Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
Economy – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Tue, 21 Jan 2025 13:08:46 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg Economy – Karnataka Kahale https://www.karnatakakahale.com 32 32 ನಾ ಓದಿದ ಪುಸ್ತಕ: ಅಭಿವೃದ್ಧಿಯ ಅಸಮಾನತೆಗೆ ಹಿಡಿದ ಕನ್ನಡಿ : ʼದಕ್ಷಿಣ v/s ಉತ್ತರʼ, ಕೃತಿ ಪರಿಚಯ:ಸಿ.ಎಂ. ಫೈಝ್‌ ಮಹಮ್ಮದ್‌, ಬೆಂಗಳೂರು https://www.karnatakakahale.com/news/18467 Tue, 21 Jan 2025 13:08:46 +0000 https://www.karnatakakahale.com/?p=18467 ಅಭಿವೃದ್ಧಿಯ ಅಸಮಾನತೆಗೆ ಹಿಡಿದ ಕನ್ನಡಿ : ʼದಕ್ಷಿಣ v/s ಉತ್ತರʼ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರ ಭಾರತ. ಬಹುತ್ವ ಸಂಸ್ಕೃತಿಯನ್ನು ಉಸಿರಾಡುತ್ತಿರುವ ದೇಶದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಮಾನತೆಯನ್ನು ಸಾಧಿಸುವುದು ದೊಡ್ಡ ಸವಾಲು ಎಂಬುದು ವೇದ್ಯ…

The post ನಾ ಓದಿದ ಪುಸ್ತಕ: ಅಭಿವೃದ್ಧಿಯ ಅಸಮಾನತೆಗೆ ಹಿಡಿದ ಕನ್ನಡಿ : ʼದಕ್ಷಿಣ v/s ಉತ್ತರʼ, ಕೃತಿ ಪರಿಚಯ:ಸಿ.ಎಂ. ಫೈಝ್‌ ಮಹಮ್ಮದ್‌, ಬೆಂಗಳೂರು appeared first on Karnataka Kahale.

]]>
ಅಭಿವೃದ್ಧಿಯ ಅಸಮಾನತೆಗೆ ಹಿಡಿದ ಕನ್ನಡಿ : ʼದಕ್ಷಿಣ v/s ಉತ್ತರʼ

ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರ ಭಾರತ. ಬಹುತ್ವ ಸಂಸ್ಕೃತಿಯನ್ನು ಉಸಿರಾಡುತ್ತಿರುವ ದೇಶದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಮಾನತೆಯನ್ನು ಸಾಧಿಸುವುದು ದೊಡ್ಡ ಸವಾಲು ಎಂಬುದು ವೇದ್ಯ ಸಂಗತಿ. ಆದರೆ ದೇಶದ ಒಕ್ಕೂಟ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ತೊಡಕಾಗಿರುವ ಸಮಸ್ಯೆಗಳು, ಸವಾಲುಗಳು, ಪರಿಹಾರೋಪಾಯಗಳು ಅದರಲ್ಲೂ ಮುಖ್ಯವಾಗಿ ಆರ್ಥಿಕ ಅಸಮಾನತೆಯ ಹಿಂದಿನ ರಾಜಕಾರಣದ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವುದು ಹಿಂದೆಂದಿಗಿಂತಲೂ ಅಗತ್ಯವೆಂಬುದನ್ನು ತಿಳಿಸುವ ಪ್ರಯತ್ನದ ಭಾಗವಾಗಿ ನೀಲಕಂಠನ್ ಆರ್‌.ಎಸ್‌. ಅವರ “South v/s North: India’s Great Divide” ಕೃತಿಯ ಕನ್ನಡ ಅನುವಾದ ಕೆ.ಪಿ. ಸುರೇಶ್‌ ಅವರ ʼದಕ್ಷಿಣ v/s ಉತ್ತರʼ ಕೃತಿ ಮಹತ್ವದ್ದಾಗಿದೆ.
ಹಲವು ಜಾತಿ ಜನಾಂಗ, ಧರ್ಮೀಯರು ನೆಲೆಸಿರುವ ನಮ್ಮ ದೇಶದಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆ ಎಂದು ಮೇಲ್ನೋಟಕ್ಕೆ ಕಂಡಬಂದರೂ ವೈಪರಿತ್ಯಗಳೂ ಇವೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾದುದು ಪ್ರಜ್ಞಾವಂತ ಪ್ರಜೆಗಳ ಆದ್ಯ ಕರ್ತವ್ಯ. ಈ ಬಗೆಯ ತಿಳಿವಳಿಕೆಯನ್ನು ಮೂಡಿಸುವಲ್ಲಿ ಈ ಕೃತಿ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ.
ಒಟ್ಟು ಮೂರು ಭಾಗಗಳಲ್ಲಿ ನಿರೂಪಿತಗೊಂಡಿರುವ ಇಲ್ಲಿನ ವಿಷಯಗಳು ದೇಶದ ವಸ್ತುಸ್ಥಿತಿಯನ್ನು ಮನಗಾಣಿಸುತ್ತದೆ. ʼಪರಿಶೋಧನೆʼ ಎನ್ನುವ ಶೀರ್ಷಿಕೆಯ ಮೊದಲನೆ ಭಾಗದಲ್ಲಿ ಆರೋಗ್ಯ, ಶಿಕ್ಷಣ, ಆರ್ಥಿಕತೆ, ದಕ್ಷಿಣ ಏಕೆ ಉತ್ತಮ ಸಾಧನೆ ಮಾಡಿದೆ ? ಎಂಬ ನಾಲ್ಕು ಉಪಶೀರ್ಷಿಕೆಗಳಲ್ಲಿ ಆಡಳಿತದ ನೀತಿ ನಿರ್ಧಾರಕ ಅಂಶಗಳು ದಕ್ಷಿಣ ಮತ್ತು ಉತ್ತರ ಭಾರತಗಳಲ್ಲಿನ ಜನರ ಆರೋಗ್ಯ, ಶಿಕ್ಷಣ, ಆರ್ಥಿಕತೆ ಅಂಶಗಳನ್ನು ನಿರ್ಧರಿಸುತ್ತ ಬಂದಿದೆ ಎಂಬುದನ್ನು ಪೀಠಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಮಗುವೊಂದರ ಜನನದ ಕಥನವನ್ನು ನಿರೂಪಿಸುತ್ತ ವಸ್ತುಸ್ಥಿತಿಯ ಮೇಲೆ ಬೆಳಕು ಚೆಲ್ಲಲಾಗಿದೆ. ಭಾರತವು ಕಳಪೆ ಆರೋಗ್ಯದ ದಾಖಲೆ ಹೊಂದಿದೆ. ಪ್ರಾಥಮಿಕ ಆರೋಗ್ಯ ಸೂಚಿಯ ಪ್ರಕಾರ ನಮ್ಮ ದೇಶದಲ್ಲಿ ಜೀವಿತಾವಧಿ ಕೇವಲ ೬೯ ವರ್ಷಗಳು ಮಾತ್ರ. ಜಾಗತಿಕವಾಗಿ ಭಾರತದ ಸ್ಥಾನ ೧೨೫. ಯುದ್ಧಪೀಡಿತ ದೇಶಗಳಾದ ಇರಾಕ್‌, ಸಿರಿಯಾ ಮತ್ತಿತರ ದೇಶಗಳಿಗೆ ಹೋಲಿಸಿಕೊಂಡರೆ ಭಾರತ ಕೆಳಮಟ್ಟದಲ್ಲಿದೆ ಎಂಬ ಸತ್ಯವನ್ನು ಅಂಕಿಸಂಖ್ಯೆಗಳ ಮೂಲಕ ದಾಖಲಿಸಲಾಗಿದೆ. ಮಧ್ಯಮ ಆದಾಯದ ದೇಶಗಳಿಗೆ ಹೋಲಿಸಿಕೊಂಡರೆ ಭಾರತ ಸಾಕ್ಷರತೆ ಪ್ರಮಾಣವೂ ಹಿಂದುಳಿದಿದೆ ಎಂಬುದನ್ನು ಆಧಾರಸಹಿತ ನಿರೂಪಿಸಲಾಗಿದೆ. ದೇಶದ ಬೆಳವಣಿಗೆಯಲ್ಲಿ ರಾಷ್ಟ್ರೀಯತೆ, ಉಪರಾಷ್ಟ್ರೀಯತೆ ಪರಿಕಲ್ಪನೆಗಳು ಮೂಡಿಸಿದ ಚಿತ್ರಣ, ಆರ್ಥಿಕತೆ ಮತ್ತು ದಕ್ಷಿಣ ರಾಜ್ಯಗಳ ಅಭಿವೃದ್ಧಿಗೆ ಅನುಸರಿಸಲಾಗುತ್ತಿರುವ ಕ್ರಮಗಳ ಮೇಲೂ ದೃಷ್ಟಿ ಹಾಯಿಸಲಾಗಿದೆ.

ʼಭಾರತದ ಕೇಡಿನ ಸಮಸ್ಯೆಗಳುʼ ಎಂಬ ಎರಡನೇ ಭಾಗದಲ್ಲಿ ದಕ್ಷಿಣ ಭಾರತ ಸಮಾನ ಪಾಲುದಾರನೇ? ಎಂಬ ಪ್ರಸ್ತಾವನೆಯಲ್ಲಿ ಕೇಂದ್ರದ ಆಡಳಿತ ಕುತಂತ್ರಕ್ಕೆ ಬಲಿಯಾಗುವ ದಕ್ಷಿಣ ಭಾರತದ ರಾಜ್ಯಗಳ ಸ್ಥಿತಿಯನ್ನು ಕುರಿತು ವಿವೇಚಿಸಲಾಗಿದೆ. ಜನಸಂಖ್ಯಾ ಭಿನ್ನತೆ, ಭಾರತದ ಕಾಸಿನ ಥೈಲಿ; ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ, ಭಾರತದ ಒಕ್ಕೂಟವನ್ನು ಈಗಿರುವ ಸ್ಥಿತಿಯಿಂದ ಕಾಪಾಡಬಹುದೇ ಎಂಬ ಮೂರು ಶೀರ್ಷಿಕೆಗಳಡಿ ಚರ್ಚಿಸಲಾಗಿದೆ.
ಜನಸಂಖ್ಯೆ ಆಯಾಯ ರಾಜ್ಯಗಳ ಅಭಿವೃದ್ಧಿ ಸೂಚ್ಯಂಕ ಎನ್ನಲಾಗುತ್ತದೆ. ಆದಾಯ ಮತ್ತು ತೆರಿಗೆ ಹಣ ಹಂಚಿಕೆಯಲ್ಲಿ ಸಮಾನ ತತ್ವವನ್ನು ಅನುಸರಿಸದೇ ರಾಜಕೀಯ ಮಾಡುವ ಆಡಳಿತ ವ್ಯವಸ್ಥೆಗೆ ಬಲಿಯಾಗುವ ದಯನೀಯತೆ ದಕ್ಷಿಣದ ರಾಜ್ಯಗಳಿಗಿದೆ ಎಂಬುದನ್ನು ವಿಶ್ಲೇಷಿಸಲಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಯ ಮಾನದಂಡಗಳು ಯಾವುವು ಎಂದು ಆಲೋಚಿಸಿದರೆ ಜನಸಂಖ್ಯೆ, ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದವು ಕಂಡುಬರುತ್ತವೆ. ಆದರೆ ಈ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಕೇಂದ್ರ ತರತಮ ನೀತಿ ಅನುಸರಿಸಿದರೆ ಒಕ್ಕೂಟ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಎಂಬ ಸತ್ಯ ಗೊತ್ತಿದ್ದೂ ಕೇಂದ್ರ ಸರ್ಕಾರಗಳು ಮಾಡುವ ತಪ್ಪುಗಳನ್ನು ಮತ್ತು ಅದು ಸೃಷ್ಟಿಸುವ ಬಿಕ್ಕಟ್ಟುಗಳನ್ನು ಎದುರುಗೊಳ್ಳದೇ ಬೇರೆ ವಿಧಿಯಿಲ್ಲ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಮೂರನೇ ಭಾಗ- ಇನ್ನೂ ಉತ್ತಮ ಒಕ್ಕೂಟ ಎಂಬ ವಿಷಯದಡಿ ಭಾರತದ ಪ್ರಾತಿನಿಧಿಕ ಪ್ರಜಾಸತ್ತೆಗೆ ಬಡಿದಿರುವ ರೋಗವೇನು?, ಅಥೆನ್ಸ್‌ ಮಾದರಿ ಹಾಗೂ ಒಂದು ಪರ್ಯಾಯ ಕುರಿತು ಪ್ರಸ್ತಾಪಿಸುವ ಮೂಲಕ ದೇಶದ ಒಕ್ಕೂಟ ವ್ಯವಸ್ಥೆ ಬಲವರ್ಧನೆಗೆ ಇರುವ ದಾರಿಗಳನ್ನು ಹುಡುಕಲು ಇಲ್ಲಿ ಯತ್ನಿಸಲಾಗಿದೆ.
ದಕ್ಷಿಣ ಭಾರತವು ಬಹುತೇಕ ಎಲ್ಲಾ ಧನಾತ್ಮಕ ಸೂಚ್ಯಂಕಗಳಲ್ಲೂ ಉತ್ತರಕ್ಕಿಂತ ಮುಂದಿದೆ. ಈ ಅಭಿವೃದ್ಧಿಯ ಅಸಮಾನತೆಗೆ ಸ್ವಾತಂತ್ರ್ಯ ಪೂರ್ವದ ದಾಳಿಗಳು ಮತ್ತು 1952ರ ಸರಕು ಸಮೀಕರಣ ನೀತಿ (Freight Equalisation Policy of 1952)ಗಳೇ ಕಾರಣ ಎಂಬುದಾಗಿ ಆರೋಪಿಸಲಾಗುತ್ತಿದೆ. ಆದರೆ ಸತ್ಯವನ್ನು ಮರೆಮಾಚುವ ಕೆಲಸವನ್ನು, ಕೆಲವು ಉತ್ತರದ ರಾಜಕಾರಣಿಗಳು, ತಜ್ಞರು ಮತ್ತು ವಿಶ್ಲೇಷಕರು ಮಾಡುತ್ತಿದ್ದಾರೆ. ಹಾಗೆ ನೋಡಿದರೆ, ಉತ್ತರಕ್ಕಿರುವ ಖನಿಜ ಸಂಪನ್ಮೂಲಗಳಾಗಲೀ, ಅವ್ಯಾಹತವಾಗಿ ಹರಿಯುವ ನದಿಗಳಾಗಲೀ, ರೈಲ್ವೆ ಸಂಪರ್ಕವಾಗಲಿ, ದಕ್ಷಿಣ ಭಾರತಕ್ಕೆ ಇಲ್ಲ. ಸ್ವಾತಂತ್ರ್ಯದ ಸಮಯದಲ್ಲಿ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳು, ದೇಶದ ಬೇರಾವುದೇ ರಾಜ್ಯಕ್ಕಿಂತ ಅತಿಹೆಚ್ಚು ಕೈಗಾರಿಕೆಗಳು ಮತ್ತು GDP ಪಾಲು ಹೊಂದಿದ್ದವು. ಆದಾಗ್ಯೂ ಉತ್ತರದ ರಾಜ್ಯಗಳು ಏಕೆ ಹಿಂದೆ ಉಳಿದವು? ನೀಲಕಂಠನ್ ಅವರ “South vs North: India’s Great Divide” ಪುಸ್ತಕವು, ಅಭಿವೃದ್ಧಿಯ ಅಸಮಾನತೆಗೆ ಸಕಾರಣಗಳನ್ನು ಸರಿಯಾಗಿಯೇ ಗುರುತಿಸಿದೆ. ಇದು ಕಣ್ಣು ತೆರೆಸುವ ಪುಸ್ತಕ, ಪ್ರಾದೇಶಿಕ ಅಸಮತೋಲನತೆಯು ನಿರಂತರ ವಲಸೆಗೆ ಕಾರಣವಾಗುತ್ತದೆ. ವಲಸೆಯು ವಲಸಿಗರ ಮತ್ತು ಅತಿಥೇಯರ ಅಸ್ಮಿತೆಯನ್ನು ನಿರ್ಮೂಲನಗೊಳಿಸುತ್ತದೆ. ಇದು ಭಾರತದ ವೈವಿಧ್ಯತೆಯ ಪರಿಕಲ್ಪನೆಯನ್ನು ಹುಸಿಗೊಳಿಸಿಬಿಡುತ್ತದೆ. ಇದಕ್ಕಿಂತ ಮುಖ್ಯವಾಗಿ ವಲಸಿಗರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ ಹಾಗೂ ಹೆಚ್ಚಾದ ಜನಸಂಖ್ಯೆಗೆ ಬೇಕಾದ ರಸ್ತೆ ಮತ್ತು ಇನ್ನಿತರ ಮೂಲ ಸೌಕರ್ಯಗಳನ್ನು ನಿರ್ಮಿಸುವ, ಹೆಚ್ಚಿನ ಭಾರ ಅತಿಥೇಯ ರಾಜ್ಯಗಳಿಗೆ ಬೀಳುತ್ತದೆ. ಹಾಗಾಗಿ ಈ ಪುಸ್ತಕದಲ್ಲಿರುವ ಅಂಶಗಳನ್ನು ಅರಿತು, ಎಲ್ಲಾ ರಾಜ್ಯ ಹಾಗೂ ಪ್ರದೇಶಗಳು ಅಭಿವೃದ್ಧಿಯಲ್ಲಿ ಸಮಾನತೆ ಸಾಧಿಸಬೇಕಿದೆ ಎಂಬ ಸತ್ಯವನ್ನು ಮನದಟ್ಟು ಮಾಡಿಕೊಡುವ ಕಾರಣಕ್ಕೆ ಈ ಕೃತಿ ಮೌಲಿಕವಾಗಿದೆ.
ಮುನ್ನುಡಿ ಬರೆದಿರುವ ಕಂದಾಯ ಸಚಿವರಾದ ಸನ್ಮಾನ್ಯ ಶ್ರೀ ಕೃಷ್ಣ ಭೈರೇಗೌಡ ಅವರು ರಾಷ್ಟ್ರೀಯ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಈ ಕೃತಿ ಸಾಮಾನ್ಯನೂ ಗ್ರಹಿಸಬಲ್ಲ ಸರಳ ಶೈಲಿಯಲ್ಲಿ ನಿರೂಪಿತಗೊಂಡಿರುವುದು ವಿಶೇಷ ಎಂದಿರುವುದು ಗಮನಾರ್ಹ.

ಭಾರತದ ಬಹುತ್ವ ಸಂಸ್ಕೃತಿಯ ನಾಶದ ಉದ್ದೇಶವನ್ನು ಇರಿಸಿಕೊಂಡು ಏಕ ಭಾಷೆ, ಏಕ ಮತ, ಏಕ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುವ ಕೇಂದ್ರದ ಹುನ್ನಾರ ಮತ್ತು ಆರ್ಥಿಕ ಅಸಮಾನ ನೀತಿಯ ರಾಜಕಾರಣದ ಸ್ವರೂಪವನ್ನು ಕುರಿತು ವಿವೇಚಿಸಲು ಪ್ರೇರೆಪಿಸುವ ಈ ಪುಸ್ತಕವು, ಸದ್ಯದ ಭಾರತದ ಬಿಕ್ಕಟ್ಟುಗಳಿಗೂ ಪರಿಹಾರದ ಮಾರ್ಗೋಪಾಯಗಳನ್ನು ಬೋಧಿಸುವಂತಿದೆ. ಕನ್ನಡದ ಓದುಗರಿಗೆ ಅತ್ಯಂತ ಸಮರ್ಥವಾಗಿ ದಕ್ಕುವಂತೆ ಮಾಡಿದ ಕೆ.ಪಿ. ಸುರೇಶ ಅವರಿಗೆ ಹಾಗೂ ಪ್ರಕಟಿಸಿದ ಕಾನ್ಕೇವ್ ಪ್ರಕಾಶನದ ನಂದೀಶ್ ದೇವ್ ಅವರಿಗೂ ಅಭಿನಂದನೆಗಳು ಸಲ್ಲಬೇಕು.


-ಸಿ.ಎಂ. ಫೈಝ್‌ ಮಹಮ್ಮದ್‌
ನಿರ್ದೇಶಕರು,
ಹೆಚ್‌.ಕೆ.ಬಿ.ಕೆ ಸಮೂಹ ಶಿಕ್ಷಣ ಸಂಸ್ಥೆಗಳು
ಬೆಂಗಳೂರು
—–

The post ನಾ ಓದಿದ ಪುಸ್ತಕ: ಅಭಿವೃದ್ಧಿಯ ಅಸಮಾನತೆಗೆ ಹಿಡಿದ ಕನ್ನಡಿ : ʼದಕ್ಷಿಣ v/s ಉತ್ತರʼ, ಕೃತಿ ಪರಿಚಯ:ಸಿ.ಎಂ. ಫೈಝ್‌ ಮಹಮ್ಮದ್‌, ಬೆಂಗಳೂರು appeared first on Karnataka Kahale.

]]>
ಆರ್ಥಿಕ‌ ಚಿಂತನೆ: ಅರವಿಂದ ಚೊಕ್ಕಾಡಿ, ಚಿಂತಕರು, ಮೂಡಬಿದ್ರೆ, ವಿಷಯ: ಉಚಿತ ಕೊಡುಗೆಗಳ ಆರ್ಥಿಕತೆ https://www.karnatakakahale.com/news/12307 Wed, 31 May 2023 18:15:56 +0000 https://www.karnatakakahale.com/?p=12307 ಉಚಿತ ಕೊಡುಗೆಗಳ ಆರ್ಥಿಕತೆ -ಅರವಿಂದ ಚೊಕ್ಕಾಡಿ, ಚಿಂತಕರು ಉಚಿತ ಕೊಡುಗೆಗಳಿಗೆ ಸರಕಾರಕ್ಕೆ 50 ಸಾವಿರ ಕೋಟಿ ಬೇಕು ಎಂದರೆ ಅದರ ಅರ್ಥ ಸರಕಾರ 50 ಸಾವಿರ ಕೋಟಿ ರೂಪಾಯಿಯನ್ನು ಜನರ ಮೇಲೆ ಹೂಡಿಕೆ ಮಾಡುತ್ತಿದೆ ಎಂದು. ಇಲ್ಲಿ ಸರಕಾರಕ್ಕೆ ನಷ್ಟ ಆಗುವ…

The post ಆರ್ಥಿಕ‌ ಚಿಂತನೆ: ಅರವಿಂದ ಚೊಕ್ಕಾಡಿ, ಚಿಂತಕರು, ಮೂಡಬಿದ್ರೆ, ವಿಷಯ: ಉಚಿತ ಕೊಡುಗೆಗಳ ಆರ್ಥಿಕತೆ appeared first on Karnataka Kahale.

]]>
ಉಚಿತ ಕೊಡುಗೆಗಳ ಆರ್ಥಿಕತೆ
-ಅರವಿಂದ ಚೊಕ್ಕಾಡಿ, ಚಿಂತಕರು

ಉಚಿತ ಕೊಡುಗೆಗಳಿಗೆ ಸರಕಾರಕ್ಕೆ 50 ಸಾವಿರ ಕೋಟಿ ಬೇಕು ಎಂದರೆ ಅದರ ಅರ್ಥ ಸರಕಾರ 50 ಸಾವಿರ ಕೋಟಿ ರೂಪಾಯಿಯನ್ನು ಜನರ ಮೇಲೆ ಹೂಡಿಕೆ ಮಾಡುತ್ತಿದೆ ಎಂದು. ಇಲ್ಲಿ ಸರಕಾರಕ್ಕೆ ನಷ್ಟ ಆಗುವ ಪರಿಕಲ್ಪನೆ ಬರುವುದಿಲ್ಲ. ಏಕೆಂದರೆ ಲಾಭ ಮಾಡಲಿಕ್ಕೆ, ಸರಕಾರ ವ್ಯಾಪಾರಿಯಲ್ಲ; ಯಜಮಾನ. ನನ್ನ ಮಗಳಿಗೆ 50 ಸಾವಿರ ರೂಪಾಯಿ ಕಾಲೇಜು ಶುಲ್ಕ ನಾನು ಕಟ್ಟಿದರೆ ನನಗೆ 50 ಸಾವಿರ ರೂಪಾಯಿ ನಷ್ಟವಾಯಿತೆಂದು ಅರ್ಥವಲ್ಲ. ಮಗಳ ಸಬಲೀಕರಣವಾದಾಗ ಅದು ನನ್ನ ಸಬಲೀಕರಣವೂ ಆಗುತ್ತದೆ. ಅದೇ ರೀತಿ ಜನರ ಸಬಲೀಕರಣವಾದಾಗ ತಾನೇ ತಾನಾಗಿ ಸರಕಾರದ ಸಬಲೀಕರಣವೂ ಆಗುತ್ತದೆ. ಏಕೆಂದರೆ ಸರಕಾರ ಜನರ ಮೇಲೆ ಮಾಡಲಿರುವ 50 ಸಾವಿರ ಕೋಟಿ ರೂಪಾಯಿಗಳು ಇದೇ ಇಕಾನಮಿಯಲ್ಲಿ ಚಲಿಸುತ್ತಿರುತ್ತದೆ. ಜನರ ಖರೀದಿಯ ಸಾಮರ್ಥ್ಯ ಜಾಸ್ತಿಯಾದಾಗ ಅವರು ಖರೀದಿಸುವ ವಸ್ತುಗಳಿಗೆ ಹಾಕಲಾಗುವ ತೆರಿಗೆ ಸರಕಾರಕ್ಕೇ ಹೋಗುತ್ತದೆ.

ಕೇಂದ್ರ ಸರಕಾರದ ಮುದ್ರಾ ಯೋಜನೆಯ ಬಗ್ಗೆ ಬರೆದ ನಂತರ ಯಾವುದೇ ಅರ್ಥಶಾಸ್ತ್ರೀಯ ಲೇಖನಗಳನ್ನು ನಾನು ಬರೆದಿಲ್ಲ‌. ನನ್ನ ತಂದೆಯ ಕಾಲದಲ್ಲಿ ಸಮಾಜವಾದಿ ಸಮಾಜ ಒಂದು ಆದರ್ಶವಾಗಿತ್ತು. ಆ ಆದರ್ಶ ನನ್ನ ತಾರುಣ್ಯದ ದಿನಗಳಿಗೆ ಮಾತ್ರ ಸೀಮಿತವಾಗಿತ್ತು. ಬಡತನದ ಹಿನ್ನೆಲೆಯಿಂದ ಬಂದವನಾದ್ದರಿಂದ ಸಹಜವಾಗಿಯೆ ಸಮಾಜವಾದಿ ಆರ್ಥಿಕತೆ ನನ್ನನ್ನು ಸೆಳೆಯುತ್ತದೆ.‌ ಸಮಾಜವಾದ ಎಂದರೆ 50 ಸಾವಿರ ಕೋಟಿ ರೂಪಾಯಿ ಆಸ್ತಿ ಇರುವವನನ್ನು ಅವನ ಜಾತಿಯ ಕಾರಣಕ್ಕಾಗಿ ಶೋಷಿತ ಎನ್ನುವ ಜಾತಿವಾದಿಗಳ ಸಮಾಜವಾದವನ್ನು ನಾನು ಹೇಳುತ್ತಿರುವುದಲ್ಲ. ಜಾತಿಯ ಕಾರಣಕ್ಕಾಗಿ ಸಾಮಾಜಿಕ ಅವಮಾನವನ್ನು ಅನುಭವಿಸುತ್ತಾ ಸಂಪತ್ತನ್ನು ಸೃಷ್ಟಿಸಿಕೊಳ್ಳುವ ಅವಕಾಶ ಇಲ್ಲದವನನ್ನು ಶೋಷಿತ ಎಂದು ನಾನು ಕರೆಯುವುದು. ಅದು ಲಿಂಗ, ಧರ್ಮ, ಪ್ರದೇಶ, ಬಡತನ ಹೀಗೆ ಎಲ್ಲ ಆಧಾರಗಳಿಗೂ ವಿಸ್ತರಿಸುವ ಸಮಾಜ ವಾದ.‌ ಬಂಡವಾಳವಾದಿ ಅರ್ಥಶಾಸ್ತ್ರಜ್ಞನೂ ಕೂಡ ಬಂಡವಾಳವಾದಿ ವಿಧಾನದಲ್ಲಿ ಸಮಾಜವಾದಿ ಆಶಯಗಳು ಹೇಗೆ ಈಡೇರುತ್ತವೆ ಎಂದೇ ಹೇಳಬೇಕಾಗುತ್ತದೆ.‌ ಏಕೆಂದರೆ ಅರ್ಥಶಾಸ್ತ್ರ ಎಂಬ ಸಬ್ಜೆಕ್ಟೇ socialistic in nature. ಆದ್ದರಿಂದಲೇ ಇಡೀ ಜಗತ್ತು ಮುಕ್ತ ಆರ್ಥಿಕತೆಯನ್ನು ಹೊಂದಿರಬೇಕು ಎನ್ನುವ ಬಂಡವಾಳವಾದಿ ಅರ್ಥಶಾಸ್ತ್ರಜ್ಞ ಆ್ಯಡಂ ಸ್ಮಿತ್ ಕೂಡ ನ್ಯಾಯದ ಆಡಳಿತವನ್ನು ಸರಕಾರವೇ ಮಾಡಬೇಕು ಎನ್ನುತ್ತಾರೆ. ಅರ್ಥಶಾಸ್ತ್ರದಲ್ಲಿ ನ್ಯಾಯ ಎಂದಾಗ ಅದು ಕ್ರಿಮಿನಲ್ ಅಪರಾಧಕ್ಕೆ ಸೀಮಿತ ಅಲ್ಲ; ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿರುತ್ತದೆ.

ಆಧುನಿಕ ಆರ್ಥಿಕತೆಯಲ್ಲಿ ಶ್ರಮದ ಚಲನೆಗೆ ಬಹಳ‌ ಮಹತ್ವವಿದೆ. ನಮ್ಮ ಆರ್ಥಿಕತೆಯಲ್ಲಿ ಮಹಿಳೆಯರ ಪಾಲುದಾರಿಕೆ ಸುಮಾರು 20-25% ನಷ್ಟು ಇರುವುದು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎನ್ನುವುದು ದುಡಿಯುವ ಮಹಿಳೆಯರಿಗೆ ಸಪೋರ್ಟಿವ್ ಆಗಿ ಕೆಲಸ ಮಾಡುತ್ತದೆ. ತೀರಾ ಕಡಿಮೆ ವೇತನದ ಮಹಿಳೆಯರಿಗೆ ಉದ್ಯೋಗ ಬಿಡದಂತೆ ಸಣ್ಣ ಉತ್ತೇಜಕವಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ 2-3 ಸಾವಿರ ವೇತನಕ್ಕೆ ಸೇಲ್ಸ್ ಗರ್ಲ್ ರೀತಿಯ ಕೆಲಸ ಮಾಡುವ ಯುವತಿಯರನ್ನು ಗಮನಿಸಿ. ಮನೆಯಿಂದ ಉದ್ಯೋಗದ ಸ್ಥಳಕ್ಕೆ ಹೋಗಿ ಬರಲು ಸರಾಸರಿ ಅಂದಾಜು ದಿನಕ್ಕೆ 20-25 ರುಪಾಯಿ ಟಿಕೆಟ್ ಚಾರ್ಜು ಬೇಕು. ತಿಂಗಳಿಗೆ 750 ರೂಪಾಯಿ ಬಸ್ ಪ್ರಯಾಣಕ್ಕೆ ಹೋದರೆ 2 ಸಾವಿರ ರೂಪಾಯಿ ವೇತನದವಳಿಗೆ ಈ ಉದ್ಯೋಗವೇ ವೇಸ್ಟ್ ಎಂದು ಅನಿಸುತ್ತದೆ.‌ ನಮ್ಮಲ್ಲಿನ ಅತಿಥಿ ಶಿಕ್ಷಕರಲ್ಲಿ ಬಹುತೇಕರು ಮಹಿಳೆಯರು.‌ 10 ಸಾವಿರ ಸಂಬಳ ಸಿಗುತ್ತದೆ. ಅದರಲ್ಲಿ 750 ಬಸ್ ಚಾರ್ಜ್ ಉಳಿಯಿತು ಎನ್ನುವುದು ಆಕೆಗೆ ಮತ್ತೇನೋ ಆರ್ಥಿಕ ಚಟುವಟಿಕೆ ರೂಪಿಸಲು ಅವಕಾಶ ಮಾಡಿಕೊಡುತ್ತದೆ. ಒಂದು ಸೀರೆ ಖರೀದಿಸುತ್ತಾಳೆ ಎಂದು ಭಾವಿಸಿ. ಸೀರೆಯ ಮೇಲಿನ ಟ್ಯಾಕ್ಸ್ ಸರಕಾರಕ್ಕೇ ಹೋಗುತ್ತದೆ. ಜವುಳಿ ವ್ಯಾಪಾರಿಗೆ 750 ರೂಪಾಯಿ ವ್ಯಾಪಾರ ಆಯಿತು. ಅವನು ಮತ್ತೇನೋ ಆರ್ಥಿಕ ಚಟುವಟಿಕೆಗೆ ಅದನ್ನು ಹೊಂದಿಸುತ್ತಾನೆ.‌ ಅದರ ಮೇಲಿನ ಟ್ಯಾಕ್ಸೂ ಸರಕಾರಕ್ಕೇ ಹೋಗುತ್ತದೆ.‌ ಆ ಆರ್ಥಿಕ ಯೋಜನೆಯವ ಮತ್ತೊಂದು ಆರ್ಥಿಕ ಚಟುವಟಿಕೆ ರೂಪಿಸುತ್ತಾನೆ. ಹೀಗೆ ಆರ್ಥಿಕ ಚಟುವಟಿಕೆಗಳ ಸರಣಿಯನ್ನು 750 ರೂಪಾಯಿ ರೂಪಿಸುತ್ತದೆ. ಇಲ್ಲಿ 750 ರೂಪಾಯಿಯನ್ನು ಉದಾಹರಣೆಯಾಗಿರಿಸಿಕೊಂಡಾಗ ಇದು ಸಣ್ಣ ಮೊತ್ತ ಎನಿಸುತ್ತದೆ. ಅದನ್ನೆ, ಅಂದಾಜು 50 ಲಕ್ಷ ಮಹಿಳೆಯರಿಗೆ ಗುಣಿಸಿದಾಗ ಎಷ್ಟು ರುಪಾಯಿ ಆಯಿತೆಂದು ಯೋಚಿಸಿ. ಅಷ್ಟು ಮೊತ್ತದ ಆರ್ಥಿಕ ಚಟುವಟಿಕೆ ಹೆಚ್ಚಾಗಲೇ ಬೇಕಲ್ಲ. ಒಂದು ವೇಳೆ ಖರೀದಿಯನ್ನೆ ಮಾಡದೆ ಜನ ಬ್ಯಾಂಕ್ ನಲ್ಲಿ ಉಳಿತಾಯ ಮಾಡಿದರೆ ಬ್ಯಾಂಕ್ ಆ ಹಣವನ್ನು ಸಾಲವಾಗಿ ಬೇರೆ ಯಾರಿಗೋ ಕೊಡುತ್ತದೆ. ಮತ್ತೆ ಅದು ಆರ್ಥಿಕ ಚಟುವಟಿಕೆಯನ್ನೆ ಹೆಚ್ಚಿಸುತ್ತದೆ. ಹೀಗೆ 50 ಸಾವಿರ ಕೋಟಿ ರೂಪಾಯಿಗಳು ಒಟ್ಟಾಗಿ ಆರ್ಥಿಕತೆಯಲ್ಲಿ ಚಲನೆಗೆ ಒಳಪಟ್ಟಾಗ ಒಟ್ಟೂ ಆರ್ಥಿಕತೆಗೆ ಸಣ್ಣ ಚೈತನ್ಯ ಬರುತ್ತದೆ.
‘ಮಾಸ್’ ನ ಮೇಲೆ ಪರಿಣಾಮ ಬೀರುವ ಆರ್ಥಿಕ ಪರಿಕಲ್ಪನೆಗಳನ್ನು ಸರಕಾರ ಚಾಲನೆಗೆ ತರುವುದು ಆರ್ಥಿಕೇತರ ಸಾಮಾಜಿಕ ಪರಿಣಾಮಗಳನ್ನೂ ಉಂಟು ಮಾಡುತ್ತದೆ.‌ ಉಚಿತ ಕೊಡುಗೆಗಳ ಬಗ್ಗೆ ಲಕ್ಷಾಂತರ ಜನ ಸಮರ್ಥನೆ ಮತ್ತು ವಿರೋಧ ಎರಡನ್ನೂ ಮಾಡಿದ್ದಾರೆ. ಆದರೆ ಎರಡೂ ತಂಡಗಳೂ ಅಷ್ಟರ ಮಟ್ಟಿಗೆ ಆರ್ಥಿಕತೆಯ ಬಗ್ಗೆಯೇ ಯೋಚಿಸಿದ್ದಾರೆ. ಅಷ್ಟು ಹೊತ್ತು ಜಾತಿ/ ಧರ್ಮದ ಆಧಾರದಲ್ಲಿ ನಿಂದನೆ ಮಾಡುವ ಸಮಯವನ್ನು ಕಳೆದುಕೊಂಡಿದ್ದಾರೆ; ಅಂದರೆ ಅಷ್ಟರ ಮಟ್ಟಿಗೆ ದ್ವೇಷ ಪ್ರಸರಣ ಕಾರ್ಯಕ್ರಮ ಸ್ಟಾಪ್ ಆಗಿದೆ.‌ ಇದು ಸಮಾಜಕ್ಕೆ ಆಗಿರುವ ಲಾಭ. ಮತ್ತು ತಾರ್ಕಿಕವಾಗಿ ಯೋಚಿಸುವ ಶಕ್ತಿಗೆ ಸಿಕ್ಕಿದ ಉತ್ತೇಜನ.
ಇಷ್ಟೆಲ್ಲ ಆದರೂ ಒಂದು ಸಮಸ್ಯೆ ಆಗುತ್ತದೆ. ಸರಕಾರದ ಆದಾಯ ಗಳಿಕೆಗಾಗಿ ಮಧ್ಯಮ ವರ್ಗದ ಮೇಲೆ ತೆರಿಗೆ ಹೆಚ್ಚಿಸಿದರೆ ಸಮಸ್ಯೆಯಾಗುತ್ತದೆ. ಅತಿ ಶ್ರೀಮಂತರ ಮೇಲಿನ ತೆರಿಗೆಯನ್ನು ಬಡವರಿಗೆ ವರ್ಗಾಯಿಸುವುದು ಸಂಪತ್ತಿನ ವಿಕೇಂದ್ರೀಕರಣ ಎನ್ನುವುದು ತಾತ್ವಿಕವಾಗಿ ಸರಿ. ಆದರೆ ವಾಸ್ತವದಲ್ಲಿ ಹಾಗಾಗುವುದಿಲ್ಲ. ಅತೀ ಶ್ರೀಮಂತ ವರ್ಗಕ್ಕೆ ಕಾನೂನನ್ನು ತನಗೆ ಬೇಕಾದ ಹಾಗೆ ಮಾಡಿಸುವ ಮತ್ತು ಕಾನೂನಿನ ಒಳಗೆ ನುಸುಳುವ ಶಕ್ತಿ ಇರುತ್ತದೆ. ಬಡ ವರ್ಗಕ್ಕೆ ತೆರಿಗೆ ಪಾವತಿಯ ಶಕ್ತಿಯೇ ಇರುವುದಿಲ್ಲ. ಆದ್ದರಿಂದ ಅದರ ಮೇಲೆ ತೆರಿಗೆ ಹಾಕಲು ಆಗುವುದಿಲ್ಲ. ಮಧ್ಯಮ ವರ್ಗಕ್ಕೆ ಕಾನೂನನ್ನು ತನಗೆ ಬೇಕಾದಂತೆ ಮಾಡಿಸುವ ಮತ್ತು ಕಾನೂನಿನೊಳಗೆ ನುಸುಳುವ ಶಕ್ತಿ ಇರುವುದಿಲ್ಲ.‌ ಆಗ ಮಧ್ಯಮ ವರ್ಗದಿಂದ ತೆರಿಗೆ ಸಂಗ್ರಹಿಸುವುದು ಸುಲಭವಾಗುತ್ತದೆ. ಮಧ್ಯಮ ವರ್ಗದಿಂದ ಹೀರಿ ಆ ಕಡೆಯಿಂದ ಅತಿ ಶ್ರೀಮಂತರಿಗೂ, ಈ ಕಡೆಯಿಂದ ಬಡವರಿಗೂ ಕೊಡುತ್ತಾ ಹೋದರೆ ಆರ್ಥಿಕತೆ ಬೆಳೆಯುವುದಿಲ್ಲ. ಏಕೆಂದರೆ ಸದಾ ಕಾಲವೂ ಆರ್ಥಿಕತೆಯನ್ನು ಬೆಳೆಯಿಸುವುದು ಮಧ್ಯಮ ವರ್ಗ; ಅದಕ್ಕೆ ಕೊಳ್ಳುವ ಅಪೇಕ್ಷೆ ಜಾಸ್ತಿ ಇರುತ್ತದೆ. ಆದ್ದರಿಂದ ಮಧ್ಯಮ ವರ್ಗದ ಖರೀದಿಸುವ ಶಕ್ತಿ ಕುಗ್ಗದ ಹಾಗೆ ನೋಡಿಕೊಳ್ಳಬೇಕು.

-ಅರವಿಂದ ಚೊಕ್ಕಾಡಿ, ಮೂಡಬಿದ್ರೆ
*****

The post ಆರ್ಥಿಕ‌ ಚಿಂತನೆ: ಅರವಿಂದ ಚೊಕ್ಕಾಡಿ, ಚಿಂತಕರು, ಮೂಡಬಿದ್ರೆ, ವಿಷಯ: ಉಚಿತ ಕೊಡುಗೆಗಳ ಆರ್ಥಿಕತೆ appeared first on Karnataka Kahale.

]]>
Tech business economy crisis https://www.karnatakakahale.com/news/2516 Wed, 29 Apr 2020 02:35:25 +0000 https://demo.mantrabrain.com/magazinenp/?p=38 The post Tech business economy crisis appeared first on Karnataka Kahale.

]]>
The post Tech business economy crisis appeared first on Karnataka Kahale.

]]>
World economy after pandemic https://www.karnatakakahale.com/news/2515 Wed, 29 Apr 2020 02:34:35 +0000 https://demo.mantrabrain.com/magazinenp/?p=35 The post World economy after pandemic appeared first on Karnataka Kahale.

]]>
The post World economy after pandemic appeared first on Karnataka Kahale.

]]>
Digital Camera for fashion https://www.karnatakakahale.com/news/2511 Wed, 29 Apr 2020 02:30:52 +0000 https://demo.mantrabrain.com/magazinenp/?p=23 The post Digital Camera for fashion appeared first on Karnataka Kahale.

]]>
The post Digital Camera for fashion appeared first on Karnataka Kahale.

]]>