ಸಮಾಜ ಸೇವೆ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Tue, 14 Apr 2026 04:50:50 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಸಮಾಜ ಸೇವೆ – Karnataka Kahale https://www.karnatakakahale.com 32 32 ಎನ್.ಎಸ್.ಎಸ್ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರ ಕಲಿಯಲು ಸಾಧ್ಯ: ಶಾಸಕ ಬಿ.ಪಿ.ಹರೀಶ್ https://www.karnatakakahale.com/news/22732 Tue, 14 Apr 2026 04:50:50 +0000 https://www.karnatakakahale.com/?p=22732 ಹರಿಹರ, ಏ.14: ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳುವ ಪಠ್ಯೇತರ ಚಟುವಟಿಕೆಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯಂತಹ ಘಟಕಗಳಿಂದ ಆಯೋಜಿಸುವ ವಾರ್ಷಿಕ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರವನ್ನು ಕಲಿಯಲು ಸಹಕಾರಿ. ಆ ಮೂಲಕ ಯುವ ಜನತೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಶಾಸಕರಾದ ಬಿ.ಪಿ.ಹರೀಶ್…

The post ಎನ್.ಎಸ್.ಎಸ್ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರ ಕಲಿಯಲು ಸಾಧ್ಯ: ಶಾಸಕ ಬಿ.ಪಿ.ಹರೀಶ್ appeared first on Karnataka Kahale.

]]>

ಹರಿಹರ, ಏ.14: ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳುವ ಪಠ್ಯೇತರ ಚಟುವಟಿಕೆಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯಂತಹ ಘಟಕಗಳಿಂದ ಆಯೋಜಿಸುವ ವಾರ್ಷಿಕ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರವನ್ನು ಕಲಿಯಲು ಸಹಕಾರಿ. ಆ ಮೂಲಕ ಯುವ ಜನತೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಶಾಸಕರಾದ ಬಿ.ಪಿ.ಹರೀಶ್ ಅವರು ಪ್ರತಿಪಾದಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ-೧ ಮತ್ತು ೨ ರ ವತಿಯಿಂದ ತಾಲೂಕಿನ ಸಾಲಕಟ್ಟೆ ಗ್ರಾಮದಲ್ಲಿ ೭ ದಿನಗಳ ಕಾಲ ಆಯೋಜಿಸಿರುವ ‘ವಿಕಸಿತ ಭಾರತದೆಡೆಗೆ ಯುವಜನತೆ’ ಎಂಬ ಧ್ಯೇಯದ ವಾರ್ಷಿಕ ಶಿಬಿರವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣರ ಮತ್ತು ರೈತರ ಜೀವನ ಶೈಲಿಯನ್ನು ಅವಲೋಕಿಸಿ ಹೊಸ ಅನುಭವವನ್ನು ಪಡೆದು, ಗ್ರಾಮೀಣರಿಗೆ ಶಿಕ್ಷಣ, ಸ್ವಚ್ಚತೆ, ಆರೋಗ್ಯ ಕಾಳಜಿಯ ಮಹತ್ವ ಮತ್ತು ಅರ್ಥಿಕ ಉಳಿತಾಯಕ್ಕೆ ಇರುವ ಹೈನುಗಾರಿಕೆಯಂತಹ ಇತರ ಉಪ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು

ದಾವಣಗೆರೆ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ.ಅಶೋಕ ಕುಮಾರ ವೀ.ಪಾಳೇದ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಆಶಯವನ್ನೇ ಗುರಿಯಾಗಿಸಿಕೊಂಡುರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳು ಜರುಗುತ್ತಿವೆ. ಸಮಸಮಾಜದ ಪರಿಕಲ್ಪನೆಯನ್ನು ಯುವ ಜನತೆಗೆ ಜಾಗೃತಿ ಮೂಡಿಸುತ್ತಾ ಸಾಗಿದೆ. ದೇಶ ಪ್ರೇಮ, ದೇಶಭಕ್ತಿ, ದೇಶೀಯ ಭಾವೈಕ್ಯತೆ, ಏಕತೆ, ಸಮಗ್ರತೆ ಕಲಿಸುವುದರೊಂದಿಗೆ, ಶ್ರಮದಾನದ ಉದ್ದೇಶದಿಂದಲೂ ಕಾರ್ಯನಿರ್ವಹಿಸುತ್ತಿದೆ. ಯುವಜನತೆ ಸೇವಾ ಮನೋಭಾವದ ಜೊತೆ ಕೌಶಲ್ಯಯು ಶಿಕ್ಷಣವನ್ನು ಮೈಗೂಡಿಸಿಕೊಳ್ಳಲು ಎನ್‌ಎಸ್‌ಎಸ್ ಸಹಕಾರಿ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್.ಎಂ.ಎನ್ ಅವರು ಮಾತನಾಡಿ, ಭಾರತ ದೇಶ ಹೇರಳವಾದ ಮಾನವ ಸಂಪನ್ಮೂಲವನ್ನು ಹೊಂದಿದೆ. ಇದರ ಸದ್ಭಳಕೆಯಾಗಬೇಕಾದರೆ ಸರಿಯಾದ ಅರಿವಿನ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ಎನ್‌ಎಸ್‌ಎಸ್ ನಂತಹ ಚಟುವಟಿಕೆಗಳು ದೇಶದ ಅಭಿವೃದ್ಧಿಗೆ ಅಗತ್ಯ ಇರುವ ಯುವ ಜನತೆಗೆ ಶಿಸ್ತು, ಬದ್ಧತೆಯಂತಹ ನೈತಿಕತೆಯನ್ನು ಕಲಿಸುತ್ತವೆ. ಗ್ರಾಮೀಣ ಅಭಿವೃದ್ಧಿಯು ದೇಶದ ಉನ್ನತಿಗೆ ಪ್ರಮುಖಾಂಶವಾಗಿದ್ದು, ಇದರಲ್ಲಿ ಯುವಜನೆತೆಯ ಯೋಗದಾನ ಮಹತ್ವದ್ದಾಗಿದೆ ಎಂದು ಹೇಳಿದರು.

ಶ್ರೀ ಜ.ಪಂ.ವಿ.ವಿಯ ಉಪಾಧ್ಯಕ್ಷರಾದ ಡಿ.ಎಂ.ಹಾಲಸ್ವಾಮಿ, ಗ್ರಾ.ಪಂನ ಮಾಜಿ ಸದಸ್ಯರಾದ ಶ್ರೀಮತಿ ಅನುಪಮ.ಬಿ.ಎಸ್ ಹಾಗೂ ಇನ್ನಿತರ ಗ್ರಾಮದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಎನ್‌ಎಸ್‌ಎಸ್ ಘಟಕ-೧ರ ಕಾರ್ಯಕ್ರಮಾಧಿಕಾರಿ ಯೋಗೇಶ್.ಕೆ.ಜೆ, ಐ.ಕ್ಯೂ.ಎಸ್.ಸಿ ಸಹಸಂಯೋಜಕರಾದ ಅಬ್ದುಲ್ ಬಷೀರ, ಕನ್ನಡ ವಿಭಾಗದ ಮುಖ್ಯಸ್ಥರಾದ ಗೌರಮ್ಮ.ಎಂ.ಎಸ್, ಪರಿಸರವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ತಿರುಮಲ.ಎಸ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮನೋಹರ್.ಬಿ.ಎಂ, ಸಹ ಪ್ರಾಧ್ಯಾಪಕರಾದ ಡಾ.ಶರಣ ಬಸವರಾಜ ಬಿ.ಪಾಟೀಲ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ತಿಪ್ಪೇಸ್ವಾಮಿ.ಹೆಚ್, ಗಣಿತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಸವಿತಾ ಬಿ.ಮೇಗಳಮನಿ ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೆಂಕಪ್ಪನವರ ಬಸವರಾಜು, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಾಬು.ಕೆ.ಎ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಗಂಗರಾಜು.ಎಸ್ ಅವರುಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿದ್ಯಾರ್ಥಿನಿ ಕು.ಅರ್ಪಿತಾ.ಎನ್.ಹೆಚ್ ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕರಾದ ರಾಜಪ್ಪ.ಎ ಸ್ವಾಗತಿಸಿದರು. ಐ.ಕ್ಯೂ.ಎಸ್.ಸಿ ಸಂಯೋಜಕರಾದ ಡಾ.ಅನಂತನಾಗ್.ಹೆಚ್.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರ.ಜಿ.ಪಿ ಕಾರ್ಯಕ್ರಮ ನಿರ್ವಹಿಸಿದರು. ಎನ್‌ಎಸ್‌ಎಸ್ ಘಟಕ-೨ರ ಕಾರ್ಯಕ್ರಮಾಧಿಕಾರಿ ಹನುಮಂತಪ್ಪ.ಕೆ.ವೈ  ವಂದಿಸಿದರು.

The post ಎನ್.ಎಸ್.ಎಸ್ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರ ಕಲಿಯಲು ಸಾಧ್ಯ: ಶಾಸಕ ಬಿ.ಪಿ.ಹರೀಶ್ appeared first on Karnataka Kahale.

]]>
ಮುಂಡಘಟ್ಟದಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಅದ್ಧೂರಿ ಚಾಲನೆ https://www.karnatakakahale.com/news/22172 Thu, 29 Jan 2026 14:25:26 +0000 https://www.karnatakakahale.com/?p=22172 ಶಿವಮೊಗ್ಗ, ಜ.29 : ಕುವೆಂಪು ವಿಶ್ವವಿದ್ಯಾಲಯ, ಮಾನಸ ಟ್ರಸ್ಟ್ (ರಿ), ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ 2025-26 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರಕ್ಕೆ ಮುಂಡಘಟ್ಟದಲ್ಲಿ ಚಾಲನೆ ನೀಡಲಾಯಿತು. “ಯುವಶಕ್ತಿಯಿಂದ ಡಿಜಿಟಲ್…

The post ಮುಂಡಘಟ್ಟದಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಅದ್ಧೂರಿ ಚಾಲನೆ appeared first on Karnataka Kahale.

]]>

ಶಿವಮೊಗ್ಗ, ಜ.29 : ಕುವೆಂಪು ವಿಶ್ವವಿದ್ಯಾಲಯ, ಮಾನಸ ಟ್ರಸ್ಟ್ (ರಿ), ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ 2025-26 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರಕ್ಕೆ ಮುಂಡಘಟ್ಟದಲ್ಲಿ ಚಾಲನೆ ನೀಡಲಾಯಿತು. “ಯುವಶಕ್ತಿಯಿಂದ ಡಿಜಿಟಲ್ ಸಾಕ್ಷರತೆ” ಎಂಬ ಆಶಯದೊಂದಿಗೆ ಹಮ್ಮಿಕೊಂಡಿರುವ ಈ ಶಿಬಿರವು ಗ್ರಾಮದ ಸಾಂಸ್ಕೃತಿಕ ಕೇಂದ್ರದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾಟೀಲ್ ರೈಸ್ ಮಿಲ್ ಮಾಲೀಕರಾದ ಶ್ರೀ ನಂಜಪ್ಪ ಗೌಡ್ರು, “ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಹಬಾಳ್ವೆಯನ್ನು ಕಲಿಸುವುದೇ ಎನ್ ಎಸ್ ಎಸ್ ನ ಮುಖ್ಯ ಉದ್ದೇಶ. ಸ್ವಯಂಸೇವಕರು ಶಿಬಿರದ ಅವಧಿಯಲ್ಲಿ ಈ ಮೌಲ್ಯಗಳನ್ನು ಮನನ ಮಾಡಿಕೊಂಡು, ಜೀವನದ ಅತ್ಯಮೂಲ್ಯ ಅನುಭವಗಳನ್ನು ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.

ಮುಂಡಘಟ್ಟದ ಮುಖಂಡರಾದ ಸುರೇಶ್ ಸಿಂಗನಳ್ಳಿ ಮಾತನಾಡಿ, “ನಮ್ಮ ಹಳ್ಳಿಯಲ್ಲಿ ನಡೆಯುತ್ತಿರುವ ಈ ಶಿಬಿರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ವಿದ್ಯಾರ್ಥಿಗಳಿಗೆ ಶಿಬಿರದ ಅವಧಿಯಲ್ಲಿ ಯಾವುದೇ ಸಹಾಯ ಬೇಕಾದಲ್ಲಿ ಗ್ರಾಮಸ್ಥರು ಸದಾ ಸಿದ್ಧರಿದ್ದೇವೆ” ಎಂದು ಆಶ್ವಾಸನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಪರ ಪ್ರಾಂಶುಪಾಲರಾದ ಡಾ.ಅರ್ಚನಾ.ಕೆ.ಭಟ್ ರವರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುತ್ತಾ “ನಾನು ಸತತವಾಗಿ 15 ಎನ್ ಎಸ್ ಎಸ್ ಶಿಬಿರಗಳಲ್ಲಿ ಭಾಗವಹಿಸಿದ್ದೇನೆ. ಇಂದು ನಾನು ಜೀವನದಲ್ಲಿ ಏನಾದರೂ ಸಾಧಿಸಿದ್ದರೆ ಮತ್ತು ಸ್ವತಂತ್ರವಾಗಿ ನಿಲ್ಲಲು ಶಕ್ತಳಾಗಿದ್ದರೆ ಅದಕ್ಕೆ ಎನ್ ಎಸ್ ಎಸ್ ನೀಡಿದ ತರಬೇತಿಯೇ ಬೆನ್ನೆಲುಬು. ಇದು ಕೇವಲ ನನಗಷ್ಟೇ ಅಲ್ಲ, ನೀವು ಕೂಡ ಇದನ್ನು ಸರಿಯಾಗಿ ಬಳಸಿಕೊಂಡರೆ ಜೀವನದ ಉತ್ತುಂಗಕ್ಕೇರಲು ಸಾಧ್ಯ” ಎಂದು ಸ್ವಯಂಸೇವಕರಿಗೆ ಸ್ಫೂರ್ತಿ ತುಂಬಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ಬೋರಪ್ಪ, ನಿವೃತ್ತ ಸಹಕಾರಿ ಬ್ಯಾಂಕ್ ಇನ್ಸ್ಪೆಕ್ಟರ್  ಧರ್ಮಪ್ಪ, ಬಸವೇಶ್ವರ ಸ್ವಾಮಿ ದೇವಸ್ಥಾನದ ಸದಸ್ಯರಾದ  ರಾಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶಿಬಿರದ ಯಶಸ್ಸಿಗಾಗಿ ಎನ್ ಎಸ್ ಎಸ್ ಘಟಕ-1ರ ಕಾರ್ಯಕ್ರಮಾಧಿಕಾರಿ ಡಾ.ಸುಕೀರ್ತಿ ಮತ್ತು ಘಟಕ-2 ರ ಕಾರ್ಯಕ್ರಮಾಧಿಕಾರಿ  ಮೋಹನ್ ಕುಮಾರ್ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಂಡಘಟ್ಟದ ಗ್ರಾಮಸ್ಥರು, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ನೂರಾರು ಸ್ವಯಂಸೇವಕರು ಉಪಸ್ಥಿತರಿದ್ದರು.

The post ಮುಂಡಘಟ್ಟದಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಅದ್ಧೂರಿ ಚಾಲನೆ appeared first on Karnataka Kahale.

]]>
ಬಳ್ಳಾರಿಯಲ್ಲಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ: ಅನ್ನ ದಾಸೋಹ ಉತ್ತಮ ಕಾರ್ಯ -ಎಸ್ಪಿ ಡಾ. ಸುಮನ್ ಡಿ.ಪೆನ್ನಕರ್ ಪ್ರಶಂಸೆ https://www.karnatakakahale.com/news/22094 Fri, 23 Jan 2026 17:18:11 +0000 https://www.karnatakakahale.com/?p=22094 ಬಳ್ಳಾರಿ, ಜ. 23: ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ 7 ನೇ ಪುಣ್ಯ ಸ್ಮರಣೆಯ ಅಂಗವಾಗಿ ಅನ್ನ ದಾಸೋಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನಕರ್ ಅವರು ಪ್ರಶಂಸಿಸಿದರು. ತ್ರಿವಿಧ ದಾಸೋಹಿಯಾಗಿದ್ದ ತುಮಕೂರು…

The post ಬಳ್ಳಾರಿಯಲ್ಲಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ: ಅನ್ನ ದಾಸೋಹ ಉತ್ತಮ ಕಾರ್ಯ -ಎಸ್ಪಿ ಡಾ. ಸುಮನ್ ಡಿ.ಪೆನ್ನಕರ್ ಪ್ರಶಂಸೆ appeared first on Karnataka Kahale.

]]>

ಬಳ್ಳಾರಿ, ಜ. 23: ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ 7 ನೇ ಪುಣ್ಯ ಸ್ಮರಣೆಯ ಅಂಗವಾಗಿ ಅನ್ನ ದಾಸೋಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನಕರ್ ಅವರು ಪ್ರಶಂಸಿಸಿದರು.
ತ್ರಿವಿಧ ದಾಸೋಹಿಯಾಗಿದ್ದ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ 7 ನೇ ಪುಣ್ಯ ಸ್ಮರಣೆಯ ಅಂಗವಾಗಿ ಮಠದ ಹಳೆಯ ವಿದ್ಯಾರ್ಥಿ ಬಳಗದಿಂದ ನಗರದ‌ ವಿಮ್ಸ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಪುಣ್ಯದ ಕಾರ್ಯದಲ್ಲಿ ತಾವು ಸಂತೋಷದಿಂದ ಭಾಗಿಯಾಗಿರುವುದಾಗಿ ಹೇಳಿದರು.

ಸಿದ್ಧಗಂಗಾ ಸೇವಾ ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ದಾಸೋಹ ದಿನದ ಸ್ಮರಣೆಯಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರ ಪಿ. ಗಾದೆಪ್ಪ, ಎಸ್ಪಿ ಡಾ. ಸುಮನ್ ಡಿ. ಪೆನ್ನಕರ್, ಈಶಾನ್ಯ ಟೈಮ್ಸ್ ಜಿಲ್ಲಾ ವರದಿಗಾರ ಸಿ.‌ಮಂಜುನಾಥ್, ಜನಪರ ಹೋರಾಟಗಾರ ರಾಯಚೂರಿನ ಅಂಬಣ್ಣ ಅರೋಲಿಕರ್, ಶಿವಲೀಲಾ ಚಿತ್ರದ ನಿರ್ದೇಶಕ ಅಶೋಕ್ ಜಯರಾಮ್, ಪತ್ರಕರ್ತ, ಸಂಘಟಕ ಬಂಗ್ಲೆ ಮಲ್ಲಿಕಾರ್ಜುನ, ಕೆಇಬಿ ಸೊಸೈಟಿಯ ವ್ಯವಸ್ಥಾಪಕ ತಿಮ್ಮರಾಜು ಎಂ, ಕನ್ನಡ ಉಪನ್ಯಾಸಕ, ದಸಾಪ ತಾಲೂಕು ಅಧ್ಯಕ್ಷ ಸಿಂಧನೂರಿನ ಡಾ.‌ಹುಸೇನಪ್ಪ ಅಮರಾಪುರ, ಚಿರಾಯು ವಾಹಿನಿಯ ಸಂಸ್ಥಾಪಕ ಡಾ. ಮಂಜುನಾಥ ಎನ್. ಶಿವಕ್ಕನವರ್, ಅಧ್ಯಾಪಕ ಶರಣಪ್ಪ,
ಜನಪದ ಗಾಯಕ ಜಡೇಶ್ ಎಮ್ಮಿಗನೂರು, ಅಕ್ಷಯ ಕಲಾ ಟ್ರಸ್ಟ್ ಅಧ್ಯಕ್ಷ ಎಚ್.ಜಿ. ಸುಂಕಪ್ಪ ಅವರಿಗೆ ಸಿದ್ಧಗಂಗಾ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಸ್ಟಾರ್ ನ್ಯೂಸ್ ಕನ್ನಡ ನವಾಜ್ ಮೀಡಿಯಾ ಸಂಪಾದಕ ಸಿ ಬಂದೇನವಾಜ್ ಸೇರಿದಂತೆ
13 ಜನರಿಗೆ ವಿಶೇಷ ಪ್ರಶಸ್ತಿ ‌ನೀಡಿ ಸತ್ಕರಿಸಲಾಯಿತು.
ಬಳಗದ ಅಧ್ಯಕ್ಷ ಶ್ರೀನಿವಾಸ ಮುಕುಂದ ಅವರನ್ನು ಮೇಯರ್ ಪಿ. ಗಾದೆಪ್ಪ ಸನ್ಮಾನಿಸಿದರು.
ಗಾಯನ: ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕುರಿತು ತಾವೇ‌ ರಚಿಸಿದ ಗೀತೆಯನ್ನು ಅಂಬಣ್ಣ ಅರೋಲಿಕರ್, ಗಾಯಕ‌ ಜಡೇಶ್ ಎಮ್ಮಿಗನೂರು ಭಕ್ತಿ ಗೀತೆ ಹಾಡಿ ಗಮನ ಸೆಳೆದರು.
ಗಾಯಕ ವೀರೇಶ ದಳವಾಯ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಬಳಗದ ಅಧ್ಯಕ್ಷ ಕವಿ ಶ್ರೀನಿವಾಸ್ ಮುಕುಂದ ಸ್ವಾಗತಿಸಿದರು. ಎರಿಸ್ವಾಮಿ ನಿರೂಪಿಸಿ, ವಂದಿಸಿದರು.

The post ಬಳ್ಳಾರಿಯಲ್ಲಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ: ಅನ್ನ ದಾಸೋಹ ಉತ್ತಮ ಕಾರ್ಯ -ಎಸ್ಪಿ ಡಾ. ಸುಮನ್ ಡಿ.ಪೆನ್ನಕರ್ ಪ್ರಶಂಸೆ appeared first on Karnataka Kahale.

]]>
ಗಂಗಾವತಿ ನವಜೀವನ ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ವತಿಯಿಂದ ಬೆಡ್ ಶೀಟು, ಸೀರೆ ವಿತರಣೆ https://www.karnatakakahale.com/news/20605 Sat, 06 Sep 2025 09:06:27 +0000 https://www.karnatakakahale.com/?p=20605 ಗಂಗಾವತಿ:  ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ವಸುಧಾ ಫೌಂಡೇಷನ್ ಹೈದರಾಬಾದ್ ಅವರ ಸಹಯೋಗದೊಂದಿಗೆ  ಇಲ್ಲನ ನವಜೀವನ ವೃದ್ದಾಶ್ರಮಕ್ಕೆ 40 ಬೆಡ್ ಶೀಟುಗಳು, ,80 ಸೀರೆ ಹಾಗೂ 50 ಬ್ರೇಡ್‌ ಬನ್ ಗಳನ್ನು  ಇತ್ತೀಚೆಗೆ ವಿತರಿಸಲಾಯಿತು.           …

The post ಗಂಗಾವತಿ ನವಜೀವನ ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ವತಿಯಿಂದ ಬೆಡ್ ಶೀಟು, ಸೀರೆ ವಿತರಣೆ appeared first on Karnataka Kahale.

]]>
ಗಂಗಾವತಿ:  ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ವಸುಧಾ ಫೌಂಡೇಷನ್ ಹೈದರಾಬಾದ್ ಅವರ ಸಹಯೋಗದೊಂದಿಗೆ  ಇಲ್ಲನ ನವಜೀವನ ವೃದ್ದಾಶ್ರಮಕ್ಕೆ
40 ಬೆಡ್ ಶೀಟುಗಳು, ,80 ಸೀರೆ ಹಾಗೂ 50 ಬ್ರೇಡ್‌ ಬನ್ ಗಳನ್ನು  ಇತ್ತೀಚೆಗೆ ವಿತರಿಸಲಾಯಿತು.                          ಈ ಪುಣ್ಯ ಕಾರ್ಯದಲ್ಲಿ
ಲಯನ್ಸ್ ಕ್ಲಬ್ ಹಿರಿಯ ಸದಸ್ಯಗಳಾದ ಡಾ.ಚಂದ್ರಪ್ಪ , ಡಾ.ಸೋಮರಾಜು, ಡಾ.ಮಾದವಶೆಟ್ಟಿ,  ವಿರೂಪಾಕ್ಷಪ್ಪ ಸಿಂಗನಾಳ,  ಟಿ.ರಾಮಕೃಷ್ಣ ,  ಗುರು ಪ್ರಸಾದ್ ಹಾಗು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ಶಿವಕುಮಾರ್ ಮಾಲಿಪಾಟೀಲ್ ಭಾಗವಹಿಸಿದ್ದರು.
ನವಚೇತನ ವೃದ್ದಾಶ್ರಮದ ವ್ಯವಸ್ಥಾಪಕರಾದ ಆನಂದರಾವ್ ಉಪಸ್ಥಿತರಿದ್ದು , ಲಯನ್ಸ್ ಕ್ಲಬ್ ಹಾಗೂ ವಸುಧಾ ಫೌಂಡೇಷನ್ ಅವರಿಗೆ ವೃದ್ದಾಶ್ರಮ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
—–

The post ಗಂಗಾವತಿ ನವಜೀವನ ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ವತಿಯಿಂದ ಬೆಡ್ ಶೀಟು, ಸೀರೆ ವಿತರಣೆ appeared first on Karnataka Kahale.

]]>
ರಾಜ್ಯಮಟ್ಟದ ಗುರುತಿಲಕ ಆದರ್ಶ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ https://www.karnatakakahale.com/news/16924 Fri, 09 Aug 2024 16:39:23 +0000 https://www.karnatakakahale.com/?p=16924 ಚಿಕ್ಕೋಡಿ, ಆ.9: ನಗರದ ವಂದೆ ಮಾತರಂ ಟ್ರಸ್ಟ ಆಫ್ ಇಂಡಿಯಾ ವತಿಯಿಂದ  20024-25 ನೇ ಸಾಲಿನ  ರಾಜ್ಯಮಟ್ಟದ ಗುರುತಿಲಕ ಆದರ್ಶ ಶಿಕ್ಷಕ ಪ್ರಶಸ್ತಿ  ಹಾಗೂ ಜನ‌ಮೆಚ್ಚಿದ ಕರ್ನಾಟಕ ರತ್ನ  ಪ್ರಶಸ್ತಿ ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.95 ಕಿಂತ ಹೆಚ್ಚು…

The post ರಾಜ್ಯಮಟ್ಟದ ಗುರುತಿಲಕ ಆದರ್ಶ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ appeared first on Karnataka Kahale.

]]>
ಚಿಕ್ಕೋಡಿ, ಆ.9: ನಗರದ ವಂದೆ ಮಾತರಂ ಟ್ರಸ್ಟ ಆಫ್ ಇಂಡಿಯಾ ವತಿಯಿಂದ  20024-25 ನೇ ಸಾಲಿನ  ರಾಜ್ಯಮಟ್ಟದ ಗುರುತಿಲಕ ಆದರ್ಶ ಶಿಕ್ಷಕ ಪ್ರಶಸ್ತಿ  ಹಾಗೂ ಜನ‌ಮೆಚ್ಚಿದ ಕರ್ನಾಟಕ ರತ್ನ  ಪ್ರಶಸ್ತಿ ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.95 ಕಿಂತ ಹೆಚ್ಚು ಅಂಕ‌ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಅತ್ಯುತ್ತಮ‌ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದು ವಂದೆ ಮಾತರಂ ಟ್ರಸ್ಟ ಆಫ್ ಇಂಡಿಯಾದ ಸಂಸ್ಥಾಪಕ ಅಧ್ಯಕ್ಷರಾದ ಅಪ್ಪಾಸಾಹೇಬ.ಶ್ರೀಪತಿ.ಕುರಣೆ ತಿಳಿಿಸಿದರು.                                                    ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ‌ ಸೇವೆ ಸಲ್ಲಿಸಿದ ಶಿಕ್ಷಕರಿಗೆ ರಾಜ್ಯಮಟ್ಟದ ಗುರುತಿಲಕ ಪ್ರಶಸ್ತಿ ನೀಡಿ ಗೌರವಿಸಲಾಗುವದು.  ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಮಾಜ ಸೇವಕರು ಹಾಗೂ ಸಂಘ ಸಂಸ್ಥೆಗಳು, ಸಾಹಿತಿಗಳಿಗೆ ರಾಜ್ಯಮಟ್ಟದ ಜನಮೆಚ್ಚಿದ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವದು.  ಎಸ್.ಎಸ್.ಎಲ್.ಸಿ, ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.95 ಕಿಂತ ಹೆಚ್ಚು ಅಂಕ ಪಡೆದ ಅತ್ಯುತ್ತಮ‌ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದು ಹೇಳಿದರು.                                        ಆಸಕ್ತರು ತಮ್ಮ ಸ್ವವಿವರಗಳೊಂದಿಗೆ ಅಗತ್ಯವಾದ ದಾಖಲೆಗಳೊಂದಿಗೆ ಇತ್ತಿಚಿನ ಎರಡು ಭಾವಚಿತ್ರಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಅರ್ಜಿಯನ್ನು ಆ. 25 ರೊಳಗಾಗಿ  ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅಪ್ಪಾಸಾಹೇಬ.ಶ್ರೀಪತಿ.ಕುರಣೆ,  ಅಧ್ಯಕ್ಷರು ವಂದೆ ಮಾತರಂ ಟ್ರಸ್ಟ ಆಫ್ ಇಂಡಿಯಾ, ಅಂಚೆ: ಯಕ್ಸಂಬಾ,ತಾಲೂಕು: ಚಿಕ್ಕೋಡಿ,ಜಿಲ್ಲಾ : ಬೆಳಗಾವಿ, ಪಿನ್ ಕೊಡ್-591244. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 9480053100, 9902346557  ಸಂಪರ್ಕಿಸಲು ಕೋರಲಾಗಿದೆ.

 

The post ರಾಜ್ಯಮಟ್ಟದ ಗುರುತಿಲಕ ಆದರ್ಶ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ appeared first on Karnataka Kahale.

]]>
ವಿಶ್ರಾಂತ ಎಡಿಜಿಪಿ ಡಾ.ಸುಭಾಷ್ ಭರಣಿ ಹುಟ್ಟುಹಬ್ಬ: ಅಭಿಮಾನಿಗಳಿಂದ ರಕ್ತದಾನ ಶಿಬಿರ https://www.karnatakakahale.com/news/16290 Wed, 15 May 2024 18:34:47 +0000 https://www.karnatakakahale.com/?p=16290 ಬೆಂಗಳೂರು, ಮೇ 15: ವಿಶ್ರಾಂತ ಎಡಿಜಿಪಿ ಡಾ. ಸುಭಾಷ್ ಭರಣಿ ಅವರ 74ನೇ ಹುಟ್ಟುಹಬ್ಬವನ್ನು ನಗರದಲ್ಲಿ ಬುಧವಾರ ಡಾ.‌ಸುಭಾಷ್ ಭರಣಿ ಅವರ ಅಭಿಮಾನಿಗಳು, ಹಿತೈಷಿಗಳು, ಬಂಧು‌ಮಿತ್ರರು ಸಂಭ್ರಮ ಸಡಗರಗಳಿಂದ ಆಚರಿಸಿದರು. ವಿಶೇಷವೆಂದರೆ ಡಾ.‌ಭರಣಿ ಅವರ ಸದಾಶಿವ ನಗರದ ನಿವಾಸ ಬಳಿ ಅಭಿಮಾನಿಗಳು…

The post ವಿಶ್ರಾಂತ ಎಡಿಜಿಪಿ ಡಾ.ಸುಭಾಷ್ ಭರಣಿ ಹುಟ್ಟುಹಬ್ಬ: ಅಭಿಮಾನಿಗಳಿಂದ ರಕ್ತದಾನ ಶಿಬಿರ appeared first on Karnataka Kahale.

]]>

ಬೆಂಗಳೂರು, ಮೇ 15: ವಿಶ್ರಾಂತ ಎಡಿಜಿಪಿ ಡಾ. ಸುಭಾಷ್ ಭರಣಿ ಅವರ 74ನೇ ಹುಟ್ಟುಹಬ್ಬವನ್ನು ನಗರದಲ್ಲಿ ಬುಧವಾರ ಡಾ.‌ಸುಭಾಷ್ ಭರಣಿ ಅವರ ಅಭಿಮಾನಿಗಳು, ಹಿತೈಷಿಗಳು, ಬಂಧು‌ಮಿತ್ರರು ಸಂಭ್ರಮ ಸಡಗರಗಳಿಂದ ಆಚರಿಸಿದರು.
ವಿಶೇಷವೆಂದರೆ ಡಾ.‌ಭರಣಿ ಅವರ ಸದಾಶಿವ ನಗರದ ನಿವಾಸ ಬಳಿ ಅಭಿಮಾನಿಗಳು ರಕ್ತದಾನ ಶಿಬಿರ ಆಯೋಜಿಸಿ ಗಮನ ಸೆಳೆದರು.


ವಿವಿಧ ಸಂಘಟನೆಗಳ ಸಹಯೋಗದಲ್ಲಿ ಡಾ. ಸುಭಾಷ್ ಭರಣಿ ಅಭಿಮಾನಿಗಳ ಸಂಘದ 50 ಕ್ಕೂ ಹೆಚ್ಚು ಪದಾಧಿಕಾರಿಗಳು, ಸದಸ್ಯರು ರಕ್ತದಾನ ಮಾಡುವ ಮೂಲಕ ತಮ್ಮ ಮೆಚ್ಚಿನ ಡಾ. ಭರಣಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಮತ್ತೊಂದು ವಿಶೇಷವೆಂದರೆ ಡಾ. ಭರಣಿ ಮತ್ತು ಶ್ರೀಮತಿ ಮೋಹನಾ ಭರಣಿ ದಂಪತಿ ತಮ್ಮ 45ನೇ‌‌ ವಿವಾಹ ವಾರ್ಷಿಕೋತ್ಸವವನ್ನು ಕುಟುಂಬದ ಸದಸ್ಯರು, ಬಂಧು ಮಿತ್ರರೊಂದಿಗೆ ಆಚರಿಸಿಕೊಂಡರು.


ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.‌ಚಿನ್ನಯ್ಯ, ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಶಿವಶಂಕರ್, ಅಭಿಮಾನಿ ಸಂಘದ ಯಶವಂತಪುರ ಗುರು, ಬನಶಂಕರಿ ಅರುಣ್, ಹೆಬ್ಬಾಳದ ವೆಂಕಟೇಶ್, ಡಾ. ಭರಣಿ ಅವರ ಪುತ್ರಿಯರಾದ ಸೌಜನ್ಯ ಭರಣಿ, ಸೌಮ್ಯ ಭರಣಿ, ಪುತ್ರ ಸಮರ್ಥ ಭರಣಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ‌ ಪಾಲ್ಗೊಂಡಿದ್ದರು.
——

The post ವಿಶ್ರಾಂತ ಎಡಿಜಿಪಿ ಡಾ.ಸುಭಾಷ್ ಭರಣಿ ಹುಟ್ಟುಹಬ್ಬ: ಅಭಿಮಾನಿಗಳಿಂದ ರಕ್ತದಾನ ಶಿಬಿರ appeared first on Karnataka Kahale.

]]>
ಸಮಾಜದ ಅಭಿವೃದ್ಧಿಯಲ್ಲಿ ಎನ್.ಜಿ.ಓಗಳ ಪಾತ್ರ ಅನನ್ಯ -ಜಿಲ್ಲಾ ಎಸ್ಪಿ ರಂಜಿತ್ ಕುಮಾರ್ ಬಂಡಾರು https://www.karnatakakahale.com/news/12976 Wed, 02 Aug 2023 15:36:54 +0000 https://www.karnatakakahale.com/?p=12976   ಬಳ್ಳಾರಿ, ಆ.1:ಸಮಾಜದ ಅಭಿವೃದ್ಧಿಯಲ್ಲಿ ಎನ್.ಜಿ.ಓಗಳ ಪಾತ್ರ ಮಹತ್ವದಾಗಿರುತ್ತದೆ ಎಂದು ಜಿಲ್ಲಾ ಎಸ್.ಪಿ ರಂಜಿತ್ ಕುಮಾರ್ ಬಂಡಾರು ಅವರು ಹೇಳಿದರು. ನಗರದ ಸನ್ಮಾರ್ಗ ಗೆಳೆಯರ ಬಳಗದ 8ನೇ ವಾರ್ಷಿಕೋತ್ಸವ ಹಾಗೂ ವಯೋ ನಿವೃತ್ತಿ ಹೊಂದಿರುವ ಮುಖ್ಯ ಗುರು ಮೆಹತಾಬ್ ಅವರ ಬೀಳ್ಕೊಡುಗೆ…

The post ಸಮಾಜದ ಅಭಿವೃದ್ಧಿಯಲ್ಲಿ ಎನ್.ಜಿ.ಓಗಳ ಪಾತ್ರ ಅನನ್ಯ -ಜಿಲ್ಲಾ ಎಸ್ಪಿ ರಂಜಿತ್ ಕುಮಾರ್ ಬಂಡಾರು appeared first on Karnataka Kahale.

]]>
 

ಬಳ್ಳಾರಿ, ಆ.1:ಸಮಾಜದ ಅಭಿವೃದ್ಧಿಯಲ್ಲಿ ಎನ್.ಜಿ.ಓಗಳ ಪಾತ್ರ ಮಹತ್ವದಾಗಿರುತ್ತದೆ ಎಂದು ಜಿಲ್ಲಾ ಎಸ್.ಪಿ ರಂಜಿತ್ ಕುಮಾರ್ ಬಂಡಾರು ಅವರು ಹೇಳಿದರು.
ನಗರದ ಸನ್ಮಾರ್ಗ ಗೆಳೆಯರ ಬಳಗದ 8ನೇ ವಾರ್ಷಿಕೋತ್ಸವ ಹಾಗೂ ವಯೋ ನಿವೃತ್ತಿ ಹೊಂದಿರುವ ಮುಖ್ಯ ಗುರು ಮೆಹತಾಬ್ ಅವರ ಬೀಳ್ಕೊಡುಗೆ ಸಮಾರಂಭವನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರದ ಜತೆ ಸಂಘ ಸಂಸ್ಥೆಗಳು ಸಮಾಜಕ್ಕೆ ನೆರವು ನೀಡಬೇಕು. ಈ ನಿಟ್ಟಿನಲ್ಲಿ ಬಳಗ ಮಹತ್ವದ ಸಮಾಜ‌ಮುಖಿ ಕಾರ್ಯಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳುತ್ತಿರುವುದು ಮಾದರಿಯಾಗಿದೆ ಎಂದು ತಿಳಿಸಿದರು.
ದಾನಿಗಳಿಂದ ಸ್ವೀಕರಿಸಿ ನಿರ್ಗತಿಕರಿಗೆ ಬಟ್ಟೆ ವಿತರಣೆ, ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿಗಳು ಆಯೋಜಿಸುತ್ತಿದೆ ಎಂದು‌ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ಯುವ ಜನ ಸೇವಾ ಕ್ರೀಡಾ ಇಲಾಖೆ ಸಚಿವರ ವಿಶೇಷಾಧಿಕಾರಿ ಡಾ. ವೆಂಕಟಗಿರಿ ದಳವಾಯಿ ಮಾತನಾಡಿ, ಸೇವೆ ಅನ್ನುವುದು ಸುಲಭದ ದಾರಿ ಅಲ್ಲ. ಇಂತಹ ಕಷ್ಟದ ಹಾದಿಯನ್ನು ಸನ್ಮಾರ್ಗ ಗೆಳೆಯರ ಬಳಗ ಆಯ್ಕೆ ಮಾಡಿಕೊಂಡು ಮುನ್ನಡೆದಿರುವುದು ಅಭಿನಂದನಾರ್ಹ ಎಂದರು.
ಜಗತ್ತಿನಲ್ಲಿ ಶ್ರೀಮಂತ ಕೂಡಾ ದುಃಖದಲ್ಲಿರುವುದಕ್ಕೆ ಕಾರಣ ಸನ್ಮಾರ್ಗದಲ್ಲಿ ಇಲ್ಲದೆ ಇರುವುದು ಎಂದು ಅಭಿಪ್ರಾಯ ಪಟ್ಟರು.


ಶಿಕ್ಷಕ, ವೈದ್ಯರು ಭ್ರಷ್ಟಗೊಳ್ಳದಿರುವತನಕ ಸಮಾಜ ಸೌಖ್ಯದಿಂದ ಇರುತ್ತದೆ ಎಂದ ಡಾ. ದಳವಾಯಿ ಅವರು
ಬಡ್ಡಿ ವ್ಯವಹಾರ ಮಾಡುವ ಶಿಕ್ಷಕರು ಇರುವುದು ದುರಂತ ಎಂದರು.
ಮಕ್ಕಳ ಸೇವೆ, ಪಾಠಮಾಡುವುದು ಧ್ಯಾನ‌ಮಾಡಿದಂತೆ ಎಂದು ಹೇಳಿದರು.
ನಿವೃತ್ತ ಮೆಹತಾಬ್ ಮಾತನಾಡಿ, ಮೂರು ದಶಕಗಳ ಹಿಂದೆ 200 ರೂ. ಸಂಬಳದಿಂದ ಆರಂಭವಾದ ನನ್ನ ಶಿಕ್ಷಕ ವೃತ್ತಿ ಸಂತೃಪ್ತಿ ನೀಡಿದೆ ಎಂದು ತಿಳಿಸಿದರು.
ಕುಸಿಯುತ್ತಿರುವ ಮೌಲ್ಯಗಳನ್ನು ಮಕ್ಕಳಲ್ಲಿ
ವೃದ್ಧಿಸಲು ಬಳಗ ವಿಶೇಷ ಆದ್ಯತೆ ನೀಡಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರು ಮಾತನಾಡಿ, ಬಳಗ ಬಡಜನತೆಗೆ ನೆರವು ನೀಡುತ್ತಿದೆ. ಒಳ್ಳೆಯ ನಡತೆ, ಕೆಲಸಗಳ ಮೂಲಕ ಗಮನ ಸೆಳೆದಿದೆ. ನಿವೃತ್ತಿ ಬಳಿಕ ಬಳಗದ ಜತೆ ಕೈ ಜೋಡಿಸುವೆ ಎಂದು ತಿಳಿಸಿದರು.
ಬಿಇಓ ಪೂರ್ವ ವಲಯದ ಇಸಿಓ ಸಿ.ಡಿ ಗೂಳಪ್ಪ ಅವರು ಮಾತನಾಡಿ, ಬಳಗ ಶಿಕ್ಷಣ ಇಲಾಖೆ ಜತೆ ಕೈಜೋಡಿದೆ. ತಾಕೂಕಿನ ಸರಕಾರಿ, ಅನುದಾನಿತ ಶಾಲೆಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ಸಿದ್ಧತಾ ಕಾರ್ಯಕ್ರಮಗಳಲ್ಲಿ ಸಹಯೋಗ ನೀಡಿರುವುದನ್ನು ಸ್ಮರಿಸಿದರು.
ಪೂರ್ವ ವಲಯದ ಬಿಇಓ ನಯೀಮೂರ್ ರೆಹಮಾನ್, ಬಳಗದ ಉಪಾಧ್ಯಕ್ಷ ಎಂ.ಎಸ್. ಜಗದೀಶ್, ಹನುಮಂತರೆಡ್ಡಿ, ಚೈತನ್ಯ ಡಾ. ರಾಧಾಕೃಷ್ಣ, ಗೌರವ ಅಧ್ಯಕ್ಷ ನಿವೃತ್ತ ಆರ್.ಟಿ.ಓ ಪಂಪಾಪತಿ,ಡಾ.ಪರಸಪ್ಪ ಬಂದರಕಳ್ಳಿ ಮತ್ತಿತರರು ವೇದಿಕೆಯಲ್ಲಿ ಇದ್ದರು.
ಬಳಗದ ಅಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಉಪನ್ಯಾಸಕ  ಪುರುಷೋತ್ತಮ, ಸಿದ್ಧಲಿಂಗೇಶ್ವರ ಗದಗಿನ್, ಹರಿಪ್ರಸಾದ್, ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ‌ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜಿಲ್ಲಾ, ತಾಲೂಕು ಘಟಕಗಳು ಸೇರಿದಂತೆ ಹಲವು ಸಂಸ್ಥೆಗಳು, ನೂರಕ್ಕೂ ಹೆಚ್ಚು ಜನರು, ಹಿತೈಷಿಗಳು ಮೆಹತಾಬ್ ದಂಪತಿಗಳನ್ನು ಸತ್ಕರಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್, ಚಿತ್ರ ಕಲಾವಿದ ಮಂಜುನಾಥ್ ಗೋವಿಂದವಾಡ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾಜಿ ರಾವ್, ಪ್ರಾಥಾಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಮೇಶ್ ಕೊರ್ಲಗುಂದಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪತ್ರಕರ್ತ ಶಶಿಧರ ಮೇಟಿ ಸ್ವಾಗತಿಸಿದರು. ಬಳಗದ ಕಾರ್ಯದರ್ಶಿ ಚಂದ್ರಶೇಖರ್ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಳಗದ ಅಧ್ಯಕ್ಷ
ಗಾಯಕ ಜಡೇಶ ಎಮ್ಮಿಗನೂರು ಪ್ರಾರ್ಥಿಸಿದರು. ಇಂ.ವಿನೋದ್ ಎಂ.  ನಿರೂಪಿಸಿದರು.
—–

The post ಸಮಾಜದ ಅಭಿವೃದ್ಧಿಯಲ್ಲಿ ಎನ್.ಜಿ.ಓಗಳ ಪಾತ್ರ ಅನನ್ಯ -ಜಿಲ್ಲಾ ಎಸ್ಪಿ ರಂಜಿತ್ ಕುಮಾರ್ ಬಂಡಾರು appeared first on Karnataka Kahale.

]]>
ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಲೇಖಕರು: ಪ್ರೊ. ಎಂ. ನಾರಾಯಣಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು https://www.karnatakakahale.com/news/12369 Mon, 05 Jun 2023 17:35:16 +0000 https://www.karnatakakahale.com/?p=12369 ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರಿನ ಆಳರಸರ ಪೈಕಿ ಹೆಚ್ಚು ಜನಪರ ಆಡಳಿತ ನಡೆಸಿದವರು ನಾಲ್ವಡಿಯವರು. ನಾಡಿನ ಶ್ರೇಯೋಭಿವೃದ್ಧಿಗಾಗಿ ಜೀವನವನ್ನು ಮುಡಿಪಿಟ್ಟವರು. ಅವರ ಅವಧಿಯಲ್ಲಿ ಅಸಂಖ್ಯಾತ ಅಭಿವೃದ್ಧಿಯ ಕೆಲಸಗಳಾದವು. ದೀನದಲಿತರ, ಹಿಂದುಳಿದವರ ಏಳಿಗೆಗಾಗಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟರು. ರಾಜರ್ಷಿಯವರ ಆಡಳಿತದ…

The post ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಲೇಖಕರು: ಪ್ರೊ. ಎಂ. ನಾರಾಯಣಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು appeared first on Karnataka Kahale.

]]>
ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್

ಮೈಸೂರಿನ ಆಳರಸರ ಪೈಕಿ ಹೆಚ್ಚು ಜನಪರ ಆಡಳಿತ ನಡೆಸಿದವರು ನಾಲ್ವಡಿಯವರು. ನಾಡಿನ ಶ್ರೇಯೋಭಿವೃದ್ಧಿಗಾಗಿ ಜೀವನವನ್ನು ಮುಡಿಪಿಟ್ಟವರು. ಅವರ ಅವಧಿಯಲ್ಲಿ ಅಸಂಖ್ಯಾತ ಅಭಿವೃದ್ಧಿಯ ಕೆಲಸಗಳಾದವು. ದೀನದಲಿತರ, ಹಿಂದುಳಿದವರ ಏಳಿಗೆಗಾಗಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟರು. ರಾಜರ್ಷಿಯವರ ಆಡಳಿತದ ವೈಖರಿಯು ಇಂದಿಗೂ ಆದರಣೀಯ, ಅನುಕರಣೀಯ. ಅದರೆ, ಅವರ ರಾಜ್ಯಾಭಿವೃದ್ಧಿಯ ಕೆಲಸಗಳನ್ನು ಮರೆಮಾಚುವ ಪ್ರಯತ್ನಗಳು ನಿಧಾನವಾಗಿ ನಡೆಯುತ್ತಿವೆ. ಇತ್ತಿಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿವೃದ್ದಿ ಕಾರ್ಯಗಳ ಕೆಲವು ಮೈಲುಗಲ್ಲುಗಳನ್ನಷ್ಟೇ ಹಂಚಿಕೊಳ್ಳಲಾಯಿತು. ಅದು ಅಪೂರ್ಣವಾದ ಪಟ್ಟಿ ಎಂದು ಕೆಲವರು ಭಾವಿಸಿದರು. ಎಲ್ಲವನ್ನೂ ಹಂಚಿಕೊಳ್ಳಲು ಹಲವು ಮಿತಿಗಳಿರಬಹುದು. ನಾಲ್ವಡಿ ಮಹಾರಾಜರ ಬದುಕು ಹಾಗೂ ಶಾಶ್ವತವಾದ ಪ್ರಮುಖ ಸಾಧನೆಗಳತ್ತ ಒಂದು ಪಕ್ಷಿನೋಟ.

ನಾಲ್ವಡಿ ಕೃಷ್ಣರಾಜ ಒಡೆಯರ್ (ಜನನ 04.06.1884 – ಮರಣ 03.08.1940) ರವರು ಮೈಸೂರಿನ ರಾಜಮನೆತನದ 24ನೇ ಮಹಾರಾಜರಾಗಿ 08.08.1902 ರಿಂದ 03.08.1940 ರವರೆಗೆ ಒಟ್ಟು 38 ವರ್ಷಗಳ ಕಾಲ ಅಧಿಕಾರ ನಡೆಸಿದರು.

ತಂದೆ ಶ್ರೀ ಚಾಮರಾಜ ಒಡೆಯರ್ ಮತ್ತು ತಾಯಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನರವರ ಚೊಚ್ಚಲ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರಿಗೆ ಮೂವರು ಸಹೋದರಿಯರು: ಜಯಲಕ್ಷ್ಮಮ್ಮಣ್ಣಿ, ಚೆಲುವಾಜಮ್ಮಣ್ಣಿ ಮತ್ತು ಕೃಷ್ಣಾಜಮ್ಮಣ್ಣಿ. ತಮ್ಮನವರಾದ ಶ್ರಿ ಕಂಠೀರವ ನರಸಿಂಹರಾಜ ಒಡೆಯರವರು ನಾಲ್ವಡಿಯವರ ಜನಪರ ಆಡಳಿತಕ್ಕೆ ಒತ್ತಾಸೆಯಾಗಿ ನಿಂತರು. ನಾಲ್ವಡಿಯವರಿಗೆ ಉತ್ತಮ ಶಿಕ್ಷಣ ಕೊಡಲು 1892 ರಲ್ಲಿ ‘ರಾಯಲ್ ಸ್ಕೂಲ್’ ಅನ್ನು ಆರಂಭಿಸಲಾಯಿತು. ಜೆ. ಜೆ. ವೈಟ್ಲಿ, ಪಿ. ರಾಘವೇಂದ್ರರಾವ್, ಎಂ. ಎ. ನಾರಾಯಣರಾವ್, ಬಿ. ಭೀಮರಾವ್, ಎಂ. ಹುಸೇನ್ ಆಲಿಯವರು ಇವರಿಗೆ ಗುರುಗಳಾಗಿದ್ದರು. ಮಿರ್ಜಾ ಇಸ್ಮಾಯಿಲ್, ಲಕ್ಷ್ಮೀಕಾಂತರಾಜ ಅರಸ್, ಟಿ. ಎಸ್. ಅಲಿ ಖಾನ್, ಎಂ. ಎಸ್. ರಾಮಚಂದ್ರರಾವ್ ಮತ್ತಿತರರು ಸಹಪಾಠಿಗಳಾಗಿದ್ದರು. ಆಂಗ್ಲ ಶಿಕ್ಷಣದ ಜೊತೆಗೆ ವೈಚಾರಿಕ – ವೈಜ್ಞಾನಿಕ ದೃಷ್ಟಿಕೋನಗಳಲ್ಲಿ ಪಳಗಿದರು. ಕುದುರೆ ಸವಾರಿ, ಅಂಗಸಾಧನೆ, ಚಿತ್ರಕಲೆ, ಸಂಗೀತವನ್ನೂ ಕಲಿತರು. ಕನ್ನಡ, ಇಂಗ್ಲೀಷ್, ಸಂಸ್ಕೃತ, ಪಾರ್ಸಿ, ಉರ್ದು ಭಾಷೆಗಳ ಪಾಂಡಿತ್ಯ ಪಡೆದರು.

ತಂದೆಯವರಾದ ಶ್ರೀ ಚಾಮರಾಜ ಒಡೆಯರ್‍ರವರು 1894ರಲ್ಲಿ ಕಲ್ಕತ್ತಾದಲ್ಲಿದ್ದಾಗ ಗಂಟಲು ಬೇನೆಗೆ ತುತ್ತಾಗಿ ಮರಣಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್‍ರವರಿಗೆ 01.02.1895ರಂದು ಪಟ್ಟಾಭಿಷೇಕವಾಯಿತು. ಅವರು ಪ್ರಾಪ್ತ ವಯಸ್ಸಿಗೆ ಬರುವವರೆಗೆ ಅಂದಿನ ವೈಸ್‍ರಾಯ್ ಮತ್ತು ಗವರ್ನರ್ ಜನರಲ್ ಆಗಿದ್ದ ಎಲ್ಗಿನ್‍ರವರು ತಾಯಿ ಕೆಂಪನಂಜಮ್ಮಣ್ಣಿಯವರಿಗೆ ಮೈಸೂರು ಸಂಸ್ಥಾನದ ರಾಜಪ್ರತಿನಿಧಿ (ರೀಜೆಂಟ್) ಯಾಗಿ ಅಧಿಕಾರ ವಹಿಸಿಕೊಟ್ಟರು. ಭಾರತೀಯ ನಾಗರೀಕ ಸೇವಾ (ಐಸಿಎಸ್) ಅಧಿಕಾರಿಯಾದ ಸರ್ ಸ್ಟುವರ್ಟ್ ಮಿಟ್‍ಪೋರ್ಡ್ ಫ್ರೇಸರ್ ರವರು ಮಹಾರಾಜರ ಟ್ಯೂಟರ್ ಆಗಿ 1896ರಲ್ಲಿ ನೇಮಕವಾದರು. ಫ್ರೇಸರ್ ರವರ ಮೂಲಕ ನಾಲ್ವಡಿಯವರಿಗೆ ದೇಶದ ಅನೇಕ ಪ್ರಾಂತ್ಯಗಳ ಆಡಳಿತದ ಪರಿಚಯ ಮಾಡಿಕೊಡಲಾಯಿತು. ಗಣ್ಯ ವ್ಯಕ್ತಿಗಳ ಗೆಳೆತನವಾಯಿತು. ಕೋರ್ಟು ಕಚೇರಿಗಳ ನ್ಯಾಯವಿಧಾನಗಳ ಖುದ್ದು ಮನನವಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್‍ರವರಿಗೆ 16 ವರ್ಷಗಳಾದಾಗ 06.06.1900 ರಲ್ಲಿ ಕಾಥೇವಾಡದ ರಾಜವಂಶದ ಪ್ರತಾಪಕುಮಾರಿ ದೇವಿಯವರೊಡನೆ ವಿವಾಹವಾಯಿತು. ಅಂದಿನ ಮೈಸೂರು ಸಂಸ್ಥಾನದಲ್ಲಿ ಮೈಸೂರು, ಬೆಂಗಳೂರು, ಚಿತ್ರದುರ್ಗ, ಕೋಲಾರ, ಹಾಸನ, ಕಡೂರು, ಶಿವಮೊಗ್ಗ ಮತ್ತು ತುಮಕೂರು ಹೀಗೆ ಒಟ್ಟು ಎಂಟು ಜಿಲ್ಲೆಗಳಿದ್ದವು. 1939ರಲ್ಲಿ ಮಂಡ್ಯ ಒಂಬತ್ತನೇ ಜಿಲ್ಲೆಯಾಯಿತು. ರಾಜರ್ಷಿಯವರ ಆಡಳಿತಕ್ಕೆ ಒಳಪಟ್ಟ ಪ್ರಜೆಗಳೇ ಧನ್ಯರು.

ನಾಲ್ವಡಿ ಕೃಷ್ಣರಾಜ ಒಡೆಯರರ ಜನಪರ ಆಡಳಿತವನ್ನು ಕವಿ ಹನಸೋಗೆ ಸೋಮಶೇಖರ್ ‘ಮರೆಯೋದುಂಟೆ ಮೈಸೂರು ದೊರೆಯಾ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯಾ’ ಎಂಬ ಹಾಡಿನಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಅವರೊಬ್ಬ ತತ್ವಜ್ಞಾನಿ ದೊರೆಯಾಗಿದ್ದರು. ಪ್ಲೇಟೋರ ಗಣರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದರು. ಸಾಮ್ರಾಟ್ ಅಶೋಕರ ಆಳ್ವಿಕೆಯ ಹೋಲಿಕೆಗೆ ತುಂಬಾ ಹತ್ತಿರವಾದರು. ಸಮಕಾಲೀನ ಮಹಾರಾಜರಾದ ಬರೋಡಾದ ಸಯ್ಯಾಜಿರಾವ್ ಗಾಯಕವಾಡ್ ಮತ್ತು ಕೊಲ್ಲಾಪುರದ ಶಾಹು ಮಹಾರಾಜರಂತೆ ಸಾಮಾಜಿಕ ನ್ಯಾಯದ ಹರಿಕಾರರಾದರು. ದಿವಾನರಾಗಿ ಮಿರ್ಜಾ ಇಸ್ಮಾಯಿಲ್‍ರವರು ಪ್ರತಿನಿಧಿಸಿದ್ದ ಇಂಗ್ಲೆಂಡಿನಲ್ಲಿನ ನಡೆದ 1930ರಲ್ಲಿ ನಡೆದ ದುಂಡುಮೇಜಿನ ಪರಿಷತ್ತಿನಲ್ಲಿ ನಾಲ್ವಡಿಯವರ ಆಡಳಿತವು ‘ಇಡೀ ದೇಶದಲ್ಲಿಯೇ ಉತ್ತಮ ರಾಜ್ಯ’ ಎಂಬ ಪ್ರಶಂಸೆಗೊಳಗಾಯಿತು.

ನಾಲ್ವಡಿಯವರಿಗೆ ದಿವಾನರಾಗಿ ಪಿ. ಎನ್. ಕೃಷ್ಣಮೂರ್ತಿ (1901-1906), ವಿ. ಪಿ. ಮಾಧವರಾವ್ (1906-1909), ಟಿ. ಆನಂದರಾವ್ (1909-1912), ಎಂ. ವಿಶ್ವೇಶ್ವರಯ್ಯ (1912 – 1918), ಎಂ. ಕಾಂತರಾಜ ಅರಸ್ (1918-1922), ಎ. ಆರ್. ಬ್ಯಾನರ್ಜಿ (1922-1926) ಮತ್ತು ಮಿರ್ಜಾ ಇಸ್ಮಾಯಿಲ್ (1926 – 1940) ಅವರು ಸೇವೆ ಸಲ್ಲಿಸಿದರು.

ಕಾವು ಪಡೆದುಕೊಳ್ಳುತ್ತಿದ್ದ ಸ್ವಾತಂತ್ರ್ಯ ಹೋರಾಟ ಮಹಾತ್ಮ ಗಾಂಧಿಯವರ ಸಲಹೆಯಂತೆ ಮೈಸೂರು ಸಂಸ್ಥಾನಕ್ಕೂ ವ್ಯಾಪಿಸಿತು. ಗಾಂಧಿಯವರಿಗೆ ಮೈಸೂರು ಮಹಾರಾಜರು ಮತ್ತು ದಿವಾನರೊಂದಿಗೆ ಚರ್ಚಿಸುವ ಸ್ವಾತಂತ್ರ್ಯ ನೀಡಲಾಗಿತ್ತು. ಗಾಂಧಿಯವರು ನಾಲ್ವಡಿಯವರ ಆಡಳಿತವನ್ನು ಮೆಚ್ಚಿ ‘ರಾಜರ್ಷಿ’ ಎಂಬ ಬಿರುದು ಕೊಟ್ಟರು. ಮೈಸೂರಿನ ಕಾಂಗ್ರೆಸ್ ಮುಂದಾಳುಗಳು ಮದ್ದೂರು ತಾಲ್ಲೂಕಿನ ಶಿವಪುರದಲ್ಲಿ 1938ರಲ್ಲಿ ಕಾಂಗ್ರೆಸ್ ಧ್ವಜಾರೋಹಣ ಮಾಡುವ ‘ಶಿವಪುರ ಧ್ವಜಸತ್ಯಾಗ್ರಹ’ವನ್ನು ಹಮ್ಮಿಕೊಂಡರು. ಮೈಸೂರು ಮಹಾರಾಜರ ಗಂಡಭೇರುಂಡದ ಧ್ವಜಕ್ಕೆ ಇದರಿಂದ ಅಪಮಾನವಾಗುತ್ತದೆ ಎಂದು ಭಾವಿಸಲಾಗಿತ್ತು. ಕಾಂಗ್ರೆಸ್ ಧ್ವಜಾರೋಹಣದ ನಂತರ ಕೆಲವರನ್ನು ಬಂಧಿಸಲಾಯಿತು. ಅದೇ ವರ್ಷ ಗೌರಿಬಿದನೂರಿನ ಬಳಿಯ ವಿಧುರಾಶ್ವತ್ಥದಲ್ಲಿ ಧ್ವಜಾರೋಹಣದಿಂದ ಗಲಭೆ ಸೃಷ್ಟಿಯಾಗಿ ಗೋಲಿಬಾರ್‍ನಿಂದ 32 ಜನರು ಸತ್ತರು. ಇಂತಹ ಘಟನೆಗಳಿಂದ ಸಾವರಿಸಿಕೊಳ್ಳುವುದರೊಳಗೆ ತಮ್ಮ ಜನಾನುರಾಗಿ ಆಡಳಿತಕ್ಕೆ ಜೊತೆಯಾಗಿದ್ದ ಸಹೋದರ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರು 09.03.1940ರಂದು ಮರಣಹೊಂದಿದರು. ತಮ್ಮನ ಮರಣದ ಕೊರಗು ನಾಲ್ವಡಿಯವರನ್ನು ತೀವ್ರವಾಗಿ ಬಾಧಿಸಿತು. ಜುಲೈ 30, 1940ರಂದು ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಒಳಗಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 03.08.1940ರಂದು ಕೊನೆಯುಸಿರೆಳೆದರು.

ಪ್ರಜೆಗಳ ಕಲ್ಯಾಣಕ್ಕಾಗಿ ನಿರಂತರ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ಪ್ರಗತಿ ಪಥದ ಆಡಳಿತದ (1902-1940) ಮೈಲಿಗಲ್ಲುಗಳನ್ನು ಮೆಲುಕು ಹಾಕಬೇಕು. ಅವರ ಆಡಳಿತದ ಪ್ರಮುಖ ಸಾಧನೆಗಳ ಪಟ್ಟಿ:
1. ಮೈಸೂರು ರಾಜ್ಯ ರೈಲ್ವೆಯ ನಿರಂತರ ವಿಸ್ತರಣೆ (1891-1930)
2. ವಾಣಿವಿಲಾಸ ಅಣೆಕಟ್ಟು, ಚಿತ್ರದುರ್ಗ : ನಾಲ್ವಡಿಯವರ ಮಾತೃಶ್ರೀಯವರಾದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಅವರು ಆಡಳಿತವನ್ನು ನಿಭಾಯಿಸುತ್ತಿದ್ದರು. ಅವರ ಹೆಸರಿನಲ್ಲಿ ವಾಣಿವಿಲಾಸ ಅಣೆಕಟ್ಟು (1897-1907).
3. ಮೈಸೂರು ಅರಮನೆ (1897-1912)
4. ಶಿವನಸಮುದ್ರ ಜಲವಿದ್ಯುತ್ ಉತ್ಪಾದನಾ ಯೋಜನೆ (1902)
5. ಕೋಲಾರ ಚಿನ್ನದ ಗಣಿ ಪ್ರದೇಶಕ್ಕೆ (ಕೆಜಿಎಫ್) ವಿದ್ಯುತ್ ಪೂರೈಕೆ (1902)
6. ಮೈಸೂರು ಸಂಸ್ಥಾನದ ಅಮೃತ್ ಮಹಲ್ ಕಾವಲುಗಳ ಅಭಿವೃದ್ಧಿ (1902-1940)
7. ಪ್ರಥಮ ವಾಣಿಜ್ಯ ಶಾಲೆ, ಬೆಂಗಳೂರು (1902)
8. ತಾಂತ್ರಿಕ ಶಾಲೆ, ಮೈಸೂರು (1903)
9. ಸಿಟಿ ಇಂಪ್ರೂವ್‍ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) : ದೇಶದಲ್ಲೇ ಪ್ರಥಮ ಯೋಜನೆ: ಅದು ಈಗ ಬಿಡಿಎ, ಮೂಡಾ ಮುಂತಾದ ಹೆಸರುಗಳಿಂದ ಕಾರ್ಯನಿರ್ವಹಣೆ (1904)
10. ಬೆಂಗಳೂರು ನಗರಕ್ಕೆ ವಿದ್ಯುತ್ ಪೂರೈಕೆ (1904)
11. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ರಸ್ತೆಗಳಿಗೆ ದಾರಿದೀಪ ಅಳವಡಿಕೆ (1905)
12. ಸಹಕಾರಿ ಸಂಘಗಳ ಕಾಯಿದೆ (1905)
13. ಬೆಂಗಳೂರು ಕೇಂದ್ರ ಸಹಕಾರಿ ಬ್ಯಾಂಕ್ ಸ್ಥಾಪನೆ (1905)
14. ಮೈಸೂರು ಜಯಲಕ್ಷ್ಮಿ ಮಹಲ್ (1905)
15. ಮೈಸೂರು ನಗರಕ್ಕೆ ವಿದ್ಯುತ್ ಪೂರೈಕೆ (1906)
16. ಕೃಷಿ ಶಾಲೆ, ಹೆಬ್ಬಾಳ, ಬೆಂಗಳೂರು ಆರಂಭಿಸಲು ನಾಲ್ವಡಿಯವರ ಮಾತೃಶ್ರೀಯವರಾದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಅವರು 30 ಎಕರೆ ಭೂಮಿಯನ್ನು ಕೊಡುಗೆಯಾಗಿ ನೀಡಿದರು (1906)
17. ಮೈಸೂರಿನ ತಿಲಕ್‍ನಗರದಲ್ಲಿ ಕುರುಡ ಮತ್ತು ಮೂಗ ಮಕ್ಕಳ ಶಾಲೆ (1906)
18. ಬೆಂಗಳೂರು – ಚಿಕ್ಕಬಳ್ಳಾಪುರ ಮೀಟರ್ ಗೇಜ್ ರೈಲು ಮಾರ್ಗ (1906)
19. ಮೈಸೂರು ಲೆಜಿಸ್ಲೆಟೀವ್ ಕೌನ್ಸಿಲ್ (1907)
20. ನ್ಯಾಯವಿಧೇಯಕ ಸಭೆಯ ರಚನೆ (1907)
21. ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ 371 ಎಕರೆ ಭೂಮಿ ಮತ್ತು 5 ಲಕ್ಷ ರೂಪಾಯಿಗಳ ಕೊಡುಗೆ (1907)
22. ದೇವಾಲಯಗಳಲ್ಲಿ ದೇವದಾಸಿಯರ ಹಾಗೂ ನೃತ್ಯ ಕನ್ಯೆಯರ ನೇಮಕದ ನಿಷೇಧದ ಆಜ್ಞೆ (1909)
23. ಮುಜರಾಯಿ ದೇವಸ್ಥಾನಗಳಲ್ಲಿ ‘ಗೆಜ್ಜೆಪೂಜೆ’ ನಿಷೇಧ (1910)
24. ಮೈಸೂರು ಚೆಲುವಾಂಬ ಮಹಲ್ : ಈಗ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆಯ ಸುಪರ್ದಿಯಲ್ಲಿದೆ (1910)
25. ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ ಶಿಲಾನ್ಯಾಸ (1911)
26. ಎಸ್. ಎಸ್. ಎಲ್. ಸಿ. ಪರೀಕ್ಷೆಗಳ ಪ್ರಾರಂಭ (1911)
27. ಕೃಷ್ಣರಾಜ ಸಾಗರ (ಕೆ.ಆರ್.ಎಸ್. / ಕನ್ನಂಬಾಡಿ) ಅಣೆಕಟ್ಟು ನಿರ್ಮಾಣ (1911-1932)
28. ಅಪ್ರಾಪ್ತ ವಯಸ್ಕರಲ್ಲಿ ಧೂಮಪಾನ ತಡೆಗಟ್ಟುವಿಕೆಯ ಕಾನೂನು (1911)
29. ಕೆರೆಗಳ ನಿರ್ವಹಣೆಗೆ ‘ಟ್ಯಾಂಕ್ ಪಂಚಾಯತ್ ರೆಗ್ಯುಲೇಟಿಂಗ್ ಆಕ್ಟ್’, 1000 ಕೆರೆಗಳ ಅಭಿವೃದ್ಧಿ (1911)
30. ವಯಸ್ಕರ ಶಿಕ್ಷಣಕ್ಕಾಗಿ ಶಾಲೆಗಳು (1912)
31. ಶಿಂಷಾ ನದಿಗೆ ಅಡ್ಡಲಾಗಿ ಕುಣಿಗಲ್ ತಾಲ್ಲೂಕಿನಲ್ಲಿ ಮಾರ್ಕೋನಹಳ್ಳಿ ಅಣೆಕಟ್ಟು (1912-1930)
32. ಕೃಷಿ ಇಲಾಖೆಯ ಪ್ರಥಮ ನಿರ್ದೇಶಕರಾಗಿ ಕೆನಡಾ ದೇಶದ ವಿಜ್ಞಾನಿಯಾದ ಡಾ. ಲೆಸ್ಲೀ ಕೋಲ್‍ಮನ್ ನೇಮಕ (1913)
33. ಕೃಷಿ ಶಾಲೆ, ಹೆಬ್ಬಾಳ, ಬೆಂಗಳೂರು ಪ್ರಾರಂಭ (1913)
34. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (1913)
35. ಮಿಂಟೋ ಕಣ್ಣಿನ ಆಸ್ಪತ್ರೆ, ಬೆಂಗಳೂರು (1913)
36. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯ್ದೆ (1913)
37. ಮೈಸೂರು ರೇಷ್ಮೆ ಇಲಾಖೆಯ ಸ್ಥಾಪನೆ (1913-14)
38. ಪ್ರವಾಸಿ ಕೇಂದ್ರವಾಗಿ ನಂದಿಬೆಟ್ಟದ ಅಭಿವೃದ್ಧಿ (1914)
39. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ (1915)
40. ಮಹಿಳೆಯರ ಶಿಕ್ಷಣಕ್ಕೆ ಆಧ್ಯತೆ (1915-16)
41. ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ (1916)
42. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಹ ನಿರ್ಮಾತೃ, ಪ್ರಥಮ ಕುಲಾಧಿಪತಿ (1916)
43. ಮೈಸೂರು ಚೇಂಬರ್ ಆಫ್ ಕಾಮರ್ಸ್ (1916)
44. ಸರ್ಕಾರಿ ಶ್ರೀಗಂಧದ ಎಣ್ಣೆಯ ಫ್ಯಾಕ್ಟರಿ (1916-17)
45. ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು: ಈಗ ವಿಶ್ವವಿದ್ಯಾಲಯ
ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ಎಂದು ಕರೆಯಲಾಗುತ್ತಿದೆ (1917).
46. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು (1917)
47. ಚಿಕ್ಕಬಳ್ಳಾಪುರ – ಯಲಹಂಕ ಮತ್ತು ಮೈಸೂರು – ಅರಸೀಕೆರೆ ಮೀಟರ್ ಗೇಜ್ ರೈಲು ಮಾರ್ಗ (1918)
48. ಸರ್ ಲೆಸ್ಲಿ ಮಿಲ್ಲರ್ ಆಯೋಗದ ರಚನೆ: ಹಿಂದುಳಿದ ಸಮುದಾಯಗಳಿಗೆ ರಾಜ್ಯದ ಆಡಳಿತದಲ್ಲಿ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ 23.08.1918 ರಲ್ಲಿ ಆಯೋಗ ರಚನೆ, 18.07.2019 ರಲ್ಲಿ ವರದಿ ಸಲ್ಲಿಕೆ. (1918-1919)
49. ಸಾರ್ವಜನಿಕ ಶಾಲೆಗಳಲ್ಲಿ ಎಲ್ಲಾ ಜಾತಿಯವರಿಗೆ ಪ್ರವೇಶ ನೀಡಲು ಗೆಜೆಟ್ ಪ್ರಕಟಣೆ (1918)
50. ಮೈಸೂರು ಬಾಯ್ಸ್ ಸ್ಕೌಟ್ಸ್ ಸಂಸ್ಥೆ : ದೇಶದಲ್ಲೇ ಪ್ರಥಮ (1918-19)
51. ಪ್ರೌಢಶಿಕ್ಷಣದವರೆಗೆ ಉಚಿತ ಶಿಕ್ಷಣ ಮತ್ತು ಹಿಂದುಳಿದವರಿಗೆ ವಿದ್ಯಾರ್ಥಿವೇತನ ಪ್ರಾರಂಭ (1918)
52. ಮೈಸೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಕಾರ್ಖಾನೆ (1919)
53. ದೇವದಾಸಿ ಪದ್ದತಿ ನಿರ್ಮೂಲನೆಗೆ ಪೂರಕವಾಗಿ ದೇವದಾಸಿಯರಿಗೆ ಇನಾಂ ಭೂಮಿ ನೀಡುವ ಪದ್ದತಿಯ ನಿಷೇಧ (1919)
54. ಹತ್ತು ರೇಷ್ಮೆ ಕೈಗಾರಿಕಾ ತರಬೇತಿ ಕೇಂದ್ರಗಳ ಪ್ರಾರಂಭ (1919)
55. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣದಲ್ಲಿ ಸರ್ವಧರ್ಮ, ಸರ್ವಜನಾಂಗಕ್ಕೂ ಶಿಕ್ಷಣ ನೀಡುವ ರಾಷ್ಟ್ರಮಟ್ಟದ ವಿವಿಯಾಗಲಿ ಎಂದು ಆಶಿಸಿದರು (1919)
56. ಮೈಸೂರಿನಲ್ಲಿ ಅಖಿಲ ಭಾರತ ಡಿಪ್ರೆಸ್ಸೆಡ್ ಕ್ಲಾಸಸ್ ಸಮ್ಮೇಳನದ ಆಯೋಜನೆ, ಕೊಲ್ಲಾಪುರದ ಶಾಹು ಮಹಾರಾಜ್ ಅವರ ಪ್ರತಿನಿಧಿಯಾಗಿ ಸತ್ಯಶೋಧಕ ಸಮಾಜದ ವಿ. ಆರ್. ಶಿಂಧೆ ಭಾಗವಹಿಸಿದ್ದರು (1919-1920)
57. ಮೈಸೂರು ಸೋಶಿಯಲ್ ಪ್ರೋಗ್ರೆಸ್ ಅಸೋಸಿಯೇಷನ್ (1920)
58. ಮಿಲ್ಲರ್ ಆಯೋಗದ ಶಿಫಾರಸ್ಸಿನಂತೆ ಬ್ರಾಹ್ಮಣೇತರರಿಗೆ ಶೇ. 75 ರಷ್ಟು ಮೀಸಲಾತಿ (1921)
59. ಮಾಧ್ಯಮಿಕ ಶಾಲೆಗಳಲ್ಲಿ ಏಕರೀತಿಯ ದ್ವಿಭಾಷಾ ಸೂತ್ರ (1921)
60. ಸರ್ಕಾರಿ ವಿಜ್ಞಾನ ಕಾಲೇಜು, ಬೆಂಗಳೂರು (1921)
61. ಚಿಕ್ಕಜಾಜೂರು – ಚಿತ್ರದುರ್ಗ ಮೀಟರ್ ಗೇಜ್ ರೈಲು ಮಾರ್ಗ (1921)
62. ಚಿಕ್ಕಬಳ್ಳಾಪುರ – ಬಂಗಾರಪೇಟೆ ಮತ್ತು ಬೀರೂರು – ತಾಳಗುಪ್ಪ ಮೀಟರ್ ಗೇಜ್ ರೈಲುಮಾರ್ಗ (1921)
63. ಲಲಿತ್ ಮಹಲ್ ಪ್ಯಾಲೇಸ್, ಮೈಸೂರು (1921)
64. ಒಟ್ಟು 32 ಲಂಬಾಣಿ ವಸತಿ ಶಾಲೆಗಳ ಆರಂಭ, ಬಿಳಿಗಿರಿರಂಗನ ಬೆಟ್ಟದಲ್ಲಿ ಸೋಲಿಗರಿಗಾಗಿ ನಾಲ್ಕು ಶಾಲೆಗಳು, ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಜೇನುಕುರುಬ ಮತ್ತು ಕುಂಬಿ ಜನಾಂಗದವರಿಗೆ 5 ಶಾಲೆಗಳು, ಕೋಲಾರ ಜಿಲ್ಲೆಯಲ್ಲಿ ಬೋವಿ ಜನಾಂಗದವರಿಗಾಗಿ 3 ಶಾಲೆಗಳು (1921-22)
65. ಶಾಸನದ ಮೂಲಕ ಪ್ರಜಾಪ್ರತಿನಿಧಿ ಸಭೆಯಲ್ಲಿ ಶೋಷಿತ ವರ್ಗಗಳಿಗೆ 35, ಅಲ್ಪಸಂಖ್ಯಾತರಿಗೆ 35 ಮತ್ತು ಗ್ರಾಮಾಂತರ ಅಭ್ಯರ್ಥಿಗಳಿಗೆ 163 ಸ್ಥಾನಗಳನ್ನು ನಿಗದಿಗೊಳಿಸಲಾಯಿತು (1923)
66. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಭದ್ರಾವತಿ (1923)
67. ವುಡ್ ಡಿಸ್ಟಿಲ್ಲೇಷನ್ ಫ್ಯಾಕ್ಟರಿ, ಭದ್ರಾವತಿ (1923)
68. ಮೈಸೂರು ಮೆಡಿಕಲ್ ಕಾಲೇಜು (1924)
69. ಮೈಸೂರು ಪ್ರಾಂತೀಯ ಸಹಕಾರ ಅಪೆಕ್ಸ್ ಬ್ಯಾಂಕ್ (1925)
70. ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ 100 ಎಕರೆ ಭೂಮಿಯ ಕೊಡುಗೆ (1925)
71. ಕೃಷ್ಣರಾಜನಗರ ಪಟ್ಟಣ ಸ್ಥಾಪನೆ (1925-35)
72. ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಸಾಗರದಲ್ಲಿ ಕೈಗಾರಿಕಾ ತರಬೇತಿ ಶಾಲೆಗಳು (1926)
73. ಕೃಷ್ಣರಾಜೇಂದ್ರ ಆಸ್ಪತ್ರೆ, ಮೈಸೂರು (1927)
74. ಯುವರಾಜ ಕಾಲೇಜು, ಮೈಸೂರು (1928)
75. ಕೃಷ್ಣರಾಜ ಮಾರುಕಟ್ಟೆ, ಬೆಂಗಳೂರು (1928)
76. ರೈತರು ಸಾಲದ ಶೂಲಕ್ಕೆ ಸಿಲುಕಿಕೊಳ್ಳದಿರಲು ಅಗ್ರಿಕಲ್ಚರಿಸ್ಟ್ ಡೆಟ್ (ಸಾಲ) ರಿಲೀಫ್ ಕಾಯಿದೆ (1928)
77. ಕೆ. ಆರ್. ಮಿಲ್ಸ್, ಮೈಸೂರು (1929)
78. ಮಂಡ್ಯದಲ್ಲಿ 600 ಎಕರೆಗಳ ಕೃಷಿ ಪ್ರಾಯೋಗಿಕ ಕ್ಷೇತ್ರ / ವಿ.ಸಿ. ಫಾರಂ (1930)
79. ಇರ್ವಿನ್ ಕಾಲುವೆ / ವಿಶ್ವೇಶ್ವರಯ್ಯ ಕಾಲುವೆ ನಿರ್ಮಾಣ (1931-32)
80. ಮೈಸೂರು ಶುಗರ್ ಮಿಲ್ಸ್, ಮಂಡ್ಯ (1933)
81. ನಗರ ಮುನಿಸಿಪಾಲಿಟಿ ಕಾಯಿದೆ (1933)
82. ಹಿಂದೂ ಸ್ತ್ರೀಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗಲು ‘ದಿ ಹಿಂದೂ ಲಾ ವಿಮೆನ್ಸ್ ರೈಟ್ಸ್ ಆಕ್ಟ್’ (1933)
83. ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ (1933-1935)
84. ಸರ್ ಸಿ. ವಿ. ರಾಮನ್ ಸಂಶೋಧನಾ ಸಂಸ್ಥೆ ಸ್ಥಾಪಿಸಲು ಬೆಂಗಳೂರಿನ ಮೇಖ್ರಿ ವೃತ್ತದ ಬಳಿ 10 ಎಕರೆ ಜಮೀನು ಕೊಡುಗೆ (1934)
85. ವಾಣಿವಿಲಾಸ್ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, ಬೆಂಗಳೂರು (1935)
86. ಅಸ್ಪೃಶ್ಯರಿಗೆ ಮೈಸೂರು ಅರಮನೆ ಪ್ರವೇಶಕ್ಕೆ ಅವಕಾಶ (1936)
87. ವೇಶ್ಯಾವೃತ್ತಿ ತಡೆಗಟ್ಟುವ ಕಾನೂನು (1936)
88. ಮೈಸೂರು ಪೇಪರ್ ಮಿಲ್ಸ್, ಭದ್ರಾವತಿ (1936)
89. ಮೈಸೂರು ಲ್ಯಾಂಪ್ಸ್, ಬೆಂಗಳೂರು (1936)
90. ಸೈಂಟ್ ಫಿಲೋಮಿನಾ ಚರ್ಚ್, ಮೈಸೂರು (1936)
91. ನಿಮ್ಹಾನ್ಸ್ ಆಸ್ಪತ್ರೆ, ಬೆಂಗಳೂರು (1936-37)
92. ಕಾರ್ಖಾನೆಗಳ ಗರ್ಭಿಣಿ ಕಾರ್ಮಿಕರಿಗೆ ಸಹಾಯವಾಗುವಂತೆ ‘ದಿ ಮೈಸೂರು ಮೆಟರ್ನಿಟಿ ಬೆನೆಫಿಟ್ ಆಕ್ಟ್’ (1937)
93. ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಕಂಪನಿ (1937)
94. ಬೆಂಗಳೂರಿನ ಮಹಾರಾಣಿ ಕಾಲೇಜು (1938)
95. ವಿಧವಾ ವಿವಾಹ ಪ್ರೋತ್ಸಾಹಕ್ಕಾಗಿ ‘ದಿ ಮೈಸೂರು ಹಿಂದೂ ವಿಡೋ ರೀ ಮ್ಯಾರೇಜ್ ಆಕ್ಟ್’ (1938)
96. ವಿಧವೆಯರ ಶಿಕ್ಷಣಕ್ಕಾಗಿ ವಸತಿಗೃಹ ಶಾಲೆಗಳ ನಿರ್ಮಾಣ (1938)
97. ಮಂಡ್ಯ ಜಿಲ್ಲೆ ರಚನೆ (1939)
98. ಸಾಗರದ ಬಳಿ ಶರಾವತಿ ನದಿಗೆ ಅಡ್ಡಲಾಗಿ ಹಿರೇಭಾಸ್ಕರ ಅಣೆಕಟ್ಟು (1939)
99. ಜೋಗ್ ಜಲಪಾತದ ಬಳಿ ವಿದ್ಯುತ್ ಉತ್ಪಾದನೆಗೆ ಶಂಕು ಸ್ಥಾಪನೆ (1939)
100. ಗ್ಲಾಸ್ ಮತ್ತು ಪಿಂಗಾಣಿ ಕಾರ್ಖಾನೆ, ಬೆಂಗಳೂರು (1939)
101. ಮೈಸೂರು ಕ್ರೋಮ್ ಮತ್ತು ಟ್ಯಾನಿಂಗ್ ಫ್ಯಾಕ್ಟರಿ (1940), ಮುಂತಾಗಿ…

… ಹೀಗೆ ಮೈಸೂರು ಸಂಸ್ಥಾನವು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಅಚ್ಚಳಿಯದ ಪ್ರಗತಿಯತ್ತ ಸಾಗಿತು. ನಾಡು ಕಟ್ಟಿದ ನಾಲ್ವಡಿಯವರು ಕೊಡುಗೈ ದಾನಿಯಾಗಿದ್ದರು. ಅವರ ಸವಿನೆನಪು ಸದಾ ನಮ್ಮ ಮನದಲ್ಲಿರಲಿ. ಆಳುವವರಿಗೆ ದಾರಿದೀಪವಾಗಲಿ. ಇಂದಿನ ಕರ್ನಾಟಕ ರಾಜ್ಯವು ಇನ್ನಷ್ಟು ಪ್ರಗತಿಪಥದಲ್ಲಿ ಸಾಗಲಿ.

-ಪ್ರೊ. ಎಂ.ನಾರಾಯಣಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು

 

The post ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಲೇಖಕರು: ಪ್ರೊ. ಎಂ. ನಾರಾಯಣಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು appeared first on Karnataka Kahale.

]]>
ಸಂಗಪ್ಪ ಕಮದಾಳ ಸಂಸ್ಮರಣ ಗ್ರಂಥ ‘ದಾಂಗುಡಿ’ ಲೋಕಾರ್ಪಣೆ: ಕಲುಷಿತ ಸಮಾಜಕ್ಕೆ ನಾವೇ ಹೊಣೆಗಾರರು -ತಿಂಥಣಿ ಶ್ರೀಗಳು https://www.karnatakakahale.com/news/11118 Sun, 29 Jan 2023 14:32:03 +0000 https://www.karnatakakahale.com/?p=11118 ವಿಜಯಪುರ ಜ. 28: ವಿವೇಕದ ಹಿಂದೆ ಹೋಗದೆ ಸಮೂಹ ಸಾಗುವತ್ತ ದಾಂಗುಡಿ ಇಡುತ್ತ ಸಮಾಜವು ಕಲುಷಿತಗೊಳ್ಳಲು ನಾವೇ ಹೊಣೆಗಾರರು ಎಂದು ತಿಂಥಣಿ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳು ಖೇದ ವ್ಯಕ್ತಪಡಿಸಿದರು. ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ನಡೆದ ದಿ.…

The post ಸಂಗಪ್ಪ ಕಮದಾಳ ಸಂಸ್ಮರಣ ಗ್ರಂಥ ‘ದಾಂಗುಡಿ’ ಲೋಕಾರ್ಪಣೆ: ಕಲುಷಿತ ಸಮಾಜಕ್ಕೆ ನಾವೇ ಹೊಣೆಗಾರರು -ತಿಂಥಣಿ ಶ್ರೀಗಳು appeared first on Karnataka Kahale.

]]>

ವಿಜಯಪುರ ಜ. 28: ವಿವೇಕದ ಹಿಂದೆ ಹೋಗದೆ ಸಮೂಹ ಸಾಗುವತ್ತ ದಾಂಗುಡಿ ಇಡುತ್ತ ಸಮಾಜವು ಕಲುಷಿತಗೊಳ್ಳಲು ನಾವೇ ಹೊಣೆಗಾರರು ಎಂದು ತಿಂಥಣಿ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳು ಖೇದ ವ್ಯಕ್ತಪಡಿಸಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ನಡೆದ ದಿ. ಸಂಗಪ್ಪ ಕಮದಾಳ ಅವರ 26ನೆಯ ಪುಣ್ಯಸ್ಮರಣೆ ನಿಮಿತ್ಯ ಅವರ ಜೀವನ-ಸಾಧನೆ ಕುರಿತಾದ ‘ದಾಂಗುಡಿ’ ಸಂಸ್ಮರಣ ಗ್ರಂಥವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇಂದು ಸರಕಾರಿ ನೌಕರರು, ಅಧಿಕಾರಿಗಳು ಸಾಮಾಜಿಕ ಕಾಳಜಿಯನ್ನು ಕಳೆದುಕೊಂಡು ಸ್ವಾರ್ಥಕ್ಕೋಸ್ಕರ ಕೆಲಸ ಮಾಡುತ್ತಿದ್ದಾರೆ. ಮನುಷ್ಯನಿಗೆ ಹಣ ಮುಖ್ಯ. ಆದರೆ ನೆಮ್ಮದಿ ಕೆಡಬಾರದು ಜೀವನದಲ್ಲಿ ಹಣ ಎಷ್ಟು ಮುಖ್ಯವೋ ನೆಮ್ಮದಿಯೂ ಮುಖ್ಯ ಎಂದು ಅವರು ಹೇಳಿದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶಾಮೀಲಾಗಿ ಇವತ್ತು ಸರಕಾರದ ಆಡಳಿತ ಯಂತ್ರವನ್ನು ಹದಗೆಡಿಸಿದ್ದಾರೆ ರಾಜಕಾರಣಿಗಳ ಗುಲಾಮಗಿರಿ ಮಾಡುವಂಥ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗುತ್ತಿದೆ ಎಂದು ಶ್ರೀಗಳು ವಿಷಾದಿಸಿದರು.
ಸಂಗಪ್ಪ ಕಮದಾಳ ಅವರು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಉನ್ನತ ಹುದ್ದೆಯಲ್ಲಿದ್ದರೂ, ಲೋಕಸೇವಾ ಆಯೋಗದ ಸದಸ್ಯರಾಗಿದ್ದರೂ ಅತ್ಯಂತ ಸರಳ, ಪ್ರಾಮಾಣಿಕ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಬದುಕಿ, ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಇಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಚಾರವಾದಿ ಚಿಂತಕ, ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ ಕಮದಾಳ ಸಂಗಪ್ಪ ಅವರು ಸತ್ಯಶುದ್ಧ ಕಾಯಕ ಜೀವಿಯಾಗಿದ್ದರು. ಜೀವನಮೌಲ್ಯಗಳನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.
ಜಾತಿ, ಮತಗಳನ್ನು ಮೀರಿದ ಸಂಗಪ್ಪನವರ ಶೈಕ್ಷಣಿಕ ಆದರ್ಶಗಳ ಆತ್ಮವಲೋಕನ ನಡೆಯಬೇಕು ಎಂದ ಅವರು ಸಂಗಪ್ಪ ಕಮದಾಳ ಅವರು ಬರೀ ಕೆಲಸ ಮಾಡದೆ, ಆದರ್ಶಗಳೊಂದಿಗೆ ಶಿಕ್ಷಣವನ್ನು ರೂಪಿಸಿದರು. ಅವರ ಆಶಯದ ಭವಿಷ್ಯ ಕಟ್ಟುವ ಕೆಲಸ ನಡೆಬೇಕಿದೆ ಎಂದರು.
ಯಾರನಾಳದ ಶ್ರೀ ಗುರುಸಂಗನಬಸವ ಶಿವಾಚಾರ್ಯರು, ಡೋಣುರಿನ ಡಾ. ಸಿದ್ಧಲಿಂಗ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಪ್ರಾಚಾರ್ಯ ಎಂ. ಎಂ. ಪಡಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ಧರಾಮ ಮನಹಳ್ಳಿ ನುಡಿನಮನ ಸಲ್ಲಿಸಿದರು. ಧಾರವಾಡ ರಂಗಾಯಣ ನಿರ್ದೇಶಕಿ ಶಶಿಕಲಾ ಹುಡೇದ ಕೃತಿ ಪರಿಚಯ ಮಾಡಿದರು. ವಿ. ಎಸ್.ಹುಡೇದ ಸಂಪಾದಕೀಯ ಮಾತುಗಳನ್ನಾಡಿದರು.
ಶ್ರೀಮತಿ ಸುವರ್ಣಾ ಸಂಗಪ್ಪ ಕಮದಾಳ, ಸುಭಾಸ್ ಕಮದಾಳ, ಕೆ. ಆರ್. ಸಂಕದ, ಡಾ. ಎಸ್. ಎಲ್. ಲಕ್ಕಣ್ಣವರ, ವಿ.ಸಿ. ನಾಗಠಾಣ, ಡಾ. ಜೆ. ಎಸ್. ಪಾಟೀಲ್, ಚೆನ್ನಪ್ಪ ಕಟ್ಟಿ, ಎನ್.ಜಿ. ಕರೂರ್, ರಾಜು ಕಂಬಾಗಿ, ರವಿ ಕಿತ್ತೂರು, ಬಿ.ವೈ. ಕನ್ನೂರ್, ಎಚ್. ಎಸ್. ಮಣುರ, ಸಿ. ಎಸ್. ಕಣಕಾಲಮಠ, ಎಸ್. ಎಚ್. ಶಿರೂರು, ರವೀಂದ್ರ ಶಿರೂರು, ದ್ರಾಕ್ಷಾಯಿಣಿ ಹುಡೇದ, ಡಾ. ಎಂ.ಜಿ. ಬಿರಾದಾರ, ಡಾ. ಗುಂಡಪ್ಪ, ಡಾ. ಧರ್ಮರಾಯ ಇಂಗಳೆ, ಹಿರಿಯ ಪತ್ರಕರ್ತ ಅನಿಲ ಹೊಸಮನಿ, ಶ್ರೀನಾಥ ಪೂಜಾರಿ, ಗೋಪಾಲ ಅಥರ್ಗಾ, ಚನ್ನು ಕಟ್ಟಿಮನಿ, ಬೀರಪ್ಪ ಜುಮನಾಳ, ಹುಡೇದ ಮತ್ತು ಕಮದಾಳ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಶಿವಶಂಕರ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಣಾಧಿಕಾರಿ ರವಿ ಕೊಣ್ಣೂರ್ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶ್ರೀಮತಿ ಬನಶ್ರೀ ಹತ್ತಿ ನಿರೂಪಣೆ ಮಾಡಿದರು.
*****

The post ಸಂಗಪ್ಪ ಕಮದಾಳ ಸಂಸ್ಮರಣ ಗ್ರಂಥ ‘ದಾಂಗುಡಿ’ ಲೋಕಾರ್ಪಣೆ: ಕಲುಷಿತ ಸಮಾಜಕ್ಕೆ ನಾವೇ ಹೊಣೆಗಾರರು -ತಿಂಥಣಿ ಶ್ರೀಗಳು appeared first on Karnataka Kahale.

]]>
ಹಂಪಾಪಟ್ಟಣ ಸಾಂಸ್ಕೃತಿಕ ಗ್ರಾಮ -ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಬಣ್ಣನೆ https://www.karnatakakahale.com/news/11055 Wed, 25 Jan 2023 18:31:06 +0000 https://www.karnatakakahale.com/?p=11055 ಹಗರಿಬೊಮ್ಮನಹಳ್ಳಿ, ಜ.೨೫: ಪ್ರಸಿದ್ಧ ಜಾನಪದ ಕಲಾವಿದ ದಿ. ಗೊಂದಲಿಗರ ದೇವೇಂದ್ರಪ್ಪ ಸೇರಿದಂತೆ ಹಲವು ಕಲಾ ಪ್ರಕಾರಗಳ ಕಲಾವಿದರು ಬದುಕಿ, ಬಾಳುತ್ತಿರುವ ಹಂಪಾಪಟ್ಟಣ ಸಾಂಸ್ಕೃತಿಕ ಗ್ರಾಮ ಎಂದು ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಅವರು…

The post ಹಂಪಾಪಟ್ಟಣ ಸಾಂಸ್ಕೃತಿಕ ಗ್ರಾಮ -ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಬಣ್ಣನೆ appeared first on Karnataka Kahale.

]]>

ಹಗರಿಬೊಮ್ಮನಹಳ್ಳಿ, ಜ.೨೫: ಪ್ರಸಿದ್ಧ ಜಾನಪದ ಕಲಾವಿದ ದಿ. ಗೊಂದಲಿಗರ ದೇವೇಂದ್ರಪ್ಪ ಸೇರಿದಂತೆ ಹಲವು ಕಲಾ ಪ್ರಕಾರಗಳ ಕಲಾವಿದರು ಬದುಕಿ, ಬಾಳುತ್ತಿರುವ ಹಂಪಾಪಟ್ಟಣ ಸಾಂಸ್ಕೃತಿಕ ಗ್ರಾಮ ಎಂದು ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಅವರು ಬಣ್ಣಿಸಿದರು.
ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಮಂಗಳವಾರ ನೂತನ ಶ್ರೀಮಾತಾ ಸೇವಾಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಲವತ್ತು ವರ್ಷಗಳ ಹಿಂದೆಯೇ ಗೊಂದಲಿಗರ ದೇವೇಂದ್ರಪ್ಪ ಅವರು ಧಾರವಾಡ ಆಕಾಶವಾಣಿಯಲ್ಲಿ  ಗೊಂದಲಿಗರ ಹಾಡುಗಳನ್ನು ಹಾಡಿ ಗ್ರಾಮಕ್ಕೆ ಹೆಸರು ತಂದವರು ಮಾತ್ರವಲ್ಲ  ತಮ್ಮ ಪ್ರತಿಭೆ, ಸಾಧನೆ ಮೂಲಕ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಗಳಿಸಿ ಗ್ರಾಮಕ್ಕೆ ಕೀರ್ತಿ ತಂದವರು ಎಂದು ಕೊಂಡಾಡಿದರು.


ಗ್ರಾಮದ ಮೊದಲ ಪತ್ರಕರ್ತನೆಂಬ ಗೌರವಕ್ಕೆ ಪಾತ್ರರಾಗಿರುವ ಸಿ. ಮಂಜುನಾಥ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದರೆ, ಕಳೆದ ವರ್ಷ ಗೊಂದಲಿಗರ ರಾಮಣ್ಣ ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿ,  ಮೂರನೆಯ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ ಗಳಿಸಿ ಗ್ರಾಮಕ್ಕೆ ಹೆಸರು ತಂದವರು ಎಂದು ಹೇಳಿದರು.
ಕಲಾ ಗ್ರಾಮ ಎಂಬ ಹೆಗ್ಗಳಿಕೆಯ ಮರಿಯಮ್ಮನಹಳ್ಳಿ ಸಮೀಪದ ಹಂಪಾಪಟ್ಟಣದಲ್ಲಿ ಬಯಲಾಟ, ಕೋಲಾಟ, ತಮಟೆ, ಕಹಳೆ, ಡೊಳ್ಳು, ಮರಕುಣಿತ ಸೇರಿದಂತೆ ಹತ್ತಾರು ಕಲಾಪ್ರಕಾರಗಳ ಕಲಾವಿದರು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ್ದಾರೆ ಎಂದು ಶ್ಲಾಘಿಸಿದ ಅವರು ಗ್ರಾಮದ ಜತೆ ತಮ್ಮ ದಶಕಗಳ ಜನಪದ ಒಡನಾಟವನ್ನು ಸ್ಮರಿಸಿದರು.
ದೇಶದ ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಸಮಾನತೆ ಲಭಿಸಿರುವುದು  ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದ ಎಂದು  ತಿಳಿಸಿದರು.


ಬಸವಣ್ಣ ಮತ್ತು ಡಾ. ಅಂಬೇಡ್ಕರ್ ಅವರಿಂದ ಹೆಣ್ಣುಮಕ್ಕಳಿಗೆ ಉನ್ನತ ಹುದ್ದೆ, ಸ್ಥಾನಮಾನಗಳು ದೊರಕಿವೆ ಎಂದು ಅಭಿಪ್ರಾಯ ಪಟ್ಟ ಅವರು ತೃತೀಯಲಿಂಗಿಗಳು ಸರಕಾರಿ ನೌಕರಿ, ಪ್ರಶಸ್ತಿ ಪುರಸ್ಕಾರಗಳು ದೊರೆಯುತ್ತಿರುವುದು ಭಾರತದ ಸಂವಿದಾನದಿಂದ ಎಂದರು.
ಯಶಸ್ಸುಗಳಿಸಲು ಸಮಯಪ್ರಜ್ಞೆ, ತಾಳ್ಮೆ ಅತ್ಯಗತ್ಯ. ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಪುಸ್ತಕಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ಸಮಾಜಮುಖಿ ಕಾರ್ಯಗಳ ಮೂಲಕ ಶ್ರೀ ಮಾತಾಸೇವಾ ಟ್ರಸ್ಟ್ ಜನಮನ ಗೆಲ್ಲಲಿ ಎಂದು ಹಾರೈಸಿದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿದ್ದ ಹಿರಿಯ ಪತ್ರಕರ್ತ ಸಿ.ಮಂಜುನಾಥ ಮಾತನಾಡಿ, ಹಂಪಾಪಟ್ಟಣ ಗ್ರಾಮ ಸಾಮರಸ್ಯ, ಸಮಾನತೆ, ಧಾರ್ಮಿಕ ಸಹಿಷ್ಣುತೆಗೆ ಹೆಸರಾದ ಗ್ರಾಮ.  ವಿವಿಧ ಜಾತಿ, ಧರ್ಮದವರು ಸಹೋದರರಂತೆ ಬಾಳುತ್ತಿದ್ದು ಇತರೆ ಊರುಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಸರಕಾರ, ಗ್ರಾಮಪಂಚಾಯಿತಿ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿವರ್ಷವೂ  ಹಂಪಾಪಟ್ಟಣ ಉತ್ಸವವನ್ನು ಆಚರಿಸುವ ಮೂಲಕ ಮತ್ತಷ್ಟು ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ವಿಜಯನಗರ ಜಿಲ್ಲಾ ಘಟಕ ಉಪಾಧ್ಯಕ್ಷ ಬುಡ್ಡಿ ಬಸವರಾಜ ಅವರು ಮಾತನಾಡಿ ಸಮಾಜದ ತಾರತಮ್ಯ, ಶೋಷಣೆಯನ್ನು ಅನುಭವಿಸುತ್ತಲೇ ಜಾನಪದ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸುವ ಮೂಲಕ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿರುವ ಮಾತಾ ಮಂಜಮ್ಮ ಜೋಗತಿ ಅವರು ಮಾದರಿ ಎಂದು ತಿಳಿಸಿದರು.
ಶ್ರೀ ಮಾತಾ ಸೇವಾಟ್ರಸ್ಟ್ ನ್ನು ಉದ್ಘಾಟಿಸಿದ ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ  ನಿರ್ದೇಶಕರೂ  ಆಗಿರುವ ಕೊಪ್ಪಳ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣ ಡಿ ಕುರುಗೋಡು ಅವರು ಮಾತನಾಡಿ   ಸಮಾಜದ ಅಭಿವೃದ್ಧಿಯಲ್ಲಿ ಉತ್ತಮ ಶಿಕ್ಷಣ, ಸಂಸ್ಕಾರ ಅತ್ಯಗತ್ಯ ಎಂದರು.
ಯುವಕರು ಶಿಕ್ಷಣ ಪಡೆದು ಒಂದು ಉದ್ಯೋಗಕ್ಕೆ ಸೀಮಿತರಾಗದೇ ನೌಕರಿ ಸೃಷ್ಠಿಸುವ, ಉದ್ಯೋಗದಾತರಾಗಬೇಕು ಎಂದು ಕಿವಿಮಾತು ಹೇಳಿದರು. ಆರ್ಯ ವೈಶ್ಯ ಸಮಾಜದ ಬಡವರು ಸರಕಾರಿ ಸೌಲಭ್ಯ ಪಡೆದುಕೊಂಡು ಪ್ರಗತಿಹೊಂದಬೇಕು ಎಂದು ತಿಳಿಸಿದರು.
ಕೊಪ್ಪಳದ ಯುವ ನ್ಯಾಯವಾದಿ ಡಿ. ಗುರುರಾಜ, ಟಿ.ಮಹೇಂದ್ರ ಮಾತನಾಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಂಪಾಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಲ್ಲಾಹುಣಸಿ ನಾಗರಾಜ್, ಉಪಾಧ್ಯಕ್ಷೆ ಶ್ರೀಮತಿ ಹನುಮಕ್ಕ ಹುಲುಗಪ್ಪ ಅವರು ಸೇರಿದಂತೆ ಗ್ರಾಪಂ ಸದಸ್ಯರಾದ  ಸಿ.ಎಲ್ ಕುಮಾರ್, ಎಸ್.ಗಾಳೆಪ್ಪ, ಎಸ್.ನಾಗರಾಜ ನಾಯಕರ, ಶ್ರೀಮತಿ ಉಪ್ಪಾರ ಹುಲಿಗೆಮ್ಮ ಕಾಳಪ್ಪ, ತಿಪ್ಪಿಗುಂಡಿ ಮಂಜುನಾಥ್, ಶ್ರೀಮತಿ ಪತ್ರಿಗೀತಾ, ಶ್ರೀಮತಿ ಗುಬ್ಬೇರ ಮಂಜುಳ ಅಂಜಿನೆಪ್ಪ, ಆರ್ಯ ವೈಶ್ಯ ಸಂಘ, ಹಂಪಾಪಟ್ಟಣ ಘಟಕದ ಗೌರವಾಧ್ಯಕ್ಷ  ಆರ್.ಜಿ ಬಸವರಾಜ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಜಿ.ತಿಮ್ಮಣ್ಣ, ಮಗಿಮಾವಿನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಪಿ.ಮಲ್ಲಿಕಾರ್ಜುನ, ಗ್ರಾಮದ ಮುಖಂಡರಾದ ಎಲಿಗಾರ ಕುಬೇರಪ್ಪ,  ಜಿ.ಸತ್ಯನಾರಾಯಣ ಶೆಟ್ಟಿ, ಮಾರುತಿ ಭಜನಾ ಮಂಡಳಿ ಅಧ್ಯಕ್ಷ ಕಿಟಕಿ ಶಿವಣ್ಣ, ವೀರಶೈವ ಸಮಾಜದ ಮುಖಂಡ ಪಿ.ಶಿವನಗೌಡ್ರು, ಸಹಿಪ್ರಾ ಶಾಲೆಯ ಎಸ್.ಡಿಎಂಸಿ ಅಧ್ಯಕ್ಷ  ಹೆಚ್.ಸೋಮನಾಥ್, ನವೋದಯ ಯುವಕ ಸಂಘದ ಅಧ್ಯಕ್ಷ ವಿ.ಹನುಮಂತ, ಕರವೇ ಗ್ರಾಮ ಘಟಕದ  ಅಧ್ಯಕ್ಷ ಪೂಜಾರ ಸೋಮಣ್ಣ, ವಾಲ್ಮೀಕಿ ಸಮಾಜದ ಅಧ್ಯಕ್ಷ ಡಿ.ಹನುಮಂತಪ್ಪ, ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ತು ತಾಲೂಕು ಅಧ್ಯಕ್ಷ ಹಡಗಲಿ ಖಾಜಾಸಾಬ್  ಅವರು ಉಪಸ್ಥಿತರಿದ್ದರು.
ಅಭಿನಂದನೆ: ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರನ್ನು ಟ್ರಸ್ಟ್ ಪದಾಧಿಕಾರಿಗಳು ಸತ್ಕರಿಸಿ ಗೌರವಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನ್ಯಾಯವಾದಿ ಡಿ.ಗುರುರಾಜ , ಜಿ. ವೆಂಕಣ್ಣ ಶೆಟ್ಟಿ, ಪೂರ್ಮ ಶ್ರೀನಾಥ್, ಟಿ.ಮಹೇಂದ್ರ, ಮಾಧವಿ ಚಿದ್ರಿ, ಶ್ರೀನಿವಾಸ ಬಳಗನೂರು, ಎಸ್. ನಾಗೇಂದ್ರ,  ವಿರೇಶ್ ವಿ, ಕಾತ್ರೀಕಿ ಶ್ರೀನಿವಾಸ್, ಹೆಚ್ ಎಂ ರಾಘವೇಂದ್ರ, ಕಾರಂ ಬಾಬು ರಾಜೇಂದ್ರ ಪ್ರಸಾದ್, ಡಿಬಿಎಂ ಪ್ರಸಾದ್, ಭರತ್ ಗಂಗಾವತಿ ಮತ್ತು ರಮೇಶ ದೇವರಂಗಡಿ ಅವರನ್ನು ಟ್ರಸ್ಟ್ ಪರವಾಗಿ ಗಣ್ಯರು ಸನ್ಮಾನಿಸಿ ಗೌರವಿಸಿದರು.


ದಾಸರ ಪದಗಳು: ಹಗರಿಬೊಮ್ಮನಹಳ್ಳಿ ಕುಸುಮ ಭಜನಾ ಮಂಡಳಿಯ ಶ್ರೀಮತಿ ಮಾಧವಿ ಚಿದ್ರಿ ಮತ್ತು ಸಂಗಡಿಗರು ದಾಸರ ಪದಗಳನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಜಿ.ಶ್ರೀನಿವಾಸ ಶೆಟ್ಟಿ ಅವರು ಮಾತನಾಡಿ ಸಮಾಜ ಒಪ್ಪುವಂತೆ ಟ್ರಸ್ಟ್ ಕಾರ್ಯನಿರ್ವಹಿಸುತ್ತದೆ ಎಂದರು.


ಶ್ರೀನಿವಾಸ ಸ್ವಾಗತಿಸಿದರು. ಬಾರಿಕರ ಹುಲುಗಪ್ಪ ನಿರೂಪಿಸಿದರು. ಜಿ. ಯಂಕಣ್ಣ ಶೆಟ್ಟಿ ಮತ್ತು ಜಿ.ಸತ್ಯನಾರಾಯಣ ಶೆಟ್ಟಿ ನಿರ್ವಹಿಸಿದರು.  ಗ್ರಾಮದ ಸರಸ್ವತಿ, ಜಿ ಸವಿತಾ, ವಿನುತ, ವೀರಮ್ಮ, ಸುಮಾ, ಸುಜಾತ ಪ್ರಾರ್ಥಿಸಿದರು.
*****

The post ಹಂಪಾಪಟ್ಟಣ ಸಾಂಸ್ಕೃತಿಕ ಗ್ರಾಮ -ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಬಣ್ಣನೆ appeared first on Karnataka Kahale.

]]>