The post ಹಂಪಿ ಕನ್ನಡ ವಿವಿ ಕುಲಪತಿಗಳ ಆಪ್ತಕಾರ್ಯದರ್ಶಿ ಎ.ಎಂ. ಕೃಪಾಶಂಕರ ಅವರಿಗೆ ಬಸವಸೇವಾ ಪುರಸ್ಕಾರ ಪ್ರದಾನ appeared first on Karnataka Kahale.
]]>
ಹಂಪಿ ಕನ್ನಡವಿವಿ, ಡಿ.26: ಸಂಡೂರು ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠ ಹಾಗೂ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳ ಸಹಯೋಗದಲ್ಲಿ ಆಯೋಜಿಸಲಾದ ಬಸವ ಬೆಳಗು ಹಾಗೂ ಬಸವ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳ ಆಪ್ತಕಾರ್ಯದರ್ಶಿ ಎ.ಎಂ. ಕೃಪಾಶಂಕರ ಅವರಿಗೆ ೨೦೨೫ರ ಬಸವಸೇವಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.
ಪುಸ್ತಕ ವಿನ್ಯಾಸ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಕನ್ನಡ ಸಾಹಿತ್ಯದ ಪ್ರಕಟಣಾ ಗುಣಮಟ್ಟ ಹೆಚ್ಚಿಸುವಲ್ಲಿ ಅವರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಮಠದ ವಕ್ತಾರರು ತಿಳಿಸಿದರು. ರಾಣೀಬೆನ್ನೂರು ತಾಲ್ಲೂಕಿನ ಶಾಸಕರಾದ ಪ್ರಕಾಶ ಕೋಳಿವಾಡ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಬಸವಣ್ಣನವರ ಮಾನವೀಯತೆ, ಸೇವಾ ಮನೋಭಾವ ಹಾಗೂ ಸಮಾನತೆಯ ತತ್ವಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎ.ಎಂ. ಕೃಪಾಶಂಕರ ಅವರು, ಈ ಗೌರವವನ್ನು ಪುಸ್ತಕ ವಿನ್ಯಾಸ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲರಿಗೂ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಪ್ರಭುದೇವರ ವಿರಕ್ತಮಠ ಸೇವಾಸಮಿತಿ, ಸಂಡೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಹಾವೇರಿ ಇದರ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭ ಬಸವಣ್ಣನವರ ಮಾನವೀಯತೆ, ಸೇವಾ ತತ್ವ ಹಾಗೂ ಸಾಮಾಜಿಕ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವಲ್ಲಿ ಯಶಸ್ವಿಯಾಯಿತು.
The post ಹಂಪಿ ಕನ್ನಡ ವಿವಿ ಕುಲಪತಿಗಳ ಆಪ್ತಕಾರ್ಯದರ್ಶಿ ಎ.ಎಂ. ಕೃಪಾಶಂಕರ ಅವರಿಗೆ ಬಸವಸೇವಾ ಪುರಸ್ಕಾರ ಪ್ರದಾನ appeared first on Karnataka Kahale.
]]>The post ಕಥೆ:ನಾನು, ಕತೆಗಾರರು: ಗಾಯತ್ರಿ ಬಿ, ತೋರಣಗಲ್ಲು appeared first on Karnataka Kahale.
]]>
ನಿನ್ನೆಸರಲ್ಲಿ ಬದುಕಿದೆನು.ನಿನ್ನುಸಿರಲ್ಲಿ ಬೆರೆತಿಹೆನು. ತನುಮನವ ಆವರಿಸಿ ಅರ್ಧನಾರೀಶ್ವರನಂತೆ ಕಾಣುವ ನಿನಗೆ ನೀನೇ ಯಾರೆಂದು ತಿಳಿಯದು ? ಎಂತಹ ವಿಪರ್ಯಾಸ !
ಅಂದು, ಯಾಕೋ ಸ್ವಲ್ಪ ಮನಸ್ಸಿಗೆ ಕಸಿವಿಸಿ, ಬೇಸರ. ಎದ್ದು ಓಡಿ ಹೋಗಿ ಕನ್ನಡಿಯ ಮುಂದೆ ನಿಂತರೆ ನನ್ನನ್ನು ನೋಡಿ ನಗುವ ಭಾವ. ಯಾರೋ ಹಿಂದೆ ಬಂದು ತಬ್ಬಿದ ಮನೋಭಾವ ‘ ಗುಲಾಬಿ ಹೂವಿಗೆ ಮುಳ್ಳು ತಾಕಿದ ನೋವಿ’ ನಂತೆ ಭಾಸವಾಯಿತು. ಹಿಂತಿರುಗಿ ನೋಡಿದರೆ ಮುಖವೆಲ್ಲ ಸುಟ್ಟು ಹೋಗಿದೆ. ಕರ್ಕಶ ಧ್ವನಿ, ನೆಲಕ್ಕೆ ಊರಲಾಗದಷ್ಟು ಕಾಲು ಬೇನೆ, ಕೈಯಲ್ಲಿದ್ದ ಬೆರಳುಗಳು ಅಂಗುಲಿ ಮಾಲನಿಗೆ ಹಾರವಾದಂತೆಯೇ ಭಾಸವಾಯಿತು.
ಹಣತೆಯ ಬೆಳಕು ಕೇಳಿತು? ನೀನು ಯಾರೆಂದು? ನಗುತ್ತಾ ಹೇಳಿತು. ನಿನ್ನಲ್ಲಿಯೇ ನಾನಿದ್ದೇನೆ. ಎರಡು ಮನಸುಗಳ ಕಲ್ಪನೆ, ಭಾವನೆಗಳ ಪ್ರತಿರೂಪ. ನೀನೆಷ್ಟೇ ದೂರ ಹೋದರು ಹಿಂಬಾಲಿಸುವ ಭೂತದಂತೆ ಕಣ್ಣಿಗೆ ಕಾಣದ ಮಾಯೆ. ಒಪ್ಪಿಕೋ , ನನ್ನನ್ನು ನಿನ್ನ ಅನುಜನೆಂತಲೋ ಅಥವಾ ಭಾತೃ ವೆಂತಲೋ ? ” ನಾಡು ಹೋಗೆಂದಿದೆ, ಕಾಡು ಬಾ ಎಂದಿದೆ,” ಆದರೂ ತವರಿನ ಮೋಹದ ಬಲೆಗೆ ಸಿಲುಕಿದಂತೆ ನಿನ್ನಲ್ಲಿ ನಾನು ಬೆರೆತಿರುವೆನು. ಕಣ್ಮುಚ್ಚಿ ಕರೆದರೂ ಬರುವೆ ಆದರೆ ಕಾಣದ ಕೈಗಳಲಿ ಬಂಧಿಯಾಗಿಹೆನು. ಮೆಲ್ಲನೆ ಹೆಜ್ಜೆ ಹಾಕುತ ಬಿರು ಬಿಸಿಲಿನಲಿ ಸೋತಿದೆ ಮೊಗ.. ತಿರುಗಿ ನೋಡಿದರೆ ಒಮ್ಮೊಮ್ಮೆ ಭಯದ ಭೀತಿ, ಯಾರೋ ಹಿಂಬಾಲಿಸುವ ರೀತಿ. ಕೂಗಿದರೆ ಪ್ರತಿಧ್ವನಿಯೇ ಹೊರತು ಬೇರೊಂದು ಧ್ವನಿ ಕೇಳಿಸದು. ಸಮಯವಾದಂತೆ ಟಿಕ್ ಟಿಕ್ ಶಬ್ದದ ಜೊತೆಗೆ ಮೆಲ್ಲ ಮೆಲ್ಲನೆ ಹೆಜ್ಜೆ ಹಾಕುತ ಸಾಗಿದೆ ಭ್ರಮರದ ಮಾಯೆ.
ಕಾಲ ಬದಲಾದಂತೆ ಬದಲಾವಣೆ ಸಹಜ. ದಿನವೆಲ್ಲ ಸಂಗಾತಿ , ಸೂರ್ಯಾಸ್ತದ ವೇಳೆಗೆ ಕುಡುಕನಂತಹ ಪತಿ. ಸೂರ್ಯೋದಯದಲಿ ಬೆಳ್ಳಿಯ ರಥದಲ್ಲಿ ಕುಳಿತು ಹಿಂಬಾಲಿಸಿ ತಾನು ಯಾರೆಂದು ಹುಡುಕುವಷ್ಟರಲ್ಲಿ ಸುಕ್ಕು ಗಟ್ಟಿದ ತನುವಿನಲಿ ನಿರಾಸೆ ಮೂಡಿದೆ.ಜೀವನವೇ ಮುಗಿದು ಸ್ಮಶಾನದ ಹಾದಿ ಹಿಡಿದಿದೆ. ಬದುಕಿನ ಕೊನೆಯ ಪಯಣದ ಮೆರವಣಿಗೆಯಲಿ ಒಬ್ಬ ನಾಲ್ಕಾದ ಭಾವ. ತಿರುಗಿ ನೋಡಿದರೆ ಕತ್ತಲೆಯ ಬದುಕಿನಲಿ ನಿದ್ರಾ ದೇವತೆಯ ಸೆರಗಿನಲಿ ಮಲಗಿಹೆನು … ನಾನು ಹಾಗೂ ನಾನೆಂಬ ಜೀವ.

-ಗಾಯತ್ರಿ ಬಿ
ಶಿಕ್ಷಕಿ
ಜಿಂದಾಲ್ ಆದರ್ಶ ವಿದ್ಯಾಲಯ, ತೋರಣಗಲ್ಲು
The post ಕಥೆ:ನಾನು, ಕತೆಗಾರರು: ಗಾಯತ್ರಿ ಬಿ, ತೋರಣಗಲ್ಲು appeared first on Karnataka Kahale.
]]>The post ಸಂಡೂರಿನಲ್ಲಿ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆ: ಬಸವರಾಜ ರಾಯರಡ್ಡಿ appeared first on Karnataka Kahale.
]]>ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ವಿಧಾನಸಭೆಯಲ್ಲಿ ಚರ್ಚೆ ನಡೆಯುವ ವೇಳೆ ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ಮತ್ತು ಕೈಗಾರಿಕೆಗಳ ಬೇಡಿಕೆಯನುಸಾರವಾಗಿ ಉತ್ತಮ ತರಬೇತಿ ಹೊಂದಿರುವ ಮಾನವ ಸಂಪನ್ಮೂಲ ಒದಗಿಸಲು ಆದ್ಯತೆ ದೊರಕಿಸುವ ನಿಟ್ಟಿನಲ್ಲಿ ಹಾಗೂ ಈ ಭಾಗದ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗುವಂತೆ ಮಾಡಲು ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪಿಸುವ ಉದ್ದೇಶ ಹೊಂದಿದ್ದು, ಬರುವ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಇದನ್ನು ಘೋಷಿಸುವ ನಿರೀಕ್ಷೆ ಇದೆ.
ಉತ್ತರ ಕರ್ನಾಟಕದಲ್ಲಿ ಒಟ್ಟು 14 ಜಿಲ್ಲೆಗಳಿದ್ದು, ಈ ಪೈಕಿ ತಲಾ 07 ಜಿಲ್ಲೆಗಳು ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ವ್ಯಾಪ್ತಿಯಲ್ಲಿವೆ. ದಾವಣಗೆರೆಯಿಂದ ಚಾಮರಾಜನಗರದವರೆಗೆ ಮೈಸೂರು ಮಹಾರಾಜರು ಆಡಳಿತ ಕೊಟ್ಟಿದ್ದು, ಶಿಕ್ಷಣ, ಆರೋಗ್ಯ ಮತ್ತು ನೀರಾವರಿಗೆ ಅವರು ಕೊಟ್ಟ ಆದ್ಯತೆಯಿಂದಾಗಿ ಈ ಭಾಗಗಳು ಶಿಕ್ಷಣ, ಆರೋಗ್ಯ ಮತ್ತು ನೀರಾವರಿ ಕ್ಷೇತ್ರದಲ್ಲಿ ಮುಂದಿವೆ. ಆದರೆ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಪ್ರದೇಶಗಳು ಮದ್ರಾಸ್ ಪ್ರೆಸಿಡೆನ್ಸಿ ಹಾಗೂ ನಿಜಾಮ್ ಆಡಳಿತವಿತ್ತು.
ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ನಿಜಾಮರು ಸುಮಾರು 250 ವರ್ಷ ಆಡಳಿತ ನಡೆಸಿದರು, ಇವರು ಶಿಕ್ಷಣ ಮತ್ತು ನೀರಾವರಿಗೆ ಯಾವುದೇ ಆದ್ಯತೆ ಕೊಡಲಿಲ್ಲ. ಈ ಭಾಗದಲ್ಲಿ ಶಾಲೆ, ಕಾಲೇಜುಗಳನ್ನು ಸ್ಥಾಪಿಸದ ಕಾರಣದಿಂದಾಗಿ ಈ ವ್ಯಾಪ್ತಿಯ ಜಿಲ್ಲೆಗಳು ಶಿಕ್ಷಣದಲ್ಲಿ ತೀವ್ರ ಹಿಂದುಳಿಯಲು ಕಾರಣವಾಯಿತು.
ರಾಜಸ್ಥಾನ ಬಿಟ್ಟರೆ, ಉತ್ತರ ಕರ್ನಾಟಕದ 14 ಜಿಲ್ಲೆಗಳು ಅತ್ಯಂತ ಒಣ ಪ್ರದೇಶ ಹೊಂದಿವೆ. ಇಲ್ಲಿ ಮಳೆ ಹೆಚ್ಚು ಆಗಲ್ಲ, ಹಾಗೂ ಅಂತರ್ಜಲವೂ ಕಡಿಮೆ ಇದೆ. ಸಾಕ್ಷರತೆಯಲ್ಲಿ ರಾಜ್ಯದ ಸರಾಸರಿ 75.36 ಇದ್ದರೆ, ಉತ್ತರ ಕರ್ನಾಟಕ ಜಿಲ್ಲೆಗಳ ಪ್ರಮಾಣ 65 ಕ್ಕಿಂತ ಕಡಿಮೆ ಇದೆ. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.
ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ನಿಂದ ಆರ್ಥಿಕ ನೆರವು ಪಡೆದು 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಿದ್ದು, ಈ ಭಾಗದ ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ಕಾರ್ಯವಾಗಿದೆ. ಇದರ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 400 ಹೊಸ ಕೆ.ಪಿ.ಎಸ್. ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಮಕ್ಕಳಿಗೆ ಇಂಗ್ಲೀಷ್ ಭಾಷೆಯ ಜ್ಞಾನ ದೊರಕುವಂತಾಗಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 35 ಎಲ್‌ಕೆಜಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಹೀಗೆ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ, ಈ ಭಾಗದಲ್ಲಿಯೂ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸುವ ಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಐಐಟಿ ಯಲ್ಲಿ ರಾಜ್ಯದವರಿಗೆ ಶೇ. 50 ಮೀಸಲು ಕಲ್ಪಿಸಲು ಸಹಕಾರ ನೀಡುವಂತೆ ಬಸವರಾಜ ರಾಯರಡ್ಡಿ ಅವರು ಪ್ರತಿಪಕ್ಷದವರಿಗೆ ಮನವಿ ಮಾಡಿದರು. ಧಾರವಾಡದಲ್ಲಿ ಐಐಟಿ ಅನ್ನು ಪ್ರಾರಂಭಿಸಲು ನಮ್ಮ ರಾಜ್ಯದಿಂದ ಕೇಂದ್ರಕ್ಕೆ 2 ಸಾವಿರ ಕೋಟಿ ರೂಪಾಯಿಗಳೂ ಹೆಚ್ಚಿನ ಮೌಲ್ಯದ ಭೂಮಿಯನ್ನು ಉಚಿತವಾಗಿ ಕೊಟ್ಟಿದ್ದೇವೆ. ಬೇರೆ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಾಗಿ ಇಲ್ಲಿ ಪ್ರವೇಶ ಪಡೆಯುತ್ತಾರೆ. ಹೀಗಾಗಿ ಐಐಟಿ ಯಿಂದ ಕರ್ನಾಟಕಕ್ಕೆ ಯಾವುದೇ ಉಪಯೋಗ ಆಗುತ್ತಿಲ್ಲ. ರಾಜ್ಯದ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಐಐಟಿ ಯಲ್ಲಿ ಶೇ. 50 ರಷ್ಟು ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲು ನೀಡುವಂತೆ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಒಪ್ಪಿಗೆ ದೊರೆಯಲಿಲ್ಲ. ಹೀಗಾಗಿ ಮುಖ್ಯಮಂತ್ರಿಗಳಿಂದ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲು ಸಿದ್ಧರಿದ್ದು, ಪ್ರತಿಪಕ್ಷದವರು ಕೇಂದ್ರ ಸರ್ಕಾರದ ಮನವೊಲಿಸಿ, ಒಪ್ಪಿಗೆ ದೊರಕಿಸಿದಲ್ಲಿ, ಕರ್ನಾಟಕದ ಹೆಚ್ಚಿನ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಬಸವರಾಜ ರಾಯರಡ್ಡಿ ಹೇಳಿದರು.
ಕಲ್ಯಾಣ ಕರ್ನಾಟಕದ ಹೊಸ ತಾಲ್ಲೂಕುಗಳಲ್ಲಿ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ 970 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಈಗಾಗಲೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ನೂತನವಾಗಿ ರಚಿಸಲಾಗಿರುವ ತಾಲ್ಲೂಕುಗಳಿಗೆ 100 ಹಾಸಿಗೆ ಆಸ್ಪತ್ರೆಯನ್ನು ಮಂಜೂರು ಮಾಡಲಾಗಿದೆ. ಅಲ್ಲದೆ ಬಾಣಂತಿಯರಿಗೆ ಉತ್ತಮ ಪೌಷ್ಠಿಕ ಆಹಾರ ನೀಡುವ ವಿಶೇಷ ಯೋಜನೆಯನ್ನು ಜಾರಿಗೊಳಿಸಿದ್ದು, ಇದರಿಂದ ಉತ್ತರ ಕರ್ನಾಟಕದಲ್ಲಿ ಶಿಶು ಮರಣ ಹಾಗೂ ತಾಯಿ ಮರಣ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಈ ಕ್ರಮ ಶ್ಲಾಘನೀಯವಾಗಿದೆ ಎಂದು ಬಸವರಾಜ ರಾಯರಡ್ಡಿ ಹೇಳಿದರು.
——
The post ಸಂಡೂರಿನಲ್ಲಿ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆ: ಬಸವರಾಜ ರಾಯರಡ್ಡಿ appeared first on Karnataka Kahale.
]]>The post ಮನೆಯಂಗಳದಲ್ಲಿ ರಂಗ ಗೌರವ: ಹಿರಿಯ ಬಯಲಾಟ ಕಲಾವಿದ ಬಂಡ್ರಿ ಲಿಂಗಪ್ಪಗೆ ಸನ್ಮಾನ appeared first on Karnataka Kahale.
]]>ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಗ್ರಾಮದ ಕಲಾವಿದರ ಮನೆಯಂಗಳದಲ್ಲಿ ಸಂಸ್ಕೃತಿ ಪ್ರಕಾಶನ ಮತ್ತು ಕರ್ನಾಟಕ ಕಹಳೆ ಡಾಟ್ ಕಾಮ್ ಸಹಯೋಗದಲ್ಲಿ ಶನಿವಾರ ಸಂಜೆ ಜರುಗಿದ ಸರಳ ಸಮಾರಂಭದಲ್ಲಿ ವೇದಿಕೆ ಅಧ್ಯಕ್ಷ ಸಿ.ಮಂಜುನಾಥ್ ಶಾಲು ಹೊದೆಸಿ ಸನ್ಮಾನ ಪತ್ರ ನೀಡಿ ಗೌರವಿಸಿದರು.
ಮುಖ್ಯ ಅತಿಥಿ ಗಾಂಧಿ ವಿಚಾರ ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಡಾ. ನಾಗರಾಜ ಬಸರಕೋಡು ಮಾತನಾಡಿ ಡಾ. ಭರಣಿ ವೇದಿಕೆ ಕಳೆದ 18 ವರ್ಷಗಳಿಂದ ರಂಗ ಕಲಾವಿದರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಾಧಕರನ್ನು ಗೌರವಿಸುವುದು ಮಾದರಿ ಕಾರ್ಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಬಳ್ಳಾರಿ ಜಿಲ್ಲೆಯ ಗಂಡು ಮೆಟ್ಟಿನ ಕಲೆಯಾದ ಬಯಲಾಟವನ್ನು ಬದಲಾದ ಕಾಲಕ್ಕನುಗುಣವಾಗಿ ಪರಿಷ್ಕೃತ ಗೊಳಿಸುವ ಅಗತ್ಯವಿದ್ದು, ಹಿರಿಯ ಬಯಲಾಟ ಕಲಾವಿದರಾದ ಬಂಡ್ರಿ ಲಿಂಗಪ್ಪ ಅವರು ಇಂತಹ ಪ್ರಯೋಗಗಳಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಅಶ್ವರಾಮು ಮಾತನಾಡಿ, ಎಂಬತ್ತರ ಹರೆಯದ ಹಿರಿಯ ಚೇತನ ಬಂಡ್ರಿ ಲಿಂಗಪ್ಪ ಅವರು ಆರು ದಶಕಗಳಿಂದ ಹಲವು ಬಯಲಾಟಗಳಲ್ಲಿ ಅಭಿನಯಿಸಿ ಸೈ ಎನಿಸಿ ಕೊಂಡಿದ್ದಾರೆ. ವಿಶೇಷವಾಗಿ ರತಿ ಕಲ್ಯಾಣದ ಮನ್ಮಥ ಪಾತ್ರವನ್ನು ಈ ಇಳಿ ವಯಸ್ಸಿನಲ್ಲೂ ಮನೋಜ್ಞವಾಗಿ ಅಭಿನಯಿಸುತ್ತಾರೆ ಎಂದು ಕೊಂಡಾಡಿದರು.
ಡಾ. ಭರಣಿ ವೇದಿಕೆ ಕಾರ್ಯ ತಮಗೆ ಸ್ಪೂರ್ತಿ ನೀಡಿದ್ದು ನಾಡೋಜ ದರೋಜಿ ಈರಮ್ಮ ಫೌಂಡೇಷನ್ ಪ್ರತಿ ವರ್ಷ ವಿಶ್ವ ಜಾನಪದ ದಿನದಂದು ಜಾನಪದ ಕಲಾವಿದರ ಮನೆಗಳಿಗೆ ತೆರಳಿ ಸತ್ಕರಿಸಲಾಗುವುದು ಎಂದು ಪ್ರಕಟಿಸಿದರು.
ವೇದಿಕೆ ಅಧ್ಯಕ್ಷ ಸಿ.ಮಂಜುನಾಥ್ ಮಾತನಾಡಿ, ಬಯಲಾಟ ಕ್ಷೇತ್ರಕ್ಕೆ ಎಲೆಮರೆ ಕಾಯಿಯಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬಂಡ್ರಿ ಲಿಂಗಪ್ಪ ಅವರನ್ನು ಗೌರವಿಸುತ್ತಿರುವುದು ಹೆಮ್ಮೆ, ಸಂತೃಪ್ತಿ ತಂದಿದೆ. ಯಾವುದೇ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಆಸೆ ಇಲ್ಲದೇ ಜಾನಪದ ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸುತ್ತಿರುವ ಬಂಡ್ರಿ ಲಿಂಗಪ್ಪ ಅವರಿಗೆ ರಾಜ್ಯ, ಕೇಂದ್ರ ಸರಕಾರಗಳು, ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸ ಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಲಿಂಗಪ್ಪ ಅವರ ಪುತ್ರ ಬಂಡ್ರಿ ಯಂಕಪ್ಪ, ಗ್ರಾಮದ ಯುವ ಬಯಲಾಟ ಕಲಾವಿದರಾದ ಸುದೀಪ್, ಬಂಡ್ರಿ ಪ್ರವೀಣ್ ಕುಮಾರ್ ಮತ್ತಿತರರು ಇದ್ದರು.
—–
The post ಮನೆಯಂಗಳದಲ್ಲಿ ರಂಗ ಗೌರವ: ಹಿರಿಯ ಬಯಲಾಟ ಕಲಾವಿದ ಬಂಡ್ರಿ ಲಿಂಗಪ್ಪಗೆ ಸನ್ಮಾನ appeared first on Karnataka Kahale.
]]>The post ಸಂಡೂರು ವಿಠಲಾಪುರ ಸರಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸೌಲಭ್ಯ:ರಾಜ್ಯದಲ್ಲಿಯೇ ವಿಶೇಷ ಯೋಜನೆ -ಎಂ.ಸಿ. ಸುರೇಶ್ appeared first on Karnataka Kahale.
]]>
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ವಿಠಲಾಪುರ ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಸೌಲಭ್ಯ ಸಿಗುತ್ತಿರುವುದು ರಾಜ್ಯದಲ್ಲೇ ಪ್ರಥಮ ಎಂದು ಐ.ಎಂ.ಸಿಯ ಸದಸ್ಯರು, ತೋರಣಗಲ್ಲು ಐಟಿಐ ಕಾಲೇಜಿನ ಪ್ರಾಚಾರ್ಯರೂ ಆದ ಎಂ.ಸಿ. ಸುರೇಶ್ ಅವರು ಹೇಳಿದರು.
ಅವರು ಜಿಲ್ಲೆಯ ವಿಠಲಾಪುರ ಗ್ರಾಮದ ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ ವಾಟರ್ ಇಂಡಿಯಾ ಪ್ರೈವೇಟ್ ಲಿ.ಕಂಪನಿಯ ವತಿಯಿಂದ ಬಳ್ಳಾರಿಯ ಸ್ಥಿರಾ ಸಂಸ್ಥೆ ಕಾಲೇಜಿನ ಆಡಳಿತ ಸಮಿತಿಯ ಸಹಯೋಗದಲ್ಲಿ ಆರಂಭವಾದ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮದ ಐಟಿಐ ಕಾಲೇಜಿಗೆ ತರಬೇತಿಗೆ ಬರುವ ವಿದ್ಯಾರ್ಥಿಗಳು ಬಸ್ಸುಗಳ ಕೊರತೆಯಿಂದಾಗಿ ಕಾಲೇಜು ಬಿಡುವವರ ಸಂಖ್ಯೆಯೂ ಹೆಚ್ಚಾಗಿತ್ತು. ಏರ್ ವಾಟರ್ ಇಂಡಿಯಾ ಪ್ರೈ.ಲಿ. ಕಂಪನಿಯವರು ಇಲ್ಲಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡಲು ಆರಂಭಿಸಿದ್ದಾರೆ. 2016 ರಿಂದ ಮಧ್ಯಾಹ್ಮದ ಬಿಸಿಯೂಟ ನೀಡಲಾಗುತ್ತಿತ್ತು ಕರೋನಾ ಸಂದರ್ಭದಲ್ಲಿ ಈ ಯೋಜನೆಗೆ ಅಡಚಣೆಯುಂಟಾಗಿತ್ತು. ಕಾಲೇಜಿನಿಂದ ಹೊರಗುಳಿಯುವವರ ಸಂಖ್ಯೆ ಹೆಚ್ಚಾಯಿತು. ಪ್ರವೇಶಾತಿಯೂ ಕಡಿಮೆಯಾಯಿತು. ಈಗ ಮತ್ತೆ ಈಯೋಜನೆಗೆ ಸ್ಥಿರಾ ಸಂಸ್ಥೆಯ ಸಹಯೋಗದೊಂದಿಗೆ ಒಂದು ಶೈಕ್ಷಣಿಕ ವರ್ಷದಲ್ಲಿ 220 ವಿದ್ಯಾರ್ಥಿಗಳು 234 ದಿನ ಇದರ ಸೌಲಭ್ಯ ಪಡೆಯಲಿದ್ದಾರೆ ಎಂದರು. ಇದರಿಂದ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಾಗಲಿದೆ. ಸಂಡೂರು ತಾಲೂಕಿನಲ್ಲಿರುವ ವಿವಿಧ ಕೈಗಾರಿಕೆಗಳಿಗೆ ಅಗತ್ಯ ಕೌಶಲ್ಯಯುಕ್ತ ಮಾನವ ಸಂಪನ್ಮೂಲಗಳ ಅಗತ್ಯವಿದೆ. ಬಡಕುಟುಂಬದಿಂದ ಬರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಅನುಕೂಲವಾಗಲಿದೆ ಎಂದು ವಿವರಿಸಿದರು.
ಈ ಯೋಜನೆ ಯಶಸ್ಸಿಗೆ ಏರ್ ವಾಟರ್ ಇಂಡಿಯಾ ಲಿ.ನ ರೆಹಮಾನ್ ಅವರು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು. ಮುಖ್ಯ ಅತಿಥಿ ವಾಟರ್ ಪ್ರೈವೇಟ್ ಲಿ.ನ ಜನರಲ್ ಮ್ಯಾನೇಜರ್ ರೆಹಮಾನ್ ಮಾತನಾಡಿ ಏರ್ ವಾಟರ್ ಇಂಡಿಯಾ ಪ್ರವೇಟ್ ಲಿಮಿಟೆಡ್” ಕಂಪನಿ ಆಕ್ಸಿಜನ್ ಉತ್ಪಾದಿಸುವ ಕಂಪನಿಯಾಗಿದ್ದು, ಅದರ ಶಾಖೆಗಳು ಕೊಲಕತ್ತಾ, ಚೆನ್ನೈ ಬೆಂಗಳೂರು, ಬಳ್ಳಾರಿಯಲ್ಲಿವೆ. ಕಂಪನಿ ಮುಖ್ಯವಾಗಿ ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ, ಸುರಕ್ಷಿತ ಕುಡಿಯು ನೀರು, ಶುಚಿತ್ವ, ನೈರ್ಮಲ್ಯ ಅಭಿವೃದ್ಧಿಗೊಳಿಸುವ ಕಾರ್ಯಕ್ರಮಗಳಿಗಾಗಿ ಸಿ.ಎಸ್.ಆರ್. ಅಡಿಯಲ್ಲಿ ಸಹಕಾರ ನೀಡುವುದಾಗಿರುತ್ತದೆ. ಸದರಿ ಸೌಲಭ್ಯವು ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ ಅನುಮೋದಿಸಲಾಗಿದೆ ಎಂದು ಮಾಹಿತಿನೀಡಿದರು. ಮತ್ತೋರ್ವ ಅತಿಥಿ ಬಳ್ಳಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಪಂಡಿತಾರಾಧ್ಯ ಜೀವನದಲ್ಲಿ ಚರಾ, ಸ್ಥಿರಾ ಆಸ್ತಿಗಳಿಗಾಗಿ ಜನರು ಅನೇಕ ಬಗೆಯ ಶ್ರಮಗಳಲ್ಲಿ ತೊಡಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಉತ್ತಮ ಗುಣಮಟ್ಟದ ಜೀವಂತ, ಕರಗದಿರುವ, ವೃದ್ಧಿಗೊಳ್ಳುವ ಜೀವಂತ ಆಸ್ತಿಗಳಾಗಿ ರೂಪಗೊಳ್ಳುವ ವಿಧ್ಯಾರ್ಥಿಗಳು ದೇಶಕ್ಕೆ ಕರಗದ ಆಸ್ತಿಗಳು, ಅಂತಹ ಗುಣಮಟ್ಟ ಆಸ್ತಿಗಳನ್ನು ತಯಾರಿಸಲು ಪ್ರೋತಾಹಕರ ಅವಶ್ಯಕತೆಯನ್ನು ಪೂರೈಸುತ್ತಿರುವ ಕಂಪನಿಯ ಸೇವೆ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂಪನಿಯ ಪ್ಲಾಂಟ್ ಮ್ಯಾನೇಜರ್ ರಾಘವೇಂದ್ರ ಎಂ.ಎಸ್., ಉತ್ಪಾದನಾ ವಿಭಾಗದ ಅಸೋಸಿಯೇಟ್ ಮ್ಯಾನೇಜರ್ ಡಿ.ರವಿತೇಜ, ಸೀನಿಯರ್ ಇಂಜಿನಿಯರ್ ಶಂಕರನಾರಾಯಣ ಸುರಕ್ಷತೆ ವಿಭಗಾದ ಅಸೋಸಿಯೇಟ್ ಮ್ಯಾನೇಜರ್ ಕೈಲಾಶ್ ಎಸ್. ಸಿರಗುಪ್ಪ ಐಟಿಐ ಕಾಲೇಜಿನ ಪ್ರಾಚಾರ್ಯ ಶೇಷಣ್ಣ, ವಿಠಲಾಪುರ ಐಟಿ.ಐ.ಕಾಲೇಜಿನ ಪ್ರಾಚಾರ್ಯ ಖುದರತ್ ಅಲಿ ಹೆಚ್ ಲೇನ್, ಬಳ್ಳಾರಿಸ್ಥಿರಾ ಸಂಸ್ಥೆಯ ರೇಣುಕಾ ಬಳ್ಳಾರಿ ಉಪಸ್ಥಿತರಿದ್ದರು.
—–
The post ಸಂಡೂರು ವಿಠಲಾಪುರ ಸರಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸೌಲಭ್ಯ:ರಾಜ್ಯದಲ್ಲಿಯೇ ವಿಶೇಷ ಯೋಜನೆ -ಎಂ.ಸಿ. ಸುರೇಶ್ appeared first on Karnataka Kahale.
]]>The post ಅಭೂತಪೂರ್ವ ಗೆಲುವಿಗೆ ಸಂಡೂರು ಜನತೆಗೆ ಅಭಿನಂದನೆ ಸಲ್ಲಿಸಿದ ಸಿಎಂ:ಪ್ರಧಾನಿ ಮೋದಿ ನನ್ನ ಸವಾಲು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ -ಸಿ.ಎಂ.ಸಿದ್ದರಾಮಯ್ಯ ವ್ಯಂಗ್ಯ appeared first on Karnataka Kahale.
]]>
ಸಂಡೂರು, ಡಿ 8: ಪ್ರಧಾನಿ ಮೋದಿ ಅವರು ಅವರು ಹೇಳಿದ ಸುಳ್ಳಿಗೆ ಪ್ರತಿಯಾಗಿ ನಾನು ಹಾಕಿದ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು. ಅವರು ಭಾನುವಾರ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸುವ ಬೃಹತ್ ಮತದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಉಪಚುನಾವಣೆಯಲ್ಲಿ ಬಿಜೆಪಿಯ ಲೋಕಲ್ ಲೀಡರ್ ಗಳಿಂದ ಪ್ರಧಾನಿ ಮೋದಿಯವರರೆಗೂ ಸರಣಿ ಸುಳ್ಳು ಗಳನ್ನು ಹೇಳಿದರು. ನೀವು ಆರೋಪ ಸಾಬೀತಿಪಡಿಸಿ, ನಾನು ರಾಜಕೀಯ ನಿವೃತ್ತಿ ತಗೊತೀನಿ ಎಂದು ಮೋದಿಯವರಿಗೆ ಸವಾಲು ಹಾಕಿದ್ದೆ. ಅವರು ಸವಾಲು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ ಎಂದರು. ನಾನು ಮೂರು ದಿನಗಳ ಕಾಲ ಸಂಡೂರಿನಲ್ಲಿ ಪ್ರಚಾರ ಮಾಡಿದೆ. ಈ ವೇಳೆ ತುಕಾರಾಮ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನಿಸಿದ್ದೇನೆ. ತುಕಾರಾಮ್ ಅವರಿಗೂ ಮೊದಲು ಸಂಡೂರು ಹೇಗಿತ್ತು ಎನ್ನುವುದೂ ನನಗೂ ಗೊತ್ತು. ಈಗ ತುಕಾರಾಮ್ ಅವರು ಒಳ್ಳೆ ಕೆಲಸಗಳನ್ನು ಮಾಡಿರುವುದನ್ನು ನಾನು ನೋಡಿದ್ದೇನೆ ಎಂದು ಹೇಳಿದರು.

ನಮ್ಮ ಕಾಂಗ್ರೆಸ್ ಪಕ್ಷ ಸರ್ಕಾರ ನುಡಿದಂತೆ ನಡೆದಿದೆ. ನಾಡಿನ ಜನತೆ ಎದುರಿಗೆ ಕೊಟ್ಟ ಎಲ್ಲಾ ಭರವಸೆಗಳನ್ನೂ ಹಂತ ಹಂತವಾಗಿ ಈಡೇರಿಸುತ್ತಿದ್ದೇವೆ. ನಮ್ಮ ಜನರ ಆರ್ಥಿಕ ಶಕ್ತಿ ಮತ್ತು ಕೊಳ್ಳುವ ಸಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡುವುದರ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ತಿಳಿಸಿದರು.
2014-2018 ರಲ್ಲಿ ನರೇಂದ್ರ ಮೋದಿಯವರು ಕೊಟ್ಟ ಭರವಸೆಗಳನ್ನು ನೆನಪಿಸಿಕೊಳ್ಳಿ. ಅವುಗಳಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ ನೋಡಿ. ಮೋದಿಯವರು ನಿಮಗೆ ಈ ಮಟ್ಟದ ಮೋಸ ಮಾಡಿದ್ದಾರಲ್ಲಾ ಇದನ್ನು ಪ್ರಶ್ನಿಸಬೇಕಿದೆ ಎಂದರು.
ಮೋದಿ ಅಚ್ಚೆ ದಿನ್ ತರಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ, ವಿದೇಶದಿಂದ ಕಪ್ಪು ಹಣ ತರಲಿಲ್ಲ, ನಿಮ್ಮ ಖಾತೆಗೆ 15 ಲಕ್ಷ ಹಾಕಲಿಲ್ಲ. ಬರೀ ಭಾಷಣದಲ್ಲೇ ಮೋದಿಯವರು ಎಲ್ಲಾ ಮುಗಿಸಿ ಹೋದರು ಎಂದು ವಿವರಿಸಿದರು.
ರಿಪಬ್ಲಿಕ್ ಬಳ್ಳಾರಿ ಮಾಡಿದ ರೆಡ್ಡಿ: ಬಳ್ಳಾರಿ ಜಿಲ್ಲೆಯ ಜನತೆಯನ್ನು ಭಯದಲ್ಲಿಟ್ಟು ರಿಪಬ್ಲಿಕ್ ಬಳ್ಳಾರಿ ಮಾಡಿದ್ದ ಜನಾರ್ದನರೆಡ್ಡಿಯವರಿಗೆ ಬಿಜೆಪಿ ಈ ಚುನಾವಣೆಯ ಉಸ್ತುವಾರಿ ವಹಿಸಿತ್ತು. ಆದರೆ, ಸಂಡೂರಿನ ಜನತೆ ರೆಡ್ಡಿಯವರ ಹಣಕ್ಕೆ, ಭಯಕ್ಕೆ, ಆಮಿಷಕ್ಕೆ, ಸುಳ್ಳುಗಳಿಗೆ, ಅಪಪ್ರಚಾರಕ್ಕೆ ಸೋಲಲಿಲ್ಲ. ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ರಾಜಕಾರಣ ಮತ್ತು ಸತ್ಯದ ರಾಜಕಾರಣವನ್ನು ಗೆಲ್ಲಿಸಿದ್ದೀರಿ. ಇದು ಸಂಡೂರಿನ ಘನತೆಯನ್ನು ಹೆಚ್ಚಿಸಿದೆ ಎಂದರು.
ಇವತ್ತಿನವರೆಗೂ ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದೇ ಇಲ್ಲ. ಕೇವಲ ಆಪರೇಷನ್ ಕಮಲದ ಮೂಲಕವೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದೆ. ಆಪರೇಷನ್ ಕಮಲಕ್ಕೆ ಬಳಸಿದ ಹಣ ಕೂಡ ಕಪ್ಪು ಹಣ ಅಲ್ಲವೇ ಎಂದು ಪ್ರಶ್ನಿಸಿದರು. ಜನತೆಯ ಆಶೀರ್ವಾದ ಇರುವವರೆಗೂ ಬಗ್ಗಲ್ಲ-ಜಗ್ಗಲ್ಲ: ಮೂರು ಉಪ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ದೊಡ್ಡ ಆಶೀರ್ವಾದ ಮಾಡಿದ್ದಾರೆ. ನನ್ನ ವಿರುದ್ಧ ಸುಳ್ಳು ಕೇಸು, ಸುಳ್ಳು ಆರೋಪಗಳ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ಬಿಜೆಪಿಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ. ನಿಮ್ಮ ಆಶೀರ್ವಾದ ಇರುವವರೆಗೂ ಈ ಸಿದ್ದರಾಮಯ್ಯ ಯಾವುದೇ ಷಡ್ಯಂತ್ರ, ಸುಳ್ಳು ಕೇಸುಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.

ನಾಚಿಕೆ ಇಲ್ಲದೆ ಸುಳ್ಳು ಹೇಳ್ತಾರೆ: ವಕ್ಫ್ ವಿಚಾರದಲ್ಲೂ ಬಿಜೆಪಿಯ ರಾಷ್ಟ್ರೀಯ ನಾಯಕರಿಂದ ಲೋಕಲ್ ಲೀಡರ್ ಗಳ ವರೆಗೂ ಎಲ್ಲರೂ ಸರಣಿ ಸುಳ್ಳು ಅಪಪ್ರಚಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರ ಚುನಾವಣೆಯಲ್ಲಿ 700 ಕೋಟಿ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡಿದರು. ನಾನು ಪ್ರಧಾನಿಗೆ ಸವಾಲು ಹಾಕಿದೆ, ನಿಮ್ಮ ಆರೋಪ ಸಾಬೀತು ಮಾಡಿ. ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎನ್ನುವ ನನ್ನ ಸವಾಲು ಸ್ವೀಕರಿಸಲು ಪ್ರಧಾನಿ ಮೋದಿ ಧೈರ್ಯ ಮಾಡಲಿಲ್ಲ. ಅವರಿಗೆ ಸುಳ್ಳು ಹೇಳುವುದಕ್ಕೆ ಮಾತ್ರ ಧೈರ್ಯ ಬರುತ್ತದೆ ಎಂದು ವ್ಯಂಗ್ಯವಾಡಿದರು. ಸಂಡೂರಿಗೆ 2 ಸಾವಿರ ಮನೆ ಬಂಪರ್: ಬಳ್ಳಾರಿ ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮಾತನಾಡಿ, ಸಂಡೂರು ಕ್ಷೇತ್ರಕ್ಕೆ ವಸತಿ ಇಲಾಖೆಯಿಂದ ಹೆಚ್ಚುವರಿಯಾಗಿ 2000 ಮನೆಗಳನ್ನು ನೀಡುವುದಾಗಿ ಘೋಷಿಸಿದರು. ಈಗಾಗಲೇ 2172 ಮನೆಗಳನ್ನು ನೀಡಲಾಗಿದೆ. ಸಂಡೂರಿನಲ್ಲಿ ಬಡವರು ಹೆಚ್ಚಾಗಿರುವುದರಿಂದ ಮತ್ತು ನಂಜುಂಡಪ್ಪ ಅವರ ವರದಿಯಲ್ಲಿ ಹಿಂದುಳಿದ ತಾಲ್ಲೂಕಿನ ಪಟ್ಟಿಯಲ್ಲಿ ಇರುವುದರಿಂದ ಹೆಚ್ಚುವರಿಯಾಗಿ 2000 ಮನೆಗಳನ್ನು ನೀಡಲಾಗುವುದು ಎಂದು ಘೋಷಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ತುಕಾರಾಂ, ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್, ಸಂಡೂರು ನೂತನ ಶಾಸಕಿ ಅನ್ನಪೂರ್ಣಮ್ಮ, ಜಿಲ್ಲೆಯ ಶಾಸಕರು ಸೇರಿದಂತೆ ಕಾಂಗ್ರೆಸ್ ಪಕ್ಷದ ಗಣ್ಯರು ಉಪಸ್ಥಿತರಿದ್ದರು.
The post ಅಭೂತಪೂರ್ವ ಗೆಲುವಿಗೆ ಸಂಡೂರು ಜನತೆಗೆ ಅಭಿನಂದನೆ ಸಲ್ಲಿಸಿದ ಸಿಎಂ:ಪ್ರಧಾನಿ ಮೋದಿ ನನ್ನ ಸವಾಲು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ -ಸಿ.ಎಂ.ಸಿದ್ದರಾಮಯ್ಯ ವ್ಯಂಗ್ಯ appeared first on Karnataka Kahale.
]]>The post ಉಬ್ಬಳಗಂಡಿ ಗ್ರಾಮದಲ್ಲಿ ನೂತನ ಶಾಖಾ ಅಂಚೆ ಕಚೇರಿಗೆ ಸಂಸದ ತುಕಾರಾಂ ಚಾಲನೆ appeared first on Karnataka Kahale.
]]>
ಸಂಡೂರು, ಸೆ.22: ತಾಲೂಕಿನ ಉಬ್ಬಳಗಂಡಿ ಗ್ರಾಮದಲ್ಲಿ ನೂತನವಾಗಿ ಶಾಖಾ ಅಂಚೆ ಕಚೇರಿಯನ್ನು ಬಳ್ಳಾರಿ ಸಂಸದ ತುಕಾರಾಂ ಅವರು ಉದ್ಘಾಟಿಸಿದರು.
ಬಳ್ಳಾರಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಪದ್ಮಶಾಲಿ ಚಿದಾನಂದ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಬಿಟಿಪಿಎಸ್ ಅಂಚೆ ಕಚೇರಿಯ ಅಂಚೆ ಪಾಲಕರು ಹಾಗೂ ಎಲ್ಲಾ ಜಿಡಿಎಸ್ ಸಿಬ್ಬಂದಿಗಳು ಹಾಗೂ ವಿಭಾಗೀಯ ಮತ್ತು ಉಪ ವಿಭಾಗೀಯ ಕಚೇರಿಯ ಸಮಸ್ತ ಸಿಬ್ಬಂದಿಗಳು ಭಾಗವಹಿಸಿದ್ದರು.
ಯು.ರಾಜಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಉಬ್ಬಳಗಂಡಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.
The post ಉಬ್ಬಳಗಂಡಿ ಗ್ರಾಮದಲ್ಲಿ ನೂತನ ಶಾಖಾ ಅಂಚೆ ಕಚೇರಿಗೆ ಸಂಸದ ತುಕಾರಾಂ ಚಾಲನೆ appeared first on Karnataka Kahale.
]]>The post ಸಂಡೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾ ಮೋಹನ್‌ದಾಸ್ ಅಗರ್ವಾಲ್ ಭಾಗಿ appeared first on Karnataka Kahale.
]]>
ಸಂಡೂರು, ಸೆ.11: ರಾಜ್ಯ ಬಿಜೆಪಿ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗ ಡಾ. ರಾಧಾ ಮೋಹನ್‌ದಾಸ್ ಅಗರ್ವಾಲ್ ಅವರು ಬುಧವಾರ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ಸದಸ್ಯತ್ವ ಅಭಿಯಾನ ಸಭೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಮಾಜಿ ಸಚಿವ ಬಿ. ಶ್ರೀರಾಮುಲು, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಮಾಜಿ ಸಂಸದ ವೈ. ದೇವೇಂದ್ರಪ್ಪ, ಪರಿಷತ್ ಸದಸ್ಯ ಕೇಶವ ಪ್ರಸಾದ್, ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಶಾಂತ್ ಮಾಕನೂರು, ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
—–
The post ಸಂಡೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾ ಮೋಹನ್‌ದಾಸ್ ಅಗರ್ವಾಲ್ ಭಾಗಿ appeared first on Karnataka Kahale.
]]>The post ಸಂಡೂರಿನ ಜೋಗದ ಹೆಚ್.ಹುಲಿಗೆಮ್ಮಗೆ ಪಿ.ಎಚ್.ಡಿ ಪದವಿ ಪ್ರದಾನ appeared first on Karnataka Kahale.
]]>
ಗ್ರಾಮದ ಯಂಕಪ್ಪ ಹಾಗೂ ಈರಮ್ಮ ಅವರ ಪುತ್ರಿ ಹೆಚ್. ಹುಲಿಗೆಮ್ಮ ಅವರು ಬಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಆಂತರಿಕ ಮಾರ್ಗದರ್ಶನಕರಾದ ಡಾ. ಎಸ್. ಎ. ಗೋವರ್ಧನ ಅವರ ಮಾರ್ಗದರ್ಶನದಲ್ಲಿ “ದಲಿತರ ರಾಜಕೀಯ ಸಬಲೀಕರಣ”(ಸಂಡೂರು ಮತ್ತು ಹೊಸಪೇಟೆ ತಾಲೂಕುಗಳನ್ನು ಅನುಲಕ್ಷಿಸಿ )ಎಂಬ ಶೀರ್ಷಿಕೆ ಅಡಿ ಮಹಾಪ್ರಬಂಧ ರಚಿಸಿ ವಿವಿಗೆ ಮಂಡಿಸಿದ್ದರು.
ವಿಶ್ವವಿದ್ಯಾಲಯ ಪರೀಕ್ಷಾ ಮಂಡಳಿ, ಅಧಿನಿಯಮ ಹಾಗೂ ಪಿಎಚ್.ಡಿ ಪದವಿ ನಿಯಮಗಳನ್ನು ಅನುಸಾರ ಮಹಾಪ್ರಬಂಧ ಅತ್ಯುತ್ತಮ ಶ್ರೇಣಿಯದ್ದು ಎಂದು ಪರಿಗಣಿಸಿ ಜ. ೧೦ ರಂದು ನಡೆದ ೩೨ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರೂ ಆಗಿರುವ ವಿವಿ ಸಮ ಕುಲಾಧಿಪತಿ
ಡಾ. ಎಂ.ಸಿ ಸುಧಾಕರ್ ಅವರು ಹೆಚ್. ಹುಲಿಗೆಮ್ಮ ಅವರಿಗೆ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಪರಮಶಿವಮೂರ್ತಿ, ನಾಡೋಜ ಪುರಸ್ಕೃತರಾದ ಡಾ.ಬಸವಲಿಂಗ ಪಟ್ಟ ದೇವರು, ಪ್ರೊ. ತೇಜಸ್ವಿ ವಿ. ಕಟ್ಟಿಮನಿ, ಡಾ. ಎಸ್. ವಿ .ಶರ್ಮ, ಅನಂತಪುರದ ಆಂಧ್ರಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿ.ಕೋರಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ ಪೂಣಚ್ಚ, ಅಧ್ಯಯನಾಂಗದ ನಿರ್ದೇಶಕ ಡಾ.ಪಿ. ಮಹದೇವಯ್ಯ, ಪ್ರಸಾರಾಂಗದ ನಿರ್ದೇಶಕಿ ಡಾ. ಶೈಲಜ ಇಂ. ಹಿರೇಮಠ, ಭಾಷಾ ನಿಕಾಯದ ಡೀನರಾದ ಡಾ. ಎಫ್ .ಟಿ.ಹಳ್ಳಿಕೇರಿ, ಸಮಾಜ ವಿಜ್ಞಾನಗಳ ನಿಕಾಯದ ಡೀನರಾದ ಡಾ. ಚೆಲುವರಾಜ, ಲಲಿತ ಕಲೆಗಳ ನಿಕಾಯದ ಡೀನರಾದ ಡಾ. ಶಿವಾನಂದ ವಿರಕ್ತಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
——-
The post ಸಂಡೂರಿನ ಜೋಗದ ಹೆಚ್.ಹುಲಿಗೆಮ್ಮಗೆ ಪಿ.ಎಚ್.ಡಿ ಪದವಿ ಪ್ರದಾನ appeared first on Karnataka Kahale.
]]>The post ಬಳ್ಳಾರಿ ಜಿಲ್ಲೆ ಪ್ರವೇಶಿಸಿದ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆ: ಅದ್ದೂರಿ ಸ್ವಾಗತ appeared first on Karnataka Kahale.
]]>ಬಳ್ಳಾರಿ,ನ.14:ಜಿಲ್ಲೆಯ ಗಡಿಭಾಗ ಗ್ರಾಮ ಶ್ರೀರಾಮಶೆಟ್ಟಿ ಹಳ್ಳಿಗೆ ಪ್ರವೇಶಿಸಿದ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಗೆ ಮಂಗಳವಾರ ಅದ್ದೂರಿ ಸ್ವಾಗತ ದೊರೆಯಿತು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಆಡಳಿತ ಸಂಡೂರು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ
ಹಲಗೆ, ತಾಷೆ-ರಾಂಡೋಲ್, ಕಂಸಾಳೆ, ವೀರಗಾಸೆ, ಡೊಳ್ಳು, ವಿವಿಧ ವಾದ್ಯಗಳು ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಭರ್ಜರಿ ಮೆರವಣಿಗೆಯೊಂದಿಗೆ ತಾಲ್ಲೂಕು ಆಡಳಿತ ಅದ್ದೂರಿಯಾಗಿ ಯಾತ್ರೆಯನ್ನು ಬರಮಾಡಿಕೊಂಡಿತು.

ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯ ಮೆರವಣಿಗೆಯಲ್ಲಿ ಅಧಿಕಾರಿಗಳು, ಶಾಲಾ ಮಕ್ಕಳು, ಸಾರ್ವಜನಿಕರು, ಹಿರಿಯರು-ಕಿರಿಯರು ಸೇರಿದಂತೆ ಸೇರಿದಂತೆ ಎಲ್ಲರೂ ಕುಣಿದು, ಕುಪ್ಪಳಿಸಿ, ನೃತ್ಯ ಮಾಡುವುದರ ಮೂಲಕ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯು ಸಂಡೂರು ತಾಲ್ಲೂಕಿನ ಶ್ರೀರಾಮ ಶೆಟ್ಟಿ ಹಳ್ಳಿಯಿಂದ ಬಂಡ್ರಿ ಗ್ರಾಮದ ಮೂಲಕ ಯಶವಂತ ನಗರ ಮಾರ್ಗವಾಗಿ ವಿವಿಧ ಹೋಬಳಿ, ಗ್ರಾಮ ಪಂಚಾಯತಿ ವತಿಯಿಂದ ಸಂಭ್ರಮದಿಂದ ಹೊರಟು, ಸಂಡೂರಿಗೆ ಆಗಮಿಸಿತು.
ಸಂಡೂರು ಶಾಸಕ ಈ.ತುಕಾರಾಂ ಅವರು, ಅದ್ದೂರಿಯಾಗಿ ಬರಮಾಡಿಕೊಂಡರು. ನಂತರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಸಂಡೂರು ಶಾಸಕ ಈ.ತುಕಾರಾಂ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ, ಇಡೀ ವರ್ಷ ಕರ್ನಾಟಕದ ಇತಿಹಾಸ, ಕಲೆ, ಸಾಹಿತ ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ – ಕನ್ನಡಿಗ – ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಅಂಗವಾಗಿ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಜ್ಯೋತಿ ರಥಯಾತ್ರೆಯು ರಾಜ್ಯಾದಾದ್ಯಂತ ಸಂಚರಿಸಲಿದೆ ಎಂದು ಹೇಳಿದರು.
1973ರಲ್ಲಿ ಮೈಸೂರು ರಾಜ್ಯ ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡಿತು. ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸ್ ಅವರ ನೇತೃತ್ವದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡಿತು ಎಂದು ತಿಳಿಸಿದರು.
ಕರ್ನಾಟಕ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಶುಭಗಳಿಗೆ ಹೆಮ್ಮೆಯ ವಿಷಯವಾಗಿದೆ. ಅನೇಕ ಜನರ ತ್ಯಾಗ ಬಲಿದಾನ ಹಾಗೂ ಸಹಕಾರದಿಂದ ಕರ್ನಾಟಕ ರೂಪುಗೊಂಡಿದೆ ಎಂಬ ಸಂಗತಿಯನ್ನು ಯುವ ಸಮುದಾಯ ಅರಿತುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ, ತಹಶೀಲ್ದಾರ ಅನಿಲ್ ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಕರ್ನಾಟಕ ಸಂಭ್ರಮ – 50ರ ಜ್ಯೋತಿ ರಥಯಾತ್ರೆಯು ನ.15ರಂದು ಸಂಡೂರು ತಾಲ್ಲೂಕಿನಲ್ಲಿ ವಿವಿಧೆಡೆ ಸಂಚರಿಸಿ ನ. 16ರಂದು ಬಳ್ಳಾರಿಗೆ ಆಗಮಿಸಲಿದೆ.
——–
The post ಬಳ್ಳಾರಿ ಜಿಲ್ಲೆ ಪ್ರವೇಶಿಸಿದ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆ: ಅದ್ದೂರಿ ಸ್ವಾಗತ appeared first on Karnataka Kahale.
]]>