ ಪುರುಷರು.
‌‌ ಮತ್ತೆ ಮರಳಿ ಬರುತಲಿದೆ ಚುನಾವಣೆ, ನಾಯಕರ ಹಣಾಹಣಿ…ಇದು ಯಾರಿಗೂ ಗೊತ್ತು. ಹೊಸ ಹುರುಪಿನೊಂದಿಗೆ ಹೊಸ ಮುಖಗಳೊಂದಿಗೆ ಹೊಚ್ಚ ಹೊಸ – ಹೊಸ ಭರವಸೆಗಳನ್ನು ಮೂಡಿಸುತ್ತ, ಜನರ ಮೂಗಿಗೆ ತುಪ್ಪ ಸವರುವ ಕಾಯಕ ಎಲ್ಲ ಪಕ್ಷಗಳಲ್ಲಿ ಸಾಂಗೋಪಸಾಂಗವಾಗಿ ಭರವಸೆಗಳ ಹುಸಿ ಬೀಜಗಳನ್ನು ಬಿತ್ತುವುದರತ್ತ, ಓಟು ಪಡೆಯಲು ಸಾಹಸ ನಡೆಯುತ್ತಲಿದೆ. ಎಲ್ಲ ಪಕ್ಷಗಳಲ್ಲೂ ಉದ್ದುದ್ದ ಪ್ರಣಾಳಿಕೆಗಳ ಘೋಷಣೆ ಕೂಗುವರು ಹತ್ತಾರು ಬಾರಿ ; ನಂತರದ ದಿನಗಳಲ್ಲಿ ಯಾವುದೂ ಆಗುವುದಿಲ್ಲ ಜಾರಿ. ಮತ್ತದೇ ನವ ವರಸೆಗಳಲ್ಲಿ ಪ್ರಣಾಳಿಕೆಗಳು ಜನರ ಮುಂದೆ ಪ್ರತ್ಯಕ್ಷವಾಗಲಿವೆ. ಮತ್ತೆ – ಮತ್ತೆ ಮೇಕೆಯ ಬಾಯಿಗೆ ಮೊಸರೊರೆಸುವ ಕಾಯಕ ಶುರುವಾಗಿದೆ.
ಯುವಕರನ್ನು ಸೆಳೆಯುವ ಹೊಸ ರೀತಿಯ ತಂತ್ರಗಳು, ಜಾತಿಯ ಲೆಕ್ಕಾಚಾರದ ತಂತ್ರ ಮತ್ತು ಮಹಿಳೆಯರನ್ನು ಆಕರ್ಷಣೀಯವಾಗಿ ಸೆಳೆಯುವಲ್ಲಿ ಯಾವ ಪಕ್ಷಗಳೂ ಹಿಂದೆ ಬಿದ್ದಿಲ್ಲ. ಮಹಿಳೆಯರಿಗಾಗಿಯೇ ಸೀರೆ, ಕುಪ್ಪಸ, ಕುಕ್ಕರ್, ಟಿವಿ, ಬೆಳ್ಳಿ, ಬಂಗಾರ ಇತ್ಯಾದಿ… ಇತ್ಯಾದಿ. ಇಂತಹ ಆಮಿಷ ಒಡ್ಡುವುದು ಹೊಸತೇನಲ್ಲ. ರಾಜಕಾರಣಿಗಳಿಂದ ಹಣ ಪಡೆಯುವುದು ! ಪ್ರಭು ಮಹಾಶಯರು ಓಟು ಹಾಕುವುದು ಒಂದು ರೀತಿ ಬುಕ್ಕಿಂಗ್ ಲೆಕ್ಕದಲ್ಲಿ ನಡೆಯುತ್ತದೆ. ಕಂತೆ – ಕಂತೆ ಹಣದ ಕಟ್ಟು ಮತಭಾಂದವರನ್ನು ತಲುಪಲು ಎಲ್ಲೆಲ್ಲಿಂದ ಸಾಗಿ ಕಳ್ಳ ದಾರಿಯಲ್ಲಿ ಬರುತ್ತಲಿವೆ. ಜನ ಸಾಮಾನ್ಯರು ಹಣವಷ್ಟೇ ಮುಖ್ಯವೆಂದು ಹಣ ಪಡೆದು ಓಟು ಹಾಕಿದರೆ, ನಾಯಕರು ಹಣ ನೀರಿನಂತೆ ಚೆಲ್ಲಿ!! ಓಟು ಪಡೆದು ಜನರ ಕೈಗಳಿಗೆ ಸಿಗದಂತೆ ನುಣುಚಿಕೊಳ್ಳುತ್ತಾರೆ. ಈಗಿನ ಚುನಾವಣೆ ವ್ಯವಹಾರ ಆಗಿದೆ. ಎಲೆಕ್ಷನ್ ಟೈಮಲ್ಲಿ ಊರಿಗೆ ಊರೇ ಸದ್ದು – ಗದ್ದಲ ; ನಂತರದಲ್ಲಿ ಗೆದ್ದವರ ಸದ್ದೇ ಇಲ್ಲ! ಅನ್ನುವ ಹಾಗೆ ಹಣ ಚೆಲ್ಲಿ ಗದ್ದುಗೆ ಏರುತ್ತಾರೆ. ಕಳೆದುಕೊಂಡ ದುಡ್ಡನ್ನು ಹತ್ತು ಪಟ್ಟು ಹೆಚ್ಚಿಸುವಲ್ಲಿ ಬಿಜಿಯಾಗುತ್ತಾರೆ. ಸಾಮಾಜಿಕ ಕಾರ್ಯಗಳು, ಚುನಾವಣೆಗು ಮುನ್ನ ಹರಿಯಬಿಟ್ಟ ಪ್ರಣಾಳಿಕೆಗಳು ಕರಪತ್ರದಲ್ಲಿ ಬೆಚ್ಚನೆ ಮಲಗಿ ಬಿಡುತ್ತವೆ.

‌ ಚುನಾವಣೆಗೂ ಮುನ್ನ
ಹೊಸ – ಹೊಸ
ಯೋಜನೆಗಳ ಪ್ರಣಾಳಿಕೆ ;
ಗೆದ್ದ ನಂತರ
ಬರೀ ಆಕಳಿಕೆ
ತೂಕಡಿಕೆ
ಹೀಗಾಗದಂತೆ ತಡೆಗಟ್ಟಲು ನಮಗೆಲ್ಲ ಸುಸಮಯ ಬಂದಿದೆ. ಸಮಾಜ ಸುಧಾರಣೆಗೆ ಪ್ರತಿ ಪ್ರಜೆಗಳು ಮುಂದಾಗಬೇಕು. ಇದು ಪ್ರಜಾಪ್ರಭುತ್ವ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತು ಪಡಿಸಬೇಕು. ನ್ಯಾಯ ದೇವತೆ ವಿಜೃಂಭಿಸಬೇಕು. ನ್ಯಾಯ – ನೀತಿ – ಧರ್ಮದ ಪಾಲನೆ ಎಲ್ಲರೂ ಸ್ವ ಇಚ್ಛೆಯಿಂದ ಪಾಲಿಸಬೇಕು. ಆಗ ರಾಮರಾಜ್ಯದ ಕನಸು ನನಸಾಗುವುದರಲ್ಲಿ ಯಾವ ಸಂದೇಹವಿಲ್ಲ. ರಾಮರಾಜ್ಯದಲ್ಲಿ ರಾವಣರಿಗೆ ಪ್ರವೇಶ ನೀಡಬಾರದು.
‌‌‌‌ ಗಾಂಧಿಯವರು ನಡೆಸಿದರು ನ್ಯಾಯ, ನೀತಿ, ಸತ್ಯಕ್ಕಾಗಿ ಚಳವಳಿ… ರಾಜಕಾರಣಿಗಳದ್ದು ನ್ಯಾಯ ನೀತಿ ಬದಿಗಿಟ್ಟು ಕೋಟಿ – ಕೋಟಿ ಕಬಳಿಸುವ ಚಾಳಿ! ಇಂತಹ ಜನನಾಯಕರಿಗೆ ನಾವುಗಳೇ ಬೆಂಬಲ ಕೊಟ್ಟರೆ ಮುಂದಿನ ಪೀಳಿಗೆಗೆ ಯಾರು ಮಾದರಿ !? ರಾಜಕೀಯದಲ್ಲಿ ಎರಡು ದಾರಿಗಳು ಒಂದು ನ್ಯಾಯ ಮಾರ್ಗ, ಇನ್ನೊಂದು ವಾಮ ಮಾರ್ಗ ನ್ಯಾಯ ಮಾರ್ಗದಲ್ಲಿ ನಡೆಯುವ, ನಂಬಿಕೆಗೆ ಅರ್ಹತೆ ಇದ್ದವರನ್ನು ಗೆಲ್ಲಿಸೋಣ…ಬೆಂಬಲ ಕೊಡೋಣ ಏನಂತೀರಾ ? ಮತ್ತದೇ ಹಳೆ ರಾಗ ಹಳೆ ಹಾಡು ಅಂತಾಗದೇ ಸಮಾಜದ ಸುಭಿಕ್ಷೆಗಾಗಿ ಎಲ್ಲರೂ ಪಣತೊಡೋಣ.

-ಶೋಭಾ ಮಲ್ಕಿ ಒಡೆಯರ್, ಸಾಹಿತಿ,
ಹೂವಿನ ಹಡಗಲಿ

The post ಉತ್ತಮರನ್ನು ಆರಿಸೋಣ, ಪ್ರಜಾಪ್ರಭುತ್ವ ಬಲಪಡಿಸೋಣ ಲೇಖನ: ಶೋಭ ಮಲ್ಕಿಒಡೆಯರ್, ಸಾಹಿತಿ, ಹೂವಿನ ಹಡಗಲಿ appeared first on Karnataka Kahale.

]]>