Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
KUWJ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Mon, 18 May 2026 01:09:07 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg KUWJ – Karnataka Kahale https://www.karnatakakahale.com 32 32 ಮೇ 31ರಂದು ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಕೆಯುಡಬ್ಲೂಜೆ ಪ್ರತಿಭಾ ಪುರಸ್ಕಾರ: ಶಿವಾನಂದ ತಗಡೂರು https://www.karnatakakahale.com/news/22868 Mon, 18 May 2026 01:09:07 +0000 https://www.karnatakakahale.com/?p=22868 ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ)ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮೇ 31 ರಂದು ಭಾನುವಾರ ಚಿಕ್ಕಬಳ್ಳಾಪುರ ಕನ್ನಡ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಚಿಕ್ಕಬಳ್ಳಾಪುರ ಪತ್ರಿಕಾ ಭವನದಲ್ಲಿ ಸಂಘದ…

The post ಮೇ 31ರಂದು ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಕೆಯುಡಬ್ಲೂಜೆ ಪ್ರತಿಭಾ ಪುರಸ್ಕಾರ: ಶಿವಾನಂದ ತಗಡೂರು appeared first on Karnataka Kahale.

]]>

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ)ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮೇ 31 ರಂದು ಭಾನುವಾರ ಚಿಕ್ಕಬಳ್ಳಾಪುರ ಕನ್ನಡ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಚಿಕ್ಕಬಳ್ಳಾಪುರ ಪತ್ರಿಕಾ ಭವನದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗಿದೆ.
ಸಭೆಯಲ್ಲಿ ಮಾತನಾಡಿದ ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಮೋಕ್ಷಗುಂಡಂ ಸರ್.ಎಂ.ವಿಶೇಶ್ವರಯ್ಯ ಜನ್ಮ ಸ್ಥಳ, ನಂದಿ ಬೆಟ್ಟದ ಸೊಬಗು, ದ್ರಾಕ್ಷಿಯ ನಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಆಯೋಜಿಸುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ರಾಜ್ಯ ಸಂಘದಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು ಇದು ರಾಜ್ಯ ಮಟ್ಟದ 6ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದಾಗಿದೆ ಎಂದರು.
ಬೀದರ್‌ನಿಂದ ಚಾಮರಾಜಪೇಟೆಯವರೆಗೂ ಕೊಡುಗು-ಕೋಲಾರದಿಂದ ಹಿಡಿದು ರಾಜ್ಯದ 31 ಜಿಲ್ಲೆಗಳ ಪತ್ರಕರ್ತರ ಮಕ್ಕಳು ಹಾಗೂ ಪೋಷಕರು ಸೇರಿ ಸುಮಾರು 400 ರಿಂದ 500 ಕ್ಕೂ ಹೆಚ್ಚು ಮಂದಿ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪ್ರತಿಭಾ ಪುರಸ್ಕಾರ ಸ್ವೀಕರಿಸಲು ಬರುವ ದೂರದ ಜಿಲ್ಲೆಗಳ ವಿದ್ಯಾರ್ಥಿ ಪೋಷಕರಿಗೆ ಸೂಕ್ತ ವಸತಿ, ಊಟ, ತಿಂಡಿ ಸೌಕರ್ಯ ಮಾಡಲು ಜಿಲ್ಲಾ ಸಂಘಕ್ಕೆ ಸೂಚಿಸಿದ ಅವರು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಿನಿ ರಾಜ್ಯ ಪತ್ರಕರ್ತರ ಸಮ್ಮೇಳನದ ಮಾದರಿಯಲ್ಲಿ ನಡೆಯುವಂತೆ ಸಲಹೆ ನೀಡಿದರು.
ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಆದ್ಯತೆ ನೀಡಬೇಕು, ಜಿಲ್ಲೆಯ ಕಲೆ, ಸಂಸ್ಕೃತಿಯ ಹಿರಿಮೆಯನ್ನು ಪರಿಚಯಿಸುವ ವಸ್ತು ಪ್ರದರ್ಶನ ಆಯೋಜನೆಗೆ ಸಲಹೆ ನೀಡಿ ಒಟ್ಟಾರೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಪತ್ರಕರ್ತರ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಆಯೋಜಿಸಬೇಕು ಎಂದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ರಾಜ್ಯ ಸಂಘದಿಂದ ನಗದು, ಪ್ರಶಸ್ತಿ ಪತ್ರ ಬಹುಮಾನದ ಜೊತೆಗೆ ಸ್ಮರಣಿಕೆ ನೀಡಲಾಗುವುದೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ವಿ.ರವಿಕುಮಾರ್ ಮಾತನಾಡಿ, ರಾಜ್ಯ ಸಂಘದ ನಿರೀಕ್ಷೆಗೂ ಮೀರಿ ಜಿಲ್ಲಾ ಸಂಘವೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಸಂಘಟಿಸಲಿದೆ. ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾ ಸಂಘ ತಾಲೂಕು ಸಂಘಗಳ ಪದಾಧಿಕಾರಿಗಳನ್ನು ಕರೆದು ವಿವಿಧ ಜವಾಬ್ದಾರಿಗಳನ್ನು ನೀಡಲು ಉಪ ಸಮಿತಿಗಳನ್ನು ರಚಿಸಲಾಗುವುದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿ ಪೋಷಕರಿಗೆ ಜಿಲ್ಲೆಯ ಪ್ರಮುಖ ಸ್ಥಳಗಳ ಭೇಟಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ರಾಜ್ಯ ಖಜಾಂಚಿ ವಾಸುದೇವಹೊಳ್ಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ರಾಜ್ಯ ಸಮಿತಿ ಸದಸ್ಯರಾದ ಎನ್.ಚಂದ್ರಶೇಖರ್ ಮತ್ತಿತರರು ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಣಿ ಮಂಡಳಿ ಸದಸ್ಯರು, ವಿವಿಧ ತಾಲೂಕು ಸಂಘಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಕೇಂದ್ರದ ಹಿರಿಯ ಪತ್ರಕರ್ತರು, ನಿಕಟಪೂರ್ವ ಪದಾಧಿಕಾರಿಗಳು ಉಪಸ್ಥಿತರಿದ್ದು, ಪ್ರತಿಭಾ ಪುರಸ್ಕಾರ ಸಮಾರಂಭದ ಯಶಸ್ವಿನ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀಡಿದರು.

The post ಮೇ 31ರಂದು ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಕೆಯುಡಬ್ಲೂಜೆ ಪ್ರತಿಭಾ ಪುರಸ್ಕಾರ: ಶಿವಾನಂದ ತಗಡೂರು appeared first on Karnataka Kahale.

]]>
ಕೆಯುಡಬ್ಲ್ಯುಜೆ ಪ್ರಶಸ್ತಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ: ರವೀಂದ್ರ ತೆಳಗಡೆ https://www.karnatakakahale.com/news/22686 Sun, 05 Apr 2026 04:29:03 +0000 https://www.karnatakakahale.com/?p=22686 ಬಳ್ಳಾರಿ: ಕಳೆದ 19 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನನಗೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪ್ರಕಟಿಸಿರುವ ಈ ವರ್ಷದ ಪ್ರಜಾ ಪ್ರಗತಿ ಪ್ರಶಸ್ತಿ ಕ್ಷೇತ್ರದಲ್ಲಿನ ಸೇವೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಪ್ರಶಸ್ತಿ ಪುರಸ್ಕೃತ ಬಳ್ಳಾರಿಯ  ವಿಜಯ ಕರ್ನಾಟಕ  ಪತ್ರಿಕಾ ಕಚೇರಿಯಲ್ಲಿ…

The post ಕೆಯುಡಬ್ಲ್ಯುಜೆ ಪ್ರಶಸ್ತಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ: ರವೀಂದ್ರ ತೆಳಗಡೆ appeared first on Karnataka Kahale.

]]>

ಬಳ್ಳಾರಿ: ಕಳೆದ 19 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನನಗೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪ್ರಕಟಿಸಿರುವ ಈ ವರ್ಷದ ಪ್ರಜಾ ಪ್ರಗತಿ ಪ್ರಶಸ್ತಿ ಕ್ಷೇತ್ರದಲ್ಲಿನ ಸೇವೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಪ್ರಶಸ್ತಿ ಪುರಸ್ಕೃತ ಬಳ್ಳಾರಿಯ  ವಿಜಯ ಕರ್ನಾಟಕ  ಪತ್ರಿಕಾ ಕಚೇರಿಯಲ್ಲಿ ಮುಖ್ಯ ಉಪ ಸಂಪಾದಕ ರವೀಂದ್ರ ತೆಳಗಡೆ ಅವರು ಹೇಳಿದರು.
ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ   ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.                ಬೆಳಗಾವಿ ಜಿಲ್ಲೆ  ಅಥಣಿ ತಾಲೂಕಿನವರಾದ ತಾವು  ಕರ್ನಾಟಕ ವಿವಿಯಲ್ಲಿ ಅಭ್ಯಾಸಮಾಡಿ. 2007 ರಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡೆ. ಇಲ್ಲಿನ ಸ್ಥಾನಿಕ ಸಂಪಾದಕರಾದ ಗಂಗಾಧರ ಬಂಡಿಹಾಳ್ ಹಾಗು ಸಿಬ್ಬಂದಿ ಸಹಕಾರದಿಂದ ಆಡಳಿತ, ಶಿಕ್ಷಣ ಮೊದಲಾದ ವಿಷಯಗಳ ಕುರಿತು  56 ಲೇಖನಗಳನ್ನು  ಬರೆದು ಪ್ರಕಟಿಸಿದೆ. ಮಾಧ್ಯಮದ  ಮೂಲಕ  ಸಮಾಜಕ್ಕೆ ಸಾಕಷ್ಟು ಕೊಡುಗೆ  ನೀಡುವ ಆಸೆ ನನ್ನದು. ಈ ಪ್ರಶಸ್ತಿ
ನನಗೆ ಮತ್ತಷ್ಟು ಬರೆಯಲು ಪ್ರೋತ್ಸಾಹ ನೀಡಿದೆ ಎಂದು ಹರ್ಷಿಸಿದರು.
ಮುಖ್ಯ ಅತಿಥಿಯಾಗಿದ್ದ ವಿಜಯಕರ್ನಾಟಕ ಬಳ್ಳಾರಿ ಕಚೇರಿಯ ಸ್ಥಾನಿಕ ಸಂಪಾದಕ ಗಂಗಾಧರ ಬಂಡಿಹಾಳ ಅವರು  ಮಾತನಾಡಿ,  ಸಾಮಾನ್ಯವಾಗಿ ಇಂತಹ ಪ್ರಶಸ್ತಿಗಳು ಹೆಚ್ಚಿನದಾಗಿ ವರದಿಗಾರರಿಗೆ ದೊರೆಯುತ್ತವೆ. ಆದರೆ ಕಾನಿಪ ಈಗ  ಸಂಪಾದಕೀಯದ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಗುರುತಿಸಿ ಪ್ರಶಸ್ತಿ  ನೀಡುತ್ತಿರುವುದಯ ಖುಷಿ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ,  ಕಾನಿಪವು ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ತಿಂಗಳ 11, 12 ರಂದು ಬೀದರ್ ನಲ್ಲಿ ನಡೆಯುವ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಿದೆಂದರು.
ಕನ್ನಡ ಪ್ರಭ ಹಿರಿಯ ವರದಿಗಾರ ಕೆ.ಎಂ.ಮಂಜುನಾಥ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ನರಸಿಂಹಮೂರ್ತಿ ಕುಲಕರ್ಣಿ ವೇದಿಕೆಯಲ್ಲಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಬಸವರಾಜ್  ಸ್ವಾಗತಿಸಿ,  ನಿರ್ವಹಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಮರೇಶ್ ಎಲ್.ಕೆ ವಂದಿಸಿದರು.

The post ಕೆಯುಡಬ್ಲ್ಯುಜೆ ಪ್ರಶಸ್ತಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ: ರವೀಂದ್ರ ತೆಳಗಡೆ appeared first on Karnataka Kahale.

]]>
ಬೀದರ್‌ನಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ, ಸಮಿತಿಗಳ ಪೂರ್ವ ಸಿದ್ದತಾ ಸಭೆ ಅರ್ಥಪೂರ್ಣ ಸಮ್ಮೇಳನಕ್ಕೆ ಸರ್ವರು ಕೈ ಜೋಡಿಸಲು ತಗಡೂರು ಕರೆ https://www.karnatakakahale.com/news/22647 Mon, 30 Mar 2026 18:25:30 +0000 https://www.karnatakakahale.com/?p=22647 ಬೀದರ್: ಬಸವಣ್ಣ ನಡೆದಾಡಿದ ನೆಲದಲ್ಲಿ ನಡೆಯುತ್ತಿರುವ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಅರ್ಥಪೂರ್ಣವಾಗಿದೆ ಆಚರಣೆ ಮಾಡುವ ಮೂಲಕ ಇತಿಹಾಸ ಪುಟದಲ್ಲಿ ದಾಖಲೆಯಾಗುವ ಸಮ್ಮೇಳನವನ್ನು ಮಾಡಲು ಸಂಘಟಿತ ಪ್ರಯತ್ನ ನಡೆಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.…

The post ಬೀದರ್‌ನಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ, ಸಮಿತಿಗಳ ಪೂರ್ವ ಸಿದ್ದತಾ ಸಭೆ ಅರ್ಥಪೂರ್ಣ ಸಮ್ಮೇಳನಕ್ಕೆ ಸರ್ವರು ಕೈ ಜೋಡಿಸಲು ತಗಡೂರು ಕರೆ appeared first on Karnataka Kahale.

]]>

ಬೀದರ್: ಬಸವಣ್ಣ ನಡೆದಾಡಿದ ನೆಲದಲ್ಲಿ ನಡೆಯುತ್ತಿರುವ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಅರ್ಥಪೂರ್ಣವಾಗಿದೆ ಆಚರಣೆ ಮಾಡುವ ಮೂಲಕ ಇತಿಹಾಸ ಪುಟದಲ್ಲಿ ದಾಖಲೆಯಾಗುವ ಸಮ್ಮೇಳನವನ್ನು ಮಾಡಲು ಸಂಘಟಿತ ಪ್ರಯತ್ನ ನಡೆಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ವಿವಿಧ ಸಮಿತಿಗಳ ಪೂರ್ವ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೀದರ್ ಪತ್ರಕರ್ತರ ಕೋರಿಕೆ ಮೇರೆಗೆ ಇಲ್ಲಿಗೆ ಸಮ್ಮೇಳನ ನೀಡಲಾಗಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ವಿಧಾನ ಸಭೆ, ವಿಧಾನ ಪರಿಷತ್ ಸಭಾಪತಿಗಳನ್ನು ಹಾಗೂ ಹಿರಿಯ ಪತ್ರಕರ್ತರು ಸೇರಿದಂತೆ ರಾಜ್ಯ ಮಟ್ಟದ ಎಲ್ಲ ಪತ್ರಿಕೆಗಳ ಸಂಪಾದಕರನ್ನು ಸಮ್ಮೇಳನಕ್ಕೆ ಅಹ್ವಾನಿಸಲಾಗಿದೆ ಎಂದರು.
ಎರಡು ದಿನದ ಸಮ್ಮೇಳನದಲ್ಲಿ ಉದ್ಘಾಟನೆ ಮತ್ತು ಸಮಾರೋಪ ಹೊರತುಪಡಿಸಿ, ಇನ್ನುಳಿದಂತೆ ಗೋಷ್ಠಿಗಳು, ಚಿಂತನ-ಮಂಥನ, ಸಂವಾದ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ನಾಡಿನಾದ್ಯಂತೆ ಈಗಾಗಲೇ ಎರಡೂವರೆ ಸಾವಿರ ಪತ್ರಕರ್ತರು ಸಮ್ಮೇಳನಕ್ಕೆ ಬರಲು ನೋಂದಣಿ ಮಾಡಿಕೊಂಡಿದ್ದಾರೆ. ನಾಡಿನ ಪತ್ರಕರ್ತರು ಇಲ್ಲಿ ಬಂದು ಹೋಗುವ ತನಕ ಆತಿಥ್ಯ ನೀಡುವುದು ಸ್ವಾಗತ ಸಮಿತಿ ಜವಬ್ದಾರಿಯಾಗಿರುವ ಕಾರಣ ಎಲ್ಲರೂ ಒಟ್ಟಾಗಿ ಸಮ್ಮೇಳನ ಯಶಸ್ವಿಗೆ ದುಡಿಯಬೇಕು ಎಂದರು.
ಹೊಸ ಜಾಹಿರಾತು ನೀತಿಯಿಂದ ಪತ್ರಿಕೆಗಳ ಸಂಪಾದಕರಿಗೆ ಆಗುತ್ತಿರುವ ತೊಂದರೆ ಬಗೆಹರಿಸಲು ಮುಖ್ಯಮಂತ್ರಿಗಳಿಗೆ ಈಗಾಗಲೆ ಮನವಿ ಸಲ್ಲಿಸಲಾಗಿದ್ದು, ಸಮ್ಮೇಳನ ಸಂದರ್ಭದಲ್ಲೂ ಸಿಎಂಗೆ ಈ ಕುರಿತು ಮನವಿ ಮಾಡುವುದಾಗಿ ಭರವಸೆ ನೀಡಿದರು.
ಸ್ಮರಣ ಸಂಚಿಕೆ ಹಾಗೂ ಕೈಪಿಡಿಗಳನ್ನು ಪ್ರತ್ಯೇಕವಾಗಿ ಹೊರ ತರಲು ನಿರ್ಣಯಿಸಲಾಯಿತು. ವಸತಿ ಸಮಿತಿ, ಸಾರಿಗೆ ಸಮಿತಿಗಳು ಸೇರಿದಂತೆ ಎಲ್ಲ ಸಮಿತಿಗಳ ನಡುವೆಯೂ ಸೌಹಾರ್ದತೆಯ ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದರು. ಛಾಯಾಚಿತ್ರ ಪ್ರದರ್ಶನ ಮತ್ತು ವ್ಯಂಗ್ಯಚಿತ್ರ ಪ್ರದರ್ಶನಗಳು ಅಚ್ಚುಕಟ್ಟಾಗಿ ನಡೆಯಬೇಕು. ಅದಕ್ಕಾಗಿ ಸಿದ್ಧತೆಗಳು ನಡೆಯಬೇಕು ಎಂದರು. ಹಿರಿಯರು ಹಾಗೂ ಮಾಜಿ ಜಿಲ್ಲಾಧ್ಯಕ್ಷರ ಸಲಹಾ ಸಮಿತಿ, ಪ್ರವಾಸ, ಆಹಾರ, ಮೆರವಣಿಗೆ, ವಸ್ತು ಪ್ರದರ್ಶನ ಮಾರಾಟ ಮಳಿಗೆ, ಪ್ರತಿನಿಧಿಗಳ ನೊಂದಣಿ ಹಾಗೂ ಕಿಟ್ ವಿತರಣಾ ಸಮಿತಿಗಳ ತಯಾರಿ ಕುರಿತು ಪೂರ್ವ ಸಿದ್ದತಾ ಸಭೆ ಜರುಗಿತು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ಬೀದರ್ ಪತ್ರಕರ್ತರು ತಮಗೆ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು. ತಗಡೂರು ಅವರಂಥ ರಾಜ್ಯಾಧ್ಯಕ್ಷರು ನಮಗೆ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ. ಜಿಲ್ಲೆಗೆ ದೊರಕಿರುವ 40ನೇ ರಾಜ್ಯ ಸಮ್ಮೇಳನ ಯಶಸ್ವಿಯಾಗಿಸಲು ವೈಮನಸ್ಸು ಬಿಟ್ಟು ಪ್ರತಿಯೊಬ್ಬರ ಸಹಭಾಗಿತ್ವ ಬಹಳ ಮುಖ್ಯ ಎಂದರು.
ನಮ್ಮ ಮನವಿಗೆ ಸ್ಪಂದಿಸಿ ಬೀದರ್‌ಗೆ ಸಮ್ಮೇಳನ ನೀಡಿದಕ್ಕೆ ಧನ್ಯವಾದ ತಿಳಿಸಿದ, ಸಂಘದ ಮಾಜಿ ಜಿಲ್ಲಾಧ್ಯಕ್ಷ ಬಾಬುವಾಲಿ ಮಾತನಾಡಿ, ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಿ ಹಾಗೂ ಹೊಸ ಜಾಹಿರಾತು ನೀತಿ ಬಗೆಹರಿಸಲು ರಾಜ್ಯ ಸಂಘ ಮುಂದಾಗಬೇಕೆಂದರು.
ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಅವರು ವಸತಿ, ಸಾರಿಗೆ, ಆರ್ಥಿಕತೆ ಸೇರಿದಂತೆ ವಿವಿಧ ಸಮಿತಿಗಳ ಹಾಗೂ ಕಾರ್ಯಕ್ರಮದ ತಯಾರಿ ಬಗ್ಗೆ ಸಭೆಗೆ ವಿವರಿಸಿ, ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಮ್ಮ ತಂಡ ಹಗಲು ರಾತ್ರಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸಮ್ಮೇಳನದ ಯಶಸ್ವಿಯಾಗಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಕಾರಂಜಿ, ಬಸವರಾಜ ಕಾಮಶೆಟ್ಟಿ, ಮಾಳಪ್ಪ ಅಡಸಾರೆ ತಿಳಿಸಿದರು.
ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಮಾಜಿ ಜಿಲ್ಲಾಧ್ಯಕ್ಷರಾದ ಸಿದ್ರಾಮಯ್ಯ ಸ್ವಾಮಿ, ಅಶೋಕಕುಮಾರ ಕರಂಜಿ, ಡಿ.ಕೆ ಗಣಪತಿ, ಪತ್ರಕರ್ತರಾದ ಅಪ್ಪಾರಾವ ಸೌದಿ, ಶಶಿ ಪಾಟೀಲ, ಪ್ರಥ್ವಿರಾಜ, ಶಶಿ ಶೆಂಬೆಳ್ಳಿ, ಶಶಿ ಬಂಬುಳಗಿ, ವಿಜಯಕುಮಾರ ಬೆಳ್ದೆ, ದೀಪಕ ಮನ್ನಳ್ಳಿ, ಗೋಪಿಚಂದ್ ತಾಂದಳೆ, ಮಾರೂತಿ ಬಾವಿದೊಡ್ಡಿ, ಶ್ರೀಕಾಂತ ಬಿರಾದಾರ, ನಂದಕುಮಾರ ಕರಂಜೆ, ವಿಜಯಕುಮಾರ ಅಷ್ಟುರೆ, ಅಜಯ ಭೋಸ್ಲೆ, ಬಸವರಾಜ ಪವಾರ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಶಿವಕುಮಾರ ಸ್ವಾಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

The post ಬೀದರ್‌ನಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ, ಸಮಿತಿಗಳ ಪೂರ್ವ ಸಿದ್ದತಾ ಸಭೆ ಅರ್ಥಪೂರ್ಣ ಸಮ್ಮೇಳನಕ್ಕೆ ಸರ್ವರು ಕೈ ಜೋಡಿಸಲು ತಗಡೂರು ಕರೆ appeared first on Karnataka Kahale.

]]>
ದೆಹಲಿ ಯುಎನ್ಐ ಸುದ್ದಿ ಸಂಸ್ಥೆಯ ಮೇಲೆ ದಾಳಿಗೆ ಕೆಯುಡಬ್ಲ್ಯೂಜೆ ಖಂಡನೆ https://www.karnatakakahale.com/news/22597 Sun, 22 Mar 2026 09:38:05 +0000 https://www.karnatakakahale.com/?p=22597 ಬೆಂಗಳೂರು: ದೆಹಲಿಯಲ್ಲಿ ಯುಎನ್ಐ ಸುದ್ದಿ ಸಂಸ್ಥೆಯ ಮೇಲೆ ಪೊಲೀಸರು ನಡೆಸಿರುವ ದಾಳಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ.                                    ಈ ಕ್ರಮವು ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತದ್ದಾಗಿದ್ದು, ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಿಗೂ ವಿರುದ್ಧವಾಗಿದೆ. ಪತ್ರಕರ್ತರ ಖಾಸಗಿ ವಸ್ತುಗಳನ್ನು ತೆಗೆದುಕೊಳ್ಳಲು ಅವಕಾಶ…

The post ದೆಹಲಿ ಯುಎನ್ಐ ಸುದ್ದಿ ಸಂಸ್ಥೆಯ ಮೇಲೆ ದಾಳಿಗೆ ಕೆಯುಡಬ್ಲ್ಯೂಜೆ ಖಂಡನೆ appeared first on Karnataka Kahale.

]]>
ಬೆಂಗಳೂರು: ದೆಹಲಿಯಲ್ಲಿ ಯುಎನ್ಐ ಸುದ್ದಿ ಸಂಸ್ಥೆಯ ಮೇಲೆ ಪೊಲೀಸರು ನಡೆಸಿರುವ ದಾಳಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ.                                    ಈ ಕ್ರಮವು ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತದ್ದಾಗಿದ್ದು, ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಿಗೂ ವಿರುದ್ಧವಾಗಿದೆ.
ಪತ್ರಕರ್ತರ ಖಾಸಗಿ ವಸ್ತುಗಳನ್ನು ತೆಗೆದುಕೊಳ್ಳಲು ಅವಕಾಶ ನೀಡದೆ, ಮಹಿಳೆ ಎನ್ನುವುದನ್ನೂ ಲೆಕ್ಕಿಸದೇ ನಡೆಸಿದ ವರ್ತನೆ ಅಕ್ಷಮ್ಯ ಮತ್ತು ಖಂಡನೀಯ.

ಶಿವಾನಂದ ತಗಡೂರು

ಈ ಘಟನೆ ಮಾಧ್ಯಮಗಳ ಮೇಲೆ ಅನಗತ್ಯ ಒತ್ತಡ ಹೇರಲು ಪ್ರಯತ್ನಿಸಿರುವುದನ್ನು ಸ್ಪಷ್ಟಪಡಿಸುತ್ತದೆ.
ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಆಗ್ರಹಿಸಿದ್ದಾರೆ

The post ದೆಹಲಿ ಯುಎನ್ಐ ಸುದ್ದಿ ಸಂಸ್ಥೆಯ ಮೇಲೆ ದಾಳಿಗೆ ಕೆಯುಡಬ್ಲ್ಯೂಜೆ ಖಂಡನೆ appeared first on Karnataka Kahale.

]]>
ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅನಿಲ್ ಎಚ್.ಎ. ಆಯ್ಕೆ https://www.karnatakakahale.com/news/22555 Mon, 16 Mar 2026 12:08:08 +0000 https://www.karnatakakahale.com/?p=22555 ಚಿಕ್ಕಮಗಳೂರು:  ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-2028 ರ ಸಾಲಿನ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯ ಚುನಾವಣೆ ನಡೆದ ಸಂಧರ್ಭದಲ್ಲಿ ರಾಜ್ಯಕಾರ್ಯಕಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಒಂದು ಹುದ್ದೆ ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದ ಪದಾಧಿಕಾರಿಗಳ…

The post ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅನಿಲ್ ಎಚ್.ಎ. ಆಯ್ಕೆ appeared first on Karnataka Kahale.

]]>

ಚಿಕ್ಕಮಗಳೂರು:  ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-2028 ರ ಸಾಲಿನ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯ ಚುನಾವಣೆ ನಡೆದ ಸಂಧರ್ಭದಲ್ಲಿ ರಾಜ್ಯಕಾರ್ಯಕಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಒಂದು ಹುದ್ದೆ ಅವಿರೋಧವಾಗಿ ಆಯ್ಕೆಯಾಗಿತ್ತು.
ಉಳಿದ ಪದಾಧಿಕಾರಿಗಳ ಹುದ್ದೆಗೆ ಕೆಲ ನಾಮಪತ್ರ ತಿರಸ್ಕೃತವಾಗಿದ್ದರೆ, ಹಲವು ಹುದ್ದೆಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪತ್ರಕರ್ತರ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಜವಬ್ದಾರಿಯನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ, ಕೆಯುಡಬ್ಲ್ಯೂಜೆ ರಾಜ್ಯ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ ಅವರಿಗೆ ನೀಡಿ, ಕೆಯುಡಬ್ಲ್ಯೂಜೆ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು.
ಮುಖ್ಯಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್ ಅವರ ಸಲಹೆಯನ್ನು ಪಡೆದುಕೊಳ್ಳಲಾಗಿತ್ತು.
ಈ ನಿಟ್ಟಿನಲ್ಲಿ ಚಿಕ್ಕಮಗಳೂರಿನಲ್ಲಿ ಸಭೆ ನಡೆಸಿ ಸದಸ್ಯರ ಸಹಮತದ ಮೇರೆಗೆ ಅನಿಲ್ ಎಚ್.ಎ. ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆ KUWJ ಘಟಕದ ನೂತನ ಪದಾಧಿಕಾರಿಗಳು ವಿವರ:

ಅಧ್ಯಕ್ಷರು :
ಅನಿಲ್ ಹೆಚ್. ಎ.
ಪ್ರಧಾನ ಸಂಪಾದಕರು, ಭೂಮಿ ಟಿವಿ
ಚಿಕ್ಕಮಗಳೂರು

ಉಪಾಧ್ಯಕ್ಷರು :
(ಅವಿರೋಧ ಆಯ್ಕೆ)
ಬಿ.ಎನ್. ನಾಗರಾಜ್
ಸಂಪಾದಕರು, ಸತ್ಯಪ್ರಭ
ತರೀಕೆರೆ

ಪ್ರಧಾನ ಕಾರ್ಯದರ್ಶಿ
ಚೇತನ್ ಬಿ.ಪಿ.
ಜಿಲ್ಲಾ ವರದಿಗಾರರು, ವಿಜಯಕರ್ನಾಟಕ
ಚಿಕ್ಕಮಗಳೂರು

ಖಜಾಂಚಿ:
ಅಕ್ಷಯ್ ಕುಮಾರ್
ಸಂಪಾದಕರು, ಪಿತಾಮಹ ದಿನ ಪತ್ರಿಕೆ
ಚಿಕ್ಕಮಗಳೂರು

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು
(ಅವಿರೋಧ ಆಯ್ಕೆ)
ಕಲ್ಯಾಣ್ ಕುಮಾರ್ ಕೆ.ಕೆ.
ಸಂಪಾದಕರು
ಐಸಿರಿ ಪ್ರಾದೇಶಿಕ ದಿನಪತ್ರಿಕೆ
ಚಿಕ್ಕಮಗಳೂರು

The post ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅನಿಲ್ ಎಚ್.ಎ. ಆಯ್ಕೆ appeared first on Karnataka Kahale.

]]>
ಮಾ.29ರಂದು ಬೀದರ್‌ನಲ್ಲಿ ಕೆಯುಡಬ್ಲೂಜೆ ಸರ್ವ ಸದಸ್ಯರ ಸಭೆ https://www.karnatakakahale.com/news/22494 Thu, 05 Mar 2026 15:25:43 +0000 https://www.karnatakakahale.com/?p=22494 ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) 92ನೇ ಸರ್ವ ಸದಸ್ಯರ ಮಹಾಸಭೆಯು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 29ರಂದು ಬೆಳಿಗ್ಗೆ 9.45ಕ್ಕೆ ಝೀರಾ ಕನ್ವೇಷನಲ್ ಹಾಲ್, ನಾವದಗೇರಿ, ಜನವಾಡ ರಸ್ತೆ, ಬೀದರ -585401 ಇಲ್ಲಿ…

The post ಮಾ.29ರಂದು ಬೀದರ್‌ನಲ್ಲಿ ಕೆಯುಡಬ್ಲೂಜೆ ಸರ್ವ ಸದಸ್ಯರ ಸಭೆ appeared first on Karnataka Kahale.

]]>
ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) 92ನೇ ಸರ್ವ ಸದಸ್ಯರ ಮಹಾಸಭೆಯು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 29ರಂದು ಬೆಳಿಗ್ಗೆ 9.45ಕ್ಕೆ ಝೀರಾ ಕನ್ವೇಷನಲ್ ಹಾಲ್, ನಾವದಗೇರಿ, ಜನವಾಡ ರಸ್ತೆ, ಬೀದರ -585401 ಇಲ್ಲಿ ನಡೆಯಲಿದೆ. ಸಂಘದ ಸದಸ್ಯರುಗಳು ಮಹಾಸಭೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The post ಮಾ.29ರಂದು ಬೀದರ್‌ನಲ್ಲಿ ಕೆಯುಡಬ್ಲೂಜೆ ಸರ್ವ ಸದಸ್ಯರ ಸಭೆ appeared first on Karnataka Kahale.

]]>
ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ ಮೀಸಲಿಡಿ: ಮುಖ್ಯಮಂತ್ರಿಗಳಿಗೆ ಕೆಯುಡಬ್ಲೂಜೆ ಆಗ್ರಹ https://www.karnatakakahale.com/news/22470 Tue, 03 Mar 2026 15:28:55 +0000 https://www.karnatakakahale.com/?p=22470 ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಆರೋಗ್ಯ ಸಂಜೀವಿನಿ ಯೋಜನೆಯನ್ನು ಎಲ್ಲಾ ಪತ್ರಕರ್ತರಿಗೂ ವಿಸ್ತರಿಸಬೇಕು. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಒದಗಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಒತ್ತಾಯಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ…

The post ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ ಮೀಸಲಿಡಿ: ಮುಖ್ಯಮಂತ್ರಿಗಳಿಗೆ ಕೆಯುಡಬ್ಲೂಜೆ ಆಗ್ರಹ appeared first on Karnataka Kahale.

]]>
ಸಿಎಂ‌ ಸಿದ್ಧರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಆರೋಗ್ಯ ಸಂಜೀವಿನಿ ಯೋಜನೆಯನ್ನು ಎಲ್ಲಾ ಪತ್ರಕರ್ತರಿಗೂ ವಿಸ್ತರಿಸಬೇಕು. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಒದಗಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಒತ್ತಾಯಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಜಿಲ್ಲಾ ಪತ್ರಕರ್ತರ ಸಂಘಗಳ ಕ್ಷೇಮಾಭಿವೃದ್ಧಿ ನಿಧಿಗೆ ತಲಾ 25 ಲಕ್ಷ ರೂ ಅನುದಾನ ಹಾಗೂ ತಾಲೂಕು ಪತ್ರಿಕಾ ಭವನಗಳಿಗೆ ತಲಾ 10 ಲಕ್ಷ ರೂ. ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.


ಕೋವಿಡ್ ಸಂದರ್ಭದಲ್ಲಿ ಮೃತ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರವನ್ನು ಸರ್ಕಾರದಿಂದ ಸಂತ್ರಸ್ತ ಕುಟುಂಬಗಳಿಗೆ ಕೊಡಿಸಲಾಗಿತ್ತು. ಅದೇ ರೀತಿಯಲ್ಲಿ ವೃತ್ತಿನಿರತ ಪತ್ರಕರ್ತರು ಮೃತಪಟ್ಟಲ್ಲಿ ಸಂತ್ರಸ್ತ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡುವ ಯೋಜನೆಯನ್ನು ಜಾರಿ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಜಿಲ್ಲಾ ಮತ್ತು ತಾಲೂಕು ಮಟ್ಟದ ಪತ್ರಕರ್ತರಿಗೆ ಸೌಲಭ್ಯವಾಗಿ ನಿವೇಶನ/ಮನೆ ನೀಡುವ ಪ್ರಾಧಿಕಾರದಲ್ಲಿ ಬೋರ್ಡ್ ಮತ್ತು ಇತರ ಸಂಘಗಳಲ್ಲಿ ಪತ್ರಕರ್ತರಿಗೆ ಶೇ.5ರಷ್ಟು ಮೀಸಲಿಡಬೇಕು ಎಂದು ವಿನಂತಿಸಿದ್ದಾರೆ.
ಮಂಕುತಿಮ್ಮನ ಕಗ್ಗದ ಖ್ಯಾತಿಯ ಡಿವಿಜಿ ಅವರ ನಾಲ್ವಡಿ ಕೃಷ್ಣರಾಜ ಒಡೆಯರ್ ದೇಣಿಗೆಯಿಂದ ಸಂಸ್ಥಾಪಿತ ಕಾರ್ಯನಿರತ ಪತ್ರಕರ್ತರ ಸಂಘ ಶತಮಾನೋತ್ಸವ ಹೊಸ್ತಿಲಿಗೆ ಕಾಲಿಡುತ್ತಿದೆ. ಅದಕ್ಕಾಗಿ ಡಿವಿಜಿ ಶತಮಾನ ಸಂಭ್ರಮ ಕಾರ್ಯಕ್ರಮವನ್ನು ಪ್ರತಿ ಜಿಲ್ಲೆಯಲ್ಲಿ ಸರ್ಕಾರದಿಂದ ಆಚರಣೆ ಮಾಡಬೇಕು ಎಂದು ವಿನಂತಿಸಿದ್ದಾರೆ.

ಶಿವಾನಂದ ತಗಡೂರು

ಪತ್ರಕರ್ತರ ಸ್ನೇಹಿ ಆಗಿರುವ ತಾವುಗಳು ಕಳೆದ ಎರಡು ಬಜೆಟ್‌ನಲ್ಲಿ ಪತ್ರಕರ್ತರ ಸಂಘದ ಬೇಡಿಕೆಗಳಿಗೆ ಸ್ಪಂದಿಸಿದ್ದೀರಿ. ಈ ಬಾರಿಯೂ ಬಜೆಟ್‌ನಲ್ಲಿ ಸಂಘದ ಬೇಡಿಕೆಗಳನ್ನು ಈಡೇರಿಸಲು ಪತ್ರಕರ್ತರ ಪರವಾಗಿ ಮನವಿ ಮಾಡುತ್ತಿದ್ದೇವೆ. ಈ ಬಗ್ಗೆ ಬಜೆಟ್‌ನಲ್ಲಿ ಸೂಕ್ತ ಅನುದಾನ ಒದಗಿಸಬೇಕು ಎಂದು ಶಿವಾನಂದ ತಗಡೂರು ಅವರು ಮುಖ್ಯಮಂತ್ರಿಗಳನ್ಮು ಕೋರಿದ್ದಾರೆ.

The post ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ ಮೀಸಲಿಡಿ: ಮುಖ್ಯಮಂತ್ರಿಗಳಿಗೆ ಕೆಯುಡಬ್ಲೂಜೆ ಆಗ್ರಹ appeared first on Karnataka Kahale.

]]>
ಕೆಯುಡಬ್ಲೂಜೆ ಮುಂಬಯಿ ಘಟಕ ಪದಾಧಿಕಾರಿಗಳ ಪದಗ್ರಹಣ: ಪತ್ರಕರ್ತರ ಸಂಘಟನೆಗೆ ಹೊಸ ಸ್ವರೂಪ -ಶಿವಾನಂದ ತಗಡೂರು https://www.karnatakakahale.com/news/22454 Mon, 02 Mar 2026 14:41:53 +0000 https://www.karnatakakahale.com/?p=22454 ಮುಂಬಯಿ: ಪತ್ರಕರ್ತರ ವೃತ್ತಿಯೇ ಸವಾಲಿನದ್ದು. ಅದನ್ನು ಧೈರ್ಯ ಮತ್ತು ನಿಷ್ಠೆಯಿಂದ ಎದುರಿಸುವ ಶಕ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು  ತಿಳಿಸಿದರು. ಮುಂಬಯಿ ಅಂಧೇರಿ ಪೂರ್ವದ ಕ್ಲಬ್ ಹೌಸ್‌ನ ಸಭಾಗೃಹದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ…

The post ಕೆಯುಡಬ್ಲೂಜೆ ಮುಂಬಯಿ ಘಟಕ ಪದಾಧಿಕಾರಿಗಳ ಪದಗ್ರಹಣ: ಪತ್ರಕರ್ತರ ಸಂಘಟನೆಗೆ ಹೊಸ ಸ್ವರೂಪ -ಶಿವಾನಂದ ತಗಡೂರು appeared first on Karnataka Kahale.

]]>

ಮುಂಬಯಿ: ಪತ್ರಕರ್ತರ ವೃತ್ತಿಯೇ ಸವಾಲಿನದ್ದು. ಅದನ್ನು ಧೈರ್ಯ ಮತ್ತು ನಿಷ್ಠೆಯಿಂದ ಎದುರಿಸುವ ಶಕ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು  ತಿಳಿಸಿದರು.
ಮುಂಬಯಿ ಅಂಧೇರಿ ಪೂರ್ವದ ಕ್ಲಬ್ ಹೌಸ್‌ನ ಸಭಾಗೃಹದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಮಹಾರಾಷ್ಟ್ರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.            ಪತ್ರಕರ್ತರ ಸಂಘಟನೆ ಕ್ರೀಯಾಶೀಲಗೊಳಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಘಟಿತ ಶಕ್ತಿಯ ಮೂಲಕ ಮಾತ್ರ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ನಮ್ಮದು. ಹೋರಾಟದ ಮೂಲಕವೇ ಹಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗಿದ್ದು, ಸರ್ಕಾರವೂ ಅದಕ್ಕೆ ಸ್ಪಂಧಿಸಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗ ಪತ್ರಕರ್ತರು ಒಗ್ಗೂಡಿ ಕೆಲಸ ಮಾಡಬೇಕು. ನಿಮ್ಮ ಜೊತೆಗೆ ಸದಾ ನಾವಿರುತ್ತೇವೆ ಎಂದು ಹೇಳಿದರು.
ಪತ್ರಕರ್ತರ ಹಕ್ಕುಗಳು, ಭದ್ರತೆ, ಕಲ್ಯಾಣ ಯೋಜನೆಗಳಿಗಾಗಿ ಸಂಘ ಬದ್ಧವಾಗಿ ಕೆಲಸ ಮಾಡುತ್ತಿದೆ. ಹೊರ ನಾಡಿಗೂ ಕೆಯುಡಬ್ಲ್ಯೂಜೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಎಲ್ಲರೂ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ನಮ್ಮ ಸೇವೆ ಮೂಲಕ ಎಷ್ಟು ಜನರ ಮನಸ್ಸನ್ನ ಗೆಲುತ್ತೇವೆ ಎನ್ನುವುದು ಮುಖ್ಯ. ಜನರ ಹೃದಯಗಳನ್ನು ತಲುಪುವುದು, ಸಾಧ್ಯವಾದಷ್ಟು ಜನರ ಕಣ್ಣೀರು ಒರೆಸುವುದು ಮುಖ್ಯ ಆ ಮೂಲಕ ನಮ್ಮ ಬದಕನ್ನು ಸಾರ್ಥಕಗೊಳಿಸಿಕೊಳ್ಳೋಣ. ಸಂಘಟನೆಯ ಮೂಲಕ ಪತ್ರಕರ್ತರಲ್ಲಿನ ಸಂಬಂಧಗಳು ಅನೋನ್ಯವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.


ಡೈರಿ ಬಿಡುಗಡೆ: ಇದೇ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಮಹಾರಾಷ್ಟ್ರ-2026ನೇ ಸಾಲಿನ ಡೈರಿ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕೆಯುಡಬ್ಲೂಜೆ ಮಹಾರಾಷ್ಟ್ರ ರಾಜ್ಯ ಘಟಕದ ನೂತನ ಪದಾಧಿಕಾರಿಗಳಿಗೆ ಚುನಾವಣಾ ಪ್ರಮಾಣ ಪತ್ರವನ್ನು ನೀಡಲಾಯಿತು.
ಅಧಿಕಾರ ಹಸ್ತಾಂತರ: ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಶಿವ ಮೂಡಿಗೆರೆ ಹಾಗೂ ಕೋಶಾಧಿಕಾರಿ ಸದರಾಮ ಎನ್.ಶೆಟ್ಟಿ ಸಂಪದ ಮನೆ ಅವರಿಗೆ ನಿಕಟಪೂರ್ವ ಅಧ್ಯಕ್ಷ ರೋನ್ಸ್ ಬಂಟ್ವಾಳ ಅವರು ಅಧಿಕಾರ ಹಸ್ತಾಂತರಿಸಿದರು.
ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಮಹಾರಾಷ್ಟ್ರ ಘಟಕದ ಚುನಾವಣಾ ಅಧಿಕಾರಿ ಸಿಎಂ ಜಗದೀಶ್ ಬಿ.ಶೆಟ್ಟಿ, ಡಾ.ಜಿ.ಪಿ ಕುಸುಮ, ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದ ಸಂಸ್ಥಾಪಕ ಅಧ್ಯಕ್ಷ ರೋನ್ಸ್ ಬಂಟ್ವಾಳ ಮಾತನಾಡಿದರು.
ಮಹಾರಾಷ್ಟ್ರ ಉಪಾಧ್ಯಕ್ಷ ಶ್ಯಾಮ್ ಎಂ.ಹಂದೆ, ಗೋಪಾಲ ಪೂಜಾರಿ ತ್ರಾಸಿ, ಕಾರ್ಯಕಾರಿ ಸಮಿತಿ ಸದಸ್ಯ ಡಾ.ದಿನೇಶ್ ಎನ್.ಶೆಟ್ಟಿ ರೆಂಜಾಳ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸವಿತಾ ಎಸ್.ಶೆಟ್ಟಿ ಪ್ರಾರ್ಥಿಸಿದರು. ಅನಿತಾ ಪೂಜಾರಿ ತಾಕೋಡೆ ನಿರೂಪಿಸಿದರು.

The post ಕೆಯುಡಬ್ಲೂಜೆ ಮುಂಬಯಿ ಘಟಕ ಪದಾಧಿಕಾರಿಗಳ ಪದಗ್ರಹಣ: ಪತ್ರಕರ್ತರ ಸಂಘಟನೆಗೆ ಹೊಸ ಸ್ವರೂಪ -ಶಿವಾನಂದ ತಗಡೂರು appeared first on Karnataka Kahale.

]]>
ಬೆಂಗಳೂರು ನಗರ ಘಟಕ ಚುನಾವಣೆ 358 ಪತ್ರಕರ್ತರಿಂದ ಮತ ಚಲಾವಣೆ https://www.karnatakakahale.com/news/22399 Sun, 22 Feb 2026 18:01:24 +0000 https://www.karnatakakahale.com/?p=22399 ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಬೆಂಗಳೂರು ನಗರ ಜಿಲ್ಲಾ ಘಟಕದ ಆಡಳಿತ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ 358 ಪತ್ರಕರ್ತ ಮತದಾರರು ಮತದಾನ ಮಾಡಿದರು. ನ್ಯಾಯಲಯದ ಆದೇಶದ ಮೇರೆಗೆ ನಡೆದ ಚುನಾವಣೆಯಲ್ಲಿ ಬೆಳಗ್ಗೆ 9 ರಿಂದ ಮದ್ಯಾಹ್ನ 3…

The post ಬೆಂಗಳೂರು ನಗರ ಘಟಕ ಚುನಾವಣೆ 358 ಪತ್ರಕರ್ತರಿಂದ ಮತ ಚಲಾವಣೆ appeared first on Karnataka Kahale.

]]>

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಬೆಂಗಳೂರು ನಗರ ಜಿಲ್ಲಾ ಘಟಕದ ಆಡಳಿತ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ 358 ಪತ್ರಕರ್ತ ಮತದಾರರು ಮತದಾನ ಮಾಡಿದರು.

ನ್ಯಾಯಲಯದ ಆದೇಶದ ಮೇರೆಗೆ ನಡೆದ ಚುನಾವಣೆಯಲ್ಲಿ ಬೆಳಗ್ಗೆ 9 ರಿಂದ ಮದ್ಯಾಹ್ನ 3 ಗಂಟೆ ತನಕ ಕಂದಾಯ ಭವನದ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಮತದಾನ ನಡೆಯಿತು. ಪತ್ರಕರ್ತ ಸದಸ್ಯರು ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ರಾಜ್ಯ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ವಿಜಯವಾಣಿ ಸಂಪಾದಕರಾದ ಕೆ.ಎನ್.ಚನ್ನೇಗೌಡ, ಡೆಪ್ಯೂಟಿ ಎಡಿಟರ್ ರಾಘವೇಂದ್ರ ಗಣಪತಿ, ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ, ಸುದ್ದಿ ಸಂಪಾದಕ ಚೀ.ಜ.ರಾಜೀವ್, ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್, ಕೆಯುಡಬ್ಲೂೃಜೆ ಮಾಜಿ ಅಧ್ಯಕ್ಷರುಗಳಾದ ಬಿ.ವಿ.ಮಲ್ಲಿಕಾರ್ಜುನಯ್ಯ, ವಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಮಹಿಳಾ ಪತ್ರಕರ್ತೆಯರ ಸಂಘದ ಮಾಜಿ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಸಂಯುಕ್ತ ಕರ್ನಾಟಕ ಸುದ್ದಿ ಸಂಪಾದಕ ಕೆ.ವಿ.ಪರಮೇಶ್, ಟಿವಿ5 ಸಂಸ್ಥೆ ದಶರಥ್ ಅವರು ಸೇರಿದಂತೆ ಹಲವರು ಮತದಾನ ಮಾಡಿದರು.

ಅವಳಿ ಜವಳಿ ಮಕ್ಕಳ ತಾಯಿ ಅರುಣ ಅವರು ಎಳೆಮಕ್ಕಳ ಜೊತೆಗೆ ಬಂದು ಮತದಾನ ಮಾಡಿದರು.

ಕೆಯುಡಬ್ಲ್ಯೂಜೆ ರಾಜ್ಯ ಮುಖ್ಯ ಚುನಾವಣಾಧಿಕಾರಿಯಾದ ಎನ್.ರವಿಕುಮಾರ್ ಅವರ ಉಸ್ತುವಾರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ನಂಜುಂಡಪ್ಪ.ವಿ ಅವರು ಮತದಾನ ಪ್ರಕ್ರಿಯೆ ನಡೆಸಿದರು. ಚುನಾವಣೆ ಶಾಂತಿಯುತವಾಗಿ ನಡೆಯಿತು

The post ಬೆಂಗಳೂರು ನಗರ ಘಟಕ ಚುನಾವಣೆ 358 ಪತ್ರಕರ್ತರಿಂದ ಮತ ಚಲಾವಣೆ appeared first on Karnataka Kahale.

]]>
ಅನಂತ್ ನಾಡಿಗ್‌ರಿಗೆ ಕೆಯುಡಬ್ಲೂಜೆ ಗೌರವ, ಪತ್ರಕರ್ತರಿಗೆ ಸ್ವಾರ್ಥ ಮುಖ್ಯವಾಗಬಾರದು ಸೇವೆಯೇ ಆದ್ಯತೆಯಾಗಬೇಕು:ನಾಡಿಗ್ https://www.karnatakakahale.com/news/22287 Tue, 10 Feb 2026 17:35:36 +0000 https://www.karnatakakahale.com/?p=22287 ಬೆಂಗಳೂರು: ಪತ್ರಕರ್ತರ ವೃತ್ತಿಯಲ್ಲಿ ಎಂದೂ ಸ್ವಾರ್ಥ ಮುಖ್ಯವಾಗಬಾರದು. ಸೇವೆಯೇ ಆದ್ಯತೆಯಾಗಬೇಕು ಎಂದು ಹಿರಿಯ ಪತ್ರಕರ್ತ ಮತ್ತು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಅನಂತ ನಾಡಿಗ್ ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹಿರಿಯ ಪತ್ರಕರ್ತರಿಗೆ ನೀಡುತ್ತಿರುವ ಕೆಯುಡಬ್ಲೂಜೆ ಗೌರವವನ್ನು ತರೀಕೆರೆಯಲ್ಲಿ ಏರ್ಪಡಿಸಿದ್ದ…

The post ಅನಂತ್ ನಾಡಿಗ್‌ರಿಗೆ ಕೆಯುಡಬ್ಲೂಜೆ ಗೌರವ, ಪತ್ರಕರ್ತರಿಗೆ ಸ್ವಾರ್ಥ ಮುಖ್ಯವಾಗಬಾರದು ಸೇವೆಯೇ ಆದ್ಯತೆಯಾಗಬೇಕು:ನಾಡಿಗ್ appeared first on Karnataka Kahale.

]]>

ಬೆಂಗಳೂರು: ಪತ್ರಕರ್ತರ ವೃತ್ತಿಯಲ್ಲಿ ಎಂದೂ ಸ್ವಾರ್ಥ ಮುಖ್ಯವಾಗಬಾರದು. ಸೇವೆಯೇ ಆದ್ಯತೆಯಾಗಬೇಕು ಎಂದು ಹಿರಿಯ ಪತ್ರಕರ್ತ ಮತ್ತು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಅನಂತ ನಾಡಿಗ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹಿರಿಯ ಪತ್ರಕರ್ತರಿಗೆ ನೀಡುತ್ತಿರುವ ಕೆಯುಡಬ್ಲೂಜೆ ಗೌರವವನ್ನು ತರೀಕೆರೆಯಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸ್ವೀಕರಿಸಿ ಮಾತನಾಡಿದರು.
ಹಿರಿಯರಿರಲಿ, ಕಿರಿಯರಿರಲಿ. ನಾವು ಪತ್ರಕರ್ತರಾಗಿ ಸಮಾಜದ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಪ್ರಜ್ಞೆ ಪತ್ರಕರ್ತರಲ್ಲಿ ಇರಬೇಕು. ಸೇವೆ ಮಾಡಬೇಕು ಎನ್ನುವ ಮನೋಭಾವ ಹೃದಯದಲ್ಲಿರಬೇಕು. ಈ ವೃತ್ತಿಗೆ ಬಂದ ಮೇಲೆ ಹಮ್ಮು- ಬಿಮ್ಮಿನಿಂದ ದರ್ಪದ ನಡವಳಿಕೆ ತೋರಿಸುವಂತಾಗಬಾರದು ಎಂದರು.
ಎಪ್ಪತ್ತರ ದಶಕದಲ್ಲಿ ಅಂಚೆ ವಾರ್ತೆ ಮೂಲಕ ಪತ್ರಕರ್ತ ವೃತ್ತಿಗೆ ಬಂದ ನಾನು, ಕನ್ನಡಪ್ರಭ ಪತ್ರಿಕೆಯಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ವರದಿಗಾರನಾಗಿ ಕೆಲಸ ಮಾಡಿರುವುದು ನನ್ನ ಪಾಲಿಗೆ ಸಾರ್ಥಕ ಸೇವೆಯಾಗಿದೆ ಎಂದರು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, 77 ವಸಂತಗಳನ್ನು ಕಂಡಿರುವ ಹಿರಿಯ ಪತ್ರಕರ್ತರಾದ ಅನಂತ್ ನಾಡಿಗೆ ಅವರ ಮನೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಅರಸಿ ಬಂದಿದೆ. ಕೇಳದೆ ಬರದೇ ಪ್ರಶಸ್ತಿಗಳ ಮೌಲ್ಯ ಹೆಚ್ಚು. ಈ ಪ್ರಶಸ್ತಿಯಿಂದಾಗಿ ಅಕಾಡೆಮಿಗೂ ಗೌರವ ಬಂದಿದೆ ಎಂದರು.
ನಾಡಿಗ್ ಅವರು, ಯಾರನ್ನೂ ಎಂದೂ ಕೇಳಿದವರಲ್ಲ. ಪ್ರಶಸ್ತಿಗಳ ಬೆನ್ನು ಹತ್ತಿ ಹೋದವರೂ ಅಲ್ಲ. ತಮ್ಮ ಪಾಡಿಗೆ ತಾವು ಮಾಡುತ್ತಿದ್ದ ಪತ್ರಕರ್ತ ವೃತ್ತಿ ಸೇವೆಗೆ ಪ್ರಶಸ್ತಿ ಸಲ್ಲುತ್ತಿರುವುದು ನಮ್ಮೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದ ಪತ್ರಕರ್ತರನ್ನು ಗುರುತಿಸಿ ಗೌರವಿಸುತ್ತಿರುವುದು ವಿಶೇಷ ಎಂದರು.
ಸಂಘದ ಗೌರವಾಧ್ಯಕ್ಷ ಸುರೇಶ್ ಚಂದ್ರ, ಹಿರಿಯ ಪತ್ರಕರ್ತರಾದ ಸಿದ್ರಾಮಪ್ಪ, ಎಚ್.ಕೆ.ಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು

The post ಅನಂತ್ ನಾಡಿಗ್‌ರಿಗೆ ಕೆಯುಡಬ್ಲೂಜೆ ಗೌರವ, ಪತ್ರಕರ್ತರಿಗೆ ಸ್ವಾರ್ಥ ಮುಖ್ಯವಾಗಬಾರದು ಸೇವೆಯೇ ಆದ್ಯತೆಯಾಗಬೇಕು:ನಾಡಿಗ್ appeared first on Karnataka Kahale.

]]>