The post ವೃತ್ತಿ ಬದ್ಧತೆಯ ಜೈವಿಕ ತಂತ್ರಜ್ಞಾನಿ ಡಾ. ವಿ.ಕೃಷ್ಣ. ಬರಹ: ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಶಂಕರಘಟ್ಟ, ಶಿವಮೊಗ್ಗ appeared first on Karnataka Kahale.
]]>
ವಹಿಸಿದ ಕೆಲಸವನ್ನು ಸಮರ್ಪಕವಾಗಿ ಪೂರೈಸಿದಾಗ ಸೇವೆ ತೃಪ್ತಿಕರ ಎನಿಸುತ್ತದೆ. ಪ್ರತಿಯೊಬ್ಬರು ಸೇವೆಯ ಮಹತ್ವವನ್ನು ತಿಳಿದುಕೊಂಡು ಕಾರ್ಯ ನಿರ್ವಹಿಸಬೇಕು’ .
ಮಾಡುವ ಕಾರ್ಯವು ಸಮಾಜಕ್ಕೆ ಮಾದರಿಯಾಗುತ್ತದೆ. ಅವರು ಸದಾ ಸ್ಮರಣೀಯರಾಗಿರುತ್ತಾರೆ.
ಜೀವನದ ಸ್ವಾರಸ್ಯವನ್ನು ಪೂರ್ಣವಾಗಿ ಅರಿಯದಿದ್ದರೆ ನಮ್ಮ ಬದುಕು ಗೋಳಾಟಾಗುತ್ತದೆ. ಜೀವನದ ಸವಿಯನ್ನು ಕಾಣುವ ಕಲೆಯನ್ನು ನಾವು ರೂಢಿಸಿಕೊಳ್ಳಬೇಕು. ಔಚಿತ್ಯಪೂರ್ಣವಾಗಿ ಜೀವಿಸದಿದ್ದರೆ ಬದುಕು ಸತ್ತಂತೆ. ಸತ್ತರು ಬದುಕಿರುವಂತೆ ಸೇವೆ ಮಾಡಿದಾಗ ಈ ಬದುಕು ಸಾರ್ಥಕವಾಗುತ್ತದೆ. ನಿರ್ದಿಷ್ಟವಾದ ಗುರಿಗಳ ಅನುಸರಣೆಯು ವೃತ್ತಿಯಾಗುತ್ತದೆ. ಅರ್ಥಪೂರ್ಣವೃತ್ತಿ ನಿರ್ವಣೆಗೆ ಜೀವನಕೌಶಲ್ಯಗಳು ಬಹುಮುಖ್ಯ. ವೃತ್ತಿ ನಿರತ ವ್ಯಕ್ತಿ ಸಮಾಜ, ಕುಟುಂಬ ಮತ್ತು ಸಹೋದ್ಯೋಗಿಗಳ ಜೊತೆಯಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದರೆ ಮಾತ್ರ ವೃತ್ತಿ ಜೀವನ ಯಶಸ್ವಿಯಾಗುವುದು. ಅಂತಹ ಯಶಸ್ವಿ ವೃತ್ತಿ ಜೀವನ ನಿರ್ವಹಿಸಿ, ನಿವೃತ್ತರಾಗುತ್ತಿರುವ ಡಾ.ವಿ.ಕೃಷ್ಣ ಅವರ ಕುವೆಂಪು ವಿಶ್ವವಿದ್ಯಾಲಯ ಸ್ನಾತಕೋತ್ತರ ಜೈವಿಕತಂತ್ರಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ, 2025ರ ಮೇ31ರಂದು ನಿವೃತ್ತರಾಗುತ್ತಿರುವರು. ಅವರ ವೃತ್ತಿ ಬದುಕು ಆದರ್ಶ ಮತ್ತು ಅನುಕರಣೀಯವಾದುದು.
ಮೂಲತಃ ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆ ಗ್ರಾಮದವರು.
ವೆಂಕಟರಂಗಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಮಗನಾಗಿ 1963ರ ಮೇ 20ರಂದು ಜನಿಸಿದವರು. ಜನಿಸಿ, ಒಂದೂವರೆ ವರ್ಷದಲ್ಲೇ ತಂದೆಯನ್ನು ಕಳೆದುಕೊಂಡ ಕೃಷ್ಣ ಅವರು, ತಾಯಿ, ಸೋದರ ಮಾವಂದಿರರು, ತಾತ ಸಿದ್ದಯ್ಯ, ಅಜ್ಜಿ ಪುಟ್ಟಮ್ಮ ಅವರ ಅಕ್ಕರೆಯ ಮಗುವಾಗಿ ಬೆಳೆದವರು. ರೇಷ್ಮೆ ಗೂಡಿನ ಕಾಯಕದಲ್ಲಿ ನಿರತರಾಗಿದ್ದ ತಮ್ಮ ಮನೆ ಯವರ ಜೊತೆಗೂಡಿ ಕೂಲಿಕೆಲಸ ಕೂಡ ಮಾಡಿದವರು. ಮಗನ ಬೆಳೆಸುವುದರಲ್ಲಿಯೇ ತನ್ನ ನೋವನ್ನೆಲ್ಲ ಮರೆತ ಲಕ್ಷ್ಮಮ್ಮ ಅವರು ಕೃಷ್ಣ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದವರು. ತೊಂಬತ್ತರ ವಯೋಮಾನದಲ್ಲೂ ಕೂಡ ಮಗನಿಗೆ ಪ್ರೀತಿಯಿಂದ ಅಡುಗೆ ಮಾಡಿ, ತುತ್ತು ಉಣಿಸುವರು. ತಾಯಿಯನ್ನು ದೇವರೆಂದು ಗೌರವಿಸುವ ಮಗ, ಮಗನೇ ನನ್ನ ಎಲ್ಲ ಸರ್ವಸ್ವವೆನ್ನುವ ತಾಯಿಯ ಮಮತೆ ಅನನ್ಯವಾದುದು.

ಕೃಷ್ಣ ಅವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದರು. ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸಿಂಗನಲ್ಲೂರಿನಲ್ಲಿ ಪಡೆದರು. ಕೊಳ್ಳೆಗಾಲದಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಸ್ನಾತಕೋತ್ತರ ಮತ್ತು ಪಿಎಚ್.ಡಿ..ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದವರು. ಗುರುಗಳಿಗೆ ಬಂಧುಗಳಿಗೆ ಅಚ್ಚುಮೆಚ್ಚಿನವರಾಗಿದ್ದವರು. ಮಾವಂದಿರರ ಅನುಪಮ ಪ್ರೀತಿಗೆ ಪಾತ್ರರಾದವರು.
ಸರ್ಕಾರಿ ಪ್ರೌಢಶಾಲಾ ಅಧ್ಯಾಪಕರಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮದಲ್ಲಿ ವೃತ್ತಿ ಜೀವನ ಆಭಿಸಿದವರು. ಯುಜಿಸಿ ಫೆಲೋ ಶಿಪ್ ಪಡೆದು, ಪ್ರೊ.ಶಾಂತಮ್ಮ ಅವರ. ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ಪಿಎಚ್.ಡಿ.ಪದವಿ ಪಡೆದವರು.
1990ರಲ್ಲಿ ಚಿತ್ರದುರ್ದದಲ್ಲಿ ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡರು. 1996ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಸದಾ ಸಂಶೋಧನೆ, ಬೋಧನೆಯಲ್ಲಿ ನಿರತರಾಗಿದ್ದ ಕೃಷ್ಣ ಅವರು ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿಗಳ ಹೃನ್ಮನವನ್ನು ಗೆದ್ದವರು. ಜನಪದ ಹಾಡುಗಾರರು ಆದ ಕೃಷ್ಣ ಅವರು ಮನತುಂಬಿ ಹೃದಯ ತುಂಬಿ ಪಾಠ ಮಾಡುವಲ್ಲಿ ಸಂತಸ ಸವಿದವರು. ಐವತ್ಮೂರು ಪಿಎಚ್.ಡಿ.ಸಂಶೋಧನಾರ್ಥಿಗಳಿಗೆ ಯಶಸ್ವಿ ಮಾರ್ಗದರ್ಶಕರಾಗಿರುವರು. ಔಷಧಿಸಸ್ಯಗಳ ಅಂಗಾಂಶಗಳ ಅಭಿವೃದ್ಧಿ ಕುರಿತು ಸಂಶೋಧನೆ ಮಾಡಿ, ಯಶಸ್ವಿಯಾದವರು. ದಾವಣಗೆರೆ ಜಿಲ್ಲೆಯ ಸಸ್ಯ ಪ್ರಬೇಧಗಳ ಕುರಿತು ಸಂಶೋಧನೆ ಮಾಡಿದವರು. ಸುಮಾರು ಆರು ಕೋಟಿ ಮೊತ್ತದ ಒಂಬತ್ತು ಪ್ರಧಾನ ಸಂಶೋಧನಾ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾದವರು. ಹಸನ್ಮುಖಿ ಕೃಷ್ಣ ಅವರು ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ವಿಜ್ಞಾನ ನಿಕಾಯದ ಡೀನರಾಗಿ, ಸಿ.ಡಿ.ಸಿ., ಐ.ಕ್ಯು.ಎ.ಸಿ.ನಿರ್ದೇಶಕರಾಗಿ, ವಿಭಾಗದ ಮುಖ್ಯಸ್ಥರಾಗಿ,ಬಿ.ಒ.ಎಸ್. , ಬಿ.ಒ.ಇ.ಅಧ್ಯಕ್ಷರಾಗಿ, ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಸಲ್ಲಿಸಿರುವ ಸೇವೆಯು ಅನನ್ಯವಾದುದು.
ರಾಷ್ಟ್ರದ ವಿವಿಧ ವಿಶ್ವವಿದ್ಯಾಲಯಗಳ ವಿವಿಧ ಸಮಿತಿಗಳ ಸದಸ್ಯರಾಗಿ ಅನುಪಮ ಸೇವೆಯನ್ನು ಸಲ್ಲಿಸಿರುವರು. ಅಂತರ್ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದವರು. ಉತ್ತಮ ಸಂಘಟಕರು.
ನಾಲ್ಕು ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿರುವ ಕೃಷ್ಣ ಅವರ ಮುನ್ನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಅಂತರ್ ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಂಗ್ಲೇಂಡಿನ ಪ್ಯಾಲೇಸ್ ಅವಾರ್ಡ್, ಇಂಡಿಯನ್ ಡ್ರಗ್ ಮ್ಯನಪ್ಯಕ್ಚರ್ ಅವಾರ್ಡ್, ಬೆಸ್ಟ್ ರಿಸರ್ಚ್ ಪೇಪರ್ ಅವಾರ್ಡ್ ಮೊದಲಾದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿರುವ ಡಾ.ಕೃಷ್ಣ ಅವರು ಅಂಬೇಡ್ಕರ್ ಅವರ ಬರಹ ಮತ್ತು ವಿಚಾರಗಳಿಂದ ಪ್ರೇರಿತರಾಗಿ ಅಧ್ಯಯನ ಮೂಲಕವೇ ತಮಗಾದ ಅವಮಾನ ಅಗೌರವಗಳನ್ನು ಓದುವುದರ ಮೂಲಕ ರೋಷ-ದ್ವೇಷವನ್ನು ತೀರಿಸಿಕೊಂಡವರು. ಅಸಹಾಯಕರಿಗೆ ತಮ್ಮ ಆದ ಸಹಾಯವನ್ನು ಮಾಡುತ್ತಿರುವರು. ಅವರ ವಿವೇಚನೆ, ವಿವೇಕ, ವಿಚಾರಗಳು ಅಪ್ಯಾಯಮಾನವಾದವುಗಳು. ಸ್ನೇಹಜೀವಿ ಕೃಷ್ಣ ಅವರು ಸಮಸಮಾಜದ ನಿರ್ಮಾಣದ ಕನಸ್ಸುಗಾರರು.
ತಮ್ಮ ವಿದ್ಯಾರ್ಥಿಸಮೂಹಕ್ಕೆ ನೀತಿನಿಯತ್ತಿನ ಬದುಕಿನ ಸಾರವನ್ನು ಬೋಧಿಸಿದವರು. ಸಂಕಷ್ಟದ ಬದುಕಿನಲ್ಲಿ ಸಾಧನೆ ಮಾಡಿದವರು. ನೋಂದಬೆಂದವರ ಬಗ್ಗೆ ಅಪಾರ ಕಾಳಜಿಯ ಕೃಷ್ಣ ಅವರು ಬಡತನದ ಬೆಗೆಯಲ್ಲೂ ಬೆರಗಾಗುವಂತೆ ಬೆಳೆದವರು. ಒಂಬತ್ತು ಸಾವಿರದ ನಾಲ್ಕುನೂರ ಇಪ್ಪತ್ಮೂರು ಸೈಟೇಶನ್ ಪಡೆದಿರುವ ಶ್ರೀಯುತರು ಮೂರು ಪೇಟೆಂಟ್ ಪಡೆದಿರುವ ಅಪೂರ್ವ ಪ್ರತಿಭಾವಂತರು.ಜಗತ್ತಿನ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಸ್ಮರಣೀಯವಾದ ಕೊಡುಗೆ ನೀಡಿರುವ ಕೃಷ್ಣ ಅವರ ಜೀವನ ಮತ್ತು ಸಾಧನೆಯು ಆದರ್ಶ ಮತ್ತು ಅನುಕಣೀಯವಾಗಲು ಅವರ ವೃತ್ತಿ ಭದ್ದತೆಯು ಕಾರಣವಾಗಿದೆ. ಸದಾ ಕ್ರಿಯಾಶೀಲರಾಗಿರುವ ಅವರ ಸಾಧನೆಯು ಯುವಸಮೂದಯಕ್ಕೆ ಮಾದರಿಯಾದುದು. ಇನ್ನೂ ನೂರ್ಮಡಿಯಾಗಿ ಸಾಧನೆ ಸಾಗಲಿ.

-ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್
ಪ್ರಾಧ್ಯಾಪಕರು ಮತ್ತು ನಿರ್ದೇಶಕರು, ಕನ್ನಡಭಾರತಿ.
ನಿರ್ದೇಶಕರು, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ. ಕುವೆಂಪು ವಿಶ್ವವಿದ್ಯಾಲಯ
ಜ್ಞಾನ ಸಹ್ಯಾದ್ರಿ, ಶಂಕರಘಟ್ಟ..
—–
The post ವೃತ್ತಿ ಬದ್ಧತೆಯ ಜೈವಿಕ ತಂತ್ರಜ್ಞಾನಿ ಡಾ. ವಿ.ಕೃಷ್ಣ. ಬರಹ: ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಶಂಕರಘಟ್ಟ, ಶಿವಮೊಗ್ಗ appeared first on Karnataka Kahale.
]]>The post ಸುಸ್ಥಿರ ಭವಿಷ್ಯ ರೂಪಿಸಲು ನವೀಕರಿಸಬಹುದಾದ ಇಂಧನಗಳ ಬಳಕೆಯ ಅಗತ್ಯ. -ಡಾ. ಯು. ಶ್ರೀನಿವಾಸ ಮೂರ್ತಿ appeared first on Karnataka Kahale.
]]>
ಬಳ್ಳಾರಿ, ಏ.26: ಸುಸ್ಥಿರ ಭವಿಷ್ಯ ರೂಪಿಸಲು ನವೀಕರಿಸಬಹುದಾದ ಇಂಧನಗಳ ಬಳಕೆಯ ಅಗತ್ಯತೆ ಇಂದು ಜರೂರಾಗಿದೆ ಎಂದು ವಿಜ್ಞಾನ ಸಾಹಿತ್ಯ ಲೇಖಕ ಡಾ.ಯು.ಶ್ರೀನಿವಾಸ ಮೂರ್ತಿ ಅವರು ಪ್ರತಿಪಾದಿಸಿದರು.
ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಜ್ಞಾನ – ವಿಜ್ಞಾನ ಸಮಿತಿ ಸಹಯೋಗದೊಂದಿಗೆ ಏರ್ಪಡಿಸಿದ್ದ “ವಿಶ್ವ ಭೂಮಿ ದಿನಾಚರಣೆ ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದರು. 2030 ರ ವೇಳೆಗೆ ಸೌರಶಕ್ತಿ, ಪವನಶಕ್ತಿ,ಉಬ್ಬರವಿಳಿತ, ಭೂಶಾಖ ಮತ್ತು ಜಲಶಕ್ತಿಯಂತಹ ಪುನರ್ ನವೀಕರಣ ಶಕ್ತಿಗಳನ್ನು ಹೆಚ್ಚೆಚ್ಚು ಬಳೆಸುತ್ತಾ ಭೂಮಿಯ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಭೂಮಿಯ ಮೇಲೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಇದಕ್ಕೆಲ್ಲ ಕಾರಣ ನಾವು ಬಳೆಸುವ ವಾಹನಗಳು, ಕಾರ್ಖಾನೆಗಳು, ರಾಸಾಯನಿಕ ಗೊಬ್ಬರಗಳು ಮೊದಲಾದವು ಭೂಮಿಯ ಮೇಲೆ ಕಾರ್ಬನ್ ಪ್ರಮಾಣ ಹೆಚ್ಚಿಸುತ್ತಿವೆ,ಇದರಿಂದ ಕಾರ್ಬನ್ ಡೈಆಕ್ಸೈಡ್ ಹೆಚ್ಚಾಗಿ ಭೂಮಿಯ ಮೇಲೆ ಬಿಸಿ ಹೆಚ್ಚಾಗಿದೆ. ಇದು ಜೀವಸಂಕುಲದ ನಾಶಕ್ಕೆ ಸಂಚಕಾರ ತರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗತಿಕ ತಾಪಮಾನದಿಂದಾಗಿ ಋತುಗಳು ಅಕಾಲಿಕವಾಗಿವೆ, ಮಳೆ ಅತಿಯಾಗಿ ಬಿದ್ದು ನೆರೆ ಉಂಟಾಗುತ್ತಿದೆ.ಮತ್ತೊಂದು ಕಡೆ ಬರ ಉಂಟಾಗುತ್ತಿದೆ ಎಂದರು. ಬರ ಎಂದರೆ ನೀರು ಇಲ್ಲದಿರುವಿಕೆ,ಇದು ಗಾಳಿಯಲ್ಲಿನ ನೀರು ಬಿಸಿಯಾಗಿ ಬಿಸಿ ಅಲೆಗಳನ್ನು ಸೃಷ್ಟಿಸುತ್ತದೆ.ಬಿಸಿ ಅಲೆಗಳು ಜೀವಸಂಕುಲದ ಬದುಕಿಗೆ ಮಾರಕವಾಗಿ ಪರಿಣಮಿಸಲಿವೆ ಎಂದುಬಹೇಳಿದರು.
ಮುಖ್ಯ ಅತಿಥಿ ಗುರುಸಿದ್ದಮೂರ್ತಿ ಯವರು ಮಾತನಾಡಿ ರೈತರ ಮಕ್ಕಳು ತಮ್ಮದೇ ಕ್ಷೇತ್ರದಲ್ಲಿ ಸಂಶೋಧನೆ ಮಾಡುವಂತಾಗಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಅದ್ಯಕ್ಷತೆ ವಹಿಸಿದ್ದ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಮೋನಿಕಾ ರಂಜನ್ ಅವರು ಮಾತನಾಡಿ, ವಿಜ್ಞಾನದ ಕಲಿಕೆ ಸರಳ ಅನಿಸದಿರಬಹುದು ಆದರೆ ಅವಕಾಶಗಳು ಹೆಚ್ಚು ಮತ್ತು ಮನುಷ್ಯರಲ್ಲಿ ವೈಚಾರಿಕತೆ ಮೂಡಿಸುತ್ತದೆ ಎಂದು ತಿಳಿಸಿದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಎಸ್ ಪ್ರಾಸ್ತಾವಿಕ ಮಾತುಗಳಾಡಿದರು. ವಿಜ್ಞಾನ ಶಿಕ್ಷಕ ಎಸ್ ಎಂ.ಹಿರೇಮಠ ಹಾಡಿದ ವೈಜ್ಞಾನಿಕ ಜಾಗೃತಿ ಗೀತೆಗಳು ವಿದ್ಯಾರ್ಥಿಗಳನ್ನು ರಂಜಿಸುವುದರ ಜೊತೆಗೆ ಜಾಗೃತಿ ಮೂಡಿಸಿದವು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಶಾಲಿನಿ.ವಿ., ಡಾ. ಶಿಲ್ಪಾ ಕುಲ್ಕರ್ಣಿ ಉಪಸ್ಥಿತರಿದ್ದರು
ಬಿ.ಎಸ್ಸಿ ಮೊದಲ ವರ್ಷದ ವಿದ್ಯಾರ್ಥಿನಿ ಹರಿಪ್ರಿಯ ಸ್ವಾಗತಿಸಿದರು. ವಿದ್ಯಾರ್ಥಿನಿ ಯು. ಅಫೀಯಾ ನಿರೂಪಿಸಿ ವಂದಿಸಿದರು. ಬಿ.ಎಸ್ಸಿ ಮೊದಲ ವರ್ಷದ ನೂರಾರು ವಿದ್ಯಾರ್ಥಿಗಳು ಇದ್ದರು.
The post ಸುಸ್ಥಿರ ಭವಿಷ್ಯ ರೂಪಿಸಲು ನವೀಕರಿಸಬಹುದಾದ ಇಂಧನಗಳ ಬಳಕೆಯ ಅಗತ್ಯ. -ಡಾ. ಯು. ಶ್ರೀನಿವಾಸ ಮೂರ್ತಿ appeared first on Karnataka Kahale.
]]>The post ವಿಜ್ಞಾನದ ಬೆಳವಣಿಗೆಯಿಂದ ಮಾತ್ರ ದೇಶದ ಸರ್ವತೋಮುಖ ಪ್ರಗತಿ -ಸಿ.ಎಂ ಸಿದ್ದರಾಮಯ್ಯ appeared first on Karnataka Kahale.
]]>
ಬೆಂಗಳೂರು, ಸೆ. 26: ವಿಜ್ಞಾನದ ಬೆಳವಣಿಗೆಯಿಂದ ಮಾತ್ರ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಭಾರತೀಯ ವಿಜ್ಞಾನ ಮಂದಿರ ಸಂಸ್ಥೆಯ (IISC) ಜೆ.ಎನ್.ಟಾಟಾ ಸಭಾಂಗಣದಲ್ಲಿ ನಡೆದ ಅಭೂತಪೂರ್ವ ಕಾರ್ಯಕ್ರಮದಲ್ಲಿ 2022 ಮತ್ತು 2023 ನೇ ಸಾಲಿನ ವಿಜ್ಞಾನಿ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳ ಸಾಧನೆ ಯುವ ಪೀಳಿಗೆಗೆ ಆದರ್ಶ. ಇವರ ಸಾಧನೆ ವಿಜ್ಞಾನ-ತಂತ್ರಜ್ಞಾನದಲ್ಲಿ ಯುವ ಪೀಳಿಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲ ಆಗುತ್ತದೆ ಎಂದು ಶ್ಲಾಘಿಸಿದರು.
ಸಿ.ಎನ್.ರಾವ್ ಅವರ ಸಾಧನೆ ಇಡಿ ಮನುಷ್ಯ ಕುಲದ ಹೆಮ್ಮೆ. ವಿಜ್ಞಾನದ ಬೆಳವಣಿಗೆಗೆ ಇವರ ತುಡಿತ ಶ್ಲಾಘನೀಯ. ಕರ್ನಾಟಕ ರಾಜ್ಯ ವಿಜ್ಞಾನ-ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ನಂಬರ್ ಒನ್ ಇದ್ದೇವೆ. ಈ ವಿಜ್ಞಾನ ತಂತ್ರಜ್ಞಾನದ ಫಲ ಜನ ಸಾಮಾನ್ಯರಿಗೆ ತಲುಪಬೇಕು ಎಂದು ಆಶಿಸಿದರು. ಬೆಂಗಳೂರು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಆಗಿದೆ ಎಂದರೆ ಇದರಲ್ಲಿ ಹಲವು ವಿಜ್ಞಾನಿಗಳ, ತಂತ್ರಜ್ಞರ ಕೊಡುಗೆ ಇದೆ ಎಂದರು. ವಿಜ್ಞಾನದ ಆಸಕ್ತಿ ಹೆಚ್ಚಿ, ವಿಜ್ಞಾನಿಗಳ ಸಂಖ್ಯೆ ಹೆಚ್ಚಾದರೆ ದೇಶದ ಬೆಳವಣಿಗೆ ಸಾಧ್ಯ. ಸಮಾಜದ ತಾರತಮ್ಯ ಅಳಿಯಬೇಕಾದರೆ ಎಲ್ಲಾ ಜಾತಿ, ಧರ್ಮ, ವರ್ಗಗಳಿಗೆ ಸಮಾನ ಅವಕಾಶಗಳು ಸಿಗುವಂತಾಗಬೇಕು ಎಂದರು. ಗ್ರಾಮೀಣ ಭಾಗದ ಹಲವರು ವಿಜ್ಞಾನಿಗಳಾಗಿ ಪ್ರಶಸ್ತಿ ಪುರಸ್ಕೃತರಾಗಿರುವುದು ಖುಷಿಯ ವಿಚಾರ.
ಪ್ರತಿಭೆ ಅನುವಂಶೀಯ ಅಲ್ಲ. ಅವಕಾಶ ಮತ್ತು ನಿರಂತರ ಶ್ರಮದಿಂದ ಪ್ರತಿಭೆ ವಿಸ್ತಾರಗೊಳ್ಳುತ್ತದೆ ಎಂದರು. ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್ , ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್.ಎಸ್.ಬೋಸರಾಜು ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಬಹಳಷ್ಟು ಆದ್ಯತೆ ನೀಡಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ ಅಭಿವೃದ್ಧಿ ಗೆ ಪೂರಕವಾಗುವ ಹಾಗೂ ರೈತ ಸಮುದಾಯಕ್ಕೆ ನೆರವಾಗುವಂತಹ ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ರೂಪಿಸುವತ್ತ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಮುಂದಾಗಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಹೇಳಿದರು.
The post ವಿಜ್ಞಾನದ ಬೆಳವಣಿಗೆಯಿಂದ ಮಾತ್ರ ದೇಶದ ಸರ್ವತೋಮುಖ ಪ್ರಗತಿ -ಸಿ.ಎಂ ಸಿದ್ದರಾಮಯ್ಯ appeared first on Karnataka Kahale.
]]>The post ಕಟ್ಟಡ ಸಾಮಾಗ್ರಿಗಳ ‘ನಿರ್ಮಾಣ2024’ ಆರಂಭ: ಕಡಿಮೆ ವೆಚ್ಚದ ಮನೆಗಳ ನಿರ್ಮಾಣಕ್ಕೆ ಡಿಸಿ ಪಿಕೆ ಮಿಶ್ರ ಸಲಹೆ appeared first on Karnataka Kahale.
]]>
ಮುಖ್ಯ ಅತಿಥಿ ಜಿಪಂ ಸಿಈಓ ರಾಹುಲ್ ಶರಣಪ್ಪ ಸಂಕನೂರ್ ಮಾತನಾಡಿ, ಈ ಜಿಲ್ಲೆಯಲ್ಲಿ ದ್ವಿತೀಯ ಪಿಯುನಲ್ಲಿ ವಿಜ್ಞಾನ ಅಭ್ಯಾಸ ಮಾಡುವುದು ಕಡಿಮೆ ಇದೆ. ಉತ್ತಮ ಇಂಜಿನೀಯರ್ ಗಳಾಗಲು ವಿಜ್ಞಾನದ ಅಭ್ಯಾಸ ಬೇಕು. ಉತ್ತಮ ತಂತ್ರಜ್ಞಾನದೊಂದಿಗೆ ಕಟ್ಟಡಗಳ ನಿರ್ಮಾಣ ನಿಮ್ಮಿಂದ ಆಗಲಿ ಎಂದು ಆಶಿಸಿದರು. ಅಸೋಸಿಯೇಷನ್ ಅಧ್ಯಕ್ಷ ಹೊಸೂರ್ ಈಶ್ವರಗೌಡ ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಷನ್ ಮಾಜಿ ಅಧ್ಯಕ್ಷ ಸಂಜೀವ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಡಾ. ಡಿ.ಎಲ್. ರಮೇಶ್ ಗೋಪಾಲ್, ಅಸೋಸಿಯೇಷನ್ ಕಾರ್ಯದರ್ಶಿ ಪಿ.ಪ್ರಕಾಶ್, ಜಂಟಿ ಕಾರ್ಯದರ್ಶಿ ರಾಜೀವ್ ಮತ್ತು ಟಿ.ಆರ್.ರಾಕೇಶ್ ಇದ್ದರು. ಜಗದೀಶ್ ಪಾರ್ಥಿಸಿದರು. ಅಗಡಿ ಮಂಜೇಶ್ ಸಾಗತಿಸಿದರು.

ಪ್ರದರ್ಶನ: ಪ್ರದರ್ಶನದಲ್ಲಿ 60 ಸ್ಟಾಲ್ ಗಳಲ್ಲಿ ಪಾಲ್ಗೊಂಡಿದ್ದು ವಿನೂತನ ಬಗೆಯ ಕಟ್ಟಡ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ನಗರದಲ್ಲಿ ಮನೆ ಕಟ್ಟುವ ಜನರಿಗೆ ಇದು ಅನುಕೂಲಕಾರಿಯಾಗಿದೆ. ಗ್ರಾಹಕರಿಗೆ ಮತ್ತು ಕಂಪನಿಗಳಿಗೆ, ಮಾರಾಟಗಾರರಿಗೆ ಕೊಂಡಿಯಾಗಿ ಅಸೋಸಿಯೇಷನ್ ಪ್ರದರ್ಶನ ಆಯೋಜಿಸಿದೆ.
The post ಕಟ್ಟಡ ಸಾಮಾಗ್ರಿಗಳ ‘ನಿರ್ಮಾಣ2024’ ಆರಂಭ: ಕಡಿಮೆ ವೆಚ್ಚದ ಮನೆಗಳ ನಿರ್ಮಾಣಕ್ಕೆ ಡಿಸಿ ಪಿಕೆ ಮಿಶ್ರ ಸಲಹೆ appeared first on Karnataka Kahale.
]]>The post ಜಾಗತಿಕ ಶ್ರೇಷ್ಠ ವಿಜ್ಞಾನಿಗಳ ಪಟ್ಟಿ: ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಈರಯ್ಯ ಅವರಿಗೆ ಸ್ಥಾನ appeared first on Karnataka Kahale.
]]>
ಬೆಂಗಳೂರು: ಅ, 10: 2023 ನೇ ವರ್ಷದ ವಿಶ್ವ ಅಗ್ರಮಾನ್ಯ ಶೇ. 2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಈರಯ್ಯ ಅವರನ್ನು ಆಯ್ಕೆಮಾಡಲಾಗಿದೆ.
ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಮತ್ತು ನೆದರ್ ಲ್ಯಾಂಡಿನ ಎಲ್ಸೆ ವಿಯರ್ ಪ್ರಕಾಶನ ಸಂಸ್ಥೆಯ 2023 ನೇ ಜಾಗತಿಕ ಉನ್ನತ ಮಟ್ಟದ ಶೇ. 2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ (Glass Science and Technology) ಗಾಜಿನ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ಬಿಡುಗಡೆ ಮಾಡಿರುವ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗುರುತಿಸಿ ಕೊಂಡಿದ್ದಾರೆ.
ಪ್ರತಿವರ್ಷ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ, ಶ್ರೇಷ್ಠ ಶೇ. 2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸುತ್ತದೆ.
ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಬಿ. ಈರಯ್ಯ ಅವರು ಅಂತರಾಷ್ಟ್ರೀಯವಾಗಿ ಪ್ರಕಟವಾದ 145 ಸಂಶೋಧನಾ ಪ್ರಕಟಣೆಗಳು,1653 ಸೈಟೇಷನ್, 24 ಹೆಚ್ ಇಂಡೆಕ್ಸ್), 37 ಐ 10 ಇಂಡೆಕ್ಸ್ (i 10-index), (Glass Science and Technology) ಗಾಜಿನ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇವರು 145 ಸಂಶೋಧನಾ ಲೇಖನಗಳನ್ನು
ಪರಿಶೀಲಿಸಿದ ನಂತರ ಜಾಗತಿಕ ಶ್ರೇಷ್ಠದ ಶೇ.2ರಷ್ಟು ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸೇರಿರುವುದು ವಿಶೇಷವಾಗಿದೆ.
The post ಜಾಗತಿಕ ಶ್ರೇಷ್ಠ ವಿಜ್ಞಾನಿಗಳ ಪಟ್ಟಿ: ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಈರಯ್ಯ ಅವರಿಗೆ ಸ್ಥಾನ appeared first on Karnataka Kahale.
]]>The post ಚಂದ್ರಯಾನದ ಸಾಧನೆಯ ಹಿಂದಿನ ಮಹಾ ಪುರುಷರ ಕಥನ -ಜಗದೀಶ ಕೊಪ್ಪ, ಹಿರಿಯ ಪತ್ರಕರ್ತರು, ಮೈಸೂರು appeared first on Karnataka Kahale.
]]>
ಭಾರತದ ಬಾಹ್ಯಾಕಾಶದ ಸಂಸೋಧನೆಯ ಇತಿಹಾಸದಲ್ಲಿ ಈ ತಿಂಗಳು ಅಂದರೆ, ಆಗಸ್ಟ್ 23 ರ ಬುಧವಾರ ಐತಿಹಾಸಿಕವಾಗಿ ಸ್ಮರಣೀಯ ದಿನವಾಯಿತು. ಚಂದ್ರನ ಮೇಲೆ ಇಳಿದ ಆ ಪುಟ್ಟ ಲ್ಯಾಂಡರ್ ನೌಕೆಯ ಹೆಸರು ವಿಕ್ರಮ್ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ, ಈ ಹೆಸರಿನ ಹಿಂದೆ ಒಂದು ಭವ್ಯ ಇತಿಹಾಸವಿದೆ. ಭಾರತದಲ್ಲಿ ಬಾಹ್ಯಾಕಾಶದ ಸಂಶೋಧನೆಯನ್ನು ಆರಂಭಿಸಿದ ವಿಕ್ರಮ್ ಸಾರಾಬಾಯ್ ಅವರ ಹೆಸರನ್ನು ಈ ನೌಕೆಗೆ ಇಡಲಾಗಿತ್ತು.
1971 ರ ಡಿಸಂಬರ್ ತಿಂಗಳಿನಲ್ಲಿ ಕೇರಳದ ತಿರುವನಂತಪುರಕ್ಕೆ ಆಗಮಿಸಿದ್ದ ವಿಕ್ರಮ್ ಸಾರಾಬಾಯ್ ಅವರು ಎಸ್.ಎಲ್.ವಿ. -2 ಉಡಾವಣೆ ಕುರಿತಂತೆ ವಿಜ್ಞಾನಿಗಳ ಜೊತೆಗೆ ಚರ್ಚೆ ನಡೆಸಿದ ನಂತರ ಬಾಹ್ಯಾಕಾಶ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜೊತೆಗೆ ದೂರವಾಣಿಯಲ್ಲಿ ಮಾತನಾಡಿ ಅವರಿಂದ ಮಾರ್ಗದರ್ಶನ ಪಡೆದು ವಾಪಸ್ ಮುಂಬೈ ನಗರಕ್ಕೆ ತೆರಳಲು ಸಿದ್ಧರಾಗುತ್ತಿದ್ದಾಗ ಹೃದಯಾಘಾತದಿಂದ ತಿರುವಂತಪುರದಲ್ಲಿ ನಿಧನರಾದರು.
ವಿಕ್ರಮ್ ಸಾರಾಬಾಯ್ ನಿಧನರಾದಾಗ ಅವರ ವಯಸ್ಸು ಕೇವಲ 52 ವರ್ಷ. ಕಾಕತಾಳಿಯವೆಂದರೆ, ಅವರು ನಿಧನರಾದ 52 ವರ್ಷದ ನಂತರದ ಈ ಸಂಧರ್ಭದಲ್ಲಿ ಅವರು ಕಂಡಿದ್ದ ಕನಸು ನೆನಸಾಗಿದೆ. ಅವರ ಅಧ್ಯಯನದ ಮಾರ್ಗದರ್ಶನದಲ್ಲಿ ನಡೆದು ಬಂದ ನಮ್ಮ ಭಾರತದ ಇಂದಿನ ವಿಜ್ಞಾನಿಗಳು ಅವರ ಮಹದಾಸೆಯನ್ನು ಪೂರೈಸುವುದರ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ಬಾಹ್ಯಾಕಾಶ ವಿಜ್ಞಾನ ಕ್ರೇತ್ರದಲ್ಲಿ ಭಾರತದ ಸ್ಥಾನವನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ವಿಕ್ರಮ್ ಸಾರಾಬಾಯ್ ಅವರ ಕುಟುಂಬದ ಹಿನ್ನಲೆ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಅವರು ತೊಡಗಿಸಿಕೊಂಡಿರುವ ವೈಖರಿ ನಿಜಕ್ಕೂ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹದ್ದು. ಇವರ ತಂದೆ ಅಂಬಾಲಾಲ್ ಸಾರಾಬಾಯ್ ಅವರು 1900 ರ ದಶಕದಲ್ಲಿ ಅಹಮದಾಬಾದ್ ನಗರದಲ್ಲಿ ಪ್ರಸಿದ್ಧ ಗಿರಣಿ ಮಾಲಿಕರು. ಗಾಂಧೀಜಿಯವರ ನಂಬಿಕೆ ಮತ್ತು ಹೋರಾಟಗಳಿಗೆ ಆತ್ಮ ವಿಶ್ವಾಸವನ್ನು ತುಂಬಿದವರು. 1915 ರಲ್ಲಿ ಅಹಮದಾಬಾದಿನ ಹೊರವಲಯದ ಸಬರಮತಿ ನದಿಯ ದಂಡೆಯಲ್ಲಿ ಗಾಂಧೀಜಿಯವರು ಆಶ್ರಮವನ್ನು ಸ್ಥಾಪಿಸಿ, ಹರಿಜನ ಕುಟುಂಬವೊಂದನ್ನು ಆಶ್ರಮಕ್ಕೆ ಸೇರಿಸಿಕೊಂಡಾಗ ಅವರ ಸಹೋದರಿಯರು ಆಶ್ರಮವನ್ನು ತ್ಯೆಜಿಸಿದರು. ನಂತರ ಇತರೆ ಆಶ್ರಮವಾಸಿಗಳು ಸಹ ಭೋಜನ ವ್ಯವಸ್ಥೆಯನ್ನು ಧಿಕ್ಕರಿಸಿದಾಗ ಹಾಗು ಇತರೆ ಸಮಾಜದ ಗಣ್ಯರು ಆಶ್ರಮದಿಂದ ದೂರ ಉಳಿದಾಗ ಗಾಂಧೀಜಿಯವರು ದೃತಿಗೆಡಲಿಲ್ಲ.
ಆಶ್ರಮದ ಭೂಮಿಯಲ್ಲಿ ದುಡಿದು ತಿನ್ನೋಣ ಎಂದು ಬಾಪು ನಿರ್ಧರಿಸಿದ್ದಾಗ ಒಂದು ದಿನ ತಡರಾತ್ರಿ ಕಾರಿನಲ್ಲಿ ಆಶ್ರಮದ ಗೇಟಿನ ಬಳಿಗೆ ಆಗಮಿಸಿದ ಅಂಬಲಾಲ್ ಸಾರಾಬಾಯ್ ಗಾಂಧೀಜಿಯವರನ್ನು ಕರೆಸಿಕೊಂಡು ಅವರ ಕೈಗೆ ಹದಿಮೂರು ಸಾವಿರ ರೂಪಾಯಿ ಹಣವನ್ನಿತ್ತು, ಈ ವಿಷಯ ಹೊರಜಗತ್ತಿಗೆ ತಿಳಿಯುವುದು ಬೇಡ ಎಂದು ತಾಖೀತು ಮಾಡಿ ಹೋದರು. ಸುಮಾರು ಮುವತ್ತು ಮಂದಿ ಆಶ್ರಮವಾಸಿಗಳು ಇದ್ದ ಸಬರಮತಿ ಆಶ್ರಮಕ್ಕೆ ಒಂದು ವರ್ಷ ಕಾಲ ಯಾವುದೇ ಆರ್ಥಿಕ ಕೊರತೆ ಕಾಡಲಿಲ್ಲ. ಈ ಹಿನ್ನಲೆಯಲ್ಲಿ ಆಶ್ರಮದಲ್ಲಿ ಚರಕದಿಂದ ನೂಲು ತೆಗೆಯುವ ಯೋಜನೆಗೆ ಗಾಂಧೀಜಿ ಚಾಲನೆಯಿತ್ತರು. ಅವರ ಸ್ವದೇಶಿ ಚಿಂತನೆಗೆ ಅಂಬಾಲಾಲ್ ಸಾರಾಬಾಯ್ ಬೆಂಬಲವಾಗಿ ನಿಂತರು.

ಅಂಬಾಲಾಲ್ ಸಾರಾಬಾಯ್ ಅವರ ಕಿರಿಯ ಸಹೋದರಿ ಅನುಸೂಯಾ ಬೆಹನ್ ಅವರು 1916 ರಲ್ಲಿ ಇಂಗ್ಲೇಂಡಿನ ಲಂಡನ್ ನಗರದ ‘’ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಬಂದು ಅಹದಾಬಾದ್ ಜವಳಿ ಗಿರಣಿಗಳಲ್ಲಿ ದುಡಿಯುತ್ತಿದ್ದ ಮಹಿಳಾ ಕಾರ್ಮಿಕರ ಪರವಾಗಿ ಹೋರಾಡಿ 1920 ರಲ್ಲಿ ಭಾರತದಲ್ಲಿ ಪ್ರಥಮವಾಗಿ ಮಹಿಳಾ ಕಾರ್ಮಿಕ ಒಕ್ಕೂಟವನ್ನು ಸ್ಥಾಪಿಸಿದ ಮಹಾನ್ ಹೋರಾಟಗಾರ್ತಿ ಎಂದು ಹೆಸರಾದವರು. ಇಂತಹ ಕುಟುಂಬದಲ್ಲಿ 1919 ರಲ್ಲಿ ಜನಿಸಿದ ವಿಕ್ರಮ್ ಸಾರಾಬಾಯ್ ಅಹಮದಾಬಾದಿನಲ್ಲಿ ವಿಜ್ಞಾನದಲ್ಲಿ ಪದವಿ ಮುಗಿಸಿ ನಂತರ ಇಂಗ್ಲೇಂಡಿನ ಕೇಬ್ರಿಡ್ಕ್ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸೂರ್ಯನ ವಿಕಿರಣ ಕುರಿತ ಸಂಶೋಧನೆಗೆ ಡಾಕ್ಟರೇಟ್ ಪದವಿ ಗಳಿಸಿ ಭಾರತಕ್ಕೆ ಹಿಂತಿರುಗಿ ಸಂತೋಧನೆಯಲ್ಲಿ ತೊಡಗಿಸಿಕೊಂಡರು’ ಇಂದಿಗೂ ನಾವು ಅಹಮದಾಬಾದಿನ ಕೇಂದ್ರಸ್ಥಳವಾದ ಲಾಲ್ ದರ್ವಾಜ ಬಳಿ ಸಾರಾಬಾಯ್ ಕುಟುಂಬದ ಕಚೇರಿಗಳನ್ನು ನಾವು ನೋಡಬಹುದಾಗಿದೆ. ( ಸಿದ್ಧಾರ್ಥ ಕಾಲೇಜ್ ಸಮೀಪ)
ವಿಕ್ರಮ್ ಸಾರಾಬಾಯ್ ಅವರಿಗೆ ನಮ್ಮ ಬೆಂಗಳೂರಿನ ಕನ್ನಡಿಗ ಡಾ,ಸರ್.ಸಿ.ವಿ. ರಾಮನ್ ಅವರು ಪಿ.ಹೆಚ್.ಡಿ. ಪದವಿಗೆ ಮಾರ್ಗದರ್ಶಕರಾಗಿದ್ದರು. ಮುಂದಿನ ದಿನಗಳಲ್ಲಿ ಗುರುವಿನಿಂದ ಕಲಿತ ಜ್ಞಾನವನ್ನೆಲ್ಲಾ ವಿಕ್ರಮ್ ಸಾರಾಬಾಯ್ ಅವರು ಮತ್ತೊಬ್ಬ ಕನ್ನಡಿಗ ಹಾಗೂ ಶಿಷ್ಯ ಡಾ.ಯು.ಆರ್. ರಾವ್ ( ಉಡುಪಿ ರಾಮಚಂದ್ರರಾವ್) ಅವರಿಗೆ ಧಾರೆ ಎರೆದರು. ಜೈನ ಸಮುದಾಯಕ್ಕೆ ಸೇರಿದ ವಿಕ್ರಮ ಸಾರಾಬಾಯ್ ಅವರು ಮೃಣಾಲಿನಿ ಎಂಬ ಖ್ಯಾತ ನೃತ್ಯ ಕಲಾವಿದೆಯನ್ನು ವಿವಾಹವಾಗಿದ್ದರು. ಇವರ ಪುತ್ರಿ ಮಲ್ಲಿಕಾ ಸಾರಾಬಾಯ್ ಕೂಡಾ ಪ್ರಸಿದ್ಧ ನೃತ್ಯಗಾತಿ ಹಾಗೂ ಕಲಾವಿದೆಯಾಗಿ ಹೆಸರು ಮಾಡಿದ್ದಾರೆ. ಮತ್ತೊಬ್ಬ ಪುತ್ರ ಕಾರ್ತಿಕೇಯ ಸಾರಾಬಾಯ್ ಪ್ರಸಿದ್ಧ ಪರಿಸರ ವಿಜ್ಞಾನಿಯಾಗಿ ಗುರುತಿಸಿಕೊಂಡಿದ್ದಾರೆ.
ಭಾರತದ ಬಾಹ್ಯಾಕಾಶ ವಿಜ್ಞಾನದಲ್ಲಿ ವಿಕ್ರಮ್ ಸಾರಾಬಾಯ್ ಮತ್ತು ಸತೀಶ್ ದಾವನ್ ರಂತಹ ಕೆಲವೇ ಕೆಲವು ವಿಜ್ಞಾನಿಗಳನ್ನು ಹೊರತು ಪಡಿಸಿದರೆ ಇಂದಿಗೂ ಸಹ ಸಂಸ್ಥೆಯ ಅರವತ್ತು ವರ್ಷಗಳ ಇತಿಹಾಸದಲ್ಲಿ ದಕ್ಷಿಣ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ವಿಕ್ರಮ್ ಸಾರಾಬಾರ್ ನಿಧನಾನಂತರ ಎಂಜಿಕೆ ಮೆನನ್ ಮುಖ್ಯಸ್ಥರಾಗಿದ್ದರು.ಆನಂತರ ಕಾಶ್ಮೀರ ಮೂಲದ ಸತೀಶ್ ದಾವನ್ ಮುಖ್ಯಸ್ಥರಾಗಿ ಇಸ್ರೊ ಕೆಂದ್ರವನ್ನು ಬೆಂಗಳೂರಿಗೆ ವರ್ಗಾಯಿಸಿದರು. ಇವರ ನಂತರ ಡಾ.ಯು.ಆರ್.ರಾವ್, ನಾಯಕ್, ರಾಧಾಕೃಷ್ಣನ್, ಡಾ.ಕೆ.ಶಿವನ್ ಹಾಗೂ ಈಗಿನ ಎಸ್.ಸೋಮನಾಥ್ ಹೀಗೆ ಹೆಸರಿಸಬಹುದು.
ಕೇಂದ್ರ ಸರ್ಕಾರವು ಇಸ್ರೋ ಸಂಸ್ಥೆಯ ವಿಜ್ಞಾನಿಗಳನ್ನು ಮತ್ತು ಅಲ್ಲಿನ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಅಥವಾ ಇಸ್ರೊ ಸಂಸ್ಥೆ ಕೇಂದ್ರ ಸರ್ಕಾರದ ಅಂಗಸಂಸ್ಥೆ ಎಂದು ನೋಡುವ ದೃಷ್ಟಿಕೋನವನ್ನು ಈಗಲಾದರೂ ಬದಿಗಿರಿಸಿ ಅದಕ್ಕೆ ವಿಶೇಷ ಸ್ಥಾನಮಾನ ನೀಡಬೇಕಾಗಿದೆ. ಅಮೇರಿಕಾದ ನಾಸಾ ಸಂಸ್ಥೆಯಲ್ಲಿ ಮತ್ತು ಇಂಗ್ಲೇಂಡ್ ಮತ್ತು ಅಮೇರಿಕಾದ ವೈದ್ಯಕೀಯ ರಂಗದಲ್ಲಿ ಇರುವ ಬಹುತೇಕ ಪ್ರಸಿದ್ಧ ತಜ್ಞರು ಭಾರತೀಯರು ಎಂಬುದನ್ನು ಕೇಂದ್ರ ಸರ್ಕಾರ ಮನಗಾಣಬೇಕು.
ತಂತ್ರಜ್ಞಾನದ ಕ್ಷೇತ್ರದಲ್ಲಿನ ಗೂಗಲ್. ಮೈಕ್ರೊಸಾಪ್ಟ್ ನಂತಹ ನೂರಾರು ಬೃಹತ್ ಕಂಪನಿಗಳ ಪ್ರಮುಖ ಸ್ಥಾನದಲ್ಲಿಯೂ ಸಹ ಭಾರತೀಯ ಮೇಧಾವಿಗಳಿದ್ದಾರೆ. ಇಂತಹ ಪ್ರತಿಭೆಗಳಿಗೆ ದೇಶ ತೊರೆಯದಂತೆ ಮಾಡಲು ಎಲ್ಲಾ ಸವಲತ್ತುಗಳನ್ನು ಇಲ್ಲಿಯೇ ಒದಗಿಸುವ ಕುರಿತು ಭಾರತದ ರಾಜಕಾರಣಿಗಳು ಗಂಭೀರವಾಗಿ ಆಯೋಚಿಸಬೇಕಿದೆ.

-ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು, ಮೈಸೂರು
—–
The post ಚಂದ್ರಯಾನದ ಸಾಧನೆಯ ಹಿಂದಿನ ಮಹಾ ಪುರುಷರ ಕಥನ -ಜಗದೀಶ ಕೊಪ್ಪ, ಹಿರಿಯ ಪತ್ರಕರ್ತರು, ಮೈಸೂರು appeared first on Karnataka Kahale.
]]>