ಸಂಗೀತ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Thu, 21 Aug 2025 04:18:11 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಸಂಗೀತ – Karnataka Kahale https://www.karnatakakahale.com 32 32 ಕರೆದರೂ ಕೇಳದೇ….! ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾಖಾನ್ ರವರ ನೆನಪಿನಲ್ಲಿ….! ಬರಹ:✍ಸಿದ್ದರಾಮ ತಳವಾರ, ದಾಸ್ತಿಕೊಪ್ಪ https://www.karnatakakahale.com/news/20459 Thu, 21 Aug 2025 04:18:11 +0000 https://www.karnatakakahale.com/?p=20459 ‘ಸನಾದಿ ಅಪ್ಪಣ್ಣ’ ಚಿತ್ರದಲ್ಲಿನ ಡಾ.ರಾಜ್ ನಟನೆಗೆ ಫಿದಾ ಆಗದೇ ಇರೋರು ಯಾರಾದ್ರೂ ಇದ್ದೀರಾ? ಊಹೂಂ… ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಚಿತ್ರರಸಿಕರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿರುವ ಆ ‘ಕರೆದರೂ ಕೇಳದೇ….’ ಹಾಡು ಮತ್ತದರ ರಾಗಸಂಯೋಜನೆ ನಿಜಕ್ಕೂ ಕಲ್ಲಿಗೂ ಕೂಡ ಸಂಗೀತದ ರುಚಿ ಹಚ್ಚುವಂತದು.…

The post ಕರೆದರೂ ಕೇಳದೇ….! ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾಖಾನ್ ರವರ ನೆನಪಿನಲ್ಲಿ….! ಬರಹ:✍ಸಿದ್ದರಾಮ ತಳವಾರ, ದಾಸ್ತಿಕೊಪ್ಪ appeared first on Karnataka Kahale.

]]>

‘ಸನಾದಿ ಅಪ್ಪಣ್ಣ’ ಚಿತ್ರದಲ್ಲಿನ ಡಾ.ರಾಜ್ ನಟನೆಗೆ ಫಿದಾ ಆಗದೇ ಇರೋರು ಯಾರಾದ್ರೂ ಇದ್ದೀರಾ? ಊಹೂಂ…
ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಚಿತ್ರರಸಿಕರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿರುವ ಆ ‘ಕರೆದರೂ ಕೇಳದೇ….’ ಹಾಡು ಮತ್ತದರ ರಾಗಸಂಯೋಜನೆ ನಿಜಕ್ಕೂ ಕಲ್ಲಿಗೂ ಕೂಡ ಸಂಗೀತದ ರುಚಿ ಹಚ್ಚುವಂತದು. ಸ್ವರ ಸಾಮ್ರಾಟ್ ಜಿ.ಕೆ.ವೆಂಕಟೇಶ ಅವರ ರಾಗಸಂಯೋಜನೆಯಲ್ಲಿ ಮೂಡಿ ಬಂದ ಈ ಹಾಡು ಕೇಳಿದವರೆಲ್ಲ ಸಂಗೀತ ಲೋಕದ ದಂತಕಥೆಯಾದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರನ್ನು ನೆನಪಿಗೆ ತರದೇ ಇರಲಾರದು.
ಹೌದು! ಈ ಚಿತ್ರದ ಹಾಡಿನಲ್ಲಿ ಬಳಕೆಯಾದ ಶಹನಾಯಿ ವಾದ್ಯಕ್ಕೆ ಸ್ವತಃ ‘ಬಿಸ್ಮಿಲ್ಲಾ ಖಾನ್’ ರೇ ಉಸಿರು ನೀಡಿದ್ದು ಸ್ಮರಣೀಯ.
ಬಿಹಾರದ ಪೈಗಂಬರಖಾನ್ ಹಾಗೂ ಮಿತ್ತನ್ ದಂಪತಿಗಳ ಉದರದಲ್ಲಿ ಸಂಗೀತದ ಕುಟುಂಬದಲ್ಲಿ 1916 ರ ಮಾರ್ಚ್ 22ರಂದು ಜನಿಸಿದ ಬಿಸ್ಮಿಲ್ಲಾಖಾನ್ ರವರು ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದರೂ ಕಾಶಿ ವಿಶ್ವನಾಥನ ಮಂದಿರದ ನಿಕಟ ಸಂಪರ್ಕದಿಂದಾಗಿ ಹಿಂದೂಗಳೊಂದಿಗೆ ಬೆರೆತು ಬಾಳಿದವರು.
ಶಹನಾಯಿಯನ್ನು ಶಾಸ್ತ್ರೀಯ ಸಂಗೀತದ ವಾದ್ಯವನ್ನಾಗಿಸಿದ ಕೀರ್ತಿ ಖಾನ್ ರಿಗೆ ಸಲ್ಲತಕ್ಕದ್ದು.

ಒಂದು ಸಲ ಕುಂಭ ಮೇಳದ ಕಾರ್ಯಕ್ರಮವೊಂದಕ್ಕೆ ಭಾಗಿಯಾಗಲು ರೈಲಿನಲ್ಲಿ ಹೊರಟ ಬಿಸ್ಮಿಲ್ಲಾ ಖಾನ್ ರವರು ಇದ್ದ ರೈಲಿನ ಭೋಗಿಯೊಂದರಲ್ಲಿ ಗೋಪಾಲಕನೊಬ್ಬ ಅತ್ಯಂತ ಸೊಗಸಾಗಿ ಕೊಳಲು ನುಡಿಸುವುದನ್ನು ಆಲಿಸುತ್ತ ಪುನಃ ಪುನಃ ತನ್ನಲ್ಲಿರುವ ಎಲ್ಲ ನಾಣ್ಯಗಳನ್ನು ಆತನ ಕೈಗೆ ಒಂದೊಂದಾಗಿ ನೀಡುತ್ತ ಆತನ ಕೊಳಲ ನಾದಕ್ಕೆ ಪ್ರೀತ್ಯರ್ಥನಾಗಿ ಕಾರ್ಯಕ್ರಮದಲ್ಲಿ ಆ ರಾಗವನ್ನೇ ಸೊಗಸಾಗಿ ನುಡಿಸಿದ್ದು ಪ್ರೇಕ್ಷಕರಿಗೆ ಬಹಳ ಮೆಚ್ಚುಗೆಯಾಯಿತು. ಪುನಃ ಪ್ರೇಕ್ಷಕರು ಆ ರಾಗವನ್ನೇ ನುಡಿಸುವಂತೆ ಕೇಳಿಕೊಂಡಿದ್ದು ಆ ರಾಗಕ್ಕೆ ಕನ್ಹೇರ ರಾಗ ಅಂತ ಅವರೇ ಹೆಸರು ಕೊಟ್ಟಿದ್ದು ಮಾರನೇಯ ದಿನ ಹೊಸದೊಂದು ರಾಗದ ಸೃಷ್ಟಿಗೆ ಕಾರಣರಾದ ಖಾನ್ ಎಂಬ ಖ್ಯಾತಿಗೆ ಆ ಗೋಪಾಲಕ ಹುಡುಗನ ನೆನಪಿಸಿಕೊಂಡು ಕೃತಜ್ಞತೆಯನ್ನು ಸಲ್ಲಿಸಿದ್ದು ಇಡೀ ದೇಶದಲ್ಲೇ ದೊಡ್ಡ ಸುದ್ದಿಯಾಗಿತ್ತು.

ಉಸ್ತಾದ್ ಸಂಗೀತ ಲೋಕದ ದಂತ ಕಥೆಯಾಗಿದ್ದು ‘ಭಾರತರತ್ನ’ ಪ್ರಶಸ್ತಿಗೆ ಭಾಜನರಾದ ಮೂರನೇ ಸಂಗೀತಗಾರರಾಗಿದ್ದಾರೆ. ಪದ್ಮಶ್ರೀ ಸೇರಿದಂತೆ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಮೇರು ದಿಗ್ಗಜ ಸಂಗೀತ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ರಿಗೆ ಹಲವಾರು ವಿಶ್ವವಿದ್ಯಾಲಯಗಳು ಗೌರವ ಡಿ.ಲಿಟ್ ನೀಡಿ ಗೌರವಿಸಿವೆ.

ಇಂತಹ ಧೀಮಂತ ಸಂಗೀತ ಮಾಂತ್ರಿಕ 2006ರ ಆಗಸ್ಟ್ 21 ರಂದು ತಮ್ಮ ಕೂನೆಯುಸಿರು ಎಳೆದರು. ಅವರ ಆ ಮಾಂತ್ರಿಕ ಶಹನಾಯಿ ಧ್ವನಿ ಈಗಲೂ ಯಾವಾಗಲೂ ಸಂಗೀತಾಸಕ್ತ ಕಿವಿಗಳಲ್ಲಿ ಗುಂಯ್ಯಗುಡುತ್ತಲೇ ಇರುತ್ತದೆ.

ಹಾಡು ಸಂಗೀತ ಅಂತ ಆಗಾಗ್ಗೆ ಗುಣುಗುಣಿಸುತ್ತಲೇ ಇರುವ ನನಗೆ ಅವರ ಶಹನಾಯಿ ನಾದವೂ ಒಂದು ಗುರುವಂತೆಯೇ ಸರಿ ಸೋ ನನ್ನಿಷ್ಟದ ಶಹನಾಯಿ ಮಾಂತ್ರಿಕ
🙏ಉಸ್ತಾದ್ ಬಿಸ್ಮಿಲ್ಲಾಖಾನ್ ರವರ ಸ್ಮರಣೀಯ ದಿನದ ಇಂದು ಅವರಿಗೆ  ಭಕ್ತಿಪೂರ್ವಕ ನಮನಗಳು….🙏

-✍ಸಿದ್ದರಾಮ ತಳವಾರ, ದಾಸ್ತಿಕೊಪ್ಪ

The post ಕರೆದರೂ ಕೇಳದೇ….! ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾಖಾನ್ ರವರ ನೆನಪಿನಲ್ಲಿ….! ಬರಹ:✍ಸಿದ್ದರಾಮ ತಳವಾರ, ದಾಸ್ತಿಕೊಪ್ಪ appeared first on Karnataka Kahale.

]]>
ಕೃಷ್ಣ ಸನ್ನಿಧಿಯಲ್ಲಿ ನಾದ ನಿನಾದ: ಬಳ್ಳಾರಿ‌ ಜಿಲ್ಲೆ ಅತ್ಯದ್ಭುತ ಪ್ರತಿಭೆಗಳ ಸಂಗಮ -ಸಿ.ಚನ್ನಬಸವಣ್ಣ https://www.karnatakakahale.com/news/18500 Mon, 27 Jan 2025 12:50:05 +0000 https://www.karnatakakahale.com/?p=18500 ಬಳ್ಳಾರಿ, ಜ.27: ಬಳ್ಳಾರಿ ಜಿಲ್ಲೆಯಲ್ಲಿ ಅತ್ಯದ್ಭುತ ಪ್ರತಿಭೆಗಳಿದ್ದು ತಮ್ಮ ಸಾಧನೆಗಳ‌ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಅವರು ಹೇಳಿದರು. ಹಳೇ ದರೋಜಿಯ ನಾಡೋಜ ಬರ‍್ರಕಥಾ ಈರಮ್ಮ ಫೌಂಡೇಷನ್ ಮತ್ತು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು…

The post ಕೃಷ್ಣ ಸನ್ನಿಧಿಯಲ್ಲಿ ನಾದ ನಿನಾದ: ಬಳ್ಳಾರಿ‌ ಜಿಲ್ಲೆ ಅತ್ಯದ್ಭುತ ಪ್ರತಿಭೆಗಳ ಸಂಗಮ -ಸಿ.ಚನ್ನಬಸವಣ್ಣ appeared first on Karnataka Kahale.

]]>

ಬಳ್ಳಾರಿ, ಜ.27: ಬಳ್ಳಾರಿ ಜಿಲ್ಲೆಯಲ್ಲಿ ಅತ್ಯದ್ಭುತ ಪ್ರತಿಭೆಗಳಿದ್ದು ತಮ್ಮ ಸಾಧನೆಗಳ‌ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಅವರು ಹೇಳಿದರು.
ಹಳೇ ದರೋಜಿಯ ನಾಡೋಜ ಬರ‍್ರಕಥಾ ಈರಮ್ಮ ಫೌಂಡೇಷನ್ ಮತ್ತು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವಿಶೇಷ ಘಟಕ ಯೋಜನೆಯಡಿಯಲ್ಲಿ  ಭಾನುವಾರ ಸಮೀಪದ ಸಂಗನಕಲ್ಲು ಗ್ರಾಮದ‌‌
ಕೃಷ್ಣ ಸನ್ನಿಧಿಯಲ್ಲಿ ಆಯೋಜಿಸಿದ್ದ ನಾದ ನಿನಾದ( ಸಂಗೀತ ಸಂಭ್ರಮ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಪ್ರತಿಭೆ ಸೃಷ್ಟಿ, ರಾಜ್ಯೋತವ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ, ಗಾಯಕ ದೊಡ್ಡ ಬಸವ ಗವಾಯಿ
ಸೇರಿದಂತೆ ಹಲವರು ತಮ್ಮ‌ ಪ್ರತಿಭೆಯಿಂದ‌‌ ಜಿಲ್ಲೆಗೆ ಹೆಸರು ತಂದಿದ್ದಾರೆ ಎಂದು ತಿಳಿಸಿದರು.
ಭಾರತದ ವೈಶಿಷ್ಟ್ಯತೆ ಎಂದರೆ ಭಿನ್ನತೆಯಲ್ಲಿ ಏಕತೆ. ದೇಶವಾಗಿದ್ದರೂ ಹಲವು ರಾಜ್ಯಗಳ ಒಕ್ಕೂಟ. ವಿಭಿನ್ನ ಭಾಷೆ, ಧರ್ಮ, ಸಂಸ್ಕೃತಿ, ಆಚರಣೆಗಳಿದ್ದರೂ ಭಿನ್ನತೆಯಲ್ಲಿ ಏಕತೆಯಿಂದ‌‌ ವಿಶ್ವದ ಗಮನ ಸೆಳೆದಿದೆ ಎಂದು ಶ್ಲಾಘಿಸಿದರು.
ನಿಸರ್ಗದ ‌ಮಡಿಲಲ್ಲಿ  ಇರುವ ಕೃಷ್ಣ ಸನ್ನಿಧಿ ಹಿರಿಯರ ನೆಮ್ಮದಿ ತಾಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಗೀತ‌ ಕಾರ್ಯಕ್ರಮಗಳಲ್ಲಿ ಮಾತು‌ ಸೂತಕ. ಹೀಗಾಗಿ ಸಂಗೀತವನ್ನು ಅಸ್ವಾದಿಸಬೇಕು ಎಂದರು.


ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಸನ್ನಿಧಿಯ ನಿರ್ದೇಶಕಿ ಡಾ. ನಾಗರತ್ನ‌ ಸುಯಜ್ಞ ಅವರು ಮಾತನಾಡಿ, ಕೃಷ್ಣ ಸನ್ನಿಧಿ ಹಿರಿಯರ ಅನಾಥಾಶ್ರಮವಲ್ಲ. ತಮ್ಮ ಸ್ವ ಇಚ್ಚೆಗನುಸಾರವಾಗಿ ಶಾಂತಿಯುತವಾಗಿ ಬದುಕಲು ಪ್ರಯತ್ನಿಸುವ ಮುಸ್ಸಂಜೆಯ   ತಂಗುದಾಣ ಎಂದು ಹೇಳಿದರು.
ಹಿರಿಯರ ದೈಹಿಕ, ಸಾಮಾಜಿಕ, ಮಾನಸಿಕ ಅನಿವಾರ್ಯಗಳಿಗೆ ಸ್ಪಂದಿಸಿರುವುದರಿಂದ ರಾಜ್ಯ ಸರಕಾರ ಕೃಷ್ಣ ಸನ್ನಿಧಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.


ಮುಖ್ಯ ಅತಿಥಿ, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್ ‌ಮಾತನಾಡಿ, ಉರಿ‌ ಬಿಸಿಲಿನ ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ಅಚ್ಚ ಹಸಿರಿನಿಂದ‌ ಕೂಡಿದ  ನಿಸರ್ಗ ಧಾಮದಲ್ಲಿ ಕೃಷ್ಣ ಸನ್ನಿಧಿಯನ್ನು ನಿರ್ಮಿಸಿ ಹಿರಿಯರಿಗೆ, ಅನಾರೋಗ್ಯ ಪೀಡಿತರಿಗೆ ಆಶ್ರಯ ನೀಡಿರುವ ಡಾ. ನಾಗರತ್ನ ಸುಯಜ್ಞ ಅವರು ಸಮಾಜಕ್ಕ ಮಾದರಿಯಾಗಿದ್ದಾರೆ ಎಂದರು.
ಕುಟುಂಬ ಸದಸ್ಯರ ಸಹಕಾರ, ಬೆಂಬಲದಿಂದ ಮಾತ್ರ ಇಂತಹ ವಿಶೇಷತೆಯನ್ನು ಸಾಧಿಸಲು ಸಾಧ್ಯ ಎಂದು‌ ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಬಿಮ್ಸ್ ವೈದ್ಯ ಡಾ.‌ಸುರೇಶ್ ಚಾಗನೂರು, ರತಿ ಕಪಾಡಿಯಾ, ಡಾ. ಸುಯಜ್ಞ ಜೋ ಷಿ ಮತ್ತಿತರರು ಉಪಸ್ಥಿತರಿದ್ದರು.
ಸಂಗೀತ ಸಂಭ್ರಮ: ಯುವ ಗಾಯಕಿ ಸೃಷ್ಟಿ ಸುರೇಶ್ ಅವರಿಂದ ಭಾವ ಸಂಗೀತ, ರಾಜ್ಯೋತ್ಸವ ಪ್ರಶಸ್ತಿ  ಪುರಸ್ಕೃತ ಅಶ್ವ ರಾಮಣ್ಣ ಅವರಿಂದ ತತ್ವ ಪದ, ದೊಡ್ಡ‌ಬಸವ ಗವಾಯಿ ಅವರಿಂದ ಸುಗಮ‌ ಸಂಗೀತ ಮುದ್ದಟನೂರು ತಿಪ್ಪೇಸ್ವಾಮಿ ಅವರಿಂದ ವಚನ ಸಂಗೀತ, ಕುಡುತಿನಿ ಉಮೇಶ್ ಎಂ‌ ಅವರಿಂದ‌ ದಾಸರ ಪದಗಳ ಗಾಯನ ಹಾಗೂ ಯೋಗೇಶ ಬಣಕಾರ ಅವರ ತಬಲ‌ಝಲಕ್ ನೆರೆದಿದ್ದ‌ ನೂರಾರು ಸಂಗೀತ ಪ್ರಿಯರಿಗೆ ರಸದೌತಣ ನೀಡಿತು.

ಇದೇ ಸಂದರ್ಭದಲ್ಲಿ ಸಿ. ಚೆನ್ನಬಸವಣ್ಣ ‌ಮತ್ತು ಡಾ.‌ನಾಗರತ್ನ ಸುಯಜ್ಞ  ಅವರನ್ನು ಫೌಂಡೇಶನ್ ವತಿಯಿಂದ ಗೌರವಸಲಾಯಿತು.
ಕೃಷ್ಣ ಸನ್ನಿಧಿ ವತಿಯಿಂದ ಗಾಯಕರನ್ನು‌‌ ಸನ್ಮಾನಿಸಲಾಯಿತು.
ಫೌಂಡೇಶನ್ ಅಧ್ಯಕ್ಷ ಡಾ.‌ಅಶ್ವ ರಾಮು, ಸ್ವಾಗತಿಸಿ ಪ್ರಾಸ್ತಾವಿಕವಾಗಿ‌ ಮಾತನಾಡಿದರು. ವಿದ್ಯಾರ್ಥಿನಿ‌ ನಾಗವೇಣಿ‌‌ ನಿರೂಪಿಸಿದರು. ಚೇತನ್ ಕುಮಾರ್ ನಿರ್ವಹಿಸಿದರು. ಆಲ್ತಾಫ್ ಭಾಷ ವಂದಿಸಿದರು.
—–

 

The post ಕೃಷ್ಣ ಸನ್ನಿಧಿಯಲ್ಲಿ ನಾದ ನಿನಾದ: ಬಳ್ಳಾರಿ‌ ಜಿಲ್ಲೆ ಅತ್ಯದ್ಭುತ ಪ್ರತಿಭೆಗಳ ಸಂಗಮ -ಸಿ.ಚನ್ನಬಸವಣ್ಣ appeared first on Karnataka Kahale.

]]>
ಸಂಗೀತ ‌ನಿರ್ದೇಶಕ, ಸಹೃದಯ ‌ಚಾರುಚಂದ್ರ ಅವರಿಗೆ‌ ಅಕ್ಷರ ನಮನ -ಶಿವಶಂಕರ ಬಣಗಾರ https://www.karnatakakahale.com/news/17401 Thu, 26 Sep 2024 15:07:26 +0000 https://www.karnatakakahale.com/?p=17401 ಹೊಸಪೇಟೆಯ ಖ್ಯಾತ ವಾಯ್ಲಿನ್‌ ವಾದಕ ಚಾರುಚಂದ್ರ ( ವಿಜಯ ಚಂದ್ರ) ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಮರಿಯಮ್ಮನಹಳ್ಳಿಯಲ್ಲಿ ನಾನು ಪಿಯುಸಿ ಓದುವಾಗ (೧೯೮೮-೮೯) ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಯಾರನ್ನಾದರೂ ವಿಶೇಷ ವ್ಯಕ್ತಿಗಳನ್ನು ಕರೆಯಿಸಬೇಕೆಂದುಕೊಂಡಾಗ ಆಂಗ್ಲ ಉಪನ್ಯಾಸಕರಾಗಿದ್ದ ಕಾಕಂಡ್ಕಿ ಗೋಪಾಲ್‌ ರಾವ್‌ ಅವರು ಆಗ ಅವರೇ…

The post ಸಂಗೀತ ‌ನಿರ್ದೇಶಕ, ಸಹೃದಯ ‌ಚಾರುಚಂದ್ರ ಅವರಿಗೆ‌ ಅಕ್ಷರ ನಮನ -ಶಿವಶಂಕರ ಬಣಗಾರ appeared first on Karnataka Kahale.

]]>

ಹೊಸಪೇಟೆಯ ಖ್ಯಾತ ವಾಯ್ಲಿನ್‌ ವಾದಕ ಚಾರುಚಂದ್ರ ( ವಿಜಯ ಚಂದ್ರ) ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ.
ಮರಿಯಮ್ಮನಹಳ್ಳಿಯಲ್ಲಿ ನಾನು ಪಿಯುಸಿ ಓದುವಾಗ (೧೯೮೮-೮೯) ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಯಾರನ್ನಾದರೂ ವಿಶೇಷ ವ್ಯಕ್ತಿಗಳನ್ನು ಕರೆಯಿಸಬೇಕೆಂದುಕೊಂಡಾಗ ಆಂಗ್ಲ ಉಪನ್ಯಾಸಕರಾಗಿದ್ದ ಕಾಕಂಡ್ಕಿ ಗೋಪಾಲ್‌ ರಾವ್‌ ಅವರು ಆಗ ಅವರೇ ಪ್ರಾಚಾರ್ಯಾರು ಕೂಡಾ ಆಗಿದ್ದರು. ಹೊಸಪೇಟೆಯಲ್ಲಿ ಚಾರುಚಂದ್ರ ಎಂಬ ವಿಶೇಷ ವ್ಯಕ್ತಿ ಇದ್ದಾರೆ ಅವರನ್ನು ನೀನು ಹೋಗಿ ವಿನಂತಿಸಿಕೊಂಡು ಬಾ ಖಂಡಿತಾ ಬರ್ತಾರೆ ಎಂದು ಸೂಚಿಸಿದರು, ಆಗ ಗೆಳೆಯ ಸಹಪಾಠಿ ಅಶೋಕ್ ಕೂಡಿ ರೈಲ್ವೇ ನಿಲ್ದಾಣದ ಬಳಿ ಇದ್ದ ಅವರ ತೋಟದ ಮನೆಗೆ ಹೋದ್ವಿ. ವಿನಂತಿಸಿಕೊಂಡ್ವಿ ಕಾರ್ಯಕ್ರಮಕ್ಕೆ ಬಂದು ಅವರು ವಾಯ್ಲಿನ್‌ ನುಡಿಸಿದರೆ ಅವರ ಶ್ರೀಮತಿ ಬಾನುಮತಿ ಗಿಟಾರ್‌ ನುಡಿಸಿ ಕಾರ್ಯಕ್ರಮ ಯಶಗೊಳಿಸಿದರು. ಹೀಗೆ ಪರಿಚಯವಾಗಿದ್ದ ಅವರು ನಂತರ ಅವರ ಒಡನಾಟ ಹೆಚ್ಚಾಗುತ್ತಾ ಹೋಯಿತು. ನಾನು ಓದುವಾಗ ಪಾರ್ಟ್‌ ಟೈಂ ಜಾಬ್‌ ಮಾಡುತ್ತಿದ್ದೆ. ರಾಮಕೃಷ್ಣ , ಪಂಪಾಸ್‌ ಬಾಂಬೇ ಡೈಯಿಂಗ್ ಷೋರೂಂನಲ್ಲಿ ಕೆಲಸ ಮಾಡುವಾಗ ಬಟ್ಟೆ ಕೊಳ್ಳಲು ಬರುತ್ತಿದ್ದರು. ಬಟ್ಟೆ ಬಣ್ಣ, ವಿನ್ಯಾಸದ ಕುರಿತು ವಿಶಿಷ್ಟ ಅಭಿರುಚಿಯನ್ನು ಹೊಂದಿದ್ದ ಅವರು. ಎಂತಹ ಬಣ್ಣ ಎಂತಹ ಮನಸ್ಥಿತಿಯವರು ತೊಡುತ್ತಾರೆ, ವಿನ್ಯಾಸದ ಆಯ್ಕೆಯ ವಿವಿಧ ಬಗೆ ಹೀಗೆ ನನಗೆ ಬಟ್ಟೆ ಸೈಕಾಲಜಿಯ ಪಾಠ ಹೇಳಿಕೊಟ್ಟರು. ನಂತರ ನಾನು ಹೊಸಪೇಟೆ ಟೈಮ್ಸ್‌ ನಲ್ಲಿ ವರದಿಗಾರನಾಗಿದ್ದಾಗ ಹೊಸಪೇಟೆಯ ಕುರಿತು, ವ್ಯಕ್ತಿಗಳ ಕುರಿತು, ಸಂಗೀತ, ಸಾಹಿತ್ಯದವರ ಸಾಂಗಾತ್ಯದ ಅವರ ನೆನಪಿನ ಬುತ್ತಿಯನ್ನು ಬಿಚ್ಚುತ್ತಿದ್ದರು.
ಅವಿಭಿಜಿತ ಬಳ್ಳಾರಿ ಜಿಲ್ಲೆಯ ಮೊದಲ ಸಂಗೀತ ನಿರ್ದೇಶಕರು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಅವರು ಹೊಸಪೇಟೆಯವರೇ ನಿರ್ಮಿಸಿದ ಮಮತೆಯ ಗುಡಿ ಎಂಬ ಸಿನಿಮಾಕ್ಕೆ ಸಂಗೀತ ನೀಡಿದ್ದರು. ಮತ್ತು ಇತ್ತೀಚೆಗೆ ಅವರೇ ನಿರ್ದೆಶಿಸಿ , ನಿರ್ಮಿಸಿದ ಗುಪ್ತಗಾಮಿನಿ ಸಿನಿಮಾ ತೆರೆಕಂಡಿದೆ.
ಇದಕ್ಕೂ ಮೊದಲು ಅವರು ಲಂಡನ್‌ ನಲ್ಲಿ ಬಿಬಿಸಿಯಲ್ಲಿ ಆಂಗ್ಲ ಉದ್ಘೋಷಕರಾಗಿ ಸೇವೆ ಸಲ್ಲಿಸಿ ಭಾರತಕ್ಕೆ ವಾಪಾಸ್ಸು ಬಂದ ನಂತರ ಚಾರು ಮೆಲೋಡಿಸ್‌ ಎಂಬ ಸಂಗೀತ ಸಂಘವನ್ನು ಕಟ್ಟಿ ಅನೇಕ ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯರಾಗಿದ್ದರು.ನಂತರ ಹೊಸಪೇಟೆಯಲ್ಲಿ ಇಂಗ್ಲೀಷ್‌ ಸ್ಪೋಕನ್‌ ಇಂಗ್ಲೀಷ್‌ ಶಾಲೆಯನ್ನು ತೆರೆಯುತ್ತಾರೆ. ಹೊಸಪೇಟೆಯ ಸಿಟಿ ಚಾನಲ್‌ ನಲ್ಲಿ ಆಂಗ್ಲ ಸುದ್ದಿಯ ಉದ್ಘೋಷಕರಾಗುತ್ತಾರೆ.
ಇವರ ತಂದೆ ಸ್ವಾತಂತ್ರ್ಯ ಹೋರಾಟಗಾರ ಹಾಗು ಮದ್ರಾಸ್‌ ಪ್ರಾವಿನ್ಸೆ ಸರಕಾರದಲ್ಲಿ ೭ ಖಾತೆಯನ್ನು ಹೊಂದಿದ್ದ ಸಚಿವ ಆರ್.ನಾಗನಗೌಡ ಹಾಗೂ ಹೊಸಪೇಟೆಯ ಮೊದಲ ಮಹಿಳಾ ವೈದ್ಯೆಯಾಗಿದ್ದ ಡಾ.ಸಾವಿತ್ರಮ್ಮ ಅವರ ಪುತ್ರ ಎಂಬುದು ವಿಶೇಷ.
ಹೊಸಪೇಟೆಯಲ್ಲಿ ಅವರೊಂದು ವಿನೂತನ ಮನೆಯನ್ನು ಕಟ್ಟಿ ವಾಸ್ತು ಶಿಲ್ಪಿ ಗೌರಿ ತಿರುಪತಿ ರೆಡ್ಡಿ ಅವರಿಂದ ಶಹಬ್ಬಾಸ್‌ ಎಂದೆನಿಸಿಕೊಂಡವರು. ತಾಯಿಯಿಂದ ಬಳುವಳಿಯಾಗಿ ಬಂದ ಗಣಿಯೊಂದರ ಮಾಲೀಕರಾಗಿದ್ದರು. ಇಂತಹ ಅಪರೂಪದ ವ್ಯಕ್ತಿ ನನಗೆ ಗೆಳೆಯರಾಗಿದ್ದರು ಎನ್ನುವುದು ನನ್ನ ಸೌಭಾಗ್ಯವಾಗಿತ್ತು. ಇಂದು ನಮ್ಮನ್ನಗಲಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕೋರುವೆ.


-ಶಿವಶಂಕರ‌ ಬಣಗಾರ, ಕವಿ- ಪತ್ರಕರ್ತ-ಹೆಸರಾಂತ ಛಾಯಾಗ್ರಾಹಕ, ಹೊಸಪೇಟೆ

The post ಸಂಗೀತ ‌ನಿರ್ದೇಶಕ, ಸಹೃದಯ ‌ಚಾರುಚಂದ್ರ ಅವರಿಗೆ‌ ಅಕ್ಷರ ನಮನ -ಶಿವಶಂಕರ ಬಣಗಾರ appeared first on Karnataka Kahale.

]]>
ಗದಗ: ‘ಕಲಾ ವಿಕಾಸ ಪುರಸ್ಕಾರ’ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ https://www.karnatakakahale.com/news/15753 Thu, 14 Mar 2024 03:01:02 +0000 https://www.karnatakakahale.com/?p=15753 ಗದಗ, ಮಾ.14:ಕಲಾವಿದರ ಮತ್ತು ಕಲಾಪೋಷಕರ ಸಂಘಟನೆಯಾದ ಇಲ್ಲಿನ ಕಲಾ ವಿಕಾಸ ಪರಿಷತ್ ಕಳೆದ 23 ವರ್ಷಗಳಿಂದ ಪ್ರತಿಭಾವಂತ, ಸಾಧಕರಿಗೆ ನೀಡುತ್ತಿರುವ ಕಲಾ ವಿಕಾಸ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ವರ್ಷ ‘ಕಲಾ ವಿಕಾಸ ಉತ್ಸವ’ದ ಸಮಾರಂಭದಲ್ಲಿ ನೀಡುತ್ತಾ ಬಂದಿರುವ…

The post ಗದಗ: ‘ಕಲಾ ವಿಕಾಸ ಪುರಸ್ಕಾರ’ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ appeared first on Karnataka Kahale.

]]>

ಗದಗ, ಮಾ.14:ಕಲಾವಿದರ ಮತ್ತು ಕಲಾಪೋಷಕರ ಸಂಘಟನೆಯಾದ ಇಲ್ಲಿನ ಕಲಾ ವಿಕಾಸ ಪರಿಷತ್ ಕಳೆದ 23 ವರ್ಷಗಳಿಂದ ಪ್ರತಿಭಾವಂತ, ಸಾಧಕರಿಗೆ ನೀಡುತ್ತಿರುವ ಕಲಾ ವಿಕಾಸ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿ ವರ್ಷ ‘ಕಲಾ ವಿಕಾಸ ಉತ್ಸವ’ದ ಸಮಾರಂಭದಲ್ಲಿ ನೀಡುತ್ತಾ ಬಂದಿರುವ ೨೪ನೇ ವರ್ಷದ ಪ್ರಶಸ್ತಿ, ಕಲಾ ವಿಕಾಸ ಪುರಸ್ಕಾರ ಪ್ರಶಸ್ತಿಗೆ ಶಾಸ್ತ್ರೀಯ ಸಂಗೀತ (ಗಾಯನ ವಾದನ, ಸುಗಮ ಸಂಗೀತ, ತತ್ವಪದ, ವಚನ ಗಾಯನ, ಜಾನಪದ ಸಂಗೀತ) ಕ್ಷೇತ್ರದಲ್ಲಿ ಮತ್ತು ಶಾಸ್ತ್ರೀಯ ನೃತ್ಯ (ಭರತನಾಟ್ಯ, ಕಥಕ್, ಕುಚುಪುಡಿ, ಮೊದಲಾದ ನೃತ್ಯ) ಪ್ರಕಾರದಲ್ಲಿ ಸಾಧನೆಗೈದ ಕಲಾವಿದರು ಅರ್ಜಿ ಸಲ್ಲಿಸಬಹುದಾಗಿದೆ.
ಈ ಪ್ರಶಸ್ತಿಯು ಗೌರವಧನ, ಪ್ರಶಸ್ತಿ ಫಲಕ, ನೆನಪಿನ ಕಾಣಿಕೆ, ಶಾಲು ಸತ್ಕಾರವನ್ನು ಒಳಗೊಂಡಿರುತ್ತದೆ. ಆಸಕ್ತ ಕಲಾವಿದರು ತಮ್ಮ ಸಂಪೂರ್ಣ ವಿವರ ಮತ್ತು ಕಲಾ ಪ್ರದರ್ಶನದ ವಿಡಿಯೋ ತುಣುಕುಗಳೊಂದಿಗೆ ವಾಟ್ಸಪ್ ೯೮೮೬೭೧೭೭೩೨ ನಂಬರಿಗೆ ಅಥವಾ kvpgadag@gmail.com ಈ ಇಮೇಲ್ ಗೆ ಕಳಿಸಿಕೊಡಬಹುದಾಗಿದೆ.


ಪುರಸ್ಕಾರಕ್ಕೆ ಆಯ್ಕೆಯಾದ ಕಲಾವಿದರು ತಮ್ಮ ಕಲಾ ಪ್ರದರ್ಶನ ನಡೆಸಿಕೊಡುವುದು ಕಡ್ಡಾಯವಾಗಿರುತ್ತದೆ. ಎಂದು ಕಲಾವಿಕಾಸ ಪರಿಷತ್ ಅಧ್ಯಕ್ಷ ಸಿ. ಕೆ. ಹೆಚ್. ಶಾಸ್ತ್ರಿ (ಕಡಣಿ) ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—–

The post ಗದಗ: ‘ಕಲಾ ವಿಕಾಸ ಪುರಸ್ಕಾರ’ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ appeared first on Karnataka Kahale.

]]>
ಸಂಗೀತ, ನೃತ್ಯ ಮತ್ತು ಪ್ರದರ್ಶಕ ಕಲೆಗಳ ಕೋರ್ಸ್ ನಡೆಸಲು ನೋಂದಾಯಿತ ಶಿಕ್ಷಣ ಸಂಸ್ಥೆಗಳು ವಿವಿಯ ಜೊತೆ ಒಡಂಬಡಿಕೆಗೆ ಅವಕಾಶ. -ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ https://www.karnatakakahale.com/news/12808 Thu, 20 Jul 2023 16:42:38 +0000 https://www.karnatakakahale.com/?p=12808 ಹುಬ್ಬಳ್ಳಿ, ಜು..20: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನದಲ್ಲಿ ಮಾತ್ರ ನಡೆಸುತ್ತಿದ್ದ ಕೋರ್ಸುಗಳನ್ನು ರಾಜ್ಯವ್ಯಾಪಿ ನಡೆಸಲು ಸಂಸ್ಥೆಗಳಿಗೆ ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ…

The post ಸಂಗೀತ, ನೃತ್ಯ ಮತ್ತು ಪ್ರದರ್ಶಕ ಕಲೆಗಳ ಕೋರ್ಸ್ ನಡೆಸಲು ನೋಂದಾಯಿತ ಶಿಕ್ಷಣ ಸಂಸ್ಥೆಗಳು ವಿವಿಯ ಜೊತೆ ಒಡಂಬಡಿಕೆಗೆ ಅವಕಾಶ. -ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ appeared first on Karnataka Kahale.

]]>

ಹುಬ್ಬಳ್ಳಿ, ಜು..20: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನದಲ್ಲಿ ಮಾತ್ರ ನಡೆಸುತ್ತಿದ್ದ ಕೋರ್ಸುಗಳನ್ನು ರಾಜ್ಯವ್ಯಾಪಿ ನಡೆಸಲು ಸಂಸ್ಥೆಗಳಿಗೆ ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ನಾಗೇಶ್ ವಿ.ಬೆಟ್ಟಕೋಟೆ ಹೇಳಿದರು.

ಗುರುವಾರ ನಗರದ ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಮೂಜಗಂ ಸಭಾಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.   ವಿಶ್ವವಿದ್ಯಾಲಯದೊಡನೆ ರಾಜ್ಯದ ಯಾವುದೇ ನೋಂದಾಯಿತ ಶಿಕ್ಷಣ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡು ಸಂಗೀತ, ನೃತ್ಯ ಮತ್ತು ಮತ್ತು ಪ್ರದರ್ಶಕ ಕಲೆಗಳ ಕೋರ್ಸುಗಳನ್ನು ನಡೆಸಲು ಅನುವಾಗುವ ಪರಿನಿಯಮಗಳಿಗೆ ರಾಜ್ಯಪಾಲರ ಅಂಕಿತ ದೊರಕಿದೆ. ಈಗಾಗಲೇ ರಾಜ್ಯದ ಏಳು ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯದೊಡನೆ ಒಡಂಬಡಿಕೆ ಮಾಡಿಕೊಂಡು ಕೋರ್ಸುಗಳನ್ನು ನಡೆಸುತ್ತಿವೆ ಎಂದು ತಿಳಿಸಿದರು. ಅಂತರಾಷ್ಟ್ರೀಯ ವೈಯಲಿನ್ ವಾದಕರು, ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಎಲ್. ಸುಬ್ರಹ್ಮಣ್ಯಂ ಅವರು ತಮ್ಮ ಗ್ಲೋಬಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥೆಯಲ್ಲಿ ಸಂಗೀತ ಕೋರ್ಸ್, ನೃತ್ಯ ಕಲಾವಿದೆ ಡಾ. ಅನುರಾಧ ವಿಕ್ರಾಂತ್ ಅವರು ತಮ್ಮ ದೃಷ್ಟಿ ಆರ್ಟ್ ಸೆಂಟರ್‌ ನಲ್ಲಿ ನೃತ್ಯಕ್ಕೆ ಸಂಬಂಧಿಸಿದ ಕೋರ್ಸ್ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಎಂ.ಇ.ಎಸ್ ಶಿಕ್ಷಣ ಸಂಸ್ಥೆ ಮತ್ತು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳು ನಾಟಕದ ಕೋರ್ಸುಗಳನ್ನು ನಡೆಸಲು ಒಡಂಬಡಿಕೆ ಮಾಡಿಕೊಂಡಿರುತ್ತವೆ. ರಾಜ್ಯ ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆಯಾದ ಕರ್ನಾಟಕ ಜಾನಪದ ಪರಿಷತ್ತು ಕೂಡ ಜಾನಪದ ಕಲೆಗಳಲ್ಲಿ ಕೋರ್ಸುಗಳನ್ನು ನಡೆಸಲು ಒಡಂಬಡಿಕೆ ಮಾಡಿಕೊಳ್ಳುತ್ತಿದೆ. ಇನ್ನೂ ಹತ್ತಾರು ಶಿಕ್ಷಣ ಸಂಸ್ಥೆಗಳು ಸಂಗೀತ, ನೃತ್ಯ ಮತ್ತು ಪ್ರದರ್ಶಕ ಕಲೆಗಳ ಕೋರ್ಸುಗಳನ್ನು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಸಲು ಅರ್ಜಿಗಳನ್ನು ಸಲ್ಲಿಸಿವೆ. 2023-24ನೇ ಶೈಕ್ಷಣಿಕ ಸಾಲಿನಿಂದಲೇ ಈ ಸಂಸ್ಥೆಗಳಿಗೆ ಕೋರ್ಸ್ ನಡೆಸಲು ಅನುಮತಿ ನೀಡಲಾಗುತ್ತಿದೆ ಎಂದರು.

ಕರ್ನಾಟಕ ಸರ್ಕಾರವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುತ್ತಿದ್ದ ಸಂಗೀತ ಪರೀಕ್ಷೆ ಹಾಗೂ ಪ್ರದರ್ಶಕ ಕಲೆಗಳ ನೃತ್ಯ ಮತ್ತು ತಾಳ ವಾದ್ಯಗಳಲ್ಲಿ ಜೂನಿಯರ್, ಸೀನಿಯರ್ ಮತ್ತು ವಿದ್ವತ್‌ ಪರೀಕ್ಷೆಗಳನ್ನು ನಡೆಸುವ ಮತ್ತು ಪ್ರಮಾಣ ಪತ್ರಗಳನ್ನು ನೀಡುವ ಸಂಪೂರ್ಣ ಜವಾಬ್ದಾರಿಯನ್ನು ವಿಶ್ವವಿದ್ಯಾಲಯಕ್ಕೆ ನೀಡಿದೆ. ಪಠ್ಯ ಕ್ರಮಗಳಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ಆಧುನಿಕ ತಾಂತ್ರಿಕತೆಯನ್ನು ಸದ್ಬಳಕೆ ಮಾಡಿಕೊಂಡು ಪಾರದರ್ಶಕತೆಯಿಂದ ಪರೀಕ್ಷೆಗಳನ್ನು ವಿಶ್ವವಿದ್ಯಾಲಯದಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿದ್ವಾಂಸರೊಡನೆ ಸಂವಾದ ನಡೆಸಿ ಪರೀಕ್ಷೆಗಳನ್ನು ನಡೆಸುವ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದರು.     ಈಗಾಗಲೇ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸುವ ಕುರಿತು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗಿದೆ. ಜುಲೈ 30 ರೊಳಗೆ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಳ್ಳಬಹುದು. ನವೆಂಬರ್ ನಂತರದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿಶ್ವವಿದ್ಯಾಲಯದ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ವಿಶ್ವವಿದ್ಯಾಲಯ ಹಾಗೂ ಯುಜಿಸಿಯ ಪಠ್ಯಕ್ರಮದಂತೆ ಸಂಸ್ಥೆಗಳು ಬೋಧನೆ ಮಾಡಬೇಕು. ಕನಿಷ್ಠ 20 ಜನರು ಕೋರ್ಸ್ ಗಳಿಗೆ ದಾಖಲು ಮಾಡಿಕೊಳ್ಳಬಹುದು. ಸಂಗೀತ, ನೃತ್ಯ ವಿಷಯಗಳಲ್ಲಿ ಡಿಪ್ಲೋಮಾ ಪ್ರಮಾಣ ಪತ್ರ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಾಮಾನ್ಯ ಪದವಿಯ ಪ್ರವೇಶ ಶುಲ್ಕವನ್ನು ಈ ಕೋರ್ಸ್ ಗಳಿಗೆ ನಿಗದಿ ಪಡಿಸಲಾಗುವುದು. ಸಂಸ್ಥೆಗಳು ಪ್ರವೇಶ ಶುಲ್ಕದ ಶೇ. 25 ರಷ್ಟು ಹಣವನ್ನು ವಿಶ್ವವಿದ್ಯಾಲಯಕ್ಕೆ ಸಂದಾಯ ಮಾಡಬೇಕು. 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಹಾಗೂ 1 ವರ್ಷ ಅವಧಿಯ ಕೋರ್ಸುಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.                           ಸರ್ಕಾರವು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ರೂ.1.5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈಗಾಗಲೇ ವಿಶ್ವವಿದ್ಯಾಲಯದಲ್ಲಿ ಪೂರ್ಣ ಪ್ರಮಾಣ ಬೋಧಕರಿದ್ದು, ಉಳಿದ ಸಿಬ್ಬಂದಿಗಳ ಖಾಯಂ ನೇಮಕಾತಿ ಕುರಿತು ಸರ್ಕಾರಕ್ಕೆ ತಿಳಿಸಲಾಗುವುದು ಎಂದು ತಿಳಿಸಿದರು.

ಪ್ರಾಚಾರ್ಯರಾದ ಡಾ.ಸಿಸಿಲೀಯಾ ಡಿಕ್ರೋಜ್, ಸಂಗೀತ ವಿದ್ವಾಂಸರಾದ ಶಿವಲೀಲಾ ಸಿದ್ಧವೀರಿ, ವಿಜಯಲಕ್ಷ್ಮಿ, ಅವರು ಸೇರಿದಂತೆ ಶಿರಸಿ, ಕುಮಟಾ, ಬೆಳಗಾವಿ, ಧಾರವಾಡ, ಹುಬ್ಬಳ್ಳಿಯ ಸಂಗೀತ ವಿದ್ವಾಂಸರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
*******

The post ಸಂಗೀತ, ನೃತ್ಯ ಮತ್ತು ಪ್ರದರ್ಶಕ ಕಲೆಗಳ ಕೋರ್ಸ್ ನಡೆಸಲು ನೋಂದಾಯಿತ ಶಿಕ್ಷಣ ಸಂಸ್ಥೆಗಳು ವಿವಿಯ ಜೊತೆ ಒಡಂಬಡಿಕೆಗೆ ಅವಕಾಶ. -ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ appeared first on Karnataka Kahale.

]]>
ಅನುದಿನ ಕವನ-೭೯೨, ಕವಿ: ಪ್ರೊ.ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು ಕವನದ ಶೀರ್ಷಿಕೆ: ಶಿಕ್ಷಣದ ಶಿಖರಗಳು, ರಾಗ ಸಂಯೋಜನೆ: ಪಿ. ನೀತೂ ನಿನಾದ್, ಮೈಸೂರು & ಋತ್ವಿಕ್ ಸಿ. ರಾಜ್, ಮೈಸೂರು, ಗಾಯನ: ಋತ್ವಿಕ್ ಸಿ. ರಾಜ್, ಮೈಸೂರು https://www.karnatakakahale.com/news/11394 https://www.karnatakakahale.com/news/11394#comments Fri, 03 Mar 2023 14:00:33 +0000 https://www.karnatakakahale.com/?p=11394 ಶಿಕ್ಷಣದ ಶಿಖರಗಳು ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ ಅಕ್ಷರದ ಅಕ್ಕರೆಗೆ ಸಕ್ಕರೆಯ ಸಜ್ಜನಿಕೆ ಓನಾಮ ವಂಚಿತರಿಗೆ ಕಲಿಸುವಾ ಕಾಯಕಕೆ ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !! ಕಾಗುಣಿತ ಬಿತ್ತಲು ಹಣೆಬರಹ ಬರೆಯಲು ಸಮಾನತೆಯ…

The post ಅನುದಿನ ಕವನ-೭೯೨, ಕವಿ: ಪ್ರೊ.ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು ಕವನದ ಶೀರ್ಷಿಕೆ: ಶಿಕ್ಷಣದ ಶಿಖರಗಳು, ರಾಗ ಸಂಯೋಜನೆ: ಪಿ. ನೀತೂ ನಿನಾದ್, ಮೈಸೂರು & ಋತ್ವಿಕ್ ಸಿ. ರಾಜ್, ಮೈಸೂರು, ಗಾಯನ: ಋತ್ವಿಕ್ ಸಿ. ರಾಜ್, ಮೈಸೂರು appeared first on Karnataka Kahale.

]]>

ಶಿಕ್ಷಣದ ಶಿಖರಗಳು

ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ
ಅಕ್ಷರದ ಅಕ್ಕರೆಗೆ ಸಕ್ಕರೆಯ ಸಜ್ಜನಿಕೆ
ಓನಾಮ ವಂಚಿತರಿಗೆ ಕಲಿಸುವಾ ಕಾಯಕಕೆ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!

ಕಾಗುಣಿತ ಬಿತ್ತಲು ಹಣೆಬರಹ ಬರೆಯಲು
ಸಮಾನತೆಯ ಬೆಳೆಸಲು ಸ್ವಾಭಿಮಾನ ತುಂಬಲು
ಬಡವರ ಬದುಕಿಗೆ ಜಗದ ಜ್ಯೋತಿಯಾದಿರಿ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!

ವಿಜ್ಞಾನದ ದೀಪಗಳು ಝಗಮಗಿಸಿ ಬೆಳಗಲು
ಇತಿಹಾಸದ ಬೇರುಗಳ ಆಳವಾಗಿ ಅರಿಯಲು
ಶಿಕ್ಷಣದ ಹಕ್ಕುಗಳ ಮನವರಿಕೆ ಮಾಡಿದಿರಿ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!

ಸಾವಿತ್ರಿಫುಲೆ ಬೋಧನೆ ಮಹಿಳೆಯರ ಓದಿಗೆ
ಅಂಬೇಡ್ಕರ್‌ ರೂಪದಲಿ ವಿಶ್ವಜ್ಞಾನಿ ಉಡುಗೊರೆ
ಶೂದ್ರರ ಬದುಕಿಗೆ ದಾರಿದೀಪವಾದಿರಿ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!

ನಾಲ್ವಡಿ ಒಡೆಯರು ಶಾಲೆಗಳ ತೆರೆದರು
ಶಾಹು ಮಹಾರಾಜರು ಬೆಂಬಲಕ್ಕೆ ನಿಂತರು
ಮಾಳವೀಯ ಟ್ಯಾಗೋರು ಜೊತೆಯಾಗಿ ನಡೆದರು
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!

ದೇಶದ ಉದ್ದಗಲ ಶಿಕ್ಷಣದ ಶಿಖರಗಳು
ರೈತರ ನೆರವಿಗೆ ಬೇಸಾಯದ ಶಿಕ್ಷಣ
ಆಧುನಿಕ ಅರಿವಿಗೆ ಜಾಗತಿಕ ಕಲಿಕೆಗೆ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!

ವಂದಿಪೆವು ನಿಮಗೆ ನಾವು ಅಕ್ಷರ ಸವಿದವರು ಸೇರಿ
ಸ್ಮರಿಸುವೆವು ನಿಮ್ಮ ನಾವು ಚಣಚಣದ ನುಡಿಯಲಿ
ಹಾಡುಕಟ್ಟಿ ಹಾಡುವೆವು ನಮ್ಮ ಕೊರಳ ದನಿಯಲಿ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!


-ಪ್ರೊ.ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು

ರಾಗ ಸಂಯೋಜನೆ: ಪಿ. ನೀತೂ ನಿನಾದ್, ಮೈಸೂರು &ಋತ್ವಿಕ್ ಸಿ. ರಾಜ್, ಮೈಸೂರು

ಗಾಯನ: ಋತ್ವಿಕ್ ಸಿ. ರಾಜ್, ಮೈಸೂರು
******

[ವಿಶೇಷ ಸೂಚನೆ: ಕವನದ ಶೀರ್ಷಿಕೆಯ ಮೇಲೆ ಹಾಡಿನ‌ ಆಡಿಯೋ ಇದೆ.‌ ಆಡಿಯೋ ಗುಂಡಿಯನ್ನು ಒತ್ತಿ, ಕವನದ ಸಾಹಿತ್ಯ‌ ಗಮನಿಸುತ್ತಾ ಹಾಡು ಕೇಳಿರಿ. ಆನಂದಿಸಿರಿ.‌]

 

The post ಅನುದಿನ ಕವನ-೭೯೨, ಕವಿ: ಪ್ರೊ.ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು ಕವನದ ಶೀರ್ಷಿಕೆ: ಶಿಕ್ಷಣದ ಶಿಖರಗಳು, ರಾಗ ಸಂಯೋಜನೆ: ಪಿ. ನೀತೂ ನಿನಾದ್, ಮೈಸೂರು & ಋತ್ವಿಕ್ ಸಿ. ರಾಜ್, ಮೈಸೂರು, ಗಾಯನ: ಋತ್ವಿಕ್ ಸಿ. ರಾಜ್, ಮೈಸೂರು appeared first on Karnataka Kahale.

]]>
https://www.karnatakakahale.com/news/11394/feed 3
ಗ್ರಾಮೀಣ ಜನರ ರಂಗ ಕಲೆಗಳ ಪ್ರೋತ್ಸಾಹ ಅನನ್ಯ -ಬಿ.ಎಂ.ಗುರುಮೂರ್ತಿಸ್ವಾಮಿ https://www.karnatakakahale.com/news/11022 Mon, 23 Jan 2023 15:09:28 +0000 https://www.karnatakakahale.com/?p=11022 ಬಳ್ಳಾರಿ, ಜ.23: ನಗರ ಪ್ರದೇಶದಲ್ಲಿ ನಾಟಕ, ನೃತ್ಯ, ಹಾಡುಗಾರಿಕೆ ಕೇವಲ ಪ್ರದರ್ಶನಕ್ಕೆ ಸೀಮಿತವಾಗುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಈ ಕಲೆಗಳಿಗೆ ಮಹತ್ವ ಕಡಿಮೆಯಾಗಿಲ್ಲ ಎಂದು ಶ್ರೀಧರಗಡ್ಡೆಯ ಬಿ.ಎಂ.ಗುರುಮೂರ್ತಿಸ್ವಾಮಿ ಅವರು ಅಭಿಪ್ರಾಯಪಟ್ಟರು. ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಹಂದ್ಯಾಳಿನ ಮಹದೇವತಾತಾ…

The post ಗ್ರಾಮೀಣ ಜನರ ರಂಗ ಕಲೆಗಳ ಪ್ರೋತ್ಸಾಹ ಅನನ್ಯ -ಬಿ.ಎಂ.ಗುರುಮೂರ್ತಿಸ್ವಾಮಿ appeared first on Karnataka Kahale.

]]>

ಬಳ್ಳಾರಿ, ಜ.23: ನಗರ ಪ್ರದೇಶದಲ್ಲಿ ನಾಟಕ, ನೃತ್ಯ, ಹಾಡುಗಾರಿಕೆ ಕೇವಲ ಪ್ರದರ್ಶನಕ್ಕೆ ಸೀಮಿತವಾಗುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಈ ಕಲೆಗಳಿಗೆ ಮಹತ್ವ ಕಡಿಮೆಯಾಗಿಲ್ಲ ಎಂದು ಶ್ರೀಧರಗಡ್ಡೆಯ ಬಿ.ಎಂ.ಗುರುಮೂರ್ತಿಸ್ವಾಮಿ ಅವರು ಅಭಿಪ್ರಾಯಪಟ್ಟರು.
ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಹಂದ್ಯಾಳಿನ ಮಹದೇವತಾತಾ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಿಂದ ಹಮ್ಮಿಕೊಂಡಿದ್ದ. ಗ್ರಾಮೀಣ ಸಾಂಸ್ಕೃತಿಕ ಸಂಭ್ರಮ 2023 ಕಾರ್ಯಕ್ರಮವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೋಲಾಟ, ಬಜನೆ, ದೊಡ್ಡಾಟ ಮೊದಲಾದ ಗ್ರಾಮೀಣ ಕಲೆಗಳ ಪ್ರದರ್ಶನ ಕಡಿಮೆ ಆದರೂ, ಅವುಗಳು ಎಂದಿಗೂ ನಶಿಸುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಜೀವಂತವಾಗಿರಲಿವೆ. ಇಂದಿನ ಅಧುನಿಕ ಬದುಕಿನಿಂದ ಜನತೆ ಮತ್ತೆ ಇಂತಹ ಕಲೆಗಳ ವೀಕ್ಷಣೆಗೆ ಬಯಸುವ ದಿನಗಳು ಬರಲಿವೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಮಹದೇವತಾತಾ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ್ ಅವರು. ಯಾವುದೇ ಮಾಧ್ಯಮ ಪ್ರಕಾರ ಬಂದರೂ ಹಳ್ಳಿಗಳಲ್ಲಿ ನಾಟಕ ಕಲೆಗೆ ಜನರಿಂದ ಪ್ರೋತ್ಸಾಹದ ಕೊರತೆ ಇಲ್ಲ. ಅದರಲ್ಲೂ ಈ ಶ್ರೀಧರಗಡ್ಡೆ ಗ್ರಾಮ ಗದುಗಿನ ಶ್ರೀಗಳು ನಡೆದಾಡಿದ ತಾಣ. ಕೊಟ್ಟೂರು ಶ್ರೀಗಳ ಮಠ ಮೊದಲಾದ ಕಾರಣಗಳಿಂದ ಇಲ್ಲಿ ಭಕ್ತಿ ಸೇವೆಯಂತೆ ಕಲಾಸೇವೆಗೂ ಜನರಿಂದ ಸಹಕಾರ ದೊರೆಯುತ್ತದೆ.
ಸರ್ಕಾರ ಕಲಾ ಪ್ರಕಾರಗಳ ಪ್ರದರ್ಶನಕ್ಕೆ ನೀಡುತ್ತಿರುವ ಸಹಕಾರವನ್ನು ಸ್ಮರಿಸಿದರು.


ಅಧ್ಯಕ್ಷತೆವಹಿಸಿದ್ದ ಹಿರಿಯ ಪತ್ರಕರ್ತ ಎನ್.ವೀರಭದ್ರಗೌಡ ಮಾತನಾಡಿ, ನಗರ ಪ್ರದೇಶಗಳಲ್ಲಿ ಸರ್ಕಾರಿ ಪ್ರಾಯೋಜಿತ ಕಲೆಗಳ ಪ್ರದರ್ಶನಕ್ಕೆ ಪ್ರೇಕ್ಷಕರ ಕೊರತೆ ಇದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜನತೆ, ಹಾಡುಗಾರಿಕೆ, ನೃತ್ಯ, ಜನಪದ ಕಲೆಗಳ ಪ್ರದರ್ಶನವನ್ನು ವೀಕ್ಷಣೆಗೆ ಹೆಚ್ಚಿನದಾಗಿ ಮುಂದಾಗುತ್ತಾರೆ ಇದಕ್ಕೆ ಈ ಗ್ರಾಮದ ಇಂದಿನ ಕಾರ್ಯಕ್ರಮವೇ ಸಾಕ್ಷಿ ಎಂದರು.
ಸಮಾರಂಭದಲ್ಲಿ 98 ವರ್ಷದ ಹಿರಿಯ ರಂಗಭೂಮಿ‌ಕಲಾವಿದ ಟಿ.ಸೋಮನಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ಗ್ರಾಮದ ಮುಖಂಡರುಗಳಾದ ಎ.ಸಿದ್ದಲಿಂಗಪ್ಪ, ಎಸ್.ಬಿ.ವೀರನಗೌಡ, ಎಸ್.ಡಿ.ಮಲ್ಲಿಕಾರ್ಜುನ, ದೊಡ್ಡಬಸಪ್ಪ, ಪಿ.ಅಂಬರೀಶ್, ಗುಡಿಮುಂದಲ‌ಬಸವರಾಜ್, ಪಿ.ನಿರಂಜನ್, ಎಂ.ಭೋಜರಾಜ, ಬಳ್ಳಾರಿ ಬಸವರಾಜ್ ಊರಿನ ಹಿರಿಯರು ಯುವಮುಖಂಡರು ಇದ್ದರು. ಪ್ರಾರ್ಥನೆಯನ್ನು ಕೆ.ಆರ್.ಎರ್ರೇಗೌಡ ಎ.ಜಂಬನಗೌಡ ಕಾರ್ಯಕ್ರಮದ ನಿರೂಪಣೆ ಮಾಡಿದರು.


ಸಾಂಸ್ಕೃತಿಕ ಕಾರ್ಯಕ್ರಮಗಳು: ಕು.ವೈ.ರೇಣುಕ ಅವರಿಂದ ನೃತ್ಯ, ಹೆಚ್.ಎಂ.ಗಂಗಾಧರ ತಂಡದಿಂದ ಜಾನಪದ ಗೀತೆಗಳ ಗಾಯನ, ಡಿ.ದಾನಗೌಡರ ಪಂಪನಗೌಡ ತಂಡದಿಂದ ಭಜನೆ, ಡಿ.ವೀರೇಶ ಮತ್ತು ತಂಡದಿಂದ ಕೋಲಾಟ ಹಾಗು ಜಿ.ಸುವರ್ಣ ಮತ್ತವರ ತಂಡದಿಂದ ಅಕ್ಕನಾಗಲಾಂಬಿಕೆ ನಾಟಕ ಪ್ರದರ್ಶನ ನೆರೆದ ಪ್ರೇಕ್ಷಕರ ಮನಸೂರಗೊಂಡವು.


*****

The post ಗ್ರಾಮೀಣ ಜನರ ರಂಗ ಕಲೆಗಳ ಪ್ರೋತ್ಸಾಹ ಅನನ್ಯ -ಬಿ.ಎಂ.ಗುರುಮೂರ್ತಿಸ್ವಾಮಿ appeared first on Karnataka Kahale.

]]>
ಇಂದಿನಿಂದ ವರ್ಣರಂಜಿತ ಬಳ್ಳಾರಿ ಉತ್ಸವ ಆರಂಭ: ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ https://www.karnatakakahale.com/news/10987 Sat, 21 Jan 2023 08:20:18 +0000 https://www.karnatakakahale.com/?p=10987 ಬಳ್ಳಾರಿ,ಜ.೨೧: ನವಶಿಲಾಯುಗದ ಪಳೆಯುಳಿಕೆಗಳನ್ನು ಹೊಂದಿರುವ ಐತಿಹಾಸಿಕ ನಗರ ಎರಡು ದಿನಗಳ ವರ್ಣರಂಜಿತ ಬಳ್ಳಾರಿ ಉತ್ಸವಕ್ಕೆ ಸಜ್ಜುಗೊಂಡಿದೆ. ಶನಿವಾರ(ಜ.೨೧)ದಿಂದ ಎರಡು ದಿನಗಳ ಕಾಲ ಜರುಗುವ ಸಾಂಸ್ಕೃತಿಕ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಸಂಜೆ  ಆರು ಗಂಟೆಗೆ  ಮುನಿಸಿಪಲ್ ಮೈದಾನದ…

The post ಇಂದಿನಿಂದ ವರ್ಣರಂಜಿತ ಬಳ್ಳಾರಿ ಉತ್ಸವ ಆರಂಭ: ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ appeared first on Karnataka Kahale.

]]>

ಬಳ್ಳಾರಿ,ಜ.೨೧: ನವಶಿಲಾಯುಗದ ಪಳೆಯುಳಿಕೆಗಳನ್ನು ಹೊಂದಿರುವ ಐತಿಹಾಸಿಕ ನಗರ ಎರಡು ದಿನಗಳ ವರ್ಣರಂಜಿತ ಬಳ್ಳಾರಿ ಉತ್ಸವಕ್ಕೆ ಸಜ್ಜುಗೊಂಡಿದೆ.
ಶನಿವಾರ(ಜ.೨೧)ದಿಂದ ಎರಡು ದಿನಗಳ ಕಾಲ ಜರುಗುವ ಸಾಂಸ್ಕೃತಿಕ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಸಂಜೆ  ಆರು ಗಂಟೆಗೆ  ಮುನಿಸಿಪಲ್ ಮೈದಾನದ ಬಳ್ಳಾರಿ ರಾಘವ ಮುಖ್ಯ ವೇದಿಕೆಯಲ್ಲಿ ಚಾಲನೆ ನೀಡುವರು.


ಬಳ್ಳಾರಿ ಜಿಲ್ಲೆ ವಿಭಜನೆಗೊಂಡ ಬಳಿಕ ಪ್ರಥಮ ಬಾರಿಗೆ ಆಯೋಜನೆಗೊಂಡಿರುವ ಉತ್ಸವವನ್ನು ಕಣ್ತುಂಬಿಕೊಳ್ಳಲು ಜನ ಕಾತರದಿಂದ ಇದ್ದಾರೆ. ಜಿಲ್ಲಾಡಳಿತ ಬಳ್ಳಾರಿ ಉತ್ಸವವನ್ನು ‘ಜನೋತ್ಸವ’ವಾಗಿ ಪರಿವರ್ತಿಸಲು ಶ್ರಮಿಸುತ್ತಿದೆ.
ಜಿಲ್ಲಾಡಳಿತ ಎರಡು ಮೂರು ದಿನಗಳಿಂದ ಚಿತ್ರಕಲಾ ಶಿಬಿರ, ಗಾಳಿಪಟ ಸ್ಪರ್ಧೆ, ಸಿರಿಧಾನ್ಯ ನಡಿಗೆ, ಅಲಂಕೃತ ಎತ್ತಿನ ಗಾಡಿ ಮೆರವಣಿಗೆ, ರಂಗೋಲಿ ಸ್ಪರ್ಧೆ, ಪ್ರದರ್ಶನ, ಮೆಹಂದಿ ಸ್ಪರ್ಧೆ, ಸೈಕಲ್ ಜಾಥಾ ಹಮ್ಮಿಕೊಳ್ಳುವ ಮೂಲಕ ಬಳ್ಳಾರಿ ಉತ್ಸವದಲ್ಲಿ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಲು ಕ್ರಮ ಕೈಗೊಂಡಿರುವುದು ವಿಶೇಷ.
ಗುರುವಾರದಿಂದ ಆಕಾಶದ ಮೂಲಕ ಬಳ್ಳಾರಿ ನಗರ, ಕೋಟೆ, ಸಮೀಪದ ಬೆಟ್ಟಗುಡ್ಡಗಳನ್ನು ವೀಕ್ಷಿಸಲು ಬಳ್ಳಾರಿ ಬೈಸ್ಕೈ ಆಯೋಜಿಸಿದೆ.


ಸ್ಥಳೀಯ ಪ್ರತಿಭೆಗಳೊಂದಿಗೆ ನಾಡಿನ ಖ್ಯಾತನಾಮರು ಕಾರ್ಯಕ್ರಮ ನೀಡುತ್ತಿದ್ದಾರೆ. ಶನಿವಾರ ಸಂಜೆ ವೇದಿಕೆ ಕಾರ್ಯಕ್ರಮದ ಬಳಿಕ ಎಂ.ಡಿ ಪಲ್ಲವಿ ಅವರಿಂದ ಗೀತಗಾಯನ, ಟಾಲಿವುಡ್ ಖ್ಯಾತ ಗಾಯಕಿ ಶ್ರೀಮತಿ ಮಂಗ್ಲಿ ಮತ್ತು ತಂಡ, ಹಾಗೂ ಬೆಂಗಳೂರಿನ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಹಾಗೂ ತಂಡ ಪ್ರಸ್ತುತ ಪಡಿಸುವ ರಸಮಂಜರಿ ಹಾಗೂ ಭಾನುವಾರ ರಾತ್ರಿ ಬಾಲಿವುಡ್ ಖ್ಯಾತ ಗಾಯಕಿ ಸುನಿಧಿ ಚವ್ಹಾಣ್ ಮತ್ತು ತಂಡ ನೀಡುವ ರಸಮಂಜರಿ ಉತ್ಸವದ ಆಕರ್ಷಣೆಯಾಗಲಿದೆ.
ಕೋಟೆಯ ಡಾ.ಜೋಳದರಾಶಿ ದೊಡ್ಡನಗೌಡರ ವೇದಿಕೆಯಲ್ಲಿ ಸಂಜೆ ೪ರಿಂದ ರಾತ್ರಿ ೧೨ರವರೆಗೆ ವಿವಿಧ ಕಲಾತಂಡಗಳಿಂದ ಸಂಗೀತ, ವಿವಿಧ ನೃತ್ಯ, ಬಯಲಾಟ ಸೇರಿದಂತೆ ಹಲವಾರು ಕಾರ್ಯಕ್ರಮ ನಡೆಯಲಿವೆ.
ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜರುಗಲಿರುವ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣೆಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪವನ್‌ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
*****

The post ಇಂದಿನಿಂದ ವರ್ಣರಂಜಿತ ಬಳ್ಳಾರಿ ಉತ್ಸವ ಆರಂಭ: ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ appeared first on Karnataka Kahale.

]]>
ಸೋಮಸಮುದ್ರದಲ್ಲಿ ಮನರಂಜಿಸಿದ ಹಂದ್ಯಾಳ್ ಶ್ರೀ ಮಹಾದೇವತಾತ ಕಲಾ ಸಂಘದ ‘ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ’ https://www.karnatakakahale.com/news/10944 Thu, 19 Jan 2023 15:33:58 +0000 https://www.karnatakakahale.com/?p=10944 ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಬುಧವಾರ ರಾತ್ರಿ ಹಂದ್ಯಾಳ್ ಗ್ರಾಮದ ಶ್ರೀ ಮಹಾದೇವತಾತ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಿಂದ ಹಮ್ಮಿಕೊಂಡ ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ ಜನ ಮನಸೂರೆಗೊಂಡಿತು. ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ…

The post ಸೋಮಸಮುದ್ರದಲ್ಲಿ ಮನರಂಜಿಸಿದ ಹಂದ್ಯಾಳ್ ಶ್ರೀ ಮಹಾದೇವತಾತ ಕಲಾ ಸಂಘದ ‘ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ’ appeared first on Karnataka Kahale.

]]>
ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಬುಧವಾರ ರಾತ್ರಿ ಹಂದ್ಯಾಳ್ ಗ್ರಾಮದ ಶ್ರೀ ಮಹಾದೇವತಾತ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಿಂದ ಹಮ್ಮಿಕೊಂಡ ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ ಜನ ಮನಸೂರೆಗೊಂಡಿತು.
ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಉದ್ಯಮಿ ತಿಮ್ಮಪ್ಪ ಜೋಳದರಾಶಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ರಂಗ ಕಲೆ ಗ್ರಾಮೀಣ ಜನರ ಅಚ್ಚುಮೆಚ್ಚಿನ ಕಲೆಯಾಗಿದೆ. ಯಾವುದೇ ನಾಟಕವಾಗಲಿ ಅದನ್ನು ಗ್ರಾಮದ ಜನರು ಒಟ್ಟಾಗಿ ಕುಳಿತು ಹಬ್ಬದ ರೀತಿ ಸಂಭ್ರಮಿಸಿ ನೋಡುತ್ತಾರೆ. ಇಂದು ಈ ಗ್ರಾಮದಲ್ಲಿ ಸಹ ಇದೆ ವಾತಾವರಣ ಇದೆ ಎಂದರು.
ರಂಗ ಕಲೆಗೆ ಪ್ರೋತ್ಸಾಹದ ಕೊರತೆ ಕಾಡುತ್ತಿದೆ. ಟಿವಿ ಧಾರಾವಾಹಿ, ಸಿನಿಮಾ ಹಾವಳಿಗೆ ನಮ್ಮ ರಂಗಭೂಮಿ ನಲುಗುವ ಹಾಗೆ ಹಾಗಿದೆ. ಇದನ್ನು ಪ್ರೋತ್ಸಾಹಿಸುವ ಅನಿವಾರ್ಯತೆ ಎಲ್ಲರ ಮೇಲಿದೆ. ಈ ಹಂದ್ಯಾಳು ಮಹಾದೇವತಾತಕಲಾಸಂಘವು ಕಳೆದ 18 ವರ್ಷಗಳಿಂದ ಗ್ರಾಮೀಣ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿರುವುದು ಶ್ಲಾಘನೀಯವೆಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದ್ಯಾಳು ಮಾತನಾಡಿ, ಕಲಾ ಸೇವೆ ಒಂದು ಪವಿತ್ರ ಕೆಲಸ. ಯಾವುದೇ ಕಲೆ ಆಗಲಿ ಜಾತಿ, ಬಣ್ಣ, ವರ್ಗ ನೋಡಿ ಒಲಿಯುವುದಿಲ್ಲ. ಬದಲಿಗೆ ಶ್ರಮ, ಆಸಕ್ತಿ ಆಧಾರದಲ್ಲಿ ಒಲಿಯುತ್ತದೆ. ಯಾರೇ ಆಗಲಿ ಕಲಾ ಸೇವೆ ಮಾಡುವ ಮನಸ್ಸು ಹೊಂದಿದವರು ಹಿಂಜರಿಕೆ ಮಾಡದೆ ಸೇವೆ ಮಾಡಲು ಮುಂದಾಗಬೇಕು ಎಂದರು.

 

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಮಹಾದೇವ ತಾತ ಕಲಾಸಂಘದ ಅಧ್ಯಕ್ಷ, ಪುರುಷೋತ್ತಮ ಹಂದ್ಯಾಳು ಅವರು, ಸೋಮಸಮುದ್ರದ ಜನ ಕಲಾ ಆರಾಧಕರು. ಯಾವಾಗ ನಾಟಕ ಪ್ರದರ್ಶನ ಮಾಡಿದರು ಸಹಿತ ನೋಡಲು ಕಿಕ್ಕಿರಿದು ಸೇರುತ್ತಾರೆ. ಕಲೆಯನ್ನು ಪ್ರೋತ್ಸಾಹಿಸುವ ವಿಚಾರದಲ್ಲಿ ಎತ್ತಿದ ಕೈ ಎಂದರು.
ಹಿರಿಯ ಪತ್ರಕರ್ತ ಪಾಟೀಲ್ ವೀರನಗೌಡ ಅವರು ಮಾತನಾಡಿ, 18 ವರ್ಷದ ಹಿಂದೆ ಗ್ರಾಮೀಣ ಭಾಗದಲ್ಲಿ ಸ್ಥಾಪಿತವಾದ ಮಹಾದೇವ ತಾತ ಕಲಾ ಸಂಘ ಇಂದು ರಾಜ್ಯಾದ್ಯಂತ ತನ್ನದೇ ಛಾಪು ಮೂಡಿಸಿದೆ. ಕಾರಣ ಕಂದಗಲ್ಲು ಹನುಮಂತ ರಾಯರು ರಚಿಸಿದ ರಕ್ತ ರಾತ್ರಿ ನಾಟಕದಲ್ಲಿ ಪುರುಷೋತ್ತಮ ಹಂದ್ಯಾಳು ಅವರು ಶಕುನಿ ಪಾತ್ರದ ಮನಮೆಚ್ಚುವ ಅಭಿನಯವಾಗಿದೆ ಎಂದರು.

ಗ್ರಾಮದ ಹಿರಿಯ ಬಯಲಾಟ ಕಲಾವಿದ ಬಡಿಗೇರ ಈರಣ್ಣ(ಕಾಶಪ್ಪ) ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶರಣಬಸವ ಮತ್ತು ತಂಡದಿಂದ ಸೀತಾಪಹರಣ ಬಯಲಾಟ ಪ್ರದರ್ಶನ, ಕುಮಾರಿ ಎಸ್. ಅಭಿನಯ ನೃತ್ಯ ಪ್ರದರ್ಶನ. ಕುಮಾರ ಗೌಡ ಮತ್ತು ತಂಡದಿಂದ ಭಜನಾ ಕಾರ್ಯಕ್ರಮಗಳು ನಡೆದವು. ಆರ್.ಕೆ.ಯರೆಗೌಡ ಜಾನಪದ ಗೀತೆ ಗಾಯನ ಮಾಡಿದರು.
ಸೋಮಸಮುದ್ರ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಭದ್ರಪ್ಪ, ಉಪಾಧ್ಯಕ್ಷರು, ಸರ್ವ ಸದಸ್ಯರು, ಪುರುಷೋತ್ತಮ ಗೌಡ, ಮಂಜುನಾಥ್, ಪಂಚಣ್ಣ ಜಡೆಗೌಡ, ಟಿ.ಸಿದ್ದನಗೌಡ, ಗೊರವರ ಬಸವರಾಜ್, ಎಂ.ಹನುಮಂತಪ್ಪ ,ಹಾಗು ಊರಿನ ಮುಖಂಡರು ಮುಂತಾದವರು ಇದ್ದರು.
*****

The post ಸೋಮಸಮುದ್ರದಲ್ಲಿ ಮನರಂಜಿಸಿದ ಹಂದ್ಯಾಳ್ ಶ್ರೀ ಮಹಾದೇವತಾತ ಕಲಾ ಸಂಘದ ‘ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ’ appeared first on Karnataka Kahale.

]]>
ಅಭಿನಯ ಕಲಾಕೇಂದ್ರ ಆಯೋಜನೆ: ಸಿಡಿಗಿನಮೊಳ ಗ್ರಾಮದಲ್ಲಿ `ಗ್ರಾಮೀಣ ಕಲಾ ಸಂಗಮ’ ಯಶಸ್ವಿ https://www.karnatakakahale.com/news/10761 Fri, 30 Dec 2022 06:50:47 +0000 https://www.karnatakakahale.com/?p=10761   ಬಳ್ಳಾರಿ, ಡಿ.30:ನಗರದ ಅಭಿನಯ ಕಲಾಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಸಾಮಾನ್ಯ ಯೋಜನೆಯಡಿ ಗುರುವಾರ ತಾಲೂಕಿನ ಸಿಡಿಗಿನಮೊಳ ಗ್ರಾಮದಲ್ಲಿ ಜರುಗಿದ `ಗ್ರಾಮೀಣ ಕಲಾ ಸಂಗಮ’ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಗ್ರಾಮೀಣ ಪ್ರೇಕ್ಷಕರ ಮನಸೂರೆಗೊಂಡಿತು. ಜಾನಪದ…

The post ಅಭಿನಯ ಕಲಾಕೇಂದ್ರ ಆಯೋಜನೆ: ಸಿಡಿಗಿನಮೊಳ ಗ್ರಾಮದಲ್ಲಿ `ಗ್ರಾಮೀಣ ಕಲಾ ಸಂಗಮ’ ಯಶಸ್ವಿ appeared first on Karnataka Kahale.

]]>
 

ಬಳ್ಳಾರಿ, ಡಿ.30:ನಗರದ ಅಭಿನಯ ಕಲಾಕೇಂದ್ರ ಮತ್ತು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಸಾಮಾನ್ಯ ಯೋಜನೆಯಡಿ ಗುರುವಾರ ತಾಲೂಕಿನ ಸಿಡಿಗಿನಮೊಳ ಗ್ರಾಮದಲ್ಲಿ ಜರುಗಿದ `ಗ್ರಾಮೀಣ ಕಲಾ ಸಂಗಮ’ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಗ್ರಾಮೀಣ ಪ್ರೇಕ್ಷಕರ ಮನಸೂರೆಗೊಂಡಿತು.
ಜಾನಪದ ತಮಟೆ ವಾದ್ಯವನ್ನು ನುಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಕಲಾವಿದ ಮಹೇಶ್ವರಯ್ಯ ಸ್ವಾಮಿ ಅವರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಾಟಕ ಬಯಲಾಟಗಳಿಲ್ಲದೇ ಸೊರಗಿದ ಹಳ್ಳಿಗಳಲ್ಲಿ ಇಂಥಾ ಕಾರ್ಯಕ್ರಮಗಳು ಜನತೆಯಲ್ಲಿ ಚೈತನ್ಯ ಮೂಡಿಸುತ್ತವೆ. ಸಂಸ್ಕೃತಿ ಇಲಾಖೆಯ ಕಾರ್ಯಕ್ರಮವನ್ನು ನಗರ ಪ್ರದೇಶದಲ್ಲಿ ಏರ್ಪಡಿಸುವುದು ಸುಲಭ, ಸಿದ್ಧವಾದ ರಂಗಮಂದಿರ ಇರುತ್ತವೆ. ಆದರೆ ಇಂಥಾ ದೂರದ ಗ್ರಾಮಗಳ ಮೇಲಿನ ಪ್ರೀತಿಯಿಂದ ಅಭಿನಯ ಕಲಾಕೇಂದ್ರದ ಅಧ್ಯಕ್ಷರಾದ ಕೆ. ಜಗದೀಶ್ ಅವರು ಶ್ರಮವಹಿಸಿ ಇಂಥಾ ಕಾರ್ಯಕ್ರಮವನ್ನು ನಮ್ಮ ಹಳ್ಳಿಗೆ ತಂದಿರುವುದಕ್ಕೆ ಪ್ರಶಂಸಿಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ಪಿ. ರುದ್ರಯ್ಯ ಅವರು ಮಾತನಾಡಿ, ಗ್ರಾಮಸ್ಥರ ಬೇಡಿಕೆಯಂತೆ ಮುಂದಿನ ವಾರ ಸಿಡಿಗಿನಮೊಳ ಗ್ರಾಮದ ಬನಶಂಕರಿ ಜಾತ್ರೆಗೆ ನಾಟಕ ಪ್ರದರ್ಶನ ನೀಡಬೇಕೆಂದು ಆಹ್ವಾನಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಂಗ ನಿರ್ದೇಶಕ ಕೆ. ಜಗದೀಶ್, ಸಿಡಿಗಿನಮೊಳ ಗ್ರಾಮ ಕಲಾವಿದರ ಶಕ್ತಿಸ್ಥಲ ಎಂದರು. ಖ್ಯಾತ ನಾಟಕಕಾರ, ನಿರ್ದೇಶಕ ವೈ.ಎಂ. ಚಂದ್ರಯ್ಯ, ಹಾರ್ಮೋನಿಯಂ ಮಾಸ್ಟರ್ ವೀರಭದ್ರಪ್ಪ ಹಾಗೂ ಅಭಿಮನ್ಯು ಕಾಳಗ ಬಯಲಾಟ ಬರೆದ ಬಳೆ ಸಿದ್ದಪ್ಪರ ಕಲಾಸೇವೆಯನ್ನು ಸ್ಮರಿಸಿದರು. ಬಯಲಾಟದ ಮಾಸ್ಟರ್ ಹೆಚ್. ತಿಪ್ಪೇಸ್ವಾಮಿಯವರು ಗ್ರಾಮದ ಕಲಾಪ್ರೇಮವನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಜೆಸ್ಕಾಂ ಜೆ.ಇ. ಅಶೋಕ್, ಗ್ರಾಮದ ಹಿರಿಯರಾದ ಚನ್ನಬಸವನಗೌಡ, ಗ್ರಾಮಪಂಚಾಯತಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಇದ್ದರು.

ಶರಣ ಬಸವರಾಜ ತಂಡದ ವಚನ ಗಾಯನ, ಇ. ಮಧುಸೂದನ ತಂಡದ ತೊಗಲುಗೊಂಬೆ ಪ್ರದರ್ಶನ ಮತ್ತು ದಕ್ಷಿಣ ಮೂರ್ತಿ ತಂಡದ ನಾಟಕದ ದೃಶ್ಯಗಳನ್ನು ಗ್ರಾಮಸ್ಥರು ಮೆಚ್ಚಿ ಪ್ರೋತ್ಸಾಹಿಸಿದರು. ಮತ್ತೊಮ್ಮೆ ತಮ್ಮ ಗ್ರಾಮದಲ್ಲಿ ಇಂಥಾ ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ಒತ್ತಾಯಿಸಿದರು.
ಲೇಖಕ ಕೆ. ಜಗದೀಶ್ ಸ್ವಾಗತಿಸಿದರು.
ನಟ ಆದರ್ಶ ನಿರೂಪಿಸಿದರು. ವಸಂತಕುಮಾರ ವಂದಿಸಿದರು.
*****

The post ಅಭಿನಯ ಕಲಾಕೇಂದ್ರ ಆಯೋಜನೆ: ಸಿಡಿಗಿನಮೊಳ ಗ್ರಾಮದಲ್ಲಿ `ಗ್ರಾಮೀಣ ಕಲಾ ಸಂಗಮ’ ಯಶಸ್ವಿ appeared first on Karnataka Kahale.

]]>