Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಅಂಕಣ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Mon, 10 May 2021 13:03:15 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಅಂಕಣ – Karnataka Kahale https://www.karnatakakahale.com 32 32 ಮಾಧ್ಯಮ ಲೋಕ-೧೨, ಅಂಕಣಕಾರರು: ಡಾ. ಅಮ್ಮಸಂದ್ರ‌ ಸುರೇಶ್, ಮೈಸೂರು, ಈ ವಾರ: ಕೋವಿಡ್-19 ಮತ್ತು ಮಾಧ್ಯಮಗಳ ಜವಾಬ್ದಾರಿ https://www.karnatakakahale.com/news/4286 Mon, 10 May 2021 12:56:17 +0000 https://www.karnatakakahale.com/?p=4286 *ಕೋವಿಡ್-19 ಮತ್ತು ಮಾಧ್ಯಮಗಳ ಜವಾಬ್ದಾರಿ* -ಡಾ.ಅಮ್ಮಸಂದ್ರ ಸುರೇಶ್, ಮೈಸೂರು ಭಾರತದಲ್ಲಿ ಕೋವಿಡ್-19 ಎರಡನೇ ಅಲೆ ಕಳೆದ ತಿಂಗಳಿನಿಂದ ವ್ಯಾಪಕವಾಗಿ ಉಲ್ಪಣಗೊಂಡಿತು. ಇದಕ್ಕೆ ಹೆಚ್ಚಿನವರು ಸರ್ಕಾರಗಳನ್ನು ದೂಷಿಸುತ್ತಿದ್ದಾರೆ. ಆದರೆ ಸರ್ಕಾರಗಳು ತೆಗೆದುಕೊಳ್ಳಬೇಕಾದಷ್ಟೆ ಜವಾಬ್ದಾರಿಯನ್ನು ಮಾಧ್ಯಮಗಳು ಕೂಡ ತೆಗೆದುಕೊಳ್ಳಬೇಕಾಗಿತ್ತು. ಅವುಗಳು ಇದರಲ್ಲಿ ಸಂಪೂರ್ಣವಾಗಿ ಸೋತಿವೆ.…

The post ಮಾಧ್ಯಮ ಲೋಕ-೧೨, ಅಂಕಣಕಾರರು: ಡಾ. ಅಮ್ಮಸಂದ್ರ‌ ಸುರೇಶ್, ಮೈಸೂರು, ಈ ವಾರ: ಕೋವಿಡ್-19 ಮತ್ತು ಮಾಧ್ಯಮಗಳ ಜವಾಬ್ದಾರಿ appeared first on Karnataka Kahale.

]]>
*ಕೋವಿಡ್-19 ಮತ್ತು ಮಾಧ್ಯಮಗಳ ಜವಾಬ್ದಾರಿ*
-ಡಾ.ಅಮ್ಮಸಂದ್ರ ಸುರೇಶ್, ಮೈಸೂರು

ಭಾರತದಲ್ಲಿ ಕೋವಿಡ್-19 ಎರಡನೇ ಅಲೆ ಕಳೆದ ತಿಂಗಳಿನಿಂದ ವ್ಯಾಪಕವಾಗಿ ಉಲ್ಪಣಗೊಂಡಿತು. ಇದಕ್ಕೆ ಹೆಚ್ಚಿನವರು ಸರ್ಕಾರಗಳನ್ನು ದೂಷಿಸುತ್ತಿದ್ದಾರೆ. ಆದರೆ ಸರ್ಕಾರಗಳು ತೆಗೆದುಕೊಳ್ಳಬೇಕಾದಷ್ಟೆ ಜವಾಬ್ದಾರಿಯನ್ನು ಮಾಧ್ಯಮಗಳು ಕೂಡ ತೆಗೆದುಕೊಳ್ಳಬೇಕಾಗಿತ್ತು. ಅವುಗಳು ಇದರಲ್ಲಿ ಸಂಪೂರ್ಣವಾಗಿ ಸೋತಿವೆ. ಪತ್ರಿಕೆಗಳು ಕೇವಲ ಸಾವುಗಳನ್ನು ವರದಿ ಮಾಡ ಹೊರಟರೆ ಟಿವಿ ಮಾಧ್ಯಮ ಬರಿ ಸ್ಮಶಾನ ಮತ್ತು ಸಾವಿನ ಚಿತ್ರಗಳನ್ನು ನಿರಂತರವಾಗಿ ಪ್ರಸಾರ ಮಾಡುವ ಮೂಲಕ ಓದುಗರ ಮತ್ತು ವೀಕ್ಷಕರ ಮನೋಸ್ಥ್ಯೆರ್ಯವನ್ನೆ ಹುದುಗಿಸಿಬಿಟ್ಟವು. ಯಾವ ಮಾಧ್ಯಮಗಳು ಜನರಿಗೆ ಕೊರೊನಾ ಕುರಿತು ವಿವರಗಳನ್ನು, ಮುನ್ನೆಚ್ಚರಿಕೆ ಕ್ರಮಗಳನ್ನು, ಮಾನಸಿಕ ಧ್ಯೆರ್ಯವನ್ನು ತುಂಬ ಬೇಕಾಗಿತ್ತೋ ಅದೇ ಮಾಧ್ಯಮಗಳು ಕೇವಲ ಸಾವು-ನೋವು, ಸ್ಮಶಾನಗಳನ್ನು ಮೃತ ದೇಹಗಳನ್ನು ಸುಡುವ ದೃಶ್ಯಗಳನ್ನು ತೋರಿಸುವ ಮೂಲಕ ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಮುಂದಾಗಿದ್ದು ದುರಂತವೇ ಸರಿ.
ಕುಸಿಯುತ್ತಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಅದಕ್ಕೆ ಸರಕಾರಗಳು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು? ಎಂಬುದರ ಕುರಿತು ಸರ್ಕಾರಗಳಿಗೆ ಮಾರ್ಗದರ್ಶನ ಮಾಡುವಲ್ಲಿ ಮಾಧ್ಯಮಗಳು ಸಂಪೂರ್ಣಾವಾಗಿ ವಿಫಲವಾಗಿವೆ. ಆಕ್ಸಿಜನ್ ಕೊರತೆ, ಬೆಡ್ ದಂಧೆ, ರೆಮಿಡಿಸಿವರ್ ಇಂಜೆಕ್ಷನ್ ಗಳ ಕಾಳಸಂತೆಯಲ್ಲಿ ಮಾರಾಟ ಇವುಗಳ ಕುರಿತು ಎಷ್ಟು ಪತ್ರಿಕೆಗಳು ಮತ್ತು ಎಷ್ಟು ಟಿವಿ ಮಾಧ್ಯಮಗಳು ತನಿಖಾ ವರದಿಗೆ ಮುಂದಾಗಿವೆ? ಕೇವಲ ಸಾರ್ವಜನಿಕರು ದೂರಿದ್ದನ್ನು, ಜನಪ್ರತಿನಿಧಿಗಳು ಹೇಳಿದ್ದನ್ನು ವರದಿ ಮಾಡುವುದಷ್ಟೇ ತಮ್ಮ ಜವಾಬ್ದಾರಿ ಎಂಬಂತೆ ನಡೆದುಕೊಳ್ಳುವುದು ಮಾಧ್ಯಮಗಳಿಗೆ ಶೋಭೆ ತರುವುದಿಲ್ಲ.
ಕೊರೊನಾ ಸೋಂಕಿತರೊಬ್ಬರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತರಾದಾಗ, ಆಸ್ಪತ್ರೆ ವಿದಿಸಿದ ಬಾರಿ ಮೊತ್ತದ ಬಿಲ್ ಪಾವತಿಸಲು ವಿಫಲರಾದಾಗ ಮತ್ತು ಬಿಲ್ ಪಾವತಿಸದೆ ಮೃತ ದೇಹವನ್ನು ನೀಡಲು ನಿರಾಕರಿಸಿದಾಗ ಮೃತಳ ಪತಿ ಮೃತ ದೇಹವನ್ನೇ ಬಿಟ್ಟು ಊರಿಗೆ ಹೊರಟ ಸುದ್ದಿಯನ್ನು ಮಾತ್ರ ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಮಾಧ್ಯಮಗಳ ಕರ್ತವ್ಯ ಮುಗಿಯಿತೇ? ಈ ರೀತಿಯ ಪರಿಸ್ಥಿತಿಗೆ ಯಾರು ಕಾರಣ? ಸಂಬಂಧಿಸಿದ ಆಸ್ಪತ್ರೆಯ ಆಡಳಿತಾಧಿಕಾರಿ ಅಥವಾ ವೈದ್ಯರನ್ನು ಮಾಧ್ಯಮಗಳು ಸಂದರ್ಶಿಸಿ ಈ ಕುರಿತು ಮೃತಳ ಸಂಬಂಧಿಗೆ ನ್ಯಾಯ ಒದಗಿಸಲು ಏಕೆ ಮುಂದಾಗಲಿಲ್ಲ? ಕೇವಲ ನಡೆದಿದ್ದನ್ನು ವರದಿ ಮಾಡಿದರಷ್ಟೆ ತಮ್ಮ ಕೆಲಸ ಮುಗಿಯಿತು ಎಂಬ ಮನೋಭಾವವನ್ನು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಬಿಡಬೇಕಾಗಿರುವುದು ಇಂದಿನ ಅಗತ್ಯವಾಗದೆ. ಸುದ್ದಿಯ ಅಥವಾ ಘಟನೆಯನ್ನು ಹಿಂಬಾಲಿಸುವುದ ಮತ್ತು ಆನಂತರ ನಡೆಯುವ ವಿಚಾರವನ್ನು ಜನರಿಗೆ ತಿಳಿಸಬೇಕಾಗಿರುವುದು ಮಾಧ್ಯಮಗಳ ಜವಾಬ್ದಾರಿಯಾಗಿದೆ.
ಮಾಧ್ಯಮಗಳು ಸುದ್ದಿಯನ್ನು ವರದಿ ಮಾಡಿದರಷ್ಟೆ ಸಾಲದು. ಸುದ್ದಿಯ ಹಿಂದಿನ ಘಟನೆಗಳ ಕುರಿತು ವಿಶ್ಲೇಷಣೆ ಮಾಡುವುದು, ಆಳವಾದ ಅಧ್ಯಯನ ಮಾಡುವುದು. ತನಿಖೆ ನಡೆಸುವುದು, ಸುದ್ದಿಯನ್ನು ಹಿಂಬಾಲಿಸುವುದೂ ಕೂಡ ಮಾಧ್ಯಮಗಳ ಕೆಲಸವಾಗಿದೆ. ಘಟನೆಯನ್ನು ವರದಿ ಮಾಡಲು ಇಂದು ಸಾಮಾಜಿಕ ಮಾಧ್ಯಮಗಳು ಮಂಚೂಣಿಯಲ್ಲಿವೆ. ಕೇವಲ ಅದನ್ನೆ ಸಾಂಸ್ಥಿಕ ಮಾಧ್ಯಮಗಳು ಮಾಡುವುದರಲ್ಲಿ ಅರ್ಥವಿಲ್ಲ.
ಇತ್ತಿಚೆಗೆ ಮಾಧ್ಯಮಗಳ ಸುದ್ದಿ ಅಥವಾ ಘಟನೆಗಳನ್ನು ಹಿಂಬಾಲಿಸುವುದನ್ನೇ (ಫೋಲೋ ಅಪ್) ಬಿಟ್ಟು ಬಿಟ್ಟಿವೆ. ಇದನ್ನೆ ಕೋವಿಡ್-19ರ ಮೊದಲನೆ ಅಲೆಯ ನಂತರ ಮಾಧ್ಯಮಗಳು ಮಾಡಿದವು. ಕೊರೊನಾ ಮೊದಲನೆಯ ಅಲೆ ತಣ್ಣಗಾದ ಬಳಿಕ ಮಾಧ್ಯಮಗಳು ಎಲ್ಲವನ್ನೂ ಮರೆತುಬಿಟ್ಟವು. ತಜ್ಞರುಗಳು ಸರ್ಕಾರಕ್ಕೆ ನೀಡಿದ ವರದಿಗಳು ಎಲ್ಲಾ ಮಾಧ್ಯಮ ಸಂಸ್ಥೆಗಳು ತಮ್ಮ ಟೇಬಲ್ಲಿನ ಖಾನೆಯಲ್ಲಿ ಜೋಪಾನವಾಗಿ ಕಾಪಾಡಿಕೊಂಡಿದ್ದರು. ಆದರೆ ಎರಡನೇ ಅಲೆಯ ಕುರಿತು ಸಾರ್ವಜನಿಕರನ್ನು ಮತ್ತು ಸರ್ಕಾರಗಳನ್ನು ಎಚ್ಚರಿಸುವಲ್ಲಿ ಮಾಧ್ಯಮಗಳು ಸಂಪೂರ್ಣವಾಗಿ ವಿಫಲವಾದವು. ಚುನಾವಣಾ ಆಯೋಗ ಕೆಲವು ರಾಜ್ಯಗಳ ಚುನಾವಣೆಗಳನ್ನು ಮತ್ತು ಉಪ ಚುನಾವಣೆಗಳ ದಿನಾಂಕಗಳನ್ನು ಘೋಷಿಸಿದಾಗ ಮತ್ತು ಮಾಧ್ಯಮಗಳಿಗೆ ಕೊರೊನಾ ಎರಡನೇ ಅಲೆಯ ಕುರಿತಾದ ಎಚ್ಚರಿಕೆಯ ಕುರಿತು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡುವ ಕೆಲಸವನ್ನು ಮಾಡಲೇ ಇಲ್ಲ.
ಚುನಾವಣಾ ಪ್ರಚಾರಗಳ ಸಂದರ್ಭದಲ್ಲೂ, ಸಾರ್ವಜನಿಕರು ಚುನಾವಣಾ ಪ್ರಚಾರ ಸಮಾರಂಭಗಳಲ್ಲಿ ಗುಂಪು ಗಂಪಾಗಿ ಸೇರುವುದನ್ನು ಮತ್ತು ರಾಜಕೀಯ ಪಕ್ಷಗಳು ಮುಖಂಡರು ಮಾಡಿದ ಭಾಷಣಗಳನ್ನು ವರದಿ ಮಾಡಿದ ಮಾಧ್ಯಮಗಳು ಈ ರೀತಿ ಗುಂಪು ಸೇರುವುದರಿಂದ ಕೊರೊನಾ ಎರಡನೇ ಅಲೆಗೆ ಮತ್ತಷ್ಟು ಪುಷ್ಟಿ ಸಿಗಲಿದೆ ಎಂಬುದನ್ನು ವಿವರಿಸಿ ಸಾರ್ವಜನಿಕರಿಗೆ ಸಲಹೆ ನೀಡುವ ಹಾಗು ರಾಜಕೀಯ ಪಕ್ಷಗಳಿಗೆ ಮತ್ತು ರಾಜಕೀಯ ಮುಖಂಡರುಗಳಿಗೆ ಈ ಕುರಿತು ಮಾರ್ಗದರ್ಶನ ಮಾಡುವಲ್ಲಿ ಎಡವಿದವು. ಮಾಧ್ಯಮಗಳ ಈ ನಿರ್ಲಕ್ಷ್ಯವೂ ಕೂಡ ಕೋವಿಡ್-19ರ ಇಂದಿನ ವ್ಯಾಪಕ ಹರಡುವಿಕೆಗೆ ಒಂದು ಕಾರಣವಾಗಿದೆ.
ಮೊದಲನೆಯ ಅಲೆಯಲ್ಲಿ ಸರ್ಕಾರ ಲಾಕ್ ಡೌನ್ ನಂತಹ ಕಠಿಣ ಕ್ರಮಗಳನ್ನು ತೆಗೆದುಕೊಂಡಾಗ ಹೆಚ್ಚಿನ ಮಾಧ್ಯಮಗಳು ಕೇವಲ ಆರ್ಥಿಕ ಸಂಕಷ್ಟಗಳ ಕುರಿತು ಹೆಚ್ಚಿನ ವರದಿಗಳನ್ನು ಮಾಡಿದವೇ ಹೊರತು ಜನ ಸಾಮಾನ್ಯರ ಜೀವ ಮತ್ತು ಜೀವನದ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಟಿ ಆರ್ ಪಿ ಹೆಚ್ಚಿಸಿಕೊಳ್ಳುವ ಬರದಲ್ಲಿ ಅದರಿಂದ ಆಗುತ್ತಿರುವ ಅವಾಂತರಗಳನ್ನು ದೃಶ್ಯ ಮಾಧ್ಯಮಗಳು ಪರಿಗಣಿಸುತ್ತಿಲ್ಲ. ಅವುಗಳು ಕೇವಲ ಬ್ರೇಕಿಂಗ್ ನ್ಯೂಸ್ ನೀಡಿದರಷ್ಟೇ ಸಾಲದು ದೃಶ್ಯ ಮಾಧ್ಯಮಗಳ ಪತ್ರಕರ್ತರು ತಮ್ಮ ಕ್ಯಾಮಾರಾ ಕಣ್ಣುಗಳನ್ನು ಜನ ಸಾಮಾನ್ಯರಿಗೆ ನ್ಯಾಯ ಒದಗಿಸಲು ಬಳಸಬೇಕು. ಕೇವಲ ಕೋರೊನಾದಿಂದ ಮೃತರಾದವರನ್ನು ಹೊತ್ತು ಸ್ಮಶಾನಗಳಲ್ಲಿ ಸಾಲು ನಿಂತಿರುವ ಆ್ಯಂಬುಲೆನ್ಸ್ ಗಳನ್ನು ತೋರಿಸಿದರೆ ಸಾಲದು. ಕೋವಿಡ್-19ರ ಹೆಸರಿನಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಬೆಡ್ ಮತ್ತು ಆಕ್ಸಿಜನ್ ದಂಧೆಗಳ ಕಡೆಗೂ ತಮ್ಮ ಕ್ಯಾಮರಾ ಕಣ್ಣುಗಳನ್ನು ತಿರುಗಿಸಬೇಕು.
ಎಷ್ಟು ಟಿವಿ ವಾಹಿನಿಗಳು ಕೊರೊನಾದಿಂದ ಉಂಟಾಗಿರುವ ಮೂಲಭೂತ ಸಮಸ್ಯೆಗಳನ್ನು ಪ್ರತಿಬಿಂಬಿಸಿವೆ? ಕೋರೊನಾ ಹೆಸರಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಬಯಲಿಗೆಳೆದಿವೆ? ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಮಾರ್ಗದರ್ಶನ ಮಾಡಿವೆ? ಎಂಬುದನ್ನು ಸಮಾಜ ಗಮನಿಸುತ್ತಲೇ ಬಂದಿದೆ. ಕೇವಲ ಮಾಸ್ಕ್ ಹಾಕಿ, ಸ್ಯಾನಿಟೈಸರ್ ಸಿಂಪಡಿಸಿಕೊಳ್ಳಿ ಅಥವಾ ದೈಹಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳುವುದಷ್ಟೆ ಮಾಧ್ಯಮಗಳ ಜವಾಬ್ದಾರಿಯಲ್ಲ. ಭೀತಿ ಹರಡುವುದನ್ನು ನಿಲ್ಲಿಸಬೇಕು. ಸರಕಾರ ಕೊರೊನಾ ತಡೆಗೆ ‘ಕರ್ಫ್ಯೂ’ ವಿಧಿಸಿದಾಗ ಅದನ್ನು ತಮಗಿಷ್ಟ ಬಂದಂತೆ ಮಾಧ್ಯಮಗಳು ‘ಜನತಾ ಕರ್ಫ್ಯೂ’ ಎಂದು ತಮ್ಮದೇ ಆದ ವ್ಯಾಖ್ಯಾನ ಮಾಡುತ್ತಿವೆ. ಸರಕಾರದ ಆದೇಶದಲ್ಲಿ ಜನತಾ ಕರ್ಫ್ಯೂ ಎಂಬ ಪದವನ್ನೇ ಬಳಸಿಲ್ಲ. ಮಾಧ್ಯಮಗಳು ಈ ರೀತಿಯ ಅಸಮಂಜಸ ಪದಗಳನ್ನು ಉಪಯೋಗಿಸುವುದನ್ನು ನಿಲ್ಲಿಸುವುದು ಸೂಕ್ತ.
ಕೊರೊನಾ ಕುರಿತು ಮುಖ್ಯಮಂತ್ರಿಗಳು ಅಥವಾ ಪ್ರಧಾನ ಮಂತ್ರಿಗಳು ಏನಾದರೂ ಸುದ್ದಿಗೋಷ್ಠಿ ನಡೆಸುವ ಮೊದಲು ಅಥವಾ ಜನತೆಯನ್ನು ಉದ್ದೇಶಿಸಿ ಮಾತನಾಡುವ ಮುನ್ನ ದೃಶ್ಯ ಮಾಧ್ಯಮಗಳು ತಾವೇ ಎಲ್ಲವನ್ನೂ ಕಲ್ಪಿಸಿಕೊಂಡು ಬೆಳಗ್ಗೆಯಿಂದ ಸಂಜೆವರೆಗೂ ಹೀಗೆ ಹೇಳಬಹುದು, ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು, ಎನೆಲ್ಲಾ ಸಲಹೆಗಳನ್ನು ನೀಡಬಹುದು? ಮುಂತಾದ ವಿಚಾರಗಳನ್ನು ಕಲ್ಪಿಸಿಕೊಂಡು ಭವಿಷ್ಯ ಹೇಳುವವರಂತೆ ಹೇಳಿದ್ದನ್ನೆ ಹೇಳುವ ಮೂಲಕ ವೀಕ್ಷಕರ ತಲೆಕೆಡಿಸುವುದು ಎಷ್ಟು ಸರಿ? ರಾಷ್ಟ್ರಪತಿಗಳು ಅಥವಾ ಪ್ರಧಾನಿಗಳು ಸ್ವಾತಂತ್ರ್ಯ ದಿನ ಅಥವಾ ಗಣರಾಜ್ಯೋತ್ಸವಗಳ ಮುನ್ನಾ ದಿನ ದೇಶವನ್ನು ಉದ್ದೇಶಿಸಿ ಮಾತನಾಡುವ ಭಾಷಣದ ಪ್ರತಿಯನ್ನು ಮಾಧ್ಯಮ ಸಂಸ್ಥೆಗಳಿಗೆ ಮೊದಲೆ ಕಳುಹಿಸಿಕೊಡುವ ವಾಡಿಕೆ ನಮ್ಮಲಿದೆ. ಆದರೆ ಅದನ್ನು ಅವರ ಭಾಷಣದ ನಂತರವೇ ಮಾಧ್ಯಮಗಳು ವರದಿ ಮಾಡಬೇಕೆಂಬ ಷರತ್ತು ವಿಧಿಸಲಾಗಿರುತ್ತದೆ. ಆದರೆ ಮಾಧ್ಯಮಗಳು ಮುಖ್ಯಮಂತ್ರಿಗಳು ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ ಎಂಬುದರಿಂದ ಹಿಡಿದು ಅವರು ಏನೆಲ್ಲಾ ಮಾತನಾಡಬಹುದು ಎಂದು ಕಲ್ಪಿಸಿಕೊಂಡು ಭವಿಷ್ಯ ಹೇಳುವ ಜೊತೆಗೆ ಸುದ್ದಿಗೋಷ್ಠಿಯನ್ನು ರದ್ದು ಮಾಡಿದ್ದನ್ನು, ಸುದ್ದಿಗೋಷ್ಠಿಯನ್ನು ಮರು ನಿಗದಿ ಮಾಡಿದ್ದನ್ನು ಬಹಳ ಮುಖ್ಯವಾದ ವಿಷಯಗಳಂತೆ ಬಿತ್ತರ ಮಾಡಿದ್ದನ್ನು ಎಲ್ಲರೂ ವೀಕ್ಷಿಸಿದ್ದಾರೆ. ಸುದ್ದಿಗೋಷ್ಠಿ ಕರೆದ, ಮರು ನಿಗದಿ ಮಾಡಿದ ವಿಷಯಗಳು ಮಾಧ್ಯಮಗಳ ಸಿಬ್ಬಂದಿಗಳಿಗಷ್ಟೆ ಗೊತ್ತಾದರೆ ಸಾಕು. ಅದನ್ನು ಕಟ್ಟಿಕೊಂಡು ಸಾಮಾನ್ಯ ಜನಕ್ಕೆ ಏನಾಗಬೇಕು? ಜನರಿಗೆ ಬೇಕಾಗಿರುವುದು ಮುಖ್ಯಮಂತ್ರಿಗಳು ಏನು ಹೇಳುತ್ತಾರೆ? ಎಂಬುದು ಮಾಧ್ಯಮಗಳು ಅಷ್ಟನ್ನು ಹೇಳಿದರಷ್ಟೆ ಸಾಕು. ಮಿಕ್ಕಿದ್ದೆಲ್ಲಾ ಅನಗತ್ಯವಾದ ವಿಚಾರ.
# # #
-ಡಾ.ಅಮ್ಮಸಂದ್ರ ಸುರೇಶ್
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346
*****

The post ಮಾಧ್ಯಮ ಲೋಕ-೧೨, ಅಂಕಣಕಾರರು: ಡಾ. ಅಮ್ಮಸಂದ್ರ‌ ಸುರೇಶ್, ಮೈಸೂರು, ಈ ವಾರ: ಕೋವಿಡ್-19 ಮತ್ತು ಮಾಧ್ಯಮಗಳ ಜವಾಬ್ದಾರಿ appeared first on Karnataka Kahale.

]]>
ಮಾಧ್ಯಮಲೋಕ-೧೧ ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು https://www.karnatakakahale.com/news/4124 Wed, 28 Apr 2021 10:59:18 +0000 https://www.karnatakakahale.com/?p=4124 ‘ಕುವೆಂಪು ಮತ್ತು ವೈಚಾರಿಕತೆ’ -ಡಾ.ಅಮ್ಮಸಂದ್ರ ಸುರೇಶ್, ಮೈಸೂರು ಇಂದಿನ ವಿಶ್ವವನ್ನು ಆಳುವುದು ವೈಚಾರಿಕತೆಯೇ ಹೊರತು, ವ್ಯಕ್ತಿ ಅಥವಾ ಧರ್ಮಗಳಲ್ಲ. ಕುವೆಂಪು ಇಂದು ಜಗತ್ತಿನಲ್ಲಿ ಇಲ್ಲದಿದ್ದರೂ ಕೂಡ ಅವರ ವೈಚಾರಿಕತೆಗಳು ಮತ್ತು ವಿಶ್ವಮಾನವ ಸಂದೇಶ ಇಂದಿಗೂ ಜೀವಂತವಾಗಿವೆ. ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ…

The post ಮಾಧ್ಯಮಲೋಕ-೧೧ ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು appeared first on Karnataka Kahale.

]]>
‘ಕುವೆಂಪು ಮತ್ತು ವೈಚಾರಿಕತೆ’
-ಡಾ.ಅಮ್ಮಸಂದ್ರ ಸುರೇಶ್, ಮೈಸೂರು

ಇಂದಿನ ವಿಶ್ವವನ್ನು ಆಳುವುದು ವೈಚಾರಿಕತೆಯೇ ಹೊರತು, ವ್ಯಕ್ತಿ ಅಥವಾ ಧರ್ಮಗಳಲ್ಲ. ಕುವೆಂಪು ಇಂದು ಜಗತ್ತಿನಲ್ಲಿ ಇಲ್ಲದಿದ್ದರೂ ಕೂಡ ಅವರ ವೈಚಾರಿಕತೆಗಳು ಮತ್ತು ವಿಶ್ವಮಾನವ ಸಂದೇಶ ಇಂದಿಗೂ ಜೀವಂತವಾಗಿವೆ. ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಂದು ವ್ಯಾಪಕವಾದ ಬದಲಾವಣೆಗಳು ಮತ್ತು ಪ್ರಗತಿ ಸಾಧಿಸಿದ್ದರೂ ಮೌಡ್ಯ, ಅಂಧಶ್ರದ್ದೆ, ವರ್ಗ ತಾರತಮ್ಯಗಳು ಬೆಳೆಯುತ್ತಲೇ ಹೋಗುತ್ತಿವೆ. ಸ್ವಾರ್ಥ, ಅಧಿಕಾರ ಲಾಲಸೆ, ವಿಚಾರ ಶೂನ್ಯತೆ ಹೆಚ್ಚಿನ ಜನರನ್ನು ಆಕ್ರಮಿಸಿವೆ. ನಾವು ಭೌತಿಕವಾಗಿ ಬೆಳೆಯುತ್ತಿದ್ದರೂ ಆಂತರಿಕವಾಗಿ ವಿವಿಧ ಸಾಮಾಜಿಕ ರೋಗಗಳಿಂದ ಬಳಲುತ್ತಿದ್ದೇವೆ. ಸಮಾಜ ಸೇವೆ, ಸಾಹಿತ್ಯ, ಸಂಸ್ಕೃತಿ, ಮಾನಸಿಕ ಮತ್ತು ಸಾಮಾಜಿಕ ವಿಶಾಲತೆಗಳಿಗಿಂತ ಹಣ ಗಳಿಸುವಿಕೆ ಅತ್ಯಂತ ಮುಖ್ಯವಾಗುತ್ತಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆಯೂ ಕೂಡ ಕುವೆಂಪುರವರ ವೈಚಾರಿಕ ಪ್ರಜ್ಞೆ ಇಂದಿನ ಸಂದರ್ಭಕ್ಕೆ ಅತ್ಯಗತ್ಯವಾಗಿದೆ. ‘ಸರ್ವೇ ಜನ ಸುಖಿನೋ ಭವಂತೂ’ ಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ವಿಶ್ವಮಾನವರಾಗಬೇಕಾಗಿದೆ. ಏನಾದರಾಗು ಮೊದಲು ಮಾನವನಾಗು ಎಂಬ ಕವಿವಾಣಿ ನಿತ್ಯನೂತನವಾಗಬೇಕಾಗಿದೆ. ಮನುಜಮತ-ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಈ ಪಂಚ ಸೂತ್ರಗಳು ಬದುಕಿನ ದಾರಿದೀಪಗಳಾಗಬೇಕು. ಮನುಷ್ಯನು ಜಾತಿ, ಮತದ ಹೆಸರಿನಲ್ಲಿ ಸಂಕುಚಿತ ಮನೋಭಾವದಿಂದ ಮತ್ತೊಬ್ಬರ ಘನತೆ ಮತ್ತು ವ್ಯಕ್ತಿತ್ವವನ್ನು ಗೌರವಿಸದೆ ಎಲ್ಲರನ್ನೂ ತನ್ನಂತೆಯೇ ಭಾವಿಸಿ ಸಮರಸ ಭಾವದಿಂದ ಮುಂದುವರೆಯಬೇಕೆಂಬ ಜೀವನ ಮಾರ್ಗವೇ ವಿಶ್ವಪಥ.
ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರ ಬನ್ನಿ
ಬಡತನವ ಬುಡಮಟ್ಟ ಕೀಳ ಬನ್ನಿ,
ಮೌಡ್ಯತೆಯ ಮಾರಿಯನು ಹೊರದೂಡಲೈ ತನ್ನಿ.
ಎಂಬ ಕವನದಲ್ಲಿ ಕುವೆಂಪುರವರು ಧರ್ಮ, ಜಾತಿ, ಮತಗಳಿಗಿಂತ ಮನುಷ್ಯನಿಗೆ ಅಗತ್ಯವಾಗಿರುವುದು ಎರಡೊತ್ತಿನ ಊಟ ಎನ್ನುವ ಮೂಲಕ ಹೊಸ ಜಗತ್ತಿನ ನಿಯಮಗಳ ದಿಗ್ದರ್ಶನವನ್ನೇ ಮಾಡಿಸಿದ್ದಾರೆ. ನಮ್ಮಲ್ಲಿ ಬೆಳಸಿಕೊಂಡಿರುವ ಮೌಡ್ಯತೆಯನ್ನು ಹೊಡೆದೋಡಿಸಿ, ಆಸ್ತಿಕ ಸಮಾಜದ ಸಾಂಪ್ರದಾಯಿಕ ಸಂಕೋಲೆಗಳೆನ್ನು ಕಿತ್ತೆಸೆಯಲು ಕರೆ ನೀಡಿದ ಕುವೆಂಪು ನೂರು ದೇವರುಗಳ ನೂಕಾಚೆ ದೂರ ಎಂದು ಕರೆಕೊಡುವ ಮೂಲಕ, ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ ಚಲಿಸಬೇಕಾದ ಮಾನವೀಯತೆ ವೈಚಾರಿಕತೆಯ ನೆಲೆಯಲ್ಲಿ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳಬೇಕಿರುವುದು ಇಂದಿನ ಅನಿವಾರ್ಯತೆಯಾಗಿದೆ.
ಕುವೆಂಪು ಅವರಿಗೆ ಯುದ್ದದ ಕುರಿತು ಅರಿವು ಮತ್ತು ಪೂರ್ಣವಾದ ಪ್ರಜ್ಞೆ ಕೂಡ ಇತ್ತು. ಜಾತಿ,ಮತ, ಧರ್ಮಗಳ ಆಚೆ ಬನ್ನಿ ಎಂದು ಕರೆಕೊಡುವ ಮೂಲಕ ಶಾಂತಿ ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕೆ ಕರೆ ನೀಡಿದರು. ಶೂದ್ರತಪಸ್ವಿಯಲ್ಲಿ ನಡೆಯುವ ರಾಮ ಮತ್ತು ಶಂಭೂಕನ ಯುದ್ದ, ಕಾಡಿನಲ್ಲಿ ನಡೆಯುವ ಪೌರುಷ ಯುದ್ದ, ಸ್ಮಶಾನ ಕುರುಕ್ಷೇತ್ರದಲ್ಲಿ ಸೃಷ್ಟಿಸಿರುವ ಸಾಮಾಜಿಕ ಪರಿಕಲ್ಪನೆಗಳೊಂದಿಗೆ ಕುವೆಂಪು ಯುದ್ದದಿಂದ ಆಗುವ ದುಷ್ಪರಿಣಾಮಗಳು ಹಾಗೂ ವಿನಾಶದ ಕುರಿತು ಆತಂಕ ವ್ಯಕ್ತಪಡಿಸುತ್ತಾರೆ.
ವರ್ಣಾಶ್ರಮ ಪದ್ದತಿಯನ್ನು ತಿದ್ದುವುದಲ್ಲ ಬದಲಾಗಿ ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು ಎಂಬುದು ರಸಋಷಿಯ ಆಶಯವಾಗಿತ್ತು. ಇಂಗ್ಲೀಷ್ ನ ನವೋದಯ ಕಾಲದ ರಮ್ಯ ಕವಿಗಳ ಪ್ರಭಾವಕ್ಕೊಳಗಾಗಿ ಬಿಗಿನರ್ಸ್ ಮ್ಯೂಸ್ ಎಂಬ ಆರು ಕವನಗಳ ಸಂಕಲನವನ್ನು 1922ರಲ್ಲೆ ರಚಿಸಿದ ಕುವೆಂಪು, ಇಗ್ಲೀಷ್ ಕವಿ ಜೇಮ್ಸ್ ಕಸಿನ್ ಸಲಹೆಯ ಮೇರೆಗೆ ಕನ್ನಡದಲ್ಲಿ ಸಾಹಿತ್ಯ ರಚಿಸಲು ತೊಡಗಿದರು. ಅವರ ಸಾಹಿತ್ಯ ಸೃಷ್ಠಿ ಎಂತಹವರನ್ನಾದರೂ ಬೆರಗುಗೊಳಿಸುವಂತದ್ದು. ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾಧ, ನಾಟಕ ಹೀಗೆ ಸಾಹಿತ್ಯದ ಎಲ್ಲಾ ರೂಪಗಳಲ್ಲಿಯೂ ಕೈಯ್ಯಾಡಿಸಿದ ಕೀರ್ತಿ ಅವರದು.
ಅವರ ನೇಗಿಲ ಯೋಗಿ ಪದ್ಯದ ಪ್ರತಿಯೊಂದು ಸಾಲೂ ಕೂಡ ನಿತ್ಯನೂತನವಾಗಿವೆ,
ಯಾರೂ ಅರಿಯದ ನೇಗಿಲಯೋಗಿಯೆ
ಲೋಕಕೆ ಅನ್ನವನೀಯುವನು..
ಹೆಸರನು ಬಯಸದೆ, ಅತಿ ಸುಖಕೆಳಸದೆ
ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ
ನೇಗಿಲ ಮೇಲೆ ನಿಂತಿದೆ ಧರ್ಮ
ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನಾಣ್ಣುಡಿಯನ್ನು ‘ನೇಗಿಲ ಕೊಳದೊಳಗಡಗಿದೆ ಕರ್ಮ, ನೇಗಿಲ ಮೇಲೆ ನಿಂತಿದೆ ಧರ್ಮ’ ಎಂದು ಹೇಳುವ ಮೂಲಕ ಪ್ರತಿಧ್ವನಿಸಿದ್ದಾರೆ. ಇಲ್ಲಿ ಧರ್ಮಕ್ಕಿಂತ ಕರ್ಮವೇ ಶ್ರೇಷ್ಠ ಎನ್ನುವ ರಾಷ್ಟ್ರಕವಿ, ರೈತ ಈ ದೇಶದ ಜೀವನಾಡಿ ಎಂಬುದನ್ನು ಒತ್ತಿ ಹೇಳಿದ್ದಾರೆ. ಕೃಷಿಕ ಮತ್ತು ಕೃಷಿಯ ಮೇಲೆ ಇಂದಿಗೂ ಹೊಸಬೆಳಕನ್ನು ಚೆಲ್ಲುವ ನೇಗಿಲ ಯೋಗಿಯ ಸಾಲುಗಳು ಇಂದಿಗ ಯುವ ಜನಾಂಗಕ್ಕೆ ಅವುಗಳ ಅನಿವಾರ್ಯತೆಯನ್ನು ಮತ್ತು ಬದುಕಿನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುತ್ತವೆ.
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿದೆಯೇನು?
ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು!
ನೀರಡಿಸಿ ಬಂದ ಸೋದರನಿಗೆ ನೀರನು ಕೊಡಲು
ಮನುಧರ್ಮ ಶಾಸ್ತ್ರವೆನಗೊರಯಬೇಕೇನು?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆಬೇಕೇನು?
ಎಂಬ ಪ್ರಶ್ನೆಗಳನ್ನು ಜನರ ಮುಂದೆ ಇಡುವ ಮೂಲಕ ಜನರ ಮನಸ್ಸನ್ನು ಚಿಂತನೆಗೆ ಒಳಪಡಿಸುತ್ತಾರೆ. ಬಾಯಾರಿ ಬಂದ ಮನುಷ್ಯನಿಗೆ ಕುಡಿಯಲು ನೀರು ಕೊಡಲು ಮನುವಿನ ಅಪ್ಪಣೆಯ ಅಗತ್ಯವೇನು? ‘ಪಂಚಮರ ಮಗುವೊಂದು ಕೆರೆಯಲ್ಲಿ ಮುಳುಗುತಿರೆ, ದಡದಲ್ಲಿ ಮೀಯುತ್ತ ನಿಂತಿರುವ ನಾನು ಮುಟ್ಟಿದರೆ ಬ್ರಹ್ಮತ್ವ ಹೋಗುವುದೆಂದು ಸುಮ್ಮನಿದ್ದರೆ ಶಾಸ್ತ್ರಸಮ್ಮತವಧೇನು? ಎಂದು ಮನುಸಿದ್ದಾಂತವನ್ನು ಆಕ್ರೋಶದಿಂದ ಪ್ರಶ್ನಿಸುತ್ತಾರೆ. ಮನುಷ್ಯನಾದವನಿಗೆ ಆತ್ಮಸಾಕ್ಷಿಯೇ ಅತ್ಯಂತ ದೊಡ್ಡದು ಆತ್ಮಸಾಕ್ಷಿಯ ಮುಂದೆ ಎಲ್ಲಾ ಶಾಸ್ತ್ರಗಳು ಶೂನ್ಯ, ಮಾನವೀಯತೆಗೆ ವಿರುದ್ದವಾದ ಯಾವುದೇ ಶಾಸ್ತ್ರ ಅಥವಾ ಗ್ರಂಥಗಳು ಓದಲು ಯೋಗ್ಯವಾದವುಗಳಲ್ಲ ಬದಲಾಗಿ ಅವುಗಳನ್ನು ದೂರ ಬಿಸಾಡಿ ಎಂಬುದನ್ನು ಕುವೆಂಪು ಮಾರ್ಮಿಕವಾಗಿ ಈ ಕವನದಲ್ಲಿ ತಿಳಿಸಿದ್ದಾರೆ. ಆದ್ದರಿಂದಲೇ ಕುವೆಂಪುರವರ ವಿಚಾರಧಾರೆಗಳೂ ಇಂದಿಗೂ, ಎಂದೆಂದಿಗೂ ಪ್ರಸ್ತುತ.
ರಾಮಾಯಣ ಧರ್ಶನಂ, ಮಲೆಗಳಲ್ಲಿ ಮದುಮಗಳು, ಬೆರಳ್ ಗೆ ಕೊರಳ್, ಶೂದ್ರ ತಪಸ್ವಿ ಹಾಗೂ ಜಲಗಾರ ನಾಟಕಗಳಲ್ಲಿ ಇಲ್ಲಿ ಯಾರೂ ಮುಖ್ಯರೂ ಅಲ್ಲ, ಯಾರೂ ಅಮುಖ್ಯರೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸುವ ಜೊತೆಗೆ ಜಾತಿಗಿಂತ ಮಾನವೀಯತೆಯೇ ಮುಖ್ಯ ಅದನ್ನು ಬಿಟ್ಟು ಮಿಕ್ಕಿದ್ದೆಲ್ಲಾ ಶೂನ್ಯ ಎಂದು ಪ್ರತಿಪಾದಿಸುತ್ತಾರೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಅತೀಂದ್ರಿಯವಾದ ಹೊಳಹುಗಳನ್ನು ಕಾಣಬಹುದು. ಗುಡ್ಡದಯ್ಯ ಅದರ ಪ್ರತಿನಿಧಿಯಾಗಿ ಹೊರಹೊಮ್ಮಿದ್ದಾನೆ. ಕಾದಂಬರಿಯಲ್ಲಿ ಹೆಣ್ಣಿನ ವಾಸನೆ, ಮಧ್ಯದ ವಾಸನೆ, ಬಾಡಿನ ವಾಸನೆ ಹೀಗೆ ಎಲ್ಲವೂ ಸಮ್ಮಿಳಿತಗೊಂಡಿವೆ. ಕಾದಂಬರಿಯಲ್ಲಿ ಬರುವ ಯಾವ ಪಾತ್ರವೂ ಕೂಡ ವಿಶೇಷವಾದುದಾಗಬೇಕೆಂದು ಹಾತೊರೆಯುವುದಿಲ್ಲ. ಪ್ರತಿಯೊಂದು ಪಾತ್ರವೂ ಇದ್ದುದ್ದನ್ನು ಇದ್ದ ಹಾಗೆ ನೇರವಾಗಿ ಅನುಭಿಸುತ್ತವೆ.
ಕುವೆಂಪು ಕಾದಂಬರಿಗಳು ಕೇವಲ ಕಥೆಯನ್ನು ಓದುವ ಕೃತಿಗಳಲ್ಲ ಬದಲಾಗಿ ಒಂದು ಪ್ರಾದೇಶಿಕತೆಯ ಜನಜೀವನದ ಪರಿಪೂರ್ಣ ದರ್ಶನದ ದೃಷ್ಟಿಯಿಂದ ಅವಲೋಕಿಸಬಹುದಾದ ಕೃತಿಗಳಾಗಿವೆ. ಗುತ್ತಿ ಮತ್ತು ಅವನ ನಾಯಿ,ಹುಲಿಯನ ಸಹವಾಸ, ನಾಯಿಯಿಂದಲೇ ಗುತ್ತಿ ನಾಯಿಗುತ್ತಿಯಾದ ಮನುಷ್ಯ ಮತ್ತು ಪ್ರಾಣಿಗಳ ನುಡುವಿನ ಸಂಬಂಧ, ತುಂಗಾನದಿಯ ವೇಗಕ್ಕೆ ನಾಯಿ ಹುಲಿಯಾ ಕಣ್ಮರೆಯಾಗುವ ಸನ್ನಿವೇಶ ಮಾನವೀಯತೆಗೆ ಹಿಡಿದ ಕನ್ನಡಿಯಂತಿದೆ.
ನನಗೇಕೆ ಶಿವಗುಡಿಯ ಯಾತ್ರೆ, ಕರ್ಮವೇ ಆರಾಧನೆ, ಸೇವೆಯೇ ಪೂಜೆ, ಪೊರಕೆ ಎನ್ನ ಭಾಗದ ಆರತಿ, ಗುಡಿಸುವುದೇ ನನ್ನ ದೇವರ ಪೂಜೆ ಎನ್ನುವ ಜಲಗಾರನ ಮಾತುಗಳಲ್ಲಿ ನಾವು ಮಾಡುವ ಕೆಲಸವೇ ದೇವರು ಎಂಬುದನ್ನು ತೋರಿಸುತ್ತದೆ. ಕುವೆಂಪು ಅವರ ನಾಟಕಗಳು ಚಿಂತನೆ ಮತ್ತು ವಾಸ್ತವಿಕತೆಯನ್ನು ಋಜುವಾತು ಮಾಡುತ್ತವೆ. ಕಂದಾಚಾರ, ಅಂಧಶ್ರದ್ದೆ, ವರ್ಣಬೇದ, ಚಾತುರ್ವರ್ಣ್ಯದಂತಹ ರೋಗಳಿಗೆ ಕುವೆಂಪು ತಮ್ಮ ನಾಟಕಗಳಲ್ಲಿ ಪರಿಹಾರ ನೀಡುವ ಮೂಲಕ ಆಧುನಿಕತೆ ಮತ್ತು ಸಾಮಾಜಿಕ ನ್ಯಾಯದ ಪರಿಲ್ಪನೆಗೆ ನೀರೆರೆದಿದ್ದಾರೆ.
ಶ್ರೀರಾಮಾಯಣದರ್ಶನಂ ಈ ಯುಗದ ಮಹಾಕಾವ್ಯ. ಅದು ಭಾರತೀಯ ಸಂಸ್ಕೃತಿಯ ಧ್ಯೋತಕ, ವೇದ ಉಪನಿಷತ್ತುಗಳ ಸಾರ, ಕವಿಯ ಆಧ್ಯಾತ್ಮಕ ಸಾಧನೆಯ ಪ್ರತಿರೂಪ, ವಾಲ್ಮೀಕಿ ರಾಮಾಯಣದ ಮರುಹುಟ್ಟು, ಕೆಲವೆಡೆ ಸಾಕಷ್ಟು ಮಾರ್ಪಾಟುಗಳೂ ಕೂಡ ಆಗಿವೆ. ರಾವಣ, ಮಂಥರೆಮ ಅಹಲ್ಯೆಯರೇ ಮೋದಲಾದ ಪಾತ್ರಗಳು ಕವಿಯ ದಾರ್ಶನಿಕತೆಯ ಪ್ರಭೆಯಲ್ಲಿ ಹಳೆಯ ಪೊರೆಯನ್ನು ಕಳಚಿಕೊಂಡು ಹೊಸ ರೂಪನ್ನು ಪಡೆದಿವೆ. ವಾಲ್ಮೀಕಿ ರಾಮಾಯಣದಲ್ಲಿ ಕಾಮಾಂದನೂ, ಜಗತ್ಕಂಟಕನೂ ಹಾಗೂ ಗರ್ವಿಷ್ಠನೂ ಆಗಿದ್ದ ರಾವಣ ಶ್ರೀರಾಮಾಯಣದರ್ಶನಂ ಕೃತಿಯಲ್ಲಿ ಮಹಾವ್ಯಕ್ತಿಯಾಗಿ ಪರಿವರ್ತಿತನಾಗುತ್ತಾನೆ. ಸೀತೆ ಅವನಿಗೆ ಮಾತೃ ಸ್ವರೂಪಿಯಾಗಿ ಕಾಣುತ್ತಾಳೆ. ರಾಮನ ವನವಾಸಕ್ಕೆ ಕಾರಣೀಭೂತಳಾದ ಮಂಥರೆ ಇಲ್ಲಿ ಲೋಕಕಲ್ಯಾಣಕಾರಕಳಾಗಿ ಕಂಡುಬರುತ್ತಾಳೆ. ಕೆಟ್ಟದ್ದರಲ್ಲೂ ಕವಿ ಉದ್ದಾರವನ್ನು ಬಯಸಿದ್ದಾರೆ..
ಆಧ್ಯಾತ್ಮದ ವಿಕಾಸ ತತ್ವಗಳು ಎಲ್ಲಾ ಮಾನವರನ್ನು ಆತ್ಮದ ನೆಲೆಯಲ್ಲಿ ಸಮಾನವಾಗಿ ಪರಿಗಣಿಸುವುದಲ್ಲದೆ ಅತ್ಯೋನ್ನತಿಯ ವಿಕಾಸದ ಪರಿಭಾಷೆಯ ಸಾಧ್ಯತೆಗಳನ್ನು ತಮ್ಮ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಮನೋಜ್ಞವಾಗಿ ಚಿತ್ರಿಸಿರುವ ಕುವೆಂಪು, ಕಾದಂಬರಿಯಲ್ಲಿ ಮನಸ್ಸಿನ ಮೇಲೆ ನಿಯಂತ್ರಣವಿಲ್ಲದೆ ಬಾಡಿಗೆ ಆಸೆ ಪಡುವ, ಜೂಜಿನ ಮೋಹಕ್ಕೆ ನಿಯಂತ್ರಣವನ್ನು ಕಳೆದುಕೊಳ್ಳುವ ಬಾಡುಗಳ್ಳ ಸೋಮುವಿನ ಪಾತ್ರದ ಮೂಲಕ ಬಿಚ್ಚಿಟ್ಟಿದ್ದಾರೆ. ಇಂತಹ ದುರ್ಬಲ ಮನೋಭಾವದ ಸೋಮ ಸೆರೆದಾರ ಸೋಮಣ್ಣನಾಗಿ ಬದಲಾಗುವ ಪ್ರಕ್ರಿಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಕುವೆಂಪು ಅಷ್ಟು ಸುಲಭವಾಗಿ ನಿಲುಕುವವರಲ್ಲ. ಅವರೊಬ್ಬ ತೀವ್ರ ವಿಚಾರವಾದಿ, ಆಧ್ಯಾತ್ಮವಾದಿ. ಕುವೆಂಪು ಅವರ ಕಾವ್ಯ, ಸಾಹಿತ್ಯ ಸೃಷ್ಟಿಯ ಮುಖ್ಯ ಸೂತ್ರ ವ್ಯಕ್ತಿಯ ಆತ್ಮ ಸ್ವಾತಂತ್ರ್ಯಕ್ಕಾಗಿ ತುಡಿಯುವುದೇ ಆಗಿದೆ. ಕುವೆಂಪು ಅವರ ಕಾವ್ಯಗಳಲ್ಲಿ ಆದರ್ಶ ಮಾನವನಿದ್ದರೆ, ಅವರ ಕಥೆ-ಕಾದಂಬರಿಗಳಲ್ಲಿ ಮಾನವ ಸ್ವಭಾವ, ಮಾನವನ ಕೆಟ್ಟ ಮನೋಭಾವಗಳು, ಈ ಕಾಲಘಟ್ಟದಲ್ಲಿ ಭಾರತೀಯ ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಮತ್ತು ಸ್ತ್ರಿ ವಿರೋಧಿ ಧೋರಣೆಗಳನ್ನು ಖಂಡಿಸುವ ಜೊತೆಗೆ ಅವುಗಳ ನಿಷ್ಠುರ ಚಿತ್ರಣವನ್ನು ಕಾಣಬಹುದು.
ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ಋಣವು ಮಾತ್ರವೆ ನನ್ನದು.
ಎಂಬ ಕವನದಲ್ಲಿ ನನ್ನದೇನೂ ಇಲ್ಲ ಎಲ್ಲಾ ನಿನ್ನದೇ ಎಂಬ ಸಮರ್ಪಣೆ ಅಥವಾ ಶರಣಾಗತಿಯ ಭಾವಗಳನ್ನು ನೋಡಬಹುದು. ಜೀವನವೆಂಬ ವ್ಯಾಪಾರದ ಅನಂತತೆಗೆ ಕುವೆಂಪು ಬೆರಗಾದಂತೆ ಕಂಡು ಬರುತ್ತದೆ. ಇಡೀ ವಿಶ್ವದ ಸಾಕ್ಷಿಪ್ರಜ್ಞೆಯಂತಿರುವ ಮಹಾನ್ ಕವಿ, ವಿಶ್ವ ಮಾನವ ಸಂದೇಶದ ಮೂಲಕ ಮನುಜ ಮತ-ವಿಶ್ವಪಥ ಸಂದೇಶವನ್ನು ಕೊಡುವ ಮೂಲಕ ಸಾಮಾಜಿಕವಾಗಿ ರಾಷ್ಟ್ರದಾದ್ಯಂತ ಸೌಹಾರ್ಧತೆಯ ಬೀಜಗಳನ್ನು ಬಿತ್ತಿದರು.

ಸತ್ತಂತಿಹರನು ಬಡಿದೆಬ್ಬರಿಸು ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರಹದಲಿ ಹರಸು!
ಎನ್ನುವ ಕವಿತೆಯ ಸಾಲುಗಳಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ತವಕವಿದೆ. ಧರ್ಮಾಂಧರಾಗಿರುವವರನ್ನು, ಜಾತಿಯತೆಯನ್ನು ಓಲೈಸುವವರನ್ನು, ಅಧಿಕಾರದ ಮದದಿಂದ ಮೆರೆಯುತ್ತಿರುವ ಅಧಿಕಾರಿಗಳನ್ನು ಎಚ್ಚರಿಸುವ ಸಂಕೇತವಿದೆ. ಯಾವುದೇ ಬೇದ-ಭಾವವಿಲ್ಲದೆ ಒಟ್ಟಾಗಿ ಬಾಳುವಂತೆ ಹರಸು ಎಂಬುದು ಕವಿಯ ಕೋರಿಕೆಯಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನ ಜಾತಿ ಜಾತಿವ್ಯವಸ್ಥೆಯಿಲ್ಲದ, ಚಾತುರ್ವರ್ಣ್ಯದಿಂದ ದೂರವಾದ ನವ ಸಮಾಜದ ನಿರ್ಮಾಣಕ್ಕಾಗಿ, ಕುವೆಂಪುರವರ ಕನಸಿನ ವಿಶ್ವ ಮಾನವತೆಯ ಸಮಾಜದ ನಿರ್ಮಾಣಕ್ಕಾಗಿ ವೈಚಾರಿಕ ನೆಲೆಗಟ್ಟಿನ ವೈಜ್ಞಾನಿಕ ಮನೋಧರ್ಮ ಮುಖ್ಯವಾಗಿ ಕಂಡು ಬರುತ್ತದೆ. ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ ಅವರು ತಮ್ಮ ಅಗಾಧ ಪಾಂಡಿತ್ಯದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಆಡುಮುಟ್ಟದ ಸೊಪ್ಪಿಲ್ಲ ಕುವೆಂಪು ಬರೆಯದ ಸಾಹಿತ್ಯವಿಲ್ಲ ಎಂಬುದು ಸಾಹಿತ್ಯ ಕ್ಷೇತ್ರದಲ್ಲಿ ಜನಜನಿತ.
ಯಾವ ಒಂದು ಗ್ರಂಥವೂ ಏಕೈಕ ಪೂಜನೀಯ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯು ತನಗೆ ಏನೆಲ್ಲಾ ಸಾಧ್ಯವೋ ಅಂತಹ ಗ್ರಂಥಗಳನ್ನೆಲ್ಲಾ ಓದಿ ತಿಳಿದು ತನ್ನ ದರ್ಶನವನ್ನು ತಾನೇ ಹೊಂದಿ ಬದುಕು ಕಟ್ಟಿಕೊಳ್ಳಬೇಕು ಎನ್ನುತ್ತಿದ್ದ ಜಗದ ಕವಿ ಒಂದು ಉತ್ತಮ ಪುಸ್ತಕ ಓದುವುದರಿಂದ ಒಬ್ಬ ಮಹಾತ್ಮನ ಸ್ನೇಹ ಸಂಗದಿಂದ ಏನೆಲ್ಲಾ ದೊರೆಯುತ್ತದೆಯೋ ಅದನ್ನೆಲ್ಲಾ ಗಳಿಸಿಕೊಳ್ಳಬಹುದು ಎನ್ನುತ್ತಿದ್ದರು.
ಯುಗದ ಕವಿ ಎನಿಸಿದ್ದ ಅವರನ್ನು ಕೇವಲ ಕವಿ ಎಂದು ಪರಿಭಾವಿಸಿದರೆ ಅದು ತಪ್ಪಾಗುತ್ತದೆ. ಅವರೊಬ್ಬ ಸಾಮಾಜಿಕ ತತ್ವಜ್ಞಾನಿ, ಶುದ್ದ ಮಾನವತಾವಾದಿ, ನಿರಂಕುಶಮತಿಗಳು ಎಲ್ಲದ್ದಕ್ಕಿಂತ ಹೆಚ್ಚಾಗಿ ವೈಜ್ಞಾನಿಕ ಕ್ರಾಂತಿಕಾರರು. ಅವರನ್ನು ತಿಳಿಯುತ್ತಾ ಹೋದಂತೆ ಅವರ ವೈಚಾರಿಕತೆ, ವೈಜ್ಞಾನಿಕತೆ ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತವೆನಿಸುತ್ತವೆ. ಕನ್ನಡ ನಾಡು ನುಡಿಗಳ ಏಳಿಗೆಗಾಗಿ ಸತತವಾದ ಹೋರಾಟ ನಡೆಸಿದ ಕುವೆಂಪು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಗಬೇಕು, ಅದು ಕರ್ನಾಟಕವೆಂದು ಹೆಸರಾಗಬೇಕು, ಪ್ರಾದೇಶಿಕ ಭಾಷೆಯೇ ಶಿಕ್ಷಣ ಮಾಧ್ಯಮ ಮತ್ತು ಆಡಳಿತ ಭಾಷೆಯಾಗಬೇಕು ಎಂಬುದಾಗಿ ತಮ್ಮ ಬರಹಗಳಲ್ಲಿ ಮತ್ತು ಭಾಷಣಗಳಲ್ಲಿ ಆಶಯ ವ್ಯಕ್ತಪಡಿಸುತಿದ್ದರು.
ಕುವೆಂಪು ನಿಷ್ಠರತೆಯಿಂದ ತಮ್ಮ ಜೀವನದಲ್ಲಿ ಹಾಸುಹೊಕ್ಕಾಗಿಸಿಕೊಂಡಿದ್ದೆರು. ರಾಜಕಾರಣಿಗಳು ಮತ್ತು ಮಠಾಧೀಶರುಗಳಿಂದ ಆದಷ್ಟು ಅಂತರವನ್ನು ಕಾಪಾಡಿಕೊಂಡಿದ್ದರು. ಅದೇ ರೀತಿ ಅವರು ಎಂದೂ ಪ್ರಶಸ್ತಿಗಳ ಬೆನ್ನು ಹತ್ತಿದವರಲ್ಲ. ಕುವೆಂಪು ಸಾಹಿತ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ, ಆದರೂ ಅವರ ವೈಜ್ಞಾನಿಕ ದೃಷ್ಟಿಕೋನಗಳು, ಆಧ್ಯಾತ್ಮ ನಿಲುವುಗಳು, ವಿಶ್ವ ಮಾನವ ಸಂದೇಶಗಳು ಕುರಿತು ಹೊಸದಾಗಿ ಚರ್ಚೆಗಳಾಗಬೇಕಾಗಿದೆ.
###
-ಡಾ.ಅಮ್ಮಸಂದ್ರ ಸುರೇಶ್
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346
*****

The post ಮಾಧ್ಯಮಲೋಕ-೧೧ ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು appeared first on Karnataka Kahale.

]]>
ಮಾಧ್ಯಮ ಲೋಕ-೧೦. ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು https://www.karnatakakahale.com/news/3970 Mon, 12 Apr 2021 17:59:27 +0000 https://www.karnatakakahale.com/?p=3970 ಕೋವಿಡ್-19 ಮತ್ತು ಭಾರತದ ಆರ್ಥಿಕತೆಯ ನಿಜಾಂಶಗಳು -ಡಾ.ಅಮ್ಮಸಂದ್ರ ಸುರೇಶ್ ಕೋವಿಡ್-19ರ ಹರಡುವಿಕೆಯ ಆರಂಭದಲ್ಲಿ ಭಾರತವು ದೀರ್ಘಕಾಲೀನ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಪಾವಧಿಯ ನೋವನ್ನು ತಡೆದುಕೊಳ್ಳುವ ಮೂಲಕ ಜೀವ ಮತ್ತು ಜೀವನೋಪಾಯಗಳನ್ನು ಉಳಿಸುವತ್ತ ಗಮನಹರಿಸಿತು. ಇದಕ್ಕಾಗಿ ತೆಗೆದುಕೊಂಡ ಲಾಕ್ ಡೌನ್ ನಂತಹ ಕ್ರಮಗಳು ಕೆಲವರಿಗೆ…

The post ಮಾಧ್ಯಮ ಲೋಕ-೧೦. ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು appeared first on Karnataka Kahale.

]]>
ಕೋವಿಡ್-19 ಮತ್ತು ಭಾರತದ ಆರ್ಥಿಕತೆಯ ನಿಜಾಂಶಗಳು
-ಡಾ.ಅಮ್ಮಸಂದ್ರ ಸುರೇಶ್

ಕೋವಿಡ್-19ರ ಹರಡುವಿಕೆಯ ಆರಂಭದಲ್ಲಿ ಭಾರತವು ದೀರ್ಘಕಾಲೀನ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಪಾವಧಿಯ ನೋವನ್ನು ತಡೆದುಕೊಳ್ಳುವ ಮೂಲಕ ಜೀವ ಮತ್ತು ಜೀವನೋಪಾಯಗಳನ್ನು ಉಳಿಸುವತ್ತ ಗಮನಹರಿಸಿತು. ಇದಕ್ಕಾಗಿ ತೆಗೆದುಕೊಂಡ ಲಾಕ್ ಡೌನ್ ನಂತಹ ಕ್ರಮಗಳು ಕೆಲವರಿಗೆ ತಾತ್ಕಾಲಿಕವಾಗಿ ಕಷ್ಟಕರ ನೋವನ್ನು ಉಂಟು ಮಾಡಿದ್ದರೂ ಕೂಡ ಭವಿಷ್ಯದ ದೃಷ್ಟಿಯಿಂದ ಇಂತಹ ಕ್ರಮಗಳು ಸ್ವಾಗತಾರ್ಹ ಕ್ರಮಗಳೇ ಆಗಿದ್ದವು. ತ್ವರಿತ ಹಾಗೂ ತೀವ್ರವಾದ ಲಾಕ್ ಡೌನ್ ಕ್ರಮಗಳು ಜೀವಗಳನ್ನು ಉಳಿಸುವ ಮೂಲಕ ಮಧ್ಯಮದಿಂದ ದೀರ್ಘಾವಧಿಯವರೆಗೂ ಆರ್ಥಿಕ ಚೇತರಿಕೆಯ ಮೂಲಕ ಜೀವನೋಪಾಯವನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು. ಭಾರತವು ತೆಗೆದುಕೊಂಡ ಈ ಕ್ರಮಗಳು ಕೋವಿಡ್ ಹರಡುವಿಕೆಯ ಗರಿಷ್ಠ ಪ್ರಮಾಣವನ್ನು ಸೆಪ್ಟೆಂಬರ್ 2020ರ ವೇಳೆಗೆ ಕಡಿಮೆ ಮಾಡಿತು. ಆದರೆ ಇದೀಗ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು ಕಳೆದ ತಿಂಗಳಿನಿಂದ ಕೋವಿಡ್-19 ಪ್ರಕರಣಗಳಲ್ಲಿ ಮತ್ತೆ ಹಚ್ಚಳ ಕಂಡು ಬರುತ್ತಿದೆ.
ಆರ್ಥಿಕವಾಗಿ ನೋಡಿದರೆ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 23.9ರಷ್ಟು ಕುಸಿತವನ್ನು ದಾಖಲಸಿತ್ತು. ಇದಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕದಲ್ಲಿ ಈ ಕುಸಿತ ಸ್ವಲ್ಪ ಮಟ್ಟಿಗೆ ಸುಧಾರಣೆಯನ್ನು ಕಂಡು ಜಿಡಿಪಿಯು 7.5ರಷ್ಟು ಅಲ್ಪ ಪ್ರಮಾಣದ ಕುಸಿತವನ್ನು ದಾಖಲಿಸಿತು. ಮಾರುಕಟ್ಟೆಯ ದೃಷ್ಟಿಯಿಂದ ನೋಡುವುದಾದರೆ ಕೋವಿಡ್-19, ಬೇಡಿಕೆ ಮತ್ತು ಪೂರೈಕೆ ಎರಡರ ಮೇಲೂ ಪರಿಣಾಮ ಬೀರಿತು. ಆದರೆ ಸರ್ಕಾರ ಮಧ್ಯಮ ಮತ್ತು ದೀರ್ಘಕಾಲೀನ ಪೂರೈಕೆಯನ್ನು ವಿಸ್ತರಿಸಲು ಮತ್ತು ಉತ್ಪಾದಕ ಸಾಮರ್ಥ್ಯಗಳಿಗೆ ದೀರ್ಘಕಾಲೀನ ಹಾನಿಯನ್ನು ತಪ್ಪಿಸಲು ಹಲವಾರು ಸುಧಾರಣ ಕ್ರಮಗಳನ್ನು ಜಾರಿಗೆ ತಂದಿತು. ಬೇಡಿಕೆಯ ನೀತಿಗಳನ್ನು ಸರಿಪಡಿಸುವುದಕ್ಕಾಗಿ ಆರ್ಥಿಕ ಚಟುವಟಿಕೆಗಳ ಮೇಲಿನ ಬ್ರೇಕ್ ತೆಗೆಯುವ ಮೂಲಕ ಆರ್ಥಿಕ ಚೇತರಿಕೆಗೆ ಚಾಲನೆ ನೀಡಲಾಯಿತು. ಮಾಸಿಕ ಜಿ ಎಸ್ ಟಿ ಸಂಗ್ರಹವು ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಏರಿಕೆ ಕಂಡಿದ್ದು ಇದು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ದಾಟುತ್ತಿದೆ. ಜೆಎಸ್ಟಿ ಜಾರಿಗೆ ತಂದ ನಂತರ ಸಂಗ್ರಹಣೆ 2020ರ ಡಿಸೆಂಬರ್ ನಲ್ಲಿ ಗರಿಷ್ಠ ಮಟ್ಟವನ್ನು ತಲುಪಿತು.
ಕಳೆದ ವರ್ಷದಿಂದೀಚೆಗೆ ಆನ್ ಲೈನ್ ಕಲಿಕೆ, ಮನೆಯಿಂದಲೇ ಕೆಲಸ ಮಾಡುವುದರಿಂದ ಡೇಟಾ ನೆಟ್ ವರ್ಕ್, ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಪೋನ್ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳ ಆಗಮನ ಹೆಚ್ಚಾಯಿತು. ಮಹಾತ್ಮಗಾಂಧಿ ಎನ್ ಆರ್ ಇ ಜಿ ಎ ಅಡಿಯಲ್ಲಿ ವಿತರಿಸಲಾಗುವ ವೇತನವನ್ನು ಏಪ್ರಿಲ್,2020 ರಿಂದ 182 ರೂಪಾಯಿಗಳಿಂದ 202 ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ ಗ್ರಾಮೀಣರ ಬದುಕನ್ನು ಉತ್ತಮಗೊಳಿಸುವ ಪ್ರಯತ್ನವನ್ನು ಮಾಡಲಾಯಿತು. ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ 20.64 ಕೋಟಿ ರೂಪಾಯಿಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವ ಮೂಲಕ ಸುಮಾರು ಎಂಟು ಕೋಟಿ ಕುಟುಂಬಗಳಿಗೆ ತಲಾ 500ರೂ.ಗಳನ್ನು ಮೂರು ತಿಂಗಳವರೆಗೂ ವಿತರಿಸಿದ್ದಲ್ಲದೆ ಗ್ಯಾಸ್ ಸಿಲಿಂಡರ್ ಗಳನ್ನು ಉಚಿತವಾಗಿ ವಿತರಿಸಲಾಯಿತು.
ಕೋವಿಡ್-19 ಕೇವಲ ಭಾರತದ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮಗಳನ್ನು ಬೀರಲಿಲ್ಲ. ಬದಲಾಗಿ ಇಡೀ ಜಾಗತಿಕ ಆರ್ಥಿಕತೆಯನ್ನೆ ತಲ್ಲಣಗೊಳಿಸಿತು. ಎನ್ ಎಸ್ ಓ ಅಂದಾಜಿನ ಪ್ರಕಾರ 2021ನೇ ಹಣಕಾಸು ವರ್ಷದಲ್ಲಿ (-)7.7ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜು ಮಾಡಲಾಗಿದೆ. 2021ನೇ ಹಣಕಾಸು ವರ್ಷದ ಮೊದಲ ಅರ್ಧ ವಾರ್ಷಿಕಕ್ಕೆ ಹೋಲಿಸಿದರೆ ಎರಡನೇ ಅರ್ಧವಾರ್ಷಿಕದಲ್ಲಿ 23.9ರಷ್ಟು ದೃಡವಾದ ಬೆಳವಣಿಗೆಯನ್ನು ಕಂಡಿದೆ. 2021-2022ನೇ ಹಣಕಾಸು ವರ್ಷದ ದ್ವಿತಿಯಾರ್ಧದಲ್ಲಿ ಸರ್ಕಾರಿ ಬಳಕೆಯಿಂದ ಚೇತರಿಕೆ ಕಾಣಲಿದೆ ಎಂದು ಅಂದಾಜು ಮಾಡಲಾಗಿತ್ತು. ಮತ್ತು ಇದೇ ಹಣಕಾಸು ವರ್ಷದಲ್ಲಿ ಭಾರತವು ಆಧ್ಯತೆಯ ಹೋಡಿಕೆಯ ತಾಣವಾಗಿ ಹೊರಹೊಮ್ಮಿತು. ಜಾಗತಿಕವಾದ ಆಸ್ತಿ ಬದಲಾವಣೆಗಳ ನಡುವೆಯೂ ಈಕ್ವಿಟಿಗಳು ಮತ್ತು ಉದಯೋನ್ಮಖ ಆರ್ಥಿಕತೆಯಲ್ಲಿ ಎಪ್ ಡಿ ಐ ಒಳ ಹರಿವಿನಿಂದಾಗಿ ಆರ್ಥಿಕತೆ ಚೇತರಿಸಿಕೊಳ್ಳುವ ನಿರೀಕ್ಷೆಗಳಿವೆ. 2020ರಲ್ಲಿ ಈಕ್ವಿಟಿ ಎಫ್ ಐ ಐ ಒಳಹರಿವು ಪಡೆದ ಜಗತ್ತಿನ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. 2020ರ ನವೆಂಬರ್ ನಲ್ಲಿ ನಿವ್ವಳ ಎಫ್ ಪಿ ಐ ಒಳಹರಿವು 9.8 ಶತಕೋಟಿ ಡಾಲರ್ ದಾಖಲಿಸುವ ಮೂಲಕ ಅತಿ ಹೆಚ್ಚು ಸಾರ್ವಕಾಲಿಕ ಮಾಸಿಕ ಒಳಹರಿವು ಎಂಬ ಕೀರ್ತಿಗೆ ಪಾತ್ರವಾಯಿತು.
ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ-ಆರ್ಥಿಕ ಫಲಿತಾಂಶಗಳ ಅಸಮಾನತೆಯ ಪಲಿತಾಂಶಗಳ ನಡುವಿನ ಸಂಬಂಧವು ಭಾರತದಲ್ಲಿ ಮುಂದುವರೆದ ಆರ್ಥಿಕತೆಗಳಿಗಿಂತ ಭಿನ್ನವಾಗಿತ್ತು. ಆರ್ಥಿಕ ಬೆಳವಣಿಗೆಯ ಅಸಮಾನತೆಗಿಂತ ಬಡತನ ನಿವಾರಣೆಯ ಮೇಲೆ ಹೆಚ್ಚಿನ ಪರಿಣಾಮಗಳನ್ನು ಬೀರಿವೆ. ಬಡವರನ್ನು ಬಡತನದಿಂದ ಮೇಲಕ್ಕೆತ್ತಲು ಮತ್ತಷ್ಟು ಸದೃಡವಾದ ಆರ್ಥಿಕ ಕ್ರಮಗಳು ಇಂದಿನ ಅವಶ್ಯಕತೆಯಾಗಿದೆ. 2007ರಲ್ಲಿ ವಿಶ್ವ ನಾವೀನ್ಯತೆ ಸೂಚ್ಯಾಂಕವನ್ನು ಆರಂಭಿಸಲಾಯಿತು. ನಂತರ ಭಾರತವು ಮೊದಲ ಬಾರಿಗೆ ಅಗ್ರ-50 ದೇಶಗಳಲ್ಲಿ ಸ್ಥಾನ ಪಡೆಯಿತು. ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ಪ್ರಥಮ ಸ್ಥಾನ ಮತ್ತು ಮಧ್ಯಮ ಆದಾಯದ ಆರ್ಥಕತೆಯ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನ ಪಡಿದಿದೆ.
ಭಾರತದ ವಿದೇಶೀ ವಿನಿಮಯ ಸಂಗ್ರಹವು ಜನವರಿ 21, 2021ಕ್ಕೆ ಸಾರ್ವಕಾಲಿಕ ಗರಿಷ್ಠ 586.1 ಬಿಲಿಯನ್ ಡಾಲರ್ ಗಳಷ್ಟಿದ್ದು ಇದು ಸುಮಾರು 18 ತಿಂಗಳ ಮೌಲ್ಯದ ಆಮದುಗಳನ್ನು ಒಳಗೊಂಡಿದೆ. ಜಾಗತಿಕ ಅಡೆ-ತಡೆಗಳ ನಡುವೆಯೂ 2020ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಸೇವಾ ಕ್ಷೇತ್ರಕ್ಕೆ ಎಪ್ ಡಿ ಐ ಒಳ ಹರಿವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.34ರಷ್ಟು ಹೆಚ್ಚಾಗುವ ಮೂಲಕ 23.6 ಬಿಲಿಯನ್ ಯುಎಸ್ ಡಾಲರ್ ಗಳನ್ನು ತಲುಪಿತು. ಮುಖ್ಯವಾಗಿ ಈ ವರ್ಷದ ಆರಂಭಿಕ ಮಾಸಿಕ ಅಂದರೆ ಜನವರಿ 20ರಂದು ನಿಫ್ಟಿ-50 ಮತ್ತು ಬಿ ಎಸ್ ಇ ಸೆನ್ಸೆಕ್ಸ್ ಕ್ರಮವಾಗಿ 14,647 ಮತ್ತು 49,792ರಷ್ಟು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. 2020-21ರ ಅವಧಿಯಲ್ಲಿ ಸ್ಥಿರ ಬೆಲೆಯಲ್ಲಿ 3.4% ರಷ್ಟು ಬೆಳವಣೆಗೆ ಸಾಧಿಸುವ ಮೂಲಕ ಕೋವಿಡ್-19ರ ನಿಯಂತ್ರಣ ಕ್ರಮಗಳ ನಡುವೆಯೂ ಭಾರತದ ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳ ವಲಯವು ತನ್ನ ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2020-21ರಲ್ಲಿ ಜಿಡಿಪಿಯ ಶೇಕಡಾವಾರು ಸಾಮಾಜಿಕ ವಲಯದ ಖರ್ಚು ಹೆಚ್ಚಾಗಿದೆ.
ಆಧಾರ್ ಜೋಡಣೆಯ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಮತ್ತು ತ್ವರಿತವಾಗಿ ಹಣ ವರ್ಗಾವಣೆ, ಜನವರಿ 2021 ರ ವೇಳೆಗೆ ಮೀನುಗಾರರಿಗೆ ಒಟ್ಟು 44,673 ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ವಿತರಣೆ ಮಾಡಿದ್ದು, ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಅಡಿಯಲ್ಲಿ ಜನವರಿ 12, 2021ರ ವೇಳೆಗೆ 90,000 ಕೋಟಿ ಮೌಲ್ಯದ ಕ್ಲೈಮ್ ಗಳನ್ನು ರೈತರಿಗೆ ಪಾವತಿ ಮಾಡಿರುವುದು, ಈರುಳ್ಳಿ ರಫ್ತು ನಿಷೇದವನ್ನು ಜಾರಿಗೆ ತಂದಿದ್ದು, ಈರುಳ್ಳಿ ಸಂಗ್ರಹದ ಮೇಲೆ ಮೀತಿ ಏರಿದ್ದು, ದ್ವಿದಳ ಧಾನ್ಯಗಳ ಆಮದಿನ ಮೇಲಿನ ನಿರ್ಬಂದವನ್ನು ಸಡಿಲಗೊಳಿಸಿದ್ದು, ಆರ್ಥಿಕ ಅನಿಶ್ಚತೆತೆಗಳು ನಡುವೆಯೂ ಚಿನ್ನವನ್ನು ಸುರಕ್ಷತ ಹೂಡಿಕೆಯಾಗಿ ಪರಿಗಣಿಸಲಾಗಿದ್ದು, ಇವೇ ಮೊದಲಾದ ಸುಧಾರಣಾ ಕ್ರಮಗಳನ್ನು ಈಗಾಗಲೇ ಜಾರಿಗೆ ತಂದಿದ್ಚದರೂ ಸಹ ಇನ್ನೂ ಕೆಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಇವುಗಳಲ್ಲಿ ಮುಖ್ಯವಾಗಿ ಸಂಶೋಧನೆ ಮತ್ತು ಅಭಿವೃದ್ದಿ ಮೇಲಿನ ಒಟ್ಟು ಮುಂದುವರೆದ ಅಗ್ರ ಹತ್ತು ಆರ್ಥಿಕತೆಗಳಿಗೆ ಹೋಲಿಸಿದರೆ ಕಡಿಮೆಯಾಗಿದ್ದು ಇದು ಸುಧಾರಣೆಯಾಗಬೇಕಾಗಿದೆ. ವ್ಯಾಪಾರ ಕ್ಷೇತ್ರದಲ್ಲಿ ಆರ್ & ಡಿ ಹೂಡಿಕೆಗಳನ್ನು ಗಮನಾರ್ಹವಾಗಿ ಹೆಚ್ಚಿಸಬೇಕಾಗಿದೆ. ದೇಶದಲ್ಲಿ ಸಲ್ಲಿಸಲಾದ ಒಟ್ಟು ಪೇಟೆಂಟ್ ಗಳ ಪೈಕಿ ಭಾರತೀಯ ನಿವಾಸಿಗಳ ಪ್ರಮಾಣ ಪ್ರಸ್ಥುತ ಶೇ.36 ಆಗಿದ್ದು ಇದು ಹತ್ತು ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಶೇ.62 ಕ್ಕಿಂತ ಕಡಿಮೆಯಾಗಿದ್ದು ಈ ಪ್ರಮಾಣ ಕೂಡ ಹೆಚ್ಚಾಗಬೇಕಿದೆ. ಉತ್ಪಾದನೆಯಲ್ಲಿ ಹೆಚ್ಚಿನ ಸುಧಾರಣೆಯನ್ನು ಸಾಧಿಸಲು, ಸಂಸ್ಥೆಗಳು ಮತ್ತು ವ್ಯವಹಾರಗಳ ಅತ್ಯಾಧುನಿಕ ನಾವೀನ್ಯತೆ ಒಳ ಹರಿವುಗಳ ಕಾರ್ಯಕ್ಷಮತೆಯನ್ನು ಸುಧಾರಿಸುವತ್ತ ಗಮನಹರಿಸಬೇಕಾಗಿದೆ.
ಲಾಕ್ ಡೌನ್, ದೈಹಿಕ ಅಂತರ, ಪ್ರಯಾಣ ಮಾರ್ಗಸೂಚಿಗಳನ್ನು ಮೊದಲ ಹಂತದ ಕೋವಿಡ್-19 ಜಾರಿಗೆ ತರುವ ಮೂಲಕ ಮತ್ತು ಕೈಗಳ ಸ್ವಚ್ಚತೆ, ಮುಖಗವಸು ಧರಿಸುವುದು ಮತ್ತಿತರ ಕ್ರಮಗಳನ್ನು ಜಾರಿಗೆ ತರಲಾಗಿತ್ತು. ಈ ಕ್ರಮಗಳಲ್ಲಿ ಕೆಲವನ್ನು ಇನ್ನೂ ಕೂಡ ಮುಂದುವರೆಸಿಕೊಂಡು ಬರಲಾಗುತ್ತಿದೆ. ಕೈಗಳ ಸ್ವಚ್ಚತೆ, ದೈಹಿಕ ಅಂತರ ಕಾಪಾಡುವಿಕೆ, ಮುಖಗವಸು ಧರಿಸುವಿಕೆಯಲ್ಲಿ ಜನರಲ್ಲಿ ಮಾಹಿತಿ ಹರಡುವಿಕೆಯಲ್ಲಿ ಆಕಾಶವಾಣಿ ಮತ್ತು ದೂರಧರ್ಶನ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವುದು ಶ್ಲಾಘನಾರ್ಹವಾಗಿದೆ. ಇವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂ ಎರಡನೇ ಹಂತದ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸರ್ಕಾರ ಅನೇಕ ಮುನ್ನೆಚ್ಚರಿಕೆಗಳನ್ನು ಜಾರಿಗೆ ತರುತ್ತಿದ್ದರೂ ಅವುಗಳನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಸೂಚನೆಗಳನ್ನು ಪಾಲಿಸುವಲ್ಲಿ ನಮ್ಮ ಜನರೇ ಹೆಚ್ಚ ಜವಾಬ್ದಾರರಾಗಬೇಕಾಗುತ್ತದೆ. ಮತ್ತು ಇದು ಅನಿವಾರ್ಯ ಕೂಡ ಹೌದು.
ವಿಶ್ವದ ಅತಿದೊಡ್ಡ ಕೋವಿಡ್-19 ಲಸಿಕಾ ಅಭಿಯಾನವನ್ನು ಇದೇ ವರ್ಷದ ಜನವರಿ 16ರಿಂದ ಭಾರತದಲ್ಲಿ ಆರಂಭಿಸಲಾಗಿದೆ. ಎಲ್ಲರೂ ಅದರಲ್ಲೂ ಮುಖ್ಯವಾಗಿ 45ವರ್ಷದ ನಂತರದ ವಯೋಮಾನದವರು ಮತ್ತು ಮೊದಲ ಸಾಲಿನ ಕೊರೊನಾ ವಾರಿಯರ್ ಗಳು ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕಾಗಿದೆ. ಈಗಾಗಲೇ ಇವರೆಲ್ಲಾ ಲಸಿಕೆ ಹಾಕಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ. ತ್ವರಿತವಾಗಿ ಅಂಚೆ ಇಲಾಖೆ ಮತ್ತು ಬ್ಯಾಂಕ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೂ ಕಡ್ಡಾಯವಾಗಿ ಲಸಿಕೆ ಹಾಕಬೇಕಾಗಿದೆ. ಈ ಕುರಿತು ನಮ್ಮ ಮಾಧ್ಯಮಗಳು ಸಾಕಷ್ಟು ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗಿದೆ. ಕೊರೊನಾ ವೈರಸ್ ಭಾರತಕ್ಕೆ ತೀವ್ರ ಹೊಡೆತ ನೀಡಿದೆ. 2019ರಲ್ಲಿ ಬ್ರಿಟನ್ ನನ್ನು ಹಿಂದಿಕ್ಕಿದ್ದ ಭಾರತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತ್ತು. ಆದರೆ ಕೋವಿಡ್-19ರ ಕಾರಣದಿಂದಾಗಿ ಭಾರತದ ಆರ್ಥಿಕತೆಗೆ ಹಿನ್ನೆಡೆಯಾಗಿದ್ದು ಐದನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ. ಆದರೆ ಸೆಂಟರ್ ಫಾರ್ ಎಕನಾಮಿಕ್ಸ್ ಅಂಡ್ ಬಿಸಿನೆಸ್ ರಿಸರ್ಚ್ ವರದಿಯ ಪ್ರಕಾರ, 2025ರ ವೇಳೆಗೆ ಭಾರತ ಮತ್ತೆ ಐದನೇ ಸ್ಥಾನಕ್ಕೇರಲಿದೆ ಎಂಬ ನಿರೀಕ್ಷೆ ಇದೆ. ತ್ವರಿತ ಪ್ರಗತಿ ಸಾಧಿಸಿರುವ ಭಾರತ 2030ರ ವೇಳೆಗೆ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ.
ಶತಮಾನದ ಮಹಾಮಾರಿಯಿಂದ ಕಾಣಿಸಿಕೊಂಡ ಬಿಕ್ಕಟ್ಟಿಗೆ ಭಾರತ ರೂಪಿಸಿದ ಪ್ರಬುದ್ದ ನೀತಿ ಮತ್ತು ಸ್ಪಂದನೆಯು ಉಳಿದ ಪ್ರಜಾಪ್ರಭುತ್ವ ಮತ್ತು ಮುಂದುವರೆಯುತ್ತಿರುವ ಮತ್ತು ಹಿಂದುಳಿದ ದೇಶಗಳಿಗೆ ಸದ್ಯದ ಲಾಭವನ್ನು ನೋಡದೆ, ದೀರ್ಘಕಾಲೀನ ಲಾಭಗಳ ಮೇಲೆ ಕೇಂದ್ರೀಕರಿಸುವ ಪಾಠಗಳನ್ನು ಕಲಿಸಿದೆ. ಆದರೆ ಎರಡನೇ ಹಲೆ ತೀವೃಗತಿಯಲ್ಲಿ ಏರುತ್ತಿರುವ ಪ್ರಸ್ಥುತ ಸಂದರ್ಭದಲ್ಲಿ ಮತ್ತೆ ನಿಯಂತ್ರಣ ಕ್ರಮಗಳನ್ನು ತರಬೇಕಾಗಿರುವುದು ಅನಿವಾರ್ಯವಾಗಿದೆ. ಏಕೆಂದರೆ ಜೀವ ಮತ್ತು ಜೀವನ, ಆರ್ಥಿಕತೆಗಿಂತ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ.
👇👇👇👇👇
-ಡಾ.ಅಮ್ಮಸಂದ್ರ ಸುರೇಶ್
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346
*****

The post ಮಾಧ್ಯಮ ಲೋಕ-೧೦. ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು appeared first on Karnataka Kahale.

]]>
ಮಾಧ್ಯಮ ಲೋಕ-೦೮ (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮಾಧ್ಯಮ ವಿಶ್ಲೇಷಕರು, ಮೈಸೂರು) https://www.karnatakakahale.com/news/3674 Mon, 22 Mar 2021 11:57:32 +0000 https://www.karnatakakahale.com/?p=3674 ಮಹಾತ್ಮ ಗಾಂಧೀಜಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ’ ಇಪ್ಪತ್ತನೇ ಶತಮಾನದ ಅಹಿಂಸೆಯ ಸಂಕೇತವಾಗಿದ್ದ ಮಹಾತ್ಮ ಗಾಂಧಿಯವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಏಕೆ ಬರಲಿಲ್ಲ? ಎಂಬುದು ಇಂದಿಗೂ ಭಾರತೀಯರು ಸೇರಿದಂತೆ ಜಗತ್ತಿನಾದ್ಯಂತದ ಶಾಂತಿ ಪ್ರಿಯರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಗಾಂಧಿಯವರ ಹೆಸರನ್ನು ನೊಬೆಲ್ ಶಾಂತಿ…

The post ಮಾಧ್ಯಮ ಲೋಕ-೦೮ (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮಾಧ್ಯಮ ವಿಶ್ಲೇಷಕರು, ಮೈಸೂರು) appeared first on Karnataka Kahale.

]]>
ಮಹಾತ್ಮ ಗಾಂಧೀಜಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ’

ಇಪ್ಪತ್ತನೇ ಶತಮಾನದ ಅಹಿಂಸೆಯ ಸಂಕೇತವಾಗಿದ್ದ ಮಹಾತ್ಮ ಗಾಂಧಿಯವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಏಕೆ ಬರಲಿಲ್ಲ? ಎಂಬುದು ಇಂದಿಗೂ ಭಾರತೀಯರು ಸೇರಿದಂತೆ ಜಗತ್ತಿನಾದ್ಯಂತದ ಶಾಂತಿ ಪ್ರಿಯರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಗಾಂಧಿಯವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗಾಗಿ 1937, 1938, 1947 ಮತ್ತು 1948ರಲ್ಲಿ ನಾಮ ನಿರ್ದೇಶನ ಮಾಡಲಾಯಿತು. ಆದರೆ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಿಲ್ಲ. ಐದು ಬಾರಿ ನಾಮ ನಿರ್ದೇಶನ ಮಾಡಿದರೂ ಕೂಡ ಅವರ ಹೆಸರು ಬಲವಾಗಿ ಕೇಳಿಬಂದಿದ್ದು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ. 1948ರಲ್ಲಿ ನಾಮ ನಿರ್ದೇಶನಗೊಂಡಾಗ ಅವರಿಗೆ ಬಹುಮಾನ ದೊರೆಯುವುದು ಬಹುತೇಕ ಖಚಿತವಾಗಿತ್ತು. ಆದರೆ ಅವರ ಹೆಸರು ಅಂತಿಮಗೊಳ್ಳುವ ಕೇವಲ ಎರಡು ದಿನಗಳ ಮೊದಲು ಅವರನ್ನು ಹತ್ಯೆ ಮಾಡಲಾಯಿತು. ನಿಯಮಗಳ ಪ್ರಕಾರ ಮರಣೋತ್ತರವಾಗಿ ನೊಬೆಲ್ ಪ್ರಶಸ್ತಿಯನ್ನು ನೀಡುವ ಅವಕಾಶ ಇಲ್ಲದೇ ಇರುವುದರಿಂದ ಅದು ಕೊನೆಯ ಬಾರಿಯೂ ಸಾಧ್ಯವಾಗಲಿಲ್ಲ.
ಆದರೆ 1948ರಲ್ಲಿ ಮರಣೋತ್ತರವಾಗಿ ಮಹಾತ್ಮ ಗಾಂಧೀಜಿಯವರಿಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ನೀಡಲು ಸಮಿತಿಯ ಕೆಲವು ಸದಸ್ಯರು ಒಲವು ತೋರಿದ್ದರು. ಕೆಲವು ಸಂದರ್ಭಗಳಲ್ಲಿ ನೊಬೆಲ್ ಪ್ರಶಸ್ತಿಯನ್ನು ಮರೋಣತ್ತರವಾಗಿ ನೀಡಬಹುದು ಎಂಬ ವಾದವನ್ನು ಅವರು ಮಂಡಿಸಿದರು. ಆದರೆ ಆಗಿನ ನೊಬೆಲ್ ಸಂಸ್ಥೆಯ ನಿರ್ದೇಶಕ ಆಗಸ್ಟ್ ಷೌ ಈ ವಿಷಯವಾಗಿ ಸಮಿತಿಯ ಮತ್ತೊಬ್ಬ ಸಲಹೆಗಾರರಾಗಿದ್ದ ವಕೀಲ ಓಲೆ ಟೊರ್ಲೀಫ್ ರೀಡ್ ಅವರ ಅಭಿಪ್ರಾಯವನ್ನು ಕೇಳಿದ್ದರು, ಆದರೆ ಅವರಿಂದ ಬಂದ ಉತ್ತರಗಳು ನಕಾರಾತ್ಮಕವಾಗಿದ್ದವು. ನವೆಂಬರ್ 18, 1948ರಂದು ಸಭೆ ಸೇರಿದ್ದ ನೊಬೆಲ್ ಪ್ರಶಸ್ತಿ ಸಮಿತಿಯು “ಸೂಕ್ತವಾದ ಜೀವಂತಅಭ್ಯರ್ಥಿಯು ಇಲ್ಲದೇ ಇರುವುದರಿಂದ” ಪ್ರಶಸ್ತಿಯನ್ನು ಆ ವರ್ಷ ಯಾರಿಗೂ ನೀಡದಿರಲು ನಿರ್ಧರಿಸಿತು.
1901ರಲ್ಲಿ ಆರಂಭಿಸಲಾದ ನೊಬೆಲ್ ಪ್ರಶಸ್ತಿಯನ್ನು ವಿಶ್ವದ ಅತ್ಯಂತ ಪ್ರತಿಷ್ಠಿತ ಮತ್ತು ಅಮೂಲ್ಯ ಬಹುಮಾನವೆಂದು ಪರಿಗಣಿಸಲಾಗಿದೆ. ಈ ಬಹುಮಾನವನ್ನು ಶಾಂತಿ ಸೇರಿದಂತೆ ಆರು ವಿಷಯಗಳಲ್ಲಿ ಪ್ರತಿ ವರ್ಷ ನೀಡಲಾಗುತ್ತದೆ. ವಿವಿದ ವಿಷಯಗಳಲ್ಲಿ ಬಹುಮಾನಗಳಿಗಾಗಿ ಗುರುತಿಸುವ ಜವಾಬ್ದಾರಿಯನ್ನು ವಿವಿದ ಸಂಸ್ಥೆಗಳು ನಿರ್ವಹಿಸುತ್ತವೆ. ನಾರ್ವೇಜಿಯನ್ ಸಂಸತ್ತು ಶಾಂತಿ ನೊಬೆಲ್ ಪ್ರಶಸ್ತಿಗಾಗಿ ಆಯ್ಕೆ ಮಾಡುತ್ತದೆ. ಇದುವರೆಗೂ ಒಂಬತ್ತು ಭಾರತೀಯರಿಗೆ ವಿವಿದ ವಿಷಯಗಳಲ್ಲಿ ನೊಬೆಲ್ ಪುರಸ್ಕಾರ ಲಭಿಸಿದೆ.
ಮಹಾತ್ಮ ಗಾಂಧಿಯವರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಎಲ್ಲಾ ರೀತಿಯಿಂದಲೂ ಅರ್ಹರಾಗಿದ್ದರು. ಆದರೆ ನೊಬೆಲ್ ಸಮಿತಿಯು ಈ ವಿಷಯದಲ್ಲಿ ಹಲವು ಜಿಜ್ಞಾಸೆಗಳಿಗೆ ಒಳಗಾದಂತೆ ತೋರುತ್ತದೆ. ಸಮಿತಿಯ ಕೆಲವು ಸದಸ್ಯರುಗಳ ಪ್ರಕಾರ ಗಾಂಧೀಜಿ, ನಿಜವಾದ ರಾಜಕಾರಣಿ ಅಥವಾ ಅಂತರ ರಾಷ್ಟ್ರೀಯ ಕಾನೂನಿನ ಪ್ರತಿಪಾದಕರಾಗಿರಲಿಲ್ಲ. ಮುಖ್ಯವಾಗಿ ಅವರು ಮಾನವೀಯ ಪರಿಹಾರ ಕಾರ್ಯಕರ್ತರಾಗಿರಲಿಲ್ಲ. ಮತ್ತು ಅಂತರರಾಷ್ಟ್ರೀಯ ಶಾಂತಿ ಕಾಂಗ್ರೆಸ್ಸಿನ ಸಂಘಟಕರಾಗಿರಲಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ 1947ರಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವಿನ ಸಂಘರ್ಷ ಮತ್ತು ಅದಕ್ಕೆ ಸಂಬಂಧಿಸಿದಂತೆ ಗಾಂಧೀಜಿಯವರ ಹೇಳಿಕೆಯು ಅವರು ತಮ್ಮ ಸ್ಥಿರ ಶಾಂತಿವಾದವನ್ನು ತ್ಯಜಿಸಲಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಕಾರಣವಾಯಿತು.
ಆದರೆ ಗಾಂಧೀಜಿಯವರು ತಮ್ಮ ಜೀವನ ಪಥದಲ್ಲಿ ಶಾಂತಿ, ನೈತಿಕತೆ ಮತ್ತು ರಾಜಕೀಯ ಮನೋಭಾವದ ಮೇಲೆ ಆಳವಾದ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಭಾರತದ ವಿಭಜನೆಯ ಸಂದರ್ಭದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ನಡೆದ ಘರ್ಷಣೆಗಳನ್ನು ಕೊನೆಗೊಳಿಸಲು ತಮ್ಮ ಕೊನೆಯ ದಿನಗಳಲ್ಲಿ ಗಾಂಧಿಯವರು ಅವಿರತವಾಗಿ ಶ್ರಮಿಸಿದರು. ಈ ಕಾರಣಕ್ಕಾಗಿ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಲು ನೊಬೆಲ್ ಸಮಿತಿಯು ಗಂಭೀರವಾಗಿ ಆಲೋಚಿಸಿತು. ಕೆಲವು ಔಪಚಾರಿಕ ಕಾರಣಗಳಿಗಾಗಿ ಪ್ರಶಸ್ತಿಯನ್ನು ನೀಡಲು ಸಾಧ್ಯವಾಗದಿದ್ದಾಗ ಬಹುಮಾನವನ್ನು ಕಾಯ್ದಿರಿಸಲು ತೀರ್ಮಾನಿಸಿದ್ದರ ಜೊತೆಗೆ ಒಂದು ವರ್ಷದ ನಂತರ ಬಹುಮಾನದ ಹಣವನ್ನು 1948ಕ್ಕೆ ಖರ್ಚು ಮಾಡಬಾರದು ಎಂದು ತೀರ್ಮಾನಿಸಲಾಯಿತು. ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ಸಾಧ್ಯವಾಗದಿದ್ದರೂ ಸಮಿತಿ ಇದಕ್ಕಾಗಿ ವಿಷಾದ ವ್ಯಕ್ತ ಪಡಿಸಿತು ಹಾಗೂ ಈ ವಿಷಯದಲ್ಲಿ ಮಹಾತ್ಮ ಗಾಂಧೀಜಿಯವರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಯಿತು. 1989ರಲ್ಲಿ ದಲೈ ಲಾಮರಿಗೆ ಶಾಂತಿ ಪ್ರಶಸ್ತಿ ನೀಡಿದಾಗ ನೊಬೆಲ್ ಸಮಿತಿಯ ಅಧ್ಯಕ್ಷರು “ದಲೈ ಲಾಮರಿಗೆ ನೀಡಿದ ಈ ಪ್ರಶಸ್ತಿ ಮಹಾತ್ಮಗಾಂಧಿಯವರ ಸ್ಮರಣಾರ್ಥ ಗೌರವ” ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಗಾಂಧೀಜಿಯವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವಲ್ಲಿ ಬ್ರಿಟಿಷ್ ಸರ್ಕಾರ ಪ್ರತಿಕೂಲ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು ಎಂದು ಕೆಲವರು ಹೇಳುತ್ತಾರೆ. ಆದ್ದರಿಂದಲೇ 1937ರಲ್ಲೆ ಕಿರು ಗುಂಪಿಗೆ ಆಯ್ಕೆಯಾಗಿದ್ದ ಗಾಂಧಿಯವರಿಗೆ ಪ್ರಶಸ್ತಿ ಸಿಗಲಿಲ್ಲ ಎಂದು ಹಲವರು ವಾದಿಸುತ್ತಾರೆ. ಆದರೆ ಇವುಗಳಿಗೆ ಯಾವುದೇ ಆದಾರಗಳಿಲ್ಲ. ಆದರೆ ಗಾಂಧೀಜಿಯವರು ಶಾಂತಿಗೆ ಮತ್ತೊಂದು ಹೆಸರಾಗಿದ್ದರಿಂದ ಅಹಿಂಸೆಯ ಸಂಕೇತವೆಂದು ಅವರನ್ನು ಪರಿಗಣಿಸಬೇಕಾಗಿತ್ತು. ಅದೇ ಸಮಯದಲ್ಲಿ ಭಾರತದ ಪ್ರಮುಖ ನಾಯಕರೊಬ್ಬರಿಗೆ ಶಾಂತಿ ಪ್ರಶಸ್ತಿಯನ್ನು ನೀಡಿದರೆ ಉಂಟಾಗುವ ರಾಜಕೀಯ ಪರಿಣಾಮಗಳನ್ನು ಸಮಿತಿಯು ಸರಿಯಾಗಿ ಅರ್ಥ ಮಾಡಿಕೊಂಡಂತೆ ಕಂಡು ಬರುವುದಿಲ್ಲ.
ಇಲ್ಲಿ ಪ್ರಶ್ನೆಯಾಗಿ ಉಳಿಯುವ ಅಂಶವೆಂದರೆ, ಗಾಂಧೀಜಿಯವರ ಹೆಸರು 1937ರಿಂದಲೂ ಮೊದಲುಗೊಂಡು ನಾಮ ನಿರ್ದೇಶನವಾದರೂ 1947ರವರೆಗೂ ಅವರ ಹೆಸರನ್ನು ನೊಬೆಲ್ ಸಮಿತಿ ಏಕೆ ಗಂಭೀರವಾಗಿ ಪರಿಗಣಿಸಲಿಲ್ಲ? ಈ ಅವಧಿಯಲ್ಲಿ ಅಂದರೆ 1937 ರಿಂದ 1947ರವರೆಗೂ ಹತ್ತು ವರ್ಷಗಳ್ಲಲಿ ಭಾರತದ ರಾಜಕೀಯ ಇತಿಹಾಸದಲ್ಲಿ ಗಾಂಧಿಯವರ ಪಾತ್ರ ಅವಿಸ್ಮರಣೀಯವಾದುದು. ಅವರು ಸಂಘಟಿಸಿದ ಅನೇಕ ಅಹಿಂಸಾತ್ಮಕ ಚಳುವಳಿಗಳಿಗೆ ಅತಿ ದೊಡ್ಡ ವಿಜಯ ಮತ್ತು ಸೋಲುಗಳು ಉಂಟಾಗಿದ್ದವು. ಭಾರತದ ಸ್ವಾತಂತ್ರ್ಯ ಮತ್ತು ಭಾರತದ ವಿಭಜನೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ನಿಭಾಯಿಸುವಿಕೆ ವಿಷಯಗಳಲ್ಲಿ ಗಾಂಧೀಜಿ ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದರು. ಭಾರತೀಯರು ಮತ್ತು ಬ್ರಿಟಿಷರ ನಡುವಿನ ಹೋರಾಟ, ಎರಡನೇ ಮಹಾಯುದ್ದದಲ್ಲಿ ಭಾರತದ ಭಾಗವಹಿಸುವಿಕೆಯ ಪ್ರಶ್ನೆ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಸಂಘರ್ಷ, ಈ ಎಲ್ಲಾ ವಿಷಯಗಳಲ್ಲೂ ಗಾಂಧೀಜಿ ಅಹಿಂಸಾ ತತ್ವಗಳನ್ನು ಅನುಸರಿಸಿದ್ದರು, ಗಾಂಧೀಜಿಯವರ ಅಹಿಂಸಾತ್ಮಕ ಚಳುವಳಿಗಳು ಜಗತ್ತಿನಾಧ್ಯಂತ ಪ್ರಮುಖವಾಗಿ ಚರ್ಚಿತವಾಗಿತ್ತಿದ್ದ ಕಾಲವದು.
ಜಗತ್ತಿನಾಧ್ಯಂತದ ಪತ್ರಿಕೆಗಳು ಕೂಡ ಗಾಂಧೀಜಿಯವರ ಶಾಂತಿ ಕ್ರಮಗಳನ್ನು ಶ್ಲಾಘಿಸಿದ್ದವು. ಆಗಸ್ಟ್ 15, 1947ರ ಸಂಚಿಕೆಯಲ್ಲಿ ಟೈಮ್ಸ್ ಆಫ್ ಇಂಡಿಯಾ ಈ ರೀತಿ ಬರೆಯಿತು. “ ಭಾರತದ ವಿಭಜನೆಯಿಂದ ರೂಪುಗೊಂಡ ಸಮಸ್ಯೆಗಳು ಗಾಂಧೀಜಿಯವರು ತೆಗೆದುಕೊಂಡ ಕಾರಣದಿಂದಾಗಿ ರಕ್ತಪಾತಕ್ಕೆ ಕಾರಣವಾಗಲಿಲ್ಲ. ಗಾಂಧಿಯವರ ಬೋಧನೆಗಳು, ಅವರ ಅನುಯಾಯಿಗಳ ಪ್ರಯತ್ನಗಳು ಮತ್ತು ಅವರ ಸ್ವಂತ ಉಪಸ್ಥಿತಿಯು ಇದರ ಸಿಂಹಪಾಲನ್ನು ಪಡೆಯಬೇಕು” ಆದರೆ ಈ ಅವಧಿಯಲ್ಲಿ ನೊಬೆಲ್ ಸಮಿತಿಯು ಗಾಂಧಿಯವರ ಹೆಸರನ್ನು ಸ್ಪಷ್ಟವಾಗಿ ಬೆಂಬಲಿಸಲಿಲ್ಲ. ಯುರೋಪಿಯನ್ ಅಲ್ಲದವರನ್ನು ಬೆಂಬಲಿಸಲು ನಾರ್ವೆಯ ನೊಬೆಲ್ ಸಮಿತಿಯವರು ಹಿಂದೇಟು ಹಾಕಿದರೆ? ಅಥವಾ ಸಮಿತಿಯ ಸದಸ್ಯರು ತಮ್ಮ ದೇಶ ಮತ್ತು ಬ್ರಿಟನ್ ನಡುವಿನ ಸಂಬಂಧಕ್ಕೆ ಇದರಿಂದ ಹಾನಿಯಾಗುತ್ತದೆ. ಎಂದು ಭಾವಿಸಿದ್ದರೆ? ಒಂದು ರೀತಿಯಲ್ಲಿ ಇವೆಲ್ಲ ಗೊಂದಲದ ಗೂಡುಗಳಾಗಿವೆ.
ಆದರೆ 1937ರಲ್ಲಿ ಪ್ರಥಮ ಬಾರಿಗೆ ಗಾಂಧೀಜಿಯವರ ಹೆಸರನ್ನು ಶಾಂತಿಗಾಗಿ ನೊಬೆಲ್ ಪ್ರಶಸ್ತಿಗೆ ನಾಮ ನಿರ್ದೇಶನವು ಯೂರೋಪಿನವರಿಂದಲೇ ಹುಟ್ಟಿಕೊಂಡಿತು. ಎಲ್ಲಕ್ಕಿಂತ ಹೆಚ್ಚಾಗಿ 1930ರಲ್ಲಿಯೇ ವಿಶ್ವದ ಪ್ರಸಿದ್ದ ನಿಯತಕಾಲಿಕ ಟೈಮ್ಸ್ ಮಹಾತ್ಮ ಗಾಂಧಿಯವರನ್ನು ವರ್ಷದ ವ್ಯಕ್ತಿ ಎಂದು ಗೌರವಿಸಿತ್ತು. ಇಲ್ಲಿ ಗಮನಿಸಬೇಕಾಗ ಮಹತ್ವದ ಅಂಶವೆಂದರೆ ಇದುವರೆಗೂ ಶಾಂತಿಗಾಗಿ ನೊಬೆಲ್ ಪ್ರಶಸ್ತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಶ್ಚಿಮ ಯುರೋಪ್ ಮತ್ತು ಅಮೇರಿಕಾ ದೇಶದವರೇ ಪಡೆದುಕೊಂಡಿದ್ದಾರೆ.
ಅಂತರರಾಷ್ಟ್ರೀಯ ಶಾಂತಿ ಚಳುವಳಿಯಲ್ಲಿ ಗಾಂಧಿಯವರ ವಿಷಯದಲ್ಲಿ ಸಾಕಷ್ಟು ವಿಮರ್ಶೆಗಳು ಬಂದವು. ಅವರು ನಿರಂತರವಾಗಿ ಶಾತಿ ಪ್ರಿಯರಾಗಿರಲಿಲ್ಲ. ಅವರ ನೀತಿಗಳಲ್ಲಿ ಸಾಕಷ್ಟು ತಿರುವುಗಳಿವೆ. ಅವುಗಳನ್ನು ಅವರು ಮತ್ತು ಅವರ ಅನುಯಾಯಿಗಳು ಸರಿಯಾಗಿ ವಿವರಿಸುವಲ್ಲಿ ವಿಫಲರಾಗಿದ್ದಾರೆ. ಬ್ರಿಟಿಷರ ವಿರುದ್ದ ಅವರು ನಡೆಸಿದ ಕೆಲವು ಅಹಿಂಸಾತ್ಮಕ ಚಳುವಳಿಗಳು ಹಿಂಸೆಯ ರೂಪು ತಾಳಿದವು. 1920-21ರಲ್ಲಿ ನಡೆದ ಮೊದಲ ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಚೌರಿ ಚೌರಾದ್ಲಲಿ ಚಳುವಳಿ ನಿರತರು ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ, ಅನೇಕ ಪೊಲೀಸರನ್ನು ಹತ್ಯೆ ಮಾಡಿದ ನಂತರ ಠಾಣೆಗೆ ಬೆಂಕಿ ಇಟ್ಟ ಘಟನೆಯು ಸೇರಿದಂತೆ ಹಲವು ಉದಾಹರಣೆಗಳನ್ನು ಈ ವಿಮರ್ಶಕರು ದಾಖಲಿಸಿದ್ದಾರೆ. ಅದೇ ಸಮಯದಲ್ಲಿ ಕೆಲವು ವಿಮರ್ಶಕರು, ಅವರೊಬ್ಬ ಒಳ್ಳೆಯ , ಉದಾತ್ಮ ಮತ್ತು ತಪಸ್ವಿ ವ್ಯಕ್ತಿ ಎಂದು ಮೆಚ್ಚುಗೆ ಸೂಚಿಸಿದರು. ಭಾರತದ ಜನ ಮಾನಸದಲ್ಲಿ ಅರ್ಹವಾಗಿ ಗೌರವಿಸಲ್ಪಟ್ಟ ಮತ್ತು ಪ್ರೀತಿಸಲ್ಪಟ್ಟ ಮಹಾನ್ ವ್ಯಕ್ತಿ, ಆದರ್ಶವಾದಿ ಮತ್ತು ರಾಷ್ಟ್ರೀಯವಾದಿ ಎಂದು ಅಭಿಪ್ರಾಯಪಟ್ಟರು. ಆದರೆ ಕೆಲವು ವಿಮರ್ಶಕರು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಗಾಂಧೀಜಿಯವರ ಹೋರಾಟವು ಭಾರತೀಯರ ಪರವಾಗಿ ಮಾತ್ರ ನಡೆದಿತ್ತು. ಆದರೆ ಭಾರತೀಯರಿಗಿಂತ ಕೆಟ್ಟ ಜೀವನ ಪರಿಸ್ಥಿತಿಯನ್ನು ಕಪ್ಪು ಜನರು ಅನುಭವಿಸುತ್ತಿದ್ದರು. ಮತ್ತು ಗಾಂಧಿಯವರು ಎಲ್ಲಾ ರೀತಿಯ ಯುದ್ದಗಳನ್ನು ವಿರೋದಿಸಿದ್ದರೂ ಪಾಕಿಸ್ಥಾನದೊಂದಿಗೆ ವ್ಯವಹರಿಸುವಾಗ ವಿಷಯ ಬೇದ ಕಂಡು ಬಂದಂತೆ ಬಾಸವಾಗುತ್ತದೆ. ಎಂಬುದು ಗಮನಾರ್ಹ ವಿಷಯವಾಗಿದೆ, ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯವಾಗಿತ್ತು.
ಗಾಂಧೀಜಿಯವರಿಗೆ ಸಲ್ಲದ ನೊಬೆಲ್ ಶಾಂತಿ ಪ್ರಶಸ್ತಿ ಅವರ ಇಬ್ಬರು ಅನುಯಾಯಿಗಳಿಗೆ ಸಂದಿದ್ದು ಬಹಳ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಮೊದಲನೆಯವರು ದಕ್ಷಣ ಆಫ್ರಿಕಾದಲ್ಲಿ ಗಾಂಧಿಯವರ ತತ್ವಗಳನ್ನು ಅನ್ವಯಿಸುವಲ್ಲಿ ಮುಂಚೂಣಿಯಲ್ಲಿದ್ದ ಆಲ್ಭರ್ಟ್ ಲುಥುಲಿ ಅವರನ್ನು 1960ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರೆ, ಎರಡನೆಯದಾಗಿ ಗಾಂಧಿಯನ್ನು ತನ್ನ ಮಾರ್ಗದರ್ಶಕ ಎಂದು ಒಪ್ಪಿಕೊಂಡಿದ್ದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಗೆ 1964ರಲ್ಲಿ ಪ್ರಶಸ್ತಿ ನೀಡಿದ್ದು. ಗಾಂಧಿಯವರ ಕಟ್ಟಾ ಅನುಯಾಯಿಗಳಿಗೆ ನೊಬೆಲ್ ಶಾಂತಿ ಪುರಸ್ಕಾರವನ್ನು ನೀಡಿರುವುದು, ಗಾಂಧೀಜಿಯವರ ತತ್ವ ಮತ್ತು ಸಿದ್ದಾಂತಗಳಿಗೆ ನೀಡಿದಂತೆಯೇ ಆಗುತ್ತದೆ. ಆದರೆ ಗಾಂಧಿಯವರನ್ನು ಏಕೆ ಪರಿಗಣಿಸಲಿಲ್ಲ?
ಒಟ್ಟಿನಲ್ಲಿ ಜಗತ್ತಿನಲ್ಲಿ ಅಹಿಂಸೆ ಇರುವವರೆಗೂ ಮಹಾತ್ಮ ಗಾಂಧೀಜಿಯವರಿಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ದೊರಕದೇ ಇರುವ ವಿಷಯ ಚರ್ಚೆಯಾಗುತ್ತಲೇ ಇರುತ್ತದೆ. ಏಕೆಂದರೆ ಅರ್ಹ ಶಾಂತಿ ದೂತನ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ನೊಬೆಲ್ ಸಮಿತಿ ಸ್ಪಷ್ಟವಾಗಿ ವಿಫಲವಾಗಿದೆ.
###
-ಡಾ.ಅಮ್ಮಸಂದ್ರ ಸುರೇಶ್, ಮೈಸೂರು
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು.
ಮೊಬೈಲ್ : 9448402346
*****

The post ಮಾಧ್ಯಮ ಲೋಕ-೦೮ (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮಾಧ್ಯಮ ವಿಶ್ಲೇಷಕರು, ಮೈಸೂರು) appeared first on Karnataka Kahale.

]]>
ಮಾಧ್ಯಮ ಲೋಕ-೦೭ (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್) https://www.karnatakakahale.com/news/3593 Mon, 15 Mar 2021 11:25:15 +0000 https://www.karnatakakahale.com/?p=3593   – ಬದಲಾದ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ                                             …

The post ಮಾಧ್ಯಮ ಲೋಕ-೦೭ (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್) appeared first on Karnataka Kahale.

]]>
 

ಬದಲಾದ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ                                                               -ಡಾ.ಅಮ್ಮಸಂದ್ರ ಸುರೇಶ್

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಮೇ.9ಕ್ಕೆ ಚುನಾವಣೆ ನಡೆಯಲಿದ್ದು 12ರಂದು ಪಲಿತಾಂಶ ಪ್ರಕಟವಾಗಲಿದೆ.
ಈ ಬಾರಿಯ ಚುನಾವಣೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಮತ ಚಲಾವಣೆ ಮಾಡಲಿದ್ದಾರೆ. ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಹಾಗೂ ಗಡಿನಾಡು ಘಟಕದ ಅಧ್ಯಕ್ಷರ ಸ್ಥಾನಗಳಿಗೆ ಮಾ. 29ರಿಂದ ಏಪ್ರಿಲ್.7ರವರೆಗೆ ನಾಮಪತ್ರ ಸಲ್ಲಿಸಬಹುದು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಆಕಾಂಕ್ಷಿಗಳು ಈಗಾಗಲೇ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮತಗಳಿವೆ ಹಾಗೂ ಮತ ಗಿಟ್ಟಿಸಿಕೊಳ್ಳುವ ಮಾರ್ಗಗಳ ಕುರಿತು ಚಿಂತನೆ ನಡೆಸುತ್ತಿದ್ದರೆ ಇನ್ನೂ ಕೆಲವರು ಈಗಾಗಲೇ ಪ್ರಚಾರ ಆರಂಭಿಸಿಬಿಟ್ಟಿದ್ದಾರೆ. ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಲಿರುವ ಆಕಾಂಕ್ಷಿಗಳೂ ಕೂಡ ಸಮಾಲೋಚನಾ ಸಭೆಗಳನ್ನು ಆರಂಭಿಸಿರುವ ಜೊತೆಗೆ ಕೆಲವರಂತೂ ಈಗಾಗಲೆ ಭರ್ಜರಿ ಪ್ರಚಾರ ಕೂಡ ಶುರು ಮಾಡಿದ್ದಾರೆ. ಕೆಲವರಂತೂ ಚುನಾವಣೆ ಘೋಷಣೆಯಾಗುವ ಸುಮಾರು ಆರೇಳು ತಿಂಗಳುಗಳಿಂದಲೇ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಇದೀಗ ಚುನಾವಣೆ ಪ್ರಚಾರ ಬಿರುಸುಗೊಂಡಿದ್ದು ಕನ್ನಡಾಂಬೆಯ ತೇರಿಗೆ ಸಾರಥಿಯಾಗಲು ಘಟಾನುಘಟಿಗಳು ಪ್ರಚಾರ ಶುರು ಮಾಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಆರಂಭದಿಂದ 1940ರವರೆಗೂ ಅಧ್ಯಕ್ಷರನ್ನಾಗಿ ಸಾಹಿತ್ಯ, ಕನ್ನಡ ನಾಡು-ನುಡಿಯ ಕುರಿತಾದ ಸೇವೆ, ಬದ್ದತೆಗಳನ್ನು ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಆ ನಂತರ ಕಸಾಪಗೆ ಚುನಾವಣಾ ಪದ್ದತಿಯನ್ನು ಅಳವಡಿಸಿಕೊಳ್ಳಲಾಯಿತು. ಬೆಂಗಳೂರು ನಗರ ಜಿಲ್ಲೆಯಲ್ಲಿ 36,262 ಮತದಾರರಿದ್ದು, ಅತಿ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆಯಾಗಿದೆ. ಎರಡನೇ ಸ್ಥಾನದಲ್ಲಿ 24207 ಮತದಾರರನ್ನು ಹೊಂದಿರುವ ಮಂಡ್ಯ ಜಿಲ್ಲೆಯಿದೆ. ಬೀದರ್ ಜಿಲ್ಲೆಯಲ್ಲಿ 15,000ಕ್ಕೂ ಹೆಚ್ಚು ಮತದಾರರಿದ್ದಾರೆ. ಇದೇ ಮೊದಲ ಬಾರಿಗೆ 1,21,165 ಮತದಾರರು ತಮ್ಮ ಮತಾಧಿಕಾರವನ್ನು ಚಲಾಯಿಸಲಿದ್ದಾರೆ. ಚುನಾವಣೆ ದಿನಾಂಕ ಮೇ.9ಕ್ಕೆ ಮೂರು ವರ್ಷಗಳ ಹಿಂದಿನಿಂದ ಸತತವಾಗಿ ಸದಸ್ಯರಾಗಿರುವವರಗೆ ಮಾತ್ರ ಮತದಾನ ಮಾಡಲು ಅವಕಾಶವಿದೆ.
ವಾಡಿಕೆಯ ಪ್ರಕಾರ ಕಸಾಪ ಅಧ್ಯಕ್ಷರ ಆಡಳಿತಾವಧಿ 3 ವರ್ಷಗಳಾಗಿತ್ತು. ಪುಸ್ತುತ ಅಧ್ಯಕ್ಷರಾದ ಮನುಬಳಿಗಾರ್ ಅವರು ಇದನ್ನು 5 ವರ್ಷಗಳಿಗೆ ಏರಿಸಿದ್ದರ ಪರಿಣಾಮವಾಗಿ ಅವರಿಗೆ ಎರಡು ವರ್ಷಗಳ ಹೆಚ್ಚುವರಿ ಅವಧಿ ಲಭಿಸಿತು. ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಚುನಾವಣಾ ದಿನಾಂಕಕ್ಕೆ 10 ವರ್ಷಗಳ ಹಿಂದಿನಿಂದ ಸತತವಾಗಿ ಸದಸ್ಯರಾಗಿರಬೇಕಾಗಿರುತ್ತದೆ. ಅದೇ ರೀತಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು 5 ವರ್ಷಗಳ ಹಿಂದಿನಿಂದ ಸದಸ್ಯರಾಗಿರಬೇಕು.
ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದೂರದರ್ಶನ ನಿವೃತ್ತ ಹಿರಿಯ ಅಧಿಕಾರ ಡಾ.ಮಹೇಶ್ ಜೋಷಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ, ಹಾಗೂ ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಮಾಲಿ ಪಾಟೀಲ,ಬಳ್ಳಾರಿಯ ರಾಜಶೇಖರ ಮುಲಾಲಿ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವರು ರಾಜ್ಯಾದ್ಯಂತ ಸಂಚರಿಸಿ, ಸಾಹಿತಿಗಳು, ಲೇಖಕರು, ಕನ್ನಡದ ಮನಸ್ಸುಗಳು ಮತ್ತು ಮತದಾರರನ್ನು ಸೆಳೆಯುವ ವಿವಿದ ತಂತ್ರಗಳನ್ನು ನಡೆಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ಈ ಬಾರಿ ಯುವ ಆಕಾಂಕ್ಷಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ.
ತಿರುಮಲೆ ತಾತಚಾರ್ಯ ಶರ್ಮ, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎಂ.ಎನ್.ಮೂರ್ತಿರಾವ್, ಜಿ.ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ, ಗೂ.ರು.ಚನ್ನಬಸಪ್ಪ, ಸಾ.ಶೀ.ಮರುಳಯ್ಯ, ಡಾ.ಹಂಪ ನಾಗರಾಜಯ್ಯ, ಜಿ.ನಾರಾಯಣ, ಚಂಪಾರಂತಹ ಕನ್ನಡ ಸಾರಸ್ವತ ಲೋಕದ ದಿಗ್ಗಜರು ಕಸಾಪ ಆಡಳಿತದ ಚುಕ್ಕಾಣಿ ಹಿಡಿದು ಕನ್ನಡದ ಕಾರ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಹೆಚ್ಚಿನವರು ಸಾಹಿತಿಗಳು ಮತ್ತು ಹೋರಾಟಗಾರರು ರಾಜ್ಯಾಧ್ಯಕ್ಷಗಿರಿ ಅಲಂಕರಿಸುತ್ತಾ ಬಂದರು. ಹರಿಕೃಷ್ಣ ಪುನರೂರು, ಡಾ.ನಲ್ಲೂರು ಪ್ರಸಾದ್, ಪುಂಡಲೀಕ ಹಾಲಂಬಿಯಂತಹ ಸಾಹಿತ್ಯಾಸಕ್ತರೂ ಕೂಡ ಆಯ್ಕೆಯಾಗುವ ಮೂಲಕ ಹೊಸ ಅಲೆ ಆರಂಭವಾಯಿತು. ಮನುಬಳಿಗಾರ್ ಅಧ್ಯಕರಾಗುವ ಮೂಲಕ ನಿವೃತ್ತ ಅಧಿಕಾರಿಗಳ ಆಗಮನ ಕೂಡ ಕಸಾಪಗೆ ಆಗಿದೆ. ಇದೀಗ ನಿವೃತ್ತ ಅಧಿಕಾರಿ ವರ್ಗ ಕೂಡ ಕಸಾಪ ಚುನಾವಣೆಗಳತ್ತ ಕಣ್ಣಿಟ್ಟಿದೆ.
ಗಮನಾರ್ಹವಾದ ವಿಷಯವೆಂದರೆ, ಇಷ್ಟೊಂದು ಸುದೀರ್ಘ ಇತಿಹಾಸವನ್ನು ಹೊಂದಿರುವ ಕಸಾಪಗೆ ಇದುವರೆಗೂ ಮಹಿಳೆಯರು ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ. ಕಸಾಪ ಪುರುಷ ಪ್ರಧಾನ ವ್ಯವಸ್ಥೆಯಿಂದ ಹೊರಬಂದಿಲ್ಲ ಎಂಬ ದೂರುಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಕಾವ್ಯ, ಗದ್ಯ, ಕಥೆ, ಕಾದಂಬರಿ, ಪ್ರಬಂಧ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ತುಂಬಾ ಒಳ್ಳೆಯ ಮತ್ತು ಗಟ್ಟಿ ಸಾಹಿತ್ಯವನ್ನು ಮಹಿಳಾ ಲೇಖಕರು ಕನ್ನಡ ಸಾಹಿತ್ಯ ಜಗತ್ತಿಗೆ ನೀಡಿದ್ದಾರೆ. ವಚನ ಸಾಹಿತ್ಯದಿಂದಿಡಿದು ನವ್ಯ ಸಾಹಿತ್ಯದವರೆಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರು ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಆಧ್ಯಕ್ಷರಾದ ಬಾ.ಹ.ರಮಾಕುಮಾರಿ ಅವರಂತಹ ಮಹಿಳಾ ಸಾಹಿತಿಗಳೂ ಮತ್ತು ಉತ್ತಮ ಸಂಘಟಕರು ಈ ಅರ್ಹತೆಯನ್ನು ಹೊಂದಿದ್ದಾರೆ. ಹೀಗಾಗಿ ಈ ಬಾರಿ ಕಸಾಪ ಅಧ್ಯಕ್ಷರಾಗಿ ಮಹಿಳೆಯೊಬ್ಬರು ಆಯ್ಕೆಯಾಗಬೇಕಾಗಿರುವುದು ಅವಶ್ಯಕವಾಗಿದೆ. ಈ ಕುರಿತಂತೆ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯ ಮಹಿಳೆಯೊಬ್ಬರಿಗೆ ಸಿಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ. ಸ್ವಾರ್ಥ ಮತ್ತು ಅಧಿಕಾರ ದಾಹದಿಂದ ಹೊರಬಂದರೆ ಈ ಆಶಯ ಈಡೇರಬಹುದು.
ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ, ಪುಸ್ತಕ ಪ್ರಕಟಣೆ, ಸಾಹಿತ್ಯದ ಉಳಿವು ಹಾಗೂ ಕನ್ನಡತನವನ್ನು ಸಾಕಾರಗೊಳಿಸುವ ಮೂಲ ಉದ್ದೇಶಗಳೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಇಚ್ಚಾಶಕ್ತಿಯೊಂದಿಗೆ ಕಸಾಪ ಆರಂಭವಾಯಿತು. ರಾಜ್ಯಾಧ್ಯಕ್ಷರಾಗುವವರ ಮುಂದೆ ಸಾಕಷ್ಟು ಸವಾಲುಗಳಿವೆ ಮತ್ತು ಈ ಸವಾಲುಗಳನ್ನು ಎದುರಿಸಿ, ಪರಿಹಾರಗಳನ್ನು ಕಂಡುಕೊಂಡು, ಸರ್ಕಾರ ಮತ್ತು ಸಾಹಿತ್ಯ ಪರಿಷತ್ತಿನ ಮಧ್ಯೆ ಉತ್ತಮ ಬಾಂದವ್ಯವನ್ನು ಇಟ್ಟುಕೊಂಡು ಕನ್ನಡದ ಕೆಲಸವನ್ನು ನಿಸ್ವಾರ್ಥ ಮನೋಭಾವದಿಂದ ಮಾಡುವ, ಕರ್ನಾಟಕದ ಸರ್ವಾಂಗೀಣ ಅಭಿವೃದ್ದಿ ಸಾಧಿಸುವ ಹಂಬಲವಿರುವ, ನಿಸ್ವಾರ್ಥ ನಾಯಕನೊಬ್ಬನ ಅಗತ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಇಂದು ಅತ್ಯಗತ್ಯವಾಗಿ ಬೇಕಾಗಿದೆ. ಕಸಾಪಗೆ ಇಂದು ಬೇಕಾಗಿರುವುದು ಗಟ್ಟಿ ಮನಸ್ಸಿನ, ವಿಶಾಲ ಮನೋಭಾವದ ನಾಯಕತ್ವ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಆಕಾಂಕ್ಷಿಗಳು ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿರುವುದು ಅವಶ್ಯಕವಾಗಿದೆ.
ಕೇವಲ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದು, ದತ್ತಿ ಉಪನ್ಯಾಸಗಳನ್ನು ಏರ್ಪಡಿಸುವುದು, ದತ್ತಿ ಪ್ರಶಸ್ತಿಗಳನ್ನು ಘೋಷಿಸುವುದಕ್ಕಷ್ಟೆ ಕಸಾಪ ಸೀಮಿತವಾಗಬಾರದು. ಕನ್ನಡ ಸಾಹಿತ್ಯ ಪರಿಷತ್ತು ಬದಲಾಗಿರುವ ಸನ್ನಿವೇಶಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆಗಳಿಗೆ ಮೈಒಡ್ಡಿಕೊಳ್ಳಬೇಕಾಗಿದೆ. ಬದಲಾವಣೆ ಜಗದ ನಿಯಮ ಇದಕ್ಕೆ ವಿರುದ್ದವಾಗಿ ಜಡ್ಡುಗಟ್ಟಿದ ಯಾವ ಸಂಸ್ಥೆಯು ಹೆಚ್ಚು ದಿನ ಯಶಸ್ವಿಯಾಗಲು ಸಾಧ್ಯವಿಲ್ಲ. ಪ್ರಾದೇಶಿಕ ಅಸಮಾನತೆಯತ್ತ ಕೂಡ ಕಸಾಪ ಗಮನಹರಿಸಬೇಕಾಗಿದೆ.
ಕರ್ನಾಟಕದ ಏಕೀಕರಣವಾಗಿ ದಶಕಗಳೇ ಕಳೆದರೂ ಏಕೀಕರಣ ಉದ್ದೇಶ ಮತ್ತು ಆಶಯ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಗಡಿ ವಿವಾದ ಇನ್ನೂ ಬಗೆಹರಿದಿಲ್ಲ. ಕರ್ನಾಟಕದ ಗಡಿ ವಿವಾದ ಕುರಿತು ರಚಿಸಲಾದ ಮಹಾಜನ್ ವರದಿ ಇದುವರೆಗೂ ಜಾರಿಗೆ ಬಂದಿಲ್ಲ. ಈ ವರದಿಯ ಪ್ರಕಾರ ಮಹಾರಾಷ್ಟ್ರದ ಸಂಪೂರ್ಣ ಅಕ್ಕಲಕೋಟೆ ತಾಲ್ಲೂಕು ಮತ್ತು ಇತರೆ 247 ಹಳ್ಳಿಗಳು, ಕಾಸರಗೂಡು ಸೇರಿದಂತೆ ಕೇರಳದ ಚಂದ್ರಗಿರಿ ನದಿಯ ಉತ್ತರ ಭಾಗ, ಕರ್ನಾಟಕಕ್ಕೆ ಸೇರಬೇಕಾಗಿದೆ. ಬಹುದಿನಗಳ ಬೇಡಿಕೆಯಾದ ತುಮಕೂರು ಗಡಿ ಭಾಗವಾದ ಮಡಕಶಿರಾ ಹಾಗೂ ಚಾಮರಾಜನಗರ ಜಿಲ್ಲೆಯ ಗಡಿ ಭಾಗವಾದ ತಾಳವಾಡಿ ಪಿರ್ಕಾ ಇದುವರೆಗೂ ಕರ್ನಾಟಕಕ್ಕೆ ಸೇರಲಿಲ್ಲ. ಬೆಳಗಾವಿ ಸಮಸ್ಯೆ ದಿನ ಕಳೆದಂತೆ ಹೆಚ್ಚು ಜಟಿಲವಾಗುತ್ತಿದೆ. ಬೆಂಗಳೂರು ನಗರ ಕೆಜಿಎಫ್, ಚಾಮರಾಜನಗರ ಜೆಲ್ಲೆ ಮತ್ತು ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿ ತಮಿಳರ ಸಂಖ್ಯೆ ಪ್ರಭಲವಾಗುತ್ತಿದ್ದರೆ, ಕೋಲಾರ, ತುಮಕೂರಿನ ಗಡಿ ಪ್ರದೇಶಗಳೂ, ಬಳ್ಳಾರಿ, ರಾಯಚೂರು, ಜೆಲ್ಲೆಗಳಲ್ಲಿ ತೆಲುಗರ ಪ್ರಾಭಲ್ಯ ಹೆಚ್ಚುತ್ತಿದೆ. ಬೆಳಗಾವಿಯಲ್ಲಿ ಮರಾಠಿಗರು ನೆಲೆ ಕಂಡುಕೊಂಡಿದ್ದಾರೆ. ಮೈಸೂರು ಮತ್ತು ಕೊಡಗು ಜಿಲ್ಲೆಯ ಗಡಿ ಭಾಗಗಳಲ್ಲಿ ಕೇರಳಿಗರು ಹೆಚ್ಚು ಸಂಖ್ಯೆಯಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ.
ನಮ್ಮ ಯುವಜನರಿಗೆ ಉದ್ಯೋಗದ ಬರವಸೆಯನ್ನು ಒದಗಿಸುವ ಉದ್ಯೋಕ್ಕಾಗಿನ ಪರೀಕ್ಷೆಗಳು ಇನ್ನೂ ಕೂಡ ಸಂಪೂರ್ಣವಾಗಿ ಕನ್ನಡ ಮಾಧ್ಯಮದಲ್ಲಿ ನಡೆಯುತ್ತಿಲ್ಲ. ರಾಜ್ಯದ ಒಟ್ಟಾರೆ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆಯ ಕೂಗು ಇನ್ನೂ ಮುಂದುವರಿದಿದೆ. ಅಭಿವೃದ್ಧಿಯ ಅಸಮತೋಲನದ ವಿರುದ್ದ ಕಸಾಪ ಹೋರಾಟ ನಡೆಸಬೇಕಾಗಿದೆ. ಪ್ರತ್ಯೇಕ ರಾಜ್ಯದ ಕೂಗು ಹಾಗಾಗ ಕೇಳಿ ಬರುತ್ತಿದೆ, ಇದು ಬೃಹತ್ತಾಗಿ ಬೆಳೆಯುವ ಮುನ್ನ ಅಂತಹ ಅಸಮಾಧಾನಗಳನ್ನು ಸರಿಪಡಿಸಲು ಮುಂದಾಗಬೇಕಾಗಿದೆ. ಶಿಕ್ಷಣದಲ್ಲಿ ಕನ್ನಡದ ಸ್ಥಾನ-ಮಾನ ಇನ್ನೂ ಚರ್ಚಿತ ವಸ್ತುವಾಗಿಯೇ ಉಳಿದಿದ್ದು ಮಾತೃಭಾಷಾ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರಲು ಶ್ರಮಿಸಬೇಕಾಗಿದೆ. ಕನ್ನಡ ವಿಶ್ವವಿದ್ಯಾನಿಲಯದ ನೋವು-ನಲಿವುಗಳಿಗೂ ಸ್ಪಂಧಿಸಬೇಕಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ರಾಜ್ಯ ಮತ್ತು ದೇಶದಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದರೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ತೃಪ್ತಿಕರವಾದ ಕೆಲಸ ಇನ್ನೂ ನಡೆದಿಲ್ಲ. ಕನ್ನಡವನ್ನು ತಂತ್ರಜ್ಞಾನ ಭಾಷೆಯನ್ನಾಗಿಸುವ ನಿಟ್ಟಿನಲ್ಲೂ ಕೂಡ ಸಾಕಷ್ಟು ಕೆಲಸ ಆಗಬೇಕಾಗಿದೆ. ರಾಜದಾನಿ ಬೆಂಗಳೂರನ್ನು ಸಿಲಿಕಾನ್ ಸಿಟಿ ಎಂದು ಕರೆದರೂ ಈ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಂದ ಕನ್ನಡ ಹಾಗೂ ಕನ್ನಡಿಗರಿಗೆ ಆಗಿರುವ ಅನುಕೂಲ ಅಷ್ಟರಲ್ಲೇ ಇದೆ. ಈ ದಿಕ್ಕಿನಲ್ಲಿ ನೋಡುವುದಾದರೆ ಕನ್ನಡ ತಂತ್ರಾಂಶದಲ್ಲಿಯೂ ಸಾಕಷ್ಟು ಪ್ರಗತಿಯಾಗಬೇಕಾಗಿದೆ. ಭಾಷಾಭಿಮಾನದ ವಿಷಯದಲ್ಲಿ ಬದ್ದತೆ ಇನ್ನೂ ಕನಸಿನ ಮಾತೇ ಆಗಿದೆ. ಕನ್ನಡ ಚಲನಚಿತ್ರ ರಂಗ ಕೂಡ ಸಮಸ್ಯೆಗಳ ಸುಳಿಯಿಂದ ಹೊರಬಂದಿಲ್ಲ. ನೀರಾವರಿ ಸಮಸ್ಯೆಗಳು ದೂರವಾಗಿಲ್ಲ.
ಶಾಸ್ತ್ರೀಯ ಸ್ಥಾನಮಾನದ ಬಹುಮುಖ್ಯ ಉದ್ದೇಶ ಆ ಭಾಷೆಯ ಪಾರಂಪರಿಕ ಅಂತಃಸತ್ವವನ್ನು ಎತ್ತಿ ನಿಲ್ಲಿಸುವುದು ಮತ್ತು ಹೊಸ ತಲೆಮಾರಿಗೆ ಅದನ್ನು ಮುಟ್ಟಿಸುವುದು. ಆದರೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ-ಮಾನ ದೊರೆತು ವರ್ಷಗಳೇ ಕಳೆದರೂ ಕೂಡ ಇದುವರೆಗೂ ಈ ನಿಟ್ಟಿನಲ್ಲಿ ಅಂತಹ ಉತ್ತಮ ಪ್ರಗತಿಯೇನೂ ಆಗಿಲ್ಲ. ಕನ್ನಡದ ಕುರಿತಾದ ನಿರ್ಲಕ್ಷ್ಯ ಹಾಗೂ ಪೂರ್ವಾಗ್ರಹಗಳು ಶಾಸ್ತ್ರೀಯ ಕನ್ನಡವನ್ನು ಬಡವಾಗಿಸಿವೆ. ಅನೇಕ ಕನ್ನಡ ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ರಾಜ್ಯದಲ್ಲಿ ವಿವಿಧ ಕಾರಣಗಳಿಂದಾಗಿ ಮುಚ್ಚಲಾಗುತ್ತಿದೆ. ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಕಸಾಪ ಧ್ವನಿಯಾಗಬೇಕಾಗಿದೆ. ತಮ್ಮ ನಾಡಿನಲ್ಲಿಯೇ ಕನ್ನಡಿಗರು ಎರಡನೇ ದರ್ಜೆಯ ಪ್ರಜೆಗಳಂತೆ ಜೀವನ ಸಾಗಿಸುವುದು ಎಷ್ಟು ಸರಿ? ಕರ್ನಾಟಕದಲ್ಲಿ ಮೊದಲು ಕನ್ನಡ, ಕನ್ನಡಿಗರು ಗಟ್ಟಿಯಾಗಿ ನೆಲೆ ನಿಲ್ಲಿಬೇಕಾಗಿದೆ.
ಕಸಾಪ ರಾಜ್ಯಾಧ್ಯಕ್ಷಗಿರಿಗಾಗಿನ ಚುನಾವಣಾ ಸ್ಪರ್ಧೆ ಸುಲಭದ ಮಾತೇನೂ ಅಲ್ಲ. ಮೂರು ಲಕ್ಷಕ್ಕೂ ಹೆಚ್ಚು ಮತದಾರರು ರಾಜ್ಯಾದ್ಯಂತ ಹರಡಿಕೊಂಡಿದ್ದಾರೆ. ಇವರೆನ್ನಲ್ಲಾ ಸಂಪರ್ಕಿಸಲು ಮತ್ತು ತಮ್ಮ ಇದುವರೆಗಿನ ಸಾಧನೆಗಳನ್ನು ಹಾಗೂ ಮುಂದೆ ತಾವು ಮಾಡಲಿರುವ ಕಾರ್ಯಗಳನ್ನು ಮತದಾರರಿಗೆ ತಿಳಿಸಬೇಕಾದರೆ ಆಕಾಂಕ್ಷಿಗಳು ಆರ್ಥಿಕವಾಗಿ ಸಾಕಷ್ಟು ಸದೃಡರಾಗಿರಲೇಬೇಕು. ಜಾತಿ ಮತ್ತು ಹಣ ಎರಡೂ ಕೂಡ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂಬುದನ್ನು ಯಾರೂ ಅಲ್ಲಗೆಳೆಯಲಾರರು. ಈ ರೀತಿಯ ಪರಿಸ್ಥಿತಿಯ ನಿರ್ಮಾಣವಾಗುವುದರೊಂದಿಗೆ ಬಡ ಮತ್ತು ಮಧ್ಯಮ ವರ್ಗದ ಸಾಹಿತಿಗಳು ಕನ್ನಡಮ್ಮನ ಸೇವೆ ಮಾಡಬೇಕೆಂಬ ಕನಸು ಕಾಣುವುದೂ ಕೂಡ ಸಾಧ್ಯವಿಲ್ಲದ ವಾತಾವರಣ ಸೃಷ್ಟಿಯಾಗಿದೆ.
ಕಸಾಪ ಚುನಾವಣೆಗಳು ಹಣ ಮತ್ತು ಜಾತಿಯಿಂದ ಮುಕ್ತವಾದರೆ ಒಳ್ಳೆಯ ಸಾರಥಿ ಆಯ್ಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತಹ ಪರಿಸ್ಥಿತಿಯ ನಿರ್ಮಾಣದ ಜವಾಬ್ದಾರಿ ಕಸಾಪದ ಪ್ರತಿಯೊಬ್ಬ ಸದಸ್ಯನ ಮೇಲೂ ಇದೆ.
###
-ಡಾ.ಅಮ್ಮಸಂದ್ರ ಸುರೇಶ್
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346

The post ಮಾಧ್ಯಮ ಲೋಕ-೦೭ (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್) appeared first on Karnataka Kahale.

]]>
ಮಾಧ್ಯಮ ಲೋಕ-೦೬ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) ಶೀರ್ಷಿಕೆ: ಸಾಮಾಜಿಕ ಮಾಧ್ಯಮಗಳಿಗೆ ಬಿತ್ತು ಕಡಿವಾಣ https://www.karnatakakahale.com/news/3506 Mon, 08 Mar 2021 09:05:48 +0000 https://www.karnatakakahale.com/?p=3506 //ಸಾಮಾಜಿಕ ಮಾಧ್ಯಮಗಳಿಗೆ ಬಿತ್ತು ಕಡಿವಾಣ// ಮಾಧ್ಯಮಗಳಿಂದ ಹರಡುತ್ತಿರುವ ಸುಳ್ಳು ಸುದ್ದಿಗಳು ಸಮಾಜದಲ್ಲಿ ಜನರ ಮಧ್ಯೆ ದೊಡ್ಡ ಕಂದಕವನ್ನು ನಿರ್ಮಾಣ ಮಾಡುತ್ತಿವೆ. ಪ್ರಸ್ಥುತ ಪತ್ರಿಕೋದ್ಯಮದಲ್ಲಿ ನೈತಿಕ ಮೌಲ್ಯಗಳು ಮರೆಯಾಗುತ್ತಿದ್ದು ಸುದ್ದಿ ಹಾಗೂ ಸುಳ್ಳು ಸುದ್ದಿಯ ನಡುವಿದ್ದ ತೆಳುವಾದ ಪರದೆ ಮರೆಯಾಗುತ್ತಿದೆ. ಸುದ್ದಿಯಲ್ಲಿ ನಿಖರತೆ…

The post ಮಾಧ್ಯಮ ಲೋಕ-೦೬ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) ಶೀರ್ಷಿಕೆ: ಸಾಮಾಜಿಕ ಮಾಧ್ಯಮಗಳಿಗೆ ಬಿತ್ತು ಕಡಿವಾಣ appeared first on Karnataka Kahale.

]]>
//ಸಾಮಾಜಿಕ ಮಾಧ್ಯಮಗಳಿಗೆ ಬಿತ್ತು ಕಡಿವಾಣ//

ಮಾಧ್ಯಮಗಳಿಂದ ಹರಡುತ್ತಿರುವ ಸುಳ್ಳು ಸುದ್ದಿಗಳು ಸಮಾಜದಲ್ಲಿ ಜನರ ಮಧ್ಯೆ ದೊಡ್ಡ ಕಂದಕವನ್ನು ನಿರ್ಮಾಣ ಮಾಡುತ್ತಿವೆ. ಪ್ರಸ್ಥುತ ಪತ್ರಿಕೋದ್ಯಮದಲ್ಲಿ ನೈತಿಕ ಮೌಲ್ಯಗಳು ಮರೆಯಾಗುತ್ತಿದ್ದು ಸುದ್ದಿ ಹಾಗೂ ಸುಳ್ಳು ಸುದ್ದಿಯ ನಡುವಿದ್ದ ತೆಳುವಾದ ಪರದೆ ಮರೆಯಾಗುತ್ತಿದೆ. ಸುದ್ದಿಯಲ್ಲಿ ನಿಖರತೆ ಮತ್ತು ವಸ್ತುನಿಷ್ಟತೆಗಿಂತ ಹೆಚ್ಚಾಗಿ ಅತಿ ರಂಜನೀಯ ಅಂಶಗಳು ಆದ್ಯತೆ ಪಡೆಯುತ್ತಿವೆ. ಮಾಧ್ಯಮಗಳಲ್ಲಿ ಪೇಡ್ ನ್ಯೂಸ್ (ಕಾಸಿಗಾಗಿ ಸುದ್ದಿ) ಗಳ ಅಬ್ಬರದ ನಡುವೆ ಪತ್ರಿಕೋದ್ಯಮದ ನಿಜ ಮೌಲ್ಯಗಳು ಕುಸಿಯುತ್ತಿವೆ. ಜಾಹೀರಾತು ಮತ್ತು ಸುದ್ದಿಯ ನಡುವೆ ವ್ಯತ್ಯಾಸವಿಲ್ಲದ ರೀತಿಯಲ್ಲಿ ಜಾಹೀರಾತುಗಳನ್ನು ಪ್ರಕಟಿಸುವುದು ಮುದ್ರಣ ಮಾಧ್ಯಮದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.
ಮಾಧ್ಯಮ ಸ್ವಾತಂತ್ರ್ಯದ ರಕ್ಷಣೆ ಆಗಲೇಬೇಕು. ಆದರೆ ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಮಾಧ್ಯಮ ಕ್ಷೇತ್ರ ಬಂಡವಾಳ ಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕುತ್ತಿದ್ದು ನಿಷ್ಪಕ್ಷಪಾತವಾದ ವರದಿ ಮತ್ತು ಸುದ್ದಿ ಪ್ರಸಾರ ಸಾಧ್ಯವಿಲ್ಲದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಮಾಧ್ಯಮಗಳು ಮನರಂಜನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿವೆ. ಈ ಎಲ್ಲಾ ಗೊಂದಲಗಳು ಮತ್ತು ಚರ್ಚೆಗಳ ಮಧ್ಯೆ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವುದು ಮಾಧ್ಯಮಗಳಿಗೆ ಸವಾಲಾಗಿ ಪರಿಣಮಿಸಿದೆ.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಾಮಾಜಿಕ ಜವಾಬ್ದಾರಿ ಕ್ಷೀಣಿಸುತ್ತಿದ್ದು, ಜಾಹೀರಾತು ಮತ್ತು ಜಾಹೀರಾತು ನೀಡುವ ಸಂಸ್ಥೆಗಳ ಪ್ರಭಾವ ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಅಥವಾ ಜಾಲತಾಣಗಳಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ನೈಜ ಜಗತ್ತಿನ ಮೇಲೆ ಬೀರುವ ಪ್ರಭಾವವನ್ನು ಕಂಡು ಹಿಂಜರಿದಿರುವ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಕಾನೂನು ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಪ್ರಕಾಶನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಇತ್ತೀಚೆಗೆ ತಾನೇ ಪೇಸ್ ಬುಕ್ ತನ್ನ ಬಳಕೆದಾರರಿಗೆ ಒದಗಿಸುವ ಸುದ್ದಿ ಮಾಹಿತಿಯಲ್ಲಿ ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟ ಜಾಹೀರಾತುಗಳ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಘೋಷಿಸಿದೆ. ಹಾಗೆಯೇ ಟ್ವೀಟರ್ ಕೂಡ ತನ್ನ ತಾಣದಲ್ಲಿ ದ್ವೇಷಾಭಿವ್ಯಕ್ತಿಗಳ ಮೇಲೆ ನಿಕಟವಾದ ನಿಗಾ ಇಡುವ ಪ್ರಯತ್ನಗಳಿಗೆ ಮುಂದಾಗಿದೆ.
ಸುದ್ದಿ ಮಾಧ್ಯಮ ಸಂಸ್ಥೆಗಳು ಇಂದು ಪತ್ರಿನಿತ್ಯ ಅಣಬೆಗಳಂತೆ ಹುಟ್ಟಿಕೊಳ್ಳುತ್ತಿವೆ. ಎಲ್ಲೋ ಒಂದು ಕಡೆ ಸುದ್ದಿ ಮಾಧ್ಯಮ ಸಂಸ್ಥೆಗಳು ಪತ್ರಿಕೋದ್ಯಮದ ಮೌಲ್ಯಗಳು ಮತ್ತು ಸಿದ್ದಾಂತಗಳನ್ನು ಗಾಳಿಗೆ ತೂರುತ್ತಿರುವಂತೆ ಭಾಸವಾಗುತ್ತಿದೆ. ವಿದ್ಯುನ್ಮಾನ ಮಾದ್ಯಮದಿಂದ ಜನರಲ್ಲಿ ಆಸಕ್ತಿ ಹಾಗೂ ಕುತೂಹಲ ಹೆಚ್ಚುತ್ತಿದ್ದು ಕ್ರೀಡೆ, ಲೈಫ್ ಸ್ಟೈಲ್, ಕಾರ್ಟೂನ್, ಸಿನಿಮಾ ಹೀಗೆ ಎಲ್ಲಾ ಕ್ಷೇತ್ತಗಳಲ್ಲಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಾನಲ್ ಗಳು ಆರಂಭವಾಗುತ್ತಿವೆ.
ಆರಂಭದಲ್ಲಿ ಅಂತರ್ಜಾಲ ಬಳಕೆ ಬುದ್ದಿವಂತಿಕೆಯ ಸಂಕೇತ ಹಾಗೂ ಅಚ್ವರಿಯ ವಿಷಯವಾಗಿತ್ತು. ಆದರೆ ಈಗ ಎಲ್ಲರ ಕಿಸೆಯಲ್ಲೂ ಅಂತರ್ಜಾಲವಿದೆ. ಇಂದು ಮಾಧ್ಯಮ ಕ್ಷೇತ್ರದ ಆಳ ಮತ್ತು ಅಗಲ ಆಕಾಶದಷ್ಟು ವಿಶಾಲವಾಗಿ ಬೆಳೆದಿದೆ. ವಿದ್ಯುನ್ಮಾನ ಹಾಗೂ ಪತ್ರಿಕೆಗಳಲ್ಲದೆ ಅಂತರ್ ಜಾಲ ಮಾಧ್ಯಮ ತನ್ನ ವ್ಯಾಪ್ತಿಯನ್ನು ಬಹಳಷ್ಟು ವಿಸ್ತರಿಸಿಕೊಂಡಿದೆ. ಅಂತರ್ ಜಾಲದದಲ್ಲಾದ ಕ್ರಾಂತಿ ಮತ್ತು ಡಾಟಾ ಲಭ್ಯತೆಯಲ್ಲಿ ಪೈಪೋಟಿ ನಡೆದುದರ ಫಲವಾಗಿ ಇಂದು ಸಾಮಾಜಿಕ ಮಾಧ್ಯಮಗಳ ಬಾಹುಗಳು ಬಹಳಷ್ಟು ವಿಸ್ತರಿಸಿಕೊಂಡಿವೆ. ಮಾಧ್ಯಮಗಳಲ್ಲಿ ಸಾಕಷ್ಟು ಅವಕಾಶಗಳ ಲಭತ್ಯೆ ಉಂಟಾಗುತ್ತಿದೆ. ನಮ್ಮ ಜೀವನದ ಅವಿಭಾಜ್ಯ ಭಾಗವಾಗಿರುವ ಮೊಬೈಲ್ ಪೋನ್ ಮಾಹಿತಿಯ ಆಗರವಾಗಿದೆ.
ಡಿಜಿಟಲ್ ಮಾಧ್ಯಮ ಕ್ಷೇತ್ರವು ಭಾರತದಲ್ಲಿ ಸಾರ್ವಜನಿಕ ರಂಗವನ್ನು ಮೂಲಭೂತವಾಗಿಯೇ ಬದಲಾಯಿಸಿಬಿಟ್ಟಿದೆ. ಪ್ರಸ್ಥುತ ಮುದ್ರಣ ಮತ್ತು ಟೆಲಿವಿಷನ್ ನಂತಹ ಹಳೆಯ ಮಾಧ್ಯಮಗಳು ಅಥವಾ ಸಾಂಪ್ರದಾಯಿಕ ಮಾಧ್ಯಮಗಳು ಮತ್ತು ಹೊಸ ಸಾಮಾಜಿಕ ಮಾಧ್ಯಮಗಳು ಪರಸ್ಪರ ಅವಲಂಬಿತವಾಗಿವೆ. ಸುದ್ದಿ ಸಂಗ್ರಹಣೆಯ ಪ್ರಕ್ರಿಯೆಯೇ ಇಂದು ರಚನಾತ್ಮಕ ಬದಲಾವಣೆಗೆ ಒಳಗಾಗಿದೆ. ಆದರೆ ಇಂತಹ ಬದಲಾವಣೆಗಳು ಎಷ್ಟರ ಮಟ್ಟಿಗೆ ಸಾರ್ವಜನಿಕ ಜನ ಜೀವನದ ಮೇಲೆ ಪ್ರಭಾವ ಬೀರಬಲ್ಲವು? ಭಾರತದಲ್ಲಿ ಅಸ್ಥಿತ್ವದಲ್ಲಿರುವ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಸಮಾನತೆಗಳು ಡಿಜಿಟಲ್ ಕ್ಷೇತ್ರವನ್ನು ಎಟುಕಿಸಿಕೊಳ್ಳುವ ಮತ್ತು ಅದರಲ್ಲಿ ತೊಡಗಿಕೊಳ್ಳವಿಕೆಯಲ್ಲಿ ತೀವೃತರವಾದ ಮಿತಿಯನ್ನು ಹೇರುವುದನ್ನು ಗಮನಿಸಿದಾಗ ಡಿಜಿಟಲ್ ಕ್ಷೇತ್ರದೊಳಗೆ ನಡೆಯುವ ವಾಗ್ವಾದಗಳು ಎಷ್ಟರ ಮಟ್ಟಿಗೆ ವಾಸ್ತವಿಕ ರಾಜಕೀಯ ಸತ್ಯಗಳನ್ನು ಪ್ರತಿನಿಧಿಸಬಲ್ಲವು? ಮುಖ್ಯವಾಗಿ ಈ ಡಿಜಿಟಲ್ ಸಾಮಾಜಿಕತೆಯೆಂಬುದು ನಮ್ಮ ನೈಜ ವಾಸ್ತವಿಕತೆಯ ಒಂದು ವಿಸ್ತರಣೆಯೇ ಆಗಿದ್ದು ಅದನ್ನು ದುರ್ಬಲಗೊಳಿಸುವುದು ಎಂದರೇನು? ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ.
ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಪಟ್ಟಂತೆ ಒಂದು ಸಮಾನ ಅವಕಾಶವನ್ನು ಒದಗಿಸುವ ವೇದಿಕೆಯ ಸೃಷ್ಟಿ ಎಂಬುದಕ್ಕೆ ಅರ್ಥವೇನು? ಸಾಮಾನ್ಯವಾಗಿ ಅಂತರ್ ಜಾಲವು ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸುತ್ತದೆ, ಎಂದು ನಾವು ಇಷ್ಟು ದಿನ ನಂಬಿಕೊಂಡು ಬಂದಿದ್ದೇವಿ. ಆದರೆ ಅಂತರ್ ಜಾಲದಲ್ಲೂ ಕೂಡ ಕೆಲವು ಧ್ವನಿಗಳು ಮಾತ್ರ ಗಟ್ಟಿಯಾಗಿ ಕೇಳಿಬರುತ್ತಿವೆ, ಏಕೆ? ಮತ್ತು ಕೆಲವು ಧ್ವನಿಗಳು ಇದ್ದರೂ ಕೇಳದಂತಾಗಿವೆ, ಇದಕ್ಕೆ ಕಾರಣ ಏನು? ಇಂತಹ ಹತ್ತಾರು ಪ್ರಶ್ನೆಗಳಿಗೆ ನಮಗೆ ಎದುರಾಗುತ್ತವೆ. ಈ ಹಂತದಲ್ಲಿ ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ‘ಈ ಡಿಜಿಟಲ್ ಪ್ರಜಾತಂತ್ರ ಎಂಬುದು ಒಂದು ಮಿಥ್ಯೆ ಎಂಬುದನ್ನು ಹಾಗೂ ಅದು ತನ್ನ ತಾಂತ್ರಿಕ ವಾಸ್ತುಶಿಲ್ಪದ ಕಾರಣಗಳಿಂದಾಗಿ ಸಾಂಪ್ರದಾಯಿಕ ಸ್ಥಿತಿವಂತಿಕೆಯು ಕೊಡಮಾಡಿರುವ ಸೌಲಭ್ಯಗಳ ಅಸಮಾನತೆಯನ್ನು ಮೀರುವ ಅವಕಾಶಗಳನ್ನೇನೂ ಒದಗಿಸಿಲ್ಲ, ಎಂಬುದನ್ನು ಹಾಗೂ ಅವು ಸಹ ಈಗ ಅಸ್ಥಿತ್ವದಲ್ಲಿರುವ ದಮನಕಾರಿ ರಚನೆಗಳನ್ನು ಹಾಗೆಯೇ ಉಳಿಸಿಕೊಂಡು ಪುನರುತ್ಪಾದನೆ ಮಾಡುತ್ತವೆ, ಎಂಬುದನ್ನು ಮಾಧ್ಯಮಗಳ ಕುರಿತು ನಡೆದಿರುವ ಅನೇಕ ಅಧ್ಯಯನಗಳು ಸಾಬೀತು ಮಾಡಿವೆ.
ಅಪಾರ ಬಂಡಾವಳವನ್ನು ಹೊಂದಿರುವ ಖಾಸಗಿ ಸಂಸ್ಥೆಯೊಂದು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹೆಚ್ಚಿನ ಅವಕಾಶವನ್ನು ಪಡೆದುಕೊಳ್ಳಲು ಬೇಕಾದ ಹಣವನ್ನು ಪಾವತಿ ಮಾಡುತ್ತಿದೆಯೆಂದರೆ ಅದು ತನ್ನ ಧ್ವನಿ ಇತರರಿಗಿಂತ ಹೆಚ್ಚು ಗಟ್ಟಿಯಾಗಿ ಕೇಳಿಸುವ ಅವಕಾಶಗಳನ್ನು ಕೊಂಡುಕೊಳ್ಳುತ್ತಿದೇ ಎಂದೇ ಅರ್ಥ. ದೊಡ್ಡ ಉಧ್ಯಮಗಳೂ ಕೂಡ ಇಂದು ಸಾಮಾಜಿಕ ಜಾಲತಾಣಗಳಲ್ಲಿವೆ. ಅದೇ ರೀತಿ ಜನ ಸಾಮಾನ್ಯರೂ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಇಂದು ಸಕ್ರೀಯರಾಗಿದ್ದಾರೆ. ಇವು ನೇರವಾಗಿ ಜನ ಸಾಮಾನ್ಯರಿಗೆ ಹೆಚ್ಚಾಗಿ ತಲುಪುತ್ತಿರುವುದೂ ಕೂಡ ಒಂದು ವಿಶೇಷವಾಗಿದೆ. ಏನೇ ಗೊಂದಲಗಳು, ಚರ್ಚೆಗಳು, ಋಣಾತ್ಮಕ ವಿಷಯಗಳು ಇದ್ದಾಗ್ಯೂ ಕೂಡ ಸಾಮಾಜಿಕ ಮಾಧ್ಯಮಗಳು ಮೇಲೂ ಅಥವಾ ಕೀಳು ಎಂಬ ಮನೋಭಾವನೆಯನ್ನು ಹುಟ್ಟುಹಾಕದೆ ಎಲ್ಲರನ್ನೂ ಸಮಾನವಾಗಿ ಸ್ವೀಕರಿಸುತ್ತವೆ ಎಂಬ ಅಭಿಪ್ರಾಯ ಕೂಡ ಮಾಧ್ಯಮ ಕ್ಷೇತ್ರದಲ್ಲಿದೆ. ಮುಖ್ಯವಾದ ಅಂಶವೆಂದರೆ ಮಾಧ್ಯಮಗಳಲ್ಲಿ ತಕ್ಷಣಕ್ಕೆ ಪ್ರತಿಕ್ರಿಯೆ ಅಸಾಧ್ಯ ಆದರೆ ಸಾಮಾಜಿಕ ಮಾಧ್ಯಮಗಳು ಸುಲಭವಾದ ಪ್ರತಿಕ್ರಿಯಾ ಮಾರ್ಗವನ್ನು ಕಲ್ಪಿಸಿಕೊಡುವ ಮೂಲಕ ಜನರಿಗೆ ಹತ್ತಿರವಾಗಿವೆ. ಸಾಮಾಜಿಕ ಜಾಲತಾಣಗಳು ದೇಶ-ವಿದೇಶಗಳಲ್ಲಿರುವ ಎಲ್ಲರೊಂದಿಗೂ ಸಂವಹನವನ್ನು ಸುಲಭ ಮತ್ತು ಸಾಧ್ಯವಾಗಿಸಿವೆ.
ಜನ ಸಾಮಾನ್ಯರಲ್ಲಿ ಸ್ಮಾರ್ಟ್ ಫೋನ್ ಬಳಕೆಯ ಶಕ್ತಿ ಮತ್ತು ಲಭ್ಯತೆ ಹಚ್ಚಾದಂತೆ ಸುದ್ದಿ ತಿಳಿಯಲು, ಮಾಹಿತಿ ಪಡೆಯಲು, ತಮ್ಮ ಮೊಬೈಲ್ ನ್ನು ಸಂವಹನ ಮಾಧ್ಯಮವನ್ನಾಗಿ ಬಳಕೆ ಮಾಡುತ್ತಿದ್ದಾರೆ. ಹರಟೆ, ಭರಪೂರ ಮನರಂಜನೆಯೂ ಇಲ್ಲಿ ಸಾಕಷ್ಟು ವೈವಿಧ್ಯಮಯ ರೂಪದಲ್ಲಿ ಇಲ್ಲಿ ಸಿಗುತ್ತದೆ. ಸಂಗೀತ, ಚಲನಚಿತ್ರ, ವೈರಲ್ ವಿಡಿಯೋಗಳು, ಸಾಹಸ, ವಿಜ್ಞಾನ-ತಂತ್ರಜ್ಞಾನದ ವಿಡಿಯೋಗಳು ದೊರೆಯುತ್ತಿರುವುದರಿಂದ ಯುವಜನರನ್ನು ಸಾಮಾಜಿಕ ಮಾಧ್ಯಮಗಳು ಸೂಜಿಗಲ್ಲಿನಂತೆ ತಮ್ಮೆಡೆಗೆ ಸೆಳೆಯುತ್ತವೆ.
ಬಹುತೇಕ ಯುವಕರ, ಯುವತಿಯರ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಸಾಮಾಜಿಕ ಜಾಲತಾಣಗಳು ಮಾಹಿತಿ, ಅಭಿಪ್ರಾಯಗಳನ್ನು ಹಂಚಿಕೊಳ್ಳುವ ವೇದಿಕೆಗಳಾಗಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದರೂ ಕೂಡ ಸುಳ್ಳು ಸುದ್ದಿಗಳು, ವಿಶ್ವಾಸಾರ್ಹತೆಯ ಕೊರತೆ, ನಿಖರತೆಯಿಂದ ವಂಚನೆ, ಬೆದರಿಕೆಗಳು, ನಿಂದನೆ, ಸಮಾಜಕ್ಕೆ ಮಾರಕವಾಗುವ ವಿಷಯಗಳ ಕುರಿತು ನಡೆಯುವ ಚರ್ಚೆಗಳು, ಬರುವ ಸಂದೇಶಗಳ ವಾಸ್ತವಿಕತೆಯನ್ನು ತಿಳಿಯದೆ ಫಾರ್ವರ್ಡ್ ಮಾಡುವುದು, ವೈಯಕ್ತಿಕ ಮಾನಹಾನಿಗಳಿಗೂ ಇವು ದಾರಿಯಾಗಿವೆ. ಮಾನಸಿಕವಾಗಿಯೂ ಹಲವಾರು ತೊಂದರೆಗಳಿಗೆ ನಮ್ಮ ಯುವಜನಾಂಗವನ್ನು ದೂಡಿವೆ. ಯುವಕರು ಊಟ, ನಿದ್ದೆಗಳನ್ನು ಬಿಟ್ಟರೂ ಸಾಮಾಜಿಕ ಜಾಲತಾಣಗಳಿಂದ ದೂರು ಉಳಿಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.
ಡಿಜಿಟಲ್ ಕ್ಷೇತ್ರದ ಮಾಧ್ಯಮಗಳು ಸಾಮಾನ್ಯ ಬಳಕೆದಾರರಿಗೆ ಅವರ ಕುಂದುಕೊರತೆಗಳಿಗೆ ಪರಿಹಾರ ಪಡೆಯಲು ಮತ್ತು ಖಾಸಗಿ ಹಕ್ಕುಗಳ ಉಲ್ಲಂಘನೆಯ ಸಂದರ್ಭದಲ್ಲಿ ಹೊಣೆಗಾರಿಕೆಯನ್ನು ಗೊತ್ತು ಮಾಡಲು ಅಧಿಕಾರ ನೀಡುವ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಇದೀಗ ರೂಪಿಸಿದೆ. ಸಾಮಾಜಿಕ ಮಾಧ್ಯಮ ಕ್ಷೇತ್ರ ಸೇರಿದಂತೆ ಮಧ್ಯವರ್ತಿ ಸೇವೆ ಒದಗಿಸುವವರು ಬಳಕೆದಾರರಿಂದ ದೂರುಗಳನ್ನು ಸ್ವೀಕರಿಸಲು ಮತ್ತು ಪರಿಹರಿಸಲು ಯಾಂತ್ರಿಕ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಈ ಆದೇಶದ ಪ್ರಕಾರ ಜನ ಸಾಮಾನ್ಯರಿಂದ ಇಂತಹ ದೂರುಗಳು ಬಂದಾಗ ದೂರುಗಳನ್ನು ಪ್ರತಿನಿಧಿಸಲು ಕುಂದುಕೊರತೆ ಅಧಿಕಾರಿಯನ್ನು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ನೇಮಿಸುವ ಅಗತ್ಯವಿದೆ ಮತ್ತು 24 ಗಂಟೆಗಳ ಒಳಗಾಗಿ ದೂರನ್ನು ಅಂಗೀಕರಿಸಬೇಕು ಮತ್ತು 15 ದಿನಗಳ ಒಳಗಾಗಿ ಇಂತಹ ದೂರುಗಳನ್ನು ಪರಿಹರಿಸಬೇಕು. ಮೂಲಭೂತವಾಗಿ ಹತ್ತು ವರ್ಗಗಳಿಗೆ ಸೇರಿದ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಬಾರದು ಎಂಬ ನಿಯಮವನ್ನೂ ಕೂಡ ಜಾರಿಗೆ ತರಲಾಗಿದೆ. ಇವುಗಳಲ್ಲಿ ಭಾರತದ ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಬೌಮತ್ವ, ವಿದೇಶಗಳೊಂದಿಗೆ ಸ್ನೇಹ ಸಂಬಂಧದ ವಿಷಯಗಳು, ಸಾರ್ವಜನಿಕ ಸುವ್ಯವಸ್ಥೆ, ಅರಿವಿನ ಅಪರಾಧದ ಪ್ರಚೋದನೆ, ಯಾವುದೇ ಅಪರಾಧದ ತನಿಖೆಯನ್ನು ತಡೆಯುವ, ಅಥವಾ ಯಾವುದೇ ವಿದೇಶಿ ರಾಷ್ಟ್ರಗಳನ್ನು ಅವಮಾನಿಸುವಂತಹ ವಿಷಯಗಳು ಸೇರಿವೆ. ಮಾನಹಾನಿಕರ, ಅಶ್ಲೀಲ, ಪೋರ್ನೋಗ್ರಾಫಿಕ್, ದೈಹಿಕ ಗೌಪ್ಯತೆ ಸೇರಿದಂತೆ ಇನ್ನೊಬ್ಬರ ಗೌಪ್ಯತೆಗೆ ಭಂಗ ತರುವ ಲಿಂಗದ ಆಧಾರದ ಮೇಲೆ ಅವಮಾನಿಸುವ ಅಥವಾ ಕಿರುಕುಳ ನೀಡುವುದು, ಮಾನಹಾನಿಕರ, ಜನಾಂಗೀಯ, ಮನಿಲಾಂಡರಿಂಗ್ ಅಥವಾ ಜೂಜಾಟಕ್ಕೆ ಸಂಬಂಧಿಸಿದ ಅಥವಾ ಪ್ರೋತ್ಸಾಹಿಸುವ, ಭಾರತದ ಕಾನೂನುಗಳಿಗೆ ಅಸಂಗತವಾದ ಅಥವಾ ವಿರುದ್ದವಾದ ವಿಷಯಗಳನ್ನು ಪೋಸ್ಟ್ ಮಾಡಬಾರದು ಎಂದು ಆದೇಶಿಸಿದೆ. ಹಾಗೂ ಪೋಸ್ಟ್ ಮಾಡಿದರೆ ನಿಷೇಧಿತ ವಿಷಯವನ್ನು ನ್ಯಾಯಾಲಯ ಅಥವಾ ಸೂಕ್ತ ಸರ್ಕಾರಿ ಸಂಸ್ಥೆಯಿಂದ ಆದೇಶ ಪಡೆದ 36 ಗಂಟೆಗಳ ಒಳಗೆ ಪೋಸ್ಟ್ ಮಾಡಿದ ವಿಷಯವನ್ನು ತೆಗೆದುಹಾಕಬೇಕಾಗುತ್ತದೆ.
ಈಗ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಭಾರತದಲ್ಲೇ ಕಾರ್ಯನಿರ್ವಹಿಸುವ ಅನುಸರಣಾ ಅಧಿಕಾರಿಯೊಬ್ಬರನ್ನು ನೇಮಿಸಬೇಕಾಗಿದೆ. ಅವರು ಮೇಲ್ಕಂಡ ನಿಯಮಗಳು ಅನುಸರಣೆಯಾಗುತ್ತಿವೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಜೊತೆಗೆ ಸಾಮಾಜಿಕ ಮಾಧ್ಯಮಗಳು ಸ್ವೀಕರಿಸಿದ ದೂರುಗಳ ವಿವರಗಳು, ಕೈಗೊಂಡ ಕ್ರಮಗಳ ಮಾಸಿಕ ವರದಿಯೊಂದನ್ನು ಪ್ರಕಟಿಸಬೇಕಾಗಿದೆ. ಹಾಗೂ ಮಹತ್ವದ ಮತ್ತು ನಿಷೇಧಿತ ವಿಷಯಗಳನ್ನು ತೆಗೆದುಹಾಕಲಾದ ವಿವರಗಳನ್ನೂ ಸಹ ಪ್ರಕಟಿಸಬೇಕಾಗಿದೆ. ಒಂದು ವೇಳೆ ಈ ನಿಯಮಗಳನ್ನು ಪಾಲಿಸಲು ವಿಫಲವಾದರೆ ಐಟಿ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳು ಒಳಗೊಂಡಂತೆ ಯಾವುದೇ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿ ಮಾಡಬಹುದಾಗಿದೆ. ನಿಯಮಗಳು ಈಗಾಗಲೇ ಜಾರಿಗೆ ಬಂದಿದ್ದರೂ ಇವುಗಳು ಪರಿಣಾಮಕಾರಿಯಾಗಿ ಮೂರು ತಿಂಗಳ ನಂತರ ಜಾರಿಗೆ ಬರಲಿವೆ. ಭಾರತದಂತಹ ವೈವಿದ್ಯತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಇಂತಹ ನಿಯಮಗಳು ಅಗತ್ಯವಾಗಿವೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಮನಸ್ಸಿಗೆ ಬಂದಂತೆ ವರ್ತಿಸುವುದಕ್ಕೋ ಮಾತಾಡುವುದಕ್ಕೋ ಸಾಧ್ಯವಿಲ್ಲ. ಹಾಗೆ ಮಾಡುವುದು ತಪ್ಪು. ನಾಗರಿಕ ಸಮಾಜದ ನಿಯಮಾವಳಿಗಳನ್ನೊಪ್ಪಿ ಬದುಕಬೇಕಾದುದು ನಾಗರಿಕರೆನಿಸಿಕೊಂಡಿರುವ ನಮ್ಮೆಲ್ಲರ ಕರ್ತವ್ಯವೂ ಕೂಡ ಆಗಿದೆ. ಹಕ್ಕುಗಳ ಕುರಿತು ಮಾತನಾಡುವವರಿಗೆ ಕರ್ತವ್ಯಗಳ ಅರಿವು ಕೂಡ ಇರಬೇಕಾಗುತ್ತದೆ. ನಮ್ಮ ಅಭಿಪ್ರಾಯವನ್ನು, ಅನಿಸಿಕೆಗಳನ್ನು ವ್ಯಕ್ತಪಡಿಸಲೋಸ್ಕರ ಉಪಯೋಗವಾಗಬೇಕಾಗಿದ್ದ ಸಾಮಾಜಿಕ ಮಾಧ್ಯಮಗಳು ಇಂದು ತನ್ನನ್ನು ತಾನು ಬಿಂಬಿಸಿಕೊಳ್ಳಲು, ಪ್ರಸಿದ್ದಿಗೊಳಿಸಲು, ತಾನೇ ತಾನಾಗಿ ಮೆರೆಯಲು ಬಳಕೆಯಾಗುತ್ತಿವೆ.
ಸೂಕ್ತ ಮತ್ತು ಸಮಯೋಚಿತವಾಗಿ ಬಳಸಿಕೊಂಡರೆ ಸಾಮಾಜಿಕ ಮಾಧ್ಯಮಗಳು ಜ್ಞಾನಸಾಗರ. ಬೆಂಕಿ ಮತ್ತು ಪರಮಾಣುವಿನ ಉಪಯೋಗವನ್ನು ತಿಳಿದ ಮನುಷ್ಯ ಅದನ್ನು ವಿನಾಶದ ಕಾರ್ಯಗಳಿಗೂ ಬಳಸುತ್ತಿದ್ದಾನೆ. ಈಗ ಅಂತರ್ ಜಾಲದ ಪರಿಸ್ಥಿತಿಯೂ ಅದೇ ಆಗಿದೆ. ಜ್ಞಾನವಿಕಾಸ ಹಾಗೂ ಸುಲಭ ಸಂವಹನದ ಮಾರ್ಗವನ್ನು ಅಸಂಬದ್ದತೆ, ಅನೈತಿಕತೆ ಹಾಗೂ ಅಸಹ್ಯ ಕಾರ್ಯಗಳಿಗೆ ಹೆಚ್ಚಾಗಿ ಬಳಸುತ್ತಿರುವುದು ದೊಡ್ಡ ದುರಂತವೇ ಸರಿ.

-ಡಾ.ಅಮ್ಮಸಂದ್ರ ಸುರೇಶ್
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346

The post ಮಾಧ್ಯಮ ಲೋಕ-೦೬ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) ಶೀರ್ಷಿಕೆ: ಸಾಮಾಜಿಕ ಮಾಧ್ಯಮಗಳಿಗೆ ಬಿತ್ತು ಕಡಿವಾಣ appeared first on Karnataka Kahale.

]]>
ಮಾಧ್ಯಮ ಲೋಕ-೦೫ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) https://www.karnatakakahale.com/news/3400 Mon, 01 Mar 2021 10:29:12 +0000 https://www.karnatakakahale.com/?p=3400 ಎಂದಿಂದಿಗೂ ಸಂವಹನ ಸಂಗಾತಿ ಭಾರತೀಯ ಅಂಚೆ” -ಡಾ. ಅಮ್ಮಸಂದ್ರ ಸುರೇಶ್‌ ಅಂಚೆ ಇಲಾಖೆ ಸಂವಹನದ ಜೊತೆಗೆ 150ಕ್ಕೂ ಹೆಚ್ಚು ವರ್ಷಗಳಿಂದ ಜನಸಾಮಾನ್ಯರು ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರ ಸಾಮಾಜಿಕ ಮತ್ತು ಆರ್ಥಿಕ ಒಳಗೊಳ್ಳುವಿಕೆಯಲ್ಲಿ ಪ್ರಮುಖ ಸ್ಥಾನ ವಹಿಸಿದೆ.1854ರಿಂದಲೂ ಭಾರತೀಯರ ಅಚ್ಚು…

The post ಮಾಧ್ಯಮ ಲೋಕ-೦೫ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) appeared first on Karnataka Kahale.

]]>
  • ಎಂದಿಂದಿಗೂ ಸಂವಹನ ಸಂಗಾತಿ ಭಾರತೀಯ ಅಂಚೆ”
    -ಡಾ. ಅಮ್ಮಸಂದ್ರ ಸುರೇಶ್‌
  • ಅಂಚೆ ಇಲಾಖೆ ಸಂವಹನದ ಜೊತೆಗೆ 150ಕ್ಕೂ ಹೆಚ್ಚು ವರ್ಷಗಳಿಂದ ಜನಸಾಮಾನ್ಯರು ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರ ಸಾಮಾಜಿಕ ಮತ್ತು ಆರ್ಥಿಕ ಒಳಗೊಳ್ಳುವಿಕೆಯಲ್ಲಿ ಪ್ರಮುಖ ಸ್ಥಾನ ವಹಿಸಿದೆ.1854ರಿಂದಲೂ ಭಾರತೀಯರ ಅಚ್ಚು ಮೆಚ್ಚಿನ ಮತ್ತು ನಂಬಿಕಸ್ತ ಸಂವಹನ ಮಾಧ್ಯಮವಾಗಿ ಉಳಿದುಕೊಂಡು ಬಂದಿದೆ. ಅಂಚೆಯನ್ನು ಆರಂಭಿಸಿದ್ದು ಸೇವಾ ಕ್ಷೇತ್ರದ ರೂಪದಲ್ಲಿ ಹಾಗೂ ಪ್ರಾಥಮಿಕವಾಗಿ ದೂರ ದೂರದ ಜನರ ನಡುವೆ ಸಂವಹನವನ್ನು ಸುಲಭವಾಗಿಸುವ ಉದ್ದೇಶದಿಂದ ಇಂದಿಗೂ ಕನ್ಯಾಕುಮಾರಿಯಂದ ಕಾಶ್ಮೀರದವರೆಗೂ ಅಂಚೆಇಲಾಖೆ ಕಾಲಿಡದ ಪ್ರದೇಶವಿಲ್ಲ.
  • ದೇಶದಾದ್ಯಂತ ಒಟ್ಟು1,55,531 ಅಂಚೆ ಕಛೇರಿಗಳನ್ನು ಒಳಗೊಂಡಿರುವ ಭಾರತೀಯ ಅಂಚೆ ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು 1,39,067 ಶಾಖೆಗಳನ್ನು ಹೊಂದುವ ಮೂಲಕ ವಿಶ್ವದಲ್ಲೆ ಅತಿ ದೊಡ್ಡದಾದ ಸಂಪರ್ಕಜಾಲವನ್ನು ಹೊಂದಿರುವ ಅಂಚೆ ಜಾಲ ಎಂಬ ಕೀರ್ತಿಗೆ ಒಳಗಾಗಿದೆ.

    ಪೋಸ್ಟ್‌ ಕಾರ್ಡ್‌ ಮತ್ತು ಇನ್‌ಲ್ಯಾಂಡ್ ಲೆಟರ್‌ಗಳು ಬಡವರ ಏಕಮೇವ ಸಂವಹನ ಮಾಧ್ಯಮವಾಗಿ 80ರ ದಶಕದವರೆಗೂ ಉಳಿದುಕೊಂಡು ಬಂದಿದ್ದವು. ದೂರವಾಣಿ ಕ್ಷೇತ್ರಕ್ಕೆ ಆಗಮಿಸಿದ ಉನ್ನತ ತಂತ್ರಜ್ಞಾನ ಮುಖ್ಯವಾಗಿ ಮೊಬ್ಯೆಲ್‌ ಪೋನ್‌ಗಳ ಆಗಮನ ಪೋಸ್ಟ್‌ ಕಾರ್ಡ್‌ ಮತ್ತುಇನ್‌ಲ್ಯಾಂಡ್ ಲೆಟರ್‌ಗಳಿಂದ ಬಹಳ ಮಟ್ಟಿಗೆ ಜನ ಸಾಮಾನ್ಯರನ್ನು ವಿಮುಖರನ್ನಾಗಿಸುವಂತೆ ಮಾಡಿತು. ಇಂದಿಗೂ ಭಾರತೀಯ ಅಂಚೆ ಸಂವಹನವನ್ನೆ ತನ್ನ ಪ್ರಾಥಮಿಕ ಆಧ್ಯತೆಯ ಕ್ಷೇತ್ರವನ್ನಾಗಿ ಉಳಿಸಿಕೊಂಡು ಬಂದಿದೆ.
    ಹೇಗೆ ಟಿ.ವಿ. ಮಾಧ್ಯಮಬಂದಾಗದೃಶ್ಯಮಾಧ್ಯಮದಮುಂದೆಪತ್ರಿಕೆಗಳು ಮುಚ್ಚಿ ಹೋಗುತ್ತವೆ ಎಂಬ ಆತಂಕ ಇತ್ತೋ ಅದೇ ಅತಂಕ ಕೊರಿಯರ್‌ ಹಾಗೂ ಮೊಬ್ಯೆಲ್‌ ಪೋನ್‌ಗಳ ಆಗಮನವಾದಾಗ ಭಾರತೀಯ ಅಂಚೆ ವಿಷಯದಲ್ಲೂ ಸಹಜವಾಗಿಯೇ ಉಂಟಾಗಿತ್ತು.
    ಆದರೆ ನೂತನ ತಂತ್ರಜ್ಞಾನ ಹಾಗೂ ಹೊಸ ಮತ್ತು ವ್ಯೆವಿದ್ಯಮಯ ವ್ಯವಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಂಚೆ ಇಲಾಖೆ ತನ್ನ ಅಸ್ತಿತ್ವವನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದೆ. ಇಂದು ಅಂಚೆ ಕಾರ್ಡಿನಿಂದಿಡಿದು ಇ-ಕಾಮರ್ಸ್ ತನಕ, ಸಣ್ಣ ಉಳಿತಾಯದಿಂದ ಇಂಟರ್‌ನೆಟ್ ಬ್ಯಾಂಕಿಂಗ್ (ಏಟಿಎಂ ಒಳಗೊಂಡಂತೆ)ವರೆಗೆ ಹೆಮ್ಮರವಾಗಿ ಬೆಳೆದುನಿಂತಿದೆ. ಭಾರತೀಯರು ಇಟ್ಟಿರುವ ʼನಂಬಿಕೆʼಯೆ ಇಲಾಖೆ ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಲು ಕಾರಣವಾಗಿದೆ.
    ಅತ್ಯಮೂಲ್ಯ, ಪ್ರಾಮಾಣಿಕ ಹಾಗೂ ಅತ್ಯುತ್ತಮ ಬುದ್ಧಿಮತ್ತೆಯ ಮಾನವ ಸಂಪನ್ಮೂಲವನ್ನು ಹೊಂದಿರುವ ಇಲಾಖೆ ತನ್ನಲ್ಲಿರುವ ಮಾನವಸಂಪನ್ಮೂಲವನ್ನು ಅಭಿವೃದ್ದಿಪಡಿಸಲು ಮತ್ತು ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಿದ್ದರನ್ನಾಗಿ ಮಾಡಲು ಗಾಜಿಯಾಬಾದ್‌ನ “ರಫೀಕ್‌ ಕಿದ್ವಾಯಿ ನ್ಯಾಷಿನಲ್‌ ಅಕಾಡೆಮಿ”, ಮೈಸೂರು, ದರ್ಭಾಂಗ್‌, ವಡೋದರ, ಮದುರೈ ಸೇರಿದಂತೆ ದೇಶದ ವಿವಿದೆಡೆ ತನ್ನದೇ ಪ್ರಾಧೇಶಿಕ ತರಬೇತಿ ಕೇಂದ್ರಗಳನ್ನು ಹೊಂದಿದ್ದು ಈ ಕೇಂದ್ರಗಳು ಅತ್ಯುತ್ಕೃಷ್ಟ ತರಬೇತಿ ಕೇಂದ್ರಗಳಾಗಿ ಇಂದು ಹೊರ ಹೊಮ್ಮಿವೆ.
    ಉನ್ನತ ತಂತ್ರಜ್ಞಾನ ಮತ್ತು ಅಂಚೆ ಕಛೇರಿಗಳನ್ನು ಗ್ರಾಹಕ ಸ್ನೇಹಿ ಹಾಗೂ ಕಾರ್ಪೋರೇಟ್‌ ಮಾದರಿಯ ಕೇಂದ್ರಗಳನ್ನಾಗಿ ಮಾಡಲು 2008ರಲ್ಲಿ ʼಪ್ರಾಜೆಕ್ಟ್‌ ಹ್ಯಾರೋ ʼಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು. ಅಂದಿನಿಂದ ಶುರುವಾದ ತಂತ್ರಜ್ಞಾನ ಮತ್ತು ಆಧುನೀಕತೆಯನ್ನು ಅಳವಡಿಸಿಕೊಳ್ಳುವ ಕಾರ್ಯಕ್ರಮಗಳು ಇಂದಿಗೂ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿವೆ. ನೂತನ ತಂತ್ರಜ್ಞಾನವನ್ನು ಅಬಿವೃದ್ದಿಪಡಿಸುವ ಉದ್ದೇಶದಿಂದ ಮೈಸೂರಿನಲ್ಲಿ ಉತ್ಕೃಷ್ಟ ಅಂಚೆ ತಂತ್ರಜ್ಞಾನ ಸಂಸ್ಥೆಯನ್ನು ಆರಂಭಿಸಲಾಗಿದೆ.
    ಅತ್ಯುತ್ತಮ ಸಾರ್ವಜನಿಕ ಆಡಳಿತಕ್ಕಾಗಿ ಅಂಚೆಇಲಾಖೆ 2008-2009ರ ಸಾಲಿನ ಪ್ರಧಾನಮಂತ್ರಿಗಳ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

    ಕೊರೊನಾ ಸಮಯದಲ್ಲಿ ಲಾಜಿಸ್ಟಿಕ್ ಸೇವೆ ಸಲ್ಲಿಸಿದ ಸಂಸ್ಥೆಗಳ ಪೈಕಿ ಅಂಚೆ ಇಲಾಖೆ ಅತ್ಯುತ್ತಮ ಸೇವೆ ನೀಡಿದ್ದಕ್ಕಾಗಿ ಪ್ರಥಮ ಸ್ಥಾನವನ್ನು ಗಳಿಸಿದೆ.

    ಇಂದು ಸಂವಹನ, ಉಳಿತಾಯ ಹಾಗೂ ವ್ಯವಹಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅವರಿಸಿಕೊಂಡಿರುವ ಅಂಚೆ ಇಲಾಖೆ ಪತ್ರ ವ್ಯವಹಾರ, ಸ್ಪೀಡ್‌ ಪೋಸ್ಟ್‌, ಬ್ಯುಸಿನೆಸ್‌ ಪಾರ್ಸಲ್‌, ಇ-ಅಂಚೆ, ಡ್ಯೆರೆಕ್ಟ್‌ ಪೋಸ್ಟ್‌, ಮೀಡಿಯಾ ಪೋಸ್ಟ್‌, ಇ-ಮನಿ ಆರ್ಡರ್‌, ಹಣ ವರ್ಗಾವಣೆ, ವಿಶೇಷ ಉಳಿತಾಯ ಸೇವೆಗಳಾದ ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್‌ ವಿಕಾಸ್‌ ಪತ್ರ ಆವರ್ತಿತ ಠೇವಣಿ ಮತ್ತು ನಿಶ್ವಿತ ಠೇವಣಿಗಳು, ಗೋಲ್ಡ್‌ ಬಾಂಡ್‌, ʼಬೇಟಿ ಬಚಾವೋ ಬೇಟಿ ಪಡಾವೋʼ ಯೋಜನೆಯ ಫಲವಾಗಿ ಹೊರ ಹೊಮ್ಮಿದ ʼಸುಕನ್ಯಾಸಮೃದ್ದಿ, ಜನಸಾಮಾನ್ಯರಿಗೆ ಅತ್ಯಗತ್ಯವಾಗಿಬೇಕಾಗಿರುವ ಆಧಾರ್‌ ಸೇವೆ, ಪಾಸ್‌ಪೋರ್ಟ್‌ ಸೇವೆ, ಇಂಡಿಯಾಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಮೂಲಕ ಮೊಬ್ಯೆಲ್‌ ಬ್ಯಾಂಕಿಂಗ್‌,ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಹೀಗೆ ತರಹೇವಾರಿ ಯೋಜನೆಗಳನ್ನು ಒಳಗೊಂಡಿದೆ.
    ಜನ ಸಾಮಾನ್ಯರು ಕೇವಲಬೆರಳಚ್ಚು ನೀಡುವ ಮೂಲಕ ತಾವಿದ್ದಲ್ಲೆ ಹಣ ಪಡೆಯುವ ವಿಶಿಷ್ಠ ಯೋಜನೆಯನ್ನು ʼಇಂಡಿಯಾಪೋಸ್ಟ್‌ ಪೇಮೆಂಟ್‌ ಬ್ಯಾಂಕ್ʼಮೂಲಕ‌ ಪರಿಚಯಿಸಿದ್ದು ಇದು ಗ್ರಾಮೀಣ ಪ್ರದೇಶದ ಜನರಿಗೆ ಉಪಯುಕ್ತ ಮತ್ತು ಅತ್ಯಂತ ಜನಪ್ರೀಯ ಯೋಜನೆಯಾಗಿದೆ. ದೇಶದಾದ್ಯಂತ ಎಲ್ಲಾ ಅಂಚೆ ಕಛೇರಿಗಳಲ್ಲೂ ಈ ಸೇವೆ ಲಭ್ಯವಿದೆ.

    ಗ್ರಾಹಕರು ನಡೆಸುವ ಪತ್ರ ವ್ಯವಹಾರಗಳಿಗಾಗಿ ಒಂದೇ ಕಡೆ ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡಲು ದೇಶದಾದ್ಯಂತ “ಬ್ಯುಸಿನೆಸ್‌ ಪೋಸ್ಟ್‌ ಸೆಂಟರ್‌”ಗಳನ್ನುಆರಂಭಿಸಲಾಗಿದೆ. ಈ ಕೇಂದ್ರಗಳು ಪತ್ರಗಳನ್ನು ಗ್ರಾಹಕರ ಸ್ಥಳದಂದಲೇ ಸಂಗ್ರಹಿಸುವ ಕಾರ್ಯವನ್ನು ಮಾಡುತ್ತವೆ ಮತ್ತು ಗ್ರಾಹಕರು ಮುದ್ರಣಾಲಯದಿಂದ ನೇರವಾಗಿ ಇಂತಹ ಕೇಂದ್ರಗಳಿಗೆ ತಾವು ಅಂಚೆ ಮೂಲಕ ಕಳುಹಿಸಬೇಕಾದ ಸಾಮುಗ್ರಿಗಳನ್ನು ತಂದರೆ ಇಲ್ಲಿಯೇ ಅವುಗಳನ್ನು ಮಡಚುವ, ವಿಳಾಸವನ್ನು ಅಂಟಿಸುವುದರಿಂದಿಡುದು ಸಂಪೂರ್ಣವಾಗಿ ಎಲ್ಲವನ್ನೂ ಸಿದ್ದಪಡಿಸಿ ಅವುಗಳನ್ನು ಕಳುಹಿಸಿಕೊಡುವ ಕೆಲಸವನ್ನು ಮಾಡುತ್ತವೆ. ಕರ್ನಾಟಕದಲ್ಲಿ ಮಣಿಪಾಲ, ಮಂಗಳೂರು, ಉಡುಪಿ, ಮೈಸೂರು ಹಾಗೂ ಬೆಂಗಳೂರುಗಳಲ್ಲಿ ಇಂತಹ ಕೇಂದ್ರಗಳಿವೆ.
    ಅಂತರ್‌ಜಾಲ ಆಧಾರಿತ ಟ್ರ್ಯಾಕ್‌ ಅಂಡ್‌ ಟ್ರೇಸ್‌ ಸಿಸ್ಟಮ್‌, ವಿವಿದ ಸೇವೆಗಳನ್ನುಒಳಗೊಂಡ ಅಂತರ್‌ಜಾಲ ತಾಣ ಹಾಗೂ ಮೊಬೈಲ್‌ ಆಪ್‌ಗಳನ್ನು ಒಳಗೊಂಡಿರುವ ಇಲಾಖೆ ತನ್ನದೇ ಆದ ಬ್ಯುಸಿನೆಸ್‌ ಡೆವಲೊಪ್ಮೆಂಟ್ ಮತ್ತು ಮಾರ್ಕೆಟಿಂಗ್‌ ವಿಭಾಗವನ್ನು ಹೊಂದಿದೆ. ಸಿ ಎಸ್‌ ಐ, ಧರ್ಪಣ್‌ ಹಾಗೂ ಫಿನಾಕಲ್‌ ಯೋಜನೆಗಳ ಮೂಲಕ ತನ್ನ ಗ್ರಾಹಕರಿಗೆ ಕೋರ್‌ ಬ್ಯಾಂಕಿಂಗ್‌ ಮತ್ತು ಆನ್‌ ಲೈನ್‌ ವ್ಯವಹಾರವನ್ನು ಒದಗಿಸಿದೆ.

    420 ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳು, 13,352 ಆಧಾರ್‌ ನೊಂದಣಿ ಮತ್ತು ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಿರುವ ಭಾರತೀಯ ಅಂಚೆ ಗ್ರಾಮೀಣ ಅಂಚೆ ಕಛೇರಿಗಳನ್ನು ಕೂಡ ಅಂತರ್‌ಜಾಲಸಂಪರ್ಕಕ್ಕೆ ಒಳಪಡಿಸಿದೆ. ನಾಗರೀಕರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
    ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಂಬಳ ವಿಲೆವಾರಿ, ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ ಪಿಂಚಣಿ ವಿತರಣೆ ಮಾಡುವ ಇಲಾಖೆ ಫಲಾನುಭವಿಗಳ ಮನೆ ಬಾಗಿಲಿಗೆ ಯೋಜನೆಯ ಹಣ ವಿತರಿಸುವ ಮೂಲಕ, ಇಲಾಖೆಗಳಿರುವಡೆಗೆ ಜನರು ತೆರಳುತ್ತಿರವ ಈ ಸಮಯದಲ್ಲಿ ಇಲಾಖೆಯೇ ಜನಸಾಮಾನ್ಯರೆಡೆಗೆ ತೆರಳುವ ವಿಶಿಷ್ಠ ಯೋಜನೆಗಳನ್ನು ಹಾಕಿಕೊಂಡಿದೆ. ಇದೀಗ ಯುಪಿಐ ಪೇಮೇಂಟ್ ಕ್ಷೇತ್ರಕ್ಕೂ ಅಂಚೆ ಇಲಾಖೆ ‘ಡಾಕ್ ಪೇ’ ಯುಪಿಐ ಆ್ಯಪ್ ಮೂಲಕ ಇದುವರೆಗೂ ಗೂಗಲ್ ಪೇ, ಪೋನ್ ಪೇ, ಮುಂತಾದ ಖಾಸಗಿ ಸಂಸ್ಥೆಗಳು ಮಾತ್ರ ಹೊಂದಿದ್ದ ಯುಪಿಐ ವ್ಯವಹಾರವನ್ನೂ ಅಳವಡಿಸಿಕೊಳ್ಳುವ ಮೂಲಕ ಜನ ಸಾಮಾನ್ಯರಿಗೆ ಕರಾರುವಕ್ಕಾದ ಸೇವೆ ನೀಡುವ ಮೂಲಕ ಮತ್ತಷ್ಟು ಹತ್ತಿರ ಆಗಿದೆ.

    ಅಂಚೆ ಕಛೇರಿಗಳಲ್ಲಿ ಇದೀಗ ನಿಮ್ಮ ಪತ್ರವ್ಯವಹಾರದಿಂದಿಡಿದು, ಜಾಹೀರಾತು, ಮಾರ್ಕೆಟಿಂಗ್‌, ಎಲ್ಲಾ ರೀತಿಯ ಬ್ಯಾಂಕಿಂಗ್‌ ಸೌಲಭ್ಯಗಳು, ಹಣ ವರ್ಗಾವಣೆ, ಆದಾರ್‌ ನೊಂದಣಿ ಹೀಗೆ ಅನೇಕ ಸೌಲಭ್ಯಗಳು ಒಂದೆಡೆ ದೊರೆಯುತ್ತವೆ. ನೀವು ಒಮ್ಮೆ ನಿಮ್ಮ ಸಮೀಪದ ಅಂಚೆ ಕಛೇರಿಗೆ ಭೇಟಿ ನೀಡುವ ಮೂಲಕ ಅಂಚೆ ಕುಟುಂಬದ ಸದಸ್ಯರಾಗುವ ಮೂಲಕ ಅಂಚೆ ಇಲಾಖೆಯೊಂದಿಗೆ ಕೈ ಜೋಡಿಸಿ.
    ###
    -ಡಾ. ಅಮ್ಮಸಂದ್ರ ಸುರೇಶ್‌
    ಇನ್ ಚಾರ್ಜ್, ಬ್ಯುಸಿನೆಸ್ ಪೋಸ್ಟ್ ಸೆಂಟರ್, ಮೈಸೂರು ಹಾಗೂ
    ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
    ಮೊಬೈಲ್:9448402346

     

    The post ಮಾಧ್ಯಮ ಲೋಕ-೦೫ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) appeared first on Karnataka Kahale.

    ]]>
    ಮಾಧ್ಯಮ ಲೋಕ-೦೪ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) https://www.karnatakakahale.com/news/3296 Mon, 22 Feb 2021 07:49:17 +0000 https://www.karnatakakahale.com/?p=3296 ನಕಲಿ ಟಿ ಆರ್ ಪಿ ಎಂಬ ದಂಧೆ -ಡಾ.ಅಮ್ಮಸಂದ್ರ ಸುರೇಶ್, ಮೈಸೂರು ಟೆಲಿವಿಷನ್ ರೇಟಿಂಗ್ ಪಾಯಿಂಟ್ ವಿಷಯದಲ್ಲಿಅವ್ಯವಹಾರ ನಡೆಸಲಾಗಿದೆ ಹಾಗೂ ಟಿ ಆರ್ ಪಿ ದಂಧೆ ನಡೆಸಿ ಆದಾಯ ಹೆಚ್ಚಿಸಲು ಸುಳ್ಳು ಟಿ ಆರ್ ಪಿ ತೋರಿಸಿದ ಆರೋಪದ ಮೇಲೆ ಮುಂಬೈ…

    The post ಮಾಧ್ಯಮ ಲೋಕ-೦೪ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) appeared first on Karnataka Kahale.

    ]]>
    ನಕಲಿ ಟಿ ಆರ್ ಪಿ ಎಂಬ ದಂಧೆ
    -ಡಾ.ಅಮ್ಮಸಂದ್ರ ಸುರೇಶ್, ಮೈಸೂರು

    ಟೆಲಿವಿಷನ್ ರೇಟಿಂಗ್ ಪಾಯಿಂಟ್ ವಿಷಯದಲ್ಲಿಅವ್ಯವಹಾರ ನಡೆಸಲಾಗಿದೆ ಹಾಗೂ ಟಿ ಆರ್ ಪಿ ದಂಧೆ ನಡೆಸಿ ಆದಾಯ ಹೆಚ್ಚಿಸಲು ಸುಳ್ಳು ಟಿ ಆರ್ ಪಿ ತೋರಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ, ಫಕ್ ಮರಾಠ ಮತ್ತು ಬಾಕ್ಸ್ ಸಿನೆಮಾ ರೇಟಿಂಗ್ ಟಿವಿ ವಾಹಿನಿಗಳ ವಿರುದ್ದ ತನಿಖೆ ನಡೆಸುತ್ತಿದ್ದಾರೆ. ಭಾರತದಲ್ಲಿ ಟಿ ಆರ್ ಪಿ ಈಗ ಒಂದು ಪ್ರಮುಖ ದಂಧೆಯಾಗಿ ಪರಿಣಮಿಸಿದ್ದು ಅನೇಕ ಟಿವಿ ವಾಹಿನಿಗಳು ನಕಲಿ ಟಿವಿ ರೇಟಿಂಗ್ ಪಾಯಿಂಟ್ ಗಳನ್ನು ರೂಪಿಸಲು ಪ್ರಯತ್ನಪಟ್ಟಿದ್ದು ಈ ಸಂಬಂಧ ತನಿಖೆಗಳು ನಡೆಯುತ್ತಿವೆ. ಈ ಸಂಬಂಧ ರಿಪಬ್ಲಿಕ್ ಟಿವಿಯ ವಿರುದ್ದ ಹೆಚ್ಚು ಆರೋಪಗಳು ಕೇಳಿಬಂದಿದ್ದು ವಾಹಿನಿಯ ಐದು ಮಂದಿ ಹೂಡಿಕೆದಾರರನ್ನೂ ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ರಿಪಬ್ಲಿಕ್ ವಾಹಿನಿ ಸೇರಿದಂತೆ ಅನೇಕ ಟಿವಿ ವಾಹಿನಿಗಳು ತಮ್ಮ ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ವಾಮಮಾರ್ಗ ಹಿಡಿದಿವೆ, ಎಂದು ಹಂಸಾ ರಿಸರ್ಚ್ ಸಮೂಹದ ಮೂಲಕ ಬಾರ್ಕ್ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಪೊಲೀಸರಿಗೆ ದೂರು ದಾಖಲಿಸಿತ್ತು. ಟಿ ಆರ್ ಪಿಗಳನ್ನು ಅಳೆಯುವ ಉದ್ದೇಶದಿಂದ ಬಾರೋಮೀಟರ್ ಗಳನ್ನು ಇರಿಸಿದ ಮನೆಗಳ ಕುಟುಂಬಗಳಿಗೆ ಹಣ ಪಾವತಿಸುವ ಮೂಲಕ ಕೆಲವು ಟಿವಿ ವಾಹಿನಿಗಳು ವಂಚನೆ ಮಾಡಿವೆ ಎಂಬುದೇ ಈ ಹಗರಣಗಳ ಸಾರಾಂಶ.
    ಭಾರತದಲ್ಲಿ ಟಿ ಆರ್ ಪಿಯನ್ನು ಬಾರ್ಕ್ (ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಚಿಲ್) ನಿರ್ಧರಿಸುತ್ತದೆ. ಆದರೆ ಬಾರ್ಕ್ ನೇರವಾಗಿ ತಾನೇ ಮನೆಗಳ ಟಿವಿ ಸೆಟ್ ಗಳಿಗೆ ಪೀಪಲ್ ಮೀಟರ್ ಗಳನ್ನು ಅಳವಡಿಸುವುದಿಲ್ಲ. ಬದಲಾಗಿ ಹಂಸಾ ಎನ್ನುವ ಮತ್ತೊಂದು ಸಂಸ್ಥೆಗೆ ಈ ಜವಾಬ್ದಾರಿಯನ್ನು ವಹಿಸಿದೆ. ಹಂಸಾ ಭಾರತದಲ್ಲಿ ಒಟ್ಟು ಬಾರ್ಕ್ ಗಾಗಿ ಒಟ್ಟು 44,000 ಇಂತಹ ಗ್ಯಾಜೆಟ್ ಗಳನ್ನು ನಿರ್ವಹಿಸುತ್ತಿದೆ. ಹಂಸಾದ ಹಲವು ನೌಕರರು ಕೆಲವು ಟಿವಿ ವಾಹಿನಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ತಮಗೆ ಬೇಕಾದ ಮನೆಯ ಟಿವಿ ಸೆಟ್ ಗಳಿಗೆ ಪೀಪಲ್ ಮೀಟರ್ ಅಳವಡಿಸಿ ಸಂಬಧಿಸಿದ ಮನೆಯವರಿಗೆ ಹಣ ನೀಡುವ ಮೂಲಕ ನಿರ್ಧಿಷ್ಟ ವಾಹಿನಿಗಳ ಕಾರ್ಯಕ್ರಮಗಳನ್ನು ಮಾತ್ರ ದಿನನಿತ್ಯ ನೋಡುವಂತೆ ಒತ್ತಡ ಹೇರುತ್ತಾರೆ. ಹಣದ ಆಸೆಗಾಗಿ ಮನೆಯವರು ಅವರು ಹೇಳಿದ ವಾಹಿನಿಗಳನ್ನು ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಇದರಿಂದ ಒಮ್ಮಿಂದೊಮ್ಮೆಗೆ ಅಂತಹ ವಾಹಿನಿಗಳ ಟಿ ಆರ್ ಪಿ ಹೆಚ್ಚುತ್ತದೆ. ಇದರಿಂದ ಸಂಶಯಗೊಂಡ ಬಾರ್ಕ್ ಮತ್ತು ಹಂಸಾ ಸಂಸ್ಥೆಗಳು ಆಂತರಿಕ ತನಿಖೆಯನ್ನು ಆರಂಭಿಸಿದಾಗ ಇದ್ದಕ್ಕಿದ್ದಂತೆ ಒಬ್ಬ ನೌಕರ ಕೆಲಸವನ್ನು ಬಿಡುತ್ತಾನೆ. ಇದರಿಂದ ಸಂಶಯಗೊಂಡ ಬಾರ್ಕ್ ಪೊಲೀಸರಿಗೆ ದೂರು ನೀಡಿದಾಗ ಪೊಲೀಸ್ ತನಿಖೆಯಲ್ಲಿ ಮಹಾರಾಷ್ಟ್ರದ ಎರಡು ಪ್ರಾದೇಶಿಕ ವಾಹಿನಿಗಳು ಹಾಗೂ ರಿಪಬ್ಲಿಕ್ ಟಿವಿಯ ಹೆಸರು ಕೇಳಿಬಂತು.
    ಕೆಲವು ಕುಟುಂಬಗಳಿಗೆ ವಿತರಿಸುವುದಕ್ಕಾಗಿ ರಿಪಬ್ಲಿಕ್ ಟಿವಿ ಸೇರಿದಂತೆ ಎರಡು ವಾಹಿನಿಗಳಿಂದ ನೇರವಾಗಿ ಹಣ ಪಡೆದಿರುವುದನ್ನು ಮ್ಯಾಕ್ಸ್ ಮೀಡಿಯಾ ಮಾರ್ಕೆಟಿಂಗ್ ಸಂಸ್ಥೆಯ ಅಭಿಷೇಕ್ ಕೊಲ್ವಾಡೆ ಎಂಬಾತ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪತ್ರಿಕಾ ವರದಿಗಳು ಹೇಳಿವೆ. ಹಗರಣಕ್ಕೆಸಂಬಂಧಿಸಿದಂತೆ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಚಿಲ್ (ಬಾರ್ಕ್)ನ ಮಾಜಿ ಸಿಇಓ ರೊಮಿಲ್ ರಾಮ್ ಗರ್ಹಿಯಾ, ರಿಪಬ್ಲಿಕ್ ನೆಟ್ ವರ್ಕ್ ನ ಸಿಇಒ ವಿಕಾಸ್ ಖನ್ ಚಂದಾನಿ ಸೇರಿದಂತೆ 14ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು. ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಬಾರ್ಕ್ (ಪ್ರಸಾರ ವೀಕ್ಷಕರ ಸಂಶೋಧನಾ ಸಂಸ್ಥೆ) ಮಾಜಿ ಮುಖ್ಯಸ್ಥ ಪಾರ್ಥೋ ದಾಸ್ ಗುಪ್ತಾರ ನಡುವೆ ನಡೆದಿದ್ದ ವಾಟ್ಸಾಪ್ ಸಂದೇಶಗಳ ಸ್ಕ್ರೀನ್ ಶಾಟ್ ಗಳು ವೈರಲ್ ಆದ ಬಳಿಕ ಟಿ ಆರ್ ಪಿ ಹಗರಣದಲ್ಲಿ ಇವರಿಬ್ಬರ ಹೆಸರುಗಳು ಬಲವಾಗಿ ಕೇಳಿಬಂದಿದ್ದವು. ದಾಸ್ ಗುಪ್ತಾ 2013ರಿಂದ 2019ರವರೆಗೆ ಬಾರ್ಕ್ ಸಿಇಒ ಆಗಿದ್ದರು. ರಪಬ್ಲಿಕ್ ಟಿವಿಯ ಪರವಾಗಿ ಟಿ ಆರ್ ಪಿಯನ್ನು ನಿರ್ವಹಿಸುವುದಕ್ಕಾಗಿ ತಾನು ಅರ್ನಾಬ್ ರಿಂದ 40ಲಕ್ಷ ರೂಪಾಯಿಗಳನ್ನು ಪಡೆದಿರುವುದಾಗಿ ದಾಸ್ ಗುಪ್ತಾ ಮುಂಬೈ ಪೊಲೀಸರಿಗೆ ನೀಡಿದ ಕೈಬರಹದ ಹೇಳಿಕೆಯಲ್ಲಿ ತಿಳಿಸಿದ್ದಾರೆ, ಎಂದು ಇಂಡಿಯನ್ ಎಕ್ಸ್ಪ್ ಪ್ರೆಸ್ ಮತ್ತು ನ್ಯಾಷಿನಲ್ ಹೆರಾಲ್ಡ್ ಪತ್ರಿಕೆಗಳು ವರದಿ ಮಾಡಿವೆ. ಇದರ ಜೊತೆಗೆ ಈ ವಾಟ್ಸಾಪ್ ಸ್ಕ್ರೀನ್ ಶಾಟ್ ಗಳಲ್ಲಿ ಬಾಲಕೋಟ್ ದಾಳಿಯ ಮಾಹಿತಿ ಅರ್ನಬ್ ಗೆ ಮೊದಲೇ ತಿಳಿದಿತ್ತು, ಇವರಿಬ್ಬರ ನಡುವೆ ನಡೆದ ಸಂದೇಶಗಳಲ್ಲಿ ‘ಏನೋ ಒಂದು ನಡೆಯಲಿದೆ, ಸಾಮಾನ್ಯ ದಾಳಿಗಿಂತ ದೊಡ್ಡದಾಗಿರುತ್ತದೆ ಎಂದು ಅರ್ನಬ್ ಗೋಸ್ವಾಮಿ ಹೇಳಿರುವ ಸಂದೇಶದ ಸ್ಕ್ರೀನ್ ಶಾಟ್ ಕೂಡ ಹರಿದಾಡಿತ್ತು.
    ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೊಸಿಯೇಷನ್ (ಎನ್ ಬಿ ಎ) ಹಿಂದಿ ಸುದ್ದಿ ವಾಹಿನಿ ಟಿವಿ9 ಭಾರತ್ ವರ್ಷ್ ವೀಕ್ಷಕರ ಸಂಖ್ಯೆಯನ್ನು ಕಳೆದ ಎಂಟು ವಾರಗಳಿಂದ ತನ್ನ ವೀಕ್ಷಕರ ಸಂಖ್ಯೆಯಲ್ಲಿ ದಿಡೀರ್ ಹೆಚ್ಚಿಸಿಕೊಂಡಿದೆ, ಇದು ನಕಲಿ ದತ್ತಾಂಶವನ್ನು ಆಧರಿಸಿದೆ ಎಂದು ಕಳೆದ ಅಕ್ಟೋಬರ್ ನಲ್ಲಿ ದೂರು ದಾಖಲಿಸಲಾಗಿತ್ತು. ಟಿ ಆರ್ ಪಿ ಎಂದರೆ ಟೆಲಿವಿಷನ್ ರೇಟಿಂಗ್ ಪಾಯಿಂಟ್. ಇದು ಟಿವಿ ವಾಹಿನಿಗಳ ರೇಟಿಂಗ್ ಮತ್ತು ಯಾವ ಯಾವ ಕಾರ್ಯಕ್ರಮಗಳನ್ನು ಎಷ್ಟು ಜನ ವೀಕ್ಷಿಸುತ್ತಿದ್ದಾರೆ, ಯಾವ ವಾಹಿನಿ ಮತ್ತು ಕಾರ್ಯಕ್ರಮವನ್ನು ಹೆಚ್ಚು ಜನ ವೀಕ್ಷಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.
    ಟಿ ಆರ್ ಪಿ ಏಕೆ ಮುಖ್ಯ? ನಕಲಿ ಟಿ ಆರ್ ಪಿಗಳನ್ನು ಏಕೆ ಸೃಷ್ಟಿಸುತ್ತಾರೆ? ಮತ್ತು ಟಿ ಆರ್ ಪಿಗಾಗಿ ಏಕೆ ಹೀಗೆಲ್ಲಾ ಅವ್ಯವಹಾರಗಳು ನಡೆಯುತ್ತಿವೆ? ಎಂಬುದನ್ನು ಪರಿಶೀಲಿಸಿದರೆ ಜಾಹೀರಾತುದಾರರು ಮತ್ತು ಹೂಡಿಕೆದಾರರು ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಟಿ ಆರ್ ಪಿ ಸಹಕರಿಸುತ್ತದೆ. ಇದರ ಆದಾರದ ಮೇಲೆಯೇ ಜಾಹೀರಾತುದಾರರು ತಮ್ಮ ಜಾಹೀರಾತುಗಳನ್ನು ಎಲ್ಲಿ ಪ್ರದರ್ಶಿಸಬೇಕು? ಯಾವ ವಾಹಿನಿಯಲ್ಲಿ ಪ್ರಸಾರ ಮಾಡಬೇಕು? ಯಾವ ಕಾರ್ಯಕ್ರಮವನ್ನು ತಮ್ಮ ಜಾಹೀರಾತಿಗೆ ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ. ಅದೇ ರೀತಿ ಹೂಡಿಕೆದಾರರಿಗೆ ತಾವು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕೆಂಬುದನ್ನು ಅರಿತುಕೊಳ್ಳಲು ಟಿ ಆರ್ ಪಿ ಅನುವು ಮಾಡಿಕೊಡುತ್ತದೆ. ಯಾವುದೇ ಕಾರ್ಯಕ್ರಮದ ಟಿ ಆರ್ ಪಿಯಲ್ಲಿನ ಹೆಚ್ಚಳ ಅಥವಾ ಇಳಿಕೆ ಕಾರ್ಯಕ್ರಮ ಮತ್ತು ಟಿವಿ ವಾಹಿನಿಗಳ ಆದಾಯದ ಮೇಲೆ ನೇರವಾದ ಪರಿಣಮವನ್ನು ಬೀರುತ್ತದೆ. ಟಿವಿ ಚಾನಲ್ ಗಳ ಪ್ರಮುಖ ಆದಾಯದ ಮೂಲ ಜಾಹೀರಾತು. ಜಾಹೀರಾತುಗಳ ಅರಿವಿನ ಪ್ರಮಾಣ ಕಡಿಮೆಯಾದರೆ ಟಿವಿ ವಾಹಿನಿ ನಷ್ಟಕ್ಕೆ ನೂಕಲ್ಪಡುತ್ತದೆ. ಟಿ ಆರ್ ಪಿ ಕಡಿಮೆ ಎಂದರೆ ಜನರು ಅಂತಹ ಕಾರ್ಯಕ್ರಮ ಅಥವಾ ಟಿವಿ ವಾಹಿನಿಯನ್ನು ಕಡಿಮೆ ನೋಡುತ್ತಿದ್ದಾರೆ ಎಂದರ್ಥ. ಆಗ ಜಾಹೀರಾತುದಾರರು ಅಂತಹ ಟಿವಿ ವಾಹಿನಿಗಳಿಗೆ ಕಡಿಮೆ ಜಾಹೀರಾತುಗಳನ್ನು ನೀಡುತ್ತಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ಟಿ ಆರ್ ಪಿಯು ಟಿವಿ ವಾಹಿನಿಯನ್ನು ಮಾತ್ರ ಅವಲಂಬಿಸದೆ ಕಾರ್ಯಕ್ರಮಗಳನ್ನೂ ಕೂಡ ಅವಲಂಬಿಸಿರುತ್ತದೆ. ಮುಖ್ಯವಾಗಿ ಟಿ ಆರ್ ಪಿ ಜಾಹೀರಾತುಗಳನ್ನು ಪಡೆದುಕೊಳ್ಳಲು ಮತ್ತು ಜಾಹೀರಾತಿಗೆ ಬೆಲೆ ನಿಗದಿ ಮಾಡಲು ಪ್ರಮುಖ ಮಾನದಂಡವಾಗಿದೆ. ಸುದ್ದಿ ಬಿತ್ತರಿಸಿದೊಡನೆ ಅಥವಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಮಾತ್ರಕ್ಕೆ ಮಾಧ್ಯಮ ಸಂಸ್ಥೆಗಳಿಗೆ ಹಣ ಹರಿದುಬರುವುದಿಲ್ಲ. ಇವುಗಳ ಆದಾಯದ ಮೂಲ ಜಾಹೀರಾತುಗಳು.
    ಟಿ ಆರ್ ಪಿಯನ್ನು ಲೆಕ್ಕಾಚಾರ ಮಾಡಲು ಪೀಪಲ್ ಮೀಟರ್ ಮತ್ತು ಪಿಕ್ಚರ್ ಮ್ಯಾಪಿಂಗ್ ಎಂಬ ಎರಡು ಎಲೆಕ್ಟ್ರಾನಿಕ್ ವಿಧಾನಗಳನ್ನು ಬಳಸಲಾಗುತ್ತದೆ. ಪೀಪಲ್ ಮೀಟರ್ ಸಾಧನವನ್ನು ಕೆಲವು ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತದೆ ಅಥವಾ ಆಯ್ದ ಮನೆಗಳಲ್ಲಿ ಇಡಲಾಗಿರುತ್ತದೆ. ಇದಕ್ಕಾಗಿ ಎಲ್ಲರ ಮನೆಯಲ್ಲಿಯೂ ಈ ಸಾಧನವನ್ನು ಅಳವಡಿಸಲಾಗುವುದಿಲ್ಲ ಬದಲಾಗಿ ಕೆಲವು ಮೆನೆಗಳನ್ನು ಮಾದರಿಯಾಗಿ ತೆಗೆದುಕೊಂಡು ಅಳವಡಿಸುತ್ತಾರೆ. ಈ ವಿಧಾನದಲ್ಲಿ ಕೆಲವು ಸಾವಿರ ಜನರನ್ನು ಮಾದರಿ ರೂಪದಲ್ಲಿ ಸಮೀಕ್ಷೆ ಮಾಡಲಾಗುತ್ತದೆ. ಈ ಗ್ಯಾಜೆಟ್ ಕುಟುಂಬದ ಸದಸ್ಯರು ಅಥವಾ ಆಯ್ದ ಜನರು ವೀಕ್ಷಿಸಿದ ಟಿವಿ ವಾಹಿನಿ ಮತ್ತು ಕಾರ್ಯಕ್ರಮಗಳ ಕುರಿತು ಅಂಕಿ-ಅಂಶಗಳನ್ನು ಒದಗುಸುತ್ತವೆ. ಈ ಮೀಟರ್ ಮೂಲಕ ಟಿವಿ ವಾಹಿನಿ ಅಥವಾ ಕಾರ್ಯಕ್ರಮದ ಮಾಹಿತಿಯನ್ನು ಒಂದು ನಿಮಿಷದವರೆಗೆ ಇಂಟಾಮ್ ಮಾನಿಟರಿಂಗ್ ತಂಡ ಅಂದರೆ ಭಾರತೀಯ ಟೆಲಿವಿಷನ್ ಪ್ರೇಕ್ಷಕರ ಮಾಪನದಿಂದ ನಡೆಸಲಾಗುತ್ತದೆ. ಮಾಹಿತಿಯನ್ನು ವಿಶ್ಲೇಷಿಸಿದ ನಂತರ ವಾಹಿನಿ ಅಥವಾ ಕಾರ್ಯಕ್ರಮದ ಟಿ ಆರ್ ಪಿ ಏನು? ಎಂದು ತಂಡವು ನಿರ್ಧರಿಸುತ್ತದೆ. ಇನ್ನು ಪಿಕ್ಚರ್ ಮ್ಯಾಪಿಂಗ್ ನಲ್ಲಿ ಜನರು ವೀಕ್ಷಿಸುವ ಚಿತ್ರದ ಒಂದು ಸಣ್ಣ ಭಾಗವನ್ನು ಅಥವಾ ಅಂಕಿ-ಅಂಶಗಳನ್ನು ಚಿತ್ರಗಳ ರೂಪದಲ್ಲಿ ಮನೆಗಳ ಗುಂಪಿನಿಂದ ಸಂಗ್ರಹಿಸಲಾಗುತ್ತದೆ ನಂತರ ಟಿ ಆರ್ ಪಿಗಳನ್ನು ಲೆಕ್ಕ ಹಾಕಲು ವಿಶ್ಲೇಷಿಸಲಾಗುತ್ತದೆ. ಟಿ ಆರ್ ಪಿಯನ್ನು ಭಾರತೀಯ ಏಜೆನ್ಸಿಗಳಾದ ಇಂಟಾಮ್ ಮತ್ತು ಡಾರ್ಟ್ ಲೆಕ್ಕ ಹಾಕುತ್ತವೆ. ಇಂಟಾಮ್ ಭಾರತೀಯ ದೂರದರ್ಶನ ಪ್ರೇಕ್ಷಕರ ಮಾಪನವಾಗಿದೆ. ಡಾರ್ಟ್ ಗ್ರಾಮೀಣ ಜನರ ಟಿವಿ ನೋಡುವ ಮಾದರಿಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಬೌಗೋಳಿಕ, ಜನಸಂಖ್ಯೆ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಟವಿ ಪ್ರೇಕ್ಷಕರ ಗುಣ ಲಕ್ಷಣಗಳಿಗೆ ಅನುಗುಣವಾಗಿ ಸ್ಥಾಪನೆ ಸಮೀಕ್ಷೆಯ ವಿಧಾನದಲ್ಲಿ ಮನೆಗಳು ಮತ್ತು ವ್ಯಕ್ತಿಗಳ ನಿರ್ಧಿಷ್ಟ ವಿವರಗಳನ್ನು ಸಂಗ್ರಹಿಸಿ ಯಾದೃಚ್ಚಿಕವಾಗಿ ಮನೆಗಳನ್ನು ಆಯ್ಕೆಮಾಡಿಕೊಂಡು ಪೀಪಲ್ ಮೀಟರ್ ಗಳನ್ನು ಅಳವಡಿಸಲಾಗುತ್ತದೆ. ವ್ಯಯಕ್ತಿಕ ಗ್ರಾಹಕರಿಗೆ ಅಗತ್ಯವಿರುವ ಸ್ವರೂಪದಲ್ಲಿ ದತ್ತಾಂಶವನ್ನು ವರದಿ ಮಾಡಿ ವಿಶ್ಲೇಷಣೆ ಮಾಡಲು ಬಾರ್ಕ್ ಡೆಸ್ಕ್ ಟಾಪ್ ತಂತ್ರಾಂಶಗಳ್ನನು ಬಳಸುತ್ತದೆ.
    ಹಾಗೆ ನೋಡಿದರೆ ಟಿ ಆರ್ ಪಿ ಹಗರಣ ಭಾರತದಲ್ಲಿ ಹೊಸತೇನೂ ಅಲ್ಲ. 2018ರಲ್ಲಿ ನಿರ್ಧಿಷ್ಟ ಹಿಂದಿ ಟಿವಿ ವಾಹಿನಿಯ ಪರವಾಗಿ ಅಕ್ರಮವಾಗಿ ಟಿ ಆರ್ ಪಿ ರೂಪಿಸಲು ಸಹಕರಿಸಿದರು ಎಂಬ ಆರೋಪದ ಮೇಲೆ ಗ್ವಾಲಿಯರ್ ನಲ್ಲಿ ಮೂವರನ್ನು ಬಂಧಿಸಲಾಗಿತ್ತು. ಮತ್ತೊಂದು ಹಗರಣದಲ್ಲಿ ತಮ್ಮ ವಾಹಿನಿಯ ನಿಜವಾದ ವೀಕ್ಷಕರನ್ನು ಮುಚ್ಚಿಟ್ಟು ತಪ್ಪು ಟಿ ಆರ್ ಪಿ ರೂಪಿಸಿದೆ ಎಂದು ಆರೋಪಿಸಿ ನವದೆಹಲಿಯ ಎನ್ ಡಿ ಟಿವಿ ದಿ ನಿಕ್ಸನ್ ಎಂಬ ರೇಟಿಂಗ್ ಕಂಪನಿ ವಿರುದ್ದ ಮೊಕದ್ದೊಮ್ಮೆಯನ್ನು ಹೂಡಿ ಶತಕೋಟಿ ಡಾಲರ್ ನಷ್ಟವನ್ನು ಭರಿಸುವಂತೆ ಕೋರಿತ್ತು. 2019ರಲ್ಲಿ ಎರಡು ತೆಲುಗು ಸುದ್ದಿ ವಾಹಿನಿಗಳಿಗೆ ಅನೂಕೂಲವಾಗುವಂತ ವೀಕ್ಷಕರ ಡೇಟಾವನ್ನು ಬಹಳ ನೈಪುಣ್ಯತೆಯಿಂದ ನಿರ್ವಹಿಸಿದೆ ಎಂದು ಆರೋಪಿಸಿ ಬಾರ್ಕ್ ಪೊಲೀಸ್ ಠಾಣೆಯಲ್ಲಿ ಏಳು ಆರೋಪಿಗಳ ವಿರುದ್ದ ದೂರು ದಾಖಲಿಸಿತ್ತು.
    ಇತ್ತೀಚಿಗೆ ಕನ್ನಡ ವಾಹಿನಿಗಳಲ್ಲೂ ಟಿ ಆರ್ ಪಿ ಹಗರಣದ ವಾಸನೆ ಬರುತ್ತಿದೆ. ಕನ್ನಡ ಟಿವಿ ವಾಹಿನಿಯೊಂದು ಟಿ ಆರ್ ಪಿ ಯನ್ನು ಹೆಚ್ಚಿಸಿಕೊಳ್ಳಲು ನಕಲಿ ವಿಧಾನಗಳನ್ನು ಬಳಸಿರುವುದು ಕಳೆದ ತಿಂಗಳು ಕಂಡು ಬಂದಿದೆ. ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುವ ದಾರಾವಾಹಿಗಳ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಟಿ ಆರ್ ಪಿಗಳನ್ನು ನಕಲಿ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ನಾಲ್ಕು ಜನರನ್ನು ಕಳೆದ ತಿಂಗಳು ಬಂದಿಸಿದ್ದರು ಈ ಸಂಬಂಧ ತನಿಖೆ ಮುಂದುವರಿದಿದೆ.
    ಸುದ್ದಿ ಇಂದು ಸುದ್ದಿಯಾಗಿ ಉಳಿದಿಲ್ಲ ಬದಲಾಗಿ ಮನರಂಜನೆಯಾಗಿ ಬದಲಾಗಿದೆ. ಟಿ ಆರ್ ಪಿಯ ದಾವಂತದಲ್ಲಿ ಸುದ್ದಿ ವಾಹಿನಿಗಳ ನಿಖರತೆ, ವಸ್ತುನಿಷ್ಟತೆ ಹಾಗೂ ಸಾಮಾಜಿಕ ಕಳಕಳಿಗಳು ಕೊಚ್ಚಿಕೊಂಡು ಹೋಗಿವೆ. ಇದು ಪ್ರೇಕ್ಷಕರು ದುರಂತವೇ ಸರಿ. ಬ್ರಷ್ಟರಿಗೆ ಸಿಂಹಸ್ವಪ್ನವಾಗಬೇಕಾಗಿದ್ದ, ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಭಾಗವಾದ ಟಿವಿ ವಾಹಿನಿಗಳು ತಾವೇ ಬ್ರಷ್ಟಾಚಾರದಲ್ಲಿ ತೊಡಗಿರುವುದು ಎಷ್ಟರಮಟ್ಟಿಗೆ ಸಮರ್ಥನೀಯ? ವೀಕ್ಷಕರಿಗೆ ಮತ್ತು ಜಾಹೀರಾತು ನೀಡುವ ಸಂಸ್ಥೆಗಳಿಗೆ ಮಾಡುವ ದ್ರೋಹ ಇದಲ್ಲವೆ?
    ###
    -ಡಾ.ಅಮ್ಮಸಂದ್ರ ಸುರೇಶ್
    ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
    ಮೊಬೈಲ್ : 9448402346

    The post ಮಾಧ್ಯಮ ಲೋಕ-೦೪ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) appeared first on Karnataka Kahale.

    ]]>
    ಮಾಧ್ಯಮಲೋಕ-೩. (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್) https://www.karnatakakahale.com/news/3175 Mon, 15 Feb 2021 07:23:49 +0000 https://www.karnatakakahale.com/?p=3175 ವಿಶ್ವವ್ಯಾಪಿ ಸಾಮಾಜಿಕ ಮಾಧ್ಯಮಗಳು ***** ಜಗತ್ತಿನಾದ್ಯಂತ ಇಂದು ಜನ ಸಾಮಾಜಿಕ ಮಾಧ್ಯಮಗಳ ದಾಸರಾಗಿ ಹೋಗಿಬಿಟ್ಟಿದ್ದಾರೆ. ತಿಂಡಿ ತಿನ್ನುವುದರಿಂದಿಡಿದು ನಿದ್ದೆ ಮಾಡುವವರೆಗೂ ಮೊಬೈಲ್‌ ಪೋನ್‌ಗಳನ್ನು ಕೈಯಲ್ಲೆ ಹಿಡಿದುಕೊಂಡು ಓಡಾಡುವುದು ಸಾಮಾನ್ಯವಾಗಿಬಿಟ್ಟಿದೆ. ಫೇಸ್‌ಬುಕ್‌, ವಾಟ್ಸ್‌ಆಪ್, ಲಿಂಕ್ಡೆನ್‌, ಇನ್ಸ್ಟಾಗ್ರಾಂ, ಗೂಗಲ್+,ಟ್ವಿಟರ್‌ ಹೀಗೆ ಒಂದಲ್ಲ ಒಂದು ಸಾಮಾಜಿಕ…

    The post ಮಾಧ್ಯಮಲೋಕ-೩. (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್) appeared first on Karnataka Kahale.

    ]]>
    ವಿಶ್ವವ್ಯಾಪಿ ಸಾಮಾಜಿಕ ಮಾಧ್ಯಮಗಳು
    *****

    ಜಗತ್ತಿನಾದ್ಯಂತ ಇಂದು ಜನ ಸಾಮಾಜಿಕ ಮಾಧ್ಯಮಗಳ ದಾಸರಾಗಿ ಹೋಗಿಬಿಟ್ಟಿದ್ದಾರೆ. ತಿಂಡಿ ತಿನ್ನುವುದರಿಂದಿಡಿದು ನಿದ್ದೆ ಮಾಡುವವರೆಗೂ ಮೊಬೈಲ್‌ ಪೋನ್‌ಗಳನ್ನು ಕೈಯಲ್ಲೆ ಹಿಡಿದುಕೊಂಡು ಓಡಾಡುವುದು ಸಾಮಾನ್ಯವಾಗಿಬಿಟ್ಟಿದೆ. ಫೇಸ್‌ಬುಕ್‌, ವಾಟ್ಸ್‌ಆಪ್, ಲಿಂಕ್ಡೆನ್‌, ಇನ್ಸ್ಟಾಗ್ರಾಂ, ಗೂಗಲ್+,ಟ್ವಿಟರ್‌ ಹೀಗೆ ಒಂದಲ್ಲ ಒಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅದರಲ್ಲಿ ಬರುವ ಹೊಸ ಪೋಸ್ಟ್‌ಗಳಿಗಾಗಿ ಜಾತಕ ಪಕ್ಷಿಗಳಂತೆ ಕಾಯುವುದು ಸಾಮಾನ್ಯವಾಗಿಬಿಟ್ಟಿದೆ.
    ಅಂತರ್‌ಜಾಲದ ಬೆಳವಣಿಗೆಯಿಂದ ಸಂವಹನ ಕ್ಷೇತ್ರದ ಮೇಲಾದ ತಂತ್ರಜ್ಙಾನ ಮತ್ತು ಸಂಪರ್ಕದ ಬೆಳವಣಿಗೆಯಿಂದಾಗಿ ಉಂಟಾದ ಕ್ರಾಂತಿಯ ಪರಿಣಾಮವಾಗಿ ಜನ್ಮ ತಾಳಿದ ಸಾಮಾಜಿಕ ಮಾಧ್ಯಮಗಳು ವಿಶ್ವದ ಎಲ್ಲಾ ಮೂಲೆಗೆಳ ಜನರನ್ನು ಬೆಸೆಯುವ ಮೂಲಕ ವಿಶ್ವ ಸಮುದಾಯ ಎಂಬ ಹೊಸ ಪ್ರಜ್ಞೆಗೆ ಸಾಕ್ಷಿಯಾಗಿವೆ. ಇವು ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದು ವಿವಿದ ರಾಷ್ಟ್ರಗಳ ಮಿಲಿಯನ್‌ ಜನರನ್ನು ಬೆರಳೆಣಿಕೆಯ ಸಮಯದಲ್ಲಿ ಒಂದೆಡೆ ಸೇರಿಸುವ, ಅನುಭವಗಳನ್ನು, ಅನಿಸಿಕೆಗಳನ್ನು ವಿನಿಮಯ ಮಾಡಿಕೊಳ್ಳುವ ಅಗಾದ ಶಕ್ತಿಯನ್ನು ಹೊಂದಿವೆ.
    ವಿಶ್ವದಾದ್ಯಂತ ಮಿಲಿಯನ್‌ಗಟ್ಟಲೆ ಸದಸ್ಯರುಗಳನ್ನು ಒಳಗೊಂಡಿರುವ ಈ ಸಾಮಾಜಿಕ ಮಾಧ್ಯಮಗಳು, ಗೆಳೆಯರ ಒಂದು ಜಾಲವನ್ನೆ ನಿರ್ಮಿಸಿಬಿಟ್ಟಿವೆ. ನಿಮಗೆ ಏನೆಲ್ಲಾ ಬೇಕೋ ಅವೆಲ್ಲಾ ಕ್ಷಣಾರ್ದದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್‌ ಆಗಿ ಬಿಡುತ್ತವೆ. ಸಾಮಾಜಿಕ ಗುಂಪುಗಳು ಸಾವಿರ ಸಂಖ್ಯೆಯಲ್ಲಿ ರಚನೆಯಾಗಿಬಿಟ್ಟಿವೆ. ಇವುಗಳಲ್ಲಿ ಕುಟುಂಬ ಗುಂಪುಗಳು, ಸ್ನೇಹಿತರ ಗುಂಪುಗಳು, ಸರ್ಕಾರಿ ಮತ್ತು ಖಾಸಗಿ ಎರಡು ರಂಗಗಳ ಕಾರ್ಮಿಕರ ಮತ್ತು ಕಾರ್ಮಿಕ ಸಂಘಗಳ ಗುಂಪುಗಳು ಅದೇ ರೀತಿ ಸರ್ಕಾರದ ವಿವಿದ ಇಲಾಖೆಗಳು ತನ್ನ ಸಿಬ್ಬಂದಿಗಳನ್ನೊಳಗೊಂಡ ಗಂಪುಗಳು, ಸಮಾನ ಮನಸ್ಕರ ಗುಂಪುಗಳು, ವಿದ್ಯಾರ್ಥಿ ಗುಂಪುಗಳು ಹೀಗೆ ಒಂದೆರಡಲ್ಲ ಸಾಮಾಜಿಕ ಗುಂಪುಗಳು ಇಲ್ಲದ ಕ್ಷೇತ್ರವೇ ಇಲ್ಲವೇನೋ ಎಂಬ ವಾತಾವರಣ ಈಗ ನಿರ್ಮಾಣವಾಗಿದೆ. ಈ ಗುಂಪುಗಳ ಮೂಲಕ ಅನೇಕ ವಿಷಯಗಳನ್ನು ಶೇರ್‌ ಮಾಡಿಕೊಳ್ಳಲಾಗುತ್ತಿದೆ.
    `ಚುನಾವಣೆಗಳಿಂದಿಡಿದು ಪ್ರಕೃತಿ ವಿಕೋಪದವರೆಗೂ, ಜನನದಿಂದ ಮರಣದವರೆಗಿನೆ ಎಲ್ಲಾ ಸುದ್ದಿಗಳು ಈ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್‌ ಆಗುತ್ತವೆ. ವಿದ್ಯಾರ್ಥಿಗಳು ಮತ್ತು ಯುವ ಜನ ಹೆಚ್ಚಾಗಿ ಈ ಸಾಮಾಜಿಕ ಮಾಧ್ಯಮಗಳ ಚಟ ಅಥವಾ ಗೀಳಿಗೆ ಒಳಗಾಗಿದ್ದಾರೆ. ಮನಶಾಸ್ತ್ರಜ್ಞರು ಈ ಕುರಿತು ಅನೇಕ ಸಂಶೋಧನೆಗಳನ್ನು ನಡೆಸಿದ್ದಾರೆ. ಸಂಶೋಧನೆಗಳಿಂದ ಬಂದ ಪಲಿತಾಂಶಗಳು ಎಲ್ಲರನ್ನು ಬೆಚ್ಚಿಬೀಳಿಸುವಂತಿವೆ.
    ಮಕ್ಕಳ ಮತ್ತು ಯುವಕರ ಮಿದುಳಿನ ಶಕ್ತಿಯನ್ನೇ ಹುದುಗಿಸಿಬಿಡುವ ಶಕ್ತಿ ಇವುಗಳಿಗಿದೆ ಎಂಬ ವರದಿಗಳು ಒಂದೆಡೆಯಾದರೆ ಅತಿಯಾದ ಸಾಮಾಜಿಕ ಮಾಧ್ಯಮಗಳ ಅವಲಂಬನೆ ಯುವಕರಲ್ಲಿ ದೈಹಿಕ ಚಟುವಟಿಕೆಗಳನ್ನು ಕ್ಷೀಣಿಸಿ ಬೊಜ್ಬು ಬೆಳೆಯುವಂತೆ ಮಾಡುವುದರ ಜೊತೆಗೆ ಅವರ ಮಾನಸಿಕ ಸ್ಥಿಮಿತತೆಯನ್ನೆ ಹಾಳುಮಾಡಿಬಿಡುತ್ತವೆ, ಇದಲ್ಲದೆ ನಿದ್ರಾಹೀನತೆ, ಒತ್ತಡಕ್ಕೊಳಗಾಗುವುದು, ಕೋಪ, ಸುಳ್ಳು ಹೇಳುವ ಚಟ, ಹಾಗೂ ಖಿನ್ನತೆಯಂತಹ ಅಡ್ಡಪರಿಣಾಮಗಳು ಉಂಟಾಗುತ್ತಿವೆ, ಎಂಬುದು ಇನ್ನೊಂದು. ಹೀಗೆ ಅನೇಕ ವರದಿಗಳು ಹೊರಬಂದಿದ್ದು ಸಾಮಾಜಿಕ ಮಾಧ್ಯಮಗಳ ಅಡ್ಡಪರಿಣಾಮಗಳ ಕುರಿತು ಅನೇಕ ಆತಂಕಗಳು ಕೂಡ ಎದುರಾಗಿವೆ.
    ಇದೀಗ ಎಲ್ಲರ ಗಮನಕ್ಕೆ ಬಂದಿರುವ ಪ್ರಮುಖ ಅಂಶವೆಂದರೆ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ವಿಚಾರಗಳ ಸತ್ಯಾಸತ್ಯತೆಯನ್ನು ಅರಿತುಕೊಳ್ಳದೇ ಮತ್ತು ಅದರಿಂದ ಸಮಾಜ ಮತ್ತು ದೇಶದ ಮೇಲೆ ಆಗಬಹುದಾದ ಅಡ್ಡಪರಿಣಾಮಗಳನ್ನು ವಿಮರ್ಶೆ ಮಾಡದೆ ವಿಷಯಗಳನ್ನು ಶೇರ್‌ ಮಾಡುವವರ ಪ್ರಮಾಣ ಹೆಚ್ಚಾಗುತ್ತಿದೆ. ಇಂತಹ ವಿಷಯಗಳ ಆಕರ್ಷಕವಾಗಿರುವುದರಿಂದ ಜನರು ಬಹಳ ಬೇಗ ಇವುಗಳ ಆಕರ್ಷಣೆಗೆ ಮಾರುಹೋಗಿಬಿಡುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಯಾವ ದೇಶಕ್ಕಾದರೂ ದೊಡ್ಡ ದುರಂತವೇ ಸರಿ.
    ಸಾಮಾಜಿಕ ಮಾಧ್ಯಮಗಳ ಮೂಲಕ ಹೇಗೆ ಒಳ್ಳೆಯ ವಿಷಯಗಳು ಹರಿದಾಡುತ್ತವೋ ಅದಕ್ಕಿಂತ ಎರಡು ಪಟ್ಟು ಕೋಮುದ್ವೇಷ ಹಾಗೂ ರಾಷ್ಟ್ರದ ಏಕತೆಗೆ ದಕ್ಕೆ ಬರುವಂತಹ ಘಟನೆಗಳು ಹರಿದಾಡಿಬಿಡುತ್ತುವೆ. ಒಂದು ವಿಷಯದ ಪೂರ್ವಾಪರಗಳ ಅರಿವಿಲ್ಲದೆ ಹರಿದಾಡುವ ಕೆಲವು ವಿಷಯಗಳಿಂದ ಜನ ಸಾಮಾನ್ಯರು ಗೊಂದಲಕ್ಕೊಳಗಾಗುವ ಜೊತೆಗೆ ತಪ್ಪು ಜನಾಬಿಪ್ರಾಯ ರೂಪುಗೊಳ್ಳವ ಸಾಧ್ಯತೆಗಳಿವೆ.
    ಸಾಮಾಜಿಕ ಮಾಧ್ಯಮಗಳಿಂದ ಉಂಟಾಗುವ ಧನಾತ್ಮಕ ಪರಿಣಾಮಗಳಿಗಿಂತ ಋಣತ್ಮಾಕ ಪರಿಣಾಮಗಳೆ ಹೆಚ್ಚು ಅದಕ್ಕಾಗಿಯೇ ಅನೇಕ ದೇಶಗಳು ಈಗಾಗಲೇ ಕೆಲವು ಸಾಮಾಜಿಕ ಮಾಧ್ಯಮಗಳನ್ನು ನಿಷೇದಿಸಿಬಿಟಿವೆ. ನಮ್ಮ ದೇಶದಲ್ಲಿಯು ಕೂಡ ಈ ರೀತಿಯ ಮಾತುಗಳು ಆಗಾಗ ಕೇಳಿ ಬರುತ್ತಲೆ ಇವೆ. ಮತ್ತೊಂದೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಪ್ರವಾಹ ನಡೆದೆ ಇದೆ. ಇವುಗಳ ಮೇಲೆ ನಿಯಂತ್ರಣ ಹೇರಬೇಕು ಎಂಬ ಚರ್ಚೆಗಳು ನಡೆದಾಗಲೆಲ್ಲ ಕೆಲವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ ಎಂಬ ವಿಷಯವನ್ನು ಮುಂದಿಟ್ಟುಕೊಂಡು ವಾದ ಮಾಡಲು ಮುಂದಾಗುತ್ತಾರೆ. ಆದರೆ ಬೆಕ್ಕಿಗೆ ಯಾರಾದರೂ ಗಂಟೆ ಕಟ್ಟಲೇ ಬೇಕಲ್ಲವೆ? ಇಲ್ಲದಿದ್ದರೆ ಇವುಗಳ ಅಡ್ಡಪರಿಣಾಮಗಳಿಂದ ಹೊರಬರುವುದಾದರೂ ಹೇಗೆ?
    ಸಾಮಾಜಿಕ ಮಾಧ್ಯಮಗಳ ಬಹುದೊಡ್ಡ ಪರಿಣಾಮವೆಂದರೆ ಜನರ ಓದುವ ಅಭ್ಯಾಸವನ್ನು ಕಡಿಮೆ ಮಾಡಿದ್ದಾಗಿದೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿ ಸಮೂಹವನ್ನು ಇವುಗಳ ಒತ್ತಡದಿಂದ ರಕ್ಷಿಸುವುದು ಪೋಷಕರ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಕ್ಕಳಂತೆ ಪೋಷಕರು ಕೂಡ ಮನೆಯಲ್ಲಿದ್ದಾಗ ಸಾಮಾಜಿಕ ಮಾಧ್ಯಮಗಳ ಮೇಲೆ ಹೆಚ್ಚು ವೇಳೆ ವ್ಯಯ ಮಾಡುತ್ತಾ ಅವುಗಳ ಚಟಕ್ಕೆ ಒಳಗಾಗುತ್ತಿರುವುದರ ಪರಿಣಾಮವಾಗಿ ಕುಟುಂಬದ ಬೇರುಗಳೆ ಸಡಿಲವಾಗಿಬಿಡುತ್ತಿವೆಯೇನೋ ಎಂಬ ದಿಗಿಲು ಎಲ್ಲರನ್ನೂ ಅವರಿಸಿರುವುದರಲ್ಲಿ ಸಂದೇಹವಿಲ್ಲ.
    ಸಾಮಾಜಿಕ ಅಂತರ್‌ಜಾಲ ತಾಣಗಳು ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಾಗಿದ್ದು ವಿಶ್ವವನ್ನೆ ನಮ್ಮ ಮನೆಯ ಅಂಗಳಕ್ಕೆ ತಂದಿಟ್ಟಿದ್ದರೂ ಕೂಡ ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳುವುದರಲ್ಲಿ ನಾವು ಸೋತು ಬಿಟ್ಟಿದ್ದೀವಿ. ಈ ಸೋಲು ಇಡೀ ಸಮಾಜವನ್ನೆ ದಿಕ್ಕು ತಪ್ಪಿಸಿಬಿಡಬಹುದು ಎಂಬ ಆತಂಕವನ್ನು ಯಾರು ಅಲ್ಲಗೆಳೆಯುವಂತಿಲ್ಲ.
    ಮಾಧ್ಯಮಗಳು ಎಂದಾಕ್ಷಣ ನಮ್ಮೆದುರು ಬಂದು ನಿಲ್ಲುವುದು ಶೇರ್‌, ಕಮೆಂಟ್‌, ಮತ್ತು ಲೈಕ್‌ ಇವುಗಳ ಹೊರತಾಗಿಯೂ ಸಾಮಾಜಿಕ ಮಾಧ್ಯಮಗಳನ್ನು ನಮ್ಮ ಕೌಶಲ್ಯ ವೃದ್ದಿಗೆ, ಹೊಸ ಹೊಸ ವಿಷಯಗಳ ಗ್ರಹಿಕೆಗೆ, ವಿಶ್ವದಾದ್ಯಂತ ನಡೆಯುವ ನೂತನ ಆವಿಷ್ಕಾರಗಳಿಗೆ ನಮ್ಮನ್ನು ತೆರೆದುಕೊಳ್ಳುವಿಕೆಗೆ, ಹೀಗೆ ಅನೇಕೆ ವಿಷಯಗಳಲ್ಲಿ ನಾವು ಬಹಳಷ್ಟು ಪ್ರೌಡಿಮೆಯನ್ನು ಬೆಳೆಸಿಕೊಳ್ಳಲು ಸಾಮಾಜಿಕ ಮಾಧ್ಯಮಗಳಲ್ಲಿ ವಿಪುಲ ಅವಕಾಶಗಳಿವೆ. ಸಾಮಾಜಿಕ ಜಾಲ ತಾಣಗಳ ಮೂಲಕ ಆನ್‌ಲೈನ್‌ ಶಿಕ್ಷಣ ನೀಡುವುದು ಸೇರಿದಂತೆ ವಿವಿದ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಉಪಯೋಗಿಸಿಕೊಳ್ಳಲು ವಿಫುಲ ಅವಕಾಶಗಳಿವೆ. ಇವುಗಳು ಬಳಕೆದಾರರ ಆಸಕ್ತಿಯನ್ನು ಅವಲಂಬಿಸಿರುತ್ತವೆ. ಆದರೆ ಒಳ್ಳೆಯ ವಿಷಯಗಳು ಎಷ್ಟು ಜನರನ್ನು ಆಕರ್ಷಿಸಬಲ್ಲವು?
    ದಿನದಿಂದ ದಿನಕ್ಕೆ ಅಂತರ್‌ಜಾಲ ಬಳಸುವವರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದ್ದು ಈ ಪ್ರಮಾಣ ಏರಿಕೆಯಾದಂತೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರ ಪ್ರಮಾಣ ಕೂಡ ಹೆಚ್ಚುತ್ತಾ ಹೋಗುತ್ತಿದೆ. ಸಾಮಾಜಿಕ ಮಾಧ್ಯಮದ ಗೀಳಿಗೆ ಒಳಗಾಗುವವರ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಇದರಿಂದ ಆರೋಗ್ಯ, ಕೆಲಸದ ಸ್ಥಳ, ಶಿಕ್ಷಣ ಮತ್ತು ಸಾಮಾಜಿಕ ಜೀವನದ ಮೇಲಿನ ಅಡ್ಡಪರಿಣಾಮಗಳು ಕೂಡ ಹೆಚ್ಚಾಗಲಿವೆ. ಉಳಿದೆಲ್ಲಾ ಕ್ಷೇತ್ರಗಳಿಗಿಂತ ಶಿಕ್ಷಣ ಅದರಲ್ಲೂ ವಿದ್ಯಾರ್ಥಿಗಳ ಮೇಲೆ ಇವುಗಳು ಬೀರುವ ದುಷ್ಪರಿಣಾಮಗಳು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.
    ಮಾಧ್ಯಮಗಳಿಗೆ ಒಂದು ಸಾಮಾಜಿಕ ಕಟ್ಟುಪಾಡು ಅಥವಾ ನೀತಿ ಸಂಹಿತೆಯಿದೆ. ಇದಕ್ಕೆ ಕಾನೂನು ಚೌಕಟ್ಟು ಇಲ್ಲದಿದ್ದರೂ ಮುದ್ರಣ ಮಾಧ್ಯಮ ಸೇರಿದಂತೆ ಎಲ್ಲಾ ಮಾಧ್ಯಮಗಳು ಈ ನೀತಿ ಸಂಹಿತೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಮಾಧ್ಯಮಗಳು ಒಂದು ಪರಿದಿಯಲ್ಲಿ ಕೆಲಸ ಮಾಡುತ್ತಿವೆ ಅದರೆ ಸಾಮಾಜಿಕ ಮಾಧ್ಯಮಗಳಿಗೆ ಯಾವ ಇತಿ-ಮಿತಿಗಳಾಗಲಿ, ತತ್ವ ಸಿದ್ದಾಂತಗಳಾಗಲಿ, ನೀತಿ ಸಂಹಿತೆಯಾಗಲಿ ಇಲ್ಲದಿರುವುದು ಮತ್ತು ಅವುಗಳಿಗಿರುವ ವೇಗ ಎಲ್ಲರ ನಿದ್ರೆಯನ್ನು ಕೆಡಿಸಿರುವುದಂತೂ ಸತ್ಯ.
    ###
    -ಡಾ. ಅಮ್ಮಸಂದ್ರ ಸುರೇಶ್
    ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
    ಮೊಬೈಲ್‌ : 9448402346

    The post ಮಾಧ್ಯಮಲೋಕ-೩. (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್) appeared first on Karnataka Kahale.

    ]]>
    ಮಾಧ್ಯಮ ಲೋಕ-೦೨ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) https://www.karnatakakahale.com/news/3084 Mon, 08 Feb 2021 18:30:46 +0000 https://www.karnatakakahale.com/?p=3084 ಮಾಧ್ಯಮ‌ ಲೋಕ-೦೨ ರೈತರ ಪ್ರತಿಭಟನೆ ಮತ್ತು ರಾಷ್ಟ್ರೀಯ ಮಾಧ್ಯಮಗಳು -ಡಾ.ಅಮ್ಮಸಂದ್ರ ಸುರೇಶ್ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರೆದಿದೆ. ಈ ಮಧ್ಯೆ ರೈತರು “ಮಾಧ್ಯಮಗಳು ನಮ್ಮ ನಂಬಿಕೆಯನ್ನು ಕಳೆದುಕೊಂಡಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ನಮ್ಮ ಪ್ರತಿಭಟನೆಯನ್ನು ಸರಿಯಾಗಿ ವರದಿ ಮಾಡುವಲ್ಲಿ…

    The post ಮಾಧ್ಯಮ ಲೋಕ-೦೨ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) appeared first on Karnataka Kahale.

    ]]>
    ಮಾಧ್ಯಮ‌ ಲೋಕ-೦೨


    ರೈತರ ಪ್ರತಿಭಟನೆ ಮತ್ತು ರಾಷ್ಟ್ರೀಯ ಮಾಧ್ಯಮಗಳು
    -ಡಾ.ಅಮ್ಮಸಂದ್ರ ಸುರೇಶ್

    ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರೆದಿದೆ. ಈ ಮಧ್ಯೆ ರೈತರು “ಮಾಧ್ಯಮಗಳು ನಮ್ಮ ನಂಬಿಕೆಯನ್ನು ಕಳೆದುಕೊಂಡಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ನಮ್ಮ ಪ್ರತಿಭಟನೆಯನ್ನು ಸರಿಯಾಗಿ ವರದಿ ಮಾಡುವಲ್ಲಿ ವಿಫಲವಾಗಿವೆ ಎಂಬುದು ರೈತರ ಈ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಮಾಧ್ಯಮಗಳ ಮೇಲೆ ರೈತರು ನೇರವಾಗಿ ವಾಗ್ದಾಳಿ ಮಾಡಿದ್ದಾರೆ. “ರಾಷ್ಟ್ರೀಯ ಮಾಧ್ಯಮಗಳು ನಮ್ಮನ್ನು ಏಕೆ ಗಮನಿಸುತ್ತಿಲ್ಲ? ರಸ್ತೆ ತಡೆಗಳು ಅವರಿಗೆ ಕಾಣಿಸುತ್ತಿಲ್ಲವೆ? ನಮ್ಮ ಘೋಷಣೆಗಳು ಅವರಿಗೆ ಕೇಳುತ್ತಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
    ಕೆಲವು ಟಿ.ವಿ. ಮಾಧ್ಯಮಗಳ ವರದಿಗಾರರ ಮೇಲೆ ಘೋಷಣೆಗಳನ್ನು ಕೂಗಿರುವ ಜೊತೆಗೆ ಕೆಲವು ವರದಿಗಾರರ ಮೇಲೆ ನೀರನ್ನು ಕೂಡ ಎರಚಿ ಪ್ರತಿಭಟಿಸಿದ್ದಾರೆ. ಕೆಲವು ಮಾಧ್ಯಮ ಸಂಸ್ಥೆಗಳ ವರದಿಗಾರರಿಗಂತೂ ಸಂದರ್ಶನ ನೀಡಲು ಕೂಡ ರೈತರು ನಿರಾಕರಿಸಿದ ಘಟನೆಗಳು ಕೂಡ ನಡೆದಿವೆ. ಇದಕ್ಕೆ ಮೂಲ ಕಾರಣ ಕೆಲವು ಟಿ.ವಿ.ವಾಹಿನಿಗಳು ರೈತರನ್ನು ‘ಖಲಿಸ್ಥಾನಿಗಳು’, ‘ಉಗ್ರಗಾಮಿಗಳು’ ಎಂದು ಕರೆದಿದ್ದು. ಇದಕ್ಕೆ ಪ್ರತಿಕ್ರಿಯಿಸಿರುವ ರೈತರು ನಮ್ಮನ್ನು ‘ಖಲಿಸ್ತಾನಿಗಳು, ಎಂದು ಕರೆಯುವವರು ಭಾರತೀಯರೇ ಅಲ್ಲ ಎಂದಿದ್ದಾರೆ. ನೀವು ಏನು ನೋಡುತ್ತಿದ್ದೀರೋ ಅದನ್ನು ವರದಿ ಮಾಡಿ ಎಂದಷ್ಟೇ ನಾವು ಬಯಸುತ್ತೇವಿ ಎಂದು ರೈತರು ಮಾಧ್ಯಮಗಳನ್ನು ಆಗ್ರಹಿಸಿದ್ದಾರೆ.
    ರೈತರ ಈ ಆಕ್ರೋಶ ಇದ್ದಕ್ಕಿದ್ದಂತೆ ಬುಗಿಲೆದ್ದಿದ್ದಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ. ಮಾಧ್ಯಮಗಳಲ್ಲಿ ಏನು ಬರುತ್ತಿದೆ? ಎಂಬುದನ್ನು ಅವರು ಅರಿತುಕೊಂಡಿದ್ದಾರೆ. ಕೆಲವು ಮಾಧ್ಯಮಗಳು ರೈತರ ಪ್ರತಿಭಟನೆಯ ವಿಷಯವನ್ನು ಹೊರತುಪಡಿಸಿ ಅವರ ವೇಷ-ಭೂಷಣಗಳು ಮತ್ತು ಊಟದ ವ್ಯವಸ್ಥೆ ಹೇಗೆ ಆಗುತ್ತಿದೆ? ರೈತರಿಗೆ ಆರ್ಥಿಕ ನೆರವು ಎಲ್ಲಿಂದ ಬರುತ್ತಿದೆ? ಎನ್ನುವುದರ ಕುರಿತು ಸಂದೇಹಗಳನ್ನು ವ್ಯಕ್ತಪಡಿಸಿರುವುದಲ್ಲದೆ ರೈತರು ಜೀನ್ಸ್ ಧರಿಸಿದ್ದಾರೆ, ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದಾರೆ ಎಂದೆಲ್ಲಾ ವರದಿ ಮಾಡಿವೆ. ನನ್ನ ಪ್ರಕಾರ ಕೆಲವು ಮಾಧ್ಯಮಗಳು ರೈತ ಸಮುದಾಯವನ್ನು ಗ್ರಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಅವುಗಳ ಪ್ರಕಾರ ರೈತರು ನಿರಕ್ಷರಕುಕ್ಷಿಗಳು, ಅವರಿಗೆ ಇಂಗ್ಲೀಷ್ ಮಾತನಾಡಲು ಬರುವುದಿಲ್ಲ. ಬರಿಗಾಲಿನಲ್ಲಿ ನಡೆಯುತ್ತಾರೆ, ಹರಿದ ಬಟ್ಟೆಗಳನ್ನು ಧರಿಸುತ್ತಾರೆ. ಎಂತಹ ವಿಚಿತ್ರ ಪರಿಸ್ಥಿತಿಗೆ ನಮ್ಮ ಮಾಧ್ಯಮಗಳು ಬಂದು ನಿಂತಿವೆ.
    ಧರಣಿನಿರತರಲ್ಲಿ ಕೆಲವರು ಜೀನ್ಸ್ ಪ್ಯಾಂಟ್ ಹಾಕಿದ ಮಾತ್ರಕ್ಕೆ, ಇಂಗ್ಲೀಷಿನಲ್ಲಿ ಸುಲಲಿತವಾಗಿ ಮಾತನಾಡುತ್ತಿದ್ದ ಮಾತ್ರಕ್ಕೆ ಅವರು ರೈತರಲ್ಲ ಎಂಬ ತೀರ್ಮಾನಕ್ಕೆ ಬರುವುದು ಎಷ್ಟು ಸರಿ?. ರೈತ ಎಂದ ಮಾತ್ರಕ್ಕೆ ಯೋಗ್ಯವಾದ ಬಟ್ಟೆಗಳನ್ನು ಧರಿಸುವಂತಿಲ್ಲವೆ? ರೈತರು ಶ್ರಮಪಟ್ಟು ಶಿಕ್ಷಣ ಪಡಿದಿದ್ದಾರೆ, ಅಂತಹದ್ದರಲ್ಲಿ ಅವರು ಇಂಗ್ಲೀಷಿನಲ್ಲಿ ಮಾತನಾಡಿದರೆ ಸಂದೇಹ ಪಟ್ಟರೆ ಹೇಗೆ? ರೈತರ ಕುರಿತಾದ ಕೆಲವು ಮಾಧ್ಯಮಗಳ ನಿರೂಪಣೆಯೇ ಸರಿಯಿಲ್ಲ. ಈ ರೀತಿಯ ಮಾಧ್ಯಮಗಳ ತಪ್ಪು ಕಲ್ಪನೆಗಳಿಗೆ ಕಾರಣಗಳೇನು? ಎಂಬುದನ್ನು ವಿಶ್ಲೇಷಣೆ ಮಾಡಬೇಕಾದ ಸಂದರ್ಭವಿದು.
    ಪ್ರತಿಭಟನೆಯಲ್ಲಿ ಪಾಲ್ಗೊಂಡವರನ್ನು ಯಾವುದೇ ಆಧಾರ ಮತ್ತು ಸಾಕ್ಷ್ಯಗಳಿಲ್ಲದೆ ಖಲಿಸ್ತಾನಿಗಳು ಹಾಗೂ ದೇಶ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟುವ ಕೆಲಸವನ್ನು ಕೆಲ ಮಾಧ್ಯಮಗಳು ಮಾಡುತ್ತಿವೆ ಎಂದು ಈಗಾಗಲೇ ಎಡಿಟರ್ಸ್ ಗಿಲ್ಡ್,, ಟ್ವಟರ್ ನಲ್ಲಿ ಬೇಸರ ವ್ಯಕ್ತಪಡಿಸಿದೆ. ಮುಂದುವರೆದು “ಇಂತಹ ವರದಿಗಾರಿಕೆ ಜವಾಬ್ದಾರಿಯುತ ಹಾಗೂ ನೈತಿಕ ಪತ್ರಿಕೋದ್ಯಮದ ಮೌಲ್ಯಗಳ ವಿರುದ್ದವಾಗಿದೆ” ಎಂದು ಹೇಳಿರುವ ಎಡಿಟರ್ಸ್ ಗಿಲ್ಡ್ ರೈತರ ಪ್ರತಿಭಟನೆಗಳ ಕುರಿತಂತೆ ಸಮತೋಲಿತ ಹಾಗೂ ನ್ಯಾಯೋಚಿತ ವರದಿಗಾರಿಕೆ ನಡೆಸುವಂತೆ ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ಸಲಹೆ ನೀಡಿದೆ.
    ಮೂಲತಃ ಇಂತಹ ತಪ್ಪು ಕಲ್ಪನೆಗಳಿಗೆ ಕಾರಣಗಳನ್ನು ಹುಡುಕಲು ಹೊರಟಾಗ ನಮಗೆ ಅನೇಕ ವಿಷಯಗಳು ಗಮನಕ್ಕೆ ಬರುತ್ತವೆ. ಕೃಷಿ ಹಿನ್ನೆಲೆಯಿಂದ ಬಂದಿರುವ ಪತ್ರಕರ್ತರುಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕೃಷಿ, ರೈತ ಹಾಗೂ ಗ್ರಾಮೀಣ ಪ್ರದೇಶಗಳು ಕುರಿತು ವರದಿ ಮಾಡುವ ಹೆಚ್ಚಿನ ಪತ್ರಕರ್ತರುಗಳಿಗೆ ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಮಾಧ್ಯಮಗಳ ವರದಿಗಾರರಿಗೆ ಇವುಗಳ ಗಂಧ ಗಾಳಿಯೇ ಇರುವುದಿಲ್ಲ. ಇವರಲ್ಲಿ ಹೆಚ್ಚಿನವರು ನಗರ ಪ್ರದೇಶಗಳಿಂದ, ಇಂಗ್ಲೀಷ್ ಶಾಲೆಗಳಿಂದ ಮತ್ತು ಉಳ್ಳವರು ಮನೆಗಳಿಂದ ಬಂದವರಾಗಿದ್ದಾರೆ. ಇಂತಹವರಿಗ ಕೃಷಿ ಕ್ಷೇತ್ರ ಸಮಸ್ಯೆಗಳು, ರೈತರ ಭವಣೆಗಳು, ಗ್ರಾಮೀಣರ ದುಃಖ-ದುಮ್ಮಾನಗಳ ಕಿಂಚಿತ್ತೂ ಪರಿಚಯವೇ ಇರುವುದಿಲ್ಲ. ಇಂತಹವರಿಂದ ಹೇಗೆ ಈ ಕ್ಷೆತ್ರಗಳ ಕುರಿತಾದ ಆಳವಾದ, ನಿಖರವಾದ, ವಸ್ತುನಿಷ್ಠವಾದ, ಪ್ರಾಯೋಗಿಕವಾದ ವರದಿಗಳನ್ನು ನಿರೀಕ್ಷಿಸಲು ಸಾಧ್ಯ?
    ಭಾರತದಲ್ಲಿ ಕೆಲವೇ ಕೆಲವು ಮಾಧ್ಯಮಗಳು ಕೃಷಿ ಪತ್ರಕರ್ತರನ್ನು ನೇಮಿಸಿಕೊಂಡಿವೆ. ಆದರೆ ಇಂತಹ ಕೃಷಿ ಪತ್ರಕರ್ತುರುಗಳೆಲ್ಲ ಕೃಷಿ ಹಿನ್ನೆಲೆಯಿಂದ ಬಂದವರಲ್ಲ ಅಥವಾ ಕೃಷಿಯ ಕುರಿತು ಪ್ರಾಯೋಗಿಕ ಅನುಭವಗಳಿಂದ ಕೂಡಿದವರಲ್ಲ. ಕೃಷಿ ಪತ್ರಕರ್ತರಿಗೆ ಅಥವಾ ಕೃಷಿ ಹಾಗೂ ಗ್ರಾಮೀಣ ಕ್ಷೇತ್ರಗಳ ಕುರಿತು ವರದಿ ಮಾಡುವವರು ಆ ಹಿನ್ನೆಲೆಯಿಂದಲೇ ಬರಬೇಕೆಂದೇನೂ ಇಲ್ಲ, ಅಧ್ಯಯನ ಮಾಡಿದ್ದರೆ ಸಾಕು ಎಂದು ಅಭಿಪ್ರಾಯಪಡುವವರು ಇದ್ದಾರೆ. ಇದನ್ನು ತಪ್ಪು ಎಂದು ಹೇಳುವುದಿಲ್ಲ. ಬದಲಾಗಿ ಆ ಪರಿಸ್ಥಿತಿಯ ಹಿನ್ನೆಲೆಯಿಂದ ಬಂದವರಿಗೂ, ಆ ಭವಣೆ, ಸಮಸ್ಯೆಗಳ ಮಧ್ಯದಿಂದಲೇ ಬಂದವರಿಗೆ ಇರುವ ಜ್ಞಾನ ಮತ್ತು ಅನುಭವಗಳಿಗೂ, ಕೇವಲ ಓದಿನಿಂದ ಪಡೆದ ಜ್ಞಾನಕ್ಕೂ ಅಜಗಜಾಂತರ ವೆತ್ಯಾಸವಿದೆ ಎಂಬುದನ್ನು ಮರೆಯಬಾರದು.
    ಪತ್ರಕರ್ತನಾದವನಿಗೆ ಎಲ್ಲಾ ವಿಷಯಗಳ, ಕ್ಷೇತ್ರಗಳ ಜ್ಞಾನ ಅವಶ್ಯಕ, ಎಂಬುದು ನಮ್ಮ ಪತ್ರಿಕೋದ್ಯಮ ಕಾಲೇಜುಗಳಲ್ಲಿ ಹಾಗೂ ವಿಶ್ವವಿದ್ಯಾನಿಲಯಗಳ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತು. ಒಂದು ರೀತಿಯಲ್ಲಿ ಇದು ನಿಜ. ಇಷ್ಟು ಜ್ಞಾನ ಸಾಮಾನ್ಯ ವರದಿಗಾರನಾಗುವವನಿಗೆ ಸಾಕು. ಆದರೆ ಕೃಷಿ, ವಿಜ್ಞಾನ, ವೈಧ್ಯಕೀಯ, ಅಭಿವೃದ್ದಿ ವಿಷಯಗಳನ್ನು ವರದಿ ಮಾಡುವ ವಿಶೇಷ ವರದಿಗಾರರಾಗುವವರಿಗೆ ಆಯಾ ವಿಷಯಗಳಲ್ಲಿ ಸಂಪೂರ್ಣವಾದ ತಿಳುವಳಿಕೆ ಇರಬೇಕಾದುದು ಅತ್ಯಾವಶ್ಯಕ. ಕೃಷಿ ಕ್ಷೇತ್ರಕ್ಕೇನೋ ಕೃಷಿ ಹಿನ್ನೆಲೆಯಿಂದ ಬಂದವರು ಹೆಚ್ಚು ಪರಿಣಾಮಕಾರಿಯಾಗಿ ಕೃಷಿ ವಿಷಯಗಳನ್ನು ವರದಿ ಮಾಡುತ್ತಾರೆ ಎನ್ನುವುದಾದರೆ, ವಿಜ್ಞಾನ ಮತ್ತು ವೈಧ್ಯಕೀಯ ವರದಿಗಾರರಿಗೆ ಯಾವ ಹಿನ್ನೆಲೆ ಇರುತ್ತದೆ? ಎಂಬ ಪ್ರಶ್ನೆ ಎದುರಾಗುವುದು ಸಹಜ. ವಿಜ್ಞಾನ ಮತ್ತು ವೈಧ್ಯಕೀಯ ಎರಡೂ ವಿಷಯಗಳು ನಮಗೆ ಓದಿನ ಜ್ಞಾನದಿಂದ ಬರುವಂತಹವುಗಳು, ಆದರೆ ಕೃಷಿಕನನ್ನು ಯಾವುದೇ ಕಾಲೇಜು ಸೃಷ್ಟಿಸಲು ಸಾಧ್ಯವಿಲ್ಲ. ಕೃಷಿ ಅನುಭವ ಮತ್ತು ಪ್ರಾಯೋಗಿಕ ಜ್ಞಾನದಿಂದ ಬರುವಂತಹದ್ದು. ಅದರೆ ಕೃಷಿಯಲ್ಲಿ ವೈಜ್ಞಾನಿಕ ಕ್ರಮಗಳ ಅಳವಡಿಕೆ ಪ್ರಗತಿ ಮತ್ತು ಅಭಿವೃದ್ದಿಗೆ ಮಾತ್ರ ಓದಿನ ಅಥವಾ ತರಬೇತಿಯ ಜ್ಞಾನ ಬೇಕಾಗುತ್ತದೆ ಎಂಬುದನ್ನು ಎಲ್ಲರೂ, ವಿಶೇಷವಾಗಿ ನಮ್ಮ ಮಾಧ್ಯಮ ಸಂಸ್ಥೆಗಳು ಅರಿತುಕೊಳ್ಳಬೇಕಾಗಿದೆ.
    ಜನವರಿ 26ರಂದು ದೇಶದ ಬಹುತೇಕ ಸುದ್ದಿ ಕೋಣೆಗಳು ತೀರಾ ಕಳವಳಕಾರಿಯಾಗಿ ನಡೆದುಕೊಂಡವು. ಪ್ರತಿಭಟನಾ ನಿರತ ರೈತರನ್ನು ದೇಶದ್ರೋಹಿಗಳಂತೆ ಬಿಂಬಿಸಲು ಪ್ರಯತ್ನಿಸಿದವು. ರೈತರ ಪ್ರತಿಭಟನೆಯ ಕುರಿತು ಎರಡು ತಿಂಗಳುಗಳ ನಿರಂತರ ಪ್ರತಿಭಟನೆಯ ಕುರಿತು ಚಕಾರವೆತ್ತದ ಕೆಲವು ಮಾಧ್ಯಮಗಳು ಇದ್ದಕ್ಕಿದ್ದಂತೆ ರೈತರನ್ನು ‘ಅತಿಕ್ರಮಿಗಳು’ ‘ಗೂಂಡಾಗಳು’ ಎಂದು ಪ್ರತಿಪಾದಿಸಿಬಿಟ್ಟವು. ಸುಶಾಂತ್ ಸಿಂಗ್ ಪ್ರಕರಣದ ವಿಚಾರಣೆಯ ವೇಳೆ ಮುಂಬೈ ಉಚ್ಚ ನ್ಯಾಯಾಲಯವು “ಮಾಧ್ಯಮಗಳು ನ್ಯಾಯಾಧೀಶರಂತೆ ವರ್ತಿಸಬಾರದು” ಎಂದು ಅಭಿಪ್ರಾಯಪಟ್ಟಿದೆ. ಈ ಅಭಿಪ್ರಾಯವು ರೈತರ ಪ್ರತಿಭಟನೆಯ ವಿಷಯಕ್ಕೂ ಅನ್ವಯಿಸುತ್ತದೆ. ಇದೆಲ್ಲಾ ನಮ್ಮ ಮಾಧ್ಯಮ ಸಂಸ್ಥೆಗಳಿಗೆ ಏಕೆ ಅರ್ಥವಾಗುತ್ತಿಲ್ಲ, ಎಂಬುದು ತಿಳಿಯುತ್ತಿಲ್ಲ.
    ಬಿಗ್ ಬ್ರೇಕಿಂಗ್ ನ್ಯೂಸ್, ನಮ್ಮದೇ ಮೊದಲು, ಶಾಕಿಂಗ್ ನ್ಯೂಸ್, ಇದೀಗ ಬಂದ ಸುದ್ದಿ ಎಂದೆಲ್ಲಾ ಬೊಬ್ಬೆಹೊಡೆದುಕೊಳ್ಳುವ, ಬೆಳಗ್ಗೆಯಿಂದ ರಾತ್ರಿವರೆಗೂ ಹೇಳಿದ್ದನ್ನೇ ಹೇಳುವ, ತೋರಿಸಿದ ದೃಶ್ಯಗಳನ್ನೇ ತೋರಿಸುವ ಕನ್ನಡದ ಕೆಲವು ಟಿ.ವಿ.ವಾಹಿನಿಗಳಿಗೆ ರೈತರ ಹೋರಾಟ ಬ್ರೇಕಿಂಗ್ ನ್ಯೂಸ್ ಆಗಲೀ ಅಥವಾ ರೈತರ ಕಣ್ಮರೆಯಾಗಲೀ ಅಥವಾ ರೈತರ ಸಾವಾಗಲೀ ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ. ಸುಪ್ರಿಂಕೋರ್ಟ್ ಕೂಡ “ಪ್ರತಿಭಟನೆ ಸಾಂವಿಧಾನಿಕ ಹಕ್ಕು, ರೈತರು ಶಾಂತಿಯಿಂದ ಪ್ರತಿಭಟನೆ ಮುಂದುವರೆಸಬಹುದು” ಎಂದು ಹೇಳಿದ್ದರೂ, ಕೆಲವು ಮಾಧ್ಯಮಗಳು ಮಾತ್ರ ಪ್ರತಿಭಟನೆಗೆ ತಣ್ಣೀರೆರಚುವ ಕಾರ್ಯಕ್ಕೆ ಮುಂದಾದದ್ದು ಹೊಣಗೇಡಿತನದ ಪರಮಾವಧಿಯಾಗಿದೆ.
    ರೈತರ ಪ್ರತಿಭಟನೆಯ ವಿಷಯ ವಿದೇಶಿ ಮಾಧ್ಯಮಗಳಾದ ಸಿಎನ್ಎನ್ ಮತ್ತು ಬಿಬಿಸಿಯಲ್ಲಿ ವರದಿಯಾಗುತ್ತಿದ್ದಾಗ ನಮ್ಮ ಕೆಲವು ಟಿ.ವಿ.ವಾಹಿನಿಗಳು ರಾಧಿಕಾ-ಯವರಾಜ್ ವ್ಯವಹಾರ, ಸಿನಿಮಾ ಜಗತ್ತಿನ ಅತೀ ರಂಜನೀಯ ವಿಷಯಗಳು ಹಾಗೂ ತಮಾಷೆಯ ಸುದ್ದಿಗಳನ್ನು ಪ್ರಸಾರ ಮಾಡುವುದರಲ್ಲಿ ತಲ್ಲೀನವಾಗಿದ್ದವು
    ಬೇರೆ ವಿಷಯಗಳು ಬಂದಾಗ ಮಾಧ್ಯಮಗಳು, ತಾವು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೆ ಅಂಗ ಎಂದು ಹೇಳಿಕೊಳ್ಳುತ್ತವೆ. ಆದರೆ ಪ್ರಜಾಪ್ರಭುತ್ವದ ಎಲ್ಲಾ ಮೌಲ್ಯಗಳನ್ನು ಗಾಳಿಗೆ ತೂರಲು ಹೊರಟಿರುವುದು ಅವುಗಳಿಗೆ ಏಕೆ ಗಮನಕ್ಕೆ ಬರುತ್ತಿಲ್ಲ? ಎಂಬುದು ಪ್ರಶ್ನೆಯಾಗಿಯೆ ಉಳಿದಿದೆ.
    ###
    -ಡಾ.ಅಮ್ಮಸಂದ್ರ ಸುರೇಶ್
    ಮಾಧ್ಯಮ ವಿಶ್ಲೇಷಕರು ಮತ್ತು ಹವ್ಯಾಸಿ ಹಿರಿಯ ಅಭಿವೃದ್ದಿ ಪತ್ರಕರ್ತರು
    ಮೊಬೈಲ್ : 9448402346

    The post ಮಾಧ್ಯಮ ಲೋಕ-೦೨ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) appeared first on Karnataka Kahale.

    ]]>