Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಹಗರಿಬೊಮ್ಮನಹಳ್ಳಿ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Sun, 21 Sep 2025 12:28:49 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಹಗರಿಬೊಮ್ಮನಹಳ್ಳಿ – Karnataka Kahale https://www.karnatakakahale.com 32 32 ಹೊಸಪೇಟೆಯಲ್ಲಿ ಸೆ.22ರಂದು ಹಬೊ ಹಳ್ಳಿ ಜೆಸ್ಕಾಂ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ https://www.karnatakakahale.com/news/20725 Sun, 21 Sep 2025 12:24:42 +0000 https://www.karnatakakahale.com/?p=20725 ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿರುವ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಜೆಸ್ಕಾಂ) ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಚ್.ಟಿ ಮತ್ತು ಇ.ಎಚ್.ಟಿ ಗ್ರಾಹಕರ ಕುಂದುಕೊರತೆ ಸಭೆ  ಸೆ. 22ರಂದು ಸೋಮವಾರ ಬೆಳಿಗ್ಗೆ 11ಗಂಟೆಗೆ ಹೊಸಪೇಟೆಯ ಜೆಸ್ಕಾಂನ ಕಾರ್ಯ ಮತ್ತು ಪಾಲನೆ ವಿಭಾಗದ…

The post ಹೊಸಪೇಟೆಯಲ್ಲಿ ಸೆ.22ರಂದು ಹಬೊ ಹಳ್ಳಿ ಜೆಸ್ಕಾಂ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ appeared first on Karnataka Kahale.

]]>

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿರುವ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಜೆಸ್ಕಾಂ) ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಚ್.ಟಿ ಮತ್ತು ಇ.ಎಚ್.ಟಿ ಗ್ರಾಹಕರ ಕುಂದುಕೊರತೆ ಸಭೆ  ಸೆ. 22ರಂದು ಸೋಮವಾರ ಬೆಳಿಗ್ಗೆ 11ಗಂಟೆಗೆ ಹೊಸಪೇಟೆಯ ಜೆಸ್ಕಾಂನ ಕಾರ್ಯ ಮತ್ತು ಪಾಲನೆ ವಿಭಾಗದ ನಗರ ವಿಭಾಗ ಕಚೇರಿಯಲ್ಲಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳ್ಳಾರಿಯ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಸೂಪರಿಟೆಂಡೆಂಟ್ ಎಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಗ್ರಾಹಕರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಿ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.
—–

The post ಹೊಸಪೇಟೆಯಲ್ಲಿ ಸೆ.22ರಂದು ಹಬೊ ಹಳ್ಳಿ ಜೆಸ್ಕಾಂ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ appeared first on Karnataka Kahale.

]]>
ಹಗರಿಬೊಮ್ಮನಹಳ್ಳಿಯಲ್ಲಿ‌ ನಾಳೆ (ಜು.18) ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ   https://www.karnatakakahale.com/news/20202 Fri, 18 Jul 2025 05:52:52 +0000 https://www.karnatakakahale.com/?p=20202 ಹಗರಿಬೊಮ್ಮನಹಳ್ಳಿ, ಜು.18:  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಜು.19 ರಂದು ಶನಿವಾರ ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಾರ್ಯನಿರತ  ಪತಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಉಮಾಪತಿ ಶೆಟ್ಟರ್ ಅವರು ತಿಳಿಸಿದ್ದಾರೆ. …

The post ಹಗರಿಬೊಮ್ಮನಹಳ್ಳಿಯಲ್ಲಿ‌ ನಾಳೆ (ಜು.18) ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ   appeared first on Karnataka Kahale.

]]>

ಹಗರಿಬೊಮ್ಮನಹಳ್ಳಿ, ಜು.18:  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಜು.19 ರಂದು ಶನಿವಾರ ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಾರ್ಯನಿರತ  ಪತಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಉಮಾಪತಿ ಶೆಟ್ಟರ್ ಅವರು ತಿಳಿಸಿದ್ದಾರೆ.                ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಕೆ. ನೇಮಿರಾಜ್ ನಾಯ್ಕ್ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ವಿಜಯನಗರ ಜಿಲ್ಲೆಯ ಪತ್ರಕರ್ತರ ಸಂಘದ ಅಧ್ಯಕ್ಷ ಪಿ. ಸತ್ಯನಾರಾಯಣ ಹಾಗೂ  ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ  ಕೆ. ನಿಂಗಜ್ಜ ಪಾಲ್ಗೊಳ್ಳಲಿದ್ದಾರೆ.


ಕಾರ್ಯಕ್ರಮದ ಅಂಗವಾಗಿ ವಿಶೇಷ ಉಪನ್ಯಾಸವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ  ಹಿರಿಯ ಪ್ರಾಧ್ಯಾಪಕ ಡಾ.‌ಎನ್. ಚಿನ್ನಸ್ವಾಮಿ ಸೋಸಲೆ ಅವರು ನೀಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಕವಿತಾ.ಆರ್, ತಾ ಪಂ ಇ ಒ ಡಾ. ಪರಮೇಶ್ವರಪ್ಪ,, ಪುರಸಭೆಯ ಮುಖ್ಯಾಧಿಕಾರಿ ಎಂ. ಕೆ. ಮುಗಳಿ , ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್,  ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಲಕ್ಷ್ಮಣ್, ಕಾನಿಪ ರಾಜ್ಯ ಸಮಿತಿ ಸದಸ್ಯ ವೆಂಕೋಬ ನಾಯಕ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತಾಲೂಕಿನ ಗ್ರಾ ಪಂ ಯ ಜವಾನರು ಹಾಗೂ ಸ್ವಚ್ಛತಾ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಮಾಪತಿ ಶೆಟ್ಟರ್ ತಿಳಿಸಿದರು.

The post ಹಗರಿಬೊಮ್ಮನಹಳ್ಳಿಯಲ್ಲಿ‌ ನಾಳೆ (ಜು.18) ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ   appeared first on Karnataka Kahale.

]]>
ಪಕ್ಷಿ ಲೋಕದ ದ್ರೌಪದಿಯರು!? ಚಿತ್ರ-ಬರಹ: ವಿಜಯ್ ಇಟ್ಟಿಗಿ, ಹಗರಿಬೊಮ್ಮನಹಳ್ಳಿ https://www.karnatakakahale.com/news/18806 Fri, 28 Feb 2025 14:22:52 +0000 https://www.karnatakakahale.com/?p=18806 ಪಕ್ಷಿ ಲೋಕದ ದ್ರೌಪದಿಯರು!? “. Pesentail jacana” fight ಸ್ವಲ್ಪ ತಾಳಿ ಇದಕ್ಕೆ ಬೇರೆಯ ಅರ್ಥಕೊಡದೆ ಒದಿಕೊಳ್ಳಿ. ಏಕಪತ್ನಿ ವೃತಸ್ಥ ಎಂದ ತಕ್ಷಣವೇ ನಮಗೆ ಮರ್ಯಾದ ಪುರುಷೋತ್ತಮ ನೆನಪಾಗಯತ್ತಾನೆ ಅದೇ ರೀತಿಯಲ್ಲಿ ಹಲವಾರು ಗಂಡಂದಿರು ಅಂದ ತಕ್ಷಣವೇ ದ್ರೌಪದಿ ನೆನಪಾಗುತ್ತಾಳೆ…ಅದೇ ರೀತಿಯಲ್ಲಿ…

The post ಪಕ್ಷಿ ಲೋಕದ ದ್ರೌಪದಿಯರು!? ಚಿತ್ರ-ಬರಹ: ವಿಜಯ್ ಇಟ್ಟಿಗಿ, ಹಗರಿಬೊಮ್ಮನಹಳ್ಳಿ appeared first on Karnataka Kahale.

]]>
ಪಕ್ಷಿ ಲೋಕದ ದ್ರೌಪದಿಯರು!?

“. Pesentail jacana” fight
ಸ್ವಲ್ಪ ತಾಳಿ ಇದಕ್ಕೆ ಬೇರೆಯ ಅರ್ಥಕೊಡದೆ ಒದಿಕೊಳ್ಳಿ.
ಏಕಪತ್ನಿ ವೃತಸ್ಥ ಎಂದ ತಕ್ಷಣವೇ ನಮಗೆ ಮರ್ಯಾದ ಪುರುಷೋತ್ತಮ ನೆನಪಾಗಯತ್ತಾನೆ ಅದೇ ರೀತಿಯಲ್ಲಿ ಹಲವಾರು ಗಂಡಂದಿರು ಅಂದ ತಕ್ಷಣವೇ ದ್ರೌಪದಿ ನೆನಪಾಗುತ್ತಾಳೆ…ಅದೇ ರೀತಿಯಲ್ಲಿ ಪಕ್ಷಿಲೋಕದ ಹಲವಾರು ಗಂಡಂದಿರನ್ನು ಹೊಂದುವ “ಜಕಾನ” ಹಕ್ಕಿಗಳು!!!??

ಸಾಮಾನ್ಯವಾಗಿ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಅಮ್ಮ ಮಕ್ಕಳಿಗೆ ಕೈತುತ್ತು ತಿನ್ನಿಸುತ್ತಾ ಲಾಲನೆ, ಪೋಷಣೆ ಮಾಡುತ್ತಾ ತನ್ನ ಗಂಡ ಮತ್ತು ಮಕ್ಕಳಿಗಿಂತ ಹೆಚ್ಚಿನದೇನು ಇಲ್ಲ ಎಂದು ಬಾಳ್ವೆ ಮಾಡುತ್ತಿರುತ್ತವೆ. ಆದರೆ …ಸ್ವಲ್ಪ ನಿಲ್ಲಿ ಈ ಜಕಾನ ಹಕ್ಕಿಗಳ ಕಥೆನೆ ಬೇರೆ .

“ಜಕಾನ” ಹಕ್ಕಿಗಳು ಏಕ ಪತ್ನಿ ವ್ರತಸ್ಥ ಮರ್ಯಾದಾ ಪುರುಷೋತ್ತಮನಂತೆ ಬಾಳಲು ಗಂಡು ಹಕ್ಕಿಗಳು ಸಿದ್ದವಿರುತ್ತವೆ.ಆದರೆ ಇಲ್ಲಿ ಹೆಣ್ಣು ಹಕ್ಕಿಗಳು ಸುತಾರಂ ಒಪ್ಪದೆ ಒಂದೇ ಸಮಯದಲ್ಲಿ ಹಲವಾರು ಗಂಡಧಿರನ್ನು ಹೊಂದಿರುತ್ತವೆ having more than one husband at the same time.
ಹೆಣ್ಣು ಹಕ್ಕಿ ಒಂದು ಗಂಡಿನೊಡನೆ ಕೂಡಿ ಮೊಟ್ಟೆಯಿಟ್ಟರೆ ಆ ಗಂಡಿನೊಡನೆ ಇರುವ ಅದರ ಸಂಭಂದ ಇಲ್ಲಿಗೆ ಮುಗಿಯಿತು . ತನಗೂ ತನ್ನ ಮಕ್ಕಳಿಗೆ ಸಂಬಂಧವೆ ಇಲ್ಲದೆ, ಮತ್ತೊಂದು ಗಂಡನ್ನು ಆಕರ್ಷಣೆ ಮಾಡುತ್ತಾ ಅವುಗಳಿಗೆ ಕಾಳಹಾಕುತ್ತಾ ಮತ್ತೊಂದು ಗಂಡಿನ ಸಂಘ ಮಾಡಿ ಮೊಟ್ಟೆಯಿಟ್ಟು ಮತ್ತೊಂದು ಗಂಡನನ್ನು ಹುಡುಕಿಕೊಂಡು ಹೊರಟು ಬೀಡುತ್ತವೆ!!!

ಹೆಣ್ಣನ್ನು ಪಡೆಯಲು ಹಲವಾರು ಯುದ್ದಗಳೆ ನಡೆದಿರುವುದನ್ನು ಪುರಾಣ ಮತ್ತು ಚರಿತ್ರೆಯಲ್ಲಿ ಓದಿದ್ದೆವೆ…ಆದರೆ ದಿನನಿತ್ಯದ ಬದುಕಿನಲ್ಲಿ ಜಕಾನ ಹಕ್ಕಿಗಳು ಗಂಡಿಗಾಗಿ ಹೊಡೆದಾಡಿಕೊಂಡು ತನಗೆ ಬೇಕಾದ ಗಂಡನ್ನು ಪಡೆಯುವ ಗಟ್ಟಿಗಿತ್ತಿಯರಾಗಿದ್ದಾರೆ..

ನಮ್ಮ ಅಂಕಸಮುದ್ರ ಕೆರೆಯಲ್ಲಿ ಪಕ್ಷಿ ವಿಕ್ಷಣೇ ಮಾಡುತ್ತಾ ನಿಶ್ಚಲವಾಗಿ ಕುಳಿತಿದ್ದಾಗ ತೇಲುವಾ ಸಸ್ಯಗಳ ಮೇಲೆ ನಡೆದ ಜಗಳಕ್ಕೆ ನಾನು ಸಾಕ್ಷಿಯಾದಗಿನ ಚಿತ್ರ.
(ಛಾಯಾಚಿತ್ರ ಉತ್ತಮವಾಗಿ ಬರಲು ಸಹಕರಿಸಿದ ಮಹೇಶ್ ಪಾಲಣ್ಣನವರಿಗೆ ಧನ್ಯವಾದಗಳು)

-ವಿಜಯ್ ಇಟ್ಟಿಗಿ, ಹಗರಿ ಬೊಮ್ಮನಹಳ್ಳಿ

The post ಪಕ್ಷಿ ಲೋಕದ ದ್ರೌಪದಿಯರು!? ಚಿತ್ರ-ಬರಹ: ವಿಜಯ್ ಇಟ್ಟಿಗಿ, ಹಗರಿಬೊಮ್ಮನಹಳ್ಳಿ appeared first on Karnataka Kahale.

]]>
ವಿಜಯನಗರ ಎಸ್ಪಿ ಹರಿ ಬಾಬು ಅವರಿಂದ ‘ನಾವೆಲ್ಲಾ‌ ಭಾರತೀಯರು’ ಕ್ಯಾಲೆಂಡರ್ ಬಿಡುಗಡೆ https://www.karnatakakahale.com/news/18459 Sun, 19 Jan 2025 17:46:45 +0000 https://www.karnatakakahale.com/?p=18459 ವಿಜಯನಗರ (ಹೊಸಪೇಟೆ), ಜ.18: ಸಾಹಿತಿ, ಸಂಶೋಧಕ, ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ) ಅವರ ಜನಪ್ರಿಯ ‘ನಾವೆಲ್ಲಾ ಭಾರತೀಯರು’ ಘೋಷ ವಾಕ್ಯದ ನೂತನ ವರ್ಷದ ಕ್ಯಾಲೆಂಡರ್ ನ್ನು ವಿಜಯನಗರ ಎಸ್ಪಿ‌ ಬಿ ಎಲ್‌ ಹರಿಬಾಬು ಅವರು ಬಿಡುಗಡೆ ಗೊಳಿಸಿದರು. ಬೆಂಗಳೂರಿನ ಮನಂ ಅಭಿಮಾನಿ ಬಳಗ…

The post ವಿಜಯನಗರ ಎಸ್ಪಿ ಹರಿ ಬಾಬು ಅವರಿಂದ ‘ನಾವೆಲ್ಲಾ‌ ಭಾರತೀಯರು’ ಕ್ಯಾಲೆಂಡರ್ ಬಿಡುಗಡೆ appeared first on Karnataka Kahale.

]]>
ವಿಜಯನಗರ (ಹೊಸಪೇಟೆ), ಜ.18: ಸಾಹಿತಿ, ಸಂಶೋಧಕ, ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ) ಅವರ ಜನಪ್ರಿಯ ‘ನಾವೆಲ್ಲಾ ಭಾರತೀಯರು’ ಘೋಷ ವಾಕ್ಯದ ನೂತನ ವರ್ಷದ ಕ್ಯಾಲೆಂಡರ್ ನ್ನು ವಿಜಯನಗರ ಎಸ್ಪಿ‌ ಬಿ ಎಲ್‌ ಹರಿಬಾಬು ಅವರು ಬಿಡುಗಡೆ ಗೊಳಿಸಿದರು.

ಬೆಂಗಳೂರಿನ ಮನಂ ಅಭಿಮಾನಿ ಬಳಗ ಪ್ರಕಟಿಸಿರುವ ಆಕರ್ಷಕ ‘ನಾವೆಲ್ಲಾ ಭಾರತೀಯರು’ ಕ್ಯಾಲೆಂಡರ್ ನ್ನು ಈಚೆಗೆ ಎಸ್ಪಿ ಅವರು ಬಿಡುಗಡೆಗೊಳಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಂಪಾಪಟ್ಟಣ ಬುದ್ಧ ಬಸವ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಯೋಗೀಶ್ ಮನಂ, ಬಲಕುಂದಿ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
——

The post ವಿಜಯನಗರ ಎಸ್ಪಿ ಹರಿ ಬಾಬು ಅವರಿಂದ ‘ನಾವೆಲ್ಲಾ‌ ಭಾರತೀಯರು’ ಕ್ಯಾಲೆಂಡರ್ ಬಿಡುಗಡೆ appeared first on Karnataka Kahale.

]]>
ಹೊಸಪೇಟೆ: ಹಂಪಾಪಟ್ಟಣದ ಕೃಷ್ಣಮೂರ್ತಿ ಬೇವೂರ್ (ಕಿಟ್ಟಣ್ಣ) ಇನ್ನಿಲ್ಲ https://www.karnatakakahale.com/news/17562 Wed, 09 Oct 2024 16:02:40 +0000 https://www.karnatakakahale.com/?p=17562 ಹೊಸಪೇಟೆ, ಅ.9: ನಗರದ ಆಕಾಶವಾಣಿ ಬಳಿಯ ನಿವಾಸಿ ಕರ್ನಾಟಕ(ತುಂಗಭದ್ರಾ)ಗ್ರಾಮೀಣ ಬ್ಯಾಂಕಿನ ನಿವೃತ್ತ ಸಹಾಯಕ ವ್ಯವಸ್ಥಾಪಕ ಕೃಷ್ಣಮೂರ್ತಿ ಬೇವೂರ್(67) ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು,ಓರ್ವ ಪುತ್ರಿ, ಓರ್ವ ತಮ್ಮ, ಇಬ್ಬರು ತಂಗಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ‌…

The post ಹೊಸಪೇಟೆ: ಹಂಪಾಪಟ್ಟಣದ ಕೃಷ್ಣಮೂರ್ತಿ ಬೇವೂರ್ (ಕಿಟ್ಟಣ್ಣ) ಇನ್ನಿಲ್ಲ appeared first on Karnataka Kahale.

]]>

ಹೊಸಪೇಟೆ, ಅ.9: ನಗರದ ಆಕಾಶವಾಣಿ ಬಳಿಯ ನಿವಾಸಿ ಕರ್ನಾಟಕ(ತುಂಗಭದ್ರಾ)ಗ್ರಾಮೀಣ ಬ್ಯಾಂಕಿನ ನಿವೃತ್ತ ಸಹಾಯಕ ವ್ಯವಸ್ಥಾಪಕ ಕೃಷ್ಣಮೂರ್ತಿ ಬೇವೂರ್(67) ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು,ಓರ್ವ ಪುತ್ರಿ, ಓರ್ವ ತಮ್ಮ, ಇಬ್ಬರು ತಂಗಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ‌ ಬಂಧು‌ಮಿತ್ರರನ್ನು ಅಗಲಿದ್ದಾರೆ.
ಕ್ಯಾನ್ಸರ್ ಗೆದ್ದಿದ್ದ ಕೃಷ್ಣಮೂರ್ತಿ ಅವರು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಆರೋಗ್ಯದಿಂದ ಇದ್ದರು. ‌ವಯೋ‌ ಸಹಜ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ‌‌ ಅವರು ಇತ್ತೀಚಿಗೆ ಕಿರಿಯ ಪುತ್ರ ಕರ್ತವ್ಯ ನಿರ್ವಹಿಸುತ್ತಿದ್ದ ಎನ್‌ಎಮ್‌ಡಿಸಿ‌‌ ವಸತಿಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಮೂಲತಃ ಹಗರಿಬೊಮ್ಮನಹಳ್ಳಿ  ತಾಲೂಕಿನ‌ ಹಂಪಾಪಟ್ಟಣ ಗ್ರಾಮದವರಾದ ಕೃಷ್ಣಮೂರ್ತಿ ಅವರು ಅತ್ಯಂತ ಶ್ರಮದಿಂದ‌ ಬದುಕನ್ನು‌ ಕಟ್ಟಿಕೊಂಡಿದ್ದರು.
ಛಲದಿಂದ‌‌, ತಮ್ಮ ಹಿರಿಯ ಪುತ್ರ ಗಿರೀಶ್ ಬೇವೂರ್ ಅವರ ಜತೆ ಎಸ್ ಎಸ್‌ಎಲ್‌ಸಿ‌ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ಅಂದಿನ‌ ತುಂಗಭಧ್ರಾ ಗ್ರಾಮೀಣ ಬ್ಯಾಂಕಿನಲ್ಲಿ ದಿನಗೂಲಿ‌ ನೌಕರರಾಗಿ ಸೇರಿ‌ ಹಂತ ಹಂತವಾಗಿ ಸಹಾಯಕ ವ್ಯವಸ್ಥಾಪಕ ಸ್ಥಾನಕ್ಕೆ‌ ಏರಿ ಗಮನ‌ ಸೆಳೆದಿದ್ದರು. ಬ್ಯಾಂಕಿನ‌ ಉದ್ಯೋಗ ಮಾಡುತ್ತಲೇ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಎಂಎ ಪದವಿ ಗಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದರು.
ಬಡತನಕ್ಕೆ ಹೆದರದೇ ಹಿರಿಯ ಪುತ್ರ ಗಿರೀಶ್ ಬಿಇ‌ ಪದವಿ ಹಾಗೂ ಕಿರಿಯ ಪುತ್ರ ಗಂಗಾಧರ್ ಡಿಪ್ಲೋಮಾ, ಪುತ್ರಿ ರಾಧ ಅನಿಲ್ ಬಿಎ, ಬಿಇಡಿ‌‌ ಪದವಿ ಪಡೆಯಲು ಶ್ರಮಿಸಿದ್ದರು.
ಗುರುವಾರ ‌ಬೆಳಿಗ್ಗೆ 10 ಗಂಟೆಗೆ ಹೊಸಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ‌ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಂಬನಿ: ಪಾದರಸದ ವ್ಯಕ್ತಿತ್ವ ಹೊಂದಿದ್ದ ಕೃಷ್ಣಮೂರ್ತಿ ಬೇವೂರ್ ಅವರ ನಿಧನಕ್ಕೆ ಕರ್ನಾಟಕ‌‌‌ ಗ್ರಾಮೀಣ ಬ್ಯಾಂಕಿನ‌‌ ನಿವೃತ್ತ ಪ್ರಾದೇಶಿಕ ‌ವ್ಯವಸ್ಥಾಪಕ, ಹಿರಿಯ ಸಾಹಿತಿ ಡಾ.‌ವೆಂಕಟಯ್ಯ ಅಪ್ಪಗೆರೆ,  ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಎಜಿಎಂ ಹಾಗೂ ಸಹಪಾಠಿ ಆರ್. ರಾಮನಾಯ್ಕ,  ಗುಲ್ಬರ್ಗಾ ವಿಶ್ವ ವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ್, ಹೊಸಪೇಟೆ ಪಟ್ಟಣ ಠಾಣೆಯ ಎಎಸ್ಐ ಮಲ್ಲೇಶಪ್ಪ‌‌ ದಳವಾಯಿ, ರಾಯಚೂರು ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ್, ಹಂಪಾಪಟ್ಟಣ ಗ್ರಾಮದ ಸರ್ವ ಮುಖಂಡರು‌ ಕಂಬನಿ‌ ಮಿಡಿದಿದ್ದಾರೆ.
——

The post ಹೊಸಪೇಟೆ: ಹಂಪಾಪಟ್ಟಣದ ಕೃಷ್ಣಮೂರ್ತಿ ಬೇವೂರ್ (ಕಿಟ್ಟಣ್ಣ) ಇನ್ನಿಲ್ಲ appeared first on Karnataka Kahale.

]]>
ಹುಟ್ಟೂರು ಹಂಪಾಪಟ್ಟಣದಲ್ಲಿ ತಿಮ್ಮಪ್ಪ ಪೂಜಾರ್ ಗೆ ಸನ್ಮಾನ https://www.karnatakakahale.com/news/15174 Sat, 13 Jan 2024 08:05:55 +0000 https://www.karnatakakahale.com/?p=15174 ಹಗರಿಬೊಮ್ಮನಹಳ್ಳಿ, ಜ.13: ಹೆಮ್ಮೆಯ ಇಸ್ರೋ ಸಂಸ್ಥೆಯ ಯಶಸ್ವಿ ಚಂದ್ರಯಾನದಲ್ಲಿ ಭಾಗಿಯಾಗಿದ್ದ ತಾಲೂಕಿನ ಹಂಪಾಪಟ್ಟಣ ಗ್ರಾಮದ ಪೂಜಾರ್ ತಿಮ್ಮಪ್ಪ ಅವರನ್ನು ಆರ್ಯವೈಶ್ಯ ಸಮಾಜ ಸನ್ಮಾನಿಸಿ ಗೌರವಿಸಿತು. ಗ್ರಾಮದ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಗ್ರಾಮ ಪುರೋಹಿತರಾದ ಸತ್ಯನಾರಾಯಣ ಜೋಶಿ…

The post ಹುಟ್ಟೂರು ಹಂಪಾಪಟ್ಟಣದಲ್ಲಿ ತಿಮ್ಮಪ್ಪ ಪೂಜಾರ್ ಗೆ ಸನ್ಮಾನ appeared first on Karnataka Kahale.

]]>
ಹಗರಿಬೊಮ್ಮನಹಳ್ಳಿ, ಜ.13: ಹೆಮ್ಮೆಯ ಇಸ್ರೋ ಸಂಸ್ಥೆಯ ಯಶಸ್ವಿ ಚಂದ್ರಯಾನದಲ್ಲಿ ಭಾಗಿಯಾಗಿದ್ದ ತಾಲೂಕಿನ ಹಂಪಾಪಟ್ಟಣ ಗ್ರಾಮದ ಪೂಜಾರ್ ತಿಮ್ಮಪ್ಪ ಅವರನ್ನು ಆರ್ಯವೈಶ್ಯ ಸಮಾಜ ಸನ್ಮಾನಿಸಿ ಗೌರವಿಸಿತು.
ಗ್ರಾಮದ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ
ಗ್ರಾಮ ಪುರೋಹಿತರಾದ ಸತ್ಯನಾರಾಯಣ ಜೋಶಿ ಮತ್ತಿತರ ಗಣ್ಯರು ತಿಮ್ಮಪ್ಪ ಪೂಜಾರ್ ಅವರನ್ನು ಸತ್ಕರಿಸಿದರು.
ಪ್ರಧಾನ ಅರ್ಚಕ ಮಧುಸೂಧನ ಜೋಶಿ, ಆರ್ಯವೈಶ್ಯ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರುಗಳು, ಆರ್ಯವೈಶ್ಯ ಸಂಘ ಯುವಜನ ಸಂಘ ಹಾಗೂ ಆರ್ಯವೈಶ್ಯ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರಾದ ಶಿವನ ಗೌಡ್ರು ಹಾಗೂ ಎಲಿಗಾರ್ ಚರಂತೇಶ್, ಮಾತಾ ಸೇವಾ ಟ್ರಸ್ಟ್ ನ ಜಿ ಶ್ರೀನಿವಾಸ ಉಪಸ್ಥಿತರಿದ್ದರು.
——

The post ಹುಟ್ಟೂರು ಹಂಪಾಪಟ್ಟಣದಲ್ಲಿ ತಿಮ್ಮಪ್ಪ ಪೂಜಾರ್ ಗೆ ಸನ್ಮಾನ appeared first on Karnataka Kahale.

]]>
ಯಶಸ್ವಿ ಚಂದ್ರಯಾನ-೩: ಹಂಪಾಪಟ್ಟಣದ ಪ್ರತಿಭಾವಂತ ತಂತ್ರಜ್ಞ ತಿಮ್ಮಪ್ಪ ಪೂಜಾರ್ ಭಾಗಿ: ಗ್ರಾಮದಲ್ಲಿ ಸಂಭ್ರಮ https://www.karnatakakahale.com/news/13304 Thu, 24 Aug 2023 15:32:38 +0000 https://www.karnatakakahale.com/?p=13304 ಹಗರಿಬೊಮ್ಮನಹಳ್ಳಿ, ಆ.23: ಚಂದ್ರಯಾನ-೩ರ ಯಶಸ್ಸಿನಲ್ಲಿ ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರದ ಪಾಲು ಹೆಚ್ಚಿದೆ. ಈ‌ ಕೇಂದ್ರಕ್ಕೂ ತಾಲೂಕಿನ ಹಂಪಾಪಟ್ಟಣ ಗ್ರಾಮಕ್ಕೆ ಏನಾದರೂ ನಂಟಿದೆಯಾ! ಹೌದು! ಖಂಡಿತಾ ನಂಟಿದೆ. ಗ್ರಾಮದ ಪ್ರತಿಭಾನ್ವಿತ ಯುವಕ ತಿಮ್ಮಪ್ಪ ಪೂಜಾರ್ ಅವರು ಯು ಆರ್…

The post ಯಶಸ್ವಿ ಚಂದ್ರಯಾನ-೩: ಹಂಪಾಪಟ್ಟಣದ ಪ್ರತಿಭಾವಂತ ತಂತ್ರಜ್ಞ ತಿಮ್ಮಪ್ಪ ಪೂಜಾರ್ ಭಾಗಿ: ಗ್ರಾಮದಲ್ಲಿ ಸಂಭ್ರಮ appeared first on Karnataka Kahale.

]]>

ಹಗರಿಬೊಮ್ಮನಹಳ್ಳಿ, ಆ.23: ಚಂದ್ರಯಾನ-೩ರ ಯಶಸ್ಸಿನಲ್ಲಿ ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರದ ಪಾಲು ಹೆಚ್ಚಿದೆ. ಈ‌ ಕೇಂದ್ರಕ್ಕೂ ತಾಲೂಕಿನ ಹಂಪಾಪಟ್ಟಣ ಗ್ರಾಮಕ್ಕೆ ಏನಾದರೂ ನಂಟಿದೆಯಾ!
ಹೌದು! ಖಂಡಿತಾ ನಂಟಿದೆ. ಗ್ರಾಮದ ಪ್ರತಿಭಾನ್ವಿತ ಯುವಕ ತಿಮ್ಮಪ್ಪ ಪೂಜಾರ್ ಅವರು ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮಾತ್ರವಲ್ಲ ಚಂದ್ರಯಾನ-೩ರ ಯೋಜನೆಯಲ್ಲಿ ಕೇಂದ್ರದ ಹಲವು ತಂತ್ರಜ್ಞರ ಜತೆ ಇವರು ದುಡಿದಿದ್ದಾರೆ.
ಈ ಹಿನ್ನಲೆಯಲ್ಲಿ ಹುಟ್ಟೂರು ಹಂಪಾಪಟ್ಟಣದಲ್ಲಿ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ಚಂದ್ರನ ದಕ್ಷಿಣಧೃವದ ಮೇಲೆ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಇಳಿಯುತ್ತಲೇ ವಿಶ್ವದ 140 ಕೋಟಿಗೂ ಹೆಚ್ಚು ಭಾರತೀಯರ ಹರ್ಷೋದ್ಗಾರ ಮುಗಿಲು‌ಮುಟ್ಟಿದೆ.
ವಿಕ್ರಮ್ ಜತೆ ಇರುವ ಪ್ರಮುಖ ರೊವರ್ ರೊಬೊಟಿಕ್
ಕಾರ್ ತಯಾರಿಕೆಯ ಇಸ್ರೋದ ಬಾಹ್ಯಾಕಾಶ ತಂಡದೊಂದಿಗೆ ಯು ಆರ್ ರಾವ್ ಉಪಗ್ರಹ ಸಂಸ್ಥೆಯ  ತಂತ್ರಜ್ಞರ ತಂಡದಲ್ಲಿ ತಿಮ್ಮಪ್ಪ ಪೂಜಾರ್ ಅವರು ಇರುವುದು ಹಂಪಾಪಟ್ಟಣ ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಸಂತಸ, ಸಂಭ್ರಮಕ್ಕೆ‌ ಕಾರಣವಾಗಿದೆ.
ಪರಿಚಯ:  ಹಂಪಾಪಟ್ಟಣ ಗ್ರಾಮದ ಪೂಜಾರ್ ಭೀಮಪ್ಪ ಮತ್ತು ಮಲ್ಲಮ್ಮ ಪೂಜಾರ್ ಅವರ ಪುತ್ರ ತಿಮ್ಮಪ್ಪ ಪೂಜಾರ್ ಅವರ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾಭ್ಯಾಸ ತಾಯಿಯ ತವರೂರು ಕೋಗಳಿಯ ಸರಕಾರಿ ಶಾಲೆಯಲ್ಲಿ ನಡೆಯಿತು. ಹೊಸಪೇಟೆಯ ಸರಕಾರಿ  ಐಟಿಐ ಕಾಲೇಜಿನಲ್ಲಿ ಐಟಿಐ ಪದವಿ ಪಡೆದು ಬೆಂಗಳೂರಿನ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗೆ ಸೇರಿದರೂ ಸಮಾಧಾನವಿಲ್ಲ. ಇಸ್ರೋ ದಲ್ಲಿ ಉದ್ಯೋಗಿಯಾಗಬೇಕೆಂಬ ಕನಸು ನನಸಾಗದಿದ್ದಕ್ಕೆ ಮತ್ತೇ ಡಿಪ್ಲೋಮಾ ಕಾಲೇಜಿಗೆ ಪ್ರವೇಶ ಪಡೆದು ಕಷ್ಟ ಪಟ್ಟು ಓದಿ ಉತ್ತೀರ್ಣರಾದರು. ಈ ಅರ್ಹತೆ ಇಸ್ರೋ ಸೇರುವ ಕನಸನ್ನು ನನಸು ಮಾಡಿತು.
ಇದೀಗ ಚಂದ್ರಯಾನ-೩ರ ಯಶಸ್ವಿನ ಟೀಮ್ ನಲ್ಲಿ ತಿಮ್ಮಪ್ಪ ಇರುವುದು ಅವಿಭಜಿತ ಬಳ್ಳಾರಿ ಜಿಲ್ಲೆಯ ಜನತೆಗೆ ಎಲ್ಲಿಲ್ಲದ ಹೆಮ್ಮೆ.


ಗ್ರಾಮದ ಶ್ರೀನಿವಾಸ ಮೆಡಿಕಲ್ ಸ್ಟೋರ್ ನ ಜಿ.ಶ್ರೀನಿವಾಸಶೆಟ್ಟಿ ತನ್ನ ಆಪ್ತ ಮಿತ್ರನ ಬಗ್ಗೆ ಹೇಳುವುದು ಹೀಗೆ.  “ಸಹೋದರನಂತಿರುವ ತಿಮ್ಮಪ್ಪ ಹಂಪಾಪಟ್ಟಣಕ್ಕೆ ಬಂದಾಗ ನನ್ನ ಹತ್ತಿರವೇ ಹೆಚ್ಚು ಸಮಯ ಕಳೆಯುತ್ತಾನೆ.  ತಿಮ್ಮಪ್ಪ ಮತ್ತು ನಾನು ಒಂದೇ ಕುಟುಂಬದ ಸದಸ್ಯರಂತೆ ಇರುತ್ತೇವೆ. ತಿಮ್ಮಪ್ಪ  2019ರಲ್ಲಿ ವಿವಾಹವಾದರು. ಮದುವೆಯ ಸಂಪೂರ್ಣ ಜವಾಬ್ದಾರಿಯನ್ನೇ ನನಗೆ ವಹಿಸಿ ಕೊಟ್ಟಿದ್ದರು” ಎಂದು ನೆನೆದು ಭಾವುಕರಾದರು. ಗ್ರಾಮದಲ್ಲಿ ಇರುವ ದಿನಗಳಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿರುತ್ತಾರೆ. ಲುಂಗಿ-ಟೀಶರ್ಟ್ ಸರಳ ಉಡುಪಿನಲ್ಲಿದ್ದು ಗಮನ ಸೆಳೆಯುತ್ತಾರೆ.
ಇಸ್ರೋ ಉದ್ಯೋಗಿ ಎನ್ನುವ ಯಾವುದೇ ಹಮ್ಮು ಬಿಮ್ಮು ತಿಮ್ಮಪ್ಪನಲ್ಲಿ ಇರದಿರುವುದು ಗ್ರಾಮದ ಬಾಲ್ಯದ ಗೆಳೆಯರಿಗೆ ಖುಷಿ.
ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಚಂದ್ರಯಾನ-೩ರ ಯಶಸ್ಸು ನನಗೂ ಅತ್ಯಂತ ಸಂತಸ‌ ನೀಡಿದೆ. ಇಸ್ರೋ ಉದ್ಯೋಗಿಯಾಗಿದ್ದು ಇಂತಹ ದೇಶವೇ ಮೆಚ್ಚುವ ಕಾರ್ಯದಲ್ಲಿ ಭಾಗಿಯಾಗಿದ್ದು ಪುಣ್ಯವೇ ಸರಿ ಎಂದರು.


ಗ್ರಾಮಕ್ಕೆ ಕೀರ್ತಿ ತಂದಿರುವ ತಿಮ್ಮಪ್ಪ ಅವರನ್ನು ಅಭಿನಂದಿಸಲು ಗ್ರಾಮಸ್ಥರು, ಬಂಧು ಮಿತ್ರರು ತುದಿಗಾಲಲ್ಲಿ ನಿಂತಿದ್ದಾರೆ. ಊರಿಗೆ ಆಗಮಿಸುವುದನ್ನೇ ಕಾಯ್ತಾ ಇದ್ದಾರೆ.
—–

The post ಯಶಸ್ವಿ ಚಂದ್ರಯಾನ-೩: ಹಂಪಾಪಟ್ಟಣದ ಪ್ರತಿಭಾವಂತ ತಂತ್ರಜ್ಞ ತಿಮ್ಮಪ್ಪ ಪೂಜಾರ್ ಭಾಗಿ: ಗ್ರಾಮದಲ್ಲಿ ಸಂಭ್ರಮ appeared first on Karnataka Kahale.

]]>
ಕೆಎಂಎಫ್ ಅದ್ಯಕ್ಷರಾಗಿ ಹಗರಿಬೊಮ್ಮನಹಳ್ಳಿ ಭೀಮನಾಯ್ಕ ಅವಿರೋಧ ಆಯ್ಕೆ https://www.karnatakakahale.com/news/12507 Wed, 21 Jun 2023 11:17:56 +0000 https://www.karnatakakahale.com/?p=12507 ಬೆಂಗಳೂರು, ಜೂ.21: ಕೆಎಂಎಫ್ ನೂತನ ಅಧ್ಯಕ್ಷರಾಗಿ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಭೀಮನಾಯ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಭೀಮನಾಯ್ಕ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಭೀಮನಾಯ್ಕ ಅವರು ಆಯ್ಕೆಯಾಗುತ್ತಿದ್ದಂತೆ ಇವರ ಬೆಂಬಲಿಗರು,…

The post ಕೆಎಂಎಫ್ ಅದ್ಯಕ್ಷರಾಗಿ ಹಗರಿಬೊಮ್ಮನಹಳ್ಳಿ ಭೀಮನಾಯ್ಕ ಅವಿರೋಧ ಆಯ್ಕೆ appeared first on Karnataka Kahale.

]]>

ಬೆಂಗಳೂರು, ಜೂ.21: ಕೆಎಂಎಫ್ ನೂತನ ಅಧ್ಯಕ್ಷರಾಗಿ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಭೀಮನಾಯ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಭೀಮನಾಯ್ಕ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.


ಭೀಮನಾಯ್ಕ ಅವರು ಆಯ್ಕೆಯಾಗುತ್ತಿದ್ದಂತೆ ಇವರ ಬೆಂಬಲಿಗರು, ಹಿತೈಷಿಗಳು, ಅಭಿಮಾನಿಗಳ ಸಂಭ್ರಮ‌ ಮೇರೆ ಮೀರಿತ್ತು. ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಹಬ್ಬದ ವಾತಾವರಣವಿದ್ದು ಪಟಾಕಿ ಸಿಡಿಸಿ ಖುಷಿಪಟ್ಟರು.
ಹಗರಿಬೊಮ್ಮನಹಳ್ಳಿಯಲ್ಲೂ ಸಂಭ್ರಮ: ಭೀಮನಾಯ್ಕ ಅವರ ತವರೂರು ಹಗರಿಬೊಮ್ಮನಹಳ್ಳಿಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಬೆಂಬಲಿಗರ ಸಂಭ್ರಮ ವ್ಯಕ್ಯಡಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಅಕ್ಕಿ ತೋಟೇಶ್, ಹುಡೇದ ಗುರುಬಸವರಾಜ್, ಹಂಪಾಪಟ್ಟಣ ಸಿ.ಹಾಲೇಶ್ ಮತ್ತಿತರರು ಭೀಮಾನಾಯ್ಕ ಅವರನ್ನು ಅಭಿನಂದಿಸಿದ್ದಾರೆ.
*****

The post ಕೆಎಂಎಫ್ ಅದ್ಯಕ್ಷರಾಗಿ ಹಗರಿಬೊಮ್ಮನಹಳ್ಳಿ ಭೀಮನಾಯ್ಕ ಅವಿರೋಧ ಆಯ್ಕೆ appeared first on Karnataka Kahale.

]]>
‘ಮಾಳವ ದೊರೆ’ಗೆ ಶುಭ ಕೋರಿದ ಹಂಪಾಪಟ್ಟಣ ‘ಮನಂ ಹುಡುಗ್ರು’ https://www.karnatakakahale.com/news/11712 Fri, 31 Mar 2023 05:44:25 +0000 https://www.karnatakakahale.com/?p=11712 ಬೆಂಗಳೂರು/ಹಗರಿಬೊಮ್ಮನಹಳ್ಳಿ, ಮಾ.31: ಸಾಹಿತಿ, ಸಂಶೋಧಕರೂ ಆಗಿರುವ ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ) ಅವರ 53ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಯೋಗೀಶ್ ಮನಂ ನೇತೃತ್ವದ ಯುವಕರ ತಂಡ ಬೆಂಗಳೂರಿಗೆ ಹೋಗಿ ಶುಭ ಕೋರಿದೆ. ಮಾ.28ರಂದು ಬೆಂಗಳೂರಿನಲ್ಲಿ ಕೇಕ್ ಕತ್ತರಿಸಿ, ಮನಂ ಅವರನ್ನು…

The post ‘ಮಾಳವ ದೊರೆ’ಗೆ ಶುಭ ಕೋರಿದ ಹಂಪಾಪಟ್ಟಣ ‘ಮನಂ ಹುಡುಗ್ರು’ appeared first on Karnataka Kahale.

]]>

ಬೆಂಗಳೂರು/ಹಗರಿಬೊಮ್ಮನಹಳ್ಳಿ, ಮಾ.31: ಸಾಹಿತಿ, ಸಂಶೋಧಕರೂ ಆಗಿರುವ ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ) ಅವರ 53ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಯೋಗೀಶ್ ಮನಂ ನೇತೃತ್ವದ ಯುವಕರ ತಂಡ ಬೆಂಗಳೂರಿಗೆ ಹೋಗಿ ಶುಭ ಕೋರಿದೆ.
ಮಾ.28ರಂದು ಬೆಂಗಳೂರಿನಲ್ಲಿ ಕೇಕ್ ಕತ್ತರಿಸಿ, ಮನಂ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.


300 ಕಿ.ಮೀ ದೂರದಿಂದ ತಮಗೆ ಶುಭಾಶಯ ಕೋರಲು ಬಂದ ಹಂಪಾಪಟ್ಟಣದ ಯುವಕರನ್ನು ಮನಂ ಅವರು ಪ್ರೀತ್ಯಾದರದಿಂದ ಕಂಡಿದ್ದಾರೆ.
ಪ್ರತಿ ವರ್ಷವೂ ಈ ತಂಡ ಮನಂ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಾ ಶುಭ ಕೋರುತ್ತಿದೆ.


ತಂಡದಲ್ಲಿ ಅಮ್ಮನಕೇರಿ ಚಿರಂಜೀವಿ, ಪವನ್ ಕುಮಾರ್, ಹಡಗಲಿ ರೆಹಮಾನ್, ಬಲಕುಂದಿ ಮಲ್ಲಿಕಾರ್ಜುನ ಇದ್ದರು ಎಂದು ಯೋಗೀಶ್ ಮನಂ ತಿಳಿಸಿದ್ದಾರೆ.
*****

 

The post ‘ಮಾಳವ ದೊರೆ’ಗೆ ಶುಭ ಕೋರಿದ ಹಂಪಾಪಟ್ಟಣ ‘ಮನಂ ಹುಡುಗ್ರು’ appeared first on Karnataka Kahale.

]]>
ಆನೇಕಲ್ ತಾಂಡ ಶಾಲೆಗೆ ಅತಿಥಿ ಶಿಕ್ಷಕರಿಂದ ಸೈರನ್ (ಬೆಲ್) ದೇಣಿಗೆ https://www.karnatakakahale.com/news/11650 Fri, 24 Mar 2023 17:02:00 +0000 https://www.karnatakakahale.com/?p=11650 ಹಗರಿಬೊಮ್ಮನಹಳ್ಳಿ, ಮಾ.24: ತಾಲೂಕಿನ ಆನೇಕಲ್ ತಾಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಅತಿಥಿ ಶಿಕ್ಷಕರು ಶಾಲೆಗೆ ಸೈರನ್ (ಬೆಲ್) ದೇಣಿಗೆ ನೀಡಿದ್ದಾರೆ. ಶಾಲೆಯ ಅತಿಥಿ ಶಿಕ್ಷಕರಾದ ಎಲ್ ದೇವೇಂದ್ರ ನಾಯಕ್, ಶಿವರಾಜ್ ಚೌಹಾಣ್ ಮತ್ತು ಯೋಗೇಶ್ ಅವರು ಸುಮಾರು ಐದು…

The post ಆನೇಕಲ್ ತಾಂಡ ಶಾಲೆಗೆ ಅತಿಥಿ ಶಿಕ್ಷಕರಿಂದ ಸೈರನ್ (ಬೆಲ್) ದೇಣಿಗೆ appeared first on Karnataka Kahale.

]]>

ಹಗರಿಬೊಮ್ಮನಹಳ್ಳಿ, ಮಾ.24: ತಾಲೂಕಿನ ಆನೇಕಲ್ ತಾಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಅತಿಥಿ ಶಿಕ್ಷಕರು ಶಾಲೆಗೆ ಸೈರನ್ (ಬೆಲ್) ದೇಣಿಗೆ ನೀಡಿದ್ದಾರೆ.
ಶಾಲೆಯ ಅತಿಥಿ ಶಿಕ್ಷಕರಾದ ಎಲ್ ದೇವೇಂದ್ರ ನಾಯಕ್, ಶಿವರಾಜ್ ಚೌಹಾಣ್ ಮತ್ತು ಯೋಗೇಶ್ ಅವರು ಸುಮಾರು ಐದು ಸಾವಿರ ರೂ.‌ಮೌಲ್ಯದ ಸೈರನ್ ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.


ಎಸ್.ಡಿ.ಎಮ್.ಸಿ ಅಧ್ಯಕ್ಷ ಕೊಟ್ರೇಶ್ ನಾಯಕ್, ಮುಖ್ಯ ಗುರು ಕೆ ಮಂಜುನಾಥ, ವಿಜ್ಞಾನ ಶಿಕ್ಷಕ ಉಸ್ಮಾನ್ ದೊಡ್ಡಮನಿ ಮತ್ತಿತರರು ದೇಣಿಗೆ ನೀಡಿದ ಶಿಕ್ಷಕರನ್ನು ಅಭಿನಂದಿಸಿದ್ದಾರೆ.
*****

The post ಆನೇಕಲ್ ತಾಂಡ ಶಾಲೆಗೆ ಅತಿಥಿ ಶಿಕ್ಷಕರಿಂದ ಸೈರನ್ (ಬೆಲ್) ದೇಣಿಗೆ appeared first on Karnataka Kahale.

]]>