ಉಬ್ಬಳಗಂಡಿ ಗ್ರಾಮದಲ್ಲಿ ನೂತನ ಶಾಖಾ ಅಂಚೆ ಕಚೇರಿಗೆ ಸಂಸದ ತುಕಾರಾಂ ಚಾಲನೆ

ಸಂಡೂರು, ಸೆ.22: ತಾಲೂಕಿನ ಉಬ್ಬಳಗಂಡಿ ಗ್ರಾಮದಲ್ಲಿ ನೂತನವಾಗಿ ಶಾಖಾ ಅಂಚೆ ಕಚೇರಿಯನ್ನು ಬಳ್ಳಾರಿ ಸಂಸದ ತುಕಾರಾಂ ಅವರು ಉದ್ಘಾಟಿಸಿದರು.
ಬಳ್ಳಾರಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಪದ್ಮಶಾಲಿ ಚಿದಾನಂದ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಬಿಟಿಪಿಎಸ್ ಅಂಚೆ ಕಚೇರಿಯ ಅಂಚೆ ಪಾಲಕರು ಹಾಗೂ ಎಲ್ಲಾ ಜಿಡಿಎಸ್ ಸಿಬ್ಬಂದಿಗಳು ಹಾಗೂ ವಿಭಾಗೀಯ ಮತ್ತು ಉಪ ವಿಭಾಗೀಯ ಕಚೇರಿಯ ಸಮಸ್ತ ಸಿಬ್ಬಂದಿಗಳು ಭಾಗವಹಿಸಿದ್ದರು.
ಯು.ರಾಜಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಉಬ್ಬಳಗಂಡಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *