ಕುರುಗೋಡಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸಿಪಿಎಂ‌ ಪ್ರತಿಭಟನೆ

ಕುರುಗೋಡು: ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಸಿಪಿಎಂ ತಾಲೂಕು ಘಟಕ ಪ್ರತಿಭಟಿಸಿತು.
ಸಿಪಿಎಂ ಪಕ್ಷದ ಮುಖಂಡೆ ಹೆಚ್ ಯಂಕಮ್ಮ‌ಅವರು ಮಾತನಾಡಿ ಪೆಟ್ರೋಲ್ ಬೆಲೆ ನೂರರ ಗಡಿದಾಟಿದೆ ಗ್ಯಾಸ್ ಬೆಲೆ 900 ರೂಪಾಯಿ ಆಗಿದ್ದು, ಜನಸಾಮಾನ್ಯರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ ಕೂಡಲೇ ಪೆಟ್ರೋಲ್ ಡೀಸೆಲ್ ಗ್ಯಾಸ್ ಸಿಲೆಂಡರ್ ಬೆಲೆಗಳನ್ನು ಇಳಿಸಬೇಕು ಎಂದು ಸಿಪಿಎಂ ಪಕ್ಷದ ನೇತೃತ್ವದಲ್ಲಿ ಒತ್ತಾಯಿಸುತ್ತದೆ ಎಂದರು.
. ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಮುಖಂಡರಾದ ವಿಎಸ್ ಶಿವಶಂಕರ್, ಹುಲೆಪ್ಪ ಹೆಚ್, ಮಲ್ಲಿ ಮಮ್ಮದ್ ಲಕ್ಷ್ಮಣ ಭಾಗವಹಿಸಿದ್ದರು.
*****

Leave a Reply

Your email address will not be published. Required fields are marked *