Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಬೀದರ್ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Mon, 30 Mar 2026 18:25:30 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಬೀದರ್ – Karnataka Kahale https://www.karnatakakahale.com 32 32 ಬೀದರ್‌ನಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ, ಸಮಿತಿಗಳ ಪೂರ್ವ ಸಿದ್ದತಾ ಸಭೆ ಅರ್ಥಪೂರ್ಣ ಸಮ್ಮೇಳನಕ್ಕೆ ಸರ್ವರು ಕೈ ಜೋಡಿಸಲು ತಗಡೂರು ಕರೆ https://www.karnatakakahale.com/news/22647 Mon, 30 Mar 2026 18:25:30 +0000 https://www.karnatakakahale.com/?p=22647 ಬೀದರ್: ಬಸವಣ್ಣ ನಡೆದಾಡಿದ ನೆಲದಲ್ಲಿ ನಡೆಯುತ್ತಿರುವ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಅರ್ಥಪೂರ್ಣವಾಗಿದೆ ಆಚರಣೆ ಮಾಡುವ ಮೂಲಕ ಇತಿಹಾಸ ಪುಟದಲ್ಲಿ ದಾಖಲೆಯಾಗುವ ಸಮ್ಮೇಳನವನ್ನು ಮಾಡಲು ಸಂಘಟಿತ ಪ್ರಯತ್ನ ನಡೆಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.…

The post ಬೀದರ್‌ನಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ, ಸಮಿತಿಗಳ ಪೂರ್ವ ಸಿದ್ದತಾ ಸಭೆ ಅರ್ಥಪೂರ್ಣ ಸಮ್ಮೇಳನಕ್ಕೆ ಸರ್ವರು ಕೈ ಜೋಡಿಸಲು ತಗಡೂರು ಕರೆ appeared first on Karnataka Kahale.

]]>

ಬೀದರ್: ಬಸವಣ್ಣ ನಡೆದಾಡಿದ ನೆಲದಲ್ಲಿ ನಡೆಯುತ್ತಿರುವ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಅರ್ಥಪೂರ್ಣವಾಗಿದೆ ಆಚರಣೆ ಮಾಡುವ ಮೂಲಕ ಇತಿಹಾಸ ಪುಟದಲ್ಲಿ ದಾಖಲೆಯಾಗುವ ಸಮ್ಮೇಳನವನ್ನು ಮಾಡಲು ಸಂಘಟಿತ ಪ್ರಯತ್ನ ನಡೆಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ವಿವಿಧ ಸಮಿತಿಗಳ ಪೂರ್ವ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೀದರ್ ಪತ್ರಕರ್ತರ ಕೋರಿಕೆ ಮೇರೆಗೆ ಇಲ್ಲಿಗೆ ಸಮ್ಮೇಳನ ನೀಡಲಾಗಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ವಿಧಾನ ಸಭೆ, ವಿಧಾನ ಪರಿಷತ್ ಸಭಾಪತಿಗಳನ್ನು ಹಾಗೂ ಹಿರಿಯ ಪತ್ರಕರ್ತರು ಸೇರಿದಂತೆ ರಾಜ್ಯ ಮಟ್ಟದ ಎಲ್ಲ ಪತ್ರಿಕೆಗಳ ಸಂಪಾದಕರನ್ನು ಸಮ್ಮೇಳನಕ್ಕೆ ಅಹ್ವಾನಿಸಲಾಗಿದೆ ಎಂದರು.
ಎರಡು ದಿನದ ಸಮ್ಮೇಳನದಲ್ಲಿ ಉದ್ಘಾಟನೆ ಮತ್ತು ಸಮಾರೋಪ ಹೊರತುಪಡಿಸಿ, ಇನ್ನುಳಿದಂತೆ ಗೋಷ್ಠಿಗಳು, ಚಿಂತನ-ಮಂಥನ, ಸಂವಾದ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ನಾಡಿನಾದ್ಯಂತೆ ಈಗಾಗಲೇ ಎರಡೂವರೆ ಸಾವಿರ ಪತ್ರಕರ್ತರು ಸಮ್ಮೇಳನಕ್ಕೆ ಬರಲು ನೋಂದಣಿ ಮಾಡಿಕೊಂಡಿದ್ದಾರೆ. ನಾಡಿನ ಪತ್ರಕರ್ತರು ಇಲ್ಲಿ ಬಂದು ಹೋಗುವ ತನಕ ಆತಿಥ್ಯ ನೀಡುವುದು ಸ್ವಾಗತ ಸಮಿತಿ ಜವಬ್ದಾರಿಯಾಗಿರುವ ಕಾರಣ ಎಲ್ಲರೂ ಒಟ್ಟಾಗಿ ಸಮ್ಮೇಳನ ಯಶಸ್ವಿಗೆ ದುಡಿಯಬೇಕು ಎಂದರು.
ಹೊಸ ಜಾಹಿರಾತು ನೀತಿಯಿಂದ ಪತ್ರಿಕೆಗಳ ಸಂಪಾದಕರಿಗೆ ಆಗುತ್ತಿರುವ ತೊಂದರೆ ಬಗೆಹರಿಸಲು ಮುಖ್ಯಮಂತ್ರಿಗಳಿಗೆ ಈಗಾಗಲೆ ಮನವಿ ಸಲ್ಲಿಸಲಾಗಿದ್ದು, ಸಮ್ಮೇಳನ ಸಂದರ್ಭದಲ್ಲೂ ಸಿಎಂಗೆ ಈ ಕುರಿತು ಮನವಿ ಮಾಡುವುದಾಗಿ ಭರವಸೆ ನೀಡಿದರು.
ಸ್ಮರಣ ಸಂಚಿಕೆ ಹಾಗೂ ಕೈಪಿಡಿಗಳನ್ನು ಪ್ರತ್ಯೇಕವಾಗಿ ಹೊರ ತರಲು ನಿರ್ಣಯಿಸಲಾಯಿತು. ವಸತಿ ಸಮಿತಿ, ಸಾರಿಗೆ ಸಮಿತಿಗಳು ಸೇರಿದಂತೆ ಎಲ್ಲ ಸಮಿತಿಗಳ ನಡುವೆಯೂ ಸೌಹಾರ್ದತೆಯ ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದರು. ಛಾಯಾಚಿತ್ರ ಪ್ರದರ್ಶನ ಮತ್ತು ವ್ಯಂಗ್ಯಚಿತ್ರ ಪ್ರದರ್ಶನಗಳು ಅಚ್ಚುಕಟ್ಟಾಗಿ ನಡೆಯಬೇಕು. ಅದಕ್ಕಾಗಿ ಸಿದ್ಧತೆಗಳು ನಡೆಯಬೇಕು ಎಂದರು. ಹಿರಿಯರು ಹಾಗೂ ಮಾಜಿ ಜಿಲ್ಲಾಧ್ಯಕ್ಷರ ಸಲಹಾ ಸಮಿತಿ, ಪ್ರವಾಸ, ಆಹಾರ, ಮೆರವಣಿಗೆ, ವಸ್ತು ಪ್ರದರ್ಶನ ಮಾರಾಟ ಮಳಿಗೆ, ಪ್ರತಿನಿಧಿಗಳ ನೊಂದಣಿ ಹಾಗೂ ಕಿಟ್ ವಿತರಣಾ ಸಮಿತಿಗಳ ತಯಾರಿ ಕುರಿತು ಪೂರ್ವ ಸಿದ್ದತಾ ಸಭೆ ಜರುಗಿತು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ಬೀದರ್ ಪತ್ರಕರ್ತರು ತಮಗೆ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು. ತಗಡೂರು ಅವರಂಥ ರಾಜ್ಯಾಧ್ಯಕ್ಷರು ನಮಗೆ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ. ಜಿಲ್ಲೆಗೆ ದೊರಕಿರುವ 40ನೇ ರಾಜ್ಯ ಸಮ್ಮೇಳನ ಯಶಸ್ವಿಯಾಗಿಸಲು ವೈಮನಸ್ಸು ಬಿಟ್ಟು ಪ್ರತಿಯೊಬ್ಬರ ಸಹಭಾಗಿತ್ವ ಬಹಳ ಮುಖ್ಯ ಎಂದರು.
ನಮ್ಮ ಮನವಿಗೆ ಸ್ಪಂದಿಸಿ ಬೀದರ್‌ಗೆ ಸಮ್ಮೇಳನ ನೀಡಿದಕ್ಕೆ ಧನ್ಯವಾದ ತಿಳಿಸಿದ, ಸಂಘದ ಮಾಜಿ ಜಿಲ್ಲಾಧ್ಯಕ್ಷ ಬಾಬುವಾಲಿ ಮಾತನಾಡಿ, ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಿ ಹಾಗೂ ಹೊಸ ಜಾಹಿರಾತು ನೀತಿ ಬಗೆಹರಿಸಲು ರಾಜ್ಯ ಸಂಘ ಮುಂದಾಗಬೇಕೆಂದರು.
ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಅವರು ವಸತಿ, ಸಾರಿಗೆ, ಆರ್ಥಿಕತೆ ಸೇರಿದಂತೆ ವಿವಿಧ ಸಮಿತಿಗಳ ಹಾಗೂ ಕಾರ್ಯಕ್ರಮದ ತಯಾರಿ ಬಗ್ಗೆ ಸಭೆಗೆ ವಿವರಿಸಿ, ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಮ್ಮ ತಂಡ ಹಗಲು ರಾತ್ರಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸಮ್ಮೇಳನದ ಯಶಸ್ವಿಯಾಗಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಕಾರಂಜಿ, ಬಸವರಾಜ ಕಾಮಶೆಟ್ಟಿ, ಮಾಳಪ್ಪ ಅಡಸಾರೆ ತಿಳಿಸಿದರು.
ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಮಾಜಿ ಜಿಲ್ಲಾಧ್ಯಕ್ಷರಾದ ಸಿದ್ರಾಮಯ್ಯ ಸ್ವಾಮಿ, ಅಶೋಕಕುಮಾರ ಕರಂಜಿ, ಡಿ.ಕೆ ಗಣಪತಿ, ಪತ್ರಕರ್ತರಾದ ಅಪ್ಪಾರಾವ ಸೌದಿ, ಶಶಿ ಪಾಟೀಲ, ಪ್ರಥ್ವಿರಾಜ, ಶಶಿ ಶೆಂಬೆಳ್ಳಿ, ಶಶಿ ಬಂಬುಳಗಿ, ವಿಜಯಕುಮಾರ ಬೆಳ್ದೆ, ದೀಪಕ ಮನ್ನಳ್ಳಿ, ಗೋಪಿಚಂದ್ ತಾಂದಳೆ, ಮಾರೂತಿ ಬಾವಿದೊಡ್ಡಿ, ಶ್ರೀಕಾಂತ ಬಿರಾದಾರ, ನಂದಕುಮಾರ ಕರಂಜೆ, ವಿಜಯಕುಮಾರ ಅಷ್ಟುರೆ, ಅಜಯ ಭೋಸ್ಲೆ, ಬಸವರಾಜ ಪವಾರ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಶಿವಕುಮಾರ ಸ್ವಾಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

The post ಬೀದರ್‌ನಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ, ಸಮಿತಿಗಳ ಪೂರ್ವ ಸಿದ್ದತಾ ಸಭೆ ಅರ್ಥಪೂರ್ಣ ಸಮ್ಮೇಳನಕ್ಕೆ ಸರ್ವರು ಕೈ ಜೋಡಿಸಲು ತಗಡೂರು ಕರೆ appeared first on Karnataka Kahale.

]]>
ಹೃದಯಾಘಾತದಿಂದ ಬೀದರಿನ ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಸಾವು https://www.karnatakakahale.com/news/20083 Thu, 10 Jul 2025 15:49:33 +0000 https://www.karnatakakahale.com/?p=20083 ಬೀದರ್, ಜು.10: ಹೃದಯಾಘಾತದಿಂದ ಜಿಲ್ಲೆಯ ‌ಬಸವಕಲ್ಯಾಣ ತಾಲೂಕಿನ ಹುಲಸೂರ ಸರ್ಕಾರಿ ಪ್ರಥಮ‌ದರ್ಜೆ ಕಾಲೇಜಿನ  ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಅವರು ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಪರೀಕ್ಷಾ ಕಾರ್ಯಕ್ಕೆ ಮಹಾವಿಧ್ಯಾಲಯಕ್ಕೆ ಹೋಗುವ ಮಾರ್ಗದಲ್ಲಿ ಹೃದಯಘಾತವಾಗಿ ನಿಧನ ಹೊಂದಿದ್ದಾರೆ.      ಮೃತರು ಪತ್ನಿ,…

The post ಹೃದಯಾಘಾತದಿಂದ ಬೀದರಿನ ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಸಾವು appeared first on Karnataka Kahale.

]]>

ಬೀದರ್, ಜು.10: ಹೃದಯಾಘಾತದಿಂದ ಜಿಲ್ಲೆಯ ‌ಬಸವಕಲ್ಯಾಣ ತಾಲೂಕಿನ ಹುಲಸೂರ ಸರ್ಕಾರಿ ಪ್ರಥಮ‌ದರ್ಜೆ ಕಾಲೇಜಿನ  ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಅವರು ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಪರೀಕ್ಷಾ ಕಾರ್ಯಕ್ಕೆ ಮಹಾವಿಧ್ಯಾಲಯಕ್ಕೆ ಹೋಗುವ ಮಾರ್ಗದಲ್ಲಿ ಹೃದಯಘಾತವಾಗಿ ನಿಧನ ಹೊಂದಿದ್ದಾರೆ.      ಮೃತರು ಪತ್ನಿ, ಪುತ್ರ, ಪೋಷಕರು ಸೇರಿದಂತೆ ಅಪಾರ ಬಂಧು‌-ಮಿತ್ರರನ್ನು ಅಗಲಿದ್ದಾರೆ.

ಮೂಲತಃ ಕಲಬುರಗಿ ಜಿಲ್ಲೆಯ ಗಡಿಕೇಶ್ವರ ಗ್ರಾಮದ ಡಾ.ರವಿಕುಮಾರ್ ಅವರು ಸಹೋೋದ್ಯೋಗಿಯೊಬ್ಬರಿಗೆ‌ ಕರೆ ಮಾಡಿ ಇಂದು ಪರೀಕ್ಷಾ ಕರ್ತವ್ಯವಿದೆ. ಕಾಲೇಜಿಗೆ‌ ಬರ್ತಾ ಇದ್ದೇನೆ. ಆದರೆ ಸೊಂಟ ಮತ್ತು ಎದೆ ನೋಯುತ್ತಿದೆ ಎಂದು ತಿಳಿಸಿದ್ದಾರೆ. ತಕ್ಷಣ ನೀವು ಕಾಲೇಜಿಗೆ ಬರುುವುದು ಬೇಡ ಯಾರಾದರೂ ನಿಮ್ಮ ಕರ್ತವ್ಯವನ್ನು ಮಾಡುತ್ತೇವೆ. ಕೂಡಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅಷ್ಟರಲ್ಲಿ‌ ಸಾವು‌ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

6 ವರ್ಷಗಳಿಂದ  ಕನ್ನಡ ವಿಭಾಗದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ರವಿಕುಮಾರ್, ಪಿಎಚ್ ಡಿ, ನೆಟ್,   ಸ್ಲೆಟ್ ಪದವಿ ಪಡೆದಿದ್ದರೂ   ತಾರತಮ್ಯವಿಲ್ಲದೇ ಎಲ್ಲಾ ಅತಿಥಿ‌ ಉಪನ್ಯಾಸಕರಿಗೆ ಸೇವಾ ಭದ್ರತೆ ಲಭಿಸಿಬೇಕು ಎಂದು ಬಯಸುತ್ತಿದ್ದರು ಎಂದು ಆಪ್ತರು ತಿಳಿಸಿದ್ದಾರೆ.                                      ರಾಜಧಾನಿ‌ ಬೆಂಗಳೂರಿನಲ್ಲಿ ಬೃಹತ್ ಹೋರಾಟ‌ ಹಮ್ಮಿಕೊಂಡು ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿಬೇಕು, 2024-25ರಲ್ಲಿ  ಸೇವೆ ಸಲ್ಲಿಸಿದ ಎಲ್ಲರನ್ನೂ ಮುಂದುವರೆಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸುತ್ತಿರುವ ಸಂದರ್ಭದಲ್ಲಿ ಡಾ. ರವಿಕುಮಾರ್ ಅವರ ಅಕಾಲಿಕ‌ ನಿಧನ  ಅತಿಥಿ ಉಪನ್ಯಾಸಕರ ಬಳಗದಲ್ಲಿ ಶೋಕವನ್ನುಂಟು ಮಾಡಿದೆ.                             ಸಂತಾಪ: ಡಾ. ರವಿಕುಮಾರ್ ಅವರ ಅಕಾಲಿಕ‌ ನಿಧನಕ್ಕೆ ರಾಜ್ಯ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘ ಸಂತಾಪ ಸೂಚಿಸಿದೆ.

—–

The post ಹೃದಯಾಘಾತದಿಂದ ಬೀದರಿನ ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಸಾವು appeared first on Karnataka Kahale.

]]>
ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ‌ ಪ್ರಬಂಧಕ ಬಿ ಎಂ ಕಾಂತಿಮಣಿ‌ ವಿಧಿವಶ https://www.karnatakakahale.com/news/15134 Wed, 10 Jan 2024 17:53:55 +0000 https://www.karnatakakahale.com/?p=15134 ಬಳ್ಳಾರಿ, ಜ.10: ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ‌ ಪ್ರಬಂಧಕ ಬಿ ಎಂ ಕಾಂತಿಮಣಿ‌(67) ಅವರು ಬುಧವಾರ ಸಂಜೆ ಬೆಂಗಳೂರಿನ ತಮ್ಮ ನಿವಾಸದಲ್ಲಿ‌ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ‌ ಬಂಧು ಮಿತ್ರರನ್ನು ಅಗಲಿದ್ದಾರೆ. ಗುರುವಾರ ಮಧ್ಯಾಹ್ನ…

The post ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ‌ ಪ್ರಬಂಧಕ ಬಿ ಎಂ ಕಾಂತಿಮಣಿ‌ ವಿಧಿವಶ appeared first on Karnataka Kahale.

]]>
ಬಳ್ಳಾರಿ, ಜ.10: ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ‌ ಪ್ರಬಂಧಕ ಬಿ ಎಂ ಕಾಂತಿಮಣಿ‌(67) ಅವರು ಬುಧವಾರ ಸಂಜೆ ಬೆಂಗಳೂರಿನ ತಮ್ಮ ನಿವಾಸದಲ್ಲಿ‌ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ‌ ಬಂಧು ಮಿತ್ರರನ್ನು ಅಗಲಿದ್ದಾರೆ.
ಗುರುವಾರ ಮಧ್ಯಾಹ್ನ ಎರಡು‌ ಗಂಟೆಗೆ ಹುಟ್ಟೂರು ಬೀದರಿನ ಬಿವಿಬಿ ಕಾಲೇಜು ಎದುರು ಇರುವ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕರ್ನಾಟಕ (ತುಂಗಭದ್ರಾ) ಗ್ರಾಮೀಣ ಬ್ಯಾಂಕಿನಲ್ಲಿ 35 ವರ್ಷಗಳ ಕಾಲ ಉತ್ತಮ ಕಾರ್ಯನಿರ್ವಹಿಸಿರುವ ಕಾಂತಿಮಣಿ ಅವರು ಬಳ್ಳಾರಿಯ ಬಸವೇಶ್ವರ ನಗರದಲ್ಲಿ ದಶಕಗಳ ಕಾಲ ವಾಸವಾಗಿದ್ದರು.
ಸಂತಾಪ: ಬಿ ಎಂ ಕಾಂತಿಮಣಿ ಅವರ ನಿಧನಕ್ಕೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಹೋದ್ಯೋಗಿಗಳು, ವಿವಿಧ ಸಂಘಟನೆಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಬ್ಯಾಂಕಿನ ನಿವೃತ್ತ ರಿಜಿನಲ್ ಮ್ಯಾನೇಜರ್, ಹಿರಿಯ ಸಾಹಿತಿ ಡಾ.‌ವೆಂಕಟಯ್ಯ ಅಪ್ಪಗೆರೆ, ನಿವೃತ್ತ ವ್ಯವಸ್ಥಾಪಕ ಗಾಳೆಪ್ಪ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಬಸವರಾಜ ಅಮೀನಗಢ, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್, ಬಿಎಸ್ ಐ ಬಳ್ಳಾರಿ ಜಿಲ್ಲಾ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.‌ಲಕ್ಕಿ ಪೃಥ್ವಿರಾಜ್‌ ಅವರು ಕಾಂತಿಮಣಿ ಅವರ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
——

The post ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ‌ ಪ್ರಬಂಧಕ ಬಿ ಎಂ ಕಾಂತಿಮಣಿ‌ ವಿಧಿವಶ appeared first on Karnataka Kahale.

]]>
ಬೀದರನಲ್ಲಿ ಮಿಂಚಿದ ಬಳ್ಳಾರಿಗರ ದನ ಕಾಯೋರ ದೊಡ್ಡಾಟ: ‘ಬಳ್ಳಾರಿ ಕಲಾವಿದರ ಅಭಿನಯಕ್ಕೆ ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು” https://www.karnatakakahale.com/news/3486 Sun, 07 Mar 2021 10:12:21 +0000 https://www.karnatakakahale.com/?p=3486 ಬಳ್ಳಾರಿ:ಕರ್ನಾಟಕದ ಮುಕುಟ, ಐತಿಹಾಸಿಕ ನಗರ ಬೀದರ್ ನಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ರಾಜ್ಯ ಮಟ್ಟದ ನಾಲ್ಕು ದಿನಗಳ ನಾಟಕೋತ್ಸವದಲ್ಲಿ ಬಳ್ಳಾರಿಯ ಕಲಾವಿದರು ಅಭಿನಯಿಸಿದ ದನ ಕಾಯುವವರ ದೊಡ್ಡಾಟಕ್ಕೆ ಕಲಾಸಕ್ತರು ಫಿದಾ ಆದರು. ಬೀದರಿನ ಜನಪದ ಕಲಾವಿದರ ಬಳಗ, ಅಖಿಲ ಭಾರತ ಕಲಾವಿದರ…

The post ಬೀದರನಲ್ಲಿ ಮಿಂಚಿದ ಬಳ್ಳಾರಿಗರ ದನ ಕಾಯೋರ ದೊಡ್ಡಾಟ: ‘ಬಳ್ಳಾರಿ ಕಲಾವಿದರ ಅಭಿನಯಕ್ಕೆ ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು” appeared first on Karnataka Kahale.

]]>
ಬಳ್ಳಾರಿ:ಕರ್ನಾಟಕದ ಮುಕುಟ, ಐತಿಹಾಸಿಕ ನಗರ ಬೀದರ್ ನಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ರಾಜ್ಯ ಮಟ್ಟದ ನಾಲ್ಕು ದಿನಗಳ ನಾಟಕೋತ್ಸವದಲ್ಲಿ ಬಳ್ಳಾರಿಯ ಕಲಾವಿದರು ಅಭಿನಯಿಸಿದ ದನ ಕಾಯುವವರ ದೊಡ್ಡಾಟಕ್ಕೆ ಕಲಾಸಕ್ತರು ಫಿದಾ ಆದರು.
ಬೀದರಿನ ಜನಪದ ಕಲಾವಿದರ ಬಳಗ, ಅಖಿಲ ಭಾರತ ಕಲಾವಿದರ ಒಕ್ಕೂಟ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ 4ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಜರುಗಿತು.
ಶ್ರೀ ಪೂಜ್ಯ ಚನ್ನಬಸವ ಪಟ್ಟದೇವರ ಜಿಲ್ಲಾರಂಗಮಂದಿರಲ್ಲಿ ದಿ:ಶಿವಶಂಕರ ನಾಯ್ಡು ರಚನೆಯ, ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದಲ್ಲಿ ಇವರ ತಂಡದ ಸದಸ್ಯರೇ ‘ದನ ಕಾಯುವವರ ದೊಡ್ಡಾಟ’ ಎಂಬ ಹಾಸ್ಯ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಮೆಚ್ಚುಗೆಗೆ ಪಾತ್ರವಾಯಿತು.
ಸಾರಥಿಯಾಗಿ ಪುರುಷೋತ್ತಮ ಹಂದ್ಯಾಳು, ದುರ್ಯೋಧನ ಅಮರೇಶ ಹಚ್ಚೊಳ್ಳಿ, ದುಶ್ಯಾಸನ ನಾಗಿ ಪಾರ್ವತೀಶ್ ಗೆಣಿಕಿಹಾಳ್, ಗೌಡನಾಗಿ ಬೀದರಿನ ವಿಜಯಕುಮಾರ್ ಸೋನಾಲೆ, ದ್ರೌಪದಿಯಾಗಿ ಮೌನೇಶ್ ಕಲ್ಲಹಳ್ಳಿ, ಗಣೇಶನಾಗಿ ಚಂದ್ರಶೇಖರ್ ಆಚಾರ್, ಕೃಷ್ಣನಾಗಿ ಎ.ಎರಿಸ್ವಾಮಿ, ಭೀಮನಾಗಿ ಜಡೇಶ್ ಎಮ್ಮಿಗನೂರು, ನಕುಲನಾಗಿ ಸುಂಕಪ್ಪ, ಸಹದೇವನಾಗಿ ಸೂರಜ್ ಅವರ ಮನೋಜ್ಞ ಅಭಿನಯ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸಿತು.
ತಬಲ ವಾದಕರಾಗಿ ಎರಿಸ್ವಾಮಿ ಶಿಡಿಗಿನಮೊಳ ಅವರು ಗಮನ ಸೆಳೆದರು. ನಾಟಕದ ಪೂರ್ವದಲ್ಲಿ ಜಾನಪದ ಕಲಾವಿದ ಜಡೇಶ್ ಎಮ್ಮಿಗನೂರು ಅವರು ಜನಪದ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಿದರು. ಅಧ್ಯಾಪಕ ಎ.ಎರಿಸ್ವಾಮಿ ಅವರ ಹಾಸ್ಯ ಭಾಷಣವೂ ನೆರೆದಿದ್ದ ರಂಗಪ್ರಿಯರಿಗೆ ಕಚಗುಳಿ ಇಡುವಲ್ಲಿ ಯಶಸ್ವಿಯಾಯ್ತು.
*****

The post ಬೀದರನಲ್ಲಿ ಮಿಂಚಿದ ಬಳ್ಳಾರಿಗರ ದನ ಕಾಯೋರ ದೊಡ್ಡಾಟ: ‘ಬಳ್ಳಾರಿ ಕಲಾವಿದರ ಅಭಿನಯಕ್ಕೆ ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು” appeared first on Karnataka Kahale.

]]>
ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಶಂಕುಸ್ಥಾಪನೆ https://www.karnatakakahale.com/news/2478 Wed, 06 Jan 2021 13:31:42 +0000 https://www.karnatakakahale.com/?p=2478 ಬೀದರ: ಸಾವಿರಾರು ಬಸವ ಅನುಯಾಯಿಗಳ ಸಮ್ಮುಖದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಬಸವಕಲ್ಯಾಣದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, . ಅನುಭವ ಮಂಟಪ ನಿರ್ಮಾಣಕ್ಕೆ ಈಗಾಗಲೇ 100 ಕೋಟಿ ರೂ ಬಿಡುಗಡೆ ಮಾಡಿದ್ದು,…

The post ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಶಂಕುಸ್ಥಾಪನೆ appeared first on Karnataka Kahale.

]]>
ಬೀದರ: ಸಾವಿರಾರು ಬಸವ ಅನುಯಾಯಿಗಳ ಸಮ್ಮುಖದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಬಸವಕಲ್ಯಾಣದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, . ಅನುಭವ ಮಂಟಪ ನಿರ್ಮಾಣಕ್ಕೆ ಈಗಾಗಲೇ 100 ಕೋಟಿ ರೂ ಬಿಡುಗಡೆ ಮಾಡಿದ್ದು, ಇನ್ನು 100 ಕೋಟಿ ರೂಗಳನ್ನು ವಾರದೊಳಗೆ ಬಿಡುಗಡೆ ಮಾಡಿ, ಟೆಂಡರ್ ಪ್ರಕ್ರಿಯೆ ಪೂರ್ಣವಾದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ಇತಿಹಾಸದಲ್ಲಿ ಇಂದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ. ಸಾಧನೆ ಮಾತನಾಡಬೇಕು. ಮಾತಾಡುವುದು ಸಾಧನೆಯಾಗಬಾರದು ಎನ್ನುವುದು ತಮ್ಮ ಮನೋಭಾವವಾಗಿದೆ ಎಂದು ತಿಳಿಸಿದರು.
ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಅಂತೆಯೇ ಎರಡು ವರ್ಷದೊಳಗೆ ಅನುಭವ ಮಂಟಪ ನಿರ್ಮಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದರು.
ಭೇದ ಭಾವವಿಲ್ಲದೆ ಎಲ್ಲ ಸಮುದಾಯದ ಜನರು ಸೇರಿ ಚರ್ಚಿಸಿ ಚಿಂತನ ಮಂಥನ ನಡೆಸುತ್ತಿದ್ದ ಅನುಭವ ಮಂಟಪವು ಆದರ್ಶ ಸಂಸತ್ತಿನ ಮಾದರಿಯಾಗಿದೆ ಎಂದರು.
ಸಾಮಾಜಿಕ ಬದಲಾವಣೆ ತರುವಲ್ಲಿ ಅನುಭವ ಮಂಟಪದ ಪಾತ್ರವು ಅತೀ ಮಹತ್ವದ್ದಾಗಿದೆ. ಮನುಕುಲದ ಏಳ್ಗೆಗೆ ಇಡೀ ವಚನ ಸಾಹಿತ್ಯ ಮಾರ್ಗದರ್ಶಿಯಾಗಿದೆ ಎಂದರು. ಅಣ್ಣ ಬಸವಣ್ಣನವರು ಈ ಕಲ್ಯಾಣ ನಾಡಿನಿಂದ ಹೊರಹೊಮ್ಮಿದ ಈ ದೇಶ ಕಂಡ ಬಹುದೊಡ್ಡ ವಿಶ್ವಗುರು ಅನ್ನುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಗೋ.ರು.ಚ ಅವರಂತಹ ಇನ್ನೂ ಅನೇಕ ಹಿರಿಯ ಸಾಹಿತಿಗಳ ಸಲಹೆ ಪಡೆದು, ಈ ಭಾಗದ ಜನರ ಬೇಡಿಕೆಯಂತೆ
ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ, ಪ್ರತಿ ವರ್ಷ ಬಸವ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು. ಇಂತಹ ಒಳ್ಳೆಯ ಕಾರ್ಯಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮಾತನಾಡಿ, ಅನುಭವ ಮಂಟಪದ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ನನ್ನ ಬದುಕು ಪಾವನವಾಯ್ತು ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದರು. ನಮ್ಮ ಜೀವನದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ ಎಂದರು.
ಮಾನ್ಯ ಪ್ರಧಾನ ಮಂತ್ರಿಗಳು ಅಯೋಧ್ಯೆಯಲ್ಲಿ ಐತಿಹಾಸಿಕ
ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದಂತೆ, ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಅನುಭವ ಮಂಟಪ ನಿರ್ಮಾಣಕ್ಕೆ ಇಂದು ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಿದ್ದು ಕೂಡ ಒಂದು ಐತಿಹಾಸಿಕ ಪ್ರಯತ್ನ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಶು ಸಂಗೋಪನೆ, ಹಜ್ ಮತ್ತು ವಕ್ಪ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಮಾತನಾಡಿ,
ಈ ಶರಣ ಕಾಯಕ ಭೂಮಿಯಲ್ಲಿ
12ನೇ ಶತಮಾನದ ವೈಭವವನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದ್ದು, ಬೀದರ ಮತ್ತು ರಾಜ್ಯದ ಐತಿಹಾಸಿದ ಪುಟಗಳಲ್ಲಿ ದಾಖಲಾಗುವಂತದ್ದಾಗಿದೆ ಎಂದರು. ಶ್ರೀ ಚನ್ನಬಸವ ಪಟ್ಟದ್ದೇವರ ಸಂಕಲ್ಪ ಇಂದು ಕೂಡಿ ಬಂದಿದೆ. ಶ್ರೀ ಬಸವಲಿಂಗ ಪಟ್ಟದ್ದೇವರು ಸೇರಿದಂತೆ ಈ ಭಾಗದ ಎಲ್ಲ ಶ್ರೀಗಳ ಮತ್ತು ಜನರ ಆಶಯದಂತೆ ಕಾಮಗಾರಿ ಬೇಗ ಪೂರ್ಣವಾಗಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಶಾಸಕರಾದ ಈಶ್ವರ ಖಂಡ್ರೆ ಅವರು ಮಾತನಾಡಿ, ಇಂದು ಬಸವ ಅನುಯಾಯಿಗಳಿಗೆ ಸಂತೋಷದ ದಿನ. ಈ ಕಟ್ಟಡ ಬೇಗ ನಿರ್ಮಾಣವಾಗಬೇಕು. ಈ ಮೂಲಕ ಬಸವಕಲ್ಯಾಣದ ಕೀರ್ತಿ ವಿಶ್ವದೆಲ್ಲೆಡೆ ಹರಡಲಿ ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವಿಶೇಷ ಅಧಿಕಾರಿ ಡಾ.ಹೆಚ್.ಆರ್.ಮಹಾದೇವ್ ಅವರು ಮಾತನಾಡಿ, ದೇಶದ ಇತಿಹಾಸದಲ್ಲಿಯೇ ನಾವು ಇಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೇವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಾಡಿನ ಹಿರಿಯ ಚಿಂತಕರು ಹಾಗೂ
ಅನುಭವ ಮಂಟಪದ ನಿರ್ಮಾಣಕ್ಕೆ ಸಂಬಂಧಿಸಿದ ತಜ್ಞರ ಸಮಿತಿಯ ಅಧ್ಯಕ್ಷರಾದ ಗೋ.ರು.ಚನ್ನಬಸಪ್ಪ, ಬಸವರಾಜ ಪಾಟೀಲ ಸೇಡಂ ಮಾತನಾಡಿದರು.
ಸಮಾರಂಭದಲ್ಲಿ ಶ್ರೀಗಳು, ಸಚಿವರು, ಸಂಸದರು,‌ ಶಾಸಕರು, ಡಿಸಿ,‌ ಸಿಇಓ, ಎಸ್ಪಿ, ಬಿಕೆಡಿಬಿ ಕಮಿಷನರ್ ಇದ್ದರು.

The post ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಶಂಕುಸ್ಥಾಪನೆ appeared first on Karnataka Kahale.

]]>