Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ರಾಯಚೂರು – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Sat, 17 Jan 2026 17:04:25 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ರಾಯಚೂರು – Karnataka Kahale https://www.karnatakakahale.com 32 32 ರಾಯಚೂರು ಪಕ್ಷಿಗಳ ಫೋಟೋ ಪ್ರದರ್ಶನ: ಪಕ್ಷಿಗಳು ಉತ್ತಮ ಪರಿಸರಕ್ಕೆ ಪೂರಕ -ರಾಜೇಶ್ ನಾಯಕ್ https://www.karnatakakahale.com/news/22045 Sat, 17 Jan 2026 17:04:25 +0000 https://www.karnatakakahale.com/?p=22045 ರಾಯಚೂರು, ಜ.17: ಪಕ್ಷಿಗಳು ಉತ್ತಮ ಪರಿಸರದ ಸಂಕೇತವಾಗಿವೆ. ಅವು ಪರಿಸರದ ಪೂರಕ ವಾತಾವರಣ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ವಲಯ ಅರಣ್ಯ ಅಧಿಕಾರಿಗಳಾದ ರಾಜೇಶ್ ನಾಯಕ ಅವರು ಹೇಳಿದರು. ಪ್ರಯತ್ನ ವೆಲ್ ಫೇರ್ ಟ್ರಸ್ಟ್ ನವರು ಟಾಗೋರ್ ಸಭಾಂಗಣದಲ್ಲಿ ಏರ್ಪಡಿಸಿದ್ದ …

The post ರಾಯಚೂರು ಪಕ್ಷಿಗಳ ಫೋಟೋ ಪ್ರದರ್ಶನ: ಪಕ್ಷಿಗಳು ಉತ್ತಮ ಪರಿಸರಕ್ಕೆ ಪೂರಕ -ರಾಜೇಶ್ ನಾಯಕ್ appeared first on Karnataka Kahale.

]]>

ರಾಯಚೂರು, ಜ.17: ಪಕ್ಷಿಗಳು ಉತ್ತಮ ಪರಿಸರದ ಸಂಕೇತವಾಗಿವೆ. ಅವು ಪರಿಸರದ ಪೂರಕ ವಾತಾವರಣ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ವಲಯ ಅರಣ್ಯ ಅಧಿಕಾರಿಗಳಾದ ರಾಜೇಶ್ ನಾಯಕ ಅವರು ಹೇಳಿದರು.
ಪ್ರಯತ್ನ ವೆಲ್ ಫೇರ್ ಟ್ರಸ್ಟ್ ನವರು ಟಾಗೋರ್ ಸಭಾಂಗಣದಲ್ಲಿ ಏರ್ಪಡಿಸಿದ್ದ  ಸಾಹಿತಿ ಈರಣ್ಣ ಬೆಂಗಾಲಿ ಅವರು ತೆಗೆದ ನೂರ ಐವತ್ತಕ್ಕೂ ಹೆಚ್ಚು ರಾಯಚೂರು ಪಕ್ಷಿಗಳ ಫೋಟೋ ಪ್ರದರ್ಶನವನ್ನು ಉದ್ಘಾಟಸಿ ಅವರು ಮಾತನಾಡಿದರು.                                              ಪಕ್ಷಿಗಳು ಭೂ ಲೋಕದ ಅದ್ಬುತ ಜೀವಿಗಳಾಗಿ, ಮನುಕುಲಕ್ಕೆ ಸಹಕಾರಿ ಆಗಿವೆ. ವಿದ್ಯಾರ್ಥಿಗಳು, ಸಾರ್ವಜನಿಕರು ಪಕ್ಷಿಗಳನ್ನು ಉಳಿಸುವತ್ತ ಗಮನಹರಿಸಬೇಕು ಎಂದು ತಿಳಿಸಿದರು.                ಪಕ್ಷಿಗಳ ಛಾಯಾಗ್ರಾಹಕ ಈರಣ್ಣ ಬೆಂಗಾಲಿ ಅವರು ಮಾತಾಡಿ,  ರಾಯಚೂರಿನಲ್ಲಿ ಇನ್ನೂರಕ್ಕೂ ಅಧಿಕ ಪ್ರಬೇಧದ ಹಕ್ಕಿಗಳು ಇದ್ದು, ಅವುಗಳನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಆಗಬೇಕು. ಜನರು ಹಕ್ಕಿಗಳ ಬಗ್ಗೆ ಒಲವನ್ನು ಹೊಂದಿ, ಪಕ್ಷಿಗಳ ಮಹತ್ವ ಅರಿಯಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಅಭಿಜ್ಞಾನ ಶಾಲೆಯ ರಮೇಶ್ ಅವರು,   ಈರಣ್ಣ ಬೆಂಗಾಲಿ ಅವರು ರಾಯಚೂರಿನ ಪಕ್ಷಿಗಳ ಫೋಟೋ ತೆಗೆದು ನಮಗೆ ತೋರಿಸಿದ್ದು ಅಭಿನಂದನೀಯ. ಪರಿಸರ ಕಾರ್ಯಕ್ಕೆ ನಾವು ಯಾವಾಗಲೂ ಜೊತೆ ಇರಬೇಕು. ಉತ್ತಮ ಪರಿಸರವನ್ನು ನಾವು ಕಾಪಾಡುವಲ್ಲಿ ಗಮನಹರಿಸಬೇಕು. ಪಕ್ಷಿಗಳು ಇರದಿದ್ದರೆ ನಾವಿಲ್ಲ ಎಂಬುದನ್ನು ಮರೆಯಕೂಡದು ಎಂದರು.

ಈ ಸಂದರ್ಭದಲ್ಲಿ ಮೊಹಿಯುದ್ದೀನ್ ಪೀರಜಾದೆ, ವೀರಹನುಮಾನ, ನೀಲಕಂಠ ಮಳಿಮಠ, ಈರಣ್ಣ ಕೋಸಗಿ, ಹಫಿಜುಲ್ಲಾ, ಬಶೀರ ಅಹ್ಮದ ಹೊಸಮನಿ, ಪ್ರಭಣ್ಣಗೌಡ, ಬಸವಂತರಾಯ ಪಾಟೀಲ, ಸಲಾವುದ್ದಿನ್, ಅಜೃಯ್, ಮುನಿಸ್ವಾಮಿ, ಯಲ್ಲಪ್ಪ ಮರ್ಚೆಡ್ ಸೇರಿದಂತೆ ಅಭಿಜ್ಞಾನ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಕ್ಷಿಗಳ ಫೋಟೋ ಪ್ರದರ್ಶನ ರವಿವಾರವೂ ಇರುತ್ತದೆ.
—–

The post ರಾಯಚೂರು ಪಕ್ಷಿಗಳ ಫೋಟೋ ಪ್ರದರ್ಶನ: ಪಕ್ಷಿಗಳು ಉತ್ತಮ ಪರಿಸರಕ್ಕೆ ಪೂರಕ -ರಾಜೇಶ್ ನಾಯಕ್ appeared first on Karnataka Kahale.

]]>
ವೆಂಕಟಸಿಂಗ್ ಗೆ ತಾಯಿ ವಿಯೋಗ https://www.karnatakakahale.com/news/21571 Thu, 11 Dec 2025 07:45:43 +0000 https://www.karnatakakahale.com/?p=21571 ರಾಯಚೂರು, ಡಿ.11: ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ವೆಂಕಟಸಿಂಗ್ ಅವರ ತಾಯಿ ಯಮುನಾಬಾಯಿ (80) ಅವರು ಕಲಬುರ್ಗಿ ಜಯದೇವ ಆಸ್ಪತ್ರೆಯಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ. ಶ್ರೀಮತಿ ಯಮುನಾಬಾಯಿ ಅವರ ನಿಧನಕ್ಕೆ ಕೆಯುಡಬ್ಕ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು,…

The post ವೆಂಕಟಸಿಂಗ್ ಗೆ ತಾಯಿ ವಿಯೋಗ appeared first on Karnataka Kahale.

]]>

ರಾಯಚೂರು, ಡಿ.11: ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ವೆಂಕಟಸಿಂಗ್ ಅವರ ತಾಯಿ ಯಮುನಾಬಾಯಿ (80) ಅವರು ಕಲಬುರ್ಗಿ ಜಯದೇವ ಆಸ್ಪತ್ರೆಯಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ.
ಶ್ರೀಮತಿ ಯಮುನಾಬಾಯಿ ಅವರ ನಿಧನಕ್ಕೆ ಕೆಯುಡಬ್ಕ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ , ಹಿರಿಯ ಪತ್ರಕರ್ತ ಸಿ.ಮಂಜುನಾಥ ಸಂತಾಪ ವ್ಯಕ್ತಪಡಿಸಿದ್ದಾರೆ.

The post ವೆಂಕಟಸಿಂಗ್ ಗೆ ತಾಯಿ ವಿಯೋಗ appeared first on Karnataka Kahale.

]]>
ಬಳ್ಳಾರಿ ಪತ್ರಕರ್ತ ಹೊನ್ನುರಸ್ವಾಮಿ ಕೆ.ಟಿ ಅವರಿಗೆ ರಾಷ್ಟ್ರಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ https://www.karnatakakahale.com/news/20743 Tue, 23 Sep 2025 08:14:16 +0000 https://www.karnatakakahale.com/?p=20743 ಬಳ್ಳಾರಿ, ಸೆ.23: ನಿರಂತರ ಜಿಲ್ಲೆಯ ಸಮಸ್ಯೆಗಳ ಕುರಿತು  ಬೆಳಕು ಚೆಲ್ಲುತ್ತಿರುವ  ಸಂಜೆವಾಣಿ ದಿನಪತ್ರಿಕೆಯ ಉಪಸಂಪಾದಕ, ಜನಕೂಗು, ವಿಜಯ ವಿಶ್ವವಾಣಿ ಪತ್ರಿಕೆ, ಬಂಗಾರದ ಗಣಿ ಮತ್ತು ಪಬ್ಲಿಕ್ ನೆಕ್ಸ್ಟ್ ಚಾನೆಲ್ ಜಿಲ್ಲಾ ವರದಿಗಾರಾದ ಹೊನ್ನುರಸ್ವಾಮಿ ಕೆ.ಟಿ ಯವರಿಗೆ ರಾಷ್ಟ್ರಮಟ್ಟದ “ಮಾಧ್ಯಮ ರತ್ನ” ಪ್ರಶಸ್ತಿ…

The post ಬಳ್ಳಾರಿ ಪತ್ರಕರ್ತ ಹೊನ್ನುರಸ್ವಾಮಿ ಕೆ.ಟಿ ಅವರಿಗೆ ರಾಷ್ಟ್ರಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ appeared first on Karnataka Kahale.

]]>
ಬಳ್ಳಾರಿ, ಸೆ.23: ನಿರಂತರ ಜಿಲ್ಲೆಯ ಸಮಸ್ಯೆಗಳ ಕುರಿತು  ಬೆಳಕು ಚೆಲ್ಲುತ್ತಿರುವ  ಸಂಜೆವಾಣಿ ದಿನಪತ್ರಿಕೆಯ ಉಪಸಂಪಾದಕ, ಜನಕೂಗು, ವಿಜಯ ವಿಶ್ವವಾಣಿ ಪತ್ರಿಕೆ, ಬಂಗಾರದ ಗಣಿ ಮತ್ತು ಪಬ್ಲಿಕ್ ನೆಕ್ಸ್ಟ್ ಚಾನೆಲ್ ಜಿಲ್ಲಾ ವರದಿಗಾರಾದ ಹೊನ್ನುರಸ್ವಾಮಿ ಕೆ.ಟಿ ಯವರಿಗೆ ರಾಷ್ಟ್ರಮಟ್ಟದ “ಮಾಧ್ಯಮ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕೆಲ ವರ್ಷಗಳಿಂದ ಸಾಧಕರನ್ನ ಗುರುತಿಸಿ ಗೌರವಿಸುವ ಕಾರ್ಯಕ್ಕೆ ಮುಂದಾಗಿದ್ದು 120ನೇ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನದಲ್ಲಿ ಪ್ರತಿವರ್ಷ ಕೊಡಮಾಡುವ ರಾಷ್ಟ್ರ ಮಟ್ಟದ “ಮಾಧ್ಯಮ ರತ್ನ” ಪ್ರಶಸ್ತಿಗೆ ಹೊನ್ನುರಸ್ವಾಮಿ ಕೆ. ಟಿ ಆಯ್ಕೆಯಾಗಿದ್ದರು.

ಹೊನ್ನುರಸ್ವಾಮಿ ಕೆಟಿಯವರು ಮಾಧ್ಯಮ ಕ್ಷೇತ್ರದಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಸದಾ ಹೊಸತನದ ಸುದ್ದಿಗಳನ್ನು ಬರೆಯುವ ತುಡಿತ, ಕ್ರಿಯಾಶೀಲತೆಯನ್ನು ಹೊದಿರುವ ಇವರಿಗೆ ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಂಸ್ಥೆಯ 120 ನೇ ರಾಷ್ಟ್ರ ಮಟ್ಟದ ಬೆಳಕು ಸಮ್ಮೇಳನದಲ್ಲಿ ರಾಷ್ಟ್ರ ಮಟ್ಟದ ‘ಮಾಧ್ಯಮ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹೊನ್ನುರಸ್ವಾಮಿ ಕೆ ಟಿ ಅವರು,  ಕಲಾವಿದರ ಕಲೆಯನ್ನು ಹೊರ ತಂದು ಅವರ ಕಲೆಗೆ ಪ್ರೋತ್ಸಾಹಿಸುವ ಮತ್ತು ಕಲಾವಿದರನ್ನು ಮುಖ್ಯ ವಾಹಿನಿಗೆ ತರುವ ಕಾರ್ಯವನ್ನು ಬೆಳಕು ಸಂಸ್ಥೆ ಮಾಡುತ್ತಿದೆ ಪ್ರಶಸ್ತಿ ಪುರಸ್ಕಾರಗಳಿಂದ ಸಾದಕರ ಕೀರ್ತಿ ಹೆಚ್ಚಿಸುವುದರ ಜೊತೆಗೆ  ಹೆಚ್ಚಿನ ಜವಾಬ್ದಾರಿ ಹೆಗಲಿಗೆ ಹೇರುವ ಕಾರ್ಯಕ್ಕೆ ಮುಂದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪುಟ್ಟಮಾದಯ್ಯ,
ಸಮ್ಮೇಳನಾಧ್ಯಕ್ಷ ಸ್ಥಾನವನ್ನು ನಾಗಮಂಗಲದ ಸಾಹಿತಿ ಹಾಗೂ ಉಪನ್ಯಾಸಕ ಚಿಕ್ಕಣ್ಣ.ಡಿ.ಪಿ, ಬೆಳಕು ಟ್ರಸ್ಟ್ ಸಂಸ್ಥಾಪಕ ಅಣ್ಣಪ್ಪ ಮೇಟಿಗೌಡ ಹಾಗೂ ಮತ್ತಿತರ ಗಣ್ಯರು ಭಾಗಿಯಾಗಿದ್ದರು.

The post ಬಳ್ಳಾರಿ ಪತ್ರಕರ್ತ ಹೊನ್ನುರಸ್ವಾಮಿ ಕೆ.ಟಿ ಅವರಿಗೆ ರಾಷ್ಟ್ರಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ appeared first on Karnataka Kahale.

]]>
ರಾಯಚೂರು: ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ -ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ https://www.karnatakakahale.com/news/20074 Wed, 09 Jul 2025 16:11:04 +0000 https://www.karnatakakahale.com/?p=20074 ರಾಯಚೂರು ಜು.9: ಜಿಲ್ಲೆಯ ಶೈಕ್ಷಣಿಕ ಸ್ಥಿತಿಗತಿ ಅರಿತು ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಸಿಗುವಂತಾಗಬೇಕು ಎಂಬ ಆಶಯ ತಮ್ಮದಾಗಿದೆ ಎಂದು  ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಅವರು ಹೇಳಿದರು. ತಾಲೂಕಿನ ಯರಗೇರಾ…

The post ರಾಯಚೂರು: ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ -ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ appeared first on Karnataka Kahale.

]]>

ರಾಯಚೂರು ಜು.9: ಜಿಲ್ಲೆಯ ಶೈಕ್ಷಣಿಕ ಸ್ಥಿತಿಗತಿ ಅರಿತು ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಸಿಗುವಂತಾಗಬೇಕು ಎಂಬ ಆಶಯ ತಮ್ಮದಾಗಿದೆ ಎಂದು  ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಅವರು ಹೇಳಿದರು.

ತಾಲೂಕಿನ ಯರಗೇರಾ ಗ್ರಾಮದಲ್ಲಿರುವ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುಚ್ಛಯದ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸರ್ವಾಂಗೀಣ ಅಭಿವೃದ್ಧಿಯ ಚಿಂತನೆಯೊಂದಿಗೆ ತಾವು ನೂತನ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದು, ಈ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸಬೇಕು ಎಂಬ ಮಹತ್ತರವಾದ ಕಾರ್ಯಕ್ಕೆ ತಾವು ಪ್ರತಿಯೊಬ್ಬರ ಸಹಕಾರ ಕೋರುವುದಾಗಿ ತಿಳಿಸಿದರು.

ರಾಜ್ಯದ ಗಡಿ ಜಿಲ್ಲೆಯಾದ ರಾಯಚೂರ ಜಿಲ್ಲೆಯು ವಿವಿಧ ಭಾಷೆ ಮಾತನಾಡುವ, ವಿಭಿನ್ನ ಸಂಸ್ಕೃತಿ ಆಚರಣೆಯ ಸಮ್ಮಿಲನದ ವಿಶೇಷತೆ ಹೊಂದಿದೆ. ಇಡೀ ರಾಜ್ಯಕ್ಕೆ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಪೂರೈಸಿ ಹೆಸರಾಗಿರುವ ರಾಯಚೂರ ಜಿಲ್ಲೆಗೆ 2020ರಲ್ಲಿ ರಾಜ್ಯ ಸರ್ಕಾರವು ಹೊಸದಾಗಿ ವಿಶ್ವವಿದ್ಯಾಲಯ ಘೋಷಣೆ ಮಾಡುವ ಮೂಲಕ ಈ ಭಾಗಕ್ಕೆ ಸಲ್ಲಬೇಕಾದ ಶೈಕ್ಷಣಿಕೆ ಮಾನ್ಯತೆಯನ್ನು ಕಲ್ಪಿಸಿದ್ದು ರಾಜ್ಯದ ಮತ್ತು ರಾಯಚೂರ ಜಿಲ್ಲೆಯ ಇತಿಹಾಸದಲ್ಲಿ ಸ್ಮರಣೀಯವಾಗಿದೆ ಎಂದು ಅವರು ತಿಳಿಸಿದರು.
ಈ ವಿಶ್ವವಿದ್ಯಾಲಯವು ಹಲವು ಸಾಧನೆ ಮತ್ತು ವಿಶೇಷತೆಗಳನ್ನು ಹೊಂದಿದೆ. ಈ ವಿಶ್ವವಿದ್ಯಾಲಯಕ್ಕೆ ಬರುವ ಹೆಚ್ಚಿನ ಪ್ರಮಾಣದ ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯ ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಿದ್ದು, ಈ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂಬುದು ಈ ವಿಶ್ವವಿದ್ಯಾಲಯದ ಗುರಿ ಮತ್ತು ನಮ್ಮ ಆಶಯವಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ವಿಷಯ ಮತ್ತು ಸಂವಹನ ಕೌಶಲ್ಯ ಸುಧಾರಿಸಲು ವಿಶ್ವವಿದ್ಯಾಲಯದಲ್ಲಿ ನಿಯಮಿತವಾಗಿ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ವಿಶೇಷ ಉಪನ್ಯಾಸಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.


ರಾಜ್ಯ ಸರ್ಕಾರವು ಈ ವಿಶ್ವವಿದ್ಯಾಲಯಕ್ಕೆ 31 ಬೋಧಕ ಹುದ್ದೆಗಳನ್ನು ಮಂಜೂರಿ ಮಾಡಿದೆ. ಮೌಲ್ಯಮಾಪನ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಲು ಮತ್ತು ವಿಶ್ವವಿದ್ಯಾಲಯದ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ವಿಶ್ವವಿದ್ಯಾಲಯವು ಡಿಜಿಟಲ್ ಮೌಲ್ಯಮಾಪನ ಪ್ರಾರಂಭಿಸಿದೆ. ಮೂಲಸೌಕರ್ಯ ಮತ್ತು ಪ್ರಯೋಗಾಲಯ ಅಭಿವೃದ್ಧಿಗಾಗಿ ಸರ್ಕಾರವು 15 ಕೋಟಿ ರೂ.ಗಳನ್ನು ಮಂಜೂರಿ ಮಾಡಿದೆ. ವಿಶ್ವವಿದ್ಯಾಲಯ ಆವರಣದಲ್ಲಿರುವ ಮಾನವ ಜೀನೋಮ್ ಕೇಂದ್ರಕ್ಕೆ ಕೆಕೆಆರ್‌ಡಿಬಿ ನಿಧಿಯಡಿಯಲ್ಲಿ ಸರ್ಕಾರವು 47.00 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ವಿಶ್ವವಿದ್ಯಾಲಯ ಆವರಣದಲ್ಲಿ ಮೂಲಸೌಕರ್ಯ ಮತ್ತು ಪ್ರಯೋಗಾಲಯ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿ ನಿಧಿಯಡಿಯಲ್ಲಿ ಸರ್ಕಾರ 34 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ವಿವರಿಸಿದರು.
ನಮ್ಮ ವಿಶ್ವವಿದ್ಯಾಲಯಕ್ಕೆ ಕೆಲವು ಅವಶ್ಯಕತೆಗಳಿವೆ. ಪ್ರಸ್ತುತ ವಿಶ್ವವಿದ್ಯಾನಿಲಯವು ಒಂದೇ ಕಟ್ಟಡದಲ್ಲಿ ಎರಡು ಅವಧಿಗಳಲ್ಲಿ 20 ಸ್ನಾತಕೋತ್ತರ ಕೋರ್ಸ್ಗಳನ್ನು ನಡೆಸುತ್ತಿದೆ. ಆದ್ದರಿಂದ, ವಿಶ್ವವಿದ್ಯಾನಿಲಯದ ದಕ್ಷ ಕಾರ್ಯನಿರ್ವಹಣೆಗಾಗಿ ಕನ್ನಡ, ಇಂಗ್ಲಿಷ್ ಮತ್ತು ಉರ್ದು ವಿಭಾಗಗಳಿಗೆ ಕಲಾ ವಿಭಾಗದ ಕಟ್ಟಡ ನಿರ್ಮಾಣವಾಗಬೇಕು ಎಂದರು.                        ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ವಿಭಾಗಗಳಿಗೆ ಸಮಾಜ ವಿಜ್ಞಾನ ವಿಭಾಗದ ಕಟ್ಟಡ ನಿರ್ಮಾಣವಾಗಬೇಕು. ಸಂವಹನ, ಮಹಿಳಾ ಅಧ್ಯಯನ, ಗ್ರಂಥಾಲಯ ಮಾಹಿತಿ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ವಾದ್ಯಸಂಗೀತ ಇತ್ಯಾದಿ ವಿಭಾಗಗಳಿಗೆ ಭೌತ ವಿಜ್ಞಾನ ವಿಭಾಗದ ಕಟ್ಟಡ ನಿರ್ಮಾಣವಾಗಬೇಕು ಎಂದು ಮಾಹಿತಿ ನೀಡಿದರು.                              ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ ವಿಭಾಗಕ್ಕೆ ಜೀವ ವಿಜ್ಞಾನ ವಿಭಾಗ ಕಟ್ಟಡ ನಿರ್ಮಾಣವಾಗಬೇಕು. ಜೊತೆಗೆ ಫ್ಯಾಕಲ್ಟಿ ಆಫ್ ಕಾಮರ್ಸ್ ಕಟ್ಟಡ, ಪರೀಕ್ಷಾ ವಿಭಾಗದ ಕಟ್ಟಡ, ಕ್ಯಾಂಟೀನ್ ಕಟ್ಟಡ, ಅತಿಥಿ ಗೃಹ ಕಟ್ಟಡಗಳು ನಿರ್ಮಾಣವಾಗಬೇಕಿದೆ. ಅಸ್ತಿತ್ವದಲ್ಲಿರುವ ಗ್ರಂಥಾಲಯ ಕಟ್ಟಡದ ವಿಸ್ತರಣೆಯಾಗಬೇಕು. ಇಡೀ ಕ್ಯಾಂಪಸ್‌ಗೆ ಟಾರ್ ರಸ್ತೆಗಳು ನಿರ್ಮಾಣವಾಗಬೇಕು. 400 ಮೀಟರ್ ಟ್ರ‍್ಯಾಕ್ ಹೊಂದಿರುವ ಆಟದ ಮೈದಾನಗಳು ನಿರ್ಮಾಣವಾಗಬೇಕಿದ ಎಂದರು.                          ಇಡೀ ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ಹೈ ಸ್ಪೀಡ್ ಇಂಟರ್ನೆಟ್ ಸಂಪರ್ಕ ಬೇಕಿರುತ್ತದೆ. ಎಲ್ಲಾ ವಿಜ್ಞಾನ ವಿಭಾಗಗಳಿಗೆ ಸಂಶೋಧನಾ ಉಪಕರಣಗಳು ಬೇಕಿರುತ್ತದೆ. ವಿಶ್ವವಿದ್ಯಾಲಯಕ್ಕೆ ಹಂತಹಂತವಾಗಿ ಈ ಎಲ್ಲಾ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಪತ್ರ ಬರೆದು ಕ್ರಮವಹಿಸುವುದಾಗಿ ಕುಲಪತಿಗಳು  ತಿಳಿಸಿದರು.
ಈ ವಿಶ್ವವಿದ್ಯಾಲಯವು ಅಂದಾಜು 250 ಎಕರೆ ಪ್ರದೇಶ ವ್ಯಾಪ್ತಿಯಲ್ಲಿದೆ. 20 ಕೋರ್ಸಗಳನ್ನು ನೀಡಲಾಗುತ್ತದೆ. 20 ಸರ್ಕಾರಿ ಕಾಲೇಜುಗಳು, 6 ಅನುದಾನಿತ ಕಾಲೇಜುಗಳು, 8 ಬಿಎಡ್ ಕಾಲೇಜುಗಳು, 2 ಬಿಪಿಎಡ್ ಮತ್ತು 148 ಖಾಸಗಿ ಕಾಲೇಜುಗಳು ಸೇರಿ ಒಟ್ಟು 184 ಸಂಯೋಜಿತ ಕಾಲೇಜುಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತವೆ. ಮುಖ್ಯ ಕ್ಯಾಂಪಸ್ಸನಲ್ಲಿ ಒಟ್ಟು 873 ವಿದ್ಯಾರ್ಥಿಗಳ ಬಲವಿದೆ. ಅಂಗ ಸಂಸ್ಥೆಗಳಲ್ಲಿ 4208ರಷ್ಟು ಸ್ನಾತಕೋತ್ತರ ಪದವಿ ಓದುವ ವಿದ್ಯಾರ್ಥಿಗಳಿದ್ದಾರೆ. ಸಂಯೋಜಿತ ವಿಶ್ವವಿದ್ಯಾಲಯಗಳಲ್ಲಿ 56,343 ಯುಜಿ ವಿದ್ಯಾರ್ಥಿಗಳಿದ್ದಾರೆ. ತಲಾವೊಂದು ಆಡಳಿತಾತ್ಮಕ ಕಟ್ಟಡ, ಗ್ರಂಥಾಲಯ ಕಟ್ಟಡ, ಸಿಬ್ಬಂದಿ ಕ್ವಾಟರ‍್ಸ್, ಅತಿಥಿ ಗೃಹ ಹಾಗೂ ಎಂಜಿನಿಯರಿಂಗ್ ಕಟ್ಟಡಗಳಿವೆ. 5 ಬಾಲಕರ ವಿದ್ಯಾರ್ಥಿ ವಸತಿ ನಿಲಯಗಳು ಹಾಗೂ 2 ಮಹಿಳೆಯರ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. 5 ಖಾಯಂ ಬೋಧಕ ಸಿಬ್ಬಂದಿ, 6 ಖಾಯಂ ಬೋಧಕರ ಸಿಬ್ಬಂದಿ ಇದ್ದಾರೆ. 80 ಅತಿಥಿ ಅಧ್ಯಾಪಕರು, 90 ಜನ ತಾತ್ಕಾಲಿಕ ಸಿಬ್ಬಂದಿ ಇದ್ದಾರೆ. ಈ ವಿಶ್ವವಿದ್ಯಾಲಯದಲ್ಲಿ 187 ವಿದ್ಯಾರ್ಥಿಗಳು, 118 ವಿದ್ಯಾರ್ಥಿನಿಯರು ಹಾಸ್ಟೇಲಗೆ ಪ್ರವೇಶಾತಿ ಪಡೆದುಕೊಂಡಿದ್ದಾರೆ. ಗ್ರಂಥಾಲಯದಲ್ಲಿ ಒಟ್ಟು 25,540 ಪುಸ್ತಕಗಳಿವೆ. 100 ಕಂಪ್ಯೂಟರ್, 8 ಸಂವಾಧಾತ್ಮಕ ಫಲಕಗಳು ಇರುತ್ತವೆ. 5 ಕೊಳವೆಬಾವಿಗಳು ಮತ್ತು 2 ಜನರೇಟರಗಳು ಕಾರ್ಯನಿರ್ವಹಿಸುತ್ತಿವೆ. 1 ಮಿನಿ ಬಸ್ ಇರುತ್ತದೆ ಎಂದು  ಕುಲಪತಿಗಳು ಮಾಹಿತಿ ನೀಡಿದರು.
ವಿಶ್ವವಿದ್ಯಾಲಯದಲ್ಲಿ ಕನ್ನಡ, ಇಂಗ್ಲಿಷ್, ಉರ್ದು ಮತ್ತು ಪರ್ಶಿಯನ್, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಎಂಎಸ್‌ಡಬ್ಲ್ಯು, ಎಂಡಬ್ಲ್ಯುಎಸ್, ಪತ್ರಿಕೋದ್ಯಮ, ಗ್ರಂಥಾಲಯ ವಿಜ್ಞಾನ, ಗಣಕ ವಿಜ್ಞಾನ, ಗಣಿತಶಾಸ್ತ್ರ, ಪಿಜಿಕ್ಸ್, ಕೆಮಿಸ್ಟ್ರಿ, ಬಾಟನಿ, ಜಿಯಾಲಜಿ, ಮೈಕ್ರೋಬಯಾಲಜಿ, ಇನ್‌ಸ್ಟ್ರೂಮೆಂಟ್ ಟೆಕ್ನಾಲಜಿ ಹಾಗೂ ಎಂಕಾಂ ಸೇರಿದಂತೆ 20 ವಿಷಯಗಳ ಕೋರ್ಸಗಳನ್ನು ಇಲ್ಲಿ ಕಲಿಸಲಾಗುತ್ತದೆ ಎಂದು ಪ್ರೊ.ಕೆಳಗಿನಮನಿ ಅವರು ವಿವರಿಸಿದರು.
ಸಲಹೆ, ಮಾರ್ಗದರ್ಶನಬೇಕು: ತಾವು ಈಗಾಗಲೇ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಎರಡೂ ದಶಕಗಳಿಗೂ ಹೆಚ್ಚು ಕಾಲ ಅಧ್ಯಾಪಕರಾಗಿ ಜೊತೆಗೆ ವಿಶ್ವವಿದ್ಯಾಲಯದ ಬೇರೆ ಬೇರೆ ಹುದ್ದೆಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಇದುವರೆಗೆ 70ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾಗಿ 33 ಅಭ್ಯರ್ಥಿಗಳಿಗೆ ಪಿಎಚ್‌ಡಿ ಮಾರ್ಗದರ್ಶನ ಮಾಡಿದ್ದಾಗಿ ಪ್ರೊ.ಶಿವಾನಂದ ಕೆಳಗಿನಮನಿ ಅವರು ತಿಳಿಸಿದರು.                                         ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಬೆಳವಣಿಗೆಗೆ ಸಂಬಂಧಿಸಿದಂತೆ ಏನೇ ಸಲಹೆ ಮತ್ತು ಮಾರ್ಗದರ್ಶನವಿದ್ದರೆ ಅದನ್ನು ತಾವು ಸ್ವೀಕರಿಸುವುದಾಗಿ ಪ್ರೊ. ಕೆಳಗಿನಮನಿ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವರಾದ ಡಾ.ಚನ್ನಪ್ಪ ಎ., ಮೌಲ್ಯಮಾಪನ ಕುಲಸಚಿವರಾದ ಡಾ.ಜ್ಯೋತಿಧಾಮ ಪ್ರಕಾಶ, ವಿಶ್ವವಿದ್ಯಾಲಯದ ಆಡಳಿತ ಅಧಿಕಾರಿಗಳು ಆಗಿರುವ ಸಹ ಪ್ರಾಧ್ಯಾಪಕ ಡಾ.ಕೆ.ವೆಂಕಟೇಶ, ಸಹ ಪ್ರಾಧ್ಯಾಪಕರಾದ ಡಾ.ಸುಯಮೀಂದ್ರ ಕುಲಕರ್ಣಿ, ಕಾಲೇಜು ಅಭಿವೃದ್ಧಿ ಪರಿಷತ್ತಿನ ನಿರ್ದೇಶಕರಾದ ಡಾ.ರಾಘವೇಂದ್ರ ಪತ್ತೇಪೂರ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಸಹ ಪ್ರಾಧ್ಯಾಪಕರು ಮತ್ತಿತರರು ಇದ್ದರು.

The post ರಾಯಚೂರು: ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ -ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ appeared first on Karnataka Kahale.

]]>
ರಾಯಚೂರು: ಅಸೇನಪ್ಪ ನಾಯಕ್ ಅವರಿಗೆ ಡಾಕ್ಟರೇಟ್ ಪದವಿ https://www.karnatakakahale.com/news/19390 Thu, 15 May 2025 03:41:31 +0000 https://www.karnatakakahale.com/?p=19390 ರಾಯಚೂರು, ಮೇ 15:  ಜಿಲ್ಲೆಯ ಮಾನ್ವಿ ತಾಲೂಕಿನ ರಾಜಲದಿನ್ನಿ ಗ್ರಾಮದ  ಮಲ್ಲಯ್ಯ ಬಾರಕೇರಿ ಪುತ್ರ ಅಸೇನಪ್ಪ ನಾಯಕ್ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ನಾಯಕ್ ಅವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಡಾ.ಜೆ.ಎ.ಸಿದ್ದಿಕಿ ರವರ ಮಾರ್ಗದರ್ಶದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ”ಯೂಸ್…

The post ರಾಯಚೂರು: ಅಸೇನಪ್ಪ ನಾಯಕ್ ಅವರಿಗೆ ಡಾಕ್ಟರೇಟ್ ಪದವಿ appeared first on Karnataka Kahale.

]]>

ರಾಯಚೂರು, ಮೇ 15:  ಜಿಲ್ಲೆಯ ಮಾನ್ವಿ ತಾಲೂಕಿನ ರಾಜಲದಿನ್ನಿ ಗ್ರಾಮದ  ಮಲ್ಲಯ್ಯ ಬಾರಕೇರಿ ಪುತ್ರ ಅಸೇನಪ್ಪ ನಾಯಕ್ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.

ನಾಯಕ್ ಅವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಡಾ.ಜೆ.ಎ.ಸಿದ್ದಿಕಿ ರವರ ಮಾರ್ಗದರ್ಶದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ”ಯೂಸ್ ಆಫ್ ರಿಸೊಸರ್ಸ್ ಅಂಡ್ ಮ್ಯಾನೇಜ್ಮೆಂಟ್ ಇನ್ ವುಮೆನ್ ಯೂನಿವರ್ಸಿಟಿ ಲೈಬ್ರೆರಿಸ್ ಇನ್ ಸೌಥ್ ಇಂಡಿಯಾ:ಎ ಸ್ಟಡಿ,,ಎಂಬ ಮಹಾಪ್ರಭಂಧಕ್ಕೆ ಚೌಧರಿಯ ಚರಣ್ ಸಿಂಗ್ ವಿಶ್ವವಿದ್ಯಾಲಯವು ಅವರಿಗೆ ಪಿ.ಹೆಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ.

ಪ್ರಸ್ತುತ ಅಸೇನಪ್ಪ ನಾಯಕರವರು ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ  ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

The post ರಾಯಚೂರು: ಅಸೇನಪ್ಪ ನಾಯಕ್ ಅವರಿಗೆ ಡಾಕ್ಟರೇಟ್ ಪದವಿ appeared first on Karnataka Kahale.

]]>
ವೇಮನ ಎಲ್ಲಾ ಕಾಲಘಟ್ಟದಲ್ಲಿಯೂ ಸ್ಮರಣಾರ್ಹರು – ಕುಲಪತಿ ಡಾ. ಸುಯಮೀಂದ್ರ ಕುಲಕರ್ಣಿ https://www.karnatakakahale.com/news/18455 Sun, 19 Jan 2025 10:27:00 +0000 https://www.karnatakakahale.com/?p=18455 ರಾಯಚೂರು, ಜ.19: ವೇಮನ ಭಾರತದ ನೆಲ ಕಂಡ ಒಬ್ಬ ಶ್ರೇಷ್ಟ ಕವಿ ಹಾಗೂ ತತ್ವಜ್ಞಾನಿ ಎಂದು ರಾಯಚೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ. ಸುಯಮೀಂದ್ರ ಕುಲಕರ್ಣಿಯವರು ಹೇಳಿದರು.              ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ …

The post ವೇಮನ ಎಲ್ಲಾ ಕಾಲಘಟ್ಟದಲ್ಲಿಯೂ ಸ್ಮರಣಾರ್ಹರು – ಕುಲಪತಿ ಡಾ. ಸುಯಮೀಂದ್ರ ಕುಲಕರ್ಣಿ appeared first on Karnataka Kahale.

]]>

ರಾಯಚೂರು, ಜ.19: ವೇಮನ ಭಾರತದ ನೆಲ ಕಂಡ ಒಬ್ಬ ಶ್ರೇಷ್ಟ ಕವಿ ಹಾಗೂ ತತ್ವಜ್ಞಾನಿ ಎಂದು ರಾಯಚೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ. ಸುಯಮೀಂದ್ರ ಕುಲಕರ್ಣಿಯವರು ಹೇಳಿದರು.              ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ  ಭಾನುವಾರ ಆಯೋಜಿಸಲಾಗಿದ್ದ ‘ವೇಮನ ಜಯಂತಿ’ ಕಾರ್ಯಕ್ರಮದಲ್ಲಿ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.                              ಕಂದಾಚಾರಗಳನ್ನು ಖಂಡಿಸಿ ಸಮಾಜವನ್ನು ತಿದ್ದಿದ ಒಬ್ಬ ದಾರ್ಶನಿಕನಾಗಿ ಹಾಗೂ ಮಹಾ ಯೋಗಿಯಾಗಿ ಪ್ರಸಿದ್ಧಿ ಪಡೆದವರು. 15ನೇ ಶತಮಾನದಲ್ಲಿ ತೆಲುಗಿನ ಒಬ್ಬ ಶ್ರೇಷ್ಟ ವಚನಕಾರರಾಗಿ, ಸಾಮಾಜ ಚಿಂತಕ ಕವಿಯಾಗಿ ಮಾನವ ಕುಲದ ಏಳಿಗೆಗೆ ಶ್ರಮಿಸಿದ ಇವರು ಸಮಾಜ ಹಾಗೂ ಮಾನವ ಬದುಕಿನ ಬೆಳವಣಿಗೆಗೆ ಬೇಕಾದ ಶ್ರೇಷ್ಟ ಸಂದೇಶಗಳನ್ನು ನೀಡಿದ್ದಾರೆ ಎಂದು‌ ಬಣ್ಣಿಸಿದರು.      ಕನ್ನಡ ನೆಲದಲ್ಲಿ ಸರ್ವಜ್ಞ, ತಮಿಳಿನಲ್ಲಿ ತಿರುವಳ್ಳುವರ್ ಅವರನ್ನು ಹೇಗೆ ಶ್ರೇಷ್ಟ ದರ್ಶನಿಕರ ಸಾಲಿನಲ್ಲಿ ಕಾಣಲಾಗುತ್ತೋ ಹಾಗೆ ಆಂಧ್ರಪ್ರದೇಶದಲ್ಲಿ ವೇಮನರನ್ನು ಕಾಣಲಾಗುುತ್ತಿದೆ ಎಂದು ತಿಳಿಸಿದರು.                            ಇಂದಿನ ಜಗತ್ತು ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಹಾಗೂ ಜ್ಞಾನದಿಂದ ಎಷ್ಟೇ ಮುಂದುವರಿದಿದ್ದರೂ ಸಮಾಜ ಮತ್ತು ಮಾನವ ಬದುಕು ಅಂತ ಬಂದಾಗ ಸವಾಲುಗಳೇನೂ ನಿಂತಿಲ್ಲ ಮತ್ತು ಕಡಿಮೆಯಾಗಿಲ್ಲ ಎಂದ ಕುಲಪತಿಗಳು ವೇಮನರು ಎಲ್ಲಾ ಕಾಲಘಟ್ಟದಲ್ಲಿಯೂ ಸ್ಮರಣಾರ್ಹರಾಗಿದ್ದಾರೆ. ಅವರು ಹೇಳಿದ ತತ್ವಗಳನ್ನು ಪಾಲಿಸಿಕೊಂಡು ನಡೆದಲ್ಲಿ ಸಮಾಜದಲ್ಲಿ ಸಾಮರಸ್ಯ ಮೂಡಿಸಬಹುದು ಎಂದು ಹೇಳಿದರು.                          ಉಪಕುಲಸಚಿವ ಡಾ. ಕೆ.ವೆಂಕಟೇಶ್ ಅವರು ಸ್ವಾಗತಿಸಿದರು, ವಿತ್ತಾಧಿಕಾರಿಗಳಾದ ಡಾ. ಲತಾ.ಎಂ.ಎಸ್, ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಉಪನ್ಯಾಸಕರಾದ ಡಾ. ಮಂಜುನಾಥ.ಕೆ, ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕರಾದ ಡಾ. ಶಿವಲಿಲಾ.ಬಿ.ಪಾಟೀಲ್ ಸೇರಿದಂತೆ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

—–

The post ವೇಮನ ಎಲ್ಲಾ ಕಾಲಘಟ್ಟದಲ್ಲಿಯೂ ಸ್ಮರಣಾರ್ಹರು – ಕುಲಪತಿ ಡಾ. ಸುಯಮೀಂದ್ರ ಕುಲಕರ್ಣಿ appeared first on Karnataka Kahale.

]]>
ಜಾನಪದ ಕಲಾವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ರಾಯಚೂರು ಜಿಲ್ಲಾಧ್ಯಕ್ಷರಾಗಿ ಶಿವರಾಜ್ ಮೋತಿ ನೇಮಕ https://www.karnatakakahale.com/news/17375 Wed, 25 Sep 2024 08:56:14 +0000 https://www.karnatakakahale.com/?p=17375 ರಾಯಚೂರು: ಕರ್ನಾಟಕ ಜಾನಪದ ಕಲೆಗಳ ಮತ್ತು ಕಲಾವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ರಾಯಚೂರು ಜಿಲ್ಲಾಧ್ಯಕ್ಷರನ್ನಾಗಿ ಹಟ್ಟಿ ಪಟ್ಟಣದ ಯುವ ಬರಹಗಾರ, ಕಲಾ ಸಂಘಟಕ ಶಿವರಾಜ್ ಮೋತಿ ಅವರನ್ನು ನೇಮಕ ಮಾಡಲಾಗಿದೆ  ಎಂದು ಟ್ರಸ್ಟ್  ರಾಜ್ಯಾಧ್ಯಕ್ಷ  ಜರಗನಹಳ್ಳಿ ಕಾಂತರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಾಮಾಣಿಕವಾಗಿ…

The post ಜಾನಪದ ಕಲಾವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ರಾಯಚೂರು ಜಿಲ್ಲಾಧ್ಯಕ್ಷರಾಗಿ ಶಿವರಾಜ್ ಮೋತಿ ನೇಮಕ appeared first on Karnataka Kahale.

]]>

ರಾಯಚೂರು: ಕರ್ನಾಟಕ ಜಾನಪದ ಕಲೆಗಳ ಮತ್ತು ಕಲಾವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ರಾಯಚೂರು ಜಿಲ್ಲಾಧ್ಯಕ್ಷರನ್ನಾಗಿ ಹಟ್ಟಿ ಪಟ್ಟಣದ ಯುವ ಬರಹಗಾರ, ಕಲಾ ಸಂಘಟಕ ಶಿವರಾಜ್ ಮೋತಿ ಅವರನ್ನು ನೇಮಕ ಮಾಡಲಾಗಿದೆ  ಎಂದು ಟ್ರಸ್ಟ್  ರಾಜ್ಯಾಧ್ಯಕ್ಷ  ಜರಗನಹಳ್ಳಿ ಕಾಂತರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಾಮಾಣಿಕವಾಗಿ ಜಾನಪದ ಕಲಾವಿದರ ನೋವು, ದುಃಖಕ್ಕೆ ಸ್ಪಂದಿಸಲೆಂದೆ ಸಂಘಟಿತವಾಗಿರುವ ನೂತನ ನಮ್ಮ ಎಲ್ಲಾ ಜಾನಪದ ಸೇನೆಯ ಪದಾಧಿಕಾರಿಗಳಿಗೆ ಅಭಿನಂದಿಸಿದ್ದಾರೆ.

ಮೂಲ ಜನಪದ ಕಲಾವಿದರು ಸಂಘಟಿತರಾಗಬೇಕಿದೆ ಆ ಉದ್ದೇಶದಿಂದ ಜನಪದ ಸಿರಿ ಕನ್ನಡ ಎಂಬ ನಮ್ಮ ಪ್ರಖ್ಯಾತ ದೇಸಿ ವಾಹಿನಿಯ ಮೂಲಕ ಈಗಾಗಲೇ ರಾಜ್ಯಾದ್ಯಾಂತ ಕಲಾವಿದರನ್ನು ಹುಡುಕಿಕೊಂಡು ಪರ್ಯಟನೆ ಮಾಡುತ್ತಾ, ಅವರ ಜೀವನದ ಕುರಿತು ನಾಡಿನ ಮುಂದೆ ತೆರೆದಿಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ಸಂಸ್ಥೆಯ ಮೂಲಕ ಕೆಲಸ ಮಾಡಲು ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ.
ಜನಪದಗೋಸ್ಕರ ಮಾತನಾಡುವುದು, ಕೆಲಸ ಮಾಡುವುದು ಅಂದರೆ ನಮಗೆ ಇನ್ನೆಲ್ಲೂ ಇಲ್ಲದ ಆನಂದ. ಕಲೆಗಾರರನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಅವರು ಸಹ ಈ ದೇಶದ ಹೆಮ್ಮೆ, ಆಸ್ತಿ ಅನ್ನುವಂತಹ ಅಭಿಪ್ರಾಯ ರೂಪಿಸಬೇಕಿದೆ ಎಂದರು.

ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಜಾನಪದ ದಿನಾಚರಣೆ ದಿನದಂದು ನಾಡಿನ ಸಮಸ್ತ ಜಾನಪದ ಕಲಾವಿದರ ಏಳಿಗೆಗಾಗಿ ಇರುವಂತಹ ನಮ್ಮ ಸಂಸ್ಥೆಯ ಲಾಂಛನ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಜನರ ಬಳಿಗೆ ಜಾನಪದ ಒಯ್ಯಲು ಜನಪದ ಸಿರಿ ಕಂಕಣಬದ್ಧವಾಗಿ ನಿಂತಿದೆ. ಉದ್ದೇಶಗಳು ಹೇಳುವುದಾದರೆ ಉಚಿತವಾಗಿ ಸದಸ್ಯತ್ವವನ್ನು ಪಡೆದುಕೊಂಡು ವೈದ್ಯಕೀಯ ವೆಚ್ಚವನ್ನು ನಮ್ಮ ಟ್ರಸ್ಟ್ ವತಿಯಿಂದ ಪ್ರತಿ ಜನಪದ ಕಲಾವಿದರಿಗೆ ಅಥವಾ ಕಲಾವಿದರ ಮುಖ್ಯಸ್ಥರಿಗೆ ವಾರ್ಷಿಕ ಒಂದು ಕೋಟಿಯ ವಿಮೆ ಒಂದು ಅವಧಿಗೆ, ಜಾನಪದ ಕಲಾವಿದರ ಮನೆಯ ಒಬ್ಬ ವಿದ್ಯಾರ್ಥಿಗೆ ವಾರ್ಷಿಕ ಹತ್ತು ಸಾವಿರ ರೂ. ಗಳ ವಿದ್ಯಾಭ್ಯಾಸದ ಸೌಲಭ್ಯ, ಕಲಾವಿದರು ಸನ್ಮಾರ್ಗದಲ್ಲಿ ನಡೆಯಲು ನಾಡಿ ಶುದ್ಧಿ, ಆತ್ಮಶುದ್ಧಿ, ಭಾವಶುದ್ಧಿಗಳ ಕುರಿತು ನಾಡಿನಾದ್ಯಂತ ಶಿಬಿರಗಳನ್ನು ಏರ್ಪಾಡು, ಸರ್ಕಾರ ಜಾರಿ ತರುವಂತಹ ಯೋಜನೆಗಳನ್ನು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಾನಪದ ಅಕಾಡೆಮಿಯ ಯೋಜನೆಗಳು ಕಟ್ಟಕಡೆಯ ಜನಪದ ಕಲಾವಿದರಿಗೆ ತಲುಪುವಂತೆ ಹಾಗೂ ಸಾಮಾಜಿಕ ಜಾಲತಾಣಗಳಿಂದ ಗಮನಕ್ಕೆ ತರುವಂತೆ ಕಲಾವಿದರೊಟ್ಟಿಗೆ ನೇರ ಸಂಪರ್ಕ ಸಾಧಿಸಿಕೊಂಡು ಮಾಹಿತಿ ಒದಗಿಸುವ ಕೆಲಸ ಮಾಡುವುದು, ಮೈಸೂರು ನಗರದ ಮಾರಶೆಟ್ಟಿ ಹಳ್ಳಿಯಲ್ಲಿ ಮೂರುವರೆ ಎಕರೆ ಭೂಮಿಯನ್ನು ಖರೀದಿ ಮಾಡಿ, ಅಲ್ಲಿ ಜಾನಪದ ಲೋಕಕ್ಕೆ ಹೋಲುವಂತಹ 24 ಗಂಟೆಗಳಲ್ಲೂ ಜಾನಪದ ಕಲಾವಿದರಿಗೆ ತೆರೆದಿರುವಂತಹ ಒಂದು ಸುಂದರ ಜಾನಪದ ಜಗತ್ತು ಕಟ್ಟಲಿಕ್ಕೆ ಅಡಿಗಲ್ಲು ಹಾಕಲು ಯೋಜನೆ ರೂಪಿಸಿದ್ದೇವೆ. ಈ ಎಲ್ಲಾ ಪಂಚರತ್ನ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡಲು ನಾವು ಈಗಾಗಲೇ ತಯಾರಿಯಲ್ಲಿದ್ದೇವೆ ಎಂದು ರಾಜ್ಯಾಧ್ಯಕ್ಷರಾದ ಜರಗನಹಳ್ಳಿ ಕಾಂತರಾಜು ಪ್ರಕಟಣೆಯಲ್ಲಿ ಹೇಳಿದ್ದಾರೆ.

The post ಜಾನಪದ ಕಲಾವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ರಾಯಚೂರು ಜಿಲ್ಲಾಧ್ಯಕ್ಷರಾಗಿ ಶಿವರಾಜ್ ಮೋತಿ ನೇಮಕ appeared first on Karnataka Kahale.

]]>
ಸಿಂಧನೂರು-ಬೆಂಗಳೂರು ಮಧ್ಯೆ ‘ಕಲ್ಯಾಣ ರಥ’ ಐಷರಾಮಿ ಸ್ಲೀಪರ್ ಬಸ್ ಸೇವೆ ಆ.28 ರಿಂದ ಆರಂಭ -ಎಂ.ರಾಚಪ್ಪ https://www.karnatakakahale.com/news/13332 Sat, 26 Aug 2023 17:27:57 +0000 https://www.karnatakakahale.com/?p=13332 ಕಲಬುರಗಿ,ಆ.26:  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ “ಕಲ್ಯಾಣ ರಥ” ಐಷರಾಮಿ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಕಾರ್ಯಾಚರಣೆಗೆ  ಆ. 28 ರಂದು ಸಿಂಧನೂರಿನಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು…

The post ಸಿಂಧನೂರು-ಬೆಂಗಳೂರು ಮಧ್ಯೆ ‘ಕಲ್ಯಾಣ ರಥ’ ಐಷರಾಮಿ ಸ್ಲೀಪರ್ ಬಸ್ ಸೇವೆ ಆ.28 ರಿಂದ ಆರಂಭ -ಎಂ.ರಾಚಪ್ಪ appeared first on Karnataka Kahale.

]]>
ಕಲಬುರಗಿ,ಆ.26:  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ “ಕಲ್ಯಾಣ ರಥ” ಐಷರಾಮಿ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಕಾರ್ಯಾಚರಣೆಗೆ  ಆ. 28 ರಂದು ಸಿಂಧನೂರಿನಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಲಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ತಿಳಿಸಿದ್ದಾರೆ.

ಸಂಸ್ಥೆಗೆ “ಕಲ್ಯಾಣ ರಥ” ಬ್ರ್ಯಾಂಡಿನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಹೊಸದಾಗಿ ಸೇರ್ಪಡೆಯಾಗಿದ್ದು, ರೈಲು ಸೇವೆ ಇಲ್ಲದ ಸಿಂಧನೂರಿನಿಂದ ಆರಂಭಿಕವಾಗಿ ಸೇವೆಗೆ ಇಳಿಸಲಾಗುತ್ತಿದೆ. ತದನಂತರ ಪ್ರದೇಶದ ಇತರೆ ಭಾಗಕ್ಕೂ ಈ ಸೇವೆ ವಿಸ್ತರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಸಿಂಧನೂರು-ಬೆಂಗಳೂರು ನಡುವಿನ ಈ ಐಷರಾಮಿ ಬಸ್ ಪ್ರತಿ ದಿನ ಸಿಂಧನೂರಿನಿಂದ ರಾತ್ರಿ 10 ಗಂಟೆಗೆ ಹೊರಟು ಕಾರಟಗಿ-ಗಂಗಾವತಿ- ಬೂದುಗುಂಪ ಕ್ರಾಸ್-ಹೊಸಪೇಟೆ- ಕೂಡ್ಲಿಗಿ-ಹಿರಿಯೂರು-ತುಮಕೂರು ಮಾರ್ಗವಾಗಿ ಮರುದಿನ ಬೆಂಗಳೂರಿಗೆ 5.30 ಗಂಟೆಗೆ ತಲುಪಲಿದೆ. ಅದೇ ರೀತಿ ಇದೇ ಮಾರ್ಗದಲ್ಲಿ ಬೆಂಗಳೂರಿನಿಂದ ರಾತ್ರಿ 10.15 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5.45 ಗಂಟೆಗೆ ಸಿಂಧನೂರು ತಲುಪಲಿದೆ.                        ಕಲ್ಯಾಣ ರಥದ ವಿಶೇಷತೆ: ‘ಕಲ್ಯಾಣ ರಥ’ ಬ್ಯಾಂಡಿನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಕ್ಲಾಸ್ 40 ಆಸನಗಳ ಈ ಐಷರಾಮಿ ಬಸ್ 350 ಬಿ.ಎಸ್-6 ಇಂಜಿನ್ ಹೊಂದಿದೆ. ಬಸ್ಸಿಗೆ ವಿಶಿಷ್ಟ ಸಸ್ಪೆನ್ಸನ್‍ಗಳನ್ನು ಅಳವಡಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದ್ದು, ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ಗುರುತು ವ್ಯವಸ್ಥೆ, ಮೋಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್, ಲ್ಯಾಪ್ ಟಾಪ್ ಬ್ಯಾಗ್ ಇಡುವ ವ್ಯವಸ್ಥೆ ಇದೆ. ಒಟ್ಟಾರೆಯಾಗಿ ಆರಾಮದಾಯಕ ಮತ್ತು ಸುಖಕರ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ.

—–

The post ಸಿಂಧನೂರು-ಬೆಂಗಳೂರು ಮಧ್ಯೆ ‘ಕಲ್ಯಾಣ ರಥ’ ಐಷರಾಮಿ ಸ್ಲೀಪರ್ ಬಸ್ ಸೇವೆ ಆ.28 ರಿಂದ ಆರಂಭ -ಎಂ.ರಾಚಪ್ಪ appeared first on Karnataka Kahale.

]]>
ನಾಳೆ(ಏ.17) ಮೀರಾಪುರದಲ್ಲಿ ಕರೆಡ್ಡಿ ಶಿವಬಸಮ್ಮರ ಶಿವಗಣಾರಾಧನೆ https://www.karnatakakahale.com/news/11869 Sun, 16 Apr 2023 08:25:43 +0000 https://www.karnatakakahale.com/?p=11869 ರಾಯಚೂರು, ಏ.16:ತಾಲೂಕಿನ ಮೀರಾಪುರ ಗ್ರಾಮದ ಮುಖಂಡ ದಿ. ಕರೆಡ್ಡಿ ಮಹಾದೇವಪ್ಪ ಗೌಡ ಅವರ ಧರ್ಮಪತ್ನಿ ಶ್ರೀಮತಿ ಶಿವ ಬಸಮ್ಮ(೯೦) ಅವರು ಏ. 13 ರಂದು ಗುರುವಾರ ಶಿವೈಕ್ಯ ಆಗಿದ್ದಾರೆ. ಈ ನಿಮಿತ್ತ ಶಿವಗಣಾರಾಧನೆ ಕಾರ್ಯಕ್ರಮವು ಏ.17ರಂದು ಸೋಮವಾರ ಬೆ. 11ಗಂಟೆಗೆ ಮೀರಾಪುರದಲ್ಲಿ…

The post ನಾಳೆ(ಏ.17) ಮೀರಾಪುರದಲ್ಲಿ ಕರೆಡ್ಡಿ ಶಿವಬಸಮ್ಮರ ಶಿವಗಣಾರಾಧನೆ appeared first on Karnataka Kahale.

]]>

ರಾಯಚೂರು, ಏ.16:ತಾಲೂಕಿನ ಮೀರಾಪುರ ಗ್ರಾಮದ ಮುಖಂಡ ದಿ. ಕರೆಡ್ಡಿ ಮಹಾದೇವಪ್ಪ ಗೌಡ ಅವರ ಧರ್ಮಪತ್ನಿ ಶ್ರೀಮತಿ ಶಿವ ಬಸಮ್ಮ(೯೦) ಅವರು ಏ. 13 ರಂದು ಗುರುವಾರ ಶಿವೈಕ್ಯ ಆಗಿದ್ದಾರೆ.
ಈ ನಿಮಿತ್ತ ಶಿವಗಣಾರಾಧನೆ ಕಾರ್ಯಕ್ರಮವು ಏ.17ರಂದು ಸೋಮವಾರ ಬೆ. 11ಗಂಟೆಗೆ ಮೀರಾಪುರದಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ ಪುತ್ರ ಕೆ. ಎಂ. ಗೌಡ ತಿಳಿಸಿದ್ದಾರೆ.
ಬಂದು ಮಿತ್ರರು, ಹಿತೈಷಿಗಳು ಮಾತೃಶ್ರೀ ಶಿವಬಸಮ್ಮ ಅವರ ಐದು ದಿನದ ಧಾರ್ಮಿಕ ವಿಧಿವಿಧಾನ ಕಾರ್ಯಗಳಲ್ಲಿ ಪಾಲ್ಗೊಂಡು ಆತ್ಮಕ್ಕೆ ಶಾಂತಿ ಕೋರಬಹುದಾಗಿದೆ.
*****

The post ನಾಳೆ(ಏ.17) ಮೀರಾಪುರದಲ್ಲಿ ಕರೆಡ್ಡಿ ಶಿವಬಸಮ್ಮರ ಶಿವಗಣಾರಾಧನೆ appeared first on Karnataka Kahale.

]]>
ಸಾಧನೆ ಮಾಡಾಕಿನ್ನೂ ಟೈಂ ಐತಿ…. ಲೇಖನ: ಯಲ್ಲಪ್ಪ ಹಂದ್ರಾಳ್, ಮುಖ್ಯೋಪಾಧ್ಯಯರು, ದೇವದುರ್ಗ https://www.karnatakakahale.com/news/9348 https://www.karnatakakahale.com/news/9348#comments Sun, 04 Sep 2022 17:55:09 +0000 https://www.karnatakakahale.com/?p=9348 ತನ್ನ ವಿದ್ಯಾರ್ಥಿಗಳ ಶ್ರೇಯಸ್ಸನ್ನು ಕಂಡು ಸಂಭ್ರಮಿಸುವ ಸಾವಿರಾರು ಅಧ್ಯಾಪಕರು ನಮ್ಮೊಡನೆ ಇದ್ದಾರೆ. ದೇವದುರ್ಗ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಯಲ್ಲಪ್ಪ ಹಂದ್ರಾಳ್ ಕೂಡಾ ತಮ್ಮ ವಿದ್ಯಾರ್ಥಿಗಳಿಗೆ ಸದಾ ಉತ್ತೇಜನ ನೀಡುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಮ್ಮ ಪ್ರೀತಿಯ…

The post ಸಾಧನೆ ಮಾಡಾಕಿನ್ನೂ ಟೈಂ ಐತಿ…. ಲೇಖನ: ಯಲ್ಲಪ್ಪ ಹಂದ್ರಾಳ್, ಮುಖ್ಯೋಪಾಧ್ಯಯರು, ದೇವದುರ್ಗ appeared first on Karnataka Kahale.

]]>
ತನ್ನ ವಿದ್ಯಾರ್ಥಿಗಳ ಶ್ರೇಯಸ್ಸನ್ನು ಕಂಡು ಸಂಭ್ರಮಿಸುವ ಸಾವಿರಾರು ಅಧ್ಯಾಪಕರು ನಮ್ಮೊಡನೆ ಇದ್ದಾರೆ. ದೇವದುರ್ಗ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಯಲ್ಲಪ್ಪ ಹಂದ್ರಾಳ್ ಕೂಡಾ ತಮ್ಮ ವಿದ್ಯಾರ್ಥಿಗಳಿಗೆ ಸದಾ ಉತ್ತೇಜನ ನೀಡುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಮ್ಮ ಪ್ರೀತಿಯ ಶಿಷ್ಯನ ಕುರಿತು ಬರೆದಿದ್ದಾರೆ…..
🌺💐ಎಲ್ಲರಿಗೂ “ಶಿಕ್ಷಕರ ದಿನಾಚರಣೆಯ ಶುಭಾಶಯಗಳು🌺💐👇🍀

ನಾನು- “ಹಲೋ,”
ಅವನು- ಹಲೋ ಯಾರು?”
ನಾನು- “ನಾ ಯಾರು ಅಂತ ನಿನಗೆ ಗೊತ್ತಾಗುತ್ತೆ. ನೀ ಆರಾಮದೀಯಾ?”
ಅವನು – “ನೀವು ಯಾರು ಅಂತ ಮದ್ಲ ಹೇಳಿ?”
ನಾನು – “ಸಲ್ಪು ಹೈಸ್ಕೂಲ್ ಜೀವನ ನೆನೆಸಿಕೋಪಾ?”
ಅವನು- “ಓಂ ಮೈ ಗಾಡ್! ಸರ್ ನೀವು. ನೀವ್ಯಾಕೆ ಫೋನ್ ಹಚ್ಚಿದ್ರಿ ಸರ್, ನೀವು ಫೋನ್ ಹಚ್ಚಬಾರದಿತ್ತು! ಯಾರು ಕೊಟ್ಟರು ನನ್ನ ನಂಬರ್?”
ನಾನು – “ಯಾಕೋ ಹಿಂಗೆ ಮಾತಾಡ್ತಾ ಇದ್ದೀಯಾ? ಏನೋ ಬೇಜಾರಲ್ಲಿ ಇದ್ದಿಯ? ಏನು ಸಮಾಚಾರ. ಏನು ಸಮಸ್ಯೆ?”
ಅವನು -“ಏನೋ ಇಲ್ಲ ಸರ್. ಆದರೆ ನೀವ್ ಫೋನ್ ಹಚ್ಬಬಾರದಿತ್ತು. ನನಗೆ ತುಂಬಾ ಬೇಜಾರಾತು”
ನಾನು- “ಆಯ್ತು ಬಿಡಪ್ಪ ನಾನು ಫೋನ್ ಇಡ್ತಿನಿ.ಬೈ”
ಅವನು -“ಬೇಡ ಸರ್ ಬೇಡ. ಮಾತಾಡಿ.ಹೇಗಿದ್ದೀರಾ?”
ನಾನು -“ನಾನು ಆರಾಮಿದ್ದೀನಿ.ನೀನೇನ್ ಹೀಗ್ ಮಾತಾಡಿಬಿಟ್ಟಿ?”
ಅವನು – “ಏನಿಲ್ಲ ಸಾರ್. ನಾನು ಒಂದು ಕನಸು ಕಂಡಿದ್ದೆ. ದೊಡ್ಡ ಹುದ್ದೆಯನ್ನು ಪಡೆದು, ನೀವಿದ್ದಲ್ಲಿಗೆ ಹುಡುಕಿಕೊಂಡು ಬಂದು, ಒಂದು ದೊಡ್ಡ ‘ಸೆಲ್ಯೂಟ್’ ಹೊಡೆದು, ಆಶಿರ್ವಾದ ಪಡೆದು ಬರಬೇಕು. ಆಗ ನಿಮ್ಮ ಕಣ್ಣಲ್ಲಿ ಆಗುವ ಖುಷಿಯನ್ನು ನೋಡಬೇಕು. ಈ ಖುಷಿಗೆ,ಸಾಧನೆಗೆ ನೀವೇ ಕಾರಣ ಸರ್ ಅಂತ ಅನಬೇಕು ಅಂತ ಅನ್ಕೊಂಡಿದ್ದೆ ಸರ್. ಆದರ ನೀವು ಈಗಾ ಪೋನ್ ಹಚ್ಚಿಬಿಟ್ಟಿರಿ.”
ನಾನು -“ಇರಲಿ ಬಿಡು. ಈಗಲೂ ಏನಾಗೈತಿ? ಸಾಧಿನೆ ಮಾಡಾಕಿನ್ನೂ ಟೈಂ ಐತಿ. ಈಗೇನ್ ಮಾಡ್ತಾ ಇದ್ದೀಯಾ?”
ಅವನು – ಸರ್ ನಾನೀಗ ಇಂಥಾ ಹುದ್ದೆಯಲ್ಲಿದ್ದೇನೆ. ಆರಾಮಿದ್ದೀನಿ.ಆದರೆ ನೀವು ನನ್ನ ಮೇಲೆ ಯಾವ ಕನಸನ್ನು ಇಟ್ಟುಕೊಂಡು ನನ್ನನ್ನು ಬೆಳೆಸಿದ್ದಿರೋ ಆ ಹುದ್ದೆಯಲ್ಲಿ ಈ ನಿಮ್ಮ ಶಿಷ್ಯ ಇಲ್ಲ ಎಂದು ಹೇಗೆ ಹೇಳಲಿ.ಅದಕ್ಕೇ ಬೇಜಾರು ಸರ್.
ನಾನು-“ಅಯ್ಯೋ! ಬಿಡು. ಫ್ಯಾಮಿಲಿ ಬ್ಯಾಕ್ ಗ್ರೌಂಡ್ ಚೆನ್ನಾಗಿ ಇದ್ದಿದ್ದರೆ ನೀನು ಇಷ್ಟೊತ್ತಿಗಾಗಲೇ ಆ ಹುದ್ದೆಯನ್ನೂ ಪಡೆಯುತ್ತಿದ್ದೆ. ಯಾವ ಕೆಲಸವಾದರೇನು ಖುಷಿಯಾಗಿರಬೇಕು ಅಷ್ಟೇ. ಮನೆಕಡೆ ಎಲ್ಲರನ್ನೂ ಚೆನ್ನಾಗಿ ನೋಡಿಕೋ. ಊರಿನ ನಂಟು ಕಳೆದುಕೊಳ್ಳಬೇಡ. ಸ್ನೇಹಿತರ ಸಂಪರ್ಕವನ್ನು ಕಳೆದುಕೊಳ್ಳಬೇಡ.
ಅವನು -“ಹೌದು ಸರ್.ನಮ್ಮ ಫ್ಯಾಮಿಲಿ ಹಿನ್ನೆಲೆ ನಿಮಗೆ ಗೊತ್ತೇ ಇದೆ ಆದರೂ ಒಂದಿನ ಗೆದ್ದೇಗೆಲ್ಲುತ್ತೇನೆ ಸರ್. ಅಷ್ಟು ಜಿಗುಟುತನವನ್ನು ನೀವು ಆಗಲೇ ಕಲಿಸಿಬಿಟ್ಟಿದ್ದೀರಿ.
ನಾನು-“ಊರಿಗೆ ಹೋಗಿರುತ್ತೀಯಾ?”
ಅವನು-“ಹೌದು ಸರ್. ಊರಿಗೆ ಹೋಗುತ್ತಿರುತ್ತೇನೆ.ಮೊನ್ನೆರ ಹೋಗಿ ಬಂದೆ. ಊರಲ್ಲಿ ಮನೆಯನ್ನು ಹಾಕಿಸಿದ್ದೇನೆ.ಮುಂದಿನ ತಿಂಗಳು ನನ್ನ ಎಂಗೇಜ್ಮೆಂಟ್ ಇದೆ.ದಯವಿಟ್ಟು ಬರಬೇಕು”.
ನಾನು-” ಆಯ್ತು.ಅಡ್ವಾನ್ಸ್ ತಿಳಿಸು.”
ಅವನು-“ಓಕೆ ಸಾರ್ ತಿಳಿಸುವೆ.”
ನಾನು-“ಚೆನ್ನಾಗಿರು. ಎಲ್ಲರೊಟ್ಟಿಗೆ ಇರು. ಖುಷಿಖುಷಿಯಾಗಿರು. ಯಾವುದಾದರೊಂದು ಆಟವನ್ನು ಆಡುತ್ತಿರು.ಅಂದಾಗ ಮಾತ್ರ ಲೈಪ್ ಚೆನ್ನಾಗಿರುತ್ತದೆ.”
ಅವನು-” ತುಂಬಾ ಧನ್ಯವಾದಗಳು ಸರ್.ನಿಮ್ಮ ಆಶಿರ್ವಾದ ಹೀಗೇ ಇರಲಿ”
ನಾನು -” ಅದು ಇದ್ದೇ ಇರುತ್ತದೆ.ನಿನ್ನ ಶ್ರಮವೇ ನಿನ್ನ ಗುರಿಯನ್ನು ತಲುಪಿಸುತ್ತದೆ. ಒಳ್ಳೆಯದಾಗಲಿ”


– ಯಲ್ಲಪ್ಪ ಹಂದ್ರಾಳ, ಮುಖ್ಯ ಗುರು,
ಸರಕಾರಿ‌ ಪ್ರೌಢಶಾಲೆ, ದೇವದುರ್ಗ, ರಾಯಚೂರು ಜಿಲ್ಲಾ
*****

The post ಸಾಧನೆ ಮಾಡಾಕಿನ್ನೂ ಟೈಂ ಐತಿ…. ಲೇಖನ: ಯಲ್ಲಪ್ಪ ಹಂದ್ರಾಳ್, ಮುಖ್ಯೋಪಾಧ್ಯಯರು, ದೇವದುರ್ಗ appeared first on Karnataka Kahale.

]]>
https://www.karnatakakahale.com/news/9348/feed 2