ಹಂಪಿ ಉತ್ಸವ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Sat, 14 Feb 2026 03:52:39 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಹಂಪಿ ಉತ್ಸವ – Karnataka Kahale https://www.karnatakakahale.com 32 32 ಇನ್ಮುಂದೆ ಪ್ರತಿ ವರ್ಷ ನ. 3, 4, 5 ರಂದು ಹಂಪಿ ಉತ್ಸವ -ಮುಖ್ಯಮಂತ್ರಿ ಸಿದ್ದರಾಮಯ್ಯ https://www.karnatakakahale.com/news/22321 Sat, 14 Feb 2026 00:37:16 +0000 https://www.karnatakakahale.com/?p=22321 ಹಂಪಿ(ವಿಜಯನಗರ), ಫೆ. 13: ಪ್ರತಿ ವರ್ಷ ನ. 3, 4, 5 ರಂದು ಹಂಪಿ ಉತ್ಸವ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಶುಕ್ರವಾರ ಜನಪ್ರಿಯ ಹಂಪಿ ಉತ್ಸವ 2026 ನ್ನು ಉದ್ಘಾಟಿಸಿ ಮಾತನಾಡಿದರು.                       ರಾಜ್ಯ ಸರ್ಕಾರ ಈ ಬಾರಿಯೂ…

The post ಇನ್ಮುಂದೆ ಪ್ರತಿ ವರ್ಷ ನ. 3, 4, 5 ರಂದು ಹಂಪಿ ಉತ್ಸವ -ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.

]]>

ಹಂಪಿ(ವಿಜಯನಗರ), ಫೆ. 13: ಪ್ರತಿ ವರ್ಷ ನ. 3, 4, 5 ರಂದು ಹಂಪಿ ಉತ್ಸವ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಶುಕ್ರವಾರ ಜನಪ್ರಿಯ ಹಂಪಿ ಉತ್ಸವ 2026 ನ್ನು ಉದ್ಘಾಟಿಸಿ ಮಾತನಾಡಿದರು.                       ರಾಜ್ಯ ಸರ್ಕಾರ ಈ ಬಾರಿಯೂ ಹಂಪಿ ಉತ್ಸವ ವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಮಾಜಿ ಸಚಿವ ದಿ. ಎಂ ಪಿ ಪ್ರಕಾಶ್ ಅವರು ಹಿಂದೆ ಕನ್ನಡ ಮತ್ತು ಸಂಸ್ಕೃತಿಯ ಸಚಿವರಾಗಿದ್ದ ಸಂದರ್ಭದಲ್ಲಿ , ಮೈಸೂರು ದಸರಾ ಉತ್ಸವದ ವಿಜೃಂಭಣೆಯನ್ನು ಮನಗಂಡು, ಇದೇ ರೀತಿಯ ಉತ್ಸವವನ್ನು ಹಂಪಿಯಲ್ಲಿಯೂ ನೆರವೇರಿಸಬೇಕೆಂದು ಆಶಿಸಿದ್ದರು ಎಂದು ಹೇಳಿದರು.
ಎಂ ಪಿ ಪ್ರಕಾಶ್ ಅವರು, ಕನ್ನಡ ನಾಡು ನುಡಿ, ಸಾಹಿತ್ಯಗಳಲ್ಲಿ ಅಪಾರ ಆಸಕ್ತಿ ವಹಿಸಿದ್ದರು. ಈ ರೀತಿಯ ಅದ್ದೂರಿ ಹಂಪಿ ಉತ್ಸವದ ಆಚರಣೆಗೆ ಮೂಲಕಾರಣ ಎಂಪಿ ಪ್ರಕಾಶ್ ಅವರು. ಅವರೊಬ್ಬ ಅಪರೂಪದ ವ್ಯಕ್ತಿ ಎಂದರು.
ಕನ್ನಡ ನಾಡು ನುಡಿಗೆ ಸರ್ಕಾರದ ಪ್ರೋತ್ಸಾಹ: ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಸಂಪತ್ಭರಿತವಾಗಿತ್ತು. ನಮ್ಮ ಸರ್ಕಾರ ಕೂಡ ಸಾಹಿತ್ಯ ಸಂಸ್ಕೃತಿ ಕಲೆ ಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ. ವಿಜಯನಗರ ಕಾಲದಲ್ಲಿ ಸಂಪ್ಭರಿತವಾದ ಹಂಪಿಯ ಹಿರಿಮೆಯನ್ನು ಹಂಪಿ ಉತ್ಸವದಿಂದ ತಿಳಿಯಬಹುದಾಗಿದೆ ಎಂದು ತಿಳಿಸಿದರು.
ವಿದೇಶಿ ಪ್ರವಾಸಿಗ ಅಬ್ದುಲ್ ರಜಾಕ್ , ವಿಜಯನಗರ ಶ್ರೀಮಂತವಾದ ಸ್ಥಳವಾಗಿತ್ತು ಎಂದು ಉಲ್ಲೇಖಿಸಿದ್ದನ್ನು ಮುಖ್ಯಮಂತ್ರಿಗಳು ವಿವರಿಸಿದರು.

ಅಸಮಾನತೆ ನಿವಾರಣೆಯಿಂದ ಸಮಸಮಾಜ ನಿರ್ಮಿಸಲು ಸಾಧ್ಯ: ಸಮಾಜದಲ್ಲಿ ಬಡವ ಶ್ರೀಮಂತ, ಉತ್ತಮ ಮತ್ತು ಕೆಳ ಜಾತಿಗಳೆಂಬ ಬೇಧವಿದೆ. ಡಾ.ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನ ರಚಿಸದಿದ್ದರೆ, ಸಮಾನ ಅವಕಾಶಗಳು ದೊರೆಯಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದ ಅಸಮಾನತೆಯನ್ನು ತೊಡೆದುಹಾಕಿದರೆ ಸಮಸಮಾಜ ನಿರ್ಮಾಣ ಸಾಧ್ಯ. 2013 ರಲ್ಲಿ ಮತ್ತು 2023 ರಲ್ಲಿ ಮುಖ್ಯಮಂತ್ರಿಯಾಗಿ ನಾನು ತಂದಿರುವ ಕಾರ್ಯಕ್ರಮಗಳು ಅಸಮಾನತೆಯ ನಿವಾರಣೆಗೆ ತಂದವುಗಳಾಗಿವೆ. ಸಮಸಮಾಜ ನಿರ್ಮಿಸಿದಾಗ ಮಾತ್ರ ದುರ್ಬಲವರ್ಗದವರೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕ ಶಕ್ತಿ: ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ದು, 2023 ರಿಂದಲೂ ಗ್ಯಾರಂಟಿ ಯೋಜನೆಗಳನ್ನು ನೀಡಿ, ಅಸಮಾನತೆಯನ್ನು ನಿವಾರಿಸುವ ಉದ್ದೇಶ ಹೊಂದಿದೆ. ಜನರಿಗೆ ಆರ್ಥಿಕ , ಸಾಮಾಜಿಕ ಶಕ್ತಿಯನ್ನು ಸಾಧ್ಯವಾಗಿಸದೇ ಇದ್ದರೆ, ಜಾತಿ ವ್ಯವಸ್ಥೇ ಹೋಗಲಾಡಿಸಬಹುದು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ಸುಮಾರು 60 ಸಾವಿರ ರೂ.ಗಳ ಆರ್ಥಿಕ ಬಲವನ್ನು ತುಂಬುತ್ತಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತಿದೆ. ಜಾತಿವ್ಯವಸ್ಥೆ ಇಲ್ಲವಾಗಲು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸ್ವಾತಂತ್ರ್ಯ ಬರಬೇಕು ಎಂದರು.
ನಾಡು ನುಡಿ ಸಂಸ್ಕೃತಿಗಳ ರಕ್ಷಣೆಗೆ ಸರ್ಕಾರ ಬದ್ಧ: ಸರ್ಕಾರ ಆಚರಿಸುವ ಚಾಲುಕ್ಯ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಆನೆಗುಂದಿ ಉತ್ಸವ, ಬನವಾಸಿ , ಮೈಸೂರು ದಸರಾ, ಕರಾವಳಿ ಉತ್ಸವ ಗಳ ಮೂಲಕ ನಾಡಿನ ಸಾಹಿತ್ಯ, ಕಲೆ, ಸಂಗೀತ ಪರಂಪರೆಗಳನ್ನು ಸಂರಕ್ಷಿಸುವ ದಿಸೆಯಲ್ಲಿ ಮುಖ್ಯವಾಗಿದೆ. ಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತ ಪರಂಪರೆ ಕೊಂಡೊಯ್ಯವ ದಿಸೆಯಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಸಚಿವರಾದ ಜಮೀರ್ ಅಹ್ಮದ್ ಖಾನ್,ಎಚ್.ಕೆ.ಪಾಟೀಲ್, ಬೈರತಿ ಸುರೇಶ್,‌ ಶಿವರಾಜ್ ತಂಗಡಗಿ, ಮಾಜಿ ಸಚಿವ ಬಿ. ನಾಗೇಂದ್ರ, ಸಂಸದ ತುಕಾರಾಂ, ಶಾಸಕರಾದ ಹೆಚ್. ಆರ್. ಗವಿಯಪ್ಪ, ಜೆ ಎನ್ ಗಣೇಶ್, ನಾರಾ ಭರತ್ ರೆಡ್ಡಿ, ಲತಾ ಮಲ್ಲಿಕಾರ್ಜುನ, ಡಾ. ಶ್ರೀನಿವಾಸ್, ನಾಗರಾಜ್, ನೇಮಿರಾಜ ನಾಯ್ಕ, ಕೃಷ್ಣನಾಯ್ಕ, ಹಿರಿಯ ನಾಯಕರಾದ ಎಚ್.ಎಂ‌ ರೇವಣ್ಣ, ಚಿತ್ರನಟ ಡಾ. ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

The post ಇನ್ಮುಂದೆ ಪ್ರತಿ ವರ್ಷ ನ. 3, 4, 5 ರಂದು ಹಂಪಿ ಉತ್ಸವ -ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.

]]>
ಹಂಪಿ ಉತ್ಸವಕ್ಕೆ ಸಂಭ್ರಮದ ತೆರೆ: ಮೂರು ದಿನಗಳಲ್ಲಿ ಉತ್ಸವದಲ್ಲಿ 12 ಲಕ್ಷಕ್ಕೂ ಹೆಚ್ಚಿನ ಜನರು ಭಾಗಿ https://www.karnatakakahale.com/news/15431 Sun, 04 Feb 2024 18:56:21 +0000 https://www.karnatakakahale.com/?p=15431 ಹಂಪಿ(ವಿಜಯನಗರ).ಫೆ.4: ಮೂರು ದಿನಗಳ ಹಂಪಿ ಉತ್ಸವಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆ ಕಂಡಿತು. ಉತ್ಸವದಲ್ಲಿ 12 ಲಕ್ಷ ಜನರು ಭಾಗಿಯಾಗಿ ಉತ್ಸವವನ್ನು ಅಭೂತಪೂರ್ವವಾಗಿ ಬೆಂಬಲಿಸಿದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ…

The post ಹಂಪಿ ಉತ್ಸವಕ್ಕೆ ಸಂಭ್ರಮದ ತೆರೆ: ಮೂರು ದಿನಗಳಲ್ಲಿ ಉತ್ಸವದಲ್ಲಿ 12 ಲಕ್ಷಕ್ಕೂ ಹೆಚ್ಚಿನ ಜನರು ಭಾಗಿ appeared first on Karnataka Kahale.

]]>

ಹಂಪಿ(ವಿಜಯನಗರ).ಫೆ.4: ಮೂರು ದಿನಗಳ ಹಂಪಿ ಉತ್ಸವಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆ ಕಂಡಿತು. ಉತ್ಸವದಲ್ಲಿ 12 ಲಕ್ಷ ಜನರು ಭಾಗಿಯಾಗಿ ಉತ್ಸವವನ್ನು ಅಭೂತಪೂರ್ವವಾಗಿ ಬೆಂಬಲಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು, ಮೂರು ದಿನಗಳ ಕಾಲ ನಾಡಹಬ್ಬದಂತೆ ಹಂಪಿ ಉತ್ಸವ ಜರುಗಿದೆ. ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹಂಪಿ ಉತ್ಸವಕ್ಕೆ ಯಾವುದೇ ಪಕ್ಷ ಬೇಧ ಇಲ್ಲ. ಎಲ್ಲರೂ ನಮ್ಮ ನಾಡಿನ ಉತ್ಸವ ಎಂದೇ ಪಾಲ್ಗೊಂಡಿದ್ದಾರೆ. ಈ ಹಿಂದಿನ ಎಲ್ಲಾ ಉತ್ಸವಗಳಿಂತಲೂ ಅಧಿಕ ಜನಸ್ತೋಮ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಿದ್ದಾರೆ. ಮೂರು ದಿನದ ನಾಡಹಬ್ಬಕ್ಕೆ ಅಚ್ಚುಕಟ್ಟಾಗಿ ಪೊಲೀಸ್ ಇಲಾಖೆ ಬಂದೋಬಸ್ತ್ ಕಾರ್ಯನಿರ್ವಹಿಸಿದೆ. ಕಿರಿದಾದ ರಸ್ತೆ ಹಾಗೂ ಅಧಿಕ ವಾಹನ ದಟ್ಟಣೆಯಿಂದ ಟ್ರಾಫಿಕ್ಸ್ ಸಮಸ್ಯೆ ಉಂಟಾಗಿದೆ. ಇದು ಕೂಡ ಉತ್ಸವ ಯಶಸ್ಸಿನ ಸೂಚಕ ಎಂದರು. ಹಂಪಿಯ ತುಂಬೆಲ್ಲಾ ಹೋಟೆಲ್ ಸ್ಟಾಲ್‌ಗಳು ರಿಯಾಯಿತಿ ದರದಲ್ಲಿ ಊಟ ಒದಗಿಸಿವೆ. ಇವರ ಸೇವೆ ಆಧರಿಸಿ ಜಿಲ್ಲಾಡಳಿತದಿಂದ ಹೋಟೆಲ್ ಸ್ಟಾಲ್‌ಗಳ ಬಾಡಿಗೆ ಮನ್ನಾ ಮಾಡುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಿಸಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ಕಲೆ, ಸಾಹಿತ್ಯ,ಸಂಸ್ಕೃತಿಯ ಮಹತ್ವ ಸಾರುವ ನಿಟ್ಟಿನಲ್ಲಿ ಹಂಪಿ ಉತ್ಸವ ಆಯೋಜಿಸಲಾಗಿದೆ. ಉತ್ಸವವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಆಯೋಜಿಸಲು ಜನರು ನೀಡುವ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಚಿತ್ರನಟ ವಿ.ರವಿಚಂದ್ರನ್,  ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಮಾಜಿ ಸಚಿವ ಆನಂದ್ ಸಿಂಗ್, ಹಂಪಿ ಗ್ರಾ.ಪಂ. ಅಧ್ಯಕ್ಷ ರಜನಿ ಷಣ್ಮುಖ, ನೆನಪಿರಲಿ ಖ್ಯಾತಿಯ ನಟ ಪ್ರೇಮ್, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸದಾಶಿವಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಸಂಗೀತ ಸಂಯೋಜಕ ಸಾಧು ಕೋಕಿಲ ಇದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು. ವೇದಿಕೆ ಮೇಲೆ ಉತ್ಸವ ಆಯೋಜನೆಯಲ್ಲಿ ಶ್ರಮಿಸಿದ ಎಲ್ಲಾ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
—–

The post ಹಂಪಿ ಉತ್ಸವಕ್ಕೆ ಸಂಭ್ರಮದ ತೆರೆ: ಮೂರು ದಿನಗಳಲ್ಲಿ ಉತ್ಸವದಲ್ಲಿ 12 ಲಕ್ಷಕ್ಕೂ ಹೆಚ್ಚಿನ ಜನರು ಭಾಗಿ appeared first on Karnataka Kahale.

]]>
ಹಂಪಿ ಉತ್ಸವ ಅಂದ್ರೆ ಊರ ಹಬ್ಬವಿದ್ದಂತೆ: ನಟ ವಿ.ರವಿಚಂದ್ರನ್ ಬಣ್ಣನೆ https://www.karnatakakahale.com/news/15424 Sun, 04 Feb 2024 18:37:21 +0000 https://www.karnatakakahale.com/?p=15424   ಹಂಪಿ(ವಿಜಯನಗರ) ಫೆ.4 : ಕುಟುಂಬದವರು ಪ್ರೀತಿಯಿಂದ ಸೇರಲು ಮನೆ ಹಬ್ಬ ಮಾಡುತ್ತೇವೆ. ಆದರೆ, ಇಡೀ ಊರ ಜನರು ಒಗ್ಗೂಡಲು ಮಾಡುವ ಹಬ್ಬ, ಊರ ಹಬ್ಬ ಅಂದ್ರೆ ಅದು ಹಂಪಿ ಉತ್ಸವ ಎಂದು ಹಿರಿಯ ಚಲನಚಿತ್ರ ನಟ ವಿ.ರವಿಚಂದ್ರನ್ ಅವರು ಹಂಪಿ…

The post ಹಂಪಿ ಉತ್ಸವ ಅಂದ್ರೆ ಊರ ಹಬ್ಬವಿದ್ದಂತೆ: ನಟ ವಿ.ರವಿಚಂದ್ರನ್ ಬಣ್ಣನೆ appeared first on Karnataka Kahale.

]]>
 

ಹಂಪಿ(ವಿಜಯನಗರ) ಫೆ.4 : ಕುಟುಂಬದವರು ಪ್ರೀತಿಯಿಂದ ಸೇರಲು ಮನೆ ಹಬ್ಬ ಮಾಡುತ್ತೇವೆ. ಆದರೆ, ಇಡೀ ಊರ ಜನರು ಒಗ್ಗೂಡಲು ಮಾಡುವ ಹಬ್ಬ, ಊರ ಹಬ್ಬ ಅಂದ್ರೆ ಅದು ಹಂಪಿ ಉತ್ಸವ ಎಂದು ಹಿರಿಯ ಚಲನಚಿತ್ರ ನಟ ವಿ.ರವಿಚಂದ್ರನ್ ಅವರು ಹಂಪಿ ಉತ್ಸವವನ್ನು ಬಣ್ಣಿಸಿದರು.
ಹಂಪಿ ಉತ್ಸವ-2024ರ ಸಮಾರೋಪ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡಿದ್ದ ಅವರು ಕಿಕ್ಕಿರಿದು ಸೇರಿದ್ದ ಜನಸ್ತೋಮ ಉದ್ದೇಶಿಸಿ ಮಾತನಾಡಿದರು.
ಹಂಪಿ ಅಂದ್ರೆ ತಮ್ಮ ಮೈ ಝುಮ್ಮೆನ್ನುತ್ತದೆ ಎಂದು ಭಾವುಕರಾದ ಅವರು, ಹಂಪಿಯಲ್ಲಿನ ಒಂದೊಂದು ಶಿಲೆಗಳು ಇಲ್ಲಿನ ಒಂದೊಂದು ಕಥೆ ಹೇಳುತ್ತವೆ. ಇಲ್ಲಿನ ಕಲಾಶಿಲ್ಪ ಅವಿಸ್ಮರಣೀಯವಾಗಿದೆ. ಅಂತಹ ಕಲಾವಿದರ ಸೇವೆಯನ್ನು ಸ್ಮರಿಸುವ ಕಾರ್ಯವನ್ನು ಇಂತಹ ಉತ್ಸವಗಳು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಹಂಪಿ ಸುಮ್ಮನೇ ಆಗಿಲ್ಲ. ಇದಕ್ಕೆ ಅದ್ಭುತ ಇತಿಹಾಸವಿದೆ. ಹಲವರು ಸೇರಿ ನಿರ್ಮಿಸಿದ ಸಂಪತ್ತು ಇದು. ಇದನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಗೊತ್ತಿರೋದು ಪ್ರೀತಿ: ನನಗೆ ಗೊತ್ತಿರೋದು ಕೇವಲ ಪ್ರೀತಿ ಎಂದು ತಿಳಿಸಿದ ರವಿಚಂದ್ರನ್
ಅವರು, ತಾವು ನಟಿಸಿದ ಪ್ರೇಮಲೋಕ ಸಿನೇಮಾಕ್ಕೆ ಇದೀಗ 30 ವರ್ಷ ಆಯ್ತು. ಅದೇ ರೀತಿ ಹಂಪಿ ಉತ್ಸವಕ್ಕು 30 ವರ್ಷವಾಯಿತು. ಹೀಗಾಗಿ ಹಂಪಿ ಉತ್ಸವಕ್ಕು ಮತ್ತು ತಮಗು ಅವಿನಾಭಾವ ಸಂಬಂಧ ಇದೆ ಎಂದರು.
ನಿಮಗೆ ಇಷ್ಟವಾಗುವ ಸಿನೇಮಾ‌ ನಿರ್ಮಾಣ: ಸಿನೇಮಾ ಮಾಡೋದು ಬಿಟ್ಟರೆ ಬೇರೆ ಏನೂ ನನಗೆ ಗೊತ್ತಿಲ್ಲ.
ನನ್ನ ಗೆಲವು ಮತ್ತು ನನ್ನ ಸೋಲು ಜನರ ಕೈಯಲ್ಲಿದೆ ಎಂದು ಭಾವಿಸಿದ್ದೇನೆ. ನಾನು ಯಾವತ್ತೂ ಸೋತಿಲ್ಲ. ಸೋಲನ್ನು ನಾನು ಒಪ್ಪೋಲ್ಲ.
ಒಂದು ಉತ್ತಮ ಕೆಲಸಕ್ಕಾಗಿ ನಾನು ಸಾಕಷ್ಟು ಕಾಯುತ್ತೇನೆ. ಬರುವ ವರ್ಷದೊಳಗೆ
ಮತ್ತೆ ಪ್ರೇಮ ಲೋಕ ಕಟ್ಟಿ ಕೊಡ್ತೇನೆ. ಮನೆಮನೆಯಲ್ಲಿ ಹಾಡು ಕೇಳಬೇಕು. ಹಾಗೆ ಸಿನೇಮಾ‌ ಮಾಡ್ತೇನೆ
ಎಂದು ತಿಳಿಸಿದರು.
ಸಮಾರಂಭದಲ್ಲಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಶಾಸಕರಾದ ಹೆಚ್. ಆರ್. ಗವಿಯಪ್ಪ, ಜಿಲ್ಲಾಧಿಕಾರಿ ದಿವಾಕರ್ ಮತ್ತಿತರ ಗಣ್ಯರು ಇದ್ದರು.
*****

The post ಹಂಪಿ ಉತ್ಸವ ಅಂದ್ರೆ ಊರ ಹಬ್ಬವಿದ್ದಂತೆ: ನಟ ವಿ.ರವಿಚಂದ್ರನ್ ಬಣ್ಣನೆ appeared first on Karnataka Kahale.

]]>
ಹಂಪಿ ಉತ್ಸವಕ್ಕೆ ಅದ್ದೂರಿ ಚಾಲನೆ: ಇತಿಹಾಸ ಗೊತ್ತಿದ್ದವರು, ಬಸವಣ್ಣನ ವಚನ ಕ್ರಾಂತಿ ಅರಿತಿದ್ದವರು ಕೇಂದ್ರದ ಬಿಜೆಪಿಯ ಸುಳ್ಳುಗಳನ್ನು ನಂಬಲು ಸಾಧ್ಯವೇ ಇಲ್ಲ -ಮುಖ್ಯಮಂತ್ರಿ ಸಿದ್ದರಾಮಯ್ಯ https://www.karnatakakahale.com/news/15399 Fri, 02 Feb 2024 18:36:30 +0000 https://www.karnatakakahale.com/?p=15399 ಹಂಪಿ (ಹೊಸಪೇಟೆ) ಫೆ. 2: ಇತಿಹಾಸ ಗೊತ್ತಿದ್ದವರು, ಬಸವಣ್ಣನ ವಚನ ಕ್ರಾಂತಿಯನ್ನು ಅರಿತಿರುವವರು ಕೇಂದ್ರದ ಬಿಜೆಪಿಯ ಸುಳ್ಳುಗಳನ್ನು ನಂಬಲು ಯಾವುದೇ ಕಾರಣಕ್ಕೂ ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಐತಿಹಾಸಿಕ ಹಂಪಿ ಉತ್ಸವವನ್ನು ವೈಭವದ ಕಲಾತ್ಮಕ ವೇದಿಕೆಯಲ್ಲಿ ನಗಾರಿ…

The post ಹಂಪಿ ಉತ್ಸವಕ್ಕೆ ಅದ್ದೂರಿ ಚಾಲನೆ: ಇತಿಹಾಸ ಗೊತ್ತಿದ್ದವರು, ಬಸವಣ್ಣನ ವಚನ ಕ್ರಾಂತಿ ಅರಿತಿದ್ದವರು ಕೇಂದ್ರದ ಬಿಜೆಪಿಯ ಸುಳ್ಳುಗಳನ್ನು ನಂಬಲು ಸಾಧ್ಯವೇ ಇಲ್ಲ -ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.

]]>

ಹಂಪಿ (ಹೊಸಪೇಟೆ) ಫೆ. 2: ಇತಿಹಾಸ ಗೊತ್ತಿದ್ದವರು, ಬಸವಣ್ಣನ ವಚನ ಕ್ರಾಂತಿಯನ್ನು ಅರಿತಿರುವವರು ಕೇಂದ್ರದ ಬಿಜೆಪಿಯ ಸುಳ್ಳುಗಳನ್ನು ನಂಬಲು ಯಾವುದೇ ಕಾರಣಕ್ಕೂ ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಐತಿಹಾಸಿಕ ಹಂಪಿ ಉತ್ಸವವನ್ನು ವೈಭವದ ಕಲಾತ್ಮಕ ವೇದಿಕೆಯಲ್ಲಿ ನಗಾರಿ ಬಾರಿಸುವುದರ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸರ್ಕಾರಕ್ಕೆ ವಿಜಯನಗರ ಕಾಲದ ವೈಭವ ಮತ್ತು ಬಸವಾದಿ ಶರಣರ ಆಶಯಗಳು ಮತ್ತು ಇವರು ಹಾಕಿಕೊಟ್ಟ ಮಾರ್ಗವೇ ಮಾದರಿ. ಆದ್ದರಿಂದ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.
ಬಸವಾದಿ ಶರಣರ, ಅಂಬೇಡ್ಕರ್ ಅವರ ಸಂವಿಧಾನದ ಆಶಯ ಎರಡೂ ಒಂದೇ ಆಗಿದೆ. ಸಹಿಷ್ಣತೆ, ಸಹಬಾಳ್ವೆ, ಸಂಪತ್ತಿನ ಸಮಾನ ಹಂಚಿಕೆ, ಅವಕಾಶಗಳ ಸಮಾನ ಹಂಚಿಕೆ ಬಸವಾದಿ ಶರಣರು ಮತ್ತು ಅಂಬೇಡ್ಕರ್ ಅವರ ಆಶಯವಾಗಿದೆ. ಈಗ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಕರೆ ನೀಡಿದರು.

ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪ್ರೀತಿಸಬೇಕು. ಪರ ಧರ್ಮಗಳನ್ನು ಗೌರವಿಸಬೇಕು. ಧರ್ಮ ಧರ್ಮದ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷ, ವೈಷಮ್ಯ ಹರಡುವವರನ್ನು ತಿರಸ್ಕರಿಸದೇ ಹೋದರೆ ನಾಡಿನ, ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಬಸವಣ್ಣನವರ ಆಶಯದ ಸಹಬಾಳ್ವೆ, ಸಹಿಷ್ಣತೆ ನಮಗೆ, ನಿಮಗೆ ಮಾದರಿಯಾಗಲಿ ಎಂದು ನೆರೆದಿದ್ದ ಜನಸ್ತೋಮಕ್ಕೆ ಮುಖ್ಯಮಂತ್ರಿಗಳು ಕರೆ ನೀಡಿದರು.
ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದರು, ಈಗ ನಮ್ಮದೇ ಗ್ಯಾರಂಟಿಗಳನ್ನು ಕಾಪಿ ಮಾಡಿ ಅದಕ್ಕೆ, “ಮೋದಿ ಗ್ಯಾರಂಟಿ” ಎಂದು ಹೆಸರಿಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳು ವ್ಯಂಗ್ಯವಾಡಿದರು.

ರಾಜ್ಯಕ್ಕೆ ಬರಗಾಲ ಬಂದರೂ ಕೇಂದ್ರದಿಂದ ನಮ್ಮ ಪಾಲಿನ ನಯಾಪೈಸೆ ಇದುವರೆಗೂ ಬಂದಿಲ್ಲ. ಆದರೆ ರಾಜ್ಯ ಸರ್ಕಾರ 30 ಲಕ್ಷ ರೈತರ ಖಾತೆಗೆ ಮೊದಲ ಕಂತಿನ ಪರಿಹಾರದ ಹಣವನ್ನು ಜಮಾ ಮಾಡಿದೆ. ನಮ್ಮ ಗ್ಯಾರಂಟಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳಿಂದ ಪ್ರತೀ ಕುಟುಂಬಕ್ಕೆ ಹಣ ಉಳಿತಾಯ ಆಗಿ ಬರಗಾಲದ ಸಂಕಷ್ಟದಿಂದ ಬಡ ಮತ್ತು ಮಧ್ಯಮ ವರ್ಗದವರನ್ನು ಪಾರು ಮಾಡಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ರಾಜ್ಯಕ್ಕೆ ಕೇಂದ್ರದಿಂದ ತೀವ್ರ ಅನ್ಯಾಯ:
ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ದೊಡ್ಡ ರಾಜ್ಯ ಆಗಿದೆ. ವರ್ಷಕ್ಕೆ 4 ಲಕ್ಷ ಕೋಟಿ ತೆರಿಗೆಯನ್ನು ಕನ್ನಡಿಗರು ಕಟ್ಟುತ್ತಾರೆ. ಆದರೆ ಕೇಂದ್ರದಿಂದ ರಾಜ್ಯಕ್ಕೆ ವಾಪಾಸ್ ಬರುವುದು ಕೇವಲ 50 ಸಾವಿರ ಕೋಟಿ. 15 ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ತೀವ್ರ ಅನ್ಯಾಯ ಆಗಿದೆ. ಈ ಅನ್ಯಾಯವನ್ನು ಪ್ರತಿಭಟಿಸಿ ಫೆ. 7 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ಕರ್ನಾಟಕ ಮತ್ತು ಕನ್ನಡಿಗರ ಹಕ್ಕನ್ನು ಕೇಳಲು, ನಮ್ಮ ಪಾಲನ್ನು ನಮಗೆ ಕೊಡಿ ಎಂದು ಕೇಳಲು ನಡೆಸುತ್ತಿರುವ ಪ್ರತಿಭಟನೆ ಎಂದು ಮುಖ್ಯಮಂತ್ರಿಗಳು ಘೋಷಿಸಿದರು.

ನಮ್ಮ ಕಾರ್ಯಕ್ರಮಗಳು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವ ಮತ್ತು ಮಧ್ಯಮ ವರ್ಗದವರಿಗೆ ತಲುಪುತ್ತಿದೆ. ವಿಜಯನಗರ ಸಾಮ್ರಾಜ್ಯದ ಕಾಲದ ವೈಭವ ಪುನಃ ರಾಜ್ಯದಲ್ಲಿ ಮರುಕಳಿಸಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ ಎಂದರು.
ವಿಜಯನಗರ ಸಾಮ್ರಾಜ್ಯದ ವೈಭವವನ್ನು ಇತಿಹಾಸಕಾರ ಅಬ್ದುಲ್ ರಜಾಕ್ ಚಿತ್ರಿಸಿರುವುದನ್ನು ಉಲ್ಲೇಖಿಸಿ, ಇತಿಹಾಸದ ಅರಿವು ಪ್ರತಿಯೊಬ್ಬರಿಗೂ ಅಗತ್ಯ . ಇತಿಹಾಸ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು ಎಂದರು.‌
ಹಂಪಿ ಗಾಯತ್ರಿ ಪೀಠದ ದಯಾನಂದ ಪುರಿ ಸ್ವಾಮೀಜಿ ದಿವ್ಯ ಸಾನ್ನಿದ್ಯ ವಹಿಸಿ, ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್, ಕ್ರೀಡಾ ಮತ್ತು ಯುವಜನ ಸಭಲೀಕರಣ ಸಚಿವ ನಾಗೇಂದ್ರ, ಕೆಕೆಆರ್ ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್, ಮಾಜಿ ಸಂಸದ ಉಗ್ರಪ್ಪ, ಶಾಸಕರುಗಳಾದ ಈ.ತುಕಾರಾಮ್, ಕಂಪ್ಲಿ ಗಣೇಶ್, ಲತಾ ಮಲ್ಲಿಕಾರ್ಜುನ್, ರಾಘವೇಂದ್ರ ಹಿಟ್ನಾಳ್ , ನಾರಾ ಭರತ್ ರೆಡ್ಡಿ, ಎನ್.ಟಿ. ಶ್ರೀನಿವಾಸ್, ನೇಮರಾಜ ನಾಯ್ಕ್, ಕೃಷ್ಣ ನಾಯ್ಕ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
—–

The post ಹಂಪಿ ಉತ್ಸವಕ್ಕೆ ಅದ್ದೂರಿ ಚಾಲನೆ: ಇತಿಹಾಸ ಗೊತ್ತಿದ್ದವರು, ಬಸವಣ್ಣನ ವಚನ ಕ್ರಾಂತಿ ಅರಿತಿದ್ದವರು ಕೇಂದ್ರದ ಬಿಜೆಪಿಯ ಸುಳ್ಳುಗಳನ್ನು ನಂಬಲು ಸಾಧ್ಯವೇ ಇಲ್ಲ -ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.

]]>
ಹಂಪಿ ಉತ್ಸವ ನಾಡಿನ ಸಾಂಸ್ಕೃತಿಕ ಉತ್ಸವ -ಮುಖ್ಯಮಂತ್ರಿ ಸಿದ್ಧರಾಮಯ್ಯ https://www.karnatakakahale.com/news/15383 Fri, 02 Feb 2024 14:06:30 +0000 https://www.karnatakakahale.com/?p=15383 ಹಂಪಿ(ವಿಜಯನಗರ).ಫೆ.2:  ಜನರಿಗಾಗಿ ಹಾಗೂ ಕಲಾವಿದರ ಹಿತರಕ್ಷಣೆಗಾಗಿ ಉತ್ಸವಗಳನ್ನು ಮಾಡುತ್ತಿದ್ದೇವೆ. ಹಂಪಿ ಉತ್ಸವವು ಒಂದು ಸಾಂಸ್ಕೃತಿಕ ಉತ್ಸವವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು. ಶುಕ್ರವಾರ ಹಂಪಿ‌ ಉತ್ಸವದಲ್ಲಿ ಪಾಲ್ಗೊಳ್ಳಲು ಕನ್ನಡವಿವಿ  ಹೆಲಿಪ್ಯಾಡ್ ಗೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.…

The post ಹಂಪಿ ಉತ್ಸವ ನಾಡಿನ ಸಾಂಸ್ಕೃತಿಕ ಉತ್ಸವ -ಮುಖ್ಯಮಂತ್ರಿ ಸಿದ್ಧರಾಮಯ್ಯ appeared first on Karnataka Kahale.

]]>
ಹಂಪಿ(ವಿಜಯನಗರ).ಫೆ.2:  ಜನರಿಗಾಗಿ ಹಾಗೂ ಕಲಾವಿದರ ಹಿತರಕ್ಷಣೆಗಾಗಿ ಉತ್ಸವಗಳನ್ನು ಮಾಡುತ್ತಿದ್ದೇವೆ. ಹಂಪಿ ಉತ್ಸವವು ಒಂದು ಸಾಂಸ್ಕೃತಿಕ ಉತ್ಸವವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.
ಶುಕ್ರವಾರ ಹಂಪಿ‌ ಉತ್ಸವದಲ್ಲಿ ಪಾಲ್ಗೊಳ್ಳಲು ಕನ್ನಡವಿವಿ  ಹೆಲಿಪ್ಯಾಡ್ ಗೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಬರಗಾಲ ಇದ್ದರೂ ಸಹ ಉತ್ಸವವನ್ನು ಜನರಿಗಾಗಿ, ಕಲಾವಿದರ ಹಿತರಕ್ಷಣೆಗಾಗಿ ಮಾಡುತ್ತಿದ್ದೇವೆ. ಇದೊಂದು ನಾಡಿನ‌‌ ಸಾಂಸ್ಕೃತಿಕ ಉತ್ಸವವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಸತಿ, ವಕ್ಪ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್. ಜಮೀರ ಅಹ್ಮದ್ ಖಾನ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರ, ಶಾಸಕರಾದ ಜೆ.ಎನ್. ಗಣೇಶ, ಬಿ.ಎಂ.ನಾಗರಾಜ, ಎಚ್.ಆರ್. ಗವಿಯಪ್ಪ, ರಾಘವೇಂದ್ರ ಹಿಟ್ನಾಳ, ಅಜೇಯ ಧರ್ಮಸಿಂಗ್, ನಾರಾ ಭರತ್ ರೆಡ್ಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನರಾಜ್ ಸಿಂಗ್, ಐಜಿಪಿ ಲೋಕೇಶಕುಮಾರ, ಜಿಲ್ಲಾಧಿಕಾರಿ ಎಮ್. ಎಸ್. ದಿವಾಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು, ಉಪವಿಭಾಗಾಧಿಕಾರಿ ಮಹದ್ ಅಲಿ ಅಕ್ರಂ ಷಾ, ಮುಖಂಡರಾದ ಭೀಮಾ ನಾಯ್ಕ, ಪಿ.ಟಿ. ಪರಮೇಶ್ವರ ನಾಯ್ಕ ಸೇರಿದಂತೆ ಹಲವರು ಇದ್ದರು.

The post ಹಂಪಿ ಉತ್ಸವ ನಾಡಿನ ಸಾಂಸ್ಕೃತಿಕ ಉತ್ಸವ -ಮುಖ್ಯಮಂತ್ರಿ ಸಿದ್ಧರಾಮಯ್ಯ appeared first on Karnataka Kahale.

]]>
ಹಂಪಿ ಉತ್ಸವದಲ್ಲಿ ಮಿಂಚಿದ ಹಗರಿಬೊಮ್ಮನಹಳ್ಳಿ ಸಂಗೀತ ಸಾಧಕರು https://www.karnatakakahale.com/news/11145 Thu, 02 Feb 2023 07:41:41 +0000 https://www.karnatakakahale.com/?p=11145 ಹಗರಿಬೊಮ್ಮನಹಳ್ಳಿ, ಫೆ2: ಇತ್ತೀಚೆಗೆ ಜರುಗಿದ ಹಂಪಿ ಉತ್ಸವದಲ್ಲಿ ಪಟ್ಟಣದ ಸಂಗೀತ ಶಿಕ್ಷಕಿ ಶಾರದ ಕೊಪ್ಪಳ ಮತ್ತು ಯುವ ಪ್ರತಿಭೆ ಪ್ರದೀಪ್ ಅಕ್ಕಸಾಲಿ ಅವರು ಉತ್ತಮ‌ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ವಿರೂಪಾಕ್ಷೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಶಾರದ ಕೊಪ್ಪಳ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ…

The post ಹಂಪಿ ಉತ್ಸವದಲ್ಲಿ ಮಿಂಚಿದ ಹಗರಿಬೊಮ್ಮನಹಳ್ಳಿ ಸಂಗೀತ ಸಾಧಕರು appeared first on Karnataka Kahale.

]]>

ಹಗರಿಬೊಮ್ಮನಹಳ್ಳಿ, ಫೆ2: ಇತ್ತೀಚೆಗೆ ಜರುಗಿದ ಹಂಪಿ ಉತ್ಸವದಲ್ಲಿ ಪಟ್ಟಣದ ಸಂಗೀತ ಶಿಕ್ಷಕಿ ಶಾರದ ಕೊಪ್ಪಳ ಮತ್ತು ಯುವ ಪ್ರತಿಭೆ ಪ್ರದೀಪ್ ಅಕ್ಕಸಾಲಿ ಅವರು ಉತ್ತಮ‌ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ವಿರೂಪಾಕ್ಷೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಶಾರದ ಕೊಪ್ಪಳ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ರಾಗ ಮುಲ್ತಾನಿಯ ಬಡಖ್ಯಾಲ್ ,ಚೋಟಖ್ಯಾಲ್,ತರಾನ್ ಪ್ರಸ್ತುತ ಪಡಿಸಿದರು. ರೇವಣಸಿದ್ದ ಆಚಾರ್ ತಬಲ ಸಾಥ್, ತಂಬೂರಿ ಸಾಥ್ ಬಿ ಯುವರಾಜಗೌಡ ಮೋರಗೇರಿ ಹಾಗೂ ಬಾಲಪ್ರತಿಭೆ ರವಿಶಂಕರ್ ನೀಡಿದರು.

ಹಂಪಿ ಉತ್ಸವದ ಪ್ರಮುಖ ಗಾಯಿತ್ರಿ ಪೀಠದ ಮುಖ್ಯ ವೇದಿಕೆಯಲ್ಲಿ ಯುವ ಪ್ರತಿಭೆ ಪ್ರದೀಪ್ ಅಕ್ಕಸಾಲಿ ಅವರ ವಯೋಲಿನ್ ಸೋಲೋ ಕಾರ್ಯಕ್ರಮ ನೆರೆದಿದ್ದ ಸಂಗೀತ ಪ್ರಿಯರನ್ನು ಮುದಗೊಳಿಸಿತು.
ತಬಲಾ ದಲ್ಲಿ ಮಲ್ಲಿಕಾರ್ಜುನ ಬಡಿಗೇರ
ಕೀ ಬೋರ್ಡ್ ನಲ್ಲಿ ಶಂಕ್ರಾಚಾರ್,
ತಾನ್ ಪುರ ದಲ್ಲಿ ಉಮಾಪತಿ ಅಕ್ಕಸಾಲಿ ಮತ್ತು ಐಶ್ವರ್ಯ ಪ್ರದೀಪ್ ಸಾಥ್ ನೀಡಿದರು.


*****

The post ಹಂಪಿ ಉತ್ಸವದಲ್ಲಿ ಮಿಂಚಿದ ಹಗರಿಬೊಮ್ಮನಹಳ್ಳಿ ಸಂಗೀತ ಸಾಧಕರು appeared first on Karnataka Kahale.

]]>
ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ “ಹಂಪಿ ಉತ್ಸವ”. -ಸಿಎಂ ಬಸವರಾಜ ಬೊಮ್ಮಾಯಿ https://www.karnatakakahale.com/news/11089 Fri, 27 Jan 2023 18:37:19 +0000 https://www.karnatakakahale.com/?p=11089 ಹಂಪಿ(ವಿಜಯನಗರ ಜಿಲ್ಲೆ),ಜ.27: ಹಂಪಿ ಉತ್ಸವವು ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ. ಕನ್ನಡ ನಾಡನ್ನಾಳಿದ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದಾಗಿರುವ ಮತ್ತು ಇಡೀ ಭಾರತದ ಚರಿತ್ರೆಯಲ್ಲಿಯೇ ಪ್ರಮುಖ ಬದಲಾವಣೆ ತಂದಿರುವುದು ವಿಜಯನಗರ ಸಾಮ್ರಾಜ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಅವರು…

The post ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ “ಹಂಪಿ ಉತ್ಸವ”. -ಸಿಎಂ ಬಸವರಾಜ ಬೊಮ್ಮಾಯಿ appeared first on Karnataka Kahale.

]]>
ಹಂಪಿ(ವಿಜಯನಗರ ಜಿಲ್ಲೆ),ಜ.27: ಹಂಪಿ ಉತ್ಸವವು ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ. ಕನ್ನಡ ನಾಡನ್ನಾಳಿದ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದಾಗಿರುವ ಮತ್ತು ಇಡೀ ಭಾರತದ ಚರಿತ್ರೆಯಲ್ಲಿಯೇ ಪ್ರಮುಖ ಬದಲಾವಣೆ ತಂದಿರುವುದು ವಿಜಯನಗರ ಸಾಮ್ರಾಜ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಅವರು ಶುಕ್ರವಾರ ಸಂಜೆ ಹಂಪಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಜಯನಗರ ಹಾಗೂ ಕನ್ನಡ ನಾಡಿನ ಗತವೈಭವ ಬಿಂಬಿಸುವ ಸಡಗರ, ಸಂಭ್ರಮದ ಉತ್ಸವ ಹಂಪಿ ಉತ್ಸವವಾಗಿದೆ. ಎಂ.ಪಿ.ಪ್ರಕಾಶ್ ಅವರ ಕಾಲದಲ್ಲಿ ಹಂಪಿ ಉತ್ಸವ ಆರಂಭವಾಯಿತು.
ಪ್ರಥಮ ಹಂಪಿ ಉತ್ಸವದಲ್ಲಿ ಪಾಲ್ಗೊಂಡಿದ್ದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದ ಸಿಎಂ ಬೊಮ್ಮಾಯಿ ಅವರು
ಹಂಪಿಯ ಒಂದೊಂದು ಶಿಲೆಗಳು ಒಂದೊಂದು ರೋಮಾಂಚನಕಾರಿ ಕಥೆಗಳನ್ನು ಹೇಳುತ್ತವೆ;ಈ ಮೂಲಕ ಇತಿಹಾಸ ಗತವೈಭವ ಸಾರುತ್ತಿವೆ ಎಂದು ಬಣ್ಣಿಸಿದರು.
ಕೋವಿಡ್ ನಂತರ ಹಾಗೂ ಜಿಲ್ಲೆ ರಚನೆಯಾದ ನಂತರ ನಡೆಯುತ್ತಿರುವ ಹಂಪಿ ಉತ್ಸವ ಯಶಸ್ವಿಯಾಗಿ ನಡೆಯಲಿ ಮತ್ತು ಕಲೆ,ಸಂಸ್ಕ್ರತಿ, ಪರಂಪರೆ,ಇತಿಹಾಸ ಬಿಂಬಿಸಲಿ ಎಂದರು.


ಹಂಪಿ ಪ್ರವಾಸಿಗರಿಗೆ ಸಕಲಸೌಕರ್ಯಕ್ಕೆ ಕ್ರಮ: ಹಂಪಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಸಕಲ ಸೌಕರ್ಯಗಳನ್ನು ತಮ್ಮ ಸರಕಾರ ಕಲ್ಪಿಸಲಿದೆ.
ಪ್ರವಾಸಿಗರ ಅನುಕೂಲಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಂಪಿ ಸರ್ಕಿಟ್ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮೈಸೂರನ್ನು ಸರ್ಕಿಟ್ ಆಗಿ ಶೀಘ್ರ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದರು.
ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ 120ಕೋಟಿ ರೂ.ಗಳನ್ನು ನಮ್ಮ ಸರಕಾರ ನೀಡಿದ್ದು,ಇನ್ನೂ ಎರಡು ವಾರದೊಳಗೆ ಅಡಿಗಲ್ಲು ನೆರವೇರಿಸುವುದರ ಮೂಲಕ ಭಕ್ತರಿಗೆ ರೋಪ್ ವೇ,ರಸ್ತೆ ನಿರ್ಮಾಣ ಸೇರಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ವಿಜಯನಗರ ಮೌಲ್ಯಗಳನ್ನಿಟ್ಟುಕೊಂಡು ನವಕರ್ನಾಟಕ ನಿರ್ಮಾಣ: : ಅತ್ಯಂತ ಸುಭೀಕ್ಷೆಯ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಮೌಲ್ಯಗಳನ್ನಿಟ್ಟುಕೊಂಡು ಈಗಿನ ಅಗತ್ಯಕ್ಕೆ ತಕ್ಕಂತೆ ನವಕರ್ನಾಟಕ ನಿರ್ಮಾಣ ಮಾಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ವಿಜ್ಞಾನ-ತಂತ್ರಜ್ಞಾನ,ಕೌಶಲ್ಯಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. 5ಲಕ್ಷ ಯುವಕ/ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿದೆ. 6ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ,3ಸಾವಿರ ಕಿ.ಮೀ ರಾಜ್ಯ ಹೆದ್ದಾರಿ ನಿರ್ಮಿಸಲು ಕ್ರಮವಹಿಸಲಾಗುತ್ತಿದೆ. 8 ಬಂದರುಗಳ ಆಧುನೀಕರಣ, 02 ಬಂದರುಗಳ ವಿಸ್ತರಣೆ,ರೈಲ್ವೆ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.
8ಲಕ್ಷ ಕೋಟಿ ರೂ.ಹೂಡಿಕೆ ಈ ವರ್ಷ ಬರುವ ನಿರೀಕ್ಷೆ ಇದ್ದು;ಒಪ್ಪಂದ ಮಾಡಿಕೊಳ್ಳಲಾಗಿದೆ.ಉದ್ಯೋಗಗಳು ಹರಿದುಬರಲಿವೆ ಎಂದರು.
ಮುಜರಾಯಿ,ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ನಾಡಿನ ಜನತೆಗೆ ಪರಿಚಯಿಸುವುದು ಅತ್ಯಂತ ಮುಖ್ಯವಾದುದು. ಈ ನಿಟ್ಟಿನಲ್ಲಿ 3ದಿನಗಳ ಕಾಲ ಹಂಪಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ವೈವಿಧ್ಯಮಯ ಕಾರ್ಯಕ್ರಮಗಳು, ಪ್ರದರ್ಶನಗಳನ್ನಿಡಲಾಗಿದೆ. ಈ ಹಿಂದೆ ವಿಜಯನಗರ ಸಾಮ್ರಾಜ್ಯದ ರಾಜರು ಯಾವ ರೀತಿ ಕಲೆ,ಸಂಸ್ಕ್ರತಿ ಮತ್ತು ಇನ್ನಿತರ ಚಟುವಟಿಕೆಗಳಿಗೆ ಯಾವ ರೀತಿಯ ಒತ್ತು ನೀಡಿದ್ದರೋ ಅದೇ ರೀತಿಯ ಕಾರ್ಯಕ್ರಮಗಳು, ಪ್ರದರ್ಶನಗಳು ಇಲ್ಲಿ ಏರ್ಪಡಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಆನಂದಸಿಂಗ್ ಅವರು ಮಾತನಾಡಿದರು.
ಕನ್ನಡ ವಿವಿ ಹಂಪಿ ಕುರಿತು ಹೊರತರಲಾದ ನಾಲ್ಕು ಪುಸ್ತಕಗಳನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳಕಲ್ಯಾಣ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವ ಹಾಲಪ್ಪ ಬಸಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಪರಣ್ಣ ಮನವಳ್ಳಿ, ಹುಡಾ ಅಧ್ಯಕ್ಷ ಅಶೋಕ್ ಜೀರೆ, ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಐಜಿಪಿ ಬಿ.ಎಸ್.ಲೋಕೇಶಕುಮಾರ್, ಕನ್ನಡ ವಿವಿ ಕುಲಪತಿ ಡಾ. ಸ.ಚಿ. ರಮೇಶ, ಜಿಪಂ ಸಿಇಒ ಬೋಯರ್ ಹರ್ಷಲ್ ನಾರಾಯಣರಾವ್, ಎಸ್ಪಿ ಶ್ರೀಹರಿಬಾಬು ಮತ್ತಿತರರು ಇದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಜಯನಗರ ಕಲ್ಲಿನರಥದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜಿಲ್ಲಾಧಿಕಾರಿ ವೆಂಕಟೇಶ.ಟಿ ಅವರು ಸ್ವಾಗತಿಸಿದರು. ದಿವ್ಯ ಆಲೂರು ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ‌ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್ ವಂದಿಸಿದರು.
*****

The post ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ “ಹಂಪಿ ಉತ್ಸವ”. -ಸಿಎಂ ಬಸವರಾಜ ಬೊಮ್ಮಾಯಿ appeared first on Karnataka Kahale.

]]>
ಹಂಪಿ ಉತ್ಸವ: ಜನಮನಸೂರೆಗೊಂಡ ವಿಜಯನಗರ ವಸಂತ ವೈಭವ ಕಲಾ ಪ್ರದರ್ಶನ https://www.karnatakakahale.com/news/11068 Thu, 26 Jan 2023 17:33:27 +0000 https://www.karnatakakahale.com/?p=11068 ಹೊಸಪೇಟೆ (ವಿಜಯನಗರ) ಜ.26:ವಿಶ್ವವಿಖ್ಯಾತ ಹಂಪಿ ಉತ್ಸವದ ಆಚರಣೆ ಭಾಗವಾಗಿ  ನಗರದಲ್ಲಿ  ಗುರುವಾರ ನಡೆದ ‘ವಿಜಯನಗರ ವಸಂತ ವೈಭವ’ ಕಲಾ ಪ್ರದರ್ಶನ ಅಕ್ಷರಶಃ ಜನಮನ ಸೂರೆಗೊಂಡಿತು. ಕಲಾ ಪ್ರದರ್ಶನಕ್ಕಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ವಿಜಯನಗರಕ್ಕೆ ಆಗಮಿಸಿದ್ದ ಕಲಾ ತಂಡಗಳು ನಗರದ ವಡಕರಾಯ…

The post ಹಂಪಿ ಉತ್ಸವ: ಜನಮನಸೂರೆಗೊಂಡ ವಿಜಯನಗರ ವಸಂತ ವೈಭವ ಕಲಾ ಪ್ರದರ್ಶನ appeared first on Karnataka Kahale.

]]>

ಹೊಸಪೇಟೆ (ವಿಜಯನಗರ) ಜ.26:ವಿಶ್ವವಿಖ್ಯಾತ ಹಂಪಿ ಉತ್ಸವದ ಆಚರಣೆ ಭಾಗವಾಗಿ  ನಗರದಲ್ಲಿ  ಗುರುವಾರ ನಡೆದ ‘ವಿಜಯನಗರ ವಸಂತ ವೈಭವ’ ಕಲಾ ಪ್ರದರ್ಶನ ಅಕ್ಷರಶಃ ಜನಮನ ಸೂರೆಗೊಂಡಿತು.
ಕಲಾ ಪ್ರದರ್ಶನಕ್ಕಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ವಿಜಯನಗರಕ್ಕೆ ಆಗಮಿಸಿದ್ದ ಕಲಾ ತಂಡಗಳು ನಗರದ ವಡಕರಾಯ ದೇವಸ್ಥಾನದ ಬಳಿ ಸಂಜೆ  ಸಮಾವೇಶಗೊಂಡು ಪ್ರದರ್ಶಕ್ಕೆ ಬೇಕಾದ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡು, ಪೋಷಾಕು ಧರಿಸಿ ಮೆರವಣಿಗೆಗೆ ಸನ್ನದ್ಧರಾಗಿದ್ದರು.
ಈ ವೇಳೆ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದ ನಂತರ ಹಸಿರು ನಿಶಾನೆ ತೋರಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ತಾಯಿ ಭುವನೇಶ್ವರಿ ದೇವಿಯನ್ನು ಹೊತ್ತು ವಾಹನದ ಮುಂಭಾಗದಲ್ಲಿ ಹಂಪಿಯ ಆನೆ ಲಕ್ಷ್ಮಿಯು ವಿರಾಜಮಾನವಾಗಿ ಹೆಜ್ಜೆ ಹಾಕಿ ಗಮನ ಸೆಳೆಯಿತು.


ತಾಯಿ ಭುವನೇಶ್ವರಿ ಹೊತ್ತ ತೆರೆದ ವಾಹನವನ್ನು ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರು ಖುದ್ದು ತಾವೇ ಚಲಾಯಿಸಿ ಗಮನ ಸೆಳೆದರು. ಈ ವೇಳೆ ಸಚಿವರು ಸಾರ್ವಜನಿಕರತ್ತ ಕೈಬೀಸಿ ನಮಸ್ಕರಿಸಿ ಸಂತಸ ವ್ಯಕ್ತಪಡಿಸಿದರು. ಅಭಿಮಾನಿಗಳು ಸಚಿವರೊಂದಿಗೆ ಜೊತೆಗೆ ನಿಂತು ಫೋಟೊ ತೆಗೆಯಿಸಿಕೊಂಡು ಅಭಿಮಾನ ತೋರಿದರು.
ಮೆರವಣಿಗೆಯ ಮುಂಭಾಗದಲ್ಲಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ , ಸಂಸದ ದೇವೇಂದ್ರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್, ಅಪರ ಜಿಲ್ಲಾಧಿಕಾರಿ ಅನುರಾಧ ಕೆ. ಹಾಗೂ ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ ಅವರು ಹೆಜ್ಜೆ ಹಾಕಿದರು.


ನಗರದ ವಡಕರಾಯ ದೇವಸ್ಥಾನದಿಂದ ಆರಂಭಗೊಂಡು ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿದ ಮೆರವಣಿಗೆಯಲ್ಲಿ ಕಂಸಾಳೆ, ಮರಗಾಲು ಕುಣಿತ, ಕಂಸಾಳೆ ನೃತ್ಯ, ಮಹಿಳಾ ಪಟಕುಣಿತ, ಸಿಂಧೋಳ ಕುಣಿತ, ನಂದಿಕೋಲು, ಮಹಿಳಾ ಉರುಮೆವಾದ್ಯ, ವೀರಗಾಸೆ, ಹುಲಿವೇಷ, ಚಂಡೆವಾದನ, ಕಥಕ್ಕಳಿ, ಮಯೂರ ನೃತ್ಯಂ, ಪಂಜಾಬಿ ಡೋಲ್, ಗೊರವರ ಕುಣಿತ ಸೇರಿದಂತೆ ಒಟ್ಟು 100 ಕಲಾತಂಡಗಳು ನಗರದ ಮುಖ್ಯ ರಸ್ತೆಗಳಲ್ಲಿ ಪ್ರದರ್ಶನ ನೀಡಿ ಕಣ್ಮನ ತಣಿಸಿದವು.
ವಿದ್ಯುದೀಪಗಳಿಂದ ಅಲಂಕಾರ: ಹಂಪಿ ಉತ್ಸವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ವಿದ್ಯುದೀಪಗಳಿಂದ ಅಲಂಕರಿಸಿದ್ದರಿಂದ ವಿಜಯನಗರ ವಸಂತ ವೈಭವ ಕಲಾ ಪ್ರದರ್ಶನದ ಮೆರುಗು ಮತ್ತಷ್ಟು ಹೆಚ್ಚಿತ್ತು.

*****

The post ಹಂಪಿ ಉತ್ಸವ: ಜನಮನಸೂರೆಗೊಂಡ ವಿಜಯನಗರ ವಸಂತ ವೈಭವ ಕಲಾ ಪ್ರದರ್ಶನ appeared first on Karnataka Kahale.

]]>
ಬೆಂಗಳೂರಿನಲ್ಲಿ ಹಂಪಿ ಉತ್ಸವ ಲೋಗೊ ಬಿಡುಗಡೆ https://www.karnatakakahale.com/news/10982 Sat, 21 Jan 2023 07:24:00 +0000 https://www.karnatakakahale.com/?p=10982 ಹಂಪಿ ಉತ್ಸವ-2023 ಲೋಗೊ ಅನಾವರಣಗೊಳಿಸಿದ ಸಿಎಂ ಬೆಂಗಳೂರು, ಜ.21: ವಿಶ್ವವಿಖ್ಯಾತ ಹಂಪಿಯಲ್ಲಿ ಜ.27ರಿಂದ ನಡೆಯಲಿರುವ ಹಂಪಿ ಉತ್ಸವದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವದ ಲೋಗೊ ಅನಾವರಣಗೊಳಿಸಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ಜರುಗಿದ ಸರಳ ಸಮಾರಂಭದಲ್ಲಿ  ಉತ್ಸವದ ಲೋಗೊವನ್ನು ಬಿಡುಗಡೆ…

The post ಬೆಂಗಳೂರಿನಲ್ಲಿ ಹಂಪಿ ಉತ್ಸವ ಲೋಗೊ ಬಿಡುಗಡೆ appeared first on Karnataka Kahale.

]]>
ಹಂಪಿ ಉತ್ಸವ-2023 ಲೋಗೊ ಅನಾವರಣಗೊಳಿಸಿದ ಸಿಎಂ
ಬೆಂಗಳೂರು, ಜ.21: ವಿಶ್ವವಿಖ್ಯಾತ ಹಂಪಿಯಲ್ಲಿ ಜ.27ರಿಂದ ನಡೆಯಲಿರುವ ಹಂಪಿ ಉತ್ಸವದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವದ ಲೋಗೊ ಅನಾವರಣಗೊಳಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ಜರುಗಿದ ಸರಳ ಸಮಾರಂಭದಲ್ಲಿ  ಉತ್ಸವದ ಲೋಗೊವನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ  ಸಚಿವರಾದ ಅರಗ ಜ್ಞಾನೇಂದ್ರ, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ, ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್, ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಪೌರಾಡಳಿತ ಸಚಿವರಾದ ಎಂಟಿಬಿ ನಾಗರಾಜ್, ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಇದ್ದರು.

*****

The post ಬೆಂಗಳೂರಿನಲ್ಲಿ ಹಂಪಿ ಉತ್ಸವ ಲೋಗೊ ಬಿಡುಗಡೆ appeared first on Karnataka Kahale.

]]>
ಜ.7, 8ರಂದು ಹಂಪಿ ಉತ್ಸವ -ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ https://www.karnatakakahale.com/news/10134 Fri, 04 Nov 2022 15:04:09 +0000 https://www.karnatakakahale.com/?p=10134 ಹೊಸಪೇಟೆ(ವಿಜಯನಗರ),ನ.4: ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಸಾಹೇಬ್ ಜೊಲ್ಲೆ ಹಾಗೂ ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ ಸಿಂಗ್ ಅವರೊಂದಿಗೆ ಚರ್ಚಿಸಿದ್ದು ಜ.7 ಮತ್ತು 8 ರಂದು ಹಂಪಿ ಉತ್ಸವವನ್ನು…

The post ಜ.7, 8ರಂದು ಹಂಪಿ ಉತ್ಸವ -ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ appeared first on Karnataka Kahale.

]]>

ಹೊಸಪೇಟೆ(ವಿಜಯನಗರ),ನ.4: ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಸಾಹೇಬ್ ಜೊಲ್ಲೆ ಹಾಗೂ ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ ಸಿಂಗ್ ಅವರೊಂದಿಗೆ ಚರ್ಚಿಸಿದ್ದು ಜ.7 ಮತ್ತು 8 ರಂದು ಹಂಪಿ ಉತ್ಸವವನ್ನು ವಿಜೃಂಭಣೆಯಾಗಿ ಆಚರಿಸಲು ನಿರ್ಧರಿಸಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ತಿಳಿಸಿದರು.
ಶುಕ್ರವಾರ ಕಮಲಾಪುರ ಕರಡಿಧಾಮದ ನೇಚರ್ ಕ್ಯಾಂಪ್‍ನ ಆವರಣದಲ್ಲಿ ನಡೆದ ಹಂಪಿ ಉತ್ಸವದ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾಗತ ಮತ್ತು ಶಿಷ್ಟಾಚಾರ ಸಮಿತಿ, ಸಾರಿಗೆ ಸಮಿತಿ, ವಸತಿ ಸಮಿತಿ, ಆಹಾರ ಸಮಿತಿ, ಪ್ರಚಾರ ಮತ್ತು ಮಾಧ್ಯಮ ಸಮಿತಿ, ಜಾಹಿರಾತು ಸಮಿತಿ, ಆಹ್ವಾನ ಪತ್ರಿಕೆ, ಕರಪತ್ರ, ನೆನಪಿನ ಕಾಣಿಕೆ, ಪಾಸ್, ಪ್ರಮಾಣಪತ್ರ, ಬ್ಯಾನರ್ ಸಮಿತಿ, ಮೂಲಭೂತ ಸೌಲಭ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಮಿತಿ, ಆರೋಗ್ಯ ಮತ್ತು ನೈರ್ಮಲೀಕರಣ ಸಮಿತಿ, ಕಾನೂನು ಸುವ್ಯವಸ್ಥೆ ಸಮಿತಿ, ಪ್ರದರ್ಶನ ಸಮಿತಿ, ವೇದಿಕೆಗಳ ಸಮಿತಿ, ಕ್ರೀಡಾ ಸಮಿತಿ, ಜಾನಪದ ವಾಹಿನಿ ಮೆರವಣಿಗೆ, ಶೋಭಾಯಾತ್ರೆ, ಪುಸ್ತಕ ಪ್ರದರ್ಶನ, ಚಿತ್ರಕಲಾ ಶಿಬಿರ, ಶಿಲ್ಪಕಲೆ ಶಿಬಿರ, ಕವಿಗೋಷ್ಠಿ, ವಿಚಾರ ಸಂಕಿರಣ, ಶಾಲಾ ಮಕ್ಕಳ ನೃತ್ಯ, ಪ್ರಬಂಧ ಸ್ಪರ್ಧೆ, ವಿಜಯನಗರ ಧ್ವನಿ ಬೆಳಕು ಕಾರ್ಯಕ್ರಮ, ಕಲಾವಿದರ ಆಯ್ಕೆ ಸಮಿತಿ, ರಾಯಲ್ಸ್ ದರ್ಬಾರ್ ಧ್ವನಿ ಬೆಳಕು ಕಾರ್ಯಕ್ರಮ, ತುಂಗಾ ಅರತಿ ಮಹೋತ್ಸವ ಸಮಿತಿ, ಹಂಪಿ ಬೈ ಸ್ಕೈ ಸಮಿತಿ, ವಸಂತ ವೈಭವ ಕಾರ್ಯಕ್ರಮ ಸಮಿತಿ ಹಾಗೂ ಹಣಕಾಸು ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಹಂಪಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳ ಸಲಹೆ-ಸೂಚನೆಗಳನ್ನು ಪಡೆದರು. ನಂತರ ಅನುಸರಿಸಬೇಕಾದ ಕ್ರಮಗಳು ಕುರಿತು ತಿಳಿಸಿದರು.
ಮುಂದಿನ ದಿನಗಳಲ್ಲಿ ಹಂಪಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಹಿನ್ನಲೆಯಲ್ಲಿ ರಚಿಸಲಾದ ಸಮಿತಿಗಳ ಅಧಿಕಾರಿಗಳ ಸಭೆಯನ್ನು ಕರೆದು ಹಂಪಿ ಉತ್ಸವ ಆಚರಣೆಯ ರೂಪುರೇಷೆಗಳ ಕುರಿತು ಚರ್ಚಿಸಲಾಗುವುದು ಎಂದು ಡಿಸಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಹೊಸಪೇಟೆ ತಹಶೀಲ್ದಾರ್ ವಿಶ್ವಜೀತ್ ಮೆಹತಾ, ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಗುರುಬಸವರಾಜ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

*****

The post ಜ.7, 8ರಂದು ಹಂಪಿ ಉತ್ಸವ -ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ appeared first on Karnataka Kahale.

]]>