Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಬುದ್ದ ವಿಹಾರ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Wed, 22 Nov 2023 16:19:46 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಬುದ್ದ ವಿಹಾರ – Karnataka Kahale https://www.karnatakakahale.com 32 32 ಜಿಲ್ಲಾ ಪ್ರವಾಸಿ ತಾಣಗಳಲ್ಲಿ ವಿಜಯಪುರ ಬುದ್ಧವಿಹಾರ ಸೇರ್ಪಡೆ: ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ -ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ವಾಗ್ದಾನ https://www.karnatakakahale.com/news/14521 Wed, 22 Nov 2023 16:19:46 +0000 https://www.karnatakakahale.com/?p=14521 ವಿಜಯಪುರ ನ. ೨೨: ಜಿಲ್ಲಾ ಪ್ರವಾಸದಲ್ಲಿರುವ ರಾಜ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಬುಧವಾರ ಸಂಜೆ ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರಕ್ಕೆ ಭೇಟಿ ನೀಡಿದರು. ಬುದ್ಧವಿಹಾರ ನಿರ್ಮಾಣ ಸಮಿತಿಯ ಆಡಳಿತ ಮಂಡಳಿಯ ಮನವಿಗೆ ಸ್ಪಂದಿಸಿದ ಸಚಿವ ಎಚ್.ಕೆ. ಪಾಟೀಲರು…

The post ಜಿಲ್ಲಾ ಪ್ರವಾಸಿ ತಾಣಗಳಲ್ಲಿ ವಿಜಯಪುರ ಬುದ್ಧವಿಹಾರ ಸೇರ್ಪಡೆ: ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ -ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ವಾಗ್ದಾನ appeared first on Karnataka Kahale.

]]>

ವಿಜಯಪುರ ನ. ೨೨: ಜಿಲ್ಲಾ ಪ್ರವಾಸದಲ್ಲಿರುವ ರಾಜ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಬುಧವಾರ ಸಂಜೆ ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರಕ್ಕೆ ಭೇಟಿ ನೀಡಿದರು. ಬುದ್ಧವಿಹಾರ ನಿರ್ಮಾಣ ಸಮಿತಿಯ ಆಡಳಿತ ಮಂಡಳಿಯ ಮನವಿಗೆ ಸ್ಪಂದಿಸಿದ ಸಚಿವ ಎಚ್.ಕೆ. ಪಾಟೀಲರು ನಗರದ ಹೃದಯಭಾಗದಲ್ಲಿರುವ ಬುದ್ಧವಿಹಾರವನ್ನು ಪ್ರವಾಸಿತಾಣಗಳ ಪಟ್ಟಿಯಲ್ಲಿ ಸೇರಿಸುವುದಲ್ಲದೆ ವಿಹಾರದ ಆವರಣದಲ್ಲಿ ಯಾತ್ರಿನಿವಾಸ ನಿರ್ಮಿಸಿಕೊಡುವುದಾಗಿ ವಾಗ್ದಾನ ಮಾಡಿದರಲ್ಲದೆ ಯಾತ್ರನಿವಾಸದ ನೀಲನಕ್ಷೆ ತಯಾರಿಸುವಂತೆ ಮತ್ತು ಅಂದಾಜುವೆಚ್ಚವನ್ನು ಸಿದ್ಧಪಡಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಿಂದಗಿ ಶಾಸಕ ಅಶೋಕ‌ ಮನಗೂಳಿ, ನಾಗಠಾಣ ಶಾಸಕ ವಿಠ್ಠಲ ಕಡಕದೋಂಡ್, ರಮೇಶ ಸೂಳಿಭಾವಿ ಮತ್ತಿತರ ಮುಖಂಡರು, ಅಧಿಕಾರಿಗಳ ಸಚಿವರ ಜೊತೆಗಿದ್ದರು. ಬುದ್ಧವಿಹಾರ ಅಧ್ಯಕ್ಷರಾದ ರಾಜಶೇಖರ ಯಡಹಳ್ಳಿ ಅವರು ಸ್ವಾಗತಿಸಿದರು. ಪೂಜ್ಯ ಭಂತೆ ಬೋಧಿಧಮ್ಮ ಅವರು ಎಚ್.ಕೆ.ಪಾಟೀಲರಿಗೆ ಶಾಲು ಹೊದಿಸಿ ಗೌರವಿಸಿ ಆಶೀರ್ವದಿಸಿದರು.

ಕಾರ್ಯದರ್ಶಿ ನಾಗರಾಜ ಲಂಬು, ನಿರ್ದೇಶಕ ಮಂಡಳಿ ಸದಸ್ಯರಾದ ರಾಜು ತೊರವಿ, ಅನಿಲ ಹೊಸಮನಿ, ಎಸ್.ಆರ್. ಶಿವಶರಣ, ಸುರೇಶ ಘೊಣಸಗಿ, ಸಮಾಜದ ಹಿರಿಯರಾದ ಚಂದ್ರಶೇಖರ ಕೊಡಬಾಗಿ, ಸುಭಾಸ ಗುಡಿಮನಿ, ಸಂಗಪ್ಪ ಚಲವಾದಿ, ಬಸವರಾಜ ಬ್ಯಾಳಿ, ಕೆ.ಎಂ ಶಿವಶರಣ, ಚಿದಾನಂದ ನಿಂಬಾಳ, ಮಹೇಶ ಕ್ಯಾತನ್, ಚಿದಾನಂದ ಹೊನವಾಡಕರ, ರಮೇಶ ಯಡಹಳ್ಳಿ, ಭೀಮಶಿ ಹಿಪ್ಪರಗಿ, ಎಂ.ಬಿ. ಹಳ್ಳದಮನಿ, ಸುನೀಲ ಉಕ್ಕಲಿ, ಅಭಿಷೇಕ ಚಕ್ರವರ್ತಿ, ರೋಹಿತ ಮಲಕನವರ, ರಾಹುಲ ಕುಬಕಡ್ಡಿ, ಭಾರತಿ ಹೊಸಮನಿ, ಸಂತೋಷ ಶಹಾಪುರ, ವೆಂಕಟೇಶ ವಗ್ಗೇನವರ, ಕೆ.ಎಂ. ಕೂಡಲಗಿ ಸೇರಿದಂತೆ ನೂರಾರು ಬೌದ್ಧ ಉಪಾಸಕ- ಉಪಾಸಕಿಯರು  ಇದ್ದರು.

The post ಜಿಲ್ಲಾ ಪ್ರವಾಸಿ ತಾಣಗಳಲ್ಲಿ ವಿಜಯಪುರ ಬುದ್ಧವಿಹಾರ ಸೇರ್ಪಡೆ: ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ -ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ವಾಗ್ದಾನ appeared first on Karnataka Kahale.

]]>