Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಶಿಕ್ಷಣ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Sun, 17 May 2026 14:21:29 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಶಿಕ್ಷಣ – Karnataka Kahale https://www.karnatakakahale.com 32 32 ನಾಳೆ(ಮೇ‌18) ಹರಿಹರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ https://www.karnatakakahale.com/news/22860 Sun, 17 May 2026 12:43:06 +0000 https://www.karnatakakahale.com/?p=22860 ಹರಿಹರ, ಮೇ.17: ವಿದ್ಯಾರ್ಥಿಗಳ ಸಾಧನೆ, ಸಾಂಸ್ಕೃತಿಕ ಪ್ರತಿಭೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಪ್ರದರ್ಶಿಸುವ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ೨೦೨೫-೨೬ನೇ ಸಾಲಿನ ವಾರ್ಷಿಕೋತ್ಸವವು ಮೇ 18 ರಂದು ಸೋಮವಾರ ಕಾಲೇಜಿನ ಒಳಾಂಗಣದ ಆವರಣದಲ್ಲಿ ಜರುಗಲಿದೆ. ಬೆ. 10-30 ಗಂಟೆಗೆ ಕಾಲೇಜು ಆಡಳಿತ…

The post ನಾಳೆ(ಮೇ‌18) ಹರಿಹರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ appeared first on Karnataka Kahale.

]]>
ಹರಿಹರ, ಮೇ.17: ವಿದ್ಯಾರ್ಥಿಗಳ ಸಾಧನೆ, ಸಾಂಸ್ಕೃತಿಕ ಪ್ರತಿಭೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಪ್ರದರ್ಶಿಸುವ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ೨೦೨೫-೨೬ನೇ ಸಾಲಿನ ವಾರ್ಷಿಕೋತ್ಸವವು ಮೇ 18 ರಂದು ಸೋಮವಾರ ಕಾಲೇಜಿನ ಒಳಾಂಗಣದ ಆವರಣದಲ್ಲಿ ಜರುಗಲಿದೆ.

ಬೆ. 10-30 ಗಂಟೆಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಹರಿಹರ ಶಾಸಕರಾದ ಬಿ.ಪಿ ಹರೀಶ್ ಅವರು ಕಾಲೇಜು ವಾರ್ಷಿಕೋತ್ಸವಕ್ಕೆ ಚಾಲನೆ ನೀಡುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ್ ಎಂ‌.ಎನ್ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಗಣ್ಯರು ಭಾಗವಹಿಸುವರು.

ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸುವರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಾಂಶುಪಾಲರಾದ ಡಾ.‌ ರಮೇಶ್ ಎಂ.ಎನ್ ಅವರು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದ್ದಾರೆ.

—–

The post ನಾಳೆ(ಮೇ‌18) ಹರಿಹರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ appeared first on Karnataka Kahale.

]]>
ವಿದ್ಯಾರ್ಥಿಗಳು ಉತ್ತಮ ಭವಿಷ್ಯದ ಜೀವನ ರೂಪಿಸಿಕೊಳ್ಳಲು ಎನ್ ಎಸ್ ಎಸ್ ಸಹಕಾರಿ -ಪ್ರಾಂಶುಪಾಲ ಡಾ.ರಮೇಶ್.ಎಂಎನ್ https://www.karnatakakahale.com/news/22810 Wed, 22 Apr 2026 00:19:20 +0000 https://www.karnatakakahale.com/?p=22810 ಹರಿಹರ: ರಾಷ್ಟೀಯ ಸೇವಾ ಯೋಜನೆಯಂತಹ ಚಟುವಟಿಕೆಗಳಿಂದ ಸ್ವಯಂ ಶಿಸ್ತು ಕಲಿಕೆ ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್.ಎಂ.ಎನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ-೧ ಮತ್ತು ೨ ರ ವತಿಯಿಂದ…

The post ವಿದ್ಯಾರ್ಥಿಗಳು ಉತ್ತಮ ಭವಿಷ್ಯದ ಜೀವನ ರೂಪಿಸಿಕೊಳ್ಳಲು ಎನ್ ಎಸ್ ಎಸ್ ಸಹಕಾರಿ -ಪ್ರಾಂಶುಪಾಲ ಡಾ.ರಮೇಶ್.ಎಂಎನ್ appeared first on Karnataka Kahale.

]]>

ಹರಿಹರ: ರಾಷ್ಟೀಯ ಸೇವಾ ಯೋಜನೆಯಂತಹ ಚಟುವಟಿಕೆಗಳಿಂದ ಸ್ವಯಂ ಶಿಸ್ತು ಕಲಿಕೆ ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್.ಎಂ.ಎನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ-೧ ಮತ್ತು ೨ ರ ವತಿಯಿಂದ ತಾಲೂಕಿನ ಸಾಲಕಟ್ಟೆ ಗ್ರಾಮದಲ್ಲಿ ೭ ದಿನಗಳ ಕಾಲ ಜರುಗಿದ ‘ವಿಕಸಿತ ಭಾರತದೆಡೆಗೆ ಯುವಜನತೆ’ ಎಂಬ ಧ್ಯೇಯದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉತ್ರಮ ಭವಿಷ್ಯದ ಜೀವನ ರೂಪಿಸಿಕೊಳ್ಳಲು, ಔದ್ಯೋಗಿಕ ಬೆಳವಣಿಗೆಗೆ ಎನ್‌ಎಸ್‌ಎಸ್‌ನ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಹೇಳಿದರು.                                          ಸ್ವಚ್ಚತೆಗೆ ಅಧ್ಯತೆ ನೀಡಿ, ಸೇವಾ ಮನೋಭಾವವನ್ನು ಯುವಜನತೆ ಹೊಂದಬೇಕು ಎಂದು ಆಶಯ ವ್ಯಕ್ತಪಡಿಸಿ, ೭ ದಿನಗಳ ಕಾಲ ಶಿಬಿರದ ಸಮಯದಲ್ಲಿ ಸಹಕಾರ ನೀಡಿದ ಗ್ರಾಮದ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದರು.


ತಾಲೂಕಿನ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷರಾದ ಆರ್.ಆರ್.ಮಠ ಅವರು ಮಾತನಾಡಿ, ಶಿಕ್ಷಣಕ್ಕೆ ಅಧ್ಯತೆ ನೀಡುವ ಸಮಾಜ ಸ್ವಯಂ ಅಭಿವೃದ್ಧಿ ಆಗುತ್ತದೆ. ಉನ್ನತ ಶಿಕ್ಷಣ ಹೊಂದಿದ ಯುವಜನರು ಮಕ್ಕಳಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಹೇಳಿ, ಮನವೊಲಿಸಲು ಮನವಿ ಮಾಡಿದರು. ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣ ಹಿನ್ನೆಲೆಯಲ್ಲಿ ಸರ್ಕಾರ ನೀಡುವ ಪೌಷ್ಠಿಕ ಆಹಾರ, ಸಮವಸ್ತç, ಪಾದರಕ್ಷೆ, ಪಠ್ಯ ಪುಸ್ತಕ, ಪಠ್ಯೇತರ ಚಟುವಟಿಕೆಗಳ ಸಮಾಗ್ರಿಗಳು ಹಾಗೂ ಇನ್ನಿತರ ಸೌಲಭ್ಯಗಳನ್ನು ವಿವರಿಸಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ತಿಪ್ಪೇಸ್ವಾಮಿ.ಹೆಚ್ ಅವರು ಸಮಾರೋಪ ಭಾಷಣ ಮಾಡಿದರು. ಐ.ಕ್ಯೂ.ಎಸ್.ಸಿ ಸಂಯೋಜಕರಾದ ಡಾ.ಅನಂತನಾಗ್.ಹೆಚ್.ಪಿ, ಮುಖ್ಯೋಪಾಧ್ಯಯರಾದ ಡಿ.ಎಂ.ಮಂಜುನಾಥ್, ಶಿಕ್ಷಕರುಗಳಾದ ಆರ್.ಬಿ.ಮಲ್ಲಿಕಾರ್ಜುನ, ಮಹಾಂತೇಶ್.ಡಿ.ಎನ್, ಎಫ್.ಸಿ.ಐ ನೌಕರರಾದ ಪರಶುರಾಮ್, ಕೆ.ಎನ್.ದೇವರಾಜ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಯೋಗೇಶ್.ಕೆ.ಜೆ, ಹನುಮಂತಪ್ಪ.ಕೆ.ವೈ, ಇತಿಹಾಸ ವಿಭಾಗದ ಉಪನ್ಯಾಸಕರಾದ ರಾಜಪ್ಪ.ಎ ಅವರುಗಳು ಉಪಸ್ಥಿತರಿದ್ದು ಮಾತನಾಡಿದರು.

The post ವಿದ್ಯಾರ್ಥಿಗಳು ಉತ್ತಮ ಭವಿಷ್ಯದ ಜೀವನ ರೂಪಿಸಿಕೊಳ್ಳಲು ಎನ್ ಎಸ್ ಎಸ್ ಸಹಕಾರಿ -ಪ್ರಾಂಶುಪಾಲ ಡಾ.ರಮೇಶ್.ಎಂಎನ್ appeared first on Karnataka Kahale.

]]>
ಮೊಬೈಲ್ ಯುವ ಪೀಳಿಗೆಗೆ ಮಾರಕ: ಪಿಎಸ್‌ಐ ಮಂಜುಳ.ಡಿ ಕಿವಿಮಾತು https://www.karnatakakahale.com/news/22791 Thu, 16 Apr 2026 06:47:10 +0000 https://www.karnatakakahale.com/?p=22791 ಹರಿಹರ: ಯುವ ಸಮೂಹ ಮೊಬೈಲ್ ಗೀಳು ಬಿಟ್ಟು ಪರಿಶ್ರಮದಿಂದ ಅಧ್ಯಯನ ಮಾಡಬೇಕು. ದುಶ್ಚಟಗಳಿಂದ ದೂರವಿದ್ದು, ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಗ್ರಾಮಾಂತರ ಪೋಲಿಸ್ ಉಪನಿರೀಕ್ಷಕರಾದ ಶ್ರೀಮತಿ ಮಂಜುಳ.ಡಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್…

The post ಮೊಬೈಲ್ ಯುವ ಪೀಳಿಗೆಗೆ ಮಾರಕ: ಪಿಎಸ್‌ಐ ಮಂಜುಳ.ಡಿ ಕಿವಿಮಾತು appeared first on Karnataka Kahale.

]]>

ಹರಿಹರ: ಯುವ ಸಮೂಹ ಮೊಬೈಲ್ ಗೀಳು ಬಿಟ್ಟು ಪರಿಶ್ರಮದಿಂದ ಅಧ್ಯಯನ ಮಾಡಬೇಕು. ದುಶ್ಚಟಗಳಿಂದ ದೂರವಿದ್ದು, ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಗ್ರಾಮಾಂತರ ಪೋಲಿಸ್ ಉಪನಿರೀಕ್ಷಕರಾದ ಶ್ರೀಮತಿ ಮಂಜುಳ.ಡಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ-೧ ಮತ್ತು ೨ ರ ವತಿಯಿಂದ ತಾಲೂಕಿನ ಸಾಲಕಟ್ಟೆ ಆಯೋಜಿಸಿರುವ ವಾರ್ಷಿಕ ಶಿಬಿರದ ಮೂರನೆಯ ದಿನದ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.                                        ಇತ್ತೀಚಿಗೆ ನಡೆಯುತ್ತಿರುವ ಸೈಬರ್ ಕ್ರೈಂಗಳ ಬಗ್ಗೆ ಯುವಜನತೆಯನ್ನು ಎಚ್ಚರಿಸಿದರು. ವಿದ್ಯಾರ್ಥಿಗಳು ಪರಿಶ್ರಮದಿಂದ ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ. ಪೋಷಕರು ಮಕ್ಕಳ ನಡವಳಿಕೆ ಮೇಲೆ ನಿಗಾ ವಹಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರು ಮತ್ತು ವಕೀಲರು ಆಗಿರುವ ವೀರೇಶ್ ಬ.ಅಜ್ಜಣ್ಣನವರ್ ಮಾತನಾಡಿ, ಯುವ ಜನತೆ ಬಯಸಿದರೆ ಇಡೀ ದೇಶದಲ್ಲಿ ಪರಿವರ್ತನೆ ತರುತ್ತದೆ. ಇವರು ಡ್ರಗ್ಸ್, ಆಲ್ಕೋಹಾಲ್, ಗುಟ್ಕಾ ಮತ್ತು ಇತರೆ ಮಾದಕ ವಸ್ತುಗಳ ದಾಸರಾಗದಂತೆ ತಡೆಯಬೇಕು. ಇಂಥ ಪ್ರಕರಣಗಳಿದ್ದರೆ ಬೇಗ ಗುರುತಿಸಿ ಆಪ್ತ ಸಮಾಲೋಚನೆ ಮೂಲಕ ಬಿಡಿಸಬೇಕು. ತಜ್ಞರ ಸಲಹೆ ಪಡೆಯಬೇಕು. ಮೊಬೈಲ್ ದುರ್ಬಳಕೆ ತಡೆಗೂ ಇದು ಅನ್ವಯವಾಗುತ್ತದೆ ಎಂದರು.
ಗ್ರಾಮದ ಮುಖಂಡರಾದ ಎಸ್.ಬಿ.ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ಎಸ್.ಬಿ.ರೇವಣಸಿದ್ದಪ್ಪ, ಎಂ.ಜಿ.ಮಹದೇವಪ್ಪ, ಕೆ.ವೈ.ಅಶೋಕ, ಜಿ.ಸಿ.ಮಹೇಶ್ವರಪ್ಪ, ಶಿವನಂದಪ್ಪ ಇಟಿಗಿ, ಟಿ.ಎಂ.ವೀರಯ್ಯ, ಎ.ಎ.ದಂಡ್ಯೆಪಪ್ಪ ಇನ್ನಿತತರು ಹಾಗೂ ಕಾಲೇಜಿನ ವಾಣಿಜ್ಯಶಾಸ್ತçದ ಸಹ ಪ್ರಾಧ್ಯಾಪಕರಾದ ಡಾ.ದಾಕ್ಷಾಯಿಣಿ.ಜಿ.ಎನ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಮತಾ.ಹೆಚ್.ಸಾಹುಕಾರ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶಮಾ ತುಮ್ಮಿನಕಟ್ಟಿ, ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೆಂಕಪ್ಪನವರ ಬಸವರಾಜು, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಯೋಗೇಶ್.ಕೆ.ಜೆ, ಹನುಮಂತಪ್ಪ.ಕೆ.ವೈ, ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸರಾದ ಶ್ರೀಮತಿ ನಾಗವೇಣಿ.ಆರ್.ಎಸ್, ಐಶ್ವರ್ಯ ಜೆ.ಶೆಟ್ಟರ್ ಅವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

The post ಮೊಬೈಲ್ ಯುವ ಪೀಳಿಗೆಗೆ ಮಾರಕ: ಪಿಎಸ್‌ಐ ಮಂಜುಳ.ಡಿ ಕಿವಿಮಾತು appeared first on Karnataka Kahale.

]]>
ಎನ್.ಎಸ್.ಎಸ್ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರ ಕಲಿಯಲು ಸಾಧ್ಯ: ಶಾಸಕ ಬಿ.ಪಿ.ಹರೀಶ್ https://www.karnatakakahale.com/news/22732 Tue, 14 Apr 2026 04:50:50 +0000 https://www.karnatakakahale.com/?p=22732 ಹರಿಹರ, ಏ.14: ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳುವ ಪಠ್ಯೇತರ ಚಟುವಟಿಕೆಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯಂತಹ ಘಟಕಗಳಿಂದ ಆಯೋಜಿಸುವ ವಾರ್ಷಿಕ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರವನ್ನು ಕಲಿಯಲು ಸಹಕಾರಿ. ಆ ಮೂಲಕ ಯುವ ಜನತೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಶಾಸಕರಾದ ಬಿ.ಪಿ.ಹರೀಶ್…

The post ಎನ್.ಎಸ್.ಎಸ್ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರ ಕಲಿಯಲು ಸಾಧ್ಯ: ಶಾಸಕ ಬಿ.ಪಿ.ಹರೀಶ್ appeared first on Karnataka Kahale.

]]>

ಹರಿಹರ, ಏ.14: ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳುವ ಪಠ್ಯೇತರ ಚಟುವಟಿಕೆಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯಂತಹ ಘಟಕಗಳಿಂದ ಆಯೋಜಿಸುವ ವಾರ್ಷಿಕ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರವನ್ನು ಕಲಿಯಲು ಸಹಕಾರಿ. ಆ ಮೂಲಕ ಯುವ ಜನತೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಶಾಸಕರಾದ ಬಿ.ಪಿ.ಹರೀಶ್ ಅವರು ಪ್ರತಿಪಾದಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ-೧ ಮತ್ತು ೨ ರ ವತಿಯಿಂದ ತಾಲೂಕಿನ ಸಾಲಕಟ್ಟೆ ಗ್ರಾಮದಲ್ಲಿ ೭ ದಿನಗಳ ಕಾಲ ಆಯೋಜಿಸಿರುವ ‘ವಿಕಸಿತ ಭಾರತದೆಡೆಗೆ ಯುವಜನತೆ’ ಎಂಬ ಧ್ಯೇಯದ ವಾರ್ಷಿಕ ಶಿಬಿರವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣರ ಮತ್ತು ರೈತರ ಜೀವನ ಶೈಲಿಯನ್ನು ಅವಲೋಕಿಸಿ ಹೊಸ ಅನುಭವವನ್ನು ಪಡೆದು, ಗ್ರಾಮೀಣರಿಗೆ ಶಿಕ್ಷಣ, ಸ್ವಚ್ಚತೆ, ಆರೋಗ್ಯ ಕಾಳಜಿಯ ಮಹತ್ವ ಮತ್ತು ಅರ್ಥಿಕ ಉಳಿತಾಯಕ್ಕೆ ಇರುವ ಹೈನುಗಾರಿಕೆಯಂತಹ ಇತರ ಉಪ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು

ದಾವಣಗೆರೆ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ.ಅಶೋಕ ಕುಮಾರ ವೀ.ಪಾಳೇದ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಆಶಯವನ್ನೇ ಗುರಿಯಾಗಿಸಿಕೊಂಡುರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳು ಜರುಗುತ್ತಿವೆ. ಸಮಸಮಾಜದ ಪರಿಕಲ್ಪನೆಯನ್ನು ಯುವ ಜನತೆಗೆ ಜಾಗೃತಿ ಮೂಡಿಸುತ್ತಾ ಸಾಗಿದೆ. ದೇಶ ಪ್ರೇಮ, ದೇಶಭಕ್ತಿ, ದೇಶೀಯ ಭಾವೈಕ್ಯತೆ, ಏಕತೆ, ಸಮಗ್ರತೆ ಕಲಿಸುವುದರೊಂದಿಗೆ, ಶ್ರಮದಾನದ ಉದ್ದೇಶದಿಂದಲೂ ಕಾರ್ಯನಿರ್ವಹಿಸುತ್ತಿದೆ. ಯುವಜನತೆ ಸೇವಾ ಮನೋಭಾವದ ಜೊತೆ ಕೌಶಲ್ಯಯು ಶಿಕ್ಷಣವನ್ನು ಮೈಗೂಡಿಸಿಕೊಳ್ಳಲು ಎನ್‌ಎಸ್‌ಎಸ್ ಸಹಕಾರಿ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್.ಎಂ.ಎನ್ ಅವರು ಮಾತನಾಡಿ, ಭಾರತ ದೇಶ ಹೇರಳವಾದ ಮಾನವ ಸಂಪನ್ಮೂಲವನ್ನು ಹೊಂದಿದೆ. ಇದರ ಸದ್ಭಳಕೆಯಾಗಬೇಕಾದರೆ ಸರಿಯಾದ ಅರಿವಿನ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ಎನ್‌ಎಸ್‌ಎಸ್ ನಂತಹ ಚಟುವಟಿಕೆಗಳು ದೇಶದ ಅಭಿವೃದ್ಧಿಗೆ ಅಗತ್ಯ ಇರುವ ಯುವ ಜನತೆಗೆ ಶಿಸ್ತು, ಬದ್ಧತೆಯಂತಹ ನೈತಿಕತೆಯನ್ನು ಕಲಿಸುತ್ತವೆ. ಗ್ರಾಮೀಣ ಅಭಿವೃದ್ಧಿಯು ದೇಶದ ಉನ್ನತಿಗೆ ಪ್ರಮುಖಾಂಶವಾಗಿದ್ದು, ಇದರಲ್ಲಿ ಯುವಜನೆತೆಯ ಯೋಗದಾನ ಮಹತ್ವದ್ದಾಗಿದೆ ಎಂದು ಹೇಳಿದರು.

ಶ್ರೀ ಜ.ಪಂ.ವಿ.ವಿಯ ಉಪಾಧ್ಯಕ್ಷರಾದ ಡಿ.ಎಂ.ಹಾಲಸ್ವಾಮಿ, ಗ್ರಾ.ಪಂನ ಮಾಜಿ ಸದಸ್ಯರಾದ ಶ್ರೀಮತಿ ಅನುಪಮ.ಬಿ.ಎಸ್ ಹಾಗೂ ಇನ್ನಿತರ ಗ್ರಾಮದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಎನ್‌ಎಸ್‌ಎಸ್ ಘಟಕ-೧ರ ಕಾರ್ಯಕ್ರಮಾಧಿಕಾರಿ ಯೋಗೇಶ್.ಕೆ.ಜೆ, ಐ.ಕ್ಯೂ.ಎಸ್.ಸಿ ಸಹಸಂಯೋಜಕರಾದ ಅಬ್ದುಲ್ ಬಷೀರ, ಕನ್ನಡ ವಿಭಾಗದ ಮುಖ್ಯಸ್ಥರಾದ ಗೌರಮ್ಮ.ಎಂ.ಎಸ್, ಪರಿಸರವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ತಿರುಮಲ.ಎಸ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮನೋಹರ್.ಬಿ.ಎಂ, ಸಹ ಪ್ರಾಧ್ಯಾಪಕರಾದ ಡಾ.ಶರಣ ಬಸವರಾಜ ಬಿ.ಪಾಟೀಲ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ತಿಪ್ಪೇಸ್ವಾಮಿ.ಹೆಚ್, ಗಣಿತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಸವಿತಾ ಬಿ.ಮೇಗಳಮನಿ ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೆಂಕಪ್ಪನವರ ಬಸವರಾಜು, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಾಬು.ಕೆ.ಎ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಗಂಗರಾಜು.ಎಸ್ ಅವರುಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿದ್ಯಾರ್ಥಿನಿ ಕು.ಅರ್ಪಿತಾ.ಎನ್.ಹೆಚ್ ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕರಾದ ರಾಜಪ್ಪ.ಎ ಸ್ವಾಗತಿಸಿದರು. ಐ.ಕ್ಯೂ.ಎಸ್.ಸಿ ಸಂಯೋಜಕರಾದ ಡಾ.ಅನಂತನಾಗ್.ಹೆಚ್.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರ.ಜಿ.ಪಿ ಕಾರ್ಯಕ್ರಮ ನಿರ್ವಹಿಸಿದರು. ಎನ್‌ಎಸ್‌ಎಸ್ ಘಟಕ-೨ರ ಕಾರ್ಯಕ್ರಮಾಧಿಕಾರಿ ಹನುಮಂತಪ್ಪ.ಕೆ.ವೈ  ವಂದಿಸಿದರು.

The post ಎನ್.ಎಸ್.ಎಸ್ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರ ಕಲಿಯಲು ಸಾಧ್ಯ: ಶಾಸಕ ಬಿ.ಪಿ.ಹರೀಶ್ appeared first on Karnataka Kahale.

]]>
ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಗತ್ಯ ಭಾಷಾ ಪ್ರಾವೀಣ್ಯತೆ ಮುಖ್ಯ: ಪ್ರೊ.ಶಿವರಾಜ್ ಕಿವಿಮಾತು https://www.karnatakakahale.com/news/22666 Thu, 02 Apr 2026 10:02:49 +0000 https://www.karnatakakahale.com/?p=22666 ಹರಿಹರ, ಏ.2: ವಿಷಯದ ಜ್ಞಾನವನ್ನು ಸ್ವಿಕರಿಸಲು ಹಾಗೂ ವಿತರಿಸಲು ಜಾಗತಿಕ ಭಾಷಾ ಜ್ಞಾನ ಅವಶ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಭಾಷಾ ಪ್ರಾವೀಣ್ಯತೆಯು ಒಂದು ನಿರ್ಣಾಯಕ ಆಸ್ತಿಯಾಗಿದೆ. ವೃತ್ತಿ ಪ್ರಗತಿ, ಜಾಗತಿಕ ವ್ಯವಹಾರ ವಿಸ್ತರಣೆ ಮತ್ತು ಪರಿಣಾಮಕಾರಿ ಸಂವಹನಕ್ಕೆ ಪ್ರಮುಖ ಸಾಧನವಾಗಿ ಭಾಷೆ ಕಾರ್ಯನಿರ್ವಹಿಸುತ್ತದೆ…

The post ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಗತ್ಯ ಭಾಷಾ ಪ್ರಾವೀಣ್ಯತೆ ಮುಖ್ಯ: ಪ್ರೊ.ಶಿವರಾಜ್ ಕಿವಿಮಾತು appeared first on Karnataka Kahale.

]]>

ಹರಿಹರ, ಏ.2: ವಿಷಯದ ಜ್ಞಾನವನ್ನು ಸ್ವಿಕರಿಸಲು ಹಾಗೂ ವಿತರಿಸಲು ಜಾಗತಿಕ ಭಾಷಾ ಜ್ಞಾನ ಅವಶ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಭಾಷಾ ಪ್ರಾವೀಣ್ಯತೆಯು ಒಂದು ನಿರ್ಣಾಯಕ ಆಸ್ತಿಯಾಗಿದೆ. ವೃತ್ತಿ ಪ್ರಗತಿ, ಜಾಗತಿಕ ವ್ಯವಹಾರ ವಿಸ್ತರಣೆ ಮತ್ತು ಪರಿಣಾಮಕಾರಿ ಸಂವಹನಕ್ಕೆ ಪ್ರಮುಖ ಸಾಧನವಾಗಿ ಭಾಷೆ ಕಾರ್ಯನಿರ್ವಹಿಸುತ್ತದೆ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಪ್ರೊ.ಶಿವರಾಜ್.ಎನ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ ಹಾಗೂ ಗಣಿತಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ರೇಖೀಯ ರೂಪಾಂತರ’ (Linear Transformation) ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆಗಳ ಪಾಂಡಿತ್ಯ, ವಿಶೇಷವಾಗಿ ಇಂಗ್ಲಿಷ್ ಅಂತರರಾಷ್ಟ್ರೀಯವಾದ ಸ್ಪರ್ಧಾತ್ಮಕ ಜಗತ್ತಿಗೆ ಸಹಾಯಕವಾಗಿದೆ. ಗಡಿಯಾಚೆಗಿನ ಸಹಯೋಗವನ್ನು ಸುಗಮಗೊಳಿಸುತ್ತದೆ ಮತ್ತು ವೈವಿಧ್ಯಮಯ ಭಾಗವಹಿಸುವಿಕೆಯಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಗಣಿತಶಾಸ್ತ್ರ ಅಧ್ಯಯನದಿಂದ ಮಾನವನ ಏಕಾಗ್ರತೆ, ಆತ್ಮವಿಶ್ವಾಸ, ಧೈರ್ಯ ಮತ್ತು ಸಾಮರ್ಥ್ಯವನ್ನು ಬೆಳೆಸುತ್ತದೆ. ವಿಶೇಷ ಉಪನ್ಯಾಸಗಳು ವಿದ್ಯಾರ್ಥಿಗಳ ವಿಷಯದ ಜ್ಞಾನವನ್ನು ವಿಸ್ತರಿಸಲು ಸಹಕಾರಿ. ಜ್ಞಾನವನ್ನು ಪಡೆಯಲು ಭಾಷೆ ಅತ್ಯಗತ್ಯ. ಅರಿವಿನ ಬೆಳವಣಿಗೆ, ಸಂವಹನ ಮತ್ತು ಮಾಹಿತಿ ಸಂಸ್ಕರಣೆಗೆ ಪ್ರಾಥಮಿಕ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಇದು ಸ್ಮರಣಶಕ್ತಿ, ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಹೆಚ್ಚಿಸುತ್ತದೆ ಎಂದು ವಿದ್ಯಾಥಿಗಳಿಗೆ ತಿಳಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್.ಎಂ.ಎನ್ ಅವರು ಮಾತನಾಡಿ, ದೈನಂದಿನ ಜೀವನದಲ್ಲಿ ಹಣಕಾಸು ನಿರ್ವಹಣೆ, ಪದಾರ್ಥಗಳನ್ನು ಅಳೆಯುವುದು, ಪ್ರಯಾಣದ ಸಮಯವನ್ನು ಲೆಕ್ಕಹಾಕುವುದು ಮತ್ತು ತರ್ಕದ ಮೂಲಕ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ ಗಣಿತವು ಅತ್ಯಗತ್ಯ. ಇದರೊಂದಿಗೆ ವಿಮರ್ಶಾತ್ಮಕ ಚಿಂತನೆ ಮತ್ತು ಸಮಯ ನಿರ್ವಹಣೆಯನ್ನು ಬೆಳೆಸಲಾಗುತ್ತದೆ. ವೇಳಾಪಟ್ಟಿಯಿಂದ ತಂತ್ರಜ್ಞಾನದವರೆಗೆ, ಗಣಿತವು ವ್ಯಕ್ತಿತ್ವ ರಚನೆ ಮತ್ತು ದಕ್ಷತೆಯನ್ನು ಒದಗಿಸುತ್ತದೆ ಎಂದು ಹೇಳಿದರು.
ಐ.ಕ್ಯೂ.ಎಸ್.ಸಿ ಸಂಯೋಜಕರಾದ ಡಾ.ಅನಂತನಾಗ್.ಹೆಚ್.ಪಿ ಅವರು ಮಾತನಾಡಿದರು.
ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ತಿರುಮಲ.ಎಸ್, ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಶರಣ ಬಸವರಾಜ್ ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕು.ಕುಸುಮಾ ಪ್ರಾರ್ಥಿಸಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಯೋಗೀಶ್.ಕೆ.ಎಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಹಪ್ರಾಧ್ಯಾಪಕರಾದ ಡಾ.ಸವಿತಾ.ಬಿ.ಮೇಗಲಮನಿ ಅತಿಥಿಗಳನ್ನು ಪರಿಚಯಿಸಿದರು. ಕು.ಸ್ನೇಹಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಹರೀಶ್ ಹೆಚ್.ಟಿ ವಂದಿಸಿದರು.
—–

The post ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಗತ್ಯ ಭಾಷಾ ಪ್ರಾವೀಣ್ಯತೆ ಮುಖ್ಯ: ಪ್ರೊ.ಶಿವರಾಜ್ ಕಿವಿಮಾತು appeared first on Karnataka Kahale.

]]>
ರಾಷ್ಟ್ರೀಯ ಯುವ ಸಂಸತ್‌ ಉತ್ಸವಕ್ಕೆ ಚಾಲನೆ: ಸದೃಢ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಪಣತೊಡಲು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಸಲಹೆ https://www.karnatakakahale.com/news/22567 Tue, 17 Mar 2026 07:09:15 +0000 https://www.karnatakakahale.com/?p=22567 ಬಳ್ಳಾರಿ: ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ತೆಕ್ಕಲಕೋಟೆ ಶ್ರೀಮತಿ ಹೊನ್ನುರಮ್ಮ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಅವರು  ಹೇಳಿದರು. ಕೇಂದ್ರ ಸರಕಾರದ ಯುವಜನ ಮತ್ತು ಕ್ರಿಡಾ ಇಲಾಖೆಯಡಿ ತೆಕ್ಕಲಕೋಟೆಯ…

The post ರಾಷ್ಟ್ರೀಯ ಯುವ ಸಂಸತ್‌ ಉತ್ಸವಕ್ಕೆ ಚಾಲನೆ: ಸದೃಢ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಪಣತೊಡಲು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಸಲಹೆ appeared first on Karnataka Kahale.

]]>
ಬಳ್ಳಾರಿ: ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ತೆಕ್ಕಲಕೋಟೆ ಶ್ರೀಮತಿ ಹೊನ್ನುರಮ್ಮ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಅವರು  ಹೇಳಿದರು.
ಕೇಂದ್ರ ಸರಕಾರದ ಯುವಜನ ಮತ್ತು ಕ್ರಿಡಾ ಇಲಾಖೆಯಡಿ ತೆಕ್ಕಲಕೋಟೆಯ ಶ್ರೀಮತಿ ಹೊನ್ನುರಮ್ಮ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೇತೃತ್ವದಲ್ಲಿ ಬಳ್ಳಾರಿಯ ಶ್ರೀಮೇಧಾ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಸಂಸತ್‌ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಇರಬೇಕು. ಅದರಲ್ಲೂ ಯುವ ಜನಾಂಗ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಸುಂದರ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು. ವಿದ್ಯಾರ್ಥಿ ಜೀವನದಲ್ಲಿ ಸ್ಪರ್ಧಾ ಮನೋಭಾವ ಅಗತ್ಯ. ಹೀಗಾಗಿ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಭಾಷಣ, ಚಿತ್ರಕಲೆ, ಕತೆ, ಕವಿತೆ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿಭಾಗವಹಿಸುವ ಮೂಲಕ ಜ್ಞಾನ ಹೆಚ್ಚಿಸಬೇಕು ಎಂದು ಹೇಳಿದರು.
ಎನ್‌ಎಸ್‌ಎಸ್‌ ಅಧಿಕಾರಿ ಬಸವರಾಜ ಎ.ಎಸ್‌ ಮಾತನಾಡಿ, ವಿಕಾಸಿತ ಭಾರತ ವಿಚಾರ ಮಂಡನೆ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದವರು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲು ಅವಕಾಶ ವಿರುತ್ತದೆ. ಮೊದಲ ಹಂತದ ಈ ಚರ್ಚಾ ಸ್ಪರ್ಧೆ ಜಿಲ್ಲಾ ಮಟ್ಟದ್ದಾಗಿದ್ದು, ಇಲ್ಲಿಆಯ್ಕೆಯಾದ ವಿದ್ಯಾರ್ಥಿಗಳನ್ನು
ರಾಜ್ಯ ಮಟ್ಟಕ್ಕೆ ಕಳುಹಿಸಲಾಗುತ್ತದೆ ಎಂದು ವಿವರಿಸಿದರು.
ರಾಜ್ಯಮಟ್ಟಕ್ಕೆ ಆಯ್ಕೆ: ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ವ್ಯಾಪ್ತಿಯ ನಾನಾ ಕಾಲೇಜುಗಳಿಂದ 100 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅದರಲ್ಲಿ ಐವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಸಹನಾ ಮಲ್ಲಿಕಾರ್ಜುನ ಮೋಕ, ಇಂಗ್ಲಿಷ್‌ ವಿಭಾಗದ ಮುಖ್ಯಸ್ಥೆ ಸುನಿತಾ ನಿರ್ಣಾಯಕರಾಗಿ ಭಾಗವಹಿಸಿದ್ದರು. ಶ್ರೀ ಮೇಧಾ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕಿರಣ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್‌ಎಸ್‌ಎಸ್‌ಕಾರ್ಯಕ್ರಮ ಅಧಿಕಾರಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
—–

The post ರಾಷ್ಟ್ರೀಯ ಯುವ ಸಂಸತ್‌ ಉತ್ಸವಕ್ಕೆ ಚಾಲನೆ: ಸದೃಢ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಪಣತೊಡಲು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಸಲಹೆ appeared first on Karnataka Kahale.

]]>
ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಚಿಂತನೆಗಳ ಮಂಥನ  ಅತ್ಯಗತ್ಯ -ಪ್ರೊ.ಎಸ್.ಜಿ.ಸಿದ್ದರಾಮಯ್ಯ https://www.karnatakakahale.com/news/22539 Sat, 14 Mar 2026 07:57:18 +0000 https://www.karnatakakahale.com/?p=22539 ಶಂಕರಘಟ್ಟ(ಶಿವಮೊಗ್ಗ), ಮಾ.14:  ಇಡೀ ಜಗತ್ತಿಗೆ ಮಾದರಿ ವ್ಯಕ್ತಿತ್ವಗಳಾದ ಬುದ್ದ ಬಸವ ಗಾಂಧಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಮಂಥನ ಮಾಡುವುದು ಪ್ರಸ್ತುತ ಅತ್ಯಗತ್ಯ ಎಂದು ಖ್ಯಾತ ಸಾಹಿತಿ ಪ್ರೊ ಎಸ್.ಜಿ. ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.                                       ಅವರು ಕುವೆಂಪು ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ್ ಅಧ್ಯಯನ…

The post ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಚಿಂತನೆಗಳ ಮಂಥನ  ಅತ್ಯಗತ್ಯ -ಪ್ರೊ.ಎಸ್.ಜಿ.ಸಿದ್ದರಾಮಯ್ಯ appeared first on Karnataka Kahale.

]]>
ಶಂಕರಘಟ್ಟ(ಶಿವಮೊಗ್ಗ), ಮಾ.14:  ಇಡೀ ಜಗತ್ತಿಗೆ ಮಾದರಿ ವ್ಯಕ್ತಿತ್ವಗಳಾದ ಬುದ್ದ ಬಸವ ಗಾಂಧಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಮಂಥನ ಮಾಡುವುದು ಪ್ರಸ್ತುತ ಅತ್ಯಗತ್ಯ ಎಂದು ಖ್ಯಾತ ಸಾಹಿತಿ ಪ್ರೊ ಎಸ್.ಜಿ. ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.                                       ಅವರು ಕುವೆಂಪು ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ತರಬೇತಿ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಬೆಂಗಳೂರು, ಮತ್ತು ಯು.ಎಸ್.ಆರ್.ಎಂ. ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.                              ಮಹಾ ಮಾನವತಾವಾದಿಗಳಾದ ಈ ಮಹನೀಯರ ಚಿಂತನೆಗಳನ್ನು ಮೈಗೂಡಿಸಿಕೊಂಡು ಬಾಳಬೇಕು ಎಂದು ತಿಳಿಸಿದರು.                                        ಮುಖ್ಯ ಅತಿಥಿಗಳಾಗಿ ಖ್ಯಾತ ಕವಿ ಡಾ. ಕುಮಾರಚಲ್ಯ ಅವರು  ಭಾಗವಹಿಸಿದ್ದರು.                       ಅಂಬೇಡ್ಕರ್ ಅಧ್ಯಯನ ಕೇಂದ್ರ ನಿರ್ದೇಶಕರಾದ ಪ್ರೊ ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಮುತ್ತಯ್ಯ ವಹಿಸಿದ್ದರು.

The post ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಚಿಂತನೆಗಳ ಮಂಥನ  ಅತ್ಯಗತ್ಯ -ಪ್ರೊ.ಎಸ್.ಜಿ.ಸಿದ್ದರಾಮಯ್ಯ appeared first on Karnataka Kahale.

]]>
ಅಧ್ಯಾಪಕ ನಿಜವಾದ ವಿದ್ಯಾರ್ಥಿ -ಖ್ಯಾತ ಸಾಹಿತಿ ಪ್ರೊ ಎಸ್.ಜಿ.ಸಿದ್ದರಾಮಯ್ಯ https://www.karnatakakahale.com/news/22506 Sat, 07 Mar 2026 12:12:38 +0000 https://www.karnatakakahale.com/?p=22506 ಶಂಕರಘಟ್ಟ, ಮಾ.7:  ಅಧ್ಯಾಪಕರು ಅನುದಿನ ಅಧ್ಯಯನದ ಜತೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಅಧ್ಯಾಪಕರು ವೃತ್ತಿ ಜೀವನ ಆರಂಭಿಸಿದ ನಂತರ ನಿಜವಾದ ವಿದ್ಯಾರ್ಥಿ ಎಂದು ಖ್ಯಾತ ಸಾಹಿತಿ ಪ್ರೊ ಎಸ್.ಜಿ. ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಅವರು ಕುವೆಂಪು ವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ…

The post ಅಧ್ಯಾಪಕ ನಿಜವಾದ ವಿದ್ಯಾರ್ಥಿ -ಖ್ಯಾತ ಸಾಹಿತಿ ಪ್ರೊ ಎಸ್.ಜಿ.ಸಿದ್ದರಾಮಯ್ಯ appeared first on Karnataka Kahale.

]]>

ಶಂಕರಘಟ್ಟ, ಮಾ.7:  ಅಧ್ಯಾಪಕರು ಅನುದಿನ ಅಧ್ಯಯನದ ಜತೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಅಧ್ಯಾಪಕರು ವೃತ್ತಿ ಜೀವನ ಆರಂಭಿಸಿದ ನಂತರ ನಿಜವಾದ ವಿದ್ಯಾರ್ಥಿ ಎಂದು ಖ್ಯಾತ ಸಾಹಿತಿ ಪ್ರೊ ಎಸ್.ಜಿ. ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಅವರು ಕುವೆಂಪು ವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ ಕನ್ನಡ ಭಾರತಿ ಏರ್ಪಡಿಸಿದ್ದ ಪದವಿ ತರಗತಿಗಳ ಭಾಷಾ ಪಠ್ಯ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.           ಪಾರಂಪರಿಕ ತಿಳಿವಳಿಕೆಯ ವರ್ತಮಾನದ ಬದುಕನ್ನು ಕಟ್ಟಿಕೊಳ್ಳಲು ಪ್ರೇರೇಪಿಸುತ್ತದೆ. ವರ್ತಮಾನದ ಅರಿವು ಪಡೆದಾಗ ಭವಿಷ್ಯ ತ್ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ ಶರತ್ ಅನಂತ್ ಮೂರ್ತಿ ಅವರು ಮಾತನಾಡಿ ಅಂತರ್ ಜ್ಞಾನ ಶಿಸ್ತು ಮೂಲಕ ಭಾಷಾ ಪಠ್ಯ ರಚನೆಯ ಆಗಬೇಕು ಎಂದರು. ಸ್ನಾತಕ ಪದವಿ ಅಧ್ಯಯನ ಮಂಡಳಿ ಅಧ್ಯಕ್ಷರು ಮತ್ತು ಕನ್ನಡ ಭಾರತಿ ನಿರ್ದೇಶಕರು ಆದ ಪ್ರೊ ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ತಿಮ್ಮರಾಯಪ್ಪ. ಹಣಕಾಸು ಅಧಿಕಾರಿ ರಮೇಶ್ , ಕುಂಸಿ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು
ರಿಯಾಸಿ ಪ್ರಾರ್ಥನೆ ಸಲ್ಲಿಸಿದರು.ಪ್ರೊ. ಮುತ್ತಯ್ಯ ವಂದಿಸಿದರು.
—–

The post ಅಧ್ಯಾಪಕ ನಿಜವಾದ ವಿದ್ಯಾರ್ಥಿ -ಖ್ಯಾತ ಸಾಹಿತಿ ಪ್ರೊ ಎಸ್.ಜಿ.ಸಿದ್ದರಾಮಯ್ಯ appeared first on Karnataka Kahale.

]]>
ಸಂಕಷ್ಟಗಳ ನಡುವಿನ ಸಾಧಕರು ‘ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್’, ಬರಹ: ಟಿ. ಓಬಳೇಶ್, ಶಂಕರಘಟ್ಟ https://www.karnatakakahale.com/news/22476 Wed, 04 Mar 2026 06:01:41 +0000 https://www.karnatakakahale.com/?p=22476 ಸಂಕಷ್ಟಗಳ ನಡುವಿನ ಸಾಧಕರು ‘ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್’ ಕುವೆಂಪು ವಿವಿ ಕನ್ನಡ ಭಾರತಿ‌ ನಿರ್ದೇಶಕ, ಸಾಹಿತಿ ಡಾ.‌ ನೆಲ್ಲಿಕಟ್ಟೆ ಸಿದ್ದೇಶ್ ಅವರು ಇಂದು ತಮ್ಮ ೫೫ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕನ್ನಡ‌ವಿಭಾಗದ ಸಂಶೋಧನಾರ್ಥಿ ಟಿ.‌ಓಬಳೇಶ್ ಅವರು ಡಾ. ನೆಲ್ಲಿಕಟ್ಟೆ…

The post ಸಂಕಷ್ಟಗಳ ನಡುವಿನ ಸಾಧಕರು ‘ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್’, ಬರಹ: ಟಿ. ಓಬಳೇಶ್, ಶಂಕರಘಟ್ಟ appeared first on Karnataka Kahale.

]]>
ಸಂಕಷ್ಟಗಳ ನಡುವಿನ ಸಾಧಕರು ‘ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್’

ಕುವೆಂಪು ವಿವಿ ಕನ್ನಡ ಭಾರತಿ‌ ನಿರ್ದೇಶಕ, ಸಾಹಿತಿ ಡಾ.‌ ನೆಲ್ಲಿಕಟ್ಟೆ ಸಿದ್ದೇಶ್ ಅವರು ಇಂದು ತಮ್ಮ ೫೫ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕನ್ನಡ‌ವಿಭಾಗದ ಸಂಶೋಧನಾರ್ಥಿ ಟಿ.‌ಓಬಳೇಶ್ ಅವರು ಡಾ. ನೆಲ್ಲಿಕಟ್ಟೆ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಮೂಲಕ ಶುಭ ಕೋರಿದ್ದಾರೆ. ಕರ್ನಾಟಕ‌ ಕಹಳೆ ಸಾಹಿತ್ಯ ಬಳಗದ ಡಾ. ನೆಲ್ಲಿಕಟ್ಟೆ ಸಿದ್ದೇಶ್ ಅವರಿಗೆ karnatakakahale.com ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತದೆ.

(ಸಂಪಾದಕರು)


ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರ ಹುಟ್ಟುಹಬ್ಬದ ಈ ಮಧುರ ಸಂದರ್ಭದಲ್ಲಿ, ಅವರ ಬದುಕು ಒಂದು ಸರಳ ಗ್ರಾಮೀಣ ಮಣ್ಣಿನಿಂದ ಆರಂಭವಾಗಿ, ಅಧ್ಯಾತ್ಮದ ಆಳವಾದ ನದಿಯಾಗಿ ಹರಿದು, ಸಾಹಿತ್ಯದ ಉನ್ನತ ಶಿಖರಗಳನ್ನು ತಲುಪಿದ ಒಂದು ಪ್ರೇರಣಾಮಯ ಯಾತ್ರೆಯಂತಿದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ನೆಲ್ಲಿಕಟ್ಟೆ ಗ್ರಾಮದಲ್ಲಿ ೧೯೭೨ರ ಮಾರ್ಚ್ ೪ರಂದು ಮಾರಕ್ಕ ಮತ್ತು ಎಚ್. ಸಿದ್ದಪ್ಪ ದಂಪತಿಗಳ ಮಡಿಲಲ್ಲಿ ಜನಿಸಿದ ಸಿದ್ದೇಶ್ ಅವರು, ತಮ್ಮ ಹುಟ್ಟೂರಿನ ಮಣ್ಣಿನ ಸರಳತೆಯನ್ನು, ಗ್ರಾಮೀಣ ಬದುಕಿನ ನೋವು-ನಲಿವುಗಳನ್ನು, ಸಮಾಜದ ಅಸಮಾನತೆಗಳನ್ನು, ದುಃಖ-ದುಮ್ಮಾನಗಳನ್ನು ಹೃದಯದಲ್ಲಿ ಧರಿಸಿಕೊಂಡು ಬೆಳೆದರು. ಆ ಹಳ್ಳಿಯ ಹೊಲ-ಗದ್ದೆಗಳ ನಡುವೆ, ಪುಟ್ಟ ಮಕ್ಕಳ ಆಟದ ಧೂಳಿನಲ್ಲಿ, ಶಾಲೆಯ ಗುಡಿಸಲಿನಲ್ಲಿ ಆರಂಭವಾದ ಶಿಕ್ಷಣದ ಹಾದಿ ಇವರನ್ನು ಸರ್ಕಾರಿ ಪ್ರೌಢ ಶಾಲಾ ಅಧ್ಯಾಪಕರಾಗಿ, ಕ್ಷೇತ್ರಸಂಪನ್ಮೂಲ ವ್ಯಕ್ತಿಯಾಗಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಯಾಗಿ ತದನಂತರ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ, ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರನ್ನಾಗಿಸಿದೆ.
ತಮ್ಮ ಹುಟ್ಟೂರಿನ ಪ್ರಾಥಮಿಕ ಶಾಲೆಯಿಂದ ಆರಂಭವಾಗಿ, ಇಸಾಮುದ್ರ ಮತ್ತು ಕಾಲಗೆರೆ ಗ್ರಾಮಗಳಲ್ಲಿ ಮಾಧ್ಯಮಿಕ-ಪ್ರೌಢ ಶಿಕ್ಷಣವನ್ನು ಪಡೆದರು. ಬಿದರಕೆರೆಯಲ್ಲಿ ಪದವಿ ಪೂರ್ವ ವ್ಯಾಸಂಗ ಮಾಡಿ, ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಏಳನೇ ರ‍್ಯಾಂಕ್‌ನೊಂದಿಗೆ ಪಡೆದರು. ತರಳಬಾಳು ಜಗದ್ಗುರು ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯಸ್ವಾಮಿಗಳ ಸ್ಮರಣಾರ್ಥ ಚಿನ್ನದ ಪದಕದೊಂದಿಗೆ ಬಿ.ಎಡ್. ಪದವಿ ಪಪೂರೈಸಿದರು

ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ.ಯನ್ನು ಮೂರನೇ ರ‍್ಯಾಂಕ್‌ನೊಂದಿಗೆ ಪಡೆದು, ೨೦೦೫ರಲ್ಲಿ ‘ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿ: ಒಂದು ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. ವಿದ್ಯಾರ್ಥಿ ದಿನಗಳಲ್ಲೇ ಉತ್ತಮ ಭಾಷಣಕಾರರಾಗಿ ಗುರುತಿಸಿಕೊಂಡ ಇವರು, ಡಾ. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ದಾರ್ಶನಿಕತೆಯಿಂದ, ದಲಿತಬಂಡಾಯ ಸಾಹಿತ್ಯ ಮತ್ತು ಕುವೆಂಪು ಅವರ ಮಾನವತಾವಾದಿ ಚಿಂತನೆಗಳಿಂದ ಪ್ರಭಾವಿತರಾದರು. ಈ ವಿಚಾರಧಾರೆಗಳು ಇವರ ಬರಹಗಳಲ್ಲಿ, ಚಿಂತನೆಗಳಲ್ಲಿ, ಭಾಷಣಗಳಲ್ಲಿ ಒಂದೇ ನದಿಯಂತೆ ಹರಿಯುತ್ತವೆ- ಅಧ್ಯಾತ್ಮವನ್ನು ಸಾಮಾಜಿಕ ಸುಧಾರಣೆಯೊಂದಿಗೆ ಸಂಯೋಜಿಸುವ ಅಪೂರ್ವ ಪ್ರಯತ್ನ ಇವರದು.
ಸಾಹಿತ್ಯದ ಪಯಣವು ೨೦೦೧ರಲ್ಲಿ ‘ಬಿಸಿಲು-ಮಳೆ’ ಎಂಬ ಪ್ರಥಮ ಕವನ ಸಂಕಲನದೊಂದಿಗೆ ಆರಂಭವಾಯಿತು. ಯುವ ಕವಿಯಾಗಿ ಬರೆದ ಆ ಕವನಗಳು ಸಾಮಾಜಿಕ ವಿಷಮತೆಯನ್ನು, ಶೋಷಣೆಯನ್ನು, ವೇಷಧಾರಿಗಳ ಅಪ್ರಾಮಾಣಿಕತೆಯನ್ನು ತೀಕ್ಷ್ಣವಾದ ಭಾಷೆಯಲ್ಲಿ ಚಿತ್ರಿಸಿದಂತಹವು. ಡಾ. ಎಚ್.ಜೆ. ಲಕ್ಕಪ್ಪಗೌಡ ಅವರು ಆಗಲೇ “ಯುವ ಆದರ್ಶದ ಹಂಬಲ, ಸಮಾಜ ಸುಧಾರಣೆಯ ತವಕ… ಕಾವ್ಯಕ್ಷೇತ್ರದಲ್ಲಿ ಬೆಳೆದು ಬೆಳಗಲಿ” ಎಂದು ಹಾರೈಸಿದ್ದರು. ನಂತರ ಬಂದ ‘ಸಾಹಿತಿ ಸಂಕುಲ’, ‘ಛಲಬೇಕು ಶರಣಂಗೆ’ ಮುಂತಾದ ಕೃತಿಗಳು ಅವರ ಚಿಂತನೆಯ ಒಳನೋಟವನ್ನು ತೋರಿಸಿದವು.


ಆದರೆ ಅವರ ಬರಹಗಳಲ್ಲಿ ಅತ್ಯಂತ ವಿಶಿಷ್ಟವಾದ್ದು ಅಧ್ಯಾತ್ಮದೊಂದಿಗಿನ ಸಮನ್ವಯ. ‘ಅಜಾತ’ (೨೦೧೫) ಭಕ್ತಿಗೀತೆಗಳ ಸಂಕಲನವಾಗಿ ಶ್ರೀಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿ ಮತ್ತು ಮಹದೇವಮ್ಮನವರ ಆಧ್ಯಾತ್ಮಿಕ-ಸಾಮಾಜಿಕ ಸೇವೆಯನ್ನು ಸುಲಲಿತವಾಗಿ ಹಾಡುವಂತಿದೆ. ಸದ್ಗುರು ಶ್ರೀ ಶ್ರೀ ಶ್ರೀ ಶಿವಲಿಂಗಾನಂದ ಸ್ವಾಮಿಗಳು “ಹೀನ-ದೀನ-ದಲಿತರನ್ನು ತನ್ನವರೆಂದು ಅಪ್ಪಿಕೊಳ್ಳುವ ಆಪ್ತತೆಯೇ ಭಕ್ತಿ… ಇದೇ ‘ಅಜಾತ’ದ ಶಕ್ತಿ” ಎಂದು ಹೇಳಿದ್ದರು. ‘ಶ್ರೀಗುರು’ ನಾಟಕವು (೨೦೧೭) ಶ್ರೀಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿಯ ಜೀವನವನ್ನು ರಂಗರೂಪದಲ್ಲಿ ತಂದು, ಭಕ್ತರ ಕಷ್ಟಗಳ ನಿವಾರಣೆಯ ಮಾರ್ಗವನ್ನು ತೋರಿಸುತ್ತದೆ. ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಕರಿಬಸವರಾಜೇಂದ್ರ ಮಹಾಸ್ವಾಮಿಗಳು “ಇತಿಹಾಸ-ಪುರಾಣ-ಧರ್ಮ-ಅಧ್ಯಾತ್ಮ ಬೆರೆತು ಬೆರಗುಗೊಳಿಸುತ್ತದೆ” ಎಂದು ಪ್ರಶಂಸಿಸಿದ್ದರು.
ಇವರ ಅತ್ಯಂತ ಪ್ರಮುಖ ಮತ್ತು ಗಮನಾರ್ಹ ಕೃತಿಯೆಂದರೆ ‘ಅಂಬೇಡ್ಕರ್ ಮತ್ತು ಅಧ್ಯಾತ್ಮ’ (೨೦೨೧). ಇಲ್ಲಿ ಅಂಬೇಡ್ಕರ್ ಅವರ ಸಂವಿಧಾನವನ್ನು ಅಧ್ಯಾತ್ಮದ ಉತ್ಕೃಷ್ಟ ಪ್ರತಿರೂಪವೆಂದು ವಿಶ್ಲೇಷಿಸುತ್ತಾರೆ. ಅಶೋಕ್ ಎನ್. ಚಲವಾದಿ ಅವರು “ಆಳಿಸಿಕೊಳ್ಳುವವರನ್ನೇ ಅರಸರನ್ನಾಗಿಸಿದ ಅಂಬೇಡ್ಕರ್… ಅಧ್ಯಾತ್ಮದ ನೆಲೆಯೊಳಗೆ ಅವರ ಚಿಂತನ-ಮಂಥನವಿದೆ” ಎಂದು ಹೇಳಿದ್ದಾರೆ. ‘ತನ್ನ ತಾನರಿದಡೆ’ಯಂತಹ ಕೃತಿಗಳು ವ್ಯಕ್ತಿತ್ವ ವಿಕಾಸದ ಚಿಂತನೆಗಳನ್ನು, ಸಹನೆ-ಸದ್ಗುಣ-ಸಮಾಧಾನದ ಮಹತ್ವವನ್ನು ತೀರ್ವವಾಗಿ ಬಿಚ್ಚಿಡುತ್ತವೆ. ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’, ‘ಕನಕದಾಸರ ಲೋಕದೃಷ್ಟಿ’, ‘ಮರ್ತ್ಯದ ವಿಸ್ಮಯ ಮಹದೇವಮ್ಮ’ ಮುಂತಾದವು ಸಾಮಾಜಿಕ-ಸಾಂಸ್ಕೃತಿಕ ನಾಯಕರನ್ನು ಗೌರವಿಸುತ್ತವೆ. ‘ಸಾಂಸ್ಕೃತಿಕ ನಾಯಕಿ ಒನಕೆ ಓಬವ್ವ’ ಕೃತಿಯು ಇತಿಹಾಸದ ಅಮರ ವೀರವನಿತೆಯರನ್ನು ಪುನಃ ಜನರ ಮುಂದಿಡುತ್ತವೆ.
ಶ್ರೀಯುತರು ಬರೆದಿರುವ ನಮ್ಮ ‘ಕಾಣ್ಕೆ’ ಕವಿತೆಯು ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯವಾಗಿದೆ. ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’ ಕೃತಿಯು ಗುಲ್ಬರ್ಗಾ ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯ, ಕ್ರೆೈಸ್ಟ್ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿದೆ. ‘ಸಾಂಸ್ಕೃತಿಕ ನಾಯಕಿ ಒನಕೆ ಓಬವ್ವ’ ಕೃತಿಯು ಬೆಳಗಾವಿ ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯವಾಗಿದೆ. ಹಾಗೆಯೆ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಲಕ್ಷ ಲಕ್ಷ ಜನ ಕೇಳುಗರಿಗೆ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆ ಪ್ರೇರಿತ ಸಾಧಕರ ಸಂದರ್ಶನದ ಸರಣಿಯಲ್ಲಿ ೫೨ ಸಂಚಿಕೆಗಳನ್ನು ನಡೆಸಿಕೊಟ್ಟಿರುವುದು, ೧೫ ಸಂಚಿಕೆಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕೃತಿಗಳನ್ನು ಪರಿಚಯಿಸುವ ಕಾರ್ಯದಲ್ಲಿ ಯಶಸ್ವಿಯಾಗಿರುವರು. ಹಲವು ರಾಷ್ಟ್ರೀಯ, ರಾಜ್ಯ ಮಟ್ಟದ ವಿಚಾರ ಸಂಕಿರಣ, ಕಾರ್ಯಗಾರಗಳನ್ನು ರೂಪಿಸಿ ಯಶಸ್ಸು ಪಡೆದಿದ್ದಾರೆ.
ಇಪ್ಪತ್ತಕ್ಕೂ ಹೆಚ್ಚು ಸ್ವಂತ ಕೃತಿಗಳು, ಹಲವಾರು ಸಂಪಾದಿತ ಸಂಪುಟಗಳು- ಕುವೆಂಪು, ಶಾಂತಿನಾಥ ದೇಸಾಯಿ, ಯುಗಧರ್ಮ ರಾಮಣ್ಣ ಅವರ ಕೃತಿಗಳ ಸಂಕಲನಗಳು-ಸಂಶೋಧನಾ ಯೋಜನೆಗಳು (ನೆಲ್ಲಿಕಟ್ಟೆ ಗ್ರಾಮ ಸಾಂಸ್ಕೃತಿಕ ಅಧ್ಯಯನ, ಛಲವಾದಿ ಜನಾಂಗ ಅಧ್ಯಯನ, ಅಂಬೇಡ್ಕರ್ ಮತ್ತು ಅಧ್ಯಾತ್ಮ), ಪ್ರಶಸ್ತಿಗಳು (ಶಿಕ್ಷಕ ವಿಭೂಷಣ (೨೦೦೪), ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ (೨೦೦೭), ಮಹಾತ್ಮ ಜ್ಯೋತಿ ಬಾಪುಲೆ’ ರಾಷ್ಟ್ರೀಯ ಪ್ರಶಸ್ತಿ (೨೦೧೦), “ಡಿ ಎಸ್ ಮ್ಯಾಕ್ಸ್ ಸಾಹಿತ್ಯ ಶ್ರೀ’’ ಪ್ರಶಸ್ತಿ (೨೦೧೯), ಸ್ಫೂರ್ತಿಶ್ರೀ ಪ್ರಶಸ್ತಿ (೨೦೨೦), ಕವಿ ವಿಭೂಷಣ ಪ್ರಶಸ್ತಿ (೨೦೨೧), ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ (೨೦೨೨), ಶ್ರೀಗಂಧ ಹಾರ ಪ್ರಶಸ್ತಿ (೨೦೨೨-೨೩), ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ (೨೦೨೩), ಭಾರತೀಯ ಸಾಹಿತ್ಯ ರತ್ನ (೨೦೨೫), ಕಿ.ರಂ.ನಾಗರಾಜ್ ರಾಷ್ಟ್ರೀಯ ವಿಮರ್ಶಾ ಪ್ರಶಸ್ತಿ (೨೦೨೫)- ಇವೆಲ್ಲವೂ ಅವರ ಅವಿರತ ಪರಿಶ್ರಮದ ಸಾಕ್ಷಿಗಳು.
ಆದರೆ ಅವರಿಗೆ ಅತ್ಯಂತ ಮುಖ್ಯವಾದ್ದು ಅಧ್ಯಾತ್ಮದ ಮೂಲಕ ಸಮಾಜವನ್ನು ಉದ್ಧರಿಸುವ ಕನಸು. ಇಂದಿನ ಒತ್ತಡ-ಆತಂಕ-ಅವಸರದ ಕಾಲದಲ್ಲಿ ಭಕ್ತಿ ಮಾರ್ಗವೇ ಶಾಂತಿ-ನೆಮ್ಮದಿಯ ಸರಳ ಸೋಪಾನ ಎಂದು ನಂಬುತ್ತಾರೆ. “ಎಲ್ಲರೂ ನಮ್ಮವರು, ನಾನು ಎಲ್ಲರೊಳಗೆ ಇರುವೆ” ಎಂಬ ಭಾವನೆಯನ್ನು ಮೂಡಿಸುವ ಅಧ್ಯಾತ್ಮವೇ ಅವರ ಚಿಂತನೆಯ ಕೇಂದ್ರಬಿಂದು. ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರು “ಉಜ್ವಲ ಪ್ರತಿಭೆ” ಎಂದರೆ, ಡಾ. ಕಮಲ ಹಂಪನಾ, ಡಾ. ಸಿ.ಎಸ್. ಶಿವಕುಮಾರಸ್ವಾಮಿ, ಡಾ. ಎಚ್.ಎಂ. ಮಹೇಶ್ವರಯ್ಯ ಮುಂತಾದ ಹಿರಿಯರು ಅವರ ಸಂಶೋಧನೆಗಳ ಗುಣಮಟ್ಟವನ್ನು ಹೊಗಳಿದ್ದಾರೆ.
ಇಂದು, ಮಾರ್ಚ್ ೪ರ ಈ ಹುಟ್ಟುಹಬ್ಬದ ದಿನದಂದು, ಕನ್ನಡ ಜಗತ್ತು ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದೆ. ನಿಮ್ಮ ಬರಹಗಳು ಇನ್ನಷ್ಟು ಜನರ ಹೃದಯಕ್ಕೆ ತಲುಪಲಿ, ಅಧ್ಯಾತ್ಮದ ಬೆಳಕು ಸಮಾಜದ ಪ್ರತಿ ಮೂಲೆಗೂ ಹರಡಲಿ, ಸಾರ್ಥಕದ ಬದುಕಿನ ಮಾರ್ಗವನ್ನು ತೋರಿಸಲಿ, ಶಿಕ್ಷಣ-ಸಂಘಟನೆ-ಹೋರಾಟದ ಮೂಲಕ ಸರ್ವೋದಯದ ಕನಸನ್ನು ನನಸಾಗಿಸಲಿ.
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಸರ್ ನಿಮ್ಮ ಚಿಂತನೆ-ಮಂಥನಗಳು ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ, ಸಮಾಜಕ್ಕೆ ಬೆಳಕಾಗಲಿ, ಹೃದಯಗಳನ್ನು ಒಗ್ಗೂಡಿಸಲಿ.


-ಓಬಳೇಶ ಟಿ
ಸಂಶೋಧನಾರ್ಥಿ
ಕನ್ನಡ ಭಾರತಿ
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ

The post ಸಂಕಷ್ಟಗಳ ನಡುವಿನ ಸಾಧಕರು ‘ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್’, ಬರಹ: ಟಿ. ಓಬಳೇಶ್, ಶಂಕರಘಟ್ಟ appeared first on Karnataka Kahale.

]]>
ವಿದ್ಯಾರ್ಥಿ ಯುವಸಮೂಹ ಇಪ್ಪತ್ತರಲ್ಲಿ ಎಡವಟ್ಟು ಮಾಡಿಕೊಂಡರೆ ಎಪ್ಪತ್ತರಲ್ಲಿ ಕಷ್ಟ ಪಡಬೇಕಾಗುತ್ತದೆ – ಕಾಳಪ್ಪ ಪತ್ತಾರ್ https://www.karnatakakahale.com/news/22459 Mon, 02 Mar 2026 15:35:40 +0000 https://www.karnatakakahale.com/?p=22459 ಬಳ್ಳಾರಿ. ಮಾ. 2 : ಮಾನವನ ಜೀವನದ ಪ್ರಮುಖಘಟ್ಟ ವಿದ್ಯಾರ್ಥಿ ಜೀವನದಲ್ಲಿ ಸರಿಯಾದ ಮಾರ್ಗವನ್ನು ಕಂಡುಕೊಳ್ಳದಿದ್ದರೆ ಜೀವನದಲ್ಲಿ ತುಂಬಾ ಕಷ್ಟ ಪಡಬೇಕಾಗುತ್ತದೆ ಎಂದು ನಿವೃತ್ತ ಮುಖ್ಯ ಗುರು ಕಾಳಪ್ಪ ಪತ್ತಾರ್ ಅವರು ತಿಳಿಸಿದರು. ಅವರು ನಗರದ ಮಧಿಕೇರಿ ಭೀಮಯ್ಯ ಪ್ರೌಢಶಾಲೆಯಲ್ಲಿ ಹಳೆ…

The post ವಿದ್ಯಾರ್ಥಿ ಯುವಸಮೂಹ ಇಪ್ಪತ್ತರಲ್ಲಿ ಎಡವಟ್ಟು ಮಾಡಿಕೊಂಡರೆ ಎಪ್ಪತ್ತರಲ್ಲಿ ಕಷ್ಟ ಪಡಬೇಕಾಗುತ್ತದೆ – ಕಾಳಪ್ಪ ಪತ್ತಾರ್ appeared first on Karnataka Kahale.

]]>
ಬಳ್ಳಾರಿ. ಮಾ. 2 : ಮಾನವನ ಜೀವನದ ಪ್ರಮುಖಘಟ್ಟ ವಿದ್ಯಾರ್ಥಿ ಜೀವನದಲ್ಲಿ ಸರಿಯಾದ ಮಾರ್ಗವನ್ನು ಕಂಡುಕೊಳ್ಳದಿದ್ದರೆ ಜೀವನದಲ್ಲಿ ತುಂಬಾ ಕಷ್ಟ ಪಡಬೇಕಾಗುತ್ತದೆ ಎಂದು ನಿವೃತ್ತ ಮುಖ್ಯ ಗುರು ಕಾಳಪ್ಪ ಪತ್ತಾರ್ ಅವರು ತಿಳಿಸಿದರು.
ಅವರು ನಗರದ ಮಧಿಕೇರಿ ಭೀಮಯ್ಯ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಪುನರ್ಮಿಲನ ಮತ್ತು ಗುರು ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.         ಒಬ್ಬ ಯುವಕ ಅಥವಾ ಯುವತಿ 20ರಲ್ಲಿ ಎಡವಿದರೆ 70ನೇ ವಯಸ್ಸಿನಲ್ಲಿ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಉನ್ನತವಾದ ಶಿಕ್ಷಣವನ್ನು ಪಡೆದುಕೊಂಡು ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬೇಕು ಇದರಿಂದ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಅದು ಬಿಟ್ಟು ನಾನಾತರದ ಅಡ್ಡದಾರಿಗಳನ್ನು ಹಿಡಿದು ಸಮಯವನ್ನು ವ್ಯರ್ಥ ಮಾಡಿದಲ್ಲಿ ಜೀವನದ ಕೊನೆಯ ದಿನಗಳಲ್ಲಿ ಬಹಳ ಪಶ್ಚತಾಪ ಪಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ತಮ್ಮ ಎಂದಿನ ಶೈಲಿಯಲ್ಲಿ ಹಾಸ್ಯ ಭರಿತವಾದ ಮಾತುಗಳನ್ನಾಡಿದ ಕಾಳಪ್ಪ ಪತ್ತಾರ್, ತಮ್ಮ ಭಾಷಣ ದುದ್ದಕ್ಕೂ ಹಾಸ್ಯ ಪ್ರಸಂಗಗಳನ್ನು ಹೇಳುತ್ತಾ ಹಳೆ ವಿದ್ಯಾರ್ಥಿಗಳನ್ನು ನಗೆಗಡಲಿನಲ್ಲಿ ತೇಲಿಸಿದರು. ಜೊತೆಗೆ ಜೀವನದ ಕುರಿತು ಗಂಭೀರವಾದ ವಿಷಯಗಳನ್ನು ತಿಳಿಸಿ ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಹಳೆ ನಾಗರಾಜರಾಯರು, ಆಶಾ ಬಾಯಿ, ಬೆಟ್ಟಪ್ಪ ಸೇರಿದಂತೆ ಅಂದು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ಹಾಲಿ ಮುಖ್ಯ ಉಪಾಧ್ಯಯರಾದ ಶ್ರೀನಿವಾಸ್ ಹಾಗೂ ನೂರಾರು ಜನ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

The post ವಿದ್ಯಾರ್ಥಿ ಯುವಸಮೂಹ ಇಪ್ಪತ್ತರಲ್ಲಿ ಎಡವಟ್ಟು ಮಾಡಿಕೊಂಡರೆ ಎಪ್ಪತ್ತರಲ್ಲಿ ಕಷ್ಟ ಪಡಬೇಕಾಗುತ್ತದೆ – ಕಾಳಪ್ಪ ಪತ್ತಾರ್ appeared first on Karnataka Kahale.

]]>