The post ಮೇ 31ರಂದು ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಕೆಯುಡಬ್ಲೂಜೆ ಪ್ರತಿಭಾ ಪುರಸ್ಕಾರ: ಶಿವಾನಂದ ತಗಡೂರು appeared first on Karnataka Kahale.
]]>
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ)ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮೇ 31 ರಂದು ಭಾನುವಾರ ಚಿಕ್ಕಬಳ್ಳಾಪುರ ಕನ್ನಡ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಚಿಕ್ಕಬಳ್ಳಾಪುರ ಪತ್ರಿಕಾ ಭವನದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗಿದೆ.
ಸಭೆಯಲ್ಲಿ ಮಾತನಾಡಿದ ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಮೋಕ್ಷಗುಂಡಂ ಸರ್.ಎಂ.ವಿಶೇಶ್ವರಯ್ಯ ಜನ್ಮ ಸ್ಥಳ, ನಂದಿ ಬೆಟ್ಟದ ಸೊಬಗು, ದ್ರಾಕ್ಷಿಯ ನಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಆಯೋಜಿಸುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ರಾಜ್ಯ ಸಂಘದಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು ಇದು ರಾಜ್ಯ ಮಟ್ಟದ 6ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದಾಗಿದೆ ಎಂದರು.
ಬೀದರ್‌ನಿಂದ ಚಾಮರಾಜಪೇಟೆಯವರೆಗೂ ಕೊಡುಗು-ಕೋಲಾರದಿಂದ ಹಿಡಿದು ರಾಜ್ಯದ 31 ಜಿಲ್ಲೆಗಳ ಪತ್ರಕರ್ತರ ಮಕ್ಕಳು ಹಾಗೂ ಪೋಷಕರು ಸೇರಿ ಸುಮಾರು 400 ರಿಂದ 500 ಕ್ಕೂ ಹೆಚ್ಚು ಮಂದಿ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪ್ರತಿಭಾ ಪುರಸ್ಕಾರ ಸ್ವೀಕರಿಸಲು ಬರುವ ದೂರದ ಜಿಲ್ಲೆಗಳ ವಿದ್ಯಾರ್ಥಿ ಪೋಷಕರಿಗೆ ಸೂಕ್ತ ವಸತಿ, ಊಟ, ತಿಂಡಿ ಸೌಕರ್ಯ ಮಾಡಲು ಜಿಲ್ಲಾ ಸಂಘಕ್ಕೆ ಸೂಚಿಸಿದ ಅವರು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಿನಿ ರಾಜ್ಯ ಪತ್ರಕರ್ತರ ಸಮ್ಮೇಳನದ ಮಾದರಿಯಲ್ಲಿ ನಡೆಯುವಂತೆ ಸಲಹೆ ನೀಡಿದರು.
ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಆದ್ಯತೆ ನೀಡಬೇಕು, ಜಿಲ್ಲೆಯ ಕಲೆ, ಸಂಸ್ಕೃತಿಯ ಹಿರಿಮೆಯನ್ನು ಪರಿಚಯಿಸುವ ವಸ್ತು ಪ್ರದರ್ಶನ ಆಯೋಜನೆಗೆ ಸಲಹೆ ನೀಡಿ ಒಟ್ಟಾರೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಪತ್ರಕರ್ತರ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಆಯೋಜಿಸಬೇಕು ಎಂದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ರಾಜ್ಯ ಸಂಘದಿಂದ ನಗದು, ಪ್ರಶಸ್ತಿ ಪತ್ರ ಬಹುಮಾನದ ಜೊತೆಗೆ ಸ್ಮರಣಿಕೆ ನೀಡಲಾಗುವುದೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ವಿ.ರವಿಕುಮಾರ್ ಮಾತನಾಡಿ, ರಾಜ್ಯ ಸಂಘದ ನಿರೀಕ್ಷೆಗೂ ಮೀರಿ ಜಿಲ್ಲಾ ಸಂಘವೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಸಂಘಟಿಸಲಿದೆ. ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾ ಸಂಘ ತಾಲೂಕು ಸಂಘಗಳ ಪದಾಧಿಕಾರಿಗಳನ್ನು ಕರೆದು ವಿವಿಧ ಜವಾಬ್ದಾರಿಗಳನ್ನು ನೀಡಲು ಉಪ ಸಮಿತಿಗಳನ್ನು ರಚಿಸಲಾಗುವುದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿ ಪೋಷಕರಿಗೆ ಜಿಲ್ಲೆಯ ಪ್ರಮುಖ ಸ್ಥಳಗಳ ಭೇಟಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ರಾಜ್ಯ ಖಜಾಂಚಿ ವಾಸುದೇವಹೊಳ್ಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ರಾಜ್ಯ ಸಮಿತಿ ಸದಸ್ಯರಾದ ಎನ್.ಚಂದ್ರಶೇಖರ್ ಮತ್ತಿತರರು ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಣಿ ಮಂಡಳಿ ಸದಸ್ಯರು, ವಿವಿಧ ತಾಲೂಕು ಸಂಘಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಕೇಂದ್ರದ ಹಿರಿಯ ಪತ್ರಕರ್ತರು, ನಿಕಟಪೂರ್ವ ಪದಾಧಿಕಾರಿಗಳು ಉಪಸ್ಥಿತರಿದ್ದು, ಪ್ರತಿಭಾ ಪುರಸ್ಕಾರ ಸಮಾರಂಭದ ಯಶಸ್ವಿನ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀಡಿದರು.
The post ಮೇ 31ರಂದು ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಕೆಯುಡಬ್ಲೂಜೆ ಪ್ರತಿಭಾ ಪುರಸ್ಕಾರ: ಶಿವಾನಂದ ತಗಡೂರು appeared first on Karnataka Kahale.
]]>The post ಅನುದಿನ ಕವನ-೧೯೨೬, ಹಿರಿಯ ಕವಿ:ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು appeared first on Karnataka Kahale.
]]>2.
ಅಸ್ತವ್ಯಸ್ತ ಬದುಕಿನ ಗದ್ದಲದಲ್ಲೂ
‘ಬದುಕಿದೆ’
ಸಂತೆಯ ಮಹಾಗದ್ದಲದಲ್ಲೂ
ಒಂದು ಮೌನವಿದೆ.
3.
ದೂರದ ಹಕ್ಕಿಯ ಕರೆಗೆ
ಓಗೊಡುವ
ಒಂದು ಮೌನದಲ್ಲಿ ಅರಳಿದೆ
ಕವಿತೆ.

-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು
The post ಅನುದಿನ ಕವನ-೧೯೨೬, ಹಿರಿಯ ಕವಿ:ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು appeared first on Karnataka Kahale.
]]>The post ಅನುದಿನ ಕವನ-೧೯೨೫, ಕವಯತ್ರಿ:ಮಂಜುಳಾ ಭಾರ್ಗವಿ, ಬೆಂಗಳೂರು appeared first on Karnataka Kahale.
]]>ರಾತ್ರಿಯಿಡೀ ಸಂಭಾಷಣೆಯಲ್ಲಿ ತೊಡಗಿದ್ದೆ.
ಚೂರು ವಿಶ್ರಮಿಸುವೆ. ಕನಸಿನ ನೆನಪಿಲ್ಲ.
ಒಡಲಲ್ಲೀಗ ಪ್ರೀತಿಯ ನದಿ ಕದಲುತ್ತಿದೆ.
ಜೀವನ್ಮುಖಿ ಹಾಕಿದ ಹುಟ್ಟ ನೆನಪಿಲ್ಲ.
ಮುಳ್ಳ ಬೇಲಿಗಳನ್ನೆಲ್ಲ ಹೂವಾಗಿಸುವಷ್ಟು
ದಿಟ್ಟ ಪ್ರೇಮಿಯ ಮುಖ ನೆನಪಿಲ್ಲ.
ಇಳೆ ತಂಪು ತನುವಾಗುತ್ತಿದೆ
ಮಳೆ ಸುರಿದ ನೆನಪಿಲ್ಲ.
ನಿದಿರೆಗೆಟ್ಟ ತಾರೇ ಆಗಸದ ತುಂಬೆಲ್ಲ
ನಕ್ಷತ್ರಗಳ ಎಣಿಸಿದ್ದೆ ಲೆಕ್ಕ ನೆನಪಿಲ್ಲ.
ಮಾಯಾವಿ ಕೌದಿ ಹೊದಿಸಿದ್ದು ಯಾರು?
ತೋಳ ತೆಕ್ಕೆ ತಬ್ಬುಗೆಯ ನೆನಪಿಲ್ಲ.
ಮಳೆಯಂತವಳ ಒಡಲಲ್ಲೀಗ
ನೂರು ಕಡಲು ಅಲೆಗಳ ನೆನಪಿಲ್ಲ.

-ಮಂಜುಳಾ ಭಾರ್ಗವಿ, ಬೆಂಗಳೂರು
The post ಅನುದಿನ ಕವನ-೧೯೨೫, ಕವಯತ್ರಿ:ಮಂಜುಳಾ ಭಾರ್ಗವಿ, ಬೆಂಗಳೂರು appeared first on Karnataka Kahale.
]]>The post ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ: ಮಹಿಳೆಯರಿಗೆ 33% ಮೀಸಲಾತಿ ನೀಡಬೇಕೆಂದು ಬಿಜೆಪಿ ಎಂದಿಗೂ ಒತ್ತಾಯಿಸಿಲ್ಲ -ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.
]]>
ಹಾವೇರಿ, ಏ. 19: ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದ್ದಾರೆ. ನಾವು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಅವರು ಭಾನುವಾರ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಹಿಳೆಯರಿಗೆ 33% ಮೀಸಲಾತಿ ನೀಡಬೇಕೆಂದು ಬಿಜೆಪಿ ಎಂದಿಗೂ ಒತ್ತಾಯಿಸಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ , ಸಂವಿಧಾನದ 73, 74 ನೇ ತಿದ್ದುಪಡಿಗಳನ್ನು ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ತಂದಿದ್ದರು. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಬೇಕೆಂದು ಬಿಜೆಪಿ ಎಂದಿಗೂ ಒತ್ತಾಯಿಸಿಲ್ಲ. ಈಗ ಮಾತ್ರ ಮಹಿಳಾ ಮೀಸಲಾತಿಗೆ ಒತ್ತಾಯಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕ್ಷೇತ್ರ ಮರುವಿಂಗಡನೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ದಕ್ಷಿಣದಲ್ಲಿ 50% ಮಾಡಿದರೆ ಉತ್ತರ ಪ್ರದೇಶದಲ್ಲಿ 80 ಸ್ಥಾನಗಳಿವೆ. ಅಲ್ಲಿಗೆ 120 ಸ್ಥಾನಗಳಾಗುತ್ತವೆ. ಕರ್ನಾಟಕದಲ್ಲಿ 42 ಸ್ಥಾನಗಳಾಗುತ್ತವೆ. ಉತ್ತರ ಭಾರತದಲ್ಲಿ ಸ್ಥಾನಗಳು ಹೆಚ್ಚಾಗುವುದರ ಬಗ್ಗೆ ನಮ್ಮ ವಿರೋಧವೇ ಹೊರತು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ. ಅದರ ಪರವಾಗಿದ್ದೇವೆ ಎಂದರು.
ಸಂವಿಧಾನ ತಿದ್ದುಪಡಿಗೆ ಮೂರನೇ ಎರಡರಷ್ಟು ಬಹುಮತ ಲೋಕಸಭೆಯಲ್ಲಿ ಇರಬೇಕು. 50% ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಬೇಕು ಎಂದರು. ಕ್ಷೇತ್ರ ಮರು ವಿಂಗಡಣೆಗೆ ವಿರೋಧ ಮಾಡಿದ್ದೇವೆ ಹೊರತು ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ ಎಂದು ಹೇಳಿದರು.
ಪ್ರಧಾನಮಂತ್ರಿಗಳಿಂದ ರಾಜಕೀಯ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಗಳು ಎಂದು ಭಾಷಣ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ತಮಿಳುನಾಡು , ಪಶ್ಚಿಮ ಬಂಗಾಳದ ಚುನಾವಣೆ ಇರುವುದರಿಂದ ರಾಜಕೀಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಪಕ್ಷ ಎಂದಿಗೂ ವಿರೋಧ ಮಾಡಿಲ್ಲ: 450 ಮತಗಳನ್ನು ಪಡೆದು ಅಂಗೀಕಾರವಾಗಿರುವ ಮಸೂದೆಯನ್ನು ಮೋದಿಯವರು ಏಕೆ ಜಾರಿಮಾಡಲಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಕ್ಷೇತ್ರ ಮರುವಿಂಗಡನೆಯನ್ನು ಬೇರ್ಪಡಿಸಿ ಮಸೂದೆ ತಂದಿದ್ದರೆ, ಯಾರೂ ವಿರೋಧಿಸುತ್ತಿರಲಿಲ್ಲ.
ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಪಕ್ಷ ಎಂದಿಗೂ ವಿರೋಧ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮೇಲ್ಮನವಿಗೆ ಅವಕಾಶ: ಜನಪ್ರತಿನಿಧಿಗಳು ಜೈಲು ಸೇರುತ್ತಿರುವುದರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದರು.
ಮಟ್ಕಾ ದಂಧೆ ನಿಯಂತ್ರಣದಲ್ಲಿದೆ: ರಾಣೆಬೆನ್ನೂರು ಸುತ್ತ ಮುತ್ತ ಮಟ್ಕಾ ದಂಧೆ ವ್ಯಾಪಕವಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಥಳೀಯ ಶಾಸಕರು ಕ್ರಮ ಕೈಗೊಂಡಿದ್ದಾರೆ ಎಂದ ಮುಖ್ಯಮಂತ್ರಿಗಳು ಪ್ರಸ್ತುತ ಮಟ್ಕಾ ದಂಧೆ ನಿಯಂತ್ರಣದಲ್ಲಿದೆ ಎಂದರು.
The post ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ: ಮಹಿಳೆಯರಿಗೆ 33% ಮೀಸಲಾತಿ ನೀಡಬೇಕೆಂದು ಬಿಜೆಪಿ ಎಂದಿಗೂ ಒತ್ತಾಯಿಸಿಲ್ಲ -ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Karnataka Kahale.
]]>The post ಪ್ರಾಧ್ಯಾಪಕ ವೃತ್ತಿಗೆ ಘನತೆ ತಂದುಕೊಟ್ಟವರು ಜಿ.ಎಸ್.ಎಸ್. -ಡಾ. ಕುಮಾರಚಲ್ಯ appeared first on Karnataka Kahale.
]]>The post ಪ್ರಾಧ್ಯಾಪಕ ವೃತ್ತಿಗೆ ಘನತೆ ತಂದುಕೊಟ್ಟವರು ಜಿ.ಎಸ್.ಎಸ್. -ಡಾ. ಕುಮಾರಚಲ್ಯ appeared first on Karnataka Kahale.
]]>The post ಮೊಬೈಲ್ ಯುವ ಪೀಳಿಗೆಗೆ ಮಾರಕ: ಪಿಎಸ್‌ಐ ಮಂಜುಳ.ಡಿ ಕಿವಿಮಾತು appeared first on Karnataka Kahale.
]]>
ಹರಿಹರ: ಯುವ ಸಮೂಹ ಮೊಬೈಲ್ ಗೀಳು ಬಿಟ್ಟು ಪರಿಶ್ರಮದಿಂದ ಅಧ್ಯಯನ ಮಾಡಬೇಕು. ದುಶ್ಚಟಗಳಿಂದ ದೂರವಿದ್ದು, ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಗ್ರಾಮಾಂತರ ಪೋಲಿಸ್ ಉಪನಿರೀಕ್ಷಕರಾದ ಶ್ರೀಮತಿ ಮಂಜುಳ.ಡಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ-೧ ಮತ್ತು ೨ ರ ವತಿಯಿಂದ ತಾಲೂಕಿನ ಸಾಲಕಟ್ಟೆ ಆಯೋಜಿಸಿರುವ ವಾರ್ಷಿಕ ಶಿಬಿರದ ಮೂರನೆಯ ದಿನದ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿಗೆ ನಡೆಯುತ್ತಿರುವ ಸೈಬರ್ ಕ್ರೈಂಗಳ ಬಗ್ಗೆ ಯುವಜನತೆಯನ್ನು ಎಚ್ಚರಿಸಿದರು. ವಿದ್ಯಾರ್ಥಿಗಳು ಪರಿಶ್ರಮದಿಂದ ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ. ಪೋಷಕರು ಮಕ್ಕಳ ನಡವಳಿಕೆ ಮೇಲೆ ನಿಗಾ ವಹಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರು ಮತ್ತು ವಕೀಲರು ಆಗಿರುವ ವೀರೇಶ್ ಬ.ಅಜ್ಜಣ್ಣನವರ್ ಮಾತನಾಡಿ, ಯುವ ಜನತೆ ಬಯಸಿದರೆ ಇಡೀ ದೇಶದಲ್ಲಿ ಪರಿವರ್ತನೆ ತರುತ್ತದೆ. ಇವರು ಡ್ರಗ್ಸ್, ಆಲ್ಕೋಹಾಲ್, ಗುಟ್ಕಾ ಮತ್ತು ಇತರೆ ಮಾದಕ ವಸ್ತುಗಳ ದಾಸರಾಗದಂತೆ ತಡೆಯಬೇಕು. ಇಂಥ ಪ್ರಕರಣಗಳಿದ್ದರೆ ಬೇಗ ಗುರುತಿಸಿ ಆಪ್ತ ಸಮಾಲೋಚನೆ ಮೂಲಕ ಬಿಡಿಸಬೇಕು. ತಜ್ಞರ ಸಲಹೆ ಪಡೆಯಬೇಕು. ಮೊಬೈಲ್ ದುರ್ಬಳಕೆ ತಡೆಗೂ ಇದು ಅನ್ವಯವಾಗುತ್ತದೆ ಎಂದರು.
ಗ್ರಾಮದ ಮುಖಂಡರಾದ ಎಸ್.ಬಿ.ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ಎಸ್.ಬಿ.ರೇವಣಸಿದ್ದಪ್ಪ, ಎಂ.ಜಿ.ಮಹದೇವಪ್ಪ, ಕೆ.ವೈ.ಅಶೋಕ, ಜಿ.ಸಿ.ಮಹೇಶ್ವರಪ್ಪ, ಶಿವನಂದಪ್ಪ ಇಟಿಗಿ, ಟಿ.ಎಂ.ವೀರಯ್ಯ, ಎ.ಎ.ದಂಡ್ಯೆಪಪ್ಪ ಇನ್ನಿತತರು ಹಾಗೂ ಕಾಲೇಜಿನ ವಾಣಿಜ್ಯಶಾಸ್ತçದ ಸಹ ಪ್ರಾಧ್ಯಾಪಕರಾದ ಡಾ.ದಾಕ್ಷಾಯಿಣಿ.ಜಿ.ಎನ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಮತಾ.ಹೆಚ್.ಸಾಹುಕಾರ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶಮಾ ತುಮ್ಮಿನಕಟ್ಟಿ, ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೆಂಕಪ್ಪನವರ ಬಸವರಾಜು, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಯೋಗೇಶ್.ಕೆ.ಜೆ, ಹನುಮಂತಪ್ಪ.ಕೆ.ವೈ, ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸರಾದ ಶ್ರೀಮತಿ ನಾಗವೇಣಿ.ಆರ್.ಎಸ್, ಐಶ್ವರ್ಯ ಜೆ.ಶೆಟ್ಟರ್ ಅವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
The post ಮೊಬೈಲ್ ಯುವ ಪೀಳಿಗೆಗೆ ಮಾರಕ: ಪಿಎಸ್‌ಐ ಮಂಜುಳ.ಡಿ ಕಿವಿಮಾತು appeared first on Karnataka Kahale.
]]>The post ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ: ಯುವಜನತೆಗೆ ಸೇವಾದಳದ ಸಂಚಾಲಕ ಫಕೀರಪ್ಪ ಗೌಡ ಹಳೇಮನಿ ಕಿವಿಮಾತು appeared first on Karnataka Kahale.
]]>ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ-1 ಮತ್ತು 2 ರ ವತಿಯಿಂದ ತಾಲೂಕಿನ ಸಾಲಕಟ್ಟೆ ಆಯೋಜಿಸಿರುವ ವಾರ್ಷಿಕ ಶಿಬಿರದ ಮೊದಲ ದಿನದ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೈನಿಕರ ತ್ಯಾಗವನ್ನು ಸ್ಮರಿಸುವುದು ಮತ್ತು ಪ್ರತಿಯೊಂದು ಸಂದರ್ಭದಲ್ಲೂ ದೇಶದ ಹಿತಾಸಕ್ತಿಯನ್ನು ಮೊದಲು ಪರಿಗಣಿಸುವುದು. ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಲಾಂಛನಗಳಿಗೆ ಗೌರವ ನೀಡುವುದು. ಭಾರತದ ಶ್ರೀಮಂತ ಪರಂಪರೆ, ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಮತ್ತು ಮಹನೀಯರ ತ್ಯಾಗವನ್ನು ಅರ್ಥಮಾಡಿಕೊಳ್ಳುವ ಮೂಲಕ, ಜ್ಞಾನಾರ್ಜನೆಯ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುಬೇಕು. ಹೊಸ ಆಲೋಚನೆಗಳ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಯುವಜನತೆಯ ಅಧ್ಯತೆಗಳಾಗಲಿ ಎಂದು ಆಶಿಸಿದರು.

ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಡಾ.ಯತೀಶ್ ಎಲ್.ಕೊಡಾವತ್ ಅವರು ಮಾತನಾಡಿ, ಭಾರತೀಯ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರ್ಯ ಎಂಬ ಪದವನ್ನು ನೇರವಾಗಿ ಉಲ್ಲೇಖಿಸಿಲ್ಲ, ಆದರೆ ಸಂವಿಧಾನದ ವಿಧಿ 19(1)(ಎ) ನಲ್ಲಿ ‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ದ ಭಾಗವಾಗಿ ಗುರುತಿಸಲ್ಪಟ್ಟಿದೆ. ರಾಷ್ಟ್ರದ ಭದ್ರತೆ, ಸಾರ್ವಭೌಮತೆ, ಸೌಹಾರ್ದ ಸಂಬಂಧಗಳು ಮತ್ತು ನ್ಯಾಯಾಂಗ ನಿಂದನೆ ಮುಂತಾದ ಕಾರಣಗಳಿಗಾಗಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸಮಂಜಸವಾದ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಪತ್ರಿಕಾ ಸ್ವಾತಂತ್ರ್ಯ ಕುರಿತು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಲಗನಹಳ್ಳಿಯ ಗ್ರಾಪಂ ಕಾರ್ಯದರ್ಶಿ ಮಾತನಾಡಿ, ಸ್ಥಳೀಯ ಉತ್ಪನ್ನಗಳನ್ನು ಬೆಂಬಲಿಸುವ ಮೂಲಕ ಯುವಕರು ನೈಜ ದೇಶಪ್ರೇಮವನ್ನು ಬೆಳೆಸಿಕೊಳ್ಳಿ ಎಂದು ಮನವಿ ಮಾಡಿದರು.
ಗ್ರಾಮದ ಮುಖಂಡರಾದ ಕೆ.ಎಚ್.ಚಂದ್ರಪ್ಪ, ಟಿ.ಎಂ.ಮಹೇಶ್ವರಪ್ಪ, ಎಸ್.ಬಿ.ಜಗದೀಶ್, ಎಸ್.ಬಿ.ಸಿದ್ದಪ್ಪ, ಬೆಂಡೆಕಾಯಿ ಜಯಣ್ಣ, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿಗಳಾದ ಯೋಗೇಶ್.ಕೆ.ಜೆ, ಹನುಮಂತಪ್ಪ.ಕೆ.ವೈ, ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸರಾದ ಶ್ರೀಮತಿ ನಾಗವೇಣಿ.ಆರ್.ಎಸ್, ಐಶ್ವರ್ಯ ಜೆ.ಶೆಟ್ಟರ್ ಅವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿನಿ ಕು.ಮಾನಸ ಪ್ರಾರ್ಥಿಸಿದರು. ಪ್ರಕೃತಿ ಸ್ವಾಗತಿಸಿದರು. ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು. ಅಕ್ಷತಾ ವಂದಿಸಿದರು.
The post ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ: ಯುವಜನತೆಗೆ ಸೇವಾದಳದ ಸಂಚಾಲಕ ಫಕೀರಪ್ಪ ಗೌಡ ಹಳೇಮನಿ ಕಿವಿಮಾತು appeared first on Karnataka Kahale.
]]>The post ವಿಶ್ವಜ್ಞಾನಿ ಡಾ. ಅಂಬೇಡ್ಕರ್ ಅವರಂತೆ ಅಧ್ಯಯನಶೀಲರಾಗಬೇಕು – ಪ್ರೊ. ಆರ್. ತಿಮ್ಮರಾಯಪ್ಪ appeared first on Karnataka Kahale.
]]>
The post ವಿಶ್ವಜ್ಞಾನಿ ಡಾ. ಅಂಬೇಡ್ಕರ್ ಅವರಂತೆ ಅಧ್ಯಯನಶೀಲರಾಗಬೇಕು – ಪ್ರೊ. ಆರ್. ತಿಮ್ಮರಾಯಪ್ಪ appeared first on Karnataka Kahale.
]]>The post ಎನ್.ಎಸ್.ಎಸ್ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರ ಕಲಿಯಲು ಸಾಧ್ಯ: ಶಾಸಕ ಬಿ.ಪಿ.ಹರೀಶ್ appeared first on Karnataka Kahale.
]]>
ಹರಿಹರ, ಏ.14: ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳುವ ಪಠ್ಯೇತರ ಚಟುವಟಿಕೆಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯಂತಹ ಘಟಕಗಳಿಂದ ಆಯೋಜಿಸುವ ವಾರ್ಷಿಕ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರವನ್ನು ಕಲಿಯಲು ಸಹಕಾರಿ. ಆ ಮೂಲಕ ಯುವ ಜನತೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಶಾಸಕರಾದ ಬಿ.ಪಿ.ಹರೀಶ್ ಅವರು ಪ್ರತಿಪಾದಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ-೧ ಮತ್ತು ೨ ರ ವತಿಯಿಂದ ತಾಲೂಕಿನ ಸಾಲಕಟ್ಟೆ ಗ್ರಾಮದಲ್ಲಿ ೭ ದಿನಗಳ ಕಾಲ ಆಯೋಜಿಸಿರುವ ‘ವಿಕಸಿತ ಭಾರತದೆಡೆಗೆ ಯುವಜನತೆ’ ಎಂಬ ಧ್ಯೇಯದ ವಾರ್ಷಿಕ ಶಿಬಿರವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣರ ಮತ್ತು ರೈತರ ಜೀವನ ಶೈಲಿಯನ್ನು ಅವಲೋಕಿಸಿ ಹೊಸ ಅನುಭವವನ್ನು ಪಡೆದು, ಗ್ರಾಮೀಣರಿಗೆ ಶಿಕ್ಷಣ, ಸ್ವಚ್ಚತೆ, ಆರೋಗ್ಯ ಕಾಳಜಿಯ ಮಹತ್ವ ಮತ್ತು ಅರ್ಥಿಕ ಉಳಿತಾಯಕ್ಕೆ ಇರುವ ಹೈನುಗಾರಿಕೆಯಂತಹ ಇತರ ಉಪ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು
ದಾವಣಗೆರೆ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ.ಅಶೋಕ ಕುಮಾರ ವೀ.ಪಾಳೇದ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಆಶಯವನ್ನೇ ಗುರಿಯಾಗಿಸಿಕೊಂಡುರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳು ಜರುಗುತ್ತಿವೆ. ಸಮಸಮಾಜದ ಪರಿಕಲ್ಪನೆಯನ್ನು ಯುವ ಜನತೆಗೆ ಜಾಗೃತಿ ಮೂಡಿಸುತ್ತಾ ಸಾಗಿದೆ. ದೇಶ ಪ್ರೇಮ, ದೇಶಭಕ್ತಿ, ದೇಶೀಯ ಭಾವೈಕ್ಯತೆ, ಏಕತೆ, ಸಮಗ್ರತೆ ಕಲಿಸುವುದರೊಂದಿಗೆ, ಶ್ರಮದಾನದ ಉದ್ದೇಶದಿಂದಲೂ ಕಾರ್ಯನಿರ್ವಹಿಸುತ್ತಿದೆ. ಯುವಜನತೆ ಸೇವಾ ಮನೋಭಾವದ ಜೊತೆ ಕೌಶಲ್ಯಯು ಶಿಕ್ಷಣವನ್ನು ಮೈಗೂಡಿಸಿಕೊಳ್ಳಲು ಎನ್‌ಎಸ್‌ಎಸ್ ಸಹಕಾರಿ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್.ಎಂ.ಎನ್ ಅವರು ಮಾತನಾಡಿ, ಭಾರತ ದೇಶ ಹೇರಳವಾದ ಮಾನವ ಸಂಪನ್ಮೂಲವನ್ನು ಹೊಂದಿದೆ. ಇದರ ಸದ್ಭಳಕೆಯಾಗಬೇಕಾದರೆ ಸರಿಯಾದ ಅರಿವಿನ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ಎನ್‌ಎಸ್‌ಎಸ್ ನಂತಹ ಚಟುವಟಿಕೆಗಳು ದೇಶದ ಅಭಿವೃದ್ಧಿಗೆ ಅಗತ್ಯ ಇರುವ ಯುವ ಜನತೆಗೆ ಶಿಸ್ತು, ಬದ್ಧತೆಯಂತಹ ನೈತಿಕತೆಯನ್ನು ಕಲಿಸುತ್ತವೆ. ಗ್ರಾಮೀಣ ಅಭಿವೃದ್ಧಿಯು ದೇಶದ ಉನ್ನತಿಗೆ ಪ್ರಮುಖಾಂಶವಾಗಿದ್ದು, ಇದರಲ್ಲಿ ಯುವಜನೆತೆಯ ಯೋಗದಾನ ಮಹತ್ವದ್ದಾಗಿದೆ ಎಂದು ಹೇಳಿದರು.
ಶ್ರೀ ಜ.ಪಂ.ವಿ.ವಿಯ ಉಪಾಧ್ಯಕ್ಷರಾದ ಡಿ.ಎಂ.ಹಾಲಸ್ವಾಮಿ, ಗ್ರಾ.ಪಂನ ಮಾಜಿ ಸದಸ್ಯರಾದ ಶ್ರೀಮತಿ ಅನುಪಮ.ಬಿ.ಎಸ್ ಹಾಗೂ ಇನ್ನಿತರ ಗ್ರಾಮದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಎನ್‌ಎಸ್‌ಎಸ್ ಘಟಕ-೧ರ ಕಾರ್ಯಕ್ರಮಾಧಿಕಾರಿ ಯೋಗೇಶ್.ಕೆ.ಜೆ, ಐ.ಕ್ಯೂ.ಎಸ್.ಸಿ ಸಹಸಂಯೋಜಕರಾದ ಅಬ್ದುಲ್ ಬಷೀರ, ಕನ್ನಡ ವಿಭಾಗದ ಮುಖ್ಯಸ್ಥರಾದ ಗೌರಮ್ಮ.ಎಂ.ಎಸ್, ಪರಿಸರವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ತಿರುಮಲ.ಎಸ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮನೋಹರ್.ಬಿ.ಎಂ, ಸಹ ಪ್ರಾಧ್ಯಾಪಕರಾದ ಡಾ.ಶರಣ ಬಸವರಾಜ ಬಿ.ಪಾಟೀಲ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ತಿಪ್ಪೇಸ್ವಾಮಿ.ಹೆಚ್, ಗಣಿತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಸವಿತಾ ಬಿ.ಮೇಗಳಮನಿ ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೆಂಕಪ್ಪನವರ ಬಸವರಾಜು, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಾಬು.ಕೆ.ಎ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಗಂಗರಾಜು.ಎಸ್ ಅವರುಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿದ್ಯಾರ್ಥಿನಿ ಕು.ಅರ್ಪಿತಾ.ಎನ್.ಹೆಚ್ ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕರಾದ ರಾಜಪ್ಪ.ಎ ಸ್ವಾಗತಿಸಿದರು. ಐ.ಕ್ಯೂ.ಎಸ್.ಸಿ ಸಂಯೋಜಕರಾದ ಡಾ.ಅನಂತನಾಗ್.ಹೆಚ್.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರ.ಜಿ.ಪಿ ಕಾರ್ಯಕ್ರಮ ನಿರ್ವಹಿಸಿದರು. ಎನ್‌ಎಸ್‌ಎಸ್ ಘಟಕ-೨ರ ಕಾರ್ಯಕ್ರಮಾಧಿಕಾರಿ ಹನುಮಂತಪ್ಪ.ಕೆ.ವೈ ವಂದಿಸಿದರು.
The post ಎನ್.ಎಸ್.ಎಸ್ ಶಿಬಿರಗಳಿಂದ ಸಂಸ್ಕೃತಿ, ಸಂಸ್ಕಾರ ಕಲಿಯಲು ಸಾಧ್ಯ: ಶಾಸಕ ಬಿ.ಪಿ.ಹರೀಶ್ appeared first on Karnataka Kahale.
]]>The post ಅನುದಿನ ಕವನ-೧೯೨೪, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್ appeared first on Karnataka Kahale.
]]>ಬಣ್ಣ ಹಚ್ಚಿಕೊಳ್ಳದೆ ನಟಿಸುವವರ ಕಾಲವಿದು ಎಚ್ಚರವಿರಲಿ
ಸಂತೈಸಿದಂತೆ ಕಂಡರೂ ಒಳಗೆ ಖುಷಿ ಪಡುವವರ ಲೋಕವಿದು ಎಚ್ಚರವಿರಲಿ
ಇಟ್ಟುಕೊಂಡ ಎಲ್ಲ ಭ್ರಮೆಗಳೂ ಕಳಚಿ ಬೀಳುತ್ತವೆ ಒಮ್ಮೆ
ಅಪ್ಪಿಕೊಂಡಂತೆ ಮಾಡಿ ಬೆನ್ನಿಗೆ ಚೂರಿ ಹಾಕುವವರ ಜಗವಿದು ಎಚ್ಚರವಿರಲಿ
ಅಷ್ಟು ಸುಲಭಕ್ಕೆ ಯಾರಿಗೂ ಮನಸಿತ್ತು ಮೋಸ ಹೋಗಬಾರದು
ಜೊತೆ ಇದ್ದಂತೆ ನಟಿಸಿ ಬೇರೊಬ್ಬರ ತೋಳು ಬಳಸುವ ಪ್ರಪಂಚವಿದು ಎಚ್ಚರವಿರಲಿ
ಕಟುಕ ಕಾಸಿನ ಮುಂದೆ ಮನುಷ್ಯತ್ವ ಮಂಡಿಯೂರಿ ಕಣ್ಣೀರಿಡುತ್ತಿದೆ
ಪ್ರೀತಿಗೆ ಜೀವ ಕೊಡುತ್ತೇನೆಂದವರು ಜೇಬು ತಡಕಾಡುವ ಸಂದರ್ಭವಿದು ಎಚ್ಚರವಿರಲಿ
ಎಷ್ಟು ನಟಿಸಿದರೂ ಒಮ್ಮೆ ‘ನಾಗೇಶಿ’ಯ ಮುಂದೆ ಬಯಲಾಗಲೇಬೇಕು ಬಣ್ಣ
ಬೆಳಕೆಂದು ಭಾವಿಸಿದ್ದು ಬದುಕಿಗೆ ಕತ್ತಲಾಗುವ ಆಶ್ಚರ್ಯವಿದು ಎಚ್ಚರವಿರಲಿ

-ನಾಗೇಶ್ ಜೆ. ನಾಯಕ, ಸವದತ್ತಿ
The post ಅನುದಿನ ಕವನ-೧೯೨೪, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್ appeared first on Karnataka Kahale.
]]>