ಕೊಪ್ಪಳ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Sat, 10 Jan 2026 03:03:28 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಕೊಪ್ಪಳ – Karnataka Kahale https://www.karnatakakahale.com 32 32 ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ.ಕೆ. ರವಿ ಅಧಿಕಾರ ಸ್ವೀಕಾರ https://www.karnatakakahale.com/news/21925 Sat, 10 Jan 2026 03:03:28 +0000 https://www.karnatakakahale.com/?p=21925 ಕೋಲಾರ, ಜ.9: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ.ಕೆ. ರವಿ ಅವರು ಶುಕ್ರವಾರ ಸಂಜೆ ಅಧಿಕಾರ ವಹಿಸಿಕೊಂಡರು. ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನೂತನ ಕುಲಪತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ  ಪ್ರಭಾರ…

The post ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ.ಕೆ. ರವಿ ಅಧಿಕಾರ ಸ್ವೀಕಾರ appeared first on Karnataka Kahale.

]]>

ಕೋಲಾರ, ಜ.9: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ.ಕೆ. ರವಿ ಅವರು ಶುಕ್ರವಾರ ಸಂಜೆ ಅಧಿಕಾರ ವಹಿಸಿಕೊಂಡರು.

ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನೂತನ ಕುಲಪತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ  ಪ್ರಭಾರ ಕುಲಪತಿಯಾಗಿದ್ದ ಡಾ.ಕುಮುದಾ ಅವರಿಂದ ಪ್ರೊ.‌ಬಿ.ಕೆ ರವಿ ಅಧಿಕಾರ ಸ್ವೀಕರಿಸಿದರು.  ಅಧಿಕಾರಿಗಳು, ಸಿಬ್ಬಂದಿಗೆ ಸಂವಿಧಾನ ಪೀಠಿಕೆ ಭೋಧನೆ ಮಾಡುವ ಮೂಲಕ  ಅಧಿಕಾರ ವಹಿಸಿಕೊಳ್ಳುವ ಮೂಲಕ ನೂತನ ಕುಲಪತಿಗಳು ಗಮನಸೆಳೆದರು.

ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ, ಕುಲಸಚಿವರಾಗಿ (ಆಡಳಿತ) ಕಾರ್ಯನಿರ್ವಹಿಸಿ ಅನುಭವವಿದ್ದ
ಪ್ರೊ. ಬಿ.ಕೆ. ರವಿ ಅವರು ಮಾರ್ಚ್ 2023ರಲ್ಲಿ ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲಾದ ಏಳು ಹೊಸ ವಿಶ್ವವಿದ್ಯಾಲಯಗಳ ಪೈಕಿ ಕೊಪ್ಪಳ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ನೇಮಕಗೊಂಡು,  ಮಾರ್ಚ್ 21, 2023ರಂದು ಅಧಿಕಾರ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದರು. ಅಂದಿನಿಂದ ಕೊಪ್ಪಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಸಂದರ್ಭದಲ್ಲಿ ಕುಲಸಚಿವ ಶ್ರೀಧರ್, ವಿತ್ತಾಧಿಕಾರಿ ವಸಂತ ಕುಮಾರ್, ಮೌಲ್ಯಮಾಪನ ಕುಲಸಚಿವ ಲೋಕನಾಥ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ಶುಭ ಕೋರಿದರು.

—–

The post ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ.ಕೆ. ರವಿ ಅಧಿಕಾರ ಸ್ವೀಕಾರ appeared first on Karnataka Kahale.

]]>
ಬಳ್ಳಾರಿ ವಲಯ ನೂತನ ಐಜಿಪಿ ಯಾಗಿ ಡಾ.ಪಿ.ಎಸ್ ಹರ್ಷ ಅಧಿಕಾರ ಸ್ವೀಕಾರ https://www.karnatakakahale.com/news/21895 Wed, 07 Jan 2026 16:33:01 +0000 https://www.karnatakakahale.com/?p=21895 ಬಳ್ಳಾರಿ,ಜ. 7: ಬಳ್ಳಾರಿ ವಲಯ ನೂತನ ಪೊಲೀಸ್ ಮಹಾನಿರೀಕ್ಷಕರಾಗಿ(ಐಜಿಪಿ) ಡಾ.ಪಿ.ಎಸ್ ಹರ್ಷ ಅವರನ್ನು ನೇಮಿಸಿ ಸರ್ಕಾರ ಅದೇಶಿಸಿದ್ದು, ಅವರು ಬುಧವಾರ  ಅಧಿಕಾರ ವಹಿಸಿಕೊಂಡರು. ಬಳಿಕ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನುಬದ್ಧ, ನಿಷ್ಪಕ್ಷಪಾತ ಹಾಗೂ ಕಾನೂನು ಸುವ್ಯವಸ್ಥೆಯನ್ನು ಭದ್ರ-ಬುನಾದಿಯಾಗಿಸಲು ಸರ್ಕಾರ ಮತ್ತು ಹಿರಿಯ…

The post ಬಳ್ಳಾರಿ ವಲಯ ನೂತನ ಐಜಿಪಿ ಯಾಗಿ ಡಾ.ಪಿ.ಎಸ್ ಹರ್ಷ ಅಧಿಕಾರ ಸ್ವೀಕಾರ appeared first on Karnataka Kahale.

]]>
ಬಳ್ಳಾರಿ,ಜ. 7: ಬಳ್ಳಾರಿ ವಲಯ ನೂತನ ಪೊಲೀಸ್ ಮಹಾನಿರೀಕ್ಷಕರಾಗಿ(ಐಜಿಪಿ) ಡಾ.ಪಿ.ಎಸ್ ಹರ್ಷ ಅವರನ್ನು ನೇಮಿಸಿ ಸರ್ಕಾರ ಅದೇಶಿಸಿದ್ದು, ಅವರು ಬುಧವಾರ  ಅಧಿಕಾರ ವಹಿಸಿಕೊಂಡರು.

ಬಳಿಕ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನುಬದ್ಧ, ನಿಷ್ಪಕ್ಷಪಾತ ಹಾಗೂ ಕಾನೂನು ಸುವ್ಯವಸ್ಥೆಯನ್ನು ಭದ್ರ-ಬುನಾದಿಯಾಗಿಸಲು ಸರ್ಕಾರ ಮತ್ತು ಹಿರಿಯ ಅಧಿಕಾರಿಗಳ ನಿರ್ದೇಶನ ನೀಡಿದೆ ಎಂದರು.

ಬಳ್ಳಾರಿ ವಲಯದ ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಪ್ರಮುಖ ಮತ್ತು ಶಾಂತಿಪ್ರಿಯ ಜಿಲ್ಲೆಗಳಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸಲು ಹಾಗೂ ಜನಸ್ನೇಹಿ ಆಡಳಿತ ನೀಡಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಹೇಳಿದರು.
—–

The post ಬಳ್ಳಾರಿ ವಲಯ ನೂತನ ಐಜಿಪಿ ಯಾಗಿ ಡಾ.ಪಿ.ಎಸ್ ಹರ್ಷ ಅಧಿಕಾರ ಸ್ವೀಕಾರ appeared first on Karnataka Kahale.

]]>
ಗಿರೀಶ್ ಕುಮಾರ್.ಜಿ ಗೆ ಪಿಎಚ್ ಡಿ ಪದವಿ ಘೋಷಣೆ https://www.karnatakakahale.com/news/21246 Wed, 12 Nov 2025 13:50:54 +0000 https://www.karnatakakahale.com/?p=21246 ಬಳ್ಳಾರಿ, ನ. 12: ನಗರದ ಪತ್ರಕರ್ತ ಗಿರೀಶ್ ಕುಮಾರ್.ಜಿ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ಘೋಷಿಸಿದೆ. ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ  ಡಾ. ನಾಗೇಂದ್ರ ಅವರ ಮಾರ್ಗದರ್ಶನಲ್ಲಿ  ಸಲ್ಲಿಸಿದ ‘ಕನ್ನಡ ಮುದ್ರಣ ಮಾಧ್ಯಮಗಳಲ್ಲಿ ಸೈಬರ್…

The post ಗಿರೀಶ್ ಕುಮಾರ್.ಜಿ ಗೆ ಪಿಎಚ್ ಡಿ ಪದವಿ ಘೋಷಣೆ appeared first on Karnataka Kahale.

]]>
ಬಳ್ಳಾರಿ, ನ. 12: ನಗರದ ಪತ್ರಕರ್ತ ಗಿರೀಶ್ ಕುಮಾರ್.ಜಿ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ಘೋಷಿಸಿದೆ.

ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ  ಡಾ. ನಾಗೇಂದ್ರ ಅವರ ಮಾರ್ಗದರ್ಶನಲ್ಲಿ  ಸಲ್ಲಿಸಿದ ‘ಕನ್ನಡ ಮುದ್ರಣ ಮಾಧ್ಯಮಗಳಲ್ಲಿ ಸೈಬರ್ ಅಪರಾಧಗಳ ಪ್ರತಿನೀಧಿಕರಣ ( ಬಳ್ಳಾರಿ ಜಿಲ್ಲೆಯ ಅನುಲಕ್ಷಿಸಿ)’  ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ನೀಡಲಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯ ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಪರಿಚಯ:ಮೂಲತಃ ಕಂಪ್ಲಿ ತಾಲೂಕಿನ ನಂಬರ್ 1. ಇಟಿಗಿ ಗ್ರಾಮದ, ಪ್ರಸ್ತುತ ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯ ಕೋಟೇಶ್ ಲೇಔಟ್ ನಿವಾಸಿಗಳಾದ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೌಡ್ರು ದೊಡ್ಡ ಹನುಮಂತಪ್ಪ ಮತ್ತು ನಾಗರತ್ನ ದಂಪತಿಗಳ ಪುತ್ರ ಗಿರೀಶ್ ಕುಮಾರ್ ಹೊಸಪೇಟೆ ಟೈಮ್ಸ್‌  ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಳ್ಳಾರಿ, ಕೊಪ್ಪಳ‌ವಿವಿಯ ಸ್ನಾತಕೋತ್ತರ ಮತ್ತು ಸ್ನಾತಕ ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಪಿಎಚ್.ಡಿ ಸಾರಾಂಶ: ಕನ್ನಡ ಮುದ್ರಣ ಮಾಧ್ಯಮಗಳಲ್ಲಿ ಸೈಬರ್ ಅಪರಾಧಗಳ ಪ್ರತಿನೀಧಿಕರಣ (ಬಳ್ಳಾರಿ ಜಿಲ್ಲೆಯ ಅನುಲಕ್ಷಿಸಿ : ಬಳ್ಳಾರಿ ವಿಜಯನಗರ ಜಿಲ್ಲೆ) ಎಂಬ ವಿಷಯದ ಸಂಶೋಧನೆ ಕರ್ನಾಟಕ ರಾಜ್ಯದ ಕನ್ನಡದ ಮೊದಲ ಸಂಶೋಧನೆ ಮಹಾಪ್ರಬಂಧವಾಗಿದೆ.
ಈ ವಿಷಯದ ಕುರಿತು 2019 ರಿಂದ 2022 ಅವಧಿ ವರೆಗೆ ಅಧ್ಯಯನ ಮಾಡಿ, ಸೈಬರ್ ಅಪರಾಧಗಳ ಬಳ್ಳಾರಿ ಜಿಲ್ಲಾ ಪಕ್ಷೀನೋಟ, ಸೈಬರ್ ಅಪರಾಧಗಳ ಹುಟ್ಟು, ಬೆಳವಣಿಗೆ, 4 ವರ್ಷಗಳ ಸೈಬರ್ ಅಪರಾಧಗಳ ಅಂಕಿ, ಸಂಖ್ಯೆಗಳು, ಪೈ ಮತ್ತು ಸ್ತಂಭ ನಕ್ಷೆಗಳು ಒಳಗೊಂಡಿದೆ. ಮುಖ್ಯವಾಗಿ ವಿಜಯ ಕರ್ನಾಟಕ ಮತ್ತು ವಿಜಯವಾಣಿ ದಿನಪತ್ರಿಕೆ ಹಾಗು ಮೈಸೂರಿನ ಪ್ರತಿನಿಧಿ ದಿನಪತ್ರಿಕೆಗಳಲ್ಲಿ ಬರಹ, ಲೇಖನ, ಅಂಕಣಗಳು ವಿಶೇಷ ವಿಶ್ಲೇಷಣೆ, ಸೈಬರ್ ಅಪರಾಧಗಳ ಬಗ್ಗೆ ಕರ್ನಾಟಕ ರಾಜ್ಯದ ಪೋಲಿಸ್ ಇಲಾಖೆಯ ಐ.ಪಿ.ಎಸ್, ಸಿ.ಪಿ.ಐ, ಪಿ.ಎಸ್.ಐ ಅಧಿಕಾರಿಗಳು, ಹಿರಿಯ ಪತ್ರಕರ್ತರು, ಸೈಬರ್ ತಜ್ಞರು, ವಂಚನೆ ಒಳಗಾದವರ ಸಂರ್ದಶನ ಮತ್ತು ವಿಶ್ಲೇಷಣೆ ಮತ್ತು ಅವರ ಮಾನಸಿಕ  ಸ್ಥಿತಿಗತಿ ಬಗ್ಗೆ ಈ ಸಂಶೋಧನೆ ಒಳಗೊಂಡಿದೆ ಎಂದು ಗಿರೀಶ್ ಕುಮಾರ್ ವಿವರಿಸಿದ್ದಾರೆ.

The post ಗಿರೀಶ್ ಕುಮಾರ್.ಜಿ ಗೆ ಪಿಎಚ್ ಡಿ ಪದವಿ ಘೋಷಣೆ appeared first on Karnataka Kahale.

]]>
ಕೊಪ್ಪಳ ವಿವಿಯಲ್ಲಿ ಸೆ.30 ರಂದು ಜರುಗುವ ದಸರಾ ಕಾವ್ಯ ಸಂಭ್ರಮದಲ್ಲಿ ಕುಲಪತಿಗಳ ಸಂಗಮ https://www.karnatakakahale.com/news/20790 Fri, 26 Sep 2025 13:43:04 +0000 https://www.karnatakakahale.com/?p=20790 ಕೊಪ್ಪಳ, ಸೆ. 26: ಕೊಪ್ಪಳ ವಿಶ್ವವಿದ್ಯಾಲಯ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮ ವನ್ನು ಸೆ. 30 ರಂದು ಬೆಳಿಗ್ಗೆ 10:30 ಗಂಟೆಗೆ ತಳಕಲ್ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಕಟ್ಟಡದ ವಿವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಮಾರಂಭವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ…

The post ಕೊಪ್ಪಳ ವಿವಿಯಲ್ಲಿ ಸೆ.30 ರಂದು ಜರುಗುವ ದಸರಾ ಕಾವ್ಯ ಸಂಭ್ರಮದಲ್ಲಿ ಕುಲಪತಿಗಳ ಸಂಗಮ appeared first on Karnataka Kahale.

]]>
ಕೊಪ್ಪಳ, ಸೆ. 26: ಕೊಪ್ಪಳ ವಿಶ್ವವಿದ್ಯಾಲಯ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮ ವನ್ನು ಸೆ. 30 ರಂದು ಬೆಳಿಗ್ಗೆ 10:30 ಗಂಟೆಗೆ ತಳಕಲ್ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಕಟ್ಟಡದ ವಿವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸಮಾರಂಭವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಅವರು ಉದ್ಘಾಟಿಸುವರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಕಲ್ಯಾಣ ವಾಣಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡುವರು.
ಕುಲಪತಿಗಳ‌ ಸಂಗಮ: ಮುಖ್ಯ ಅತಿಥಿಗಳಾಗಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಮೇಶ ಬಿ., ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ, ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಓಂಕಾರ ಕಾಕಡೆ ಅವರು ಉಪಸ್ಥಿತರಿರುವರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ.ಹೆಚ್.ಎಲ್.ಪುಷ್ಪಾ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಸುಮಾರು 50 ಕ್ಕೂ ಹೆಚ್ಚು ಕವಿಗಳು ಕವನ ವಾಚಿಸುವರು ಎಂದು ಕೊಪ್ಪಳ ವಿಶ್ವವಿವಿ ಪ್ರಕಟಣೆ ತಿಳಿಸಿದೆ.

The post ಕೊಪ್ಪಳ ವಿವಿಯಲ್ಲಿ ಸೆ.30 ರಂದು ಜರುಗುವ ದಸರಾ ಕಾವ್ಯ ಸಂಭ್ರಮದಲ್ಲಿ ಕುಲಪತಿಗಳ ಸಂಗಮ appeared first on Karnataka Kahale.

]]>
ಗಂಗಾವತಿ ನವಜೀವನ ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ವತಿಯಿಂದ ಬೆಡ್ ಶೀಟು, ಸೀರೆ ವಿತರಣೆ https://www.karnatakakahale.com/news/20605 Sat, 06 Sep 2025 09:06:27 +0000 https://www.karnatakakahale.com/?p=20605 ಗಂಗಾವತಿ:  ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ವಸುಧಾ ಫೌಂಡೇಷನ್ ಹೈದರಾಬಾದ್ ಅವರ ಸಹಯೋಗದೊಂದಿಗೆ  ಇಲ್ಲನ ನವಜೀವನ ವೃದ್ದಾಶ್ರಮಕ್ಕೆ 40 ಬೆಡ್ ಶೀಟುಗಳು, ,80 ಸೀರೆ ಹಾಗೂ 50 ಬ್ರೇಡ್‌ ಬನ್ ಗಳನ್ನು  ಇತ್ತೀಚೆಗೆ ವಿತರಿಸಲಾಯಿತು.           …

The post ಗಂಗಾವತಿ ನವಜೀವನ ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ವತಿಯಿಂದ ಬೆಡ್ ಶೀಟು, ಸೀರೆ ವಿತರಣೆ appeared first on Karnataka Kahale.

]]>
ಗಂಗಾವತಿ:  ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ವಸುಧಾ ಫೌಂಡೇಷನ್ ಹೈದರಾಬಾದ್ ಅವರ ಸಹಯೋಗದೊಂದಿಗೆ  ಇಲ್ಲನ ನವಜೀವನ ವೃದ್ದಾಶ್ರಮಕ್ಕೆ
40 ಬೆಡ್ ಶೀಟುಗಳು, ,80 ಸೀರೆ ಹಾಗೂ 50 ಬ್ರೇಡ್‌ ಬನ್ ಗಳನ್ನು  ಇತ್ತೀಚೆಗೆ ವಿತರಿಸಲಾಯಿತು.                          ಈ ಪುಣ್ಯ ಕಾರ್ಯದಲ್ಲಿ
ಲಯನ್ಸ್ ಕ್ಲಬ್ ಹಿರಿಯ ಸದಸ್ಯಗಳಾದ ಡಾ.ಚಂದ್ರಪ್ಪ , ಡಾ.ಸೋಮರಾಜು, ಡಾ.ಮಾದವಶೆಟ್ಟಿ,  ವಿರೂಪಾಕ್ಷಪ್ಪ ಸಿಂಗನಾಳ,  ಟಿ.ರಾಮಕೃಷ್ಣ ,  ಗುರು ಪ್ರಸಾದ್ ಹಾಗು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ಶಿವಕುಮಾರ್ ಮಾಲಿಪಾಟೀಲ್ ಭಾಗವಹಿಸಿದ್ದರು.
ನವಚೇತನ ವೃದ್ದಾಶ್ರಮದ ವ್ಯವಸ್ಥಾಪಕರಾದ ಆನಂದರಾವ್ ಉಪಸ್ಥಿತರಿದ್ದು , ಲಯನ್ಸ್ ಕ್ಲಬ್ ಹಾಗೂ ವಸುಧಾ ಫೌಂಡೇಷನ್ ಅವರಿಗೆ ವೃದ್ದಾಶ್ರಮ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
—–

The post ಗಂಗಾವತಿ ನವಜೀವನ ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ವತಿಯಿಂದ ಬೆಡ್ ಶೀಟು, ಸೀರೆ ವಿತರಣೆ appeared first on Karnataka Kahale.

]]>
ಯುವ ಶಕ್ತಿಯನ್ನು ಸಮಾಜಮುಖಿ ದಾರಿಯಲ್ಲಿ ಬಳಸಿದಾಗಲೇ ನಶಾ ಮುಕ್ತ‌ ಭಾರತ ನಿರ್ಮಾಣ ಸಾಧ್ಯ – ಪ್ರೊ. ಬಿ.ಕೆ ರವಿ https://www.karnatakakahale.com/news/20388 Tue, 12 Aug 2025 10:08:38 +0000 https://www.karnatakakahale.com/?p=20388 ಕೊಪ್ಪಳ,ಆ.12 : ಯುವಕರು ದೇಶದ ಭವಿಷ್ಯದ ಶಕ್ತಿ. ಅವರ ಶಕ್ತಿಯನ್ನು ಸಮಾಜಮುಖಿ ದಾರಿಯಲ್ಲಿ ಬಳಸಿದಾಗಲೇ ನಶಾ ಮುಕ್ತ, ಅಭಿವೃದ್ಧಿಶೀಲ ಭಾರತದ ಕನಸು ನನಸಾಗುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು. ಯಲಬುರ್ಗಾ ಪಟ್ಟಣದ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ…

The post ಯುವ ಶಕ್ತಿಯನ್ನು ಸಮಾಜಮುಖಿ ದಾರಿಯಲ್ಲಿ ಬಳಸಿದಾಗಲೇ ನಶಾ ಮುಕ್ತ‌ ಭಾರತ ನಿರ್ಮಾಣ ಸಾಧ್ಯ – ಪ್ರೊ. ಬಿ.ಕೆ ರವಿ appeared first on Karnataka Kahale.

]]>
ಕೊಪ್ಪಳ,ಆ.12 : ಯುವಕರು ದೇಶದ ಭವಿಷ್ಯದ ಶಕ್ತಿ. ಅವರ ಶಕ್ತಿಯನ್ನು ಸಮಾಜಮುಖಿ ದಾರಿಯಲ್ಲಿ ಬಳಸಿದಾಗಲೇ ನಶಾ ಮುಕ್ತ, ಅಭಿವೃದ್ಧಿಶೀಲ ಭಾರತದ ಕನಸು ನನಸಾಗುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.
ಯಲಬುರ್ಗಾ ಪಟ್ಟಣದ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ನಶಾ ಮುಕ್ತ ಭಾರತ ಆಂದೋಲನ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಇಂದಿನ ಯುವ ಪೀಳಿಗೆಯಲ್ಲಿರುವ ಚುರುಕು, ಬುದ್ಧಿಶಕ್ತಿ, ಸೃಜನಶೀಲತೆ ಇವೆಲ್ಲವನ್ನು ರಾಷ್ಟ್ರ ನಿರ್ಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ. ಆದರೆ ಮದ್ಯ, ಮಾದಕ ಪದಾರ್ಥಗಳು ಮತ್ತು ತಂಬಾಕು ಉತ್ಪನ್ನಗಳಂತಹ ವ್ಯಸನಗಳು ಅವರ ಭವಿಷ್ಯವನ್ನು ಹಾಳು ಮಾಡಬಲ್ಲದು. ಅದನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ನಶಾ ಮುಕ್ತ ಭಾರತದ ಕನಸು ಕೇವಲ ಸರ್ಕಾರದ ಯೋಜನೆಯಲ್ಲ, ಅದು ಜನಜಾಗೃತಿ ಚಳವಳಿಯಾಗಿದೆ. ವಿದ್ಯಾರ್ಥಿಗಳು ಈ ಸಂದೇಶವನ್ನು ತಮ್ಮ ಮನೆ, ಬೀದಿ, ಹಾಗೂ ಗ್ರಾಮಗಳಿಗೆ ಕೊಂಡೊಯ್ಯಬೇಕು. ಆರೋಗ್ಯಕರ ಜೀವನಶೈಲಿ, ಉತ್ತಮ ಶಿಕ್ಷಣ ಮತ್ತು ಸಾಮಾಜಿಕ ಹೊಣೆಗಾರಿಕೆ ಇವೇ ನಿಜವಾದ ಯುವಶಕ್ತಿಯ ಗುರುತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯಲಬುರ್ಗಾ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಛತ್ರದ, ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

The post ಯುವ ಶಕ್ತಿಯನ್ನು ಸಮಾಜಮುಖಿ ದಾರಿಯಲ್ಲಿ ಬಳಸಿದಾಗಲೇ ನಶಾ ಮುಕ್ತ‌ ಭಾರತ ನಿರ್ಮಾಣ ಸಾಧ್ಯ – ಪ್ರೊ. ಬಿ.ಕೆ ರವಿ appeared first on Karnataka Kahale.

]]>
ಕರ್ನಾಟಕದ ಏಕೀಕರಣ, ಕನ್ನಡ‌ನಾಡು ನುಡಿಯ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಅನನ್ಯ -ಕೊಪ್ಪಳ‌ವಿವಿ ಕುಲಪತಿ ಪ್ರೊ. ಬಿ.ಕೆ. ರವಿ https://www.karnatakakahale.com/news/20055 Tue, 08 Jul 2025 23:17:36 +0000 https://www.karnatakakahale.com/?p=20055 ಕೊಪ್ಪಳ: ಕರ್ನಾಟಕದ ಏಕೀಕರಣದಲ್ಲಿ ಹಾಗೂ ಕನ್ನಡ ನಾಡು, ಭಾಷೆ, ಸಾಹಿತ್ಯ ಕ್ಷೇತ್ರ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯವಾಗಿದೆ ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ‌. ರವಿ ಅವರು ಹೇಳಿದರು. ಕೊಪ್ಪಳ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ…

The post ಕರ್ನಾಟಕದ ಏಕೀಕರಣ, ಕನ್ನಡ‌ನಾಡು ನುಡಿಯ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಅನನ್ಯ -ಕೊಪ್ಪಳ‌ವಿವಿ ಕುಲಪತಿ ಪ್ರೊ. ಬಿ.ಕೆ. ರವಿ appeared first on Karnataka Kahale.

]]>

ಕೊಪ್ಪಳ: ಕರ್ನಾಟಕದ ಏಕೀಕರಣದಲ್ಲಿ ಹಾಗೂ ಕನ್ನಡ ನಾಡು, ಭಾಷೆ, ಸಾಹಿತ್ಯ ಕ್ಷೇತ್ರ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯವಾಗಿದೆ ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ‌. ರವಿ ಅವರು ಹೇಳಿದರು.

ಕೊಪ್ಪಳ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.                                  ಸಮಾಜದಲ್ಲಿ ಪತ್ರಕರ್ತರಿಗೆ ವಿಶೇಷ ಗೌರವವಿದೆ ಜತೆಗೆ ಸಮಾಜವನ್ನು ಅಭಿವೃದ್ಧಿ ಮಾಡುವ ಹೊಣೆಗಾರಿಕೆಯೂ ಇದೆ ಎಂದು ತಿಳಿಸಿದರು.

ಬರವಣಿಗೆ ಭಾಷೆ ನಾಶಪಡಿಸುವ, ಓದುಗರಲ್ಲಿ ಗೊಂದಲ ಮೂಡಿಸುವಂತಿರ ಬಾರದು.  ಜನರ ಭಾವನೆಗಳಿಗೆ ಧಕ್ಕೆಯಾಗದಂತಹ ವರದಿ ಮಾಡುವುದು ಪತ್ರಿಕೋದ್ಯಮದ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.                  ಯುವ ಪತ್ರಕರ್ತರು ಉತ್ತಮ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.        ಆಧುನಿಕ ತಂತ್ರಜ್ಞಾನದಿಂದ ಮಾಧ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ ಎಂದು ಹೇಳಿದರು.

ಬೆಂಗಳೂರು ವಿಶ್ವ ವಿದ್ಯಾಲಯದ ಕಾನೂನು ನಿಕಾಯದ ಡೀನ್ ಪ್ರೊ.ವಿ.ಸುದೇಶ ಅವರು ಮಾತನಾಡಿ, ಪತ್ರಿಕೋದ್ಯಮ ಸಮಾಜದಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಾದರೆ ಮುಕ್ತ ಪತ್ರಿಕಾ ಸ್ವಾತಂತ್ರ್ಯ ನೀಡುವುದು ಬಹಳ ಮುಖ್ಯ ಎಂದು ಅಭಿಪ್ರಾಯ ಪಟ್ಟರು.  ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಪತ್ರಿಕೋದ್ಯಮವು ಮಾಡುತ್ತಿದೆ. ಪ್ರತಿದಿನ ಸಂಶೋಧನಾತ್ಮಕವಾಗಿ ವಿಷಯಗಳನ್ನು ಅವಲೋಕಿಸಿ ಸಮಾಜದ ಮುಂದೆ ತೆರೆದಿಡಲು ಸಹಾಯಕವಾಗುತ್ತದೆ ಎಂದರು.                                                ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಸಾಮಾಜಿಕ ಅನ್ಯಾಯವನ್ನು ತೆರೆದಿಡುವವರೇ ಪತ್ರಕರ್ತರು. ಪತ್ರಕರ್ತರಿಂದ ಮಾನವ ಹಕ್ಕುಗಳ ರಕ್ಷಣೆ ಮಾಡುವ ಬರವಣಿಗೆಗಳು ಹಾಗೂ ಲೇಖನಗಳು ಹೆಚ್ಚು ಬರಲಿ ಎಂದು ಸಲಹೆ‌ ನೀಡಿದ ಅವರು,   ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಗಳನ್ನು ಹಾಗೂ ಸಿದ್ಧಾಂತಗಳನ್ನು  ಸಮಾಜಕ್ಕೆ ತಿಳಿಸಬೇಕು. ಪತ್ರಿಕೋದ್ಯಮದ ಹಾಗೂ ವಿವಿಧ ವಿಷಯಗಳ ವಿದ್ಯಾರ್ಥಿಗಳು ನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ ಇದರಿಂದ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಮತ್ತಷ್ಟು ಸಹಾಯಕವಾಗುತ್ತದೆ ಎಂದು ವಿವರಿಸಿದರು.

ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಕೆ.ನಿಂಗಜ್ಜ ಮಾತನಾಡಿ, ಪತ್ರಿಕೋದ್ಯಮ ಮತ್ತು ಪ್ರಜಾಪ್ರಭುತ್ವ ಒಂದು ನಾಣ್ಯದ ಎರಡು ಮುಖಗಳು ಎಂದು ಹೇಳಿದರು.                                          ಭಾರತದ ಸಂವಿಧಾನದಲ್ಲಿರುವ ಸಾರ್ವಭೌಮ ಸಮಾಜವಾದ ಸ್ವಾತಂತ್ರ್ಯ ಭ್ರಾತೃತ್ವದ ಭಾವನೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪತ್ರಿಕೋದ್ಯಮ ಕಾರ್ಯ ನಿರ್ವಹಿಸುತ್ತದೆ. ಅದರಲ್ಲೂ ಕನ್ನಡ ಪತ್ರಿಕೋದ್ಯಮ ದೇಶದ ಪತ್ರಿಕೋದ್ಯಮದಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿದೆ ಎಂದು ಶ್ಲಾಘಿಸಿದರು.                                          ಕನ್ನಡ ಪತ್ರಿಕೋದ್ಯಮ ಜನಸ್ನೇಹಿಯಾಗಿ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದೆ ಎಂದರೆ, ಅದಕ್ಕೆ ಕಾರಣ ಪತ್ರಕರ್ತರು. ಪತ್ರಕರ್ತರಿಗೆ ಅನೇಕ ಒತ್ತಡಗಳಿದ್ದರೂ ಸಮಾಜಕ್ಕೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.                                                      ಕೊಪ್ಪಳ ವಿಶ್ವವಿದ್ಯಾಲಯ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಹಂತ ಹಂತವಾಗಿ ಬೆಳೆಯುತ್ತಿದೆ. ವಿಶ್ವವಿದ್ಯಾಲಯಕ್ಕೆ ಒಂದು ಸ್ವಂತ ಕಟ್ಟಡವನ್ನು ಸರ್ಕಾರದ ಕಡೆಯಿಂದ ಮಂಜೂರು ಮಾಡಿಸಲು ಈ ಭಾಗದ ಶಾಸಕರು ಮತ್ತು ಸಚಿವರು ಧ್ವನಿ ಎತ್ತಬೇಕು ಎಂದರು.

ಇದೆ ವೇಳೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಕಲ್ಯಾಣ ವಾಣಿ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಗಣ್ಯರು ಬಿಡುಗಡೆ ಗೊಳಿಸಿದರು.

ಕೊಪ್ಪಳ ವಿಶ್ವ ವಿದ್ಯಾಲಯದ ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ, ಸಿಂಡಿಕೇಟ್ ಹಾಗೂ ಆಕಾಡೆಮಿಕ್ ಕೌನ್ಸಿಲ್ ಸದಸ್ಯರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಾಪಕರಾದ ಸಂತೋಷಕುಮಾರ ಹೆಚ್ ಕೆ. ರಂಗನಾಥ್, ಶ್ರೀಕಾಂತ್, ವಿವಿಧ ವಿಭಾಗಗಳ ಅಧ್ಯಾಪಕರು, ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

The post ಕರ್ನಾಟಕದ ಏಕೀಕರಣ, ಕನ್ನಡ‌ನಾಡು ನುಡಿಯ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಅನನ್ಯ -ಕೊಪ್ಪಳ‌ವಿವಿ ಕುಲಪತಿ ಪ್ರೊ. ಬಿ.ಕೆ. ರವಿ appeared first on Karnataka Kahale.

]]>
ಮೊರಕ್ಕೊದಲ್ಲಿ ಕೊಪ್ಪಳ ವಿವಿ ಕುಲಪತಿಗಳು: ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅನಿವಾರ್ಯ -ಪ್ರೊ.ಬಿ.ಕೆ.ರವಿ https://www.karnatakakahale.com/news/19732 Thu, 12 Jun 2025 10:35:16 +0000 https://www.karnatakakahale.com/?p=19732 ಕಾಸಾಬ್ಲಾಂಕಾ (ಮೊರಕ್ಕೋ) ಜೂನ್.12: ಸುಸ್ಥಿರ ಅಭಿವೃದ್ಧಿ ಹಾಗೂ ಜಾಗತಿಕ ಸಮಸ್ಯೆಗಳ ನಿವಾರಣೆಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಬದವಾವಣೆಗಳನ್ನು ತರುವ ಅಗತ್ಯವಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಅಭಿಪ್ರಾಯಪಟ್ಟರು. ಕಾಸಾಬ್ಲಾಂಕಾದ ಹಸನ್-II ವಿಶ್ವವಿದ್ಯಾಲಯ ಆಯೋಜಿಸಿದ್ದ “ಸುಸ್ಥಿರ ಭವಿಷ್ಯಕ್ಕಾಗಿ ಶೈಕ್ಷಣಿಕ ಕ್ಷೇತ್ರದ…

The post ಮೊರಕ್ಕೊದಲ್ಲಿ ಕೊಪ್ಪಳ ವಿವಿ ಕುಲಪತಿಗಳು: ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅನಿವಾರ್ಯ -ಪ್ರೊ.ಬಿ.ಕೆ.ರವಿ appeared first on Karnataka Kahale.

]]>

ಕಾಸಾಬ್ಲಾಂಕಾ (ಮೊರಕ್ಕೋ) ಜೂನ್.12: ಸುಸ್ಥಿರ ಅಭಿವೃದ್ಧಿ ಹಾಗೂ ಜಾಗತಿಕ ಸಮಸ್ಯೆಗಳ ನಿವಾರಣೆಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಬದವಾವಣೆಗಳನ್ನು ತರುವ ಅಗತ್ಯವಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಅಭಿಪ್ರಾಯಪಟ್ಟರು.
ಕಾಸಾಬ್ಲಾಂಕಾದ ಹಸನ್-II ವಿಶ್ವವಿದ್ಯಾಲಯ ಆಯೋಜಿಸಿದ್ದ “ಸುಸ್ಥಿರ ಭವಿಷ್ಯಕ್ಕಾಗಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ”ಕುರಿತ 16ನೆಯ ಅಂತರರಾಷ್ಟ್ರಿಯ ಶೈಕ್ಷಣಿಕ ಸಮ್ಮೇಳನದಲ್ಲಿ  ಅವರು ಪ್ರಧಾನ ಭಾಷಣ ಮಾಡಿದರು.  ಜಾಗತಿಕವಾಗಿ 251 ಮಿಲಿಯನ್ ಮಕ್ಕಳು ಶಾಲೆಗಳಿಂದ ಹೊರಗುಳಿಯುತ್ತಿರುವುದು, 400 ಮಿಲಿಯನ್ ಜಾಗತಿಕ ತಾಪಮಾನದಿಂದ,ಪರಿಸರ ಬದಲಾವಣೆಯಿಂದ ತೊಂದರೆಗೆ ತುತ್ತಾಗುತ್ತಿರುವುದು, 57.2%ರಷ್ಟು ಮಕ್ಕಳು ಸೌಲಭ್ಯಗಳು ಹಾಗೂ ತಂತ್ರಜ್ಞಾನದ ಲಭ್ಯತೆಯಿಂದ ವಂಚಿತರಾಗುತ್ತಿರುವುದು ಹಾಗೂ ತೃತೀಯ ಜಗತ್ತಿನ ರಾಷ್ಟçಗಳು ಹಣಕಾಸಿನ ಅಲಭ್ಯತೆಯಿಂದ ಬಳಲುತ್ತಿರುವುದು ಆತಂಕಕಾರಿ ಎಂದರು.
ವಿದ್ಯಾರ್ಥಿಗಳನ್ನು ಕೇವಲ ತರಗತಿಗಳಿಗೆ ಸೀಮಿತಗೊಳಿಸದೆ ಜೀವನದ ನಿಜ ಆಯಾಮವನ್ನು, ಮಾನವೀಯ ಮೌಲ್ಯಗಳನ್ನು ಅವರಲ್ಲಿ ಕರಗತಗೊಳಿಸುವ ಅಗತ್ಯವಿದೆ ಹಾಗೂ ತಂತ್ರಜ್ಞಾನದ ಬಳಕೆ ಬಗ್ಗೆ ಕೂಡಾ ಅವರಲ್ಲಿ ಅರಿವು ಮೂಡಿಸಬೇಕು, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟು,ಸಂಶೋಧನೆಗಳ ಫಲಿತಗಳನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಪ್ರೊ.ರವಿ ಹೇಳಿದರು.
ನಂತರ ಉನ್ನತ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಕುರಿತ ವಿಶೇಷ ಉಪನ್ಯಾಸ ನೀಡಿದರು. ಈ ಅಂತರರಾಷ್ಟ್ರಿಯ ಸಮ್ಮೇಳನದಲ್ಲಿ 254ಕ್ಕೂ ಹೆಚ್ಚು ಸಂಶೋಧಕರು ತಮ್ಮ ಪ್ರಬಂಧಗಳನ್ನು ಮಂಡಿಸಿದರು.
ಹಸನ್-II ವಿಶ್ವವಿದ್ಯಾಲಯದ ಕುಲಪತಿ ಡಾ.ಹೌಸಿನೇ ಅಸೆಡಾಗ್,ಡೀನ್ ಡಾ.ಅಬ್ದೆಲ್ಲಾ ಬ್ರಾಕ್ಟಾ, ಸಮ್ಮೇಳನದ ಸಂಯೋಜಕಿ ಡಾ.ಇಮಾನೇ ಎಲ್ ಇಮಾಡಿ, ಮುಂತಾದವರು ಉಪಸ್ಥಿತರಿದ್ದರು.

The post ಮೊರಕ್ಕೊದಲ್ಲಿ ಕೊಪ್ಪಳ ವಿವಿ ಕುಲಪತಿಗಳು: ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅನಿವಾರ್ಯ -ಪ್ರೊ.ಬಿ.ಕೆ.ರವಿ appeared first on Karnataka Kahale.

]]>
ಹಿಟ್ನಾಳ್ ಪರೀಕ್ಷಾ ಕೇಂದ್ರಕ್ಕೆ ಕುಲಪತಿ ಪ್ರೊ. ಬಿ.ಕೆ ರವಿ ದಿಢೀರ್‌ ಭೇಟಿ https://www.karnatakakahale.com/news/19666 Thu, 05 Jun 2025 06:41:16 +0000 https://www.karnatakakahale.com/?p=19666 ಕೊಪ್ಪಳ : ಹಿಟ್ನಾಳನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ನಡೆಯುತ್ತಿರುವ ಸ್ನಾತಕ ಪದವಿ ಪರೀಕ್ಷಾ ಕೇಂದ್ರಕ್ಕೆ ಕೊಪ್ಪಳ ವಿವಿಯ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಗುರುವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ನಿರ್ಭಯವಾಗಿ, ಯಾವುದೇ ಗೊಂದಲಗಳಿಲ್ಲದೆ ಪರೀಕ್ಷೆ ಬರೆಯುತ್ತಿರುವುದನ್ನು…

The post ಹಿಟ್ನಾಳ್ ಪರೀಕ್ಷಾ ಕೇಂದ್ರಕ್ಕೆ ಕುಲಪತಿ ಪ್ರೊ. ಬಿ.ಕೆ ರವಿ ದಿಢೀರ್‌ ಭೇಟಿ appeared first on Karnataka Kahale.

]]>

ಕೊಪ್ಪಳ : ಹಿಟ್ನಾಳನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ನಡೆಯುತ್ತಿರುವ ಸ್ನಾತಕ ಪದವಿ ಪರೀಕ್ಷಾ ಕೇಂದ್ರಕ್ಕೆ ಕೊಪ್ಪಳ ವಿವಿಯ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಗುರುವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ನಿರ್ಭಯವಾಗಿ, ಯಾವುದೇ ಗೊಂದಲಗಳಿಲ್ಲದೆ ಪರೀಕ್ಷೆ ಬರೆಯುತ್ತಿರುವುದನ್ನು ವಿವಿಧ ಕೊಠಡಿಗಳಿಗೆ ತೆರಳಿ ಖಚಿತ ಪಡಿಸಿಕೊಂಡರು.
ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಇದ್ದರು.

The post ಹಿಟ್ನಾಳ್ ಪರೀಕ್ಷಾ ಕೇಂದ್ರಕ್ಕೆ ಕುಲಪತಿ ಪ್ರೊ. ಬಿ.ಕೆ ರವಿ ದಿಢೀರ್‌ ಭೇಟಿ appeared first on Karnataka Kahale.

]]>
ವಿಎಸ್ ಕೆವಿವಿ: ವಿ. ಜಡೆಪ್ಪಗೆ ಪಿಎಚ್‌ಡಿ ಪದವಿ ಘೋಷಣೆ https://www.karnatakakahale.com/news/19595 Sat, 31 May 2025 15:34:46 +0000 https://www.karnatakakahale.com/?p=19595 ಕೊಪ್ಪಳ: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ವಿ. ಜಡೆಪ್ಪ ಅವರಿಗೆ ವಿವಿ ಪಿಎಚ್‌ಡಿ ಪದವಿ ಘೋಷಿಸಿದೆ. ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎನ್. ಶಾಂತನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ “ಚಾಲೆಂಜ್ಸ್ ಇನ್ ರೈಟಿಂಗ್…

The post ವಿಎಸ್ ಕೆವಿವಿ: ವಿ. ಜಡೆಪ್ಪಗೆ ಪಿಎಚ್‌ಡಿ ಪದವಿ ಘೋಷಣೆ appeared first on Karnataka Kahale.

]]>

ಕೊಪ್ಪಳ: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ವಿ. ಜಡೆಪ್ಪ ಅವರಿಗೆ ವಿವಿ ಪಿಎಚ್‌ಡಿ ಪದವಿ ಘೋಷಿಸಿದೆ.
ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎನ್. ಶಾಂತನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ “ಚಾಲೆಂಜ್ಸ್ ಇನ್ ರೈಟಿಂಗ್ ಅಟ್ ಪೋಸ್ಟ್ ಗ್ರಾಜುಷನ್ ಲೆವೆಲ್ ಇನ್ ಬಳ್ಳಾರಿ ಅಂಡ್ ಕೊಪ್ಪಳ ಡಿಸ್ಟ್ರಿಕ್ಟ್ಸ್: ಎ ಕೇಸ್ ಸ್ಟಡಿ”ಎಂಬ ಮಹಾಪ್ರಬಂಧಕ್ಕೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಘೋಷಿಸಲಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.

The post ವಿಎಸ್ ಕೆವಿವಿ: ವಿ. ಜಡೆಪ್ಪಗೆ ಪಿಎಚ್‌ಡಿ ಪದವಿ ಘೋಷಣೆ appeared first on Karnataka Kahale.

]]>