The post ಹಣತೆಗಳ ಬೆಳಕಿನಲ್ಲಿ ಮಿಂದೆದ್ದ ‘ಕೊಟ್ಟೂರು’! 🪔 ಕಿರು ಬರಹ: ಪ್ರೊ. ಎಸ್ ಎಂ ಶಶಿಧರ್, ಬಳ್ಳಾರಿ appeared first on Karnataka Kahale.
]]>

ಕೊಟ್ಟೂರಿನಲ್ಲಿ ಹಣತೆಗಳ ಸಂಭ್ರಮಕ್ಕೆ ಎಣೆಯೇ ಇಲ್ಲ! ಇಲ್ಲಿ ದೀಪಾವಳಿ ಅನ್ನೋದು ಒಂದು ಆರಂಭ ಅಷ್ಟೇ. ಅಲ್ಲಿಂದಾಚೆಗೆ ಬರುವ ಪ್ರತಿ ಸೋಮವಾರ ಮತ್ತು ಗುರುವಾರ ರಾತ್ರಿ ನಡೆಯುವ ಗುರು ಕೊಟ್ಟೂರೇಶ್ವರನ ಪಲ್ಲಕ್ಕಿ ಮೆರವಣಿಗೆಯ ಸೊಬಗೇ ಬೇರೆ. ಊರಿನ ಪ್ರತಿ ಮನೆಯ ಮುಂದೆಯೂ ಮಿನುಗುವ ಆ ಹಣತೆಗಳು ಚೆಲ್ಲುವುದು ಬರೀ ಬೆಳಕನ್ನಲ್ಲ; ಅದೊಂದು ಬಗೆಯ ಸಾತ್ವಿಕ ನೆಮ್ಮದಿ. ಅದನ್ನೇ ನಾವು ‘ಭಕ್ತಿ’ ಅನ್ನುತ್ತೇವೆ.
ನಿನ್ನೆ ನಡೆದ ಕಾರ್ತಿಕೋತ್ಸವದಲ್ಲಿ ಈ ಸಡಗರ ಅದರ ‘ಕ್ಲೈಮ್ಯಾಕ್ಸ್’ ತಲುಪಿತ್ತು!
ದಿನಾಂಕ ಎಂಟರ ಸೋಮವಾರ ಇಡೀ ಕೊಟ್ಟೂರು ಪಟ್ಟಣ ಲಕ್ಷ ದೀಪಗಳ ಬೆಳಕಿನಲ್ಲಿ ಝಗಮಗಿಸುತ್ತಿತ್ತು. ಮುಖ್ಯ ಬೀದಿಗಳಲ್ಲಿ ಸಾಲು ದೀಪಗಳು, ಕಿಕ್ಕಿರಿದು ತುಂಬಿದ್ದ ಭಕ್ತಸಾಗರ… ರಾತ್ರಿ 11 ಗಂಟೆಗೆ ಆರಂಭವಾಗಿ ನಸುಕಿನ 5 ಗಂಟೆಯವರೆಗೂ ನಡೆದ ಆ ‘ಬೆಳ್ಳಿ ರಥೋತ್ಸವ’ದ ವೈಭವ ಕಣ್ತುಂಬಿಕೊಳ್ಳುವುದೇ ಒಂದು ಯೋಗ.
ಒಂದು ಮಾತು ಸತ್ಯ.
ಕೊಟ್ಟೂರಿನವರು ಜಗತ್ತಿನ ಯಾವುದೇ ಮೂಲೆಯಲ್ಲಿ ‘ಸೆಟಲ್’ ಆಗಿರಲಿ, ಕೊಟ್ಟೂರೇಶ್ವರನ ಈ ಕಾರ್ತಿಕೋತ್ಸವ ಮತ್ತು ರಥೋತ್ಸವವನ್ನು ಮಾತ್ರ ‘ಮಿಸ್’ ಮಾಡಿಕೊಳ್ಳುವುದಿಲ್ಲ. ಕುಟುಂಬ ಸಮೇತ ಬಂದು, ಬಂಧು-ಮಿತ್ರರ ಜೊತೆಗೂಡಿ ಊರಿನ ಸಂಭ್ರಮದಲ್ಲಿ ಲೀನವಾಗುತ್ತಾರೆ.
ಯಾಕೆ ಗೊತ್ತಾ?
“ತನ್ನ ಹಿಂದೆ ಒಂದು ಪರಂಪರೆಯೇ ಇದೆ, ಗುರು ಕೊಟ್ಟೂರೇಶ್ವರನ ಕೃಪೆ ಇದೆ” ಎಂಬ ಧೈರ್ಯ ಅವರಿಗೆ ಸಿಗುತ್ತದೆ. ನಮ್ಮ ‘ಮಾಡರ್ನ್’ ಬದುಕಿನ ಜಂಜಾಟಗಳ ನಡುವೆ ಕಳೆದುಹೋದ ನಮ್ಮತನವನ್ನು ಹುಡುಕಿಕೊಳ್ಳಲು ಇಂತಹದೊಂದು ನೆಪ ಬೇಕಲ್ಲವೇ?
ರಸ್ಕಿನ್ ಬಾಂಡ್ ಬರೆಯುತ್ತಾರೆ- “Small towns have long memories” (ಸಣ್ಣ ಊರುಗಳಿಗೆ ನೆನಪಿನ ಶಕ್ತಿ ಜಾಸ್ತಿ) ಅಂತ. ಅದು ಎಷ್ಟು ಸತ್ಯ ಅಲ್ವಾ? ಸಿಟಿ ನಮಗೆ ಬದುಕಲು ‘ಜಾಗ’ (Space) ಕೊಡಬಹುದು, ಆದರೆ ನಮ್ಮ ಅಸ್ತಿತ್ವಕ್ಕೆ ಒಂದು ಅರ್ಥ (Meaning) ಕೊಡುವುದು ಇಂತಹ ಸಣ್ಣ ಊರುಗಳೇ. 


-ಪ್ರೊ. ಎಸ್ ಎಂ ಶಶಿಧರ್, ಬಳ್ಳಾರಿ
The post ಹಣತೆಗಳ ಬೆಳಕಿನಲ್ಲಿ ಮಿಂದೆದ್ದ ‘ಕೊಟ್ಟೂರು’! 🪔 ಕಿರು ಬರಹ: ಪ್ರೊ. ಎಸ್ ಎಂ ಶಶಿಧರ್, ಬಳ್ಳಾರಿ appeared first on Karnataka Kahale.
]]>The post ಕೊಟ್ಟೂರಿನ ಐ.ಎಂ ನಂದೀಶಗೆ ಪಿ.ಹೆಚ್.ಡಿ ಪದವಿ appeared first on Karnataka Kahale.
]]>
ಕೊಟ್ಟೂರು, ಅ. 26 :ಪಟ್ಟಣದ ಐ.ಎಂ.ನಂದೀಶ ಅವರು ಡೆವಲಪ್‍ಮೆಂಟ್ ಆಫ್ ನೋವೆಲ್ ಅನಲೈಟಿಕಲ್ ಮೆಥಡ್ಸ್ ಫಾರ್ ದಿ ಆಸ್ಸೆ ಆಫ್ ಸೆಲೆಕ್ಟೆಡ್ ಡ್ರಗ್ಸ್ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಪಿಹೆಚ್‍ಡಿ. ಪದವಿ ನೀಡಿದೆ.
ದಾವಣಗೆರೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಡಿ.ಎಚ್. ಮಂಜುನಾಥ ಮತ್ತು ಡಾ.ಯಲ್ಲೂರ ಸಿ.ಬಸಪ್ಪ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು.
—–
The post ಕೊಟ್ಟೂರಿನ ಐ.ಎಂ ನಂದೀಶಗೆ ಪಿ.ಹೆಚ್.ಡಿ ಪದವಿ appeared first on Karnataka Kahale.
]]>The post ಉಜ್ಜನಿ ಅಮ್ಮನಕೆರಿ ಛಲವಾದಿ ಹಾಲೇಶಪ್ಪ ನಿಧನ appeared first on Karnataka Kahale.
]]>
ಮೃತರಿಗೆ 71 ವರ್ಷವಾಗಿತ್ತು. ಮೂವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಗ್ರಾಮದ ರುದ್ರಭೂಮಿಯಲ್ಲಿ ಮೃತರ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
*****
The post ಉಜ್ಜನಿ ಅಮ್ಮನಕೆರಿ ಛಲವಾದಿ ಹಾಲೇಶಪ್ಪ ನಿಧನ appeared first on Karnataka Kahale.
]]>The post ಮಾಜಿ ಜಿಪಂ ಸದಸ್ಯ ಎಂಎಂಜೆ ಹರ್ಷವರ್ಧನ್ ಕಾಂಗ್ರೆಸ್ ಸೇರ್ಪಡೆ appeared first on Karnataka Kahale.
]]>
ಬೆಂಗಳೂರು, ಸೆ.6: ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಕೊಟ್ಟೂರು ತಾಲೂಕಿನ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ, ವೀರಶೈವ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ಮತ್ತು ಕೊಟ್ಟೂರು ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್ ಅವರು ಸೋಮವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಸಭೆಯ ಪ್ರತಿ ಪಕ್ಷ ನಾಯಕ ಸಿದ್ಧರಾಮಯ್ಯ ಹಾಗು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯಕ್ ಅವರ ಸಮ್ಮುಖದಲ್ಲಿ ನಗರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಹರ್ಷವರ್ಧನ್ ಅವರು ಮಾಜಿ ಸಚಿವ ಸದ್ಯೋಜಾತ ಅವರ ಪುತ್ರರು. ಕಾಂಗ್ರೆಸ್ ಮುಖಂಡ ದ್ವಾರಕೀಶ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
*****
The post ಮಾಜಿ ಜಿಪಂ ಸದಸ್ಯ ಎಂಎಂಜೆ ಹರ್ಷವರ್ಧನ್ ಕಾಂಗ್ರೆಸ್ ಸೇರ್ಪಡೆ appeared first on Karnataka Kahale.
]]>