Sports – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Tue, 17 Feb 2026 14:57:10 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg Sports – Karnataka Kahale https://www.karnatakakahale.com 32 32 ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟನೆ: ನೌಕರರ ಪ್ರಾಮಾಣಿಕ ಕರ್ತವ್ಯದಿಂದ ಸರ್ಕಾರಕ್ಕೆ ಗೌರವ -ಶಾಸಕ‌ ನಾರಾ ಭರತ್ ರೆಡ್ಡಿ https://www.karnatakakahale.com/news/22344 Tue, 17 Feb 2026 14:54:53 +0000 https://www.karnatakakahale.com/?p=22344 ಬಳ್ಳಾರಿ,ಫೆ.17:  ಸರ್ಕಾರಿ ನೌಕರರ ಪ್ರಾಮಾಣಿಕ ಕರ್ತವ್ಯದಿಂದ ರಾಜ್ಯ ಸರ್ಕಾರಕ್ಕೆ ಗೌರವ ಸಂದಾಯವಾಗುತ್ತದೆ. ನೌಕರರು ‘ಸರ್ಕಾರಿ ಸೇವೆ-ದೇವರ ಸೇವೆ” ಎಂದು ಭಾವಿಸಿ ನಿಸ್ವಾರ್ಥ ಸೇವೆ ನೀಡುವ ಮೂಲಕ ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ಸೇವೆ ಒದಗಿಸಬೇಕು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ…

The post ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟನೆ: ನೌಕರರ ಪ್ರಾಮಾಣಿಕ ಕರ್ತವ್ಯದಿಂದ ಸರ್ಕಾರಕ್ಕೆ ಗೌರವ -ಶಾಸಕ‌ ನಾರಾ ಭರತ್ ರೆಡ್ಡಿ appeared first on Karnataka Kahale.

]]>

ಬಳ್ಳಾರಿ,ಫೆ.17:  ಸರ್ಕಾರಿ ನೌಕರರ ಪ್ರಾಮಾಣಿಕ ಕರ್ತವ್ಯದಿಂದ ರಾಜ್ಯ ಸರ್ಕಾರಕ್ಕೆ ಗೌರವ ಸಂದಾಯವಾಗುತ್ತದೆ. ನೌಕರರು ‘ಸರ್ಕಾರಿ ಸೇವೆ-ದೇವರ ಸೇವೆ” ಎಂದು ಭಾವಿಸಿ ನಿಸ್ವಾರ್ಥ ಸೇವೆ ನೀಡುವ ಮೂಲಕ ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ಸೇವೆ ಒದಗಿಸಬೇಕು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಳ್ಳಾರಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸರ್ಕಾರಿ ಭವನಕ್ಕೆ ಸರ್ಕಾರದ ಭೂಮಿ ಇಲ್ಲ ಎಂಬ ಬೇಡಿಕೆಗೆ ಸ್ಪಂದಿಸಿದ ಅವರು, ನಗರ ವ್ಯಾಪ್ತಿಯಲ್ಲಿ ಜಾಗ ಪಡೆಯಬೇಕೆಂದರೆ ಈ ಕುರಿತು ಕ್ಯಾಬಿನೆಟ್ ನಲ್ಲಿ ಚರ್ಚಿಸಬೇಕಾಗುತ್ತದೆ. ಹಾಗಾಗಿ ನಗರದಲ್ಲಿ ಸರ್ಕಾರಿ ಭೂಮಿ ಗುರುತಿಸಿ ರೂಪುರೇಷೆ ಸಿದ್ದಪಡಿಸಿ ನೀಡಿದರೆ, ಮುಂದಿನ ಕ್ರಮಕ್ಕಾಗಿ ಅಗತ್ಯ ಸಹಕಾರ ಒದಗಿಸಲಾಗುವುದು ಎಂದರು.
ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್) ಹಳೆ ಪಿಂಚಣಿ ಯೋಜನೆಗೆ (ಒಪಿಎಸ್) ಮರಳಿ ಜಾರಿಗೊಳಸಬೇಕೆಂಬ ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಬೇಡಿಕೆಯಾಗಿದ್ದು, ಈಗಾಗಲೇ ಮುಖ್ಯಮಂತ್ರಿಯವರು ದೇಶದಲ್ಲಿ ಜಾರಿಗೊಳಿಸಿರುವ 4 ರಾಜ್ಯಗಳಿಗೆ ಅಧ್ಯಯನ ತಂಡವು ಕಳುಹಿಸಿದ್ದು, ಅವರು ನೀಡುವ ವರದಿಯನ್ನಾಧಾರಿಸಿ ಕಾನೂನು ಚೌಕಟ್ಟಿನಲ್ಲಿ ಜಾರಿಗೊಳಿಸಲು ಮಾತುಕತೆ ನಡೆದಿದೆ ಎಂದು ತಿಳಿಸಿದ ಅವರು, ರಾಜ್ಯ ಸರ್ಕಾರವು ಮಹಿಳಾ ನೌಕರರಿಗೆ ವರ್ಷದ 12 ದಿನ ಋತುಚಕ್ರ ರಜೆ ಘೋಷಿಸಿದ್ದು, ಸರ್ಕಾರಕ್ಕೆ ಭರಪೂರ ಅಭಿನಂದನೆ ಸಲ್ಲಿದೆ ಎಂದು ಹೇಳಿದರು.


ಸರ್ಕಾರಿ ನೌಕರರು ತಮ್ಮ ಒತ್ತಡ ಜೀವನದಲ್ಲಿಯೂ ಆರೋಗ್ಯ ಸದೃಢವಾಗಿಟ್ಟುಕೊಳ್ಳಬೇಕು. ತಮ್ಮ ಕುಟುಂಬಗಳಿಗೆ ಸಮಯದ ಆದ್ಯತೆ ನೀಡಬೇಕು. ಕ್ರೀಡೆಗಳಲ್ಲಿ ಭಾಗವಹಿಸಬೇಕು. ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಬಳ್ಳಾರಿಯಲ್ಲಿ ಆಯೋಜಿಸಲಾಗುವುದು ಎಂದು ಹೇಳಿದರು.
ಮೇನಲ್ಲಿ ಕಸಾಪ ಸಮ್ಮೇಳನ ಆಯೋಜನೆಗೆ ಚಿಂತನೆ:
ಬಳ್ಳಾರಿಯಲ್ಲಿ ಇದೇ ಮೇ ತಿಂಗಳಿನಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚನೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ಆಯೋಜನೆ ಒಳಗೊಂಡು ಕಾರ್ಯಕ್ರಮ ಯಶಸ್ವಿಗೆ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಕೈಜೋಡಿಸಬೇಕು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬಳ್ಳಾರಿ ಜಿಲ್ಲಾ ಶಾಖೆ ಜಿಲ್ಲಾಧ್ಯಕ್ಷ (ಪ್ರಭಾರಿ) ಡಾ.ಸದಾನಂದ ನೆಲ್ಕುದ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ- ಮಾನಸಿಕ ಬಲವರ್ಧನೆಗೆ ದೇಹ ಸಂಯಮಿಸುತ್ತದೆ. ಇದರ ಜೊತೆಗೆ ಶಿಸ್ತು- ಸಂಯಮ ಕಲಿಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ನೌಕರರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ದಿನನಿತ್ಯದ ಒತ್ತಡದ ಬದುಕಿನಲ್ಲಿ ವಿರಮಿತರಾಗಲು ಎರಡು ದಿನಗಳ ಕಾಲ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕ್ರೀಡಾ ಮನೋಭಾವನೆಯಿಂದ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಸನ್ಮಾನ: ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಡಾ. ಶಿವಲಿಂಗಪ್ಪ ಹಂದ್ಯಾಳ್, ಶಾಂತಮ್ಮ ಛಲವಾದಿ, ಶೇಕ್ಷಾವಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ. ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್. ಬಸರೆಡ್ಡಿ, ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಡಾ. ಎಂ.ಟಿ. ಮಲ್ಲೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ, ಅಬಕಾರಿ ಇಲಾಖೆಯ ಅಧೀಕ್ಷಕ ಅನೀಲ್ ಕುಮಾರ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲಾ ಶಾಖೆಯ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು ಹಾಗೂ ಸರ್ಕಾರಿ ನೌಕರರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಕಂಪ್ಲಿ, ಕುರುಗೋಡು, ಸಂಡೂರು, ಸಿರುಗುಪ್ಪ ಮತ್ತು ಬಳ್ಳಾರಿ ತಾಲ್ಲೂಕುಗಳಿಂದ ಭಾಗವಹಿಸಲು ಆಗಮಿಸಿದ್ದ ಸರ್ಕಾರಿ ನೌಕರರಿಂದ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ಕ್ರೀಡಾಜ್ಯೋತಿ ಸ್ವೀಕರಿಸಿ, ಕ್ರೀಡಾ ಧ್ವಜಾರೋಹಣ ನೆರವೇರಿಸಲಾಯಿತು.
ಬಳಿಕ ಜಿಲ್ಲಾ ಕ್ರೀಡಾಂಗಣದಲ್ಲಿ ಹೊರಾಂಗಣ, ಒಳಾಂಗಣದಲ್ಲಿ ವಿವಿಧ ವಿಭಾಗದ ಕ್ರೀಡೆಗಳು ನಡೆದರೆ, ಮಹರ್ಷಿ ವಾಲ್ಮೀಕಿ ಭವನದಲ್ಲಿ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮಗಳು ನಡೆದವು.
—–

The post ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟನೆ: ನೌಕರರ ಪ್ರಾಮಾಣಿಕ ಕರ್ತವ್ಯದಿಂದ ಸರ್ಕಾರಕ್ಕೆ ಗೌರವ -ಶಾಸಕ‌ ನಾರಾ ಭರತ್ ರೆಡ್ಡಿ appeared first on Karnataka Kahale.

]]>
ತೆಕ್ಕಲಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರಮಟ್ಟದ ಸಾಧನೆ:  ಖೇಲೊ ಇಂಡಿಯಾ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆ https://www.karnatakakahale.com/news/21953 Sat, 10 Jan 2026 13:43:17 +0000 https://www.karnatakakahale.com/?p=21953 ತೆಕ್ಕಲಕೋಟೆ: ಸ್ಥಳೀಯ ಶ್ರೀಮತಿ ಹೊನ್ನುರಮ್ಮ ದಿ.ಸಿದ್ದಪ್ಪ ಪ್ರಥಮ ದರ್ಜೆ ಕಾಲೇಜಿನ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಮೌನೇಶ.ಡಿ ಕುಸ್ತಿ ಕ್ರೀಡೆಯಲ್ಲಿಉತ್ತಮ ಸಾಧನೆ ಮಾಡುವ ಮೂಲಕ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದಿಂದ ರಾಷ್ಟ್ರೀಯ ಮಟ್ಟದ ಖೇಲೊ ಇಂಡಿಯಾ ಪಂದ್ಯಾವಳಿಗೆ ಆಯ್ಕೆ…

The post ತೆಕ್ಕಲಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರಮಟ್ಟದ ಸಾಧನೆ:  ಖೇಲೊ ಇಂಡಿಯಾ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆ appeared first on Karnataka Kahale.

]]>

ತೆಕ್ಕಲಕೋಟೆ: ಸ್ಥಳೀಯ ಶ್ರೀಮತಿ ಹೊನ್ನುರಮ್ಮ ದಿ.ಸಿದ್ದಪ್ಪ ಪ್ರಥಮ ದರ್ಜೆ ಕಾಲೇಜಿನ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಮೌನೇಶ.ಡಿ ಕುಸ್ತಿ ಕ್ರೀಡೆಯಲ್ಲಿಉತ್ತಮ ಸಾಧನೆ ಮಾಡುವ ಮೂಲಕ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದಿಂದ ರಾಷ್ಟ್ರೀಯ ಮಟ್ಟದ ಖೇಲೊ ಇಂಡಿಯಾ ಪಂದ್ಯಾವಳಿಗೆ ಆಯ್ಕೆ ಆಗಿದ್ದಾನೆ. ಪಂಜಾಬ್‌ ರಾಜ್ಯದ ಚಂಡೀಗಡನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿರಾಜ್ಯದಿಂದ 130 ಸ್ಪರ್ಧೆಗಳು ಭಾಗವಹಿಸಿದ್ದರು.                                            ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿನಡೆದ ಅಂತರ್‌ ಕಾಲೇಜುಗಳ ವಿಶ್ವ ವಿದ್ಯಾಲಯದ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

ಡಾ.ಮಲ್ಲಿಕಾರ್ಜುನ ಮೋಕ

ವಿದ್ಯಾರ್ಥಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಾಂಶುಪಾಲರು, ಹೈದರಬಾದ್‌ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳು ಕ್ರೀಡೆಯಲ್ಲಿಹೆಚ್ಚಿನ ಸಾಧನೆ ಮಾಡಲಿ. ವಿದ್ಯಾರ್ಥಿ ಮೌನೇಶ.ಡಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿಜಯಗಳಿಸಲು ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The post ತೆಕ್ಕಲಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರಮಟ್ಟದ ಸಾಧನೆ:  ಖೇಲೊ ಇಂಡಿಯಾ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆ appeared first on Karnataka Kahale.

]]>
ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ಸದಾ ಮುಂದೆ : ಅವ್ವಾರು ಮಂಜುನಾಥ್ https://www.karnatakakahale.com/news/21475 Tue, 02 Dec 2025 14:00:39 +0000 https://www.karnatakakahale.com/?p=21475 ಬಳ್ಳಾರಿ, ಡಿ. 2: ನಗರದ ಯುವ ಬ್ಯಾಡ್ಮಿಂಟನ್ ಪ್ರತಿಭೆಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಇವರ ಕ್ರೀಡಾ ಸಾಧನೆ ರಾಷ್ಟ್ರದ ಗಮನ ಸೆಳೆಯುವಂತಾಗಲಿ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ಶುಭ ಹಾರೈಸಿದ್ದಾರೆ. ರಾಜ್ಯಮಟ್ಟದ ಬ್ಯಾಡ್ಮಿಂಟನ್…

The post ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ಸದಾ ಮುಂದೆ : ಅವ್ವಾರು ಮಂಜುನಾಥ್ appeared first on Karnataka Kahale.

]]>
ಬಳ್ಳಾರಿ, ಡಿ. 2: ನಗರದ ಯುವ ಬ್ಯಾಡ್ಮಿಂಟನ್ ಪ್ರತಿಭೆಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಇವರ ಕ್ರೀಡಾ ಸಾಧನೆ ರಾಷ್ಟ್ರದ ಗಮನ ಸೆಳೆಯುವಂತಾಗಲಿ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ಶುಭ ಹಾರೈಸಿದ್ದಾರೆ.

ರಾಜ್ಯಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಬಳ್ಳಾರಿ ನಗರದ ಯುವ ಪ್ರತಿಭೆಗಳು ಮತ್ತು ವಿದ್ಯಾರ್ಥಿನಿಯರಾದ ಕೆ. ಹಾಶಿಕಾ ಸಾಯಿ, ಟಿ. ಸಮುದ್ವಿತ ಮತ್ತು ಎಸ್. ಮನೋಜ್ಞಾ ಸಾಯಿ ಅವರು, ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಿರುವ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಇವರನ್ನು ಮಂಗಳವಾರ ಅಭಿನಂದಿಸಿ, ಗೌರವಿಸಿ ಪ್ರೋತ್ಸಾಹಿಸಿತು.
ಬಳ್ಳಾರಿ ಕಲೆ, ಕ್ರೀಡೆ, ಸಾಹಿತ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಾದ ಕೆ. ಹಾಶಿಕಾ ಸಾಯಿ, ಟಿ. ಸಮುದ್ವಿತ ಮತ್ತು ಎಸ್. ಮನೋಜ್ಞಾ ಸಾಯಿ ಅವರ ಸಾಧನೆಯು ಗಮನಾರ್ಹವಾದದ್ದು. ಈ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಅಭಿನಂದಿಸುತ್ತಿದೆ ಎಂದರು.
ಅಭಿನಂದಿತ ವಿದ್ಯಾರ್ಥಿನಿಯರಾದ ಕೆ. ಹಾಶಿಕಾ ಸಾಯಿ, ಟಿ. ಸಮುದ್ವಿತ ಮತ್ತು ಎಸ್. ಮನೋಜ್ಞಾ ಸಾಯಿ ಅವರು, ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಅತ್ಯಂತ ಕೆಳ ಹಂತದಿಂದ ನಿರಂತರ ಸಾಧನೆಗಳ ಮೆಟ್ಟಿಲುಗಳನ್ನು ಹತ್ತುತ್ತಿರುವ ನಮಗೆ, ಬಿಡಿಸಿಸಿ&ಐ ಅಭಿನಂದಿಸುತ್ತಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ನಿಮ್ಮೆಲ್ಲರ ಶುಭ ಹಾರೈಕೆ ಮತ್ತು ಪ್ರೋತ್ಸಾಹಗಳ ಕಾರಣ ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು, ಯುವ ಕ್ರೀಡಾಪಟುಗಳು ವಿದ್ಯಾರ್ಥಿ ಜೀವನದಲ್ಲಿಯೇ ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಅವರ ಸಾಧನೆಯನ್ನು ಅಭಿನಂದಿಸಿ, ಭವಿಷ್ಯದ ಸ್ಪರ್ಧೆಗಳಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸುತ್ತಿದೆ ಎಂದರು.
ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ವೇಣುಗೋಪಾಲ್ ಗುಪ್ತ ಅವರು ಕ್ರೀಡಾಪಟುಗಳನ್ನು ಸಭೆಗೆ ಪರಿಚಯಿಸಿದರು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ, ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾದ ಸೊಂತ ಗಿರಿಧರ, ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಖಜಾಂಚಿಗಳಾದ ನಾಗಳ್ಳಿ ರಮೇಶ್, ಮಾಜಿ ಅಧ್ಯಕ್ಷರುಗಳಾದ ಸಿ. ಶ್ರೀನಿವಾಸರಾವ್, ಬಿ. ಮಹಾರುದ್ರಗೌಡ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಕ್ರೀಡಾಪಟುಗಳ ಪೋಷಕರು ಉಪಸ್ಥಿತರಿದ್ದರು.

The post ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ಸದಾ ಮುಂದೆ : ಅವ್ವಾರು ಮಂಜುನಾಥ್ appeared first on Karnataka Kahale.

]]>
ಗೃಹರಕ್ಷಕರ ರಾಜ್ಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟ: ಚಾಂಪಿಯನ್‌ಶಿಪ್ ಬಳ್ಳಾರಿ ತಂಡಕ್ಕೆ ಟ್ರೋಫಿ ವಿತರಿಸಿದ ಎಡಿಜಿಪಿ‌ ಎಂ. ನಂಜುಂಡಸ್ವಾಮಿ(ಮನಂ) https://www.karnatakakahale.com/news/21396 Tue, 25 Nov 2025 13:34:42 +0000 https://www.karnatakakahale.com/?p=21396 ಬಳ್ಳಾರಿ,ನ.25: ಬೆಂಗಳೂರಿನ ಬನ್ನೇರುಘಟ್ಟದ ಮುಂಡ್ಕೂರ್ ತರಬೇತಿಯ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ನಡೆದ 2025-26ನೇ ಸಾಲಿನ ಗೃಹರಕ್ಷಕರ ರಾಜ್ಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟಗಳಲ್ಲಿ ಬಳ್ಳಾರಿ ಜಿಲ್ಲೆಯ ಕ್ರೀಡಾಪಟುಗಳ ತಂಡ ಚಾಂಪಿಯನ್‌ಶಿಪ್ ಕಪ್ ಮುಡಿಗೇರಿಸಿಕೊಂಡಿದೆ. ಅಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಡಿಜಿಪಿ ಹಾಗೂ…

The post ಗೃಹರಕ್ಷಕರ ರಾಜ್ಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟ: ಚಾಂಪಿಯನ್‌ಶಿಪ್ ಬಳ್ಳಾರಿ ತಂಡಕ್ಕೆ ಟ್ರೋಫಿ ವಿತರಿಸಿದ ಎಡಿಜಿಪಿ‌ ಎಂ. ನಂಜುಂಡಸ್ವಾಮಿ(ಮನಂ) appeared first on Karnataka Kahale.

]]>

ಬಳ್ಳಾರಿ,ನ.25: ಬೆಂಗಳೂರಿನ ಬನ್ನೇರುಘಟ್ಟದ ಮುಂಡ್ಕೂರ್ ತರಬೇತಿಯ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ನಡೆದ 2025-26ನೇ ಸಾಲಿನ ಗೃಹರಕ್ಷಕರ ರಾಜ್ಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟಗಳಲ್ಲಿ ಬಳ್ಳಾರಿ ಜಿಲ್ಲೆಯ ಕ್ರೀಡಾಪಟುಗಳ ತಂಡ ಚಾಂಪಿಯನ್‌ಶಿಪ್ ಕಪ್ ಮುಡಿಗೇರಿಸಿಕೊಂಡಿದೆ.
ಅಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಡಿಜಿಪಿ ಹಾಗೂ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹೆಚ್ಚುವರಿ ಮಹಾ ನಿರ್ದೇಶಕರಾದ ಎಂ. ನಂಜುಂಡಸ್ವಾಮಿ(ಮನಂ) ಅವರು ಟ್ರೋಫಿ ವಿತರಿಸಿದರು.
ಈಶಾನ್ಯ ವಲಯದ ವೃತ್ತಿಪರ ಕ್ರೀಡೆಗಳಾದ ರೈಫಲ್ ಡ್ರಿಲ್, ರಕ್ಷಣೆಯಲ್ಲಿ ಪುರುಷರ ವಿಭಾಗವು ಪ್ರಥಮ ಸ್ಥಾನ ಮತ್ತು ಮಹಿಳಾ ವಿಭಾಗವು ಪ್ರಥಮ ಚಿಕಿತ್ಸೆಯಲ್ಲಿ ಪ್ರಥಮ ಸ್ಥಾನ ಮತ್ತು ರೈಫಲ್‌ಡ್ರಿಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ನ.16 ರಿಂದ 21 ರವರೆಗೆ ನಡೆದ ಕ್ರೀಡಾಕೂಟಗಳಲ್ಲಿ ಕ್ರೀಡೆಗಳಾದ 100 ಮೀ. ಓಟ, 400 ಮೀ. ಓಟ, 800 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ ಮತ್ತು ವೃತ್ತಿಪರ ಕ್ರೀಡೆಗಳಾದ ಪ್ರಥಮ ಚಿಕಿತ್ಸೆ, ಆಗ್ನಿಶಮನ, ರೈಫಲ್ ಡ್ರಿಲ್, ರಕ್ಷಣೆ ಮತ್ತು ರೈಫಲ್ ಸಹಿತ ಶೂಟಿಂಗ್ ಸ್ಪರ್ಧೆಗಳಲ್ಲಿ ಈಶಾನ್ಯ ವಲಯದ 65 ಜನ ಗೃಹರಕ್ಷಕರು ಭಾಗವಹಿಸಿದ್ದರು.
2025-26ನೇ ಸಾಲಿನ ಗೃಹರಕ್ಷಕ ವೃತ್ತಿಪರ ಹಾಗೂ ಕ್ರೀಡಾಕೂಟದಲ್ಲಿ ಬಳ್ಳಾರಿ ತಂಡವು ಚಾಂಪಿಯನ್‌ಶಿಪ್ ಕಪ್ ಗೆದ್ದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಜಿಲ್ಲಾ ಸಮಾದೇಷ್ಟರಾದ ಯಮ್ಮಿಗನೂರು ಶೇಖ್ ಸಾಬು, ಭೋದಕ ಬಸವರಾಜ ಹಗಳಗಾರ, ಸೀನಿಯರ್ ಪ್ಲಟೂನ್ ಕಮಾಂಡರ್ ಬಿ.ಕೆ.ಬಸವಲಿಂಗ, ಪ್ಲಟೂನ್ ಕಮಾಂಡರ್ ಹೆಚ್.ಲಕ್ಷ್ಮಿನಾರಾಯಣ ಮತ್ತು ಗೃಹರಕ್ಷಕ-ಗೃಹರಕ್ಷಕಿಯರು, ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಗೃಹರಕ್ಷಕರು ಅಭಿನಂದನೆ ತಿಳಿಸಿದ್ದಾರೆ.
—–

The post ಗೃಹರಕ್ಷಕರ ರಾಜ್ಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟ: ಚಾಂಪಿಯನ್‌ಶಿಪ್ ಬಳ್ಳಾರಿ ತಂಡಕ್ಕೆ ಟ್ರೋಫಿ ವಿತರಿಸಿದ ಎಡಿಜಿಪಿ‌ ಎಂ. ನಂಜುಂಡಸ್ವಾಮಿ(ಮನಂ) appeared first on Karnataka Kahale.

]]>
ಬಳ್ಳಾರಿಯಲ್ಲಿ ನ. 22 ಮತ್ತು 23ರಂದು ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟ -ಶಾಂತಾಬಾಯಿ ಕಟ್ಟಿಮನಿ https://www.karnatakakahale.com/news/21309 Sun, 16 Nov 2025 16:55:05 +0000 https://www.karnatakakahale.com/?p=21309 ಬಳ್ಳಾರಿ. ನ. 16: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಬಳ್ಳಾರಿ ಮತ್ತು ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ  ಸಹಯೋಗದೊಂದಿಗೆ ನ. 22 ಮತ್ತು 23 ರಂದು   ಎರಡು ದಿನಗಳ ಕಾಲ ಹಿರಿಯರ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ…

The post ಬಳ್ಳಾರಿಯಲ್ಲಿ ನ. 22 ಮತ್ತು 23ರಂದು ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟ -ಶಾಂತಾಬಾಯಿ ಕಟ್ಟಿಮನಿ appeared first on Karnataka Kahale.

]]>
ಬಳ್ಳಾರಿ. ನ. 16: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಬಳ್ಳಾರಿ ಮತ್ತು ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ  ಸಹಯೋಗದೊಂದಿಗೆ ನ. 22 ಮತ್ತು 23 ರಂದು   ಎರಡು ದಿನಗಳ ಕಾಲ ಹಿರಿಯರ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ನ ಬಳ್ಳಾರಿ ಜಿಲ್ಲಾ  ಅಧ್ಯಕ್ಷರಾದ ಶಾಂತಾಬಾಯಿ ಕಟ್ಟಿಮನಿ ಅವರು ತಿಳಿಸಿದರು.

ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ  ಪತ್ರಿಕಾಗೋಷ್ಠಿಯನ್ನು  ಉದ್ದೇಶಿಸಿ ಮಾತನಾಡಿದರು.
ಕ್ರೀಡಾಕೂಟದಲ್ಲಿ 30 ರಿಂದ ನೂರು ವರ್ಷ ವಯಸ್ಸಿನ ಕ್ರೀಡಾಪಟುಗಳು ಭಾಗವಹಿಸಬಹುದು. ಐದು ವಿಭಾಗಗಳಲ್ಲಿ ಈ ಕ್ರೀಡಾಕೂಟವನ್ನು ನಡೆಸಲಾಗುತ್ತಿದ್ದು 100 ಮೀಟರ್ ನಿಂದ 5000 ಮೀಟರ್ ಓಟದ ಸ್ಪರ್ಧೆಗಳು ಎಸೆತ ಹಾಗೂ ಜಿಗಿತದ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿದೆ, 65 ವರ್ಷ ವಯಸ್ಸಿನ  ಸ್ಪರ್ದಾಳುಗಳಿಗೆ ಕೆಲವೊಂದು ಆಟಗಳನ್ನು ನಿಷೇಧಿಸಲಾಗಿದೆ, ವಿಕಲಚೇತನರಿಗೆ ಸಹ ಈ  ಕ್ರೀಡಾಕೂಟದಲ್ಲಿ  ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.
ಪ್ರತಿಸ್ಪರ್ಧೆಯಲ್ಲೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಮತ್ತು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಗೆದ್ದವರಿಗೆ ಡಿ. 13 ಮತ್ತು 14 ರಂದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆಯುವ ದಕ್ಷಿಣ ಭಾರತದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದು‌ ಮಾಹಿತಿ ನೀಡಿದರು.
 ಕ್ರೀಡಾಕೂಟದಲ್ಲಿ ಸುಮಾರು 60 ರಿಂದ 70 ಜನ ತೀರ್ಪುಗಾರರು ಭಾಗವಹಿಸುವರು.
ರಾಜ್ಯ ಮತ್ತು ಜಿಲ್ಲಾ ಘಟಕದಿಂದ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ವಿವರಿಸಿದರು.
 ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಧ್ಯಕ್ಷ ವೇಣುಗೋಪಾಲ್,  ಖಜಾಂಚಿ ಡಿ ಎಸ್ ದೊಡ್ಡಯ್ಯ,  ಜನರಲ್ ಸೆಕ್ರೆಟರಿ ನಾಗಭೂಷಣ್,  ವಿಜಯ್ ಅಬ್ದುಲ್ ಮುನಾಫ್  ಇದ್ದರು.

The post ಬಳ್ಳಾರಿಯಲ್ಲಿ ನ. 22 ಮತ್ತು 23ರಂದು ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟ -ಶಾಂತಾಬಾಯಿ ಕಟ್ಟಿಮನಿ appeared first on Karnataka Kahale.

]]>
ವಿಎಸ್ ಕೆಯು ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ:  ಆಟಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧೆ ಮುಖ್ಯ  -ಪ್ರಾಚಾರ್ಯ ಡಾ. ಪ್ರಹ್ಲಾದ್ ಚೌಧರಿ https://www.karnatakakahale.com/news/20959 Thu, 16 Oct 2025 07:51:26 +0000 https://www.karnatakakahale.com/?p=20959 ಬಳ್ಳಾರಿ, ಅ.15:ಆ ಟಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧೆ ಮುಖ್ಯ  ಎಂದು ಎಸ್.ಎಸ್.ಎ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಹ್ಲಾದ ಚೌಧರಿ ಅವರು ತಿಳಿಸಿದರು.                         …

The post ವಿಎಸ್ ಕೆಯು ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ:  ಆಟಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧೆ ಮುಖ್ಯ  -ಪ್ರಾಚಾರ್ಯ ಡಾ. ಪ್ರಹ್ಲಾದ್ ಚೌಧರಿ appeared first on Karnataka Kahale.

]]>

ಬಳ್ಳಾರಿ, ಅ.15:ಆ ಟಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧೆ ಮುಖ್ಯ  ಎಂದು ಎಸ್.ಎಸ್.ಎ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಹ್ಲಾದ ಚೌಧರಿ ಅವರು ತಿಳಿಸಿದರು.                                                  ನಗರದ ಶ್ರೀಮತಿ ಸರಳಾ ದೇವಿ ಸತೀಶ್ಚಂದ್ರ ಅಗರ್ವಾಲ್(ಎಸ್ಎಸ್ಎ) ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ 2025 -26 ನೇ ಸಾಲಿನ ಅಂತರ್ ಮಹಾವಿದ್ಯಾಲಯಗಳ ಪುರುಷ ಮತ್ತು ಮಹಿಳೆಯ ಕಬ್ಬಡಿ ಪಂದ್ಯಾವಳಿಗಳು ಹಾಗೂ ವಿಶ್ವವಿದ್ಯಾಲಯ ತಂಡಗಳ ಆಯ್ಕೆಯ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಜೀವನದಲ್ಲಿ ಆರೋಗ್ಯ ಪ್ರಮುಖ ಪಾತ್ರವಹಿಸುತ್ತದೆ. ಆರೋಗ್ಯ ಉತ್ತಮವಾಗಿರಲು ಆಟೋಟಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಬಳ್ಳಾರಿ ವಿಜಯನಗರ ಜಿಲ್ಲೆಯ ಪದವಿ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪಂದ್ಯಾವಳಿಯಲ್ಲಿ ಉತ್ತಮ ರೈಡ್ ಗಳನ್ನು ಮಾಡುವ ಮೂಲಕ‌ಗಮನ ಸೆಳೆದರು.

     ಬಳ್ಳಾರಿ ವಿಎಸ್ಕೆ ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಶಶಿಧರ್ ,ಕುರುಗೋಡು ಜಿಎಫ್ ಸಿ ದೈಹಿಕ ಶಿಕ್ಷಣ ನಿರ್ದೇಶಕ  ಪಂಪನಗೌಡ, ಕೂಡ್ಲಿಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗುರುಬಸವರಾಜ್, ಹಿರಿಯ ದೈಹಿಕ ನಿರ್ದೇಶಕ ರಾಥೋಡ್, ಆಂಗ್ಲ ವಿಭಾಗದ ಮುಖ್ಯಸ್ಥೆ ಪ್ರೊ. ಮೊನಿಕಾ ರಂಜನ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಇಸ್ಮಾಯಿಲ್ ಮಕಾಂದರ್,  ಪ್ರಾಧ್ಯಾಪಕರಾದ ಕಲ್ಯಾಣ ಬಸವ, ಹರೀಶ್, ಕಾಲೇಜಿನ ವಿವಿಧ‌ ವಿಭಾಗಗಳ  ಉಪನ್ಯಾಸಕರು,  ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.

ಅಭಿನಂದನೆ: ಕಾಲೇಜಿನ ಬಾಲಕಿಯರ ಕಬಡ್ಡಿ ತಂಡವು ವಿಎಸ್ ಕೆಯುಬಿ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಯನ್ನು ಗೆದ್ದು ಚಾಂಪಿಯನ್ ಆಗಿರುವುದಕ್ಕೆ ಹರ್ಷಿಸಿರುವ ಡಾ. ಪ್ರಹ್ಲಾದ್ ಚೌಧರಿ ಅವರು ವಿಜೇತರನ್ನು ಅಭಿನಂದಿಸಿದ್ದಾರೆ.

 

The post ವಿಎಸ್ ಕೆಯು ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ:  ಆಟಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧೆ ಮುಖ್ಯ  -ಪ್ರಾಚಾರ್ಯ ಡಾ. ಪ್ರಹ್ಲಾದ್ ಚೌಧರಿ appeared first on Karnataka Kahale.

]]>
ಪತ್ರಕರ್ತರು ಸಮಾಜಕ್ಕೆ ಮಾದರಿ -ಶಾಸಕ ನಾರಾ ಭರತ್ ರೆಡ್ಡಿ ಗೆದ್ದ ತಂಡಕ್ಕೆ 1 ಲಕ್ಷ ರೂ., ರನ್ನರ್ ಅಪ್ ಗೆ 50 ಸಾವಿರ ರೂ.ಗಳ ವೈಯಕ್ತಿಕ ಬಹುಮಾನ ಘೋಷಣೆ https://www.karnatakakahale.com/news/19894 Fri, 27 Jun 2025 16:37:00 +0000 https://www.karnatakakahale.com/?p=19894 ಬಳ್ಳಾರಿ, ಜೂ.27: ಪತ್ರಕರ್ತರು ಒಟ್ಟಾರೆ ಸಮಾಜಕ್ಕೆ ಮಾದರಿ ಆಗುವಂತಹವರು, ಸಾಮಾನ್ಯ ಜನ ಪತ್ರಕರ್ತರನ್ನು ಅನುಸರಿಸುವುದರಿಂದ ಪತ್ರಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. ನಗರದ ವೀ.ವಿ ಸಂಘದ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಕಾರ್ಯನಿರತ…

The post ಪತ್ರಕರ್ತರು ಸಮಾಜಕ್ಕೆ ಮಾದರಿ -ಶಾಸಕ ನಾರಾ ಭರತ್ ರೆಡ್ಡಿ ಗೆದ್ದ ತಂಡಕ್ಕೆ 1 ಲಕ್ಷ ರೂ., ರನ್ನರ್ ಅಪ್ ಗೆ 50 ಸಾವಿರ ರೂ.ಗಳ ವೈಯಕ್ತಿಕ ಬಹುಮಾನ ಘೋಷಣೆ appeared first on Karnataka Kahale.

]]>

ಬಳ್ಳಾರಿ, ಜೂ.27: ಪತ್ರಕರ್ತರು ಒಟ್ಟಾರೆ ಸಮಾಜಕ್ಕೆ ಮಾದರಿ ಆಗುವಂತಹವರು, ಸಾಮಾನ್ಯ ಜನ ಪತ್ರಕರ್ತರನ್ನು ಅನುಸರಿಸುವುದರಿಂದ ಪತ್ರಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ವೀ.ವಿ ಸಂಘದ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಡಾಕ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಕ್ರೀಡಾ ಚಟುವಟಿಕೆಯಲ್ಲೂ ತೊಡಗುವುದು ಸ್ಪೂರ್ತಿದಾಯಕ ವಿಷಯ, ನೀವೆಲ್ಲರೂ ಪಂದ್ಯಾವಳಿ ಆಯೋಜಿಸಿದ್ದು ಸಂತೋಷದ ವಿಷಯ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜನಪ್ರತಿನಿಧಿಗಳ ಒಂದು ತಂಡ-ಮಾಧ್ಯಮ ಮಿತ್ರರ ಒಂದು ತಂಡ ರಚಿಸಿ ನಾವು ನೀವು ಕ್ರಿಕೆಟ್ ಆಡೋಣ ಎಂದರು.


ಕ್ರಿಕೆಟ್ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ 1 ಲಕ್ಷ ರೂ.ಗಳು, ರನ್ನರ್ ಅಪ್ ತಂಡಕ್ಕೆ 50 ಸಾವಿರ ರೂ.ಗಳನ್ನು ವೈಯುಕ್ತಿಕವಾಗಿ ಬಹುಮಾನ ನೀಡುವುದಾಗಿ ಘೋಷಿಸಿದ ಶಾಸಕ ನಾರಾ ಭರತ್ ರೆಡ್ಡಿ, ಕಾನಿಪ ಪತ್ರಕರ್ತರ ಶ್ರಯೋಭಿವೃದ್ಧಿ ನಿಧಿಗೆ ಮುಂಬರುವ ದಿನಗಳಲ್ಲಿ ದೇಣಿಗೆ ನೀಡುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ರಾಜೇಶ್ವರಿ, ಮಹಾನಗರ ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್, ಕಾಂಗ್ರೆಸ್ ಮುಖಂಡ ಸುಬ್ಬರಾಯುಡು, ಕಾನಿಪ ಅಡಾಕ್ ಸಮಿತಿಯ ಎನ್. ವೀರಭದ್ರಗೌಡ, ಮೋಕ ಮಲ್ಲಯ್ಯ, ವೆಂಕೋಬಿ ಸಂಗನಕಲ್ಲು,  ವಾರ್ತಾ ಇಲಾಖೆಯ ಅಧಿಕಾರಿ ಗುರುರಾಜ್ ಇದ್ದರು. ಪತ್ರಕರ್ತ ನರಸಿಂಹ ಮೂರ್ತಿ ಕುಲಕರ್ಣಿ ಸ್ವಾಗತಿಸಿ, ವಂದಿಸಿದರು.

The post ಪತ್ರಕರ್ತರು ಸಮಾಜಕ್ಕೆ ಮಾದರಿ -ಶಾಸಕ ನಾರಾ ಭರತ್ ರೆಡ್ಡಿ ಗೆದ್ದ ತಂಡಕ್ಕೆ 1 ಲಕ್ಷ ರೂ., ರನ್ನರ್ ಅಪ್ ಗೆ 50 ಸಾವಿರ ರೂ.ಗಳ ವೈಯಕ್ತಿಕ ಬಹುಮಾನ ಘೋಷಣೆ appeared first on Karnataka Kahale.

]]>
ನಾಳೆ ಬಳ್ಳಾರಿ ನಗರದಲ್ಲಿ ಮೀಡಿಯಾ ಕಪ್ ಕ್ರಿಕೆಟ್ ಪಂದ್ಯಾವಳಿ https://www.karnatakakahale.com/news/19875 Thu, 26 Jun 2025 08:46:32 +0000 https://www.karnatakakahale.com/?p=19875 ಬಳ್ಳಾರಿ, ಜೂ. 26: ನಗರದ ವೀವಿ ಸಂಘದ, ವೀರಶೈವ ಕಾಲೇಜ್ ಕ್ರೀಡಾಂಗಣದಲ್ಲಿ ಶುಕ್ರವಾರ ಬಳ್ಳಾರಿ ಜಿಲ್ಲಾ ಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿಯಿಂದ ಮೀಡಿಯಾ ಕಪ್-2025 ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದೆ. ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ನಗರ ಶಾಸಕ…

The post ನಾಳೆ ಬಳ್ಳಾರಿ ನಗರದಲ್ಲಿ ಮೀಡಿಯಾ ಕಪ್ ಕ್ರಿಕೆಟ್ ಪಂದ್ಯಾವಳಿ appeared first on Karnataka Kahale.

]]>
ಬಳ್ಳಾರಿ, ಜೂ. 26: ನಗರದ ವೀವಿ ಸಂಘದ, ವೀರಶೈವ ಕಾಲೇಜ್ ಕ್ರೀಡಾಂಗಣದಲ್ಲಿ ಶುಕ್ರವಾರ ಬಳ್ಳಾರಿ ಜಿಲ್ಲಾ ಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿಯಿಂದ ಮೀಡಿಯಾ ಕಪ್-2025 ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದೆ.

ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ವೀರಭದ್ರಗೌಡ ಅಧ್ಯಕ್ಷತೆವಹಿಸಲಿದ್ದಾರೆ.
ಮೇಯರ್ ಮುಲ್ಲಂಗಿ ನಂದೀಶ್, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಕಾಂಗ್ರೆಸ್ ವಕ್ತಾರ ವೆಂಕಟೇಶ್ ಹೆಗಡೆ, ಆರ್.ವೈ.ಎಂ.ಸಿ‌ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಜಾನೆಕುಂಟೆ ಬಸವರಾಜ್, ವೀರಶೈವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ದರೂರು ಶಾಂತನಗೌಡ, ವಾರ್ತಾ ಅಧಿಕಾರಿಗಳು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ.


ಸಂಘದ ಅಡಾಕ್ ಸಮಿತಿಯ ಸದಸ್ಯರಾದ ಕೆ.ಮಲ್ಲಯ್ಯ, ವೆಂಕೋಬಿ ಸಂಗನಕಲ್ಲು ಮತ್ತು ಸಂಘದ ಸರ್ವ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಪಂದ್ಯಾವಳಿಯಲ್ಲಿ ಬಳ್ಳಾರಿ ಟೈಗರ್ಸ್, ಬಳ್ಳಾರಿ ಲಯನ್ಸ್, ಕೆಕೆ ಬುಲ್ಸ್ ಮತ್ತು ಸಿರುಗುಪ್ಪ ತಂಡಗಳು ಭಾಗವಹಿಸಲಿವೆ. ಆರು ಲೀಗ್ ಪಂದ್ಯಗಳು ನಡೆಯಲಿದ್ದು. ನಂತರ ಪೈನಲ್ ಪಂದ್ಯ ನಡೆಯಲಿದೆ. .

The post ನಾಳೆ ಬಳ್ಳಾರಿ ನಗರದಲ್ಲಿ ಮೀಡಿಯಾ ಕಪ್ ಕ್ರಿಕೆಟ್ ಪಂದ್ಯಾವಳಿ appeared first on Karnataka Kahale.

]]>
ಯಶಸ್ವೀಭವ, ವಿಜಯೀಭವ” ಯಶಸ್ವಿ ಜೈಸ್ವಾಲ್..! ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..! -ಸುದರ್ಶನ್ ಗೌಡ, ಬೆಂಗಳೂರು https://www.karnatakakahale.com/news/19825 Sat, 21 Jun 2025 10:48:05 +0000 https://www.karnatakakahale.com/?p=19825 ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..! What a story..! An amazing journey of Yashaswi Jaiswal..! ಉತ್ತರ ಪ್ರದೇಶದ ಬದೋಹಿಯಲ್ಲೊಂದು ಪುಟ್ಟ ಅಂಗಡಿ. ಆ ಅಂಗಡಿ ಮಾಲೀಕನಿಗೊಬ್ಬ ಮಗ.. ಕ್ರಿಕೆಟ್ ಹುಚ್ಚು ಹಿಡಿಸಿಕೊಂಡಿದ್ದವನಿಗೆ…

The post ಯಶಸ್ವೀಭವ, ವಿಜಯೀಭವ” ಯಶಸ್ವಿ ಜೈಸ್ವಾಲ್..! ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..! -ಸುದರ್ಶನ್ ಗೌಡ, ಬೆಂಗಳೂರು appeared first on Karnataka Kahale.

]]>
ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..!

What a story..!
An amazing journey of Yashaswi Jaiswal..!

ಉತ್ತರ ಪ್ರದೇಶದ ಬದೋಹಿಯಲ್ಲೊಂದು ಪುಟ್ಟ ಅಂಗಡಿ. ಆ ಅಂಗಡಿ ಮಾಲೀಕನಿಗೊಬ್ಬ ಮಗ.. ಕ್ರಿಕೆಟ್ ಹುಚ್ಚು ಹಿಡಿಸಿಕೊಂಡಿದ್ದವನಿಗೆ ಯಾರೋ ಹೇಳಿದ್ದಂತೆ, “ನೀನು ಇಲ್ಲಿಯೇ ಇದ್ದರೆ ಕ್ರಿಕೆಟರ್ ಆಗಲು ಸಾಧ್ಯವಿಲ್ಲ, ಮುಂಬೈಗೆ ಹೋಗು” ಎಂದು. 10ನೇ ವಯಸ್ಸಿನಲ್ಲಿ ತಂದೆಯ ಜೊತೆ ಮುಂಬೈಗೆ ಬಂದಿಳಿದಿದ್ದ ಆ ಹುಡುಗ.
ಮುಂಬೈ ಎಂದರೆ ಅದೊಂದು ಮಹಾಸಾಗರ. ಆ ಸಾಗರದಲ್ಲಿ ಅಪ್ಪಳಿಸಿ ಬರುವ ಅಲೆಗಳ ಮುಂದೆ ಈಜಲು ನಿಂತವನ ಹೆಸರು ಯಶಸ್ವಿ ಭೂಪೇಂದ್ರ ಕುಮಾರ್ ಜೈಸ್ವಾಲ್.

ಮಗನನ್ನು ಮುಂಬೈಗೆ ಕರೆ ತಂದ ತಂದೆಗೆ ಇದ್ದ ಚಿಂತೆ ‘ಈ ಮಹಾನಗರದಲ್ಲಿ ಮಗ ಹೇಗೆ ಇರಬಲ್ಲ’ ಎಂದು.
‘’ನಾನು ಇಲ್ಲಿ ಅಂಕಲ್ ಜೊತೆ ಇರುತ್ತೇನೆ” ಅಂದಿದ್ದ ಜೈಸ್ವಾಲ್. ಆ ಅಂಕಲ್ ಏನೂ ಮುಂಬೈನಲ್ಲಿ ಕೋಟೆ ಕಟ್ಟಿಕೊಂಡವನಲ್ಲ. ಒಬ್ಬ ಬಡ ವ್ಯಾಪಾರಿ.
10 ವರ್ಷದ ಹುಡುಗನನ್ನು ಹಾಲಿನ ಡೈರಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಸುತ್ತಾನೆ. ಅಲ್ಲೇ ಪುಟ್ಟ ಕೋಣೆಯೊಂದರಲ್ಲಿ ವಾಸ. ಬೆಳಗ್ಗೆ 5 ಗಂಟೆಗೆ ಎದ್ದು ಅಂಗಡಿಯನ್ನು ಶುಚಿಗೊಳಿಸಿ ಕ್ರಿಕೆಟ್ ಅಭ್ಯಾಸಕ್ಕೆ ಹೊರಟು ಬಿಡುತ್ತಿದ್ದ ಯಶಸ್ವಿ ಜೈಸ್ವಾಲ್. ಅಭ್ಯಾಸ ಮುಗಿಸಿ ಬಂದವನು ರಾತ್ರಿಯವರೆಗೆ ಅಂಗಡಿಯಲ್ಲಿ ಕೆಲಸ ಮಾಡಬೇಕಿತ್ತು.

ಬೆಳಗ್ಗೆಯಿಂದ ಕ್ರಿಕೆಟ್ ಆಡಿ ದಣಿದು ಬರುತ್ತಿದ್ದ ಪುಟ್ಟ ಬಾಲಕ ಇದನ್ನೆಲ್ಲಾ ಹೇಗೆ ತಾನೇ ಸಹಿಸಿಕೊಳ್ಳಬಲ್ಲ..?
ಒಂದು ದಿನ ಡೈರಿಯ ಮಾಲೀಕ, ‘ಇವನು ಕೆಲಸಕ್ಕೆ ಬರುವವನಲ್ಲ’ ಎಂದು ಜೈಸ್ವಾಲ್’ನನ್ನು ಓಡಿಸಿ ಬಿಟ್ಟ.
ದೊಡ್ಡ ನಗರದಲ್ಲಿ ಸಣ್ಣ ಹುಡುಗ ಏಕಾಂಗಿಯಾಗಿ ನಿಂತಿದ್ದ. ಗುರುತು ಪರಿಚಯವಿಲ್ಲದ ಜನ. ಗೊತ್ತು ಗುರಿಯಿಲ್ಲದ ಬದುಕು.
ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡವನೇ ಮುಂಬೈನ ಆಜಾದ್ ಮೈದಾನಕ್ಕೆ ಬಂದ. ಅಲ್ಲಿ ಮುಸ್ಲಿಂ ಯುನೈಟೆಡ್ ಎಂಬ ಕ್ರಿಕೆಟ್ ಕ್ಲಬ್ ಇದೆ. ‘’ನಾನು ಕ್ರಿಕೆಟ್ ಆಡಬೇಕು, ದಯವಿಟ್ಟು ಸಹಾಯ ಮಾಡಿ’’ ಎಂದು ಯಶಸ್ವಿ ಅಂಗಲಾಚುತ್ತಾನೆ.
‘’ನಮ್ಮ ಕ್ಲಬ್ ಪರ ಒಂದು ಮ್ಯಾಚ್ ಆಡುವೆಯಂತೆ.
ಚೆನ್ನಾಗಿ ಆಡಿದರೆ ಇಲ್ಲೇ ವಾಸಕ್ಕೆ ವ್ಯವಸ್ಥೆ ಮಾಡುತ್ತೇವೆ’’ ಎಂಬ ಭರವಸೆ ಆ ಕ್ರಿಕೆಟ್ ಕ್ಲಬ್’ನಿಂದ ಸಿಕ್ಕಿತು.

ಒಂದೇ ಒಂದು ಅವಕಾಶಕ್ಕಾಗಿ ಕಾದಿದ್ದ ಹುಡುಗ, ಸಿಕ್ಕ ಅವಕಾಶದಲ್ಲಿ ಹಿಗ್ಗಾಮುಗ್ಗ ಬಾರಿಸಿ ಬಿಟ್ಟ.
ಯಶಸ್ವಿ ಜೈಸ್ವಾಲ್’ನ ಆಟ ನೋಡಿ ಮೆಚ್ಚಿದ ಮುಸ್ಲಿಂ ಯುನೈಟೆಡ್ ಕ್ಲಬ್’ನ ಕೋಚ್ ಇಮ್ರಾನ್, ಹುಡುಗನನ್ನು ಒಂದು ಟೆಂಟ್ ಬಳಿ ಕರೆ ತರುತ್ತಾರೆ. ‘ಇಲ್ಲೇಕೆ ಕರೆ ತಂದರು’ ಎಂದು ಯೋಚಿಸುತ್ತಿದ್ದ ಹುಡುಗನಿಗೆ ಆಮೇಲೆ ಗೊತ್ತಾಗಿದ್ದು, “ನನ್ನ ಮುಂದಿನ ವಾಸ ಇಲ್ಲೇ” ಎಂದು.
ಕಬ್ಬಿಣದ ತಗಡಿನಿಂದ ಮಾಡಿದ ಟೆಂಟ್. ಬಿಸಿಲ ಧಗೆ. ನಿದ್ದೆಯಾದರೂ ಹೇಗೆ ಬಂದೀತು..? ಹಾಗೆಂದು ಹುಡುಗನಿಗೆ ಬೇರೆ ದಾರಿಯಾದರೂ ಏನಿತ್ತು..? 3 ವರ್ಷ ಅಲ್ಲೇ ಮಲಗುತ್ತಾನೆ. ಕರೆಂಟ್ ಇಲ್ಲ, ಶೌಚಾಲಯವಿಲ್ಲ. 10-14ನೇ ವಯಸ್ಸಿನಲ್ಲಿ ಪಡಬಾರದ ಯಾತನೆ ಪಟ್ಟು ಬಿಟ್ಟ ಯಶಸ್ವಿ.
ಮಳೆಗಾಲ ಬಂತೆಂದರೆ ಟೆಂಟ್ ಒಳಗೆ ನೀರು ನುಗ್ಗುತ್ತಿತ್ತು. ಯಶಸ್ವಿ ಜೈಸ್ವಾಲ್ ಹೇಳಿಕೊಂಡಂತೆ ಟೆಂಟ್’ನಲ್ಲಿ ವಾಸಿಸುತ್ತಿದ್ದ ಕೆಲ ಹುಡುಗರು ಆತನಿಗೆ ಹೊಡೆಯುತ್ತಿದ್ದರಂತೆ. ‘’ನಮಗೆಲ್ಲಾ ಅಡುಗೆ ಮಾಡಿ ಹಾಕು’’ ಎಂದು ಹಿಂಸಿಸುತ್ತಿದ್ದರಂತೆ.
ಕ್ರಿಕೆಟ್ ಆಡಲು ಹೇಗೋ ಒಂದು ಕ್ಲಬ್ ಸಿಕ್ಕಿತ್ತು. ಜೀವನ ನಡೆಯಬೇಕು, ಕೈಯಲ್ಲಿ ದುಡ್ಡಿಲ್ಲ. ಹುಡುಗ ಏನು ಮಾಡಿದ ಗೊತ್ತೇ..? ಕ್ರಿಕೆಟ್ ಮುಗಿಸಿ ಸಂಜೆ 7 ಗಂಟೆಗೆ ಟೆಂಟ್’ಗೆ ಬಂದವನೇ ಪಕ್ಕದ ಬೀದಿಯಲ್ಲಿ ಪಾನಿಪೂರಿ ವ್ಯಾಪಾರಿಯೊಬ್ಬನ ಜೊತೆ ಪಾನಿಪೂರಿ ಮಾರಲು ಶುರು ಮಾಡುತ್ತಾನೆ. ತನ್ನ ಜೊತೆ ಆಡುತ್ತಿದ್ದ ಹುಡುಗರು ಪಾನಿಪೂರಿ ತಿನ್ನಲು ಬಂದರೆ ಎಲ್ಲಿ ಹಂಗಿಸುತ್ತಾರೋ ಎಂಬ ಆತಂಕದಲ್ಲಿ ತಲೆ ತಪ್ಪಿಸಿಕೊಳ್ಳುತ್ತಿದ್ದನಂತೆ ಜೈಸ್ವಾಲ್.
ಹೀಗೇ ಸಮಯ ಉರುಳುತ್ತಿತ್ತು.. ಕಾಲಚಕ್ರ ತಿರುಗುತ್ತಲೇ ಇತ್ತು. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಕ್ರಿಕೆಟ್ ಕಲಿಯುತ್ತಿದ್ದ ಯಶಸ್ವಿ ಜೈಸ್ವಾಲ್. ಉತ್ತರ ಪ್ರದೇಶದಿಂದ ಉರುಳಿದ್ದ ಶಿಲೆಗೆ ಉಳಿ ಪೆಟ್ಟುಗಳು ಬೀಳುತ್ತಿದ್ದಂತೆ ಶಿಲೆ ಕಲೆಯಾಗಿ ಅರಳುತ್ತಿತ್ತು. ಕಷ್ಟಗಳು ಅವನನ್ನು ಮಾನಸಿಕವಾಗಿ ಗಟ್ಟಿಯಾಗಿಸಿದವು.

ಆಟಕ್ಕೆ ನಿಂತು ಬಿಟ್ಟನೆಂದರೆ ಯಶಸ್ವಿ ಜೈಸ್ವಾಲ್ ಬಾಲ ರಾಕ್ಷಸ.. ಓರಗೆಯ ಬೌಲರ್’ಗಳನ್ನು ಹುರಿದು ಮುಕ್ಕಿ ಬಿಡುತ್ತಿದ್ದ. ಅವನ ಆಟವನ್ನು ನೋಡಿದ ಕೆಲ ಹುಡುಗರು ಬೇರೆ ಬೇರೆ ಮ್ಯಾಚ್’ಗಳಿಗೆ ಕರೆದೊಯ್ಯುತ್ತಾರೆ. ಕ್ರಿಕೆಟ್ ಆಡಲು ದಿನಕ್ಕೆ 100 ರೂಪಾಯಿ ಸಂಬಳ. ಬೇರೆಯವರ ಬಳಿ ಬ್ಯಾಟ್’ಗಳನ್ನು ಕಾಡಿ ಬೇಡಿ ಆಡಬೇಕಿತ್ತು. ಜೀವನ ಕಷ್ಟವಾಗಿ ಬಿಟ್ಟಿತ್ತು. ಕ್ರಿಕೆಟ್ ಆಸೆ ಬಿಟ್ಟು ಮರಳಿ ಉತ್ತರ ಪ್ರದೇಶಕ್ಕೆ ಹೋಗೋಣ ಎಂದು ನಿರ್ಧಾರ ಮಾಡಿ ಬಿಡುತ್ತಾನೆ ಯಶಸ್ವಿ ಜೈಸ್ವಾಲ್.
ಕೆಲವೊಮ್ಮೆ ದೇವರೇ ಮನುಷ್ಯ ರೂಪದಲ್ಲಿ ಬಂದು ಬಿಡುತ್ತಾನೆ. ಸೋತು ಕೈಚೆಲ್ಲಿ ಕೂತಿದ್ದ ಯಶಸ್ವಿ ಜೈಸ್ವಾಲ್ ಪಾಲಿಗೆ ಆ ದಿನ ದೇವರಾಗಿ ಬಂದವರು
ಜ್ವಾಲಾ ಸಿಂಗ್. ಮುಂಬೈನ ಫೇಮಸ್ ಕ್ರಿಕೆಟ್ ಕೋಚ್.
2013, ಡಿಸೆಂಬರ್ ತಿಂಗಳು. ಒಳ್ಳೆಯ ಆಟಗಾರರಿಗಾಗಿ ಹುಡುಕುತ್ತಿದ್ದ ಜ್ವಾಲಾ ಸಿಂಗ್ ಕಣ್ಣಿಗೆ ಬಿದ್ದವನು ಯಶಸ್ವಿ ಜೈಸ್ವಾಲ್. ‘ಎ’ ಡಿವಿಜನ್ ಬೌಲರ್”ಗಳ ವಿರುದ್ಧ ಬೀಡು ಬೀಸಾಗಿ ಬ್ಯಾಟ್ ಬೀಸುತ್ತಿದ್ದ ಹುಡುಗನ್ನು ನೋಡಿ ಜ್ವಾಲಾ ಸಿಂಗ್ ಬೆಕ್ಕಸ ಬೆರಗಾಗಿ ಬಿಡುತ್ತಾರೆ. ಅಷ್ಟೇ.. ಅವತ್ತೇ ನಿರ್ಧಾರ ಮಾಡಿ ಬಿಡುತ್ತಾರೆ “ನನ್ನ ಪಾಲಿನ ಅರ್ಜುನ ಇವನೇ” ಎಂದು.

ಹುಡುಗನನ್ನು ಹತ್ತಿರಕ್ಕೆ ಕರೆದ ಜ್ವಾಲಾ ಸಿಂಗ್ “ಎಲ್ಲಿ ನಿನ್ನ ಮನೆ” ಎಂದು ಕೇಳುತ್ತಾರೆ. ‘’ಪಕ್ಕದಲ್ಲೇ ಒಂದು ಟೆಂಟ್’ನಲ್ಲಿದ್ದೇನೆ ಸರ್” ಎನ್ನುತ್ತಾನೆ ಯಶಸ್ವಿ.
ಇಂಥದ್ದೇ ಹಿನ್ನೆಲೆಯಿಂದ ಬಂದವರು ಜ್ವಾಲಾ ಸಿಂಗ್. ಹುಡುಗನಿಗೆ ಹೇಳಿದ ಮಾತು, “ನಿನ್ನ ಕ್ರಿಕೆಟ್ ಆಸಕ್ತಿ ಹೇಗಿದೆ ಎಂದು ನಾನು ಪರೀಕ್ಷೆ ಮಾಡಬೇಕು. ನನ್ನ ಬಳಿ ಪ್ರಾಕ್ಟೀಸ್’ಗೆ ಬಾ” ಎಂದು.

ಅಲ್ಲಿಂದ ಶುರುವಾಗಿತ್ತು ಯಶಸ್ವಿ ಜೈಸ್ವಾಲ್”ನ ಜೀವನದ ಮತ್ತೊಂದು ಅಧ್ಯಾಯ. ಮುಂಬೈ ಕ್ರಿಕೆಟ್ ಸಂಸ್ಥೆಯ ಡಿವಿಜನ್ ಮ್ಯಾಚ್’ಗಳಲ್ಲಿ ಶತಕಗಳ ಮೇಲೆ ಶತಕಗಳನ್ನು ಬಾರಿಸಿದ ಜೈಸ್ವಾಲ್, 16ನೇ ವಯಸ್ಸಿನಲ್ಲಿ ಇಂಡಿಯಾ ಅಂಡರ್-19 ತಂಡಕ್ಕೆ ಆಯ್ಕೆಯಾಗುತ್ತಾನೆ. 2020ರಲ್ಲಿ ಅಂಡರ್-19 ವಿಶ್ವಕಪ್’ನಲ್ಲೂ ಆಡುತ್ತಾನೆ. ಟೂರ್ನಿಯಲ್ಲೇ ಅತೀ ಹೆಚ್ಚು 400 ರನ್ ಗಳಿಸಿದವನ ಮುಂದಿನ ಪ್ರಯಾಣ ಮುಂಬೈ ಸೀನಿಯರ್ ಕ್ರಿಕೆಟ್ ತಂಡದ ಜೊತೆ.
2019ರಲ್ಲಿ ಬೆಂಗಳೂರಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ವಿಜಯ್ ಹಜಾರೆ ಟೂರ್ನಿಯಲ್ಲಿ ದ್ವಿಶತಕ ಬಾರಿಸಿದ್ದಾಗ, ಈಗಿನ ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ “Next Superstar” ಎಂದು ಟ್ವೀಟ್ ಮಾಡಿದ್ದರು.
ರೋಹಿತ್ ಮಾತು ನಿಜವಾಗಿತ್ತು. ಮುಂಬೈನ ಟೆಂಟ್’ನಲ್ಲಿ ಮಲಗುತ್ತಿದ್ದ ಹುಡುಗ, ಆಜಾದ್ ಮೈದಾನದಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ, ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸುತ್ತಾನೆ. ಅಲ್ಲಿಂದ ಆರೇ ತಿಂಗಳಲ್ಲಿ ಟೆಸ್ಟ್ ದ್ವಿಶತಕ. ಆಸ್ಟ್ರೇಲಿಯಾದಲ್ಲಿ ಆಡಿದ ಪ್ರಪ್ರಥಮ ಟೆಸ್ಟ್’ನಲ್ಲೇ ಶತಕ.., ಈಗ ಇಂಗ್ಲೆಂಡ್’ನಲ್ಲಿ ಆಡಿದ ಮೊದಲ ಟೆಸ್ಟ್’ನಲ್ಲೂ ಶತಕ..

ಇವತ್ತಿಗೆ 23 ವರ್ಷದ ಯಶಸ್ವಿ ಜೈಸ್ವಾಲ್”ನ ಹೆಸರಲ್ಲಿರುವ ದಾಖಲೆಗಳ ಬಗ್ಗೆ ಗೊತ್ತಾ..?

* ಅಂಡರ್-19 ವಿಶ್ವಕಪ್’ನಲ್ಲಿ ಶತಕ
* ರಣಜಿ ಟ್ರೋಫಿಯಲ್ಲಿ ಶತಕ
* ಇರಾನಿ ಕಪ್”ನಲ್ಲಿ ಶತಕ
* ದುಲೀಪ್ ಟ್ರೋಫಿಯಲ್ಲಿ ಶತಕ
* ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕ
* ಭಾರತ ‘ಎ’ ತಂಡದ ಪರ ಶತಕ
* ಐಪಿಎಲ್’ನಲ್ಲಿ ಶತಕ
* ಅಂತರಾಷ್ಟ್ರೀಯ ಟಿ20ಯಲ್ಲಿ ಶತಕ
* ಟೆಸ್ಟ್ ಪದಾರ್ಪಣೆಯಲ್ಲಿ ಶತಕ
* ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ದ್ವಿಶತಕ
* ಲಿಸ್ಟ್ ‘ಎ’ ಕ್ರಿಕೆಟ್’ನಲ್ಲಿ ದ್ವಿಶತಕ
* ಟೆಸ್ಟ್ ಕ್ರಿಕೆಟ್’ನಲ್ಲಿ ದ್ವಿಶತಕ
* ವೆಸ್ಟ್ ಇಂಡೀಸ್’ನಲ್ಲಿ ಟೆಸ್ಟ್ ಶತಕ
* ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕ
* ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ

ಮುಂಬೈನ ಆಜಾದ್ ಮೈದಾನದ ಬಳಿ 10-12 ವರ್ಷಗಳ ಹಿಂದೆ ಪಾನಿಪೂರಿ ಮಾರುತ್ತಿದ್ದ ಹುಡುಗ ತುಂಬಾ ದೂರ ಸಾಗಿ ಬಂದಿದ್ದಾನೆ.

“ಯಶಸ್ವೀಭವ, ವಿಜಯೀಭವ” ಯಶಸ್ವಿ ಜೈಸ್ವಾಲ್..!

-ಸುದರ್ಶನ್ ಗೌಡ, ಬೆಂಗಳೂರು
—–

 

The post ಯಶಸ್ವೀಭವ, ವಿಜಯೀಭವ” ಯಶಸ್ವಿ ಜೈಸ್ವಾಲ್..! ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..! -ಸುದರ್ಶನ್ ಗೌಡ, ಬೆಂಗಳೂರು appeared first on Karnataka Kahale.

]]>
ಕಾವ್ಯ ಕಹಳೆ, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಗೆದ್ದೇ ಗೆಲ್ಲುವುದು ನಮ್ಮ ಭಾರತ https://www.karnatakakahale.com/news/14471 Sun, 19 Nov 2023 06:33:52 +0000 https://www.karnatakakahale.com/?p=14471 ಗೆದ್ದೇ ಗೆಲ್ಲುವುದು ನಮ್ಮ ಭಾರತ ಆರಂಭದಿ ಗಿಲ್ ಗುಟ್ಟುವ ಶುಭ್ ಮ್ಯಾನ್ ರನ್ ರೇಟ್ ಆರೋಹಿತ ರೋಹಿಟ್ ಮ್ಯಾನ್ ಕಿಂಗ್ ಕೋಹ್ಲಿಯ ಬ್ಯಾಟಿಂಗ್ ವಿರಾಡ್ರೂಪ ಗೆಲುವಿನ ಶ್ರೇಯಸ್ಸೇ ಅಯ್ಯರ್ ಎಂಬ ಭೂಪ ಕೆಲವೇ ಓವರ್ನಲ್ಲಿ ರನ್ ಹರಿಸುವ ರಾಹುಲ್ ಆರನೇ ಯಾದಿಯಲ್ಲಿ…

The post ಕಾವ್ಯ ಕಹಳೆ, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಗೆದ್ದೇ ಗೆಲ್ಲುವುದು ನಮ್ಮ ಭಾರತ appeared first on Karnataka Kahale.

]]>
ಗೆದ್ದೇ ಗೆಲ್ಲುವುದು ನಮ್ಮ ಭಾರತ

ಗೆದ್ದೇ ಗೆಲ್ಲುವುದು ನಮ್ಮ ಭಾರತ

ಆರಂಭದಿ ಗಿಲ್ ಗುಟ್ಟುವ ಶುಭ್ ಮ್ಯಾನ್
ರನ್ ರೇಟ್ ಆರೋಹಿತ ರೋಹಿಟ್ ಮ್ಯಾನ್
ಕಿಂಗ್ ಕೋಹ್ಲಿಯ ಬ್ಯಾಟಿಂಗ್ ವಿರಾಡ್ರೂಪ
ಗೆಲುವಿನ ಶ್ರೇಯಸ್ಸೇ ಅಯ್ಯರ್ ಎಂಬ ಭೂಪ

ಕೆಲವೇ ಓವರ್ನಲ್ಲಿ ರನ್ ಹರಿಸುವ ರಾಹುಲ್
ಆರನೇ ಯಾದಿಯಲ್ಲಿ ಸೂರ್ಯನ ಕಮಾಲ್
ಬ್ತಾಟ್ ಹಿಡಿದರೆ ರವೀಂದ್ರ ಬೌಲರ್ಗೆ ಶೆಡ್ಡು
ಬಾಲ್ ಗಿರ ಗಿರ ತಿರುಗಿಸುವ ಬಲಾಡ್ಯ ಜಡ್ಡು

ಶಮಿಯ ಸ್ವಿಂಗ್ ಗೆ ಬ್ಯಾಟರ್ ಪಡೆ ದೂಮ್ರ
ಫ್ರೀಹಿಟ್ ನಲ್ಲೂ ಬೆಸ್ಟ್ ಯಾರ್ಕರ್ ಬೂಮ್ರಾ
ಸ್ಪಿನ್ ಸಾಮ್ರಾಜ್ಯಕೆ ಕುಲ್ದೀಪನೆ ಮಹಾರಾಜ
ಮದಗಜಗಳಿಗೆ ಆಹಾರವಾಗದಿರಲಿ ಸಿರಾಜ

ಹತ್ತರಲ್ಲೂ ಬ್ಲೂ ಬಾಯ್ಸ್ ದೇ ಗೆಟ್ ಆಪ್
ಹನ್ನೊಂದರಲ್ಲಿ ತೋರಿದರೆ ವರ್ಲ್ಡ ಕಪ್
ದಡ ಸೇರಿಸುವನು ನಾವಿ(ಯ)ಕ ರೋಹಿತ
ಗೆದ್ದೇ ಗೆಲ್ಲುವುದು ವಿಶ್ವಕಪ್ ನಮ್ಮ ಭಾರತ

-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.

The post ಕಾವ್ಯ ಕಹಳೆ, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಗೆದ್ದೇ ಗೆಲ್ಲುವುದು ನಮ್ಮ ಭಾರತ appeared first on Karnataka Kahale.

]]>