Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಸಾರ್ವತ್ರಿಕ ಚುನಾವಣೆ-2023 – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Wed, 10 May 2023 23:17:46 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಸಾರ್ವತ್ರಿಕ ಚುನಾವಣೆ-2023 – Karnataka Kahale https://www.karnatakakahale.com 32 32 ಬಳ್ಳಾರಿ: ಮತ ಚಲಾಯಿಸಿದ ಡಿಸಿ, ಜಿಪಂ ಸಿಇಓ https://www.karnatakakahale.com/news/12144 Wed, 10 May 2023 23:15:16 +0000 https://www.karnatakakahale.com/?p=12144 ಬಳ್ಳಾರಿ,ಮೇ 10: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಅಂಗವಾಗಿ ಮೇ 10 ರಂದು ಬುಧವಾರ ನಡೆದ ಮತದಾನ ದಿನದಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಮತಗಟ್ಟೆ 123 ರ ಸರಳಾದೇವಿ ಸತೀಶ್ಚಂದ್ರ ಅಗರ್‍ವಾಲ್ ಸರ್ಕಾರಿ…

The post ಬಳ್ಳಾರಿ: ಮತ ಚಲಾಯಿಸಿದ ಡಿಸಿ, ಜಿಪಂ ಸಿಇಓ appeared first on Karnataka Kahale.

]]>

ಬಳ್ಳಾರಿ,ಮೇ 10: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಅಂಗವಾಗಿ ಮೇ 10 ರಂದು ಬುಧವಾರ ನಡೆದ ಮತದಾನ ದಿನದಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಮತಗಟ್ಟೆ 123 ರ ಸರಳಾದೇವಿ ಸತೀಶ್ಚಂದ್ರ ಅಗರ್‍ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರದಿ ಸಾಲಿನಲ್ಲಿ ನಿಂತು ತಮ್ಮ ಮತದಾನ ಹಕ್ಕು ಚಲಾಯಿಸಿದರು.
ಮತ ಹಕ್ಕು ಚಲಾಯಿಸಿ ಬಳಿಕ ಮತನಾಡಿದ ಅವರು, ಪ್ರಜಾಪ್ರಭುತ್ವ ಹಬ್ಬದಲ್ಲಿ ನನ್ನ ಮತದ ಹಕ್ಕನ್ನು ಚಲಾಯಿಸಿದ್ದೇನೆ. ಜಿಲ್ಲೆಯ ಎಲ್ಲಾ ಕ್ಷೇತ್ರದ ಮತದಾರರು ತಮ್ಮ ಮತವನ್ನು ಚಲಾಯಿಸಿರಿ ಎಂದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಮತಗಟ್ಟೆ ಸಂಖ್ಯೆ 128 ರ ರೈಲ್ವೆ ಕಾಲೋನಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಹಕ್ಕು ಚಲಾಯಿಸಿದರು.
——

The post ಬಳ್ಳಾರಿ: ಮತ ಚಲಾಯಿಸಿದ ಡಿಸಿ, ಜಿಪಂ ಸಿಇಓ appeared first on Karnataka Kahale.

]]>
ಬಳ್ಳಾರಿ ಜಿಲ್ಲೆಯಲ್ಲಿ ಶಾಂತಿಯುತ, ಶೇ.75.47 ಮತದಾನ https://www.karnatakakahale.com/news/12133 Wed, 10 May 2023 17:13:03 +0000 https://www.karnatakakahale.com/?p=12133 ಬಳ್ಳಾರಿ,ಮೇ 10: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ 1,222 ಮತಗಟ್ಟೆಗಳಲ್ಲಿ ಬುಧವಾರ(ಮೇ 10)ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಶೇ.75.47 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ. ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ –…

The post ಬಳ್ಳಾರಿ ಜಿಲ್ಲೆಯಲ್ಲಿ ಶಾಂತಿಯುತ, ಶೇ.75.47 ಮತದಾನ appeared first on Karnataka Kahale.

]]>
ಬಳ್ಳಾರಿ,ಮೇ 10: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ 1,222 ಮತಗಟ್ಟೆಗಳಲ್ಲಿ ಬುಧವಾರ(ಮೇ 10)ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಶೇ.75.47 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.


ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ – ಶೇ.84.43, ಸಿರಗುಪ್ಪ-ಶೇ.73.30, ಬಳ್ಳಾರಿ ಗ್ರಾಮೀಣ- ಶೇ. 76.10, ಬಳ್ಳಾರಿ ನಗರ-ಶೇ. 67.96 ಮತ್ತು ಸಂಡೂರು ಕ್ಷೇತ್ರದಲ್ಲಿ ಶೇ.77.07 ಮತದಾನವಾಗಿದೆ.
ಬೆಳಗ್ಗೆ 7 ಗಂಟೆಯಿಂದಲೇ ಪ್ರಾರಂಭಗೊಂಡ ಮತದಾನ, ಆರಂಭದಲ್ಲಿ ಬಿರುಸಿನಿಂದ, ಮಧ್ಯಾಹ್ನ ಮಂದಗತಿಯಲ್ಲಿ ನಂತರ ಸಂಜೆ ಮತ್ತೆ ಬಿರುಸಿನಿಂದ ಸಾಗಿತು. ಮತದಾರರ ಆಕರ್ಷಿಸಲು ಜಿಲ್ಲಾಡಳಿತದಿಂದ 5 ಕ್ಷೇತ್ರಗಳಲ್ಲಿ ವಿಭಿನ್ನ ಪರಿಕಲ್ಪನೆಯ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಸಖಿ ಮತಗಟ್ಟೆ, ಯುವ ಮತಗಟ್ಟೆ, ವಿಕಲಚೇತನ ಮತಗಟ್ಟೆ ಹಾಗೂ ಪರಿಸರ ಸ್ನೇಹಿ, ಸಾಂಪ್ರದಾಯಿಕ ಮತ್ತು ವಿಷಯಾಧಾರಿತ ಮತಗಟ್ಟೆ ತೆರೆದು ಮತದಾನಕ್ಕೆ ಪ್ರೇರಣೆಯಾದವು.


ಜಿಲ್ಲೆಯಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ 676 ಮತಗಟ್ಟೆ ಕೇಂದ್ರ, ನಗರ, ಪಟ್ಟಣ ಪ್ರದೇಶದಲ್ಲಿ 515 ಮತಗಟ್ಟೆ ಕೇಂದ್ರಗಳು ಸೇರಿ ಒಟ್ಟು 1,222 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಕಂಪ್ಲಿ-240, ಸಿರಗುಪ್ಪ-227, ಬಳ್ಳಾರಿ ಗ್ರಾಮೀಣ-242, ಬಳ್ಳಾರಿ ನಗರ-262 ಹಾಗೂ ಸಂಡೂರು ಕ್ಷೇತ್ರದ 251 ಮತಗಟ್ಟೆಗಳಲ್ಲಿ ಮತದಾನವು ಬಹುತೇಕ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಶಾಂತಿಯುತವಾಗಿ ನಡೆಯಿತು.
ಕ್ಷೇತ್ರವಾರು ಮತದಾರರ ವಿವರ:
ಕಂಪ್ಲಿ ವಿಧಾನಸಭಾ ಕ್ಷೇತ್ರ: 91-ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 1,06,528 ಪುರುಷ ಮತದಾರರು, 1,07,882 ಮಹಿಳೆ ಮತದಾರರು ಹಾಗೂ 29 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು 2,14,439 ಮತದಾರರಿದ್ದಾರೆ. ಅದರಲ್ಲಿ 8,084 ಯುವ ಮತದಾರರು, 2,509 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 4,331 ವಿಶೇಷ ಚೇತನ ಮತದಾರರಿದ್ದಾರೆ.
ಸಿರುಗುಪ್ಪ ವಿಧಾನಸಭಾ ಕ್ಷೇತ್ರ: 92-ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ 1,06,789 ಪುರುಷ ಮತದಾರರು, 1,10,354 ಮಹಿಳೆ ಮತದಾರರು ಹಾಗೂ 38 ಜನ ಇತರೆ ಮತದಾರರಿದ್ದು, ಒಟ್ಟು 2,17,181 ಮತದಾರರಿದ್ದಾರೆ. ಅದರಲ್ಲಿ 7,024 ಯುವ ಮತದಾರರು, 3,128 ಜನ 80 ವರ್ಷ ಮೇಲ್ಪಟ್ಟ ಮತದಾರರು, 3,696 ವಿಶೇಷಚೇತನ ಮತದಾರರಿದ್ದಾರೆ.


ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ: 93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕೇತ್ರದಲ್ಲಿ 1,16,096 ಪುರುಷ ಮತದಾರರು, 1,22,181 ಮಹಿಳೆ ಮತದಾರರು ಹಾಗೂ 49 ಜನ ಇತರೆ ಮತದಾರರಿದ್ದು, ಒಟ್ಟು 2,38,326 ಮತದಾರರಿದ್ದಾರೆ. ಅದರಲ್ಲಿ 7,940 ಯುವ ಮತದಾರರು, 3,436 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 3,001 ವಿಶೇಷ ಮತದಾರಿದ್ದಾರೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ: 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 1,26,067 ಪುರುಷ ಮತದಾರರು, 1,33,087 ಮಹಿಳೆ ಮತದಾರರು ಮತ್ತು 30 ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಸೇರಿ ಒಟ್ಟು 2,59,184 ಮತದಾರರಿದ್ದಾರೆ.


ಅದರಲ್ಲಿ 8,432 ಯುವ ಮತದಾರರು, 4,691 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 1,383 ವಿಶೇಷ ಚೇತನ ಮತದಾರರಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರ: 95-ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 1,11,839 ಪುರುಷ ಮತದಾರರು, 1,11,416 ಮಹಿಳೆ ಮತದಾರರು ಮತ್ತು ಇತರೆ 26 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಒಳಗೊಂಡು ಒಟ್ಟು 2,23,281 ಮತದಾರರಿದ್ದಾರೆ. ಈ ಪೈಕಿ 7,879 ಯುವ ಮತದಾರರು, 3,081 ಜನ ವಯಸ್ಕ ಮತದಾರರು, 2,694 ವಿಶೇಷಚೇತನ ಮತದಾರರಿದ್ದಾರೆ.
2018 ರಲ್ಲಿ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರದಲ್ಲಿ ಶೇ.77.65, ಸಿರುಗುಪ್ಪ ಕ್ಷೇತ್ರ-ಶೇ.74.59, ಬಳ್ಳಾರಿ ಗ್ರಾಮೀಣ-ಶೇ.74.25, ಬಳ್ಳಾರಿ ನಗರ-ಶೇ.64.44 ಮತ್ತು ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.74.44 ರಷ್ಟು ಅಂದರೆ ಒಟ್ಟಾರೆ ವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಶೇ.73.07 ರಷ್ಟು ಮತದಾನವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
——-

The post ಬಳ್ಳಾರಿ ಜಿಲ್ಲೆಯಲ್ಲಿ ಶಾಂತಿಯುತ, ಶೇ.75.47 ಮತದಾನ appeared first on Karnataka Kahale.

]]>
ರಾಜ್ಯದಲ್ಲಿ ಕಾಂಗ್ರೆಸ್ ಅಲೆ: 130 ರಿಂದ 150 ಸ್ಥಾನ ಪಡೆದು ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲಿದೆ – ಕೆಪಿಸಿಸಿ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ https://www.karnatakakahale.com/news/12109 Sun, 07 May 2023 07:52:10 +0000 https://www.karnatakakahale.com/?p=12109 ಬಳ್ಳಾರಿ, ಮೇ 7: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು ಈ ಬಾರಿಯ ವಿಧಾನ‌ಸಭಾ ಚುನಾವಣೆಯಲ್ಲಿ 130 ರಿಂದ 150 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು…

The post ರಾಜ್ಯದಲ್ಲಿ ಕಾಂಗ್ರೆಸ್ ಅಲೆ: 130 ರಿಂದ 150 ಸ್ಥಾನ ಪಡೆದು ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲಿದೆ – ಕೆಪಿಸಿಸಿ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ appeared first on Karnataka Kahale.

]]>
ಬಳ್ಳಾರಿ, ಮೇ 7: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು ಈ ಬಾರಿಯ ವಿಧಾನ‌ಸಭಾ ಚುನಾವಣೆಯಲ್ಲಿ 130 ರಿಂದ 150 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಈಗಾಗಲೇ ತನ್ನ ಸೋಲನ್ನು ಒಪ್ಪಿಕೊಂಡಿದೆ. ಸೋಲುವ ಭಯ ಇರುವುದರಿಂದ ಪ್ರಧಾನಿ ನರೇಂದ್ರ‌ಮೋದಿ ಅವರು ನವ ದೆಹಲಿಯನ್ನು ಬಿಟ್ಟು ಕರ್ನಾಟಕವನ್ನು ದೇಶದ ರಾಜಧಾನಿಯನ್ನಾಗಿ ಮಾಡಿ ಕೊಂಡಿದ್ದಾರೆ ಎಂದು ವ್ಯಂಗವಾಡಿದರು.
ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ. ಈ ಕಾರಣಕ್ಕೆ ಮೋದಿ ಅವರು ಕರ್ನಾಟಕವನ್ನೇ ತಮ್ಮ ಮನೆ ಮಾಡಿಕೊಂಡಿದ್ದಾರೆ.
ಟ್ರಂಪ್ ಗೆ ಅದ ಗತಿಯೇ ಕರ್ನಾಟಕ ಬಿಜೆಪಿಗೆ ಆಗಲಿದೆ ಎಂದು ಲೇವಡಿ ಮಾಡಿದ ಉಗ್ರಪ್ಪ, ನರೇಂದ್ರ ಮೋದಿ ಅವರು ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರಂಪ್ ಪರ ಚುನಾವಣಾ ಪ್ರಚಾರ ಮಾಡಿದ್ದರು. ಟ್ರಂಪ್ ಸೋತಿದ್ದರು. ಆ ಫಲಿತಾಂಶವೇ ರಾಜ್ಯದಲ್ಲಿ ಬಿಜೆಪಿಗೂ ಬರಲಿದೆ ಎಂದರು.


ಬಳ್ಳಾರಿಯಲ್ಲಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಮುತ್ಸದ್ಧಿತನದಿಂದ ಕೂಡಿರಲಿಲ್ಲ. ಸ್ಥಳೀಯ, ರಾಜ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಸ್ತಾಪಿಸದೇ ಕೇರಳ ಸ್ಟೋರಿ ಚಲನ ಚಿತ್ರದ ಬಗ್ಗೆ ಮಾತನಾಡಿದ್ದು ಅವರ ಪ್ರಧಾನಿ ಶೋಭೆ ತರುವಂತದ್ದಲ್ಲ ಎಂದು ಹೇಳಿದರು.
ಬಿಜೆಪಿ ಎಲ್ಲಾ ಮೌಲ್ಯಗಳನ್ನು, ಕಾನೂನು ಮೀರಿ ರೋಡ್ ಶೋ ನಡೆಸುತ್ತಿದೆ ಎಂದು ದೂರಿದ ಅವರು 58 ಸಾವಿರ ಕೇಂದ್ರಗಳಲ್ಲಿ ವರ್ಚುವಲ್ ಮೀಟಿಂಗ್ ಆಯೋಜಿಸಲು ರಾಜ್ಯ ಚುನಾವಣಾ ಅಧಿಕಾರಿಗಳ ಅನುಮತಿಯನ್ನೇ ಪಡೆದಿರುವುದಿಲ್ಲ. ಈ ಕುರಿತು ದೆಹಲಿಯಲ್ಲಿ ಕೇಂದ್ರ ಚುನಾವಣಾಧಿಕಾರಿಗಳಿಗೆ ತಮ್ಮ ಪಕ್ಷದ ಮುಖಂಡರು ದೂರು ಸಲ್ಲಿಸಿದ್ದಾರೆ ಎಂದರು.
ರೋಡ್ ಶೋ ನಡೆಯುವ ಎಲ್ಲಾ ಕಡೆಯೂ ಅನುಮತಿ‌ ಪಡೆಯಬೇಕು. ಇದಕ್ಕೆ ಆಗುವ ಖರ್ಚನ್ನು ಆಯಾ ಕ್ಷೇತ್ರದ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಚುನಾವಣೆ ಸತ್ಯ ಅಸತ್ಯಗಳ ನಡುವಿನ ಸಂಘರ್ಷ ಎಂದು ವ್ಯಾಖ್ಯಾನಿಸಿದ ಉಗ್ರಪ್ಪ ಅವರು ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಪ್ರಧಾನಿಗಳು ಜಿಲ್ಲೆಯ‌ ನಿರುದ್ಯೋಗದ ಸಮಸ್ಯೆ, ಆಪರೇಲ್‌ ಪಾರ್ಕ್, ರೈತರ ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಬಗ್ಗೆ ಮಾತನಾಡದೇ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಆಂಧ್ರಪ್ರದೇಶ ರಾಜ್ಯ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಸಾಕೆ ಶೈಲಜಾನಾಥ್, ಮಹಾರಾಷ್ಟ್ರದ ಮಾಜಿ ಸಚಿವ ವಸಂತ್ ರಾವ್ ಪೂರ್ಕೇ, ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ವಿ.ಶಿವಯೋಗಿ, ಬಳ್ಳಾರಿ ಗ್ರಾಮಾಂತರ -93 ವಿಧಾನಸಭಾ ಕ್ಷೇತ್ರದ ವೀಕ್ಷಕರು ಹಾಗೂ ಗುಂಟೂರಿನ ಮಾಜಿ ಶಾಸಕ ಶೈಕ್ ಮಸ್ತಾನ್ ವಲಿ, ತಮಿಳುನಾಡು ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಶೈಕ್ ಅಸ್ಲಾಂ ಭಾಷಾ, ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಜಂಟಿ ಸಂಯೋಜಕರಾದ ವೆಂಕಟೇಶ್ ಹೆಗಡೆ, ಕೆಪಿಸಿಸಿ ಸದಸ್ಯ ಕಲ್ಲುಕಂಭ ಪಂಪಾಪತಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಂತಿ ನೋಹ ವಿಲ್ಸನ್, ಐ.ಎನ್.ಟಿ.ಯು.ಸಿ ವಿಭಾಗದ ಅಧ್ಯಕ್ಷ ಕೆ.ತಾಯಪ್ಪ, ಕಾಂಗ್ರೆಸ್ ಮುಖಂಡ ಕಂದಾರಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
*****

The post ರಾಜ್ಯದಲ್ಲಿ ಕಾಂಗ್ರೆಸ್ ಅಲೆ: 130 ರಿಂದ 150 ಸ್ಥಾನ ಪಡೆದು ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲಿದೆ – ಕೆಪಿಸಿಸಿ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ appeared first on Karnataka Kahale.

]]>
ಕರ್ನಾಟಕವನ್ನು ದೇಶದಲ್ಲಿ ನಂ. 1 ಮಾಡುವುದು ಬಿಜೆಪಿ ಸಂಕಲ್ಪ -ಪ್ರಧಾನಿ ನರೇಂದ್ರ ಮೋದಿ https://www.karnatakakahale.com/news/12096 Sat, 06 May 2023 09:16:05 +0000 https://www.karnatakakahale.com/?p=12096 ಬಳ್ಳಾರಿ,ಮೇ‌ 6: ಬಿಜೆಪಿಯ 2023ರ ಪ್ರಜಾ ಪ್ರಣಾಳಿಕೆ ರಾಜ್ಯವನ್ನು ನಂ. 1 ಮಾಡುವ ರೋಡ್‌ ಮ್ಯಾಪ್‌ ಆಗಿದ್ದರೆ ಕಾಂಗ್ರೆಸ್‌ ಪ್ರಣಾಳಿಕೆ ಕೇವಲ ತುಷ್ಟೀಕರಣದ ಸಾವಿರ ಸುಳ್ಳಿನ ಕಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದರು. ನಗರದಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ…

The post ಕರ್ನಾಟಕವನ್ನು ದೇಶದಲ್ಲಿ ನಂ. 1 ಮಾಡುವುದು ಬಿಜೆಪಿ ಸಂಕಲ್ಪ -ಪ್ರಧಾನಿ ನರೇಂದ್ರ ಮೋದಿ appeared first on Karnataka Kahale.

]]>
ಬಳ್ಳಾರಿ,ಮೇ‌ 6: ಬಿಜೆಪಿಯ 2023ರ ಪ್ರಜಾ ಪ್ರಣಾಳಿಕೆ ರಾಜ್ಯವನ್ನು ನಂ. 1 ಮಾಡುವ ರೋಡ್‌ ಮ್ಯಾಪ್‌ ಆಗಿದ್ದರೆ ಕಾಂಗ್ರೆಸ್‌ ಪ್ರಣಾಳಿಕೆ ಕೇವಲ ತುಷ್ಟೀಕರಣದ ಸಾವಿರ ಸುಳ್ಳಿನ ಕಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದರು.
ನಗರದಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಕಾಂಗ್ರೆಸ್ ಘೋಷಣಾ ಪತ್ರ ಸುಳ್ಳು ಭರವಸೆಗಳಿಂದ ಕೂಡಿದೆ. ಕರ್ನಾಟಕ ದೇಶದ ನಂ. 1 ರಾಜ್ಯವಾಗಬೇಕಾದರೆ ಭದ್ರತೆ, ಕಾನೂನು ಸುವ್ಯವಸ್ಥೆ ಅತ್ಯಂತ ಮುಖ್ಯ. ಬಿಜೆಪಿ ಯಾವುದೇ ಶಕ್ತಿ ಗಳೊಂದಿಗೆ ರಾಜಿ ಮಾಡಿಕೊಳ್ಳದೇ ರಾಜ್ಯವನ್ನು ನಂ.1 ಮಾಡುವ ಗುರಿ ಹೊಂದಿದೆ ಎಂದರು.
ಚುನಾವಣೆಗಳಲ್ಲಿ ಸುಳ್ಳು ಸಮೀಕ್ಷೆಗಳನ್ನು ಮಾಡಿಸಿ ದೇಶದ ಜನರನ್ನು ಕಾಂಗ್ರೆಸ್ ವಂಚಿಸುತ್ತಿದೆ.
ಸುಳ್ಳು ಸಮೀಕ್ಷೆಗಳಿಂದ, ಹಣಬಲದಿಂದ ಗೆಲ್ಲಲು ಯತ್ನಿಸುತ್ತಿದೆ ಎಂದು ನರೇಂದ್ರ ಮೋದಿ ಆಪಾದಿಸಿದರು.
ಸ್ವಾತಂತ್ರ್ಯದ ಬಳಿಕ ದೇಶದ ವ್ಯವಸ್ಥೆಗಳ ಜೊತೆ ರಾಜನೀತಿಯನ್ನೂ ಕಾಂಗ್ರೆಸ್ ಭ್ರಷ್ಟ ಮಾಡಿತ್ತು ಎಂದು ಆರೋಪಿಸಿದರು.
ಮನುಷ್ಯ ವಿರೋಧಿ ಆತಂಕವಾದದ ಎದುರು ತನ್ನ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಮಂಡಿಯೂರಿದೆ.
ಉಗ್ರವಾದದಿಂದ ಉದ್ಯೋಗ, ಕೃಷಿಗೆ ಹಿನ್ನಡೆಯಾಗಿದೆ.
ಆತಂಕವಾದದ ವಿರುದ್ಧ ಒಂದು ಶಬ್ದವನ್ನು ಕಾಂಗ್ರೆಸ್ ಪಕ್ಷ ಮಾತನಾಡುತ್ತಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬಿಡುಗಡೆಗೆ ಮುನ್ನವೇ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಕೇರಳ ಫೈಲ್ಸ್ ಚಲನಚಿತ್ರದ ವಿರುದ್ಧ ಕಾಂಗ್ರೆಸ್ ಪಕ್ಷ ಮಾತನಾಡುತ್ತಿದ್ದು ನಿರ್ಧಿಷ್ಟ ಸಮುದಾಯದ ತುಷ್ಟೀಕರಣದ ರಾಜಕೀಯವನ್ನು ಮುಂದುವರೆಸಿದೆ. ಕಾಂಗ್ರೆಸ್ ಪಕ್ಷ ತನ್ನ ವೋಟ್ ಬ್ಯಾಂಕ್ ರಕ್ಷಣೆಗಾಗಿ ತುಷ್ಟೀಕರಣವನ್ನು ಮಾಡುತ್ತಲೇ ಉಗ್ರವಾದವನ್ನು ಬೆಂಬಲಿಸಿದೆ ಎಂದು ಆರೋಪಿಸಿದರು.
ಕಳೆದ ಹಲವು ವರ್ಷಗಳಿಂದ ಆತಂಕವಾದದ ಸ್ವರೂಪವೇ ಬದಲಾಗಿದೆ. ಸ್ಮಗ್ಲಿಂಗ್, ಡ್ರಗ್ಸ್ ವ್ಯವಹಾರದಂಥ ಅಕ್ರಮಗಳು ಇಂದು ಉಗ್ರವಾದದ ಜೊತೆಗೆ ನಂಟು ಬೆಸೆದುಕೊಂಡಿವೆ ಎಂದರು.
ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ ಮೋದಿ ಅವರು, “ಈ ಹಿಂದೆ, ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ತಮ್ಮ ಸರ್ಕಾರ ದೆಹಲಿಯಿಂದ 100 ಪೈಸೆಯನ್ನು ಯಾವುದಾದರೂ ಯೋಜನೆಗೆ ಕಳಿಸಿದರೆ ಅದು ಬಡವರನ್ನು ತಲುವಷ್ಟರಲ್ಲಿ 15 ಪೈಸೆಗೆ ಇಳಿಯುತ್ತದೆ ಎಂದಿದ್ದರು. ಕೇಂದ್ರ ಸರ್ಕಾರ ಯೋಜನೆಗಳಿಗೆ ಕೊಡಲಾಗುವ 100ರಷ್ಟು ಅನುದಾನದಲ್ಲಿ ಶೇ. 85ರಷ್ಟು ಹಣವನ್ನು ಜನತೆಗೆ ತಲುಪುತ್ತಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ 85 ಪರ್ಸೆಂಟ್ ಕಮೀಷನ್ ಪಡೆಯುತ್ತಿತ್ತು ಎಂಬುದು ಗೊತ್ತಾಗುತ್ತದೆ ಎಂದು ಪುನರುಚ್ಚಿಸಿದರು.

ಹಿಂದುಳಿದ ಎಲ್ಲಾ ವರ್ಗಗಳ ಅಭಿವೃದ್ಧಿ ಕೇವಲ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದ ಅವರು, “ಇಂದಿನ ಸಮಾವೇಶದಲ್ಲಿ ಬಂಜಾರ, ಲಂಬಾಣಿ, ವಾಲ್ಮೀಕಿ, ಎಸ್ಸಿ-ಎಸ್ಟಿ, ಒಬಿಸಿ ಸಮುದಾಯದ ಎಲ್ಲರೂ ಸೇರಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ಈ ಸಮುದಾಯಗಳನ್ನು ಕಾಂಗ್ರೆಸ್ ಅಪಮಾನಿಸಿತ್ತು ಹಾಗೂ ನಿರ್ಲಕ್ಷಿಸಿತ್ತು ಎಂದು ಆರೋಪಿಸಿದರು.
ತಮ್ಮ ನೇತೃತ್ವದ ಕೇಂದ್ರ ಹಾಗೂ ರಾಜ್ಯದಲ್ಲಿರುವ ಯಡಿಯೂರಪ್ಪ, ಬೊಮ್ಮಾಯಿ ಅವರ ಸರ್ಕಾರಗಳು, ಈ ಎಲ್ಲಾ ವರ್ಗಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಿವೆ ಎಂದರು.
ಬಳ್ಳಾರಿ ನಗರದ ಸುಮಾರು ಒಂದೂವರೆ ಲಕ್ಷ ಮನೆಗಳಿಗೆ ನೀರು ಸಿಕ್ಕಿದೆ. ಬಂಜಾರ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿಗಳನ್ನು ರಚನೆ ಮಾಡಲಾಗಿದೆ. ಹಿಂದುಳಿದ ಎಲ್ಲಾ ವರ್ಗಗಳವರಿಗೆ ಮನೆ-ಜಮೀುನುಗಳ ಹಕ್ಕುಪತ್ರ ನೀಡಿದ್ದೇವೆ. ತಾಂಡಾ, ಬಸ್ತಿಗಳಿಗೆ ಗ್ರಾಮದ ದರ್ಜೆ ನೀಡಲಾಗಿದೆ. ಕಾಂಗ್ರೆಸ್ ಇವರನ್ನು ಮರೆತುಬಿಟ್ಟಿತ್ತು ಎಂದು ಪ್ರಧಾನಿ ತಿಳಿಸಿದರು.
ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಅರ್ಜಿ ಸ್ವೀಕಾರವಾಗಿದೆ
ಬಳ್ಳಾರಿಯನ್ನು ಸ್ಟೀಲ್ ಸಿಟಿಯನ್ನಾಗಿ ಪರಿವರ್ತಿಸಲಾಗುವುದು ಎಂದರು.
ಸಚಿವ ಬಿ.ಶ್ರೀರಾಮುಲು, ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಸಂಸದ ವೈ.ದೇವೆಂದ್ರಪ್ಪ, ಜಿಲ್ಲಾ ಬಿಜೆಪಿ ಮುಖಂಡ ಅನಿಲ್ ನಾಯ್ಡು ಮತ್ತಿತರರು ನರೇಂದ್ರ‌ಮೋದಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸಿರುಗುಪ್ಪ , ಕಂಪ್ಲಿ, ಸಂಡೂರು ಬಿಜೆಪಿ ಅಭ್ಯರ್ಥಿಗಳು ವೇದಿಕೆಯಲ್ಲಿದ್ದರು.
ಸಮಾವೇಶದಲ್ಲಿ ಶ್ರೀ ರಾಮುಲು ಜತೆ ಆತ್ಮೀಯವಾಗಿ ಬೆರೆತ ಮೋದಿ ಅವರು ಹೆಗಲು ಮೇಲೆ‌ ಕೈ ಹಾಕಿ ಮಾತನಾಡಿದ್ದನ್ನು ಕಂಡ ಕಾರ್ಯಕರ್ತರು ಸಂತೋಷ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲೆಗೆ ಆಂಜನೇಯ ಆಶೀರ್ವಾದ ಇದೆ. ಹುಲಿಕುಂಟೆರಾಯನ ಶತಕೋಟಿ ನಮನ, ನಿನ್ನೆ ರಾತ್ರಿ
ಮಳೆ ಬಂದಿದ್ದರೂ ಉತ್ಸಾಹದಿಂದ ಸಮಾವೇಶದಲ್ಲಿ ಪಾಲ್ಗೊಂಡಿರುವ ಕಾರ್ಯಕರ್ತರು, ಅಭಿಮಾನಿಗಳ ಹುಮ್ಮಸ್ಸು ಫಲಿತಾಂಶವನ್ನು ತಿಳಿಸುತ್ತದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.
*****

The post ಕರ್ನಾಟಕವನ್ನು ದೇಶದಲ್ಲಿ ನಂ. 1 ಮಾಡುವುದು ಬಿಜೆಪಿ ಸಂಕಲ್ಪ -ಪ್ರಧಾನಿ ನರೇಂದ್ರ ಮೋದಿ appeared first on Karnataka Kahale.

]]>
ನಾರಾ ಭರತ್ ರೆಡ್ಡಿ, ಜೆ ಎನ್ ಗಣೇಶ್ ಪರ ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಉಪಾಧ್ಯಕ್ಷ ಬಿ.ಸಣ್ಣ ಮಾರೆಪ್ಪ ಪ್ರಚಾರ https://www.karnatakakahale.com/news/12081 Fri, 05 May 2023 00:46:24 +0000 https://www.karnatakakahale.com/?p=12081 ಬಳ್ಳಾರಿ, ಮೇ೫: ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಉಪಾಧ್ಯಕ್ಷ ಬಿ.ಸಣ್ಣ ಮಾರೆಪ್ಪ ಅವರು ಬಳ್ಳಾರಿ ನಗರ ಮತ್ತು ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ನಾರಾ ಭರತ್ ರೆಡ್ಡಿ ಮತ್ತು ಜೆ ಎನ್‌ಗಣೇಶ್ ಪರ ಮತ ಯಾಚಿಸಿದರು. ಹನುಮಾನ್ ನಗರ…

The post ನಾರಾ ಭರತ್ ರೆಡ್ಡಿ, ಜೆ ಎನ್ ಗಣೇಶ್ ಪರ ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಉಪಾಧ್ಯಕ್ಷ ಬಿ.ಸಣ್ಣ ಮಾರೆಪ್ಪ ಪ್ರಚಾರ appeared first on Karnataka Kahale.

]]>
ಬಳ್ಳಾರಿ, ಮೇ೫: ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಉಪಾಧ್ಯಕ್ಷ ಬಿ.ಸಣ್ಣ ಮಾರೆಪ್ಪ ಅವರು ಬಳ್ಳಾರಿ ನಗರ ಮತ್ತು ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ನಾರಾ ಭರತ್ ರೆಡ್ಡಿ ಮತ್ತು ಜೆ ಎನ್‌ಗಣೇಶ್ ಪರ ಮತ ಯಾಚಿಸಿದರು.


ಹನುಮಾನ್ ನಗರ 5 ನೇ ವಾರ್ಡ್ ಕಾಕರ್ಲ್ ತೋಟ ಹಾಗೂ ಶ್ರೀಧರ ಗಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅಲೆಮಾರಿ ಗುಡಾರ ಬೇಟಿ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾರೆಪ್ಪ ಅವರು, ಬಿಜೆಪಿ ಸರಕಾರ ಅಲೆಮಾರಿ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಅಲೆಮಾರಿಗಳಿಗೆ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿ ಮಂಜೂರಾದ ಅನುದಾನವನ್ನು ವಾಪಸ್ಸು ಪಡೆದಿದೆ ಎಂದು ದೂರಿದರು.
ಪರಿಶಿಷ್ಟ ಜಾತಿ ವಿಂಗಡನೆಯಲ್ಲಿ, 89 ಸಮುದಾಯಗಳಿಗೆ ಕೇವಲ 1% ನೀಡಿ ಕೇಂದ್ರಕ್ಕೆ ಅವೈಜ್ಞಾನಿಕವಾಗಿ ಶಿಫಾರಸ್ಸು ಮಾಡಿದ್ದು ಅನ್ಯಾಯವಾಗಿದೆ ಮತ್ತು ಮರು ಪರಿಶೀಲನೆ ಆಗಬೇಕಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಗುಜರಾತ್ ಮಾದರಿ ರಾಜಕಾರಣ ಮಾಡುತ್ತಿರುವುದರಿಂದ ಬಡವರು, ಮಾದ್ಯಮ ವರ್ಗದವರ ಬದುಕು ಬೀದಿಗೆ ಬಂದಿದ್ದಾರೆ, ಮಾದ್ಯಮ ವರ್ಗದ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದಾರೆ ಎಂದು ಆತಂಕ‌ ವ್ಯಕ್ತ ಪಡಿಸಿದರು.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ರಾಜ್ಯದ ಎಲ್ಲಾ ಅಲೆಮಾರಿ ಸಮುದಾಯಗಳು ಬೆಂಬಲಿಸ ಬೇಕು ಎಂದು ಹೇಳಿದರು.
ಪ್ರಚಾರ ಕಾರ್ಯದಲ್ಲಿ ಕಾಕರ್ಲ ತೋಟದ ಕುಡುತಿನಿ ಬೀಷಣ್ಣ, ಗಂಗಾಧರ, ಬಳ್ಳಾರಿ ಬುಡ್ಗಜಂಗಮ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ (ಸನ್ನಿ), ರಾಜಶೇಖರ್, ಜಂಬಣ್ಣ ಬಲಗೊಲ್ಲ, ಸುಂಕಪ್ಪ ಮತ್ತಿತರರು ಭಾಗವಹಿಸಿದ್ದರು.
*****

The post ನಾರಾ ಭರತ್ ರೆಡ್ಡಿ, ಜೆ ಎನ್ ಗಣೇಶ್ ಪರ ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಉಪಾಧ್ಯಕ್ಷ ಬಿ.ಸಣ್ಣ ಮಾರೆಪ್ಪ ಪ್ರಚಾರ appeared first on Karnataka Kahale.

]]>
ಬಳ್ಳಾರಿ ಗ್ರಾಮೀಣ: ಸಿಎಂಎಸ್ ಮುಖಂಡರಿಂದ‌ ಬಿ. ನಾಗೇಂದ್ರ ಪರ ಪ್ರಚಾರ https://www.karnatakakahale.com/news/12078 Thu, 04 May 2023 19:01:29 +0000 https://www.karnatakakahale.com/?p=12078 ಬಳ್ಳಾರಿ, ಮೇ. ೫: ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ ಅವರ ಪರವಾಗಿ ಛಲವಾದಿ ಮಹಾಸಭಾ(ಸಿಎಂಎಸ್) ಜಿಲ್ಲಾ‌ ಮುಖಂಡರು ಗುರುವಾರ ತಾಲೂಕಿನ‌ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಸಿಎಂಎಸ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿ. ನರಸಪ್ಪ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು…

The post ಬಳ್ಳಾರಿ ಗ್ರಾಮೀಣ: ಸಿಎಂಎಸ್ ಮುಖಂಡರಿಂದ‌ ಬಿ. ನಾಗೇಂದ್ರ ಪರ ಪ್ರಚಾರ appeared first on Karnataka Kahale.

]]>
ಬಳ್ಳಾರಿ, ಮೇ. ೫: ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ ಅವರ ಪರವಾಗಿ ಛಲವಾದಿ ಮಹಾಸಭಾ(ಸಿಎಂಎಸ್) ಜಿಲ್ಲಾ‌ ಮುಖಂಡರು ಗುರುವಾರ ತಾಲೂಕಿನ‌ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ಸಿಎಂಎಸ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿ. ನರಸಪ್ಪ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಕ್ಷೇತ್ರದ
ವ್ಯಾಪ್ತಿಯಲ್ಲಿ ಬರುವ ಚಾಗನೂರು ಗ್ರಾಮದಲ್ಲಿ ಶಾಸಕ ಬಿ ನಾಗೇಂದ್ರ ಅವರ ಪರವಾಗಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಗಾದಿಲಿಂಗಪ್ಪ ಬಿ ಗೋನಾಳ್, ಡಿ ರಾಮಕೃಷ್ಣ, ಬಸವರಾಜ, ನಾಗರಾಜ ಹಳೆ ಮೋಕ, ಶೇಖಣ್ಣ, ಕಪ್ಪಗಲ್ಲು ಲೋಕೇಶ್, ಮಾನಯ್ಯ ಬಿ ಗೋನಾಳು, ಭಾಗವಹಿಸಿದ್ದರು.
*****

The post ಬಳ್ಳಾರಿ ಗ್ರಾಮೀಣ: ಸಿಎಂಎಸ್ ಮುಖಂಡರಿಂದ‌ ಬಿ. ನಾಗೇಂದ್ರ ಪರ ಪ್ರಚಾರ appeared first on Karnataka Kahale.

]]>
ಕಾವ್ಯ ಕಹಳೆ (ಮತದಾನ ಜಾಗೃತಿ ಗೀತೆ) ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಕ್ಷಣಿಕದಾಸೆ ಬೇಡ! https://www.karnatakakahale.com/news/12065 Wed, 03 May 2023 14:52:08 +0000 https://www.karnatakakahale.com/?p=12065 ಕ್ಷಣಿಕದಾಸೆ ಬೇಡ! ಜನ ಮರುಳೊ ಜಾತ್ರೆ ಮರುಳೊ ಒತ್ತಬೇಡಿ ಹಣವ ಪಡೆದು ಪ್ರಜಾಪ್ರಭುತ್ವದಲ್ಲಿ ನಮ್ಮದೇ ಆಯ್ಕೆ ಇದು ಆಸೆ ಆಮಿಷ ತೊಡೆದುಬಿಡಿ ಇಂದು || ಯಾವುದೇ ಪಕ್ಷದೊಳಿರಲಿ ನಿಷ್ಪಕ್ಷಪಾತ ಪಾರದರ್ಶಕವಾಗಿರಬೇಕು ಈ ಸಮಾಜ ಮತಗಳ ಮಾರಿಕೊಂಡ ಮನುಜ ಯಾವತ್ತೂ ಗುಲಾಮಗಿರಿ, ಇದುವೇ…

The post ಕಾವ್ಯ ಕಹಳೆ (ಮತದಾನ ಜಾಗೃತಿ ಗೀತೆ) ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಕ್ಷಣಿಕದಾಸೆ ಬೇಡ! appeared first on Karnataka Kahale.

]]>

ಕ್ಷಣಿಕದಾಸೆ ಬೇಡ!

ಜನ ಮರುಳೊ ಜಾತ್ರೆ ಮರುಳೊ
ಒತ್ತಬೇಡಿ ಹಣವ ಪಡೆದು
ಪ್ರಜಾಪ್ರಭುತ್ವದಲ್ಲಿ ನಮ್ಮದೇ ಆಯ್ಕೆ ಇದು
ಆಸೆ ಆಮಿಷ ತೊಡೆದುಬಿಡಿ ಇಂದು ||

ಯಾವುದೇ ಪಕ್ಷದೊಳಿರಲಿ ನಿಷ್ಪಕ್ಷಪಾತ
ಪಾರದರ್ಶಕವಾಗಿರಬೇಕು ಈ ಸಮಾಜ
ಮತಗಳ ಮಾರಿಕೊಂಡ ಮನುಜ
ಯಾವತ್ತೂ ಗುಲಾಮಗಿರಿ, ಇದುವೇ ನಿಜ ||

ಒಂದು ದಿನದ ಕಾಸಿಗಾಸೆಪಟ್ಟರೆ
ಮತ್ತೆ ಕಾಯಬೇಕು ಮತದಾರ ಐದು ವರ್ಷ
ಹೆಂಡ ಸಾರಾಯಿಯ ಕುಡಿತದಲ್ಲಿ ಮುಳುಗಿ
ನೀನಾಗಬೇಡಾ ಅನ್ಯಾಯಕ್ಕೆ ದಾಸ ||

ಎಂಜಲಾಸೆಗೆ ಕಟ್ಟುಬಿದ್ದು
ತಂತ್ರಕ್ಕೆ ಸಿಲುಕಿದೆಯೋ, ಆಗುವೆ ನೀ ಅತಂತ್ರ
ನ್ಯಾಯ, ನೀತಿ, ಧರ್ಮದಲ್ಲಿ ನಡೆಯುತಿರು ಸದಾ
ಸಿಕ್ಕೇ ಸಿಗುವುದು ಸ್ಪಷ್ಟ ಸ್ವಾತಂತ್ರ್ಯ ||

-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ

The post ಕಾವ್ಯ ಕಹಳೆ (ಮತದಾನ ಜಾಗೃತಿ ಗೀತೆ) ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಕ್ಷಣಿಕದಾಸೆ ಬೇಡ! appeared first on Karnataka Kahale.

]]>
ಬಳ್ಳಾರಿ ನಗರ ಆರ್ ಪಿ ಐ ಅಭ್ಯರ್ಥಿ ಸಿ.ಶರಣಬಸಪ್ಪ ಮತ ಯಾಚನೆ https://www.karnatakakahale.com/news/12022 Tue, 02 May 2023 06:37:49 +0000 https://www.karnatakakahale.com/?p=12022 ಬಳ್ಳಾರಿ, ಏ.2: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ – ಕರ್ನಾಟಕ ಪಕ್ಷದ ಅಭ್ಯರ್ಥಿ ಸಿ.ಶರಣಬಸಪ್ಪ ಅವರು ಮಂಗಳವಾರ ನಗರದಲ್ಲಿ ಮತ ಯಾಚಿಸಿದರು. ನಗರದ ಡಿಎಆರ್ ಲೇನ್ ಸೇರಿದಂತೆ ಹಲವು‌ ಬಡಾವಣೆಗಳಿಗೆ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ…

The post ಬಳ್ಳಾರಿ ನಗರ ಆರ್ ಪಿ ಐ ಅಭ್ಯರ್ಥಿ ಸಿ.ಶರಣಬಸಪ್ಪ ಮತ ಯಾಚನೆ appeared first on Karnataka Kahale.

]]>
ಬಳ್ಳಾರಿ, ಏ.2: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ – ಕರ್ನಾಟಕ ಪಕ್ಷದ ಅಭ್ಯರ್ಥಿ ಸಿ.ಶರಣಬಸಪ್ಪ ಅವರು ಮಂಗಳವಾರ ನಗರದಲ್ಲಿ ಮತ ಯಾಚಿಸಿದರು.

ನಗರದ ಡಿಎಆರ್ ಲೇನ್ ಸೇರಿದಂತೆ ಹಲವು‌ ಬಡಾವಣೆಗಳಿಗೆ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ಭೇಟಿ ನೀಡಿ ತಮಗೆ ಮತ‌ ನೀಡುವ ಮೂಲಕ ಆಶೀರ್ವದಿಸ ಬೇಕು ಎಂದು ಮನವಿ ಮಾಡಿದರು.

ತಮ್ಮ ಕ್ರಮ ಸಂಖ್ಯೆ 10 ಆಗಿದ್ದು ಗ್ಲಾಸ್ ಟಂಬ್ಲರ್ ಗುರುತಿಗೆ ಮತ ನೀಡಲು ವಿನಂತಿಸಿದರು.
ತಮ್ಮ ಆರ್‌ಪಿ ಐ-ಕರ್ನಾಟಕ ಪಕ್ಷಕ್ಕೆ ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಪಕ್ಷಗಳು ಬೆಂಬಲ‌ ನೀಡಿವೆ ಎಂದು ಶರಣಬಸಪ್ಪ ತಿಳಿಸಿದ್ದಾರೆ.
ಸಂವಿಧಾನದ ಉಳಿವಿಗಾಗಿ, ಶೋಷಿತರು, ರೈತ ಕಾರ್ಮಿಕರ ಏಳಿಗೆಗಾಗಿ ತಮ್ಮ ಪಕ್ಷ ಶ್ರಮಿಸಲಿದೆ ಎಂದರು.
ಕರ್ನಾಟಕ ಡಿಎಸ್ ಎಸ್ (ಭೀಮವಾದ)
ಬಳ್ಳಾರಿ ಜಿಲ್ಲಾ ಸಂಚಾಲಕರಾಗಿ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದು ಶೋಷಿತರು, ಬಡವರು, ಕಾರ್ಮಿಕರ ಕಷ್ಟ ಕಾರ್ಪಣ್ಯಗಳು ತಮಗೆ ಗೊತ್ತಿದ್ದು ಈ ಸಮುದಾಯಗಳ ಏಳ್ಗೆಗೆ ಶ್ರಮಿಸುತ್ತೇನೆ ಎಂದು ಶರಣ ಬಸಪ್ಪ ಹೇಳುತ್ತಾರೆ.

 

The post ಬಳ್ಳಾರಿ ನಗರ ಆರ್ ಪಿ ಐ ಅಭ್ಯರ್ಥಿ ಸಿ.ಶರಣಬಸಪ್ಪ ಮತ ಯಾಚನೆ appeared first on Karnataka Kahale.

]]>
ಬಳ್ಳಾರಿಯಲ್ಲಿ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವಾಣ್ ರೋಡ್ ಶೋ https://www.karnatakakahale.com/news/11991 Sat, 29 Apr 2023 12:33:57 +0000 https://www.karnatakakahale.com/?p=11991 ಬಳ್ಳಾರಿ, ಏ.29: ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಶನಿವಾರ ನಗರಕ್ಕೆ ಆಗಮಿಸಿರುವ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವಾಣ್ ರೋಡ್ ಶೋ ನಡೆಸಿದರು. ಖೂನಿ ಠಾಣಾ ಮಸೀದಿಯಿಂದ ರೋಡ್ ಶೋ ಆರಂಭಿಸಿದ ಚವಾಣ್…

The post ಬಳ್ಳಾರಿಯಲ್ಲಿ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವಾಣ್ ರೋಡ್ ಶೋ appeared first on Karnataka Kahale.

]]>
ಬಳ್ಳಾರಿ, ಏ.29: ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಶನಿವಾರ ನಗರಕ್ಕೆ ಆಗಮಿಸಿರುವ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವಾಣ್ ರೋಡ್ ಶೋ ನಡೆಸಿದರು.
ಖೂನಿ ಠಾಣಾ ಮಸೀದಿಯಿಂದ ರೋಡ್ ಶೋ ಆರಂಭಿಸಿದ ಚವಾಣ್ ಅವರು, ಕೌಲ್ ಬಜಾರ್ ಪ್ರದೇಶದಲ್ಲಿ ತೆರೆದ ವಾಹನದಲ್ಲಿ ಸಂಚರಿಸಿ ಮತಯಾಚಿಸಿದರು.
ಕೌಲ್ ಬಜಾರ್ ಪೊಲೀಸ್ ಠಾಣೆ ಬಳಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು,
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಮತ್ತೇ ಡಬಲ್ ಇಂಜಿನ್ ಸರ್ಕಾರ ಬಂದಂತೆ ಆಗುತ್ತದೆ. ಇದರಿಂದ ರಾಜ್ಯ ದೇಶದ ಅಭಿವೃದ್ಧಿ ಆಗಲಿದೆ ಎಂದರು.
ಮಾಜಿ ಸಂಸದರಾದ ಜಿ.ಶಾಂತ, ಸಣ್ಣ ಫಕ್ಕೀರಪ್ಪ, ಮುಖಂಡ ಗುಜರಿ ಅಜೀಜ್ ಮತ್ತಿತರಿದ್ದರು.
*****

The post ಬಳ್ಳಾರಿಯಲ್ಲಿ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವಾಣ್ ರೋಡ್ ಶೋ appeared first on Karnataka Kahale.

]]>
ಬಳ್ಳಾರಿಯಲ್ಲಿ ರಾಹುಲ್‌ಗಾಂಧಿ ಭರ್ಜರಿ ರೋಡ್ ಷೋ: ನಾರಾ ಭರತ್ ರೆಡ್ಡಿ, ಬಿ. ನಾಗೇಂದ್ರ ಪರ ಪ್ರಚಾರ https://www.karnatakakahale.com/news/11980 Fri, 28 Apr 2023 13:59:20 +0000 https://www.karnatakakahale.com/?p=11980 ಬಳ್ಳಾರಿ,ಏ.28: ಅಖಿಲ‌ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಧುರೀಣ ರಾಹುಲ್ ಗಾಂಧಿ ಅವರು ಶುಕ್ರವಾರ ಸಂಜೆ‌ ಬಳ್ಳಾರಿ ನಗರ ಮತ್ತು ಗ್ರಾಮೀಣ ಅಭ್ಯರ್ಥಿಗಳ ಪರ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ನಗರದ ಟಿಬಿ ಸ್ಯಾನಿಟೋರಿಯಂ ಗೇಟ್ ನಿಂದ ರೋಡ್ ಶೋ…

The post ಬಳ್ಳಾರಿಯಲ್ಲಿ ರಾಹುಲ್‌ಗಾಂಧಿ ಭರ್ಜರಿ ರೋಡ್ ಷೋ: ನಾರಾ ಭರತ್ ರೆಡ್ಡಿ, ಬಿ. ನಾಗೇಂದ್ರ ಪರ ಪ್ರಚಾರ appeared first on Karnataka Kahale.

]]>

ಬಳ್ಳಾರಿ,ಏ.28: ಅಖಿಲ‌ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಧುರೀಣ ರಾಹುಲ್ ಗಾಂಧಿ ಅವರು ಶುಕ್ರವಾರ ಸಂಜೆ‌ ಬಳ್ಳಾರಿ ನಗರ ಮತ್ತು ಗ್ರಾಮೀಣ ಅಭ್ಯರ್ಥಿಗಳ ಪರ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ನಗರದ ಟಿಬಿ ಸ್ಯಾನಿಟೋರಿಯಂ ಗೇಟ್ ನಿಂದ ರೋಡ್ ಶೋ ಆರಂಭಿಸಿದ ರಾಹುಲ್ ಗಾಂಧಿ ಅವರು ಬೆಳಗಲ್ಲು ರಸ್ತೆ, ಕೌಲ್ ಬಜಾರ್ ಮೂಲಕ ಮೊದಲ ರೈಲ್ವೇ ಗೇಟ್ ವರೆಗೂ ಸಾಗಿದರು. ದಾರಿ ಉದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು, ರಾಹುಲ್ ಗಾಂಧಿ ಅಭಿಮಾನಿಗಳು ಭಾರಿ ಹುರುಪಿನಿಂದ ಸ್ವಾಗತ ಮಾಡಿದರು. ರಾಹುಲ್ ಗಾಂಧಿ, ಕಾಂಗ್ರೆಸ್ ಪರ ಘೋಷಣೆ ಮೊಳಗಿಸಿದರು.
ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ.ನಾಗೇಂದ್ರ ರಾಹುಲ ಗಾಂಧಿ ಪಕ್ಕದಲ್ಲಿ ನಿಂತು ದಾರಿ ಉದ್ದಕ್ಕೂ ಎರಡೂ ಕಡೆ ನಿಂತಿದ್ದ ಮತದಾರರಲ್ಲಿ ಕೈ ಮುಗಿದು ಮತ ಯಾಚನೆ ಮಾಡಿದರು. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಸೇರಿದಂತೆ ಪಕ್ಷದ ಹಲವು ಮುಖಂಡರು ರೋಡ್ ಷೋ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
*****

The post ಬಳ್ಳಾರಿಯಲ್ಲಿ ರಾಹುಲ್‌ಗಾಂಧಿ ಭರ್ಜರಿ ರೋಡ್ ಷೋ: ನಾರಾ ಭರತ್ ರೆಡ್ಡಿ, ಬಿ. ನಾಗೇಂದ್ರ ಪರ ಪ್ರಚಾರ appeared first on Karnataka Kahale.

]]>