The post ನಾಟಕ ಸಮಾಜದ ಪ್ರತಿಬಿಂಬ -ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ appeared first on Karnataka Kahale.
]]>ಭರಮಸಾಗರ(ಚಿತ್ರದುರ್ಗ), ಮಾ. 21: ಸಮಾಜದ ಪ್ರತಿಬಿಂಬವಾಗಿರುವ ನಾಟಕ ಸಾಹಿತ್ಯ, ಸಂಗೀತ ಮತ್ತು ಅಭಿನಯದ ಸಂಗಮ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ನಿರ್ದೇಶಕ, ಸಾಹಿತಿ ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಅಭಿಪ್ರಾಯಪಟ್ಟರು.
ಪಟ್ಟಣ ಸಮೀಪದ ನೆಲ್ಲಿಕಟ್ಟೆ ಗ್ರಾಮದಲ್ಲಿ ಏರ್ಪಡಿಸಿದ್ದ ‘ಪ್ರೀತಿಯ ಹೃದಯಕ್ಕೆ ಪ್ರೇಮದ ಸಿಡಿಲು’ ಎಂಬ ಸಾಮಾಜಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೆಲ್ಲಿಕಟ್ಟೆ ಗ್ರಾಮದ ಯುವಕರು ನಾಟಕದ ಪಾತ್ರಧಾರಿಗಳು ಆಗಿ ಅಭಿನಯಿಸಿರುವುದಕ್ಕೆ ಅಭಿನಂದನೆಗಳು ಸಲ್ಲಿಸಿ ನಾಟಕಗಳನ್ನು ಅಭಿನಯಿಸುವ ಮೂಲಕ ಗ್ರಾಮದಲ್ಲಿ ಸಾಮರಸ್ಯ ಮತ್ತು ಸೌಹಾರ್ದತೆ ಕಾಪಾಡಲು ಸಾಧ್ಯ ಎಂದು ಹೇಳಿದರು.
ನೆಲ್ಲಿಕಟ್ಟೆ ಗ್ರಾಮ ಕಲೆ ಸಾಹಿತ್ಯ ಸಂಗೀತದ ತಾಣ. ಈ ಊರಿಗೆ ಅಪೂರ್ವವಾದ ಇತಿಹಾಸವಿದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಜಿ.ಶೇಖರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್, ನಿರಂಜನ ಮೂರ್ತಿ, ಜಯಪ್ಪ, ಟಿ. ಎಸ್ ಗುರುಮೂರ್ತಿ, ರುದ್ರಣ್ಣ, ಚೌಡಪ್ಪ ಮೊದಲದವರು ಉಪಸ್ಥಿತರಿದ್ದರು.
ಡಾ ಸಿ ಎಂ.ನಾಗವೇಣಿ ನಿರೂಪಿಸಿದರು. ನಾಟಕದ ವ್ಯವಸ್ಥಾಪಕ ಕೆ.ಟಿ. ನಾಗರಾಜ್ ಸ್ವಾಗತಿಸಿದರು . ಶರಣಪ್ಪ ವಂದಿಸಿದರು.
ನೆಲಗತಲಹಟ್ಟಿ ದೊಡ್ಡ ಬೋರಯ್ಯ ಮತ್ತು ಸಂಗಡಿಗರು ವಾದ್ಯ ವೃಂದ ನಿರ್ವಹಿಸಿದರು.
The post ನಾಟಕ ಸಮಾಜದ ಪ್ರತಿಬಿಂಬ -ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ appeared first on Karnataka Kahale.
]]>The post ರಂಗಭೂಮಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಪರಿಗಣಿಸಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.
]]>
ಬೆಂಗಳೂರು, ಫೆ. 21: ರಂಗಭೂಮಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಪರಿಗಣಿಸಲಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಅವರು ಶನಿವಾರ ನಟರಂಗ, ಬೆನಕ, ಸಮುದಾಯ, ಸ್ಪಂದನ, ಕಲಾಗಂಗೋತ್ರಿ ಹಾಗೂ ರಂಗಸಂಪದ ನಾಟಕ ತಂಡಗಳ ಸುವರ್ಣ ಮಹೋತ್ಸವದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಹೊನ್ನಾರು ರಂಗೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನಿಂದ 26 ರ ವರೆಗೆ ಕಲಾಸಕ್ತರಿಗೆ ನಾಟಕಗಳನ್ನು ವೀಕ್ಷಿಸುವ ಸದವಕಾಶ ದೊರೆತಿದೆ. ನಾಟಕ ತಂಡಗಳು ಐವತ್ತು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಹಮ್ಮಿಕೊಂಡಿರುವ ರಂಗೋತ್ಸವ ಅತ್ಯಂತ ಸೂಕ್ತವಾಗಿದೆ ಎಂದರು.
ಉಮಾಶ್ರೀ, ಪ್ರಕಾಶ್ ರಾಜ್ ಸೇರಿದಂತೆ ಬಹುತೇಕ ರಂಗಭೂಮಿಕಲಾವಿದರು ಚಲನಚಿತ್ರ ಕ್ಷೇತ್ರದಲ್ಲಿ ಬೆಳೆದಿದ್ದಾರೆ. ನಟನೆ ಎಲ್ಲರಿಗೂ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಸಂದೇಶಗಳುಳ್ಳ ಸಿನಿಮಾಗಳು ವಿರಳ: ಹಿಂದಿನ ಕಾಲದ ಸಿನಿಮಾಗಳಲ್ಲಿ ಸಂದೇಶಗಳಿರುತ್ತಿತ್ತು. ಇಂದಿನ ಸಿನಿಮಾಗಳಲ್ಲಿ ಸಮಾಜಕ್ಕೆ ಸಂದೇಶಗಳುಳ್ಳ ಸಿನಿಮಾಗಳು ವಿರಳ ಅಥವಾ ಇಲ್ಲವೇ ಇಲ್ಲ ಎಂಬಂತಾಗಿದೆ ಎಂದರು.
ರಂಗಭೂಮಿ ಹಿನ್ನೆಲೆಯ ಕಲಾವಿದರು ಹೆಚ್ಚು ಪಳಗಿರುತ್ತಾರಲ್ಲದೆ ಜನಪ್ರಿಯರೂ ಆಗಿರುತ್ತಾರೆ ಎಂದರು.
ವಿಧಾನ ಪರಿಷತ್ ಸದಸ್ಯೆ ಹಾಗೂ ಹಿರಿಯ ಕಲಾವಿದೆ ಉಮಾಶ್ರೀ, ಚಿತ್ರನಟರಾದ ಮುಖ್ಯಮಂತ್ರಿ ಚಂದ್ರು, ಪ್ರಕಾಶ್ ರಾಜ್, ಹಿರಿಯ ಕಲಾವಿದರಾದ ದತ್ತಣ್ಣ, ಗಿರಿಜಾ ಲೋಕೇಶ್, ನಟ, ನಿರ್ದೇಶಕ ಟಿ. ಎಸ್ ನಾಗಾಭರಣ, ಹೊನ್ನಾರು ರಂಗೋತ್ಸವ ಸಂಚಾಲಕರಾದ ಶ್ರೀನಿವಾಸ ಜಿ. ಕಪ್ಪಣ್ಣ ಮೊದಲಾದವರು ಉಪಸ್ಥಿತರಿದ್ದರು.
The post ರಂಗಭೂಮಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಪರಿಗಣಿಸಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.
]]>The post ನಾ ನೋಡಿದ ಚಿತ್ರ: ಲ್ಯಾಂಡ್ ಲಾರ್ಡ್, ಚಿತ್ರ ವಿಮರ್ಶೆ: ಸಿದ್ದರಾಮ ತಳವಾರ, ಕಿತ್ತೂರು appeared first on Karnataka Kahale.
]]>
ಉಳುವವನೇ ಭೂಮಿ ಒಡೆಯ ಕಾನೂನು ಸುತ್ತ ಹೆಣೆದ ಕಥೆ ಕಾಟೇರ ಸಿನಿಮಾ ಆಗಿ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಅಚ್ಚೊತ್ತಿದ ಬೆನ್ನಲ್ಲೇ ‘ಲ್ಯಾಂಡ್ ಲಾರ್ಡ್’ ಕೂಡ ಇದೇ ಮಾದರಿಯ ಕಥಾಹಂದರ ಹೊಂದಿರಬಹುದು ಅಂಥ ಟ್ರೈಲರ್ ನೋಡಿದಾಗಲೇ ಚಿತ್ರರಸಿಕರು ಅಂದಾಜಿಸಿದ್ದರು. ಈ ದಿನ ಚಿತ್ರ ನೋಡಿದಾಗ ಬಹುಶಃ ಅವರ ಅನಿಸಿಕೆ ಸುಳ್ಳಾಗಲಿಲ್ಲ ಅಂತ ಅನ್ನಿಸಿದೆ.
ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವೇ ‘ಲ್ಯಾಂಡ್ ಲಾರ್ಡ್’ ಚಿತ್ರದ ಮುಖ್ಯ ಕಥಾವಸ್ತು. ತುಂಡು ನೆಲಕ್ಕಾಗಿ ಧಣಿಗಳ ಮನೆಯ ಜೀತ ಮಾಡಿಯೇ ಜೀವ ಸವೆಸಿದ ಕೂಲಿಯೊಬ್ಬನ ಕೊನೆಯ ಆಸೆಯಂತೆ ಸತ್ತ ಕೂಲಿಯ ಹೆಂಡತಿ ಮಗ ಧಣಿಯನ್ನು ಅಂಗಲಾಚಿ ಬೇಡುವ ಮತ್ತು ಧಣಿ ತುಂಡು ನೆಲ ಕೊಡಲು ನಿರಾಕರಿಸುವ ದೃಶ್ಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಅಪ್ಪನ ಶವಕ್ಕಿಟ್ಟ ಬೆಂಕಿ ತುಂಡು ನೆಲ ಪಡೆದೇ ತೀರುವ ಛಲದ ಸಂಕೇತದಂತೆ ತೋರುತ್ತದೆ.
ತುತ್ತು ಅನ್ನಕ್ಕೆ ಕೈ ಚಾಚುವವರೆಲ್ಲ ಜಮೀನ್ದಾರರಾದರೆ ಕೈ ಚಾಚಿ ಕೂಲಿಗೆ ನಿಲ್ಲೋರು ಯಾರು ಕೂಲಿಯವರು ಕೂಲಿಯಾಗಿಯೇ ಸಾಯಬೇಕು ಅನ್ನೋ ಹಠಕ್ಕೆ ಬಿದ್ದ ಧಣಿಯರು ತುಂಡು ನೆಲವೂ ದಕ್ಕದಂತೆ ಏನೆಲ್ಲ ಮಾಡುತ್ತಾರೆ ತುಂಡು ನೆಲಕ್ಕಾಗಿ ಕೂಲಿಯವರು ಏನೇನೆಲ್ಲ ಮಾಡುತ್ತಾರೆ ಅನ್ನೋದು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು.
ಚಿತ್ರನಾಯಕ ದುನಿಯಾ ವಿಜಯ್ (ಕೊಡ್ಲಿ ರಾಚಯ್ಯ), ರಚಿತಾ ರಾಮ್ (ನಿಂಗವ್ವ) ಉಮಾಶ್ರೀ ತಾಯಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನೆಗೆಟಿವ್ ಶೇಡ್ ನಲ್ಲಿ ರಾಜ್ ಬಿ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ದುನಿಯಾ ವಿಜಯ್ ಅವರ ಪುತ್ರಿ ರಿತನ್ಯಾ ವಿಜಯ್ ನಟನೆ ಶ್ಲಾಘನೀಯ. ಅಜನೀಶ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಜೀವ ತುಂಬಿದೆ. ವಿಜಯ ಪ್ರಕಾಶ ಅನನ್ಯ ಭಟ್ ಧ್ವನಿ ಸೊಗಸಾಗಿದೆ. ಜಡೇಶ ಕೆ ಹಂಪಿ ಅವರ ನಿರ್ದೇಶನದ ಚಿತ್ರ ಈ ವರ್ಷದ ಸೂಪರ್ ಹಿಟ್ ಅಂದರೆ ತಪ್ಪಾಗಲಾರದು.
“ಇಲ್ಲಿ ನಡೀಬೇಕಿರೋದು ಸಂಧಾನ ಅಲ್ಲ ಸಂವಿಧಾನ”
ಅನ್ನೋ ಸಂಭಾಷಣೆಗೆ ಥಿಯೇಟರ್ ನಲ್ಲಿ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯೇ ಸುರಿಯುತ್ತದೆ.
“ಖಾಕಿ ಸೀರೆಗೆ ಬರಿ ಬೆರಗಿರಲ್ಲ ಮೆರಗಿರ್ತದೆ”
“ಎಲ್ರೂ ಬಸವಿ ಆಗಲ್ಲ
ನೆನಪಿಟ್ಕೊಳ್ಳೋ ಇಸವಿ ಆಗ್ತಾರೆ”
ಈ ತರಹದ ಸಂಭಾಷಣೆಯೇ ಚಿತ್ರದ ಜೀವಾಳ ಅಂದ್ರೆ ತಪ್ಪಾಗಲ್ಲ. ಇಡೀ ಚಿತ್ರದಲ್ಲಿ ಮಾಸ್ತಿ ಅವರ ಸಂಭಾಷಣೆ ಪ್ರೇಕ್ಷಕನಲ್ಲಿ ಹೊಸ ಹುರುಪು ತುಂಬುತ್ತದೆ. ಕೊನೆಯಲ್ಲಿ
“ಮಳೆ ಬಂದ್ರೆ ಭೂಮಿಗೆ ಸಮಾಧಾನ
ಸಂವಿಧಾನ ಬಂದ್ರೆ ನಮಗೆಲ್ಲ ಸಮಾಧಾನ” ಅನ್ನೋ ಸಂಭಾಷಣೆ ನಾಯಕನ ಬಾಯಲ್ಲಿ ಬಂದಾಗಲಂತೂ ಗೊತ್ತಿಲ್ಲದೇ ಕೈಗಳು ಚಪ್ಪಾಳೆ ತಟ್ಟಿದವು.
ಒಟ್ಟಾರೆ ‘ ಲ್ಯಾಂಡ್ ಲಾರ್ಡ್’ ಈ ವರ್ಷದ ಸೂಪರ್ ಹಿಟ್ ಚಿತ್ರ ಒಂದ್ಸಲ ನೋಡಿ ಖುಷಿಪಡಿ.

-ಸಿದ್ದರಾಮ ತಳವಾರ, ಕಿತ್ತೂರು, ಬೆಳಗಾವಿ ಜಿ.
The post ನಾ ನೋಡಿದ ಚಿತ್ರ: ಲ್ಯಾಂಡ್ ಲಾರ್ಡ್, ಚಿತ್ರ ವಿಮರ್ಶೆ: ಸಿದ್ದರಾಮ ತಳವಾರ, ಕಿತ್ತೂರು appeared first on Karnataka Kahale.
]]>The post ಮೈಸೂರು ವಿವಿ ಡಾಕ್ಟರೇಟ್ ಪಡೆದ ಪತ್ರಕರ್ತೆ ನಂದಿನಿ ಕೆ.ಎಲ್. appeared first on Karnataka Kahale.
]]>‘ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಖ್ಯಾತ ನಟ ಡಾ.ಅಂಬರೀಶ್ ಅವರ ಕೊಡುಗೆ ಒಂದು ಅಧ್ಯಯನ’ ವಿಷಯದ ಬಗ್ಗೆ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಎನ್ ಮಮತಾ ಅವರ ಮಾರ್ಗದರ್ಶನದಲ್ಲಿ ನಂದಿನಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಈ ಡಾಕ್ಟರೇಟ್ ಸಿಕ್ಕಿದೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 106ನೇ ಘಟಿಕೋತ್ಸವದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ್ ಪಿ.ಹೆಚ್ ಡಿ ಪದವಿ ಪ್ರದಾನ ಮಾಡಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಮತ್ತು ಉಪಕುಲಪತಿಗಳು ರಿಜಿಸ್ಟರ್ ಹಾಗು ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಘಟಿಕೋತ್ಸವದಲ್ಲಿ ಹಾಜರಿದ್ದರು.
ವಿಜಯ ಕರ್ನಾಟಕದ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಂದಿನಿ ಕೆ.ಎಲ್, ವೃತ್ತಿಯ ಜೊತೆ ಜೊತೆಗೆ ಸಂಶೋಧನೆಯನ್ನೂ ಕೈಗೊಂಡಿದ್ದರು. ನಂತರ ತಮ್ಮದೇ ಆದ ಡಿಜಿಟಲ್ ಮಾಧ್ಯಮ ಸಂಸ್ಥೆಯನ್ನು ಶುರು ಮಾಡಿ, ಅಪರೂಪದ ಸಂಚಿಕೆಗಳನ್ನು ನಾಡಿಗೆ ಪರಿಚಯಿಸಿದ್ದಾರೆ. ಅನೇಕ ಸಾಧಕರ ಸಂದರ್ಶನಗಳನ್ನೂ ಮಾಡಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ, ನಾಡಿನ ಅಚ್ಚರಿಗಳನ್ನು ಜನರಿಗೆ ಪರಿಚಯಿಸಿದ ಕೀರ್ತಿ ನಂದಿನಿ ಅವರದ್ದು.
ಪರಿಚಯ: ಹಾಸನದ ಆಲೂರಿನ ಕಿತಬೂರಿನ ಪುಟ್ಟ ಗ್ರಾಮದ ಅಪ್ಪಟ ಮಲೆನಾಡಿನ ಹಳ್ಳಿ ಪ್ರತಿಭೆ ನಂದಿನಿ. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದಿ ಸೈನಿಸಿಕೊಂಡ ಹೆಣ್ಣು ಮಗಳು.
ಕಾಲೇಜಿನ ದಿನಗಳಿಂದಲೇ ಓದಿನ ಜೊತೆ ಜೊತೆಗೆ ಹಲವಾರು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತ ಪತ್ರಿಕೋದ್ಯಮದ ಗೀಳು ಹೆಚ್ಚಿಸಿಕೊಂಡವರು.
ಹೆಸರಾಂತ ಪತ್ರಿಕೆಯಲ್ಲಿ ಸಿನಿಮಾ ಪತ್ರಕರ್ತೆಯಾಗಿ ಹಲವು ವರ್ಷಗಳ ಕಾರ್ಯ ನಿರ್ವಹಿಸುತ್ತಾ ಜೊತೆ ಜೊತೆಗೆ ಸಂಶೋಧನೆಯನ್ನು ಕೈಗೊಂಡರು.
ವಿದ್ಯಾಭ್ಯಾಸ ಜೊತೆಗೆ ಹೊಸ ತನ್ನದೇ ಆದಂತ ಡಿಜಿಟಲ್ ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿ, ಕರ್ನಾಟಕದ ಅತ್ಯಂತ ಪ್ರವಾಸ ಕೈಗೊಂಡು ಇತಿಹಾಸ ವ್ಯಕ್ತಿ ವಸ್ತು ಸ್ಥಳ ಸ್ಮಾರಕ ಜನಜೀವನಶೈಲಿಗಳ ಪರಿಚಯವನ್ನು ಕರುನಾಡಿಗೆ ಪರಿಚಯಿಸುತ್ತಾ ಸಾಕಷ್ಟು ಜನ ಮನ್ನಣೆಯನ್ನು ಗಳಿಸಿ ಕೊಂಡಿದ್ದಾರೆ.
ಶಿಕ್ಷಣ, ಕುಟುಂಬ, ವೈವಾಹಿಕ ಜೀವನ, ವೃತ್ತಿಜೀವನ ಎಲ್ಲವನ್ನು ಸಮಯ ಪಾಲನೆಯಿಂದ ನಿರ್ವಹಿಸುವ ನಂದಿನಿದ, ತಮ್ಮ ಪತಿ ಆಕರ್ಷ ಹರಳಕಟ್ಟ ಅವರ ಜೊತೆಗೂಡಿ ಡಿಜಿಟಲ್ ಮಾಧ್ಯಮ ಸಂಸ್ಥೆ ನಡೆಸುತ್ತಿದ್ದಾರೆ.

ಅಭಿನಂದನೆ: ಹಾಸನ ಜಿಲ್ಲೆ ಆಲೂರು ತಾಲೂಕಿನ ಕುಗ್ರಾಮದಿಂದ ಬೆಳೆದು ಬಂದ ನಂದಿನಿ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿ ಸದ್ಯ ಅವರದೇ ಸಂಸ್ಥೆ ಕಟ್ಟಿಕೊಂಡಿದ್ದಾರೆ. ಅವರು ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿವಿ ಡಾಕ್ಟರೇಟ್ ದೊರೆತಿರುವುದಕ್ಕಾಗಿ ನಂದಿನಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಅಭಿನಂದಿಸಿದ್ದಾರೆ.
The post ಮೈಸೂರು ವಿವಿ ಡಾಕ್ಟರೇಟ್ ಪಡೆದ ಪತ್ರಕರ್ತೆ ನಂದಿನಿ ಕೆ.ಎಲ್. appeared first on Karnataka Kahale.
]]>The post ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ: ಸಾಧನೆ ಹಾದಿಯಲ್ಲಿರುವಾಗ ಪ್ರಶಸ್ತಿ ಅಪೇಕ್ಷೆ ಸಲ್ಲ -ಹಿರಿಯ ರಂಗಕರ್ಮಿ ಡಾ.ಶಿವಕುಮಾರ್ ತಾತ ಕಿವಿಮಾತು appeared first on Karnataka Kahale.
]]>ಬಳ್ಳಾರಿ, ಡಿ.3: ಸಾಧನೆ ಮಾಡಬೇಕಾದರೆ ಯಾವುದೇ ಪ್ರಶಸ್ತಿಯನ್ನು ಆಶಿಸಬಾರದು ಎಂದು ಹಿರಿಯ ರಂಗಕರ್ಮಿ, ಕಾರಂತ ರತ್ನ ರಂಗ ಪ್ರಶಸ್ತಿ ಪುರಸ್ಕೃತರಾದ ಡಾ.ಶಿವಕುಮಾರ್ ತಾತ ಅವರು ಕಿವಿಮಾತು ಹೇಳಿದರು.
ನಗರದ ಕನ್ನಡಭವನದಲ್ಲಿ ಆಯೋಜಿಸಲಾಗಿದ್ದ ’ಕಾರಂತ ರಂಗಲೋಕ ಸಂಸ್ಥೆ ಪ್ರತಿವರ್ಷ ನಾಟಕ ಕೃತಿಗಳಿಗೆ ಕೊಡಮಾಡುವ ’ಕಾರಂತ ಸಾಹಿತ್ಯ ರತ್ನ’ ರಾಜ್ಯ ಮಟ್ಟದ ಪುಸ್ತಕ ಪ್ರಶಸ್ತಿಗೆ ೫ ಹಾಗೂ ರಂಗ ಸಾಧಕರ ರಂಗಭೂಮಿ ಸಾಧನೆಗಾಗಿ ನೀಡಲಾಗುವ ’ಕಾರಂತ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಳ್ಳಿಯಲ್ಲಿಯೇ ಇದ್ದುಕೊಂಡು ಅನೇಕ ಮಕ್ಕಳಿಗೆ ನಾಟಕ ಕಲೆ ಅಭ್ಯಾಸ ಮಾಡಿಸುತ್ತಾ ಬಂದಿದ್ದು, ಈಗಾಗಲೇ ನನಗೆ ಹಲವು ಪ್ರಶಸ್ತಿಗಳು ಬಂದಿವೆ. ಈಗಲೂ ಕೆಲವರು ಕರೆ ಮಾಡಿ ನಿಮ್ಮ ಸಾಧನೆ ಏನು ಎಂದು ಕೇಳುತ್ತಾರೆ. ನನ್ನ ಸಾಧನೆ ಕೇಳಿದರೆ ಅಚ್ಚರಿ ಪಡುತ್ತೀರಿ ಎಂದು ಹೇಳಿದರಲ್ಲದೆ, ಹಲವು ವರ್ಷಗಳಿಂದ ಮಂಜುನಾಥ್ ಕತ್ತಲೆಯಲ್ಲಿ ಪಂಜಿನಂತೆ ಸೇವೆ ಸಲ್ಲಿಸುತ್ತಿದ್ದಾರೆ. ಮೂಲೆ ಮೂಲೆಯಿಂದ ಕಲಾವಿದರನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯ ಹೀಗೆ ಸಾಗಲಿ ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಶಿವನಾಯಕ ದೊರೆ ಮಾತನಾಡಿ, ಕಾರಂತರಂಗಲೋಕ ಸಂಸ್ಥೆಯ ಕೆಲಸ ಶ್ಲಾಘನೀಯ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವುದು ನೋಡಿದರೆ ಸಂಸ್ಥೆಯವರಿಗೆ ಕಲೆಯ ಮೇಲಿನ ಪ್ರೀತಿ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದರು.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ನಮ್ಮ ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಗಿದೆ. ಇದರಿಂದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಆರ್.ಪಿ.ಮಂಜುನಾಥ್, ಇಂದು ಪ್ರಶಸ್ತಿಗಳನ್ನು ಹಣಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಹೆಚ್ಚಾಗಿದೆ. ಯಾರ ಬಳಿ ಹಣವಿರುತ್ತದೆಯೋ ಅಂತಹವರಿಗೆ ಪ್ರಶಸ್ತಿಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಯಾವುದೇ ಹಣಕ್ಕೆ ಅಪೇಕ್ಷೆ ಪಡದೆ, ಕಲಾವಿದರನ್ನು ಗುರುತಿಸಿ ಅಂತವರಿಗೆ ರಾಜ್ಯ ಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ, ಹಾಗೂ ಕಾರಂತ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುವ ಕೆಲಸ ಮಾಡುತ್ತಿದ್ದೇವೆ. ಈ ವರ್ಷ ನಾಲ್ಕನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಇದಾಗಿದೆ ಎಂದು ಹೇಳಿದರು.
ರಾಜ್ಯಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿಗೆ ಒಟ್ಟು ೨೨ ನಾಟಕ ಕೃತಿಗಳು ಬಂದಿದ್ದು, ಇದರಲ್ಲಿ ನಮ್ಮೊಳಗೊಬ್ಬ ಶರಣ (ರಾಘವೇಂದ್ರ ಹಳಿಪೇಟಿ), ಶೃಂಗಾರದ ಅರಮನೆಗೆ ಬಂಗಾರದ ಒಡತಿ (ಯಮುನಪ್ಪ ಅಂಗಡಗೇರಿ), ಕಲ್ಯಾಣ ಕ್ರಾಂತಿ (ಮಲ್ಲೇಶ ಬಿ ಕೋನಾಳ), ವಿಶ್ವಕವಿ ರವೀಂದ್ರನಾಥ ಒಂದು ರಂಗದರ್ಶನ (ಡಾ.ಗೀತಾ ಸೀತಾರಾಮ್), ಶರಣ ಪ್ರಭೆ (ಮುದೇನೂರು ಉಮಾಮಹೇಶ್ವರ) ಪುಸ್ತಕಗಳನ್ನು ಆಯ್ಕೆ ಮಾಡಿದ್ದು, ಇವರಿಗೆ ರಾಜ್ಯಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಲ್ಲದೆ ಜಿಲ್ಲಾ ಮಟ್ಟದ ’ಕಾರಂತ ರತ್ನ’ ರಂಗ ಪ್ರಶಸ್ತಿಯನ್ನು ಬಿ.ಕೃಷ್ಣಪ್ಪಾಚಾರಿ ಸಿರುಗುಪ್ಪ (ಬಯಲಾಟ ವೇಷಭೂಷಣ), ಎ.ಮಾರೆಪ್ಪ ಕಲ್ಲಕಂಭ (ಹಾರ್ಮೋನಿಯಂ ಮೇಷ್ಟ್ರು), ವಾಲ್ಮೀಕಿ ಈರಣ್ಣ ಕಂಪ್ಲಿ (ಬಯಲಾಟ ಮುಮ್ಮೇಳ ಗಾಯಕ), ಪುರುಷೋತ್ತಮ ಹಂದ್ಯಾಳು (ರಂಗಭೂಮಿ ನಟನೆ), ಟಿ.ಎ.ಕುಬೇರ (ರಂಗಭೂಮಿ ನಟನೆ) ರವರಿಗೆ ಪ್ರದಾನ ಮಾಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಭಾಗವಾಗಿ ಕನ್ನಡ ರಂಗಭೂಮಿಯಲ್ಲಿ ರಂಗ ಸಂಗೀತದ ಅವಲೋಕನ ಎಂಬ ವಿಷಯದ ಕುರಿತು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ನಾಟಕ ವಿಭಾಗದ ಉಪನ್ಯಾಸಕ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೇಂಧ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಡಾ.ಕೆ.ಶಿವಲಿಂಗಪ್ಪ ಹಂದ್ಯಾಳು, ಕರ್ನಾಟಕ ಲಲಿತ ಕಲಾ ಅಕಾಡೆಮಿ ವರ್ಣಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ್ ಗೋವಿಂದವಾಡ, ಗೌರಿ ಹಳ್ಳಿಮನೆ ಹೋಟೆಲ್ ಮಾಲೀಕರಾದ ಶ್ರೀಧರಗಡ್ಡೆ ದೊಡ್ಡಬಸಪ್ಪ, ಶಿಕ್ಷಕ ಗಾದಿಲಿಂಗಪ್ಪ ತಾಳೂರು, ವಿಶ್ವನಾಥ ಸಾಹುಕಾರ್, ಆರ್.ಪಿ.ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.
The post ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ: ಸಾಧನೆ ಹಾದಿಯಲ್ಲಿರುವಾಗ ಪ್ರಶಸ್ತಿ ಅಪೇಕ್ಷೆ ಸಲ್ಲ -ಹಿರಿಯ ರಂಗಕರ್ಮಿ ಡಾ.ಶಿವಕುಮಾರ್ ತಾತ ಕಿವಿಮಾತು appeared first on Karnataka Kahale.
]]>The post ದರೂರಿನಲ್ಲಿ ಶ್ರಾವಣ ಸಾಂಸ್ಕೃತಿಕ ಸಂಭ್ರಮ 2025:ಗ್ರಾಮೀಣ ಕಲೆ ಉಳಿಸಿ ಬೆಳೆಸಲು ಸಾಂಸ್ಕೃತಿಕ ಕಲೆಗಳ ಪ್ರದರ್ಶನ ಸಹಕಾರಿ – ಶ್ರೀ ಸಂಗನ ಬಸವೇಶ್ವರ ಸ್ವಾಮೀಜಿ appeared first on Karnataka Kahale.
]]>

ಅತಿಥಿಗಳಾಗಿ ಭಾಗವಹಿಸಿದ್ದ ತುಂಗಭದ್ರ ರೈತ ಸಂಘದ ಅಧಕ್ಷ ಡಾ. ದರೂರು ಪುರುಷೋತ್ತಮಗೌಡ ಮಾತನಾಡಿ, ಇತೀಚಿನ ದಿನಮಾನಗಳಲ್ಲಿ ಗ್ರಾಮೀಣ ಕಲೆಗಳಾದ ಗಂಡು ಮೆಟ್ಟಿನ ಕಲೆ ಬಯಲಾಟಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು.ಆ ನಿಟ್ಟಿನಲ್ಲಿ ಹಂದ್ಯಾಳು ಪುರುಷೋತ್ತಮ ಅವರು ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮ ನಡೆಯುವುದರಿಂದ ದಾರಿ ತಪ್ಪುಯತ್ತಿರುವ ಯುವ ಪೀಳಿಗೆಯನ್ನು ಸರಿ ದಾರಿಗೆ ಕರೆದಯ್ಯಲು ಅನುಕೂಲವಾಗುತ್ತದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯಬೇಕು. ಇದಕ್ಕೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು ಎಂದರು.
ಮಹಾದೇವತಾತಕಲಾಸಂಘದ ಅಧ್ಯಕ್ಷ ಪುರುಷೋತ್ತಮಹಂದ್ಯಾಳು, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ವನ್ನನಗೌಡರು, ತಾಲೂಕು ಉಪಾಧ್ಯಕ್ಷ ಜಾಲಿಹಾಳ್ ಶ್ರೀಧರ್ ಗೌಡ, ಕಗ್ಗಲ್ ಮಲ್ಲಾರೆಡ್ಡಿ, ಸಿರಿಗೇರಿ ಠಾಣೆ ಎಎಸ್‌ಐ ಅಂಕಲಯ್ಯ, ವೀರೇಶಯ್ಯ ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತಿತರಿದ್ದರು,
ಗಾದಿಲಿಂಗಪ್ಪ ಅಮರಾಪುರ, ಕುಮಾರಗೌಡ ಅವರು ಗೀತಾ ಗಾಯನ ಪ್ರಸ್ತುತ ಪಡಿಸಿದರು.
ಸಿಆರ್‌ಪಿ ಎ.ರ‍್ರಿಸ್ವಾಮಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಸಿ, ಜನರನ್ನು ನಗೆಗಡಲಲ್ಲಿ ತೇಲಿಸಿದರು. .
ನಂತರ ನಡೆದ ದಿ. ಶಂಕರ್ ನಾಯ್ಡು ರಚನೆಯ ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದ “ದನಕಾಯೋರ ದೂಡ್ಡಾಟ”ಹಾಸ್ಯಮಯ ಸಂದೇಶಾತ್ಮಕ ನಾಟಕ ಪ್ರದರ್ಶನ ನಡೆಯಿತು. ಸಾರಥಿ ಪಾತ್ರದಲ್ಲಿ ಪುರುಷೋತ್ತಮ ಹಂದ್ಯಾಳು,
ಗಣಪತಿ ಪಾತ್ರದಲ್ಲಿ ಬಿ. ಚಂದ್ರಶೇಖರ್ ಆಚಾರ್, ದುರ್ಯೋಧನ ಪಾತ್ರದಲ್ಲಿ ಅಂಬರೀಶ್ ಹಚ್ಚೊಳ್ಳಿ, ದುಶ್ಯಾಸನ ಪಾತ್ರದಲ್ಲಿ ಪಾರ್ವತೀಶ್ ಗೆಣಿಕೆಹಾಳ್, ದ್ರೌಪದಿ ಪಾತ್ರದಲ್ಲಿ ಮೌನೇಶ್ ಕಲ್ಲಳ್ಳಿ, ದಾನಯ್ಯ ಸ್ವಾಮಿ ಕುರುಗೋಡು, ಜಿ. ಲಿಂಗಪ್ಪ ಹಂದ್ಯಾಳು ಕರ್ಚೇಡ ಚಂದ್ರನಾಯಕ ಅವರು ಅಭಿನಯಿಸಿ ನೆರೆದಿದ್ದ ಜನಸ್ತೋಮವನ್ನು ನಗೆಗಡಲಲ್ಲಿ ತೇಲಿಸಿತು.
ಹೊನ್ನೂರಸ್ವಾಮಿ ಶಂಕರಬಂಡೆ ಹರ‍್ಮೋನಿಯಂ, ಗಾದಲಿಂಗಪ್ಪ ಅಮರಾಪುರ ಅವರು ಮದ್ದಲಿ ಸಾಥ್ ನೀಡಿದರು.
The post ದರೂರಿನಲ್ಲಿ ಶ್ರಾವಣ ಸಾಂಸ್ಕೃತಿಕ ಸಂಭ್ರಮ 2025:ಗ್ರಾಮೀಣ ಕಲೆ ಉಳಿಸಿ ಬೆಳೆಸಲು ಸಾಂಸ್ಕೃತಿಕ ಕಲೆಗಳ ಪ್ರದರ್ಶನ ಸಹಕಾರಿ – ಶ್ರೀ ಸಂಗನ ಬಸವೇಶ್ವರ ಸ್ವಾಮೀಜಿ appeared first on Karnataka Kahale.
]]>The post ಬಳ್ಳಾರಿ: ಜು 22 ರಂದು ಲೇಖಕ ಸಿದ್ಧರಾಮ ಕಲ್ಮಠ ಅವರ ಕರ್ಪೂರದ ಬೆಳಗು ನಾಟಕ ಕೃತಿ ಬಿಡುಗಡೆ appeared first on Karnataka Kahale.
]]>ಈ ಕಾರ್ಯಕ್ರಮದ ಸಾನಿಧ್ಯವನ್ನು ಮ.ನಿ.ಪ್ರ.ಶ್ರೀ ಕಲ್ಯಾಣ ಮಹಾಸ್ವಾಮಿಗಳು ವಹಿಸಲಿದ್ದು ವಿಧಾನ ಪರಿಷತ್ ಸದಸ್ಯರಾದ ವೈ ಎಂ ಸತೀಶ್ ಕಾರ್ಯಕ್ರಮ ಉದ್ಘಾಟಿಸುವರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಣೇಕಲ್ ಮಹಾಂತೇಶ್ ಅಧ್ಯಕ್ಷತೆ ವಹಿಸಲಿದ್ದಾರೆ . ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ನಾಟಕ ಕೃತಿ ಬಿಡುಗಡೆ ಮಾಡುವರು. ಡಾ. ಪಿ. ದಿವಾಕರ ನಾರಾಯಣ ಕೃತಿ ಕುರಿತು ಮಾತಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮರಿಸ್ವಾಮಿ ಮಠದ ಶ್ರೀ ವಾಗೀಶ ಶರ್ಮ ಹೀರದ ಸೂಗಮ್ಮ ಶಾಲೆಯ ಅಧ್ಯಕ್ಷ ಮೇಟಿ ಪಂಪನಗೌಡ, ಕುಡಿತಿನಿ ಸತ್ಸಂಗ ಆಶ್ರಮದ ಪಲ್ಲೇದ ಪಂಪಾಪತೆಪ್ಪ,ರಂಗ ತೋರಣ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ ಮತ್ತು ನಿವೃತ್ತ ಅಭಿಯಂತರ ಕೇಣಿ ಬಸಪ್ಪ, ಶರಣ ಸಕ್ಕರೆ ಕರಡೀಶ ಸೌಹಾರ್ದ ಪ.ಸೌ. ಸಹಕಾರ ಸಂಘದ ಅಧ್ಯಕ್ಷ ಕಲ್ಗುಡಿ ಮಂಜುನಾಥ, ಸಮಾಜಸೇವಕ ಜಿ. ಮಹಾಲಿಂಗಯ್ಯ ಮತ್ತು ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶ್ ಮಠಂ,
ಭಾಗವಹಿಸಲಿದ್ದಾರೆ. ಜಾನಪದ ಗಾರುಡಿಗ ಯಲ್ಲನಗೌಡ ಶಂಕರ ಬಂಡೆ ಮತ್ತು ಜಡೇಶ್ ಎಮ್ಮಿಗನೂರು ಇವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಲೇಖಕ ಸಿದ್ದರಾಮ ಕಲ್ಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The post ಬಳ್ಳಾರಿ: ಜು 22 ರಂದು ಲೇಖಕ ಸಿದ್ಧರಾಮ ಕಲ್ಮಠ ಅವರ ಕರ್ಪೂರದ ಬೆಳಗು ನಾಟಕ ಕೃತಿ ಬಿಡುಗಡೆ appeared first on Karnataka Kahale.
]]>The post ಬಣ್ಣದ ಬದುಕಿನಲ್ಲಿಯೇ ಬದುಕಿನ ಸಾಫಲ್ಯ ಸಾಧಿಸಿದ ‘ಕಲಾ ಸರಸ್ವತಿ’ ಬಿ.ಸರೋಜಾದೇವಿ ಅಕ್ಷರ ನಮನ: ಅನಿಲ್ ಕುಲಕರ್ಣಿ, ಹುಬ್ಬಳ್ಳಿ appeared first on Karnataka Kahale.
]]>
ಸಿನಿಮಾ ಎಂಬ ಗ್ಲಾಮರ್ ಪ್ರಪಂಚ ಹಣ, ಹೆಸರು ಕೀರ್ತಿ ಎಲ್ಲವನ್ನೂ ನೀಡುತ್ತದೆ. ಆದರೇ ಮಾನವೀಯತೆಯ ಮೌಲ್ಯವನ್ನೇ ಕಸಿದುಕೊಳ್ಳುತ್ತದೆ.
ಇದರ ವಿಷಚಕ್ರಕ್ಕೆ ಸಿಲುಕದೇ, ತಮ್ಮ ವ್ಯಕ್ತಿತ್ವವನ್ನು, ಸಾಮಾಜಿಕ ಮೌಲ್ಯಗಳನ್ನು, ಭದ್ರವಾಗಿ ಕಾಪಾಡಿಕೊಂಡು, ಮುಂದಿನ ಪೀಳಿಗೆಗೂ ಆದರ್ಶ ವ್ಯಕ್ತಿಗಳಾಗಿ ಬಾಳಿದ ಕೆಲವೇ ಕೆಲವು ಮಹಾನ್ ಕಲಾವಿದೆಯರಲ್ಲಿ ಬಿ. ಸರೋಜಾದೇವಿ ಅಗ್ರಗಣ್ಯರು.
ಸೌಂದರ್ಯದಲ್ಲಿ ಅಪ್ರತಿಮೆ. ಅಭಿನಯದಲ್ಲಿ ಸಾಕ್ಷಾತ್ ಸರಸ್ವತಿ. ನಡತೆಯಲ್ಲಿ ಸಾಕ್ಷಾತ್ ಅರುಂಧತಿ.
ಐವತ್ತು ವರ್ಷಗಳ ಕಾಲ ದಕ್ಷಿಣ ಭಾರತದ ಸಿನಿಮಾ ಪ್ರಪಂಚದ ಎವರ್ ಗ್ರೀನ್” ನಾಯಕಿಯಾಗಿ, ಎಂ. ಜೀ. ರಾಮಚಂದ್ರನ್, ಎನ್. ಟಿ. ಆರ್, ಡಾ. ರಾಜಕುಮಾರ್, ಶಿವಾಜಿ ಗಣೇಶನ್, ರಂತಹ “ಶಾಶ್ವತ ನಾಯಕರ ಜೊತೆ ಸರಿಸಾಟಿಯಾಗಿ ವಿಜೃಂಭಿಸಿದ ಏಕೈಕ ತಾರೆ ಬಿ. ಸರೋಜಾದೇವಿ.

ದಕ್ಷಿಣ ಚಿತ್ರರಂಗದಲ್ಲಿ ಪ್ರಥಮ ಬಾರಿಗೆ ಅತೀ ಹೆಚ್ಚು ಸಂಭಾವನೆ ಪಡೆದ ಶ್ರೀಮಂತ ನಟಿ. ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಕಥೆಗಳಿಗೆ ತನ್ನ ಕಲಾ ವೈಭವದಿಂದ ಚಿನ್ನದ ಹೊಳಪು ನೀಡುತ್ತಿದ್ದ ಚಿನ್ನದಂತಹ ಹುಡುಗಿ.
ಹೊನ್ನಪ್ಪ ಭಾಗವತರ, ಬಿ. ಆರ್. ಪಂತುಲ್, ಬಿ. ಎಸ್. ರಂಗಾರಂತಹ “ಕಲಾಬ್ರಹ್ಮ”ರ ಗರಡಿಯಲ್ಲಿ ಪಳಗಿದ ಈ ಕಲಾದೇವಿಗೆ ಸರೋಜಾ “ದೇವಿ” ಎನ್ನುವ ಹೆಸರೇ ಸಾರ್ಥಕವಾಗಿತ್ತು.
‘ಕಿತ್ತೂರು ಚೆನ್ನಮ್ಮ’ ಚಿತ್ರದ ವೀರ ನಾಯಕಿ “ಚೆನ್ನಮ್ಮ”, “ಅಮರಶಿಲ್ಪಿ ಜಕಣಾಚಾರಿ” ಚಿತ್ರದ “ಮಂಜರಿ”, “ಬಬ್ರುವಾಹನ” ಚಿತ್ರದ “ಚಿತ್ರಾ0ಗದೆ”, “ಶ್ರೀನಿವಾಸ ಕಲ್ಯಾಣ” ಚಿತ್ರದ ಸಾಕ್ಷಾತ್ ಲಕ್ಷ್ಮೀದೇವಿ, “ಭಾಗ್ಯವಂತರು” ಚಿತ್ರದ ಸದ್ಗೃಹಿಣಿ “ಪಾರ್ವತಿ”, ಒಂದೇ ಎರಡೇ ಎಲ್ಲವೂ ಬಿ. ಸರೋಜಾದೇವಿ ಎಂಬ ವಿಶ್ವ ವಿದ್ಯಾಲಯದ ಪಠ್ಯಗಳು.
ಮೂಲತ: ಚೆನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದಲ್ಲಿ ಜನಿಸಿದ ಬಿ. ಸರೋಜಾದೇವಿಯವರಿಗೆ ಈ ಮಣ್ಣಿನ ಸಂಸ್ಕೃತಿಯ ಪಾಠ ಅವರ ತಂದೆ ತಾಯಿಯವರಿಂದಲೇ ಬೆಳೆದು ಬಿಟ್ಟಿತ್ತು. ಹೀಗಾಗಿ ಸಿನಿಮಾ ಎಂಬ ಅರಮನೆಯ ಮಹಾರಾಣಿ ಯಾಗಿದ್ದರೂ ಸೌಜನ್ಯ, ಸರಳತೆ ಮರೆಯಲಿಲ್ಲ.
ಎಂ. ಜೀ. ರಾಮಚಂದ್ರರ ಜೊತೆ ನಾಯಕಿಯಾಗಿ 26 ಸೂಪರ್ ಹಿಟ್ ಚಿತ್ರಗಳನ್ನೂ, ಶಿವಾಜಿ ಗಣೇಶನ್ ಜೊತೆ 18 ಯಶಸ್ವಿ ಚಿತ್ರಗಳನ್ನೂ ನೀಡಿದ್ದರೂ, ಯಾವುದೇ ಗಾಸಿಪ್ ದಂತಹ ಅಪಸವ್ಯಗಳಿಗೆ ಅವಕಾಶ ನೀಡದ ಸಜ್ಜನ ಕಲಾವಿದೆ.

ಹಾಗೇ ನೋಡಿದರೇ ಬಿ. ಸರೋಜಾದೇವಿಯವರ ಅಪ್ರತಿಮ ಸೌಂದರ್ಯಕ್ಕೆ ಅವರೇ ಸಾಟಿ. ಎಪ್ಪತ್ತರ ದಶಕದಲ್ಲಿ ಬಿ. ಸರೋಜಾದೇವಿ ಯವರ ಉಡುಗೆ ತೋಡುಗೆ, ಹೇರ್ ಸ್ಟೈಲ್, ಧರಿಸುವ ಆಭರಣಗಳು ಅವರ ಮುದ್ದಾದ ನಗು ಎಲ್ಲವೂ ಆಗಿನ ಕಾಲ ಘಟ್ಟದ ಮಹಿಳೆಯರಿಗೆ ಆದರ್ಶವಾಗಿದ್ದವು.
ಇಂತಹ ಮಹಾನ್ ಕಲಾವಿದೆಯ ತೆರೆಯ ಹಿಂದಿನ ಬದುಕು ಕೂಡ ಅಷ್ಟೇ ಮೌಲ್ಯಯುತವಾಗಿತ್ತು. ಕೈ ಹಿಡಿದ ಪತಿ ಶ್ರೀಹರ್ಷ ಸರೋಜಾರಿಗೆ ಕಣ್ಣುರೆಪ್ಪೆಯಾಗಿದ್ದರು. ಅಂತೆಯೇ, ಮದುವೆಯ ನಂತರವೂ ನಾಯಕಿಯಾಗಿಯೇ ಮಿಂಚಿದ ಅದೃಷ್ಟವಂತೆ.
ಪತಿಯ ಅಕಾಲಿಕ ನಿಧನದ ನಂತರ ಬಣ್ಣದ ಬದುಕಿನಿಂದ 5 – 6 ವರ್ಷ ದೂರವೇ ಉಳಿದುಬಿಟ್ಟರು.
ಆದರೇ ಬೆಳ್ಳಿತೆರೆ ಮಾತ್ರ ಇವರನ್ನು ಬಿಡಲಿಲ್ಲ.
ಆಪ್ತರ ಒತ್ತಾಯದ ಮೇರೆಗೆ ಚಿತ್ರದಲ್ಲಿ ನಟಿಸಿದರೂ, ಎಲ್ಲ ಅರ್ಹತೆ ಇದ್ದರೂ, ನಾಯಕಿ ಪಾತ್ರ ಮಾಡಲು ಒಪ್ಪದ ಮಹಾಸಾಧ್ವಿ. ನಂತರ ಅಭಿನಯಿಸಿದ್ದು ಕೇವಲ ಪೋಷಕ ಪಾತ್ರಗಳಲ್ಲಿ.
ವಿವಾದವೆಂಬ ಸುಂಟರಗಾಳಿ ಬಿ. ಸರೋಜಾದೇವಿಯವರನ್ನು ಕಂಡರೆ ಹೆದರುತ್ತಿತ್ತೇನೋ.
26 ಯಶಸ್ವಿ ಚಿತ್ರಗಳಲ್ಲಿ ಎಂ. ಜೀ. ಆರ್ ಜೊತೆ ನಾಯಕಿ ಯಾಗಿದ್ದರೂ, ನಂತರ ಎಂ. ಜೀ. ಆರ್ ಜಯಲಲಿತಾರ ಸುಳಿಗೆ ಸಿಕ್ಕು ಬಿ. ಸರೋಜಾದೇವಿಯವರನ್ನು ತಮ್ಮ ಚಿತ್ರಗಳಿಂದ ದೂರ ಮಾಡಿದರೂ….
ಸರೋಜಾದೇವಿ ಅವರು ಸೌಜನ್ಯದಿಂದಲೇ ಪ್ರತಿಕ್ರಿಯೆ ನೀಡಿ, ಕನ್ನಡ ಚಿತ್ರರಂಗಕ್ಕೆ ಮರಳಿದರು, ಹೊರತಾಗಿ ಯಾರನ್ನೂ ದೂರಲಿಲ್ಲ.
ಅಂತೆಯೇ ಎಂ. ಜೀ. ಆರ್. ಹಾಗೂ ಜಯಲಲಿತಾ ಕೂಡ ತಮ್ಮ ಕೊನೆಯ ಉಸಿರು ಇರುವವರೆಗೂ ಬಿ. ಸರೋಜಾದೇವಿಯವರನ್ನು ತುಂಬಾ ಗೌರವದಿಂದಲೇ ಕಂಡರು.
ಹಾಗೇ ನೋಡಿದರೇ ಬಿ. ಸರೋಜಾದೇವಿಯವರ ಬದುಕಿನಲ್ಲಿ ನಡೆದ ಒಂದು ತಮಾಷೆ ಸಂಗತಿ ಎಂದರೆ, ಎಸ್. ಎಂ. ಕೃಷ್ಣ ಮುಖ್ಯ ಮಂತ್ರಿಯಾಗಿದ್ದಾಗ ಒಂದು ಕಾರ್ಯಕ್ರಮದ ವೇದಿಕೆಯಲ್ಲಿ ಎಸ್. ಎಂ. ಕೃಷ್ಣ ಮಾತಾಡುತ್ತ….
“ನನ್ನ ಕಾಲೇಜು ದಿನಗಳಲ್ಲಿ ನಾನು ಬಿ. ಸರೋಜಾದೇವಿ ಯವರ ಅಪ್ಪಟ ಅಭಿಮಾನಿಯಾಗಿದ್ದೆ. ಅವರು ಒಪ್ಪಿಗೆ ನೀಡಿದ್ದರೆ, ಅವರನ್ನೇ ಮದುವೆಯಾಗಬೇಕು ಎಂದು ಕೊಂಡಿದ್ದೆ….” ಎಂದು ಬಹಿರಂಗವಾಗಿ ಹೇಳಿದಾಗ…. ಅದೇ ವೇದಿಕೆಯ ಮೇಲೆ ಕುಳಿತಿದ್ದ ಬಿ. ಸರೋಜಾದೇವಿ ಹಾಗೂ ಕೃಷ್ಣರ ಪತ್ನಿ ಪ್ರೇಮಾಕೃಷ್ಣ ಮನಸಾರೆ ನಕ್ಕು ಬಿಟ್ಟಿದ್ದರು. ಅವರೆಲ್ಲ ತುಂಬಿದ ಕೊಡ.
ಹೌದು, ಬಿ. ಸರೋಜಾದೇವಿ ಇಂದು, ದಂತಕಥೆಯ ಒಂದು ಅಧ್ಯಾಯವಾಗಿದ್ದಾರೆ. ಸಿನಿಮಾ ಎಂಬ ಮೋಜಿನ ಜಾತ್ರೆಯಲ್ಲಿದ್ದರೂ ತಮ್ಮ ಮೇರು ಸದೃಶ ವ್ಯಕ್ತಿತ್ವದಿಂದ ಅಮರರಾಗಿದ್ದಾರೆ….

-ಅನಿಲ್ ಕುಲಕರ್ಣಿ, ಹವ್ಯಾಸಿ ಪತ್ರಕರ್ತರು, ಹುಬ್ಬಳ್ಳಿ
The post ಬಣ್ಣದ ಬದುಕಿನಲ್ಲಿಯೇ ಬದುಕಿನ ಸಾಫಲ್ಯ ಸಾಧಿಸಿದ ‘ಕಲಾ ಸರಸ್ವತಿ’ ಬಿ.ಸರೋಜಾದೇವಿ ಅಕ್ಷರ ನಮನ: ಅನಿಲ್ ಕುಲಕರ್ಣಿ, ಹುಬ್ಬಳ್ಳಿ appeared first on Karnataka Kahale.
]]>The post ಹಂದ್ಯಾಳ್ ಶ್ರೀ ಮಹಾದೇವ ಕಲಾ ಸಂಘದಿಂದ ನಾಟಕ ಹಬ್ಬ-2025: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವುದು ಅಗತ್ಯ -ಎಚ್.ಕೆ.ಸಿದ್ದಯ್ಯ ಸ್ವಾಮಿ appeared first on Karnataka Kahale.
]]>
ಬಳ್ಳಾರಿ,ಜು.4: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ನಮ್ಮದಾಗಬೇಕು ಎಂದು ಹಚ್ಚೋಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಎಚ್.ಕೆ.ಸಿದ್ದಯ್ಯ ಸ್ವಾಮಿ ಅವರು ಹೇಳಿದರು.
ನಗರದ ಹಂದ್ಯಾಳು ಮಹಾದೇವ ತಾತ ಕಲಾ ಸಂಘ ವತಿಯಿಂದ ಸಿರುಗುಪ್ಪ ತಾಲೂಕಿನ ಕುಡುದರಹಾಳ ಗ್ರಾಮದ ತಾಯಮ್ಮ ದೇವಿ ಪುಣ್ಯ ಆಶ್ರಮದ ಯಲಿವಾಳು ಸಿದ್ದಯ್ಯ ಸ್ವಾಮಿ ಬಯಲು ರಂಗಮಂದಿರದಲ್ಲಿ ಗುರುವಾರ ಸಂಜೆ ನಡೆದ “ನಾಟಕ ಹಬ್ಬ 2025” ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಡಾಕ್ಟರ್, ಇಂಜಿನಿಯರ್ ಆಗಬೇಕೆನ್ನುವ ಅನೇಕರು ಕನಸು ಕಾಣುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ಯುವಕರಲ್ಲಿ ಕಲೆ ಸಂಸ್ಕೃತಿ ಉಳಿಸುವಲ್ಲಿ ಮಹಾದೇವ ತಾತ ಕಲಾ ಸಂಘವು ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು ಅವರು ಮಾತನಾಡಿ, ಸಂಬಂಧಗಳು ಜೀವನದ ಅವಿಭಾಜ್ಯ ಅಂಗವಾಗಿದ್ದು, ಮಾನಸಿಕ, ಭಾವನಾತ್ಮಕ ಯೋಗಕ್ಷೇಮಕ್ಕೆ ಮತ್ತು ಬದುಕುಳಿಯುವಿಕೆಗೆ ಸಂಬಂಧಗಳು ಬಹಳ ಮುಖ್ಯ ಎಂದು ಹೇಳಿದರು.
ಕುಡುದರಹಾಳ್ ತಾಯಮ್ಮ ದೇವಿ ಪುಣ್ಯ ಆಶ್ರಮದ ಪೀಠಾಧ್ಯಕ್ಷ ಡಾ.ಶಿವಕುಮಾರ್ ತಾತ ಅವರು ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಸಂಬಂಧಗಳು ನಮ್ಮ ಸ್ವಯಂ ಅರಿವು ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದರು.
ಕಾಯಕ್ರಮದಲ್ಲಿ ಕುಮಾರ ಪ್ರಸಾದ್ ಸಂಗೀತ ಗಾಯನ ಪ್ರಸ್ತುತಪಡಿಸಿದರು.

ಬಳಿಕ ಸಿರಿಗೇರಿ ಧಾತ್ರಿ ರಂಗ ಸಂಸ್ಥೆಯ ಕಲಾವಿದರು “ಸಂಬಂಧ” ಎಂಬ ನಾಟಕವನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಕುಡದರಹಾಳು ಗ್ರಾಮದ ಗುತ್ತಿಗೆದಾರರಾದ ಬಿ.ವೆಂಕಟೇಶ, ಮುಖಂಡರಾದ ಕೆ.ಪಿ.ಖಾಸಿಂ ಸಾಬ್, ಹಚ್ಚೋಳ್ಳಿಯ ಜ್ಞಾನರೆಡ್ಡಿ, ಹಚ್ಚೋಳ್ಳಿ ಗ್ರಾಪಂ ಮಾಜಿ ಸದಸ್ಯ ಪಾಲಕ್ಷಿ ಗೌಡ, ಹಚ್ಚೊಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಎಸ್.ಬುಷಪ್ಪ ಸಹುಕಾರ, ಹೆಚ್.ಕೆ.ನಾಗರಾಜ, ಪಿ.ಭಾಷಾ, ಹುಸೇನಪ್ಪ, ಮುದುಕಪ್ಪ, ಬೀರಲಿಂಗ ಸೇರಿದಂತೆ ಮುಂತಾದ ಹಿರಿಯರು ಉಪಸ್ಥಿತರಿದ್ದರು.
ರಂಗ ಕಲಾವಿದ ಅಂಬರೀಶ್ ಹಚ್ಚೊಳಿ ಸ್ವಾಗತಿಸಿದರು. ಜಿ.ಲಿಂಗಪ್ಪ ವಂದಿಸಿದರು.
————
The post ಹಂದ್ಯಾಳ್ ಶ್ರೀ ಮಹಾದೇವ ಕಲಾ ಸಂಘದಿಂದ ನಾಟಕ ಹಬ್ಬ-2025: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವುದು ಅಗತ್ಯ -ಎಚ್.ಕೆ.ಸಿದ್ದಯ್ಯ ಸ್ವಾಮಿ appeared first on Karnataka Kahale.
]]>The post ಬಳ್ಳಾರಿ: ರಂಗ ಸಂಘಟಕರಿಂದ ಕಲಾವಿದ ಪುರುಷೋತ್ತಮ ಹಂದ್ಯಾಳ್ ಹುಟ್ಟುಹಬ್ಬ ಆಚರಣೆ appeared first on Karnataka Kahale.
]]>
ಬಳ್ಳಾರಿ, ಜೂ.18: ಹಿರಿಯ ರಂಗ ಕಲಾವಿದ, ಪತ್ರಿಕಾ ಛಾಯಾಗ್ರಹಕ ಪುರುಷೋತ್ತಮ ಹಂದ್ಯಾಳ್ ಅವರ ಹುಟ್ಟುಹಬ್ಬವನ್ನು ಮಂಗಳವಾರ ಸಂಜೆ ಸರಳವಾಗಿ ನಗರದಲ್ಲಿ ಆಚರಿಸಲಾಯಿತು.
ನಾಡೋಜ ಬುರ್ರಕಥಾ ದರೋಜಿ ಈರಮ್ಮ ಫೌಂಡೇಷನ್ ಮತ್ತು ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಪುರುಷೋತ್ತಮ ಹಂದ್ಯಾಳ್ ಅವರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಬಳಿಕ ಹಂದ್ಯಾಳ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆ ಅಧ್ಯಕ್ಷ , ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು ಮಾತನಾಡಿ ಪುರುಷೋತ್ತಮ ಅವರ ಮೂರುವರೆ ದಶಕಗಳ ರಂಗ ಸೇವೆ ಮತ್ತು ಎರಡು ದಶಕಗಳ ಪತ್ರಿಕೋದ್ಯಮ ಸೇವೆಯನ್ನು ಶ್ಲಾಘಿಸಿದರು.
ಸಂಘ ಸಂಸ್ಥೆಗಳು ಹಲವು ಪ್ರಶಸ್ತಿ ನೀಡಿ ಉತ್ತೇಜಿಸಿವೆ ಆದರೆ ಸರಕಾರದ ಅಕಾಡೆಮಿಗಳು ಇವರ ರಂಗ ಸೇವೆಯನ್ನು ನಿರ್ಲಕ್ಷಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಫೌಂಡೇಶನ್ ಅಧ್ಯಕ್ಷ, ಸತ್ಯಂ ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ. ಅಶ್ವರಾಮು ಅವರು ಮಾತನಾಡಿ ರಂಗ ಸಂಘಟಕರೂ ಆಗಿರುವ ಪುರುಷೋತ್ತಮ ಹಂದ್ಯಾಳ್ ಅವರು ಉದಯೋನ್ಮುಖ ಹಾಗೂ ಹಿರಿಯ ರಂಗ ಕಲಾವಿದರಿಗೆ ವೇದಿಕೆ ಕಲ್ಪಿಸುವುದರ ಜತೆಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸತ್ಕರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಮಾ ಪುರುಷೋತ್ತಮ ಹಂದ್ಯಾಳ್, ಅಧ್ಯಾಪಕಿ ಸಾಯಿ ಶೃತಿ ಹಂದ್ಯಾಳ್ ಉಪಸ್ಥಿತರಿದ್ದರು.
The post ಬಳ್ಳಾರಿ: ರಂಗ ಸಂಘಟಕರಿಂದ ಕಲಾವಿದ ಪುರುಷೋತ್ತಮ ಹಂದ್ಯಾಳ್ ಹುಟ್ಟುಹಬ್ಬ ಆಚರಣೆ appeared first on Karnataka Kahale.
]]>