Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಹರಪನಹಳ್ಳಿ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Sun, 25 May 2025 10:27:20 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಹರಪನಹಳ್ಳಿ – Karnataka Kahale https://www.karnatakakahale.com 32 32 ಹರಪನಹಳ್ಳಿಯಲ್ಲಿ ಡಾ.ಭರಣಿ ಮತ್ತು ಸಿದ್ಧಯ್ಯ ಅವರ ಜನ್ಮ ದಿನಾಚರಣೆ: ಡಾ.‌ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ -ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಬಣ್ಣನೆ https://www.karnatakakahale.com/news/19509 Sun, 25 May 2025 10:27:20 +0000 https://www.karnatakakahale.com/?p=19509 ಹರಪನಹಳ್ಳಿ, ಮೇ 24: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಿಂದ ಎಡಿಜಿಪಿವರೆಗೆ ಮೂರುವರೆ ದಶಕಗಳ ಕಾಲ ಜನಪರ, ದಕ್ಷ ಆಡಳಿತ ನಡೆಸಿದ ಡಾ.‌ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ ಎಂದು ಹಿರಿಯ ಪತ್ರಕರ್ತ, ಉಪನ್ಯಾಸಕ ಬಳ್ಳಾರಿಯ ಸಿ.‌ಮಂಜುನಾಥ್ ಬಣ್ಣಿಸಿದರು.…

The post ಹರಪನಹಳ್ಳಿಯಲ್ಲಿ ಡಾ.ಭರಣಿ ಮತ್ತು ಸಿದ್ಧಯ್ಯ ಅವರ ಜನ್ಮ ದಿನಾಚರಣೆ: ಡಾ.‌ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ -ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಬಣ್ಣನೆ appeared first on Karnataka Kahale.

]]>

ಹರಪನಹಳ್ಳಿ, ಮೇ 24: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಿಂದ ಎಡಿಜಿಪಿವರೆಗೆ ಮೂರುವರೆ ದಶಕಗಳ ಕಾಲ ಜನಪರ, ದಕ್ಷ ಆಡಳಿತ ನಡೆಸಿದ ಡಾ.‌ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ ಎಂದು ಹಿರಿಯ ಪತ್ರಕರ್ತ, ಉಪನ್ಯಾಸಕ ಬಳ್ಳಾರಿಯ ಸಿ.‌ಮಂಜುನಾಥ್ ಬಣ್ಣಿಸಿದರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಮೋಹನಾಭರಣಿ ಮಹಿಳಾ ಮಂಡಳಿಯ ಹೇಮರೆಡ್ಡಿ ಮಲ್ಲಮ್ಮ ಐ.ಟಿ.ಐ ಕಾಲೇಜಿನಲ್ಲಿ ಬುದ್ದ ಬಸವ ಅಂಬೇಡ್ಕರ್ ವಿಶ್ವ ಕಲ್ಯಾಣ ಸಂಸ್ಥೆ (ರಿ), ಶ್ರೀ ಶರಣಬಸವ ಬುದ್ದ ಭೀಮಜಿ ವಿದ್ಯಾ ಸಂಸ್ಥೆ, ಹಾಗೂ ಬಳ್ಳಾರಿಯ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ನಿವೃತ್ತ ಎಡಿಜಿಪಿ ಡಾ. ಸುಭಾಷ್ ಭರಣಿ ಅವರ 75ನೇ  ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಛಲವಾದಿ ಮಹಾ ಸಭಾದ ರಾಜ್ಯಾಧ್ಯಕ್ಷ ಸಿದ್ದಯ್ಯ ಅವರ 67ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಭರಣಿ ಅವರ  ಜೀವನ, ಸಾಧನೆಗಳ ಬಗ್ಗೆ  ಅವರು ಮಾತನಾಡಿದರು.


ಚಿಕ್ಕಮಗಳೂರು, ಧಾರವಾಡ ಮತ್ತು ಬಳ್ಳಾರಿಯಲ್ಲಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಡಾ. ಭರಣಿ ಅವರ ಜನಮುಖಿ‌ ಕಾರ್ಯಗಳನ್ನು ಜನತೆ ಇಂದಿಗೂ ಕೊಂಡಾಡುತ್ತಿದ್ದಾರೆ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯ ಕಲ್ಕಂಬ, ಮುದ್ದಟನೂರು ಗ್ರಾಮಗಳಲ್ಲಿ ದಲಿತ ಮಹಿಳೆಯರ ಮೇಲೆ‌ ನಡೆಯುತ್ತಿದ್ದ ಅಮಾನುಷ ಓಕುಳಿ ಚೆಲ್ಲುವ ಪದ್ಧತಿಯನ್ನು ನಿಲ್ಲಿಸಿದ ಕೀರ್ತಿ ಡಾ. ಸುಭಾಷ್ ಭರಣಿ ಅವರಿಗೆ ಸಲ್ಲುತ್ತದೆ ಎಂದರು.
ಸಂಶೋಧಕರು ಈ‌ ಕಾರ್ಯವನ್ನು ಕಲ್ಯಾಣ‌ ಕರ್ನಾಟಕದ ಸಾಮಾಜಿಕ ಕ್ರಾಂತಿಗಳಲ್ಲಿ ಒಂದು ಎಂದು ದಾಖಲಿಸಿರುವುದು ಡಾ. ಭರಣಿ ಅವರ ಜನಪರ ನಿಜ ಕಾಳಜಿಯನ್ನು ಪರಿಚಯಿಸುತ್ತದೆ ಎಂದರು.
ಡಾ.‌ಭರಣಿ ಅವರ ಯಶಸ್ವಿ ಸಾಮಾಜಿಕ ಬದುಕಿನ ಹಿಂದೆ ಪತ್ನಿ ಮೋಹನಾ ಭರಣಿ ಅವರು ಇದ್ದಾರೆ ಎಂದು‌ ಮಂಜುನಾಥ್ ಹೇಳಿದರು.
ದಕ್ಷ ಆಡಳಿತ ಜತೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆ ದಿನಗಳಲ್ಲಿ ಸಾಹಿತಿಗಳು, ಪತ್ರಕರ್ತರು, ಕಲಾವಿದರು, ಜನಪದ ಗಾಯಕರ ಮನಸ್ಸನ್ನು ಗೆದ್ದಿದ್ದ ಡಾ. ಭರಣಿ ಅವರ ಕಾರ್ಯಗಳು ಇಂದಿನ ಹಿರಿಯ ಕಿರಿಯ ಅಧಿಕಾರಿಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣ ಬಸವ ಬುದ್ದ ಭೀಮಜಿ ವಿದ್ಯಾಸಂಸ್ಥೆ (ರಿ)ಯ
ಸಂಸ್ಥಾಪಕ- ಕಾರ್ಯದರ್ಶಿಗಳಾದ ಗುಂಡಗತ್ತಿ ಕೆ.ಕೊಟ್ರಪ್ಪ ಅವರು ಮಾತನಾಡಿ, ದಕ್ಷತೆಗೆ ಹೆಸರಾಗಿದ್ದ
ಡಾ. ಸುಭಾಷ್ ಭರಣಿ ಮತ್ತು ಸಿದ್ದಯ್ಯ ಅವರ ಆದರ್ಶ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಹಾಗೂ ಅವರಂತೆ ವೃತ್ತಿ ಜೊತೆಗೆ ಸಾಮಾಜಿಕ ಸೇವೆಯನ್ನು ಪ್ರವೃತ್ತಿಯನ್ನಾಗಿ ಮೈಗೂಡಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಮುಂದಿನ ವರ್ಷವೂ ಉಭಯರ ಜನ್ಮ ದಿನಾಚರಣೆಯನ್ನು ರಕ್ತದಾನ ಶಿಬಿರ ಸೇರಿದಂತೆ ಜನಪಯೋಗಿ ಕಾರ್ಯಗಳನ್ನು ನಾಲ್ಕು ಸಂಸ್ಥೆಗಳು ಹಮ್ಮಿಕೊಳ್ಳಲಿವೆ ಎಂದರು.

ಕರ್ನಾಟಕ ರಾಜ್ಯ ಛಲವಾದಿ ಮಹಿಳಾ ಮಹಾಸಭಾ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ
ಡಾ. ಈರಮ್ಮ ಅವರು ಸಿದ್ದಯ್ಯ ಅವರ ಬಾಲ್ಯ ಶಿಕ್ಷಣ ಹಾಗೂ ಸರ್ಕಾರದ ಸೇವಾ ಕಾರ್ಯಗಳ ಕುರಿತು ಮಾತನಾಡಿ ಸಿದ್ದಯ್ಯ ಅವರು ಕಾರ್ಯನಿರ್ವಹಿಸಿದ ಎಲ್ಲಾ ಇಲಾಖೆಗಳಲ್ಲೂ ಅತ್ಯುತ್ತಮ‌ ಸೇವೆ ಸಲ್ಲಿಸುವ ಮೂಲಕ ಜನಮನ ಗೆದ್ದಿದ್ದಾರೆ ಎಂದು ತಿಳಿಸಿದರು.
ನಾಡಿನ ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಾಟೇಲ್, ಧರ್ಮಸಿಂಗ್ ಹಾಗೂ ಬಿಮ ಎಸ್. ಯಡಿಯೂರಪ್ಪ ಅವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿದ ಹೆಗ್ಗಳಿಕೆ ಹೊಂದಿರುವ ಸಿದ್ದಯ್ಯ ಅವರು ವಿಶೇಷವಾಗಿ ಬಿ.ಬಿ.ಎಂ.ಪಿ ಆಯುಕ್ತರಾಗಿದ್ದಾಗ ಕಸವಿಲೇವಾರಿಗಾಗಿ ಮೂರು ಗಾಲಿಯ ಗಾಡಿ ಸೇವೆಯನ್ನು ಪ್ರಾರಂಭಿಸಿ ನಾಡಿನ ಗಮನ ಸೆಳೆದಿದ್ದರು ಎಂದು ಹೇಳಿದರು.
ನಿವೃತ್ತಿ ಬಳಿಕವೂ ವಿಶ್ರಾಂತಿ ಪಡೆಯದೇ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಶೋಷಿತ ಸಮುದಾಯಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ ಎಂದರು.    ಕಾರ್ಯಕ್ರಮವನ್ನು ಹಂಪಿ ಕನ್ನಡ ವಿವಿಯ ಸಿಂಡಿಕೇಟ್ ಸದಸ್ಯರೂ ಆಗಿರುವ ಬಳ್ಳಾರಿ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ ಅವರು ಉದ್ಘಾಟಿಸಿದರು.

ಪ್ರತಿಭಾ ಪುರಸ್ಕಾರ : ಇದೇ ಸಂದರ್ಭದಲ್ಲಿ ಡಾ.‌ಭರಣಿ‌ ಮತ್ತು ಸಿದ್ಧಯ್ಯ‌ಅವರ ಜನ್ಮ ದಿನಾಚರಣೆ ಅಂಗವಾಗಿ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಮಾರ್ಚ್-೨೦೨೫ ರ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ, ಹಾಗೂ ಐ.ಟಿ.ಐ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಲಾ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಸಮಾರಂಭದಲ್ಲಿ ಪ್ರಾಚಾರ್ಯರಾದ ಆರ್.ಹೆಚ್ ಕಲ್ಯಾಣದವರ್, ಬಿ.ಶಾಂತ ಕುಮಾರ್, ಬಸವಂತಪ್ಪ, ಸಿಎಂಎಸ್ ಮುಖಂಡ ಕಮಲಾಪುರದ ಸಣ್ಣೀರಪ್ಪ, ಉಪನ್ಯಾಸಕರಾದ ಡಾ. ಸಿ.ಅಜ್ಜಯ್ಯ ಹಾಗೂ ನಿಸರ್ಗ ಪ.ಪೂ.ಕಾಲೇಜು, ನಿಸರ್ಗ ಐ.ಟಿ.ಐ ಕಾಲೇಜು, ಹೇಮರೆಡ್ಡಿ ಮಲ್ಲಮ್ಮ ಐ.ಟಿ.ಐ ಕಾಲೇಜು ಹಾಗೂ ಶಾಂತಿ ನಿಕೇತನ ಪ್ರೌಢ ಶಾಲೆಯ ಬೋಧಕ ಹಾಗೂ ಬೋಧಕೇತರರು ಉಪಸ್ಥಿತರಿದ್ದರು.
ಉಪ ಪ್ರಾಚಾರ್ಯ ಮೋಹನ ಹೆಚ್. ಸ್ವಾಗತಿಸಿದರು. ಉಪನ್ಯಾಸಕ ಜಿ.ವೆಂಕಟೇಶ ನಿರೂಪಿಸಿದರು. ಉಪನ್ಯಾಸಕ ಎ.ಮಂಜುನಾಥ ವಂದಿಸಿದರು.

—–

The post ಹರಪನಹಳ್ಳಿಯಲ್ಲಿ ಡಾ.ಭರಣಿ ಮತ್ತು ಸಿದ್ಧಯ್ಯ ಅವರ ಜನ್ಮ ದಿನಾಚರಣೆ: ಡಾ.‌ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ -ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಬಣ್ಣನೆ appeared first on Karnataka Kahale.

]]>
ಶುಭ ವಿವಾಹ: ಗುರು‌-ಹಿರಿಯರು, ಗಣ್ಯರು, ಬಂಧುಮಿತ್ರರ ಶುಭ ಹಾರೈಕೆಯೊಂದಿಗೆ ಚತುರ್ಭುಜರಾದ ಯರಿಸ್ವಾಮಿ(ತರುಣ್) ಮತ್ತು ಸುಲೋಚನ https://www.karnatakakahale.com/news/18164 Sat, 21 Dec 2024 11:20:30 +0000 https://www.karnatakakahale.com/?p=18164   ಹರಪನಹಳ್ಳಿ, ಡಿ.16: ಪಟ್ಟಣದ ಶಿಕ್ಷಣ ಪ್ರೇಮಿ ಹಾಗೂ ಸಮಾಜ ಮುಖಿ ದಂಪತಿಗಳಾದ ಗುಂಡಗತ್ತಿ ಸಿ.‌ಕೊಟ್ರಪ್ಪ ಮತ್ತು ಸಿ.‌ಕೊಟ್ರಮ್ಮ ದಂಪತಿಗಳ ಏಕೈಕ ಪುತ್ರ ಯರಿಸ್ವಾಮಿ(ತರುಣ್) ಮತ್ತು ಮರಿಯಮ್ಮನಹಳ್ಳಿಯ ಸಿ. ಪರಶುರಾಮ ಮತ್ತು ಉಚ್ಚೆಂಗೆಮ್ಮ ಅವರ ಪುತ್ರಿ ಸುಲೋಚನ ಅವರ ವಿವಾಹವು ಭಾನುವಾರ…

The post ಶುಭ ವಿವಾಹ: ಗುರು‌-ಹಿರಿಯರು, ಗಣ್ಯರು, ಬಂಧುಮಿತ್ರರ ಶುಭ ಹಾರೈಕೆಯೊಂದಿಗೆ ಚತುರ್ಭುಜರಾದ ಯರಿಸ್ವಾಮಿ(ತರುಣ್) ಮತ್ತು ಸುಲೋಚನ appeared first on Karnataka Kahale.

]]>
 

ಹರಪನಹಳ್ಳಿ, ಡಿ.16: ಪಟ್ಟಣದ ಶಿಕ್ಷಣ ಪ್ರೇಮಿ ಹಾಗೂ ಸಮಾಜ ಮುಖಿ ದಂಪತಿಗಳಾದ ಗುಂಡಗತ್ತಿ ಸಿ.‌ಕೊಟ್ರಪ್ಪ ಮತ್ತು ಸಿ.‌ಕೊಟ್ರಮ್ಮ ದಂಪತಿಗಳ ಏಕೈಕ ಪುತ್ರ ಯರಿಸ್ವಾಮಿ(ತರುಣ್) ಮತ್ತು ಮರಿಯಮ್ಮನಹಳ್ಳಿಯ ಸಿ. ಪರಶುರಾಮ ಮತ್ತು ಉಚ್ಚೆಂಗೆಮ್ಮ ಅವರ ಪುತ್ರಿ ಸುಲೋಚನ ಅವರ ವಿವಾಹವು ಭಾನುವಾರ ವಿಜೃಂಭಣೆಯಿಂದ ಜರುಗಿತು.
ಹಗರಿಬೊಮ್ಮನಹಳ್ಳಿಯ ಹರ ಕಲ್ಯಾಣ ಮಂಟಪದಲ್ಲಿ ಜರುಗಿದ ವಿವಾಹ ಮಹೋತ್ಸವದಲ್ಲಿ ತರುಣ್ ಮತ್ತು ಸುಲೋಚನ ಸಪ್ತಪದಿ ತುಳಿದರು.
ಈ‌‌ ಸಂಭ್ರಮದ ಗಳಿಗೆಗೆ ನಾಡಿನ‌ ಗಣ್ಯಾತಿಗಣ್ಯರು ಸಾಕ್ಷಿಯಾದರು‌ ಮಾತ್ರವಲ್ಲ ನವ ವಧುವರರಿಗೆ ಶುಭ ಹಾರೈಸಿದರು.

ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಿ.ಪಿ ದೇವರಾಜ್,
ಮಾಜಿ ಸಚಿವ ಬಿ. ಶ್ರೀರಾಮುಲು, ಕರ್ನಾಟಕ ರಾಜ್ಯ ‌ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ‌ ಆಯೋಗದ ಮಾಜಿ ಅಧ್ಯಕ್ಷ ನೆಹರು ಓಲೇಕಾರ, ಹರಪನಹಳ್ಳಿ ‌ಶಾಸಕಿ ಲತಾ ಮಲ್ಲಿಕಾರ್ಜುನ, ಬೆಂಗಳೂರು ಫಿಂಗರ್ ಪ್ರಿಟ್ ಬ್ಯೂರೋದ ಎಸ್ಪಿ ಕುಮಾರಸ್ವಾಮಿ, ವಿಧಿ ವಿಜ್ಞಾನ ಪ್ರಯೋಗಾಲಯದ ಹಿರಿಯ ಅಧಿಕಾರಿಗಳಾದ ದಿವಾಕರ್, ಮಂಜುನಾಥ್, ಅಬಕಾರಿ ಇಲಾಖೆಯ ನಿವೃತ್ತ ಡಿಸಿ ಬಿ.ಡಿ.‌ಸಾವಕ್ಕನವರ್, ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ‌ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ನ್ಯಾಯವಾದಿ ಸಿ.‌ಬಸವರಾಜ್, ಪತ್ರಕರ್ತ ಸಿ. ಶಿವಾನಂದ,
ಹಾವೇರಿ ಜಿಲ್ಲಾ ಸಿಎಂಎಸ್‌ ಮಾಜಿ ಅಧ್ಯಕ್ಷ ಶಂಬು‌ ಕಳಸದ್, ಹಗರಿ ಬೊಮ್ಮನಹಳ್ಳಿ ತಾಲೂಕು ಸಿಎಂಎಸ್ ಅಧ್ಯಕ್ಷ ಕಹಳೆ ಬಸವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಜಿಲ್ಲಾ ಛಲವಾದಿ‌ ಸಮಾಜದ ಗಣ್ಯರು ನವ ವಧುವರರಿಗೆ ಶುಭ ಹಾರೈಸಿದರು.
ಯರಿಸ್ವಾಮಿ(ತರುಣ್) ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಅಧಿಕಾರಿಗಳಾಗಿ, ಸುಲೋಚನ ಜೆಸ್ಕಾಂನಲ್ಲಿ ಕಿರಿಯ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
—–

The post ಶುಭ ವಿವಾಹ: ಗುರು‌-ಹಿರಿಯರು, ಗಣ್ಯರು, ಬಂಧುಮಿತ್ರರ ಶುಭ ಹಾರೈಕೆಯೊಂದಿಗೆ ಚತುರ್ಭುಜರಾದ ಯರಿಸ್ವಾಮಿ(ತರುಣ್) ಮತ್ತು ಸುಲೋಚನ appeared first on Karnataka Kahale.

]]>
ಕೋವಿಡ್ ಲಸಿಕೆ ಪಡೆದ ಬಳ್ಳಾರಿ ಸಂಸದ ದೇವೇಂದ್ರಪ್ಪ https://www.karnatakakahale.com/news/3567 Sat, 13 Mar 2021 14:42:40 +0000 https://www.karnatakakahale.com/?p=3567 ಹರಪನಹಳ್ಳಿ: ಬಳ್ಳಾರಿ ಸಂಸದ ವೈ. ದೇವೆಂದ್ರಪ್ಪ ಅವರು ಶನಿವಾರ ಹರಪನಹಳ್ಳಿ ತಾಲೂಕಿನ ಅರಸಿಕೇರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡರು.

The post ಕೋವಿಡ್ ಲಸಿಕೆ ಪಡೆದ ಬಳ್ಳಾರಿ ಸಂಸದ ದೇವೇಂದ್ರಪ್ಪ appeared first on Karnataka Kahale.

]]>
ಹರಪನಹಳ್ಳಿ: ಬಳ್ಳಾರಿ ಸಂಸದ ವೈ. ದೇವೆಂದ್ರಪ್ಪ ಅವರು ಶನಿವಾರ ಹರಪನಹಳ್ಳಿ ತಾಲೂಕಿನ ಅರಸಿಕೇರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡರು.

The post ಕೋವಿಡ್ ಲಸಿಕೆ ಪಡೆದ ಬಳ್ಳಾರಿ ಸಂಸದ ದೇವೇಂದ್ರಪ್ಪ appeared first on Karnataka Kahale.

]]>