Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಕುರುಗೋಡು – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Fri, 21 Mar 2025 15:08:15 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಕುರುಗೋಡು – Karnataka Kahale https://www.karnatakakahale.com 32 32 ಪ್ರತಿಯೊಬ್ಬ ವಿದ್ಯಾರ್ಥಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು – ಕುರುಗೋಡು ಪ್ರಾಂಶುಪಾಲ ಡಾ. ಎಚ್‌.ರಾಮಕೃಷ್ಣ https://www.karnatakakahale.com/news/18929 Fri, 21 Mar 2025 15:08:15 +0000 https://www.karnatakakahale.com/?p=18929 ತೆಕ್ಕಲಕೋಟೆ, ಮಾ.21: ಪ್ರತಿಯೊಬ್ಬ ವಿದ್ಯಾರ್ಥಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು ಎಂದು ಕುರುಗೋಡು ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಚ್‌.ರಾಮಕೃಷ್ಣ  ಅವರು ಹೇಳಿದರು. ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಬಳ್ಳಾರಿ ನೆಹರು ಯುವಕೇಂದ್ರ ಹಾಗೂ…

The post ಪ್ರತಿಯೊಬ್ಬ ವಿದ್ಯಾರ್ಥಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು – ಕುರುಗೋಡು ಪ್ರಾಂಶುಪಾಲ ಡಾ. ಎಚ್‌.ರಾಮಕೃಷ್ಣ appeared first on Karnataka Kahale.

]]>

ತೆಕ್ಕಲಕೋಟೆ, ಮಾ.21: ಪ್ರತಿಯೊಬ್ಬ ವಿದ್ಯಾರ್ಥಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು ಎಂದು ಕುರುಗೋಡು ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಚ್‌.ರಾಮಕೃಷ್ಣ  ಅವರು ಹೇಳಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಬಳ್ಳಾರಿ ನೆಹರು ಯುವಕೇಂದ್ರ ಹಾಗೂ ತೆಕ್ಕಲಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ ಸಹಯೋಗದಲ್ಲಿ ಕಾಲೇಜಿನ ಪ್ರಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಕಸಿತ ಭಾರತ ಯುವ ಸಂಸತ್ತು-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದಲ್ಲಿ ಸದೃಢ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಪ್ರತಿಯೊಬ್ಬ ಯುವಕರು ಮಾನವೀಯ ಮೌಲ್ಯ ಅಳವಡಿಸಿಕೊಂಡು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ನಂಬಿಕೆ, ವಿಶ್ವಾಸದ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಬಳ್ಳಾರಿ ನೆಹರೂ ಯುವಕೇಂದ್ರದ ಅಧಿಕಾರಿ ಮೊಂಟು ಪಟಾರ್‌ ಮಾತನಾಡಿ, ಯುವ ಸಂಸತ್ತು ಸ್ಪರ್ಧೆಯು ವಿದ್ಯಾರ್ಥಿಗಳು ರಾಜಕೀಯ ಚರ್ಚೆಯಲ್ಲಿ
ಪಾಲ್ಗೊಳ್ಳಲು ಅನುಕೂಲಕರವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಹೊಸ ಆಲೋಚನೆಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ರಾಜ್ಯ ಮಕ್ಕಳ ಹಕ್ಕು ಆಯೋಗದ ಮಾಜಿ ಸದಸ್ಯ ಡಾ. ಎಚ್‌ಸಿ.ರಾಘವೇಂದ್ರ ಮಾತನಾಡಿ, ನೈತಿಕ ಮೌಲ್ಯಗಳ ಬೆಳವಣಿಗೆಯನ್ನು ವಿದ್ಯಾರ್ಥಿಗಳು ಯುವ ಸಂಸತ್ತಿನ
ನಾಯಕರಾಗುವ ಮೂಲಕ ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತೆಕ್ಕಲಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಅವರು ಮಾತನಾಡಿ, ವಿಕಸಿತ ಭಾರತ ಯೋಜನೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಎನ್ನೆಸ್ಸೆಸ್‌ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಕುಮಾರ್‌, ಡಾ.ಶಾಂತಲಾ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಎ.ಎಸ್‌.ಬಸವರಾಜ, ಮುರುಳಿಶಂಕರಗೌಡ, ಡಾ.ಶಶಿಕಾಂತ್‌, ಡಾ.ಚಂದ್ರಕಾಂತ್‌ ಹಾಗೂ ಅಧ್ಯಾಪಕರು, ಸ್ಪರ್ಧಾರ್ಥಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
—–

The post ಪ್ರತಿಯೊಬ್ಬ ವಿದ್ಯಾರ್ಥಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು – ಕುರುಗೋಡು ಪ್ರಾಂಶುಪಾಲ ಡಾ. ಎಚ್‌.ರಾಮಕೃಷ್ಣ appeared first on Karnataka Kahale.

]]>
ಕರ್ನಾಟಕ ಸಮರ ಸೇನೆ ಬಳ್ಳಾರಿ ಜಿಲ್ಲಾಧ್ಯಕ್ಷ ಕೋಳೂರು ಸಿ.‌ಶ್ರೀನಿವಾಸ್‌ ವಿಧಿವಶ https://www.karnatakakahale.com/news/18340 Sun, 05 Jan 2025 11:58:17 +0000 https://www.karnatakakahale.com/?p=18340 ಬಳ್ಳಾರಿ, ಜ.5: ಕರ್ನಾಟಕ ‌ಸಮರ‌ ಸೇನೆಯ ಜಿಲ್ಲಾಧ್ಯಕ್ಷ, ಕೋಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿ. ಶ್ರೀನಿವಾಸ್(47) ಭಾನುವಾರ ಮಧ್ಯಾಹ್ನ‌ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ‌, ಮೂವರು ಅಣ್ಣಂದಿರು ಸೇರಿದಂತೆ ಅಪಾರ‌ ಬಂಧು ಮಿತ್ರರನ್ನು…

The post ಕರ್ನಾಟಕ ಸಮರ ಸೇನೆ ಬಳ್ಳಾರಿ ಜಿಲ್ಲಾಧ್ಯಕ್ಷ ಕೋಳೂರು ಸಿ.‌ಶ್ರೀನಿವಾಸ್‌ ವಿಧಿವಶ appeared first on Karnataka Kahale.

]]>

ಬಳ್ಳಾರಿ, ಜ.5: ಕರ್ನಾಟಕ ‌ಸಮರ‌ ಸೇನೆಯ ಜಿಲ್ಲಾಧ್ಯಕ್ಷ, ಕೋಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿ. ಶ್ರೀನಿವಾಸ್(47) ಭಾನುವಾರ ಮಧ್ಯಾಹ್ನ‌ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ‌, ಮೂವರು ಅಣ್ಣಂದಿರು ಸೇರಿದಂತೆ ಅಪಾರ‌ ಬಂಧು ಮಿತ್ರರನ್ನು ಶ್ರೀನಿವಾಸ್‌ ಅಗಲಿದ್ದಾರೆ.
ವರ್ಷದ ಹಿಂದೆ ಮೂತ್ರಪಿಂಡ ವೈಫಲ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ರೀನಿವಾಸ ಚೇತರಿಸಿಕೊಂಡಿದ್ದರು. ಇವರ ಶ್ರೀಮತಿ ಅವರೇ ಒಂದು ಮೂತ್ರಪಿಂಡವನ್ನು‌ ದಾನ ಮಾಡಿದ್ದರು. ವಾರದ ಹಿಂದೆ ತೀವ್ರ‌ನೋವು ಕಾಣಿಸಿಕೊಂಡಿದ್ದರಿಂದ ಮತ್ತೇ‌ ಬೆಂಗಳೂರಿನ‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ‌ ಗ್ರಾಮಕ್ಕೆ‌ ವಾಪಸಾಗಿದ್ದರು. ಶನಿವಾರ‌ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿ‌‌‌ದ್ದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು ಎಳೆದರು.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಕೋಳೂರು ಗ್ರಾಮದ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀನಿವಾಸ್ ಗ್ರಾಮ ಪಂಚಾಯಿತಿ ಸದಸ್ಯರಾಗಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸಮಾಜ ಸೇವಕರಾಗಿ‌ ಗಮನ ಸೆಳೆದಿದ್ದರು.
ಕಂಬನಿ: ಕಂಪ್ಲಿ ಶಾಸಕ‌ ಜೆ‌ಎನ್ ಗಣೇಶ್, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್, ರಿಪಬ್ಲಿಕ್ ಸೇನೆ ಹಾಗೂ ಕನ್ನಡ ಸೇನೆಯ ಮುಖಂಡ ಹಂಪಾಪಟ್ಟಣದ ಸಿ. ಹಾಲೇಶ್, ನ್ಯಾಯವಾದಿ ಸಿ. ಬಸವರಾಜ್, ಪತ್ರಕರ್ತ ಸಿ. ಶಿವಾನಂದ, ಕೋಳೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಎಂಎಸ್‌ ಜಿಲ್ಲಾ ಮುಖಂಡರು ಸೇರಿದಂತೆ
ಹಲವು ಗಣ್ಯರು ಶ್ರೀನಿವಾಸ್ ‌ಅಕಾಲಿಕ‌‌ನಿಧನಕ್ಕೆ‌ಕಂಬನಿ‌ಮಿಡಿದಿದ್ದಾರೆ.
—–

The post ಕರ್ನಾಟಕ ಸಮರ ಸೇನೆ ಬಳ್ಳಾರಿ ಜಿಲ್ಲಾಧ್ಯಕ್ಷ ಕೋಳೂರು ಸಿ.‌ಶ್ರೀನಿವಾಸ್‌ ವಿಧಿವಶ appeared first on Karnataka Kahale.

]]>
ಕುರುಗೋಡು ಸರಕಾರಿ ಡಿಗ್ರಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ: ದಲಿತರ ಪ್ರಗತಿಗೆ ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟು ಹಾಗೂ ಜಾಗತೀಕರಣ ಕಾರಣ -ಚಿಂತಕ ಡಾ.‌ಹೊನ್ನೂರಾಲಿ ಐ ಅಭಿಮತ https://www.karnatakakahale.com/news/16941 Mon, 12 Aug 2024 06:49:25 +0000 https://www.karnatakakahale.com/?p=16941 ಕುರುಗೋಡು(ಬಳ್ಳಾರಿ ಜಿ.), ಆ.11: ಸಮಕಾಲೀನ ದಲಿತರ ಪ್ರಗತಿಗೆ ಎರಡು ಪ್ರಮುಖ ಬಿಕ್ಕಟ್ಟುಗಳು ಕಾರಣವಾಗಿವೆ ಎಂದು ಬಳ್ಳಾರಿಯ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ, ಚಿಂತಕ ಡಾ. ಹೊನ್ನೂರಾಲಿ ಐ ಅವರು ಅಭಿಪ್ರಾಯ ಪಟ್ಟರು. ಪಟ್ಟಣದ…

The post ಕುರುಗೋಡು ಸರಕಾರಿ ಡಿಗ್ರಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ: ದಲಿತರ ಪ್ರಗತಿಗೆ ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟು ಹಾಗೂ ಜಾಗತೀಕರಣ ಕಾರಣ -ಚಿಂತಕ ಡಾ.‌ಹೊನ್ನೂರಾಲಿ ಐ ಅಭಿಮತ appeared first on Karnataka Kahale.

]]>

ಕುರುಗೋಡು(ಬಳ್ಳಾರಿ ಜಿ.), ಆ.11: ಸಮಕಾಲೀನ ದಲಿತರ ಪ್ರಗತಿಗೆ ಎರಡು ಪ್ರಮುಖ ಬಿಕ್ಕಟ್ಟುಗಳು ಕಾರಣವಾಗಿವೆ ಎಂದು ಬಳ್ಳಾರಿಯ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ, ಚಿಂತಕ ಡಾ. ಹೊನ್ನೂರಾಲಿ ಐ ಅವರು ಅಭಿಪ್ರಾಯ ಪಟ್ಟರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ದಲಿತ ಸಾಹಿತ್ಯ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ಮತ್ತು ಸಮಕಾಲೀನ ದಲಿತರು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟು ಹಾಗೂ ಜಾಗತೀಕರಣ ದಲಿತರ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಉದಾಹರಣೆ ಸಮೇತ ವಿಶ್ಲೇಷಿಸಿದರು.
ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟುಗಳ ಪರಿಹಾರಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ದಲಿತರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಧರ್ಮ ನಿರಪೇಕ್ಷ ಕಟ್ಟುವಲ್ಲಿ ವಿಫಲರಾಗಿದ್ದೇವೆ ಎಂದು ವಿಷಾಧಿಸಿದ ಡಾ.‌ಹೊನ್ನೂರಾಲಿ ಅವರು ಜಾಗತೀಕರಣ ಹಾಗೂ ಪಟ್ಟಭದ್ರರ ಹಿತಾಸಕ್ತಿಯಿಂದಾಗಿ ದಲಿತರ ಮೀಸಲಾತಿ ಹಾಗೂ ಸರಕಾರಿ ಉದ್ಯೋಗಕ್ಕೆ ಧಕ್ಕೆ ಬಂದಿದೆ ಎಂದರು.
ಖಾಸಗಿ ಸಂಸ್ಥೆಗಳಲ್ಲಿ‌ ಮೇಲ್ವರ್ಗದ ಬಿಗಿ ಹಿಡಿತ ಹೊಂದಿದ್ದು ತಳ‌, ಶೋಷಿತ ಸಮುದಾಯಗಳಿಗೆ ಉದ್ಯೋಗಗಳು ‌ಮರೀಚಿಕೆಯಾಗುತ್ತಿವೆ. ಈ ನಿಟ್ಟಿನಲ್ಲಿ ಸಮುದಾಯ ಎಚ್ಚೆತ್ತು ಕೊಳ್ಳಬೇಕಿದೆ ಎಂದು ತಿಳಿಸಿದರು.
ದಲಿತ ಯುವಜನತೆ ತಮ್ಮದಲ್ಲದ ಸಂಸ್ಕೃತಿಯ  ಭಾಗವಾಗುತ್ತಿರುವುದು  ಕೂಡಾ ಹಲವು ಸಮಸ್ಯೆಗಳ ಹುಟ್ಟಿಗೆ ಕಾರಣ ಎಂದು ಹೇಳಿದರು.
ದಲಿತ ಸಾಹಿತ್ಯ ಪರಿಷತ್ತು ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವ ಮೂಲಕ ಡಾ. ಅಂಬೇಡ್ಕರ್, ಜ್ಯೋತಿಬಾಪುಲೆ, ಪೆರಿಯಾರ್, ಡಾ.‌ಜಗಜೀವನರಾಮ್ ಅವರ ಚಿಂತನೆಗಳನ್ನು ಯುವಜನತೆಯ ಮನಸುಗಳಲ್ಲಿ ಬಿತ್ತಬೇಕು ಎಂದು ಸಲಹೆ‌ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ‌ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.‌ಹೆಚ್. ರಾಮಕೃಷ್ಣ ಅವರು ಮಾತನಾಡಿ,  ಯುವ ಸಮುದಾಯದಲ್ಲಿ ವೈಚಾರಿಕತೆ ಮೂಡಿಸುವ ಜವಾಬ್ದಾರಿ ದಸಾಪ ನೂತನ‌ ಅಧ್ಯಕ್ಷ ನಾಗಪ್ಪ ಮತ್ತು ಪದಾಧಿಕಾರಿಗಳ ಮೇಲಿದೆ. ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ‌ಗಳನ್ನು ಆಯೋಜಿಸಿ ಅಂಧ ಶ್ರದ್ಧೆ, ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸ ಬೇಕು ಎಂದ ಅವರು ದಸಾಪ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸದಾ ತಾವು ಸಹಕಾರ ನೀಡುವುದಾಗಿ ತಿಳಿಸಿದರು.


ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದ ತೆಕ್ಕಲಕೋಟೆ ಸರಕಾರಿ ಪ್ರಥಮನದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹೆಚ್ ಮೋಕ ಅವರು, ಬಹು‌ಸಂಸ್ಕೃತಿಯ ಈ ನೆಲ ನಿಂತ ‌ನೀರಾಗಬಾರದು. ಈ ನಿಟ್ಟಿನಲ್ಲಿ‌ ದಸಾಪ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಬೇಕು. ಪರಿಷತ್ತಿನಲ್ಲಿ
ಪ್ರಗತಿಪರ ದಲಿತೇತರಿಗೂ ಸದಸ್ಯತ್ವ ನೀಡಬೇಕು ಎಂದು ಕೋರಿದರು.


ವಿಎಸ್ ಕೆ ವಿವಿಯ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ರಾಜೇಂದ್ರ ಪ್ರಸಾದ್, ಡಾ. ಕುಮಾರ್, ಡಾ. ವಿಜಯಕುಮಾರ್, ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ. ಶಾಂತಲಾ,  ಕರ್ನಾಟಕ ರಾಜ್ಯ ಸರಕಾರಿ ಪ್ರಥಮ‌ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ಡಾ. ಟಿ. ದುರುಗಪ್ಪ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ  ಸಹ ಪ್ರಾಧ್ಯಾಪಕ ಡಾ. ಶಶಿಕಾಂತ ಬಿಲ್ಲವ,  ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಕಾಂತ ಕೆ ಎಂ, ಗ್ರಂಥಪಾಲಕ ಕಿರಣ್ ಸುಹಾಸ್,
ಉಪನ್ಯಾಸಕರುಗಳಾದ ಡಾ. ರಾಮಯ್ಯ, ಡಾ. ಕೆ. ಬಸಪ್ಪ, ಡಿ.‌ಸಿದ್ದೇಶ್, ಟಿ.ರುದ್ರಮುನಿ, ರಾಮಣ್ಣ, ಮುತ್ತಪ್ಪ, ಡಾ.‌ಹನುಮೇಶ್ ಜೋಳದರಾಶಿ,
ಎಂ.‌ರಫಿ, ಮಾರೆಪ್ಪ ಎಕೆ, ಗುರುರಾಜ್, ಶರಣಪ್ಪ,  ಡಾ.‌ಬಸವರಾಜ ಟಿ, ಡಾ.‌ಬೆಣಕಲ್ಲು ಗಂಗಾಧರ, ಮುದುಕಪ್ಪ ಕೆ, ಹೊನ್ನೂರು ಸಾಬ್, ಮೊಹಮ್ಮದ್ ಗೌಸ್, ರಾಮಣ್ಣ,  ಡಾ.ಜ್ಯೋತಿಲಿಂಗ ಸೇರಿದಂತೆ ಕಾಲೇಜಿನ
ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.


ಸನ್ಮಾನ: ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧ್ಯಕ್ಷ ನಾಗಪ್ಪ ಅವರನ್ನು ವಿವಿಧ ಸಂಘ ಸಂಸ್ಥೆಗಳು‌ ಹಾಗೂ ಗಣ್ಯ ಅತಿಥಿಗಳನ್ನು ದಸಾಪ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನ ಇತಿಹಾಸ ಉಪನ್ಯಾಸಕ ರಾಮು ಎ ಕೆ ಸ್ವಾಗತಿಸಿದರು.  ದಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಸಾಪ ನೂತನ ಜಿಲ್ಲಾಧ್ಯಕ್ಷ ನಾಗಪ್ಪ ಬಿ ಇ ವಂದಿಸಿದರು. ವಿದ್ಯಾರ್ಥಿನಿ ಶಾಂತಿ ಪ್ರಾರ್ಥಿಸಿದರು.
ಕನ್ನಡ ವಿಭಾಗದ ಉಪನ್ಯಾಸಕ ಆರ್. ರುದ್ರಮುನಿ ನಿರೂಪಿಸಿದರು.

The post ಕುರುಗೋಡು ಸರಕಾರಿ ಡಿಗ್ರಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ: ದಲಿತರ ಪ್ರಗತಿಗೆ ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟು ಹಾಗೂ ಜಾಗತೀಕರಣ ಕಾರಣ -ಚಿಂತಕ ಡಾ.‌ಹೊನ್ನೂರಾಲಿ ಐ ಅಭಿಮತ appeared first on Karnataka Kahale.

]]>
ಕೋಳೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಸಿ. ಗೋವಿಂದಪ್ಪ ಉಪಾಧ್ಯಕ್ಷರಾಗಿ ಕೆ.ಎಂ ಸರಸ್ವತಿ ಅವಿರೋಧ ಆಯ್ಕೆ https://www.karnatakakahale.com/news/12866 Mon, 24 Jul 2023 11:32:34 +0000 https://www.karnatakakahale.com/?p=12866 ಕುರುಗೋಡು, ಜು. 24: ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸಿ. ಗೋವಿಂದಪ್ಪ ಉಪಾದ್ಯಕ್ಷರಾಗಿ ಕೆ.‌ಎಂ ಸರಸ್ವತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಗ್ರಾಮದ ಗ್ರಾಪಂ‌ ಕಚೇರಿಯ ಸಭಾಂಗಣದಲ್ಲಿ ‌ಜರುಗಿದ ಚುನಾವಣೆಯಲ್ಲಿ ಹಾಜರಿದ್ದ ಸದಸ್ಯರು, ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ-…

The post ಕೋಳೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಸಿ. ಗೋವಿಂದಪ್ಪ ಉಪಾಧ್ಯಕ್ಷರಾಗಿ ಕೆ.ಎಂ ಸರಸ್ವತಿ ಅವಿರೋಧ ಆಯ್ಕೆ appeared first on Karnataka Kahale.

]]>

ಕುರುಗೋಡು, ಜು. 24: ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸಿ. ಗೋವಿಂದಪ್ಪ ಉಪಾದ್ಯಕ್ಷರಾಗಿ ಕೆ.‌ಎಂ ಸರಸ್ವತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಗ್ರಾಮದ ಗ್ರಾಪಂ‌ ಕಚೇರಿಯ ಸಭಾಂಗಣದಲ್ಲಿ ‌ಜರುಗಿದ ಚುನಾವಣೆಯಲ್ಲಿ ಹಾಜರಿದ್ದ ಸದಸ್ಯರು, ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಚುನಾವಣಾಧಿಕಾರಿಯಾಗಿ ಬಳ್ಳಾರಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಪಿ.ಟಿ ಅವರು ಕಾರ್ಯನಿರ್ವಹಿಸಿದರು.
ಗ್ರಾಪಂ ಪಿಡಿಓ ಜುಬೇದ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಗ್ರಾಮದ ಗಣ್ಯರು, ಸದಸ್ಯರು ನೂತನ ಅಧ್ಯಕ್ಷ ಸಿ. ಗೋವಿಂದಪ್ಪ ಮತ್ತು ಉಪಾಧ್ಯಕ್ಷೆ ಕೆ ಎಂ ಸರಸ್ವತಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ನೂತನ ಅಧ್ಯಕ್ಷ ಸಿ. ಗೋವಿಂದಪ್ಪ ಮತ್ತು ಕೆ.ಎಂ ಸರಸ್ವತಿ ಅವರು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಜಿಲ್ಲೆಯ ಸಚಿವರು, ಕುರುಗೋಡು ಶಾಸಕರು,  ಎಲ್ಲಾ ಗ್ರಾಪಂ‌ ಸದಸ್ಯರು, ಊರಿನ ಮುಖಂಡರ ಮಾರ್ಗದರ್ಶನ ಪಡೆದು ರಾಜ್ಯ, ಕೇಂದ್ರದ ಸರಕಾರದ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಕೋಳೂರು ಗ್ರಾಪಂ ಯನ್ನು ಮಾದರಿ ಪಂಚಾಯಿತಿಯನ್ನಾಗಿ ರೂಪಿಸಲು ಪ್ರಯತ್ನಿಸುತ್ತೇವೆ ಎಂದರು.
—–

The post ಕೋಳೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಸಿ. ಗೋವಿಂದಪ್ಪ ಉಪಾಧ್ಯಕ್ಷರಾಗಿ ಕೆ.ಎಂ ಸರಸ್ವತಿ ಅವಿರೋಧ ಆಯ್ಕೆ appeared first on Karnataka Kahale.

]]>
ಕುರುಗೋಡು ನೂತನ ತಹಶೀಲ್ದಾರ್ ಎಂ. ಗುರುರಾಜ https://www.karnatakakahale.com/news/11130 Tue, 31 Jan 2023 10:24:08 +0000 https://www.karnatakakahale.com/?p=11130 ಬಳ್ಳಾರಿ, ಜ.31: ಕುಷ್ಟಗಿ ತಹಶೀಲ್ದಾರರಾಗಿದ್ದ ಎಂ. ಗುರುರಾಜ್ ಅವರನ್ನು ರಾಜ್ಯ ಸರಕಾರ ಜಿಲ್ಲೆಯ ಕುರುಗೋಡು ತಹಶೀಲ್ದಾರನ್ನಾಗಿ ವರ್ಗಾಯಿಸಿದೆ. 2023 ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕುಷ್ಟಗಿ ಸೇರಿದಂತೆ 70ಕ್ಕೂ…

The post ಕುರುಗೋಡು ನೂತನ ತಹಶೀಲ್ದಾರ್ ಎಂ. ಗುರುರಾಜ appeared first on Karnataka Kahale.

]]>

ಬಳ್ಳಾರಿ, ಜ.31: ಕುಷ್ಟಗಿ ತಹಶೀಲ್ದಾರರಾಗಿದ್ದ ಎಂ. ಗುರುರಾಜ್ ಅವರನ್ನು ರಾಜ್ಯ ಸರಕಾರ ಜಿಲ್ಲೆಯ ಕುರುಗೋಡು ತಹಶೀಲ್ದಾರನ್ನಾಗಿ ವರ್ಗಾಯಿಸಿದೆ.
2023 ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ
ಕುಷ್ಟಗಿ ಸೇರಿದಂತೆ 70ಕ್ಕೂ ಹೆಚ್ಚು ತಹಶೀಲ್ದಾರರನ್ನು ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಜಿ ಎನ್ ಸುಶೀಲ ಅವರು ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.


ಈವರೆಗೆ ಕುರುಗೋಡು ತಹಶಿಲ್ದಾರರಾಗಿದ್ದ ಆರ್. ರಾಘವೇಂದ್ರ ರಾವ್ ಅವರು ಕುಷ್ಟಗಿಗೆ ವರ್ಗವಾಗಿದ್ದಾರೆ.
*****

The post ಕುರುಗೋಡು ನೂತನ ತಹಶೀಲ್ದಾರ್ ಎಂ. ಗುರುರಾಜ appeared first on Karnataka Kahale.

]]>
ಕುರುಗೋಡಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸಿಪಿಎಂ‌ ಪ್ರತಿಭಟನೆ https://www.karnatakakahale.com/news/4676 Fri, 11 Jun 2021 08:39:12 +0000 https://www.karnatakakahale.com/?p=4676 ಕುರುಗೋಡು: ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಸಿಪಿಎಂ ತಾಲೂಕು ಘಟಕ ಪ್ರತಿಭಟಿಸಿತು. ಸಿಪಿಎಂ ಪಕ್ಷದ ಮುಖಂಡೆ ಹೆಚ್ ಯಂಕಮ್ಮ‌ಅವರು ಮಾತನಾಡಿ ಪೆಟ್ರೋಲ್ ಬೆಲೆ ನೂರರ ಗಡಿದಾಟಿದೆ ಗ್ಯಾಸ್ ಬೆಲೆ 900 ರೂಪಾಯಿ ಆಗಿದ್ದು, ಜನಸಾಮಾನ್ಯರ ಹೊಟ್ಟೆಯ ಮೇಲೆ…

The post ಕುರುಗೋಡಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸಿಪಿಎಂ‌ ಪ್ರತಿಭಟನೆ appeared first on Karnataka Kahale.

]]>
ಕುರುಗೋಡು: ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಸಿಪಿಎಂ ತಾಲೂಕು ಘಟಕ ಪ್ರತಿಭಟಿಸಿತು.
ಸಿಪಿಎಂ ಪಕ್ಷದ ಮುಖಂಡೆ ಹೆಚ್ ಯಂಕಮ್ಮ‌ಅವರು ಮಾತನಾಡಿ ಪೆಟ್ರೋಲ್ ಬೆಲೆ ನೂರರ ಗಡಿದಾಟಿದೆ ಗ್ಯಾಸ್ ಬೆಲೆ 900 ರೂಪಾಯಿ ಆಗಿದ್ದು, ಜನಸಾಮಾನ್ಯರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ ಕೂಡಲೇ ಪೆಟ್ರೋಲ್ ಡೀಸೆಲ್ ಗ್ಯಾಸ್ ಸಿಲೆಂಡರ್ ಬೆಲೆಗಳನ್ನು ಇಳಿಸಬೇಕು ಎಂದು ಸಿಪಿಎಂ ಪಕ್ಷದ ನೇತೃತ್ವದಲ್ಲಿ ಒತ್ತಾಯಿಸುತ್ತದೆ ಎಂದರು.
. ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಮುಖಂಡರಾದ ವಿಎಸ್ ಶಿವಶಂಕರ್, ಹುಲೆಪ್ಪ ಹೆಚ್, ಮಲ್ಲಿ ಮಮ್ಮದ್ ಲಕ್ಷ್ಮಣ ಭಾಗವಹಿಸಿದ್ದರು.
*****

The post ಕುರುಗೋಡಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸಿಪಿಎಂ‌ ಪ್ರತಿಭಟನೆ appeared first on Karnataka Kahale.

]]>
ಸಿರಿಗೇರಿ ಜೈಭೀಮ್ ಬಾಯ್ಸ್ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿ ಯಶಸ್ವಿ https://www.karnatakakahale.com/news/2207 Sat, 26 Dec 2020 13:25:10 +0000 https://www.karnatakakahale.com/?p=2207 ಕುರುಗೋಡು: ಸಮೀಪದ ಸಿರಿಗೇರಿ ಗ್ರಾಮದಲ್ಲಿ ಜೈ ಭೀಮ್ ಬಾಯ್ಸ್ ವತಿಯಿಂದ ಬಾಲಕಿಯರ ಪ್ರೌಢಶಾಲೆ ಪಕ್ಕದಲ್ಲಿ ರಾತ್ರಿ ಕಬ್ಬಡಿ ಪಂದ್ಯಾವಳಿ ನೆಡಸಲಾಯಿತು. ಪಂದ್ಯಾವಳಿಯಲ್ಲಿ 26 ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ 10ಸಾವಿರ ಒಂದು ಕಪ್, ದ್ವಿತೀಯ ಬಹುಮಾನ 5 ಸಾವಿರ ಒಂದು ಕಪ್…

The post ಸಿರಿಗೇರಿ ಜೈಭೀಮ್ ಬಾಯ್ಸ್ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿ ಯಶಸ್ವಿ appeared first on Karnataka Kahale.

]]>
ಕುರುಗೋಡು: ಸಮೀಪದ ಸಿರಿಗೇರಿ ಗ್ರಾಮದಲ್ಲಿ ಜೈ ಭೀಮ್ ಬಾಯ್ಸ್ ವತಿಯಿಂದ ಬಾಲಕಿಯರ ಪ್ರೌಢಶಾಲೆ ಪಕ್ಕದಲ್ಲಿ ರಾತ್ರಿ ಕಬ್ಬಡಿ ಪಂದ್ಯಾವಳಿ ನೆಡಸಲಾಯಿತು.
ಪಂದ್ಯಾವಳಿಯಲ್ಲಿ 26 ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ 10ಸಾವಿರ ಒಂದು ಕಪ್, ದ್ವಿತೀಯ ಬಹುಮಾನ 5 ಸಾವಿರ ಒಂದು ಕಪ್ ನೀಡಲಾಯಿತು,
ಪ್ರಥಮ ಸ್ಥಾನ ತೆಕ್ಕಲಕೋಟೆ ಸವೆನ್ ಸ್ಟಾರ್ ತಂಡ ಗಳಿಸಿತು. ದ್ವಿತೀಯ ಸ್ಥಾನ ಶಿಂದಿಗೇರಿ ತಂಡ ಪಡೆಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಎಸ್. ರಾಮಚಂದ್ರ ಪ್ಪ, ಬಿಚ್ಚುಗತ್ತಿ ಮಲ್ಲಯ್ಯ, ಎ. ಕೆ.ಗಾದಿಲಿಂಗಪ್ಪ, ಕೊಳ್ಳಿ ಪಾವಡಿ ನಾಯಕ, ಹೆಚ್ ಭೀಮೇಶ್, ಮಲ್ಲಿಕಾರ್ಜುನ, ಬಿ ಈರೇಶ್, ನಾಗರಾಜ ,ನೆನಕ್ಕಿ ವಿರುಪಾಕ್ಷಿ, ಲಕ್ಷ್ಮಣ ಭಂಡಾರಿ,
ಶ್ರೀರಾಮ, ಬಿಚ್ಚು ಗತ್ತಿ ಹನುಮಂತ, ಹಳ್ಳಿ ಮರದ ಹನುಮಂತ,ರವಿ, ಹಾಗೂ ಜೈ ಭೀಮ್ ಬಾಯ್ಸ್ ಬಳಗದ ಯುವಕರು, ಕ್ರೀಡಾ ಅಭಿಮಾನಿಗಳು ಇದ್ದರು.

The post ಸಿರಿಗೇರಿ ಜೈಭೀಮ್ ಬಾಯ್ಸ್ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿ ಯಶಸ್ವಿ appeared first on Karnataka Kahale.

]]>
ಗ್ರಾಪಂ ಚುನಾವಣೆ: ಮಣ್ಣೂರು ಗ್ರಾಮದಲ್ಲಿ ಮಾಜಿ ಶಾಸಕ ಬಿ ಎಂ‌ ನಾಗರಾಜ್ ಮತಯಾಚನೆ https://www.karnatakakahale.com/news/2088 Mon, 21 Dec 2020 05:57:42 +0000 https://www.karnatakakahale.com/?p=2088 ಕುರುಗೋಡು: ಸಿರುಗುಪ್ಪ ಕ್ಷೇತ್ರದ ಮಾಜಿ ಶಾಸಕ ಬಿ ಎಂ ನಾಗರಾಜ್ ಅವರು ಮಣ್ಣೂರು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರ ಜತೆ ಮಾತನಾಡಿದ ಅವರು,…

The post ಗ್ರಾಪಂ ಚುನಾವಣೆ: ಮಣ್ಣೂರು ಗ್ರಾಮದಲ್ಲಿ ಮಾಜಿ ಶಾಸಕ ಬಿ ಎಂ‌ ನಾಗರಾಜ್ ಮತಯಾಚನೆ appeared first on Karnataka Kahale.

]]>
ಕುರುಗೋಡು: ಸಿರುಗುಪ್ಪ ಕ್ಷೇತ್ರದ ಮಾಜಿ ಶಾಸಕ ಬಿ ಎಂ ನಾಗರಾಜ್ ಅವರು ಮಣ್ಣೂರು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರ ಜತೆ ಮಾತನಾಡಿದ ಅವರು, ಸಿರುಗುಪ್ಪ ವಿಧಾನ‌ಸಭಾ ಕ್ಷೇತ್ರದ ಎಲ್ಲಾ 26 ಗ್ರಾಪಂಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳು ಜಯಶೀಲರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಸೋಮಲಿಂಗಪ್ಪ ಅವರು ಮೂರು ಬಾರಿ ಶಾಸಕರಾಗಿದ್ದಾರೆ. ಮೂರು ಬಾರಿ ಜನತೆ ಆಶೀರ್ವಾದ ಮಾಡಿದ್ದರೂ ಹೇಳಿ‌ಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಆರೋಪಿಸಿದರು.
ಅಭಿವೃದ್ಧಿ ಮಾಡಿದ್ದರೆ ಸಾಬೀತು ಪಡಿಸಲಿ. ಈ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಶಾಸಕರು ಹಾಲಿ ಶಾಸಕರಿಗೆ ಸವಾಲು ಹಾಕಿದರು. , ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೆ ಯಶಸ್ಸು ಕಾಣುತ್ತಿದೆ ಎಂದರೆ ಇದಕ್ಕೆ ಕಾಂಗ್ರೆಸ್ ಸರಕಾರ ಕಾರಣ ಎಂದರು.
ಬಿಜೆಪಿ ಸರಕಾರ ಬಂದ ಬಳಿಕ ರಾಜ್ಯದಲ್ಲಿ ಕೋಮು ಸಾಮರಸ್ಯ ಹಾಳು ಮಾಡುವಂತಹ ಘಟನೆಗಳೇ ಜರುಗಿವೆ ಎಂದು ದೂರಿದರು.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಮತಕ್ಕೋಸ್ಕರ ಬಣ್ಣ ಬಣ್ಣದ ಮಾತುಗಳನ್ನು ಹೇಳಿ ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.
2008 ರಲ್ಲಿ ಹಿರಿಯ ಮುತ್ಸದ್ಧಿ ಶಂಕರ ರೆಡ್ಡಿ ಅವರು ನನ್ನನ್ನು ರಾಜಕೀಯಕ್ಕೆ ಕರೆತಂದರು. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷ ದ ನಿಷ್ಟಾವಂತ ಕಾರ್ಯಕರ್ತನಾಗಿ ಹಾಗೂ ಜನರ ಸೇವೆ ಮಾಡುವ ಭಾಗ್ಯ ಸಿಕ್ಕಿದೆ ಎಂದು ತಿಳಿಸಿದರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಣ್ಣ ಪುಟ್ಟ ತಪ್ಪುಗಳು ನಡೆದು ತಮಗೆ ಸ್ಪರ್ಧೆ ಮಾಡಲು ಅವಕಾಶ ಸಿಗಲಿಲ್ಲ ಆದರೆ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷದ ಹೈಕಮಾಂಡ್ ತಮಗೆ ಮಣೆಹಾಕುವ ವಿಶ್ವಾಸ ಇದೆ.
ಆದರೂ ಪಕ್ಷದ ನಿಯಮಗಳಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳಾದ ಕೋಟೆಹಾಳ್ ಈರಮ್ಮ, ಗಡಿಗಲ್ ಭೀಮಮ್ಮ, ಎನ್. ಬಸವರಾಜ್, ಎಚ್. ಬಸವ, ನೀಲಮ್ಮ, ಛಲವಾದಿ ಮುತ್ತಮ್ಮ, ತಾಪಂ ಸದಸ್ಯ ಸಣ್ಣ ಕರಿಯಪ್ಪ, ಮಾಜಿ ಗ್ರಾಪಂ ಉಪಾಧ್ಯಕ್ಷ ಗಡಿಗಲ್ ಕರಿಯಪ್ಪ, ಗೇಣಿಕೆಹಾಳ್ ಹನುಮಂತ, ಟಿ. ಅಂಜಿನಪ್ಪ, ತಿರುಪತಿ, ಮಾರೆಣ್ಣ, ಬೈರಿ ಗಂಗಯ್ಯ, ಮಳೆ ಈರಣ್ಣ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

The post ಗ್ರಾಪಂ ಚುನಾವಣೆ: ಮಣ್ಣೂರು ಗ್ರಾಮದಲ್ಲಿ ಮಾಜಿ ಶಾಸಕ ಬಿ ಎಂ‌ ನಾಗರಾಜ್ ಮತಯಾಚನೆ appeared first on Karnataka Kahale.

]]>