The post ಹಂಪಿ ಕನ್ನಡ ವಿವಿ ಕುಲಪತಿಗಳ ಆಪ್ತಕಾರ್ಯದರ್ಶಿ ಎ.ಎಂ. ಕೃಪಾಶಂಕರ ಅವರಿಗೆ ಬಸವಸೇವಾ ಪುರಸ್ಕಾರ ಪ್ರದಾನ appeared first on Karnataka Kahale.
]]>
ಹಂಪಿ ಕನ್ನಡವಿವಿ, ಡಿ.26: ಸಂಡೂರು ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠ ಹಾಗೂ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳ ಸಹಯೋಗದಲ್ಲಿ ಆಯೋಜಿಸಲಾದ ಬಸವ ಬೆಳಗು ಹಾಗೂ ಬಸವ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳ ಆಪ್ತಕಾರ್ಯದರ್ಶಿ ಎ.ಎಂ. ಕೃಪಾಶಂಕರ ಅವರಿಗೆ ೨೦೨೫ರ ಬಸವಸೇವಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.
ಪುಸ್ತಕ ವಿನ್ಯಾಸ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಕನ್ನಡ ಸಾಹಿತ್ಯದ ಪ್ರಕಟಣಾ ಗುಣಮಟ್ಟ ಹೆಚ್ಚಿಸುವಲ್ಲಿ ಅವರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಮಠದ ವಕ್ತಾರರು ತಿಳಿಸಿದರು. ರಾಣೀಬೆನ್ನೂರು ತಾಲ್ಲೂಕಿನ ಶಾಸಕರಾದ ಪ್ರಕಾಶ ಕೋಳಿವಾಡ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಬಸವಣ್ಣನವರ ಮಾನವೀಯತೆ, ಸೇವಾ ಮನೋಭಾವ ಹಾಗೂ ಸಮಾನತೆಯ ತತ್ವಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎ.ಎಂ. ಕೃಪಾಶಂಕರ ಅವರು, ಈ ಗೌರವವನ್ನು ಪುಸ್ತಕ ವಿನ್ಯಾಸ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲರಿಗೂ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಪ್ರಭುದೇವರ ವಿರಕ್ತಮಠ ಸೇವಾಸಮಿತಿ, ಸಂಡೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಹಾವೇರಿ ಇದರ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭ ಬಸವಣ್ಣನವರ ಮಾನವೀಯತೆ, ಸೇವಾ ತತ್ವ ಹಾಗೂ ಸಾಮಾಜಿಕ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವಲ್ಲಿ ಯಶಸ್ವಿಯಾಯಿತು.
The post ಹಂಪಿ ಕನ್ನಡ ವಿವಿ ಕುಲಪತಿಗಳ ಆಪ್ತಕಾರ್ಯದರ್ಶಿ ಎ.ಎಂ. ಕೃಪಾಶಂಕರ ಅವರಿಗೆ ಬಸವಸೇವಾ ಪುರಸ್ಕಾರ ಪ್ರದಾನ appeared first on Karnataka Kahale.
]]>The post ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸುಸೂತ್ರ ನಿರ್ವಹಣೆಗೆ ಕೂಡಲೇ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲು ಸಾಹಿತಿ, ಪತ್ರಕರ್ತರಿಂದ ಒತ್ತಾಯ appeared first on Karnataka Kahale.
]]>
ರಾಜ್ಯ ತನ್ನ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಸಂಭ್ರಮಾಚರಣೆ ನಡೆಸುತ್ತಿದೆ. ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರು ಕನ್ನಡ ಉಳಿಸಿ ಬೆಳೆಸುವ ಬಗ್ಗೆ ಪುಂಕಾನುಪುಂಖವಾಗಿ ಮಾತನಾಡುತ್ತಿದ್ದಾರೆ. ಇದೆಲ್ಲವೂ ಸ್ವಾಗಾತಾರ್ಹ ಮತ್ತು ಕನ್ನಡ , ಕನ್ನಡಿಗ ಹಾಗೂ ಕರ್ನಾಟಕದ ಹೆಮ್ಮೆ .
ಆದರೆ ಮತ್ತೊಂದೆಡೆ , ಕರ್ನಾಟಕದ ಅಸ್ಮಿತೆಯನ್ನು ಎತ್ತಿ ಹಿಡಿಯಲು ಸ್ಥಾಪನೆಯಾದ ಕರ್ನಾಟಕದ ಕನ್ನಡ ವಿಶ್ವವಿದ್ಯಾಲಯ ಹಣದ ಕೊರತೆಯಿಂದ ಮುಚ್ಚುವ ಪರಿಸ್ಥಿತಿಗೆ ಬಂದಿದೆ.
ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದ ಅನುದಾನಗಳು ಕುಸಿಯುತಿದ್ದು ಸಿಬ್ಬಂದಿ ಸಂಬಳ ಹಾಗೂ ನಿತ್ಯ ಖರ್ಚುಗಳಿಗೂ ಹಣವಿಲ್ಲದಂತಾಗಿದೆ .ಸುಮಾರು 1,200 ವಿದ್ಯಾರ್ಥಿಗಳನ್ನು ಓದುತ್ತಿರುವ ಈ ವಿಶ್ವವಿದ್ಯಾಲಯವು ತನ್ನ ಕನಿಷ್ಠ ವೆಚ್ಚವನ್ನು ಭರಿಸಲು ಅನುದಾನವಿಲ್ಲದೆ ಅನಿಶ್ಚಿತ ಭವಿಷ್ಯವನ್ನು ಎದುರು ನೋಡುತ್ತಿದೆ .
ಹಲವು ಖಾಯಂ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಹೊರಗುತ್ತಿಗೆ ಮತ್ತು ಹಂಗಾಮಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ .
ಅವರ ಸಂಬಳ ಪಾವತಿಸಲು ಹಣವಿಲ್ಲದಾಗಿದೆ . ಈ ಹಂಗಾಮಿ ಮತ್ತು ಹೊರಗುತ್ತಿಗೆ ನೌಕರರಿಗೆ ಸುಮಾರು ಒಂದು ವರ್ಷದಿಂದ ಸಂಬಳ ಪಾವತಿಯಾಗಿಲ್ಲ .
1991 ರಲ್ಲಿ 700 ಎಕರೆ ಕ್ಯಾಂಪಸ್‌ನಲ್ಲಿ ಮೂಲಸೌಕರ್ಯ, ಹಾಸ್ಟೆಲ್‌ಗಳು, 22 ಸಂಶೋಧನಾ ವಿಭಾಗಗಳು ಮತ್ತು 32 ಕಟ್ಟಡಗಳೊಂದಿಗೆ ಈ ವಿಶ್ವವಿದ್ಯಾಲಯವನ್ನು, ಕನ್ನಡವನ್ನು ಉತ್ತೇಜಿಸಲು ಮತ್ತು ಪೋಷಿಸಲು, ಭಾಷೆಯ ಬೆಳವಣಿಗೆಗೆ ಸಹಾಯ ಮಾಡಲು, ಸಂಶೋಧನೆ ಮತ್ತು ಇತರ ಅಧ್ಯಯನಗಳನ್ನು ಕೈಗೊಳ್ಳಲು ಮತ್ತು ಸಮಾಜದ ಅಂಚಿನಲ್ಲಿರುವ ಗುಂಪುಗಳಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಸಹಾಯ ಮಾಡಲು ಉದ್ದೇಶಿಸಿ ಸ್ಥಾಪಿಸಲಾಯಿತು .
ಆದರೆ , ಅದೇ ವಿಶ್ವವಿದ್ಯಾಲಯ ಹಣಕಾಸಿನ ತೀವ್ರ ಬಿಕ್ಕಟ್ಟಿಗೆ ಒಳಗಾಗಿ ನಿರಂತರ ಕುಸಿತ ಕಂಡಿದ್ದು ಈಗ ಮುಚ್ಚುವ ಹಂತ ತಲುಪಿದೆ .
ಕನ್ನಡದ ಈ ಏಕೈಕ ವಿಶ್ವವಿದ್ಯಾಲಯವನ್ನು ಉಳಿಸಿ ಬೆಳಸಿ ಸುಸ್ಥಿರಗೊಳಿಸಲು ಅಗತ್ಯ ಅನುದಾನಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ನಾವು ಒಕ್ಕೊರಲಿನಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಮತ್ತು ಈ ವಿಶ್ವವಿದ್ಯಾಲಯ ಸಬಲೀಕರಣಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ತಗೆದುಕೊಳ್ಳಲು ಒತ್ತಾಯಿಸುತ್ತೇವೆ.
-ನಿರಂಜನಾರಾಧ್ಯ ವಿ ಪಿ , ಬೆಂಗಳೂರು,
ಬಸವರಾಜ ಸೂಳಿಭಾವಿ ಗದಗ,
ಕೆ ಪಿ ಸುರೇಶ ಬೆಂಗಳೂರು,
ಡಾ. ಎಚ್ ಎಸ್ ಅನುಪಮಾ ಕವಲಕ್ಕಿ,
ಅನಿಲ ಹೊಸಮನಿ ವಿಜಯಪುರ,
ಸಿ.ಮಂಜುನಾಥ್ ಬಳ್ಳಾರಿ.
The post ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸುಸೂತ್ರ ನಿರ್ವಹಣೆಗೆ ಕೂಡಲೇ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲು ಸಾಹಿತಿ, ಪತ್ರಕರ್ತರಿಂದ ಒತ್ತಾಯ appeared first on Karnataka Kahale.
]]>The post ವಿಜಯನಗರ ಜಿಲ್ಲೆಯ ಪ್ರವೀಣ್ ಕಿತ್ನೂರಗೆ ಬಾಪೂಜಿ ಪ್ರಬಂಧ ಸ್ಪರ್ಧೆಯ ರಾಜ್ಯಮಟ್ಟದ ಬಹುಮಾನ appeared first on Karnataka Kahale.
]]>The post ವಿಜಯನಗರ ಜಿಲ್ಲೆಯ ಪ್ರವೀಣ್ ಕಿತ್ನೂರಗೆ ಬಾಪೂಜಿ ಪ್ರಬಂಧ ಸ್ಪರ್ಧೆಯ ರಾಜ್ಯಮಟ್ಟದ ಬಹುಮಾನ appeared first on Karnataka Kahale.
]]>The post ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕನ್ನಡ ವಿವಿ ವಿದ್ವಾಂಸರ ಕೊಡುಗೆ ಅಪಾರ -ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ appeared first on Karnataka Kahale.
]]>
ಹಂಪಿ, ಆ.1: ನಾಡಿನ ಬಹುತ್ವದ ನೆಲೆಯಲ್ಲಿ ರೂಪುಗೊಂಡಿರುವ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಾಹಿತ್ಯ ಭಂಡಾರ, ವಚನ ಸಾಹಿತ್ಯ, ಕನ್ನಡ ಭಾಷಾ ಅಭಿವೃದ್ಧಿ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ಪರಿಚಯಿಸುವಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕರ ಕೊಡುಗೆ ಶ್ಲಾಘನೀಯವಾದ್ದು ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಭುವನವಿಜಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಾಧ್ಯಾಪಕರಾದ ಡಾ. ಕೆ.ಎಂ. ಮೇತ್ರಿ, ಡಾ. ಡಿ. ಪಾಂಡುರಂಗಬಾಬು ಹಾಗೂ ಡಾ. ಕೆ. ರವೀಂದ್ರನಾಥ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಮೂವರು ವೃತ್ತಿ ಮತ್ತು ಪ್ರವೃತ್ತಿ ಎರಡನ್ನು ಸಂಶೋಧನೆಯನ್ನಾಗಿಸಿಕೊಂಡು, ನಾಡಿಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಇನ್ನು ಕನ್ನಡ ವಿಶ್ವವಿದ್ಯಾಲಯವು ಸರ್ವರಿಗೂ ಮುಕ್ತವಾಗಿದ್ದು, ನಿವೃತ್ತ ಪ್ರಾಧ್ಯಾಪಕರು ಹಾಗೂ ನೌಕರರ ಸೇವೆಗಾಗಿ ಕನ್ನಡ ವಿಶ್ವವಿದ್ಯಾಲಯವು ಸದಾ ತೆರೆದಿರುತ್ತದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ಭಾಷಾ ನಿಕಾಯದ ಡೀನರಾದ ಡಾ. ಎಫ್.ಟಿ. ಹಳ್ಳಿಕೇರಿ, ಸಮಾಜ ವಿಜ್ಞಾನಗಳ ನಿಕಾಯದ ಡೀನರಾದ ಡಾ.ಚಲುವರಾಜು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪಕುಲಸಚಿವ ಡಾ. ಎ. ವೆಂಕಟೇಶ ಗಣ್ಯರನ್ನು ಸ್ವಾಗತಿಸಿದರು, ಸಹಾಯಕ ಕುಲಸಚಿವರಾದ ಗುರುಬಸಪ್ಪ ವಂದಿಸಿದರು, ಅಧ್ಯಾಪಕರಾದ ಜ್ಯೋತಿ ಅವರು ನಿರೂಪಿಸಿದರು.
The post ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕನ್ನಡ ವಿವಿ ವಿದ್ವಾಂಸರ ಕೊಡುಗೆ ಅಪಾರ -ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ appeared first on Karnataka Kahale.
]]>The post ಸಂಡೂರಿನ ಜೋಗದ ಹೆಚ್.ಹುಲಿಗೆಮ್ಮಗೆ ಪಿ.ಎಚ್.ಡಿ ಪದವಿ ಪ್ರದಾನ appeared first on Karnataka Kahale.
]]>
ಗ್ರಾಮದ ಯಂಕಪ್ಪ ಹಾಗೂ ಈರಮ್ಮ ಅವರ ಪುತ್ರಿ ಹೆಚ್. ಹುಲಿಗೆಮ್ಮ ಅವರು ಬಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಆಂತರಿಕ ಮಾರ್ಗದರ್ಶನಕರಾದ ಡಾ. ಎಸ್. ಎ. ಗೋವರ್ಧನ ಅವರ ಮಾರ್ಗದರ್ಶನದಲ್ಲಿ “ದಲಿತರ ರಾಜಕೀಯ ಸಬಲೀಕರಣ”(ಸಂಡೂರು ಮತ್ತು ಹೊಸಪೇಟೆ ತಾಲೂಕುಗಳನ್ನು ಅನುಲಕ್ಷಿಸಿ )ಎಂಬ ಶೀರ್ಷಿಕೆ ಅಡಿ ಮಹಾಪ್ರಬಂಧ ರಚಿಸಿ ವಿವಿಗೆ ಮಂಡಿಸಿದ್ದರು.
ವಿಶ್ವವಿದ್ಯಾಲಯ ಪರೀಕ್ಷಾ ಮಂಡಳಿ, ಅಧಿನಿಯಮ ಹಾಗೂ ಪಿಎಚ್.ಡಿ ಪದವಿ ನಿಯಮಗಳನ್ನು ಅನುಸಾರ ಮಹಾಪ್ರಬಂಧ ಅತ್ಯುತ್ತಮ ಶ್ರೇಣಿಯದ್ದು ಎಂದು ಪರಿಗಣಿಸಿ ಜ. ೧೦ ರಂದು ನಡೆದ ೩೨ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರೂ ಆಗಿರುವ ವಿವಿ ಸಮ ಕುಲಾಧಿಪತಿ
ಡಾ. ಎಂ.ಸಿ ಸುಧಾಕರ್ ಅವರು ಹೆಚ್. ಹುಲಿಗೆಮ್ಮ ಅವರಿಗೆ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಪರಮಶಿವಮೂರ್ತಿ, ನಾಡೋಜ ಪುರಸ್ಕೃತರಾದ ಡಾ.ಬಸವಲಿಂಗ ಪಟ್ಟ ದೇವರು, ಪ್ರೊ. ತೇಜಸ್ವಿ ವಿ. ಕಟ್ಟಿಮನಿ, ಡಾ. ಎಸ್. ವಿ .ಶರ್ಮ, ಅನಂತಪುರದ ಆಂಧ್ರಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿ.ಕೋರಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ ಪೂಣಚ್ಚ, ಅಧ್ಯಯನಾಂಗದ ನಿರ್ದೇಶಕ ಡಾ.ಪಿ. ಮಹದೇವಯ್ಯ, ಪ್ರಸಾರಾಂಗದ ನಿರ್ದೇಶಕಿ ಡಾ. ಶೈಲಜ ಇಂ. ಹಿರೇಮಠ, ಭಾಷಾ ನಿಕಾಯದ ಡೀನರಾದ ಡಾ. ಎಫ್ .ಟಿ.ಹಳ್ಳಿಕೇರಿ, ಸಮಾಜ ವಿಜ್ಞಾನಗಳ ನಿಕಾಯದ ಡೀನರಾದ ಡಾ. ಚೆಲುವರಾಜ, ಲಲಿತ ಕಲೆಗಳ ನಿಕಾಯದ ಡೀನರಾದ ಡಾ. ಶಿವಾನಂದ ವಿರಕ್ತಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
——-
The post ಸಂಡೂರಿನ ಜೋಗದ ಹೆಚ್.ಹುಲಿಗೆಮ್ಮಗೆ ಪಿ.ಎಚ್.ಡಿ ಪದವಿ ಪ್ರದಾನ appeared first on Karnataka Kahale.
]]>The post ಹಂಪಿ ಕನ್ನಡ ವಿವಿ: ಡಾ. ತೇಜಸ್ವಿ ವಿ. ಕಟ್ಟಿಮನಿ ಸೇರಿ ಮೂವರು ಸಾಧಕರಿಗೆ ನಾಡೋಜ ಪದವಿ ಪ್ರಕಟ appeared first on Karnataka Kahale.
]]>
ಬಳ್ಳಾರಿ, ಜ.5: ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರತಿ ವರ್ಷ ಕನ್ನಡ ನಾಡು ನುಡಿಗೆ ಅನುಪಮಸೇವೆ ಸಲ್ಲಿಸಿದ ಸಾಧಕರಿಗೆ ನೀಡುವ ಪ್ರತಿಷ್ಠಿತ ನಾಡೋಜ ಪದವಿಗೆ ಆಂಧ್ರಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ. ತೇಜಸ್ವಿ ವಿ. ಕಟ್ಟಿಮನಿ, ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರು ಮತ್ತು ನ್ಯಾಕ್ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಎಸ್.ಸಿ. ಶರ್ಮಾ ಅವರು ಭಾಜನರಾಗಿದ್ದಾರೆ.
ಈ ವಿಷಯವನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಶುಕ್ರವಾರ ವಿದ್ಯಾರಣ್ಯದ ಮಂಟಪ ಸಭಾಂಗಣದ ಸಿಂಡಿಕೇಟ್ ಹಾಲ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ. ೧೦ರಂದು ನಡೆಯುವ ೩೨ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವ ವಿವಿಯ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಾಡೋಜ ಪದವಿ ಪ್ರಧಾನ ಮಾಡಲಿದ್ದಾರೆ ಎಂದು ಹೇಳಿದರು.
ಡಾ. ಬಸವಲಿಂಗ ಪಟ್ಟದೇವರು ಅವರು ಸಮಾಜಸೇವೆಗೆ, ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ. ತೇಜಸ್ವಿ ವಿ. ಕಟ್ಟಿಮನಿ, ಮತ್ತು ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ನ್ಯಾನೋ ಟೆಕ್ನಾಲಜಿ ವಿದ್ವಾಂಸರು ಹಾಗೂ ನ್ಯಾಕ್ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ.ಎಸ್.ಸಿ. ಶರ್ಮಾ ಅವರನ್ನು ಆಯ್ಕೆಮಾಡಲಾಗಿದೆ ಎಂದರು.
ವಿವಿಯ ೩೨ನೇ ನುಡಿಹಬ್ಬ ಕಾರ್ಯಕ್ರಮದಲ್ಲಿ ಅನಂತಪುರ ಆಂಧ್ರ ಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ ಕೋರಿ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರು ಮತ್ತು ವಿವಿಯ ಸಮಕುಲಾಧಿಪತಿಗಳೂ ಆಗಿರುವ ಡಾ.ಎಂ.ಸಿ. ಸುಧಾಕರ್ ಅವರು ಡಿ.ಲಿಟ್. ಹಾಗೂ ಪಿಎಚ್.ಡಿ ಪದವಿಗಳನ್ನು ಪ್ರದಾನ ಮಾಡಲಿದ್ದಾರೆ. ಈ ಬಾರಿಯ ಘಟಿಕೋತ್ಸವದಲ್ಲಿ ೨೬೪ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಪಿಎಚ್‌ಡಿ ಪದವಿ ಪಡೆಯಲಿದ್ದು, ಇದು ಕನ್ನಡ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ದಾಖಲೆ ಎಂದು ಸಂತಸ ವ್ಯಕ್ತಪಡಿಸಿದರು.
ಅತಿ ಕಡಿಮೆ ಸಂಖ್ಯೆಯಿರುವ ಕೇರಳದ ಪಣಿಯನ್ ಬುಡಕಟ್ಟು ಸಮುದಾಯದ ಕುರಿತು ಸಂಶೋಧನೆಯನ್ನು ಅದೇ ಸಮುದಾಯದ ವಿದ್ಯಾರ್ಥಿನಿ ಕುಮಾರಿ ದಿವ್ಯ ಅವರು ಸಮಾಜಶಾಸ್ತç ಅಧ್ಯಯನ ವಿಭಾಗದಲ್ಲಿ ಪಿಎಚ್.ಡಿ ಪಡೆಯಲಿದ್ದು, ಇದು ಕನ್ನಡ ವಿಶ್ವವಿದ್ಯಾಲಯಕ್ಕೂ ಮತ್ತು ಪಣಿಯನ್ ಸಮುದಾಯಕ್ಕೂ ಹೆಮ್ಮೆಯ ವಿಷಯ ಎಂದು ಕುಲಪತಿಗಳು ತಿಳಿಸಿದರು.
ಘಟಿಕೋತ್ಸವ ಮುನ್ನ ದಿನವಾದ ಜ. ೯ರಂದು ಮಂಟಪ ಸಭಾಂಗಣದಲ್ಲಿ ಪ್ರಸಾರಂಗದಿಂದ ಪ್ರಕಟಣೆಗೊಂಡ ೫೧ ಪುಸ್ತಕಗಳನ್ನು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಅವರು ಬಿಡುಗಡೆಗೊಳಿಸಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇತಿಹಾಸ ತಜ್ಞ ಪ್ರೋ. ಲಕ್ಷಣ ತೆಲಗಾವಿ ಅವರು ಮಾತನಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ವಿಶ್ವವಿವಿ ಕುಲಸಚಿವ ಡಾ.ವಿಜಯ್ ಪೂಣಚ್ಛ ತಂಬಂಡ, ಅಧ್ಯಯನಾಂಗದ ನಿರ್ದೇಶಕ ಡಾ.ಮಹದೇವಯ್ಯ, ವಿವಿಧ ನಿಕಾಯಗಳ ಡೀನರು, ಹಣಕಾಸು ಅಧಿಕಾರಿಗಳು, ಮಾಧ್ಯಮ ಮತ್ತು ಆಮಂತ್ರಣ ಪತ್ರಿಕೆ ವಿತರಣಾ ಸಮಿತಿಯ ಅಧ್ಯಕ್ಷರು, ಸಂಚಾಲಕರು ಹಾಗೂ ಸದಸ್ಯರು ಭಾಗವಹಿಸಿದ್ದರು.
*****
The post ಹಂಪಿ ಕನ್ನಡ ವಿವಿ: ಡಾ. ತೇಜಸ್ವಿ ವಿ. ಕಟ್ಟಿಮನಿ ಸೇರಿ ಮೂವರು ಸಾಧಕರಿಗೆ ನಾಡೋಜ ಪದವಿ ಪ್ರಕಟ appeared first on Karnataka Kahale.
]]>The post ಸತ್ಯದ ಸಾಕ್ಷತ್ಕಾರವೇ ಸಂಶೋಧನೆಯ ಮುಖ್ಯ ಗುರಿ -ಹಿರಿಯ ಸಂಶೋಧಕ ಡಾ.ಸಿ.ವೀರಣ್ಣ appeared first on Karnataka Kahale.
]]>
ಬಳ್ಳಾರಿ, ಡಿ.೨೧: ಸಂಶೋಧನೆಗಳು ನಿಖರ, ಖಚಿತ ಮತ್ತು ವೈಚಾರಿಕ ಚಿಂತನೆಯನ್ನು ಒಳಗೊಂಡಿರಬೇಕು. ಸಂಶೋಧನೆಗಳಲ್ಲಿ ಸತ್ಯದ ಸಾಕ್ಷತ್ಕಾರವಾಗಬೇಕು ಎಂದು ಹಿರಿಯ ಸಂಶೋಧಕರು ಮತ್ತು ನಿವೃತ್ತ ಪ್ರಾಧ್ಯಾಪಕರಾದ ಡಾ.ಸಿ.ವೀರಣ್ಣ ಅವರು ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗವು ಮಂಟಪ ಸಭಾಂಗಣದಲ್ಲಿ ಬುಧವಾರ ಯುಜಿಸಿ ಪಿಎಚ್.ಡಿ ಕೋರ್ಸ್‌ವರ್ಕ್ ೨ನೇ ಹಂತದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸಗಳ ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಸ್ಕೃತಿ ಅಧ್ಯಯನದ ಹೊಸ ಸಾಧ್ಯತೆಗಳು ಎಂಬ ವಿಷಯದ ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಸಂಶೋಧನೆ ಕೈಗೊಂಡ ಆರಂಭದಿಂದ ಅದರ ಅಂತಿಮ ಹಂತದವರೆಗೂ ನಾವು ಹಾಕಿದ ಶ್ರಮದ ಮೇಲೆ ಸಂಶೋಧನೆಯ ಸಫಲತೆ ನಿರ್ಧಾರವಾಗುತ್ತದೆ ಎಂದು ಹೇಳಿದರು.
ಸಮಾಜದ ಬೆಳವಣಿಗೆಗಾಗಿ ನಿರಂತರ ಹುಡುಕಾಟಗಳು ನಡೆಯಬೇಕು. ಚರಿತ್ರೆ ತಿಳಿಯದೇ ಚರಿತ್ರೆಯನ್ನು ಕಟ್ಟುವುದು ಅಸಾಧ್ಯ. ಪ್ರತಿಭಟನೆಯಿಂದಾಗಿಯೇ ಕನ್ನಡ ಸಾಹಿತ್ಯ ರೂಪಗೊಂಡಿದೆ. ಚರಿತ್ರೆ ಮತ್ತು ಕಾವ್ಯದ ಪರಸ್ಪರ ಸಹಕಾರದಿಂದಾಗಿ ಇತಿಹಾಸ ನಿರ್ಮಾಣವಾಗಿದೆ ಎಂದರು.

ಮಹಿಳಾ ಅಧ್ಯಯನದ ನೂತನ ಪ್ರವೃತ್ತಿಗಳು ವಿಷಯದ ಕುರಿತ ಉಪನ್ಯಾಸ ನೀಡಿದ ಖ್ಯಾತ ಪತ್ರಕರ್ತೆ ಮತ್ತು ಲೇಖಕಿ ಡಾ.ಆರ್ ಪೂರ್ಣಿಮಾ ಅವರು, ಎಲ್ಲ ಕಾಲದಲ್ಲೂ ಹೆಣ್ಣು ದೌರ್ಜನ್ಯಕ್ಕೆ ಒಳಗಾಗುತ್ತಾ ಬಂದಿದ್ದಾಳೆ. ಪ್ರಪಂಚ ಎಂಬುದು ಗಂಡು ಹೆಣ್ಣು ಇಬ್ಬರಿಂದಲೂ ನಿರ್ಮಾಣವಾಗಿದ್ದರೂ ಹೆಣ್ಣಿಗೆ ಸಿಗಬೇಕಾದ ಗೌರವದಲ್ಲಿ ತಾತ್ಸಾರ ಭಾವನೆಯಿದೆ ಎಂದು ವಿಷಾಧಿಸಿದರು.
ಕೃಷಿ ಸಂಬಂಧಿತ ಉತ್ಪಾದನೆಗಳನ್ನು ಮೊದಲು ಆರಂಭಿಸಿದವಳು ಮಹಿಳೆ. ಆದರೆ ಅವಳನ್ನೇ ಕೃಷಿಯ ಆರ್ಥಿಕ ವ್ಯವಹಾರಗಳಿಂದ ದೂರವಿರಿಸಲಾಗಿದೆ. ಈ ನಿಟ್ಟಿನಲ್ಲಿ ಹೆಣ್ಣಿನ ನೋವು ಮತ್ತು ದೌರ್ಜನ್ಯವನ್ನು ಪ್ರತ್ಯೇಕವಾಗಿ ಯೋಚಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಸಾಮ್ರಾಜ್ಯಗಳ ಕಾಲದಿಂದಲೂ ಇಂದಿನ ರಾಜಕೀಯ ವ್ಯವಸ್ಥೆಯವರೆಗೂ ಹೆಣ್ಣಿಗೆ ದೊರೆತ ಸ್ಥಾನದ ಕುರಿತು ಸಂಶೋಧನೆಯ ದೃಷ್ಟಿ ಹರಿಸಬೇಕಿದೆ. ಪ್ರತಿಯೊಂದು ಕ್ಷೇತ್ರದ ಸಂಶೋಧನೆಯಲ್ಲೂ ಮಹಿಳಾ ದೃಷ್ಟಿಕೋನ ಮತ್ತು ನೆಲೆಗಟ್ಟಿನಲ್ಲಿ ನೋಡುವ ಕಾರ್ಯವಾಗಬೇಕಿದೆ ಎಂದರು.
ಇವತ್ತಿನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಮಹಿಳೆಗೆ ಒದಗಿ ಬರುತ್ತಿರುವ ಸಮಸ್ಯೆಗಳ ಕುರಿತು ಹಾಗೂ ಅವಳ ಮೇಲಿನ ಶೋಷಣೆ ಬಗೆಗೂ ಯೋಚಿಸುವುದು ಅಗತ್ಯ ಮಾತ್ರವಲ್ಲ ಇಂದಿನ ಹೊಸ ತಂತ್ರಜ್ಞಾನ ಹೆಣ್ಣು ಗಂಡಿನ ನಡುವೆ ಡಿಜಿಟಲ್ ಡಿವೈಡ್ ತಂದಿರುವುದು ಅಪಾಯಕರ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಮಾತನಾಡಿ ಅಂತರ್ ಶಿಸ್ತೀಯ ಅಧ್ಯಯನವನ್ನು ಕನ್ನಡ ವಿಶ್ವವಿದ್ಯಾಲಯ ಮೈಗೂಡಿಸಿಕೊಂಡಿದ್ದು, ಸಂಶೋಧನಾರ್ಥಿಗಳು ಸಾಂಪ್ರದಾಯಿಕ ಹಾದಿಗಳಿಗಿಂತ ವಿಭಿನ್ನವಾಗಿ ಚಿಂತಿಸಬೇಕಿದೆ ಎಂದು ತಿಳಿಸಿದರು.
ಇತ್ತೀಚೆಗೆ ಆಳವಾದ ಅಧ್ಯಯನವಿಲ್ಲದೆ ವಿದ್ಯಾರ್ಥಿಗಳಿಗೆ ಪಾಠ ಭೋಧಿಸುವ ಪ್ರವೃತಿ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳ ಯೋಚನೆ ಮೀರಿದ ಪೂರ್ವ ತಯಾರಿಯನ್ನು ಅಧ್ಯಾಪಕರು ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಸನ್ಮಾನ: ಇದೇ ಸಂದರ್ಭದಲ್ಲಿ ಡಾ.ಸಿ.ವೀರಣ್ಣ ಮತ್ತು ಡಾ. ಪೂರ್ಣಿಮಾ ದಂಪತಿಗಳನ್ನು ಕುಲಪತಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿವಿ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಯನಾಂಗದ ನಿರ್ದೇಶಕ ಡಾ.ಪಿ.ಮಹದೇವಯ್ಯ ಸ್ವಾಗತಿಸಿದರು. ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಶಿವಾನಂದ ವಿರಕ್ತಮಠ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಪತ್ರಿಕೋದ್ಯಮ ವಿಭಾಗದ ಅಧ್ಯಾಪಕಿ ಪದ್ಮಾವತಿ ಕೆ. ನಿರೂಪಿಸಿದರು.
ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ-ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
—–
The post ಸತ್ಯದ ಸಾಕ್ಷತ್ಕಾರವೇ ಸಂಶೋಧನೆಯ ಮುಖ್ಯ ಗುರಿ -ಹಿರಿಯ ಸಂಶೋಧಕ ಡಾ.ಸಿ.ವೀರಣ್ಣ appeared first on Karnataka Kahale.
]]>The post ನಾಡೋಜ ಬುರ್ರಕಥಾ ದರೋಜಿ ಈರಮ್ಮರ ದತ್ತಿನಿಧಿ ಉದ್ಘಾಟನೆ ಕಾರ್ಯಕ್ರಮದ ಪೂರ್ವಭಾವಿ ಸಭೆ appeared first on Karnataka Kahale.
]]>
ಹಂಪಿ, ಆ.4: ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಶುಕ್ರವಾರ ನಾಡೋಜ ಬುರ್ರಕಥಾ ದರೋಜಿ ಈರಮ್ಮರ ದತ್ತಿನಿಧಿ ಉದ್ಘಾಟನೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ವಿವಿ ಕುಲಪತಿ ಪ್ರೊ ಪರಮಶಿವಮೂರ್ತಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ನಾಡೋಜ ದರೋಜಿ ಈರಮ್ಮ ಫೌಂಡೇಶನ್ ವತಿಯಿಂದ ಕುಲಪತಿಗಳನ್ನು ಡಾ. ಅಶ್ವ ರಾಮು ಅವರು ಸನ್ಮಾನಿಸಿ ಗೌರವಿಸಿದರು.

ಸಭೆಯಲ್ಲಿ ವಿವಿ ಪ್ರಾಧ್ಯಾಪಕರುಗಳಾದ ಪ್ರೊ. ಕೆ ಎಂ ಮೇತ್ರಿ, ಡಾ. ಚೆಲುವರಾಜು, ಡಾ ಎ ಎಸ್ ಪ್ರಭಾಕರ್, ಜಾನಪದ ಕಲಾವಿದ ಅಶ್ವ ಸುರೇಶ್ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
The post ನಾಡೋಜ ಬುರ್ರಕಥಾ ದರೋಜಿ ಈರಮ್ಮರ ದತ್ತಿನಿಧಿ ಉದ್ಘಾಟನೆ ಕಾರ್ಯಕ್ರಮದ ಪೂರ್ವಭಾವಿ ಸಭೆ appeared first on Karnataka Kahale.
]]>The post ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಈ ಬಾರಿ ಪರಿಶಿಷ್ಟರು ನೇಮಕವಾಗುವರೇ!? appeared first on Karnataka Kahale.
]]>
ವಿಜಯನಗರ(ಹೊಸಪೇಟೆ), ಮಾ. 23: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ. ಸ.ಚಿ.ರಮೇಶ ಅವರ ಅಧಿಕಾರಾವಧಿ ಫೆ. 21ರಂದು ಕೊನೆಗೊಂಡಿದೆ. ವಿಶ್ವವಿದ್ಯಾಲಯದ ಅಧಿನಿಯಮ ಮತ್ತು ಪರಿನಿಯಮದ ಪ್ರಕಾರ ಈಗಾಗಲೇ ಕುಲಪತಿಗಳ ನೇಮಕಾತಿ ಸಂಬಂಧಿಸಿದಂತೆ ಡಾ. ಎಸ್.ಕೆ. ಸೈದಾಪುರ ಅವರ ಅಧ್ಯಕ್ಷತೆಯಲ್ಲಿ ಡಾ. ಸಿದ್ದು ಅಲಗೂರು ಮತ್ತು ಡಾ. ಎನ್.ಸಿ. ಗೌತಮ್ ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿಯನ್ನು ಮಾ. 20ರಂದು ರಚಿಸಲಾಗಿದೆ.
ಕನ್ನಡ ವಿಶ್ವವಿದ್ಯಾಲಯದಲ್ಲಿ ಈವರೆಗೆ ಇಬ್ಬರು ಒಕ್ಕಲಿಗ (ಗೌಡ) ಸಮುದಾಯದವರು, ಇಬ್ಬರು ಲಿಂಗಾಯತ ಸಮುದಾಯದವರು, ಇಬ್ಬರು ಕುರುಬ ಸಮುದಾಯದವರು ಮತ್ತು ಇಬ್ಬರು ಓಬಿಸಿ ಸಮುದಾಯಕ್ಕೆ ಸೇರಿದವರನ್ನು ಕುಲಪತಿಗಳಾಗಿ ನೇಮಿಸಲಾಗಿದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಸೇರಿದವರನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ನೇಮಕಾತಿ ಮಾಡಿರುವುದಿಲ್ಲ. ಈ ಬಾರಿ ಪರಿಶಿಷ್ಟರನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ನೇಮಕಾತಿ ಮಾಡಬೇಕಿದೆ. ಪರಿಶಿಷ್ಟರನ್ನು ನೇಮಕ ಮಾಡಿದರೆ ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ನೀಡಿದಂತಾಗುತ್ತದೆ. ಇದಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

*****
The post ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಈ ಬಾರಿ ಪರಿಶಿಷ್ಟರು ನೇಮಕವಾಗುವರೇ!? appeared first on Karnataka Kahale.
]]>The post ದೇಶದ ಅಭಿವೃದ್ದಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಪ್ರಗತಿಯ ಮೇಲೆ ನಿಂತಿದೆ -ಡಾ.ಅಂಬಳಿಕೆ ಹಿರಿಯಣ್ಣ appeared first on Karnataka Kahale.
]]>
ಬಳ್ಳಾರಿ, ಅ.13: ದೇಶದ ಅಭಿವೃದ್ದಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಪ್ರಗತಿಯ ಮೇಲೆ ನಿಂತಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಅವರು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ದೂರಶಿಕ್ಷಣ ನಿರ್ದೇಶನಾಲಯ ವತಿಯಿಂದ ಹಮ್ಮಿಕೊಂಡಿರುವ ಪ್ರಸಕ್ತ ಸಾಲಿನ ಸಂಪರ್ಕ ತರಗತಿಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸಮಾಜಮುಖಿಯಾಗಿ ನಡೆದಾಗ ಮಾತ್ರ ಸೇವಾ ವಲಯ ರೂಪಿತವಾಗುವುದು. ಮಾನವೀಯ ನೆಲೆಯ ಜ್ಞಾನ ಸಮಾಜ ನಿರ್ಮಾಣದಲ್ಲಿ ವಿಶ್ವವಿದ್ಯಾಲಗಳ ಜವಾಬ್ದಾರಿ ಮಹತ್ತರವಾದುದು ಎಂದು
ಅಭಿಪ್ರಾಯಪಟ್ಟರು.
ಪ್ರಸ್ತುತ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕವಾದ ಬುದ್ದಿ, ಆಧುನಿಕ ಸರಕುಗಳ ಸಂಪಾದನೆಯೆ ಶಿಕ್ಷಣ ಎಂಬತಾಗಿದೆ. ನಿಜವಾದ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಬುದ್ಧಿ-ಭಾವ ಗರಿಗೆದರುವಂತೆ ಮಾಡುವ ಮೂಲಕ ಸಮನ್ವಯ, ಸಾಮರಸ್ಯ ದೃಷ್ಠಿಕೋನವನ್ನು ಬೆಳಸಬೇಕು. ಜೊತೆಗೆ ಪಡೆಯುವ ಶಿಕ್ಷಣ ಕಾಯಕದ ಮಹತ್ವವನ್ನು ಹೆಚ್ಚಿಸಬೇಕು. ಸಂಪರ್ಕ ಶಿಬಿರದಲ್ಲಿ ಹತ್ತು ತಿಂಗಳಲ್ಲಿ ಮಾಡುವ ಪಾಠವನ್ನು ಹತ್ತು ದಿನಗಳಲ್ಲಿ ಕಲಿಸುವುದು ಅಧ್ಯಾಪಕರಿಗೆ ಸವಾಲಿನ ಕೆಲಸˌಈ ಸಂಪರ್ಕ ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸಂವಾದದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಅನುಮಾನಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಮುಖ್ಯ ಅತಿಥಿ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ.ಎಂ.ವಿ. ಉಷಾದೇವಿ ಅವರು ಮಾತನಾಡಿ, ಶಿಕ್ಷಣ ಒಂದು ಅಸ್ತ್ರ, ಶಕ್ತಿ ಮತ್ತು ನಮ್ಮ ಹಕ್ಕು. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ. ಈ ಹಿಂದೆ ಮಹಿಳೆಯರಿಗೆ ಶಿಕ್ಷಣ ಪಡೆಯುವುದು ಕಷ್ಟದಾಯಕವಾಗಿತ್ತು. ಆದರೆ ಈಗ ದೂರ ಶಿಕ್ಷಣದ ಮೂಲಕ ಲಕ್ಷಾಂತರ ಮಹಿಳೆಯರು ಜ್ಞಾನ ಪಡೆದುಕೊಳ್ಳುವ ಮೂಲಕ ವೃತ್ತಿ ಜೀವನವನ್ನು ರೂಪಿಸಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಅವರು ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣ ನಿರ್ದೇಶನಾಲಯದಿಂದ ಅನೇಕ ವಿಧ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಸಂಪರ್ಕ ತರಗತಿಗಳಿಗೆ ಆಗಮಿಸಿರುವಂತಹ ವಿದ್ಯಾರ್ಥಿಗಳು ಹತ್ತು ದಿನದಲ್ಲಿ ಅಮೂಲ್ಯ ಜ್ಞಾನ ಪಡೆದುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ.ಎನ್ ಚಿನ್ನಸ್ವಾಮಿ ಸೋಸಲೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ಎ ಸುಬ್ಬಣ್ಣ ರೈ, ಸಂಪರ್ಕ ತರಗತಿಗಳ ಸಂಚಾಲಕರಾದ ಡಾ.ಎಚ್ ಡಿ ಪ್ರಶಾಂತ್, ಡಾ.ಮಲ್ಲಿಕಾರ್ಜುನಗೌಡˌ ಡಾ.ಬಿ.ಟಿ. ಮುದ್ದೇಶ್ ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ಅಧ್ಯಾಪಕರು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಶೋಧನಾರ್ಥಿ ಮಣಿಕಂಠ ಹಂಗಳ ನಿರೂಪಿಸಿದರು. ಮಕ್ಬುಲ್ ಬೇಗಂ ವಂದಿಸಿದರು
*****
The post ದೇಶದ ಅಭಿವೃದ್ದಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಪ್ರಗತಿಯ ಮೇಲೆ ನಿಂತಿದೆ -ಡಾ.ಅಂಬಳಿಕೆ ಹಿರಿಯಣ್ಣ appeared first on Karnataka Kahale.
]]>