The post ಹೊಸ ಆರ್ಥಿಕ ನೀತಿಗಳು ದೇಶದ ರೈತಾಪಿ ವರ್ಗಕ್ಕೆ ಮಾರಕ -ಜೆ ಎಂ ವೀರಸಂಗಯ್ಯ appeared first on Karnataka Kahale.
]]>
ಬಳ್ಳಾರಿ, ಜು.4: ಹೊಸ ಆರ್ಥಿಕ ನೀತಿಗಳು ದೇಶದ ರೈತಾಪಿ ವರ್ಗಕ್ಕೆ ಮಾರಕವಾಗಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಜೆ ಎಂ ವೀರಸಂಗಯ್ಯ ಅವರು ಹೇಳಿದರು.
ನಗರದ ಎಸ್.ಎಸ್.ಎ (ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ
“ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಮತ್ತು ರಾಜಕೀಯ ಅರ್ಥಶಾಸ್ತ್ರದ ಪ್ರಶ್ನೆ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎರಡು ವರ್ಷಗಳ ಹಿಂದೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸೇರಿದಂತೆ ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ನಡೆಸಿದ ರೈತರ ಚಳುವಳಿಯನ್ನು ಕೇಂದ್ರ ಸರಕಾರ ಹತ್ತಿಕ್ಕಿತು ಎಂದು ಟೀಕಿಸಿದರು.
ದೇಶದ ಅತಿ ದೊಡ್ಡ ಮಾರ್ಕೆಟ್ ಕೃಷಿ ವಲಯವಾಗಿದ್ದು ರೈತರ ಭೂಮಿಯನ್ನು ಲಪಾಟಿಯಿಸಲು ಕಾರ್ಪೋರೆಟ್ ಕಂಪನಿಗಳು ಹೊಂಚು ಹಾಕಿವೆ ಎಂದು ಆರೋಪಿಸಿದರು.
ಈ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ 5800ಮಾಲ್ ಗಳನ್ನು ಆರಂಭಿಸಲಾಗಿದೆ ಎಂದರು.
ಬೆಳೆ ನಷ್ಟ, ಸಾಲದ ಹೊರೆ ಮತ್ತಿತರ ಕಾರಣಗಳಿಂದಾಗಿ
ಹಾಲು ಕುಡಿಸುವ ರೈತರ ಕೈಗಳಿಗೆ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ ಎಂದು ವಿಷಾಧಿಸಿದರು.
ಸಮಾರಂಭ ಉದ್ಘಾಟಿಸಿದ ಪ್ರಾಂಶುಪಾಲ ಡಾ. ಹೆಚ್.ಕೆ.ಮಂಜುನಾಥ ರೆಡ್ಡಿ ಅವರು ಮಾತನಾಡಿ, ಜೆ.ಎಂ.ವೀರಸಂಗಯ್ಯ ಅವರ ಹೋರಾಟಗಳನ್ನು ಕೇವಲ ಟಿವಿಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ಮಾತ್ರ ನೋಡುತ್ತಿದ್ದು ಇಂದು ಇವರೊಂದಿಗೆ ವೇದಿಕೆ ಹಂಚಿಕೊಂಡು ನೇರ ನಿಷ್ಟುರ ಮಾತುಗಳನ್ನು ಕೇಳುವ ಅವಕಾಶ ಕಲ್ಪಿಸಿದ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳಿಗೆ ಧನ್ಯವಾದಗಳನ್ನು ತಿಳಿಸಿದರು. ವೀರಸಂಗಯ್ಯ ಅವರು ಪದವಿ ಪೂರೈಸದಿದ್ದರೂ ಸಾವಿರಾರು ರೈತ ಕುಟುಂಬಗಳಿಗೆ ದಾರಿದೀಪವಾಗಿದ್ದಾರೆ. ಇಂದಿನ ಮಾತುಗಳನ್ನು ಕೇಳಿದ ಪ್ರತಿಯೊಬ್ಬರೂ ವೀರಸಂಗಯ್ಯ ಅವರುಗಳಂತಾದರೆ, ಇಡೀ ಸಮಾಜ ಸಾಕಷ್ಟು ಸುಧಾರಣೆಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಲಿ,
ಪ್ರಸ್ತುತ ರೈತರ ಸಮಸ್ಯೆಗಳಿಗೆ ಕೇವಲ ರೈತಾಪಿ ವರ್ಗ ಕಾರಣರಲ್ಲ, ಇದರ ಹಿಂದೆ ಸಾಕಷ್ಟು ನೈಸರ್ಗಿಕ, ರಾಜಕೀಯ ಮತ್ತು ಆರ್ಥಿಕ ಕಾರಣಗಳಿವೆ ಎಂದು ತಿಳಿಸಿದರು.

ಚಳುವಳಿ ರೂಪಿಸುವ, ಹೋರಾಟ ಮಾಡುವವರು
ರೈತರ ಪರವಾಗಿ ಮಾತನಾಡುವ ಪ್ರತಿನಿಧಿಗಳು ಸಂಸತ್ ಹಾಗೂ ರಾಜ್ಯದ ಶಾಸನಸಭೆಗಳಲ್ಲೂ ಇಲ್ಲವಾಗಿದ್ದಾರೆ, ಆದ್ದರಿಂದಲೇ ರೈತರ ಸಮಸ್ಯೆಗಳು ಉಲ್ಭಣಗೊಂಡಿವೆ ಜತೆಗೆ ಹಾಗೆಯೇ ಉಳಿದಿವೆ ಎಂದು ಅಭಿಪ್ರಾಯಪಟ್ಟರು.
ರೈತರ ಸಮಸ್ಯೆಗಳನ್ನು ಸಮರ್ಪಕವಾಗಿ ಬಿಂಬಿಸಿ ಪರಿಹಾರ ಕಂಡುಕೊಳ್ಳುವ ಪ್ರತಿನಿಧಿಗಳ ಸಂಖ್ಯೆ ಇಲ್ಲವೆಂದು ವಿಷಾಧಿಸಿದರು.
ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಈ ಎರಡು ವಿಭಾಗಗಳು ಅಂತರ್ಗತ ಸಂಬಂಧ ಹೊಂದಿರುವದರಿಂದ ಇಂತಹ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲು ಸಾಧ್ಯವಾಗಿದೆ ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ಎನ್.ರಾಮಾಂಜನೇಯಾವರು ಮಾತನಾಡಿ, ತಾವು ಬಾಲ್ಯದಲ್ಲಿ ಮ ಅನುಭವಿಸಿದ ನೋವು ಮತ್ತು ಹೋರಾಟಗಳನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಪರಿಕ್ಷಾ ನಿಯಂತ್ರಕರಾದ ಶೋಭ, ಸಹ ಪ್ರಾದ್ಯಾಪಕ ಪ್ರೊ.ರಾಮಾಂಜನೇಯ, ಪ್ರೊ.ಎನ್. ಗಂಟೆಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹುಚ್ಚೂಸಾಬ್ ಪಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಪ್ರಾಧ್ಯಾಪಕ ಡಾ. ಚನ್ನಬಸವಯ್ಯ ಹೆಚ್ ಎಂ ಸ್ವಾಗತಿಸಿದರು. ಸಹಾಯಕ ಪ್ರಾದ್ಯಾಪಕ ಡಾ.ಶ್ರೀನಿವಾಸ ರೆಡ್ಡಿ ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ಡಾ. ಟಿ. ದುರುಗಪ್ಪ ಅತಿಥಿಗಳನ್ನು ಪರಿಚಯಿಸಿದರು.
ಅರ್ಥಶಾಸ್ತ್ರ ವಿಭಾಗದ ದ್ವಿತೀಯ ಎಂ.ಎಂ ವಿದ್ಯಾರ್ಥಿನಿ ಕುಮಾರಿ ಪಲ್ಲವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು.
—–
The post ಹೊಸ ಆರ್ಥಿಕ ನೀತಿಗಳು ದೇಶದ ರೈತಾಪಿ ವರ್ಗಕ್ಕೆ ಮಾರಕ -ಜೆ ಎಂ ವೀರಸಂಗಯ್ಯ appeared first on Karnataka Kahale.
]]>The post ಕೂಡ್ಲಿಗಿ:ಗುಂಡಿನಹೊಳೆ ಕೃಷಿವಿಜ್ಞಾನ ಕಾಲೇಜು ಶೀಘ್ರ ನಿರ್ಧಾರ -ಕೃಷಿ ಸಚಿವ ಎನ್. ಚಲುವರಾಯಸ್ವಾಮಿ appeared first on Karnataka Kahale.
]]>The post ಕೂಡ್ಲಿಗಿ:ಗುಂಡಿನಹೊಳೆ ಕೃಷಿವಿಜ್ಞಾನ ಕಾಲೇಜು ಶೀಘ್ರ ನಿರ್ಧಾರ -ಕೃಷಿ ಸಚಿವ ಎನ್. ಚಲುವರಾಯಸ್ವಾಮಿ appeared first on Karnataka Kahale.
]]>The post ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ, ಬರ ಪರಿಹಾರ ನಮ್ಮ ಹಕ್ಕು; ಕೃಷಿ ಸಚಿವ ಎನ್ ಚಲುವರಾಯಸ್ವಾಮಿ appeared first on Karnataka Kahale.
]]>
ಬಳ್ಳಾರಿ. ನ. 29: ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಹಣ ಪಾವತಿಯಾಗುತ್ತಿದೆ ರಾಜ್ಯದ ಪಾಲು ಕೇವಲ 30 ಸಾವಿರ ಕೋಟಿ ಬರುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ .ಬರ ಪರಿಹಾರ ನಮ್ಮ ಹಕ್ಕು ನ್ಯಾಯಸಮ್ಮತವಾಗಿ ನೀಡಬೇಕಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು
ಬಳ್ಳಾರಿ ಜಿಲ್ಲೆಯ ಬರ ಪೀಡಿತ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಳ್ಳಾರಿ ,ವಿಜಯನಗರ ಜಿಲ್ಲಾ ಕೃಷಿ, ಜಲಾನಯನ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಸಚಿವರು ಮಾತನಾಡಿದರು.
ಕೇಂದ್ರ ಸರ್ಕಾರ ಬರ ಪರಿಹಾರ ಅನುದಾನ ಶೀಘ್ರದಲ್ಲೇ ಒದಗಿಸುವ ನಿರೀಕ್ಷೆ ಇದೆ ಎಂದ ಚಲುವರಾಯಸ್ವಾಮಿ ಅವರು
ಕೇಂದ್ರ ಅನುದಾನ ನೀಡದಿದ್ದರೂ ರಾಜ್ಯ ಸರ್ಕಾರ ಕುಡಿಯುವ ನೀರು ,ಮೇವಿನ ನಿರ್ವಹಣೆಗೆ ಈಗಾಗಲೆ ಹಣ ಬಿಡುಗಡೆ ಮಾಡಿದೆ ಹಾಗೇ ರೈತರ ಹಿತವನ್ನು ಕಾಯಲಾಗುತ್ತದೆ ಎಂದರು.
ಪ್ರಿವೆಂಟಿವ್ ಸೋಯಿಂಗ್ ಇನ್ವೋಕ್ ಹಾಗೂ ಮಧ್ಯಂತರ ಬೆಳೆ ಹಾನಿ ಪರಿಹಾರಕ್ಕೆ ಈಗಾಗಲೇ 343 ಕೊಟಿ ಬಿಡುಗಡೆಯಾಗಿದೆ.ಅದೇ ರೀತಿ ಶೀಘ್ರ ಬರಪರಿಹಾರ ಹಣ ಕೂಡ ರೈತರ ಖಾತೆಗೆ ನೇರವಾಗಿ ಸೇರಲಿದೆ ಅದಕ್ಕೆ ಪೂರಕ ವಾಗಿ ಶೇ 100 ರಷ್ಟು ರೈತರ ವಿವರ ಫ್ರೂಟ್ಸ್ ಐಡಿಗೆ ದಾಖಲಿಸುವ,ಕೆ.ವೈ.ಸಿ ನೊಂದಾಯಿಸುವ ಕಾರ್ಯ ಅಭಿಯಾನದ ಸ್ವರೂಪದಲ್ಲಿ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಕೃಷಿ ಹಾಗೂ ಜಲಾನಯನ ಇಲಾಖೆ ಮೂಲಕ 1.43 ಕೊಟಿ ರೈತರಿಗೆ ಒಟ್ಟಾರೆ 5388 ಕೊಟಿ ರೂ ಸೌಲಭ್ಯ ತಲುಪಿದಂತಾಗುತ್ತದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳ ಮೂಲ 75 ಸಾವಿರ ಕೋಟಿ ಆರ್ಥಿಕ ನೆರವು ರಾಜ್ಯದ ಜನ ಸಾಮಾನ್ಯರಿಗೆ ನೇರವಾಗಿ ತಲುಪುತ್ತಿದೆ.
ಸಾಮಾಜಿಕ ಸಬಲೀಕರಣ ಸರ್ಕಾರದ ಮೂಲ ಆಶಯ ಎಂದರು.
ಸೂಕ್ಷ್ಮ ನೀರಾವರಿ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 90% ಸಹಾಯಧನದಲ್ಲಿ ಹನಿ ನೀರಾವರಿ ಅಥವಾ ಸ್ಪಿಂಕ್ಲೇರ್ ಸಾಧನ ವಿತರಿಸಲಾಗುತ್ತಿದ್ದ ಅರ್ಜಿ ಸಲ್ಲಿಸಿದ 48 ಗಂಟೆಗಳಲ್ಲಿ ಮಂಜೂರು ಮಾಡಲಾಗುವುದು.ಈಗಾಗಲೇ ಎಲ್ಲಾ ಅರ್ಹರಿಗೆ SMS ಸಂದೇಶ ರವಾನಿಸಲಾಗಿದೆ ಎಂದರು.
ಕಾಲಮಿತಿಯೊಳಗೆ ಯೋಜನೆ ಅನುಷ್ಠಾನಕ್ಕೆ ಸೂಚನೆ:
ಕೃಷಿ ಮತ್ತು ಜಲಾನಯನ ಇಲಾಖೆ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನ ರೈತರ ಆರ್ಥಿಕ ಮಟ್ಟ ಸುಧಾರಣೆಗೆ ಶ್ರಮಿಸಿ ಎಂದು ಕೃಷಿ ಸಚಿವರು ಸೂಚಿಸಿದ್ದಾರೆ.
ಬಳ್ಳಾರಿ, ವಿಜಯನಗರ ಜಿಲ್ಲೆಗಳ ಇಲಾಖಾ ಯೋಜನೆಗಳ ಪ್ರಗತಿ ಪರಿಶೀಲಿಸಿದ ಅವರು ಫ್ರೋಟ್ಸ್ ಐಡಿ ನೋಂದಣಿ ಇನ್ನೊಂದು ವಾರದೊಳಗೆ ಪೂರ್ಣಗೊಳಿಸಿ ಎಂದರು.
ಜಲಸಂರಕ್ಷಣೆ ಯೋಜನೆಗೆ ಆಧ್ಯತೆ ನೀಡಿ ಸಿರಿಧಾನ್ಯದ ಬಗ್ಗೆ ಅರಿವು ಮೂಡಿಸಿ ಎಂದರು.
ವಿಮೆ ನೋಂದಣಿ ಹೆಚ್ಚಿಸಲು ಸೂಚನೆ: ಬಳ್ಳಾರಿ ಜಿಲ್ಲೆಯಲ್ಲಿ ಬೆಳೆ ವಿಮೆ ನೊಂದಣಿ ತುಂಬಾ ಕಡಿಮೆ ಇದ್ದು ಇನ್ನು ಮುಂದೆ ಬೆಳೆ ವಿಮೆ ಅನುಕೂಲಗಳ ಬಗ್ಗೆ ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ನೊಂದಣಿ ಹೆಚ್ಚಿಸಿ ಎಂದರು.
ರಾಜ್ಯದಲ್ಲಿ ಈ ಬಾರಿ 200 ಕೋಟಿ ವೆಚ್ಚದಲ್ಲಿ 32000 ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು.
ಟೈ ಲ್ಯಾಂಡ್ ಗಳಲ್ಲಿ ಕೃಷಿ ಹೋಂಡ ನಿರ್ಮಾಣಕ್ಕೆ ಆದ್ಯತೆ ನೀಡಿ ಅಲ್ಲದೆ ಇಂತಹ ಪ್ರದೇಶಗಳ ರೈತರಿಗೂ ಬೆಳೆ ಪರಿಹಾರ ಒದಗಿಸಲು ಇರುವ ತೊಡಕು ಬಗೆ ಹರಿಸಿ ಎಂದು ಸಚಿವರು ಸೂಚನೆ ನೀಡಿದರು
ತಪಾಸಣೆ ಹೆಚ್ಚಿಸಿ, ನಕಲಿ ಬೀಜ , ರಸಗೊಬ್ಬರ ಮಾರಾಟದ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ಎಂದರು.
ಕೃಷಿ ನವೋದ್ಯಮ ಪ್ರೋತ್ಸಾಹ ಮಾಡಿ
ಹಾರ್ವೆಸ್ಟ್ ಹಬ್ ಸ್ಥಾಪನೆಗೂ ಆದ್ಯತೆ ನೀಡಿ ಎಂದರು.
ಕ್ರೀಡಾ ಮತ್ತು ಯುವ ಸಬಲಿಕರಣ ಸಚಿವ ಹಾಗು ಬಳ್ಳಾರಿ ಜಿಲ್ಲಾ ಉಸ್ತುವರಿ ಸಚಿವರಾದ ನಾಗೇಂದ್ರ,ಕಂಪ್ಲಿ ಶಾಸಕರಾದ ಗಣೇಶ್, ಶಿರಗುಪ್ಪ ಶಾಸಕರಾದ ನಾಗರಾಜು, ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿದ್ದರು.
****
The post ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ, ಬರ ಪರಿಹಾರ ನಮ್ಮ ಹಕ್ಕು; ಕೃಷಿ ಸಚಿವ ಎನ್ ಚಲುವರಾಯಸ್ವಾಮಿ appeared first on Karnataka Kahale.
]]>The post ಬಳ್ಳಾರಿ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ: ಧೃತಿಗೆಡದಂತೆ ರೈತರಿಗೆ ಮನವರಿಕೆ appeared first on Karnataka Kahale.
]]>
ಬಳಿಕ ತಂಡ ಬಂಡ್ರಿ ಗ್ರಾಮ ವ್ಯಾಪ್ತಿಯ ಗೊಲ್ಲರಹಟ್ಟಿಯ ರೈತ ತಿಮ್ಮಪ್ಪನ ಮೆಕ್ಕೆಜೋಳ ಹೊಲಕ್ಕೆ ಭೇಟಿ ನೀಡಿತು. “ಸಾವಿರಾರು ರೂಪಾಯಿ ರೊಕ್ಕ ಹಾಕಿ, ಸಾಲ- ಸೂಲ ಮಾಡಿ ಬಿತ್ತಿನಿ, ಮಳೆ ಇಲ್ಲದೆ ಬೆಳೆ ಇಲ್ಲದೇ, ಗುಳೇ ಹೋಗೋ ಪರಿಸ್ಥಿತಿ ಬಂದಿದೆ” ಎಂದು ಕೇಂದ್ರ ತಂಡದ ಮುಂದೆ ರೈತ ತಿಮ್ಮಪ್ಪ ತಮ್ಮ ಅಳಲು ತೋಡಿಕೊಂಡರು.

ಕೇಂದ್ರ ತಂಡದ ಅಧಿಕಾರಿಯೊಬ್ಬರು, “ಹೋದ ವರ್ಷ ಏನು ಬಿತ್ತನೆ ಮಾಡಿದ್ದಿ, ಎಷ್ಟು ಖರ್ಚು ಮಾಡಿದ್ದಿ ಎಂದು ಪ್ರಶ್ನಿಸಿದ ಅವರು, ಈಗ ಬೆಳೆ ಹಾಳಾಗಿದ್ದರಿಂದ ಜೀವನ ಹೇಗೆ ನಡೆಸ್ತಿರಿ? ನಿಮಗೆ ಎಷ್ಟು ಜನ ಮಕ್ಕಳು? ಬೆಳೆ ವಿಮೆ ಮಾಡಿಸಿದ್ದೀರಾ? ನರೇಗಾದ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಡ್ ಹೊಂದಿದ್ದೀರಾ?” ಎಂದು ರೈತನೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದರು.
ಗ್ರಾಮದ ಮತ್ತೋರ್ವ ರೈತನ ರಾಗಿ ಬೆಳೆಗೆ ಭೇಟಿ ನೀಡಿ, ಹಸಿರಾಗಿ ಕಂಡರೂ ಇಳುವರಿಯಲ್ಲಿ ಭಾರಿ ಕುಸಿತ ಆಗಿರುವುದನ್ನು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಸಂಡೂರು ತಾಲೂಕಿನ ಶ್ರೀರಾಮ ಶೆಟ್ಟಿ ಹಳ್ಳಿಯಲ್ಲಿ ಸೆ.15ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಭಂಗಿ ಕಾಂತಪ್ಪ ಅವರ ಕುಟುಂಬವನ್ನು ಕೇಂದ್ರ ಬರ ಅಧ್ಯಯನ ತಂಡವು ಭೇಟಿ ಮಾಡಿತು. ಕುಟುಂಬಕ್ಕೆ ಧೈರ್ಯ ತುಂಬಿ, ಪರಿಹಾರಕ್ಕೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ, ನಿಮ್ಮ ಜೊತೆಗೆ ಸರ್ಕಾರ ಇದೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ರೈತರು ಧೃತಿಗೇಡಬಾರದು, ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ತಂಡ ಧೈರ್ಯ ತುಂಬಿತು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಂಡದೊಂದಿಗೆ ಸಂಡೂರು ತಾಲೂಕಿನ ವಿವಿಧೆಡೆ ಸಂಚರಿಸಿ, ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ಖುದ್ದು ತಾವೇ ಮನವರಿಕೆ ಮಾಡಿಕೊಟ್ಟರು. ಕ್ಷೇತ್ರ ಭೇಟಿಗೂ ಮುನ್ನ ಕೂಡ್ಲಿಗಿಯ ಅತಿಥಿ ಗೃಹದಲ್ಲಿ ಜಿಲ್ಲೆಯ ಬರದ ವಸ್ತು ಸ್ಥಿತಿ ಬಗ್ಗೆ ಡಿಸಿ ಅವರು ಕೇಂದ್ರ ಬರ ಅಧ್ಯಯನ ತಂಡಕ್ಕೆ ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ರಾಯಚೂರು ಕೃಷಿ ವಿವಿಯ ಕೃಷಿ ವಿಜ್ಞಾನಿಗಳಾದ ಡಾ. ಎಂ.ಎ ಬಸವಣೆಪ್ಪ, ಡಾ. ಶಾಂತಪ್ಪ, ಸಿರುಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸಿ.ಎಂ. ಕಾಲಿಬಾವಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು, ರೈತರು ಇದ್ದರು.
———
The post ಬಳ್ಳಾರಿ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ: ಧೃತಿಗೆಡದಂತೆ ರೈತರಿಗೆ ಮನವರಿಕೆ appeared first on Karnataka Kahale.
]]>The post ಕೃಷಿ ಮೇಳಗಳು ಜಾತ್ರೆಗಳಾಗದೇ ಕೃಷಿ ಕ್ಷೇತ್ರಕ್ಕೆ ಯುವಕರನ್ನು, ಹೊಸಬರನ್ನು ಸೆಳೆಯಬೇಕು -ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.
]]>
ಧಾರವಾಡ, ಸೆ. 9:ಕೃಷಿ ವಿವಿಗಳು ಒಣಭೂಮಿಯಲ್ಲಿ ಕೃಷಿ ಅಭಿವೃದ್ಧಿ ಪಡಿಸುವ ಕುರಿತು ಹೆಚ್ಚು ಸಂಶೋಧನೆ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಶನಿವಾರ ಮಧ್ಯಾಹ್ನ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳ- 2023 ಉದ್ಘಾಟಿಸಿ, ಮಾತನಾಡಿದರು.
ಇಂದು ಶೇ.60 ರಷ್ಟು ಜನ ಕೃಷಿ ಮಾಡುತ್ತಿದ್ದು, ಭಾರತವು ಕೃಷಿ ಪ್ರಧಾನ ದೇಶವಾಗಿದ್ದರೂ ಸಾಕಷ್ಟು ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಮಳೆ ಆಧಾರಿತ ಕೃಷಿ ಭೂಮಿ ಇರುವದರಿಂದ ಮಳೆ ಕೊರತೆಯಾಗಿ ಸಮಸ್ಯೆ ಆಗುತ್ತಿದೆ ಎಂದರು
ಯುವಕರು, ಹೆಚ್ಚುಜನ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಕೃಷಿ ವಿವಿಗಳು ಕಾರ್ಯ ಮಾಡಬೇಕು. ವಿಶ್ವವಿದ್ಯಾಲಯದ ಸಂಶೋಧನೆ, ತಾಂತ್ರಿಕತೆಗಳು ರೈತರ ಜಮೀನುಗಳಿಗೆ ತಲುಪಿದರೆ ಮಾತ್ರ ಸಾರ್ಥಕವಾಗುತ್ತದೆ. ಕೃಷಿ ಮೇಳಗಳು ಜಾತ್ರೆಗಳಾಗದೇ ಕೃಷಿ ಕ್ಷೇತ್ರಕ್ಕೆ ಯುವಕರನ್ನು, ಹೊಸಬರನ್ನು ಸೆಳೆಯುವಂತೆ ಆಕರ್ಷಕವಾಗಿ ಸಂಘಟಿಸಬೇಕು ಎಂದರು.
ಒಣ ಬೇಸಾಯ ಮಾಡುವ ರೈತರ ಬಗ್ಗೆ ವಿಶೇಷ ಕಾಳಜಿ ಇದೆ. ಒಣಬೇಸಾಯ ಮಾಡಲು ಅಗತ್ಯ ಸುಧಾರಿತ ಹೊಸ ತಳಿಗಳ ಸಂಶೋಧನೆ ಮಾಡಬೇಕು. ಬಿತ್ತಿದ ಯಾವುದೇ ಮುಖ್ಯ ಬೆಳೆ ಹಾಳಾದರೆ, ಅದಕ್ಕೆ ಪರ್ಯಾಯವಾದ ತಕ್ಷಣದ ಬೆಳೆಗಳನ್ನು ಮಾಡಬೇಕು ಎಂಬುದರ ಬಗ್ಗೆ ವಿಜ್ಞಾನಿಗಳು ಆಸಕ್ತಿ ವಹಿಸಿ, ಸಂಶೋಧನೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರಯೋಗಾಲಯದ ಸಂಶೋಧನೆಗಳು ರೈತರ ಭೂಮಿಗೆ ತಲುಪಬೇಕು: ಲ್ಯಾಬ್ ಟು ಲ್ಯಾಂಡ್ ಅಂದರೆ ಪ್ರಯೋಗಾಲಯದ ಸಂಶೋಧನೆಗಳು ರೈತರ ಭೂಮಿಗೆ ತಲುಪಬೇಕು. ಅಂದಾಗ ಮಾತ್ರ ವಿಜ್ಞಾನಿಗಳ ಸಂಶೋಧನೆಗಳು ಫಲಪ್ರದವಾಗುತ್ತದೆ ಎಂದು ಅವರು ಹೇಳಿದರು.

ರೈತರಿಗೆ ಉನ್ನತ ತಾಂತ್ರಿಕತೆ ಕಟಾವು ಯಂತ್ರ: ಕೃಷಿ ಭಾಗ್ಯ, ಕೃಷಿ ಯಂತ್ರಧಾರೆ ಯೊಜನೆಗಳ ಮರುಜಾರಿ ಘೋಷಿಸಲಾಗಿದೆ. ರಾಜ್ಯದಲ್ಲಿ ಸಣ್ಣ ರೈತರು ಹೆಚ್ಚಿಗೆ ಇರುವದರಿಂದ ಉನ್ನತ ತಾಂತ್ರಿಕತೆ ಇರುವ ಕಟಾವು ಯಂತ್ರಗಳನ್ನು ರೈತರಿಗೆ ನೀಡಲು ಕ್ರಮವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ: ಕೋರಮಂಗಲ ಚಲ್ಲಘಟ್ಟ(ಕೆಸಿ) ವ್ಯಾಲಿ ಮೂಲಕ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳಕ್ಕೆ, ನೀರಾವರಿಗೆ ಅನಕೂಲ ಮಾಡಲಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರೈತರಿಗೆ ಶೂನ್ಯ ಬಡ್ಡಿ ಸಾಲ: ರಾಜ್ಯ ಸರಕಾರ ಈ ವರ್ಷದಿಂದ ರೈತರಿಗೆ ರೂ. 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ ಮತ್ತು ರೂ.15 ಲಕ್ಷದವರೆಗೆ ಕೇವಲ ಶೇ. 3 ರಷ್ಟು ಬಡ್ಡಿ ನಿಗದಿಗೊಳಿಸಿ, ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಹದಾಯಿ ಯೋಜನೆಗೆ ಬದ್ಧ: ಮಹಾದಾಯಿ ಯೋಜನೆ ಜಾರಿಗೊಳಿಸಲು ಸರಕಾರ ಬದ್ದವಾಗಿದೆ. ಕೇಂದ್ರ ಸರಕಾರ ಶೀಘ್ರವಾಗಿ ಸ್ಪಂದಿಸಿ, ಸಮಸ್ಯೆ ಬಗೆಹರಿಸಿದರೆ ಯೋಜನೆ ಅನುಷ್ಠಾನ ಸುಲಭ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೇಂದ್ರ ಸರಕಾರ ಗೋವಾ ಸರಕಾರದೊಂದಿಗೆ ಸಮಾಲೋಚಿಸಿ, ಪರಿಸರ ಮತ್ತು ಅರಣ್ಯ ಸಂಬಂಧಿಸಿದ ತಕರಾರು ಪರಿಹರಿಸಿದರೆ ರಾಜ್ಯ ಸರಕಾರ ತಕ್ಷಣ ಕ್ರಮ ವಹಿಸಲಿದೆ. ರಾಜ್ಯ ಸರಕಾರಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಅವರು ಹೇಳಿದರು.
ಬೆಣ್ಣಿಹಳ್ಳ ಯೋಜನೆ: ಶೀಘ್ರ ಜಾರಿ: ಬೆಣ್ಣಿಹಳ್ಳ ಯೋಜನೆಯನ್ನು ಡಿಪಿಆರ್ ಮಾಡಿಸಿ, ಶೀಘ್ರವಾಗಿ ಜಾರಿಗೊಳಿಸಲಾಗುವುದು. ಧಾರವಾಡ ಜಿಲ್ಲೆಯ ಹಾಗೂ ಉತ್ತರ ಕರ್ನಾಟಕದ ರೈತರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿ, ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಸರಕಾರ ಆರ್ಥಿಕವಾಗಿ ಸುಸ್ಥಿರವಾಗಿದೆ: ಬಡವರ ವಿರೋಧಿಗಳು ಪಂಚ ಗ್ಯಾರಂಟಿ ಅನುಷ್ಠಾನ ವಿಷಯದಲ್ಲಿ ಸರಕಾರದ ವಿರುದ್ಧ ಸುಳ್ಳ ಆರೋಪ ಮಾಡುತ್ತಿದ್ದಾರೆ, ಆದರೆ ಸರಕಾರ ಆರ್ಥಿಕವಾಗಿ ಸುಸ್ಥಿರವಾಗಿದ್ದು, ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲಾಗಿದೆ. ಪಂಚಗ್ಯಾರಂಟಿಗಳು ಸೇರಿ ರಾಜ್ಯದ ಅಭಿವೃದ್ಧಿಗಾಗಿ ಮುಂದಿನ ವರ್ಷ ಸುಮಾರು 3 ಲಕ್ಷ 80 ಸಾವಿರ ಕೋಟಿ ರೂ. ಗಳ ಬಜೆಟ್ ಮಂಡಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಯಾರಿಗೂ ಭಯಬೇಡ: ಪಂಚಗ್ಯಾರಂಟಿ ಯೋಜನೆಗಳ ಜಾರಿಯಿಂದ ಅಭಿವೃದ್ಧಿಗೆ ಹಣದ ಕೊರತೆ ಆಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಸರಕಾರಕ್ಕೆ ಯಾವುದೇ ರೀತಿಯ ಆರ್ಥಿಕ ತೊಂದರೆ ಇಲ್ಲ. ಸರಕಾರದ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳು ಮುಂದುವರೆಯಲಿವೆ. ಪ್ರಸಕ್ತ ವರ್ಷ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಸುಮಾರು 32 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಮುಂದಿನ ವರ್ಷದಿಂದ ಪ್ರತಿವರ್ಷ ಪಂಚ ಗ್ಯಾರಂಟಿಗಳ ಜಾರಿಗೆ ಸುಮಾರು 56 ಸಾವಿರ ಕೋಟಿ ರೂ.ಗಳು ಬೇಕಾಗುತ್ತದೆ. ಈ ಎಲ್ಲ ಅಗತ್ಯ ಹಣ ಹೊಂದಿಸಲು ಸರಕಾರ ಸಶಕ್ತವಾಗಿದೆ. ಯಾರಿಗೂ ಭಯಬೇಡ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪಂಚ ಗ್ಯಾರಂಟಿಗಳ ವೆಚ್ಚ ಸೇರಿ ಮುಂದಿನ ವರ್ಷದ ಬಜೆಟ್ ಸುಮಾರು 380 ಲಕ್ಷ ಕೋಟಿಗಳಾಗುವ ಅಂದಾಜಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಹಾಗೂ ಕೃಷಿವಿವಿ ಸಮ ಕುಲಾಧಿಪತಿ ಎನ್. ಚಲುವರಾಯಸ್ವಾಮಿ ಅವರು ಕೃಷಿ ವಿವಿಯ ವಿಶೇಷ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು.
ಶ್ರೇಷ್ಠ ಕೃಷಿ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆಯರಿಗೆ, ಪ್ರಗತಿಪರ ರೈತರಿಗೆ ಮುಖ್ಯಮಂತ್ರಿಗಳು ಪ್ರಶಸ್ತಿ ವಿತರಿಸಿ, ಗೌರವಿಸಿದರು.
ಕೃಷಿ ಸಚಿವ ಎನ್. ಚಲುರಾಯಸ್ವಾಮಿ , ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ, ಬಸವರಾಜ ಶಿವಣ್ಣನವರ, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ, ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿ.ಪಂ. ಸಿಇಒ ಸ್ವರೂಪ. ಟಿ.ಕೆ., ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಹಾಗೂ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ವೇದಿಕೆಯಲ್ಲಿದ್ದರು.
—–
The post ಕೃಷಿ ಮೇಳಗಳು ಜಾತ್ರೆಗಳಾಗದೇ ಕೃಷಿ ಕ್ಷೇತ್ರಕ್ಕೆ ಯುವಕರನ್ನು, ಹೊಸಬರನ್ನು ಸೆಳೆಯಬೇಕು -ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.
]]>The post ಬೆಳೆ ವಿಮೆ ಪ್ರಚಾರ ವಾಹನಕ್ಕೆ ಜೆಡಿಎ ಶರಣಪ್ಪ ಮುದಗಲ್ ಚಾಲನೆ appeared first on Karnataka Kahale.
]]>The post ಬೆಳೆ ವಿಮೆ ಪ್ರಚಾರ ವಾಹನಕ್ಕೆ ಜೆಡಿಎ ಶರಣಪ್ಪ ಮುದಗಲ್ ಚಾಲನೆ appeared first on Karnataka Kahale.
]]>The post ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಗ್ರಿ ವಾರ್ ರೂಂ ಪ್ರಾರಂಭ. -ಕೇಂದ್ರದ ಮುಖ್ಯಸ್ಥ ಡಾ. ರಮೇಶ್ ಬಿ.ಕೆ appeared first on Karnataka Kahale.
]]>
ಡಾ. ರಮೇಶ್ ಬಿ.ಕೆ

The post ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಗ್ರಿ ವಾರ್ ರೂಂ ಪ್ರಾರಂಭ. -ಕೇಂದ್ರದ ಮುಖ್ಯಸ್ಥ ಡಾ. ರಮೇಶ್ ಬಿ.ಕೆ appeared first on Karnataka Kahale.
]]>The post ಅವಹೇಳನಕಾರಿ ಹೇಳಿಕೆ: ಕೃಷಿಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು appeared first on Karnataka Kahale.
]]>
ಬಳ್ಳಾರಿ: ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೆನ್ನಲಾದ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ಪ್ರತಿಕೃತಿಯನ್ನು ದಹಿಸಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
The post ಅವಹೇಳನಕಾರಿ ಹೇಳಿಕೆ: ಕೃಷಿಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು appeared first on Karnataka Kahale.
]]>The post ರಾಷ್ಟ್ರೀಯ ರೈತರ ದಿನಾಚರಣೆ: ಸಮಗ್ರ ಕೃಷಿ ಪದ್ಧತಿಯ ಪದ್ದತಿ ಅಳವಡಿಸಿಕೊಳ್ಳಿ -ಜೆಡಿಎ ಮುದಗಲ್ appeared first on Karnataka Kahale.
]]>The post ರಾಷ್ಟ್ರೀಯ ರೈತರ ದಿನಾಚರಣೆ: ಸಮಗ್ರ ಕೃಷಿ ಪದ್ಧತಿಯ ಪದ್ದತಿ ಅಳವಡಿಸಿಕೊಳ್ಳಿ -ಜೆಡಿಎ ಮುದಗಲ್ appeared first on Karnataka Kahale.
]]>The post ಬೇಸಿಗೆ ರಾಗಿ ಬೆಳೆ ನಿರ್ವಹಣೆ ಕುರಿತು ಜಂಟಿ ಕೃಷಿ ನಿರ್ದೇಶಕ(ನಿ) ಡಾ. ಆರ್ ಜಿ ಗೊಲ್ಲರ್ ಅವರ ಸಲಹೆಗಳು appeared first on Karnataka Kahale.
]]>* ಎಂ ಎಲ್ 365 , ಜಿಪಿಯು 26 ತಳಿಗಳನ್ನು ಬೇಸಿಗೆಯಲ್ಲಿ ಬೆಳೆಯಬಹುದು.
* ಬಿತ್ತುವ ಮೊದಲು ಕಾರ್ಬೆಂಡೆಜಿಂ ನಿಂದ ಅಥವಾ ಟ್ರೈಕೋಡರ್ಮಾ ದಿಂದ ಬೀಜೋಪಚಾರ ಅಗತ್ಯ.
* ಎಕರೆಗೆ 40:20:20 ಕೆಜಿ ಸಾರಂಪೊ ಒದಗಿಸುವ ರಸಗೊಬ್ಬರನ್ನು ಹಂತಗಳಲ್ಲಿ ಕೊಡಬೇಕು.
* ನಾಟಿ ಮಾಡುವುದರಿಂದ ಕಳೆಗಳ ಹತೋಟಿ ಪರಿಣಾಮಕಾರಿ ಯಾಗಿ ಮಾಡಬಹುದು.
* ಪದೇ ಪದೇ ಎಡೆ ಹೊಡೆಯುವುದು ಬೆಳೆಯಲ್ಲಿ ಮರಿಗಳು ಬರಲು ಸಹಕಾರಿ.
* ಮುಂಗಾರಿನಲ್ಲಿ ಜಿಂಕ್ , ಬೋರಾನ್ ಬಳಸಿರದಿದ್ದರೆ ಈಗ ಖಂಡಿತ ಬಳಸಿ.
* ಪ್ರಧಾನ ಮತ್ತು ಲಘು ಪೋಷಕಾಂಶಗಳ ದ್ರಾವಣವನ್ನು ಮೂರು ಹಂತಗಳಲ್ಲಿ (20, 35, 50 ದಿನಗಳು) ಸಿಂಪರಿಸಬೇಕು.
* ಬೆಂಕಿ ರೋಗ ಅಥವಾ ಇಲುಕು ರೋಗ ಹತೋಟಿ ಗಾಗಿ ಬಿತ್ತುವಾಗಲೇ ಕೊಟ್ಟಿಗೆ ಗೊಬ್ಬರ ದೊಡನೆ ಟ್ರೈಕೋಡರ್ಮಾ ಬೆರೆದಿಬೆಳೆಯ ಸಾಲಿಗೆ ಕೊಡಬೇಕು.
* ಅಕ್ಕಡಿ ಅಥವಾ ಮಿಶ್ರ ಬೆಳೆಯಾಗಿ ಸಾಸುವೆ, ಅಲಸಂದೆ, ಹೆಸರು, ಉದ್ದು , ಚೆಂಡು ಹೂವು ಬೆಳೆಯಬಹುದು.
* ಬದು, ರಸ್ತೆ, ಕಾಲುವೆ ಸಹಿತ ಹೊಲಗಳು ಕಳೆ ಮುಕ್ತ ಇದ್ದರೆ ಒಳ್ಳೆಯದು
The post ಬೇಸಿಗೆ ರಾಗಿ ಬೆಳೆ ನಿರ್ವಹಣೆ ಕುರಿತು ಜಂಟಿ ಕೃಷಿ ನಿರ್ದೇಶಕ(ನಿ) ಡಾ. ಆರ್ ಜಿ ಗೊಲ್ಲರ್ ಅವರ ಸಲಹೆಗಳು appeared first on Karnataka Kahale.
]]>