Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
Art – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Sun, 04 Jan 2026 11:47:07 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg Art – Karnataka Kahale https://www.karnatakakahale.com 32 32 ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ: ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ -ಮುಖ್ಯಮಂತ್ರಿ ಸಿದ್ದರಾಮಯ್ಯ https://www.karnatakakahale.com/news/21839 Sun, 04 Jan 2026 11:47:07 +0000 https://www.karnatakakahale.com/?p=21839 ಬೆಂಗಳೂರು, ಜ.4: ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ ಇದ್ದಂತೆ .ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆಯನ್ನು ಕಲ್ಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಭಾನುವಾರ ಕರ್ನಾಟಕ ಚಿತ್ರಕಲಾ ಪರಿಷತ್ತು ಇವರ ವತಿಯಿಂದ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ಆವರಣದಲ್ಲಿ…

The post ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ: ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ -ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.

]]>

ಬೆಂಗಳೂರು, ಜ.4: ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ ಇದ್ದಂತೆ .ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆಯನ್ನು ಕಲ್ಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಭಾನುವಾರ ಕರ್ನಾಟಕ ಚಿತ್ರಕಲಾ ಪರಿಷತ್ತು ಇವರ ವತಿಯಿಂದ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಆಯೋಜಿಸಲಾಗಿದ್ದ 23 ನೇ ಚಿತ್ರ ಸಂತೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿಯಾಗಿ 8ನೇ ಬಾರಿ ಚಿತ್ರ ಸಂತೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಕಲಾವಿದರನ್ನು ಪ್ರೋತ್ಸಾಹಿಸುವುದು, ಅವರ ಚಿತ್ರಗಳ ಪ್ರದರ್ಶನ ಹಾಗೂ ಅವುಗಳ ಮಾರಾಟಕ್ಕೆ ವೇದಿಕೆ ಸೃಷ್ಟಿ ಮಾಡುವ ಕೆಲಸವನ್ನು ಚಿತ್ರಕಲಾ ಪರಿಷತ್ತು ಅರವತ್ತು ವರ್ಷಗಳಿಂದ ಮಾಡುತ್ತಾ ಬಂದಿದೆ. ಚಿತ್ರಸಂತೆ ತನ್ನ 23 ನೇ ವರ್ಷಕ್ಕೆ ಕಾಲಿಟ್ಟಿದೆ. ಸುಮಾರು 22 ರಾಜ್ಯಗಳು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಕಾರ್ಯಕ್ರಮದಲ್ಲಿ ಭಾಗವಹಿಸಿವೆ ಎಂದರು.

ಪರಿಸರದ ರಕ್ಷಣೆ ಇಂದಿನ ಅಗತ್ಯ:
ಪ್ರತಿ ಜಿಲ್ಲೆಯಲ್ಲಿಯೂ ಸಾಧಕರ ವಸ್ತುಸಂಗ್ರಹಾಲಯಕ್ಕೆ ಬೇಡಿಕೆಯಿದ್ದು ಸರ್ಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಲಿದೆ ಎಂದರು. ಈ ಬಾರಿಯ ಚಿತ್ರ ಸಂತೆಯ ಧ್ಯೇಯ ವಾಕ್ಯ ಪರಿಸರಕ್ಕೆ ಸಮರ್ಪಿಸಲಾಗಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿ ಪರಿಸರದ ಬಗ್ಗೆ ಜ್ಞಾನ ಅಗತ್ಯ. ಈ ಕುರಿತು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು ಸೇರಿದಂತೆ ದೇಶದ ಅನೇಕ ರಾಜಧಾನಿಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದ್ದು, ದೆಹಲಿಯಲ್ಲಿ ಬದುಕಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗುತ್ತಿದೆ. ಪರಿಸರದ ರಕ್ಷಣೆ ಇಂದಿನ ಅಗತ್ಯವಾಗಿದೆ ಎಂದರು.

ಅರಣ್ಯೀಕರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು:
ಪ್ರತಿ ವರ್ಷ ಮೂರರಿಂದ ಐದು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ಶೇ. 30ರಷ್ಟು ಕಾಡು ಇರಬೇಕು. ನಮ್ಮಲ್ಲಿ ಶೇಕಡ 20ರಷ್ಟು ಅರಣ್ಯ ಪ್ರದೇಶವಿದೆ. ಇದನ್ನು ಹೆಚ್ಚು ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಸಾಲು ಮರದ ತಿಮ್ಮಕ್ಕ ನವರಂತೆ ಸಾರ್ವಜನಿಕರು ಗಿಡಗಳನ್ನು ನೆಡಬೇಕು. ಮಕ್ಕಳನ್ನು ಸಾಕಿದಂತೆ ಗಿಡಮರಗಳನ್ನು ಅವರು ಸಾಕಿದ್ದ ಕಾರಣ ಪ್ರಶಸ್ತಿಗಳು ದೊರೆಯಿತು. ಅವರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ನಾವೆಲ್ಲರೂ ಗಿಡ ಬೆಳೆಸುವ ಪ್ರಯತ್ನವನ್ನು ಮಾಡಬೇಕು ಎಂದರು.

ಗಿಡ ನಿಡಲು ಮನಸ್ಸು ಮಾಡಬೇಕು:
ಪರಿಸರ ರಕ್ಷಣೆಗಾಗಿ ಹೋರಾಟವನ್ನೇ ಕೈಗೊಂಡ ಅನೇಕರು ನಮ್ಮ ನಡುವೆಯೇ ಇದ್ದಾರೆ. ಗಿಡ ನೆಡಲು ಬಹಳ ಖರ್ಚು ಆಗುವುದಿಲ್ಲ. ಮನಸ್ಸು ಮಾಡಬೇಕಷ್ಟೆ. ಸರ್ಕಾರ ಕೂಡ ಈ ದಿಕ್ಕಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮೊದಲಾದವರು ಉಪಸ್ಥಿತರಿದ್ದರು.

The post ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ: ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ -ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.

]]>
ಕ್ರೀಡಾ ಚಟುವಟಿಕೆಗಳು ದೈಹಿಕ ಆರೋಗ್ಯಕ್ಕೆ ಪೂರಕವಾದರೆ, ಸಂಗೀತ, ನೃತ್ಯ, ಕಲಾ ಪ್ರಕಾರಗಳು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ -ನ್ಯಾಯವಾದಿ ಕೆ.ಜಿತೇಂದ್ರ https://www.karnatakakahale.com/news/14598 Tue, 28 Nov 2023 11:59:35 +0000 https://www.karnatakakahale.com/?p=14598 ಬಳ್ಳಾರಿ, ನ.28: ಕ್ರೀಡಾ ಚಟುವಟಿಕೆಗಳು ದೈಹಿಕ ಆರೋಗ್ಯಕ್ಕೆ ಪೂರಕವಾದರೆ, ಸಂಗೀತ, ನೃತ್ಯ, ಕಲಾ ಪ್ರಕಾರಗಳು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿವೆ ಎಂದು ವಕೀಲ ಹಾಗೂ ಪೊಲೀಸ್ ಜಿಮ್ ಖಾನಾ ಅಧ್ಯಕ್ಷ ಕೆ.ಜಿತೇಂದ್ರ ಅಭಿಪ್ರಾಯಪಟ್ಟರು. ನಗರದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ…

The post ಕ್ರೀಡಾ ಚಟುವಟಿಕೆಗಳು ದೈಹಿಕ ಆರೋಗ್ಯಕ್ಕೆ ಪೂರಕವಾದರೆ, ಸಂಗೀತ, ನೃತ್ಯ, ಕಲಾ ಪ್ರಕಾರಗಳು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ -ನ್ಯಾಯವಾದಿ ಕೆ.ಜಿತೇಂದ್ರ appeared first on Karnataka Kahale.

]]>

ಬಳ್ಳಾರಿ, ನ.28: ಕ್ರೀಡಾ ಚಟುವಟಿಕೆಗಳು ದೈಹಿಕ ಆರೋಗ್ಯಕ್ಕೆ ಪೂರಕವಾದರೆ, ಸಂಗೀತ, ನೃತ್ಯ, ಕಲಾ ಪ್ರಕಾರಗಳು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿವೆ ಎಂದು ವಕೀಲ ಹಾಗೂ ಪೊಲೀಸ್ ಜಿಮ್ ಖಾನಾ ಅಧ್ಯಕ್ಷ ಕೆ.ಜಿತೇಂದ್ರ ಅಭಿಪ್ರಾಯಪಟ್ಟರು.
ನಗರದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶ್ರೀ ಮಂಜುನಾಥ ಲಲಿತ ಕಲಾ ಬಳಗ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಜರುಗಿದ ‘ಕನ್ನಡ ಸುವರ್ಣ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಳ್ಳಾರಿಯಲ್ಲಿ ನಿರಂತರವಾಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿರುವುದು ಶ್ಲಾಘನೀಯ. ವಿವಿಧ ಸಾಂಸ್ಕೃತಿಕ ಸಂಘಟನೆಗಳು ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯನ್ನು ಉಳಿಸುವ ಕಾಳಜಿಯನ್ನು ಜತನದಿಂದ ಮುಂದುವರಿಸುವಂತಾಗಬೇಕು ಎಂದು ಆಶಿಸಿದರು.


ಮುಖ್ಯ ಅತಿಥಿಯಾಗಿ ‌ಪಾಲ್ಗೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ ಅವರು, ಗಣಿನೆಲದ ಸಾಂಸ್ಕೃತಿಕ ಗಟ್ಟಿತನ ಕುರಿತು ವಿವರಿಸಿದರಲ್ಲದೆ, ಪ್ರತಿಭಾನ್ವಿತ ಯುವ ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಸಾಧನೆಯನ್ನು ಬಣ್ಣಿಸಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಕ್ಯಾತ್ಯಾಯಿನಿ ವಿ.ಎಸ್.ಮರಿದೇವಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿಗೆ ಹಾರೈಸಿದರು.‌
ಶ್ರೀ ಮಂಜುನಾಥ ಲಲಿತ ಕಲಾ ಬಳಗದ ಅಧ್ಯಕ್ಷ ಮಂಜುನಾಥ ಗೋವಿಂದವಾಡ ಪ್ರಾಸ್ತಾವಿಕ ‌ಮಾತನಾಡಿದರು. ಕಾಲೇಜಿನ‌ ಪ್ರಾಂಶುಪಾಲ ಸತೀಶ್ ಎ. ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ, ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ, ನಿವೃತ್ತ ದೈಹಿಕ ಶಿಕ್ಷಕ ಸಿದ್ಧಲಿಂಗಸ್ವಾಮಿ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ವಿ.ವಿ.ಗೌಡ ಕರೂರು ಹಾಗೂ ಚಂದ್ರಶೇಖರ ಗೌಡ ಕೋಳೂರು ಉಪಸ್ತಿತರಿದ್ದರು.
ಬಳಿಕ ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ ‌ಮತ್ತು ತಂಡದಿಂದ ಸುಗಮಸಂಗೀತ, ಎಸ್ ಕೆ ಆರ್ ಜಿಲಾನಿಬಾಷಾ ತಂಡದಿಂದ ಜಾನಪದ ಸಮೂಹ ನೃತ್ಯ ಹಾಗೂ ಗಣೇಶಪ್ಪ‌ ಮತ್ತು ತಂಡದಿಂದ ಡೊಳ್ಳು ಕುಣಿತ ಪ್ರದರ್ಶನಗೊಂಡವು.


ಇದೇ ವೇಳೆ ಐಎಂಎ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಕೆ.ಎಂ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ವಿದ್ಯಾರ್ಥಿಗಳಾದ ಶಿಲ್ಪಾ ಮತ್ತು ಶ್ರಾವಣ್ ಕಾರ್ಯಕ್ರಮ ನಿರ್ವಹಿಸಿದರು.

The post ಕ್ರೀಡಾ ಚಟುವಟಿಕೆಗಳು ದೈಹಿಕ ಆರೋಗ್ಯಕ್ಕೆ ಪೂರಕವಾದರೆ, ಸಂಗೀತ, ನೃತ್ಯ, ಕಲಾ ಪ್ರಕಾರಗಳು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ -ನ್ಯಾಯವಾದಿ ಕೆ.ಜಿತೇಂದ್ರ appeared first on Karnataka Kahale.

]]>
ಸಿಂಧುವಾಳ ಗಾದಿಲಿಂಗನ ಕುಂಚದಲ್ಲಿ ಅರಳಿದ ಸಚಿವ ಬಿ.ನಾಗೇಂದ್ರ ಮತ್ತು ಸಹೋದರ ಬಿ. ಪ್ರಸಾದ್ : ಪ್ರಶಂಸೆ https://www.karnatakakahale.com/news/13705 Mon, 18 Sep 2023 17:07:10 +0000 https://www.karnatakakahale.com/?p=13705 ಬಳ್ಳಾರಿ, ಸೆ. 18: ತಾಲೂಕಿನ ಸಿಂಧುವಾಳ ಗ್ರಾಮದ ಯುವ ಪ್ರತಿಭೆ, ಬಿ.ಇ ಪದವೀಧರ ಗಾದಿಲಿಂಗ ಅವರು ಅಭಿಮಾನದಿಂದ ತಮ್ಮ ಕುಂಚದಲ್ಲಿ ಚಿತ್ರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಮತ್ತು ಇವರ ಸಹೋದರ ಬಿ. ಪ್ರಸಾದ್ ಅವರ ಚಿತ್ರ ಭಾನುವಾರ ನಗರದಲ್ಲಿ…

The post ಸಿಂಧುವಾಳ ಗಾದಿಲಿಂಗನ ಕುಂಚದಲ್ಲಿ ಅರಳಿದ ಸಚಿವ ಬಿ.ನಾಗೇಂದ್ರ ಮತ್ತು ಸಹೋದರ ಬಿ. ಪ್ರಸಾದ್ : ಪ್ರಶಂಸೆ appeared first on Karnataka Kahale.

]]>
ಬಳ್ಳಾರಿ, ಸೆ. 18: ತಾಲೂಕಿನ ಸಿಂಧುವಾಳ ಗ್ರಾಮದ ಯುವ ಪ್ರತಿಭೆ, ಬಿ.ಇ ಪದವೀಧರ ಗಾದಿಲಿಂಗ ಅವರು ಅಭಿಮಾನದಿಂದ ತಮ್ಮ ಕುಂಚದಲ್ಲಿ ಚಿತ್ರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಮತ್ತು ಇವರ ಸಹೋದರ ಬಿ. ಪ್ರಸಾದ್ ಅವರ ಚಿತ್ರ ಭಾನುವಾರ ನಗರದಲ್ಲಿ ಗಮನ ಸೆಳೆಯಿತು.
ಕಲ್ಯಾಣ ಕರ್ನಾಟಕ ಉತ್ಸವ ಉದ್ಘಾಟನಾ ಕಾರ್ಯಕ್ರಮದ ಬಳಿಕ ಯುವ ಕಲಾವಿದ ಗಾದಿಲಿಂಗ ಚಿತ್ರಿಸಿದ ತಮ್ಮ ಮತ್ತು ಸಹೋದರನ ಚಿತ್ರ ಕಂಡು ಸಚಿವ ನಾಗೇಂದ್ರ ಅವರು ಖುಷಿ ಪಟ್ಟರು ಮಾತ್ರವಲ್ಲ ಮುಕ್ತಕಂಠದಿಂದ ಪ್ರಶಂಸಿಸಿದರು.
ಗಾದಿಲಿಂಗ ಅಭಿಮಾನಪೂರ್ವಕವಾಗಿ ಚಿತ್ರಿಸಿದ ತಮ್ಮ ಚಿತ್ರವನ್ನು ಸಚಿವರು ಪ್ರೀತಿಯಿಂದ ಸ್ವೀಕರಿಸಿದರು.
ಪರಿಚಯ: ಯಾವುದೇ ಚಿತ್ರಕಲಾ ಶಾಲೆಗೆ ಹೋಗದೆ ತನ್ನ ಆಸಕ್ತಿಯಿಂದ ಚಿತ್ರ ಬಿಡಿಸುವುದನ್ನು ಕಲಿತ ಏಕಲವ್ಯ ಪ್ರತಿಭೆ ಗಾದಿಲಿಂಗ. ರೈತಾಪಿ ಕುಟುಂಬದ ಅಪ್ಪ ಅಮ್ಮ ಓದಿಸಿದ್ದು ಬಿಇ (ಮೆಕಾನಿಕಲ್) ಪದವಿಯನ್ನು! ನಾಲ್ಕು ವರ್ಷಗಳ ಹಿಂದೆ ಇಂಜಿನಿಯರಿಂಗ್ ಪದವಿ ಪೂರೈಸಿದ ಬಳಿಕ ಹೈದ್ರಾಬಾದ್ ನಲ್ಲಿ ಯು ಪಿ ಎಸ್ ಸಿ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ
ದೇಶಕ್ಕೆ ವಕ್ಕರಿಸಿದ ಕೋವಿಡ್ ನಿಂದಾಗಿ ಲಾಕ್ ಡೌನ್ ಘೋಷಣೆಯಾದ್ದರಿಂದ ಗಾದಿಲಿಂಗಪ್ಪ ಗ್ರಾಮಕ್ಕೆ ವಾಪಸಾದರು. ಬಿಇ ಓದಿದ ಹುಡುಗ ಹಳ್ಳಿಯಲ್ಲಿ ಕುಳಿತು ಏನು ಮಾಡಲು ಸಾಧ್ಯ!? ಬಳ್ಳಾರಿಗೆ ಬಂದರು. ಗೆಳೆಯನ ರೂಮ್ ನಲ್ಲಿ ಆಶ್ರಯ ಪಡೆದಿದ್ದಾರೆ.
ಪರಿಸರದ ಚಿತ್ರಗಳು, ಸಮಾಜಮುಖಿ
ಚಿತ್ರ ನಟ ಸೋನು ಸೂದ್, ಶ್ರೀ ಸಿದ್ಧಗಂಗಾ ಶ್ರೀಗಳು ಸೇರಿದಂತೆ ಹಲವು ಚಿತ್ರನಟರು, ರಾಜಕಾರಣಿಗಳು, ಸೆಲೆಬ್ರಿಟಿಗಳ ಚಿತ್ರಗಳು ಚಿತ್ರ ಪ್ರೇಮಿಗಳನ್ನು ಆಕರ್ಷಿಸಿವೆ. ನಗರ ಯುವ ಶಾಸಕ ನಾರಾ ಭರತ್ ರೆಡ್ಡಿ, ಯುವ ಮುಖಂಡ ಬಿ. ಮುರಳಿಕೃಷ್ಣ, ಹಿರಿಯ ಪತ್ರಕರ್ತ ಸಿ.‌ಮಂಜುನಾಥ್ ಸೇರಿ ಹಲವರ ಚಿತ್ರಗಳು ಗಮನ ಸೆಳೆದಿವೆ. ಗಣ್ಯರು, ಚಿತ್ರಪ್ರೇಮಿಗಳು ಬೆನ್ನುತಟ್ಟಿದ್ದಾರೆ.
ಚಿತ್ರಕಲೆ ಜತೆ ನಟನೆ, ನಿರ್ದೇಶನದ ಬಗ್ಗೆ ಒಲವಿರುವದರಿಂದ ಗೆಳೆಯರ ಜತೆ ಸೇರಿ ಯೂಟ್ಯೂಬ್ ಚಾಲೆನ್ ಗಾಗಿ ಒಂದೆರಡು ಸಾಮಾಜಿಕ ಸಂದೇಶ ಸಾರುವ ಕಿರು ಚಿತ್ರಗಳನ್ನು ಗಾದಿಲಿಂಗ ಚಿತ್ರೀಕರಿಸಿರುವುದು ವಿಶೇಷ.
ಬಿ.ಇ ಪದವೀಧರರರಾದರೂ ಸೂಕ್ತ ಉದ್ಯೋಗ ದೊರೆಯದೇ ಸಂಕಷ್ಟದಲ್ಲಿರುವ ಗಾದಿಲಿಂಗ ಪ್ರಸ್ತುತ ತನ್ನ ಹವ್ಯಾಸ ಕಲೆಯಾದ ಚಿತ್ರಕಲೆಯನ್ನೇ ನಂಬಿ ಬದುಕು‌ಕಟ್ಟಿಕೊಳ್ಳಲು ನಿರ್ಧರಿಸಿದ್ದಾನೆ.
ಈ ಪ್ರತಿಭಾವಂತ ಯುವಕನಿಗೆ ಸರಕಾರ, ಸಮಾಜ, ಸಂಘ ಸಂಸ್ಥೆಗಳು ಉತ್ತೇಜಿಸುವ ಅಗತ್ಯವಿದೆ. ನೆರವು ನೀಡುವ ಮನಸ್ಸುಳ್ಳವರು ತಮ್ಮ, ಹಾಗೂ ತಮ್ಮ ಪ್ರೀತಿ ಪಾತ್ರರ ಭಾವಚಿತ್ರಗಳನ್ನು ಪೆನ್ಸಿಲ್ ಸ್ಕೆಚ್ ಹಾಕಿಸಿ ಕೊಂಡು ಈ ಯುವ ಪ್ರತಿಭೆಯನ್ನು ಪ್ರೊತ್ಸಾಹಿಸಬಹುದು.
[ಗಾದಿಲಿಂಗ ಅವರ ಮೊಬೈಲ್ ನಂ. 93465 11615]

*****

The post ಸಿಂಧುವಾಳ ಗಾದಿಲಿಂಗನ ಕುಂಚದಲ್ಲಿ ಅರಳಿದ ಸಚಿವ ಬಿ.ನಾಗೇಂದ್ರ ಮತ್ತು ಸಹೋದರ ಬಿ. ಪ್ರಸಾದ್ : ಪ್ರಶಂಸೆ appeared first on Karnataka Kahale.

]]>
ಮಂಜುನಾಥ ಗೊವಿಂದವಾಡರ ಕಲಾ ಪ್ರದರ್ಶನ: ಕಲೆ, ಸಾಹಿತ್ಯ ಸಂಗೀತ ನಾಡಿನ ಸಾಂಸ್ಕೃತಿಕ ಅಸ್ಮಿತೆ -ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅಭಿಮತ https://www.karnatakakahale.com/news/9735 Mon, 03 Oct 2022 13:53:14 +0000 https://www.karnatakakahale.com/?p=9735 ವಿಜಯಪುರ, ಅ.3: ಕಲಾವಿದರು ದೇಶದ ಸಂಪತ್ತು, ಕಲೆ, ಸಾಹಿತ್ಯ ಸಂಗೀತ ನಾಡಿನ ಸಾಸಂಸ್ಕೃತಿಕ ಅಸ್ಮಿತೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು. ನಗರದ ಪ್ರವಾಸೋಧ್ಯಮ ಇಲಾಖೆಯ ಸರಕಾರಿ ಆರ್ಟಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಲ್ಲಿ ಬಳ್ಳಾರಿಯ ಕಲಾವಿದ ಮಂಜುನಾಥ…

The post ಮಂಜುನಾಥ ಗೊವಿಂದವಾಡರ ಕಲಾ ಪ್ರದರ್ಶನ: ಕಲೆ, ಸಾಹಿತ್ಯ ಸಂಗೀತ ನಾಡಿನ ಸಾಂಸ್ಕೃತಿಕ ಅಸ್ಮಿತೆ -ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅಭಿಮತ appeared first on Karnataka Kahale.

]]>
ವಿಜಯಪುರ, ಅ.3: ಕಲಾವಿದರು ದೇಶದ ಸಂಪತ್ತು,
ಕಲೆ, ಸಾಹಿತ್ಯ ಸಂಗೀತ ನಾಡಿನ ಸಾಸಂಸ್ಕೃತಿಕ ಅಸ್ಮಿತೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.


ನಗರದ ಪ್ರವಾಸೋಧ್ಯಮ ಇಲಾಖೆಯ ಸರಕಾರಿ ಆರ್ಟಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಲ್ಲಿ ಬಳ್ಳಾರಿಯ ಕಲಾವಿದ ಮಂಜುನಾಥ ಗೊವಿಂದವಾಡ ಅವರ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚಕ್ಕೆ ದೇಶದ ಕೊಡುಗೆಗಳಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಹಲವಾರು ದೇಶದ ಸಾಂಸ್ಕೃತಿಕ ಚಿಂತಕರು ಭಾರತೀಯ, ರಾಜ್ಯದ ಪರಂಪರೆಯನ್ನು ಅಧ್ಯಯನ ಮಾಡಲು ಬರುತ್ತಾರೆ ಕಾರಣ ಇಲ್ಲಿಯ ಕಲಾವಿದರ ಪ್ರತಿಭೆ ಎಂದು ಅಭಿಪ್ರಾಯ ಪಟ್ಟರು.


ಕಲಾವಿದರಿಗೆ ಸರಕಾರ ಸ್ಪಂಧಿಸುತ್ತಿರುವುದು ಸಂತೋಷದ ಸಂಗತಿ. ಇಂಥ ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕರ್ನಾಟಕ ಲಲಿತಕಲಾ ಅಕಡೆಮಿಯ ಸದಸ್ಯ ರಮೇಶ ಚವ್ಹಾಣ ಮಾತನಾಡಿ, ಇತ್ತೀಚೆಗೆ ವಿಜಯಪುರ ನಗರದಲ್ಲಿ ಕಲಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ನಾಡಿನ ನಾನಾ ಭಾಗದ ಕಲಾವಿದರಿಂದ ಪ್ರದರ್ಶನ ನಡೆಯುತ್ತಿರುವುದು ಜಿಲ್ಲೆಯ ಕಲಾಸಕ್ತರಿಗೆ. ತುಂಬ ಸಂತೋಷವನ್ನುಂಟು ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಇಲಾಖೆಯ ಆರ್ಟ ಗ್ಯಾಲರಿಯಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ನಿರಂತರವಾಗಿ ಇಲ್ಲಿ ಕಲಾವಿದರು ಪ್ರದರ್ಶನ, ಶಿಬಿರ ಎರ್ಪಡಿಸುತ್ತಿರುವುದರಿಂದ ನಮಗೂ ಕಲಾಕೃತಿ ನೋಡಿ ಆಸ್ವಾದಿಸುವಂತಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಪಿ.ಎಸ್.ಕಡೇಮನಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಯೋಜನೆ ಪಡೆದು ವಿಜಯಪುರದಲ್ಲಿ ಪ್ರದರ್ಶನ ಏರ್ಪಡಿಸಿದ್ದು ಸಂತೊಷದ ಸಂಗತಿ. ಇದರಿಂದ ಬೇರೆ ಬೇರೆ ಜಿಲ್ಲೆಯ ಮತ್ತು ರಾಜ್ಯದ ಕಲಾವಿದರು ನಮ್ಮ ಜಿಲ್ಲೆಯ ಕಲಾವಿದರೊಂದಿಗೆ ಅನುಸಂಧಾನವಾಗುತ್ತದೆ. ಕಲಾ ಪ್ರದರ್ಶನ ಆಯೋಜಿಸಿರುವ ಮಂಜುನಾಥ ಗೋವಿಂದವಾಡ ಅವರು ಅಭಿನಂಧನಾರ್ಹರು ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಹಿರಿಯ ಕಲಾವಿದರಾದ ಬಿ.ಎಸ್. ಪಾಟೀಲ್, ಲಿಂಗರಾಜ ಕಾಚಾಪುರ, ರುದ್ರಗೌಡ ಇಂಡಿ, ಶಿವಾನಂದ ಅಥಣಿ, ಮದನ ವಗ್ಯಾನವರ, ಯಾಮಿನಿ ಶಹಾ, ಜಿಲ್ಲಾ ಪ್ರವಾಸಿ ಅಧಿಕಾರಿ ತುಕಾರಾಮ ಪವಾರ, ಅನಿಲ, ಜಗದೇವ ಗುಣಕಿ, ಆನಂದ ಸಹಿತ ಕಲಾಸಕ್ತರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಹಿರಿಯ ಕಲಾವಿದ ವಿದ್ಯಾಧರ ಸಾಲಿ ಕಾರ್ಯಕ್ರಮ ನಿರ್ವಹಿಸಿದರು.
*****

The post ಮಂಜುನಾಥ ಗೊವಿಂದವಾಡರ ಕಲಾ ಪ್ರದರ್ಶನ: ಕಲೆ, ಸಾಹಿತ್ಯ ಸಂಗೀತ ನಾಡಿನ ಸಾಂಸ್ಕೃತಿಕ ಅಸ್ಮಿತೆ -ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅಭಿಮತ appeared first on Karnataka Kahale.

]]>
ಕಾಗದ ಸಾಂಗತ್ಯ ವೇದಿಕೆ ಆಯೋಜನೆ: ಗಮನ ಸೆಳೆದ ‘ಅಂಚೆ ಕಾರ್ಡಿನಲ್ಲಿ ಅಂಬೇಡ್ಕರ್’ ಚಿತ್ರಕಲಾ ಸ್ಪರ್ಧೆ https://www.karnatakakahale.com/news/6400 Tue, 19 Oct 2021 15:12:59 +0000 https://www.karnatakakahale.com/?p=6400   ರಾಣೇಬೆನ್ನೂರು, ಅ. 19: ನಗರದ ಕಾಗದ ಸಾಂಗತ್ಯ ವೇದಿಕೆ ಮಕ್ಕಳಿಗಾಗಿ “ಅಂಚೆ ಕಾರ್ಡಿನಲ್ಲಿ ಅಂಬೇಡ್ಕರ್” ಚಿತ್ರಕಲಾಸ್ಪರ್ಧೆ ಏರ್ಪಡಿಸಿತ್ತು. ಅರ್ಥಪೂರ್ಣ ಹಾಗೂ ಆಕರ್ಷಕವಾಗಿ ಅಂಚೆಕಾರ್ಡಿನಲ್ಲಿ ಅಂಬೇಡ್ಕರ್ ಚಿತ್ರ ರಚಿಸಿ ಪ್ರಶಸ್ತಿ ಪಡೆದ ಶಿವಮೊಗ್ಗದ ಫೇಸ್ ಯು.ಎಂ.ಪಿ.ಯು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ…

The post ಕಾಗದ ಸಾಂಗತ್ಯ ವೇದಿಕೆ ಆಯೋಜನೆ: ಗಮನ ಸೆಳೆದ ‘ಅಂಚೆ ಕಾರ್ಡಿನಲ್ಲಿ ಅಂಬೇಡ್ಕರ್’ ಚಿತ್ರಕಲಾ ಸ್ಪರ್ಧೆ appeared first on Karnataka Kahale.

]]>
 

ರಾಣೇಬೆನ್ನೂರು, ಅ. 19: ನಗರದ ಕಾಗದ ಸಾಂಗತ್ಯ ವೇದಿಕೆ ಮಕ್ಕಳಿಗಾಗಿ “ಅಂಚೆ ಕಾರ್ಡಿನಲ್ಲಿ ಅಂಬೇಡ್ಕರ್” ಚಿತ್ರಕಲಾಸ್ಪರ್ಧೆ ಏರ್ಪಡಿಸಿತ್ತು.
ಅರ್ಥಪೂರ್ಣ ಹಾಗೂ ಆಕರ್ಷಕವಾಗಿ ಅಂಚೆಕಾರ್ಡಿನಲ್ಲಿ ಅಂಬೇಡ್ಕರ್ ಚಿತ್ರ ರಚಿಸಿ ಪ್ರಶಸ್ತಿ ಪಡೆದ ಶಿವಮೊಗ್ಗದ ಫೇಸ್ ಯು.ಎಂ.ಪಿ.ಯು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ ವೈಷ್ಣವಿ.ಬಿ ಅವರಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು.
ರಾಣೆಬೆನ್ನೂರು ಸಮೀಪದ ನಂದಿಗಾವಿ ಗ್ರಾಮದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಮಠದ(ಶ್ರಿ ಗುರು ಕೊಟ್ರಪ್ಪಜ್ಜನ ಗದ್ದುಗೆ) ಆವರಣದಲ್ಲಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಕವಿ, ಅಧ್ಯಾಪಕ ದೇವರಾಜ ಹುಣಸಿಕಟ್ಟಿ ಅವರು ಮಾತನಾಡಿ, ಕೊರೋನಾ ಕಾಲದಲ್ಲಿ ಮುನ್ನಲೆಗೆ ಬಂದ ಆನ್‌ಲೈನ್ ಶಿಕ್ಷಣ ಮಕ್ಕಳಿಗೆ ಪೂರಕವು ಹೌದು, ಎಚ್ಚರ ತಪ್ಪಿದರೆ ಮಾರಕವು ಹೌದು ಎಂದು ಅಭಿಪ್ರಾಯಪಟ್ಟರು.
ಆನ್‌ಲೈನ್ ಮೂಲಕ ಚಿತ್ರಕಲೆಯ ಹೊಸಸಾಧ್ಯತೆಗಳನ್ನು
ವಿದ್ಯಾಥಿಗಳಿಗಳಲ್ಲಿ ಅನಾವರಣಗೊಳಿಸಲು ಸಾಧ್ಯವಾಗಿದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಅವಶ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಸಂಸ್ಥಾಪಕ, ಅಧ್ಯಕ್ಷ ನಾಮದೇವ ಕಾಗದಗಾರ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯ ಬೆಳವಣಿಗೆಗೆ ಪೋಷಕರು ಮತ್ತು ಗುರುಗಳ ಪಾತ್ರ ಅನನ್ಯ ಎಂದು ಹೇಳಿದರು.
ದೇಶದ ಅಭಿವೃದ್ಧಿಯಲ್ಲಿ ಕಲಾಶಿಕ್ಷಣ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆದುಕೊಂಡರೇ ಸಾಲದು. ವಿವಿಧ ಕ್ಷೇತ್ರಗಳಲ್ಲಿ ಸಾಧಿಸುವ ಮೂಲಕ ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕು ಎಂದು ಸಲಹೆ ನೀಡಿದರು. ಶಿಕ್ಷಣ ನಿರಂತರ ಕಲಿಕೆಯ ಪ್ರಕ್ರಿಯೆ. ಕಲಾಶಿಕ್ಷಣ ಮನಸ್ಸಿನಲ್ಲಿರುವ ಅದೃಶ್ಯವಾದ ಅನೇಕ ಭಾವನೆಗಳಿಗೆ ಮೂರ್ತ ಸ್ವರೂಪವನ್ನು ಸೃಷ್ಟಿಸುತ್ತದೆ ಮಾತ್ರವಲ್ಲ,
ಸ್ಮರಣ ಶಕ್ತಿ ಹೆಚ್ಚಿಸುವುದಲ್ಲದೇ ರೂಪರಚನಾ ಸಾಮರ್ಥ್ಯ ಕಡಿಮೆ ಇರುವ ಹಾಗೂ ಬೌದ್ಧಿಕವಾಗಿ ಮಂದವಾಗಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ನಾಮದೇವ ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಪಿ.ಭೀಮೇಶ, ದೀಪಾ.ಪಿ, ವರ್ಷಿಣಿ.ಬಿ, ಕೃಷ್ಣಮೂರ್ತಿ ಬಳಿಗಾರ ಮುಂತಾದವರು ಉಪಸ್ಥಿತರಿದ್ದರು.
*****

The post ಕಾಗದ ಸಾಂಗತ್ಯ ವೇದಿಕೆ ಆಯೋಜನೆ: ಗಮನ ಸೆಳೆದ ‘ಅಂಚೆ ಕಾರ್ಡಿನಲ್ಲಿ ಅಂಬೇಡ್ಕರ್’ ಚಿತ್ರಕಲಾ ಸ್ಪರ್ಧೆ appeared first on Karnataka Kahale.

]]>
ಬಳ್ಳಾರಿಯಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆ: ಶ್ರೀಮಂಜುನಾಥ ಲಲಿತಾ ಕಲಾ ಬಳಗದಿಂದ ಚಿತ್ರಕಲಾ ಪ್ರದರ್ಶನ https://www.karnatakakahale.com/news/4045 Mon, 19 Apr 2021 05:03:25 +0000 https://www.karnatakakahale.com/?p=4045 ಬಳ್ಳಾರಿ: ಶ್ರೀಮಂಜುನಾಥ ಲಲಿತಾ ಕಲಾ ಬಳಗ ಇತ್ತೇಚೆಗೆ ನಗರದಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತು. ವಿಶ್ವ ಚಿತ್ರಕಲಾ ದಿನಾಚರಣೆ ಅಂಗವಾಗಿ ಬಳಗದ ಅಧ್ಯಕ್ಷ ಚಿತ್ರಕಲಾವಿದ ಮಂಜುನಾಥ್ ಗೋವಿಂದವಾಡ ಅವರ ಚಿತ್ರಕಲಾ ಪ್ರದರ್ಶನವನ್ನು ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರೂ ಆದ ಕರ್ನಾಟಕ…

The post ಬಳ್ಳಾರಿಯಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆ: ಶ್ರೀಮಂಜುನಾಥ ಲಲಿತಾ ಕಲಾ ಬಳಗದಿಂದ ಚಿತ್ರಕಲಾ ಪ್ರದರ್ಶನ appeared first on Karnataka Kahale.

]]>
ಬಳ್ಳಾರಿ: ಶ್ರೀಮಂಜುನಾಥ ಲಲಿತಾ ಕಲಾ ಬಳಗ ಇತ್ತೇಚೆಗೆ ನಗರದಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತು.
ವಿಶ್ವ ಚಿತ್ರಕಲಾ ದಿನಾಚರಣೆ ಅಂಗವಾಗಿ ಬಳಗದ ಅಧ್ಯಕ್ಷ ಚಿತ್ರಕಲಾವಿದ ಮಂಜುನಾಥ್ ಗೋವಿಂದವಾಡ ಅವರ ಚಿತ್ರಕಲಾ ಪ್ರದರ್ಶನವನ್ನು ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರೂ ಆದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ. ಮಾತಾ ಮಂಜಮ್ಮ ಜೋಗತಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರನೂರು ಕೊಟ್ರಪ್ಪ, ಡಾ. ಅಶ್ವ ರಾಮು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಮತ್ತು ಕನ್ನಡ ವಿವಿಯಿಂದ ಡಾಕ್ಟರೇಟ್ ಪದವಿಗೆ ಭಾಜನರಾದ ಡಾ . ಅಶ್ವರಾಮು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿಲಾನಿ ಭಾಷಾ, ನೃತ್ಯಗುರು ಅಭಿಷೇಕ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಾಯಕ ದೊಡ್ದ ಬಸವಗವಾಯಿ ಕಗ್ಗಲ್ಲು ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
*****

The post ಬಳ್ಳಾರಿಯಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆ: ಶ್ರೀಮಂಜುನಾಥ ಲಲಿತಾ ಕಲಾ ಬಳಗದಿಂದ ಚಿತ್ರಕಲಾ ಪ್ರದರ್ಶನ appeared first on Karnataka Kahale.

]]>
ಆಸಕ್ತಿ,ಶ್ರದ್ಧೆ, ಪರಿಶ್ರಮವಿದ್ದರೆ ಚಿತ್ರಕಲಾ ಕ್ಷೇತ್ರದಲ್ಲೂ ಹೆಸರು ಮಾಡಬಹುದು -ನಾಗೇಶ್ ರಾವ್ https://www.karnatakakahale.com/news/4035 Sun, 18 Apr 2021 16:13:20 +0000 https://www.karnatakakahale.com/?p=4035 ಬಳ್ಳಾರಿ:ಯುವ ಕಲಾವಿದ ಚನ್ನತೀರದ ಅವರು ಯಾವುದೇ ಕಲಾ ಶಿಕ್ಷಣ, ತರಬೇತಿ ಹಾಗೂ ಗುರುಗಳ ಮಾರ್ಗದರ್ಶನ ಪಡೆಯದೆ ಚಿತ್ರಕಲಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವುದು ವಿಶೇಷ ಎಂದು ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ನಾಗೇಶ್ ರಾವ್ ಅವರು ಹೇಳಿದರು ನಗರದ ನ್ಯೂ ಟ್ರೇಂಡ್ಸ್ ಆಟ್೯ ಗ್ಯಾಲರಿಯಲ್ಲಿ…

The post ಆಸಕ್ತಿ,ಶ್ರದ್ಧೆ, ಪರಿಶ್ರಮವಿದ್ದರೆ ಚಿತ್ರಕಲಾ ಕ್ಷೇತ್ರದಲ್ಲೂ ಹೆಸರು ಮಾಡಬಹುದು -ನಾಗೇಶ್ ರಾವ್ appeared first on Karnataka Kahale.

]]>
ಬಳ್ಳಾರಿ:ಯುವ ಕಲಾವಿದ ಚನ್ನತೀರದ ಅವರು ಯಾವುದೇ ಕಲಾ ಶಿಕ್ಷಣ, ತರಬೇತಿ ಹಾಗೂ ಗುರುಗಳ ಮಾರ್ಗದರ್ಶನ ಪಡೆಯದೆ ಚಿತ್ರಕಲಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವುದು ವಿಶೇಷ ಎಂದು ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ನಾಗೇಶ್ ರಾವ್ ಅವರು ಹೇಳಿದರು
ನಗರದ ನ್ಯೂ ಟ್ರೇಂಡ್ಸ್ ಆಟ್೯ ಗ್ಯಾಲರಿಯಲ್ಲಿ ಇತ್ತೇಚೆಗೆ ಹಮ್ಮಿಕೊಂಡಿದ್ದ ವಿಶ್ವ ಕಲಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಸಕ್ತಿ,ಶ್ರದ್ಧೆ, ಪರಿಶ್ರಮವಿದ್ದರೆ ಚಿತ್ರಕಲಾ ಕ್ಷೇತ್ರದಲ್ಲೂ ಹೆಸರು ಮಾಡಬಹುದು ಎನ್ನುವುದಕ್ಕೆ ಚನ್ನತೀರದ ಅವರೇ ಉದಾಹರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಗೀತ ಹಾಗೂ ಚಿತ್ರಕಲಾ ಶಿಕ್ಷಕ ಹವಾಲ್ದಾರ್ ಅವರು ಮಾತನಾಡಿ ಚಿತ್ರಕಲೆ ಹಾಗೂ ಚಿತ್ರಕಲಾವಿದರಿಗೆ ಸರಕಾರ ಮತ್ತಷ್ಟು ಉತ್ತೇಜನ ನೀಡುವ ಅಗತ್ಯವಿದೆ ಎಂದು ತಿಳಿಸಿದರು.
ಚನ್ನತೀರ ಅವರ ಆರ್ಟ್ ಗ್ಯಾಲರಿಯಲ್ಲಿ ಕಲಾಕೃತಿಗಳು ಕೈಬೀಸಿ ಕರೆಯುತ್ತಿವೆ ಎಂದರು.
ಚಿತ್ರಕಲಾ ಶಿಕ್ಷಕ ನರಸಿಂಹ ಮೂರ್ತಿ ಅವರು ಮಾತನಾಡಿ ಸದ್ದಿಲ್ಲದೆ ನಗರದಲ್ಲಿ ಆರ್ಟ್ ಗ್ಯಾಲರಿ ಆರಂಭಿಸುವ ಮೂಲಕ ಚನ್ನ ತೀರದ ಅವರು ಸಾಹಸ ಮಾಡಿದ್ದಾರೆ. ಕಲಾ ಪೋಷಕರಿಂದ ಪ್ರೋತ್ಸಾಹ ದೊರೆಯಬೇಕಿದೆ ಎಂದರು.
ಮೊಟ್ಟಮೊದಲ ಬಾರಿಗೆ
ನಗರದಲ್ಲಿ ಕಲಾ ಗ್ಯಾಲರಿ ಇರುವುದು ಬಳ್ಳಾರಿಗರಿಗೆ ಹೆಮ್ಮೆಯ ವಿಷಯ. ಇನ್ನಷ್ಟು ಕಲಾ ಗ್ಯಾಲರಿಗಳು ನಗರದಲ್ಲಿ ಆರಂಭವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮತ್ತೋರ್ವ ಚಿತ್ರಕಲಾ ಶಿಕ್ಷಕ ಮಲ್ಲಿಕಾರ್ಜುನ ಅಪಗುಂಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರದ
ಕಿರಿಯ ಹಿರಿಯ ಚಿತ್ರಕಲಾವಿದರು. ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರು, ಸಂಗೀತಗಾರರು,ನೃತ್ಯ ಶಿಕ್ಷಕರು, ಉದಯೋನ್ಮುಖ ಚಿತ್ರಕಲಾವಿದರು, ವಿವಿಧ , ಸ೦ಘ ಸ0ಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
*****

The post ಆಸಕ್ತಿ,ಶ್ರದ್ಧೆ, ಪರಿಶ್ರಮವಿದ್ದರೆ ಚಿತ್ರಕಲಾ ಕ್ಷೇತ್ರದಲ್ಲೂ ಹೆಸರು ಮಾಡಬಹುದು -ನಾಗೇಶ್ ರಾವ್ appeared first on Karnataka Kahale.

]]>
ಇಂದು ವಿಶ್ವ ಜಲ ದಿನ. ಚಿತ್ರಗಳ ಮೂಲಕ ಜಲ ಜಾಗೃತಿ ಮೂಡಿಸುತ್ತಿರುವ ನಾಮದೇವ ಕಾಗದಗಾರ https://www.karnatakakahale.com/news/3676 Mon, 22 Mar 2021 12:22:11 +0000 https://www.karnatakakahale.com/?p=3676 ಇಂದು ವಿಶ್ವ ಜಲ ದಿನ….. ಈ ಹಿನ್ನಲೆಯಲ್ಲಿ ಚಿತ್ರಕಲಾವಿದ ಅವರ ಟಿಪ್ಪಣಿ ಹಾಗೂ ಚಿತ್ರಗಳನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಪ್ರಕಟಿಸಿದೆ… ಪ್ರತಿಯೊಬ್ಬರೂ ನೀರನ್ನು ಉಳಿಸೋಣ…👇 (ಸಂಪಾದಕ) ***** Please save water! Please save water!! Please save water!!!…

The post ಇಂದು ವಿಶ್ವ ಜಲ ದಿನ. ಚಿತ್ರಗಳ ಮೂಲಕ ಜಲ ಜಾಗೃತಿ ಮೂಡಿಸುತ್ತಿರುವ ನಾಮದೇವ ಕಾಗದಗಾರ appeared first on Karnataka Kahale.

]]>
ಇಂದು ವಿಶ್ವ ಜಲ ದಿನ…..
ಈ ಹಿನ್ನಲೆಯಲ್ಲಿ ಚಿತ್ರಕಲಾವಿದ ಅವರ ಟಿಪ್ಪಣಿ ಹಾಗೂ ಚಿತ್ರಗಳನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಪ್ರಕಟಿಸಿದೆ…
ಪ್ರತಿಯೊಬ್ಬರೂ ನೀರನ್ನು ಉಳಿಸೋಣ…👇
(ಸಂಪಾದಕ)
*****
Please save water!
Please save water!!
Please save water!!!
ನೀರು ಉಳಿಸಿಕೊಳ್ಳಿ……

ನೀರು ಉಳಿತಾಯದ ಆಚರಣೆ” ಇಂದಿನ ವಿಶ್ವ ಜಲ ದಿನಕ್ಕೆ ಮೀಸಲಾಗದೇ ದಿನನಿತ್ಯದ ಆಚರಣೆಯಾಗಬೇಕು.. ಕಡ್ಡಾಯವಾಗಿ ಜಾರಿಗೆ ತರಬೇಕು..ನಮ್ಮನ್ನೂ ನಿಮ್ಮನ್ನೂ ಸೇರಿ ಇಲಾಖೆಗಳು, ಸಂಘ ಸಂಸ್ಥೆಗಳಲ್ಲಿ ಎಂದೂ ಇಲ್ಲದ್ದು ಇಂದಿನ ದಿನ ಮಾತ್ರ “ನೀರು ಉಳಿತಾಯದ ಬಗ್ಗೆ ಜಾಗೃತಿ, ಪ್ರೀತಿ, ಕಾಳಜಿ ಮಾತ್ರ ಬಹಳಷ್ಟು ಎದ್ದು ಕಾಣುತ್ತದೆ. ಪುಕ್ಕಟ್ಟೇ ಭಾಷಣ ಬಿಗಿದು, ಬ್ಯಾನರ್ಸ್ , ಫಲಕ ಹಿಡಿದು ಒಂದಿಷ್ಟು ಜಾಗೃತಿ ಮೂಡಿಸಿ ಪ್ರಚಾರಕ್ಕೆ ಮಾತ್ರ ಸೀಮಿತರಾಗಿ ಬಿಡುತ್ತೇವೆ.. ಮತ್ತೇ ಮುಂದಿನ ಇದೇ ಮಾರ್ಚ 22 ಕ್ಕೆ ಕಾಯುತ್ತೇವೆ…
ಒಂದು ತೊಲೆ ಬಂಗಾರ ನೀಡುವೆ ಒಂದು ಹನಿ ನೀರು ಕೊಡಿ ಎಂದರೂ ನೀರು ಸಿಗದ ಪರಿಸ್ಥಿತಿ ಎದುರಾಗುವುದನ್ನು ಸದ್ಯದಲ್ಲಿಯೇ ಕಾಣುತ್ತೇವೆ…ರೇಶನ್ ಅಂಗಡಿಯ ಮುಂದೆ ನೀರು ಖಾಲಿಯಾಗಿದೆ ಮುಂದಿನ ತಿಂಗಳು ಬನ್ನಿ ಎಂಬ ಬೋರ್ಡ್ ಕಾಣುತ್ತೇವೆ…… ಈಗಿನಿಂದಲೇ ಎಚ್ಚರಗೊಳ್ಳೋಣ..
****                                                                ಪ್ರಸ್ತುತ ಜನ ಎದುರಿಸುತ್ತಿರುವ ಗಂಭೀರ ಪರಿಸ್ಥಿತಿ ಕುರಿತಾಗಿ ನಾಮದೇವ ಕಾಗದಗಾರ ಅವರು ಚಿತ್ರಿಸಿದ ಚಿತ್ರಗಳು ಗಮನಸೆಳೆಯುತ್ತಿವೆ…

The post ಇಂದು ವಿಶ್ವ ಜಲ ದಿನ. ಚಿತ್ರಗಳ ಮೂಲಕ ಜಲ ಜಾಗೃತಿ ಮೂಡಿಸುತ್ತಿರುವ ನಾಮದೇವ ಕಾಗದಗಾರ appeared first on Karnataka Kahale.

]]>
ಕಣ್ತಣಿಸಿ ಹೃನ್ಮನ ಸೂರೆಗೊಂಡ ತೊಗಲುಗೊಂಬೆ ರೂಪಕ “ಬಾಪೂಜಿ” https://www.karnatakakahale.com/news/3570 Sat, 13 Mar 2021 16:44:03 +0000 https://www.karnatakakahale.com/?p=3570 ಬಳ್ಳಾರಿ: ಜ್ಞಾನ ವಿಜ್ಞಾನ ತಂತ್ರಜ್ಞಾನ ವಿಕಸನ ವಿದ್ಯಾರ್ಥಿ-ವಿದ್ಯಾರ್ಥಿನಿ ವೃಂದ, ಪ್ರಬುದ್ಧ ವ್ಯಕ್ತಿತ್ವದ ಬೋಧಕ ಬೋಧಕೇತರ ಗಣ್ಯರನ್ನು ಕರ್ಣಮಧುರ ಗೀತಗಾಯನ, ಚಿತ್ತಾಕರ್ಷಕ ಸಂಭಾಷಣೆ-ನಿರೂಪಣೆ, ನೇತ್ರಾನಂದಕರ ತೊಗಲುಗೊಂಬೆ ದೃಶ್ಶಾವಳಿಯ ಜಾನಪದ ಕಲಾ ಮಾಧ್ಯಮದ “ಬಾಪೂಜಿ”ಜೀವನ ಕಥಾಮೃತ ಪ್ರಯೋಗ ಮಂತ್ರಮುಗ್ಧಗೊಳಿಸಿತು. ನಗರದ ಹೊರವಲಯ ಹೊಸಪೇಟೆ-ಬೆಂಗಳೂರು ಬೈಪಾಸ್…

The post ಕಣ್ತಣಿಸಿ ಹೃನ್ಮನ ಸೂರೆಗೊಂಡ ತೊಗಲುಗೊಂಬೆ ರೂಪಕ “ಬಾಪೂಜಿ” appeared first on Karnataka Kahale.

]]>
ಬಳ್ಳಾರಿ: ಜ್ಞಾನ ವಿಜ್ಞಾನ ತಂತ್ರಜ್ಞಾನ ವಿಕಸನ ವಿದ್ಯಾರ್ಥಿ-ವಿದ್ಯಾರ್ಥಿನಿ ವೃಂದ, ಪ್ರಬುದ್ಧ ವ್ಯಕ್ತಿತ್ವದ ಬೋಧಕ ಬೋಧಕೇತರ ಗಣ್ಯರನ್ನು ಕರ್ಣಮಧುರ ಗೀತಗಾಯನ, ಚಿತ್ತಾಕರ್ಷಕ ಸಂಭಾಷಣೆ-ನಿರೂಪಣೆ, ನೇತ್ರಾನಂದಕರ ತೊಗಲುಗೊಂಬೆ ದೃಶ್ಶಾವಳಿಯ ಜಾನಪದ ಕಲಾ ಮಾಧ್ಯಮದ “ಬಾಪೂಜಿ”ಜೀವನ ಕಥಾಮೃತ ಪ್ರಯೋಗ ಮಂತ್ರಮುಗ್ಧಗೊಳಿಸಿತು.
ನಗರದ ಹೊರವಲಯ ಹೊಸಪೇಟೆ-ಬೆಂಗಳೂರು ಬೈಪಾಸ್ ರಸ್ತೆ, ಸುವಿಶಾಲ ಪ್ರಶಾಂತ ಪ್ರಕೃತಿ ಮಡಿಲಲ್ಲಿ ಶೋಭಿಸುವ ಮರ್ಚೇಡ್ ಸಮೂಹ “ಜ್ಞಾನಾಮೃತ ಪಿ.ಯು.ಕಾಲೇಜು” ಮಂಗಳಾಂಗಣದಲ್ಲಿ ಈಚೆಗೆ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ (ರಿ) “ಬಾಪೂಜಿ” ತೊಗಲು ಗೊಂಬೆಯಾಟವನ್ನು ಪ್ರಯೋಗಿಸಿತು.
ಬ್ರಿಟಿಷರ ಕಪಿಮುಷ್ಠಿಯಿಂದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ, ಮಹಾತ್ಮ ಗಾಂಧೀಜಿಯವರ ಭವ್ಯ-ದಿವ್ಯ ಜೀವನವನ್ನು ತೊಗಲು ಗೊಂಬೆಯಾಟ ಜಾನಪದ ಕಲಾಮಾಧ್ಯಮದಲ್ಲಿ ಮನೋಜ್ಞವಾಗಿ ಹೃದಯಂಗಮವಾಗಿ ನಿರೂಪಿಸಿದ ವಿಧಾನವಿಶೇಷತೆಗೆ ಪ್ರೇಕ್ಷಕರು ವಿಸ್ಮಯಾನಂದಭರಿತರಾದರು.
ತೊಗಲುಗೊಂಬೆ ಪ್ರದರ್ಶನಾರಂಭದ ಮುಂಚೆನಡೆದ ಸರಳ ವೇದಿಕೆ ಸಮಾರಂಭವನ್ನು ಇತ್ತೀಚೆಗೆಯಷ್ಟೇ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್ ಪಡೆದ ಡಾ.ಮರ್ಚೇಡ್ ಮಲ್ಲಿಕಾರ್ಜುನ ಗೌಡರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ತಂದೆಯವರ ಆತ್ಮೀಯ ಒಡನಾಡಿಗಳಾಗಿದ್ದ ನಾಡೋಜ ಬೆಳಗಲ್ಲು ವೀರಣ್ಣ ತಮ್ಮ ಕುಟುಂಬದ ಪ್ರೇರಕ ಶಕ್ತಿಯಾಗಿದ್ದಾರೆಂದು ತಿಳಿಸಿದರು.
ರಂಗಕರ್ಮಿ ವೀರಣ್ಣ ಅವರ ರಂಗಭೂಮಿ ಮತ್ತು ತೊಗಲುಗೊಂಬೆಯಾಟ ಜಾನಪದ ಕಲಾಭಿಜ್ಞತೆಯನ್ನು ಪ್ರಶಂಸಿಸಿದರು.
ಮುಖ್ಯಅತಿಥಿಯಾಗಿದ್ದ ಹಿರಿಯ ಸಾಹಿತಿ ಗಂಗಾಧರ ಪತ್ತಾರ ಅವರು, ವೀರಣ್ಣ ಅವರು, ತೊಗಲುಗೊಂಬೆಯಾಟದಲ್ಲಿ ಪ್ರಯೋಗಿಸುತ್ತಿದ್ದ ಪಾರಂಪರಿಕ ರಾಮಾಯಣ- ಮಹಾಭಾರತದ ಕಥಾನಕಗಳ ಬದಲು ಸ್ವಾತಂತ್ರ್ಯ ಸಂಗ್ರಾಮ, ಪ್ರವಾದಿ ಬಸವೇಶ್ವರ, ಬುದ್ಧ, ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕಾವ್ಯದ ಲಂಕಾದಹನ ಪ್ರಸಂಗ, ಕನಕದಾಸರ ಜೀವನ ವೃತ್ತಾಂತಗಳನ್ನು ತೊಗಲುಗೊಂಬೆಯಾಟಕ್ಕೆ ಅಳವಡಿಸಿ ಹೊಸ ಆಯಾಮ ತಂದ ಪ್ರವರ್ತಕರು ಎಂದು ಶ್ಲಾಘಿಸಿದರು.
ಮರ್ಚೇಡ್ ವಿದ್ಯಾಸಂಸ್ಥೆಗಳ ಡೀನ್ ಅನಿಲ ಕಣಗಣ್ಣಿಯವರು “ಜಾನಪದಶ್ರೀ”-“ನಾಡೋಜ” ಸೇರಿದಂತೆ ಹಲವು ಪದವಿ-ಪ್ರಶಸ್ತಿಗಳನ್ನು ಪಡೆದ, ದೇಶ-ವಿದೇಶಗಳಲ್ಲಿ ಭಾರತದ ಪ್ರಾಚೀನ ಕಲೆ ಪ್ರದರ್ಶಿಸಿದ ಅನನ್ಯ ಸಾಧಕರಾದ ಜನಪದ ಶ್ರೀ ಬೆಳಗಲ್ಲು ವೀರಣ್ಣನವರ ಬದುಕು ವಿದ್ಯಾರ್ಥಿ ವೃಂದಕ್ಕೆ ಆದರ್ಶವಾಗಬೇಕೆಂದು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಆರ್.ನಾಗರಾಜ ಅವರು, ಬೆಳಗಲ್ಲು ವೀರಣ್ಣನವರ ತೊಗಲುಗೊಂಬೆಯಾಟದ ಬಗ್ಗೆ ಕೇಳಿದ್ದೆ. ಇಂದು ಪ್ರದರ್ಶಿತ ಬಾಪೂಜಿ ಅಮರ ಜೀವನ ಕಥಾ ವೃತ್ತಾಂತವನ್ನು ತೊಗಲುಗೊಂಬೆ ಮಾಧ್ಯಮದಲ್ಲಿ ಕಣ್ಣಾರೆ ವೀಕ್ಷಿಸಿ ಮೂಕವಿಸ್ಮಿತನಾದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಯಶವಂತ ಶೆಟ್ಟಿ ಅವರು ಮಾತನಾಡಿ, ಬೆಳಗಲ್ಲು ವೀರಣ್ಣ ಅವರ ಕಲಾಜೀವನ, ಸಿದ್ಧಿ-ಸಾಧನೆ ವಿದ್ಯಾರ್ಥಿಗಳಿಗೆ ದಾರಿದೀಪವಾಗ ಬೇಕು, ಇಂತಹ ಮಹನೀಯರಿಂದ ಭಾರತದ ಸನಾತನ ಸಂಸ್ಕೃತಿಯ ಕಲಾ ಜ್ಯೋತಿ ನಿರಂತರ ನಂದಾದೀಪವಾಗಿ ಬೆಳಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿನಿ ಕು. ರಕ್ಷಿತಾ.ಆರ್ ಪ್ರಾರ್ಥಿಸಿದರು. ಟ್ರಸ್ಟಿನ ಸ್ಥಾಯಿ ಸದಸ್ಯರಾದ ಗಂಗಾಧರ ದುರ್ಗಂ ಮತ್ತು ಸುರೇಂದ್ರಸ್ವಾಮಿ ನಿರೂಪಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿಗೆ ಭಾಜರಾದ ಡಾ.ಮರ್ಚೇಡ್ ಮಲ್ಲಿಕಾರ್ಜುನ ಗೌಡರನ್ನು ಜ್ಞಾನಾಮೃತ ಪಿ.ಯು.ಕಾಲೇಜಿನ ಸಿಬ್ಬಂದಿ-ವಿದ್ಯಾರ್ಥಿ ವೃಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿತು.
*****

The post ಕಣ್ತಣಿಸಿ ಹೃನ್ಮನ ಸೂರೆಗೊಂಡ ತೊಗಲುಗೊಂಬೆ ರೂಪಕ “ಬಾಪೂಜಿ” appeared first on Karnataka Kahale.

]]>
ಚಿತ್ರಕಲಾ ಸ್ಪರ್ಧೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರಾಣೇಬೆನ್ನೂರಿನ ಬಾಲ ಪ್ರತಿಭೆಗಳು https://www.karnatakakahale.com/news/3316 Wed, 24 Feb 2021 06:53:35 +0000 https://www.karnatakakahale.com/?p=3316 ರಾಣೇಬೆನ್ನೂರು: ನಗರದ ಟ್ಯಾಗೋರ್ ಏಜ್ಯುಕೇಶನ್ ಸೊಸೈಟಿಯ, ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 6 ನೇ ತರಗತಿ ವಿದ್ಯಾರ್ಥಿ ಪಂಕಜ್ ಕಾಗದಗಾರ ಹಾಗೂ 2 ನೇ ತರಗತಿ ವಿದ್ಯಾರ್ಥಿ ಪ್ರಣವ್ ಕಾಗದಗಾರ ಇವರು ಅತ್ಯುನ್ನತ ” ಎ” ಶ್ರೇಣಿ ಪಡೆದು…

The post ಚಿತ್ರಕಲಾ ಸ್ಪರ್ಧೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರಾಣೇಬೆನ್ನೂರಿನ ಬಾಲ ಪ್ರತಿಭೆಗಳು appeared first on Karnataka Kahale.

]]>
ರಾಣೇಬೆನ್ನೂರು: ನಗರದ ಟ್ಯಾಗೋರ್ ಏಜ್ಯುಕೇಶನ್ ಸೊಸೈಟಿಯ, ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 6 ನೇ ತರಗತಿ ವಿದ್ಯಾರ್ಥಿ ಪಂಕಜ್ ಕಾಗದಗಾರ ಹಾಗೂ 2 ನೇ ತರಗತಿ ವಿದ್ಯಾರ್ಥಿ ಪ್ರಣವ್ ಕಾಗದಗಾರ ಇವರು ಅತ್ಯುನ್ನತ ” ಎ” ಶ್ರೇಣಿ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸೆಂಟರ್ ಫಾರ್ ಏಜ್ಯುಕೇಶನ್ ಡೆವೆಲಪ್ಮೆಂಟ್ ಮತ್ತು ರಿಸರ್ಚ್, ಪುಣೆ( ಮಹಾರಾಷ್ಟ್ರ) ಇವರು ಆಯೋಜಿಸಿದ್ದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟದ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಖ್ಯಾತ ಚಿತ್ರಕಾರ, ಲೇಖಕ ನಾಮದೇವ ಕಾಗದಗಾರ ಅವರ ಪುತ್ರರಾದ ಈ ಬಾಲ ಪ್ರತಿಭೆಗಳು ತಂದೆಯ ಮಾರ್ಗದರ್ಶನದಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪಂಕಜ್ ಕಾಗದಗಾರ. ” ನೀರನ್ನು ಉಳಿಸಿ ಎಂಬ ಜಾಗೃತಿ ವಿಷಯದ ಕುರಿತು ಚಿತ್ರಿಸಿದರೆ, ಪ್ರಣವ್ ಕಾಗದಗಾರ ಪಕ್ಷಿ ಸಂಕುಲದ ಬಗ್ಗೆ ಚಿತ್ರಿಸಿ ಗಮನಸೆಳೆದಿದ್ದರು.

The post ಚಿತ್ರಕಲಾ ಸ್ಪರ್ಧೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರಾಣೇಬೆನ್ನೂರಿನ ಬಾಲ ಪ್ರತಿಭೆಗಳು appeared first on Karnataka Kahale.

]]>