Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಹಂಪಿ-ಹೊಸಪೇಟೆ ಗೈಡ್ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Sat, 06 Apr 2024 12:05:43 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಹಂಪಿ-ಹೊಸಪೇಟೆ ಗೈಡ್ – Karnataka Kahale https://www.karnatakakahale.com 32 32 ಬಣಗಾರ್ ಎಂಬ ಕ್ಯಾಮರಾ ಮಾಂತ್ರಿಕ!! ಚಿತ್ರ-ಆಪ್ತ ಬರಹ:ಭರತ್ ರಾಜ್, ಕೆರೆಮನೆ. ಶೃಂಗೇರಿ. https://www.karnatakakahale.com/news/15944 Sat, 06 Apr 2024 07:18:51 +0000 https://www.karnatakakahale.com/?p=15944 ಬಣಗಾರ್ ಎಂಬ ಕ್ಯಾಮರಾ ಮಾಂತ್ರಿಕ  !!! ಅಂದಿನ ಹಂಪಿ ಎಂದಾಗ ನಮಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯದ ವೈಭವ. ಇಂದಿನ ಹಂಪಿ ಎಂದಾಗ ನೆನಪಾಗುವುದು ಅಲ್ಲಿ ಮೌನವಾಗಿ ನಿಂತ ನೂರಾರು ಶಿಲ್ಪಕಲಾ ಅದ್ಭುತಗಳು. ಅವುಗಳ ಜೊತೆ ಜೊತೆಯಲ್ಲೇ ನೆನಪಾಗುವ ಹೆಸರು ಎಂದರೆ ಆ…

The post ಬಣಗಾರ್ ಎಂಬ ಕ್ಯಾಮರಾ ಮಾಂತ್ರಿಕ!! ಚಿತ್ರ-ಆಪ್ತ ಬರಹ:ಭರತ್ ರಾಜ್, ಕೆರೆಮನೆ. ಶೃಂಗೇರಿ. appeared first on Karnataka Kahale.

]]>
  • ಬಣಗಾರ್ ಎಂಬ ಕ್ಯಾಮರಾ ಮಾಂತ್ರಿಕ  !!!
  • ಅಂದಿನ ಹಂಪಿ ಎಂದಾಗ ನಮಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯದ ವೈಭವ. ಇಂದಿನ ಹಂಪಿ ಎಂದಾಗ ನೆನಪಾಗುವುದು ಅಲ್ಲಿ ಮೌನವಾಗಿ ನಿಂತ ನೂರಾರು ಶಿಲ್ಪಕಲಾ ಅದ್ಭುತಗಳು. ಅವುಗಳ ಜೊತೆ ಜೊತೆಯಲ್ಲೇ ನೆನಪಾಗುವ ಹೆಸರು ಎಂದರೆ ಆ ಅದ್ಭುತಗಳನ್ನು ತಮ್ಮ ಅನುಪಮ ಛಾಯಾಗ್ರಹಣದಿಂದ ಸೆರೆ ಹಿಡಿಯುವ ಶಿವಶಂಕರ ಬಣಗಾರ್ ಎಂಬ ಕ್ಯಾಮರಾ ಮಾಂತ್ರಿಕ.

    ಶಿವನಿಗೆ ಮೂರು ಕಣ್ಣು ಎಂಬ ಮಾತಿದೆ. ಈ ಶಿವಶಂಕರರಿಗೆ ಕ್ಯಾಮರಾ ಎನ್ನುವ ಮೂರನೇ ಕಣ್ಣೇ ಛಾಯಾಗ್ರಹಣದ ಮಾಯಾಲೋಕ ಸೃಷ್ಟಿಸುವ ಸಾಧನ. ವಿಭಿನ್ನ ಹಾಗೂ ವಿಶಿಷ್ಟ ದೃಷ್ಟಿಕೋನ, ಸಮ್ಮೋಹಕ ಸೆರೆ ಇವರ ಚಿತ್ರ ವೀಕ್ಷಕರನ್ನು ವಿಸ್ಮಯಲೋಕಕ್ಕೆ ಸೆಳೆದೊಯ್ಯುತ್ತವೆ. ಇವರ ಒಂದೊಂದು ಚಿತ್ರ ಒಂದೊಂದು ಕತೆ ಹೇಳುತ್ತದೆ. ಹಂಪಿಯಲ್ಲಾಗಲಿ ಅಥವಾ ಇವರ ಪ್ರವಾಸ ತಾಣಗಳಲ್ಲಾಗಲೀ ಪ್ರತಿನಿತ್ಯ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಮನಮೋಹಕವಾಗಿ ಸೆರೆ ಹಿಡಿಯುವುದು ಬಣಗಾರರ ಹವ್ಯಾಸ.

    ನಮ್ಮ ‘ ಕೆರೆಮನೆ ‘ ಕುಟುಂಬದ ಆತ್ಮೀಯ ಮಿತ್ರರಾದ ಮೈಸೂರಿನ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಜೀವಂಧರ ಕುಮಾರ್ ಅವರು ಬಣಗಾರ್ ಬಗ್ಗೆ ನನಗೆ ಆಗಾಗ ಹೇಳುತ್ತಿದ್ದರು. ಬಣಗಾರರ ಹಲವಾರು ಚಿತ್ರಗಳನ್ನೂ ತೋರಿಸಿದ್ದರು. ನನಗೆ ಅರಿವಿಲ್ಲದೆಯೇ ಅವರ ಅಭಿಮಾನಿಯಾದೆ. ಅವರನ್ನು ಕಾಣುವ, ಅವರೊಂದಿಗೆ ಕೆಲ ಸಮಯ ಕಳೆಯುವ ಬಯಕೆ ನನ್ನಲ್ಲಿ ಮೂಡಿತು. ಇತ್ತೀಚೆಗೆ, ಅಂದರೆ ಮಾರ್ಚ್ 24-03-2024   ರಂದು ಶೃಂಗೇರಿಗೆ ಬಣಗಾರ್ ಬಂದಿರುವ ವಿಷಯ ತಿಳಿಯಿತು. ಬಹುದಿನಗಳ ನನ್ನ ಬಯಕೆ ನೆರವೇರುವ ಸಮಯ ಒದಗಿತು. ನಮ್ಮ ಕರೆಗೆ ಆತ್ಮೀಯವಾಗಿ ಸ್ಪಂದಿಸಿ ನಮ್ಮ ‌’ ಕೆರೆಮನೆ ‘ ಗೆ  ಬಣಗಾರ್ ಬಂದರು.
    ನಮ್ಮ ತೋಟವನ್ನೆಲ್ಲಾ ಕಂಡು ಖುಷಿಪಟ್ಟು ನಮ್ಮಲ್ಲಿನ ಹೂ, ಹಣ್ಣುಗಳನ್ನು ಸೆರೆ ಹಿಡಿದು ಫೇಸ್‌ಬುಕ್‌‍ನಲ್ಲಿ Live ಆಗಿಯೂ ತೋರಿಸಿದರು. ಬಣಗಾರರ ಸರಳತೆ, ಪ್ರೀತಿ ಭರಿತ ಮಾತು ನಮ್ಮೆಲ್ಲರಲ್ಲಿ ನಲಿವು ಮೂಡಿಸಿತು. ಬಣಗಾರರ ಭೇಟಿ ‘ಕೆರೆಮನೆ ‘ ಕುಟುಂಬಕ್ಕೆ ಒಂದು ಅವಿಸ್ಮರಣೀಯ ಅನುಭವ.
    ತುಂಬು ಹೃದಯದ ಧನ್ಯವಾದಗಳು ಬಣಗಾರ್ ಸರ್ !

    ಮೊದಲು ಪತ್ರಿಕಾ ವರದಿಗಾರ, ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ ಬಣಗಾರರು ‘ ಉದಯವಾಣಿ ‘ ಯಲ್ಲಿ ‘ ನೀರುಕಾಗೆ ತೊಟ್ಟಿಲೋತ್ಸವ ‘ ಎಂಬ ಸುದ್ದಿ – ಚಿತ್ರಣಕ್ಕೆಂದು ಪಕ್ಷಿ ಛಾಯಾಗ್ರಾಹಕರಾದರು. ಮುಂದಿನ ದಿನಗಳಲ್ಲಿ ವನ್ಯಜೀವಿ ಛಾಯಾಗ್ರಹಣದ ಕಡೆಗೆ ಆಸಕ್ತಿ ವಿಸ್ತರಿಸಿಕೊಂಡು ಅದರಲ್ಲೂ ಉತ್ತಮ ಸಾಧನೆ, ಹೆಸರು ಮಾಡಿದರು.
    ಹಂಪಿ ಬಳಿಯ ‘ ತೇಜಸ್ವಿ ಲೋಕ ‘ ನಿರ್ಮಾತೃ ಪಂಪಯ್ಯ ಸ್ವಾಮಿ ಮಳೇಮಠ್ ಅವರ ಸಂಪರ್ಕ ದೊರೆತು ವನ್ಯಜೀವಿ ಛಾಯಾಗ್ರಹಣದ ತಾಂತ್ರಿಕ ಅಂಶಗಳನ್ನು ಕರಗತ ಮಾಡಿಕೊಂಡ ಬಣಗಾರ್ ಪಂಪಯ್ಯ ಅವರನ್ನು ತಮ್ಮ ಗುರುವೆಂದೇ ಭಾವಿಸಿದ್ದಾರೆ.

     

    2012 ರಲ್ಲಿ ಫೇಸ್‌ಬುಕ್‌ ಪ್ರವೇಶಿಸಿದ ಬಣಗಾರ್ ಬಲು ಬೇಗ ತಮ್ಮ ಸೊಗಸಾದ ಹಾಗೂ ವಿಭಿನ್ನ ಶೈಲಿಯ ಚಿತ್ರಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಮಿತ್ರರನ್ನೂ ಸಂಪಾದಿಸಿದರು. ಈಗಲೂ ಸಾವಿರಾರು followers ಹೊಂದಿರುವ ಬಣಗಾರ್ ಇಂದು ನಮ್ಮ ನಾಡು ಕಂಡ ಅಪ್ರತಿಮ ಛಾಯಾಗ್ರಾಹಕರು. ದೇಶ ವಿದೇಶಗಳ ಛಾಯಾಗ್ರಾಹಕರು ಇವರ ಮಾರ್ಗದರ್ಶನದಲ್ಲಿ ಹಂಪಿಯ ಅನುಪಮ ಸೌಂದರ್ಯ ಸೆರೆ ಹಿಡಿಯಲು ಬರುತ್ತಾರೆ. ಆಸಕ್ತರು ಇವರನ್ನು  9448234764  ಸಂಖ್ಯೆಯಲ್ಲಿ ಸಂಪರ್ಕಿಸಿ ಇವರ ಶಿಬಿರಗಳ ಮಾಹಿತಿ / ಅಪಾಯಿಂಟ್ಮೆಂಟ್ ಪಡೆಯಬಹುದು.

    ಅತ್ಯದ್ಭುತ ಛಾಯಾಗ್ರಹಣದಿಂದ ಬಣಗಾರರು ಅಸಂಖ್ಯಾತ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.
    ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಪ್ರಶಸ್ತಿ ಗಳಿಸಿರುವ ಬಣಗಾರರ ಚಿತ್ರಗಳು ಅಮೆರಿಕದ ಖ್ಯಾತ ಕನ್ನಡ ಸಂಸ್ಥೆ ‘ AKKA ‘ ( ‘ ಅಕ್ಕ ‘ ) ದ ‘ ಐಸಿರಿ ‘ ಗ್ರಂಥವನ್ನು ಅಲಂಕರಿಸಿವೆ.

    ಹಲವಾರು ಛಾಯಾಚಿತ್ರ ಪ್ರದರ್ಶನಗಳಲ್ಲಿ ಬಣಗಾರರ ಚಿತ್ರಗಳಿಗೆ ಎಂದಿಗೂ ವಿಶೇಷ ಸ್ಥಾನ ಮಾನ ಇದ್ದದ್ದೇ. ಆಸಕ್ತ ಅಭಿಮಾನಿಗಳಿಗೆ ಇವರ ಚಿತ್ರಗಳು ಸುಂದರ ಚೌಕಟ್ಟಿನಿಂದ ಉತ್ತಮ ಬೆಲೆಯಲ್ಲಿ ಲಭ್ಯವಿದೆ. ಕೊಡುಗೆ, ಸ್ಮರಣಿಕೆ, ಸನ್ಮಾನದ ರೂಪದಲ್ಲಿ ನೀಡಲು ಬಣಗಾರರ ಚಿತ್ರಗಳು ಬಲು ಸೂಕ್ತ.

    ಮಿತ್ರ ಜೀವಂಧರ ಕುಮಾರ್ ಹೇಳುವಂತೆ ಶಿವಶಂಕರ ಬಣಗಾರ್ ಎಂದರೆ   “ಹಂಪಿಯ  ಬ್ರ್ಯಾಂಡ್ ಅಂಬ್ಯಾಸಿಡರ್ ”                                             ಆಸಕ್ತರು ಸಂಪರ್ಕಿಸಬಹುದು

    ಶಿವಶಂಕರ ಬಣಗಾರ್:
    9448234764

    ✍ಭರತ್ ರಾಜ್, ಕೆರೆಮನೆ. ಶೃಂಗೇರಿ.
    —–

    The post ಬಣಗಾರ್ ಎಂಬ ಕ್ಯಾಮರಾ ಮಾಂತ್ರಿಕ!! ಚಿತ್ರ-ಆಪ್ತ ಬರಹ:ಭರತ್ ರಾಜ್, ಕೆರೆಮನೆ. ಶೃಂಗೇರಿ. appeared first on Karnataka Kahale.

    ]]>
    ಹಂಪಿ ಕನ್ನಡ ವಿವಿಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಣೆ https://www.karnatakakahale.com/news/6898 Mon, 06 Dec 2021 15:18:45 +0000 https://www.karnatakakahale.com/?p=6898 ಬಳ್ಳಾರಿ,ಡಿ.6: ಹಂಪಿ ಕನ್ನಡ ವಿಶ್ವವಿದ್ಯಾಲಯದ ದಲಿತ ಅಧ್ಯಯನ ಪೀಠ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಸೋಮವಾರ ಸರಳವಾಗಿ ಆಚರಿಸಿತು. ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಹಾಗೂ…

    The post ಹಂಪಿ ಕನ್ನಡ ವಿವಿಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಣೆ appeared first on Karnataka Kahale.

    ]]>

    ಬಳ್ಳಾರಿ,ಡಿ.6: ಹಂಪಿ ಕನ್ನಡ ವಿಶ್ವವಿದ್ಯಾಲಯದ ದಲಿತ ಅಧ್ಯಯನ ಪೀಠ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಸೋಮವಾರ ಸರಳವಾಗಿ ಆಚರಿಸಿತು.
    ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಹಾಗೂ ದಲಿತ ಅಧ್ಯಯನ ಪೀಠದ ಸಂಚಾಲಕ ಡಾ. ವೆಂಕಟಗಿರಿ ದಳವಾಯಿ ಇದ್ದರು.
    *****

    The post ಹಂಪಿ ಕನ್ನಡ ವಿವಿಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಣೆ appeared first on Karnataka Kahale.

    ]]>
    ಹಂಪಿಯಲ್ಲಿ ಅ. 17, 18 ಮತ್ತು 19 ರಂದು ದಕ್ಷಿಣ ಭಾರತ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಭೆ -ಸಚಿವ ಆನಂದ್ ಸಿಂಗ್ https://www.karnatakakahale.com/news/6003 Tue, 21 Sep 2021 13:14:56 +0000 https://www.karnatakakahale.com/?p=6003 ಬೆಂಗಳೂರು, ಸೆ.21: ವಿಕಾಸಸೌಧದಲ್ಲಿ ವಿಶ್ವ ಪಾರಂಪರಿಕ ಪ್ರವಾಸಿ ತಾಣವಾದ ಹಂಪಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಸಚಿವ ಆನಂದ್ ಸಿಂಗ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಹಂಪಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಹಾಗೂ ಕಾಮಗಾರಿಗಳನ್ನು ತ್ವರಿತವಾಗಿ…

    The post ಹಂಪಿಯಲ್ಲಿ ಅ. 17, 18 ಮತ್ತು 19 ರಂದು ದಕ್ಷಿಣ ಭಾರತ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಭೆ -ಸಚಿವ ಆನಂದ್ ಸಿಂಗ್ appeared first on Karnataka Kahale.

    ]]>

    ಬೆಂಗಳೂರು, ಸೆ.21: ವಿಕಾಸಸೌಧದಲ್ಲಿ ವಿಶ್ವ ಪಾರಂಪರಿಕ ಪ್ರವಾಸಿ ತಾಣವಾದ ಹಂಪಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಸಚಿವ ಆನಂದ್ ಸಿಂಗ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
    ಸಭೆಯಲ್ಲಿ ಹಂಪಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಹಾಗೂ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಿದರು.
    ಭಾರತೀಯ ಪುರಾತತ್ವ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆ ಗಡಿ ಗುರುತಿಸಿ ನಾಮಫಲಕ ಹಾಕುವುದಕ್ಕೆ ಸಚಿವರು ಸೂಚನೆ ನೀಡಿದ್ದಾರೆ.
    ಹಂಪಿಯಲ್ಲಿ ಚಲನಚಿತ್ರ ಚಿತ್ರೀಕರಣಕ್ಕಾಗಿ ಅವಕಾಶ ನೀಡುವ ಕುರಿತು ನಿಯಮಗಳನ್ನು ಸರಳೀಕರಣ ಮಾಡಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು ಈ ಸಂಬಂಧ ಚಲನಚಿತ್ರ ನಿರ್ದೇಶಕರನ್ನು ಸೇರಿಸಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಹಂಪಿಯ 5 ಕಡೆ ಶೌಚಾಲಯವನ್ನು ಉನ್ನತಿಕರಣ ಮಾಡಲು ಸಚಿವ ಆನಂದ್ ಸಿಂಗ್ ಅವರು ಸೂಚಿಸಿದ್ದಾರೆ.
    ಹಂಪಿ ನೋಡಲು ಬಂದ ಪ್ರವಾಸಿಗರಿಗೆ ಆನ್ ಲೈನ್ ಟಿಕೆಟ್ ಜೊತೆಗೆ ಮ್ಯಾನ್ಯುಯಲ್ ಟಿಕೆಟ್ ಸಹ ದೊರೆಯಬೇಕು ಹಾಗೂ ನೆಟ್ವರ್ಕ್ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲು ನಿರ್ಧರಿಸಲಾಗಿದ್ದು, 3 ಟವರ್ ಸ್ಥಾಪನೆ ಅನುಮತಿ ನೀಡಲಾಗಿದೆ.
    ದಕ್ಷಿಣ ಭಾರತದ ಎಲ್ಲಾ ರಾಜ್ಯದ ಪ್ರವಾಸೋದ್ಯಮ ಸಚಿವರ ಸಭೆಯನ್ನು ಅ. 17,18 ಮತ್ತು 19 ರಂದು ಹಂಪಿಯಲ್ಲಿ ಏರ್ಪಡಿಸಲಾಗಿದ್ದು, ಸಭೆಯ ಹಿನ್ನಲೆಯಲ್ಲಿ ಅಗತ್ಯ ವ್ಯವಸ್ಥೆ ಕುರಿತು ಮಾಹಿತಿ ಪಡೆದ ಸಚಿವರು ಉತ್ತಮ ವ್ಯವಸ್ಥೆ ಮಾಡುವುದಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ನೀಡಿದರು.
    ಕಮಲಪುರದಲ್ಲಿ G+ 1 ಮನೆ ನಿರ್ಮಾಣಕ್ಕೆ ಅನುಮತಿ ಇದೆ. ಅದನ್ನು G+2 ಮಾಡಲು ನಿಯಮದಲ್ಲಿ ಸೂಕ್ತ ತಿದ್ದುಪಡಿ ಮಾಡಲು ಹಂಪಿ ವಿಶ್ವ ಪರಂಪರ ಪ್ರದೇಶ ಅಭಿವೃದ್ದಿ ಪ್ರಾಧಿಕಾರಕ್ಕೆ ಸೂಚನೆ ನೀಡಿದರು.
    ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿಗ ಪಂಕಜ್ ಕುಮಾರ್ ಪಾಂಡೆ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಶ್ರೀಮತಿ ಸಿಂಧೂ ಬಿ ರೂಪೇಶ್, ಕೆ ಎಸ್ ಟಿ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮ ಮತ್ತು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
    *****

    The post ಹಂಪಿಯಲ್ಲಿ ಅ. 17, 18 ಮತ್ತು 19 ರಂದು ದಕ್ಷಿಣ ಭಾರತ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಭೆ -ಸಚಿವ ಆನಂದ್ ಸಿಂಗ್ appeared first on Karnataka Kahale.

    ]]>
    ಮಳೆಗಾಲದ ಹಂಪಿ [ಚಿತ್ರ-ಮಾಹಿತಿ:ಶಿವಶಂಕರ್ ಬಣಗಾರ್, ಹೊಸಪೇಟೆ] https://www.karnatakakahale.com/news/5135 Sat, 17 Jul 2021 14:00:18 +0000 https://www.karnatakakahale.com/?p=5135 ಹಂಪಿ:ಮುಸಕ್ಕಿದ್ದ ಮೋಡಗಳು ಶನಿವಾರ ಸಂಜೆಯಾದಂತೆ ಇದ್ದಕ್ಕಿದ್ದಂತೆ ಚದುರಿ ಹೊಂಬಣ್ಣಕ್ಕೆ ತಿರುಗಿದ್ದು ಇದನ್ನು ನಿರೀಕ್ಷಿಸರಲಿಲ್ಲ. ಹೀಗೆ ಅನಿರೀಕ್ಷಿತ ಘಟನಾವಳಿ ಸೆರೆಗೆ ಕಾಯಬೇಕಷ್ಟೆ. ವಿಜಯವಿಠ್ಠಲ ದೇಗುಲದ ದ್ವಾರಗೋಪುರವು ಮೋಡಗಳ ಚೆಲ್ಲಾಟದಲ್ಲಿ ನಿನ್ನೆ ವಿಭಿನ್ನವಾಗಿ ಕಾಣಿಸಿತು. ಚಿತ್ರ-ಮಾಹಿತಿ: ಶಿವಶಂಕರ್ ಬಣಗಾರ👇 (ಚಿತ್ರ:ಸಿ.ಮಂಜುನಾಥ್)

    The post ಮಳೆಗಾಲದ ಹಂಪಿ [ಚಿತ್ರ-ಮಾಹಿತಿ:ಶಿವಶಂಕರ್ ಬಣಗಾರ್, ಹೊಸಪೇಟೆ] appeared first on Karnataka Kahale.

    ]]>
    ಹಂಪಿ:ಮುಸಕ್ಕಿದ್ದ ಮೋಡಗಳು ಶನಿವಾರ ಸಂಜೆಯಾದಂತೆ ಇದ್ದಕ್ಕಿದ್ದಂತೆ ಚದುರಿ ಹೊಂಬಣ್ಣಕ್ಕೆ ತಿರುಗಿದ್ದು ಇದನ್ನು ನಿರೀಕ್ಷಿಸರಲಿಲ್ಲ. ಹೀಗೆ ಅನಿರೀಕ್ಷಿತ ಘಟನಾವಳಿ ಸೆರೆಗೆ ಕಾಯಬೇಕಷ್ಟೆ. ವಿಜಯವಿಠ್ಠಲ ದೇಗುಲದ ದ್ವಾರಗೋಪುರವು ಮೋಡಗಳ ಚೆಲ್ಲಾಟದಲ್ಲಿ ನಿನ್ನೆ ವಿಭಿನ್ನವಾಗಿ ಕಾಣಿಸಿತು.

    ಚಿತ್ರ-ಮಾಹಿತಿ: ಶಿವಶಂಕರ್ ಬಣಗಾರ👇

    (ಚಿತ್ರ:ಸಿ.ಮಂಜುನಾಥ್)

    The post ಮಳೆಗಾಲದ ಹಂಪಿ [ಚಿತ್ರ-ಮಾಹಿತಿ:ಶಿವಶಂಕರ್ ಬಣಗಾರ್, ಹೊಸಪೇಟೆ] appeared first on Karnataka Kahale.

    ]]>