‘ಮಾಳವ ದೊರೆ’ಗೆ ಶುಭ ಕೋರಿದ ಹಂಪಾಪಟ್ಟಣ ‘ಮನಂ ಹುಡುಗ್ರು’

ಬೆಂಗಳೂರು/ಹಗರಿಬೊಮ್ಮನಹಳ್ಳಿ, ಮಾ.31: ಸಾಹಿತಿ, ಸಂಶೋಧಕರೂ ಆಗಿರುವ ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ) ಅವರ 53ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಯೋಗೀಶ್ ಮನಂ ನೇತೃತ್ವದ ಯುವಕರ ತಂಡ ಬೆಂಗಳೂರಿಗೆ ಹೋಗಿ ಶುಭ ಕೋರಿದೆ.
ಮಾ.28ರಂದು ಬೆಂಗಳೂರಿನಲ್ಲಿ ಕೇಕ್ ಕತ್ತರಿಸಿ, ಮನಂ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.


300 ಕಿ.ಮೀ ದೂರದಿಂದ ತಮಗೆ ಶುಭಾಶಯ ಕೋರಲು ಬಂದ ಹಂಪಾಪಟ್ಟಣದ ಯುವಕರನ್ನು ಮನಂ ಅವರು ಪ್ರೀತ್ಯಾದರದಿಂದ ಕಂಡಿದ್ದಾರೆ.
ಪ್ರತಿ ವರ್ಷವೂ ಈ ತಂಡ ಮನಂ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಾ ಶುಭ ಕೋರುತ್ತಿದೆ.


ತಂಡದಲ್ಲಿ ಅಮ್ಮನಕೇರಿ ಚಿರಂಜೀವಿ, ಪವನ್ ಕುಮಾರ್, ಹಡಗಲಿ ರೆಹಮಾನ್, ಬಲಕುಂದಿ ಮಲ್ಲಿಕಾರ್ಜುನ ಇದ್ದರು ಎಂದು ಯೋಗೀಶ್ ಮನಂ ತಿಳಿಸಿದ್ದಾರೆ.
*****

 

Leave a Reply

Your email address will not be published. Required fields are marked *