Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಕಲಬುರ್ಗಿ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Thu, 26 Sep 2024 17:29:25 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಕಲಬುರ್ಗಿ – Karnataka Kahale https://www.karnatakakahale.com 32 32 ಕಲಬುರಗಿ: ಕಲ್ಯಾಣ ಕರ್ನಾಟಕ ಸರಕಾರಿ ಪ್ರಥಮ‌ದರ್ಜೆ‌‌ ಕಾಲೇಜು ಅತಿಥಿ ಉಪನ್ಯಾಸಕರ ಸಂಘ ಅಸ್ತಿತ್ವಕ್ಕೆ! https://www.karnatakakahale.com/news/17412 Thu, 26 Sep 2024 17:29:25 +0000 https://www.karnatakakahale.com/?p=17412 ಕಲಬುರಗಿ, ಸೆ.26:ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕಲ್ಯಾಣ ಕರ್ನಾಟಕ ಸಂಘವನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಾ. ಚಂದ್ರಕಾಂತ್ ಶಿರೋಳೆ ಅವರು ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ…

The post ಕಲಬುರಗಿ: ಕಲ್ಯಾಣ ಕರ್ನಾಟಕ ಸರಕಾರಿ ಪ್ರಥಮ‌ದರ್ಜೆ‌‌ ಕಾಲೇಜು ಅತಿಥಿ ಉಪನ್ಯಾಸಕರ ಸಂಘ ಅಸ್ತಿತ್ವಕ್ಕೆ! appeared first on Karnataka Kahale.

]]>
ಕಲಬುರಗಿ, ಸೆ.26:ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕಲ್ಯಾಣ ಕರ್ನಾಟಕ ಸಂಘವನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಾ. ಚಂದ್ರಕಾಂತ್ ಶಿರೋಳೆ ಅವರು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಸುಮಾರು 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಸರಕಾರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೇ ಸರ್ಕಾರಿ ಅತಿಥಿ ಉಪನ್ಯಾಸಕರ ಮತ್ತು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡಲಾಗುತ್ತಿದೆ ಎಂದು ಟೀಕಿಸಿದರು., ಸರ್ಕಾರ 2024-2025ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲು ಸೆ. 6ರಂದು ಹೊರಡಿಸಿದ ಅಧಿಸೂಚನೆಯಂತೆ ಸೆ. 23ರಿಂದ ಕೌನ್ಸಿಲಿಂಗ್ ಪ್ರಾರಂಭವಾಗಬೇಕಿತ್ತು. ಆದಾಗ್ಯೂ, ಇಲ್ಲಿಯವರೆಗೂ ಯಾವುದೇ ಪ್ರಕ್ರಿಯೆಗಳನ್ನು ಪ್ರಾರಂಭ ಮಾಡದೇ ಇರುವುದರಿಂದ ದಿನಾಲೂ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ತರಗತಿಗಳಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಸರ್ಕಾರ ಈ ಕುರಿತು ಚಿಂತಿಸದೇ ಇರುವದರಿಂದ ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ ಹಾಗೂ ಇವರ ಭವಿಷ್ಯ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಅತಿಥಿ ಉಪನ್ಯಾಸಕರನ್ನು ಕಳೆದ ಎರಡು ತಿಂಗಳಿಂದ ತೆಗೆದುಹಾಕಿ ಅವರ ಕುಟುಂಬಗಳನ್ನೂ ಸಹ ಬೀದಿ ಪಾಲು ಮಾಡಿದೆ. ಅಲ್ಲದೇ ಈಗ ತಾನೆ ಪಿಯುಸಿ ಮುಗಿಸಿ ಭವಿಷ್ಯದಲ್ಲಿ ಕನಸುಗಳನ್ನು ಕಟ್ಟಿಕೊಂಡು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಎರಡು ತಿಂಗಳಿಂದ ತರಗತಿಗಳಿಲ್ಲದೇ ಕಾಲೇಜಿಗೆ ಬಂದು ಕಾಲಹರಣ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕೆಲವು ಕಾಲೇಜುಗಳ ಪ್ರಿನ್ಸಿಪಾಲರು ಅತಿಥಿ ಉಪನ್ಯಾಸಕರಿಗೆ ದೂರವಾಣಿ ಕರೆ ಮಾಡಿ ತರಗತಿಗಳನ್ನು ಯಾವುದೇ ಸಂಭಾವನೆ ಇಲ್ಲದೇ ತೆಗೆದುಕೊಳ್ಳಲು ಒತ್ತಡ ಹೇರುತ್ತಿದ್ದಾರೆ ಎಂದು ಅವರು ತೀವ್ರ ಬೇಸರ ಹೊರಹಾಕಿದರು.
ತಮ್ಮ‌ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕಲ್ಯಾಣ ಕರ್ನಾಟಕ ಸಂಘ ರಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರವಿ ಬಿಳವಾರ್, ಡಾ. ಮಮತಾ ಪಾಟೀಲ್, ಡಾ. ರಮೇಶ್ ಕವಡೆ, ಡಾ. ಗುರುರಾಜ್ ಆರ್. ಕುಲಕರ್ಣಿ ಮತ್ತಿತರರು ಇದ್ದರು.
——

The post ಕಲಬುರಗಿ: ಕಲ್ಯಾಣ ಕರ್ನಾಟಕ ಸರಕಾರಿ ಪ್ರಥಮ‌ದರ್ಜೆ‌‌ ಕಾಲೇಜು ಅತಿಥಿ ಉಪನ್ಯಾಸಕರ ಸಂಘ ಅಸ್ತಿತ್ವಕ್ಕೆ! appeared first on Karnataka Kahale.

]]>
ಪುರುಷೋತ್ತಮ ಹಂದ್ಯಾಳು ಅವರಿಗೆ ರಾಜ್ಯಮಟ್ಟದ ರಂಗ ಪ್ರಶಸ್ತಿ ಪ್ರದಾನ https://www.karnatakakahale.com/news/16784 Sun, 21 Jul 2024 10:58:00 +0000 https://www.karnatakakahale.com/?p=16784 ಬಳ್ಳಾರಿ:ನಗರದ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳು ಅವರಿಗೆ ರಾಜ್ಯಮಟ್ಟದ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.                                       …

The post ಪುರುಷೋತ್ತಮ ಹಂದ್ಯಾಳು ಅವರಿಗೆ ರಾಜ್ಯಮಟ್ಟದ ರಂಗ ಪ್ರಶಸ್ತಿ ಪ್ರದಾನ appeared first on Karnataka Kahale.

]]>

ಬಳ್ಳಾರಿ:ನಗರದ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳು ಅವರಿಗೆ ರಾಜ್ಯಮಟ್ಟದ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.                                        ಕಲಬುರಗಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರಂಗಸಂಗಮ ಕಲಾ ವೇದಿಕೆಯವರು ಹಮ್ಮಿಕೊಂಡಿದ್ದ ಎಸ್.ಬಿ ಜಂಗಮಶೆಟ್ಟಿ ಹಾಗೂ ಸುಭದ್ರಾದೇವಿ ಜಂಗಮಶೆಟ್ಟಿ  ಸ್ಮಾರಕ ರಾಜ್ಯಮಟ್ಟದ ರಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ ನಾಗರಾಜಮೂರ್ತಿ ಅವರು ಪುರುಷೋತ್ತಮ ಹಂದ್ಯಾಳು ಹಾಗೂ ಹಾಗೂ ಶಿಗ್ಗಾಂವ್ ರಾಧಿಕಾ ಬೇವಿನಕಟ್ಟಿ ಅವರಿಗೆ ರಂಗ ಪ್ರಶಸ್ತಿ ನೀಡಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಸೇಡಂ ಶ್ರೀ ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಸದಾಶಿವ ಸ್ವಾಮಿಗಳು, ಕರ್ನಾಟಕ ಮುಕ್ರ ವಿಶ್ವವಿದ್ಯಾಲಯ ಕುಲಪತಿ ಶರಣಪ್ಪ ಹಲ್ಸೆ, ಚಿಂಚೋಳಿಯ ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶ ಜಾರಿಕಾರ ಮಹಾದೇವ ಹಂಗರಗಿ, ರಂಗಸಂಗಮ ಕಲಾವೇದಿಕೆ ಅಧ್ಯಕ್ಷೆ ಶಿವಗೀತಾ, ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ ಮಾಸ್ತರ,ಕಲಬುರ್ಗಿ ನಗರ ಪೊಲೀಸ್ ಮೀಸಲು ಪಡೆ ಸಹಾಯಕ ಪೊಲೀಸ್ ಆಯುಕ್ತ ಹೆಚ್.ಎಂ ಸರ್ದಾರ್ ಮತ್ತು ಕೇಂದ್ರ ಕಾರಾಗೃಹ ಅಧೀಕ್ಷಕ ಶ್ರೀಕಾಂತ್ ರಂಜೇರಿ, ಪುಸ್ತಕ ಪ್ರಾಧಿಕಾರ ಸದಸ್ಯ ಬಿ.ಎಚ್ ನಿರಗುಡಿ, ಸದ್ಯಸರ ಜೇವರ್ಗಿ ರಾಜಣ್ಣ, ಮಲ್ಲಿಕಾರ್ಜುನ ಮಡ್ಡೆ, ಬಸವಪ್ರಭು, ಸಿದ್ದಪ್ಪ ತಳ್ಳಳ್ಳಿ ವಿಶ್ವರಾಜ  ಉಪಸ್ಥಿತರಿದ್ದರು.

The post ಪುರುಷೋತ್ತಮ ಹಂದ್ಯಾಳು ಅವರಿಗೆ ರಾಜ್ಯಮಟ್ಟದ ರಂಗ ಪ್ರಶಸ್ತಿ ಪ್ರದಾನ appeared first on Karnataka Kahale.

]]>
ಗುಲ್ಬರ್ಗಾ: ಕಾಂಗ್ರೆಸ್ ಪಕ್ಷದ ರಾಧಾಕೃಷ್ಣ ದೊಡ್ಡಮನಿ ಸೇರಿ  ಮೂವರು ಅಭ್ಯರ್ಥಿಗಳಿಂದ ಐದು ನಾಮಪತ್ರಗಳು ಸಲ್ಲಿಕೆ https://www.karnatakakahale.com/news/16002 Fri, 12 Apr 2024 13:41:24 +0000 https://www.karnatakakahale.com/?p=16002 ಕಲಬುರಗಿ,ಏ.12:ಗುಲಬರ್ಗಾ ಲೋಕಸಭಾ (ಪ.ಜಾ ಮೀಸಲು) ಕ್ಷೇತ್ರಕ್ಕೆ ಮೇ 7ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲನೇ ದಿನವಾದ ಶುಕ್ರವಾರ ಮೂವರು ಅಭ್ಯರ್ಥಿಗಳಿಂದ ಐದು ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಿದ…

The post ಗುಲ್ಬರ್ಗಾ: ಕಾಂಗ್ರೆಸ್ ಪಕ್ಷದ ರಾಧಾಕೃಷ್ಣ ದೊಡ್ಡಮನಿ ಸೇರಿ  ಮೂವರು ಅಭ್ಯರ್ಥಿಗಳಿಂದ ಐದು ನಾಮಪತ್ರಗಳು ಸಲ್ಲಿಕೆ appeared first on Karnataka Kahale.

]]>
ಕಲಬುರಗಿ,ಏ.12:ಗುಲಬರ್ಗಾ ಲೋಕಸಭಾ (ಪ.ಜಾ ಮೀಸಲು) ಕ್ಷೇತ್ರಕ್ಕೆ ಮೇ 7ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲನೇ ದಿನವಾದ ಶುಕ್ರವಾರ ಮೂವರು ಅಭ್ಯರ್ಥಿಗಳಿಂದ ಐದು ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿವೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಧಾಕೃಷ್ಣ ದೊಡ್ಡಮನಿ ಅವರು 3 ನಾಮಪತ್ರ, ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಉಮೇಶ ಗೋಪಾಲದೇವ ಮತ್ತು ಭಾರತೀಯ ಜನ ಸಾಮ್ರಾಟ್ ಪಾರ್ಟಿಯ ಅಭ್ಯರ್ಥಿಯಾಗಿ ತಾರಾಬಾಯಿ ಬೋವಿ ಅವರು ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಏ. 19 ರಂದು ಕೊನೆಯ ದಿನವಾಗಿದೆ. ಏ. 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಏ. 22 ಕೊನೆ‌ ದಿನವಾಗಿರುತ್ತದೆ.

The post ಗುಲ್ಬರ್ಗಾ: ಕಾಂಗ್ರೆಸ್ ಪಕ್ಷದ ರಾಧಾಕೃಷ್ಣ ದೊಡ್ಡಮನಿ ಸೇರಿ  ಮೂವರು ಅಭ್ಯರ್ಥಿಗಳಿಂದ ಐದು ನಾಮಪತ್ರಗಳು ಸಲ್ಲಿಕೆ appeared first on Karnataka Kahale.

]]>
ಬಳ್ಳಾರಿ ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ https://www.karnatakakahale.com/news/14719 Tue, 05 Dec 2023 05:29:50 +0000 https://www.karnatakakahale.com/?p=14719 ಬಸವಕಲ್ಯಾಣ, ಡಿ.5: ಪದವಿಪೂರ್ವ ಶಿಕ್ಷಣ ಇಲಾಖೆ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕಲಬುರಗಿ ವಿಭಾಗ ಮಟ್ಟದ ವಿವಿಧ ಸಾಂಸ್ಕೃತಿಕ ಸ್ರರ್ದೆಗಳಲ್ಲಿ ಭಾಗವಹಿಸಿದ ಬಳ್ಳಾರಿ ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಗರದ ಬಸವೇಶ್ವರ ಕಾಲೇಜಿನಲ್ಲಿ ಸೋಮವಾರ…

The post ಬಳ್ಳಾರಿ ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ appeared first on Karnataka Kahale.

]]>
ಬಸವಕಲ್ಯಾಣ, ಡಿ.5: ಪದವಿಪೂರ್ವ ಶಿಕ್ಷಣ ಇಲಾಖೆ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕಲಬುರಗಿ ವಿಭಾಗ ಮಟ್ಟದ ವಿವಿಧ ಸಾಂಸ್ಕೃತಿಕ ಸ್ರರ್ದೆಗಳಲ್ಲಿ ಭಾಗವಹಿಸಿದ ಬಳ್ಳಾರಿ ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ನಗರದ ಬಸವೇಶ್ವರ ಕಾಲೇಜಿನಲ್ಲಿ ಸೋಮವಾರ ಜರುಗಿದ ವಿವಿಧ ಸ್ಪರ್ದೆಗಳಲ್ಲಿ ಕು.ಬಿ.ವಿ‌ ಸಿಂಚನಾ ಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕು. ತೇಜಸ್ವಿನಿ ಪಾಟೀಲ್ ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ .ಕು. ರಬೇಕಾ ಪ್ರಾನ್ಸಿಸ್ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧಕ ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಏಳುಬೆಂಚಿ ರಾಜಶೇಖರ್, ಸದಸ್ಯರಾದ ಅಣ್ಣಾ ವಿರುಪಾಕ್ಷಪ್ಪ, ಕೆ ಮುದ್ದನಗೌಡ, ಪ್ರಾಚಾರ್ಯ ಡಾ.ಕೆ.ಎಂ ದೇವೇಂದ್ರಯ್ಯ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
—–

The post ಬಳ್ಳಾರಿ ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ appeared first on Karnataka Kahale.

]]>
ಸೇಡಂ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ: 23ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ https://www.karnatakakahale.com/news/13878 Tue, 03 Oct 2023 07:59:48 +0000 https://www.karnatakakahale.com/?p=13878 ಕಲಬುರಗಿ, ಅ. 3- ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 23 ನೇ ವರ್ಷದ `ಅಮ್ಮ ಪ್ರಶಸ್ತಿ’ಗಾಗಿ 2022 ಮತ್ತು 2023 ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಳೆದ 22 ವರ್ಷಗಳಿಂದ ನಿರಂತರ ಸಾಹಿತ್ಯ…

The post ಸೇಡಂ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ: 23ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ appeared first on Karnataka Kahale.

]]>
ಅಮ್ಮ ಪ್ರಶಸ್ತಿ

ಕಲಬುರಗಿ, ಅ. 3- ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 23 ನೇ ವರ್ಷದ `ಅಮ್ಮ ಪ್ರಶಸ್ತಿ’ಗಾಗಿ 2022 ಮತ್ತು 2023 ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ.

ಕಳೆದ 22 ವರ್ಷಗಳಿಂದ ನಿರಂತರ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನೀಡಲಾಗುತ್ತಿರುವ ಈಗ ಅಮ್ಮ ಪ್ರಶಸ್ತಿಗೆ 23 ರ ಸಂಭ್ರಮ. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಗಾಗಿ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಗಳ ಎರಡು ಪ್ರತಿಗಳನ್ನು ಕಳುಹಿಸಬಹುದು. ಆಯ್ಕೆಯಾದ 5 ಕೃತಿಗಳಿಗೆ ತಲಾ 5 ಸಾವಿರ ನಗದು ಪುರಸ್ಕಾರ ಮತ್ತು ಸನ್ಮಾನ, ಗೌರವದ ಕಾಣಿಕೆ ನೀಡಿ ಸತ್ಕರಿಸಲಾಗುವುದು. ಕೃತಿಗಳನ್ನು ಸ್ವೀಕರಿಸಲು ಅಕ್ಟೋಬರ್ 30 ಕೊನೆಯ ದಿನಾಂಕವಾಗಿರುತ್ತದೆ ಎಂದು ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃತಿಗಳನ್ನು ಕಳುಹಿಸಬೇಕಾದ ವಿಳಾಸ : ಶ್ರೀಮತಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್, ಸಂಚಾಲಕಿ, ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ “ಅಮ್ಮ ನಿಲಯ”, ರಾಮಚಂದ್ರ ಲೇಔಟ್, ಪಿಡಬ್ಲ್ಯೂಡಿ ಕಚೇರಿ ಹತ್ತಿರ, ಸೇಡಂ-585222 ಕಲಬುರಗಿ ಜಿಲ್ಲೆ. ಹೆಚ್ಚಿನ ವಿವರಗಳಿಗಾಗಿ, ಮೊಬೈಲ್ ಸಂಖ್ಯೆ: 9731666052 ಸಂಪರ್ಕಿಸಬಹುದು.

The post ಸೇಡಂ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ: 23ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ appeared first on Karnataka Kahale.

]]>
ಕಾವೇರಿ ನೀರು: ಯಡಿಯೂರಪ್ಪ ನವರದ್ದು ರಾಜಕೀಯ ಹೇಳಿಕೆ -ಮುಖ್ಯಮಂತ್ರಿ ಸಿದ್ದರಾಮಯ್ಯ https://www.karnatakakahale.com/news/13693 Sun, 17 Sep 2023 17:25:06 +0000 https://www.karnatakakahale.com/?p=13693   ಕಲಬುರಗಿ, ಸೆಪ್ಟೆಂಬರ್ 17: ಕಾವೇರಿ ನೀರು ವಿಚಾರವಾಗಿ ಯಡಿಯೂರಪ್ಪ ನವರ ಹೇಳಿಕೆ ರಾಜಕೀಯವಾಗಿ ಪ್ರೇರಿತ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.                         …

The post ಕಾವೇರಿ ನೀರು: ಯಡಿಯೂರಪ್ಪ ನವರದ್ದು ರಾಜಕೀಯ ಹೇಳಿಕೆ -ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.

]]>
 

ಕಲಬುರಗಿ, ಸೆಪ್ಟೆಂಬರ್ 17: ಕಾವೇರಿ ನೀರು ವಿಚಾರವಾಗಿ ಯಡಿಯೂರಪ್ಪ ನವರ ಹೇಳಿಕೆ ರಾಜಕೀಯವಾಗಿ ಪ್ರೇರಿತ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.                                                      ಅವರು ಭಾನುವಾರ ಕಲಬುರಗಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾನಾಡಿದರು.                                   ನೀರು ಬಿಡಲು ನಮ್ಮ ಬಳಿ ನೀರಿಲ್ಲ, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತಿದ್ದು, ನ್ಯಾಯಾಲಯ ಸಮಿತಿಯ ಆದೇಶ ಪಾಲನೆ ಮಾಡಿಲ್ಲ ಎಂದು ಪ್ರಶ್ನಿಸಿದೆ. ನೀರು ಬಿಡಬೇಕೆಂದಿದ್ದರೂ ನಮಗೆ 106 ಟಿ. ಎಂ. ಸಿ ನೀರಿನ ಅಗತ್ಯವಿದೆ. ನಮ್ಮ ಬಳಿ ಇರುವುದೇ 53 ಟಿಎಂಸಿ. ಕುಡಿಯುವ ನೀರಿಗೆ 30 ಟಿಎಂಸಿ, ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು ಮತ್ತು ಕೈಗಾರಿಕೆಗಳಿಗೆ 3 ಟಿಎಂಸಿ ಅಗತ್ಯ. ಒಟ್ಟು 106 ಟಿಎಂಸಿ ನಮಗೆ ಅಗತ್ಯವಿದೆ. ನಮ್ಮ ಬಳಿ ಇರುವುದೇ 53 ಟಿಎಂಸಿ ನೀರು. ನೀರು ಕೊಡಲು ನಮ್ಮ ಬಳಿ ನೀರಿಲ್ಲ. ಕಾವೇರಿ ನೀರನ್ನು ತಮಿಳುನಾಡಿಗೆ ಯಡಿಯೂರಪ್ಪ ಅವರ ಕಾಲದಲ್ಲಿ ಹಾಗೂ ಎಲ್ಲರ ಕಾಲದಲ್ಲಿ ಬಿಡಲಾಗಿದೆ.  ಸಾಮಾನ್ಯ ವರ್ಷದಲ್ಲಿ 177.25 ಟಿಎಂಸಿ ನೀರು ಬಿಡಲಾಗುತ್ತದೆ. ಈವರೆಗೆ 37.7 ಟಿಎಂಸಿ ಮಾತ್ರ ಬಿಟ್ಟಿದ್ದೇವೆ. ನಾವು ಬಿಡಬೇಕಿದ್ದುದ್ದು 99 ಟಿಎಂಸಿ ನೀರು. ಎಲ್ಲಿ ನೀರು ಬಿಟ್ಟಿದ್ದೇವೆ ಎಂದು ಮರು ಪ್ರಶ್ನಿಸಿದರು.                                                    ಕಾವೇರಿ ನೀರು ನಿಯಂತ್ರಣ ಸಮಿತಿ 5000 ಕ್ಯೂಸೆಕ್ಸ್ ನೀರು ಬಿಡಬೇಕು ಎಂದು ಸೂಚಿಸಿದೆ. ಅಷ್ಟು ನೀರು ಇಲ್ಲದಿರುವುದರಿಂದ ನಾವು ನೀರು ಬಿಟ್ಟಿಲ್ಲ ಎಂದರು.

ಇಂಡಿಯಾ ಯಾವ ಧರ್ಮದ ವಿರುದ್ಧವೂ ಇಲ್ಲ: ಇಂಡಿಯಾ ಒಕ್ಕೂಟ ಸನಾತನ ಧರ್ಮದ ವಿರುದ್ಧವಿದೆ ಎಂದು ಬಿಜೆಪಿಯ ಹೇಳಿಕೆ ಬಗ್ಗೆ ಮಾತನಾಡಿ ನಾವು ಯಾವ ಧರ್ಮದ ವಿರುದ್ದ ಇಲ್ಲ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ. ಧರ್ಮ ಎಂದರೆ ಬದುಕಿನ ದಾರಿ. ಜನರಿಗಾಗಿ ಧರ್ಮವಿರುವುದು, ಧರ್ಮಕ್ಕಾಗಿ ಜನ ಅಲ್ಲ ಎಂದರು. ಧರ್ಮ ಮನುಷ್ಯನ ಒಳಿತಿಗಾಗಿ ಇದೆ. ದಯೆಯೇ ಧರ್ಮದ ಮೂಲ. ದಯೆ ಇಲ್ಲದ ಧರ್ಮ ಯಾವುದಯ್ಯಾ ಎಂದು ಬಸವಾದಿ ಶರಣರು ಹೇಳಿದ್ದಾರೆ. ಧರ್ಮದಲ್ಲಿ ದಯೆ, ಕರುಣೆ, ಮನುಷ್ಯತ್ವ ಇರಬೇಕು ಎಂದರು.

ಗ್ಯಾರಂಟಿ ಯೋಜನೆ ಅಭಿವೃದ್ಧಿ ಕೆಲಸ ಅಲ್ಲವೇ: ಸಿಎಂ ಸಿದ್ದರಾಮಯ್ಯ ಪ್ರಶ್ನೆ!

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರ ಇನ್ನೂ ಗ್ಯಾರಂಟಿ ಯೋಜನೆಗಳ ಗುಂಗಿನಲ್ಲಿಯೇ ಇದೆ ಎಂದು ಪಾದಯಾತ್ರೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ, 5 ಗ್ಯಾರಂಟಿ ಯೋಜನೆ ಅಭಿವೃದ್ಧಿ ಕೆಲಸ ಅಲ್ಲವೇ ಎಂದು ಪ್ರಶ್ನಿಸಿದರು. ಯಾವ ಸರ್ಕಾರ 1.13 ಕೋಟಿ ಜನರಿಗೆ 2000 ರೂ.ಗಳನ್ನು ನೀಡಿದೆ? ಯಡಿಯೂರಪ್ಪ ಅವರು 10 ಕೆಜಿಯಲ್ಲಿ ಒಂದು ಕಾಳು ಕಡಿಮೆಯಾದರೂ ಪ್ರತಿಭಟಿಸುವುದಾಗಿ ಹೇಳಿದ್ದರು, ಮಾಡಿದರೇ? ಎಂದರು. ಅವರ ಕಾಲದಲ್ಲಿ 7 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 5 ಕೆಜಿಗೆ ಇಳಿಸಿದರು. ಅಲ್ಲೇ ಗಿರಕಿ ಹೊಡೆಯುತ್ತಿದ್ದಾರೆ. ಐದು ಗ್ಯಾರಂಟಿ ಕೊಟ್ಟಿದ್ದೇವೆಂದು ಪಾದಯಾತ್ರೆ ಮಾಡುತ್ತಿದ್ದಾರೆಯೇ ಎಂದು ವ್ಯಂಗವಾಡಿದರು. 600 ಭಾರವಸೆ ನೀಡಿ ಶೇ 10 ರಷ್ಟನ್ನೂ ಜಾರಿಗೆ ತರಲಿಲ್ಲ. ಅವರಿಗೆ ಯಾವ ನೈತಿಕ ಹಕ್ಕಿದೆ ಎಂದರು.

ಮೂರು ಡಿಸಿಎಂ-ಪಕ್ಷದ ವರಿಷ್ಠರ ತೀರ್ಮಾನ ಅಂತಿಮ:

ಮೂವರು ಡಿಸಿಎಂ ಮಾಡುವ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿರುವ ಬಗೆ ಪ್ರತಿಕ್ರಿಯಿಸಿದ ಸಿಎಂ, ಅಂತಿಮವಾಗಿ ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು. ಈಗ ಒಬ್ಬರನ್ನು ಮಾಡಿದ್ದಾರೆ. ವರಿಷ್ಠರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ, ಮಾತನಾಡಲಿ. ಹೈ ಕಮಾಂಡ್ ನಿರ್ಧಾರವನ್ನು ಪಾಲಿಸುವುದಾಗಿ ಹೇಳಿದರು.

ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಸರ್ವ ಪಕ್ಷ ನಿಯೋಗ:  ಕೃಷ್ಣ ಮೇಲ್ದಂಡೆ ಯೋಜನೆ ವಿಚಾರ ನ್ಯಾಯಾಲಯದಲ್ಲಿದ್ದು, ಆಂಧ್ರ , ತೆಲಂಗಾಣ ಅರ್ಜಿ ಹಾಕಿದ್ದಾರೆ. ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯೇ ಹೊರಡಿಸಿಲ್ಲ. ಮಹದಾಯಿ ಯೋಜನೆಯಲ್ಲಿ ಗೆಜೆಟ್ ಅಧಿಸೂಚನೆ ಆಗಿದೆ. ಆದರೆ ಅರಣ್ಯ ಹಾಗೂ ಪರಿಸರ ತೀರುವಳಿ ನೀಡಿಲ್ಲ. ನಾಳೆ ಕೊಟ್ಟರೆ, ನಾಡಿದ್ದೇ ಕೆಲಸ ಶುರು ಮಾಡುತ್ತೇವೆ ಎಂದರು. ಅದಕ್ಕಾಗಿಯೇ ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ, ಯೋಜನೆಗಳ ಬಗ್ಗೆ ಸರ್ವಪಕ್ಷ ನಿಯೋಗ ತೆರಳಲು ದಿನಾಂಕ ನಿಗದಿಯಾಗುತ್ತಿಲ್ಲ.  ಬಿಜೆಪಿಯವರೇ 25 ಸಂಸದರಿದ್ದಾರೆ ಎಂದರು.

The post ಕಾವೇರಿ ನೀರು: ಯಡಿಯೂರಪ್ಪ ನವರದ್ದು ರಾಜಕೀಯ ಹೇಳಿಕೆ -ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.

]]>
ಕಲಬುರಗಿ ಪತ್ರಕರ್ತ ಕಲ್ಲೂರಿನ ಕ್ಯಾದಿಗೇರಿ ನಾಗಿರೆಡ್ಡಿಯ ( ಕೆ.ಎನ್. ರೆಡ್ಡಿ) ಅಕಾಲಿಕ ಸಾವಿಗೆ ಸಾಹಿತಿ ಸಿದ್ದು ಯಾಪಲಪರವಿ ಕಂಬನಿ https://www.karnatakakahale.com/news/13486 Wed, 06 Sep 2023 17:07:23 +0000 https://www.karnatakakahale.com/?p=13486 ಧಾರವಾಡ ಕರ್ನಾಟಕ ಕಾಲೇಜಿನ ಗೆಳೆಯ, ಹಿರಿಯ ಇಂಗ್ಲಿಷ್ ಪತ್ರಕರ್ತ ಕೆ.ಎನ್. ರೆಡ್ಡಿ ಬದುಕು ದಾರುಣ ಅಂತ್ಯ ಕಂಡಿದೆ. ಸದಾಕಾಲ ಅಂತರ್ಮುಖಿಯಾಗಿರುತ್ತಿದ್ದ ರೆಡ್ಡಿಯ ಮಾತು ಕಡಿಮೆ, ಕೆಲಸ ಹೆಚ್ಚು. ಅಗತ್ಯಕ್ಕಿಂತ ಹೆಚ್ಚು ಸೂಕ್ಷ್ಮ. ವಿಧಾನಸೌಧ ಸುತ್ತು ಹಾಕುವಾಗ ಅನೇಕ ಘಟಾನುಘಟಿಗಳ ಸಂಪರ್ಕವನ್ನು ತಲೆಗೆ…

The post ಕಲಬುರಗಿ ಪತ್ರಕರ್ತ ಕಲ್ಲೂರಿನ ಕ್ಯಾದಿಗೇರಿ ನಾಗಿರೆಡ್ಡಿಯ ( ಕೆ.ಎನ್. ರೆಡ್ಡಿ) ಅಕಾಲಿಕ ಸಾವಿಗೆ ಸಾಹಿತಿ ಸಿದ್ದು ಯಾಪಲಪರವಿ ಕಂಬನಿ appeared first on Karnataka Kahale.

]]>
ಧಾರವಾಡ ಕರ್ನಾಟಕ ಕಾಲೇಜಿನ ಗೆಳೆಯ, ಹಿರಿಯ ಇಂಗ್ಲಿಷ್ ಪತ್ರಕರ್ತ ಕೆ.ಎನ್. ರೆಡ್ಡಿ ಬದುಕು ದಾರುಣ ಅಂತ್ಯ ಕಂಡಿದೆ. ಸದಾಕಾಲ ಅಂತರ್ಮುಖಿಯಾಗಿರುತ್ತಿದ್ದ ರೆಡ್ಡಿಯ ಮಾತು ಕಡಿಮೆ, ಕೆಲಸ ಹೆಚ್ಚು. ಅಗತ್ಯಕ್ಕಿಂತ ಹೆಚ್ಚು ಸೂಕ್ಷ್ಮ.

ವಿಧಾನಸೌಧ ಸುತ್ತು ಹಾಕುವಾಗ ಅನೇಕ ಘಟಾನುಘಟಿಗಳ ಸಂಪರ್ಕವನ್ನು ತಲೆಗೆ ಏರಿಸಿಕೊಳ್ಳದ ಪ್ರಾಮಾಣಿಕತೆ. ಅನೇಕ ಆರ್ಥಿಕ ಸಂಕಷ್ಟಗಳ ಮಧ್ಯೆ ಬದುಕು ಕಟ್ಟಿಕೊಂಡು ಕಲಬುರ್ಗಿಯಲ್ಲಿ ನೆಲೆಗೊಂಡಿದ್ದ.

ಅವನ ಪರಿಸರ ಪ್ರೇಮದ ಕಾರಣದಿಂದ ಒಂದು ಪರಿಸರ ಸ್ನೇಹಿ ಶಾಲೆ ಆರಂಭಿಸಿದ ಹುಚ್ಚು ಪ್ಯಾಶನ್ ಅವನ ಸಾವಿಗೆ ಮೂಲ ಕಾರಣ. ಈ ಕುರಿತು ನನ್ನೊಂದಿಗೆ ಅನೇಕ ಬಾರಿ ಚರ್ಚೆ ಮಾಡಿದ್ದ ಕೂಡ. ಈ ವಿನೂತನ ಹುಚ್ಚಿಗೆ ರಾಯಚೂರು ಸೂಕ್ತ ಸ್ಥಳವಲ್ಲ ಎಂಬ ಅಭಿಪ್ರಾಯದ ನಡುವೆ ಶಾಲೆ ಆರಂಭಿಸಿ ವಿಫಲನಾಗಿದ್ದ. ಆದರೆ ಈ ಕುರಿತು ನಂತರ ಮಾತನಾಡಲೇ ಇಲ್ಲ.

ಅವನಿಗೆ ಜೆ.ಎಚ್. ಪಟೇಲರ ಬಗ್ಗೆ ಅಪಾರ ಗೌರವ. ಅವರ ಕುರಿತು ಸುದೀರ್ಘ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸ್ವಂತ ಹಣ ಹಾಕಿದ್ದ. ಆದರೆ ಅದನ್ನು ಜನರಿಗೆ ತಲುಪಿಸುವ ಮಾರುಕಟ್ಟೆಯ ತಂತ್ರ ಅವನಿಗೆ ಕೊನೆ ತನಕ ತಿಳಿಯಲೇ ಇಲ್ಲ. ಒಂದು YouTube ಚಾನಲ್ ಮಾಡು ಎಂಬ ಮಾತನ್ನು ಲೆಕ್ಕಸದೇ ಮತ್ತೆ, ಮತ್ತೆ ಹೊಸ ಸಾಹಸಗಳಿಗೆ ಕೈ ಹಾಕಿದ. ಇಂತಹ ಸಾಹಸ ತಪ್ಪಲ್ಲ. ನಮ್ಮ ಪ್ಯಾಶನ್ ಮತ್ತು ಹುಚ್ಚುಗಳಿಗೆ ಕಾಲ ಸಾತ್ ಕೊಡದೆ ಇದ್ದರೆ ಬದುಕು ನರಕವಾಗುವ ವಾಸ್ತವ ನಮಗೆ ಗೊತ್ತಿರಬೇಕು.

ರೆಡ್ಡಿ ಕೇವಲ ಜರ್ನಲಿಸ್ಟ್ ಆಗಿದ್ದರೆ ಖಂಡಿತ ನಮ್ಮೊಡನೆ ಇರುತ್ತಿದ್ದನೇನೋ ಎಂಬ ಭ್ರಮೆ. ಅವನು ಶಿಕ್ಷಣ ಮತ್ತು ಸಾಕ್ಷ್ಯಚಿತ್ರ ಲೋಕಕ್ಕೆ ಪ್ರವೇಶ ಮಾಡುವ ಮುನ್ನ, ಅಗತ್ಯವಿರುವ ಫಂಡ್ ಸಂಗ್ರಹಿಸುವ ವ್ಯವಹಾರ ಜ್ಞಾನ ರೂಪಿಸಿಕೊಳ್ಳಬೇಕಿತ್ತು. ರೆಡ್ಡಿಗೆ ಆ ಚಾಣಾಕ್ಷತನ ಇರಲಿಲ್ಲ.

ಪಟೇಲರ ಸ್ಮರಣೆಯ ಕಾರ್ಯಕ್ರಮ ಗದುಗಿನಲ್ಲಿ ಆಯೋಜನೆ ಮಾಡಿದಾಗ ಅವನನ್ನು ಆಹ್ವಾನಿಸಿ ಗೌರವಿಸಲಾಯಿತು. ಮಹಿಮಾ ಪಟೇಲ್, ಮಾಜಿ ಸಚಿವರಾದ ಎಸ್.ಎಸ್.ಪಾಟೀಲ, ಹಿರಿಯ ನಾಯಕರಾದ ಮಾನ್ಯ ಬಸವರಾಜ ಹೊರಟ್ಟಿ ಹಾಗೂ ಅನೇಕರು ರೆಡ್ಡಿಯ ಪ್ರಾಮಾಣಿಕತೆಯನ್ನು ಹೊಗಳಿದ್ದರು.

ಅದೇ ಸಮಯದಲ್ಲಿ ಅವನ ಶಾಲೆಯ ಕನಸನ್ನು ತೋಡಿಕೊಂಡಾಗ, ನನ್ನ ಅನೇಕ ಹುಚ್ಚಾಟಗಳ ವಿಫಲತೆ ಮತ್ತು ಆರ್ಥಿಕ ಸಂಕಷ್ಟಗಳ ಪಡಿಪಾಟಲನ್ನು ರೆಡ್ಡಿಗೆ ವಿವರಿಸಿದ್ದೆ. ಕೆಲದಿನಗಳ ನಂತರ ಕಲಬುರ್ಗಿ ಕಾರ್ಯಕ್ರಮದಲ್ಲಿ ಒಂದು ಭೇಟಿ, ನಂತರ ಒಂದೆರಡು ಬಾರಿ ಮಾತನಾಡಿ ನಂತರ ಮಾಯವಾಗಿದ್ದ.

ಪತ್ರಿಕೋದ್ಯಮದ ಕೆಲಸ ಬಿಡಬಾರದಿತ್ತು ಎಂಬ ನೋವು ಅವನನ್ನು ಕಾಡಲಾರಂಭಿಸಿತು. ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಪ್ರಬುದ್ಧತೆಯ ಜೊತೆಗೆ ಅಚಲ ನಿಷ್ಠೆ ಮತ್ತು ಪ್ರಾಮಾಣಿಕತೆ ಅವನ ಶಕ್ತಿ. ವ್ಯವಹಾರ ಜ್ಞಾನದ ಕೊರತೆ ಅವನ ಮಿತಿ.
ಸೂಕ್ಷ್ಮ ಜೀವಿ, ಪ್ರಾಮಾಣಿಕ ರೆಡ್ಡಿಗೆ ಆತ್ಮಹತ್ಯೆ ಮಹಾಪಾಪ ಎಂಬ ಅರಿವು ಇರಬೇಕಿತ್ತು. ಅವನ ಮಗಳು ಮತ್ತು ನಮ್ಮಂತಹ ಗೌರವಿಸುವ ಗೆಳೆಯರನ್ನು ಒಮ್ಮೆ ನೆನಪಿಸಿಕೊಂಡು ಸಾವಿರ ನೋವುಗಳನ್ನು ಅವನು ಸಹಿಸಿಕೊಳ್ಳಲೇಬೇಕಿತ್ತು.‌

ಪ್ರಾಮಾಣಿಕರಿಗೆ ಹಿಂಸೆ, ಅಪಮಾನ, ನೋವು ಉಂಟು ಮಾಡುವ ವ್ಯಾವಹಾರಿಕ ಜಗತ್ತಿನಲ್ಲಿ ನಾವಿದ್ದೇವೆ. ಅಕ್ಷರ ಹಾದರ ಯಥೇಚ್ಛವಾಗಿ ಸಾಗಿ, ದುಡ್ಡು ಮಾಡುವ ಜನರನ್ನು ಕಂಡು ರೋಸಿ ಹೋಗುವ ಹೊತ್ತಿನಲ್ಲಿ ಪ್ರಾಮಾಣಿಕ ಮನೋಧರ್ಮದ ರೆಡ್ಡಿ ನಮಗೆ ಭರವಸೆಯ ಬೆಳಕಾಗಿದ್ದ. ಈಗ ಕೇಡುಗಾಲ ಎಂಬಂತೆ ಆ ಬೆಳಕು, ಕ್ರೂರ ಅಂತ್ಯ ಕಂಡು ನಂದಿ ಹೋಗಿದೆ.
ನಾನು ನಿನ್ನ ಈ ಪಾಪದ ನಿರ್ಣಯವನ್ನು ಎಂದಿಗೂ ಕ್ಷಮಿಸಲಾರೆ.

-ಸಿದ್ದು ಯಾಪಲಪರವಿ, ಗದಗ

The post ಕಲಬುರಗಿ ಪತ್ರಕರ್ತ ಕಲ್ಲೂರಿನ ಕ್ಯಾದಿಗೇರಿ ನಾಗಿರೆಡ್ಡಿಯ ( ಕೆ.ಎನ್. ರೆಡ್ಡಿ) ಅಕಾಲಿಕ ಸಾವಿಗೆ ಸಾಹಿತಿ ಸಿದ್ದು ಯಾಪಲಪರವಿ ಕಂಬನಿ appeared first on Karnataka Kahale.

]]>
ವಿಜಯಪುರದಲ್ಲಿ ಜು. 29 ಮತ್ತು 30ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ವಿದ್ವಾಂಸ ಡಾ. ಎಚ್.ಟಿ. ಪೋತೆ ಆಯ್ಕೆ -ದಸಾಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ https://www.karnatakakahale.com/news/12776 Mon, 17 Jul 2023 11:11:34 +0000 https://www.karnatakakahale.com/?p=12776 ಕಲಬುರಗಿ,ಜು. 17: ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮದ ಅಂಗವಾಗಿ 10ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವು ವಿಜಯಪುರದ ಕೆಂಗಲ್ ಹನುಮಂತರಾಯ್ ರಂಗಮಂದಿರದಲ್ಲಿ ಜು.29 ಹಾಗೂ 30ರಂದು ಜರುಗಲಿದೆ ಎಂದು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಅರ್ಜುನ್…

The post ವಿಜಯಪುರದಲ್ಲಿ ಜು. 29 ಮತ್ತು 30ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ವಿದ್ವಾಂಸ ಡಾ. ಎಚ್.ಟಿ. ಪೋತೆ ಆಯ್ಕೆ -ದಸಾಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ appeared first on Karnataka Kahale.

]]>
ಕಲಬುರಗಿ,ಜು. 17: ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮದ ಅಂಗವಾಗಿ 10ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವು ವಿಜಯಪುರದ ಕೆಂಗಲ್ ಹನುಮಂತರಾಯ್ ರಂಗಮಂದಿರದಲ್ಲಿ ಜು.29 ಹಾಗೂ 30ರಂದು ಜರುಗಲಿದೆ ಎಂದು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಅರ್ಜುನ್ ಗೊಳಸಂಗಿ ಅವರು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ಹಾಗೂ ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿರುವ ಸಾಹಿತಿ, ಕರ್ನಾಟಕದಲ್ಲಿ ಭಗವಾನ್ ಬುದ್ದ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತು ಅಧಿಕೃತವಾಗಿ ಮಾತನಾಡುವ ಚಿಂತಕರೂ, ಜಾನಪದ ವಿದ್ವಾಂಸರು, ಕಲಬುರ್ಗಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು ಮತ್ತು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದವರಾದ ಡಾ. ಎಚ್.ಟಿ. ಪೋತೆ ಅವರನ್ನು ದಲಿತ ಹಾಗೂ ದಲಿತ ಪರ ಸಾಹಿತಿ – ಸಂಘಟಕರ ಅಭಿಪ್ರಾಯಗಳನ್ನು ಸಂಕಲಿಸಿ, ಪರಿಷತ್ ರಾಜ್ಯ ಕಾರ್ಯಕಾರಿ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದರು.


ಎರಡು ದಿನಗಳ ಈ ಸಮ್ಮೇಳನದಲ್ಲಿ ರಾಜ್ಯದ 31 ಜಿಲ್ಲೆಗಳಿಂದ ದಲಿತ ಸಾಹಿತ್ಯ -ಸಂಸ್ಕೃತಿ-ಸಂಘಟನೆಯ ಕ್ಷೇತ್ರದಲ್ಲಿ ತೊಡಗಿಕೊಂಡ ನೂರಾರು ಸಾಧಕರು, ಹಿರಿಯ ಮತ್ತು ಯುವ ಸಾಹಿತಿಗಳು ಹಾಗೂ ಪ್ರತಿನಿಧಿಗಳು ಸ್ಥಳೀಯ ಸಾಹಿತಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಸಮ್ಮೇಳನದಲ್ಲಿ 25 ಜನ ದಲಿತ ಸಾಹಿತಿಗಳಿಗೆ ‘ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ’ ಹಾಗೂ ದಲಿತ ಲೋಕದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೂ ಬೆಳ್ಳಿ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.
ಈ ಬಾರಿಯ ಸಮ್ಮೇಳನದ ಪ್ರಮುಖ ಆಶಯ ‘ಪ್ರಬುದ್ದ ಭಾರತ.’ ಕುರಿತ ಉಪನ್ಯಾಸ, ‘ನಮ್ಮ ಸಂವಿಧಾನ ನಮ್ಮ ರಕ್ಷಣೆ’ ಕುರಿತು ಸಂವಾದ ನಡೆಸಲಾಗುವುದು. ದಲಿತ ಸಾಹಿತ್ಯ ಕುರಿತ ಒಂದು ಗೋಷ್ಠಿ, ಮತ್ತು ಎರಡು ಕವಿಗೋಷ್ಠಿಗಳನ್ನು ಏರ್ಪಡಿಸಲಾಗುವುದು. ಸಮಾರೋಪ ಸಮಾರಂಭದಲ್ಲಿ ನಾಡಿನ ಸಾಧಕರನ್ನು ಸನ್ಮಾನಿಸಲಾಗುವುದು. ಎರಡೂ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡಾ ನಡೆಯುತ್ತವೆ. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಸಂವಿಧಾನ ಪುಸ್ತಕಗಳ ಮೆರವಣಿಗೆ ಪ್ರಮುಖವಾಗಿರುತ್ತದೆ. ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ- ಮಾರಾಟ ವ್ಯವಸ್ಥೆಯನ್ನು ಮಾಡಲಾಗುವುದು. ಸಮ್ಮೇಳನಕ್ಕೆ ಬರುವ ಅತಿಥಿ ಹಾಗೂ ಪ್ರತಿನಿಧಿಗಳಿಗೆ ಸ್ಥಳೀಯ ವಿವಿಧ ವಸತಿಗೃಹ ಗಳಲ್ಲಿ ವ್ಯವಸ್ಠೆ ಮಾಡಲಾಗುವುದು ಎಂದು ಡಾ. ಗೊಳಸಂಗಿ ಹೇಳಿದರು.
ಗೌರವ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ‌ ಸೇವೆ ಸಲ್ಲಿಸಿರುವ ಬೆಂಗಳೂರಿನ ಆರ್. ದೊಡ್ಡೇಗೌಡ, ರಾಯಚೂರಿನ ವೀರಹನುಮಾನ್, ಕಲಬುರ್ಗಿಯ ಡಾ. ಶ್ರೀಶೈಲ್ ನಾಗರಾಳ್, ಹುಮ್ನಾಬಾದ್‍ನ ಡಾ. ಗವಿಸಿದ್ದಪ್ಪ ಪಾಟೀಲ್, ಇಳಕಲ್‍ನ ಶ್ರೀಮತಿ ಮುರ್ತುಜಾಬೇಗಂ ಕೊಡಗಲಿ, ಮೈಸೂರಿನ ಹಾರೋಹಳ್ಳಿ ರವೀಂದ್ರ, ವಿಜಯಪುರದ ಪರಶುರಾಮ್, ಸಮಾಜ ಸೇವೆಗಾಗಿ ಮೈಸೂರಿನ ನರೇಂದ್ರ ನಾಗವಾಲ್, ದಲಿತ ಚಳುವಳಿಗಾಗಿ ಚಾಮರಾಜನಗರದ ಮುಳ್ಳೂರು ಶಿವಮಲ್ಲು, ಪತ್ರಿಕಾ ರಂಗದಿಂದ ಧಾರವಾಡದ ಡಾ. ಸಂಜೀವಕುಮಾರ್ ಮಾಲಗತ್ತಿ, ಹುಬ್ಬಳ್ಳಿಯ ರಾಜು ವಿಜಯಪುರ, ಚಿತ್ರಕಲಾ ಕ್ಷೇತ್ರದಲ್ಲಿ ಧಾರವಾಡದ ಕು. ಸೌಜನ್ಯ ಕರಡೋಣಿ, ಸಂಗೀತ ಕ್ಷೇತ್ರದಲ್ಲಿ ಕೋಲಾರ್‍ದ ಸಿ.ಆರ್. ನಟರಾಜ್, ಚಲನಚಿತ್ರರಂಗದಿಂದ ವಿಜಯಪುರದ ದೇವು ಕೆ., ಅಂಬಿಗ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ದಸಾಪ ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಾಗುವುದು. ಸಾಧಕ ಶ್ರೀ ಪ್ರಶಸ್ತಿಯನ್ನು ಗದಗದ ಗಣಪತಿ ಚಲವಾದಿ, ರಾಯಚೂರಿನ ತಾಯರಾಜ್ ಮರ್ಚಟಹಾಳ್, ಸಿಂಧನೂರಿನ ಹುಸೇನಪ್ಪ ಅಮರಾಪೂರ್ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಸುದ್ದಿ ಗೋಷ್ಠಿಯಲ್ಲಿ ದಸಾಪ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಡಾ. ವೈಎಂ. ಭಜಂತ್ರಿ, ಡಾ. ಎಚ್.ಬಿ. ಕೋಲಕರ್, ಡಾ. ಸುಜಾತಾ ಚಲವಾದಿ, ಬಸವರಾಜ್ ಜಾಲವಾದಿ, ಡಾ. ಗಾಂಧೀಜಿ ಮೊಳಕೇರಿ, ಡಾ. ಸುನೀಲ್ ಜಾಬಾದಿ, ಡಾ. ಪೀರಪ್ಪ ಸಜ್ಜನ್, ಹಿರಿಯ ಪತ್ರಕರ್ತ ಅನಿಲ್ ಹೊಸಮನಿ, ಹೋರಾಟಗಾರ ಶ್ರೀನಾಥ್ ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು.


ಡಾ.ಪೋತೆ ಅವರಿಗೆ ಅಧಿಕೃತ ಆಹ್ವಾನ: 10ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿದ್ವಾಂಸ ಡಾ.‌ಎಚ್ ಟಿ ಪೋತೆ ಅವರಿಗೆ ಡಾ.‌ಅರ್ಜುನ‌ಗೊಳಸಂಗಿ ಅವರ ನೇತೃತ್ವದಲ್ಲಿ ದಸಾಪ ಪದಾಧಿಕಾರಿಗಳು ಅಧಿಕೃತವಾಗಿ ಆಹ್ವಾನಿಸಿ ಸತ್ಕರಿಸಿ ಗೌರವಿಸಿದರು.
ಸ್ಥಳೀಯ ಪೂಜಾ ನಗರದಲ್ಲಿರುವ ನಿವಾಸದಲ್ಲಿ ಡಾ. ಪೋತೆ ದಂಪತಿಗಳನ್ನು ಸನ್ಮಾನಿಸಲಾಯಿತು.
*****

The post ವಿಜಯಪುರದಲ್ಲಿ ಜು. 29 ಮತ್ತು 30ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ವಿದ್ವಾಂಸ ಡಾ. ಎಚ್.ಟಿ. ಪೋತೆ ಆಯ್ಕೆ -ದಸಾಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ appeared first on Karnataka Kahale.

]]>
ಮಧುರಾಣಿ, ಗಂಗಾಧರಯ್ಯ, ಆಶಾ ರಘು, ಸಬಿತಾ ಬನ್ನಾಡಿ, ಡಾ. ಅಪ್ಪಗೆರೆ, ಡಾ. ಎಂ.ಬಿ.ಕಟ್ಟಿ ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’ https://www.karnatakakahale.com/news/10256 Wed, 16 Nov 2022 12:10:27 +0000 https://www.karnatakakahale.com/?p=10256 ಸೇಡಂ, ನ.16: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ ಗೆ ಮಧುರಾಣಿ ಎಚ್.ಎಸ್., ಎಸ್.ಗಂಗಾಧರಯ್ಯ, ಆಶಾ ರಘು, ಸಬಿತಾ ಬನ್ನಾಡಿ, ಡಾ.ಅಪ್ಪಗೆರೆ ಸೋಮಶೇಖರ ಮತ್ತು ಡಾ.ಎಂ.ಬಿ.ಕಟ್ಟಿ ಅವರ ಕೃತಿಗಳು…

The post ಮಧುರಾಣಿ, ಗಂಗಾಧರಯ್ಯ, ಆಶಾ ರಘು, ಸಬಿತಾ ಬನ್ನಾಡಿ, ಡಾ. ಅಪ್ಪಗೆರೆ, ಡಾ. ಎಂ.ಬಿ.ಕಟ್ಟಿ ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’ appeared first on Karnataka Kahale.

]]>

ಸೇಡಂ, ನ.16: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ ಗೆ ಮಧುರಾಣಿ ಎಚ್.ಎಸ್., ಎಸ್.ಗಂಗಾಧರಯ್ಯ, ಆಶಾ ರಘು, ಸಬಿತಾ ಬನ್ನಾಡಿ, ಡಾ.ಅಪ್ಪಗೆರೆ ಸೋಮಶೇಖರ ಮತ್ತು ಡಾ.ಎಂ.ಬಿ.ಕಟ್ಟಿ ಅವರ ಕೃತಿಗಳು ಆಯ್ಕೆಯಾಗಿವೆ ಎಂದು ‘ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಮಧುರಾಣಿ ಎಚ್.ಎಸ್.ಬೆಂಗಳೂರು ಅವರ ‘ನೀಲಿ ಚುಕ್ಕಿಯ ನೆರಳು’ (ಕವನ ಸಂಕಲನ), ಎಸ್.ಗಂಗಾಧರಯ್ಯ ತುಮಕೂರು ಅವರ ‘ಮಣ್ಣಿನ ಮುಚ್ಚಳ’ (ಕಥಾ ಸಂಕಲನ), ಆಶಾ ರಘು ಅವರ ‘ಮಾಯೆ’ (ಕಾದಂಬರಿ), ಸಬೀತಾ ಬನ್ನಾಡಿ ಅವರ ‘ಇದಿರು ನೋಟ’ (ಅಂಕಣ ಬರಹ ಸಂಕಲನ), ಡಾ.ಅಪ್ಪಗೆರೆ ಸೋಮಶೇಖರ ಅವರ ‘ಬೆವರ ಬವಣೆ’ ಮತ್ತು ಡಾ.ಎಂ.ಬಿ.ಕಟ್ಟಿ ಅವರ ‘ಆರೂಢ ಪಂಥ’ (ಸಂಕೀರ್ಣ) ಕೃತಿಗಳನ್ನು ೨೨ ನೇ ವರ್ಷದ ‘ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ ೫೦೦೦ ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ಸಂಕೀರ್ಣ ವಿಭಾಗದಲ್ಲಿ ಇಬ್ಬರು ಲೇಖಕರು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಇದೇ ನ.೨೬ ರಂದು ಸಂಜೆ ೫.೩೦ಕ್ಕೆ ಸೇಡಮಿನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ‘ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಮ್ಮ ಪ್ರಶಸ್ತಿಗೆ ೨೨ ರ ವರ್ಷದ ಸಂಭ್ರಮ :
ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ‘ಅಮ್ಮ ಪ್ರಶಸ್ತಿ’ ಗೆ ಈಗ ೨೨ ನೇ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು ‘ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ‘ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.

The post ಮಧುರಾಣಿ, ಗಂಗಾಧರಯ್ಯ, ಆಶಾ ರಘು, ಸಬಿತಾ ಬನ್ನಾಡಿ, ಡಾ. ಅಪ್ಪಗೆರೆ, ಡಾ. ಎಂ.ಬಿ.ಕಟ್ಟಿ ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’ appeared first on Karnataka Kahale.

]]>
ಕಲಬುರಗಿ ಶರಣಬಸವ ವಿವಿ ಘೋಷಣೆ: ಪದ್ಮಶ್ರೀ ಮಂಜಮ್ಮ‌ಜೋಗತಿ ಅವರಿಗೆ ಗೌರವ ಡಾಕ್ಟರೇಟ್ https://www.karnatakakahale.com/news/9116 Mon, 08 Aug 2022 16:17:58 +0000 https://www.karnatakakahale.com/?p=9116 ಕಲಬುರಗಿ, ಆ.8: ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯವು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಬಿ. ಮಂಜಮ್ಮ ಜೋಗತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ. ಬರುವ ಸೆ. ರಂದು ನಡೆಯುವ ವಿವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ…

The post ಕಲಬುರಗಿ ಶರಣಬಸವ ವಿವಿ ಘೋಷಣೆ: ಪದ್ಮಶ್ರೀ ಮಂಜಮ್ಮ‌ಜೋಗತಿ ಅವರಿಗೆ ಗೌರವ ಡಾಕ್ಟರೇಟ್ appeared first on Karnataka Kahale.

]]>
ಕಲಬುರಗಿ, ಆ.8: ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯವು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಬಿ. ಮಂಜಮ್ಮ ಜೋಗತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ.
ಬರುವ ಸೆ. ರಂದು ನಡೆಯುವ ವಿವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಶರಣಬಸವ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.


ಅಭಿನಂದನೆ: ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಬಿ. ಮಂಜಮ್ಮ ಜೋಗತಿ ಅವರನ್ನು ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಅಭಿನಂದಿಸಿದ್ದಾರೆ.
*****

The post ಕಲಬುರಗಿ ಶರಣಬಸವ ವಿವಿ ಘೋಷಣೆ: ಪದ್ಮಶ್ರೀ ಮಂಜಮ್ಮ‌ಜೋಗತಿ ಅವರಿಗೆ ಗೌರವ ಡಾಕ್ಟರೇಟ್ appeared first on Karnataka Kahale.

]]>