ಸಿರುಗುಪ್ಪ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Thu, 16 Apr 2026 02:25:08 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಸಿರುಗುಪ್ಪ – Karnataka Kahale https://www.karnatakakahale.com 32 32 ಪಲ್ಲವ ವೆಂಕಟೇಶ್ ಅವರಿಗೆ ಮಾತೃ ವಿಯೋಗ https://www.karnatakakahale.com/news/22782 Thu, 16 Apr 2026 02:25:08 +0000 https://www.karnatakakahale.com/?p=22782 ಬಳ್ಳಾರಿ, ಏ.15: ರಾಯಚೂರಿನ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ್ (ಪಲ್ಲವ ವೆಂಕಟೇಶ್) ಅವರ ತಾಯಿ ಶ್ರೀಮತಿ ಕೆ. ಈರಮ್ಮ ಅವರು ಸಿರುಗುಪ್ಪ ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ಬುಧವಾರ ನಸುಕಿನ ಜಾವ ನಿಧನರಾಗಿದ್ದಾರೆ.…

The post ಪಲ್ಲವ ವೆಂಕಟೇಶ್ ಅವರಿಗೆ ಮಾತೃ ವಿಯೋಗ appeared first on Karnataka Kahale.

]]>
ಬಳ್ಳಾರಿ, ಏ.15: ರಾಯಚೂರಿನ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ್ (ಪಲ್ಲವ ವೆಂಕಟೇಶ್) ಅವರ ತಾಯಿ ಶ್ರೀಮತಿ ಕೆ. ಈರಮ್ಮ ಅವರು ಸಿರುಗುಪ್ಪ ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ಬುಧವಾರ ನಸುಕಿನ ಜಾವ ನಿಧನರಾಗಿದ್ದಾರೆ.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಈರಮ್ಮ ಅವರಿಗೆ 88 ವರ್ಷವಾಗಿತ್ತು. ಹಿರಿಯ ಪುತ್ರ ಕೆ. ತಿಪ್ಪೇಸ್ವಾಮಿ ಮತ್ತು ಪುತ್ರಿ ಸಿದ್ಧಲಿಂಗಮ್ಮ ಸೇರಿದಂತೆ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಹದಿನೈದು ವರ್ಷಗಳ ಹಿಂದೆ ಪತಿ, ಗ್ರಾಮದ ಹಿರಿಯ ಮುಖಂಡ ಕೆ. ಸಿದ್ಧಲಿಂಗಪ್ಪ ಅವರು ವಿಧಿವಶವಾಗಿದ್ದಾರೆ.
ಅಪಾರ ಬಂಧು ಬಳಗದ ಸಮ್ಮುಖದಲ್ಲಿ ಮಧ್ಯಾಹ್ನ ಚನ್ನಪಟ್ಟಣದ ರುದ್ರಭೂಮಿಯಲ್ಲಿ ಅಂತಿಮ‌ಸಂಸ್ಕಾರ ನೆರವೇರಿತು.
ಹೊಸಪೇಟೆಯ ಎಎಸ್ಐ ದಳವಾಯಿ ಕೆ. ಮಲ್ಲೇಶಪ್ಪ, ಪ್ರಾಚಾರ್ಯ ಡಾ. ಟಿ. ಎಚ್. ಬಸವರಾಜ್, ಸಹಾಯಕ ಪ್ರಾಧ್ಯಾಪಕರಾದ ಡಾ. ಮಹೇಶ್, ಡಾ.‌ಮಲ್ಲಿಕಾರ್ಜುನ್, ಜಿಂದಾಲ್ ಕೆ.‌ಬಸವರಾಜ್, ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಸಂತಾಪ: ಶ್ರೀಮತಿ ಈರಮ್ಮ ಅವರ ನಿಧನಕ್ಕೆ ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ, ಹಿರಿಯ ಸಾಹಿತಿಗಳಾದ ಡಾ. ವೆಂಕಟಯ್ಯ ಅಪ್ಪಗೆರೆ, ಟಿ.ಕೆ.ಗಂಗಾಧರ ಪತ್ತಾರ್, ರಾಯಚೂರಿನ ಪ್ರಗತಿಪರ ರೈತ ಕೆ.‌ಎಂ ಗೌಡ, ಕುರುಗೋಡಿನ ಕೂನಾ ರಾಘವೇಂದ್ರ, ಪತ್ರಕರ್ತ ಸಿ. ಶಿವಾನಂದ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

The post ಪಲ್ಲವ ವೆಂಕಟೇಶ್ ಅವರಿಗೆ ಮಾತೃ ವಿಯೋಗ appeared first on Karnataka Kahale.

]]>
ತಾಳೂರಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ: ಯುವ ಸಮೂಹ ಸ್ವಾಮಿ‌ ವಿವೇಕಾನಂದರ ಆದರ್ಶ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು -ಸಿ.ಮಂಜುನಾಥ https://www.karnatakakahale.com/news/22010 Tue, 13 Jan 2026 18:04:44 +0000 https://www.karnatakakahale.com/?p=22010 ಸಿರುಗುಪ್ಪ, ಜ.13: ವಿದ್ಯಾರ್ಥಿ, ಯುವ ಸಮೂಹ ಸ್ವಾಮಿ‌ ವಿವೇಕಾನಂದರ ಆದರ್ಶ ಚಿಂತನೆ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿ ಕೊಳ್ಳಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ತಿಳಿಸಿದರು. ತಾಲೂಕಿನ ತಾಳೂರು ಸರಕಾರಿ ಪ್ರೌಢಶಾಲೆಯಲ್ಲಿ…

The post ತಾಳೂರಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ: ಯುವ ಸಮೂಹ ಸ್ವಾಮಿ‌ ವಿವೇಕಾನಂದರ ಆದರ್ಶ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು -ಸಿ.ಮಂಜುನಾಥ appeared first on Karnataka Kahale.

]]>

ಸಿರುಗುಪ್ಪ, ಜ.13: ವಿದ್ಯಾರ್ಥಿ, ಯುವ ಸಮೂಹ ಸ್ವಾಮಿ‌ ವಿವೇಕಾನಂದರ ಆದರ್ಶ ಚಿಂತನೆ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿ ಕೊಳ್ಳಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ತಿಳಿಸಿದರು.
ತಾಲೂಕಿನ ತಾಳೂರು ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 163 ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬಾಲ್ಯದಲ್ಲಿಯೇ ವಿವೇಕಾನಂದರು ಏಕಾಗ್ರತೆ, ಅಧ್ಯಯನ ಶೀಲತೆ, ಧೈರ್ಯ, ದೇಶಪ್ರೇಮವನ್ನು ರೂಢಿಸಿ ಕೊಂಡಿದ್ದರಿಂದ ಅದ್ಭುತ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ಸೋಲಿಗೆ ಹೆದರಬೇಡಿ, ಪ್ರಯತ್ನವನ್ನು ಬಿಡಬೇಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅನಂತ ಶಕ್ತಿ ಅಡಗಿದೆ ಎಂಬ ಸ್ವಾಮಿ ವಿವೇಕಾನಂದರ ಸ್ಫೂರ್ತಿಯ ಮಾತುಗಳು ಸಾಮಾನ್ಯರು ಕೂಡಾ ಅಸಾಧ್ಯವನ್ನು ಸಾಧಿಸಲು ಪ್ರೇರಣೆಯಾಗುತ್ತವೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ಬರಹ ಮತ್ತು ಭಾಷಣಗಳಲ್ಲಿ ಯುವ ಸಮೂಹಕ್ಕೆ ಚೈತನ್ಯ ತುಂಬುವ ಶಕ್ತಿ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ‌ ಮುಖ್ಯೋಪಾಧ್ಯಾಯಿನಿ ಗೀತಾ ಸಾಗರ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ರಾಷ್ಟ್ರ ಪ್ರಜ್ಞೆ, ಗುರು ಭಕ್ತಿ, ಶಿಸ್ತು, ಸಂಸ್ಕಾರ ಸಂದೇಶ ನೀಡಿದ್ದಾರೆ.
ವಿದ್ಯಾರ್ಥಿಗಳು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಗುರಿ ಸಾಧಿಸಬೇಕು ಎಂದು‌ ಕಿವಿ‌ಮಾತು ಹೇಳಿದರು.


ರಾಷ್ಟ್ರೀಯ ಯುವ ದಿನಾಚರಣೆಗೆ ಸಾಧಕರನ್ನು ಶಾಲೆಗೆ ಆಹ್ವಾನಿಸಿ ಮಕ್ಕಳಿಗೆ ಪರಿಚಯಿಸಿ ಅವರಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ, ಬಹುಮುಖಿ ಸಿ.ಮಂಜುನಾಥ ಅವರು ಆಗಮಿಸಿ ವಿದ್ಯಾರ್ಥಿಗಳಲ್ಲಿ ಪ್ರೇರಣೆ, ಉತ್ಸಾಹ ತುಂಬಿದ್ದಾರೆ ಎಂದು ಶ್ಲಾಘಿಸಿದರು
ಸನ್ಮಾನ: ಇದೇ ಸಂದರ್ಭದಲ್ಲಿ ಸಿ.ಮಂಜುನಾಥ ಅವರನ್ನು ಮುಖ್ಯೋಪಾಧ್ಯಾಯಿನಿ ಗೀತಾ ಸಾಗರ ಮತ್ತು ಅಧ್ಯಾಪಕ ವೃಂದ
ಸನ್ಮಾನಿಸಿ ಗೌರವಿಸಿದರು.


ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಶಾಂತಮ್ಮ ಹೆಚ್, ಶ್ರೀಕಾಂತ್, ಲಕ್ಷ್ಮಿ ಬಿ.ಕೆ, ಎಂ. ನಾಗಿರೆಡ್ಡಿ, ಬಸವರಾಜ್, ಕರೀಂ ಸಾಬ್ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಮಂಜುನಾಥ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ರಕ್ಷಿತಾ, ವೀಣಾ, ವಿದ್ಯಾಶ್ರೀ, ಮಹಾಲಕ್ಷ್ಮಿ ಮತ್ತು ಸಂಗೀತ ಪ್ರಾರ್ಥಿಸಿದರು. ಶಿಕ್ಷಕ ವಿ. ಶ್ರೀಕಾಂತ್ ವಂದಿಸಿದರು.
—–

The post ತಾಳೂರಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ: ಯುವ ಸಮೂಹ ಸ್ವಾಮಿ‌ ವಿವೇಕಾನಂದರ ಆದರ್ಶ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು -ಸಿ.ಮಂಜುನಾಥ appeared first on Karnataka Kahale.

]]>
ತೆಕ್ಕಲಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರಮಟ್ಟದ ಸಾಧನೆ:  ಖೇಲೊ ಇಂಡಿಯಾ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆ https://www.karnatakakahale.com/news/21953 Sat, 10 Jan 2026 13:43:17 +0000 https://www.karnatakakahale.com/?p=21953 ತೆಕ್ಕಲಕೋಟೆ: ಸ್ಥಳೀಯ ಶ್ರೀಮತಿ ಹೊನ್ನುರಮ್ಮ ದಿ.ಸಿದ್ದಪ್ಪ ಪ್ರಥಮ ದರ್ಜೆ ಕಾಲೇಜಿನ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಮೌನೇಶ.ಡಿ ಕುಸ್ತಿ ಕ್ರೀಡೆಯಲ್ಲಿಉತ್ತಮ ಸಾಧನೆ ಮಾಡುವ ಮೂಲಕ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದಿಂದ ರಾಷ್ಟ್ರೀಯ ಮಟ್ಟದ ಖೇಲೊ ಇಂಡಿಯಾ ಪಂದ್ಯಾವಳಿಗೆ ಆಯ್ಕೆ…

The post ತೆಕ್ಕಲಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರಮಟ್ಟದ ಸಾಧನೆ:  ಖೇಲೊ ಇಂಡಿಯಾ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆ appeared first on Karnataka Kahale.

]]>

ತೆಕ್ಕಲಕೋಟೆ: ಸ್ಥಳೀಯ ಶ್ರೀಮತಿ ಹೊನ್ನುರಮ್ಮ ದಿ.ಸಿದ್ದಪ್ಪ ಪ್ರಥಮ ದರ್ಜೆ ಕಾಲೇಜಿನ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಮೌನೇಶ.ಡಿ ಕುಸ್ತಿ ಕ್ರೀಡೆಯಲ್ಲಿಉತ್ತಮ ಸಾಧನೆ ಮಾಡುವ ಮೂಲಕ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದಿಂದ ರಾಷ್ಟ್ರೀಯ ಮಟ್ಟದ ಖೇಲೊ ಇಂಡಿಯಾ ಪಂದ್ಯಾವಳಿಗೆ ಆಯ್ಕೆ ಆಗಿದ್ದಾನೆ. ಪಂಜಾಬ್‌ ರಾಜ್ಯದ ಚಂಡೀಗಡನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿರಾಜ್ಯದಿಂದ 130 ಸ್ಪರ್ಧೆಗಳು ಭಾಗವಹಿಸಿದ್ದರು.                                            ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿನಡೆದ ಅಂತರ್‌ ಕಾಲೇಜುಗಳ ವಿಶ್ವ ವಿದ್ಯಾಲಯದ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

ಡಾ.ಮಲ್ಲಿಕಾರ್ಜುನ ಮೋಕ

ವಿದ್ಯಾರ್ಥಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಾಂಶುಪಾಲರು, ಹೈದರಬಾದ್‌ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳು ಕ್ರೀಡೆಯಲ್ಲಿಹೆಚ್ಚಿನ ಸಾಧನೆ ಮಾಡಲಿ. ವಿದ್ಯಾರ್ಥಿ ಮೌನೇಶ.ಡಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿಜಯಗಳಿಸಲು ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The post ತೆಕ್ಕಲಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರಮಟ್ಟದ ಸಾಧನೆ:  ಖೇಲೊ ಇಂಡಿಯಾ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆ appeared first on Karnataka Kahale.

]]>
ಸಿರುಗುಪ್ಪ: ಅಬಕಾರಿ ಹೆಡ್ ಕಾನ್ಸ್‌ಟೇಬಲ್ ಎಂ.ಜಿ ರಾಘವೇಂದ್ರ ನಿಧನ https://www.karnatakakahale.com/news/21643 Thu, 18 Dec 2025 11:11:36 +0000 https://www.karnatakakahale.com/?p=21643 ಸಿರುಗುಪ್ಪ, ಡಿ.18: ನಗರದ ಅಬಕಾರಿ ಇಲಾಖೆಯ ತಾಲೂಕು ಕಚೇರಿಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂ ಜಿ. ರಾಘವೇಂದ್ರ(43) ಅವರು ಇಂದು(ಗುರುವಾರ) ಬೆಳಿಗ್ಗೆ ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ತಾಯಿ, ಪತ್ನಿ, ಸಹೋದರ ಸೇರಿದಂತೆ ಅಪಾರ ಬಂಧು‌ಮಿತ್ರರನ್ನು ಅಗಲಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ…

The post ಸಿರುಗುಪ್ಪ: ಅಬಕಾರಿ ಹೆಡ್ ಕಾನ್ಸ್‌ಟೇಬಲ್ ಎಂ.ಜಿ ರಾಘವೇಂದ್ರ ನಿಧನ appeared first on Karnataka Kahale.

]]>

ಸಿರುಗುಪ್ಪ, ಡಿ.18: ನಗರದ ಅಬಕಾರಿ ಇಲಾಖೆಯ ತಾಲೂಕು ಕಚೇರಿಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂ ಜಿ. ರಾಘವೇಂದ್ರ(43) ಅವರು ಇಂದು(ಗುರುವಾರ) ಬೆಳಿಗ್ಗೆ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.
ತಾಯಿ, ಪತ್ನಿ, ಸಹೋದರ ಸೇರಿದಂತೆ ಅಪಾರ ಬಂಧು‌ಮಿತ್ರರನ್ನು ಅಗಲಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಘವೇಂದ್ರರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ ವಿಧಿವಶರಾದರು.
ಮೃತರ ಅಂತಿಮ ಸಂಸ್ಕಾರ ವನ್ನು ಶುಕ್ರವಾರ ಬೆಳಿಗ್ಗೆ ಸಿರುಗುಪ್ಪದ ರುದ್ರಭೂಮಿಯಲ್ಲಿ‌ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 90198 70872 ಅಥವಾ 96116 01158 ನ್ನು ಸಂಪರ್ಕಿಸಲು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
—–

The post ಸಿರುಗುಪ್ಪ: ಅಬಕಾರಿ ಹೆಡ್ ಕಾನ್ಸ್‌ಟೇಬಲ್ ಎಂ.ಜಿ ರಾಘವೇಂದ್ರ ನಿಧನ appeared first on Karnataka Kahale.

]]>
ಸಿರುಗುಪ್ಪದ ಕರೂರಿನಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದ ದನ ಕಾಯೋರ ದೊಡ್ಡಾಟ! https://www.karnatakakahale.com/news/20535 Sun, 31 Aug 2025 17:33:20 +0000 https://www.karnatakakahale.com/?p=20535 ಬಳ್ಳಾರಿ: ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದ ರೆಡ್ಡಿ ಪೇಟೆಯ ಮಠದ ಆವರಣದಲ್ಲಿ ಶ್ರೀ‌ವಿನಾಯಕ ಮಿತ್ರ ಮಂಡಳಿಯಿಂದ ಆಯೋಜಿಸಿದ್ದ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಹಾದೇವ ತಾತ ಕಲಾಸಂಘ ಹಂದ್ಯಾಳು ತಂಡದಿಂದ ದಿ. ಶಂಕರನಾಯ್ಡು ರಚನೆಯ, ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದಲ್ಲಿ ಅಭಿನಯಿಸಿದ…

The post ಸಿರುಗುಪ್ಪದ ಕರೂರಿನಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದ ದನ ಕಾಯೋರ ದೊಡ್ಡಾಟ! appeared first on Karnataka Kahale.

]]>

ಬಳ್ಳಾರಿ: ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದ ರೆಡ್ಡಿ ಪೇಟೆಯ ಮಠದ ಆವರಣದಲ್ಲಿ ಶ್ರೀ‌ವಿನಾಯಕ ಮಿತ್ರ ಮಂಡಳಿಯಿಂದ ಆಯೋಜಿಸಿದ್ದ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಹಾದೇವ ತಾತ ಕಲಾಸಂಘ ಹಂದ್ಯಾಳು ತಂಡದಿಂದ ದಿ. ಶಂಕರನಾಯ್ಡು ರಚನೆಯ, ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದಲ್ಲಿ ಅಭಿನಯಿಸಿದ ದನಕಾಯೋರ ದೊಡ್ಡಾಟ ಹಾಸ್ಯಭರಿತ ನಾಟಕ ನೆರೆದಿದ್ದ ಪ್ರೇಕ್ಷಕರ ಮನ ಸೂರೆಗೊಂಡಿತು.
ಈ ನಾಟಕದಿಂದ ಪ್ರತಿಯೊಬ್ಬರು ಅಕ್ಷರ ಕಲಿಯಬೇಕು ಎಂಬ ಸಂದೇಶವನ್ನು ಜನರಲ್ಲಿ ಮೂಡಿಸಿತು.
ಅಕ್ಷರ ಕಲಿಯಬೇಕು ಎಂಬ ಅರಿವು ಮೂಡಿಸಿದ್ದಲ್ಲದೆ, ಈ ನಾಟಕವನ್ನು ವೀಕ್ಷಿಸಲು ನೆರೆದಿದ್ದ ಜನಸ್ತೋಮವನ್ನು ನಗೆಗಡಲಲ್ಲಿ ತೇಲಿಸಿತು.


ಸಾರಥಿ ಪಾತ್ರದಲ್ಲಿ  ಪುರುಷೋತ್ತಮ ಹಂದ್ಯಾಳ್,  ಗೌಡನ‌ ಪಾತ್ರದಲ್ಲಿ ಬಿ.ನಾಗರಾಜ ರೆಡ್ಡಿ ಕರೂರು, ಗಣಪತಿ ಪಾತ್ರದಲ್ಲಿ ಕಪ್ಪಗಲ್ಲು ಚಂದ್ರಶೇಖರ ಆಚಾರ್, ದುರ್ಯೋಧನ ಪಾತ್ರದಲ್ಲಿ ಅಂಬರೀಶ್ ಹಚ್ಚೊಳ್ಳಿ, ದುಶ್ಯಾಸನ ಪಾತ್ರದಲ್ಲಿ ಪಾರ್ವತೀಶ ಗೆಣಿಕೆಹಾಳ್, ದ್ರೌಪದಿ, ನೃತ್ಯ ಗಾರ್ತಿ ಪಾತ್ರದಲ್ಲಿ ಮೌನೇಶ್ ಕಲ್ಲಳ್ಳಿ, ಭೀಮಸೇನ ಪಾತ್ರದಲ್ಲಿ ಹೊಸಯರಗುಡಿ ಸುಂಕಣ್ಣ, ನಕುಲ, ಸಹದೇವ ಪಾತ್ರದಲ್ಲಿ ಯರ್ರಿಸ್ವಾಮಿ ಆಚಾರ್, ಲಿಂಗಪ್ಪ ಹಂದ್ಯಾಳು, ಕೃಷ್ಣನ ಪಾತ್ರದಲ್ಲಿ ಕುಮಾರಗೌಡ ಅಭಿನಯಿಸಿದರು.
ಎರ್ರಿಸ್ವಾಮಿ ಆಚಾರ್ ಹಾರ್ಮೋನಿಯಂ, ಗಾದಿಲಿಂಗಪ್ಪ ಅಮರಾಪುರ ತಬಲಾ ಸಾಥ್ ನೀಡಿದರು.

The post ಸಿರುಗುಪ್ಪದ ಕರೂರಿನಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದ ದನ ಕಾಯೋರ ದೊಡ್ಡಾಟ! appeared first on Karnataka Kahale.

]]>
ಹಂದ್ಯಾಳ್ ಶ್ರೀ ಮಹಾದೇವ ಕಲಾ ಸಂಘದಿಂದ ನಾಟಕ ಹಬ್ಬ-2025: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವುದು ಅಗತ್ಯ -ಎಚ್.ಕೆ.ಸಿದ್ದಯ್ಯ ಸ್ವಾಮಿ https://www.karnatakakahale.com/news/19988 Fri, 04 Jul 2025 08:48:37 +0000 https://www.karnatakakahale.com/?p=19988 ಬಳ್ಳಾರಿ,ಜು.4: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ನಮ್ಮದಾಗಬೇಕು ಎಂದು ಹಚ್ಚೋಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಎಚ್.ಕೆ.ಸಿದ್ದಯ್ಯ ಸ್ವಾಮಿ ಅವರು ಹೇಳಿದರು. ನಗರದ ಹಂದ್ಯಾಳು ಮಹಾದೇವ ತಾತ ಕಲಾ ಸಂಘ ವತಿಯಿಂದ ಸಿರುಗುಪ್ಪ ತಾಲೂಕಿನ ಕುಡುದರಹಾಳ ಗ್ರಾಮದ…

The post ಹಂದ್ಯಾಳ್ ಶ್ರೀ ಮಹಾದೇವ ಕಲಾ ಸಂಘದಿಂದ ನಾಟಕ ಹಬ್ಬ-2025: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವುದು ಅಗತ್ಯ -ಎಚ್.ಕೆ.ಸಿದ್ದಯ್ಯ ಸ್ವಾಮಿ appeared first on Karnataka Kahale.

]]>

ಬಳ್ಳಾರಿ,ಜು.4: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ನಮ್ಮದಾಗಬೇಕು ಎಂದು ಹಚ್ಚೋಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಎಚ್.ಕೆ.ಸಿದ್ದಯ್ಯ ಸ್ವಾಮಿ ಅವರು ಹೇಳಿದರು.
ನಗರದ ಹಂದ್ಯಾಳು ಮಹಾದೇವ ತಾತ ಕಲಾ ಸಂಘ ವತಿಯಿಂದ ಸಿರುಗುಪ್ಪ ತಾಲೂಕಿನ ಕುಡುದರಹಾಳ ಗ್ರಾಮದ ತಾಯಮ್ಮ ದೇವಿ ಪುಣ್ಯ ಆಶ್ರಮದ ಯಲಿವಾಳು ಸಿದ್ದಯ್ಯ ಸ್ವಾಮಿ ಬಯಲು ರಂಗಮಂದಿರದಲ್ಲಿ ಗುರುವಾರ ಸಂಜೆ ನಡೆದ “ನಾಟಕ ಹಬ್ಬ 2025” ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಡಾಕ್ಟರ್, ಇಂಜಿನಿಯರ್ ಆಗಬೇಕೆನ್ನುವ ಅನೇಕರು ಕನಸು ಕಾಣುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ಯುವಕರಲ್ಲಿ ಕಲೆ ಸಂಸ್ಕೃತಿ ಉಳಿಸುವಲ್ಲಿ ಮಹಾದೇವ ತಾತ ಕಲಾ ಸಂಘವು ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು ಅವರು ಮಾತನಾಡಿ, ಸಂಬಂಧಗಳು ಜೀವನದ ಅವಿಭಾಜ್ಯ ಅಂಗವಾಗಿದ್ದು, ಮಾನಸಿಕ, ಭಾವನಾತ್ಮಕ ಯೋಗಕ್ಷೇಮಕ್ಕೆ ಮತ್ತು ಬದುಕುಳಿಯುವಿಕೆಗೆ ಸಂಬಂಧಗಳು ಬಹಳ ಮುಖ್ಯ ಎಂದು ಹೇಳಿದರು.
ಕುಡುದರಹಾಳ್ ತಾಯಮ್ಮ ದೇವಿ ಪುಣ್ಯ ಆಶ್ರಮದ ಪೀಠಾಧ್ಯಕ್ಷ ಡಾ.ಶಿವಕುಮಾರ್ ತಾತ ಅವರು ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಸಂಬಂಧಗಳು ನಮ್ಮ ಸ್ವಯಂ ಅರಿವು ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದರು.
ಕಾಯಕ್ರಮದಲ್ಲಿ ಕುಮಾರ ಪ್ರಸಾದ್ ಸಂಗೀತ ಗಾಯನ ಪ್ರಸ್ತುತಪಡಿಸಿದರು.

ಬಳಿಕ ಸಿರಿಗೇರಿ ಧಾತ್ರಿ ರಂಗ ಸಂಸ್ಥೆಯ ಕಲಾವಿದರು “ಸಂಬಂಧ” ಎಂಬ ನಾಟಕವನ್ನು ಪ್ರದರ್ಶಿಸಿದರು.


ಈ ಸಂದರ್ಭದಲ್ಲಿ ಕುಡದರಹಾಳು ಗ್ರಾಮದ ಗುತ್ತಿಗೆದಾರರಾದ ಬಿ.ವೆಂಕಟೇಶ, ಮುಖಂಡರಾದ ಕೆ.ಪಿ.ಖಾಸಿಂ ಸಾಬ್, ಹಚ್ಚೋಳ್ಳಿಯ ಜ್ಞಾನರೆಡ್ಡಿ, ಹಚ್ಚೋಳ್ಳಿ ಗ್ರಾಪಂ ಮಾಜಿ ಸದಸ್ಯ ಪಾಲಕ್ಷಿ ಗೌಡ, ಹಚ್ಚೊಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಎಸ್.ಬುಷಪ್ಪ ಸಹುಕಾರ, ಹೆಚ್.ಕೆ.ನಾಗರಾಜ, ಪಿ.ಭಾಷಾ, ಹುಸೇನಪ್ಪ, ಮುದುಕಪ್ಪ, ಬೀರಲಿಂಗ ಸೇರಿದಂತೆ ಮುಂತಾದ ಹಿರಿಯರು ಉಪಸ್ಥಿತರಿದ್ದರು.
ರಂಗ ಕಲಾವಿದ ಅಂಬರೀಶ್ ಹಚ್ಚೊಳಿ ಸ್ವಾಗತಿಸಿದರು. ಜಿ.ಲಿಂಗಪ್ಪ ವಂದಿಸಿದರು.
————

The post ಹಂದ್ಯಾಳ್ ಶ್ರೀ ಮಹಾದೇವ ಕಲಾ ಸಂಘದಿಂದ ನಾಟಕ ಹಬ್ಬ-2025: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವುದು ಅಗತ್ಯ -ಎಚ್.ಕೆ.ಸಿದ್ದಯ್ಯ ಸ್ವಾಮಿ appeared first on Karnataka Kahale.

]]>
ಎನ್‌ಎಸ್‌ಎಸ್‌ ವಿಶೇಷ ಶಿಬಿರಕ್ಕೆ ಚಾಲನೆ:ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಅತ್ಯಗತ್ಯ -ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ https://www.karnatakakahale.com/news/19721 Tue, 10 Jun 2025 10:29:18 +0000 https://www.karnatakakahale.com/?p=19721 ಸಿರುಗುಪ್ಪ;ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು ಎಂದು ತೆಕ್ಕಲಕೋಟೆ ಶ್ರೀಮತಿ ಹೊನ್ನುರಮ್ಮ ದಿ.ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಅವರು ಹೇಳಿದರು. ಸಮೀಪದ ದೇವಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಸೋಮವಾರ ನಡೆದ ಎನ್‌ಎಸ್‌ಎಸ್‌ ವಿಶೇಷ ಶಿಬಿರವನ್ನು ಉದ್ಘಾಟಿಸಿ…

The post ಎನ್‌ಎಸ್‌ಎಸ್‌ ವಿಶೇಷ ಶಿಬಿರಕ್ಕೆ ಚಾಲನೆ:ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಅತ್ಯಗತ್ಯ -ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ appeared first on Karnataka Kahale.

]]>

ಸಿರುಗುಪ್ಪ;ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು ಎಂದು ತೆಕ್ಕಲಕೋಟೆ ಶ್ರೀಮತಿ ಹೊನ್ನುರಮ್ಮ ದಿ.ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ
ಡಾ.ಮಲ್ಲಿಕಾರ್ಜುನ ಮೋಕ ಅವರು ಹೇಳಿದರು.
ಸಮೀಪದ ದೇವಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಸೋಮವಾರ ನಡೆದ ಎನ್‌ಎಸ್‌ಎಸ್‌ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎನ್‌ಎಸ್‌ಎಸ್‌ ವಿಶೇಷ ಶಿಬಿರದಲ್ಲಿ ಭಾಗವಹಿಸುವುದರಿಂದ ಶಿಸ್ತು, ಸಮಯ ಪ್ರಜ್ಞೆ ಹಾಗೂ ಪರಿಸರ ಕಾಳಜಿ ಬೆಳೆಯುತ್ತದೆ. ಹೀಗಾಗಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಎನ್‌ಎಸ್‌ಎಸ್‌
ಘಟಕಕ್ಕೆ ಸೇರಿಕೊಳ್ಳಬೇಕು. ಪ್ರತಿಯೊಬ್ಬರೂ ಗ್ರಾಮದ ಸ್ವಚ್ಛತೆಗೆ ಕೈ ಜೋಡಿಸಬೇಕು. ಸುಂದರ ಪರಿಸರ ನಿರ್ಮಾಣಕ್ಕೆ ಪಣತೊಡಬೇಕು ಎಂದು ತಿಳಿಸಿದರು.
ಮನೆ, ಶಾಲೆ ಹಾಗೂ ಕಾಲೇಜುಗಳಲ್ಲಿಸ್ವಚ್ಛತೆ ಆದ್ಯತೆ ನಿಡಬೇಕು. ಗಿಡ ಹಾಗೂ ಮರಗಳನ್ನು ಬೆಳೆಸಬೇಕು ಎಂದು ಹೇಳಿದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಹೇಶ್ವರಿ ಮಾತನಾಡಿ, ಜೀವನದಲ್ಲಿಒಳ್ಳೆಯ ಕೆಲಸ ಮಾಡಬೇಕು. ಕೆಟ್ಟ ಕೆಲಸ ಮಾಡುವ ಮನಸ್ಸು ಮಾಡಬಾರದು ಎಂದು ಹೇಳಿದರು.
ದೇವಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ.ನಾರಾಯಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿಗುರಿ ಇಟ್ಟುಕೊಳ್ಳಬೇಕು. ಗುರಿ ಸಾಧನೆಗೆ ನಿರಂತರ ಶ್ರಮಿಸಬೇಕು ಎಂದು ಹೇಳಿದರು.
ಸನ್ಮಾನ: ಈ ಸಂದರ್ಭದಲ್ಲಿವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಹೇಶ್ವರಿ ಹಾಗೂ ಕಾಲೇಜಿನ ಎನ್‌ಎಸ್‌ಎಸ್‌ ಬಿ ಘಟಕದ ಶಿಬಿರಾಧಿಕಾರಿ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಎನ್‌ಎಸ್‌ಎಸ್‌ ಎ ಘಟಕದ ಶಿಬಿರಾಧಿಕಾರಿ ಪ್ರೊ. ಎ.ಎಸ್‌.ಬಸವರಾಜ, ವಾಣಿಜ್ಯ ಶಾಸ್ತ್ರ ವಿಭಾಗ ಅತಿಥಿ ಪ್ರಾಧ್ಯಾಪಕಿ ಸವಿತಾ, ಇಂಗ್ಲಿಷ ವಿಭಾಗದ ಅತಿಥಿ ಪ್ರಾಧ್ಯಾಪಕಿ ಸರಸ್ವತಿ, ಅತಿಥಿ ಪ್ರಾಧ್ಯಾಪಕರಾದ ಡಾ.ರಾಜಣ್ಣ, ಡಾ.ಶಿವಣ್ಣ, ಕುಮಾರ ಸ್ವಾಮಿ, ಸುಭಾನ್‌, ಎಚ್‌.ವಿರೇಶ, ಡಾ.ಹಸನೇಪ್ಪ ನಾಯಕ, ಬಸನಗೌಡ, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಪ್ರಾಧ್ಯಾಪಕ ರಾಮಾಂಜನೇಯ ನಿರ್ವಹಿಸಿದರು. ಡಾ.ರಾಜಣ್ಣ ಸ್ವಾಗತಿಸಿದರು. ಸುಭಾನ್‌ ವಂದಿಸಿದರು.
—–

The post ಎನ್‌ಎಸ್‌ಎಸ್‌ ವಿಶೇಷ ಶಿಬಿರಕ್ಕೆ ಚಾಲನೆ:ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಅತ್ಯಗತ್ಯ -ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ appeared first on Karnataka Kahale.

]]>
ತೆಕ್ಕಲಕೋಟೆಯಲ್ಲಿ ಜಾನಪದ ಉತ್ಸವ: ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣ ತೊಡಬೇಕು -ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ https://www.karnatakakahale.com/news/19097 Wed, 09 Apr 2025 15:38:27 +0000 https://www.karnatakakahale.com/?p=19097   ತೆಕ್ಕಲಕೋಟೆ(ಸಿರುಗುಪ್ಪ ತಾ.): ಪ್ರತಿಯೊಬ್ಬರೂ ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣತೊಡಬೇಕು ಎಂದು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಹೇಳಿದರು. ಸ್ಥಳೀಯ ಶ್ರೀಮತಿ ಹೊನ್ನೂರಮ್ಮ ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಶುಕ್ರವಾರ ಆಯೋಜಿಸಿದ್ದ ಜಾನಪದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.     …

The post ತೆಕ್ಕಲಕೋಟೆಯಲ್ಲಿ ಜಾನಪದ ಉತ್ಸವ: ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣ ತೊಡಬೇಕು -ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ appeared first on Karnataka Kahale.

]]>
 

ತೆಕ್ಕಲಕೋಟೆ(ಸಿರುಗುಪ್ಪ ತಾ.): ಪ್ರತಿಯೊಬ್ಬರೂ ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣತೊಡಬೇಕು ಎಂದು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಹೇಳಿದರು.
ಸ್ಥಳೀಯ ಶ್ರೀಮತಿ ಹೊನ್ನೂರಮ್ಮ ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಶುಕ್ರವಾರ ಆಯೋಜಿಸಿದ್ದ ಜಾನಪದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.          ಜಾನಪದ ತಾಯಿ ಇದ್ದಂತೆ ಹಾಗೂ ನಮ್ಮೆಲ್ಲರ ಉಸಿರಾಗಿದೆ. ಗ್ರಾಮೀಣ ಪ್ರದೇಶದಲ್ಲಿಹೆಚ್ಚಾಗಿ ಕಂಡು ಬರುತ್ತದೆ ಎಂದು ತಿಳಿಸಿದರು.                                                   ಜಾನಪದ ಸಂಸ್ಕೃತಿ ನಮ್ಮ ನೆಲೆಯ
ಮಹತ್ವವನ್ನು ತಿಳಿಸುತ್ತದೆ. ಸಮಾಜದಲ್ಲಿಜಾನಪದಕ್ಕೆ ಮಹತ್ವದ ಸ್ಥಾನ ಮಾನ ಇದೆ ಎಂದರು.                  ಜಾನಪದ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಬೆಳಸಬೇಕಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಜಾನಪದ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.


ಕನ್ನಡ ವಿಭಾಗದ ಪ್ರಾಧ್ಯಾಪಕ ರಾಮಾಂಜನೇಯ ಮಾತನಾಡಿ, ಯುವ ಜನಾಂಗ ಜಾನಪದದ ಮಹತ್ವವನ್ನು ಅರಿತುಕೊಳ್ಳಬೇಕು.
ಜೀವನದಲ್ಲಿಜಾನಪದಕ್ಕೆ ಆದ್ಯತೆ ನಿಡಬೇಕು ಎಂದು ಹೇಳಿದರು.
ಎತ್ತಿನ ಬಂಡಿಯಲ್ಲಿಮೆರವಣಿಗೆ: ಕಾಲೇಜಿನ ಆವರಣದಲ್ಲಿಎತ್ತಿನ ಬಂಡಿ ಮೆರವಣಿಗೆ ನಡೆಯಿತು. ಪ್ರಾಧ್ಯಾಪಕರು,
ಪ್ರಾಧ್ಯಾಪಕಿಯರು ಹಾಗೂ ವಿದ್ಯಾರ್ಥಿಗಳು ವಿಶೇಷ ಬಟ್ಟೆ ಧರಿಸಿ, ಗಮನ ಸೆಳೆದರು.


ಜಾನಪದ ನೃತ್ಯ: ಜಾನಪದ ಉತ್ಸವ ನಿಮಿತ್ತ ನಡೆದ ಸಮಾರಂಭದಲ್ಲಿವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಜಾನಪದ ನೃತ್ಯ ಪ್ರದರ್ಶಿಸಿದರು.
ಜಾನಪದ ಹಾಡು ಹಾಗೂ ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಇಂಗ್ಲಿಷ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ತೇಜಶ್ವಿನಿ, ವಾಣಿಜ್ಯ ಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕಿಯರಾದ ಆಶಾಲತಾ, ಸವಿತಾ, ಇಂಗ್ಲಿಷ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ವರಲಕ್ಷ್ಮಿ, ಸರಸ್ವತಿ, ಉಪನ್ಯಾಸಕರಾದ ಡಾ.ರಾಜಣ್ಣ, ಡಾ.ಶಿವಣ್ಣ, ಕುಮಾರ ಸ್ವಾಮಿ, ಸುಭಾನ್‌, ಎಚ್‌.ವೀರೇಶ, ಅಸನೇಪ್ಪ ನಾಯಕ, ಕಾಳಿಂಗ ನಾಯಕ್‌, ಬಸನಗೌಡ ಇದ್ದರು.
—–

The post ತೆಕ್ಕಲಕೋಟೆಯಲ್ಲಿ ಜಾನಪದ ಉತ್ಸವ: ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣ ತೊಡಬೇಕು -ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ appeared first on Karnataka Kahale.

]]>
ಪ್ರತಿಯೊಬ್ಬ ವಿದ್ಯಾರ್ಥಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು – ಕುರುಗೋಡು ಪ್ರಾಂಶುಪಾಲ ಡಾ. ಎಚ್‌.ರಾಮಕೃಷ್ಣ https://www.karnatakakahale.com/news/18929 Fri, 21 Mar 2025 15:08:15 +0000 https://www.karnatakakahale.com/?p=18929 ತೆಕ್ಕಲಕೋಟೆ, ಮಾ.21: ಪ್ರತಿಯೊಬ್ಬ ವಿದ್ಯಾರ್ಥಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು ಎಂದು ಕುರುಗೋಡು ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಚ್‌.ರಾಮಕೃಷ್ಣ  ಅವರು ಹೇಳಿದರು. ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಬಳ್ಳಾರಿ ನೆಹರು ಯುವಕೇಂದ್ರ ಹಾಗೂ…

The post ಪ್ರತಿಯೊಬ್ಬ ವಿದ್ಯಾರ್ಥಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು – ಕುರುಗೋಡು ಪ್ರಾಂಶುಪಾಲ ಡಾ. ಎಚ್‌.ರಾಮಕೃಷ್ಣ appeared first on Karnataka Kahale.

]]>

ತೆಕ್ಕಲಕೋಟೆ, ಮಾ.21: ಪ್ರತಿಯೊಬ್ಬ ವಿದ್ಯಾರ್ಥಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು ಎಂದು ಕುರುಗೋಡು ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಚ್‌.ರಾಮಕೃಷ್ಣ  ಅವರು ಹೇಳಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಬಳ್ಳಾರಿ ನೆಹರು ಯುವಕೇಂದ್ರ ಹಾಗೂ ತೆಕ್ಕಲಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ ಸಹಯೋಗದಲ್ಲಿ ಕಾಲೇಜಿನ ಪ್ರಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಕಸಿತ ಭಾರತ ಯುವ ಸಂಸತ್ತು-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದಲ್ಲಿ ಸದೃಢ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಪ್ರತಿಯೊಬ್ಬ ಯುವಕರು ಮಾನವೀಯ ಮೌಲ್ಯ ಅಳವಡಿಸಿಕೊಂಡು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ನಂಬಿಕೆ, ವಿಶ್ವಾಸದ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಬಳ್ಳಾರಿ ನೆಹರೂ ಯುವಕೇಂದ್ರದ ಅಧಿಕಾರಿ ಮೊಂಟು ಪಟಾರ್‌ ಮಾತನಾಡಿ, ಯುವ ಸಂಸತ್ತು ಸ್ಪರ್ಧೆಯು ವಿದ್ಯಾರ್ಥಿಗಳು ರಾಜಕೀಯ ಚರ್ಚೆಯಲ್ಲಿ
ಪಾಲ್ಗೊಳ್ಳಲು ಅನುಕೂಲಕರವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಹೊಸ ಆಲೋಚನೆಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ರಾಜ್ಯ ಮಕ್ಕಳ ಹಕ್ಕು ಆಯೋಗದ ಮಾಜಿ ಸದಸ್ಯ ಡಾ. ಎಚ್‌ಸಿ.ರಾಘವೇಂದ್ರ ಮಾತನಾಡಿ, ನೈತಿಕ ಮೌಲ್ಯಗಳ ಬೆಳವಣಿಗೆಯನ್ನು ವಿದ್ಯಾರ್ಥಿಗಳು ಯುವ ಸಂಸತ್ತಿನ
ನಾಯಕರಾಗುವ ಮೂಲಕ ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತೆಕ್ಕಲಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಅವರು ಮಾತನಾಡಿ, ವಿಕಸಿತ ಭಾರತ ಯೋಜನೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಎನ್ನೆಸ್ಸೆಸ್‌ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಕುಮಾರ್‌, ಡಾ.ಶಾಂತಲಾ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಎ.ಎಸ್‌.ಬಸವರಾಜ, ಮುರುಳಿಶಂಕರಗೌಡ, ಡಾ.ಶಶಿಕಾಂತ್‌, ಡಾ.ಚಂದ್ರಕಾಂತ್‌ ಹಾಗೂ ಅಧ್ಯಾಪಕರು, ಸ್ಪರ್ಧಾರ್ಥಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
—–

The post ಪ್ರತಿಯೊಬ್ಬ ವಿದ್ಯಾರ್ಥಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು – ಕುರುಗೋಡು ಪ್ರಾಂಶುಪಾಲ ಡಾ. ಎಚ್‌.ರಾಮಕೃಷ್ಣ appeared first on Karnataka Kahale.

]]>
ರಂಗಕರ್ಮಿ ಕೆ ಜಗದೀಶ್ ಹಾಗೂ ಎ.ಎಂ.ಪಿ ವೀರೇಶಸ್ವಾಮಿ ಅವರಿಗೆ ಸಾಹಿತ್ಯ ಸಾಮ್ರಾಟ್ ಚಂಪಾ ಪ್ರಶಸ್ತಿ ಪ್ರದಾನ https://www.karnatakakahale.com/news/16612 Tue, 25 Jun 2024 14:42:07 +0000 https://www.karnatakakahale.com/?p=16612 ಬಳ್ಳಾರಿ, ಜೂ.25:  ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕುಡುದರ ಹಾಳು ಗ್ರಾಮದಲ್ಲಿ ತಾಯಮ್ಮದೇವಿ ಜನಸೇವಾ ಹಾಗೂ ಸಾಂಸ್ಕೃತಿಕ ಕಲಾ ಟ್ರಸ್ಟ್ ಇವರು ಆಯೋಜಿಸಿದ ಪಂಡಿತ ಪಂಚಾಕ್ಷರಿ ಗವಾಯಿ, ಪಂಡಿತ ಪುಟ್ಟರಾಜ ಕವಿ ಗವಾಯಿ,ಹಾಗೂ ಯಲಿವಾಳ ಸಿದ್ಧಯನವರ ಜಾತ್ರಾ ಮಹೋತ್ಸವದ ಅಂಗವಾಗಿ ಕವಿ ಹಾಗೂ…

The post ರಂಗಕರ್ಮಿ ಕೆ ಜಗದೀಶ್ ಹಾಗೂ ಎ.ಎಂ.ಪಿ ವೀರೇಶಸ್ವಾಮಿ ಅವರಿಗೆ ಸಾಹಿತ್ಯ ಸಾಮ್ರಾಟ್ ಚಂಪಾ ಪ್ರಶಸ್ತಿ ಪ್ರದಾನ appeared first on Karnataka Kahale.

]]>

ಬಳ್ಳಾರಿ, ಜೂ.25:  ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕುಡುದರ ಹಾಳು ಗ್ರಾಮದಲ್ಲಿ ತಾಯಮ್ಮದೇವಿ ಜನಸೇವಾ ಹಾಗೂ ಸಾಂಸ್ಕೃತಿಕ ಕಲಾ ಟ್ರಸ್ಟ್ ಇವರು ಆಯೋಜಿಸಿದ ಪಂಡಿತ ಪಂಚಾಕ್ಷರಿ ಗವಾಯಿ, ಪಂಡಿತ ಪುಟ್ಟರಾಜ ಕವಿ ಗವಾಯಿ,ಹಾಗೂ ಯಲಿವಾಳ ಸಿದ್ಧಯನವರ ಜಾತ್ರಾ ಮಹೋತ್ಸವದ ಅಂಗವಾಗಿ ಕವಿ ಹಾಗೂ ಕಲಾವಿದರನ್ನು ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.                  ಬಳ್ಳಾರಿಯ ರಂಗಕರ್ಮಿ,, ಸಾಹಿತಿ ಕೆ ಜಗದೀಶ್ ಹಾಗೂ ರಂಗ ಕಲಾವಿದ, ಕವಿ  ಎ.ಎಂ.ಪಿ ವೀರೇಶಸ್ವಾಮಿ ಅವರಿಗೆ ಸಾಹಿತ್ಯ ಸಾಮ್ರಾಟ್ ಚಂಪಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.                                                ಈ ಕಾರ್ಯಕ್ರಮದಲ್ಲಿ ಸಿರುಗುಪ್ಪ ಮಾಜಿ ಎಂ.ಎಲ್ ಎ ಚಂದ್ರಯ್ಯ ಸ್ವಾಮಿ,  ತಾಯಿಮ್ಮ ದೇವಿ ಕಲಾ ಟ್ರಸ್ಟ್  ಅದ್ಯಕ್ಷ ಡಾ ಶಿವಕುಮಾರ ತಾತ ಹಾಗೂ ಗ್ರಾಮ ಪಂಚಾಯತಿ ಅದ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.

The post ರಂಗಕರ್ಮಿ ಕೆ ಜಗದೀಶ್ ಹಾಗೂ ಎ.ಎಂ.ಪಿ ವೀರೇಶಸ್ವಾಮಿ ಅವರಿಗೆ ಸಾಹಿತ್ಯ ಸಾಮ್ರಾಟ್ ಚಂಪಾ ಪ್ರಶಸ್ತಿ ಪ್ರದಾನ appeared first on Karnataka Kahale.

]]>