Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಯುವ ಶಕ್ತಿ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Wed, 15 Apr 2026 07:21:06 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಯುವ ಶಕ್ತಿ – Karnataka Kahale https://www.karnatakakahale.com 32 32 ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ: ಯುವಜನತೆಗೆ ಸೇವಾದಳದ ಸಂಚಾಲಕ ಫಕೀರಪ್ಪ ಗೌಡ ಹಳೇಮನಿ ಕಿವಿಮಾತು https://www.karnatakakahale.com/news/22759 Wed, 15 Apr 2026 07:21:06 +0000 https://www.karnatakakahale.com/?p=22759 ಹರಿಹರ: ಬದಲಾದ ಕಲಾಘಟ್ಟದಲ್ಲಿ ಇಂದಿನ ಯುವಶಕ್ತಿಯೇ ದೇಶದ ಬೆನ್ನೆಲುಬು. ಯುವಕರು ಜವಾಬ್ದಾರಿಯುತ ನಾಗರಿಕರಾಗಿ, ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡು ದೇಶದ ಏಳಿಗೆಗೆ ಶ್ರಮಿಸಬೇಕು ಎಂದು ಹುಬ್ಬಳ್ಳಿಯ ಸೇವಾದಳದ ಸಂಚಾಲಕರಾದ ಫಕೀರಪ್ಪ ಗೌಡ ಹಳೇಮನಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ…

The post ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ: ಯುವಜನತೆಗೆ ಸೇವಾದಳದ ಸಂಚಾಲಕ ಫಕೀರಪ್ಪ ಗೌಡ ಹಳೇಮನಿ ಕಿವಿಮಾತು appeared first on Karnataka Kahale.

]]>
ಹರಿಹರ: ಬದಲಾದ ಕಲಾಘಟ್ಟದಲ್ಲಿ ಇಂದಿನ ಯುವಶಕ್ತಿಯೇ ದೇಶದ ಬೆನ್ನೆಲುಬು. ಯುವಕರು ಜವಾಬ್ದಾರಿಯುತ ನಾಗರಿಕರಾಗಿ, ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡು ದೇಶದ ಏಳಿಗೆಗೆ ಶ್ರಮಿಸಬೇಕು ಎಂದು ಹುಬ್ಬಳ್ಳಿಯ ಸೇವಾದಳದ ಸಂಚಾಲಕರಾದ ಫಕೀರಪ್ಪ ಗೌಡ ಹಳೇಮನಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ-1 ಮತ್ತು 2 ರ ವತಿಯಿಂದ ತಾಲೂಕಿನ ಸಾಲಕಟ್ಟೆ ಆಯೋಜಿಸಿರುವ ವಾರ್ಷಿಕ ಶಿಬಿರದ ಮೊದಲ ದಿನದ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.                ಸೈನಿಕರ ತ್ಯಾಗವನ್ನು ಸ್ಮರಿಸುವುದು ಮತ್ತು ಪ್ರತಿಯೊಂದು ಸಂದರ್ಭದಲ್ಲೂ ದೇಶದ ಹಿತಾಸಕ್ತಿಯನ್ನು ಮೊದಲು ಪರಿಗಣಿಸುವುದು. ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಲಾಂಛನಗಳಿಗೆ ಗೌರವ ನೀಡುವುದು. ಭಾರತದ ಶ್ರೀಮಂತ ಪರಂಪರೆ, ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಮತ್ತು ಮಹನೀಯರ ತ್ಯಾಗವನ್ನು ಅರ್ಥಮಾಡಿಕೊಳ್ಳುವ ಮೂಲಕ, ಜ್ಞಾನಾರ್ಜನೆಯ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುಬೇಕು. ಹೊಸ ಆಲೋಚನೆಗಳ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಯುವಜನತೆಯ ಅಧ್ಯತೆಗಳಾಗಲಿ ಎಂದು ಆಶಿಸಿದರು.


ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಡಾ.ಯತೀಶ್ ಎಲ್.ಕೊಡಾವತ್ ಅವರು ಮಾತನಾಡಿ, ಭಾರತೀಯ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರ್ಯ ಎಂಬ ಪದವನ್ನು ನೇರವಾಗಿ ಉಲ್ಲೇಖಿಸಿಲ್ಲ, ಆದರೆ ಸಂವಿಧಾನದ ವಿಧಿ 19(1)(ಎ) ನಲ್ಲಿ ‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ದ ಭಾಗವಾಗಿ ಗುರುತಿಸಲ್ಪಟ್ಟಿದೆ. ರಾಷ್ಟ್ರದ ಭದ್ರತೆ, ಸಾರ್ವಭೌಮತೆ, ಸೌಹಾರ್ದ ಸಂಬಂಧಗಳು ಮತ್ತು ನ್ಯಾಯಾಂಗ ನಿಂದನೆ ಮುಂತಾದ ಕಾರಣಗಳಿಗಾಗಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸಮಂಜಸವಾದ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಪತ್ರಿಕಾ ಸ್ವಾತಂತ್ರ್ಯ ಕುರಿತು ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಲಗನಹಳ್ಳಿಯ ಗ್ರಾಪಂ ಕಾರ್ಯದರ್ಶಿ ಮಾತನಾಡಿ, ಸ್ಥಳೀಯ ಉತ್ಪನ್ನಗಳನ್ನು ಬೆಂಬಲಿಸುವ ಮೂಲಕ ಯುವಕರು ನೈಜ ದೇಶಪ್ರೇಮವನ್ನು ಬೆಳೆಸಿಕೊಳ್ಳಿ ಎಂದು ಮನವಿ ಮಾಡಿದರು.
ಗ್ರಾಮದ ಮುಖಂಡರಾದ ಕೆ.ಎಚ್.ಚಂದ್ರಪ್ಪ, ಟಿ.ಎಂ.ಮಹೇಶ್ವರಪ್ಪ, ಎಸ್.ಬಿ.ಜಗದೀಶ್, ಎಸ್.ಬಿ.ಸಿದ್ದಪ್ಪ, ಬೆಂಡೆಕಾಯಿ ಜಯಣ್ಣ, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿಗಳಾದ ಯೋಗೇಶ್.ಕೆ.ಜೆ, ಹನುಮಂತಪ್ಪ.ಕೆ.ವೈ, ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸರಾದ ಶ್ರೀಮತಿ ನಾಗವೇಣಿ.ಆರ್.ಎಸ್, ಐಶ್ವರ್ಯ ಜೆ.ಶೆಟ್ಟರ್ ಅವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿನಿ ಕು.ಮಾನಸ ಪ್ರಾರ್ಥಿಸಿದರು. ಪ್ರಕೃತಿ ಸ್ವಾಗತಿಸಿದರು. ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು. ಅಕ್ಷತಾ ವಂದಿಸಿದರು.

The post ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ: ಯುವಜನತೆಗೆ ಸೇವಾದಳದ ಸಂಚಾಲಕ ಫಕೀರಪ್ಪ ಗೌಡ ಹಳೇಮನಿ ಕಿವಿಮಾತು appeared first on Karnataka Kahale.

]]>
ತಾಳೂರಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ: ಯುವ ಸಮೂಹ ಸ್ವಾಮಿ‌ ವಿವೇಕಾನಂದರ ಆದರ್ಶ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು -ಸಿ.ಮಂಜುನಾಥ https://www.karnatakakahale.com/news/22010 Tue, 13 Jan 2026 18:04:44 +0000 https://www.karnatakakahale.com/?p=22010 ಸಿರುಗುಪ್ಪ, ಜ.13: ವಿದ್ಯಾರ್ಥಿ, ಯುವ ಸಮೂಹ ಸ್ವಾಮಿ‌ ವಿವೇಕಾನಂದರ ಆದರ್ಶ ಚಿಂತನೆ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿ ಕೊಳ್ಳಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ತಿಳಿಸಿದರು. ತಾಲೂಕಿನ ತಾಳೂರು ಸರಕಾರಿ ಪ್ರೌಢಶಾಲೆಯಲ್ಲಿ…

The post ತಾಳೂರಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ: ಯುವ ಸಮೂಹ ಸ್ವಾಮಿ‌ ವಿವೇಕಾನಂದರ ಆದರ್ಶ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು -ಸಿ.ಮಂಜುನಾಥ appeared first on Karnataka Kahale.

]]>

ಸಿರುಗುಪ್ಪ, ಜ.13: ವಿದ್ಯಾರ್ಥಿ, ಯುವ ಸಮೂಹ ಸ್ವಾಮಿ‌ ವಿವೇಕಾನಂದರ ಆದರ್ಶ ಚಿಂತನೆ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿ ಕೊಳ್ಳಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ತಿಳಿಸಿದರು.
ತಾಲೂಕಿನ ತಾಳೂರು ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 163 ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬಾಲ್ಯದಲ್ಲಿಯೇ ವಿವೇಕಾನಂದರು ಏಕಾಗ್ರತೆ, ಅಧ್ಯಯನ ಶೀಲತೆ, ಧೈರ್ಯ, ದೇಶಪ್ರೇಮವನ್ನು ರೂಢಿಸಿ ಕೊಂಡಿದ್ದರಿಂದ ಅದ್ಭುತ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ಸೋಲಿಗೆ ಹೆದರಬೇಡಿ, ಪ್ರಯತ್ನವನ್ನು ಬಿಡಬೇಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅನಂತ ಶಕ್ತಿ ಅಡಗಿದೆ ಎಂಬ ಸ್ವಾಮಿ ವಿವೇಕಾನಂದರ ಸ್ಫೂರ್ತಿಯ ಮಾತುಗಳು ಸಾಮಾನ್ಯರು ಕೂಡಾ ಅಸಾಧ್ಯವನ್ನು ಸಾಧಿಸಲು ಪ್ರೇರಣೆಯಾಗುತ್ತವೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ಬರಹ ಮತ್ತು ಭಾಷಣಗಳಲ್ಲಿ ಯುವ ಸಮೂಹಕ್ಕೆ ಚೈತನ್ಯ ತುಂಬುವ ಶಕ್ತಿ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ‌ ಮುಖ್ಯೋಪಾಧ್ಯಾಯಿನಿ ಗೀತಾ ಸಾಗರ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ರಾಷ್ಟ್ರ ಪ್ರಜ್ಞೆ, ಗುರು ಭಕ್ತಿ, ಶಿಸ್ತು, ಸಂಸ್ಕಾರ ಸಂದೇಶ ನೀಡಿದ್ದಾರೆ.
ವಿದ್ಯಾರ್ಥಿಗಳು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಗುರಿ ಸಾಧಿಸಬೇಕು ಎಂದು‌ ಕಿವಿ‌ಮಾತು ಹೇಳಿದರು.


ರಾಷ್ಟ್ರೀಯ ಯುವ ದಿನಾಚರಣೆಗೆ ಸಾಧಕರನ್ನು ಶಾಲೆಗೆ ಆಹ್ವಾನಿಸಿ ಮಕ್ಕಳಿಗೆ ಪರಿಚಯಿಸಿ ಅವರಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ, ಬಹುಮುಖಿ ಸಿ.ಮಂಜುನಾಥ ಅವರು ಆಗಮಿಸಿ ವಿದ್ಯಾರ್ಥಿಗಳಲ್ಲಿ ಪ್ರೇರಣೆ, ಉತ್ಸಾಹ ತುಂಬಿದ್ದಾರೆ ಎಂದು ಶ್ಲಾಘಿಸಿದರು
ಸನ್ಮಾನ: ಇದೇ ಸಂದರ್ಭದಲ್ಲಿ ಸಿ.ಮಂಜುನಾಥ ಅವರನ್ನು ಮುಖ್ಯೋಪಾಧ್ಯಾಯಿನಿ ಗೀತಾ ಸಾಗರ ಮತ್ತು ಅಧ್ಯಾಪಕ ವೃಂದ
ಸನ್ಮಾನಿಸಿ ಗೌರವಿಸಿದರು.


ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಶಾಂತಮ್ಮ ಹೆಚ್, ಶ್ರೀಕಾಂತ್, ಲಕ್ಷ್ಮಿ ಬಿ.ಕೆ, ಎಂ. ನಾಗಿರೆಡ್ಡಿ, ಬಸವರಾಜ್, ಕರೀಂ ಸಾಬ್ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಮಂಜುನಾಥ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ರಕ್ಷಿತಾ, ವೀಣಾ, ವಿದ್ಯಾಶ್ರೀ, ಮಹಾಲಕ್ಷ್ಮಿ ಮತ್ತು ಸಂಗೀತ ಪ್ರಾರ್ಥಿಸಿದರು. ಶಿಕ್ಷಕ ವಿ. ಶ್ರೀಕಾಂತ್ ವಂದಿಸಿದರು.
—–

The post ತಾಳೂರಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ: ಯುವ ಸಮೂಹ ಸ್ವಾಮಿ‌ ವಿವೇಕಾನಂದರ ಆದರ್ಶ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು -ಸಿ.ಮಂಜುನಾಥ appeared first on Karnataka Kahale.

]]>
ಸಿಂಧುವಾಳ ಗಾದಿಲಿಂಗನ ಕುಂಚದಲ್ಲಿ ಅರಳಿದ ಸಚಿವ ಬಿ.ನಾಗೇಂದ್ರ ಮತ್ತು ಸಹೋದರ ಬಿ. ಪ್ರಸಾದ್ : ಪ್ರಶಂಸೆ https://www.karnatakakahale.com/news/13705 Mon, 18 Sep 2023 17:07:10 +0000 https://www.karnatakakahale.com/?p=13705 ಬಳ್ಳಾರಿ, ಸೆ. 18: ತಾಲೂಕಿನ ಸಿಂಧುವಾಳ ಗ್ರಾಮದ ಯುವ ಪ್ರತಿಭೆ, ಬಿ.ಇ ಪದವೀಧರ ಗಾದಿಲಿಂಗ ಅವರು ಅಭಿಮಾನದಿಂದ ತಮ್ಮ ಕುಂಚದಲ್ಲಿ ಚಿತ್ರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಮತ್ತು ಇವರ ಸಹೋದರ ಬಿ. ಪ್ರಸಾದ್ ಅವರ ಚಿತ್ರ ಭಾನುವಾರ ನಗರದಲ್ಲಿ…

The post ಸಿಂಧುವಾಳ ಗಾದಿಲಿಂಗನ ಕುಂಚದಲ್ಲಿ ಅರಳಿದ ಸಚಿವ ಬಿ.ನಾಗೇಂದ್ರ ಮತ್ತು ಸಹೋದರ ಬಿ. ಪ್ರಸಾದ್ : ಪ್ರಶಂಸೆ appeared first on Karnataka Kahale.

]]>
ಬಳ್ಳಾರಿ, ಸೆ. 18: ತಾಲೂಕಿನ ಸಿಂಧುವಾಳ ಗ್ರಾಮದ ಯುವ ಪ್ರತಿಭೆ, ಬಿ.ಇ ಪದವೀಧರ ಗಾದಿಲಿಂಗ ಅವರು ಅಭಿಮಾನದಿಂದ ತಮ್ಮ ಕುಂಚದಲ್ಲಿ ಚಿತ್ರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಮತ್ತು ಇವರ ಸಹೋದರ ಬಿ. ಪ್ರಸಾದ್ ಅವರ ಚಿತ್ರ ಭಾನುವಾರ ನಗರದಲ್ಲಿ ಗಮನ ಸೆಳೆಯಿತು.
ಕಲ್ಯಾಣ ಕರ್ನಾಟಕ ಉತ್ಸವ ಉದ್ಘಾಟನಾ ಕಾರ್ಯಕ್ರಮದ ಬಳಿಕ ಯುವ ಕಲಾವಿದ ಗಾದಿಲಿಂಗ ಚಿತ್ರಿಸಿದ ತಮ್ಮ ಮತ್ತು ಸಹೋದರನ ಚಿತ್ರ ಕಂಡು ಸಚಿವ ನಾಗೇಂದ್ರ ಅವರು ಖುಷಿ ಪಟ್ಟರು ಮಾತ್ರವಲ್ಲ ಮುಕ್ತಕಂಠದಿಂದ ಪ್ರಶಂಸಿಸಿದರು.
ಗಾದಿಲಿಂಗ ಅಭಿಮಾನಪೂರ್ವಕವಾಗಿ ಚಿತ್ರಿಸಿದ ತಮ್ಮ ಚಿತ್ರವನ್ನು ಸಚಿವರು ಪ್ರೀತಿಯಿಂದ ಸ್ವೀಕರಿಸಿದರು.
ಪರಿಚಯ: ಯಾವುದೇ ಚಿತ್ರಕಲಾ ಶಾಲೆಗೆ ಹೋಗದೆ ತನ್ನ ಆಸಕ್ತಿಯಿಂದ ಚಿತ್ರ ಬಿಡಿಸುವುದನ್ನು ಕಲಿತ ಏಕಲವ್ಯ ಪ್ರತಿಭೆ ಗಾದಿಲಿಂಗ. ರೈತಾಪಿ ಕುಟುಂಬದ ಅಪ್ಪ ಅಮ್ಮ ಓದಿಸಿದ್ದು ಬಿಇ (ಮೆಕಾನಿಕಲ್) ಪದವಿಯನ್ನು! ನಾಲ್ಕು ವರ್ಷಗಳ ಹಿಂದೆ ಇಂಜಿನಿಯರಿಂಗ್ ಪದವಿ ಪೂರೈಸಿದ ಬಳಿಕ ಹೈದ್ರಾಬಾದ್ ನಲ್ಲಿ ಯು ಪಿ ಎಸ್ ಸಿ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ
ದೇಶಕ್ಕೆ ವಕ್ಕರಿಸಿದ ಕೋವಿಡ್ ನಿಂದಾಗಿ ಲಾಕ್ ಡೌನ್ ಘೋಷಣೆಯಾದ್ದರಿಂದ ಗಾದಿಲಿಂಗಪ್ಪ ಗ್ರಾಮಕ್ಕೆ ವಾಪಸಾದರು. ಬಿಇ ಓದಿದ ಹುಡುಗ ಹಳ್ಳಿಯಲ್ಲಿ ಕುಳಿತು ಏನು ಮಾಡಲು ಸಾಧ್ಯ!? ಬಳ್ಳಾರಿಗೆ ಬಂದರು. ಗೆಳೆಯನ ರೂಮ್ ನಲ್ಲಿ ಆಶ್ರಯ ಪಡೆದಿದ್ದಾರೆ.
ಪರಿಸರದ ಚಿತ್ರಗಳು, ಸಮಾಜಮುಖಿ
ಚಿತ್ರ ನಟ ಸೋನು ಸೂದ್, ಶ್ರೀ ಸಿದ್ಧಗಂಗಾ ಶ್ರೀಗಳು ಸೇರಿದಂತೆ ಹಲವು ಚಿತ್ರನಟರು, ರಾಜಕಾರಣಿಗಳು, ಸೆಲೆಬ್ರಿಟಿಗಳ ಚಿತ್ರಗಳು ಚಿತ್ರ ಪ್ರೇಮಿಗಳನ್ನು ಆಕರ್ಷಿಸಿವೆ. ನಗರ ಯುವ ಶಾಸಕ ನಾರಾ ಭರತ್ ರೆಡ್ಡಿ, ಯುವ ಮುಖಂಡ ಬಿ. ಮುರಳಿಕೃಷ್ಣ, ಹಿರಿಯ ಪತ್ರಕರ್ತ ಸಿ.‌ಮಂಜುನಾಥ್ ಸೇರಿ ಹಲವರ ಚಿತ್ರಗಳು ಗಮನ ಸೆಳೆದಿವೆ. ಗಣ್ಯರು, ಚಿತ್ರಪ್ರೇಮಿಗಳು ಬೆನ್ನುತಟ್ಟಿದ್ದಾರೆ.
ಚಿತ್ರಕಲೆ ಜತೆ ನಟನೆ, ನಿರ್ದೇಶನದ ಬಗ್ಗೆ ಒಲವಿರುವದರಿಂದ ಗೆಳೆಯರ ಜತೆ ಸೇರಿ ಯೂಟ್ಯೂಬ್ ಚಾಲೆನ್ ಗಾಗಿ ಒಂದೆರಡು ಸಾಮಾಜಿಕ ಸಂದೇಶ ಸಾರುವ ಕಿರು ಚಿತ್ರಗಳನ್ನು ಗಾದಿಲಿಂಗ ಚಿತ್ರೀಕರಿಸಿರುವುದು ವಿಶೇಷ.
ಬಿ.ಇ ಪದವೀಧರರರಾದರೂ ಸೂಕ್ತ ಉದ್ಯೋಗ ದೊರೆಯದೇ ಸಂಕಷ್ಟದಲ್ಲಿರುವ ಗಾದಿಲಿಂಗ ಪ್ರಸ್ತುತ ತನ್ನ ಹವ್ಯಾಸ ಕಲೆಯಾದ ಚಿತ್ರಕಲೆಯನ್ನೇ ನಂಬಿ ಬದುಕು‌ಕಟ್ಟಿಕೊಳ್ಳಲು ನಿರ್ಧರಿಸಿದ್ದಾನೆ.
ಈ ಪ್ರತಿಭಾವಂತ ಯುವಕನಿಗೆ ಸರಕಾರ, ಸಮಾಜ, ಸಂಘ ಸಂಸ್ಥೆಗಳು ಉತ್ತೇಜಿಸುವ ಅಗತ್ಯವಿದೆ. ನೆರವು ನೀಡುವ ಮನಸ್ಸುಳ್ಳವರು ತಮ್ಮ, ಹಾಗೂ ತಮ್ಮ ಪ್ರೀತಿ ಪಾತ್ರರ ಭಾವಚಿತ್ರಗಳನ್ನು ಪೆನ್ಸಿಲ್ ಸ್ಕೆಚ್ ಹಾಕಿಸಿ ಕೊಂಡು ಈ ಯುವ ಪ್ರತಿಭೆಯನ್ನು ಪ್ರೊತ್ಸಾಹಿಸಬಹುದು.
[ಗಾದಿಲಿಂಗ ಅವರ ಮೊಬೈಲ್ ನಂ. 93465 11615]

*****

The post ಸಿಂಧುವಾಳ ಗಾದಿಲಿಂಗನ ಕುಂಚದಲ್ಲಿ ಅರಳಿದ ಸಚಿವ ಬಿ.ನಾಗೇಂದ್ರ ಮತ್ತು ಸಹೋದರ ಬಿ. ಪ್ರಸಾದ್ : ಪ್ರಶಂಸೆ appeared first on Karnataka Kahale.

]]>
ಯಶಸ್ವಿ ಚಂದ್ರಯಾನ-೩: ಹಂಪಾಪಟ್ಟಣದ ಪ್ರತಿಭಾವಂತ ತಂತ್ರಜ್ಞ ತಿಮ್ಮಪ್ಪ ಪೂಜಾರ್ ಭಾಗಿ: ಗ್ರಾಮದಲ್ಲಿ ಸಂಭ್ರಮ https://www.karnatakakahale.com/news/13304 Thu, 24 Aug 2023 15:32:38 +0000 https://www.karnatakakahale.com/?p=13304 ಹಗರಿಬೊಮ್ಮನಹಳ್ಳಿ, ಆ.23: ಚಂದ್ರಯಾನ-೩ರ ಯಶಸ್ಸಿನಲ್ಲಿ ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರದ ಪಾಲು ಹೆಚ್ಚಿದೆ. ಈ‌ ಕೇಂದ್ರಕ್ಕೂ ತಾಲೂಕಿನ ಹಂಪಾಪಟ್ಟಣ ಗ್ರಾಮಕ್ಕೆ ಏನಾದರೂ ನಂಟಿದೆಯಾ! ಹೌದು! ಖಂಡಿತಾ ನಂಟಿದೆ. ಗ್ರಾಮದ ಪ್ರತಿಭಾನ್ವಿತ ಯುವಕ ತಿಮ್ಮಪ್ಪ ಪೂಜಾರ್ ಅವರು ಯು ಆರ್…

The post ಯಶಸ್ವಿ ಚಂದ್ರಯಾನ-೩: ಹಂಪಾಪಟ್ಟಣದ ಪ್ರತಿಭಾವಂತ ತಂತ್ರಜ್ಞ ತಿಮ್ಮಪ್ಪ ಪೂಜಾರ್ ಭಾಗಿ: ಗ್ರಾಮದಲ್ಲಿ ಸಂಭ್ರಮ appeared first on Karnataka Kahale.

]]>

ಹಗರಿಬೊಮ್ಮನಹಳ್ಳಿ, ಆ.23: ಚಂದ್ರಯಾನ-೩ರ ಯಶಸ್ಸಿನಲ್ಲಿ ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರದ ಪಾಲು ಹೆಚ್ಚಿದೆ. ಈ‌ ಕೇಂದ್ರಕ್ಕೂ ತಾಲೂಕಿನ ಹಂಪಾಪಟ್ಟಣ ಗ್ರಾಮಕ್ಕೆ ಏನಾದರೂ ನಂಟಿದೆಯಾ!
ಹೌದು! ಖಂಡಿತಾ ನಂಟಿದೆ. ಗ್ರಾಮದ ಪ್ರತಿಭಾನ್ವಿತ ಯುವಕ ತಿಮ್ಮಪ್ಪ ಪೂಜಾರ್ ಅವರು ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮಾತ್ರವಲ್ಲ ಚಂದ್ರಯಾನ-೩ರ ಯೋಜನೆಯಲ್ಲಿ ಕೇಂದ್ರದ ಹಲವು ತಂತ್ರಜ್ಞರ ಜತೆ ಇವರು ದುಡಿದಿದ್ದಾರೆ.
ಈ ಹಿನ್ನಲೆಯಲ್ಲಿ ಹುಟ್ಟೂರು ಹಂಪಾಪಟ್ಟಣದಲ್ಲಿ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ಚಂದ್ರನ ದಕ್ಷಿಣಧೃವದ ಮೇಲೆ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಇಳಿಯುತ್ತಲೇ ವಿಶ್ವದ 140 ಕೋಟಿಗೂ ಹೆಚ್ಚು ಭಾರತೀಯರ ಹರ್ಷೋದ್ಗಾರ ಮುಗಿಲು‌ಮುಟ್ಟಿದೆ.
ವಿಕ್ರಮ್ ಜತೆ ಇರುವ ಪ್ರಮುಖ ರೊವರ್ ರೊಬೊಟಿಕ್
ಕಾರ್ ತಯಾರಿಕೆಯ ಇಸ್ರೋದ ಬಾಹ್ಯಾಕಾಶ ತಂಡದೊಂದಿಗೆ ಯು ಆರ್ ರಾವ್ ಉಪಗ್ರಹ ಸಂಸ್ಥೆಯ  ತಂತ್ರಜ್ಞರ ತಂಡದಲ್ಲಿ ತಿಮ್ಮಪ್ಪ ಪೂಜಾರ್ ಅವರು ಇರುವುದು ಹಂಪಾಪಟ್ಟಣ ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಸಂತಸ, ಸಂಭ್ರಮಕ್ಕೆ‌ ಕಾರಣವಾಗಿದೆ.
ಪರಿಚಯ:  ಹಂಪಾಪಟ್ಟಣ ಗ್ರಾಮದ ಪೂಜಾರ್ ಭೀಮಪ್ಪ ಮತ್ತು ಮಲ್ಲಮ್ಮ ಪೂಜಾರ್ ಅವರ ಪುತ್ರ ತಿಮ್ಮಪ್ಪ ಪೂಜಾರ್ ಅವರ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾಭ್ಯಾಸ ತಾಯಿಯ ತವರೂರು ಕೋಗಳಿಯ ಸರಕಾರಿ ಶಾಲೆಯಲ್ಲಿ ನಡೆಯಿತು. ಹೊಸಪೇಟೆಯ ಸರಕಾರಿ  ಐಟಿಐ ಕಾಲೇಜಿನಲ್ಲಿ ಐಟಿಐ ಪದವಿ ಪಡೆದು ಬೆಂಗಳೂರಿನ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗೆ ಸೇರಿದರೂ ಸಮಾಧಾನವಿಲ್ಲ. ಇಸ್ರೋ ದಲ್ಲಿ ಉದ್ಯೋಗಿಯಾಗಬೇಕೆಂಬ ಕನಸು ನನಸಾಗದಿದ್ದಕ್ಕೆ ಮತ್ತೇ ಡಿಪ್ಲೋಮಾ ಕಾಲೇಜಿಗೆ ಪ್ರವೇಶ ಪಡೆದು ಕಷ್ಟ ಪಟ್ಟು ಓದಿ ಉತ್ತೀರ್ಣರಾದರು. ಈ ಅರ್ಹತೆ ಇಸ್ರೋ ಸೇರುವ ಕನಸನ್ನು ನನಸು ಮಾಡಿತು.
ಇದೀಗ ಚಂದ್ರಯಾನ-೩ರ ಯಶಸ್ವಿನ ಟೀಮ್ ನಲ್ಲಿ ತಿಮ್ಮಪ್ಪ ಇರುವುದು ಅವಿಭಜಿತ ಬಳ್ಳಾರಿ ಜಿಲ್ಲೆಯ ಜನತೆಗೆ ಎಲ್ಲಿಲ್ಲದ ಹೆಮ್ಮೆ.


ಗ್ರಾಮದ ಶ್ರೀನಿವಾಸ ಮೆಡಿಕಲ್ ಸ್ಟೋರ್ ನ ಜಿ.ಶ್ರೀನಿವಾಸಶೆಟ್ಟಿ ತನ್ನ ಆಪ್ತ ಮಿತ್ರನ ಬಗ್ಗೆ ಹೇಳುವುದು ಹೀಗೆ.  “ಸಹೋದರನಂತಿರುವ ತಿಮ್ಮಪ್ಪ ಹಂಪಾಪಟ್ಟಣಕ್ಕೆ ಬಂದಾಗ ನನ್ನ ಹತ್ತಿರವೇ ಹೆಚ್ಚು ಸಮಯ ಕಳೆಯುತ್ತಾನೆ.  ತಿಮ್ಮಪ್ಪ ಮತ್ತು ನಾನು ಒಂದೇ ಕುಟುಂಬದ ಸದಸ್ಯರಂತೆ ಇರುತ್ತೇವೆ. ತಿಮ್ಮಪ್ಪ  2019ರಲ್ಲಿ ವಿವಾಹವಾದರು. ಮದುವೆಯ ಸಂಪೂರ್ಣ ಜವಾಬ್ದಾರಿಯನ್ನೇ ನನಗೆ ವಹಿಸಿ ಕೊಟ್ಟಿದ್ದರು” ಎಂದು ನೆನೆದು ಭಾವುಕರಾದರು. ಗ್ರಾಮದಲ್ಲಿ ಇರುವ ದಿನಗಳಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿರುತ್ತಾರೆ. ಲುಂಗಿ-ಟೀಶರ್ಟ್ ಸರಳ ಉಡುಪಿನಲ್ಲಿದ್ದು ಗಮನ ಸೆಳೆಯುತ್ತಾರೆ.
ಇಸ್ರೋ ಉದ್ಯೋಗಿ ಎನ್ನುವ ಯಾವುದೇ ಹಮ್ಮು ಬಿಮ್ಮು ತಿಮ್ಮಪ್ಪನಲ್ಲಿ ಇರದಿರುವುದು ಗ್ರಾಮದ ಬಾಲ್ಯದ ಗೆಳೆಯರಿಗೆ ಖುಷಿ.
ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಚಂದ್ರಯಾನ-೩ರ ಯಶಸ್ಸು ನನಗೂ ಅತ್ಯಂತ ಸಂತಸ‌ ನೀಡಿದೆ. ಇಸ್ರೋ ಉದ್ಯೋಗಿಯಾಗಿದ್ದು ಇಂತಹ ದೇಶವೇ ಮೆಚ್ಚುವ ಕಾರ್ಯದಲ್ಲಿ ಭಾಗಿಯಾಗಿದ್ದು ಪುಣ್ಯವೇ ಸರಿ ಎಂದರು.


ಗ್ರಾಮಕ್ಕೆ ಕೀರ್ತಿ ತಂದಿರುವ ತಿಮ್ಮಪ್ಪ ಅವರನ್ನು ಅಭಿನಂದಿಸಲು ಗ್ರಾಮಸ್ಥರು, ಬಂಧು ಮಿತ್ರರು ತುದಿಗಾಲಲ್ಲಿ ನಿಂತಿದ್ದಾರೆ. ಊರಿಗೆ ಆಗಮಿಸುವುದನ್ನೇ ಕಾಯ್ತಾ ಇದ್ದಾರೆ.
—–

The post ಯಶಸ್ವಿ ಚಂದ್ರಯಾನ-೩: ಹಂಪಾಪಟ್ಟಣದ ಪ್ರತಿಭಾವಂತ ತಂತ್ರಜ್ಞ ತಿಮ್ಮಪ್ಪ ಪೂಜಾರ್ ಭಾಗಿ: ಗ್ರಾಮದಲ್ಲಿ ಸಂಭ್ರಮ appeared first on Karnataka Kahale.

]]>
ಎಲಿವೇಟ್ ಕಲ್ಯಾಣ ಕರ್ನಾಟಕ ಯುವ ಜನರ ಆಕರ್ಷಕ ಯೋಜನೆ -ಡಾ. ಸಂಧ್ಯಾ ಅನ್ವೇಕರ್ https://www.karnatakakahale.com/news/9364 Tue, 06 Sep 2022 16:49:55 +0000 https://www.karnatakakahale.com/?p=9364 ಹೊಸಪೇಟೆ, ಸೆ.6: ಎಲಿವೇಟ್ ಕಲ್ಯಾಣ ಕರ್ನಾಟಕ ಯೋಜನೆ ವಿದ್ಯಾರ್ಥಿಗಳು ಹಾಗೂ ಯುವಸಮೂಹವನ್ನು ಉದ್ಯಮಶೀಲತೆಯತ್ತ ಆಕರ್ಷಿಸುತ್ತದೆ ಎಂದು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿಯ ಕಾರ್ಯಕ್ರಮಾಧಿಕಾರಿ ಡಾ. ಸಂಧ್ಯಾ ಅನ್ವೇಕರ್ ತಿಳಿಸಿದರು. ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ…

The post ಎಲಿವೇಟ್ ಕಲ್ಯಾಣ ಕರ್ನಾಟಕ ಯುವ ಜನರ ಆಕರ್ಷಕ ಯೋಜನೆ -ಡಾ. ಸಂಧ್ಯಾ ಅನ್ವೇಕರ್ appeared first on Karnataka Kahale.

]]>

ಹೊಸಪೇಟೆ, ಸೆ.6: ಎಲಿವೇಟ್ ಕಲ್ಯಾಣ ಕರ್ನಾಟಕ ಯೋಜನೆ ವಿದ್ಯಾರ್ಥಿಗಳು ಹಾಗೂ ಯುವಸಮೂಹವನ್ನು ಉದ್ಯಮಶೀಲತೆಯತ್ತ ಆಕರ್ಷಿಸುತ್ತದೆ ಎಂದು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿಯ ಕಾರ್ಯಕ್ರಮಾಧಿಕಾರಿ ಡಾ. ಸಂಧ್ಯಾ ಅನ್ವೇಕರ್ ತಿಳಿಸಿದರು.
ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ವಿಭಾಗದ ಉದ್ಯಮಶೀಲತೆ ಮತ್ತು ಆವಿಷ್ಕಾರ ಕುರಿತ ಒಂದು ದಿನದ ‘ಬೂಟ್ ಕ್ಯಾಂಪ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯೋಜನೆ ಈ ಭಾಗದ ಅಭಿವೃದ್ಧಿಗೆ ಉತ್ತೇಜಕವಾಗಲಿದೆ.
ಬೆಂಗಳೂರು ಹೊರತು ಪಡಿಸಿ ರಾಜ್ಯದ ಹಿಂದುಳಿದ ಪ್ರದೇಶಗಳಿಗೂ ಉದ್ಯಮಶೀಲತೆಯನ್ನು ವಿಸ್ತರಿಸುವಲ್ಲಿ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ಉದ್ಯಮಶೀಲತಾ ಪ್ರೇರಣಾ ಸರಣಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯವನ್ನು ಗುರುತಿಸುವ ಹಾಗೂ ಅವರನ್ನು ಉದ್ಯಮಶೀಲತೆಯ ಬಗ್ಗೆ ಪ್ರೇರಣೆ ನೀಡಿ ಹೊಸ ಸ್ಟಾರ್ಟ್ ಅಪ್ ಆರಂಭಿಸುವಲ್ಲಿ ಉತ್ತೇಜನ ಹಾಗೂ. ಆರ್ಥಿಕ ಸೌಲಭ್ಯ ಪಡೆಯಬಹುದು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ ಮಾತನಾಡಿ ಇಂತಹ ಸರ್ಕಾರದ ಯೋಜನೆಗಳು ಬಡ ವಿದ್ಯಾರ್ಥಿಗಳಿಗೆ ಸ್ಟಾರ್ಟ್ ಅಪ್ ಆರಂಭಿಸಲು ಆರ್ಥಿಕವಾಗಿ ಪೂರಕವಾಗಲಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ. ಎಸ್. ಎಂ. ಶಶಿಧರ್ ಮಾತನಾಡಿ ಜಿಲ್ಲಾ ಇನ್ನೋವೆಟಿವ್ ಹಬ್ ನ್ನು ಪಿ.ಡಿ. ಐ. ಟಿ ಯಲ್ಲಿ ಸ್ಥಾಪಿಸಲಾಗುತ್ತಿದೆ. ನಾವೀನ್ಯತೆ ಹಾಗೂ ಕೌಶಲ್ಯ ಹೊಂದಿರುವ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಹಾಗೂ ವಿನೂತನ ಹತ್ತು ಪ್ರಾಜೆಕ್ಟ್ ಗಳಿಗೆ ತಲಾ ಮೂರು ಲಕ್ಷ ಮೊತ್ತದ ಆರ್ಥಿಕ ಅನುದಾನವನ್ನು ಮುಂದಿನ ಮೂರು ವರ್ಷಗಳಲ್ಲಿ ಕೊಡಲಾಗುವುದು. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕೆಡಿಇಎಂನ ಸಂಪನ್ಮೂಲ ವ್ಯಕ್ತಿಗಳಾದ ಗೌರವ್ ಕೆ ಪಂಜಾಬಿಯವರು ತಾಂತ್ರಿಕತೆ, ಆವಿಷ್ಕಾರ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸ್ಟಾರ್ಟ್ ಅಪ್ ಪ್ರೋಗ್ರಾಮ್ ಗಳ ಬಗ್ಗೆ ಮಾಹಿತಿ ನೀಡಿದರು. ಸ್ಟಾರ್ಟ್ ಅಪ್ ಕರ್ನಾಟಕ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಬಿ ಎನ್, ಸಂಪನ್ಮೂಲ ವ್ಯಕ್ತಿಗಳಾದ ಸುಧಾಕರ್ ಸ್ಯಾಮ್ಯುಯೆಲ್ ಹಾಗೂ ಡಾ. ಬಾಲಮುರುಗನ್, ಶಿಬಿರದಲ್ಲಿ ಉಪನ್ಯಾಸ ನೀಡಿದರು.
ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಿಬಿರದ ಕಿಟ್ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಂಚಾಲಕ ಪ್ರೊ. ಎಸ್ ಪ್ರಕಾಶ್ ಸ್ವಾಗತಿಸಿದರು. ಪ್ರೊ. ಸುಮಾ ಕಾರ್ಯಕ್ರಮವನ್ನು ನಿರೂಪಿಸಿದರು. ಕು. ರಶ್ಮಿ ಪ್ರಾರ್ಥಿಸಿದರು. ಶಿಬಿರದಲ್ಲಿ ಜಿಲ್ಲೆಯ ೧೫೦ಕ್ಕೂ ಹೆಚ್ಚು ತಾಂತ್ರಿಕ ವಿದ್ಯಾರ್ಥಿಗಳು ಪಾಲ್ಗೊಂಡರು.
ಕಾರ್ಯಕ್ರಮ ರಾಜ್ಯ ಸರ್ಕಾರದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಜರುಗಿತು.
*****

The post ಎಲಿವೇಟ್ ಕಲ್ಯಾಣ ಕರ್ನಾಟಕ ಯುವ ಜನರ ಆಕರ್ಷಕ ಯೋಜನೆ -ಡಾ. ಸಂಧ್ಯಾ ಅನ್ವೇಕರ್ appeared first on Karnataka Kahale.

]]>
ದರೋಜಿ ಡಾ.ಅಶ್ವ ರಾಮುಗೆ ಪಿಎಚ್.ಡಿ ಪದವಿ ಪ್ರದಾನ https://www.karnatakakahale.com/news/3923 Sat, 10 Apr 2021 08:10:35 +0000 https://www.karnatakakahale.com/?p=3923 ಕಂಪ್ಲಿ:ಸಮೀಪದ ಹಳೇ ದರೋಜಿ ಗ್ರಾಮದ ಬುಡ್ಗಜಂಗಮ‌(ಹಗಲು ವೇಷಗಾರರ) ಕಾಲೋನಿಯ ಗ್ರಾಮೀಣ ಪ್ರತಿಭೆ ಡಾ. ವೇಷ್ಗಾರು ರಾಮಾಂಜನೇಯ(ಅಶ್ವ ರಾಮು) ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿ ಗೌರವಿಸಿತು. ವಿವಿಯ ೨೯ನೇ ನುಡಿಹಬ್ಬ ಘಟಿಕೋತ್ಸವ ಸಮಾರಂಭದಲ್ಲಿ ವಿವಿಯ ಕುಲಪತಿ ಡಾ. ಸ…

The post ದರೋಜಿ ಡಾ.ಅಶ್ವ ರಾಮುಗೆ ಪಿಎಚ್.ಡಿ ಪದವಿ ಪ್ರದಾನ appeared first on Karnataka Kahale.

]]>
ಕಂಪ್ಲಿ:ಸಮೀಪದ ಹಳೇ ದರೋಜಿ ಗ್ರಾಮದ ಬುಡ್ಗಜಂಗಮ‌(ಹಗಲು ವೇಷಗಾರರ) ಕಾಲೋನಿಯ ಗ್ರಾಮೀಣ ಪ್ರತಿಭೆ ಡಾ. ವೇಷ್ಗಾರು ರಾಮಾಂಜನೇಯ(ಅಶ್ವ ರಾಮು) ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿ ಗೌರವಿಸಿತು.
ವಿವಿಯ ೨೯ನೇ ನುಡಿಹಬ್ಬ ಘಟಿಕೋತ್ಸವ ಸಮಾರಂಭದಲ್ಲಿ ವಿವಿಯ ಕುಲಪತಿ ಡಾ. ಸ ಚಿ ರಮೇಶ್ ಅವರು ಪಿಎಚ್ ಡಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಉತ್ತರ ಕರ್ನಾಟಕದಲ್ಲಿ ಮೊದಲ‌ ಪಿಎಚ್.ಡಿ ಪದವಿ ಪಡೆದ ಅಲೆಮಾರಿ ಹಗಲು ವೇಷಗಾರ ಸಮುದಾಯದ ಯುವಕ ಎಂಬ ಕೀರ್ತಿಗೆ ಡಾ. ಅಶ್ವರಾಮು ಪಾತ್ರರಾಗಿದ್ದಾರೆ.
ಸಮಾರಂಭದಲ್ಲಿ ಡಾ. ರಾಮು ಅವರ ತಂದೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ, ತಾಯಿ ಶ್ರೀಮತಿ ಅಶ್ವರಾಮಣ್ಣ, ಕುಟುಂಬದ ಸದಸ್ಯರು, ಮಿತ್ರರು ಪಾಲ್ಗೊಂಡು ಸಂಭ್ರಮಿಸಿದರು.
ಅಭಿನಂದನೆ: ಡಾಕ್ಟರೇಟ್ ಆಫ್ ಫಿಲಾಸಫಿ(ಪಿಎಚ್.ಡಿ) ಪದವಿಗೆ ಪಾತ್ರರಾದ ಡಾ.ಅಶ್ವರಾಮು ಅವರನ್ನು ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಿ.ಮಂಜುನಾಥ್ ಅಭಿನಂದಿಸಿದ್ದಾರೆ.

The post ದರೋಜಿ ಡಾ.ಅಶ್ವ ರಾಮುಗೆ ಪಿಎಚ್.ಡಿ ಪದವಿ ಪ್ರದಾನ appeared first on Karnataka Kahale.

]]>
ಸ್ವಾಮಿ ವಿವೇಕಾನಂದರ ಶಿಕ್ಷಣ ಮತ್ತು ವ್ಯವಸ್ಥೆ ಚಿಂತನೆ -ಡಾ.ಗುರುಪ್ರಸಾದ ಎಚ್ ಎಸ್ https://www.karnatakakahale.com/news/2649 Tue, 12 Jan 2021 03:30:53 +0000 https://www.karnatakakahale.com/?p=2649 ಸ್ವಾಮಿ ವಿವೇಕಾನಂದರ ಶಿಕ್ಷಣ ಮತ್ತು ವ್ಯವಸ್ಥೆ ಚಿಂತನೆ -ಡಾ.ಗುರುಪ್ರಸಾದ ಎಚ್ ಎಸ್ ಭಾರತೀಯ ವೇದ- ಉಪನಿಷತ್‌ಗಳಿಂದ ತೊಡಗಿ ಇಂದಿನ ಶಿಕ್ಷಣ ಆಯೋಗಗಳವರೆಗೂ ಶಿಕ್ಷಣದ ಉದ್ದೇಶದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಬಂದಿವೆ. ಬ್ರಿಟಿಷರು ಬಂದು ಆಧುನಿಕ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸುವವರೆಗೆ ಭಾರತೀಯರು ಅಜ್ಞಾನಿಗಳಾಗಿಯೇ…

The post ಸ್ವಾಮಿ ವಿವೇಕಾನಂದರ ಶಿಕ್ಷಣ ಮತ್ತು ವ್ಯವಸ್ಥೆ ಚಿಂತನೆ -ಡಾ.ಗುರುಪ್ರಸಾದ ಎಚ್ ಎಸ್ appeared first on Karnataka Kahale.

]]>
ಸ್ವಾಮಿ ವಿವೇಕಾನಂದರ ಶಿಕ್ಷಣ ಮತ್ತು ವ್ಯವಸ್ಥೆ ಚಿಂತನೆ
-ಡಾ.ಗುರುಪ್ರಸಾದ ಎಚ್ ಎಸ್

ಭಾರತೀಯ ವೇದ- ಉಪನಿಷತ್‌ಗಳಿಂದ ತೊಡಗಿ ಇಂದಿನ ಶಿಕ್ಷಣ ಆಯೋಗಗಳವರೆಗೂ ಶಿಕ್ಷಣದ ಉದ್ದೇಶದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಬಂದಿವೆ. ಬ್ರಿಟಿಷರು ಬಂದು ಆಧುನಿಕ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸುವವರೆಗೆ ಭಾರತೀಯರು ಅಜ್ಞಾನಿಗಳಾಗಿಯೇ ಇದ್ದರು ಎನ್ನುವ ಪಶ್ಚಿಮದ ನಿರೂಪಣೆ ಬಹುಕಾಲ ಚಾಲ್ತಿಯಲ್ಲಿತ್ತು. ಬ್ರಿಟಿಷರು ಭಾರತಕ್ಕೆ ಬರುವ ಪೂರ್ವದಲ್ಲೂ ಭಾರತದಲ್ಲಿ ಸುಂದರವಾದ ಮತ್ತು ಅರ್ಥಪೂರ್ಣವಾದ ಶಿಕ್ಷಣ ಕ್ರಮವೊಂದಿತ್ತು ಎನ್ನುವುದನ್ನು ದಾಖಲೆಗಳ ಸಹಿತ ದಶಕಗಳ ಹಿಂದೆಯೇ ಧರ್ಮಪಾಲ್‌ ಶೋಧಿಸಿ ‘ದಿ ಬ್ಯೂಟಿಫುಲ್‌ ಟ್ರೀ’ ಎಂಬ ಕೃತಿಯನ್ನು ಪ್ರಕಟಿಸಿದ್ದರು. ಭಾರತೀಯ ಶಿಕ್ಷಣ ಪದ್ಧತಿ, ಭಾರತೀಯರ ಶಿಕ್ಷಣದ ಕುರಿತ ಆಲೋಚನೆಗಳ ಸಾಫಲ್ಯವನ್ನು ಈ ಶೋಧನೆ ನಿರೂಪಿಸಿತು.
ಆಧುನಿಕ ಕಾಲಘಟ್ಟದ ಭಾರತದಲ್ಲಿ ಶಿಕ್ಷಣದ ಕುರಿತು ಬಹಳ ಗಂಭೀರವಾಗಿ ಚಿಂತನೆ ನಡೆಸಿ ಅದನ್ನು ನಿರೂಪಿಸಿದವರಲ್ಲಿ ಸ್ವಾಮಿ ವಿವೇಕಾನಂದರು ಪ್ರಮುಖರು. ವಿವೇಕಾನಂದರು ಶಿಕ್ಷಣದ ಉದ್ದೇಶ, ಅದರ ಪ್ರಕ್ರಿಯೆ, ಅದು ಉಂಟುಮಾಡಬೇಕಾದ ಪರಿಣಾಮದ ಬಗ್ಗೆ ನಡೆಸಿದ ಚಿಂತನೆಗಳು ಆ ಕಾಲಕ್ಕೆ ಮಾತ್ರವಲ್ಲ, ಇಂದಿಗೂ ನಮ್ಮ ನಡುವಿನ ಬಹುಮುಖ್ಯ ಶಿಕ್ಷಣ ತಜ್ಞರು ನಡೆಸುವ ಚಿಂತನೆಗಳಿಗೆ ಬೀಜರೂಪದಂತಿದೆ.
ಭವ್ಯ ಭಾರತದ ಕನಸನ್ನು ಕಂಡಿದ್ದ ಸ್ವಾಮಿ ವಿವೇಕಾನಂದರು ಶಿಕ್ಷಣ ಮಾತು ಯುವಕರ ಬಗ್ಗೆ ತಮ್ಮದೇ ಆದ ವಿಶಿಷ್ಟ ನಿಲುವನ್ನು ಹೊಂದಿದ್ದರು. ಸದಾ ಸಕಾರಾತ್ಮಕ ಚಿಂತನೆಗಳಿಂದ ಯುವಕರನ್ನು ಪ್ರೇರೇಪಿಸುತ್ತಿದ್ದ ಸ್ವಾಮೀಜಿ ತಾವು ಹೋದಲೆಲ್ಲಾ ಶಿಕ್ಷಣದ ಬಗ್ಗೆ ಹೇಳುತ್ತಿದ್ದರು. ದೈಹಿಕ ಶಿಕ್ಷಣ, ಮಾನಸಿಕ ಶಿಕ್ಷಣ, ಧಾರ್ಮಿಕ ಶಿಕ್ಷಣ, ಮಹಿಳಾ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಅವರು ಮಾತನಾಡುತ್ತಿದ್ದರು.
ಸ್ವಾಮಿ ವಿವೇಕಾನಂದರೇ ಹೇಳುವಂತೆ ಶಿಕ್ಷಣವೆಂದರೆ ‘ಮಾನವೀಯತೆಯ ವಿಕಾಸ, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ. ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ ಎಂದು ಹೇಳುತ್ತಿದ್ದ ವಿವೇಕಾನಂದರು ‘ಭಾರತದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ ಒಂದೇ ಪರಿಹಾರ’ ಎಂದು ನಂಬಿದ್ದರು.
ಮಾನವ ಸಮಾಜದಲ್ಲಿ ಮನೆಮಾಡಿರುವ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ ಎಂಬುದು ವಿವೇಕಾನಂದರ ಅಭಿಮತ. ‘ಶಿಕ್ಷಣವು ಮಾನವನನ್ನು ಸೀಮಿತ ಸ್ತರದಿಂದ ಅಸೀಮ ಹಂತಕ್ಕೆ ಒಯ್ಯುವಂಥದ್ದು’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.

‘ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದ ಮೂಲಕ ಚಾರಿತ್ರ್ಯ ನಿರ್ಮಾಣ; ಚಾರಿತ್ರ್ಯ ನಿರ್ಮಾಣದಿಂದ ಮಾತ್ರವೇ ರಾಷ್ಟ್ರನಿರ್ಮಾಣ’ ಎಂಬ ಸ್ವಾಮಿ ವಿವೇಕಾನಂದರ ಅಭಿಪ್ರಾಯವು ಶಿಕ್ಷಣವು ಪ್ರಥಮತಃ ವ್ವಕ್ತಿಯ ಅಭ್ಯುದಯ ತದನಂತರ ಸಮಾಜ, ರಾಷ್ಟ್ರ ಹಾಗೂ ಅಂತಿಮವಾಗಿ ವಿಶ್ವದ ಶ್ರೇಯಸ್ಸಿಗೆ ಪ್ರೇರಕವಾಗುತ್ತದೆ ಎಂಬ ಸತ್ಯವನ್ನು ಸೂಚಿಸುತ್ತದೆ.

ಹೊಸಹೊಸ ಭಾವನೆಗಳನ್ನು ಸ್ವಭಾವ ಸಹಜವಾಗಿಸಿಕೊಳ್ಳುವುದನ್ನು ಶಿಕ್ಷಣ ಎಂದು ಮನಗಂಡಿದ್ದ ಅವರು ಪ್ರತಿಯೊಬ್ಬ ವ್ಯಕ್ತಿಯೂ ಚಾರಿತ್ರ್ಯ್ಷಮತೆಯನ್ನು ನೀಡುವ ಶಿಕ್ಷಣ ಮತ್ತು ಧರ್ಮಕ್ಕೆ ಮೊರೆಹೋಗಬೇಕೆಂಬ ಅಭಿಪ್ರಾಯ ನೀಡುತ್ತಾರೆ. ‘ಉನ್ನತ ವಿಚಾರಗಳನ್ನು ವ್ಯಕ್ತಿಯೊಬ್ಬನಿಗೆ ನೀಡಿ ಆತನನ್ನು ಹುಲಿಯಾಗಿಸದಿದ್ದರೆ ಅವನು ಖಂಡಿತ ನರಿಯಾಗುತ್ತಾನೆ’ ಎಂದು ಸ್ವಾಮೀಜಿ ಎಚ್ಚರಿಸುತ್ತಾರೆ. ಧರ್ಮ-ಸಂಸ್ಕೃತಿಗಳ ಅಧ್ಯಯನದ ಜೊತೆಗೆ ಪಾಶ್ಚಾತ್ಯ ವಿಜ್ಞಾನದ ಅಧ್ಯಯನಕ್ಕೆ ಸ್ವಾಮೀಜಿಯವರು ಒತ್ತು ನೀಡಲು ಕಾರಣ, ವಿಜ್ಞಾನ ವನ್ನು ಅಧ್ಯಯನಗೈಯ್ದು ಅಳವಡಿಸಿಕೊಳ್ಳುವುದರಿಂದ ಲೌಕಿಕ ಸಂಪತ್ತು ವೃದ್ಧಿಯಾಗುತ್ತದೆ ಎಂದು. ”ವಿದ್ಯಾಭ್ಯಾಸವೆಂದರೆ ತಲೆಯಲ್ಲಿ ತುಂಬಿಕೊಂಡ ವಿಷಯಗಳ ಮೊತ್ತವಲ್ಲ. ಅದು ಅಲ್ಲಿ ಒಂದಿನಿತೂ ಜೀರ್ಣವಾಗದೇ ದಿಕ್ಕುಗೆಟ್ಟು ಓಡುತ್ತಿರುವುದು. ಜೀವನವನ್ನು ಕಟ್ಟುವಂತಹ, ಪುರುಷಸಿಂಹರನ್ನು ಸೃಷ್ಟಿಸುವಂತಹ, ಶೀಲ ಸಂಪತ್ತನ್ನು ನಿರ್ಮಾಣ ಮಾಡುವಂತಹ ವಿಚಾರಗಳನ್ನು ಗ್ರಹಿಸುವಂತಹ ವಿದ್ಯಾಭ್ಯಾಸ ನಮಗೆ ಬೇಕು,” ಎನ್ನುತ್ತಾರೆ. ಆದರೆ ಕೇವಲ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಮೆದುಳಿಗೆ ತುಂಬುವುದು ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯ ಆದ್ಯತೆಯಾಗಿದೆ. ಹೀಗೆ ತುಂಬಿಕೊಂಡ ಮಾಹಿತಿಗಳು ಜೀರ್ಣವಾಗದೆ ಹೋಗುವುದರಿಂದ ವ್ಯಕ್ತಿಯಲ್ಲಿ ಕಲಿಕೆಯ ಪ್ರಕ್ರಿಯೆ ಉತ್ಸಾಹದಾಯಕವಾದ ಸಂಗತಿಯಾಗಿಲ್ಲ. ಯಾವ ಶಿಕ್ಷಣವನ್ನು ಪಡೆಯುವುದರಿಂದ ವ್ಯಕ್ತಿ ತನ್ನ ಜೀವನವನ್ನು ತಾನೇ ಕಟ್ಟಿಕೊಳ್ಳಬಹುದೋ, ಸಾಧನೆಯ ಪಥದಲ್ಲಿ ಸಿಂಹ ಸಾಹಸಿಕರನ್ನಾಗಿಸಬಹುದೊ, ವ್ಯಕ್ತಿಯನ್ನು ಶೀಲಸಂಪನ್ನನೂ, ಚಾರಿತ್ರ್ಯವಂತರನ್ನಾಗಿಯೂ ಮಾಡಬಹುದೊ ಅದು ನಿಜವಾದ ಶಿಕ್ಷಣ ಎಂಬ ವಿವೇಕಾನಂದರ ಉಕ್ತಿ ನಮ್ಮ ಮುಂದಿದ್ದರೂ ನಾವು ಮಾತ್ರ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಕೇವಲ ಪ್ರಮಾಣ ಪತ್ರಗಳನ್ನು ಮಾತ್ರ ಹೊಂದಿರುವ ನಿರುಪಯುಕ್ತ ಪದವೀಧರರನ್ನು ತಯಾರಿಸುತ್ತಲೇ ಇದ್ದೇವೆ.
ಭಾರತದಾದ್ಯಂತ ಕಾಲ್ನಡಿಗೆಯಲ್ಲಿ ಸಂಚರಿಸಿ ದೇಶದ ಸ್ಥಿತಿಗತಿಗಳನ್ನು ಅಧ್ಯಯನ ಮಾಡುವಲ್ಲಿ ವಿವೇಕಾನಂದರು ಯಶಸ್ವಿಯಾದರು. ಪಾಶ್ಚಾತ್ಯ ಆಡಳಿತವೂ ಭಾರತದ ಆರ್ಥಿಕ ದುಃಸ್ಥಿತಿಗೆ ಕಾರಣವಾಗಿದ್ದಿತು. ಬಡವರು ಎಷ್ಟೇ ಶ್ರಮಜೀವಿಗಳಾದರೂ ಆರ್ಥಿಕವಾಗಿ ಮೇಲೇರದಂತೆ ಮಾಡುತ್ತಿದ್ದ ದಲ್ಲಾಳಿಗಳ ಕುಟಿಲ ತಂತ್ರಗಳನ್ನು ಅವರು ಗುರುತಿಸಿದ್ದರು.
ಕೃಷಿಕರಲ್ಲಿ, ಕಾರ್ವಿುಕ ವರ್ಗದಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಸರ್ವಪ್ರಯತ್ನಗೈದರು. ”ಜನಸಾಮಾನ್ಯರ ಬೆವರು, ಪರಿಶ್ರಮದಿಂದ ಬದುಕಿನಲ್ಲಿ ಮೇಲೇರಿ ಬಂದ ನಂತರ ಅವರನ್ನು ನಿರ್ಲಕ್ಷಿಸುವ ವಿದ್ಯಾವಂತರು ಎನಿಸಿಕೊಂಡವರನ್ನು ನಾನು ದೇಶದ್ರೋಹಿಗಳೆಂದೇ ಪರಿಗಣಿಸುತ್ತೇನೆ” ಎಂದು ಸಮಾಜದ ವಿದ್ಯಾವಂತರನ್ನು ಛೇಡಿಸುತ್ತಾರೆ. ವಿದ್ಯಾವಂತರ ಮತ್ತು ಶ್ರೀಮಂತರ ಅವಿವೇಕವನ್ನು ಕಂಡು, “Give light to the poor, more light to the rich. Give light to uneducated and more light to educated” ಎನ್ನುತ್ತಾರೆ.
ಭಾರತೀಯರಿಗೆ ವ್ಯವಸಾಯವನ್ನು ಒಂದು ಉದ್ಯೋಗವಾಗಿ ರೂಪಿಸಿಕೊಳ್ಳಬೇಕೆಂದು ಸ್ವಾಮೀಜಿ ಕರೆ ಇತ್ತಿದ್ದಾರೆ. ಅವರು ನೀಡುವ ಭರವಸೆ ಅದ್ಭುತವಾಗಿದೆ- ”ಭಾರತೀಯ ಪ್ರಾಚೀನ ಋಷಿಗಳು ಕೃಷಿಕರಾಗಿದ್ದರು. ಆಧುನಿಕ ಜಗತ್ತಿನಲ್ಲಿ ಅಮೆರಿಕ ವ್ಯವಸಾಯವನ್ನು ಪ್ರಗತಿಪಥದಲ್ಲಿ ಒಯ್ದಿರುವುದು ಗಮನೀಯ ಅಂಶ. ಆಧುನಿಕ ಭಾರತವು ಕೃಷಿ ವಿಜ್ಞಾನವನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ ವ್ಯವಸಾಯದಲ್ಲಿ ಅಳವಡಿಸಬೇಕು. ಅವೈಜ್ಞಾನಿಕ ಪದ್ಧತಿಗಳಿಂದ ಕೃಷಿ ಉತ್ಪಾದನೆ ಕ್ಷೀಣಿಸುತ್ತಿದೆ. ಗ್ರಾಮೀಣ ಜನತೆ ಹಳ್ಳಿಗಾಡಿನ ಉತ್ತಮ ಪರಿಸರದಲ್ಲಿ ವ್ಯವಸಾಯವನ್ನು ಕೈಗೊಂಡು ಆರೋಗ್ಯದಿಂದ ನೆಮ್ಮದಿಯಿಂದ ಬದುಕಲು ಸಾಧ್ಯ” ಎಂದಿದ್ದಾರೆ.

ವ್ಯವಸಾಯ ಕ್ಷೇತ್ರವನ್ನು ನಿರ್ಲಕ್ಷಿಸದಂತೆ ಜನಸಾಮಾನ್ಯರನ್ನು ಕೋರಿದ ಸ್ವಾಮೀಜಿ, ವಿಜ್ಞಾನದ ಅಧ್ಯಯನದಿಂದ ರಾಷ್ಟ್ರದ ಔದ್ಯೋಗಿಕ ಕ್ಷೇತ್ರವನ್ನು ಬೆಳೆಸಿ ಲೌಕಿಕ ಸಂಪತ್ತನ್ನು ಗಳಿಸಬಹುದೆಂದು ತಿಳಿವಳಿಕೆ ನೀಡಿದರು. ಅಮೆರಿಕ ಪ್ರವಾಸ ಸಂದರ್ಭದಲ್ಲಿ ಹಡಗಿನಲ್ಲಿ ಭೇಟಿಯಾದ ಶ್ರೀಮಂತರಾದ ಜೆಮ್ ಶೇಠ್​ಜೀ ಟಾಟಾರವರಿಗೆ ಭಾರತದಲ್ಲಿ ಕೈಗಾರಿಕೆ ಉದ್ದಿಮೆಯನ್ನು ಮತ್ತು ವಿಜ್ಞಾನ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಮನವಿ ಮಾಡಿದರು.

-ಡಾ.ಗುರುಪ್ರಸಾದ ಎಚ್ ಎಸ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com

The post ಸ್ವಾಮಿ ವಿವೇಕಾನಂದರ ಶಿಕ್ಷಣ ಮತ್ತು ವ್ಯವಸ್ಥೆ ಚಿಂತನೆ -ಡಾ.ಗುರುಪ್ರಸಾದ ಎಚ್ ಎಸ್ appeared first on Karnataka Kahale.

]]>