The post ಬಿಜಾಪುರದಲ್ಲಿ ಬುದ್ಧ, ಬಸವ, ಬಾಬಾಸಾಹೇಬ ಡಾ. ಅಂಬೇಡ್ಕರ್ ಚಿಂತನೆಯ ಪುಸ್ತಕ ಮೇಳ ಆಯೋಜಿಸಲು ನಿರ್ಧಾರ appeared first on Karnataka Kahale.
]]>ವಿಜಾಪುರ ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಭಾನುವಾರ ನಡೆದ ಮೇ ಸಾಹಿತ್ಯ ಮೇಳ ಬಳಗ ಮತ್ತು ವಿವಿಧ ದಲಿತ, ಪ್ರಗತಿಪರ ಮತ್ತು ಸಮಾನ ಮನಸ್ಕ ಗೆಳೆಯರ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.
ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಸಂಗಾತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಇವತ್ತಿನ ಸಂದರ್ಭದಲ್ಲಿ ಯುವಕರಲ್ಲಿ ವೈಚಾರಿಕ ಜಾಗೃತಿ ಮೂಡಿಸುವಲ್ಲಿ ಮತ್ತು ಓದಿನ ಹವ್ಯಾಸ ಬೆಳೆಸುವಲ್ಲಿ ಇಂಥ ಪುಸ್ತಕ ಮೇಳ ಹಮ್ಮಿಕೊಳ್ಳುವುದು ಅತ್ಯಂತ ಸೂಕ್ತ ಎಂದು ಹೇಳಿದರು.
‘ಅಂಬೇಡ್ಕರ್ ಹಬ್ಬ’ದ ಜೊತೆಜೊತೆಗೆ ಪುಸ್ತಕ ಮೇಳವನ್ನು ಹಮ್ಮಿಕೊಳ್ಳಬೇಕು ಮತ್ತು ಕೇವಲ ಕನ್ನಡ ಪುಸ್ತಕಗಳು ಮಾತ್ತವಲ್ಲ, ಇಂಗ್ಲೀಷ್, ಹಿಂದಿ ಸೇರಿದಂತೆ ಬೇರೆ ಭಾಷೆಗಳ ಪುಸ್ತಕಗಳು ಕೂಡ ಲಭ್ಯವಾಗುವಂತಿರಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಬರುತ್ತಿರುವುದು ಸತ್ಯವೆಂದು ನಂಬುತ್ತಿರುವ ಯುವಪೀಳಿಗೆಗೆ ನಿಜವಾದ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಪುಸ್ತಕಮೇಳ ನಡೆಸುವುದು ಅಗತ್ಯವಾಗಿದ್ದು, ಇದರಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ಫುಲೆ, ಪೆರಿಯಾರ್, ಕಾನ್ಷಿರಾಂ ಚಿಂತನೆಯ ಮತ್ತು ಎಡ ಮತ್ತು ದಲಿತ, ಮಹಿಳಾಪರ ಸಾಹಿತ್ಯದ ಪುಸ್ತಕಗಳನ್ನು ಮಾತ್ರ ಆಹ್ವಾನಿಸಬೇಕು. ಹಾಗೆಯೇ ನಿತ್ಯವೂ ಮಹತ್ವದ ಪುಸ್ತಕಗಳ ಓದು ಮತ್ತು ಸಂವಾದ ಹಮ್ಮಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತವಾಯಿತು.
ಜಿಲ್ಲೆಯ ಪ್ರತಿ ತಾಲೂಕುಗಳಲ್ಲೂ ಪ್ರಚಾರ ಕೈಕೊಂಡು, ಹೆಚ್ಚೆಚ್ಚು ಜನರು ಮೇಳದಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಹೆಚ್ವು ಜನರಿಗೆ ಪುಸ್ತಕಗಳು ತಲುಪುವಂತೆ ಮಾಡಬೇಕು. ಕನಿಷ್ಠ 50 ಸಾವಿರದಿಂದ 1 ಲಕ್ಷ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಬೇಕು ಮತ್ತು ಅವರಿಗೆ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಯ ಪುಸ್ತಕಗಳ ಪರಿಚಯ ಮಾಡಿಕೊಡಬೇಕು. ಆ ನಿಟ್ಟಿನಲ್ಲಿ ಎಲ್ಲಾ ಶಾಲೆ ಕಾಲೇಜುಗಳನ್ನು ಸಂಪರ್ಕಿಸಿ ಆಹ್ವಾನ ನೀಡಬೇಕು ಎಂದು ಸಭೆ ಅಭಿಪ್ರಾಯಪಟ್ಟಿತು.
ಪುಸ್ತಕ ಮೇಳವನ್ನು ಯಶಸ್ವಿಗೊಳಿಸಲು ಒಂದು ಸಂಚಾಲನ ಸಮಿತಿಯನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.
ಪ್ರಧಾನ ಸಂಚಾಲಕರು:
* ಅನಿಲ ಹೊಸಮನಿ
* ರಾಜಶೇಖರ ಯಡಹಳ್ಳಿ
* ಭಗವಾನ ರೆಡ್ಡಿ
ಸಂಚಾಲಕರು:
* ಪುಲಕೇಶಿ ಚೌಧರಿ
* ಜಿ.ಜಿ. ಗಾಂಧಿ
* ಅಡಿವೆಪ್ಪ ಸಾಲಗಲ್ಲ
* ನಾಗರಾಜ ಲಂಬು
* ಶ್ರೀನಾಥ ಪೂಜಾರಿ
* ಬಸವರಾಜ ಹೋಳ್ಕರ
* ಸಂಜು ಕಂಬಾಗಿ
* ಸುರೇಶ ಜೀಬಿ
* ಎಲ್.ಬಿ. ಸಜ್ಜನ
* ಪ್ರಭುಗೌಡ ಪಾಟೀಲ
* ಲಲಿತಾ ಬಿಜ್ಜರಗಿ
* ಸುಭಾಸ ಹೊನ್ನಕಂಟಿ
* ಚೆನ್ನು ಕಟ್ಟಿಮನಿ
* ಗೌಡಪ್ಪ ಬಡಿಗೇರ
* ಮಹಾದೇವ ಬನಸೋಡೆ
* ಫಾ. ಕೆವಿನ್
* ಓಂಕಾರ ಕಾಕಡೆ
ಪ್ರತಿ ತಾಲೂಕಿನಿಂದ ಐದು ಜನರನ್ನು ಆಯ್ಕೆ ಮಾಡಿಕೊಂಡು ವ್ಯಾಪಕ ಪ್ರಚಾರ ಕೈಕೊಳ್ಳುವ ಅಧಿಕಾರವನ್ನು ಸಂಚಾಲನ ಸಮಿತಿಗೆ ನೀಡಲಾಯಿತು. ಮುಂದಿನ ಸಭೆ: ಫೆ. 15 ರಂದು ಎರಡನೆಯ ಸಭೆಯನ್ನು ಬುದ್ಧವಿಹಾರದಲ್ಲಿ ಕರೆಯಲು ತೀರ್ಮಾನಿಸಲಾಯಿತು ಮತ್ತು ಪುಸ್ತಕ ಮೇಳಕ್ಕೆ ತಗಲುವ ಅವಶ್ಯಕ ವ್ಯವಸ್ಥೆ ಮತ್ತು ಅದಕ್ಕೆ ಅಂದಾಜು ವೆಚ್ಚವನ್ನು ಸಿದ್ಧಪಡಿಸಿ ಮುಂದಿನ ಸಭೆಯಲ್ಲಿ ತಿಳಿಸಲು ಸಂಚಾಲನ ಸಮಿತಿಗೆ ಜವಾಬ್ದಾರಿ ವಹಿಸಲಾಯಿತು.
—–
ಸಭೆಯಲ್ಲಿ ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ, ಗದಗದ ಮೇ ಸಾಹಿತ್ಯ ಮೇಳ ಬಳಗದ ಮುತ್ತು ಬಿಳೆಯೆಲಿ, ರಮೇಶ ಕೋಳೂರ, ರಾಮಚಂದ್ರ ಹಂಸನೂರ, ಆನಂದ ಸಿಂಗಾಡಿ, ಚೆನ್ನು ಕಟ್ಟಿಮನಿ, ಅರವಿಂದ ಲಂಬು, ಸಲೀಮ ಹೊಕ್ರಾಣಿ, ಮನೋಹರ ಕಾಂಬಳೆ, ಲಿಂಗರಾಜ ಬಿದರಕುಂದಿ, ವೈ.ಎಚ್. ಲಂಬು, ರಾಜೇಂದ್ರ ಕೊಂಡಗೂಳಿ, ರವೀಂದ್ರ ಬೆಳ್ಳಿ, ಅಪ್ಪಾಸಾಹೇಬ ಚಿನಗುಂಡಿ, ಪ್ರಮೋದ ಬರಡ್ಡಿ, ಸಂಗಮೇಶ ಸಿದರೆಡ್ಡಿ, ಸಾಹೇಬಲಾಲ ನದಾಫ, ಬಾಲಾಜಿ ಕಾಂಬಳೆ, ಯಮನಪ್ಪ ಗುಣಕಿ, ರಮೇಶ ಹೊಸಮನಿ, ನಿಂಗಮ್ಮ ಹೊಸಮನಿ, ರಾಜೇಶ ಚಲವಾದಿ, ದಲೀಪ ಮೌರ್ಯ, ರಾಜೇಶ ತೊರವಿ ಮುಂತಾದವರು ಉಪಸ್ಥಿತರಿದ್ದರು.
ಮುಂದಿನ ಸಭೆ
ದಿ. 15-2-2026 ರಂದು ಎರಡನೆಯ ಸಭೆಯನ್ನು ಬುದ್ಧವಿಹಾರದಲ್ಲಿ ಕರೆಯಲು ತೀರ್ಮಾನಿಸಲಾಯಿತು ಮತ್ತು ಪುಸ್ತಕ ಮೇಳಕ್ಕೆ ತಗಲುವ ಅವಶ್ಯಕ ವ್ಯವಸ್ಥೆ ಮತ್ತು ಅದಕ್ಕೆ ಅಂದಾಜು ವೆಚ್ಚವನ್ನು ಸಿದ್ಧಪಡಿಸಿ ಮುಂದಿನ ಸಭೆಯಲ್ಲಿ ತಿಳಿಸಲು ಸಂಚಾಲನ ಸಮಿತಿಗೆ ಜವಾಬ್ದಾರಿ ವಹಿಸಲಾಯಿತು.
—–
The post ಬಿಜಾಪುರದಲ್ಲಿ ಬುದ್ಧ, ಬಸವ, ಬಾಬಾಸಾಹೇಬ ಡಾ. ಅಂಬೇಡ್ಕರ್ ಚಿಂತನೆಯ ಪುಸ್ತಕ ಮೇಳ ಆಯೋಜಿಸಲು ನಿರ್ಧಾರ appeared first on Karnataka Kahale.
]]>The post 2022 ರ ಮೀಸಲಾತಿ ಕಾಯ್ದೆ ಶೆಡ್ಯೂಲ್ 9 ಗೆ ಸೇರಿಸದಿದ್ದರೆ ಉಗ್ರ ಹೋರಾಟ! ಸಿಎಂ, ಪ್ರಧಾನಿಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಎಚ್ಚರಿಕೆ appeared first on Karnataka Kahale.
]]>
ಬೆಂಗಳೂರು, ಜ.25: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದಮತ್ತಿತರರುಸಲಾತಿ ಪ್ರಮಾಣವನ್ನು ಶೇ. 56ಕ್ಕೆ ಹೆಚ್ಚಳ ಮಾಡಿರುವ 2022 ರ ಕಾಯ್ದೆಯನ್ನು ಶೆಡ್ಯೂಲ್ 9 ಗೆ ಸೇರಿಸಿ ಈ ವರ್ಗಕ್ಕೆ ಆಗುತ್ತಿರುವ ಅನ್ಯಾಯ ತಡೆಯದೆ ಹೋದರೆ ಯಾವುದೇ ಸ್ವರೂಪದ ಹೋರಾಟಕ್ಕೂ ವಾಲ್ಮೀಕಿ ನಾಯಕ ಸಮಾಜ ಸಿದ್ಧ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2022 ರ ಕಾಯ್ದೆಯನ್ನು ಭಾರತದ ಸಂವಿಧಾನದ 9 ನೇ ಶೆಡ್ಯೂಲ್ ಗೆ ಸೇರಿಸಲು ಮತ್ತು ಅನುಚ್ಛೇದ 15 ಮತ್ತು 16ಕ್ಕೆ ಮೀಸಲಾತಿ ಹೆಚ್ಚಿಸಲು ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾಗಿ ಹೇಳಿದರು. ಹಾಗೇ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಬಂದಾಗೆಲ್ಲ ಕೆಲ ಜಾತಿಗಳನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿ ಜನರನ್ನು ದಿಕ್ಕು ತಪ್ಪಿಸಿದರು. ಇದರಿಂದ ಇಂದು ಸಾಕಷ್ಟು ಜನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ತ ಪಡೆಯುತ್ತಿದ್ದಾರೆ. ಇದ್ದಕ್ಕೆ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ನಾಯಕರೇ ಕಾರಣ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರ ಮೇಲೂ ವಾಗ್ದಾಳಿ ನಡೆಸಿದ ಉಗ್ರಪ್ಪನವರು, ಮುಂದಿನ ಬಾರಿ ಸುಮಾರು 4 ಲಕ್ಷ ಕೋಟಿ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಆದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಹಣವನ್ನು ಬೇರೆ ಕಾರ್ಯಗಳಿಗೆ ಬಳಸಬಾರದು ಎಂಬ ಕಾನೂನು ಇದ್ದರೂ ಬಳಕೆಯಾಗುತ್ತಿದೆ. ಇದನ್ನು ತಪ್ಪಿಸಬೇಕು. ಜೊತೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಈ 2022ರ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತಂದಿರುವ ಬಿಜೆಪಿ ನಾಯಕರು ಕೇಂದ್ರದಲ್ಲಿ ಒತ್ತಡ ತಂದು ಶೆಡ್ಯೂಲ್ 9 ಗೆ ಸೇರಿಸಬೇಕು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಎಚ್.ಡಿ. ಕುಮಾರಸ್ವಾಮಿ, ಹಾಗೂ ಆಗ ಮುಖ್ಯಮಂತ್ರಿ ಆಗಿದ್ದ ಬಸವರಾಜ್ ಬೊಮ್ಮಾಯಿ ಮತ್ತಿತರರು ಕೇಂದ್ರದ ಮೇಲೆ ಒತ್ತಡ ತಂದು ಕರ್ನಾಟಕದ ತಳ ಸಮುದಾಯಗಳ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

ನಾವು ಮೊದಲಿನಿಂದಲೂ ಬದುಕಿನಲ್ಲಿ ಸಂಘರ್ಷ ಮಾಡಿಕೊಂಡೇ ಬಂದವರು. ನಾಯಕರು ಕೇವಲ ಸುದ್ದಿಗೋಷ್ಠಿ ನಡೆಸಿ ಸುಮ್ಮನಾಗುತ್ತಾರೆ ಎಂದು ಭಾವಿಸಬೇಡಿ. ಕೇಂದ್ರ ಸರ್ಕಾರ ಹೀಗೆ ನಿರ್ಲಕ್ಷ್ಯ ಧೋರಣೆ ತಾಳಿದರೆ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಗುಡುಗಿದ ಉಗ್ರಪ್ಪ, ನಮ್ಮ ಸಮುದಾಯದ ಇತರ ನಾಯಕರು ಕೂಡ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಲ್ಲಿ ಇದ್ದಾರೆ. ನೀವು ಗೆದ್ದಿರುವುದು ಮೀಸಲಾತಿಯಿಂದ ಅದನ್ನು ನೆನಪಿನಲ್ಲಿ ಇಟ್ಟುಕೊಂಡು ಸಮುದಾಯದ ಹಿತದೃಷ್ಠಿಯಿಂದ ನಿಮ್ಮನ್ನು ಬೆಳೆಸಿದ ಸಮುದಾಯದ ಪರ ಧ್ವನಿ ಎತ್ತಿ ಎಂದು ಆಗ್ರಹಿಸಿದರು.
ಪಕ್ಕದ ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಸಂವಿಧಾನದಲ್ಲಿ ಎಲ್ಲೂ ಆರ್ಥಿಕ ಮೀಸಲಾತಿಯ ಬಗ್ಗೆ ಡಾ.ಬಿ.ಆರ್. ಅಂಬೇಡ್ಕರ್ ಉಲ್ಲೇಖಿಸಿಲ್ಲ. ಆದರೆ ಇಷ್ಟು ವರ್ಷಗಳಾದರೂ ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರ ಹೆಸರಿನಲ್ಲಿ ಮೇಲ್ವರ್ಗದವರಿಗೆ ಮೀಸಲಾತಿ ಘೋಷಣೆ ಮಾಡಿದೆ. ಆರ್ಥಿಕವಾಗಿ ಹಿಂದುಳಿದವರ ಮೇಲ್ವರ್ಗದ ಸಮುದಾಯದ ಮಕ್ಕಳು ಸ್ಕಾಲರ್ ಶಿಪ್ ಪಡೆಯಲು 8.5 ಲಕ್ಷ ರೂ. ಆದಾಯ ಮಿತಿ ಇದೆ. ಆದರೆ ತಲ ತಕಾಂತರದಿಂದ ಶೋಷಣೆ ಅನುಭವಿಸುತ್ತ ಬಂದಿರುವ ಎಸ್ಸಿ, ಎಸ್ಟಿ ಸಮುದಾಯದ ಮಕ್ಕಳು ಸ್ಕಾಲರ್ ಶಿಪ್ ಪಡೆಯಲು ಆದಾಯ ಮಿತಿ 2.5 ಲಕ್ಷ ರೂ. ನಿಗಧಿಪಡಿಸಲಾಗಿದೆ. ಇದು ಯಾವ ಸೀಮೆ ನ್ಯಾಯ? ಬೇರೆ ಎಲ್ಲ ರೀತಿಯಲ್ಲೂ ಮೀಸಲಾತಿ ಘೋಷಣೆಯಾಗಿದ್ದರೂ ಜನಸಾಮಾನ್ಯರಿಗೆ ಮೀಸಲಾತಿ ಕೊಡುವಲ್ಲಿ ಭೇದ ಯಾಕೆ ಎಂದು ಪ್ರಶ್ನಿಸಿದರು.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ ನಾವು ಹೋರಾಟ ನಡೆಸಿದ ಫಲವಾಗಿ ಪರಿಶಿಷ್ಟ ಪಂಗಡಕ್ಕೆ ಶೇ.3 ರ ಬದಲು ಶೇ.7 ಮೀಸಲಾತಿ ಹಾಗೂ ಪರಿಶಿಷ್ಟ ಜಾತಿಗೆ ಶೇ.15, ಇತರೆ ಹಿಂದುಳಿದ ವರ್ಗಗಳಿಗೆ ಶೇ.32 ಮೀಸಲಾತಿ ಜಾರಿಗೊಳಿಸಲಾಗಿತ್ತು. ಆದರೆ ಅದನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಇದರಿಂದಾಗಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆ ಕಾಯ್ದೆಯನ್ನು ಅನೂರ್ಜಿತಗೊಳಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯ ಕೂಡ ಈ ಕಾಯ್ದೆಗೆ ತಡೆಯಾಜ್ಞೆ ನೀಡಿದೆ. ಇದರ ಪರಿಣಾಮ ಬಿಜೆಪಿ ಸರ್ಕಾರ ಜಾರಿಗೆ ತಂದ ಮೀಸಲಾತಿ ಹೆಚ್ಚಳ ರದ್ಧಾಗಿದೆ. ಇದನ್ನು ಅರಿತು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆ 2022 ಅನ್ನು ಶೆಡ್ಯೂಲ್ 9 ಗೆ ಸೇರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಇದನ್ನು ನಾವು ನಮ್ಮ ಸಮುದಾಯ ಸ್ವಾಗತಿಸುತ್ತದೆ. ಆದರೆ ಒಂದು ತಿಂಗಳಾದರೂ ಕೇಂದ್ರ ಸರ್ಕಾರ ಅದನ್ನು ಶೆಡ್ಯೂಲ್ 9 ಗೆ ಸೇರಿಸದಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದ್ದರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವುದಾಗಿ ಹೇಳಿದ ವಿ.ಎಸ್. ಉಗ್ರಪ್ಪ, ತಕ್ಷಣ ಸರ್ವಪಕ್ಷದ ನಿಯೋಗ ಕೊಂಡೊಯ್ದು, ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಶೇ. 56 ಮೀಸಲಾತಿ ನೀಡಿದ 2022 ರ ಈ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಅನುಚ್ಛೇದ 9 ಕ್ಕೆ ಸೇರಿಸಲು ಹಾಗೂ ಇಂದಿರಾ ಸಹಾನಿ ಮತ್ತು ಇನ್ನಿತರೆ ಕೇಸುಗಳಲ್ಲಿ ಮೀಸಲಾತಿ ಪ್ರಮಾಣ ಶೇ.50 ಮೀರಬಾರದು ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ತಟಸ್ಥಗೊಳಿಸಿ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚು ಮಾಡಲು ಅನುಚ್ಛೇದ 15 ಮತ್ತು 16 ಕ್ಕೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದ್ದಾಗಿ ಹೇಳಿದರು.

ಜೊತೆಗೆ ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದ ತಳ ಸಮುದಾಯದ ಬಡ ಜನರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಈಗಾಗಿ ಸುಳ್ಳು ಪ್ರಮಾಣ ಪತ್ರ ಪಡೆದವರು ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳಿಗೆ ಕೂಡ ಸೂಕ್ತ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ರಾಜ್ಯ ಸರ್ಕಾರವನ್ನು ಉಗ್ರಪ್ಪ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಕಾರ್ಯಾಧ್ಯಕ್ಷರಾದ ಎಂ.ನರಸಿಂಹಯ್ಯ, ಖಜಾಂಚಿ ಈ. ರಾಜಪ್ಪ, ಉಪಾಧ್ಯಕ್ಷರಾದ ರಾಜಣ್ಣ ಟಿ. ಚಿತ್ರದುರ್ಗ, ರೇವತಿ ಭೀಮಪುತ್ರಿ, ಪ್ರಧಾನ ಕಾರ್ಯದರ್ಶಿಗಳಾದ ಸಣ್ಣ ನಾಯಕ್, ರಮೇಶ್ ಹಿರೇಜಂಬೂರು, ನಾಗರಾಜ ಗಾಣದ ಹುಣಸೆ, ನಿವೃತ್ತ ಅಧಿಕಾರಿ ಕೆಂಪರಾಮಯ್ಯ, ಕೆಪಿಸಿಸಿ ಎಸ್ಟಿ ಸೆಲ್ ರಾಜ್ಯ ಅಧ್ಯಕ್ಷರಾದ ವಿಜಯ ನಾಯಕ್, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಹಿಳಾಅಧ್ಯಕ್ಷೆ ಜಯಶ್ರೀ ಗುಡ್ಡೆಕಾಯಿ, ಗುಲ್ಬರ್ಗಾ ವಿವಿ ನಿವೃತ್ತ ಉಪಕುಲಪತಿ ಶ್ರೀರಾಮುಲು, ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಸವರಾಜ್ ನಾಯಕ್, ಕಾರ್ಯದರ್ಶಿ ತುಳಸಿರಾಮ್ ಟಿ.ಆರ್., ಸಂಘಟನಾ ಕಾರ್ಯದರ್ಶಿ ಕೆ.ವಿ. ನಾಗೇಂದ್ರ, ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.
The post 2022 ರ ಮೀಸಲಾತಿ ಕಾಯ್ದೆ ಶೆಡ್ಯೂಲ್ 9 ಗೆ ಸೇರಿಸದಿದ್ದರೆ ಉಗ್ರ ಹೋರಾಟ! ಸಿಎಂ, ಪ್ರಧಾನಿಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಎಚ್ಚರಿಕೆ appeared first on Karnataka Kahale.
]]>The post ತಗಡೂರು ಕೆರೆಗೆ ಹರಿದ ಹೇಮಾವತಿ: ತುಂಬಿದ ಕೆರೆಗಳಿಗೆ ಬಾಗೀನ ಅರ್ಪಣೆ appeared first on Karnataka Kahale.
]]>
ಚನ್ನರಾಯಪಟ್ಟಣ: ದಶಕಗಳ ಹೋರಾಟದ ಪರಿಣಾಮವಾಗಿ ಚನ್ನರಾಯಪಟ್ಟಣ ತಾಲೂಕು ಸುರಂಗ ಸಂತ್ರಸ್ತ ಹಳ್ಳಿಗಳಾದ ತಗಡೂರು-ಲಕ್ಕರಸನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿದಿದ್ದು, ಸಣ್ಣ ಕೆರೆ ಮತ್ತು ದೊಡ್ಡ ಕೆರೆಗಳೆರಡು ಕೋಡಿಬಿದ್ದಿವೆ. ತುಂಬಿದ ಎರಡೂ ಕೆರೆಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಎರಡೂ ಗ್ರಾಮಸ್ಥರ ಜೊತೆಯಲ್ಲಿ ಬಾಗೀನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎನ್.ಬಾಲಕೃಷ್ಣ ಅವರು, ನಾನು ಜಿಪಂ ಸದಸ್ಯ ಆಗಿದ್ದ ಸಂದರ್ಭದಲ್ಲಿಯೂ ಬಾಗೂರು-ನವಿಲೆ ಹೋರಾಟ ನಡೆದಿತ್ತು. ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಅಂದು ನಡೆದ ಹೋರಾಟದ ಪರಿಣಾಮವಾಗಿ ಏತನೀರಾವರಿ ಯೋಜನೆಗಳು ರೂಪುಗೊಂಡವು. ಅದನ್ನು ಶಾಸಕನಾಗಿ ಅನುಷ್ಠಾನ ಮಾಡಿ ನೀರು ಹರಿಸಿದ ಹೆಗ್ಗಳಿಕೆ ನನ್ನ ಪಾಲಿನದ್ದು ಎಂದು ಹೇಳಿದರು.

ನವಿಲೆ ಏತನೀರಾವರಿ ಮೂಲಕ ತಗಡೂರು ಕೆರೆಗೆ ನೀರು ಹರಿಸಲು ಹಲವು ಅಡ್ಡಿ ಆತಂಕಗಳು ಎದುರಾದವು. ಅವುಗಳನ್ನು ನಿವಾರಿಸಿ ಸಮಸ್ಯೆ ಬಗೆಹರಿಸಲಾಯಿತು ಎಂದು ಹೇಳಿದರು.
ನಿಮ್ಮೂರಿನ ಪುತ್ರನಾದ ಶಿವಾನಂದ ತಗಡೂರು ಅವರು ವಿಧಾನ ಸೌಧದಲ್ಲಿ ನಮಗೊಂದು ಶಕ್ತಿಯಾಗಿದ್ದಾರೆ. ಕಲ್ಲೇಶ್ವರ ದೇವಸ್ಥಾನ ರಸ್ತೆಗೆ ಸರ್ಕಾರದಿಂದ ವಿಶೇಷ ಅನುದಾನ ಕೊಡಿಸಿ ಇಷ್ಟು ಚೆಂದ ರಸ್ತೆಯಾಗಲು ಕಾರಣರಾಗಿದ್ದಾರೆ ಎಂದರು.
ತಗಡೂರು ಗೇಟ್ ನಿಂದ ಹೆಗ್ಗಡಿಗೆರೆ ಗೇಟ್ ತನಕ ಮತ್ತು ಕೆರೆ ಹಿಂಭಾಗದಲ್ಲಿ ಹಾಯ್ದು ವಡ್ಡರಹಟ್ಟಿ ಸಂಪರ್ಕಿಸುವ ರಸ್ತೆ ಕಾಮಗಾರಿಗಳನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಒಂದು ಬಾರಿ ಅಧ್ಯಕ್ಷರಾಗುವುದು ಕಷ್ಟ. ರಾಜ್ಯ ಪತ್ರಕರ್ತರ ಸಂಘಕ್ಕೆ ಸತತವಾಗಿ ಮೂರನೇ ಬಾರಿಗೆ ಅವಿರೋಧವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ತಾಲೂಕಿಗೆ ಮತ್ತು ಜಿಲ್ಲೆಗೆ ಅಭಿಮಾನದ ಸಂಗತಿ. ಶೀಘ್ರದಲ್ಲೇ ತಾಲ್ಲೂಕು ಮಟ್ಟದಲ್ಲಿ ಶಿವಾನಂದ ಅವರಿಗೆ ನಾಗರೀಕ ಅಭಿನಂದನೆ ಹಮ್ಮಿಕೊಳ್ಳಲಾಗುವುದು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ತೊಂಬತ್ತರ ದಶಕದಲ್ಲಿ ಬಾಗೂರು-ನವಿಲೆ ಸುರಂಗ ಸಂತ್ರಸ್ತ ಹಳ್ಳಿಗಳಿಗೆ ನೀರಾವರಿ
ಮತ್ತು ಪರಿಹಾರ ನೀಡಬೇಕೆಂದು ಹೋರಾಟ ನಡೆಸಲಾಗಿತ್ತು. ಈಗ ಕೆರೆಗಳಿಗೆ ನೀರು ಹರಿದಿರುವುದು ಸಂತಸ ತಂದಿದೆ. ತಗಡೂರು ಲಕ್ಕರಸನಹಳ್ಳಿ ಕೆರೆಗೆ ನೀರು ಬರಲು ಶ್ರಮಿಸಿದ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಕೃಷ್ಣ ಮತ್ತು ಶಿವಾನಂದ ತಗಡೂರು ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.
ಕಲ್ಲೇಶ್ವರ ಸ್ವಾಮಿ ದೇವರಿಗೆ ರುದ್ರಾಭಿಷೇಕ ನಡೆಯಿತು.
ತಗಡೂರು ಲಕ್ಕರಸನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಹಾಜರಿದ್ದರು.
The post ತಗಡೂರು ಕೆರೆಗೆ ಹರಿದ ಹೇಮಾವತಿ: ತುಂಬಿದ ಕೆರೆಗಳಿಗೆ ಬಾಗೀನ ಅರ್ಪಣೆ appeared first on Karnataka Kahale.
]]>The post ‘ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಮತ್ತು ಅಭಿವೃದ್ಧಿ’ ಕುರಿತು ವಿಶೇಷ ಉಪನ್ಯಾಸ: ಆರ್ಥಿಕ ಅಭಿವೃದ್ಧಿಗೆ ರಚನಾತ್ಮಕ ಬದಲಾವಣೆ ಬೇಕು -ಪ್ರೊ .ಕೆ.ಆರ್. ಮಂಜುನಾಥ್ appeared first on Karnataka Kahale.
]]>ಪ್ರಾಸ್ತಾವಿಕ ನುಡಿಗಳನ್ನಾಡಿದ ಅಂಬೇಡ್ಕರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು, ಅಂಬೇಡ್ಕರ್ ಎಂದರೆ ಅವಮಾನ ಅಗೌರವಗಳನ್ನು ಸಾಧನೆಗೆ ಸೋಪಾನಗಳನ್ನಾಗಿಸಿಕೊಂಡ ಶಕ್ತಿಯ ವ್ಯಕ್ತಿ. ಅನುಭವಗಳಿಂದ ರೂಪಿತವಾದ ಅಂಬೇಡ್ಕರ್ ಅವರ ವ್ಯಕ್ತಿತ್ವವು ವಿಶ್ವಕ್ಕೆ ಮಾದರಿಯಾದದ್ದು. ಅಸಮಾನತೆ ಅವಮಾನ ಮತ್ತು ಹಸಿವೆಗಳಿಂದ ತಲ್ಲಣಿಸುತ್ತಿದ್ದ ಜನತೆಗೆ ಅರಿವನ್ನು ಬಿತ್ತಿ ಅಭಿವೃದ್ಧಿಪಥವನ್ನು ತೋರಿ, ಅವಮಾನ ಮತ್ತು ಅಪಮಾನಗಳಿಗೆ ಹೆದರದೆ ಎದುರಿಸುವ ತಾಕತ್ತನ್ನು ಸರ್ವರು ಸಂಪಾದಿಸಿ ಕೊಳ್ಳಬೇಕೆಂದು ಸಾರಿದ ಮಹಾಪುರುಷ ಎಂದು ಶ್ಲಾಘಿಸಿದರು.
ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಅಳವಡಿಸಿಕೊಂಡಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಸಿದ್ದರಾಜು ಅವರು ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ವಾಣಿ ರವಿಕುಮಾರ್, ಸಾವಿತ್ರಿ ಗಣೇಶಪ್ಪ, ಪವನ್ ಮತ್ತು ಪ್ರಜ್ವಲ್ ಅವರು ಭಾಗವಹಿಸಿದ್ದರು. ಸಂವಾದದಲ್ಲಿ ಡಾ. ಕಾವ್ಯ, ಹನುಮಂತಪ್ಪ, ಪೂರ್ಣಿಮಾ, ಪ್ರಭಾಕರ್ ಸಿ ಅವರು ಭಾಗವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾರ್ಥಿಗಳಾದ ಟಿ.ಒಬಳೇಶ್, ಅಂಜನಪ್ಪ ಸುಭಾಷ್ ಬೊಡ್ಕಿಯವರು ಇದ್ದರು.
—–
The post ‘ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಮತ್ತು ಅಭಿವೃದ್ಧಿ’ ಕುರಿತು ವಿಶೇಷ ಉಪನ್ಯಾಸ: ಆರ್ಥಿಕ ಅಭಿವೃದ್ಧಿಗೆ ರಚನಾತ್ಮಕ ಬದಲಾವಣೆ ಬೇಕು -ಪ್ರೊ .ಕೆ.ಆರ್. ಮಂಜುನಾಥ್ appeared first on Karnataka Kahale.
]]>The post ಬೌದ್ಧ ಮಹಾ ಸಮ್ಮೇಳನ ಮತ್ತು ಮಾನವ ಮೈತ್ರಿಯ ಪಯಣ 2025:ಸಮಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಅಗತ್ಯ -ಸಿಎಂ ಸಿದ್ದರಾಮಯ್ಯ appeared first on Karnataka Kahale.
]]>
ಮೈಸೂರು, ಅ. 15: ಜಡ್ಡುಗಟ್ಟಿದ ಸಮಾಜದಲ್ಲಿ ಪರಿವರ್ತನೆಯಾಗಬೇಕಾದರೆ ಹೆಚ್ಚು ಜನರಿಗೆ ಬುದ್ಧ ಬಸವ, ಅಂಬೇಡ್ಕರ್ ಅವರ ತತ್ವ ಆದರ್ಶಗಳು ಪರಿಚಿತವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಬುಧವಾರ ಕರ್ನಾಟಕ ರಾಜ್ಯ ಭಿಕ್ಷು ಸಂಘ, ಬೌದ್ಧ ಸಂಘ ಸಂಸ್ಥೆಗಳು ಹಾಗೂ ರಾಜ್ಯ ಅಂಬೇಡ್ಕರ್ ವಾದಿ ಸಂಘ ಸಂಸ್ಥೆಗಳು ಮತ್ತು ವಿಶ್ವಮೇತ್ರಿ ಬುದ್ಧ ವಿಹಾರ ಇವರ ಸಂಯುಕ್ತಶ್ರಯದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೌದ್ಧ ಮಹಾ ಸಮ್ಮೇಳನ ಮತ್ತು ಮಾನವ ಮೈತ್ರಿಯ ಪಯಣ 2025 ಅಂತರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪರಧರ್ಮ ಸಹಿಷ್ಣುತೆ ಸಹಬಾಳ್ವೆಯನ್ನು ಮೈಗೂಡಿಸಿಕೊಳ್ಳಬೇಕು.ಬಎಲ್ಲರಿಗೂ ಸಮಾನ ಅವಕಾಶಗಳು ಇಲ್ಲದ ಕಾರಣ ಅಸಮಾನತೆ ನಿರ್ಮಾಣವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಹೊಂದಿದರೆ ಮಾತ್ರ ಸಮಾನತೆ ಸಾಧ್ಯವಾಗುತ್ತದೆ ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದರು.
ಪರಧರ್ಮ ಸಹಿಷ್ಣುತೆ ಸಹಬಾಳ್ವೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಮಾತ್ರ ದೇಶದಲ್ಲಿ ಶಾಂತಿ, ಅಹಿಂಸೆ ಸತ್ಯ ನೆಲೆಗೊಳ್ಳಲು ಸಾಧ್ಯ ಎಂದು ಹೇಳಿದರು ಎಂದರು.

ಸಮಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಅಗತ್ಯ: ಎಸ್ ಸಿಎಸ್ ಪಿ /ಟಿಎಸ್ ಪಿ ಯೋಜನೆಗಾಗಿ 42 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಸಮಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಬರಲೇಬೇಕು. ನಮ್ಮ ಸರ್ಕಾರ ಗುತ್ತಿಗೆಗಳಲ್ಲಿ ಮೀಸಲಾತಿಯನ್ನು ತಂದಿದೆ. ಬಡ್ತಿಯಲ್ಲಿ ಮೀಸಲಾತಿಯನ್ನು ಸರ್ವೋಚ್ಛ ನ್ಯಾಯಾಲಯ ಕೊಡದಿದ್ದರೂ ಸಮಿತಿ ರಚಿಸಿ, ಅದರ ವರದಿಯ ಆಧಾರದ ಮೇಲೆ ಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಯಿತು ಎಂದರು.
ಸಮಾನತೆಯ ಜಾಗೃತಿಯ ಜೊತೆಗೆ ಪೂರಕ ಕಾರ್ಯಕ್ರಮಗಳಿದ್ದರೆ ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ. ಅಸಮಾನತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಭಾಗ್ಯಗಳು ಮತ್ತು ಗ್ಯಾರಂಟಿ ಯೋಜನೆಗಳನ್ನು ನಮ್ಮ ಅಧಿಕಾರದ ಅವಧಿಯಲ್ಲಿ ನೀಡಲಾಗಿದೆ ಎಂದು ಪ್ರತಿಪಾದಿಸಿದರು.
ಶಕ್ತಿ ಯೋಜನೆಯಿಂದಾಗಿ ಒಂದು ದಿನದಲ್ಲಿ ಹಾಸನಾಂಬೆ ದರ್ಶನಕ್ಕೆ ಭೇಟಿ ನೀಡಿದ ಒಟ್ಟು 9 ಲಕ್ಷ ಜನರಲ್ಲಿ ಪೈಕಿ ಶೇ 70 ರಷ್ಟು ಮಹಿಳೆಯರೇ ಇದ್ದಾರೆ. ದೇವಸ್ಥಾನ, ಕೆಲಸದ ಸ್ಥಳಗಳಿಗೆ ಮಹಿಳೆಯರು ಓಡಾಡುವಂತಾಗಿ ಸ್ವಾವಲಂಬಿಗಳಾಗಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ 4 ರಿಂದ 5 ಸಾವಿರ ರೂ.ಗಳು ದೊರೆಯುತ್ತಿವೆ ಎಂದು ತಿಳಿಸಿದರು.

ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ: ಸಮಾಜದ ಅಸಮಾನತೆ ತೊಲಗಿಸಲು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಶಕ್ತಿಯನ್ನು ಜನರಲ್ಲಿ ತುಂಬಬೇಕು. ಬುದ್ಧ , ಬಸವಣ್ಣ ಹಾಗೂ ಅಂಬೇಡ್ಕರ್ ರಂತಹ ಮಹಾನ್ ಚೇತನರು ಈ ನಿಟ್ಟಿನಲ್ಲಿ ಪ್ರಯತ್ನಿಸಿದರು. ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಕೆಲವು ಮನುವಾದಿಗಳ ಸಂಚಿನಿಂದ ಇಂದಿಗೂ ಬದಲಾವಣೆ ಸಾಧ್ಯವಾಗಿಲ್ಲ. ಸಚಿವ ಪ್ರಿಯಾಂಕ ಖರ್ಗೆಯವರು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಕೋರಿ ಪತ್ರ ಬರೆದಿದ್ದರು. ತಮಿಳುನಾಡಿನಲ್ಲಿ ಈ ದಿಸೆಯಲ್ಲಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಮಾಜದಲ್ಲಿ ಬದಲಾವಣೆ ತರುವ ನಮ್ಮ ಪ್ರಯತ್ನಕ್ಕೆ ಹಲವು ತೊಡಕು ಎದುರಾಗುತ್ತವೆ. ಮೌಢ್ಯಗಳು, ಕಂದಾಚಾರಗಳ ನಿಗ್ರಹಕ್ಕೆ ನಮ್ಮ ಸರ್ಕಾರ ಕಾನೂನು ರೂಪಿಸಿದೆ ಎಂದರು.

ಶಿಕ್ಷಣ, ಸಂಘಟನೆ ಹಾಗೂ ಹೋರಾಟ: ಅಂಬೇಡ್ಕರ್ ಅವರು ಯಾವುದೇ ಜಾತಿಯ ಪರವಾಗಿಯೂ ನಿಂತವರಲ್ಲ. ಎಲ್ಲಾ ಜಾತಿವರ್ಗಗಳನ್ನು ಒಂದೇ ಎಂದು ಪರಿಗಣಿಸುವ ಸಮಾನತೆ ಹಾಗೂ ಸಮಸಮಾಜ ನಿರ್ಮಾಣವಾಗಬೇಕೆಂದು ಬಯಸಿದವರು. ಚಲನೆಯಿಲ್ಲದ ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬುವ ಮೂಲಕ ಚಲನೆಯನ್ನು ನೀಡಬೇಕಾಗಿದೆ. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮಂತ್ರವನ್ನು ಪಠಿಸಿದ್ದ ಅಂಬೇಡ್ಕರ್ ರವರು ಇದರ ಮೂಲಕ ಸಮಾಜದ ಬದಲಾವಣೆಯನ್ನು ಬಯಸಿದ್ದರು. ಈ ಹಿಂದೆ ಶೂದ್ರರಿಗೆ, ಮಹಿಳೆಯರನ್ನು ಶಿಕ್ಷಣದಿಂದ ದೂರವಿಡಲಾಗುತ್ತಿತ್ತು. ತನ್ನ ವಿದ್ಯಾರ್ಥಿದೆಸೆಯ ಘಟನೆಯನ್ನು ಸ್ಮರಿಸಿಕೊಂಡರು.
ಸಮಾಜದಲ್ಲಿನ ಜಾತಿವ್ಯವಸ್ಥೆಯೂ ಸಹ, ಬದಲಾವಣೆಯ ಪ್ರಯತ್ನಗಳ ನಡುವೆಯೂ ಮತ್ತೆ ಮರುಕಳಿಸುತ್ತಿದೆ ಎಂದು ತಮ್ಮ ಅನುಭವವನ್ನು ಮುಖ್ಯಮಂತ್ರಿಗಳು ಹಂಚಿಕೊಂಡರು.

ಗುಲಾಮಗಿರಿಯ ಮನಸ್ಥಿತಿಯನ್ನು ಕಿತ್ತೊಗೆಯಬೇಕು: ಎಸ್ ಸಿ ಪಿ/ ಟಿಎಸ್ ಪಿ ಕಾಯ್ದೆಯನ್ನು ಜಾರಿಗೆ ತಂದ ಹೆಗ್ಗಳಿಕೆ ಕಾಂಗ್ರೆಸ್ ಸರ್ಕಾರಕ್ಕಿದೆ. ಆಂಧ್ರ, ತೆಲಂಗಾಣ ಮತ್ತು ಕರ್ನಾಟಕವನ್ನು ಹೊರತುಪಡಿಸಿ, ಯಾವುದೇ ರಾಜ್ಯಗಳು ಈ ಕಾಯ್ದೆಯನ್ನು ಜಾರಿಗೆ ತಂದಿಲ್ಲ. ಪ್ರತಿ ಬಡವರಿಗೆ ಆರ್ಥಿಕ ಶಕ್ತಿಯನ್ನು ತುಂಬಬೇಕು.ನಮ್ಮಲ್ಲಿರುವ ಗುಲಾಮಗಿರಿಯ ಮನಸ್ಥಿತಿಯನ್ನು ಕಿತ್ತೊಗೆಯಬೇಕು, ತನ್ಮೂಲಕ ಎಲ್ಲರೂ ಮನುಷ್ಯರಾಗಬೇಕು. ಪ್ರೀತಿಯಿಂದ ದ್ವೇಷವನ್ನು ಗೆಲ್ಲಬೇಕು. ಬುದ್ಧ ಬಸವಣ್ಣನವರ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಸಚಿವರಾದ ಡಾ. ಜಿ. ಪರಮೇಶ್ವರ್, ಡಾ. ಎಚ್.ಸಿ.ಮಹಾದೇವಪ್ಪ, ಚಿತ್ರನಟ ಪ್ರಕಾಶ್ ರೈ ಮತ್ರಿತರ ಗಣ್ಯರು ಭಾಗವಹಿಸಿದ್ದರು.
The post ಬೌದ್ಧ ಮಹಾ ಸಮ್ಮೇಳನ ಮತ್ತು ಮಾನವ ಮೈತ್ರಿಯ ಪಯಣ 2025:ಸಮಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಅಗತ್ಯ -ಸಿಎಂ ಸಿದ್ದರಾಮಯ್ಯ appeared first on Karnataka Kahale.
]]>The post ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟದ ಮನೋಭಾವನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು – ಡಿಎಸ್ಎಸ್ ರಾಜ್ಯ ಸಂಚಾಲಕ ಎಂ. ಸೋಮಶೇಖರ್ appeared first on Karnataka Kahale.
]]>ಅವರು ಶುಕ್ರವಾರ ನಗರದ ಕೆ.ಇ.ಬಿ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ ) ಪ್ರಸಿದ್ಧ ಹೋರಾಟಗಾರ ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಅವರ 88ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕರ್ತರ ರಾಜ್ಯ ಮಟ್ಟದ ಸ್ವಾಭಿಮಾನ ಸಂಘರ್ಷ ಚೈತನ್ಯ ಸಮಾವೇಶದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರೊ.ಬಿ.ಕೃಷ್ಣಪ್ಪ ಅವರು ಶೋಷಿತ, ದಲಿತ ಸಮುದಾಯಗಳ ಮೇಲೆ ನಡೆಯುತ್ತಿರುವ ಶೋಷಣೆ, ಹಿಂಸೆ ಹಾಗೂ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿದ್ದರು. ತಮ್ಮ ತನು, ಮನ, ಧನವನ್ನು ಧಾರೆ ಎರೆದು ದಲಿತ ಸಮುದಾಯ ಹಾಗೂ ಶೋಷಣೆಗೆ ಒಳಗಾದ ಎಲ್ಲಾ ಸಮುದಾಯವನ್ನು ಒಗ್ಗೂಡಿಸಿ ಅವರ ಏಳಿಗೆಗೆ ದುಡಿದ ಮಹಾನ್ ವ್ಯಕ್ತಿ ಎಂದು ಶ್ಲಾಘಿಸಿದರು.
ರಾಜ್ಯದಲ್ಲಿ ದಲಿತ ಚಳವಳಿಯನ್ನು ಹುಟ್ಟುಹಾಕಿದ ಮಹಾನ್ ನಾಯಕ ಪ್ರೊ.ಬಿ.ಕೃಷ್ಣಪ್ಪ ಅವರ . ನಾವೆಲ್ಲರೂ ಅವರ ಹೋರಾಟದ ದಾರಿಯಲ್ಲಿ ಸಾಗಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕಮಲ ರತ್ನ ಬಂತೇಜಿ ಉದ್ಘಾಟಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಬಿ. ಶ್ರೀನಿವಾಸ ಮೂರ್ತಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ವಿ. ನಾರಾಯಣಸ್ವಾಮಿ , ಹೆಚ್. ಹನುಮಂತಪ್ಪ, ರಾಜ್ಯ ಸಂಚಾಲಕಿ ಭಾಗ್ಯಮ್ಮ ನಾರಾಯಣಸ್ವಾಮಿ, ಅಂದಾನಿ ಸೋಮನಹಳ್ಳಿ, ಆನೇಕಲ್ಲೂ ಕೃಷ್ಣಪ್ಪ, ಕಬ್ಬಳ್ಳಿ ಮೈಲಪ್ಪ, ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಅನಂತಕುಮಾರ್, ಮುಖಂಡರುಗಳಾದ ಈ. ಈಶ್ವರಪ್ಪ, ಸತ್ಯಬಾಬು, ಹೆಚ್. ವೆಂಕಟೇಶ್ ನಿವೃತ್ತ ಪ್ರಾಂಶುಪಾಲರು, ಎನ್.ಡಿ. ಯಂಕಮ್ಮ, ಆರ್. ಜಾಶ್ವ, ರಾಜ್ಯದ ರಾಜ್ಯ ಸಂ ಸಂಚಾಲಕರು, ವಿಭಾಗೀಯ ಸಂಚಾಲಕರು, ಹಾಗೂ ರಾಜ್ಯದ ಜಿಲ್ಲಾ ಸಂಚಾಲಕರು, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರಗತಿಪರ ಚಿಂತಕರು ಸಾಹಿತಿಗಳು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಸಂಚಾಲಕ ರಾಮಣ್ಣ ಚೆಳ್ಳಗುರ್ಕಿ ನಿರ್ವಹಿಸಿದರು.
The post ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟದ ಮನೋಭಾವನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು – ಡಿಎಸ್ಎಸ್ ರಾಜ್ಯ ಸಂಚಾಲಕ ಎಂ. ಸೋಮಶೇಖರ್ appeared first on Karnataka Kahale.
]]>The post ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ತಳ ಸಮುದಾಯಗಳು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು -ಸಮಾಜಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ appeared first on Karnataka Kahale.
]]>
ದಾವಣಗೆರೆ, ಜು.27: ತಳ, ಶೋಷಿತ ಸಮುದಾಯಗಳು ಶಿಕ್ಷಣದ ಮೂಲಕವೇ ಉನ್ನತ ಸ್ಥರಕ್ಕೆ ಏರಬೇಕು ಎಂಬುದು ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಉದ್ದೇಶವಾಗಿತ್ತು ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ತಿಳಿಸಿದರು. ಅವರು ನಗರದಲ್ಲಿ ಭಾನುವಾರ ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ಆಯೋಜಿಸಿದ್ದ ಎಸ್ ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಾಬಾ ಸಾಹೇಬರ ಆಶಯದಂತೆ ಎಲ್ಲರೂ ಶಿಕ್ಷಣವನ್ನೇ ಬದುಕಿನ ಆದ್ಯತೆಯಾಗಿಸಿಕೊಳ್ಳಬೇಕೆಂದು ಹೇಳಿದರು. 
ಕಾರ್ಯಕ್ರಮವನ್ನು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಉದ್ಘಾಟಿಸಿದರು. ಈ ಅರ್ಥಪೂರ್ಣ ಕಾರ್ಯಕ್ರಮದ ಸಾನಿಧ್ಯವನ್ನು ಮೈಸೂರಿನ ಶ್ರೀ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ, ಹಿರಿಯ ಮುಖಂಡ ಎಫ್ ಎಚ್ ಜಕ್ಕಪ್ಪನವರ್, ಸಿಎಮ್ ಎಸ್ ಜಿಲ್ಲಾಧ್ಯಕ್ಷ ರುದ್ರಮುನಿ, ಚಿತ್ರದುರ್ಗದ ಮುಖಂಡರಾದ ಹೆಚ್ ಸಿ ನಿರಂಜನಮೂರ್ತಿ ಮತ್ತಿರರು ಉಪಸ್ಥಿತರಿದ್ದರು. 
The post ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ತಳ ಸಮುದಾಯಗಳು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು -ಸಮಾಜಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ appeared first on Karnataka Kahale.
]]>The post ಪ್ರಜ್ಞೆಯ ಹಸಿವನ್ನು ಪ್ರತಿನಿಧಿಸಿದ ಹೋರಾಟಗಾರ, ಹಿರಿಯ ಪತ್ರಕರ್ತ ವಿಜಾಪುರದ ಅನಿಲ್ ಹೊಸಮನಿ ಅವರ ಕಾರ್ಯಕ್ರಮ – ಬಿ. ಶ್ರೀನಿವಾಸ್, ಸಾಹಿತಿ, ದಾವಣಗೆರೆ appeared first on Karnataka Kahale.
]]>
Make sure when leaving the world,
Not just you were good,
but leave
A good world.
ನೀನು ಉತ್ತಮವಾಗಿದ್ದ ಬಗ್ಗೆ ಮಾತ್ರವಲ್ಲ,
ಉತ್ತಮಗೊಳಿಸಿ ಜಗತ್ತು ಬಿಡುವಂತೆ ಬದುಕು
ಕವಿ,ಬರ್ಟೋಲ್ಡ್ ಬ್ರೆಕ್ಟ್ ನ ಈ ಸಾಲುಗಳು ಅನಿಲ್ ಹೊಸಮನಿ ಎಂಬ ಸಂಘರ್ಷದ ಒಡನಾಡಿಯ ಕಾರ್ಯಕ್ರಮದಲ್ಲಿ ಮತ್ತೆ ಮತ್ತೆ ನೆನಪಿಗೆ ಬಂದವು.
ಅನಿಲ್ ಹೊಸಮನಿ:ದಲಿತ ಹೋರಾಟಗಾರ, ಸಂಘಟಕ, ಬರೆಹಗಾರ, ಅನುವಾದಕ, ಪತ್ರಕರ್ತ, ಹೀಗೆ ಹತ್ತು ಹಲವು ಪಾತ್ರಗಳನ್ನು ನಿರ್ವಹಿಸುತ್ತಿರುವ ಎಪ್ಪತ್ತರ ಸನಿಹದಲ್ಲಿರುವ ಅನಿಲ್ ಹೊಸಮನಿಯವರ ಬಂಡಾಯ ಏಕಮುಖಿಯಾದುದಲ್ಲ. ಓದು ಮತ್ತು ಚಳವಳಿ ಎರಡನ್ನೂ ಸಮಾನವಾಗಿ ಸ್ವೀಕರಿಸಿದ ಶಿಕ್ಷಣ ಬಹುಮುಖವಾದಾಗ ಮಾತ್ರ ಬಂಡಾಯಕ್ಕೆ ಶಕ್ತಿ ಬರುತ್ತದೆ.
ಚಳವಳಿ ಎನ್ನೋದು ಜಡಗೊಂಡ ದೇಶಕ್ಕೆ ಚಿಕಿತ್ಸೆಯಾಗುತ್ತದೆ. ಆದರೆ ಕೆಲವೊಮ್ಮೆ ಈ ಚಳವಳಿಗಳು ಕೂಡ ಜಡಗೊಂಡಾಗ ವರ್ತಮಾನ ಕ್ರೂರವಾಗುತ್ತದೆ. ಫ್ಯಾಸಿಸ್ಟ್ ವಿರುದ್ಧ ಹೋರಾಡಿ, ಹೋರಾಡಿ, ಕೊನೆಗೊಂದು ದಿನ ತನ್ನದೇ ಫ್ಯಾಸಿಸ್ಟ ಗುಣ ಪಡೆಯುವ ಅಪಾಯವಿರುತ್ತದೆ. ಇಂತಹ ಅಪಾಯಗಳಿಗೆ ಸಿಲುಕದ ಹಾಗೆ ಮೇ ಸಾಹಿತ್ಯ ಮೇಳ ಬಳಗ ಬಯಲೊಳು ಬಯಲಾಗಿ ಕಾರ್ಯನಿರ್ವಹಿಸುತ್ತಿದೆ. ಅನಿಲ್ ಈ ಬಯಲಿನ ಅವಿಭಾಜ್ಯ ಅಂಗ. ಒಂದು ಕಾಲದಲ್ಲಿ, ಒಂದೇ ಒಂದು ಕರೆ ಕೊಟ್ಟರೆ ಸಾಕಿತ್ತು,ಸಾವಿರಾರು ದಲಿತರು ಸೇರುತ್ತಿದ್ದರು. ದ.ಸಂ.ಸ.ಧ್ವನಿ ದೂರದ ವಿಧಾನಸೌಧದವರೆಗೂ ಕೇಳಿಸುತ್ತಿತ್ತು.
ಭೂಮಿ ಮತ್ತು ದಲಿತರ ನಡುವಿನ ಪೋಷಕ ಸಂಬಂಧವನ್ನು ಭಾರತೀಯ ರಾಜಕಾರಣ, ಪ್ರಭುತ್ವಗಳು ಅರ್ಥ ಮಾಡಿಕೊಳ್ಳಲಿಲ್ಲ. ಭಾರತದ ಕ್ಷುದ್ರ ರಾಜಕಾರಣಕ್ಕೆ ಬಲಿಯಾದ ಚಳವಳಿಗೆ ಹಿನ್ನೆಡೆಯಾಯಿತು.
ದಲಿತರು, ಆಗಾಗ ಒಂದಾಗುತ್ತಾರೆ. ಅದೇ ವೇಗದಲ್ಲಿ ಒಡೆದು ಚೂರು ಚೂರಾಗ್ತಾರೆ. ಈ ಹೊತ್ತು ದಲಿತರ ಸಮಸ್ಯೆಗಳೂ ಕೂಡ ಹೆಚ್ಚು ಆಧುನಿಕೀಕರಣಗೊಂಡಿವೆ. ಹಿಂಸೆ ಕೂಡ.

ಕಳೆದ ತಿಂಗಳುಗಳ ಹಿಂದೆ ನಡೆದ ಕುಂಭಮೇಳದಲ್ಲಿ ಐವತ್ತು ಕೋಟಿ ಜನ ಪುಣ್ಯಸ್ನಾನ ಮಾಡಿದರೆಂದು ಸುದ್ದಿ ಬಿತ್ತರಿಸುವ ಮಾಧ್ಯಮಗಳಿಗೆ,ಇಷ್ಟು ಬೃಹತ್ ಪ್ರಮಾಣದ ಜನರ ಮಲವನ್ನು ಎತ್ತಿದವರಾರೆಂದು ಕೇಳುವುದಿಲ್ಲ. ದುರ್ಬಲಗೊಂಡ ಡಿ.ಎಸ್.ಎಸ್.ಕೂಡ ಕೇಳಲಿಲ್ಲ.
ಆದರೆ ಇಂದಿನ ಒಂದು ಸಂತೋಷದ ಸಂಗತಿಯೆಂದರೆ ವಿಭಜಿತ ಬಣಗಳ ಎಷ್ಟೋ ದಲಿತ ಮುಖಂಡರು ಇಂದು ಹಾಜರಿದ್ದರು. ಎಂದೋ ಜಗಳವಾಡಿ ದೂರವಾದ ಅಣ್ಣತಮ್ಮಂದಿರ ಹಾಗೆ ಮತ್ತೆ ಇಲ್ಲಿ ಕುಳಿತಿದ್ದರು.
ಡಿಎಸ್ಸೆಸ್ ಮತ್ತೆ ಹಿಂದಿನ ಚೈತನ್ಯಕ್ಕೆ ಮರಳುತ್ತಿದೆ ಎಂಬುದರ ಸೂಚನೆ ಇದು ಎಂದೇ ನಾನು ಭಾವಿಸಿದ್ದೇನೆ.
ಜು.14 ಭಾನುವಾರ ಮುಂಜಾನೆ ಹೋರಾಟಗಾರ ಚಂದ್ರಶೇಖರ ಹೊಸಮನಿ ಅವರ ನಾಲ್ಕನೇ ತಲೆಮಾರಿನ ಸುಕೀರ್ತನಿಂದ (ಅನಿಲ್ ಹೊಸಮನಿಯವರ ಮೊಮ್ಮಗ) ಮನೆ ನಿರ್ಮಾಣಕ್ಕೆ ಚಾಲನೆ ದೊರೆಯಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಲವತ್ತು ವರುಷಗಳ ಕಾಲ ಒಬ್ಬ ದಲಿತ ಪದವೀಧರನಿಗೆ, ಪತ್ರಕರ್ತನಿಗೆ, ಚಳವಳಿಗಾರನಿಗೆ ಒಂದು ಸಣ್ಣ ಮನೆಕಟ್ಟಿಕೊಳ್ಳಾಕೂ ಆಗಲಿಲ್ಲ ಅಂದ್ರೆ , ಇದು ದುರಂತವಲ್ಲದೆ ಮತ್ತೇನು? ಅನಿಲ್ ಹೊಸಮನಿಯವರ ಹೋರಾಟ, ಚಳವಳಿಗಳ ಫಲಿತವನ್ನು ನಾವಿಂದು ಅನುಭವಿಸುತ್ತಿದ್ದೇವೆ.
ಮನೆಯ ಹೆಸರೇ “ಸಂವಿಧಾನ”. ಇದೊಂದು ರೂಪಕವಾಗಿದೆ. ಇದರ ನಿರ್ಮಾಣಕ್ಕೆ ಎಷ್ಟೊಂದು ಮನಸುಗಳು ಕೈಜೋಡಿಸಿವೆ ಎಂಬುದನ್ನು ನೆನೆಸಿಕೊಂಡರೆ ಮೇಲೆ ಹೇಳಿದ ಬ್ರೆಕ್ಟ್ ನ ಮಾತುಗಳಂತೆಯೇ ಇವೆ.
ಇದೇ ಮನೆಯ ಒಂದು ಪುಟ್ಟ ಹಾಲ್ ಅಂಬೇಡ್ಕರ್ ಪ್ರೆಸ್ ಆಗಿ ಕಾರ್ಯಾರಂಭ ಮಾಡಲಿದೆ. ಆ ಮೂಲಕ ಬಹುಜನ ನಾಯಕ ಮತ್ತೆ ಬರ್ತಾರೆ.

ಈ ಕಾಲದಲ್ಲಿ ಸಂವಿಧಾನ ಹೆಸರಿನ ಪುಟ್ಟ ಮನೆಯೊಂದನ್ನು ಚಳವಳಿಗಾರನಿಗೆ ಸಮಾನಮನಸ್ಕ ಗೆಳೆಯರೆಲ್ಲ ಸೇರಿ ಕಟ್ಟಿಸುವುದು, ಸಮೂಹದ ಒಂದು ಭಾಗ, ಮನುಷ್ಯ ಸಮುದಾಯದ ಜವಾಬ್ದಾರಿ ಕೂಡ ಹೌದು. ನಮ್ಮ ಮಾತು ಮತ್ತು ಕ್ರಿಯೆಗಳು ನಮ್ಮ ಸಮಕಾಲೀನರಿಗೆ ಅರ್ಥವಾಗುವಂತೆ ಇರಬೇಕು. ಹಾಗಾದಲ್ಲಿ ಮಾತ್ರ ಜನಪರ ಚಳವಳಿಗಳು ಗೆಲ್ಲುತ್ತವೆ. ಇಂತಹದೊಂದು ಅರ್ಥಪೂರ್ಣ ಮತ್ತು ಕಾಲದ ಅಗತ್ಯತೆಯ ಕಾರ್ಯಕ್ರಮವನ್ನು ಆಯೋಜಿಸಿದ ಮೇ ಬಳಗದ ಬಸೂ ಮತ್ತು ಗೆಳೆಯರ ಕಾರ್ಯ ಅನುಕರಣೀಯವಾದುದು.
ಚಳವಳಿಯಲ್ಲಿ ಧುಮುಕಿದವರು ಬಹಳ ಮಂದಿ ಇದ್ದಾರೆ. ಆದರೆ ಚಳುವಳಿಯನ್ನೇ ಒಂದು ‘ಪ್ರಾರ್ಥನೆ’ಯನ್ನಾಗಿ ಮಾಡಿಕೊಂಡ ಅನಿಲ್ ಹೊಸಮನಿಯಂತವರು ಸಿಗೋದು ಬಹಳ ಕಡಿಮೆ. ಈ ಹೋರಾಟಗಾರನ ನಾಲ್ಕು ದಶಕಗಳ ಹೋರಾಟದ ಆಳದಲ್ಲಿ ಸಾಂಸ್ಕೃತಿಕ ಹುಡುಕಾಟಗಳಿವೆ. ಜನರ ಬದುಕನ್ನು ಕಟ್ಟುವ ಕ್ರಿಯೆಗಳಿವೆ. ಈ ದಿನದ ಕಾರ್ಯಕ್ರಮ ಅರ್ಥಪೂರ್ಣ ಅಷ್ಟೇ ಅಲ್ಲ, ಚಳವಳಿಗಳನ್ನು ಜನರ ಬಳಿಗೆ ಒಯ್ಯುವ, ಮುಟ್ಟಿಸುವ, ತೆರೆದುಕೊಳ್ಳುವ ಮನಸ್ಸುಗಳನ್ನು ಸೃಷ್ಟಿಸುವ ಕೆಲಸ ಮಾಡಿದೆ.
ಚಳವಳಿಗಾರ ಯಾವತ್ತೂ ಕೂಡ ಇಂಜಿನಿಯರ್, ಕೃಷಿತಜ್ಞ, ಬುದ್ದಿಜೀವಿ, ಅಧಿಕಾರಿಗಳಿಗಿಂತಲೂ ಶ್ರಮಜೀವಿ. ಬಸ್ಟ್ಯಾಂಡಿನಲ್ಲಿ ಒಂದು ಪುಟ್ಟ ಬಾಕ್ಸ್ ಇಟ್ಟು, *ನಿಮ್ಮ,ನಿಮ್ಮ ದೂರುಗಳನ್ನು, ಕಷ್ಟಗಳನ್ನು ಈ ಪೆಟ್ಟಿಗೆಯಲ್ಲಿ ಬರೆದು ಹಾಕಿರಿ*
-ಅನಿಲ ಹೊಸಮನಿ.
ಹೀಗೆ ಬರೆದಿಟ್ಟು ಸಂಜೆ ಹೊತ್ತಿನಲ್ಲಿ ಆ ಪುಟ್ಟ ಪೆಟ್ಟಿಗೆಯ ಪತ್ರಗಳನ್ನು ಹರಡಿಕೊಂಡು ವರದಿ ಮಾಡುವ ಯಾವ ಪತ್ರಕರ್ತ ತಾನೆ ಈ ಹೊತ್ತಿನ ಮಾಧ್ಯಮದಲ್ಲಿದ್ದಾನೆ? ಅನಿಲ್ ಹೊಸಮನಿ ಎಂಬ ಹೊರನೋಟಕ್ಕೆ ಮೌನಿಯಂತೆ ಕಾಣುವ ಇವರು, ಮತ್ತು ಇವರ ಬಾಕ್ಸ್ ಈ ಹೊತ್ತಿಗೆ ಮೆಟಫರ್ ನಂತೆ ಕಾಣಿಸುತ್ತಿದೆ.
ಒಟ್ಟಾರೆ, ಅನಿಲ ಹೊಸಮನಿ ಎಂಬ ಸಂಘರ್ಷದ ಒಡನಾಡಿಯ ಜೊತೆಗಿನ ಈ ದಿನ, ಸಾರ್ವಜನಿಕ ನೈತಿಕತೆಗೊಂದು ನಿದರ್ಶನದಂತಿತ್ತು. ಡಿಎಸ್ಸೆಸ್ ಇಬ್ಭಾಗವಾಗಿದ್ದಾಗ ಖುಷಿಯಿಂದ ವರದಿ ಮಾಡಿದ್ದ ವೃತ್ತಪತ್ರಿಕೆಗಳು, ಯಾವುದೇ ಛಲವಂತ, ಪ್ರಾಮಾಣಿಕ, ಪಾರದರ್ಶಕ ಗುಂಪು ಎಂದಿಗೂ ಇಬ್ಭಾಗವಾಗುವುದಿಲ್ಲ , ನೈಜ ಹೋರಾಟಗಳು ಎಂದಿಗೂ ಸಾಯುವುದಿಲ್ಲ ಎಂಬುದನ್ನು ಮೇ ಸಾಹಿತ್ಯ ಬಳಗ ಕೂಗಿ ಕೂಗಿ ಹೇಳಿದಂತಿತ್ತು.

– ಬಿ.ಶ್ರೀನಿವಾಸ, ಸಾಹಿತಿ, ದಾವಣಗೆರೆ
—–
The post ಪ್ರಜ್ಞೆಯ ಹಸಿವನ್ನು ಪ್ರತಿನಿಧಿಸಿದ ಹೋರಾಟಗಾರ, ಹಿರಿಯ ಪತ್ರಕರ್ತ ವಿಜಾಪುರದ ಅನಿಲ್ ಹೊಸಮನಿ ಅವರ ಕಾರ್ಯಕ್ರಮ – ಬಿ. ಶ್ರೀನಿವಾಸ್, ಸಾಹಿತಿ, ದಾವಣಗೆರೆ appeared first on Karnataka Kahale.
]]>The post ಕಂಪ್ಲಿಯಲ್ಲಿ ಗಮನಸೆಳೆದ ಅರ್ಥಪೂರ್ಣ ‘ಪ್ರತೀ ಹುಣ್ಣಿಮೆ ಬುದ್ಧ ಪೂರ್ಣಿಮೆ’ ಕಾರ್ಯಕ್ರಮ appeared first on Karnataka Kahale.
]]>
ಕಂಪ್ಲಿ, ಜು.11: ಕರ್ನಾಟಕ ಬೌದ್ಧ ಸಮಾಜ ಆಯೋಜಿಸುತ್ತಿರುವ
“ಪ್ರತೀ ಹುಣ್ಣಿಮೆ ಬುದ್ಧ ಪೂರ್ಣಿಮೆ” ಕಾರ್ಯಕ್ರಮವನ್ನು
ಕಂಪ್ಲಿ ಯಲ್ಲಿ ಅರ್ಥಪೂರ್ಣ ಗುರುಪೂರ್ಣಿಮೆ ಯಾಗಿ ಆಚರಿಸಲಾಯಿತು.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯರು
ಶಿಕ್ಷಣ ತಜ್ಞರು, ಜೀವಪರ ಚಿಂತಕರೂ
ಡಾ.ಹೆಚ್.ಸಿ.ರಾಘವೇಂದ್ರ ಸರ್ ಅವರ ಮನೆಯಲ್ಲಿ ಕಾರ್ಯಕ್ರಮ ಜರುಗಿತು.
ತ್ರಿಸರಣ ಪಂಚಶೀಲಗಳ ಪಠಣದೊಂದಿಗೆ
ಬುದ್ಧ ವಂದನೆಯನ್ನು ಸಲ್ಲಿಸಿ ನಂತರ ವೈಚಾರಿಕ ಚಿಂತನೆಗಳ ಚರ್ಚೆ ಗಮನಸೆಳೆಯಿತು.
ಅಂತಿಮವಾಗಿ ಈ ದೇಶದ ಹಿಂದುಳಿದ ವರ್ಗಗಳ ರಕ್ಷಣೆಗಾಗಿ ಸಂವಿಧಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕುರಿತು ವಿಚಾರ ವಿನಿಮಯಗಳು ನಡೆದವು.
ಎಲ್ಲಾ ಜಾತಿ ಸಮುದಾಯದ ಬಂಧುಗಳು ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಬುದ್ಧ ಪೂರ್ಣಿಮೆಯನ್ನು ಗುರುಪೂರ್ಣಿಮೆಯಾಗಿ ಆಚರಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಕರ್ನಾಟಕ ಬೌದ್ಧ ಸಮಾಜದ ಗೌರವಾಧ್ಯಕ್ಷರು ಚನ್ನಬಸಪ್ಪ, ಅಧ್ಯಕ್ಷ ರಮೇಶ ಸುಗ್ನಳ್ಳಿ, ಉಪಾಧ್ಯಕ್ಷರಾದ ಅಂಜಿನಪ್ಪ, ಶಿಕ್ಷಕರಾದ ಬಸವರಾಜ, ಟಿ.ಶಿವರಾಜ್,
ಪಿ ಸಿ ಉಮೇಶ್ ಅವರು, ಪೊಲೀಸ ಇಲಾಖೆಯ ಶಿವರಾಜ್ ಅವರು ಇಂಜಿನಿಯರ್ ಶಾರುಖ್ ಅವರು,
ಭರತ್ ಅವರು, ಕರ್ನಾಟಕ ಬೌದ್ಧ ಸಮಾಜದ ಮಂಜುನಾಥ್, ಹರ್ಷವರ್ಧನ್, ಸುಧಾಕರ್, ರಮೇಶ್, ಹಾಗೂ ಇನ್ನಿತರ ಸ್ನೇಹಿತರು ಬಂಧುಗಳು ಮತ್ತು
ಡಾ.ರಾಘವೇಂದ್ರ ಸರ್ ಅವರ ಶ್ರೀಮತಿ ಸುಮಾ ಮೇಡಂ ಹಾಗೂ ಅವರ ಮಗಳು ಶ್ರೀಧೃತಿ ಪಾಲ್ಗೊಂಡಿದ್ದರು.
The post ಕಂಪ್ಲಿಯಲ್ಲಿ ಗಮನಸೆಳೆದ ಅರ್ಥಪೂರ್ಣ ‘ಪ್ರತೀ ಹುಣ್ಣಿಮೆ ಬುದ್ಧ ಪೂರ್ಣಿಮೆ’ ಕಾರ್ಯಕ್ರಮ appeared first on Karnataka Kahale.
]]>The post ವಿಜಾಪುರ ಬುದ್ಧವಿಹಾರ ಗ್ರಂಥಾಲಯಕ್ಕೆ ಡಾ. ಅಂಬೇಡ್ಕರ್ ಸಂಪುಟಗಳ ಗ್ರಂಥದಾನ appeared first on Karnataka Kahale.
]]>
ವಿಜಾಪುರ, ಜೂ.8: ನಗರದ ಸಾರಿಪುತ್ರ-ಬೋಧಧಮ್ಮ ಬೌದ್ಧವಿಹಾರ ಗ್ರಂಥಾಲಯಕ್ಕೆ
ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕರಾದ ಕಲ್ಲಪ್ಪ ತೊರವಿ ಅವರು 5000 ರೂ. ಮುಖಬೆಲೆಯ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾಷಣ ಮತ್ತು ಬರಹಗಳ ಇಂಗ್ಲಿಷ್ ಆವೃತ್ತಿಗಳ ಗ್ರಂಥದಾನ ಮಾಡಿದರು.
ಭಾನುವಾರ ಬುದ್ಧವಿಹಾರಕ್ಕೆ ಆಗಮಿಸಿದ ಕಲ್ಲಪ್ಪ ತೊರವಿ ಅವರು ಸಾಮೂಹಿಕ ಬುದ್ಧವಂದನೆಯ ನಂತರ ಬೌದ್ಧವಿಹಾರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ರಾಜಶೇಖರ ಯಡಹಳ್ಳಿ ಅವರಿಗೆ ಡಾ. ಅಂಬೇಡ್ಕರ್ ಸಂಪುಟಗಳನ್ನು ಅರ್ಪಿಸಿದರು.
ಈ ಸಮಯದಲ್ಲಿ ಮಾತನಾಡಿದ ರಾಜಶೇಖರ ಯಡಹಳ್ಳಿ ಅವರು ಭಗವಾನ ಬುದ್ಧ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ವಿಚಾರಗಳ ಪ್ರಚಾರ ಮತ್ತು ಪ್ರಸಾರದ ದೃಷ್ಟಿಯಿಂದ ಬುದ್ಧವಿಹಾರದಲ್ಲಿ ಗ್ರಂಥಾಲಯವನ್ನು ಪ್ರಾರಂಭಿಸಲಾಗಿದೆ. ಈ ಗ್ರಂಥಾಲಯವು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿದ್ದು, ಎಲ್ಲರೂ ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಉದಾರ ಮನಸ್ಸಿನಿಂದ ಗ್ರಂಥದಾನ ಮಾಡಿದ ಕಲ್ಲಪ್ಪ ತೊರವಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕರಾಗಿ ಆಯ್ಕೆಯಾಗಿರುವ ಕಲ್ಲಪ್ಪ ತೊರವಿ ಅವರನ್ನು ಬುದ್ಧವಿಹಾರ ನಿರ್ಮಾಣ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬುದ್ಧವಿಹಾರ ನಿರ್ಮಾಣ ಸಮಿತಿಯ ಕಾರ್ಯದರ್ಶಿ ನಾಗರಾಜ ಲಂಬು, ನಿರ್ದೇಶಕರಾದ ಅನಿಲ ಹೊಸಮನಿ, ರಾಜೇಶ ತೊರವಿ, ಮನೋಜ ಕೋಟ್ಯಾಳಕರ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚೆನ್ನು ಕಟ್ಟಿಮನಿ, ಮುಖಂಡರಾದ ಬಸವರಾಜ ಬ್ಯಾಳಿ, ಎಂ.ಬಿ. ಹಳ್ಳದಮನಿ, ಕೆ.ಎಂ. ಶಿವಶರಣ, ರಮೇಶ ಹಾದಿಮನಿ, ಪ್ರತಾಪ ಚಿಕ್ಕಲಕಿ ಮತ್ತಿತರರು ಉಪಸ್ಥಿತರಿದ್ದರು.
—–
The post ವಿಜಾಪುರ ಬುದ್ಧವಿಹಾರ ಗ್ರಂಥಾಲಯಕ್ಕೆ ಡಾ. ಅಂಬೇಡ್ಕರ್ ಸಂಪುಟಗಳ ಗ್ರಂಥದಾನ appeared first on Karnataka Kahale.
]]>