Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಯಾದಗಿರಿ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Mon, 27 May 2024 16:08:53 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಯಾದಗಿರಿ – Karnataka Kahale https://www.karnatakakahale.com 32 32 ಗಜಲ್ ಎಂದರೆ ಪ್ರೇಮದ ಲಾಲಿತ್ಯ -ಹಿರಿಯ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ವರ್ಣನೆ https://www.karnatakakahale.com/news/16402 Mon, 27 May 2024 16:06:35 +0000 https://www.karnatakakahale.com/?p=16402 ಯಾದಗಿರಿ, ಮೇ 27: ಗಜಲ್ ಎಂದರೆ ಪ್ರೇಮದ ಲಾಲಿತ್ಯ, ಕಾವ್ಯದ ರಾಣಿ ಎಂದು ಹಿರಿಯ ಸಾಹಿತಿ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ವರ್ಣಿಸಿದರು. ಜಿಲ್ಲೆಯ ಇಬ್ರಾಹಿಂಪುರ ಗ್ರಾಮದ ಸಾಯಿ ಬಾಬಾ ಮಂದಿರದಲ್ಲಿ ಶಹಾಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಬುದ್ದ…

The post ಗಜಲ್ ಎಂದರೆ ಪ್ರೇಮದ ಲಾಲಿತ್ಯ -ಹಿರಿಯ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ವರ್ಣನೆ appeared first on Karnataka Kahale.

]]>
ಯಾದಗಿರಿ, ಮೇ 27: ಗಜಲ್ ಎಂದರೆ ಪ್ರೇಮದ ಲಾಲಿತ್ಯ, ಕಾವ್ಯದ ರಾಣಿ ಎಂದು ಹಿರಿಯ ಸಾಹಿತಿ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ವರ್ಣಿಸಿದರು.

ಜಿಲ್ಲೆಯ ಇಬ್ರಾಹಿಂಪುರ ಗ್ರಾಮದ ಸಾಯಿ ಬಾಬಾ ಮಂದಿರದಲ್ಲಿ ಶಹಾಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಬುದ್ದ ಬಸವ ಅಂಬೇಡ್ಕರ್ ಜನ್ಮದಿನ ಅಂಗವಾಗಿ ನಡೆದ ಕಾವ್ಯ ಮತ್ತು ಕಥಾ ಕಮ್ಮಟ ಶಿಬಿರದಲ್ಲಿ ಗಜಲ್ ಹಾಗೂ ಹೈಕು ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

ಗಜಲ್ ಆಸಕ್ತಿದಾಯಕ ಕ್ಷೇತ್ರವಾಗಿದೆ. ಗಜಲ್ ಕಾವ್ಯಕ್ಕೆ ಅದರದ್ದೇ ಆದ ದಿವ್ಯ ಚೇತನವಿದೆ. ಮೋಹಕ ಕಾವ್ಯ, ಹೆಂಗರೆಳೆಯ ಪಿಸುನುಡಿ, ಭಾವತರಂಗವೆಂದೆಲ್ಲಾ ಗಜಲ್ ಖ್ಯಾತಿ ಪಡೆದಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ 1980-90 ದಶಕದಲ್ಲಿ ಶಾಂತರಸರು ಹಾಕಿಕೊಟ್ಟ ಗಜಲ್ ಮಾರ್ಗದಲ್ಲಿ ಅನೇಕ ಗಜಲ್ ಕಾರರು ಹುಟ್ಟಿಕೊಂಡಿದ್ದಾರೆ, ಗಜಲ್ ಎಂದರೆ ಆಕಾಶ ಬಳಸಿ ಹಾರಿದ ಹಕ್ಕಿಯ ರೆಕ್ಕೆಯ ಸ್ವತಂತ್ರ, ಕಡಲ ಅಲೆಗಳ ಸರತಿಯ ಓಟದಂತೆ, ಫಕೀರನ ಬಿಳಿ ಗಡ್ಡದ ನಡುವೆ ಇರುವ ಬಿಳಿ ಚಿಟ್ಟೆಯಂತೆ, ಅರಳಿದ ಹೂವಿನ ಸುಗಂಧದಂತೆ, ಅಂತರಾಳದ ನೋವು ತಾಕಿ ಚದುರಿದ ನುಣುಪಾದ ಹೂವಿನ ಭಾವ ಯಾನವಿದ್ದಂತೆ ಎಂದು ತಿಳಿಸಿದರು.
ಗಜಲ್ ರಚಿಸಲು ಬುದ್ಧನ ಕಾರುಣ್ಯವಿರಬೇಕು, ಅಂತರ್ಗತದಲ್ಲಿ ಪ್ರೇಮದ ಸೆಲೆ ಇರಬೇಕು, ನಿರಂತರ ಹಪಹಪಿಸುವ ಕಾವ್ಯದ ಉನ್ಮಾದವಿದ್ದಾಗ ಮಾತ್ರ ಗಜಲ್ ಹುಟ್ಟಲು ಸಾಧ್ಯ, ಗಜಲ್ ವಿಧಗಳಲ್ಲಿ ಅನೇಕರು ಈ ಭಾಗದಲ್ಲಿ ಸಂಕಲನಗಳನ್ನು ಹೊರತಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಹಿರಿಯ ಸಾಹಿತಿಗಳಾದ ಅಮ್ಲಾಯ ಸೈದಾಪುರ, ಡಾ.ಸಂಗಮೇಶ ಹಿರೇಮಠ, ಬಾಬುರಾವ್, ಶ್ರೀಸಾಯಿಬಾಬಾ ಅಣಬಿ, ಗೌಡಪ್ಪಗೌಡ, ಗಜಲ್‌ಗಾರ್ತಿ ಸುವರ್ಣ ರಾಠೋಡ, ಶರಣಗೌಡ ಚಂದಾಪುರ ಉಪಸ್ಥಿತರಿದ್ದರು.
ಕಸಾಪ ತಾಲೂಕಾಧ್ಯಕ್ಷ ರವೀಂದ್ರನಾಥ ಹೊಸಮನಿ, ಸಿ.ಎಸ್.ಭೀಮರಾಯ, ದೇವೆಂದ್ರ ಹೆಗ್ಗಡೆ, ಶಿವಣ್ಣ ಇಜೇರಿ, ಗೋವಿಂದರಾಜ, ಬಾಬುರಾವ ದೊರೆ, ಆಲ್ದಾಳ, ಶರಣಬಸವ, ಶಕುಂತಲಾ ಹಡಗಲಿ, ದೇವಿಂದ್ರಪ್ಪ ಹಡಪದ, ಗುರುಲಿಂಗಪ್ಪ ಸಾಗರ, ಸಾಯಿಬಾಬ ಅಣಬಿ, ಮರೆಪ್ಪ ನಾಟೇಕರ್, ಆನಂದ, ಜ್ಯೋತಿ ದೇವಣಗಾಂವ, ತಿಪ್ಪಣ್ಣ ಕ್ಯಾತನಾಳ, ಸುರೇಶ ಅರುಣಿ ಸೇರಿದಂತೆ ಅನೇಕರಿದ್ದರು.

The post ಗಜಲ್ ಎಂದರೆ ಪ್ರೇಮದ ಲಾಲಿತ್ಯ -ಹಿರಿಯ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ವರ್ಣನೆ appeared first on Karnataka Kahale.

]]>